Translate

Saturday, April 13, 2019

Kannada News | Karnataka News | India News

Kannada News | Karnataka News | India News


ಪ್ರಸಿದ್ಧಿ ಪಡೆಯುತ್ತಿದೆ ʼಸೆಕ್ಸ್ʼ ನ ಈ ಭಂಗಿ

Posted: 13 Apr 2019 09:05 AM PDT

ಸೆಕ್ಸ್ ಭಂಗಿಗಳ ಬಗ್ಗೆ ದಂಪತಿಗೆ ತಿಳಿದಿರುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೊಸ ಭಂಗಿಯೊಂದು ಪ್ರಸಿದ್ಧಿ ಪಡೆಯುತ್ತಿದೆ. ಸೆಕ್ಸ್ ಥೆರಪಿಸ್ಟ್ ಇದ್ರ ಬಗ್ಗೆ ಮಾತನಾಡ್ತಿದ್ದಾರೆ. ಇದಕ್ಕೆ ಕರೇಝಾ (Karezza) ಎಂದು ಕರೆಯಲಾಗಿದೆ. ಇದು ಲೈಂಗಿಕ ಜೀವನವನ್ನು ಮತ್ತೆ ಚಿಗುರಿಸುವ ಕೆಲಸ ಮಾಡುತ್ತದೆಯಂತೆ.

ಕರೇಝಾ ತುಂಬಾ ಮೃದುವಾದ ಹಾಗೂ ನಿಧಾನವಾದ ಸಂಭೋಗ ಶೈಲಿಯಾಗಿದೆ. ಪರಾಕಾಷ್ಠೆ ತಲುಪುವುದು ಈ ಭಂಗಿಯ ಉದ್ದೇಶವಾಗಿರುವುದಿಲ್ಲ. ಸಂಗಾತಿಗಳು ವಿಶ್ರಾಂತಿ ಪಡೆಯುವುದು ಇದ್ರ ಉದ್ದೇಶವಾಗಿದೆ. ಈ ಭಂಗಿಯಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರೂ ಸಂಪೂರ್ಣ ವಿಶ್ರಾಂತಿ ಪಡೆಯಲು ಬಯಸ್ತಾರೆ. ಕರೇಝಾ ಅರ್ಥ ಪ್ರೀತಿಯ ಸ್ಪರ್ಶ ಎಂದಾಗುತ್ತದೆ. ಇದ್ರಲ್ಲಿ ಸ್ಪರ್ಶ, ಸಂಪರ್ಕ, ಅನ್ಯೂನ್ಯತೆಗೆ ಮಹತ್ವ ನೀಡಲಾಗುತ್ತದೆ.

1844ರಲ್ಲಿ ಜಾನ್ ಹಂಫ್ರಿ ನೋಯ್ಸ್ ಇದನ್ನು ಕಂಡು ಹಿಡಿದಿದ್ದ. The Karezza Method ಹೆಸರಿನ ಪುಸ್ತಕದಲ್ಲಿ ಇದ್ರ ಬಗ್ಗೆ ವಿವರ ನೀಡಿದ್ದಾನೆ. ಆರಂಭದಲ್ಲಿ ಸಂಗಾತಿ ಐ ಲವ್ ಯು ಎನ್ನುವ ಮೂಲಕ ಇದನ್ನು ಶುರು ಮಾಡಿ, ನಂತ್ರ ಪರಸ್ಪರ ಸ್ಪರ್ಶದ ಮೂಲಕ ಮುಂದೆ ಸಾಗಿ ಎಂದು ಬರೆದಿದ್ದಾನೆ. ಆರಂಭ ರೋಮ್ಯಾಂಟಿಕ್ ಆಗಿರುವ ಜೊತೆಗೆ ಸಂಗಾತಿ ಮಧ್ಯೆಯ ಸಂಬಂಧವನ್ನು ಬಲಪಡಿಸುತ್ತದೆ.

ಮಾರಕಾಸ್ತ್ರಗಳಿಂದ ಥಳಿಸಿ ಯುವಕನ ಬರ್ಬರ ಹತ್ಯೆ

Posted: 13 Apr 2019 09:00 AM PDT

ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನ ಬಹದ್ದೂರ್ ಪುರದಲ್ಲಿ ನಡೆದಿದೆ.

24 ವರ್ಷದ ಲೋಕನಾಥ್‍ ಕೊಲೆಯಾದ ಯುವಕ. ಕಳೆದ ರಾತ್ರಿ ಹೇಮಂತ್, ಹರೀಶ್ ಎಂಬುವವರು ಮಾತನಾಡೋಣ ಎಂದು ನಂಬಿಸಿ ಲೋಕನಾಥ್‍ ನನ್ನ ಕರೆದುಕೊಂಡು ಹೋಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಒಂದು ವಾರದ ಹಿಂದೆ ಲೋಕನಾಥ್ ಮತ್ತು ಹರೀಶ್ ಗುಂಪಿನ ನಡುವೆ ಚಿಕ್ಕಪುಟ್ಟ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಸಂಬಂಧ ಪೊಲೀಸರು ಎಚ್ಚರಿಕೆ ನೀಡಿದ್ರು. ಹೀಗಾಗಿ ಲೋಕನಾಥ್‍ ನನ್ನು ಕೊಲೆ ಮಾಡಲು ಹರೀಶ್ ಗುಂಪು ಸಂಚು ರೂಪಿಸಿದ್ರು.

ಆನೇಕಲ್‍ ನ ಬಹದ್ದೂರುಪುರದ ಮೈದಾನಕ್ಕೆ ಲೋಕನಾಥ ಮತ್ತು ಆತನ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ತಾರಕಕ್ಕೇರಿ, ಲೋಕನಾಥ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ಈ ವೇಳೆ ಹೆದರಿದ ಲೋಕನಾಥ್ ಸ್ನೇಹಿತರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಆನೇಕಲ್ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾತಿನಲ್ಲೇ ಮತದಾರರನ್ನು ಮೋಡಿ ಮಾಡುತ್ತಿರುವ ಅನಂತ್‌ ಕುಮಾರ್‌ ಹೆಗಡೆ

Posted: 13 Apr 2019 08:58 AM PDT

ಬಿಜೆಪಿ ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾದವರು ಅನಂತ್‍ ಕುಮಾರ್ ಹೆಗಡೆ. ಅವರು ಹೋದಲೆಲ್ಲಾ ಅವರ ಭಾಷಣ ಕೇಳೋಕೆ ಜನರು ಮುಗಿ ಬೀಳ್ತಾರೆ. ಹಾಗೆಯೇ ಅನಂತ್ ಕುಮಾರ್ ಪ್ರಚಾರಕ್ಕೆ ಹೋದಾಗೆಲ್ಲಾ ಒಂದೊಂದು ಅಪರೂಪದ ಘಟನೆಗಳು ನಡೆಯುತ್ತಿರುತ್ತವೆ.

ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ಜಿಲ್ಲೆಯ ಖಾನಾಪರ ತಾಲೂಕಿನ ದೇವಾಂಗ ಗ್ರಾಮದಲ್ಲಿ ಎಂಗೇಜ್‍ ಮೆಂಟ್ ನಡೆಯುತ್ತಿತ್ತು. ಪ್ರಚಾರಕ್ಕೆಂದು ಆ ಗ್ರಾಮಕ್ಕೆ ಹೋದಾಗ ಸಡನ್‍ ಆಗಿ ನಿಶ್ಚಿತಾರ್ಥ ನಡೆಯುತ್ತಿದ್ದ ಮನೆಗೆ ಹೋಗಿ ಹುಡುಗ-ಹುಡುಗಿಗೆ ಶುಭ ಹಾರೈಸಿ, ಫೋಟೋ ಕ್ಲಿಕ್ಕಿಸಿಕೊಂಡ್ರು. ಅನಂತ್ ಕುಮಾರ್ ಹೆಗಡೆ ಹೋದಲೆಲ್ಲಾ ಅವರಿಗೆ ಮತ್ತು ಅವರ ಕಾರ್ಯಕರ್ತರಿಗೆ ಸ್ಥಳೀಯರಿಂದ ಆದರ-ಆತಿಥ್ಯ ಸಿಗುತ್ತಿದೆ.

ಹೀಗೆ ಪ್ರಚಾರ ಮುಗಿಸಿಕೊಂಡು ಗುಂಜಿ ಎಂಬ ಸ್ಥಳದಿಂದ ಹೋಗುವಾಗ ಹೆಗಡೆಯವರು ಬಿದಿರಿನ ಬುಟ್ಟಿ ಹೆಣೆಯುತ್ತಿದ್ದವರನ್ನು ಮಾತನಾಡಿಸಿದ್ದಾರೆ. ಅಲ್ಲದೆ ಈ ಕಲೆಯನ್ನು ಕಾಪಾಡಿಕೊಂಡು ಬರುವಂತೆ ಅವರನ್ನು ಪ್ರಶಂಸಿಸಿದ್ದಾರೆ.

ಅನಂತ್ ಕುಮಾರ್ ಹೆಗಡೆಯವರು ಹೋದ ಕಡೆಯಲೆಲ್ಲಾ ರಾಷ್ಟ್ರೀಯತೆ ಮತ್ತು ಅಭಿವೃದ್ಧಿ ಜಪ ಮಾಡ್ತಿದ್ದಾರೆ. ಅಲ್ಲದೆ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತಾ ಕರೆ ನೀಡುತ್ತಿದ್ದಾರೆ.

ಇನ್ನು ಗುಂಜಿ ಎಂಬ ಗ್ರಾಮದಲ್ಲಿ ಅನಂತ್ ಕುಮಾರ್ ಹೆಗಡೆ ಮಾತು ಆರಂಭಿಸಿದಾಗ ಕರೆಂಟ್ ಕೈಕೊಟ್ಟ ಘಟನೆ ಕೂಡಾ ನಡೆದಿದೆ. ಈ ವೇಳೆ ಜನರು ಮಾತು ನಿಲ್ಲಿಸಬೇಡಿ ಅಂತಾ ಹೇಳಿದ್ದಾರೆ.

ಒಟ್ನಲ್ಲಿ ಫೈರ್ ಬ್ರಾಂಡ್‍ ಹೋದಲೆಲ್ಲಾ, ಬಿಜೆಪಿ ಮತ್ತು ಮೋದಿಯ ಕಾರ್ಯವೈಖರಿ ಬಗ್ಗೆ ಹೇಳುತ್ತಾ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರವನ್ನು ತಿವಿಯುತ್ತಾ, ಮಾತಿನಿಂದಲೇ ಜನರನ್ನು ಮೋಡಿ ಮಾಡ್ತಿದ್ದಾರೆ.

ʼಜೇಡʼ ನೋಡಿದ ಮಹಿಳೆ ಮಾಡಿದ್ದೇನು ಗೊತ್ತಾ…?

Posted: 13 Apr 2019 08:43 AM PDT

ಅಪರಿಚಿತ ಮಹಿಳೆಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಜೇಡವೊಂದು ಥಟ್ಟಂತ ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಮಹಿಳೆ ಕಾರನ್ನ ಕಲ್ಲಿನ ತಡೆಗೋಡೆಗೆ ಗುದ್ದಿದ್ದಾಳೆ. ಇದರಿಂದಾಗಿ ಆಕೆಯ ಕಾಲಿಗೆ ಬಲವಾಗಿ ಹೊಡೆತ ಬಿದ್ದಿದೆ.

ಅಮೆರಿಕಾದಲ್ಲಿ ಈ ಘಟನೆ ಸಂಭವಿಸಿದ್ದು, ಇದನ್ನ ನ್ಯೂಯಾರ್ಕ್ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನ ಹರಿ ಬಿಟ್ಟಿದ್ದಾರೆ. ಈ ಬಗ್ಗೆ ನೆಟ್ಟಿಗರು ಆಶ್ಚರ್ಯಕರವಾದ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಪೊಲೀಸರು ಕಾರನ್ನ ಚಲಾಯಿಸುತ್ತಿದ್ದ ಮಹಿಳೆಗೆ ಜೇಡವೊಂದು ಕಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಇದರಿಂದಾಗಿ ಮಹಿಳೆಯ ಕಾಲಿಗೆ ಬಲವಾಗಿ ಹೊಡೆತ ಬಿದ್ದಿದೆ ಎಂದು ತಿಳಿಸಿದ್ದಾರೆ. ಇದರಿಂದ ನೆಟ್ಟಿಗರು ವ್ಯಂಗ್ಯವಾಗಿ, ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾರಿನಲ್ಲಿ ಜೇಡ ಕಾಣಿಸಿಕೊಂಡ ಕಾರಣ ಸುರಕ್ಷತೆಯ ದೃಷ್ಟಿಯಿಂದಾಗಿ ಕಾರನ್ನೂ ಸುಟ್ಟುಬಿಡಬೇಕಿತ್ತು. ಇದರಿಂದ ಜೇಡ ನಿರ್ನಾಮವಾಗಿ ಬಿಡುತ್ತಿತ್ತು ಎಂದು ಕೆಲವರು ವ್ಯಂಗ್ಯವಾಗಿ ಹೇಳಿದರೆ, ನಾವು ಈ ಸುದ್ದಿಕೇಳಿ ದಿನವಿಡಿ ನಕ್ಕಿದ್ದೇವೆ. ಆದರೆ ಆ ಮಹಿಳೆ ಸುರಕ್ಷಿತವಾಗಿರುವುದಕ್ಕೆ ಸಂತೋಷವಾಗಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ನನಗೂ ಕಾರು ಚಲಾಯಿಸುವಾಗ ಜೇಡ ಕಂಡು ಬಂದಿತ್ತು. ಆದರೆ ನಾನು ವಾಹನವನ್ನ ಅಪಘಾತಕ್ಕೀಡು ಮಾಡಲಿಲ್ಲವೆಂದು ಮತ್ತೆ ಕೆಲವರು ಅಭಿಪ್ರಾಯ ತಿಳಿಸಿದ್ದಾರೆ.

ಅನೇಕರು ಅಪಘಾತಕ್ಕೀಡಾದ ಮಹಿಳೆ ಬಹಳ ಬೇಗ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ. ಆದರೆ ಪೊಲೀಸ್ ಸಿಬ್ಬಂದಿ, ಚಾಲಕರು ಇಂತಹ ಸಣ್ಣಪುಟ್ಟ ಗಾಬರಿಯಿಂದ ಹೊರಬರುವುದನ್ನ ರೂಢಿಸಿಕೊಳ್ಳಬೇಕು. ಸಾಧ್ಯವಾದರೆ ಇದನ್ನ ಕಲಿಯುವುದು ಉತ್ತಮ ಏಕೆಂದರೆ ನಮ್ಮ ಜೀವನ ಚಾಲನೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಮೋದಿ ಸುನಾಮಿ

Posted: 13 Apr 2019 07:51 AM PDT

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಬಿಜೆಪಿ ಬೃಹತ್ ಸಮಾವೇಶ ಆಯೋಜಿಸಿದ್ದು, ಜನಸಾಗರವೇ ಹರಿದು ಬಂದಿದೆ. ಎಲ್ಲೆಲ್ಲೂ ಮೋದಿ ಘೋಷಣೆ ಮೊಳಗಿದೆ.

ಸಮಾವೇಶದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಆತ್ಮೀಯ ಬಂಧು ಭಗಿನಿಯರೇ, ನಿಮ್ಮ ಚೌಕಿದಾರ ನರೇಂದ್ರ ಮೋದಿಯ ನಮಸ್ಕಾರಗಳು ಎಂದು ಹೇಳಿದ್ದಾರೆ.

ಆಧುನಿಕ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರಿಗೆ ನಮಿಸುತ್ತೇನೆ. ಪ್ರೀತಿಯ ಮಿತ್ರ ಹಲವು ವರ್ಷಗಳ ದೋಸ್ತಿ ಅನಂತಕುಮಾರ್, ಬಿ.ಎನ್. ವಿಜಯ್ ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಬೆಂಗಳೂರಿನ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದಾರೆ.

ಇಂದು ರಾಮನವಮಿಯ ಪ್ರವಿತ್ರ ದಿನವಾಗಿದೆ. ನಾಳೆ ಸಂವಿಧಾನ ನಿರ್ಮಾತೃ ಅಂಬೇಡ್ಕರ್ ಅವರ ಜನ್ಮ ದಿನವಾಗಿದೆ. ಬೆಂಗಳೂರು ಜನ ನನಗೆ ತುಂಬಾ ಪ್ರೀತಿಯನ್ನು ನೀಡಿದ್ದಾರೆ. ನಿಮ್ಮ ಪ್ರೀತಿ ಸದಾ ನಮ್ಮ ಮೇಲೆ ಇರಲಿ. 5 ವರ್ಷ ನನಗೆ ಅವಕಾಶ ಮಾಡಿಕೊಟ್ಟ ನಿಮಗೆ ಧನ್ಯವಾದಗಳು. ಮತ್ತೆ ನಿಮ್ಮ ಆಶೀರ್ವಾದ ನಮಗೆ ಬೇಕಿದೆ. ದೇಶ ನಮ್ಮ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಇದು ಸಾಧ್ಯವಾಗುವುದಿಲ್ಲ. ರಾಜ್ಯದಲ್ಲಿ ಜನ ಮಾಡಿದ ಸಣ್ಣ ತಪ್ಪಿನಿಂದ ಮೈತ್ರಿ ಸರ್ಕಾರ ಬಂದಿದೆ. ಈ ಹಿಂದೆ ಭಾರತ ಏಕೆ ಗಡಿದಾಟಿ ದಾಳಿ ಮಾಡಲ್ಲ ಎಂದು ಕೇಳುತ್ತಿದ್ದರು. ನಾವು ಉಗ್ರರ ಕೋಟೆಯ ಒಳಗೆ ನುಗ್ಗಿ ದಾಳಿ ಮಾಡಿದ್ದೇವೆ. ಇದು ನಿಮಗೆ ಗೌರವ ತಾನೆ ಎಂದು ಕೇಳಿದ್ದಾರೆ.

‘ದೇಶದ ಚೌಕಿದಾರರ ಹೆಸರನ್ನು ಹಾಳು ಮಾಡಿದ ಮೋದಿ’

Posted: 13 Apr 2019 07:29 AM PDT

ಮೈಸೂರು: ಒಬ್ಬ ಚೌಕಿದಾರ ದೇಶದ ಎಲ್ಲ ಚೌಕಿದಾರರ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಮೈಸೂರು ಜಿಲ್ಲೆ ಕೆಆರ್ ನಗರದಲ್ಲಿ ಇಂದು ಮೈತ್ರಿಕೂಟದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ಮೋದಿ ದೇಶದ ಎಲ್ಲಾ ಚೌಕಿದಾರರ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರತಿ ಚುನಾವಣೆಯಲ್ಲಿಯೂ ಮೋದಿ ಸುಳ್ಳು ಭರವಸೆ ನೀಡಿದ್ದಾರೆ. ಪ್ರತಿಯೊಬ್ಬರ ಅಕೌಂಟ್ ನಲ್ಲಿ 15 ಲಕ್ಷ ರೂ. ಹಾಕುತ್ತೇನೆ ಎಂದು ಹಿಂದಿನ ಚುನಾವಣೆಯಲ್ಲಿ ಮೋದಿ ಹೇಳಿದ್ದರು. 15 ಲಕ್ಷ ಕೊಡುವುದಾಗಿ ಹೇಳಿದ ಮೋದಿ 5 ವರ್ಷಗಳಾದರೂ ಕೊಡಲೇ ಇಲ್ಲ ಎಂದು ದೂರಿದ್ದಾರೆ.

ಶ್ರೀಮಂತ ವ್ಯಕ್ತಿಗಳ ಬಳಿ ಮಾತ್ರ ಚೌಕಿದಾರ ಕಾಣಿಸುತ್ತಾರೆ. ದೇಶದ ಅರ್ಥವ್ಯವಸ್ಥೆಯನ್ನು ಅವರು ಹಾಳುಗೆಡವಿದ್ದಾರೆ. ಶೇ. 20 ರಷ್ಟು ಇರುವ ಬಡವರಿಗೆ ವಾರ್ಷಿಕ ತಲಾ 72,000 ರೂ. ಹಾಕುವುದಾಗಿ ನಾವು ಹೇಳಿದ್ದೇವೆ. ನೇರವಾಗಿ ಬಡವರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ನೀವು ಬೆಳೆ ವಿಮೆಗೆ ಹಾಕಿದ ಹಣ ನಿಮಗೆ ವಾಪಸ್ ಬರುತ್ತಿಲ್ಲ. ಅದು ಅಂಬಾನಿಯಂತವರಿಗೆ ನೇರವಾಗಿ ಜಮಾ ಆಗುತ್ತದೆ. ಕರ್ನಾಟಕ ಜನತೆಗೆ ನಾವು ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದವು. ಈಗಾಗಲೇ ಕರ್ನಾಟಕ ಸರ್ಕಾರ ರೈತರ 11,000 ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ ಎಂದು ಹೇಳಿದ್ದಾರೆ.

ಒಂದೆಡೆ ರೈತರಿಗೆ ಹಣ ನೀಡಿದರೆ ದೇಶದ ಆರ್ಥಿಕ ವ್ಯವಸ್ಥೆ ನಷ್ಟವಾಗುತ್ತದೆ ಎನ್ನುವ ಮೋದಿ ಮತ್ತೊಂದೆಡೆ ಅನಿಲ್ ಅಂಬಾನಿಯಂತಹವರಿಗೆ ಸಾವಿರಾರು ಕೋಟಿ ರೂ. ನೀಡುತ್ತಾರೆ. ಮೋದಿಯವರು 5 ವರ್ಷಗಳ ಆಡಳಿತದ ಅವಧಿಯಲ್ಲಿ ಬಡವರ ಮನಸ್ಸಿಗೆ ನೋವು ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಆ ನೋವನ್ನು ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನ, ಅದಕ್ಕೆ ಪೂರಕವಾದ ಕೆಲಸವನ್ನು ಮಾಡಲಿದೆ ಎಂದು ತಿಳಿಸಿದ್ದಾರೆ.

ದರ್ಶನ್ ಗೆ ಅಭಿಮಾನಿಯಿಂದ ಸಿಕ್ತು ‘ಸರ್ಪ್ರೈಸ್ ಗಿಫ್ಟ್’

Posted: 13 Apr 2019 07:27 AM PDT

ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆ ಪ್ರಚಾರದ ಭರಾಟೆ ಮುಗಿಲು ಮುಟ್ಟಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ನಟ ದರ್ಶನ್ ಇಂದು ಕೂಡ ಬಿರುಸಿನ ಪ್ರಚಾರ ನಡೆಸಿದ್ದಾರೆ.

ನೇರಲಕೆರೆ ಗ್ರಾಮದಲ್ಲಿ ಸುಮಲತಾ ಪರವಾಗಿ ದರ್ಶನ್ ಪ್ರಚಾರ ನಡೆಸಿದ ವೇಳೆ ಅಭಿಮಾನಿಯೊಬ್ಬರು ಅಂಬಿ ಫೋಟೋ ಗಿಫ್ಟ್ ಕೊಟ್ಟಿದ್ದಾರೆ. ನೇರಲಕೆರೆ ಗ್ರಾಮಕ್ಕೆ ಆಗಮಿಸಿದ ದರ್ಶನ್ ಅವರಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ನೀಡಲಾಗಿದೆ.

ಪ್ರಚಾರದ ವೇಳೆ ಮಾತನಾಡಿದ ದರ್ಶನ್, ಸುಮಲತಾ ಹೆಸರಿನ ನಾಲ್ವರು ಚುನಾವಣಾ ಕಣದಲ್ಲಿದ್ದಾರೆ. ಕ್ರಮ ಸಂಖ್ಯೆ 20 ಸುಮಲತಾ ಅಂಬರೀಶ್ ಅವರ ಕಹಳೆ ಗುರುತಿಗೆ ಮತ ಹಾಕಿ. ಮತದಾನದ ವೇಳೆ ಗೊಂದಲಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.

ಹೆಲಿಕಾಪ್ಟರ್ ನಲ್ಲಿ ಮೋದಿ ತಂದ ನಿಗೂಢ ಬಾಕ್ಸ್ ನಲ್ಲಿತ್ತಾ ಭಾರೀ ಹಣ….?

Posted: 13 Apr 2019 07:25 AM PDT

ಬೆಂಗಳೂರು: ಮೋದಿ ತಂದ ಸೂಟ್ ಕೇಸ್ ನಲ್ಲಿ ಏನಿತ್ತು? ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಮೋದಿ ಹೆಲಿಕಾಪ್ಟರ್ ನಲ್ಲಿ ತಂದಿರುವ ಸೂಟ್ ಕೇಸ್ ಕುರಿತಾಗಿ ಅನುಮಾನ ವ್ಯಕ್ತವಾಗಿದೆ.

ಏಪ್ರಿಲ್ 9 ರಂದು ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಲು ಮೋದಿ ಸೇನಾ ಹೆಲಿಕಾಪ್ಟರ್ ನಲ್ಲಿ ಚಿತ್ರದುರ್ಗಕ್ಕೆ ಬಂದಿಳಿದಿದ್ದಾರೆ. ಹೆಲಿಕಾಪ್ಟರ್ ನಿಂದ ಸೂಟ್ ಕೇಸ್ ಒಂದನ್ನು ಇಳಿಸಿಕೊಳ್ಳುವ ಭದ್ರತಾ ಸಿಬ್ಬಂದಿ, ತರಾತುರಿಯಲ್ಲಿ ಅದನ್ನು ಇನೋವಾ ಕಾರಿನಲ್ಲಿ ಸಾಗಿಸಿದ್ದಾರೆ.

ಮೋದಿ ಬಂದಿಳಿದ ಹೆಲಿಕಾಪ್ಟರ್ ನಲ್ಲಿ ತಂದ ಈ ಸೂಟ್ ಕೇಸ್ ನಲ್ಲಿ ಏನಿತ್ತು ಎಂಬುದು ಭಾರೀ ಕುತೂಹಲ ಮೂಡಿಸಿದೆ. ವಿಮಾನ, ಹೆಲಿಕಾಪ್ಟರ್ ನಲ್ಲಿ ದಲ್ಲಿ ಪ್ರಧಾನಿ ಮೋದಿ ಹಣ ಸಾಗಿಸಿದ್ದಾರೆಯೇ ಎಂದೆಲ್ಲಾ ಹೇಳಲಾಗಿದೆ.

ಮೋದಿ ಹೆಲಿಕಾಪ್ಟರ್ ನಲ್ಲಿ ಹಣ ಸಾಗಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಹಣ ಸಾಗಿಸುತ್ತಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮೋದಿ ಪರ ಘೋಷಣೆ, ಸ್ಥಳದಿಂದ ಕಾಲ್ಕಿತ್ತ ಅಶೋಕ್ ಖೇಣಿ

Posted: 13 Apr 2019 07:24 AM PDT

ಬೀದರ್: ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದ ಭರಾಟೆ ಮುಗಿಲುಮುಟ್ಟಿದೆ. ಮಾಜಿ ಶಾಸಕ ಅಶೋಕ್ ಖೇಣಿ ಪ್ರಚಾರದ ವೇಳೆ ಮೋದಿ ಪರವಾಗಿ ಘೋಷಣೆ ಕೂಗಲಾಗಿದೆ.

ಬೀದರ್ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿಯಾಗಿ ಈಶ್ವರ್ ಖಂಡ್ರೆ ಅವರ ಪರವಾಗಿ ನಿರ್ಣಾ ಗ್ರಾಮದಲ್ಲಿ ಅಶೋಕ್ ಖೇಣಿ ಪ್ರಚಾರಕ್ಕೆ ಆಗಮಿಸಿದ್ದಾರೆ.

ಅವರನ್ನು ಕಂಡ ಗ್ರಾಮಸ್ಥರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಘೋಷಣೆ ಜಾಸ್ತಿಯಾಗುತ್ತಿದ್ದಂತೆ ಅಶೋಕ್ ಖೇಣಿ ಪ್ರಚಾರ ನಡೆಸದೇ, ಮತ ಯಾಚಿಸದೇ ಕಾರು ಹತ್ತಿ ಪ್ರಯಾಣ ಮುಂದುವರೆಸಿದ್ದಾರೆ.

‘ಕೇಸರಿ ಸಮುದ್ರದ ಅಲೆಯನ್ನು ಕಂಡೆ’

Posted: 13 Apr 2019 05:52 AM PDT

ಮಂಗಳೂರು:  ಮಂಗಳೂರಿನಲ್ಲಿ ಕೇಸರಿ ಸಮುದ್ರದ ಅಲೆಯನ್ನು ನಾನು ಕಂಡೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಲೋಕಸಭೆ ಚುನಾವಣೆ ವಿಜಯ ಸಂಕಲ್ಪ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನ ವಿಮಾನ ನಿಲ್ದಾಣದಿಂದ ಸಮಾವೇಶದ ಸ್ಥಳಕ್ಕೆ ಬರುವವರೆಗೆ ಜನಸ್ತೋಮವನ್ನು ಕಂಡು ಅಚ್ಚರಿಗೊಂಡೆ. ಮಾನವ ನಿರ್ಮಿತ ಮಹಾಗೋಡೆಯನ್ನು ನಾನು ಕಂಡೆ. ರ್ಯಾಲಿಯಲ್ಲಿ ಭಾಗವಹಿಸಿರುವ ಲಕ್ಷಾಂತರ ಮಂದಿಯನ್ನು ಕಂಡು ಇದು ಕೇಸರಿ ಸಮುದ್ರದ ಅಲೆಯೇ ಎಂದು ನನಗೆ ಅಚ್ಚರಿಯಾಗಿದೆ ಎಂದು ಹೇಳಿದ್ದಾರೆ.

ಸಮಾವೇಶದಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆಯ ಜನರನ್ನುದ್ದೇಶಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಮಂಗಳೂರು, ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಬಂಧುಗಳಿಗೆ ನಿಮ್ಮ ಚೌಕಿದಾರ ನರೇಂದ್ರ ಮೋದಿಯ ನಮಸ್ಕಾರಗಳು ಎಂದು ಹೇಳಿದ್ದು, ಈ ವೇಳೆ ಮುಗಿಲು ಮುಟ್ಟುವಂತೆ ಘೋಷಣೆ ಕೂಗಲಾಗಿದೆ.

ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಮಾಡುತ್ತೇವೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಲಾಭ ಪಡೆಯಬಹುದು ಎಂದು ಹೇಳಿದ ಪ್ರಧಾನಿ, ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಕುಮಾರಸ್ವಾಮಿಗೆ ಸುಮಲತಾ ತಿರುಗೇಟು

Posted: 13 Apr 2019 05:51 AM PDT

ಮಂಡ್ಯ: ಪಕ್ಷೇತರ ಅಭ್ಯರ್ಥಿಗೆ ಭಯವಿದ್ದರೆ, ಅಮೆರಿಕ ಅಧ್ಯಕ್ಷರ ಮಾದರಿ ಕಮಾಂಡೊ ಭದ್ರತೆ ಪಡೆಯಲಿ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿರುವುದಕ್ಕೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಸಾಗ್ಯ ಗ್ರಾಮದಲ್ಲಿ ಪ್ರಚಾರ ನಡೆಸಿ ಅವರು ಮತ ಯಾಚಿಸಿದ್ದಾರೆ. ಈ ವೇಳೆ ಅವರು ಮಾತನಾಡಿ, ಭಯವಿದ್ದರೆ ಅಮೆರಿಕ ಅಧ್ಯಕ್ಷರಿಂದ ಭದ್ರತೆ ಪಡೆಯಲಿ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಅಮೆರಿಕದ ಅಧ್ಯಕ್ಷರು ಭಾರತದಲ್ಲಿ ಏಕೆ ಭದ್ರತೆ ಕೊಡಬೇಕು. ಇವರು ಕರ್ನಾಟಕದ ಮುಖ್ಯಮಂತ್ರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅವರೇ ನನಗೆ ಭದ್ರತೆ ಕೊಡಲಿ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ಆರ್.ಸಿ.ಬಿ.ಗೆ ಇಂದು ಮಾಡು ಇಲ್ಲವೆ ಮಡಿ ಪಂದ್ಯ..!

Posted: 13 Apr 2019 05:26 AM PDT

ಆರ್.ಸಿ.ಬಿ. ಸತತ ಆರು ಸೋಲುಗಳಿಂದ ಕಂಗೆಟ್ಟಿದೆ. ಆದ್ರೆ ಇವತ್ತಿನ ಪಂದ್ಯ ಆರ್ ಸಿಬಿ ತಂಡಕ್ಕೆ ಮಾಡು ಇಲ್ಲವೆ ಮಡಿ ಎಂಬಂತಾಗಿದೆ. ಇಂದು ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಆರ್ ಸಿಬಿ ನಡುವೆ ಪಂದ್ಯ ನಡೆಯಲಿದ್ದು, ವಿರಾಟ್ ಪಡೆ ಉಸಿರುಗಟ್ಟಿದ ಸ್ಥಿತಿಯಲ್ಲಿದೆ.

ಇದೂವರೆಗೂ ಒಂದು ಮ್ಯಾಚ್ ಗೆಲ್ಲದ ಆರ್ ಸಿಬಿ ಬಾಕಿ ಇರುವ ಎಂಟೂ ಪಂದ್ಯಗಳಲ್ಲಿ ಗೆದ್ದರೂ, ಪ್ಲೇ ಆಫ್‍ಗೇರುವುದು ಕಷ್ಟ. ಈ ಪಂದ್ಯದಲ್ಲೂ ಆರ್ ಸಿಬಿ ಸೋತರೆ ಆರ್ ಸಿಬಿ ಪ್ಲೇ ಆಫ್‍ನಿಂದ ಅಧಿಕೃತವಾಗಿ ಹೊರಬೀಳಲಿದೆ.

ಆರ್ ಸಿಬಿ ಕಳೆದ ಪಂದ್ಯಗಳಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‍ ಮೂರು ವಿಭಾಗಗಳಲ್ಲೂ ವೈಫಲ್ಯ ಕಂಡಿದೆ. ಹೀಗಾಗಿ ಈ ಪಂದ್ಯಕ್ಕೆ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.

ಮೊಹಲಿ ಪಿಚ್‍ ಬೌಲರ್ ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಮೊದಲು ಬ್ಯಾಟ್ ಮಾಡಿದ ತಂಡ 180ಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದ್ರೆ ಮಾತ್ರ ಗೆಲ್ಲುವ ಸಾಧ್ಯತೆ ಇದೆ.

ಕಾಂಗ್ರೆಸ್ ಪ್ರಚಾರ ವಾಹನಕ್ಕೆ ಕಲ್ಲು

Posted: 13 Apr 2019 05:24 AM PDT

ಕಲಬುರಗಿ: ಕಾಂಗ್ರೆಸ್ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಕಲಬುರಗಿಯ ದೇವಿನಗರದಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಲಬುರಗಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ಭಾವಚಿತ್ರದೊಂದಿಗೆ ಆಟೋದಲ್ಲಿ ಪ್ರಚಾರ ನಡೆಸಲಾಗಿದೆ. ದೇವಿನಗರದಲ್ಲಿ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಚಾಲಕನ ಮೇಲೆ ಹಲ್ಲೆ ಮಾಡಿ, ಆಟೋ ಜಖಂಗೊಳಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದು ಹಾಕಲಾಗಿದೆ. ಬಿಜೆಪಿ ಕಾರ್ಯಕರ್ತರು ಹೀಗೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ.

ರಾಘವೇಂದ್ರ ನಗರ ಪೊಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

’12 ಕೋಟಿ ರೈತರ ಖಾತೆಗೆ ಹಣ ಜಮಾ’

Posted: 13 Apr 2019 05:23 AM PDT

ಮಂಗಳೂರು: ದೇಶದ 12 ಕೋಟಿ ರೈತರ ಖಾತೆಗೆ ಹಣವನ್ನು ಹಾಕಿದ್ದೇವೆ. ಕರ್ನಾಟಕ ಸರ್ಕಾರ ಇನ್ನೂ ರೈತರ ಲಿಸ್ಟ್ ಕೊಟ್ಟಿಲ್ಲ ಎಂದು ಪ್ರಧಾನಿ ಮೋದಿ ದೂರಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಫಲಾನುಭವಿಗಳ ಲಿಸ್ಟ್ ಅನ್ನು ಸಿಎಂ ಕುಮಾರಸ್ವಾಮಿ ಕಳುಹಿಸಿಲ್ಲ. ಹಾಗಾಗಿ ಕರ್ನಾಟಕದ ಫಲಾನುಭವಿಗಳ ರೈತರ ಖಾತೆಗಳಿಗೆ ಹಣ ತಲುಪಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಲಕ್ಷ ಲಕ್ಷ ರೈತರಿಗೆ ಇನ್ನೂ ಹಣ ತಲುಪಿಲ್ಲ. ಇದಕ್ಕೆ ಮೈತ್ರಿ ಸರ್ಕಾರವೇ ಕಾರಣ. ಕೇಂದ್ರ ಸರ್ಕಾರಕ್ಕೆ ಫಲಾನುಭವಿಗಳ ಲಿಸ್ಟ್ ಇನ್ನು ಕಳುಹಿಸಿಲ್ಲ. ಇಂಥವರಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ನಲ್ಲೂ ಕುಟುಂಬ ವಾದವಿದೆ. ನಮ್ಮದು ರಾಷ್ಟ್ರಪ್ರೇಮವಾಗಿದೆ. ಬ್ಯಾಂಕಿಂಗ್ ವಲಯವನ್ನು ಕಾಂಗ್ರೆಸ್ ನವರು ವೆಂಟಿಲೇಟರ್ ನಲ್ಲಿ ಇಟ್ಟಿದ್ದರು. ಕಮಿಷನ್ ಪಡೆದು ಸಾಲ ನೀಡಿದ್ದರು. 2006 ರಿಂದ 2014 ರವರೆಗೆ ಅತಿ ಹೆಚ್ಚು ಲೋನ್ ನೀಡಿದ್ದರು. ಅದಕ್ಕೆಲ್ಲಾ ಚೌಕಿದಾರ್ ಅಂತ್ಯವಾಡಿದ್ದಾನೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಸೋಲಿನ ಭಯದಿಂದ ಓಡುತ್ತಿದ್ದಾರೆ. ಕೇರಳದಲ್ಲಿ ಅಯ್ಯಪ್ಪನ ಹೆಸರನ್ನು ಹೇಳಿದರೆ ಜೈಲಿಗೆ ಕಳುಹಿಸಲಾಗುತ್ತದೆ. ಅಯ್ಯಪ್ಪನ ಬಗ್ಗೆ ಮಾತನಾಡಿದರೆ ಕಮ್ಯುನಿಸ್ಟ್ ಸರ್ಕಾರ ಜೈಲಿಗೆ ಕಳುಹಿಸುತ್ತದೆ. ಇದನ್ನು ಪ್ರಜಾಪ್ರಭುತ್ವವೆಂದು ಕರೆಯುತ್ತಾರೆಯೇ? ನಮ್ಮ ಪಕ್ಷದ ಅಭ್ಯರ್ಥಿಯನ್ನು ಕೂಡ ಜೈಲಿಗೆ ಕಳುಹಿಸಿದರು ಎಂದು ದೂರಿದ್ದಾರೆ.

ದುಪ್ಪಟ್ಟಾಯ್ತು ಮಾರ್ಕ್ ಜುಕರ್‍ಬರ್ಗ್ ಪರಿಹಾರ ಧನ

Posted: 13 Apr 2019 03:00 AM PDT

ಫೇಸ್‍ಬುಕ್ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‍ಬರ್ಗ್ ಅವರ 2018ನೇ ಸಾಲಿನ ಪರಿಹಾರ ಧನ 22.6 ಮಿಲಿಯನ್ ಡಾಲರ್‍ಗೂ ಹೆಚ್ಚಾಗಿದ್ದು, ಇದು ಇದಕ್ಕೂ ಹಿಂದಿನ ವರ್ಷಕ್ಕಿಂತ ದುಪ್ಪಟ್ಟು ಎನಿಸಿಕೊಂಡಿದೆ.

2016ರಲ್ಲಿ ಮಾಹಿತಿ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಫೇಸ್‍ ಬುಕ್ ಈಗಾಗಲೇ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿದ್ದು, ಈ ಮಧ್ಯೆಯೇ ಒಂದಷ್ಟು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದೆ. ಆ ಹಿನ್ನೆಲೆಯಲ್ಲಿ ಪರಿಹಾರ ಧನವನ್ನು ಮೀಸಲಿಡುತ್ತಿದೆ.

ಕಳೆದ ಮೂರು ವರ್ಷಗಳಿಂದ ಮಾರ್ಕ್ ಜುಕರ್‍ಬರ್ಗ್ ಮೂಲವೇತನ ವಾರ್ಷಿಕ 1 ಡಾಲರ್ ಪಡೆಯುತ್ತಿದ್ದರೂ, ಅವರ ಪರಿಹಾರ ಧನದ ಮೊತ್ತ 22.6 ಮಿಲಿಯನ್ ಡಾಲರ್ ತಲುಪಿದೆ. ಇದರಲ್ಲಿ ಅರ್ಧದಷ್ಟು ಇವರ ವೈಯಕ್ತಿಕ ಭದ್ರತೆಗೆ ಹೋಗಲಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಸಂಸ್ಥೆಯ ಚೀಫ್ ಆಪರೇಟಿಂಗ್ ಆಫೀಸರ್ ಶೆರಿಲ್ ಸ್ಯಾಂಡ್‍ ಬರ್ಗ್ 2018ರಲ್ಲಿ 23.7 ಮಿಲಿಯನ್ ಡಾಲರ್ ಪಡೆದಿದ್ದಾರೆ.

99 ನೇ ವಯಸ್ಸಿನಲ್ಲಿ ಶಾಲೆಗೆ ಸೇರಿದ ವೃದ್ದೆ

Posted: 13 Apr 2019 02:59 AM PDT

ವಿದ್ಯೆ ಕಲಿಯಲು ವಯಸ್ಸಿನ ಮಿತಿ ಇಲ್ಲ ಅಂತಾರೆ. ಆದರೆ ಒಬ್ಬ ವ್ಯಕ್ತಿ ಯಾವ ವಯಸ್ಸಿನಲ್ಲಿ ವಯಸ್ಕರ ಶಿಕ್ಷಣಕ್ಕೆ ಸೇರಬಹುದು. ಅಬ್ಬಾಬ್ಬಾ ಎಂದರೆ 50 ನೇ ವಯಸ್ಸಿನಿಂದ ವಯಸ್ಕರ ಶಿಕ್ಷಣ ಕಲಿಯಬಹುದು.

ಆದರೆ ಅರ್ಜೆಂಟೈನಾದಲ್ಲಿ 99 ನೇ ವಯಸ್ಸಿನ ವೃದ್ಧೆ ಅಕ್ಷರ ಕಲಿಯಲು ಶಾಲೆಗೆ ಹೋಗುತ್ತಿದ್ದಾಳೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು.

ಅರ್ಜೆಂಟೈನಾದ ಎಸೆಬಿಯಾ ಲಿಯೋನಾರ್ ಕೋರ್ಡಲ್ ಎಂಬ 99 ವಯಸ್ಸಿನ ವೃದ್ಧೆ ಕೌಟುಂಬಿಕ ಸಮಸ್ಯೆ ಹಾಗೂ ಸಣ್ಣ ವಯಸ್ಸಿನಲ್ಲಿಯೇ ತನ್ನ ತಾಯಿಯನ್ನ ಕಳೆದುಕೊಂಡ ಪರಿಣಾಮ ಶಾಲೆ ಬಿಡಬೇಕಾಯಿತು. ಇದರಿಂದಾಗಿ ಲಿಯೋನಾರ್ ತಮ್ಮ ಜೀವನದ ಕೊನೆಗಾಲದಲ್ಲಿ ಲೆಪ್ರಿಡಾದ ವಯಸ್ಕರ ಶಿಕ್ಷಣದ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದಾರೆ.

ತನ್ನ 98 ನೇ ವಯಸ್ಸಿನಲ್ಲಿ ಶಾಲೆಗೆ ಸೇರಿದ ಲಿಯೋನಾರ್ ಒಂದು ದಿನವೂ ಶಾಲೆಗೆ ಗೈರುಹಾಜರಿಯಾಗದಿರುವುದು ವಿಶೇಷವಾಗಿದೆ. ಪ್ರತಿ ಮಂಗಳವಾರ, ಬುಧವಾರ ಹಾಗೂ ಗುರುವಾರ ಇವರ ಶಿಕ್ಷಕಿ ಪಟ್ರೇಶಿಯಾ, ಮನೆಗೆ ಬಂದು ಶಾಲೆಗೆ ಕರೆದುಕೊಂಡು ಹೋಗುತ್ತಾರೆ.

ವಯಸ್ಸಾದಂತೆ ಜ್ಞಾಪಕ ಶಕ್ತಿ ಕುಂದುಹೋಗುತ್ತದೆ. ಆದರೆ ಶಾಲೆಯಲ್ಲಿ ನಡೆಯುವ ಪ್ರತಿ ಪಾಠದ ಬಗ್ಗೆ ನನಗೆ ನೆನಪಿದೆ. ನಾನು ಶಾಲೆಗೆ ಸೇರಿದಾಗ ನನಗೆ ಓದಲು ಬರೆಯಲು ಬರುತ್ತಿರಲಿಲ್ಲ. ಈಗ ಅವೆಲ್ಲವೂ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಬಳಸುವುದು ಹೇಗೆ ಎಂಬುದನ್ನ ಕಲಿಯಲಿದ್ದೇನೆ ಎಂದು ಎಸೆಬಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲಾತಾಣದಲ್ಲಿ ವೃದ್ಧೆ ವಯಸ್ಕರ ಶಿಕ್ಷಣಕ್ಕೆ ಹೋಗುವ ವಿಡಿಯೋ ವೈರಲ್ ಆಗಿದೆ. ವೃದ್ಧೆಯ ಕಥೆ ಅನೇಕ ನೆಟ್ಟಿಗರ ಮನಸೂರೆಗೊಂಡಿದೆ. ಛಲಕ್ಕೆ ಮತ್ತು ಕಲಿಯುವ ಗಟ್ಟಿತನಕ್ಕೆ ವೃದ್ದೆ ಉತ್ತಮ ಉದಾಹರಣೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಳ್ಳು ಹೇಳಿರುವುದೇ ಮೋದಿ ಸಾಧನೆ: ರಾಜ್‍ ಠಾಕ್ರೆ ವಾಗ್ದಾಳಿ

Posted: 13 Apr 2019 02:55 AM PDT

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಂಎನ್‍ಎಸ್ ಮುಖ್ಯಸ್ಥ ರಾಜ್‍ ಠಾಕ್ರೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನೆಹರೂ, ಇಂದಿರಾಗಾಂಧಿಯವರನ್ನು ನೀವು ಹಿಂದಿನಿಂದಲೂ ತೆಗಳುತ್ತಲೇ ಬಂದಿದ್ದೀರಾ ಆದ್ರೆ ಮತ್ತೆ ಅವರನ್ನೇ ಅನುಕರಿಸುತ್ತಿದ್ದೀರಿ. ಇದೇ ಮೋದಿ ಕಳೆದ ಐದು ವರ್ಷಗಳಲ್ಲಿ ಮಾಡಿರುವ ಮಹಾನ್ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.

ದೆಹಲಿಯಲ್ಲಿರುವ ನೆಹರೂ ಮ್ಯೂಸಿಯಂನಲ್ಲಿ ಭಾರತದ ಮೊದಲ ಪ್ರಧಾನಿ ನೆಹರೂ ಅವರ ಹೇಳಿಕೆಯನ್ನು ಕೆತ್ತಲಾಗಿದೆ. ಅದ್ರಲ್ಲಿ ' ಇಸ್‍ ದೇಶ್‍ ಕಿ ಜನತಾ ಹಮೇ ಪ್ರಧಾನ ಮಂತ್ರಿ ನಾ ಕಹೇ, ಪ್ರಥಮ ಸೇವಕ್ ಕಹೇ‌ʼ ಎಂದಿದ್ದಾರೆ. ಆದ್ರೆ ನೆಹರೂರವರ ಈ ಹೇಳಿಕೆ ಪ್ರಧಾನಿ ಮೋದಿಯವರಿಗೆ ಅನ್ವಯವಾಗುವುದಿಲ್ಲ. ಮೋದಿ ಪ್ರಥಮ್‍ ಸೇವಕ್ ಎಂಬ ಪದವನ್ನು ಬದಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.

ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಆಯೋಜಿಸಿದ್ದ, ಸಮಾವೇಶದಲ್ಲಿ ಮಾತನಾಡಿದ ರಾಜ್‍ ಠಾಕ್ರೆ, ಪ್ರಧಾನಿ ಮೋದಿ ಕಳೆದ ಐದು ವರ್ಷಗಳಲ್ಲಿ ಪ್ರತಿ ವಿಚಾರದಲ್ಲೂ ದೇಶದ ಜನತೆಗೆ ಸುಳ್ಳು ಹೇಳಿರುವುದೇ ಅವರ ಸಾಧನೆ. ದೇಶಕ್ಕೆ ಮೋದಿ ಕೊಡುಗೆ ಶೂನ್ಯ ಅಂತಾ ಹರಿಹಾಯ್ದಿದ್ದಾರೆ.

ಸಂಸದೆ ಮುಂದೆ ಹಸ್ತಮೈಥುನ ಮಾಡಿದ ಕಿಡಿಗೇಡಿ

Posted: 13 Apr 2019 02:15 AM PDT

ವ್ಯಕ್ತಿಯೊಬ್ಬ ಬಸ್‍ ನಲ್ಲಿ, ಅದರಲ್ಲೂ ಬ್ರಿಟನ್ ಸಂಸತ್ ಸದಸ್ಯೆ ಮುಂದೆ ಹಸ್ತಮೈಥುನ ಮಾಡಿಕೊಂಡು ಮುಜುಗರಕ್ಕೀಡು ಮಾಡಿದ್ದು, ಈ ಬಗ್ಗೆ ಅಲ್ಲೀಗ ದೂರು ದಾಖಲಾಗಿದೆ.

ಬ್ರಿಟಿಷ್ ಪಾರ್ಲಿಮೆಂಟ್‍ ನಲ್ಲಿ ಸದಸ್ಯೆ ಆಗಿರುವ ಪಾಕಿಸ್ತಾನದ ಮೂಲದ ನಾಜ್ ಶಾ ಕಳೆದ ವಾರ ಬಸ್‍ ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರೆದುರೇ ಇಂಥದ್ದೊಂದು ಘಟನೆ ನಡೆದುಹೋಗಿದೆ. ಇದರಿಂದ ತೀವ್ರ ಮುಜುಗರಕ್ಕೀಡಾಗಿರುವ ಅವರು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದಾರೆ.

ವ್ಯಕ್ತಿಯೊಬ್ಬ ನನ್ನ ಬಳಿ ಬಂದು ಕುಳಿತು ಹಸ್ತಮೈಥುನ ಮಾಡಿಕೊಂಡ. ಅದನ್ನು ನೋಡಿ ನನಗೆ ಆಘಾತ, ಅಸಹ್ಯ ಎರಡೂ ಒಟ್ಟೊಟ್ಟಿಗೆ ಆಯಿತು. ನಾನು ಎಂದೂ ಇಂಥ ಮುಜುಗರಕ್ಕೆ ಒಳಗಾಗಿರಲಿಲ್ಲ. ಈ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಯಿ-ಮಗಳಿಗೆ ಹೊಳೆಯಲ್ಲಿ ಕಾದಿದ್ದ ಜವರಾಯ…!

Posted: 13 Apr 2019 02:14 AM PDT

ಸಾವು ಯಾವ ರೂಪದಲ್ಲಿ ಬರುತ್ತೆ ಎಂಬುದು ಯಾರಿಗೂ ಗೊತ್ತಾಗಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಹೊಳೆಯಲ್ಲಿ ವಿದ್ಯುತ್‍ ಶಾಕ್‍ ನಿಂದ ತಾಯಿ, ಮಗಳು ಸಾವನ್ನಪ್ಪಿದ್ದಾರೆ.

ತಾಯಿ ಮಂಜುಳಾ ತನ್ನಿಬ್ಬರು ಮಕ್ಕಳೊಂದಿಗೆ ಸ್ನಾನಕ್ಕೆಂದು ಹೆಬ್ಬಸೂರಿನ ಬಳಿ ಸುವರ್ಣಾವತಿ ಹೊಳೆಯಲ್ಲಿ ಇಳಿದಿದ್ದಾರೆ. ಇದೇ ಸಂದರ್ಭದಲ್ಲಿ ಹೊಳೆಯ ಮೇಲ್ಭಾಗ ಹಾದು ಹೋಗಿದ್ದ ವಿದ್ಯುತ್ ತಂತಿ ಇದ್ದಕ್ಕಿದ್ದಂತೆ ತುಂಡಾಗಿ ಹೊಳೆಯ ನೀರಿನಲ್ಲಿ ಬಿದ್ದಿದೆ.

ಇದ್ರಿಂದ ನೀರಿನಲ್ಲಿ ವಿದ್ಯುತ್ ಹರಿದಿದ್ದು, ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಮಂಜುಳಾ ಮತ್ತು ಮಗಳು ಶ್ರಾವ್ಯಶ್ರೀ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಮಗಳು ಯಶಶ್ರೀ ಅಪಾಯದಿಂದ ಪಾರಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಡಿಎಸ್‍ ನಾಯಕರ ವಿರುದ್ದ ಸುಮಲತಾ ವಾಗ್ದಾಳಿ

Posted: 13 Apr 2019 02:12 AM PDT

ಮಂಡ್ಯ ಅಖಾಡದಲ್ಲಿ ಚುನಾವಣಾ ಕಾವು ಜೋರಾಗಿದೆ. ಇಂದು ಮಳವಳ್ಳಿಯ ದಳವಾಯಿ ಕೋಡಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‍ ಅಬ್ಬರದ ಪ್ರಚಾರ ನಡೆಸಿದ್ರು. ಮಂಡ್ಯದಲ್ಲಿ ಮೋಸದ ಮತ್ತು ಕುತಂತ್ರದ ರಾಜಕಾರಣ ಮಾಡಲಾಗ್ತಿದೆ ಅಂತಾ ಆತಂಕ ವ್ಯಕ್ತಪಡಿಸಿದ್ರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮನಪೂರ್ವಕವಾಗಿ ಒಪ್ಪಿಕೊಂಡು ಜೆಡಿಎಸ್ ಪ್ರಚಾರಕ್ಕೆ ಬಂದಿಲ್ಲ. ಆದ್ರೆ ಜೆಡಿಎಸ್‍ ನ ಬ್ಲಾಕ್‍ ಮೇಲ್‍ ತಂತ್ರಕ್ಕೆ ಹೆದರಿ ಮಂಡ್ಯದಲ್ಲಿ ಪ್ರಚಾರಕ್ಕೆ ಬಂದಿದ್ದಾರೆ. ಆದ್ರೆ ಸಿದ್ದರಾಮಯ್ಯ ಅವರು ಪಕ್ಷೇತರ ಅಭ್ಯರ್ಥಿಗೆ ಮತ ಹಾಕಬೇಡಿ ಅಂತಾ ಒಲ್ಲದ ಮನಸ್ಸಿನಿಂದ ಹೇಳ್ತಿದ್ದಾರೆ.

ಜೆಡಿಎಸ್‍ ನಾಯಕರ ಬ್ಲಾಕ್‍ ಮೇಲ್‍ ನಿಂದ ಈ ರೀತಿ ಮಾಡ್ತಿದ್ದಾರೆ. ಮೈಸೂರಿನಲ್ಲಿ ಏನ್‍ ಆಗುತ್ತೋ ಎಂಬ ಭಯ ಅವರನ್ನು ಇಲ್ಲಿಗೆ ಪ್ರಚಾರಕ್ಕೆ ಬರುವಂತೆ ಮಾಡಿದೆ ಎಂದ್ರು.

ಇದೇ ಸಂದರ್ಭದಲ್ಲಿ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸುಮಲತಾ, ಸೈನಿಕರ ಬಗ್ಗೆ ಹಗುರವಾಗಿ ಮಾತನಾಡುವ ಸಿಎಂ ಹೆಚ್‍ಡಿಕೆ, ಲಕ್ಷ್ಮೀ ಅಶ್ವಿನ್ ಗೌಡ ಅವರಿಗೆ ಮೋಸ ಮಾಡಿದ್ರು. ಬರೀ ಕುಟುಂಬ ರಾಜಕಾರಣ ಮಾಡ್ತಿದ್ದಾರೆ. ಜಿಲ್ಲೆಯಲ್ಲಿರುವ ಮೂವರು ಸಚಿವರು ಮಾಡದ ಅಭಿವೃದ್ಧಿಯನ್ನು ಈಗ ಅವರು ಮಾಡ್ತಾರಂತೆ ಅಂತಾ ಹರಿಹಾಯ್ದರು.

ಹೀಗಿರಲಿ ಸಂಗಾತಿ ಜೊತೆಗಿನ ʼಸಂಬಂಧʼ

Posted: 13 Apr 2019 01:12 AM PDT

ಪತಿ, ಪತ್ನಿ ಸಾಮರಸ್ಯದಿಂದ ಬಾಳಿದರೆ ಜೀವನದಲ್ಲಿ ಸಂತೃಪ್ತಿ ಇರುತ್ತದೆ. ದಾಂಪತ್ಯದಲ್ಲಿ ವಿರಸ ಮೂಡಿದರೆ ಕುಟುಂಬಕ್ಕೆ ಹಾನಿ ಖಂಡಿತ ಎನ್ನುವುದು ಸಾಮಾನ್ಯ ವಿಚಾರ. ಇದು ಗೊತ್ತಿದ್ದರೂ ಬಹುತೇಕ ದಂಪತಿ ಕಲಹದಲ್ಲೇ ಸಮಯ ಕಳೆಯುತ್ತಾರೆ. ಸದಾ ಕಲಹದಲ್ಲೇ ಕಾಲಕಳೆದಲ್ಲಿ ದಂಪತಿಗಳ ನಡುವೆ ವಿರಸ ಜಾಸ್ತಿಯಾಗುತ್ತದೆ.

ಕೆಲಸದ ಒತ್ತಡ, ಮಕ್ಕಳ ಪಾಲನೆ, ಕೌಟುಂಬಿಕ ವಿಚಾರ, ಹಣಕಾಸು ಮೊದಲಾದ ಕಾರಣಗಳಿಂದ ದಂಪತಿ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಅದನ್ನು ನಿಲ್ಲಿಸಲು ಯಾರಾದರೊಬ್ಬರು ಪ್ರಯತ್ನಿಸಬೇಕು. ಯಾರೂ ಸೋಲದೇ ಮಾತನಾಡುತ್ತಾ ಹೋದರೆ, ಅದು ಮತ್ತೊಂದು ಹಂತ ತಲುಪುತ್ತದೆ.

ಇನ್ನು ಸಂಗಾತಿಗಳ ನಡುವೆ ಅನ್ಯೋನ್ಯತೆ ಮುಖ್ಯ. ಇದರಿಂದ ಒಳ್ಳೆಯ ಕುಟುಂಬವನ್ನು ಹೊಂದಬಹುದು. ಪರಸ್ಪರ ನಂಬಿಕೆ ಇಬ್ಬರಲ್ಲಿಯೂ ಇರಬೇಕು. ಸರಿ ತಪ್ಪಿನ ವಿವೇಚನೆ ಇರಬೇಕು. ತಾಳ್ಮೆಯ ಗುಣ ಹೊಂದಬೇಕು. ಸಂಗಾತಿಗಳಲ್ಲಿ ಕ್ಷಮಾ ಗುಣವಿರಬೇಕು. ಒಬ್ಬರು ಹೇಳಿದ್ದನ್ನು ಕೇಳಿಸಿಕೊಳ್ಳುವ ತಾಳ್ಮೆ ಇದ್ದರೆ ಕುಟುಂಬದಲ್ಲಿ ನೆಮ್ಮದಿ. ಎಲ್ಲಕ್ಕಿಂತ ಮುಖ್ಯವಾಗಿ ಸಂಬಂಧವನ್ನು ಸುಂದರವಾಗಿ ಇಡುತ್ತದೆ. ಯಾವುದೇ ಅನುಮಾನ, ಗೊಂದಲಗಳು ಇದ್ದಲ್ಲಿ ಪರಸ್ಪರ ಚರ್ಚಿಸಿ ಅವುಗಳನ್ನು ಬಗೆಹರಿಸಿಕೊಳ್ಳಬೇಕು. ಇದರಿಂದ ಆತ್ಮೀಯತೆ, ನಂಬಿಕೆ ಜಾಸ್ತಿಯಾಗುತ್ತದೆ ಎನ್ನಲಾಗಿದೆ.

ಅಡುಗೆ ಸೋಡಾದಲ್ಲಿರುವ ʼಅದ್ಭುತʼ ಗುಣಗಳು

Posted: 13 Apr 2019 01:10 AM PDT

ಸೋಡಿಯಂ ಬೈಕಾರ್ಬನೇಟ್ ಅಥವಾ ಅಡುಗೆ ಸೋಡಾದಿಂದ ಹಲವಾರು ಉಪಯೋಗಗಳಿವೆ. ಯಾವುದೇ ಹಾನಿಕಾರಕ ಅಡ್ಡಪರಿಣಾಮಗಳು ಇಲ್ಲದೇ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಸಹಾಯಕ. ಇಂತಹ ಅಡುಗೆ ಸೋಡಾದ ಉಪಯೋಗಗಳನ್ನು ನೋಡೋಣ.

ಅತ್ಯುತ್ತಮ ನೈಸರ್ಗಿಕ ಕಿಚನ್ ಕ್ಲೀನರ್

ಅಡುಗೆ ಸೋಡಾ ಯಾವುದೇ ಸೋಪ್‌ ಗಿಂತ ಹತ್ತು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಒಂದು ಸ್ಪಾಂಜ್ ಅಥವಾ ಒದ್ದೆಯಾದ ಬಟ್ಟೆಯ ಮೇಲೆ ಸ್ವಲ್ಪ ಅಡುಗೆ ಸೋಡಾವನ್ನು ಸಿಂಪಡಿಸಿ ಬಳಸಿ.

– ಮೈಕ್ರೋವೇವ್ ಓವನ್‌ ಸ್ವಚ್ಛಗೊಳಿಸುತ್ತದೆ.

– ಕಾಫಿ / ಟೀ ಕಲೆಗಳನ್ನು ತೆಗೆದುಹಾಕುತ್ತದೆ.

– ಸ್ವಿಚ್‌ ಬೋರ್ಡ್‌‌ ಗಳನ್ನು ಸ್ವಚ್ಛಗೊಳಿಸುತ್ತದೆ.

– ಪಾತ್ರೆಗಳಿಂದ ವಾಸನೆಯನ್ನು ತೆಗೆದುಹಾಕುವುದು.

– ಸುಟ್ಟ ಮಡಿಕೆಗಳು ಮತ್ತು ಬಾಣಲೆಗಳನ್ನು ಸ್ವಚ್ಛಗೊಳಿಸುತ್ತದೆ.

– ರೆಫ್ರಿಜಿರೇಟರ್‌ನಿಂದ ಕಲೆಗಳನ್ನು ತೆಗೆದುಹಾಕುತ್ತದೆ.

– ಹಣ್ಣುಗಳು ಮತ್ತು ತರಕಾರಿಗಳಿಂದ ಕೀಟನಾಶಕಗಳನ್ನು ಹೊರತೆಗೆಯುತ್ತದೆ.

ಬಟ್ಟೆಗಳ ಮೇಲಿನ ಕಲೆಗೆ ಅತ್ಯುತ್ತಮ

ಬಟ್ಟೆಗಳ ಮೇಲಿನ ಕಲೆಗೆ ಅತ್ಯುತ್ತಮ ಪರಿಣಾಮಕಾರಿ ಫಲಿತಾಂಶಗಳನ್ನು ಪಡೆಯಲು ಡಿಟರ್ಜೆಂಟ್‌ ಜೊತೆಗೆ ಅಡುಗೆ ಸೋಡಾವನ್ನು ಸೇರಿಸಿ. ಅಡುಗೆ ಸೋಡಾವನ್ನು ನೇರವಾಗಿ ವಾಶಿಂಗ್ ಮಶಿನ್‌ನಲ್ಲಿ ಬಳಸಬಹುದು.

– ಉಡುಪುಗಳಿಂದ ಕೆಟ್ಟ ವಾಸನೆ ಮತ್ತು ಸೋಂಕನ್ನು ತೆಗೆದುಹಾಕುತ್ತದೆ.

– ಗ್ರೀಸ್ ಕಲೆಗಳನ್ನು ತೆಗೆದುಹಾಕುತ್ತದೆ.

– ಇಂಕ್ ಮತ್ತು ವೈನ್ ಕಲೆಗಳನ್ನು ತೆಗೆದುಹಾಕುತ್ತದೆ.

– ಹಳದಿ ಕಲೆಗಳನ್ನು ತೆಗೆದುಹಾಕುತ್ತದೆ.

ಅತ್ಯುತ್ತಮ ಹೌಸ್ ಕ್ಲೀನರ್

ಒದ್ದೆಯಾದ ಬಟ್ಟೆಯ ಮೇಲೆ ಚಿಮುಕಿಸಿದ ಸ್ವಲ್ಪ ಅಡುಗೆ ಸೋಡಾ ಮನೆ ಮತ್ತು ಎಲ್ಲವನ್ನೂ ಹೊಳೆಯುವಂತೆ ಮಾಡುತ್ತದೆ. ಇದನ್ನು ಸ್ಪ್ರೇ ಅಥವಾ ಸ್ಕ್ರಬ್ ಆಗಿ ಬಳಸಬಹುದು.

– ಕಾರುಗಳನ್ನು ಸ್ವಚ್ಛಗೊಳಿಸುತ್ತದೆ.

– ಶೂಗಳ ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ.

– ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತದೆ.

– ಮರದ ಪೀಠೋಪಕರಣಗಳಿಂದ ಕಲೆಗಳನ್ನು ತೆಗೆದುಹಾಕುತ್ತದೆ.

– ಆಭರಣಗಳನ್ನು ಸ್ವಚ್ಛಗೊಳಿಸುತ್ತದೆ.

– ಗೋಡೆಗಳಿಂದ ಕ್ರೆಯೋನ್/ಇಂಕ್/ಶಾಶ್ವತ ಮಾರ್ಕರ್ ಕಲೆಗಳನ್ನು ತೆಗೆದುಹಾಕುತ್ತದೆ.

ಹಲ್ಲಿನ ತೊಂದರೆಗಳಿಗೆ ಅತ್ಯುತ್ತಮ

ಹಲ್ಲುಗಳು ಮತ್ತು ಒಸಡುಗಳ ಆರೋಗ್ಯಕ್ಕೆ ಅಡುಗೆ ಸೋಡಾ ಬಳಸಿ.

– ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.

– ಹಲ್ಲು ಹಳದಿಗಟ್ಟುವಿಕೆಯನ್ನು ತಡೆಯುತ್ತದೆ.

– ಬಾಯಿ ಹುಣ್ಣು ಕಡಿಮೆ ಮಾಡುತ್ತದೆ.

– ಹಲ್ಲುಗಳನ್ನು ಶುದ್ಧ ಮತ್ತು ಬಿಳಿಯಾಗಿಸುತ್ತದೆ.

ಕೆ.ಆರ್.ಎಸ್. ಹಿನ್ನೀರಿನಲ್ಲಿ ಪುರಾತನ ದೇವಾಲಯ…!

Posted: 13 Apr 2019 01:03 AM PDT

ಕೆ.ಆರ್.ಎಸ್. ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ದೇವಸ್ಥಾನ ಇದೀಗ ಗೋಚರವಾಗಿದೆ. ಬೋರೆ ಆನಂದೂರು ಸಮೀಪ ಕಾವೇರಿ ನದಿ ಹಿನ್ನೀರಲ್ಲಿ ಮುಳುಗಡೆಯಾಗಿದ್ದ ಶ್ರೀನಾರಾಯಣಸ್ವಾಮಿ ದೇವಸ್ಥಾನ ಕಾಣಿಸುತ್ತಿದೆ. ಬಿರು ಬೇಸಿಗೆಯಿಂದ ಕೆ.ಆರ್.ಎಸ್‍. ಅಣೆಕಟ್ಟೆಯ ನೀರಿನ ಮಟ್ಟ ಸುಮಾರು 92 ಅಡಿಗೆ ಇಳಿದಿದ್ದು, ಇದ್ರಿಂದಾಗಿ ಪುರಾತನ ದೇವಾಲಯ ಕಾಣಿಸುತ್ತಿದೆ.

ದೇವಾಲಯವಿರುವ ಜಾಗದಲ್ಲಿ ಈ ಹಿಂದೆ ಆನಂದೂರು ಎಂಬ ಗ್ರಾಮವಿತ್ತು ಅಂತಾ ಹೇಳಲಾಗ್ತಿದೆ. ಆದ್ರೆ ಕೆ.ಆರ್.ಎಸ್. ಡ್ಯಾಮ್ ಕಟ್ಟುವ ವೇಳೆ ಈ ಗ್ರಾಮ ಸ್ಥಳಾಂತರಗೊಂಡಿತ್ತು. ಜೊತೆಗೆ ಆ ದೇವಾಲಯದಲ್ಲಿದ್ದ ನಾರಾಯಣಸ್ವಾಮಿ ದೇವರನ್ನು ಕೆ.ಆರ್.ಎಸ್. ಸಮೀಪವಿರುವ ಮಜ್ಜಿಗೆಪುರ ಗ್ರಾಮದಲ್ಲಿ ಸ್ಥಾಪಿಸಲಾಗಿದೆ.

ನೀರಿನಲ್ಲಿ ಮುಳುಗಿದ್ರೂ, ಈ ದೇವಾಲಯ ಸುಸ್ಥಿತಿಯಲ್ಲಿದೆ. ಕೆಲ ಇಟ್ಟಿಗೆಗಳು ಬಿದ್ದು ಹೋಗಿವೆ. ಆದ್ರೆ ಕಲ್ಲುಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ.

ಪ್ರಚಾರದ ವೇಳೆ ಎತ್ತಿನ ಗಾಡಿ ಸವಾರಿ ಮಾಡಿದ ಡಿ ಬಾಸ್‍…!

Posted: 13 Apr 2019 12:57 AM PDT

ನಟ ದರ್ಶನ್‍ ಮಂಡ್ಯದಲ್ಲಿ ಸುಮಲತಾ ಅಂಬರೀಶ್‍ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಳವಳ್ಳಿ ತಾಲೂಕಿನ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿರುವ ದರ್ಶನ್‍, ಎತ್ತಿನ ಗಾಡಿಯಲ್ಲಿ ಸವಾರಿ ಮಾಡಿದ್ದಾರೆ.

ಮಳವಳ್ಳಿಯ ಕಂದೇಗಾಲದಲ್ಲಿ ದರ್ಶನ್ ಪ್ರಚಾರಕ್ಕೆ ಬರ್ತಾರೆ ಅಂತಾ ಅಭಿಮಾನಿಗಳು ಮೊದಲೇ ಎತ್ತಿನ ಗಾಡಿ ಸಿದ್ದಪಡಿಸಿದ್ದರು. ಬಾಳೆದಿಂಡು, ಕರ್ನಾಟಕದ ಬಾವುಟ ಕಟ್ಟಿ ಎತ್ತಿನ ಗಾಡಿಯನ್ನು ಅಲಂಕಾರ ಮಾಡಲಾಗಿತ್ತು. ಅಲ್ಲದೆ ಎತ್ತುಗಳ ಬೆನ್ನಿನ ಮೇಲೆ ರೆಬಲ್ ಸ್ಟಾರ್ ಅಂಬರೀಷ್ ಮತ್ತು ಡಿ ಬಾಸ್ ಎಂದು ಬರೆಯಲಾಗಿತ್ತು.

ಪ್ರಚಾರಕ್ಕೆಂದು ಕಂದೇಗಾಲದ ಕಡೆಗೆ ಬರುತ್ತಿದ್ದಂತೆ ಅಭಿಮಾನಿಗಳು ಎತ್ತಿನಗಾಡಿ ಓಡಿಸಿ ಅಂತಾ ಒತ್ತಾಯ ಮಾಡಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದ ದರ್ಶನ್‍ ಜೋಡೆತ್ತು ಗಾಡಿ ಹತ್ತಿ ಹಗ್ಗ ಹಿಡಿದು, ಸವಾರಿ ಮಾಡಿದ್ದಾರೆ.

ಒಂದು ಕಾಲಿಲ್ಲ, ಆದ್ರೂ ಫುಟ್ಬಾಲ್‍ ನಲ್ಲಿ ‌ʼಬೆಸ್ಟ್ ಪ್ಲೇಯರ್ʼ

Posted: 13 Apr 2019 12:33 AM PDT

ಒಂದು ಕಾಲೋ ಕೈಯೋ ಇಲ್ಲ ಎಂದಾಕ್ಷಣ ಧೃತಿಗೆಟ್ಟು ಕೂರುವವರೇ ಬಹಳ. ಅಂಗವೈಕಲ್ಯವನ್ನೂ ಮೀರಿ ಸಾಧಿಸುವವರು ವಿರಳ. ಅಂಥ ಸಾಧಕರಲ್ಲೊಬ್ಬ ಮ್ಯಾನ್ಮಾರ್ ನ ಈ ಬಾಲಕ.

ಹದಿನಾರು ವರ್ಷದ ಈ ಬಾಲಕನಿಗೆ ಒಂದು ಕಾಲೇ ಇಲ್ಲ. ಕಂಕುಳಕ್ಕೆ ಒಂದು ಆಧಾರ ಸಿಕ್ಕಿಸಿಕೊಂಡು ಒಂದು ಕಾಲಿನಲ್ಲೇ ಫುಟ್ಬಾಲ್ ಆಡುವ ಈತ ಅಂಗವಿಕಲರಷ್ಟೇ ಅಲ್ಲ, ಎಲ್ಲ ಸರಿ ಇರುವವರಿಗೂ ಮಾದರಿ ಎಂದರೆ ತಪ್ಪೇನಲ್ಲ. ಮ್ಯಾನ್ಮಾರ್ ನ ಕಾಂಗ್ ಖಾಂಟ್ ಲಿನ್ ಎಂಬ ಈತನಿಗೆ ಬಾಲ್ಯದಿಂದಲೂ ಫುಟ್ಬಾಲ್ ಎಂದರೆ ವಿಪರೀತ ಆಸಕ್ತಿ.

ಹೀಗೆ ಫುಟ್ಬಾಲ್ ಆಡಿಕೊಂಡು ಬಂದಿರುವ ಈತ ಇತ್ತೀಚೆಗೆ ಮ್ಯಾಂಚೆಸ್ಟರ್ ಯುನೈಟೆಡ್‍ನ ಫುಟ್ಬಾಲ್ ಮ್ಯಾಚ್‍ನಲ್ಲಿ ಪಾಲ್ಗೊಂಡಿದ್ದಲ್ಲದೆ, ಆ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಆಟ ಆಡಲು ಹೋದಾಗೆಲ್ಲ ನನಗೆ ಒಂದು ಕಾಲಿಲ್ಲ ಎಂಬುದೇ ಮರೆತುಹೋಗುತ್ತದೆ, ಮಾಮೂಲಿ ಮನುಷ್ಯನಂತೆ ಆಡುತ್ತೇನೆ ಎನ್ನುತ್ತಾನೆ ಈ ಪೋರ.

ಮೂರು ದಶಕಗಳ ಬಳಿಕ ಮನೆಗೆ ಬಂದ ಮಗ: ಸಂತಸದಲ್ಲಿ ಕುಟುಂಬ

Posted: 13 Apr 2019 12:31 AM PDT

ಚಿಕ್ಕವಯಸ್ಸಿನಲ್ಲೇ ಮನೆ ಬಿಟ್ಟು ಹೋದ ಮಕ್ಕಳು ವಯಸ್ಸಾದ ಮೇಲೆ ಮನೆಗೆ ಬಂದ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ. ಅಂತಹದ್ದೇ ಒಂದು ಘಟನೆ ಧರ್ಮಸ್ಥಳ ಸಮೀಪದ ಗಂಗೊಳ್ಳಿಯಲ್ಲಿ ನಡೆದಿದೆ.

ಮನೆಬಿಟ್ಟು ಹೋಗಿದ್ದ ಯುವಕನೊಬ್ಬ ಬರೋಬ್ಬರಿ 33 ವರ್ಷಗಳ ಬಳಿಕ ಮನೆಗೆ ಮರಳಿದ್ದಾನೆ. ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ಗೋದಿಹಿತ್ಲು ನಿವಾಸಿಯಾದ ದಿವಂಗತ ಗೋವಿಂದ ಖಾರ್ವಿ ಮತ್ತು ಕಮಲಾ ಖಾರ್ವಿಯ ಹಿರಿಯ ಪುತ್ರ ರಾಮ ಖಾರ್ವಿ ಮನೆಗೆ ಮರಳಿದ್ದಾನೆ.

ಗೋವಿಂದ ಖಾರ್ವಿ ದಂಪತಿಯ ಒಂಬತ್ತು ಮಂದಿ ಮಕ್ಕಳಲ್ಲಿ ರಾಮ ಖಾರ್ವಿ ಹಿರಿಯ ಮಗನಾಗಿದ್ದ. ಮೀನುಗಾರಿಕೆ ನಡೆಸಿ ಈ ಕುಟುಂಬ ಜೀವನ ಸಾಗಿಸುತಿತ್ತು. ಚಿಕ್ಕ ವಯಸ್ಸಲ್ಲೇ ರಾಮ ಖಾರ್ವಿ ಬೋಟ್ ಎಳೆದು, ರಿಪೇರಿ ಕೆಲಸ ಕಲಿತಿದ್ದ. ಇದೇ ಸಂದರ್ಭದಲ್ಲಿ ಬೋಟ್ ಎಳೆಯುವ ರೋಪ್ ಇವನ ಕಾಲಿಗೆ ತಗುಲಿ ಗಂಭೀರ ಗಾಯವಾಗಿತ್ತು. ಬಳಿಕ ಗುಣಮುಖವಾಗಿದ್ದ ರಾಮ ಖಾರ್ವಿ ಎರಡು ಬಾರಿ ಮನೆ ಬಿಟ್ಟು ಹೋಗಲು ಪ್ರಯತ್ನಿಸಿ, ಕುಟುಂಬದವರ ಕೈಗೆ ಸಿಕ್ಕಿದ್ರು. ಆದ್ರೆ ಮೂರನೇ ಬಾರಿಗೆ ಹೋದವರು ಮನೆಗೆ ಬರಲೇ ಇಲ್ಲ. ಆತ ಒರಿಸ್ಸಾ ಮತ್ತು ಹೈದ್ರಾಬಾದ್ ಹೋಟೆಲ್ ಗಳಲ್ಲಿ ಕೆಲಸ ಮಾಡಿಕೊಂಡಿದ್ರು.

ಈ ಮಧ್ಯೆ ರಾಮ ಖಾರ್ವಿ ಎರಡು ಬಾರಿ ಧರ್ಮಸ್ಥಳಕ್ಕೆ ಬಂದು ಹೋಗಿದ್ದಾರೆ. ಆದ್ರೆ ತಮ್ಮ ಮನೆಗೆ ಬಂದಿರಲಿಲ್ಲ. ಆದ್ರೆ ಮೊನ್ನೆ ಅದ್ಯಾಕೋ ಮನಸ್ಸು ಮಾಡಿ ಗಂಗೊಳ್ಳಿಗೆ ಬಂದು ತಮ್ಮ ಮನೆ ವಿಳಾಸವನ್ನು ಪ್ರಕಾಶ್ ಖಾರ್ವಿ ಎಂಬವವರ ಬಳಿ ಕೇಳಿದ್ದಾರೆ. ಪ್ರಕಾಶ್ ಖಾರ್ವಿ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿ, ವಿಚಾರಿಸಿದಾಗ ಆತ ತಮ್ಮ ಸಹೋದರ ರಾಮ ಖಾರ್ವಿ ಅಂತ ತಿಳಿದಿದೆ. ಮನೆ ಮಗ ಸಿಕ್ಕಿದ್ದಕ್ಕೆ ಖಾರ್ವಿ ಕುಟುಂಬಸ್ಥರು ತುಂಬಾ ಸಂತಸಗೊಂಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಬಾಲ ಬಿಚ್ಚದಂತೆ‌ ರೌಡಿ ಶೀಟರ್‌ ಗಳಿಗೆ ಖಡಕ್ ವಾರ್ನಿಂಗ್..!

Posted: 13 Apr 2019 12:28 AM PDT

ಲೋಕಸಭಾ ಚುನಾವಣೆಗೆ ಇನ್ನು ಐದೇ ದಿನ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನಿನ್ನೆ 300 ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಯಲ್ಲಿ ರೌಡಿಗಳಿಗೆ ಕ್ಲಾಸ್ ತೆಗೆದುಕೊಂಡ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ರೌಡಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಾಲಬಿಚ್ಚಿದ್ರೆ, ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ರೌಡಿ ಪರೇಡ್‍ನಲ್ಲಿ ಸೈಲೆಂಟ್ ಸುನೀಲ, ಶಿವಾಜಿನಗರದ ತನ್ವೀರ್, ಮಾರೇನಹಳ್ಳಿ ಜಗ್ಗ, ಕುಣಿಗಲ್ ರವಿ, ಒಂಟೆ ರೋಹಿತ, ಗುಜರಿ ಆಸೀಫ್‍, ದಡಿಯಾ ಮಹೇಶ್, ರಾಬ್ರಿ ಗಿರಿ ಸೇರಿದಂತೆ 300 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ರೌಡಿಗಳಿಗೆ ಬುದ್ದಿ ಹೇಳುವಾಗ ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಸೈಲೆಂಟ್ ಸುನೀಲ್ ಗುರಾಯಿಸುತ್ತಿದ್ದ. ಹೀಗಾಗಿ ಕಿವಿ ಹಿಂಡಿ ಬುದ್ದಿವಾದ ಹೇಳಿದ ಅಲೋಕ್‍ ಕುಮಾರ್, ಇವನು ಯಾರ್ ಯಾರ ಬಳಿ ಹಣ ವಸೂಲಿ ಮಾಡ್ತಿದ್ದಾನೆ ಎಂದು ಪರಿಶೀಲಿಸಿ ಕೇಸ್ ದಾಖಲಿಸಿ ಎಂದು ಎಸಿಪಿಗೆ ಸೂಚಿಸಿದ್ದಾರೆ.

ಇದೇ ವೇಳೆ ರೌಡಿ ಕುಣಿಗಲ್ ಗಿರಿಗೆ, ಡಿಸಿಪಿ ಗಿರೀಶ್ ಬೆಂಡೆತ್ತಿದ್ದಾರೆ. ಫೇಮಸ್ ಆಗೋಕೆ ಹೊರಟಿದ್ದೀಯಲ್ಲಾ ನಿನಗೆ ಮದುವೆಯಾಗಿದಿಯಾ ಅಂತಾ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅವನು, ಮದುವೆ ಆಗಿಲ್ಲ ಹುಡುಗಿ ಹುಡುಕ್ತಿದ್ದಾರೆ ಅಂತಾ ಹೇಳಿದ್ದಾನೆ. ಆಗ ಡಿಸಿಪಿ ನೀನು ಮದುವೆಯಾಗೋಕೆ ಹೋಗಬೇಡ, ನಿನ್ನ ಕಳ್ಳಾಟಗಳು ಗೊತ್ತಾಗಿವೆ. ನೀನು ತುಂಬಾ ದಿನ ಉಳಿಯಲ್ಲ ಅಂತಾ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಕೂದಲು, ಗಡ್ಡ ಬಿಟ್ಟುಕೊಂಡಿದ್ದ ರೌಡಿಗಳಿಗೆ ಕತ್ತರಿಸಿಕೊಳ್ಳುವಂತೆ, ಖಡಕ್ ವಾರ್ನಿಂಗ್ ನೀಡಿ, ಎಲ್ಲ ರೌಡಿಗಳ ಮೊಬೈಲ್ ನಂಬರ್ ಪಡೆದುಕೊಂಡಿದ್ದಾರೆ.

ಮದುವೆಗೆ ಕೊನೆಗೂ ಕೂಡಿ ಬಂತು ಕಾಲ

Posted: 13 Apr 2019 12:23 AM PDT

ಪುಲ್ವಾಮಾ ದಾಳಿಯಿಂದಾಗಿ ನಿಂತುಹೋಗಿದ್ದ ಮದುವೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ವರ ರಾಜಸ್ಥಾನದ ಬರ್ಮಾರ್‌ನ ಖೇಜದ್ ಕಾ ಪಾರ್‌ನ ಮಹೇಂದ್ರ ಸಿಂಗ್ ಈಗ ಪಾಕಿಸ್ತಾನದತ್ತ ಹೊರಟಿದ್ದಾನೆ.

ಮಹೇಂದ್ರ ಸಿಂಗ್ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಚಗನ್ ಕನ್ವರ್ ಮದುವೆ ಮಾರ್ಚ್ 8ರಂದು ನಡೆದಿರಬೇಕಿತ್ತು. ಆದರೆ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಆತಂಕದ ವಾತಾವರಣ ಸೃಷ್ಟಿಯಾದ್ದರಿಂದ ಹುಡುಗನ ಕುಟುಂಬದವರಿಗೆ ಅಲ್ಲಿಗೆ ತೆರಳಲು ಆಗಿರಲಿಲ್ಲ.

ಇದೀಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿರುವುದರಿಂದ ಏಪ್ರಿಲ್ 16 ರಂದು ಆ ಮದುವೆ ನಡೆಸಲು ನಿರ್ಧರಿಸಲಾಗಿದ್ದು, ಮಹೇಂದ್ರ ಸಿಂಗ್ ಕುಟುಂಬ ಪಾಕಿಸ್ತಾನಕ್ಕೆ ತೆರಳಿದೆ.

ರೇವಣ್ಣ ನೀಡಿದ ನಿಂಬೆಹಣ್ಣು ಸ್ವೀಕರಿಸಲು ನಿರಾಕರಿಸಿದ ʼಕೈʼ ನಾಯಕಿ

Posted: 13 Apr 2019 12:20 AM PDT

ಚುನಾವಣೆ ಬಂದ ಮೇಲಂತೂ ರೇವಣ್ಣ ಅಂದ್ರೆ ನಿಂಬೆಹಣ್ಣು, ನಿಂಬೆಹಣ್ಣು ಅಂದ್ರೆ ರೇವಣ್ಣ ಅನ್ನುವಂತಾಗಿದೆ. ಇನ್ನು ಸಭೆ ಸಮಾರಂಭಗಳಿಗೆ ಹೋದ್ರೂ, ತಮ್ಮ ಜೊತೆ ಇರುವವರಿಗೂ ಹೆಚ್‍.ಡಿ. ರೇವಣ್ಣ ನಿಂಬೆಹಣ್ಣು ಕೊಡ್ತಾರೆ.

ಅಂತೆಯೇ ಹಾಸನದ ಅರಕಲಗೊಡಿನಲ್ಲಿ ಚುನಾವಣಾ ಪ್ರಚಾರದ ಸಭೆಯಲ್ಲೂ ಕಾಂಗ್ರೆಸ್ ನಾಯಕಿಗೆ ನಿಂಬೆಹಣ್ಣು ಕೊಡಲು ಹೋದಾಗ, ಅವರು ಅದನ್ನು ಸ್ವೀಕರಿಸಲು ಹಿಂದೇಟು ಹಾಕಿದ ಘಟನೆ ನಡೆದಿದೆ.

ಮೊನ್ನೆ ಪ್ರಜ್ವಲ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಗಾಯತ್ರಿ ಶಾಂತೇಗೌಡ ಅವರಿಗೆ ರೇವಣ್ಣ ನಿಂಬೆಹಣ್ಣು ಕೊಡಲು ಹೋಗಿದ್ದಾರೆ. ಆದ್ರೆ ಗಾಯತ್ರಿ ಅವರು ನಿಂಬೆಹಣ್ಣು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ.

ಆದ್ರೆ ರೇವಣ್ಣ ಒತ್ತಾಯಪೂರ್ವಕವಾಗಿ ನಿಂಬೆಹಣ್ಣು ಕೊಟ್ರು. ಆದ್ರೆ ಅದನ್ನು ಕೈಯಲ್ಲಿ ಸ್ವೀಕರಿಸಿ ತಕ್ಷಣವೇ ಗಾಯತ್ರಿಯವರು ಕೆಳಗಿಟ್ಟ ಘಟನೆ ನಡೆದಿದೆ.

‘ರಾಮನವಮಿ’ ಸ್ಪೆಷಲ್: ಹೆಸರುಬೇಳೆ ಪಾನಕ

Posted: 13 Apr 2019 12:05 AM PDT

ಇವತ್ತು ರಾಮನವಮಿ. ರಾಮ ದೇವರಿಗೆ ನೈವೇದ್ಯ ಮಾಡುವ ರುಚಿ ರುಚಿಯಾದ ಪಾನಕಗಳು ದೇಹಕ್ಕೂ ತಂಪು. ಬಿಸಿಲಿನ ತಾಪ ಕಡಿಮೆ ಮಾಡುವ ಹೆಸರು ಬೇಳೆ ಪಾನಕ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

ಹೆಸರುಬೇಳೆ 1/4 ಕಪ್
ಬೆಲ್ಲ 1/2 ಕಪ್
ತೆಂಗಿನ ತುರಿ ಸ್ವಲ್ಪ
ನಿಂಬೆ ರಸ 1 ಚಮಚ
ಏಲಕ್ಕಿ ಪುಡಿ 1 ಚಿಟಿಕೆ

ಮಾಡುವ ವಿಧಾನ

ಹೆಸರು ಬೇಳೆಯನ್ನು ತೊಳೆದು ನೀರಿನಲ್ಲಿ ಒಂದು ಗಂಟೆಗಳ ಕಾಲ ನೆನೆಸಿಡಬೇಕು.
ನೆನೆಸಿದ ಹೆಸರು ಬೇಳೆಗೆ, ಬೆಲ್ಲ, ಕಾಯಿ ತುರಿ, ಏಲಕ್ಕಿ ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸಿ ಜಾರಿನಲ್ಲಿ ಅರೆದು ಸೋಸ ಬೇಕು. ಮತ್ತೆ ನೀರು ಹಾಕಿ ಸೋಸಿಕೊಳ್ಳಬೇಕು. ಹೀಗೆ ಮೂರ್ನಾಲ್ಕು ಬಾರಿ ಮಾಡಿದ ನಂತರ ನಿಂಬೆರಸ ಸೇರಿಸಿ ಪಾನಕ ಟೇಸ್ಟ್ ಮಾಡಿ.