Translate

Tuesday, August 13, 2019

Kannada News | Karnataka News | India News

Kannada News | Karnataka News | India News


ಸೊಳ್ಳೆ ಕಾಟವೇ…? ಇಲ್ಲಿದೆ ಪರಿಹಾರ

Posted: 13 Aug 2019 09:07 AM PDT

ಬೆಳಿಗ್ಗೆ ಬಿಸಿಲು, ಸಂಜೆ ಮಳೆ. ಈ ಹವಾಮಾನದಲ್ಲಿ ಸೊಳ್ಳೆಗಳ ಕಾಟ ಜಾಸ್ತಿ. ಬೆಳಿಗ್ಗೆ ಸಂಜೆ ಎನ್ನದೆ ಎಲ್ಲ ಸಮಯದಲ್ಲಿ ಸೊಳ್ಳೆ ಕಾಟ ಕೊಡುತ್ತೆ. ಮಾರುಕಟ್ಟೆಯಲ್ಲಿ ಸಿಗುವ ಎಷ್ಟೇ ಔಷಧಿ ಸಿಂಪಡಿಸಿದ್ರೂ ಸೊಳ್ಳೆ ಕಾಟ ಮಾತ್ರ ತಪ್ಪೋದಿಲ್ಲ. ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಸೊಳ್ಳೆಯನ್ನು ಸುಲಭವಾಗಿ ಓಡಿಸಬಹುದು.

ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಲು ಮನೆ ಮದ್ದನ್ನು ನೀವು ಬಳಸಬಹುದು. ಮನೆಯಲ್ಲಿರುವ ನಿಂಬೆ ಹಣ್ಣು ಹಾಗೂ ಲವಂಗವನ್ನು ಬಳಸಿಕೊಂಡು ನೀವು ಸೊಳ್ಳೆ ಓಡಿಸಬಹುದು.

ಎರಡರಿಂದ ಮೂರು ನಿಂಬೆ ಹಣ್ಣನ್ನು ತೆಗೆದುಕೊಳ್ಳಿ. ಅದನ್ನು ಕಟ್ ಮಾಡಿ. ಕತ್ತರಿಸಿದ ನಿಂಬೆ ಹಣ್ಣಿನ ಮೇಲೆ ಲವಂಗವನ್ನು ಅಂಟಿಸಿ ಅದನ್ನು ಮನೆಯ ಮೂಲೆ ಮೂಲೆಯಲ್ಲಿಡಿ. ಇದ್ರಿಂದ ಸೊಳ್ಳೆ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮನೆಯಿಂದ ಹೊರ ಹೋಗುವ ವೇಳೆಯೂ ನೀವು ನಿಂಬೆ ಹಣ್ಣು ಹಾಗೂ ಲವಂಗ ತೆಗೆದುಕೊಂಡು ಹೋದ್ರೆ ಒಳ್ಳೆಯದು. ರಾತ್ರಿ ಸೊಳ್ಳೆ ಕಾಟದಿಂದ ನಿದ್ರೆ ಬಂದಿಲ್ಲವೆಂದಾದಲ್ಲಿ ಮಲಗುವ ಸ್ಥಳದಲ್ಲಿ ಕಟ್ ಮಾಡಿದ ನಿಂಬೆ ಹಣ್ಣು ಹಾಗೂ ಲವಂಗವನ್ನಿಟ್ಟು ನೋಡಿ.

ಬೆಡ್ ರೂಂ ʼಸೆಕ್ಸ್ʼ ಬೋರಾಗಿದ್ರೆ ಹೀಗೆ ಮಾಡಿ

Posted: 13 Aug 2019 08:45 AM PDT

ಅನೇಕರಿಗೆ ಬೆಡ್ ರೂಂ ಸೆಕ್ಸ್ ಬೇಸರ ಮೂಡಿಸಿರುತ್ತದೆ. ಒಂದೇ ರೀತಿಯ ಸಂಭೋಗ ಅವ್ರ ಬೇಸರಕ್ಕೆ ಮುಖ್ಯ ಕಾರಣವಾಗುತ್ತದೆ. ಲೈಂಗಿಕ ಜೀವನದಲ್ಲಿ ರುಚಿ ಹೆಚ್ಚಿರಬೇಕೆಂದ್ರೆ ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕಾಗುತ್ತದೆ.

ಸಂಭೋಗದ ವೇಳೆ ಅನಾವಶ್ಯಕ ಚಿಂತೆಗಳನ್ನು ಮೊದಲು ಬಿಡಬೇಕು. ನಿಮ್ಮ ಮನಸ್ಸಿಗೆ ಹಾಗೂ ಸಂಗಾತಿಗೆ ಮೊದಲೇ ಹೇಳಿಡಿ. ಪರಾಕಾಷ್ಠೆಯೇ ಅಂತಿಮವಲ್ಲ. ಪರಾಕಾಷ್ಠೆಯನ್ನು ತಲೆಯಿಂದ ತೆಗೆದುಹಾಕಿ, ಹಾಸಿಗೆಯಲ್ಲಿ ಸಂಪೂರ್ಣ ಸುಖ ಪಡೆಯುವ ಬಗ್ಗೆ ಆಲೋಚನೆ ಮಾಡಿ. ಒತ್ತಡ ಬಿಟ್ಟು ಆರಾಮವಾಗಿ ಸಂಬಂಧ ಬೆಳೆಸಿ.

ಸಂಭೋಗಕ್ಕೆ ಬೆಡ್ ರೂಮ್ ಮಾತ್ರ ಜಾಗವಲ್ಲ. ನೀವು ಬೇರೆ ಕಡೆಗಳಲ್ಲಿಯೂ ಸಂಭೋಗ ಸುಖ ಪಡೆಯಬಹುದು. ಇಬ್ಬರ ಒಪ್ಪಿಗೆಯಿದ್ರೆ ಬೇರೆ ಕಡೆ ಶಾರೀರಿಕ ಸಂಬಂಧ ಬೆಳೆಸಿ, ಸಂಭೋಗದ ಉತ್ಸಾಹ ಹೆಚ್ಚಿಸಿಕೊಳ್ಳಿ.

ಸಂಭೋಗ ಸುಖ ಹೆಚ್ಚಿಸುವಲ್ಲಿ ಸೆಕ್ಸ್ ಟಾಯ್ಸ್ ನಿಮಗೆ ನೆರವಾಗುತ್ತವೆ. ಅದ್ರ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಸರಿಯಾಗಿ ಅರ್ಥ ಮಾಡಿಕೊಂಡು ಸರಿಯಾದ ಟಾಯ್ಸ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ನೀವಿಬ್ಬರೂ ದೂರವಿದ್ದಾಗ, ಇದ್ದಕ್ಕಿದ್ದಂತೆ ಲೈಂಗಿಕ ಅಪೇಕ್ಷೆ ಶುರುವಾದ್ರೆ ಸೆಕ್ಸ್‌ ಟಾಕ್ ಬೆಸ್ಟ್. ನಿಮ್ಮ ಭಾವನೆಗಳನ್ನು ಹಾಗೂ ಯೋಜನೆಗಳನ್ನು ಸಂಗಾತಿಗೆ ಫೋನ್ ಮೂಲಕ ತಿಳಿಸಬಹುದು.

ಈ ಕಾರಣಕ್ಕೆ ಒಂದೇ ಮಗು ಸಾಕು ಎನ್ನುತ್ತಾರೆ ಮಹಿಳೆಯರು

Posted: 13 Aug 2019 08:30 AM PDT

ಮಕ್ಕಳಿರಲವ್ವ ಮನೆ ತುಂಬಾ ಅಂತಾ ಹಿರಿಯರು ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಮಹಿಳೆಗೆ ಮಕ್ಕಳನ್ನು ಹೆರುವುದೇ ಒಂದು ಕೆಲಸವಾಗಿತ್ತು ಎಂದ್ರೆ ತಪ್ಪಾಗಲಾರದು. 10-12 ಮಕ್ಕಳನ್ನು ಹಡೆಯುತ್ತಿದ್ದಳು ಮಹಿಳೆ.

ಆದ್ರೀಗ ಎಲ್ಲವೂ ಬದಲಾಗಿದೆ. ಆರತಿಗೊಂದು ಮಗಳು, ಕೀರುತಿಗೊಂದು ಮಗ ಅಂದುಕೊಂಡು ಎರಡು ಮಕ್ಕಳನ್ನು ಪಡೆಯುತ್ತಿದ್ದ ಕಾಲವೂ ಈಗಿಲ್ಲ. ಈಗೇನಿದ್ದರೂ ಗಂಡಾಗ್ಲಿ, ಹೆಣ್ಣಾಗ್ಲಿ ಒಂದೇ ಮಗು ಸಾಕು ಎನ್ನುತ್ತಿದ್ದಾರೆ ಮಹಿಳೆಯರು.

ಈ ಬಗ್ಗೆ ನಡೆದ ಸರ್ವೆಯೊಂದು ಇದನ್ನೇ ಹೇಳಿದೆ. ನಗರಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಮಹಿಳೆಯರು ಈ ನಿಯಮ ಪಾಲಿಸುತ್ತಿದ್ದಾರೆ. ನಗರದ ಶೇಕಡಾ 35ರಷ್ಟು ತಾಯಂದಿರು ಒಂದೇ ಮಗು ಸಾಕು ಎನ್ನುತ್ತಾರೆ. ಮಕ್ಕಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗೋದಿಲ್ಲ ಎನ್ನುವುದೇ ಬಹುಮುಖ್ಯ ಕಾರಣವಾಗಿದೆ.

ಕುಟುಂಬ ನಿರ್ವಹಣೆ, ಕೆಲಸದ ಒತ್ತಡ ಹಾಗೂ ಮಕ್ಕಳಿಗೆ ಬರುವ ಖರ್ಚನ್ನು ಗಮನದಲ್ಲಿಟ್ಟುಕೊಂಡು ಇನ್ನೊಂದು ಮಗು ಬೇಡ ಎನ್ನುತ್ತಿದ್ದಾರೆ ತಾಯಂದಿರು. 10 ನಗರಗಳಲ್ಲಿ ಈ ಸರ್ವೆ ನಡೆಸಲಾಗಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಇಂದೋರ್, ಹೈದ್ರಾಬಾದ್, ಕೋಲ್ಕತ್ತಾ, ಜೈಪುರ, ಲಕ್ನೋ, ಮುಂಬೈನಲ್ಲಿ ಸಮೀಕ್ಷೆ ಮಾಡಲಾಗಿದೆ. ಇದ್ರಲ್ಲಿ ಪಾಲ್ಗೊಂಡ ಮಹಿಳೆಯರ ಪೈಕಿ 500ಕ್ಕೂ ಹೆಚ್ಚು ಮಹಿಳೆಯರು ಇನ್ನೊಂದು ಮಗು ಬೇಡ ಎಂದಿದ್ದಾರೆ.

ವೃತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಜೊತೆ ಸಮಯ ಕಳೆಯಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಕಾಡುವ ಸಾಧ್ಯತೆ ಇದೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಮೊದಲು ಹುಟ್ಟುವ ಮಗು ಯಾವುದು ಎಂಬುದರ ಮೇಲೆ ಎರಡನೇ ಮಗುವಿನ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಬಹುತೇಕ ಮಹಿಳೆಯರ ಪ್ರಕಾರ ಒಂದೇ ಮಗು ಎಂಬ ನಿಯಮಕ್ಕೆ ಪತಿಯ ಸಹಮತವಿಲ್ಲವಂತೆ.

ಸಮೀಕ್ಷೆಯಲ್ಲಿ ಕಟು ಸತ್ಯ ಒಪ್ಪಿಕೊಂಡ ಗಗನಸಖಿಯರು…!

Posted: 13 Aug 2019 08:28 AM PDT

Image result for 60% Flight Attendants Of Japanese Airlines Filmed Secretly On Dutyಜಪಾನಿನ ವಿಮಾನಗಳಲ್ಲಿ ಗಗನಸಖಿಯರಿಗೆ ಮತ್ತು ಇತರೆ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಫೋಟೋ ಕ್ಲಿಕ್ಕಿಸುವುದು ಮತ್ತು ವಿಡಿಯೋ ಮಾಡಿಕೊಳ್ಳುವ ಖಯ್ಯಾಲಿ ಜೋರಾಗಿದೆಯಂತೆ…!

ಎಲ್ಲರ ಕಣ್ತಪ್ಪಿಸಿ ಶೇ.60 ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಕರ್ತವ್ಯವನ್ನು ಮರೆತು ಫೋಟೋ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಇಂತಹದ್ದೊಂದು ಮಾಹಿತಿಯನ್ನು ಜಪಾನ್ ಫೆಡರೇಶನ್ ಆಫ್ ಏವಿಯೇಶನ್ ಇಂಡಸ್ಟ್ರಿ ಯೂನಿಯನ್ಸ್ ಬಹಿರಂಗಪಡಿಸಿದೆ.

ಆಗಸದಲ್ಲಿ ವಿಮಾನ ಹಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಈ ರೀತಿ ಫೋಟೋ ಕ್ಲಿಕ್ಕಿಸುವುದು ಅಪರಾಧ. ಇದು ಗೊತ್ತಿದ್ದರೂ ಸಿಬ್ಬಂದಿ ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಸಿಕ್ಕಿ ಬಿದ್ದರೆ ಶಿಸ್ತು ಕ್ರಮಕ್ಕೆ ಗುರಿಯಾಗುತ್ತಾರೆ ಎಂದು ಸಂಸ್ಥೆ ಎಚ್ಚರಿಸಿದೆ.

ಈ ಬಗ್ಗೆ ಫೆಡರೇಶನ್ ಸಮೀಕ್ಷೆ ನಡೆಸಿದ್ದು, ವಿಮಾನ ಹಾರಾಟ ಸಂದರ್ಭದಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೇ ರಹಸ್ಯವಾಗಿ ಫೋಟೋ ತೆಗೆಯುತ್ತೀರಾ ಅಥವಾ ವಿಡಿಯೋ ಮಾಡಿಕೊಳ್ಳುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಶೇ.60 ರಷ್ಟು ಸಿಬ್ಬಂದಿ ಹೌದು ಎಂದಿದ್ದಾರೆ.

ವಿಮಾನ ಹಾರಾಟ ಸಂದರ್ಭದಲ್ಲಿ ಮೊಬೈಲ್, ಕ್ಯಾಮೆರಾ ಅಥವಾ ಇನ್ನಿತರೆ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಆನ್ ಮಾಡಿದರೆ ವಿಮಾನದ ಜಿಪಿಎಸ್ ಗೆ ಅಡ್ಡಿ ಉಂಟುಮಾಡುತ್ತದೆ. ಇದರಿಂದ ವಿಮಾನ ಅಪಘಾತಗಳಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಸಮೀಕ್ಷೆ ಸಂದರ್ಭದಲ್ಲಿ 1623 ಸಿಬ್ಬಂದಿಯ ಪೈಕಿ ಶೇ.60 ರಷ್ಟು ಮಂದಿ ತಾವು ಮಾಡುತ್ತಿರುವ ರಹಸ್ಯದ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ʼರಕ್ಷಾ ಬಂಧನʼದ ದಿನ ಪೂಜೆಯ ಥಾಲಿ ಹೀಗಿರಲಿ

Posted: 13 Aug 2019 07:42 AM PDT

ರಕ್ಷಾ ಬಂಧನ ಸಹೋದರ-ಸಹೋದರಿ ಮಧ್ಯೆ ಸ್ನೇಹದ ಜೊತೆ ವಾತ್ಸಲ್ಯ, ಪ್ರೀತಿಯನ್ನು ಗಟ್ಟಿಗೊಳಿಸುತ್ತದೆ. ದೂರವಾಗಿರುವ ಅಥವಾ ಭಿನ್ನಾಭಿಪ್ರಾಯ ಮೂಡಿರುವ ಸಹೋದರ-ಸಹೋದರಿಯನ್ನು ಒಂದು ಮಾಡುವ ಶಕ್ತಿ ರಕ್ಷಾ ಬಂಧನಕ್ಕಿದೆ. ವರ್ಷಪೂರ್ತಿ ಎಷ್ಟು ಗಲಾಟೆಯಾದ್ರೂ ರಕ್ಷಾ ಬಂಧನದ ದಿನ ನೀಡುವ ಸಿಹಿ ಎಲ್ಲವನ್ನೂ ಮರೆಸುತ್ತದೆ.

ವಿಶೇಷವಾಗಿ ಶುಭಕೋರಿ ರಕ್ಷಾ ಬಂಧನವನ್ನು ಕಟ್ಟುವ ಜೊತೆಗೆ ರಕ್ಷಾ ಬಂಧನದ ಥಾಲಿಯನ್ನು ಸುಂದರವಾಗಿ ಸಿದ್ಧಪಡಿಸಿ. ನಿಮ್ಮ ಕೈನಲ್ಲಿ ಸಿದ್ಧವಾಗಿರುವ ಥಾಲಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುತ್ತದೆ ಎಂಬುದನ್ನು ಮರೆಯಬೇಡಿ.

ಪೂಜೆ ಮಾಡುವ ಥಾಲಿಯಲ್ಲಿ ಕೆಲವೊಂದು ವಸ್ತುಗಳನ್ನು ಅವಶ್ಯವಾಗಿ ಇಡಬೇಕು. ಕುಂಕುಮ, ಅಕ್ಕಿ, ಹಣ್ಣುಗಳು, ರಾಖಿ, ಸಿಹಿ ಹಾಗೂ ದೀಪ. ಕಳಶವಿಲ್ಲದೆ ಬರಿ ನೀರಿನಲ್ಲಿ ಮಾಡುವ ಪೂಜೆ ಪೂರ್ಣವೆನಿಸಿಕೊಳ್ಳುವುದಿಲ್ಲ. ಕಳಶದಲ್ಲಿ ಸಮಸ್ತ ದೇವಾನುದೇವತೆಗಳು ನೆಲೆಸಿರುತ್ತವೆ. ಥಾಲಿಯಲ್ಲಿ ಮೊಸರನ್ನು ಕೂಡ ಇಡಬೇಕು.

ಮನೆಯ ಶುದ್ಧ ಸ್ಥಳದಲ್ಲಿ ಹಸುವಿನ ಸಗಣಿಯನ್ನು ಹಾಕಿ ಸ್ವಚ್ಛಗೊಳಿಸಿ ನಂತ್ರ ಅಲ್ಲಿ ಸ್ವಸ್ತಿಕವನ್ನು ರಚಿಸಿ. ಅದ್ರ ಮೇಲೆ ಕಳಶವನ್ನಿಡಿ. ತಾಮ್ರದ ಕಳಶಕ್ಕೆ ನೀರು ತುಂಬಿ ಅದ್ರ ಮೇಲೆ ಮಾವಿನ ಎಲೆಯನ್ನು ಇಡಿ. ನಂತ್ರ ಶ್ರೀಫಲವನ್ನಿಡಿ. ನಂತ್ರ ಪೂಜೆ ಮಾಡಿ. ಪೂಜೆ ನಂತ್ರವೇ ಸಹೋದರನಿಗೆ ರಾಖಿ ಕಟ್ಟಿ.

ಥಾಲಿಯ ಮೇಲೂ ಮೊದಲು ಸ್ವಸ್ತಿಕ ರಚಿಸಿ. ಅದ್ರ ಮೇಲೆ ಮಣ್ಣಿನ ದೀಪವನ್ನು ಹಚ್ಚಿ. ಸಣ್ಣ ಪ್ಲೇಟ್ ನಲ್ಲಿ ಕುಂಕುಮ, ಅರಿಶಿನ, ಅಕ್ಕಿ, ಮೊಸರು ಹಾಗೂ ರಾಖಿಯನ್ನು ಇಡಿ.

ಕೋಮಲ್ ಮೇಲೆ ಹಲ್ಲೆ, ಜಗ್ಗೇಶ್ ಆಕ್ರೋಶ: ಆರೋಪಿ ಅರೆಸ್ಟ್

Posted: 13 Aug 2019 07:41 AM PDT

 ಬೆಂಗಳೂರು: ನಟ ಕೋಮಲ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಗಳನ್ನು ಟ್ಯೂಷನ್ ಗೆ ಬಿಡಲು ಹೋಗುತ್ತಿದ್ದ ವೇಳೆ ಕೋಮಲ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ ಬೈಕ್ ಸವಾರ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಕೋಮಲ್ ಅವರಿಗೆ ತೀವ್ರ ಪೆಟ್ಟಾಗಿದ್ದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಮಲ್ಲೇಶ್ವರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕೋಮಲ್ ಮೇಲೆ ನಡೆದ ಹಲ್ಲೆ ಪ್ರಕರಣ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರ ಸಹೋದರ ಹಾಗೂ ನಟ ಜಗ್ಗೇಶ್, ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ದಾದಾಗಿರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಕೋಮಲ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ವಿಜಯ್ ಎಂಬ ಬೈಕ್ ಸವಾರನನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

‘ಕೆಂಪೇಗೌಡ -2’ ಯಶಸ್ವಿ: ಕೋಮಲ್ ಮೇಲಿನ ಹಲ್ಲೆಗೆ ಚಿತ್ರರಂಗದವರು ಕಾರಣವೇ…?

Posted: 13 Aug 2019 07:18 AM PDT

ನಟ ಕೋಮಲ್ ಕುಮಾರ್ ಅಭಿನಯದ 'ಕೆಂಪೇಗೌಡ -2' ಬಿಡುಗಡೆಯಾದಲ್ಲೆಲ್ಲ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಯಶಸ್ವಿಯಾಗಿ ಮುನ್ನಡೆದಿದ್ದು, ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

4 ವರ್ಷಗಳಿಂದ 'ಕೆಂಪೇಗೌಡ-2' ಚಿತ್ರಕ್ಕಾಗಿ ಕೋಮಲ್ ಭಾರಿ ಶ್ರಮ ಹಾಕಿದ್ದಾರೆ. ಮಳೆ ಮತ್ತು ಪ್ರವಾಹದಿಂದಾಗಿ ಚಿತ್ರದ ಕಲೆಕ್ಷನ್ ಗೆ ಕೊಂಚ ಪೆಟ್ಟು ಬಿದ್ದಿದ್ದರೂ, ಮಳೆ ಕಡಿಮೆಯಾದ ನಂತರದಲ್ಲಿ ಪ್ರೇಕ್ಷಕರು ಚಿತ್ರಮಂದಿರದತ್ತ ಮುಖಮಾಡಿದ್ದಾರೆ. ಹೀಗಿರುವಾಗಲೇ ಅನಿರೀಕ್ಷಿತ ಬೆಳವಣಿಗೆಯಲ್ಲಿ ಕೋಮಲ್ ಅವರ ಮೇಲೆ ಹಲ್ಲೆ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.

ಹಲ್ಲೆ ನಡೆಸಿದ ಬೈಕ್ ಸವಾರ, ಕೋಮಲ್ ಅವರೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಕೋಮಲ್ ಪುತ್ರಿಯನ್ನು ಟ್ಯೂಷನ್ ಗೆ ಬಿಡಲು ಹೋಗುವಾಗ ಕಾರ್ ಟಚ್ ಆಗಿದ್ದಕ್ಕೆ ಬೈಕ್ ಸವಾರ ಜಗಳವಾಡಿ ಹಲ್ಲೆ ಮಾಡಿದ್ದಾಗಿ ಜಗ್ಗೇಶ್ ತಿಳಿಸಿದ್ದಾರೆ.

ಕಾರ್ ನಲ್ಲಿ ಹೋಗುವಾಗ ನಿಂದು ಅತಿಯಾಯ್ತು. ಸುಮ್ನೆ ಬಿಡಲ್ಲ ಎಂದೆಲ್ಲಾ ಬೈಕ್ ಸವಾರ ಹೇಳಿದ್ದಾನೆ ಎಂದು ಕೋಮಲ್ ತಿಳಿಸಿದ್ದಾರೆ. ಜಗ್ಗೇಶ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ ಇದು ಚಿತ್ರರಂಗದ ಕಾರಣದಿಂದಲೇ ನಡೆದಿದ್ದರೆ, ನಾನೂ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಏನು ಮಾಡಬೇಕೆಂದು ಗೊತ್ತಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿದ ಬೈಕ್ ಸವಾರನ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ.

ನಟ ಕೋಮಲ್ ಮೇಲೆ ಹಲ್ಲೆ: ಜಗ್ಗೇಶ್ ಹೇಳಿದ್ದೇನು ಗೊತ್ತಾ…!

Posted: 13 Aug 2019 06:54 AM PDT

ಬೆಂಗಳೂರು: ನಟ ಕೋಮಲ್ ಕುಮಾರ್ ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಬಳಿ ಘಟನೆ ನಡೆದಿದೆ.

ಮದ್ಯ ಸೇವನೆ ಮಾಡಿದ್ದ ನಾಲ್ವರು ಅಪರಿಚಿತರು ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಕೋಮಲ್ ಮೂಗು, ಬಾಯಿಗೆ ಗಾಯವಾಗಿದೆ. ಕೆಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮಲ್ಲೇಶ್ವರಂ ಠಾಣೆಗೆ ದೂರು ನೀಡಲಾಗಿದೆ.

ಕೋಮಲ್ ಮೇಲೆ ಹಲ್ಲೆ ನಡೆದ ಮಾಹಿತಿ ತಿಳಿದ ಸಹೋದರ ಜಗ್ಗೇಶ್ ಆಸ್ಪತ್ರೆ, ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಜಗ್ಗೇಶ್, ತಮ್ಮ ಮಗುವನ್ನು ಟ್ಯೂಷನ್ ಗೆ ಬಿಡಲು ಹೋಗುತ್ತಿದ್ದ ವೇಳೆ ಜಗಳ ತೆಗೆದು ಕೋಮಲ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಮದ್ಯ ಸೇವನೆ ಮಾಡಿ ಜೊತೆಗೊಂದು ಹುಡುಗಿ ಕರೆದುಕೊಂಡು ಬಂದಿದ್ದ ಮದ್ಯ ವ್ಯಸನಿಗಳು ಈ ರೀತಿ ವರ್ತಿಸಿದ್ದಾರೆ. ದಾದಾಗಿರಿ ನಡೆಸಿದ ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನನ್ನ ಮಗನ ಮೇಲೆಯೂ ಇದೇ ರೀತಿ ಹಲ್ಲೆ ನಡೆಸಲಾಗಿತ್ತು. ಪೊಲೀಸರು ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಈ ಜಿಲ್ಲೆಯಲ್ಲಿ ಆಗಸ್ಟ್ 15 ರವರೆಗೆ ರಜೆ ಘೋಷಣೆ

Posted: 13 Aug 2019 06:38 AM PDT

ಸುರಕ್ಷತೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಆಗಸ್ಟ್ 15 ರ ವರೆಗೆ ರಜೆ ಘೋಷಿಸಲಾಗಿದೆ.

ಮಕ್ಕಳ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಕೇಂದ್ರೀಯ ವಿದ್ಯಾಲಯ ಹೊರತುಪಡಿಸಿ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಆಗಸ್ಟ್ 15 ರ ವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶಿಸಿದ್ದಾರೆ.

ಭಾರಿ ಮಳೆ ಹಿನ್ನೆಲೆಯಲ್ಲಿ ಕಳೆದ ಮಂಗಳವಾರದಿಂದ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆಗಸ್ಟ್ 13 ರಂದು ಕೂಡ ರಜೆ ನೀಡಿ ನೀಡಿದ್ದು, ಶಾಲೆಗಳಲ್ಲಿ ಶಿಕ್ಷಕರು ಸ್ವಚ್ಛತಾ ಕಾರ್ಯ ಹಾಗೂ ಸುರಕ್ಷತೆ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಲಾಗಿದೆ. ಅಂತೆಯೇ ಸುರಕ್ಷತೆ ಹಿನ್ನಲೆ ಆಗಸ್ಟ್ 15 ರ ವರೆಗೆ ರಜೆ ಮುಂದುವರೆಸಲಾಗಿದೆ ಎಂದು ಹೇಳಲಾಗಿದೆ.

ಡೆಂಗ್ಯೂ ಬಂದಾಗ ನಿಮ್ಮ ಡಯಟ್ ನಲ್ಲಿರಲಿ ಈ ಆಹಾರ

Posted: 13 Aug 2019 06:11 AM PDT

ಮಳೆಗಾಲ ಶುರುವಾಗ್ತಿದ್ದಂತೆ ಅನೇಕ ಖಾಯಿಲೆಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ. ಅದ್ರಲ್ಲೂ ಡೆಂಗ್ಯೂ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸಣ್ಣ ಜ್ವರ ಶುರುವಾದ ತಕ್ಷಣ ರಕ್ತ ಪರೀಕ್ಷೆಗೆ ವೈದ್ಯರು ಹೇಳ್ತಿದ್ದಾರೆ. ಡೆಂಗ್ಯೂ ಶುರುವಾದಾಗ ಆತಂಕ ಪಡುವ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆಯಿಂದ ಇದನ್ನು ಕಡಿಮೆ ಮಾಡಬಹುದು. ವೈದ್ಯರ ಔಷಧಿ ಜೊತೆ ಡಯಟ್ ನಲ್ಲಿ ಈ ಆಹಾರವನ್ನು ಸೇವಿಸಿ.

ಡೆಂಗ್ಯೂ ಇದೆ ಎಂಬುದು ಗೊತ್ತಾಗ್ತಿದ್ದಂತೆ ಮೊದಲು ಮನೆಯಲ್ಲಿ ವಿಶ್ರಾಂತಿ ಶುರು ಮಾಡಿ. ಹೆಚ್ಚು ಒತ್ತಡ, ಕೆಲಸ ಬೇಡ. ಹಾಗೆ ಲಿಕ್ವಿಡ್ ಆಹಾರಗಳನ್ನು ಹೆಚ್ಚಾಗಿ ಸೇವಿಸಲು ಶುರು ಮಾಡಿ. ಪ್ರತಿ ಒಂದರಿಂದ ಒಂದೂವರೆ ಗಂಟೆಯೊಳಗೆ ಒಂದು ಲೀಟರ್ ನೀರು ಸೇವಿಸಿ. ವೈದ್ಯರು ಸೂಚಿಸಿದ ಔಷಧಿಯನ್ನು ತಪ್ಪದೆ ತೆಗೆದುಕೊಳ್ಳಿ.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಪಪ್ಪಾಯಿ ಹಣ್ಣಿನ ಎಲೆ ರಸವನ್ನು ಸ್ವೀಕರಿಸಬೇಕು. ತಾಜಾ ಎಲೆ ರಸವನ್ನು ಕುಡಿಯಬೇಕು. ಅದಕ್ಕೆ ಒಂದು ಪ್ರಮಾಣವಿದೆ. ಅದನ್ನು ತಜ್ಞರಿಂದ ಕೇಳಿ ತಿಳಿದುಕೊಳ್ಳಿ.

ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸಿ. ಕಿತ್ತಳೆ, ನಿಂಬೆ, ನೆಲ್ಲಿಕಾಯಿ, ಮೂಸಂಬಿ, ದಾಳಿಂಬೆ ರಸವನ್ನು ಸೇವಿಸಿ.

ಡೆಂಗ್ಯೂ ನಿಯಂತ್ರಣಕ್ಕೆ ನಿಮ್ಮ ಆಹಾರದಲ್ಲಿ ಅರಿಶಿನದ ಪ್ರಮಾಣವನ್ನು ಹೆಚ್ಚಿಸಿ. ಹೆಚ್ಚು ಅರಿಶಿನ ಬಳಸಿ.

ಆಹಾರದಲ್ಲಿ ಪಾಲಾಕ್ ಬಳಸಿ. ಎಳೆ ನೀರನ್ನು ಆಗಾಗ ಕುಡಿಯುತ್ತಿರಿ. ಯಾವುದೇ ಔಷಧಿ ಪಡೆಯುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಬಿಗ್ ಬ್ರೇಕಿಂಗ್ ನ್ಯೂಸ್: ನಟ ಕೋಮಲ್ ಮೇಲೆ ದುಷ್ಕರ್ಮಿಯಿಂದ ಹಲ್ಲೆ….!

Posted: 13 Aug 2019 06:04 AM PDT

ಬೆಂಗಳೂರಿನಲ್ಲಿ ನಟ ಕೋಮಲ್ ಕುಮಾರ್ ಅವರ ಮೇಲೆ ಅಪರಿಚಿತರು ಹಲ್ಲೆ ಮಾಡಿದ್ದಾರೆ. ನಟ ಕೋಮಲ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಸಂಪಿಗೆ ಚಿತ್ರಮಂದಿರದ ಅಂಡರ್ ಪಾಸ್ ಬಳಿ ಹಲ್ಲೆ ನಡೆಸಲಾಗಿದ್ದು, ಮಲ್ಲೇಶ್ವರಂ ಠಾಣೆಗೆ ತೆರಳಿ ಕೋಮಲ್ ದೂರು ನೀಡಿದ್ದಾರೆ ಎನ್ನಲಾಗಿದೆ.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿ ಟ್ರಾಫಿಕ್ ವಿಚಾರವಾಗಿ ಜಗಳ ಶುರು ಮಾಡಿ ಬಳಿಕ ಹಲ್ಲೆ ನಡೆಸಿದ್ದು, ಪರಾರಿಯಾಗಿದ್ದು ಕೋಮಲ್ ಮುಖಕ್ಕೆ ಪೆಟ್ಟಾಗಿದೆ ಎನ್ನಲಾಗಿದೆ.

ಈ ನಟಿ ಜೊತೆ ಸೇರಿ ಲಾಸ್ ಏಂಜಲೀಸ್ ನಲ್ಲಿ ಮನೆ ಹುಡುಕ್ತಿದ್ದಾರಾ ಬಾಹುಬಲಿ..?!

Posted: 13 Aug 2019 06:04 AM PDT

ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಭಾಸ್, ಸದ್ಯ ಬಹುನಿರೀಕ್ಷಿತ ಚಿತ್ರ ʼಸಾಹೋʼ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಾಹೋ ಚಿತ್ರದಲ್ಲಿ ಪ್ರಭಾಸ್ ಜೊತೆ ಶ್ರದ್ಧಾ ಕಪೂರ್ ಕಾಣಿಸಿಕೊಂಡಿದ್ದು, ಚಿತ್ರ ಆಗಸ್ಟ್ 30ರಂದು ತೆರೆಗೆ ಬರಲಿದೆ.

ಈ ಮಧ್ಯೆ ಪ್ರಭಾಸ್, ದಕ್ಷಿಣ ಭಾರತದ ಪ್ರಸಿದ್ಧ ನಟಿ ಅನುಷ್ಕಾ ಶೆಟ್ಟಿ ಜೊತೆ ಲಾಸ್ ಏಂಜಲೀಸ್ ನಲ್ಲಿ ಮನೆ ಹುಡುಕುತ್ತಿದ್ದಾರೆ ಎನ್ನಲಾಗಿದೆ. ಮುಂಬೈ ಮಿರರ್ ವರದಿ ಪ್ರಕಾರ, ಲಾಸ್ ಏಂಜಲೀಸ್ ನಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಕಣ್ಣಿಗೆ ಬಿದ್ದಿದ್ದಾರೆ. ಇಬ್ಬರೂ ಮನೆ ಹುಡುಕುತ್ತಿದ್ದರು ಎಂದು ವರದಿ ಮಾಡಲಾಗಿದೆ.

ಅನುಷ್ಕಾ ಹಾಗೂ ಪ್ರಭಾಸ್ ಲವ್ ಸ್ಟೋರಿ ಆಗಾಗ ಚರ್ಚೆಗೆ ಬರುತ್ತಿರುತ್ತದೆ. ಆದ್ರೆ ಇಬ್ಬರೂ ಪ್ರೀತಿ ವಿಷ್ಯವನ್ನು ಇನ್ನೂ ಬಹಿರಂಗವಾಗಿ ಹೇಳಿಲ್ಲ. ಸಾಹೋ ಚಿತ್ರದ ನಂತ್ರ ಪ್ರಭಾಸ್ ಮದುವೆಯಾಗ್ತಾರೆ ಎನ್ನುವ ಸುದ್ದಿಯಿದೆ. ಆದ್ರೆ ಈ ಬಗ್ಗೆಯೂ ಪ್ರಭಾಸ್ ಎಲ್ಲಿಯೂ ಹೇಳಿಲ್ಲ.

 

ಸಿಎಂ ಯಡಿಯೂರಪ್ಪ ಮೆಚ್ಚಿದ ದೇವೇಗೌಡರಿಂದ ಸಲಹೆ

Posted: 13 Aug 2019 05:55 AM PDT

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಪತ್ರ ಬರೆದಿದ್ದಾರೆ.

ಏಕಾಂಗಿಯಾಗಿ ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಹೋಗಿ ಪರಿಶೀಲನೆ ನಡೆಸಿದ್ದೀರಿ. ರಾಜಕೀಯವನ್ನು ಬಿಟ್ಟು ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಗತ್ಯ ಸಾಮಗ್ರಿಗಳನ್ನು ತಲುಪಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಅಧಿಕಾರಿಗಳ ತಂಡವನ್ನು ರಚಿಸಬೇಕು ಎಂದು ಸಿಎಂಗೆ ದೇವೇಗೌಡರು ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಪ್ರವಾಹ ಸಂಕಷ್ಟವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಕೇಂದ್ರದಿಂದ ಹೆಚ್ಚಿನ ನೆರವು ನೀಡುವಂತೆ ಒತ್ತಡ ಹೇರಬೇಕು. ಸಂಕಷ್ಟದಲ್ಲಿರುವ ಸಂತ್ರಸ್ಥರನ್ನು ರಕ್ಷಿಸಿ ಅಗತ್ಯ ನೆರವು ನೀಡಬೇಕು ಎಂದು ತಿಳಿಸಿದ್ದಾರೆ.

ಬಿಗ್ ನ್ಯೂಸ್: ಆಗಸ್ಟ್ 18 ರಂದು ನೂತನ ಸಚಿವರ ಪ್ರಮಾಣ ವಚನ…?

Posted: 13 Aug 2019 05:42 AM PDT

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಸ್ಟ್ 15 ರಂದು ಸಂಜೆ ನವದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿ ಮಾಡಲಿರುವ ಯಡಿಯೂರಪ್ಪ ಪ್ರವಾಹ ನಷ್ಟಕ್ಕೆ ಹೆಚ್ಚಿನ ಪರಿಹಾರ ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

ಅಮಿತ್ ಶಾ ಮತ್ತು ಕೇಂದ್ರ ನಾಯಕರೊಂದಿಗೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಿರುವ ಸಚಿವರ ಪಟ್ಟಿಯ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ಆಗಸ್ಟ್ 17 ರಂದು ದೆಹಲಿಯಿಂದ ಸಿಎಂ ವಾಪಸ್ಸಾಗಲಿದ್ದಾರೆ. ಆಗಸ್ಟ್ 18 ರಂದು ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹೇಳಲಾಗಿದೆ.

ರೈತರಿಗೆ ‘ಸಿಹಿ ಸುದ್ದಿ’: ಖಾತೆಗೆ ಜಮಾ ಆಗಲಿದೆ ಹಣ

Posted: 13 Aug 2019 05:26 AM PDT

ಶಿವಮೊಗ್ಗ: ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದ ಬಿ.ಎಸ್. ಯಡಿಯೂರಪ್ಪ ಭಾರೀ ಮಳೆ, ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳಿಗ್ಗೆಯಿಂದಲೇ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿದ್ದ ಅವರು, ಸೊರಬ ತಾಲೂಕಿನ ಅಗಸನಹಳ್ಳಿಯಲ್ಲಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ. ಅಲ್ಲದೇ, ಅಗಸನಹಳ್ಳಿಯಲ್ಲಿ ವರದಾ ನದಿ ಪ್ರವಾಹದಿಂದ ಹಾನಿಗೀಡಾಗಿರುವ ಪ್ರದೇಶಗಳನ್ನು ವೀಕ್ಷಿಸಿದ್ದಾರೆ.

ಅವರು ಮಾತನಾಡಿ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಸೊರಬ ತಾಲೂಕಿನ ಮೂಗೂರು ಏತ ನೀರಾವರಿಗೆ 105 ಕೋಟಿ ರೂ., ಮೂಡಿ ಏತ ನೀರಾವರಿಗೆ 275 ಕೋಟಿ ರೂ. ಅನುದಾನ ಮಂಜೂರು ಮಾಡಲಿದ್ದು, 15 ದಿನಗಳ ಒಳಗಾಗಿ ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಿದ್ದಾರೆ.

ಅಗಸ್ಟ್ 15 ರಂದು ಸಂಜೆ ದೆಹಲಿಗೆ ಭೇಟಿ ನೀಡಲಿದ್ದು, ಪ್ರವಾಹ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಕೇಂದ್ರವನ್ನು ಕೋರಲಾಗುವುದು. ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಈಗಾಗಲೇ ರಾಜ್ಯದ ನೆರೆ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಒಂದು ವಾರದ ಒಳಗಾಗಿ ಪ್ರವಾಹದಿಂದ ಉಂಟಾಗಿರುವ ಹಾನಿ ಬಗ್ಗೆ ವಾಸ್ತವಿಕ ಚಿತ್ರಣ ದೊರೆಯಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ರೈತರ ಖಾತೆಗಳಿಗೆ ರಾಜ್ಯ ಸರಕಾರದಿಂದ 4 ಸಾವಿರ ರೂ. ಜಮಾ ಮಾಡಲಾಗುವುದು. ಇದರಲ್ಲಿ ಮೊದಲನೆ ಕಂತಿನ 2 ಸಾವಿರ ರೂ.ಗಳನ್ನು ವಾರದ ಒಳಗಾಗಿ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಸುಳ್ಳು ಹೇಳಿ ಸಿಕ್ಕಿಬಿದ್ದ ಯುವತಿಯ ಕಾಲೆಳೆಯುತ್ತಿದ್ದಾರೆ ಟ್ವಿಟ್ಟಿಗರು

Posted: 13 Aug 2019 05:19 AM PDT

Image result for Woman Claims Chris Evans Is Her Number Neighbour. He Responds...ʼಕ್ಯಾಪ್ಟನ್ ಅಮೆರಿಕಾʼ ಪಾತ್ರದಲ್ಲಿ ಮಿಂಚಿದ್ದ ಹಾಲಿವುಡ್‌ನ ಪ್ರಸಿದ್ಧ ನಟ ಕ್ರಿಸ್ ಇವಾನ್ಸ್ ಜೊತೆ ವಿಡಿಯೋ ಕಾಲ್ ಮಾಡಿದ್ದೆ ಎಂದು ಸುಳ್ಳು ಹೇಳಿ ಯುವತಿಯೊಬ್ಬರು ಸಿಕ್ಕಿಹಾಕಿಕೊಂಡಿದ್ದಾರೆ.

ಟ್ವೀಟರ್‌ನಲ್ಲಿ ನಂಬರ್ ನೇಬರ್ ಎನ್ನುವ ಚಾಲೆಂಜ್ ನಡೆಯುತ್ತಿದ್ದು, ಅದರ ಪ್ರಕಾರ ತಮ್ಮ ಫೋನ್ ಸಂಖ್ಯೆಯ ಕೊನೆಯ ಸಂಖ್ಯೆಗಿಂತ ಒಂದು ಹೆಚ್ಚು ಇಲ್ಲ ಕಡಿಮೆ ಸಂಖ್ಯೆಗೆ ಸಂದೇಶ ಕಳಿಸಿ ಅದರ ಸ್ಕ್ರೀನ್ ಶಾಟ್ ಹಾಕುವುದು.

ನೈಯಾಹ್ ಎನ್ನುವ ಯುವತಿ ತಾನು ಹೀಗೆ ಮಾಡಿದಾಗ ತಾನು ಕ್ರಿಸ್ ಇವಾನ್ಸ್ ಎಂದು ಅವರ ಜೊತೆ ವಿಡಿಯೋ ಕಾಲ್ ಮಾಡಿರುವುದಾಗಿ ಚಿತ್ರ ಹಾಕಿದ್ದರು. ನಂತರ ಈ ಪೋಸ್ಟ್ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಇವಾನ್ಸ್ ಇದು ಸುಳ್ಳು ಎಂದು ಹೇಳಿದ್ದಾನೆ. ಇದರ ನಂತರ ಹಲವು ನೆಟ್ಟಿಗರು ಯುವತಿಯ ಕಾಲೆಳೆಯುತ್ತಿದ್ದಾರೆ.

ಬಾಯ್ ಫ್ರೆಂಡ್ ಜೊತೆ ಫೋಟೋ ಹಾಕಿದ ನಟಿಗೆ ಸಿಕ್ತು ಇಂಥ ಕಮೆಂಟ್

Posted: 13 Aug 2019 05:00 AM PDT

Image result for poonam-pandey-shares-her-boyfriend-photo-on-instagram-hot-and-bold-poonam

ಬಾಲಿವುಡ್ ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾಳೆ. ಆಗಾಗ ಹಾಟ್ ಆ್ಯಂಡ್ ಸೆಕ್ಸಿ ಫೋಟೋ, ವಿಡಿಯೋ ಹಾಕುವ ಪೂನಂ ಪಾಂಡೆ ಈ ಬಾರಿ ಬಾಯ್ ಫ್ರೆಂಡ್ ಜೊತೆಗಿರುವ ಫೋಟೋ ಹಾಕಿದ್ದಾಳೆ. ಫೋಟೋದಲ್ಲಿ ಪೂನಂ ಪಾಂಡೆ ಮುಖ ಸ್ಪಷ್ಟವಾಗಿ ಕಾಣುತ್ತದೆ. ಆದ್ರೆ ಬಾಯ್ ಫ್ರೆಂಡ್ ಮುಖ ಸರಿಯಾಗಿ ಕಾಣುವುದಿಲ್ಲ.

ಫೋಟೋಕ್ಕೆ ಪೂನಂ, ನನ್ನ ಪ್ರೀತಿ ಎಂದು ಶೀರ್ಷಿಕೆ ಹಾಕಿದ್ದಾಳೆ. ಪೂನಂ ಈ ಫೋಟೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಕೆಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಬಾಯ್ ಫ್ರೆಂಡ್ ಜೊತೆ ವಿಡಿಯೋ ಹಾಕು ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಬಾಯ್ ಫ್ರೆಂಡ್ ಮುಖ ತೋರಿಸಬೇಡ ಎಂದಿದ್ದಾರೆ.

ಪೂನಂ ಫೋಟೋ, ವಿಡಿಯೋ ವಿಚಾರಕ್ಕೆ ಟ್ರೋಲ್ ಆಗೋದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅನೇಕ ಬಾರಿ ಪೂನಂ ಟ್ರೋಲ್ ಆಗಿದ್ದಾಳೆ. ವಿಶ್ವಕಪ್ ಸಂದರ್ಭದಲ್ಲಿ ಪೂನಂ ಹೆಚ್ಚು ಸುದ್ದಿಗೆ ಬರ್ತಾಳೆ.

View this post on Instagram

My Love…

A post shared by Poonam Pandey (@ipoonampandey) on

 

ಸಾಮಾಜಿಕ ಜಾಲತಾಣದ ಮೂಲಕ ಸಹೋದರಿಯ ಸುಳ್ಳನ್ನು ಬಿಚ್ಚಿಟ್ಟ ಬಾಲಕಿ

Posted: 13 Aug 2019 04:48 AM PDT

ಸಾಮಾಜಿಕ ಜಾಲತಾಣದಲ್ಲಿ ಇದೊಂದು ಅಪರೂಪಗಳಲ್ಲಿ ಅಪರೂಪದ ಪ್ರಕರಣ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಯಾವುದೋ ಫೋಟೋವನ್ನು ಇನ್ನಾವುದಕ್ಕೋ ಮರ್ಜ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅದಕ್ಕೊಂದಿಷ್ಟು ಲೈಕ್ಸ್, ಕಮೆಂಟ್ ಗಳನ್ನು ಪಡೆದು ಸಂಭ್ರಮಿಸುವವರ ಸಂಖ್ಯೆಗೇನೂ ಕಡಿಮೆ ಇಲ್ಲ.

ಇಂತಹ ಫೋಟೋಶಾಪ್ ಗಿಮಿಕ್ ಗಳನ್ನು ಕೆಲವರು ಪತ್ತೆ ಮಾಡಿ ನೆಗೆಟಿವ್ ಕಮೆಂಟ್ ಗಳನ್ನು ನೀಡಿ ಸುಮ್ಮನಾಗುತ್ತಾರೆ. ಆದರೆ, ಈ ಪ್ರಕರಣದಲ್ಲಿ ತನ್ನ ಸೋದರಿ ಹಾಕಿರುವ ಫೋಟೋ ನಕಲಿ ಎಂದು ಬಾಲಕಿಯೊಬ್ಬಳು ಘಂಟಾಘೋಷವಾಗಿ ಹೇಳಿಕೊಂಡಿದ್ದಾಳೆ.

ಫ್ಲೋರಿಡಾದ ವಿದ್ಯಾರ್ಥಿನಿ ಕೆಸೆ ಸೊಸ್ನೋವ್ ಸ್ಕಿ ಇನ್ಸ್ಟಾಗ್ರಾಂನಲ್ಲಿ ಒಂದು ಫೋಟೋ ಹಾಕಿ, ಲೇಕ್ ಒಕಹುಂಪ್ಕಾ ಪಾರ್ಕ್ ನಲ್ಲಿ ತೆಗೆದ ಫೋಟೋ ಎಂದು ಹೇಳಿಕೊಂಡಿದ್ದಳು. ಇಷ್ಟೇ ಅಲ್ಲ ನಮ್ಮೆಲ್ಲಾ ಸಮಸ್ಯೆಗಳ ನಿವಾರಣೆಗೆ ಪ್ರಕೃತಿಯೇ ನಿರ್ಣಾಯಕ ಎಂದೂ ಬರೆದುಕೊಂಡಿದ್ದಳು. ಇದನ್ನು ನೋಡಿದ ನೆಟ್ಟಿಗರು ಲೈಕ್, ಕಮೆಂಟ್ ಗಳ ಭರಪೂರವನ್ನೇ ಹರಿಸಿದ್ದರು.

ಆದರೆ, ಅವಳ ಸಹೋದರಿ ಕಾರ್ಲಿ ನಿಜಾಂಶವನ್ನು ಬಹಿರಂಗಪಡಿಸುವವರೆಗೂ ನೆಟ್ಟಿಗರಿಂದ ಲೈಕ್ ಗಳು ಬರುತ್ತಲೇ ಇದ್ದವು. ವಾಸ್ತವವಾಗಿ ಆ ಫೋಟೋ ತೆಗೆದಿದ್ದು ಅವರ ಮನೆ ಹಿತ್ತಲಿನಲ್ಲಿ! ಹೌದು, ಆಶ್ಚರ್ಯವಾದರೂ ಇದು ಹೌದು. ಈ ವಿಷಯವನ್ನು ಕಾರ್ಲಿ ಟ್ವಿಟರ್ ನಲ್ಲಿ ಬಹಿರಂಗ ಮಾಡಿದ್ದಾಳೆ. ನನ್ನ ಸೋದರಿ ಕೆಸೆ ಹೇಳಿರುವಂತೆ ಅದು ಲೇಕ್ ಪಾರ್ಕ್ ನಲ್ಲಿ ತೆಗೆದ ಫೋಟೋವಲ್ಲ. ನಮ್ಮ ಮನೆಯ ಹಿತ್ತಲಿನಲ್ಲಿ ತೆಗೆದ ಫೋಟೋ ಎಂದು ಸ್ಪಷ್ಟನೆ ನೀಡಿದ್ದಾಳೆ.

ಕಳೆದ ಭಾನುವಾರ ಈ ಟ್ವೀಟ್ ಮಾಡಲಾಗಿದ್ದು, 2.7 ಲಕ್ಷಕ್ಕೂ ಅಧಿಕ ಲೈಕ್ ಗಳು ಬಂದಿದ್ದರೆ, ಸಾವಿರಾರು ಜನರು ಆಶ್ಚರ್ಯದ ಕಮೆಂಟ್ ಗಳನ್ನು ಮಾಡಿದ್ದಾರೆ.

ಥಾಯ್ಲೆಂಡ್‌ ನ ಪ್ರಾಚೀನ ಮರದ ಸೇತುವೆಗೆ ಕುತ್ತು

Posted: 13 Aug 2019 04:41 AM PDT

Image result for Thailand's Longest Wooden Bridge May Collapse As Heavy Rain Continuesಥಾಯ್ಲೆಂಡ್‌ ನ ಅತಿ ಪ್ರಾಚೀನ ಮತ್ತು ಪ್ರವಾಸಿಗರ ಪಾಲಿಗೆ ಅತ್ಯಾಕರ್ಷಣೀಯ ಕೇಂದ್ರವಾಗಿದ್ದ ಮರದ ಸೇತುವೆ ಕುಸಿಯುವ ಆತಂಕ ಎದುರಾಗಿದೆ.

ಕಾಂಚನಬುರಿ ಪ್ರಾಂತ್ಯದಲ್ಲಿ ಅತಿಯಾಗಿ ಮಳೆ ಸುರಿಯುತ್ತಿರುವ ಕಾರಣ ಈ ಸೇತುವೆಗೆ ಕುತ್ತು ಬಂದಿದೆ. ಯಾವುದೇ ಸಂದರ್ಭದಲ್ಲಿ ಸೇತುವೆ ಕುಸಿಯಬಹುದೆಂದು ಥಾಯ್ ಸೇನೆಯು ಸೋಮವಾರ ಜಾಗ್ರತೆ ವಹಿಸಿತ್ತು.

ನದಿಯಲ್ಲಿ ಭಾರಿ ಪ್ರಭಾವ ಕಾಣಿಸಿಕೊಂಡಿದ್ದು, ಮರದ ಕೊಂಬೆಗಳು ಮತ್ತಿತರ ವಸ್ತುಗಳು ಸೇತುವೆಗೆ ಅಡ್ಡಿಪಡಿಸಬಹುದೆಂಬ ಕಾರಣಕ್ಕೆ ಅದನ್ನು ತೆರವುಗೊಳಿಸುವ ಕಾರ್ಯವನ್ನು ಸೈನ್ಯ ಸವಾಲಾಗಿ ಸ್ವೀಕರಿಸಿದೆ.

ಉಳಿದ ಚಪಾತಿಯಲ್ಲಿ ತಯಾರಿಸಿ ಚಪಾತಿ ಉಪ್ಪಿಟ್ಟು

Posted: 13 Aug 2019 04:39 AM PDT

ಪ್ರತಿದಿನ ಬೆಳಗ್ಗೆ ಏನು ತಿಂಡಿ ಮಾಡುವುದು, ಮಾಡಿದ್ದನ್ನೇ ಮತ್ತೆ ಮಾಡಿ ತಿನ್ನಲು ಬೇಜಾರು, ಹೊಸ ತಿನಿಸು ಏನಿದೆ ಎಂದೆಲ್ಲಾ ಯೋಚಿಸುವವವರಿಗೆ ಇಲ್ಲಿದೆ ಹೊಸ ರೀತಿಯ ಬ್ರೇಕ್ ಫಾಸ್ಟ್.

ಇದನ್ನು ಮಾಡಲು ಚಪಾತಿ ಉಳಿದಿದ್ದರೆ ಸಾಕು. ಫಟಾಫಟ್ ಚಪಾತಿ ಉಪ್ಪಿಟ್ಟು ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

ತಂಗಳು ಚಪಾತಿ-5
ಈರುಳ್ಳಿ-1
ಹಸಿ ಮೆಣಸಿನಕಾಯಿ-2
ಟೊಮ್ಯಾಟೋ-1
ಒಗ್ಗರಣೆಗೆ ಉದ್ದಿನ ಬೇಳೆ, ಜೀರಿಗೆ, ಕಡಲೇ ಬೇಳೆ ತಲಾ 1 ಚಮಚ, ಕರಿಬೇವು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ,
ಎಣ್ಣೆ-4 ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಚಪಾತಿಗಳನ್ನು ಮುರಿದು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿಡಿ. ಕಾದ ಎಣ್ಣೆಗೆ ಕರಿಬೇವು, ಜೀರಿಗೆ, ಹಸಿ ಮೆಣಸಿನಕಾಯಿ, ಉದ್ದಿನ ಬೇಳೆ, ಕಡಲೇ ಬೇಳೆಯ ಒಗ್ಗರಣೆ ಮಾಡಿ.

ಹೆಚ್ಚಿದ ಈರುಳ್ಳಿ ಮತ್ತು ಟೊಮ್ಯಾಟೋ ಹಾಕಿ ಹುರಿಯಿರಿ. ನಂತರ ಮೂರು ಕಪ್‌ ನೀರು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ನಂತರ ಇದಕ್ಕೆ ಚಪಾತಿ ತುಂಡುಗಳನ್ನು ಹಾಕಿ ಎಂಟು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿದರೆ ಚಪಾತಿ ಉಪ್ಪಿಟ್ಟು ರೆಡಿ.

ಸಹೋದರಿಗಾಗಿ ಬೂಮ್ರಾ ಮಾಡಿದ್ದಾರೆ ಈ ಕೆಲಸ

Posted: 13 Aug 2019 04:30 AM PDT

ಟೀಂ ಇಂಡಿಯಾ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಸೋಮವಾರ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಕೊನೆ ಏಕದಿನ ಪಂದ್ಯವನ್ನಾಡಲಿದೆ. ನಂತ್ರ ಎರಡು ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಟಿ-20 ಹಾಗೂ ಏಕದಿನ ಪಂದ್ಯದಿಂದ ಹೊರಗಿದ್ದ ಜಸ್ಪ್ರೀತ್ ಬೂಮ್ರಾ ಟೆಸ್ಟ್ ಸರಣಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ.

ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುವ ಮುನ್ನ ಬೂಮ್ರಾ ಸಹೋದರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೂಮ್ರಾ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೂಮ್ರಾ, ವೆಸ್ಟ್ ಇಂಡೀಸ್ ಗೆ ತೆರಳುವ ಮುನ್ನ ಸಹೋದರಿ ಜೂಹಿಕಾರಿಂದ ರಾಖಿ ಕಟ್ಟಿಸಿಕೊಂಡಿದ್ದಾರೆ. ರಕ್ಷಾ ಬಂಧನ ಆಗಸ್ಟ್ 15ರಂದು ಬಂದಿದೆ. ಆದ್ರೆ ವೆಸ್ಟ್ ಇಂಡೀಸ್ ಗೆ ತೆರಳುವ ಕಾರಣ ಬೂಮ್ರಾ ಮೊದಲೇ ರಾಖಿ ಕಟ್ಟಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ ಆಗಸ್ಟ್ 22ರಂದು ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ.

ಮತ್ತೆ ಹಾಟ್ ಆಗಿ ಕಾಣಿಸಿಕೊಂಡ ರಿಯಾ ಸೇನ್

Posted: 13 Aug 2019 04:03 AM PDT

ನಟಿ ರಿಯಾ ಸೇನ್ ಮತ್ತೊಮ್ಮೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಮೊನೊಕಿನಿ ಧರಿಸಿರುವ ತಮ್ಮ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸ್ವಿಮ್ಮಿಂಗ್ ಪೂಲ್ ಒಂದರ ಬಳಿ ಕಲರ್‌ಫುಲ್ ಮೊನೊಕಿನಿಯಲ್ಲಿದ್ದ ರಿಯಾ, ಕ್ಯಾಮರಾಗೆ ಮಾದಕ ಪೋಸ್ ನೀಡಿದ್ದರಿಂದ ಆ ಚಿತ್ರ ಪಡ್ಡೆಗಳಲ್ಲಿ ಸಂಚಲನ ಮೂಡಿಸಿದೆ.

ಸಿನಿಮಾ ಮಾತ್ರವಲ್ಲದೆ ಮಾಡೆಲಿಂಗ್, ಫ್ಯಾಷನ್ ಶೋ, ಮ್ಯೂಸಿಕ್ ವಿಡಿಯೋ ಹಾಗೂ ಕಿರುತೆರೆಯಲ್ಲೂ ತೊಡಗಿಸಿಕೊಂಡಿರುವ ರಿಯಾ ಅವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದೆ.

2028‌ ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆ

Posted: 13 Aug 2019 04:02 AM PDT

ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ನ್ನು ಸೇರ್ಪಡೆಗೊಳಿಸಲು ಐಸಿಸಿ ಪ್ರಯತ್ನ ನಡೆಸುತ್ತಿದೆ ಎಂದು ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿ ಅಧ್ಯಕ್ಷ ಮೈಕ್ ಗ್ಯಾಟಿಂಗ್ ಹೇಳಿದ್ದಾರೆ.

ವಿಶ್ವ ಉದ್ದೀಪನಾ ವಿರೋಧಿ ಸಂಸ್ಥೆ (ವಾಡಾ) ಅಧೀನದ ರಾಷ್ಟ್ರೀಯ ಉದ್ದೀಪನ ವಿರೋಧಿ ಸಂಸ್ಥೆ (ನಾಡಾ) ವ್ಯಾಪ್ತಿಗೆ ಇತ್ತೀಚೆಗಷ್ಟೇ ಕ್ರಿಕೆಟ್ ಸೇರ್ಪಡೆ ಆಗಿರುವುದು ಈ ಪ್ರಯತ್ನಕ್ಕೆ ಪುಷ್ಟಿ ನೀಡಿದೆ ಎನ್ನಲಾಗಿದೆ.

ಕ್ರಿಕೆಟ್ ಅನ್ನು ಒಲಿಂಪಿಕ್ಸ್ ನಲ್ಲಿ ಸೇರ್ಪಡೆಗೊಳಿಸಲು ಪ್ರಯತ್ನಗಳು ಸಾಕಷ್ಟು ಮುಂದುವರಿದಿದೆ ಎಂದು ಐಸಿಸಿ ಹೊಸ ಸಿಇಒ ಮನು ಸಾಹ್ನಿ ಹೇಳಿದ್ದಾಗಿ ಮೈಕ್ ತಿಳಿಸಿದ್ದಾರೆ.

ಮನೆಗೆ ನುಗ್ಗಿ ಬಾಗಿಲು ಮುರಿದ ʼಕರಡಿʼ

Posted: 13 Aug 2019 03:59 AM PDT

ಆಹಾರವನ್ನು ಅರಸಿ ಪ್ರಾಣಿಗಳು ಮನೆಗಳಿಗೆ ದಾಳಿ ಇಡುವುದು ಇತ್ತೀಚಿಗೆ ಸಹಜವಾಗಿದೆ‌. ಆದರೆ ಇಲ್ಲೊಂದು ಕರಡಿ ಮನೆಗೆ ನುಗ್ಗಿ, ಅಲ್ಲಿಂದ ತಪ್ಪಿಸಿಕೊಳ್ಳಲು ಗೋಡೆಯನ್ನು ಕೊರೆದ ಘಟನೆ ನಡೆದಿದೆ.

ಹೌದು, ಕೊಲೊರಾಡೊದ ಈಸ್ಟ್‌ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಮನೆಯೊಳಗೆ ನುಗ್ಗಿದ ಕರಡಿ, ಪೊಲೀಸರು ಹಾಗೂ ಸಾರ್ವಜನಿಕರು ಮನೆಯೊಳಗೆ ಬರುತ್ತಿರುವುದನ್ನು ಗಮನಿಸಿ ಗೋಡೆ ಕೊರೆದು ಪರಾರಿಯಾಗಿರುವ ಫೋಟೋಗಳನ್ನು ಸ್ಥಳೀಯ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ಬಗ್ಗೆ ಎಚ್ಚರಿಕೆ ನೀಡಿರುವ‌ ಪೊಲೀಸರು, ಮನುಷ್ಯರು ಬರುವ‌ ವಾಸನೆ ಸಿಗುತ್ತಿದ್ದಂತೆ ತಪ್ಪಿಸಿಕೊಳ್ಳಲು ಈ ರೀತಿ ಮಾಡಿರುವ ಸಾಧ್ಯತೆಯಿದೆ‌. ಆದ್ದರಿಂದ ಮುಂದಿನ ದಿನದಲ್ಲಿ ಮನೆಯಿಂದ ಹೋಗುವಾಗ ಸಾರ್ವಜನಿಕರು‌ ಕಿಟಿಕಿಗಳನ್ನು ಸರಿಯಾಗಿ ಹಾಕುವಂತೆ ಮನವಿ ಮಾಡಿದ್ದಾರೆ.

Last night a bear entered a residence near the area of Fall River Road. The bear seemed to have been attracted to the…

Posted by Estes Park Police Department on Saturday, August 10, 2019

ಮುಂಬೈ-ಎಲಿಫೆಂಟಾ ಗುಹೆಗಳ ನಡುವಿನ ಪ್ರಯಾಣ ಅವಧಿ ಇನ್ನು ಕೇವಲ 14 ನಿಮಿಷ

Posted: 13 Aug 2019 03:57 AM PDT

ಮುಂಬೈನಿಂದ ಎಲಿಫೆಂಟಾ ಕೇವ್ಸ್ ವರೆಗೆ ಬೋಟ್ ಮೂಲಕ 1 ಗಂಟೆ ಅವಧಿಯಲ್ಲಿ ಕ್ರಮಿಸಬೇಕಿದ್ದ ಮಾರ್ಗ ಇನ್ನು ಮುಂದೆ ಕೇವಲ 14 ನಿಮಿಷಕ್ಕೆ ಇಳಿಯಲಿದೆ.

ಸಮುದ್ರದ ಮೇಲೆ ಭಾರತದ ಅತಿ ದೊಡ್ಡ ರೋಪ್ ಯೋಜನೆಯು ಮುಂಬೈ ಮತ್ತು ಎಲಿಫೆಂಟಾ ಗುಹೆಗಳನ್ನು ಸಂಪರ್ಕಿಸಲಿದ್ದು, ಅಂತಿಮ ಹಂತದ ಒಪ್ಪಿಗೆ ಮಾತ್ರ ಬಾಕಿ ಇವೆ.

ಮುಂಬೈ ಸುತ್ತ ನೋಡಲೇಬೇಕಾದ ಸ್ಥಳಗಳಲ್ಲಿ ಒಂದಾದ ಎಲಿಫೆಂಟಾ ಗುಹೆಗಳು 1987ರಲ್ಲಿ ವಿಶ್ವಸಂಸ್ಥೆಯ ಪಾರಂಪರಿಕ ತಾಣವಾಗಿ ಘೋಷಿಸಲ್ಪಟ್ಟಿತು. ಪ್ರತಿ ವರ್ಷ ಸುಮಾರು 7ಲಕ್ಷ ಪ್ರವಾಸಿಗರನ್ನು ಸೆಳೆಯುವ ಎಲಿಫೆಂಟಾ ಗುಹೆಗಳಿಗೆ ತೆರಳಲು 10 ಕಿಲೋಮೀಟರ್ ಮಾರ್ಗವನ್ನು ಬೋಟ್ ಮೂಲಕ ಸದ್ಯ ಕ್ರಮಿಸಬೇಕು.

ಪಾರಂಪರಿಕ ತಾಣವಾದ್ದರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ಅನುಮತಿಯೊಂದೇ ಬಾಕಿ ಇದೆ ಎನ್ನಲಾಗಿದೆ.

ವ್ಯಕ್ತಿಯ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕೃತಕ ಹಲ್ಲು ವಾರದ ನಂತರ ಪತ್ತೆ

Posted: 13 Aug 2019 03:55 AM PDT

Image result for Dentures Were Stuck In A Man's Throat. It Was Detected A Week Later

ಇದು 72 ವರ್ಷದ ಬ್ರಿಟನ್ ನ ಎಲೆಕ್ಟ್ರಿಷಿಯನ್ ಒಬ್ಬರ ಕಥೆ. ತಾನು ಕೃತಕ ಹಲ್ಲು ಹಾಕಿಕೊಂಡಿದ್ದೆ ಎಂಬುದನ್ನೆ ವೈದ್ಯರಿಗೆ ತಿಳಿಸಲು ಆತ ಮರೆತಿದ್ದ. ಬಹುಶಃ ಈ ಸುದ್ದಿ ಓದಿದ ಮತ್ಯಾರೂ ಇದೇ ತಪ್ಪನ್ನು ಮಾಡುವುದಿಲ್ಲ.

ಬಾಯಿಯಿಂದ ರಕ್ತ‌ಬರುತ್ತಿದೆ, ಏನನ್ನೂ ನುಂಗಲು ಆಗುತ್ತಿಲ್ಲ, ಗಟ್ಟಿ ಪದಾರ್ಥ ಸೇವಿಸಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರ ಬಳಿ ತೆರಳಿದ್ದ. ಈ ಹಿಂದೆ ಹೃದಯದಲ್ಲಿ ತೊಂದರೆ ಇರುವ ಇತಿಹಾಸವನ್ನು ಗಮನಿಸಿದ ವೈದ್ಯರು ಬಹುಶಃ ಉಸಿರಾಟದ ತೊಂದರೆ ಇರಬೇಕು ಎಂದು ಭಾವಿಸಿದ್ದರು.

ಬಾಯಿ ಸ್ವಚ್ಛಗೊಳಿಸಿಕೊಳ್ಳುವುದು ಆಂಟಿಬಯಾಟಿಕ್ಸ್ ನೀಡುವುದು ಸೇರಿ ಕೆಲ ಚಿಕಿತ್ಸೆಗಳ ನಂತರ ವೈದ್ಯರು ಆತನನ್ನು ಮನೆಗೆ ಕಳುಹಿಸಿದ್ದರು. ಎರಡು ದಿನದ ನಂತರ ಮತ್ತೆ ಬಂದ ರೋಗಿಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಮತ್ತೊಬ್ಬ ವೈದ್ಯರು ಬಹುಶಃ ನ್ಯುಮೋನಿಯಾ ಇರಬಹುದು ಎಂದು ಶಂಕಿಸಿದ್ದರು.

ಕೊನೆಗೆ ನ್ಯಾನೊ‌ಸೆಂಡೋಸ್ಕೊಪಿ ಕ್ಯಾಮೆರಾವನ್ನು ಗಂಟಲಲ್ಲಿ ತೂರಿಸಿದಾಗಲೇ ಅಲ್ಲಿ ಕೃತಕ ಹಲ್ಲು ಸಿಕ್ಕಿಕೊಂಡಿರುವುದು ತಿಳಿದಿದೆ. 8 ದಿನದ ಹಿಂದೆ ಚಿಕಿತ್ಸೆ ವೇಳೆ ಹಲ್ಲು ಜಾರಿ ಸಿಕ್ಕಿಕೊಂಡಿರುವುದು ತಿಳಿದುಬಂದಿದ್ದು, ಶಸ್ತ್ರ ಚಿಕಿತ್ಸೆ ನಂತರ ಹೊರತೆಗೆದು ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಈ ಸುಲಭ ‘ಟಿಪ್ಸ್’ ನಿಂದ ನೀವೂ ಧೋನಿ ಜೊತೆ ಮಾಡಬಹುದು ಈ ಕೆಲಸ

Posted: 13 Aug 2019 03:50 AM PDT

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯಂತೆ ನೀವೂ ಕೂಡ ಸೇನೆಯ ಸಮವಸ್ತ್ರ ಧರಿಸಬಹುದು. ಅವ್ರ ಜೊತೆ ಕೆಲಸ ಮಾಡಬಹುದು. ಸೈನಿಕರ ಜೊತೆ ತರಬೇತಿ ಪಡೆಯಬಹುದು. ಅವ್ರ ಜೊತೆ ಊಟ ಮಾಡಬಹುದು. ಅವ್ರ ಜೊತೆ ಸಂಬಳ ಪಡೆಯಬಹುದು.

ಧೋನಿ ಲೆಫ್ಟಿನೆಂಟ್ ಕರ್ನಲ್ ಆಗಿ ತರಬೇತಿ ಪಡೆಯುತ್ತಿದ್ದಾರೆ. ನೀವು ಕೂಡ ಯಾವುದೇ ಕಠಿಣ ಪರೀಕ್ಷೆಯಿಲ್ಲದೆ ಸೇನೆಯಲ್ಲಿ ಜಾಗ ಪಡೆಯಬಹುದಾಗಿದೆ. ನಮ್ಮ ದೇಶದಲ್ಲಿ ಸುಮಾರು 40 ಸಾವಿರ ಮಂದಿ ಕೆಲಸದಿಂದ ವಿಶ್ರಾಂತಿ ಪಡೆದು ಸೇನೆಗೆ ಸೇರಿಕೊಳ್ಳುತ್ತಾರೆ. ಅದ್ರಲ್ಲಿ ರಾಜಕೀಯ ನಾಯಕರು, ಉದ್ಯಮಿಗಳು ಸೇರಿದ್ದಾರೆ.

ಭಾರತೀಯ ಸೇನೆಯ ಪ್ರಾದೇಶಿಕ ಸೈನ್ಯದೊಂದಿಗೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರುವ ಪ್ರತಿಯೊಬ್ಬರೂ ಸೇರಬಹುದು. ಅವ್ರು ಲೆಫ್ಟಿನೆಂಟ್ ಆಗಿ ಸೈನ್ಯ ಸೇರಬಹುದಾಗಿದೆ. ಅದನ್ನು ನೀವು ಸ್ವಯಂಸೇವಕ ಸೇವೆ ಎಂದು ಭಾವಿಸಬಹುದು. ಈ ಸೇನೆಗೆ ಸೇರಲು ಕನಿಷ್ಠ ವಯಸ್ಸು 18 ವರ್ಷ. ಗರಿಷ್ಠ ವಯಸ್ಸು 42 ವರ್ಷ.

ಟ್ರಯಲ್ ರೂಮಿನಲ್ಲಿ ಬಟ್ಟೆ ಬದಲಿಸುವಾಗ ಕಣ್ಣಿಗೆ ಬಿತ್ತು ಮೊಬೈಲ್

Posted: 13 Aug 2019 03:23 AM PDT

ನಾಗ್ಪುರದ ರೆಡಿಮೆಡ್ ಶೋ ರೂಮಿನ ಟ್ರಯಲ್ ರೂಮಿನಲ್ಲಿ ಬಟ್ಟೆ ಬದಲಿಸಲು ಹೋದ ಯುವತಿ ವಿಡಿಯೋ ಮಾಡಿದ ಪ್ರಕರಣ ಬಯಲಿಗೆ ಬಂದಿದೆ. ಧೈರ್ಯ ಮಾಡಿದ ಹುಡುಗಿ ಇಬ್ಬರನ್ನು ಜೈಲಿಗೆ ಕಳುಹಿಸಲು ಯಶಸ್ವಿಯಾಗಿದ್ದಾಳೆ.

ನಾಗ್ಪುರದ ಶೋ ರೂಂನಲ್ಲಿ ಹುಡುಗಿ ಬಟ್ಟೆ ಇಷ್ಟಪಟ್ಟಿದ್ದಳು. ಅದನ್ನು ಪರೀಕ್ಷಿಸಲು ಟ್ರಯಲ್ ರೂಂಗೆ ಹೋಗಿದ್ದಾಳೆ. ಅಲ್ಲಿ ಗುಪ್ತ ಕ್ಯಾಮರಾ ಇದೆ ಎಂಬುದನ್ನು ತಿಳಿದು ಆಕೆ ದಂಗಾಗಿದ್ದಳು. ಟ್ರಯಲ್ ರೂಮಿನ ಕೋಣೆಯಲ್ಲಿ ಮೊಬೈಲ್ ಇರುವುದನ್ನು ಆಕೆ ನೋಡಿದ್ದಾಳೆ. ಮೊಬೈಲ್ ನಲ್ಲಿ ಆಕೆ ಬಟ್ಟೆ ಬದಲಿಸುತ್ತಿರುವುದು ದಾಖಲಾಗಿದೆ.

ಮೊಬೈಲ್ ಹಿಡಿದು ಪೊಲೀಸ್ ಠಾಣೆಗೆ ಹೋದ ಹುಡುಗಿ ದೂರು ನೀಡಿದ್ದಾಳೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶೋ ರೂಮಿಗೆ ಬಂದಿದ್ದಾರೆ. ಶೋ ರೂಮಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ಈ ಕೃತ್ಯವೆಸಗಿದ್ದಾನೆಂಬುದು ಬಹಿರಂಗವಾಗಿದೆ. ಸಿಬ್ಬಂದಿ ಹಾಗೂ ಶೋ ರೂಂ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಧಮಕಿ ಹಾಕಿದ ದೀಪಕ್ ಗೆ ರಾಖಿ ಸಾವಂತ್ ಹೇಳಿದ್ದೇನು…?

Posted: 13 Aug 2019 03:18 AM PDT

ಮದುವೆ ನಂತ್ರವೂ ಡ್ರಾಮಾ ಕ್ವೀನ್ ರಾಖಿ ಸಾವಂತ್ ವಿವಾದದಿಂದ ಹೊರ ಬಂದಂತೆ ಕಾಣ್ತಿಲ್ಲ. ಈಗ ದೀಪಕ್ ಕಲಾಲ್ ಜೊತೆ ಹೊಸ ಡ್ರಾಮಾ ಶುರುವಾಗಿದೆ. ರಾಖಿ ಸಾವಂತ್ ಮದುವೆಯಾಗಿದ್ದಾಳೆ ಎಂಬ ಸಂಗತಿ ತಿಳಿಯುತ್ತಿದ್ದಂತೆ ದೀಪಕ್, ನಾಲ್ಕು ಕೋಟಿ ಕೊಡುವಂತೆ ಹೇಳಿದ್ದ.

ಹಣ ವಾಪಸ್ ನೀಡುವಂತೆ ಧಮಕಿ ಹಾಕಿದ್ದ ದೀಪಕ್, ರಾಖಿಸಾವಂತ್ ಪತಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದ. ಇದು ರಾಖಿಯನ್ನು ಕೆರಳಿಸಿದೆ. ದೀಪಕ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಅದ್ರಲ್ಲಿ ರಾಖಿ ನಿನ್ನ 12 ಮಕ್ಕಳ ಕನಸನ್ನು ನಿನ್ನ ಪತಿ ನನಸು ಮಾಡುವುದಿಲ್ಲ. ಆತನನ್ನು ಬಿಟ್ಟುಬಿಡು ಎಂದಿದ್ದ.

ಈ ವಿಡಿಯೋವನ್ನು ಪೋಸ್ಟ್ ಮಾಡಿದ ರಾಖಿ, ದೀಪಕ್ ಗೆ ಬೈಯ್ಯುವಂತೆ ಅಭಿಮಾನಿಗಳಿಗೆ ಹೇಳಿದ್ದಾಳೆ. ಇಷ್ಟೇ ಅಲ್ಲ ಇನ್ನೊಂದು ವಿಡಿಯೋ ಪೋಸ್ಟ್ ಮಾಡಿದ್ದಾಳೆ. ಅದ್ರಲ್ಲಿ ರಾಖಿ, ದೀಪಕ್ ಗೆ ಬೈಯ್ಯುತ್ತಿದ್ದಾಳೆ. ಎಲ್ಲಿ ಅಡಗಿದ್ರೂ ನಿನ್ನನ್ನು ಬಿಡುವುದಿಲ್ಲ. ನನ್ನ ಕಾಳಿ ಅವತಾರವನ್ನು ನೀನು ನೋಡಿಲ್ಲ. ತ್ರಿಶೂಲದಲ್ಲಿ ನಿನ್ನನ್ನು ವಧೆ ಮಾಡುತ್ತೇನೆ ಎಂದಿದ್ದಾಳೆ.

ಇಲ್ಲಿದೆ ಐಸ್ ಸಂಗೀತ ಸಾಧನಗಳೇ ತುಂಬಿರುವ ಐಸ್ ಮ್ಯೂಸಿಕ್ ಹಾಲ್

Posted: 13 Aug 2019 02:59 AM PDT

ಪ್ರತಿಯೊಬ್ಬರಿಗೂ ಒಂದಿಲ್ಲಾ ಒಂದು ಯೋಚನೆಗಳು ಬರುತ್ತಿರುತ್ತವೆ. ಕೆಲವರು ಆ ಯೋಚನೆಗಳನ್ನು ತಮ್ಮ ಜೀವನದ ಗುರಿಯನ್ನಾಗಿ ಮಾಡಬೇಕೆಂದು ಹರಸಾಹಸ ಪಟ್ಟು ಯಶಸ್ವಿಯೂ ಆಗುತ್ತಾರೆ.

ಇಂತಹ ಯಶಸ್ಸು ಕಂಡವರ ಪಟ್ಟಿಗೆ ಟಿಮ್ ಲಿನ್ಹಾರ್ಟ್ ಒಬ್ಬರು. ಅಮೆರಿಕಾದ ಕೊಲೊರಾಡಾದ ನಿವಾನಿ ಲಿನ್ಹಾರ್ಟ್ ಗೆ ಶೀಥಲ ಗುಹೆ ನಿರ್ಮಾಣ ಮಾಡಬೇಕು. ಅದರಲ್ಲೂ ಸಂಗೀತ ಕಛೇರಿ ನಡೆಸುವಂತಹ ಸಭಾಂಗಣ ಇರಬೇಕೆಂಬ ಮಹದಾಸೆಯನ್ನು ಹೊಂದಿದ್ದರು.

ಸರಿ, 20 ವರ್ಷಗಳ ಹಿಂದೆ ಈ ಶೀಥಲ ಗುಹೆ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದಾರೆ. ಸುದೀರ್ಘ ಅವಧಿಯ ನಂತರ ಇದೀಗ ಅವರ ಕನಸಿನ ಶೀಥಲ ಮ್ಯೂಸಿಕ್ ಹಾಲ್ ನಿರ್ಮಾಣವಾಗಿದೆ.

ಇದರ ವಿಶೇಷತೆಯೆಂದರೆ ಗುಹೆ ಮತ್ತು ಮ್ಯೂಸಿಕ್ ಹಾಲ್ ಮಾತ್ರ ಐಸ್ ನಿಂದ ನಿರ್ಮಾಣವಾಗಿಲ್ಲ. ಅಲ್ಲಿ ಐಸ್ ನಿಂದಲೇ ತಯಾರಿಸಿರುವ ಸಂಗೀತ ಸಾಧನಗಳೂ ಇವೆ. ಇಲ್ಲಿ ಈಗ ನಿರಂತರವಾಗಿ ಸಂಗೀತ ಕಛೇರಿಗಳು ನಡೆಯುತ್ತಿವೆ. ಇದಲ್ಲದೇ. ಚಳಿಗಾಲದ ಮದುವೆ ಮತ್ತು ಪಾರ್ಟಿಗಳಿಗೂ ಇದು ನೆಚ್ಚಿನ ತಾಣವಾಗಿದೆ ಎನ್ನುತ್ತಾರ ಲಿನ್ಹಾರ್ಟ್