expr:content='data:blog.metaDescription' itemprop='description'/>

Translate

Friday, May 24, 2019

Kannada News | Karnataka News | India News

Kannada News | Karnataka News | India News


ಸಂಭೋಗದಲ್ಲಿ ಕಾಡಬಹುದು ಈ ಸಮಸ್ಯೆ

Posted: 24 May 2019 09:20 AM PDT

ದಂಪತಿ ಮಧ್ಯೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಶಕ್ತಿ ಸೆಕ್ಸ್ ಗಿದೆ. ಸಂಭೋಗ ದಾಂಪತ್ಯ ಜೀವನವನ್ನು ಖುಷಿಯಾಗಿಡುವ ಕೆಲಸ ಮಾಡುತ್ತದೆ. ಖುಷಿ, ಆರೋಗ್ಯ ವೃದ್ಧಿ ಮಾಡುವ ಲೈಂಗಿಕ ಜೀವನದಲ್ಲೂ ಸಮಸ್ಯೆಗಳಿರುತ್ತವೆ. ಸಂಭೋಗದ ನಂತ್ರ ಅಥವಾ ಸಂಭೋಗದ ವೇಳೆ ಕೆಲವೊಂದು ಸಮಸ್ಯೆಗಳು ಕಾಡುವುದುಂಟು.

ಸೆಕ್ಸ್ ಮೂಡ್ ಇದ್ರಲ್ಲಿ ಒಂದು. ಕೆಲವರು ಹಗಲಿನಲ್ಲಿ ಸೆಕ್ಸ್ ಇಷ್ಟಪಟ್ಟರೆ ಮತ್ತೆ ಕೆಲವರು ರಾತ್ರಿ ಇಷ್ಟಪಡ್ತಾರೆ. ದಂಪತಿ ಮಧ್ಯೆ ಇದು ಬೇರೆ ಬೇರೆಯಾಗಿದ್ದರೆ ಇಬ್ಬರೂ ಮಾತನಾಡಿ ಯೋಗ್ಯವಾದ ಟೈಂ ಆಯ್ಕೆ ಮಾಡಿಕೊಳ್ಳಬೇಕು.

ಸಂಗಾತಿ ಹಳೆಯ ಭಂಗಿಯನ್ನೇ ಪ್ರಯೋಗ ಮಾಡ್ತಿದ್ದರೆ ಮಹಿಳಾ ಸಂಗಾತಿ ಬೋರ್ ಆಗಬಹುದು. ಆಗ ಮಹಿಳಾ ಸಂಗಾತಿ ಬಾಯ್ಬಿಟ್ಟು ಇದನ್ನು ಹೇಳಬೇಕಾಗುತ್ತದೆ. ಲೈಂಗಿಕ ಜೀವನ ಖುಷಿಯಾಗಿರಬೇಕೆಂದ್ರೆ ಹೊಸ ಪ್ರಯೋಗಗಳು ನಡೆಯುತ್ತಿರಬೇಕು.

ಕೆಲಸದ ಒತ್ತಡ ಸಂಭೋಗದಿಂದ ದೂರವಾಗುವಂತೆ ಮಾಡುತ್ತದೆ. ಆದ್ರೆ ಬಹು ದಿನಗಳ ಕಾಲ ಸಂಭೋಗದಿಂದ ದೂರವಿರುವುದು ದಾಂಪತ್ಯದ ಬಿರುಕಿಗೆ ಕಾರಣವಾಗುತ್ತದೆ. ಹಾಗಾಗಿ ದಿನ ನಿತ್ಯದ ಕೆಲಸಕ್ಕೆ ಸ್ವಲ್ಪ ಬ್ರೇಕ್ ನೀಡಿ ಒತ್ತಡ ಕಡಿಮೆ ಮಾಡಿಕೊಳ್ಳಿ. ನಿಮಗಿಷ್ಟವಾಗುವ ಕೆಲಸ ಮಾಡಿ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಂಡು ಸಂಭೋಗ ಸುಖ ಅನುಭವಿಸಿ.

ಎಣ್ಣೆ ಇಲ್ಲದೆ ನಿರಂತರವಾಗಿ ಪ್ರಜ್ವಲಿಸುತ್ತಿದೆ ಈ ‘ದೀಪ’

Posted: 24 May 2019 08:57 AM PDT

ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಚಿಗಳ್ಳಿಯಲ್ಲಿರುವ ಶ್ರೀ ದೀಪನಾಥೇಶ್ವರ ದೇವಸ್ಥಾನದಲ್ಲಿ ಸುಮಾರು 40 ವರ್ಷಗಳಿಂದ ಎಣ್ಣೆ ಇಲ್ಲದೆ ದೀಪಗಳು ನಿರಂತರವಾಗಿ ಪ್ರಜ್ವಲಿಸುತ್ತಿವೆ.

ಈ ದೇವಾಲಯಕ್ಕೆ ಶೃಂಗೇರಿ, ಪೇಜಾವರ, ಸಿದ್ದಗಂಗಾ, ಕಾಶಿಮಠ, ಕನಕ ಗುರುಪೀಠ, ರಂಭಾಪುರಿ ಪೀಠ, ಕರ್ಕಿ ಮಠ, ಹುಬ್ಬಳ್ಳಿ ಮೂರು ಸಾವಿರ ಮಠ, ಸೋಂದಾ ವಾದಿರಾಜ ಮಠ, ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಬೌದ್ಧ ಗುರು ದಲೈಲಾಮಾ ಸೇರಿದಂತೆ ಹಲವು ಮಠಾಧೀಶರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಈ ದೈವ ಸ್ವರೂಪಿ ದೀಪಗಳ ದೇವಸ್ಥಾನದಲ್ಲಿ ಪೂಜ್ಯಶ್ರೀ ಆನಂದ ಗುರೂಜಿಯವರು ನಡೆಸಿಕೊಡುತ್ತಿರುವ ಪೂಜಾ ಕಾರ್ಯಕ್ರಮದ ದೃಶ್ಯಗಳನ್ನು ಜೀ ಕನ್ನಡ ಟಿವಿ ವಾಹಿನಿ ಮೇ 25 ಶನಿವಾರ ಬೆಳಿಗ್ಗೆ ಎಂಟು ಗಂಟೆಗೆ ಪ್ರಸಾರ ಮಾಡಲಿದೆ.

ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ʼನೋಟಾʼ ಮತವೆಷ್ಟು…?

Posted: 24 May 2019 08:41 AM PDT

ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ನೋಟಾ ಮತಗಳು ಕೂಡಾ ಭಾರಿ ಕುತೂಹಲ ಕೆರಳಿಸಿವೆ.

ರಾಜ್ಯದಲ್ಲಿ ಒಟ್ಟು  276760 ನೋಟಾ ಮತಗಳು ಚಲಾವಣೆಯಾಗಿದ್ದು, ಅಭ್ಯರ್ಥಿಗಳು ಪಡೆದ ಮತಗಳಲ್ಲಿ ಶೇ 0.71 ರಷ್ಟಿದೆ.

ತಮಗೆ ಯಾವ ಅಭ್ಯರ್ಥಿಯನ್ನೂ ಆಯ್ಕೆ ಮಾಡಲು ಇಷ್ಟವಿಲ್ಲದ ಪ್ರಜ್ಞಾವಂತ ನಾಗರೀಕರು ನೋಟಾ ಚಲಾಯಿಸಿದ್ದಾರೆ. ಅದರಂತೆ ಚಾಮರಾಜನಗರದಲ್ಲಿ 12,583, ಬೆಂಗಳೂರು ಗ್ರಾಮಾಂತರದಲ್ಲಿ 12,442, ಬೆಂಗಳೂರು ದಕ್ಷಿಣದಲ್ಲಿ 9,917, ಬೆಂಗಳೂರು ಉತ್ತರದಲ್ಲಿ 11,617, ವಿಜಯಪುರದಲ್ಲಿ 12,280, ಚಿಕ್ಕೋಡಿಯಲ್ಲಿ 10,341, ಉತ್ತರ ಕನ್ನಡದಲ್ಲಿ 15,997 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ನೋಟಾ ಮತದಾನವಾಗಿದೆ.

ಸಚಿವರ ಸಭೆಯಲ್ಲಿ ಹೊಸ ಬಾಂಬ್‍ ಸಿಡಿಸಿದ ಸಿಎಂ..!

Posted: 24 May 2019 08:17 AM PDT

ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಮೈತ್ರಿ ಸರ್ಕಾರದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇವತ್ತು ದೋಸ್ತಿ ಸರ್ಕಾರದ ಸಚಿವರ ಜೊತೆ ನಡೆಸಿದ ಔಪಚಾರಿಕ ಸಭೆಯಲ್ಲಿ ಸಿಎಂ ಹೆಚ್‍.ಡಿ. ಕುಮಾರಸ್ವಾಮಿ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರಂತೆ.

ನನಗೆ ಅಧಿಕಾರದ ಆಸೆಯಿಲ್ಲ, ಜಾತ್ಯಾತೀತ ಶಕ್ತಿಗಳು ಉಳಿಯಬೇಕು ಅನ್ನೋ ಒಂದೇ ಕಾರಣಕ್ಕೆ ನಾನು ಮುಖ್ಯಮಂತ್ರಿಯ ಸ್ಥಾನದ ಜವಾಬ್ದಾರಿ ಹೊತ್ತಿದ್ದೇನೆ. ಯಾವುದೇ ಅಂಜಿಕೆ ಇಲ್ಲದೆ ಮಾತನಾಡಿ, ನಿಮಗೆ ಇಷ್ಟ ಇಲ್ಲ ಅಂದ್ರೆ, ನಾನು ಸಿಎಂ ಆಗಿ ಮುಂದುವರೆಯಲ್ಲ ಅಂತಾ ಹೇಳಿದ್ದಾರೆ.

ಸಿಎಂ ರಾಜೀನಾಮೆ ವಿಚಾರ ಕೇಳಿ ಸಭೆಯಲ್ಲಿದ್ದ ಸಚಿವರು ಮೌನಕ್ಕೆ ಶರಣಾದರೆನ್ನಲಾಗಿದೆ. ತಕ್ಷಣವೇ ಡಿಸಿಎಂ ಪರಮೇಶ್ವರ್ ಪರಿಸ್ಥಿತಿ ತಿಳಿಗೊಳಿಸಿ ಸೋಲು-ಗೆಲುವು ಎಲ್ಲಾ ಸಹಜ. ನೀವು ರಾಜೀನಾಮೆ ಬಗ್ಗೆ ಯೋಚಿಸುವುದು ಬೇಡ ಅಂತಾ ಹೇಳಿದ್ದಾರೆ.

ಭಿನ್ನಾಭಿಪ್ರಾಯ ಸಹಜ. ಎಲ್ಲಾ ಶಾಸಕರ ಮನವೊಲಿಸಿ, ಮೈತ್ರಿ ಸರ್ಕಾರವನ್ನು ಮುಂದುವರೆಸೋಣ ಅಂತಾ ಪರಮೇಶ್ವರ್ ಹೇಳಿದ್ದಾರೆನ್ನಲಾಗಿದೆ. ಇದಕ್ಕೆ ಎಲ್ಲಾ ಸಚಿವರು ಕೂಡಾ ಒಪ್ಪಿಗೆ ಸೂಚಿಸಿ ರಾಜೀನಾಮೆ ವಿಚಾರ ಬಿಟ್ಟುಬಿಡಿ ಅಂತಾ ಮನವಿ ಮಾಡಿಕೊಂಡಿದ್ದಾರಂತೆ.

‘ಜೋಡೆತ್ತು’ಗಳೊಂದಿಗೆ ಮತ್ತೆ ಸುಮಲತಾ ಸಂಚಾರ

Posted: 24 May 2019 08:12 AM PDT

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿರುವ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಂಡ್ಯ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.

ಮೇ 29 ರಂದು ಮಂಡ್ಯದಲ್ಲಿ ವಿಜಯೋತ್ಸವ ನಡೆಯಲಿದೆ. ಅಂಬರೀಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೇ 29 ರಂದು ಮಂಡ್ಯದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯೋತ್ಸವ ಮೆರವಣಿಗೆ ಬಳಿಕ ವೇದಿಕೆ ಕಾರ್ಯಕ್ರಮ ನಡೆಸಿ, ಜನರಿಗೆ ಕೃತಜ್ಞತೆ ಸಲ್ಲಿಸಲಾಗುವುದು.

ನಟರಾದ ದರ್ಶನ್, ಯಶ್ ಸೇರಿದಂತೆ ಎಲ್ಲರೊಂದಿಗೂ ಸೇರಿ ಸಂಭ್ರಮಾಚರಣೆ ನಡೆಸಿ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಸುಮಲತಾ ಹೇಳಿದ್ದಾರೆ. ಪುತ್ರ ಅಭಿಷೇಕ್ ಸದ್ಯ ರಾಜಕೀಯಕ್ಕೆ ಬರುವುದಿಲ್ಲ. ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನೂ ಮೊದಲ ಚಿತ್ರವೇ ಬಿಡುಗಡೆಯಾಗಿಲ್ಲ. ಮುಂದೆ ನೋಡೋಣ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಬೇರೆ ಪಕ್ಷ ಸೇರುವ ಬಗ್ಗೆ ಮಂಡ್ಯ ಜಿಲ್ಲೆಯ ಜನರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಶಾಸಕಾಂಗ ಸಭೆಯಲ್ಲಿ ಬಯಲಾಯ್ತು ಜೆಡಿಎಸ್ ಸೋಲಿನ ರಹಸ್ಯ…?

Posted: 24 May 2019 08:10 AM PDT

ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಶಾಸಕಾಂಗ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪ್ರಮುಖವಾಗಿ 3 ಕ್ಷೇತ್ರಗಳಲ್ಲಿ ಜೆಡಿಎಸ್ ಸೋಲಿನ ಬಗ್ಗೆ ಹೆಚ್ಚಿನ ಚರ್ಚೆ ನಡೆದಿದೆ ಎನ್ನಲಾಗಿದೆ.

ಮಂಡ್ಯ, ತುಮಕೂರು, ಶಿವಮೊಗ್ಗ ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವಿನ ಅವಕಾಶವಿದ್ದರೂ ಸೋಲು ಕಂಡ ಕುರಿತಾಗಿ ಪರಾಮರ್ಶೆ ನಡೆಸಲಾಗಿದೆ. ಮಂಡ್ಯ, ಶಿವಮೊಗ್ಗ, ತುಮಕೂರಿನಲ್ಲಿ ಸೋಲಿಗೆ ಕಾರಣವೇನು ಎಂಬ ಬಗ್ಗೆ ಜೆಡಿಎಸ್ ವರಿಷ್ಠರಾದ ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರ ಒಳ ಏಟು, ಜೊತೆಗೆ ಜೆಡಿಎಸ್ ಶಾಸಕರು ಶಕ್ತಿಮೀರಿ ಕೆಲಸ ಮಾಡದಿರುವುದು ಕಾರಣ ಎಂದು ಹೇಳಲಾಗಿದೆ. ಕಾಂಗ್ರೆಸ್ ಬಂಡಾಯ ಶಾಸಕರು, ಮುಖಂಡರು ಹಿಂದೆ ನಿಂತು ಸುಮಲತಾ ಪರವಾಗಿ ಕೆಲಸ ಮಾಡಿದ್ದಾರೆ. ಇದೇ ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಕಾರಣ ಎಂದು ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಮುಖಂಡರು ತಿಳಿಸಿದ್ದಾರೆ ಎನ್ನಲಾಗಿದೆ.

ತುಮಕೂರು ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕ ರಾಜಣ್ಣ ಕೆಲಸ ಮಾಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನ ಕೆಲವರು ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆ. ಇದರಿಂದಾಗಿ ದೇವೇಗೌಡರಿಗೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಹೊರಗೆ ಬೆಂಬಲ ನೀಡಿದರೂ, ಒಳಗೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಸಭೆಯಲ್ಲಿ ಮಾತುಗಳು ಕೇಳಿ ಬಂದಿವೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ ಸೋಲಿಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ. ಮೋದಿ ಅಲೆಯ ಬಗ್ಗೆ ತಿಳಿಯದಿರುವುದರಿಂದ ಪಕ್ಷಕ್ಕೆ ಸೋಲಾಗಿದೆ. ಇನ್ನು ಕಳೆದ ಉಪ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದ್ದು, ಈ ಬಾರಿ ಗೆದ್ದೇ ಗೆಲ್ಲುವ ಅತಿಯಾದ ವಿಶ್ವಾಸವಿತ್ತು ಎಂದು ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡಿದ್ದ ನಾಯಕರು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸಂಭ್ರಮಾಚರಣೆ ವೇಳೆ ಆಗಿದ್ದೇನು ಗೊತ್ತಾ..?

Posted: 24 May 2019 06:59 AM PDT

ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ಬಿಜೆಪಿ ಸಂಭ್ರಮಾಚರಣೆ ವೇಳೆ 2 ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ಗೆಲುವಿನ ಹಿನ್ನಲೆಯಲ್ಲಿ ಸಂಭ್ರಮಾಚರಣೆ ನಡೆಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಶ್ರೀನಿವಾಸ್ ಪ್ರಸಾದ್ ವಿರುದ್ಧವಾಗಿ ಕೆಲಸ ಮಾಡಿ ಈಗ ಸಂಭ್ರಮಾಚರಣೆಗೆ ಬರುತ್ತೀರಾ ಎಂದು ಕೆಲವು ಬಿಜೆಪಿ ಕಾರ್ಯಕರ್ತರು ಮತ್ತೊಂದು ಬಣದವರಿಗೆ ಪ್ರಶ್ನಿಸಿದ್ದಾರೆ.

ಸಂಭ್ರಮಾಚರಣೆಗೆ ಬರದಂತೆ ವಿರೋಧಿಯಾಗಿ ಕೆಲಸ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದಾಗಿ ಘರ್ಷಣೆ ನಡೆದಿದೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು, ಕಾರ್ಯಕರ್ತರನ್ನು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ.

ಮಾತನಾಡಿ ಇಕ್ಕಟ್ಟಿಗೆ ಸಿಲುಕಿಕೊಂಡ ಜೆಡಿಎಸ್‌ ಸಚಿವ

Posted: 24 May 2019 06:57 AM PDT

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಸಚಿವ ಸಿ.ಎಸ್‍. ಪುಟ್ಟರಾಜುಗೆ ತಲೆನೋವು ಉಂಟು ಮಾಡಿದೆ. ಒಂದ್ಕಡೆ ಸಿಎಂ ಕುಮಾರಸ್ವಾಮಿ, ಪುತ್ರನ ಸೋಲಿಗೆ ಸಚಿವ ಪುಟ್ಟರಾಜು ಅವರಿಗೆ ಕ್ಲಾಸ್‍ ತೆಗೆದುಕೊಂಡಿದ್ರೆ, ಮತ್ತೊಂದು ಕಡೆ ನೆಟ್ಟಿಗರು ಸಚಿವ ಪುಟ್ಟರಾಜು ರಾಜೀನಾಮೆ ಯಾವಾಗಾ…?ಅಂತಾ ಟ್ರೋಲ್ ಮಾಡಿ ಕಾಲೆಳೆಯುತ್ತಿದ್ದಾರೆ.

ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ವಿರುದ್ಧ ನಿಖಿಲ್‍ 2.5 ಲಕ್ಷ ಲೀಡ್‍ ನಲ್ಲಿ ಗೆದ್ದೆ ಗೆಲ್ತಾರೆ. ಅವರು ಗೆಲ್ಲದಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಅಂತಾ ಸಚಿವ ಪುಟ್ಟರಾಜು ಘೋಷಿಸಿದ್ರು. ಆದ್ರೆ ನಿಖಿಲ್ ಕುಮಾರಸ್ವಾಮಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸುಮಲತಾ ವಿರುದ್ಧ ಸೋತಿದ್ದಾರೆ.

ಹೀಗಾಗಿ ಸಚಿವ ಪುಟ್ಟರಾಜು ಅವರ ರಾಜಕೀಯ ನಿವೃತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಡ ಹೆಚ್ಚಾಗಿದೆ. ನಿನ್ನೆ ಫಲಿತಾಂಶ ಹೊರ ಬಿದ್ದಾಗಿನಿಂದ ಟ್ರೋಲಿಗರು ಸಚಿವರ ರಾಜೀನಾಮೆ ಯಾವಾಗಾ…? ರಾಜಕೀಯ ನಿವೃತ್ತಿ ಯಾವಾಗಾ…? ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ನುಡಿದಂತೆ ನಡೆದುಕೊಳ್ಳಿ ಅಂತಾ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಮತ್ತೊಂದು ಮುಜುಗರ

Posted: 24 May 2019 06:52 AM PDT

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಮುಜುಗರದ ಸನ್ನಿವೇಶ ಎದುರಾಗಿದೆ.

ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಭರ್ಜರಿ ಜಯ ಗಳಿಸಿದ್ದಾರೆ. ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಅಭಿನಂದನೆ ಸಲ್ಲಿಸಿ ನಿಪ್ಪಾಣಿಯಲ್ಲಿ ಹಾಕಲಾಗಿರುವ ಫ್ಲೆಕ್ಸ್ ನಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಕಾಣಿಸಿಕೊಂಡಿದ್ದಾರೆ.

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಯಾವಾಗ ಬಿಜೆಪಿ ಸೇರಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಈ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡು ಬಿಜೆಪಿ ಪರ ಕೆಲಸ ಮಾಡಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅಭಿನಂದನೆ ಕೋರಿ ಹಾಕಲಾಗಿರುವ ಫ್ಲೆಕ್ಸ್ ನಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ರಮೇಶ್ ಜಾರಕಿಹೊಳಿ ಭಾವಚಿತ್ರ ಹಾಕಲಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾದಂತಾಗಿದೆ. ಬಿಜೆಪಿ ಅಭಿನಂದನಾ ಫ್ಲೆಕ್ಸ್ ನಲ್ಲಿ ರಮೇಶ್ ಜಾರಕಿಹೊಳಿ ಕಾಣಿಸಿಕೊಂಡಿರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರ್ನಾಟಕದಲ್ಲಿನ ಬಿಜೆಪಿಯ ಉತ್ತಮ ಸಾಧನೆಗಾಗಿ ಮೋದಿ ಕೊಡ್ತಾರಂತೆ ಬಂಪರ್ ಕೊಡುಗೆ..!

Posted: 24 May 2019 06:51 AM PDT

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ. 28 ಸ್ಥಾನಗಳ ಪೈಕಿ 25 ಸ್ಥಾನ ಪಡೆಯುವ ಮೂಲಕ ಕರುನಾಡಲ್ಲಿ ಎಲ್ಲೆಲ್ಲೂ ಕಮಲ ಅರಳಿ ನಿಂತಿದೆ.

ಹೀಗಾಗಿ ದಕ್ಷಿಣ ಭಾರತದಲ್ಲೇ ಬಿಜೆಪಿಗೆ ಕರ್ನಾಟಕದಲ್ಲಿ ಭದ್ರ ನೆಲೆ ಸಿಕ್ಕಂತಾಗಿದೆ. ಇದು ಪ್ರಧಾನಿ ಮೋದಿಯವರ ಖುಷಿಯನ್ನು ಇಮ್ಮಡಿಗೊಳಿಸಿದ್ದು, ಹೀಗಾಗಿ ಕರ್ನಾಟಕಕ್ಕೆ ಬಂಪರ್ ಗಿಫ್ಟ್ ಕೊಡಲು ಮೋದಿ ತಯಾರಿ ನಡೆಸಿದ್ದಾರೆ ಅಂತಾ ಪಕ್ಷದ ಮೂಲಗಳು ತಿಳಿಸಿವೆ.

ಸಚಿವ ಸಂಪುಟ ವಿಸ್ತರಣೆ ವೇಳೆ ಕರ್ನಾಟಕಕ್ಕೆ ಈ ಬಾರಿ 4 ರಿಂದ 5 ಸಚಿವ ಸ್ಥಾನಗಳು ಸಿಗುವ ಸಾಧ್ಯತೆಗಳಿವೆ ಅಂತಾ ಹೇಳಲಾಗ್ತಿದೆ. ಇನ್ನು ಜಾತಿ ಸಮೀಕರಣದಲ್ಲಿ ಸಚಿವ ಸ್ಥಾನ ಹಂಚಿಕೆಯಾಗಲಿದ್ದು, ಈಗಿರುವ ಹಾಲಿ ಸಚಿವರಿಗೆ ಕೊಕ್‍ ನೀಡಿ ಮೋದಿ, ಹೊಸ ಮುಖಗಳಿಗೆ ಅವಕಾಶ ಕೊಡ್ತಾರೆ ಅಂತಾ ಹೇಳಲಾಗ್ತಿದೆ.

ಅದರಂತೆ ಲಿಂಗಾಯತ ಕೋಟಾದಡಿ ಸುರೇಶ್ ಅಂಗಡಿ ಅಥವಾ ಜಿ.ಎಸ್‍. ಬಸವರಾಜು ಅವರಿಗೆ, ಒಕ್ಕಲಿಗ ಕೋಟಾದಲ್ಲಿ ಶೋಭಾ ಕರಂದ್ಲಾಜೆ ಅಥವಾ ಪ್ರತಾಪ್ ಸಿಂಹ, ದಲಿತ ಕೋಟಾದಲ್ಲಿ ಉಮೇಶ್ ಜಾದವ್ ಅಥವಾ ಶ್ರೀನಿವಾಸ್‍ ಪ್ರಸಾದ್‍, ಹಿಂದುಳಿದ ವರ್ಗ ಕೋಟಾದಲ್ಲಿ ನಳಿನ್‍ ಕುಮಾರ್ ಕಟೀಲ್‍ ಅಥವಾ ಪಿ.ಸಿ.ಮೋಹನ್, ಬ್ರಾಹ್ಮಣ ಕೋಟಾದಲ್ಲಿ ಪ್ರಹ್ಲಾದ್ ಜೋಶಿ. ಈ ರೀತಿ ಕಾಂಬಿನೇಷನ್‍ ನಲ್ಲಿ ಸಚಿವ ಸ್ಥಾನ ಕೊಡಲಾಗುವುದು ಅಂತಾ ಹೇಳಲಾಗ್ತಿದೆ. ಆದ್ರೆ ರಾಜ್ಯಕ್ಕೆ ನಿಜಕ್ಕೂ 5 ಸಚಿವ ಸ್ಥಾನ ಸಿಗುತ್ತಾ ಎಂಬುದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ಮತ ಕಮ್ಮಿ ಬಂದಿದೆ ಎಂದು ಕಣ್ಣೀರಿಟ್ಟಿದ್ದ ಅಭ್ಯರ್ಥಿಗೆ ಕೊನೆಗೂ ಸಮಾಧಾನ…!

Posted: 24 May 2019 06:45 AM PDT

ಮನೆಯವರೇ ತನಗೆ ಮತ ಹಾಕಿಲ್ಲ. ಹೀಗಾಗಿ ನನಗೆ 5 ಮತ ಬಿದ್ದಿದೆ ಅಂತಾ ಮಾಧ್ಯಮಗಳ ಮುಂದೆ ಪಂಜಾಬ್‍ ನ ಜಲಂಧರ್‌ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕಣ್ಣೀರಿಟ್ಟಿದ್ದರು. ಅದು ಬಾರಿ ಟ್ರೋಲ್‍ ಆಗಿತ್ತು. ಆದ್ರೀಗ ಅದರ ವಾಸ್ತವ ಹೊರಬಿದ್ದಿದೆ.

ಜಲಂಧರ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ Neetu Shatran Wala ತಮಗೆ ಕೇವಲ 5 ಮತಗಳು ಬಂದಿವೆ. ಮನೆಯ ಸದಸ್ಯರು 9 ಮಂದಿ ಇದ್ದರೂ, ತಮಗೆ ಸಿಕ್ಕಿದ್ದು 5 ಮತಗಳು ಎಂದು ಬೇಸರ ಮಾಡಿಕೊಂಡಿದ್ರು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು.

ಆದ್ರೆ ಅದರ ವಾಸ್ತವ ಸಂಗತಿಯೇ ಬೇರೆ ಇದ್ದು, Neetu Shatran Wala ಅಸಲಿಗೆ ಪಡೆದ ಪತಗಳು 5 ಅಲ್ಲ 856 ಎಂದು ತಿಳಿದುಬಂದಿದೆ. ಚುನಾವಣಾ ಆಯೋಗದ ವೆಬ್‍ ಸೈಟ್‍ ನಲ್ಲಿ ಈ ಬಗ್ಗೆ ಪರಿಶೀಲಿಸಿದಾಗ Neetu Shatran Wala ಪಡೆದ ಮತಗಳು 856 ಅಂತಾ ತಿಳಿದು ಬಂದಿದೆ.

ರೆಸ್ಟೋರೆಂಟ್‌ ಗೆ ಹೋಗುವವರು ಒಮ್ಮೆ ಓದಿ ಈ ಸುದ್ದಿ

Posted: 24 May 2019 06:41 AM PDT

ಇಲ್ಲೊಂದು ಭಯಾನಕ ವಿಡಿಯೋ ಇದೆ ನೋಡಿ ಬಿಡಿ…..ಅದೂ ಹೋಟೆಲ್, ರೆಸ್ಟೋರೆಂಟ್ ಗೆ ಹೆಚ್ಚಾಗಿ ಹೋಗೋರು ಈ ವಿಡಿಯೋ ನೋಡ್ಲೆ ಬೇಕು.

ಈ ವಿಡಿಯೋದಲ್ಲಿ ಪಕ್ಕದ ರಾಷ್ಟ್ರ ಚೀನಾದಲ್ಲಿ ನಡೆದಿರುವ ಘಟನೆ ಸೆರೆಯಾಗಿದೆ. ಘಟನೆ ನಡೆದಿರುವುದು ಹೈಡಿಲೋವಾ ರೆಸ್ಟೋರೆಂಟ್ ನಲ್ಲಿ. ಚೀನಾದಲ್ಲಿ ಅತ್ಯಧಿಕ ರೆಸ್ಟೋರೆಂಟ್ ಗಳನ್ನು ಈ ಸಂಸ್ಥೆ ಹೊಂದಿದೆ.

ಇನ್ನು ಸುದ್ದಿ ಏನಪ್ಪ ಅಂದ್ರೆ, ರೆಸ್ಟೋರೆಂಟ್ ಟೇಬಲ್ ವೊಂದರಲ್ಲಿ ಇಬ್ಬರು ಕುಳಿತು ಊಟ ಮಾಡ್ತಾ ಇರಬೇಕಾದ್ರೆ, ಅಲ್ಲಿಗೆ ಬಂದ ರೆಸ್ಟೋರೆಂಟ್ ಸಿಬ್ಬಂದಿ
ಸಾಂಬಾರ್ ಮಡಿಕೆ ತೆಗೆದಾಗ ಸ್ಫೋಟ ಸಂಭವಿಸಿದೆ. ರೆಸ್ಟೋರೆಂಟ್ ಸಿಬ್ಬಂದಿ ಹಾಗೂ ಅಲ್ಲಿ ಕುಳಿತಿದ್ದ ಗ್ರಾಹಕರ ಮೇಲೆ ಬಿದ್ದಿದೆ. ಸಿಬ್ಬಂದಿಯ
ಮುಖಕ್ಕೆ ತೀವ್ರತರದ ಗಾಯಗಳಾಗಿವೆ.

ಆ ಕೂಡಲೇ ರೆಸ್ಟೋರೆಂಟ್ ನವರು ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಬಿಸಿ ಬಿಸಿ ಮಡಿಕೆ ಸ್ಫೋಟದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ ನೋಡಿ.

ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಮಗ ದುರ್ಮರಣ

Posted: 24 May 2019 06:18 AM PDT

ಕಲಬುರಗಿ: ಜೋತು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗ ಮೃತಪಟ್ಟ ದಾರುಣ ಘಟನೆ ನಾಲವಾರ ಗ್ರಾಮದಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ವಾಹನಕ್ಕೆ ಕಬ್ಬಿಣದ ಮಂಚ ಹಾಕುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಯಾದಗಿರಿ ಮೂಲದ ಗುಜರಿ ವ್ಯಾಪಾರಿಗಳಾದ ತಂದೆ, ಮಗ ಮೃತಪಟ್ಟಿದ್ದಾರೆ. ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಸಕರಾದ ಮರು ದಿನವೇ ಕೆಲಸ ಶುರು

Posted: 24 May 2019 06:01 AM PDT

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕುಸುಮಾ ಶಿವಳ್ಳಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಶಾಸಕರಾಗಿ ಆಯ್ಕೆಯಾದ ಮರುದಿನವೇ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಅಹವಾಲು ಆಲಿಸಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಬೇಕೆಂದು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿ.ಎಸ್. ಶಿವಳ್ಳಿ ಅವರು ಕಿಮ್ಸ್ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಆಸ್ಪತ್ರೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕೆಂದು ಅವರು ಕನಸು ಕಂಡಿದ್ದರು. ಅವರ ಆಶಯದಂತೆ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡಲು ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

ಶಾಕಿಂಗ್ ನ್ಯೂಸ್…! 15 ವಿದ್ಯಾರ್ಥಿಗಳು ಬೆಂಕಿಗಾಹುತಿ

Posted: 24 May 2019 05:39 AM PDT

ಗುಜರಾತ್ ನ ಸೂರತ್ ನಲ್ಲಿರುವ ಕೋಚಿಂಗ್ ಸೆಂಟರ್ ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, 15 ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಬೆಂಕಿ ವ್ಯಾಪಿಸಿದ ಕಟ್ಟಡದಿಂದ ಕೆಳಗೆ ಹಾರಿ ಹಲವರು ಸಾವನ್ನಪ್ಪಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಹಲವು ಭಾಗಗಳಿಗೆ ವ್ಯಾಪಿಸಿ ಹೊತ್ತಿ ಉರಿದಿದೆ.

ದಟ್ಟವಾದ ಹೊಗೆ ಆವರಿಸಿದೆ. 18 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಕಟ್ಟಡದಲ್ಲಿದ್ದ 50 ಕ್ಕೂ ಹೆಚ್ಚು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯ ಜನ ಕಟ್ಟಡದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ.

ಮಾವನಿಂದಲೇ ಲೈಂಗಿಕ ಕಿರುಕುಳ, ಸೊಸೆ ಮಾಡಿದ್ದೇನು ಗೊತ್ತಾ…?

Posted: 24 May 2019 05:28 AM PDT

ಬೆಂಗಳೂರು: ಅತ್ತೆ, ಮಾವ ಸೇರಿಕೊಂಡು ಸೊಸೆ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ನೊಂದ ಸೊಸೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕೋಣನಕುಂಟೆಯಲ್ಲಿ ವಾಸವಾಗಿರುವ ಮಾವ, ಸೊಸೆಯ ಮೇಲೆ ಕಣ್ಣು ಹಾಕಿದ್ದು, ಪುತ್ರನಿಲ್ಲದ ವೇಳೆಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ.

ತಂದೆಯ ಬಗ್ಗೆ ಗೊತ್ತಾಗಿ ಪುತ್ರ ಬೇರೆ ಮನೆಮಾಡಿದ್ದು, ಇದರಿಂದ ಆಕ್ರೋಶಗೊಂಡ ಮಾವ ಮತ್ತು ಅತ್ತೆ, ಸೊಸೆ ಮೇಲೆ ಹಲ್ಲೆ ನಡೆಸಿದ್ದಾರೆ. ಅತ್ತೆ-ಮಾವನ ವಿರುದ್ಧ ಸೊಸೆ ದೂರು ದಾಖಲಿಸಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಪುಟ್ಟ ಕಂದನ ರಕ್ಷಿಸಲು ಪ್ರಾಣವನ್ನೇ ಪಣವಾಗಿಟ್ಟ ಬಾಲಕ

Posted: 24 May 2019 04:39 AM PDT

ಪುಟ್ಟ ಬಾಲಕಿಯನ್ನು ರಕ್ಷಿಸಲು ರಷ್ಯಾದ 12 ವರ್ಷದ ಬಾಲಕ ಮಾಡಿದ ಸಾಹಸದಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಈ ಸಾಹಸದ ವೇಳೆ ಬಾಲಕ ತನ್ನ ಜೀವವನ್ನೇ ಪಣವಾಗಿಟ್ಟಿದ್ದ.

ಮಾಸ್ಕೋದ ಪಾರ್ಕ್ ನಲ್ಲಿ ಕ್ಯಾಪ್ ಕಳಚಿದ್ದ ನೀರು ತುಂಬಿದ ಪೈಪ್ ನೊಳಕ್ಕೆ ಬಾಲಕಿ ಸಿಲುಕಿದ್ದಳು. ಸಣ್ಣ ಮರದ‌ ಕೊಂಬೆಯನ್ನು ಬಳಸಿ ಬಾಲಕಿಯನ್ನು ರಕ್ಷಿಸಲು ದಾರಿಹೋಕರು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಇದೇ ಸಮಯಕ್ಕೆ ಸ್ಥಳಕ್ಕೆ ಬಂದ ಬಾಲಕನೊಬ್ಬ ಪೈಪ್ ನೊಳಗೆ ನುಗ್ಗಿ ಬಾಲಕಿ ಹೊರತರುವುದಾಗಿ ತಿಳಿಸಿದ್ದಷ್ಟೆ ಅಲ್ಲದೆ ಯಶಸ್ವಿಯೂ ಆದ. ಬಾಲಕನ ಹೆಸರು ಇನ್ನೂ ತಿಳಿದಿಲ್ಲವಾದರೂ ಈ ರಕ್ಷಣಾ ವಿಡಿಯೋ ಮಾತ್ರ ವೈರಲ್ ಆಗಿದೆ.

ಅಲ್ಪಮತಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದ ರೋಜಾ

Posted: 24 May 2019 04:35 AM PDT

ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಟಿ ರೋಜಾ ರೋಚಕ ಗೆಲುವು ಸಾಧಿಸಿದ್ದಾರೆ. ಜಗನ್ಮೋಹನ್‍ ರೆಡ್ಡಿಯವರ ವೈ.ಎಸ್‍.ಆರ್.ಕಾಂಗ್ರೆಸ್ ಪಕ್ಷದಿಂದ ನಗರಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ರೋಜಾ ಗೆಲುವು ಪಡೆದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಂತೆಯೇ, ಈ ಬಾರಿಯೂ ರೋಜಾ ಕಡಿಮೆ ಅಂತರದಲ್ಲಿ ರೋಚಕ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಟಿಡಿಪಿ ಅಭ್ಯರ್ಥಿಯಾಗಿ ನಿಂತಿದ್ದ ಗಾಲಿ ಭಾನು ಪ್ರಕಾಶ್ ವಿರುದ್ಧ ರೋಜಾ ಬರೀ 2,630 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ‌

2014 ರಲ್ಲಿ ಟಿಡಿಪಿ ಅಭ್ಯರ್ಥಿ ಗಾಲಿ ಮುದ್ದುಕೃಷ್ಣಂ ನಾಯ್ಡು ವಿರುದ್ಧ ಕೇವಲ 858 ಮತಗಳ ಅಂತರದಲ್ಲಿ ರೋಜಾ ಗೆದ್ದಿದ್ದರು. ಈ ಬಾರಿ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವರ ಆಡಳಿತ ವಿರೋಧಿ ಅಲೆ, ಜಗನ್ ಹವಾ ಜೊತೆ ರೋಜಾ ಪತಿ ತಮಿಳಿಗರಾಗಿದ್ದು, ಸಿಂಗುಂದರ್ ಪ್ರದೇಶದಲ್ಲಿ ತಮಿಳು ಭಾಷಿಕರು ಹೆಚ್ಚಾಗಿರುವುದು ಈ ಎಲ್ಲಾ ಅಂಶಗಳು ರೋಜಾ ಗೆಲುವಿಗೆ ಕಾರಣವಾಗಿದೆ.

ಕಾರನ್ನೇರಿ ಕುಳಿತ ಕರಡಿಗಳನ್ನು ಕಂಡು ಮಾಲೀಕ ಕಂಗಾಲು

Posted: 24 May 2019 04:32 AM PDT

Image result for Family Of Bears Take Over Man's Car And The Pics Are Hilariousತಾನು ಕರಡಿಗಳನ್ನು ನೋಡಬೇಕು ಎಂದು ಸ್ನೇಹಿತರ ಜತೆಗೆ ಹೇಳಿಕೊಂಡಿದ್ದವನ ಕಾರನ್ನು ಒಂದಲ್ಲ ಎರಡಲ್ಲ ನಾಲ್ಕು ಕರಡಿಗಳು ಸುತ್ತುವರಿದರೆ ಏನು ಗತಿ?

ಅಮೆರಿಕದ ಟೆನ್ನೆಸ್ಸೀಯಲ್ಲಿ‌ ಬಾರ್ಬರ್ ಶಾಪ್ ಹೊಂದಿರುವ ಚಡ್ ಮೋರಿಸ್ ಎಂಬಾತನ ಕಾರನ್ನು ಮೂರು ಮರಿ ಕರಡಿಗಳು ಒಳಹೊಕ್ಕು ಆಟವಾಡುತ್ತಿದ್ದರೆ, ತಾಯಿ ಕರಡಿ ಹೊರಗೆ ನಿಂತು ತಮಾಷೆ ನೋಡುತ್ತಿತ್ತು.

ಫೇಸ್‌ ಬುಕ್‌ ನಲ್ಲಿ ಮೋರಿಸ್ ಅಪ್ಲೋಡ್ ಮಾಡಿರುವ ಫೋಟೊ ಇದೀಗ ವೈರಲ್ ಆಗಿದೆ.

ʼಪುಟ್ಟ ಗೌರಿʼ ಖ್ಯಾತಿಯ ಮಹೇಶ್‍ ಗೆ ಮದುವೆ ಸಂಭ್ರಮ

Posted: 24 May 2019 04:30 AM PDT

ʼಪುಟ್ಟ ಗೌರಿʼ ಮದುವೆ ಖ್ಯಾತಿಯ ಮಹೇಶ್ ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ. ಪುಟ್ಟಗೌರಿ ಮದುವೆಯಲ್ಲಿ ಮಹೇಶ್‍ನ ಪಾತ್ರ ಮಾಡಿ ಜನರ ಮನ ಗೆದ್ದಿದ್ದ ರಕ್ಷ್‍, ಇದೇ 26 ರಂದು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ.

ಇನ್ಸ್ಟಾಗ್ರಾಂ ನಲ್ಲಿ ನಟ ರಕ್ಷ್‍ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಾಕಿ "ನಾನು ಮದುವೆಯಾಗುತ್ತಿದ್ದೇನೆ. ನನ್ನ ಪ್ರೀತಿಯ ಜನರಿಗೆ ಇದು ನನ್ನ ಆಮಂತ್ರಣ ಪ್ರತಿಕೆಯಾಗಿದೆ. ಇದೇ ತಿಂಗಳು ದಿನಾಂಕ 26 ರಂದು ವಿವಾಹವಿದೆ. ನೀವೆಲ್ಲರೂ ಬಂದು ಆಶೀರ್ವದಿಸಬೇಕು” ಅಂತಾ ಬರೆದುಕೊಂಡಿದ್ದಾರೆ.

ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಲ್‍ನಲ್ಲಿ ರಕ್ಷ್‍ ಮದುವೆ ನಡೆಯಲಿದೆ. ರಕ್ಷ್‍, ಹುಡುಗಿ ಹೆಸರು ಅನುಷಾ ಎಂದು ತಿಳಿಸಿದ್ದಾರೆ.

1107 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಅಭ್ಯರ್ಥಿ ಪಡೆದ ಮತಗಳೆಷ್ಟು ಗೊತ್ತಾ…?

Posted: 24 May 2019 04:28 AM PDT

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ, ಸರ್ಕಾರ ರಚಿಸಲು ಸಜ್ಜಾಗಿದೆ. ಇದೀಗ ಬಿಜೆಪಿ ಎದುರಾಳಿಯಾಗಿ ಕಣಕ್ಕಿಳಿದಿದ್ದ ಅಭ್ಯರ್ಥಿಗಳ ಕುರಿತಾಗಿ ಕುತೂಹಲಕಾರಿ ಮಾಹಿತಿ ಬಹಿರಂಗವಾಗ್ತಿದೆ. ಅವರಲ್ಲಿ ರಮೇಶ್ ಕುಮಾರ್ ಶರ್ಮಾ, ಇದೀಗ ಭಾರಿ ಸುದ್ದಿಯಾಗ್ತಿದ್ದಾರೆ.

ಈ ಬಾರಿ ಲೋಕಸಭೆ ಅಖಾಡಕ್ಕಿಳಿದಿದ್ದ ಶ್ರೀಮಂತ ಅಭ್ಯರ್ಥಿಗಳಲ್ಲಿ ರಮೇಶ್‍ ಕುಮಾರ್ ಶರ್ಮಾ ಕೂಡಾ ಒಬ್ಬರು. ಇವರು 1107 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಬಿಹಾರದ ಪಾಟಲಿಪುತ್ರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಇವರಿಗೆ ಸಿಕ್ಕಿದ್ದು ಬರೀ 1102 ಮತಗಳು.

ಪಾಟಲೀಪುತ್ರ ಕ್ಷೇತ್ರದಲ್ಲಿ ರಮೇಶ್ ಶರ್ಮಾಗೆ ಎದುರಾಳಿಯಾಗಿದ್ದವರು, ಬಿಜೆಪಿಯ ರಾಮ್‍ ಕೃಪಾಲ್‍ ಯಾದವ್‍ ಹಾಗೂ ಆರ್.ಜೆ.ಡಿ. ಪಕ್ಷದಿಂದ ಮೀಸಾ ಭಾರತಿ. ಇಂತಹ ಘಟಾನುಘಟಿ ನಾಯಕರ ಮುಂದೆ ಆಗರ್ಭ ಶ್ರೀಮಂತ ರಮೇಶ್ ಕುಮಾರ್ ಶರ್ಮಾ ಮಣ್ಣು ಮುಕ್ಕಿದ್ದಾರೆ.. ರಮೇಶ್‍ ಶರ್ಮಾ ವೃತ್ತಿಯಲ್ಲಿ ಎಂಜಿನಿಯರ್ ಹಾಗೂ ಉದ್ಯಮಿಯಾಗಿದ್ದಾರೆ. ಹಡಗು ನವೀಕರಣ ಕಂಪನಿ ನಡೆಸುತ್ತಿರುವ ಇವರ ಒಡೆತನದಲ್ಲಿ ಬರೋಬ್ಬರಿ 11 ಕಂಪನಿಗಳಿವೆ.

ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ

Posted: 24 May 2019 04:19 AM PDT

2019ರ ಲೋಕಸಭೆ ಚುನಾವಣೆ ಗೆಲುವಿನ ನಂತ್ರ ನರೇಂದ್ರ ಮೋದಿಗೆ ದೇಶ, ವಿದೇಶದಿಂದ ಶುಭಾಶಯಗಳ ಸುರಿಮಳೆಯಾಗ್ತಿದೆ. ವಿದೇಶಿ ನಾಯಕರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಮೋದಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದ್ರಿಂದ ಹೊರತಾಗಿಲ್ಲ. ಕೊಹ್ಲಿ, ಮೋದಿಗೆ ಶುಭ ಕೋರಿದ್ದಾರೆ.

ವಿರಾಟ್ ಕೊಹ್ಲಿ ಟ್ವೀಟರ್ ಮೂಲಕ ಮೋದಿಗೆ ಶುಭ ಕೋರಿದ್ದಾರೆ. ನರೇಂದ್ರ ಮೋದಿಗೆ ಅಭಿನಂದನೆ. ನಿಮ್ಮ ಗೆಲುವಿನ ನಂತ್ರ ದೇಶ ಇನ್ನಷ್ಟು ಎತ್ತರಕ್ಕೆ ತಲುಪಲಿದೆ ಎಂಬ ವಿಶ್ವಾಸ ನಮಗಿದೆ. ಜೈ ಹಿಂದ್ ಎಂದು ಕೊಹ್ಲಿ ಟ್ವೀಟ್  ಮಾಡಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ,‌ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಶನಿವಾರ ನ್ಯೂಜಿಲ್ಯಾಂಡ್ ವಿರುದ್ದ ಮೊದಲ ಅಭ್ಯಾಸ ಪಂದ್ಯ ನಡೆಯಲಿದೆ. ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿರುವ ಕೊಹ್ಲಿ, ಮತ್ತೊಮ್ಮೆ ಅಧಿಕಾರಕ್ಕೆ ಬಂದ ಮೋದಿಗೆ ಶುಭ ಕೋರಿದ್ದಾರೆ.

ಮೃತ ಪತ್ನಿ ಶವದ ಜೊತೆ ಐದು ವರ್ಷಗಳ ಕಾಲ ಈ ಕೆಲಸ ಮಾಡಿದ ಪತಿ…..

Posted: 24 May 2019 03:42 AM PDT

ಪ್ರೀತಿ ಕುರುಡು ಎನ್ನುತ್ತಾರೆ. ಪ್ರೀತಿಗೆ ಬಿದ್ದವರು ಏನು ಮಾಡಲೂ ಸಿದ್ಧವಿರ್ತಾರೆ. ಪ್ರೀತಿಗಾಗಿ ಕೆಲವರು ತಮ್ಮ ಪ್ರಾಣ ಕಳೆದುಕೊಂಡ್ರೆ ಮತ್ತೆ ಕೆಲವರು ಬೇರೆಯವರ ಪ್ರಾಣ ತೆಗೆಯುತ್ತಾರೆ. ಪ್ರೀತಿಸಿದ ವ್ಯಕ್ತಿ ಜೊತೆಯಲ್ಲಿಲ್ಲದೆ ಬದುಕು ಕಷ್ಟ. ಪ್ರೀತಿಗಾಗಿ ಈ ವ್ಯಕ್ತಿ ಮಾಡಿದ ಕೆಲಸ ದಂಗಾಗಿಸುವಂತಿದೆ.

ವಿಯೆಟ್ನಾಂದ ವ್ಯಕ್ತಿಯೊಬ್ಬ ಐದು ವರ್ಷಗಳ ಕಾಲ ಮೃತ ಪತ್ನಿ ಜೊತೆ ಜೀವನ ಸಾಗಿಸಿದ್ದಾನೆ. ಆತ ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದನಂತೆ. ಆಕೆಯಿಲ್ಲದ ಬದುಕು ಕಷ್ಟವಾಗಿತ್ತಂತೆ. ಪತ್ನಿ ಸತ್ತ ಮೇಲೆ ಅಂತಿಮ ಸಂಸ್ಕಾರ ನಡೆದಿದೆ. ಸ್ಮಶಾನದಲ್ಲಿ ಆಕೆ ಸಮಾಧಿ ಪಕ್ಕವೇ ವಾಸಮಾಡುವ ನಿರ್ಧಾರ ತೆಗೆದುಕೊಂಡಿದ್ದ. ಅದು ಆಗ್ಲಿಲ್ಲ.

ಸಮಾಧಿ ಮಾಡಲಾಗಿದ್ದ ಪತ್ನಿ ಶವವನ್ನು ಹೊರಗೆ ತೆಗೆದು, ಶವವನ್ನು ಮಣ್ಣಿನಿಂದ ಮುಚ್ಚಿಕೊಂಡು 5 ವರ್ಷ ಕಳೆದಿದ್ದಾನಂತೆ. ಈ ವ್ಯಕ್ತಿ ಸಾಮಾನ್ಯರಿಗಿಂತ ಸ್ವಲ್ಪ ಭಿನ್ನ ಮನಃಸ್ಥಿತಿಯವನಾಗಿದ್ದ ಎನ್ನಲಾಗಿದೆ. ಆದ್ರೆ ಇದ್ರಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ನಂಬುವುದು ಕಷ್ಟ.

 

ಏರ್ಟೆಲ್ ಡಿಜಿಟಲ್ ಟಿವಿ ಗ್ರಾಹಕರಿಗೆ ಖುಷಿ ಸುದ್ದಿ

Posted: 24 May 2019 03:39 AM PDT

ಏರ್ಟೆಲ್ ಡಿಜಿಟಲ್ ಟಿವಿ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. 6 ಹೊಸ ಯೋಜನೆಗಳನ್ನು ಏರ್ಟೆಲ್ ಡಿಜಿಟಲ್ ಟಿವಿ ಗ್ರಾಹಕರಿಗಾಗಿ ಕಂಪನಿ ಬಿಡುಗಡೆ ಮಾಡಿದೆ. ಇದ್ರಲ್ಲಿ 6 ತಿಂಗಳಿಂದ ಹಿಡಿದು ಒಂದು ವರ್ಷದ ಪ್ಯಾಕ್ ಲಭ್ಯವಿದೆ. ಈ ಪ್ಲಾನ್ ಗಳಲ್ಲಿ ನೀವು ನಿಮಗಿಷ್ಟದ ಚಾನೆಲ್ ಗಳನ್ನು ವೀಕ್ಷಣೆ ಮಾಡಬಹುದು.

ಏರ್ಟೆಲ್ ಹೊಸ ಪ್ಲಾನ್ ಗಳ ಮಾಹಿತಿ ಇಲ್ಲಿದೆ.

Gujarat Value Sports SD Pack : ಈ ಪ್ಲಾನ್ 6 ತಿಂಗಳ ಸಿಂಧುತ್ವ ಹೊಂದಿರಲಿದೆ. 15 ದಿನಗಳ ಹೆಚ್ಚುವರಿ ಸಿಂಧುತ್ವವನ್ನು ಕಂಪನಿ ಗ್ರಾಹಕರಿಗೆ ನೀಡ್ತಿದೆ. ಇದ್ರ ತಿಂಗಳ ಬೆಲೆ 336 ರೂಪಾಯಿ.

Gujarat Value Sports HD ಮತ್ತು Gujarat Mega HD : ಇವೆರಡೂ ಹೆಚ್ ಡಿ ಪ್ಯಾಕ್ ಗಳು. ಎರಡೂ 6 ತಿಂಗಳು ಹಾಗೂ 12 ತಿಂಗಳ ಸಿಂಧುತ್ವದಲ್ಲಿ ಲಭ್ಯವಿದೆ. Gujarat Value Sports HDಗೆ ಪ್ರತಿ ತಿಂಗಳು ಗ್ರಾಹಕ 475 ರೂಪಾಯಿ ಪಾವತಿ ಮಾಡಬೇಕು. Gujarat Mega HD ಪ್ಯಾಕ್ ಗೆ 699 ರೂಪಾಯಿ ಪಾವತಿ ಮಾಡಬೇಕು.

Hindi Value SD Pack : ಈ ಪ್ಲಾನ್ ಕೂಡ 6 ತಿಂಗಳ ಸಿಂಧುತ್ವ ಹೊಂದಿರಲಿದೆ. ಇದ್ರ ಬೆಲೆ ತಿಂಗಳಿಗೆ 280 ರೂಪಾಯಿ.

UDP Pack: : ಈ ಪ್ಲಾನ್ ಗಾಗಿ ಬಳಕೆದಾರರು ಪ್ರತಿ ತಿಂಗಳು 799 ರೂಪಾಯಿ ಪಾವತಿಸಬೇಕಾಗುತ್ತದೆ.

 

 

ಪ್ರೇಮಿಗಳು ದೂರವಾಗಲು ಕಾರಣವಾಯ್ತು ತಂಪು‌ ʼಪಾನೀಯʼ

Posted: 24 May 2019 03:13 AM PDT

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ ನಡೆಯುತ್ತಿರುತ್ತದೆ. ಪ್ರೀತಿ, ದಾಂಪತ್ಯ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ಪರಸ್ಪರ ಗೌರವ ನೀಡದೆ ಹೋದ್ರೆ ಆ ಸಂಬಂಧ ತುಂಬಾ ಸಮಯ ಉಳಿಯುವುದಿಲ್ಲ. ಸಣ್ಣ ಸಣ್ಣ ವಿಷ್ಯಕ್ಕೆ ಗಲಾಟೆ ಮಾಡಿಕೊಳ್ಳುವ ಜೋಡಿ ಹೊಂದಾಣಿಕೆ ಮಾಡಿಕೊಳ್ಳದೆ ದೂರವಾಗಲು ಬಯಸ್ತಾರೆ.

ಚೀನಾದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ತಂಪು ಪಾನೀಯಕ್ಕೆ ಪ್ರೇಮಿಗಳು ಬೇರೆಯಾದ ಘಟನೆ ನಡೆದಿದೆ. ಒಂದಲ್ಲ ಎರಡಲ್ಲ 7 ವರ್ಷಗಳ ಸಂಬಂಧವನ್ನು ಅವ್ರು ಮುರಿದುಕೊಂಡಿದ್ದಾರೆ. ಈ ಸಂಗತಿಯನ್ನು ಹುಡುಗಿ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾಳೆ.

ಹುಡುಗಿ, ಪ್ರೇಮಿ ಜೊತೆ ಹೊರಗೆ ಹೋಗಿದ್ದಳಂತೆ. ಮಧ್ಯಾಹ್ನ ಒಂದು ಗಂಟೆಯಾದ್ರೂ ಏನೂ ಸೇವಿಸಿರಲಿಲ್ಲವಂತೆ. ಬಾಯಾರಿಕೆಯಾಗ್ತಿದ್ದಂತೆ ತಂಪು ಪಾನೀಯ ಖರೀದಿಸಿ ಕುಡಿದಿದ್ದಾಳಂತೆ. ಇದಕ್ಕೆ ಕೋಪಗೊಂಡ ಪ್ರೇಮಿ, ಬಾಯಿಗೆ ಬಂದಂತೆ ಬೈದಿದ್ದಾನಂತೆ.

ಸ್ವಲ್ಪ ಸಮಯ ಕಾದಿದ್ದರೆ ಮನೆಗೆ ಹೋಗಿ ನೀರು ಕುಡಿಯಬಹುದಿತ್ತು. ತಂಪು ಪಾನೀಯ ಆರೋಗ್ಯಕ್ಕೆ ಹಾನಿಕರ. ಸ್ನೇಹಿತರ ಗೆಳತಿಯರನ್ನು ನೋಡು. ಹೊರಗೆ ಹೋಗುವ ಮೊದಲು ಅವ್ರು ನೀರಿನ ಬಾಟಲಿ ತೆಗೆದುಕೊಂಡು ಹೋಗ್ತಾರೆ. ನೀನು ಯಾವಾಗ ಕಲಿಯುತ್ತೀಯಾ? ಎಂದು ಬೈದಿದ್ದಾನಂತೆ. ತಂಪು ಪಾನೀಯಕ್ಕೆ ಕೇವಲ 30 ರೂಪಾಯಿ. ಅದಕ್ಕೆ ಇಷ್ಟೆಲ್ಲ ಮಾತನಾಡಿದ ಪ್ರೇಮಿ, ದೂರ ಹೋಗುವ ನಿರ್ಧಾರ ತೆಗೆದುಕೊಂಡಿದ್ದಾನೆಂದು ಹುಡುಗಿ ಹೇಳಿದ್ದಾಳೆ.

ಸಾರ್ವಜನಿಕರಿಗೆ ಉಚಿತ ಹೇರ್ ಕಟ್‍-ಶೇವಿಂಗ್ ಮಾಡಿ ಮೋದಿ ಗೆಲುವು ಸಂಭ್ರಮಿಸಿದ ಕ್ಷೌರಿಕ

Posted: 24 May 2019 03:11 AM PDT

ಲೋಕಸಭೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿ ಮೋದಿ ಮತ್ತೆ ಪ್ರಧಾನಿ ಹುದ್ದೆ ಅಲಂಕರಿಸುತ್ತಿದ್ದಾರೆ. ಇದು ಮೋದಿ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ತಂದುಕೊಟ್ಟಿದೆ. ಅಂತೆಯೇ ಬಾಗಲಕೋಟೆಯಲ್ಲಿ ಕ್ಷೌರಿಕರೊಬ್ಬರು ಗ್ರಾಹಕರಿಗೆ ಉಚಿತವಾಗಿ ಕಟಿಂಗ್, ಶೇವಿಂಗ್ ಮಾಡುವುದರ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ನಗರದ ಲಕ್ಕಿ ಹೇರ್ ಕಟಿಂಗ್ ಸಲೂನ್‍ ಮಾಲೀಕ ಸುನೀಲ್ ಶಹಪೂರ್ ಹಾಗೂ ಸಹೋದರರ ತಂಡ ಬೆಳಗ್ಗೆಯಿಂದ ಗ್ರಾಹಕರಿಗೆ ಉಚಿತವಾಗಿ ಕಟಿಂಗ್, ಶೇವಿಂಗ್‍ ಮಾಡುವ ಮೂಲಕ ಮೋದಿ ಮತ್ತು ಬಿಜೆಪಿಯ ಗೆಲುವನ್ನು ಸಂಭ್ರಮಾಚರಿಸಿದ್ದಾರೆ.

ಶಹಪೂರ್ ಬ್ರದರ್ಸ್‍ ಬೆಳಗ್ಗೆ 7 ರಿಂದ ಮಧ್ಯಾಹ್ನ 1.30 ರವರೆಗೆ ಉಚಿತ ಕಟಿಂಗ್, ಶೇವಿಂಗ್ ಮಾಡುವುದಾಗಿ ಸಲೂನ್ ಮುಂದೆ ಬ್ಯಾನರ್ ಹಾಕಿದ್ರು. ಇದನ್ನು ನೋಡಿದ ಸಾರ್ವಜನಿಕರು ಸಲೂನ್ ಮುಂದೆ ಉಚಿತ ಕ್ಷೌರ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದರು.

‘ರಮ್ಯಾ ಎಲ್ಲಿದಿಯಮ್ಮಾ…?’ ಟ್ವೀಟ್‍ ನಲ್ಲಿ ಕಾಲೆಳೆದ ಶಿಲ್ಪಾ ಗಣೇಶ್‍…!

Posted: 24 May 2019 03:09 AM PDT

ನಿಖಿಲ್‍ ಎಲ್ಲಿದ್ದೀಯಪ್ಪ..? ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯಾರ ಬಾಯಲ್ಲಿ ಕೇಳಿದ್ರೂ ಇದೇ ಬರ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ವೈರಲ್‍ ಆಗಿತ್ತು. ಆದ್ರೀಗ ಫಲಿತಾಂಶದ ಬಳಿಕ ರಮ್ಯಾ ಎಲ್ಲಿದಿಯಮ್ಮಾ..? ಅಂತಾ ಟ್ವೀಟ್ ಮಾಡೋ ಮೂಲಕ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾರನ್ನು, ಶಿಲ್ಪಾ ಗಣೇಶ್ ಕಾಲೆಳೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶಿಲ್ಪಾ ಗಣೇಶ್‍ "ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅದ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು…..ʼʼ ಎಂದು ಟ್ವೀಟ್ ಮಾಡಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಖತ್ ಆಕ್ವಿವ್ ಆಗಿದ್ದ ರಮ್ಯಾ, ಆಗಾಗ ಮೋದಿ ವಿರುದ್ಧ ಟ್ವೀಟ್ ಮಾಡ್ತಿದ್ದರು. ಮೋದಿಯವರ ಯೋಜನೆ, ವಿಚಾರಗಳನ್ನು ಕೆಣಕಿ ರಮ್ಯಾ ಸದಾ ಟ್ರೋಲ್‍ ಗೆ ಗುರಿಯಾಗ್ತಿದ್ದರು.

ಜೆಡಿಎಸ್‍-ಕಾಂಗ್ರೆಸ್ ಮೈತ್ರಿ ಮುರಿಯುವ ಮಾತು ಬೇಡ: ಶಾಸಕರಿಗೆ ‘ಕೈ’ ನಾಯಕರ ಸೂಚನೆ

Posted: 24 May 2019 03:05 AM PDT

ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದಲ್ಲಿ ಜೆಡಿಎಸ್‍-ಕಾಂಗ್ರೆಸ್‍ ಮೈತ್ರಿ ಮುರಿದು ಬೀಳುತ್ತೆ ಎಂಬ ಮಾತುಗಳು ಕೇಳಿ ಬರ್ತಿರುವಾಗಲೇ , ಕಾಂಗ್ರೆಸ್ ನಿಂದ ಮೈತ್ರಿ ಮುರಿಯೋದು ಬೇಡ ಎಂಬ ನಿರ್ಧಾರ ಹೊರಬಿದ್ದಿದೆ.

ಕಾಂಗ್ರೆಸ್ ಹೀನಾಯ ಸೋಲಿನ ಕುರಿತು ಪರಾಮರ್ಶೆ ಮತ್ತು ಮೈತ್ರಿ ಇರಬೇಕೋ, ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಲು ಡಿಸಿಎಂ ಪರಮೇಶ್ವರ್ ಇಂದು ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಸಚಿವರನ್ನು ಮತ್ತು ಮುಖಂಡರನ್ನು ಉಪಹಾರಕ್ಕೆ ಆಹ್ವಾನಿಸಿದ್ದರು. ಈ ವೇಳೆ ಮೈತ್ರಿ ಮುರಿದುಕೊಳ್ಳೋದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆಯಂತೆ.

ಕಾಂಗ್ರೆಸ್ ಅಭ್ಯರ್ಥಿಗಳಿರುವ ಕ್ಷೇತ್ರದಲ್ಲಿ, ಜೆಡಿಎಸ್ ಶಾಸಕರಿರುವ ಕಡೆ ಭಾರಿ ಹಿನ್ನಡೆಯಾಗಿದೆ. ಇದ್ರಿಂದಾಗಿ ಜೆಡಿಎಸ್‍ – ಕಾಂಗ್ರೆಸ್ ಮೈತ್ರಿಯನ್ನು ಜನ ಒಪ್ಪುತ್ತಿಲ್ಲ ಅನ್ನೋ ಸಂದೇಶ ರವಾನೆಯಾಗಿದೆ. ಇನ್ನೂ ಮೈತ್ರಿ ಮುಂದುವರೆದರೆ ಪಕ್ಷ ಮತ್ತಷ್ಟು ಕಳೆದುಕೊಳ್ಳಲಿದೆ. ಹೀಗಾಗಿ ಮೈತ್ರಿ ಮುರಿದುಕೊಳ್ಳೋಣ ಅಂತಾ ಕೆಲ ಕಾಂಗ್ರೆಸ್ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದ್ರೆ ಚುನಾವಣೆಯಿಂದಾಗಿ ಹೈಕಮಾಂಡ್ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದೆ. ಹೀಗಿರುವಾಗ ಹೈಕಮಾಂಡ್ ಹೇಳಿದಂತೆ ಕೇಳೋಣ. ಸದ್ಯಕ್ಕೆ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಬಹಿರಂಗ ಹೇಳಿಕೆ ನೀಡಬೇಡಿ ಅಂತಾ ಶಾಸಕರಿಗೆ ಪರಮೇಶ್ವರ್, ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಸಮಾಧಾನ ಹೇಳಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಕುರಿತು ಸೋಮಣ್ಣ ಭವಿಷ್ಯ: ಇದರ ಹಿಂದಿದೆ ಈ ಲೆಕ್ಕಾಚಾರ

Posted: 24 May 2019 02:51 AM PDT

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ಹೀನಾಯವಾಗಿ ಸೋಲನ್ನನುಭವಿಸಿದ ಬಳಿಕ ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನಗೊಳ್ಳುವ ಮಾತುಗಳು ಕೇಳಿ ಬರುತ್ತಿವೆ.

ಇದರ ಮಧ್ಯೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದರ ಕುರಿತು ಮಾಜಿ ಸಚಿವ ವಿ. ಸೋಮಣ್ಣ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.

ಸೋಮಣ್ಣ ಅವರ ಹೇಳಿಕೆ ಪ್ರಕಾರ, ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೋ ಆ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತದಂತೆ. ಉಪ ಚುನಾವಣೆಯಲ್ಲಿ ಬಿಜೆಪಿಯ ಅವಿನಾಶ ಜಾದವ್ ಗೆಲುವು ಕಂಡಿರುವ ಕಾರಣ ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದು ಸೋಮಣ್ಣನವರ ಲೆಕ್ಕಾಚಾರ.

ಇದೇ ಸಂದರ್ಭದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಅವರ ಗೆಲುವಿಗೆ ಕಾಂಗ್ರೆಸ್ ನಾಯಕರ ಸಹಕಾರವೂ ಕಾರಣ ಎಂದು ಸೋಮಣ್ಣ ಹೇಳಿದ್ದು, ಈ ಮೂಲಕ ಪರೋಕ್ಷವಾಗಿ ದೇವೇಗೌಡರ ಸೋಲಿಗೆ ಕಾಂಗ್ರೆಸ್ ನವರೇ ಕಾರಣ ಎಂಬುದನ್ನು ವ್ಯಕ್ತಪಡಿಸಿದ್ದಾರೆ.

ಫಲಿತಾಂಶದ ಬೆನ್ನಲ್ಲೇ ವಾಹನ ಸವಾರರಿಗೆ ಶಾಕ್: ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ

Posted: 24 May 2019 02:50 AM PDT

ಲೋಕ ಸಮರದ ಫಲಿತಾಂಶ ಹೊರಬಿದ್ದಿದೆ. ಮತದಾರ ಪ್ರಭುಗಳು ಬಿಜೆಪಿಗೆ ಮತ ಹಾಕಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೆ ಕೂರಿಸಲು ಮುನ್ನುಡಿ ಬರೆದಿದ್ದಾರೆ.

ಇಂತಹ ಸಂದರ್ಭದಲ್ಲೇ ಸಾರ್ವಜನಿಕರಿಗೆ ಪೆಟ್ರೋಲ್‍, ಡಿಸೇಲ್‍ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್‍, ಡೀಸೆಲ್‍ ಬೆಲೆಯಲ್ಲೂ ಕೊಂಚ ಏರಿಕೆ ಕಂಡಿದೆ. ಅಂತೆಯೇ ಪೆಟ್ರೋಲ್‍ ಬೆಲೆ 14 ಪೈಸೆ ಏರಿಕೆ ಕಂಡರೆ, ಡೀಸೆಲ್‍ ಬೆಲೆ 16 ಪೈಸೆ ಏರಿಕೆಯಾಗಿದೆ.

ತೈಲ ಬೆಲೆ ಏರಿಕೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‍ ಬೆಲೆ 71.39 ರೂ., ಡಿಸೇಲ್‍ ಬೆಲೆ 66.45 ರೂಪಾಯಿ ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‍ ಬೆಲೆ 77 ರೂಪಾಯಿ ಆಗಿದ್ರೆ, ಡೀಸೆಲ್‍ ಬೆಲೆ 69.63 ರೂಪಾಯಿ ಆಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್‍ 73.57 ರೂ. ಆಗಿದ್ರೆ, ಡೀಸೆಲ್‍ 68.45 ರೂಪಾಯಿಗೆ ಏರಿದೆ.