Kannada News | Karnataka News | India News

Kannada News | Karnataka News | India News


ಯುಗಾದಿ ದಿನದ ಭವಿಷ್ಯ ಹಾಗೂ ರಾಶಿ ಫಲ

Posted: 24 Mar 2020 01:29 PM PDT

ಮೇಷ ರಾಶಿ:

ಒಂದು ಲಾಭಕರ ದಿನ ಮತ್ತು ನೀವು ಧೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ನಿಧಿಗಳ ಹಠಾತ್ ಒಳಹರಿವು ನಿಮ್ಮ ಪಾವತಿಗಳು ಮತ್ತು ತಕ್ಷಣದ ವೆಚ್ಚಗಳನ್ನು ನೋಡಿಕೊಳ್ಳುತ್ತದೆ.

ಹೊಸ ನೋಟ- ಹೊಸ ಉಡುಪು- ಹೊಸ ಸ್ನೇಹಿತರು ನೀವು ಇಂದು ನಿಮಗಾಗಿರಬಹುದು. ನಿಮ್ಮ ಹೃದಯಕ್ಕೆ ಪ್ರಿಯವಾಗುವ ಯಾರನ್ನಾದರೂ ಸಂಧಿಸುವ ಅವಕಾಶಗಳು ಇಂದು ಬಲವಾಗಿವೆ.

ಅದೃಷ್ಟ ಸಂಖ್ಯೆ: 1

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವೃಷಭ ರಾಶಿ:

ಇದು ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಸುತ್ತಲಿನ ಜನರು ನಿಮ್ಮ ಸ್ಥೈರ್ಯ ಮತ್ತು ಚೈತನ್ಯಗಳನ್ನು ಹೆಚ್ಚಿಸುತ್ತಾರೆ. ಹಣದ ಪ್ರಾಮುಖ್ಯತೆ ನಿಮಗೆ ಚೆನ್ನಾಗಿ ಗೊತ್ತಿದೆ,

ಆದ್ದರಿಂದ ಇಂದು ನಿಮ್ಮ ಮೂಲಕ ಉಳಿಸಲಾಗಿರುವ ಹಣ ನಿಮ್ಮ ತುಂಬಾ ಕೆಲಸಕ್ಕೆ ಬರಬಹುದು ಮತ್ತು ನೀವು ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು. ಪೋಷಕರ ಆರೋಗ್ಯ ಸುಧಾರಿಸುತ್ತದೆ ಮತ್ತು ಅವರು ನಿಮ್ಮ ಮೇಲೆ ಪ್ರೀತಿಯ ಮಳೆಗೈಯುತ್ತಾರೆ.

ಅದೃಷ್ಟ ಸಂಖ್ಯೆ: 3

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಮಿಥುನ ರಾಶಿ:

ನಿಮ್ಮ ಆಸಕ್ತಿಗಳನ್ನು ಮುಂದುವರಿಸಲು ಅಥವಾ ನೀವು ತುಂಬ ಆನಂದಿಸುವ ಕೆಲಸಗಳನ್ನು ಮಾಡಲು ಹೆಚ್ಚು ಸಮಯ ಕಳೆಯಬೇಕು. ಊಹೆಗಳು ಲಾಭ ತರುತ್ತವೆ. ಒಟ್ಟಾರೆ ಒಂದು ಲಾಭದಾಯಕ ದಿನವಾದರೂ ನೀವು ನಿರಾಸೆ ಭರವಸೆಯಿಡಬಹುದಾದ ಯಾರಾದರೂ ನಿಮ್ಮನ್ನು ನಿರಾಸೆಗೊಳಿಸುತ್ತಾರೆ.

ನಿಮ್ಮ ಪ್ರೇಮಿ ಅಥವಾ ಪ್ರೇಮಿಕ ಇಂದು ತುಂಬಾ ಕೋಪದಲ್ಲಿ ಕಾಣಬಹುದು, ಇದರಿಂದಾಗಿ ಅವರ ಮನೆಯ ಪರಿಸ್ಥಿತಿ ಇರುತ್ತದೆ. ಅವರು ಕೋಪದಲ್ಲಿದ್ದರೆ , ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿ.

ಅದೃಷ್ಟ ಸಂಖ್ಯೆ: 8

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಕಟಕ ರಾಶಿ:

ನಿಮ್ಮ ಅಸಭ್ಯ ವರ್ತನೆ ನಿಮ್ಮ ಹೆಂಡತಿಯ ಮನಸ್ಸನ್ನು ಹಾಳು ಮಾಡುತ್ತದೆ. ನೀವು ಯಾರನ್ನಾದರೂ ಅಗೌರವದಿಂದ ಕಾಣುವುದು ಹಾಗೂ ಸಂಬಂಧವನ್ನು ಲಘುವಾಗಿ ತೆಗೆದುಕೊಳ್ಳುವುದು ಅಪಾಯಕ್ಕೆ ಅದನ್ನು ತೀವ್ರವಾಗಿ ಘಾಸಿಗೊಳಿಸಬಹುದು ಎಂದು ಅರ್ಥ ಮಾಡಿಕೊಳ್ಳಬೇಕು.

ನೀವು ಇಂದು ಹಣ ಉಳಿಸುವುದು ಕಷ್ಟ – ನೀವು ಇಂದು ಅತಿಯಾಗಿ ಖರ್ಚು ಮಾಡುವ ಅಥವಾ ನಿಮ್ಮ ಪರ್ಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ -ನಿರ್ಲಕ್ಷ್ಯತನದಿಂದ ಕೆಲವು ಸಮಸ್ಯೆಗಳು ಖಂಡಿತ.

ಅದೃಷ್ಟ ಸಂಖ್ಯೆ: 1

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಸಿಂಹ ರಾಶಿ :

ಆಶಾವಾದಿಗಳಾಗಿರಿ ಮತ್ತು ಜೀವನದ ಉಜ್ವಲ ಬದಿಯನ್ನು ನೋಡಿ. ನಿಮ್ಮ ಆತ್ಮವಿಶ್ವಾಸಭರಿತ ನಿರೀಕ್ಷೆಗಳು ನಿಮ್ಮ ಭರವಸೆಗಳು ಮತ್ತು ಆಸೆಗಳನ್ನು ಸಾಕ್ಷಾತ್ಕಾರಗೊಳಿಸಲು ಸಹಾಯ ಮಾಡುತ್ತವೆ. ದೀರ್ಘ ಕಾಲ ಬಾಕಿಯಿದ್ದ ಬಾಕಿಗಳು ಕೊನೆಗೂ ದೊರಕುತ್ತವೆ.

ನೀವು ಪ್ರೀತಿಪಾತ್ರರ ಜೊತೆ ವಾದಗಳಿಗೆ ಕಾರಣವಾಗಬಹುದಾದ ವಿವಾದಾತ್ಮಕ ವಿಷಯಗಳನ್ನು ತಪ್ಪಿಸಬೇಕು. ಪ್ರೀತಿ ಯಾವಾಗಲೂ ಭಾವಪೂರ್ಣವಾಗಿದೆ, ಮತ್ತು ನೀವು ಇಂದು ಇದನ್ನು ಅನುಭವಿಸುತ್ತೀರಿ. ನಿಮ್ಮ ಬಾಸ್ ಇಂದು ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು.

ಅದೃಷ್ಟ ಸಂಖ್ಯೆ: 2

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಕನ್ಯಾ ರಾಶಿ:

ಇಂದು ಹಿಂದಿನ ಕೆಟ್ಟ ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ -ನೀವು ಮುಂದೇನು ಮಾಡಬೇಕೆಂದು ನಿರ್ಧರಿಸಲಾಗದೇ ಸಿಲುಕಿಕೊಂಡಿರಬಹುದು. ಇತರರಿಂದ ಸಹಾಯ ಪಡೆಯಿರಿ ಇನ್ನೂ ಸಂಬಳ ಪಡೆಯದವರು, ಇಂದು ಅವರು ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು ಮತ್ತು ನಿಮ್ಮ ಸ್ನೇಹಿತರಿಂದ ಸಾಲವನ್ನು ಕೇಳಬಹುದು.

ಸಮುದ್ರದಾಚೆಯ ಸಂಬಂಧಿಯಿಂದ ಒಂದು ಉಡುಗೊರೆ ನಿಮ್ಮನ್ನು ಸಂತೋಷಪಡಿಸುತ್ತದೆ. ದೀರ್ಘಕಾಲದ ನಂತರ ನಿಮ್ಮ ಸ್ನೇಹಿತರಿಗೆ ಸಂಧಿಸುವ ವಿಚಾರ ನಿಮ್ಮ ಮನಸ್ಸಿನೆಲ್ಲೆಡೆ ತುಂಬಿರುತ್ತದೆ.

ಅದೃಷ್ಟ ಸಂಖ್ಯೆ: 5

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ತುಲಾ ರಾಶಿ:

ಮಕ್ಕಳೊಂದಿಗೆ ಆಟವಾಡುವುದು ನಿಮಗೆ ಯಾವತ್ತೂ ಅದ್ಭುತ ಚಿಕಿತ್ಸೆಯ ಅನುಭವ ನೀಡುತ್ತದೆ. ಪ್ರಮುಖ ಜನರು ವಿಶೇಷ ವರ್ಗ ಹೊಂದಿರುವ ಯಾವುದಕ್ಕಾದರೂ ಹಣಕಾಸು ನೀಡಲು ಸಿದ್ಧವಾಗಿರುತ್ತಾರೆ.

ನಿಮ್ಮ ಹಠಮಾರಿ ವರ್ತನೆ ನಿಮ್ಮ ಹತ್ತಿರದ ಸ್ನೇಹಿತರು ಹಾಗೂ ಮನೆಯಲ್ಲಿರುವವರಿಗೂ ನೋವುಂಟುಮಾಡುತ್ತದೆ. ನಿಮ್ಮ ಪ್ರೀತಿಯ ಸಂಗಾತಿ ಇಂದು ಏನಾದರೂ ಸುಂದರವಾದದ್ದನ್ನು ಮಾಡಿ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತಾರೆ. ಹೊಸ ವಿಚಾರಗಳನ್ನು ಉತ್ಪಾದಕವಾಗಿರುತ್ತವೆ.

ಅದೃಷ್ಟ ಸಂಖ್ಯೆ: 7

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವೃಶ್ಚಿಕ ರಾಶಿ:

ನಿಮ್ಮ ಆಕರ್ಷಕ ವರ್ತನೆ ಗಮನ ಸೆಳೆಯುತ್ತದೆ. ಇಂದು ಹಣದ ನಷ್ಟವು ಸಂಭವಿಸಬಹುದು. ಆದ್ದರಿಂದ ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಎಷ್ಟು ಜಾಗರೂಕರಾಗಿರುತ್ತಿರೋ ಅಷ್ಟೇ ನಿಮಗೆ ಉತ್ತಮವಾಗಿರುತ್ತದೆ ನೀವು ಸಂಭ್ರಮಾಚರಣೆಯ ಮನಸ್ಥಿತಿಯಲ್ಲಿರುತ್ತೀರಿ ಮತ್ತು ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಮೇಲೆ ಹಣ ಖರ್ಚು ಮಾಡುವುದನ್ನು ಆನಂದಿಸುತ್ತೀರಿ.

ನಿಮ್ಮ ಪ್ರೇಮಿಯ ಜೊತೆ ಹೊರಹೋದಾಗ ನಿಮ್ಮ ರೂಪ ಮತ್ತು ವರ್ತನೆಯಲ್ಲಿ ನೈಜತೆಯಿರಲಿ. ವೆಬ್ ಡಿಸೈನರ್‌ಗಳು ಒಳ್ಳೆಯ ದಿನ ಹೊಂದಿರುತ್ತಾರೆ.

ಅದೃಷ್ಟ ಸಂಖ್ಯೆ: 1

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಧನುಸ್ಸು ರಾಶಿ:

ಸಂತೋಷದಿಂದಿರಲು ನಿಮ್ಮ ಆಕಾಂಕ್ಷೆಗಳನ್ನು ಪರಿಶೀಲಿಸಿ. ಯೋಗದ ಸಹಾಯ ತೆಗೆದುಕೊಳ್ಳಿ – ಇದು ನಿಮಗೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಿಮ್ಮ ಮನೋಧರ್ಮವನ್ನು ಸುಧಾರಿಸುವ ಆರೋಗ್ಯಕರ ಜೀವನ ಕಲೆ ಕಲಿಸುತ್ತದೆ.

ಇಂದು ನೀವು ನಿಮ್ಮ ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.

ನಿಮ್ಮ ಮಕ್ಕಳ ಜೊತೆ ಒಂದು ಆರೋಗ್ಯಕರ ಸಂಬಂಧವನ್ನು ಉತ್ತೇಜಿಸಿ. ಕಳೆದದ್ದನ್ನು ಮರೆತುಬಿಡಿ ಹಾಗೂ ಪ್ರಖರವಾದ ಹಾಗೂ ಸಂತಸದ ಸಮಯಗಳನ್ನು ಎದುರುನೋಡಿ.

ಅದೃಷ್ಟ ಸಂಖ್ಯೆ: 1

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಮಕರ ರಾಶಿ:

ನಿಮ್ಮ ಸಂಗಾತಿಯ ನಿಷ್ಠಾವಂತ ಹೃದಯ ಮತ್ತು ಅದ್ಭುತ ಚೈತನ್ಯ ನಿಮಗೆ ಸಂತೋಷ ನೀಡಬಹುದು. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಒಂದು ಪರಿಪೂರ್ಣ ಅವಕಾಶವಾಗಿರುತ್ತದೆ.

ಪ್ರೀತಿಪಾತ್ರರು ಪ್ರಣಯದ ಮೂಡ್‌ನಲ್ಲಿರುತ್ತಾರೆ. ಸಹೋದ್ಯೋಗಿಗಳು ಮತ್ತು ಹಿರಿಯರ ಸಂಪೂರ್ಣ ಸಹಕಾರದಿಂದ ಕಛೇರಿಯಲ್ಲಿ ಕೆಲಸ ಬೇಗ ಮುಗಿಯುತ್ತದೆ.

ಅದೃಷ್ಟ ಸಂಖ್ಯೆ: 4

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಕುಂಭ ರಾಶಿ:

ಲೆಕ್ಕವಿಲ್ಲದಷ್ಟು ಗಾಬರಿಗಳು ನಿಮ್ಮ ಪ್ರತಿರೋಧಕತೆ ಮತ್ತು ಆಲೋಚನಾ ಶಕ್ತಿಯನ್ನು ದುರ್ಬಲಗೊಳಿಸಬಹುದು. ಸಕಾರಾತ್ಮಕ ಚಿಂತನೆಯ ಜೊತೆ ಈ ರೋಗದ ವಿರುದ್ಧ ಹೋರಾಡಲು ಪ್ರಯತ್ನಿಸಿ. ನಿಮಗಾಗಿ ಹಣವನ್ನು ಉಳಿಸುವ ನಿಮ್ಮ ಬಯಕೆ ಇಂದು ಪೂರ್ಣಗೊಳ್ಳಬಹುದು.

ಇಂದು ನೀವು ಸೂಕ್ತವಾಗಿ ಉಳಿಸಲು ಸಾಧ್ಯವಾಗುತ್ತದೆ. ಮೊಮ್ಮಕ್ಕಳು ಅಪಾರ ಸಂತೋಷದ ಮೂಲವಾಗುತ್ತಾರೆ. ನೀವು ಏನು ಮಾಡಬೇಕೆಂದು ಆಜ್ಞೆ ನೀಡಿದಲ್ಲಿ ನಿಮ್ಮ ಪ್ರೇಮಿಯ ಜೊತೆ ಗಂಭೀರ ಸಮಸ್ಯೆಗಳನ್ನು ಹೊಂದುತ್ತೀರಿ. ಹೊಸ ವಿಚಾರಗಳನ್ನು ಉತ್ಪಾದಕವಾಗಿರುತ್ತವೆ.

ಅದೃಷ್ಟ ಸಂಖ್ಯೆ: 2

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಮೀನ ರಾಶಿ:

ಒಬ್ಬ ಸ್ನೇಹಿತ ನಿಮ್ಮ ಮುಕ್ತ ಮನಸ್ಸು ಮತ್ತು ಸಹಿಷ್ಣುತೆಯ ಪರಮಾವಧಿಯನ್ನು ಪರೀಕ್ಷಿಸಬಹುದು. ನೀವು ನಿಮ್ಮ ಮೌಲ್ಯಗಳೊಂದಿಗೆ ರಾಜಿಯಾಗದಿರುವಂತೆ ಮತ್ತು ಸಕಾರಣವಾದ ನಿರ್ಧಾರಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ವಹಿಸಬೇಕು.

ಹಣದ ಚಲನೆ ದಿನವಿಡೀ ಮುಂದುವರಿಯುತ್ತದೆ ಮತ್ತು ದಿನದ ಅಂತ್ಯದ ನಂತರ ನೀವು ಉಳಿಸಲು ಸಾಧ್ಯವಾಗುತ್ತದೆ. ಸಂಬಂಧಿಗಳಿದ್ದಲ್ಲಿ ಸಣ್ಣ ಪ್ರಯಾಣ ನಿಮ್ಮ ದೈನಂದಿನ ಒತ್ತಡದ ಜೀವನದಿಂದ ನಿಮಗೆ ಸುಖ ಮತ್ತು ವಿಶ್ರಾಂತಿಯನ್ನು ತರುತ್ತದೆ ಪ್ರೀತಿ ನಿಮ್ಮ ಪ್ರೀತಿಪಾತ್ರರೊಡನೆ ಹಂಚಿಕೊಳ್ಳಬೇಕಾದ ಭಾವನೆ.

ಅದೃಷ್ಟ ಸಂಖ್ಯೆ: 8

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಲಾಕ್ ಡೌನ್ ಅಂತ ಈಗ್ಲೇ ಅಂಗಡಿಗೆ ಹೋಗ್ಬೇಡಿ: ಸಿಗಲಿದೆ ಅಗತ್ಯ ವಸ್ತು

Posted: 24 Mar 2020 08:31 AM PDT

ಕರ್ನಾಟಕದಲ್ಲಿ ಹೆಸರಿಗೆ ಮಾತ್ರ ಲಾಕ್ ಡೌನ್ ಪಾಲನೆಯಾಗ್ತಾಯಿತ್ತು. ಮಾರ್ಚ್ 31ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಆದ್ರೀಗ ಕರ್ನಾಟಕದಲ್ಲಿ ಲಾಕ್ ಡೌನ್ ಏಪ್ರಿಲ್ 14ರವರೆಗೆ ಮುಂದೂಡಲಾಗಿದೆ. ನಾಳೆಯಿಂದಲಾದ್ರೂ ಲಾಕ್ ಡೌನ್ ಗಂಭಿರವಾಗಿ ಕರ್ನಾಟಕದಲ್ಲಿ ಜಾರಿಗೆ ಬರಲಿದೆಯಾ ಎಂಬ ಪ್ರಶ್ನೆ ಮನೆ ಮಾಡಿದೆ.

ನರೇಂದ್ರ ಮೋದಿ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. 21 ದಿನಗಳ ಕಾಲ ಲಾಕ್ ಡೌನ್ ಘೋಷಣೆಯಾಗಿದೆ ಎಂಬ ಕಾರಣಕ್ಕೆ ಜನರು ಭಯಪಡುವ ಅಗತ್ಯವಿಲ್ಲ. ಜನರಿಗೆ ಅಗತ್ಯ ವಸ್ತುಗಳು ಸಿಗಲಿವೆ. ಹಾಲು, ತರಕಾರಿ, ಆಸ್ಪತ್ರೆ, ಔಷಧಿ ಅಂಗಡಿಗಳು ತೆರೆದಿರಲಿವೆ. ನಿಮಗೆ ಬೇಕಾದ ವಸ್ತುಗಳನ್ನು ನೀವು ಖರೀದಿ ಮಾಡಬಹುದು. 21 ದಿನ ಲಾಕ್ ಡೌನ್ ಅಂತಾ ಈಗ್ಲೇ ಅಂಗಡಿ ಮುಂದೆ ಸಾಲಿನಲ್ಲಿ ನಿಲ್ಲಬೇಡಿ.

ಹಾಗಂತ ತರಕಾರಿ ಹೆಸರಿನಲ್ಲಿ ದಯವಿಟ್ಟು ಅನವಶ್ಯಕವಾಗಿ ರಸ್ತೆ ಸುತ್ತಾಡಬೇಡಿ. ಅಗತ್ಯವಿದ್ರೆ ಮಾತ್ರ ರಸ್ತೆಗಿಳಿಯಿರಿ. ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಬೇಕಾದ ವಸ್ತುಗಳನ್ನು ತನ್ನಿ. ಪ್ರಧಾನಿ ಹೇಳಿದ ಮಾತನ್ನು ದಯವಿಟ್ಟು ಪಾಲನೆ ಮಾಡಿ.

BIG NEWS: ಸಾಮೂಹಿಕ ನಾಶದ ಉದ್ದೇಶದಿಂದ ‘ಜೈವಿಕ ಅಸ್ತ್ರ’ ಕೊರೋನಾ ವೈರಸ್ ಸೃಷ್ಠಿಸಿದ ಚೀನಾ ವಿರುದ್ಧ ಅಮೆರಿಕದಲ್ಲಿ ಕೇಸ್ ದಾಖಲು

Posted: 24 Mar 2020 08:28 AM PDT

ಕೊರೋನಾ ವೈರಸ್ ನಿಂದಾಗಿ ಪ್ರಪಂಚದಲ್ಲಿ ತಲ್ಲಣಕ್ಕೆ ಕಾರಣವಾಗಿರುವ ಚೀನಾ ದೇಶದ ವಿರುದ್ಧ ಅಮೆರಿಕದ ಟೆಕ್ಸಾಸ್ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿದೆ.

ಕೊರೋನಾ ಸೋಂಕು ಹರಡಿದ ಕಾರಣಕ್ಕೆ ಚೀನಾ ದೇಶದಿಂದ ನಷ್ಟ ಪರಿಹಾರ ಕೋರಿ ಟೆಕ್ಸಾಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. 20 ಟ್ರಿಲಿಯನ್ ಡಾಲರ್ ಪರಿಹಾರ ಕೋರಿ ಚೀನಾದ ವುಹಾನ್ ವೈರಾಲಜಿ ಇನ್ಸ್ಟಿಟ್ಯೂಟ್, ಚೀನಾ ಸರ್ಕಾರ, ಚೀನಾದ ಮಿಲಿಟರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅಮೆರಿಕ ಪ್ರಜೆ ಲ್ಯಾರಿ ಕ್ಲೈಮ್ಯಾನ್ ಅವರಿಂದ ಪ್ರಕರಣ ದಾಖಲಿಸಲಾಗಿದೆ. ಚೀನಾ ಕೋರೋನಾ ಜೈವಿಕ ಅಸ್ತ್ರವನ್ನು ಸೃಷ್ಟಿಸಿ ಹರಡಿದೆ. ಚೀನಾ ದೇಶವೇ ವೈರಸ್ ಸೃಷ್ಟಿಸಿ ಬೇರೆ ದೇಶಗಳಿಗೆ ಹರಡಿದೆ ಎಂದು ಆರೋಪಿಸಲಾಗಿದೆ.

ಮಾರ್ಚ್ 15 ರವರೆಗೆ ಅಮೆರಿಕದಲ್ಲಿ ಮೂರು ಸಾವಿರ ಜನರಿಗೆ ಸೋಂಕು ತಗುಲಿದ್ದು, 61 ಜನ ಮೃತಪಟ್ಟಿದ್ದಾರೆ. ಕೋರೋನಾ ಸೃಷ್ಠಿಸಿ ಬಿಡುಗಡೆ ಮಾಡಿರುವುದು ಸಾಮೂಹಿಕ ನಾಶದ ಉದ್ದೇಶವಾಗಿದೆ. ಇದೊಂದು ಭಯೋತ್ಪಾದನೆ ಕೃತ್ಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

BIG NEWS: ಇಂದು ರಾತ್ರಿಯಿಂದ 21 ದಿನ ಇಡೀ ದೇಶವೇ ಬಂದ್ – ಕೈಮುಗಿದು ಬೇಡುವೆ, ಮನೆಯಲ್ಲೇ ಇರಿ, ಮೋದಿ ಕರೆ

Posted: 24 Mar 2020 08:07 AM PDT

ನವದೆಹಲಿ: ಕೈ ಮುಗಿದು ಬೇಡುತ್ತೇನೆ, ದಯಮಾಡಿ ಮನೆಯಲ್ಲೇ ಇರಿ. ನಿಮಗೆ ನೀವೇ ಒಂದು ಲಕ್ಷ್ಮಣರೇಖೆ ಹಾಕಿಕೊಳ್ಳಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಕೊರೋನಾ ವೈರಸ್ ತಡೆಯುವ ಉದ್ದೇಶದಿಂದ ಕೈಗೊಂಡ ಕ್ರಮಗಳ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ನಮಗಾಗಿ ಕೆಲಸ ಮಾಡುತ್ತಿರುವವರ ಬಗ್ಗೆ ಯೋಚನೆ ಮಾಡಿ. ಪೊಲೀಸರ ಬಗ್ಗೆ ಯೋಚಿಸಿ, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳ ಬಗ್ಗೆ ಯೋಚನೆ ಮಾಡಿ. ಕಳೆದ 67 ದಿನದಲ್ಲಿ ವಿಶ್ವದಲ್ಲಿ ಒಂದು ಲಕ್ಷ ಜನರಿಗೆ ಸೋಂಕು ತಗುಲಿತ್ತು. ಈಗ 11 ದಿನದಲ್ಲಿ ಒಂದು ಲಕ್ಷ ಜನರಿಗೆ ಸೋಂಕು ತಗುಲಿದೆ. ಮತ್ತೆ ಒಂದು ಲಕ್ಷ ಜನರಿಗೆ ಸೋಂಕು ತಗಲಲು ಕೇವಲ ಮೂರೇ ಮೂರು ದಿನ ಸಾಕು, ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ 21 ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಹೊಂದಿರುವ ಮುಂದುವರೆದ ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ತಡೆಯಲು ಪರದಾಟ ನಡೆಸಲಾಗಿದೆ. ಅಂತಹ ರಾಷ್ಟ್ರಗಳಲ್ಲಿ ಈ ರೀತಿ ಇರುವಾಗ ನಮ್ಮ ಪರಿಸ್ಥಿತಿ ಹೇಗಿರಬೇಡ? ಯೋಚನೆ ಮಾಡಿ. ಈ ಕ್ಷಣದಿಂದಲೇ ನಾವೆಲ್ಲರೂ ಸಂಕಲ್ಪ ಮಾಡೋಣ. ಯಾರೂ ಮನೆಗಳಿಂದ ಹೊರ ಬರಬೇಡಿ ಎಂದು ಮೋದಿ ಮನವಿ ಮಾಡಿದ್ದಾರೆ. ಇಂದು ರಾತ್ರಿಯಿಂದ ದೇಶಾದ್ಯಂತ ಲಾಕ್ಡೌನ್ ಆಗಲಿದ್ದು, ಮುಂದಿನ 21 ದಿನಗಳ ಕಾಲ ಮನೆಯಲ್ಲೇ ಉಳಿಯಿರಿ. ಪ್ರಧಾನಿಯಾಗಿ ಹೇಳುತ್ತಿಲ್ಲ, ನಿಮ್ಮ ಕುಟುಂಬದ ಸದಸ್ಯನಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ.

BIG BREAKING NEWS: ಕೊರೊನಾ ತಡೆಗೆ 15 ಸಾವಿರ ಕೋಟಿ ಪ್ಯಾಕೇಜ್, ಕಾನೂನು ಪಾಲಿಸಿ ಎಂದ ಮೋದಿ

Posted: 24 Mar 2020 08:06 AM PDT

ಕೊರೊನಾ ತಡೆಗೆ 15 ಸಾವಿರ ಕೋಟಿ ಪ್ಯಾಕೇಜ್ ನೀಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ವೈದ್ಯಕೀಯ ಉಪಕರಣ, ವೈದ್ಯಕೀಯ ಸೌಲಭ್ಯ ಖರೀದಿಗೆ ಮೋದಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಕೊರೊನಾ ಲಕ್ಷಣಗಳು ಕಂಡು ಬಂದ್ರೆ ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆ ಸೇವನೆ ಮಾಡಬೇಡಿ. ಇದು ನಿಮ್ಮನ್ನು ಮತ್ತಷ್ಟು ಆಪತ್ತಿಗೆ ತಳ್ಳಬಹುದು ಎಂದು ಮೋದಿ ಹೇಳಿದ್ದಾರೆ. ನಾನು ಪ್ರಧಾನಿಯಾಗಿ ಇದನ್ನು ಹೇಳ್ತಿಲ್ಲ ಎಂದು ಮೋದಿ ಹೇಳಿದ್ದಾರೆ. ಮನೆಯಲ್ಲಿಯೇ ಇದ್ದು ಸಮಯ ಕಳೆಯಿರಿ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಸಮಯ ಕಳೆಯಿರಿ ಎಂದು ಮೋದಿ ಸಲಹೆ ನೀಡಿದ್ದಾರೆ.

ನಿಮ್ಮ, ನಿಮ್ಮವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆತ್ಮರಕ್ಷಣೆ ಜೊತೆ ಕಾನೂನಿನ ಪಾಲನೆ ಮಾಡಿ. ಎಲ್ಲಿದ್ದೀರೋ ಅಲ್ಲಿಯೇ ಇರಿ ಎಂದು ಮೋದಿ ಸಲಹೆ ನೀಡಿದ್ದಾರೆ. ಎಲ್ಲರೂ ಒಂದಾಗಿ ಈ ಸಂಕಟವನ್ನು ಎದುರಿಸೋಣವೆಂದು ಮೋದಿ ಹೇಳಿದ್ದಾರೆ.

ಬಿಗ್ ನ್ಯೂಸ್: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ದಾರಿ ತೋರಿಸಿದ ಮೋದಿ

Posted: 24 Mar 2020 07:54 AM PDT

ನವದೆಹಲಿ: ಮಾರ್ಚ್ 22 ರಂದು ಜನತಾ ಕರ್ಫ್ಯೂಗೆ ಕರೆ ನೀಡಲಾಗಿದ್ದು ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಬೆಂಬಲ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕೊರೋನಾ ವೈರಸ್ ತಡೆಯುವ ಉದ್ದೇಶದಿಂದ ಎಲ್ಲರೂ ಹೋರಾಟ ನಡೆಸಬೇಕಿದೆ. ವಿಶ್ವದ ಸಮರ್ಥ ದೇಶಗಳನ್ನು ಕೋರೋನಾ ವೈರಸ್ ಸಂಕಷ್ಟಕ್ಕೆ ದೂಡಿದೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಭಾರತೀಯರು ಜನತಾ ಕರ್ಫ್ಯೂ ಬೆಂಬಲಿಸಿ ಸಫಲವನ್ನಾಗಿ ಮಾಡಿದಂತೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಲಾಕ್ ಡೌನ್ ಬೆಂಬಲಿಸಬೇಕೆಂದು ಹೇಳಿದ್ದಾರೆ.

ಎಷ್ಟೇ ನಿಯಂತ್ರಣಕ್ಕೆ ಕ್ರಮಕೈಗೊಂಡಿದ್ದರೂ ಕೊರೋನಾ ವೈರಸ್ ಹೆಚ್ಚುತ್ತಿದ್ದು ಇದರ ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಒಂದು ಮಾರ್ಗವಾಗಿದೆ ಎಂದು ತಿಳಿಸಿದ್ದಾರೆ.

ಇಂದು ರಾತ್ರಿ 12 ಗಂಟೆಯಿಂದ ಇಡೀ ದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಆಗಲಿದೆ. 21 ದಿನಗಳ ಕಾಲ ಜನ ಮನೆಯಲ್ಲೇ ಉಳಿಯಬೇಕೆಂದು ಮೋದಿ ತಿಳಿಸಿದ್ದಾರೆ. ಕೈಜೋಡಿಸಿ ಮನವಿ ಮಾಡುತ್ತೇನೆ. ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ. ಪ್ರಧಾನಿಯಿಂದ ಗ್ರಾಮದ ಕಟ್ಟ ಕಡೆಯ ವ್ಯಕ್ತಿಯವರೆಗೆ ಅಂತರ ಕಾಯ್ದುಕೊಳ್ಳಬೇಕೆಂದು ಕರೆ ನೀಡಿದ್ದಾರೆ.

ವೈರಲ್ ಆಗುತ್ತಿದೆ ಈ ಪರಿವಾರದ ‘ಡ್ಯಾನ್ಸ್’ ವಿಡಿಯೋ

Posted: 24 Mar 2020 07:53 AM PDT

ಕೊರೊನಾವೈರಸ್ ಭಯದಿಂದ ಜಗತ್ತಿನಾದ್ಯಂತ ಎಲ್ಲರನ್ನು ಮನೆಯಲ್ಲೇ ಇರಲು ಹೇಳಲಾಗುತ್ತಿದ್ದು ಜನ ಮನೆಯಲ್ಲೇ ಸುಮ್ಮನೆ ಇರಲು ಕಷ್ಟ ಪಡುತ್ತಿದ್ದಾರೆ. ಹಲವರು ಮನೆಯಲ್ಲೇ ಇದ್ದು ಏನು ಮಾಡಬೇಕೆಂದು ಸಲಹೆ ನೀಡುತ್ತಿದ್ದಾರೆ.

ಆದರೆ ಇದೀಗ ಒಂದು ಪರಿವಾರ ಈ ಸಮಯದಲ್ಲಿ ಕುಣಿದು ತಾವೂ ಖುಷಿ ಪಡುತ್ತಿದ್ದು ನೆಟ್ಟಿಗರಿಗೂ ಟೈಮ್ ಪಾಸ್ ಆಗುವಂತೆ ಮಾಡಿದ್ದಾರೆ.

ವಿಡಿಯೋದಲ್ಲಿ ಅಮ್ಮ ಮುನ್ನೆಲೆಯಲ್ಲಿ ಹಿಪ್ ಹಾಪ್ ಹಾಡಿಗೆ ಕುಣಿಯುತ್ತಿದ್ದು ಅವಳ ಪತಿ ಹಾಗೂ ಮಗ ಅವಳನ್ನು ಅನುಸರಿಸುತ್ತಿರುವುದು ಕಾಣುತ್ತದೆ.

ನೈಜೀರಿಯಾದ ಗಾಯಕ ಡಾನ್ ಈಜಿ ಈ ವಿಡಿಯೋ ಹಂಚಿದ್ದು ಅದು ವೈರಲ್ ಆಗಿದೆ. ಹಲವರು ಅವರ ಕುಣಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಇಂತಹ ಸಮಯದಲ್ಲಿ ಇದು ಬೇಕಾಗಿದೆ ಎಂದಿದ್ದಾರೆ.

ಮಧ್ಯರಾತ್ರಿ 12 ಗಂಟೆ ನಂತ್ರ ದೇಶ ಲಾಕ್ ಡೌನ್: 21 ದಿನಗಳ ಕಾಲ ಕರ್ಫ್ಯೂ ಎಂದ ಮೋದಿ

Posted: 24 Mar 2020 07:48 AM PDT

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇಂದು ಮಧ್ಯರಾತ್ರಿ 12 ಗಂಟೆ ನಂತ್ರ ಇಡೀ ದೇಶವನ್ನು ಲಾಕ್ ಡೌನ್ ಮಾಡ್ತಿದ್ದಾರೆ. ಇದು ಕರ್ಫ್ಯೂ ರೀತಿಯಲ್ಲಿರುತ್ತದೆ ಎಂದು ಮೋದಿ ಹೇಳಿದ್ದಾರೆ. ಪ್ರತಿ ನಗರ, ಹಳ್ಳಿಗಳಲ್ಲೂ ಲಾಕ್ ಡೌನ್ ಎಂದು ಮೋದಿ ಹೇಳಿದ್ದಾರೆ.

ಪ್ರತಿ ಕುಟುಂಬ, ಪ್ರತಿ ನಾಗರೀಕರಿಗೆ ಇದು ಅವಶ್ಯಕ. 21 ದಿನಗಳ ಕಾಲ ಭಾರತ ಲಾಕ್ ಡೌನ್ ಆಗಲಿದೆ. ಒಂದು ವೇಳೆ 21 ದಿನದ ನಂತ್ರವೂ ದೇಶ ನಿಯಂತ್ರಣಕ್ಕೆ ಬರದೆ ಹೋದಲ್ಲಿ ಅನೇಕ ದೇಶ 21 ವರ್ಷಗಳ ಹಿಂದೆ ಹೋಗಲಿದೆ. ಅನೇಕ ಕುಟುಂಬಗಳು ನಾಶವಾಗಲಿವೆ ಎಂದು ಮೋದಿ ಹೇಳಿದ್ದಾರೆ. ಏಪ್ರಿಲ್ 15ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಸಾಮಾಜಿಕ ಅಂತರ ಬಹಳ ಮುಖ್ಯ. ಸಾಮಾಜಿಕ ಅಂತರದಿಂದ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ. ಹಾಗಾಗಿ ಮನೆಯಿಂದ ಹೊರಗೆ ಹೋಗಬೇಡಿ. 15 ದಿನಗಳ ಕಾಲ ಮನೆಯಲ್ಲೇ ಇರಿ. ಮನೆ ಮುಂದೆ ಲಕ್ಷ್ಮಣ ರೇಖೆ ಹಾಕಿ ಎಂದು ಮೋದಿ ಹೇಳಿದ್ದಾರೆ. ನಿಮ್ಮ ಒಂದು ನಿರ್ಧಾರ ಕೊರೊನಾ ನಿಯಂತ್ರಿಸಬಲ್ಲದು ಎಂದು ಮೋದಿ ಹೇಳಿದ್ದಾರೆ.

ಬಿಗ್ ನ್ಯೂಸ್: ಇಂದು ರಾತ್ರಿ 12 ಗಂಟೆಯಿಂದ ದೇಶಾದ್ಯಂತ ಸಂಪೂರ್ಣ ಬಂದ್ ಮಾಡಲು ಮೋದಿ ಆದೇಶ

Posted: 24 Mar 2020 07:45 AM PDT

ನವದೆಹಲಿ: ಇಂದು ರಾತ್ರಿ 12 ಗಂಟೆಯಿಂದ ಇಡೀ ದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಕರೆ ನೀಡಿದ್ದು, ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಪರಿಸ್ಥಿತಿ ಕೈಮೀರುವ ಹಂತದಲ್ಲಿ ಇಂದು ರಾತ್ರಿ 12 ಗಂಟೆಯಿಂದ ಇಡೀ ದೇಶ ಸಂಪೂರ್ಣ ಲಾಕ್ ಡೌನ್ ಆಗಲಿದೆ.

ದೇಶಾದ್ಯಂತ ಲಾಕ್ ಡೌನ್ ಮಾಡಲಾಗುವುದು. ಜನತಾ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಚೀನಾ ಕಾಡ್ತಿರುವ ಮತ್ತೊಂದು ವೈರಸ್ ಹರಡೋದು ಹೇಗೆ ಗೊತ್ತಾ…?

Posted: 24 Mar 2020 07:30 AM PDT

चीन में अब हंता वायरस से मौत, जानें कैसे फैलता है ये वायरस?

ಚೀನಾದಲ್ಲಿ ಕೊರೊನಾ ವೈರಸ್ ಜೊತೆ ಇನ್ನೊಂದು ವೈರಸ್ ಹರಡುವ ಭೀತಿ ಎದುರಾಗಿದೆ. ಹಂಟಾ ವೈರಸ್ ಗೆ ಈಗಾಗಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಹಂಟಾ ವೈರಸ್ ಒಂದು ವೈರಸ್ ಅಲ್ಲ. ಅದು ಅನೇಕ ವೈರಸ್ ಗಳ ಸಮೂಹ. ಈ ವೈರಸ್ ಇಲಿಗಳಿಂದ ಹರಡುತ್ತದೆ.

ವಿಶೇಷವೆಂದ್ರೆ ಈ ವೈರಸ್ ಇಲಿಗಳಿಂದ ಹರಡುವುದಾದ್ರೂ ಇಲಿಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಹಂಟಾ ವೈರಸ್ ಈಗಾಗಲೇ ಏಷ್ಯಾ, ಆಫ್ರಿಕಾ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಇದೆ. ಇದು ಮನುಷ್ಯರಿಗೆ ಅನೇಕ ರೀತಿಯ ಖಾಯಿಲೆಗಳನ್ನು ಹರಡುತ್ತದೆ.

ಸೌಮ್ಯ ಜ್ವರ ಅಥವಾ ಜ್ವರದಿಂದ ತೀವ್ರ ಉಸಿರಾಟದ ತೊಂದರೆ ಸೇರಿದೆ. ಇದು ನಿರಂತರ ರಕ್ತಸ್ರಾವ ಮತ್ತು ಮೂತ್ರಪಿಂಡದ ಕಾಯಿಲೆಗೂ ಕಾರಣವಾಗಬಹುದು. ಅಮೆರಿಕಾದಲ್ಲಿ ಕಂಡುಬರುವ ಹಂಟಾ ವೈರಸ್  ನ್ಯೂ ವರ್ಲ್ಡ್ ಹಂಟಾ ವೈರಸ್ ಎಂದು ಕರೆಯಲಾಗುತ್ತದೆ. ಇದು ತೀವ್ರ ಉಸಿರಾಟದ ಕಾಯಿಲೆಗೆ ಕಾರಣವಾಗಬಹುದು. ಇದನ್ನು ಹಂಟಾ ವೈರಸ್ ಪಲ್ಮನರಿ ಸಿಂಡ್ರೋಮ್ (ಎಚ್‌ಪಿಎಸ್) ಎಂದೂ ಕರೆಯುತ್ತಾರೆ.

ಬೇರೆ ಬೇರೆ ಇಲಿಗಳ ಜಾತಿಗಳಲ್ಲಿ ವಿಭಿನ್ನ ವೈರಸ್‌ಗಳು ಕಂಡು ಬರುತ್ತವೆ. ಈ ವೈರಸ್‌ಗಳು ಸಾಮಾನ್ಯವಾಗಿ ಇಲಿಗಳ ಮೂತ್ರ ಮತ್ತು ಮಲದಲ್ಲಿ ಕಂಡುಬರುತ್ತವೆ. ಮಲ, ಮೂತ್ರವನ್ನು ಮುಟ್ಟಿದ ಕೈನಲ್ಲಿ ಮುಖ, ಮೂಗು ಮುಟ್ಟಿಕೊಂಡ್ರೆ ವೈರಸ್ ಮನುಷ್ಯನ ದೇಹ ಸೇರುತ್ತದೆ. ಇದು ಸಾಂಕ್ರಾಮಿಕ ರೋಗವಲ್ಲ.

ಕೊರೋನಾ ವೈರಸ್: ಹೀಗೆ ಮಾಡದಿರಿ – ಅನುಸರಿಸಬಾರದ ಕ್ರಮಗಳೇನು ಗೊತ್ತಾ…?

Posted: 24 Mar 2020 07:27 AM PDT

ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಅನೇಕ ಕ್ರಮಕೈಗೊಂಡಿದೆ. ಜನ ಸೋಂಕು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಿದೆ.

ಹಸ್ತಲಾಘವ ಮಾಡಬಾರದು.

ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದಲ್ಲಿ ಬೇರೆ ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು. ಅಂತಹವರು ಕಣ್ಣುಗಳು, ಮೂಗು ಮತ್ತು ಬಾಯನ್ನು ಸ್ಪರ್ಶಿಸಿಕೊಳ್ಳಬಾರದು.

ಅಂಗೈಗಳನ್ನು ಬಳಸಿ ಸೀನವುದು ಮತ್ತು ಕೆಮ್ಮುವುದನ್ನು ಮಾಡಬಾರದು.

ಸಾರ್ವಜನಿಕ ಸ್ಥಳಗಳಲ್ಲಿ ಉಗಿಯಬಾರದು.

ಅನಗತ್ಯವಾಗಿ ಪ್ರಯಾಣಿಸಬಾರದು ಅದರಲ್ಲೂ ಕೊರೊನಾ ಸೋಂಕು ಬಾಧಿತ ಪ್ರದೇಶಗಳಿಗೆ ಪ್ರಯಾಣಿಸಬಾರದು.

ಸಾರ್ವಜನಿಕ ಕೂಟ/ ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸಬಾರದು ಹಾಗೂ ಕ್ಯಾಂಟಿನ್‍ಗಳಲ್ಲಿ ಗುಂಪಾಗಿ ಕುಳಿತುಕೊಳ್ಳಬಾರದು.

ಜಿಮ್, ಕ್ಲಬ್ ಹಾಗೂ ಜನಸಂದಣಿಯಿಂದ ಕಿಕ್ಕಿರಿದ ಪ್ರದೇಶ ಮುಂತಾದವುಗಳಿಗೆ ಭೇಟಿ ನೀಡಬಾರದು.

ಕೊರೋನಾ ಬಗ್ಗೆ ವದಂತಿಗಳನ್ನು ಹಬ್ಬಿಸಬಾರದು ಹಾಗೂ ಭಯಪಡಬಾರದು.

ರೋಗ ಲಕ್ಷಣಗಳಿದಲ್ಲಿ ರಾಜ್ಯದ ಸಹಾಯವಾಣಿ ಸಂಖ್ಯೆ -104, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ-080-46848600 ಮತ್ತು 080-66692000, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ 24X7 ಸಹಾಯವಾಣಿ ಸಂಖ್ಯೆ 011-23978046 ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

GOOD NEWS: 3.5 ಕೋಟಿ ಕಾರ್ಮಿಕರ ಖಾತೆಗೆ ಡಿಬಿಟಿ ಯೋಜನೆ ಮೂಲಕ ಹಣ ಹಾಕಲು ಸೂಚನೆ

Posted: 24 Mar 2020 07:24 AM PDT

ಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಘೋಷಣೆಯಾಗಿದ್ದು ಇದು ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ. ಜನರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ನಿರ್ಮಾಣ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಕಾರ್ಮಿಕ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಹೇಳಿದೆ. ಡಿಬಿಟಿ ಮೂಲಕ ನಿರ್ಮಾಣ ಕಾರ್ಮಿಕರ ಖಾತೆಗೆ ಹಣವನ್ನು ಹಾಕುವಂತೆ ರಾಜ್ಯಗಳಿಗೆ ಮನವಿ ಮಾಡಿದೆ.

ಕಳೆದ 48 ಗಂಟೆಗಳಲ್ಲಿ ದೆಹಲಿ, ಹರಿಯಾಣ, ಪಂಜಾಬ್ ಮತ್ತು ತಮಿಳುನಾಡು ಸರ್ಕಾರ ಆರ್ಥಿಕ ಸಹಾಯವನ್ನು ಘೋಷಿಸಿವೆ. ತಮಿಳುನಾಡಿನ ಎಲ್ಲ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ, ಸಕ್ಕರೆ ನೀಡಲಾಗುವುದು. ಇದರೊಂದಿಗೆ 1000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿದೆ.

ಪರಿಹಾರ ಮೊತ್ತವನ್ನು ನಿಗದಿಪಡಿಸುವಂತೆ ಕಾರ್ಮಿಕ ಸಚಿವಾಲಯವು ರಾಜ್ಯ ಸರ್ಕಾರಗಳನ್ನು ಕೇಳಿದೆ. ಕಾರ್ಮಿಕ ಸಚಿವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ.

ಕೊರೋನಾ ಭೀತಿ ನಡುವೆಯೇ ರಾಜ್ಯದ ಹಲವೆಡೆ ಗುಡಗು, ಆಲಿಕಲ್ಲು ಸಹಿತ ಮಳೆ

Posted: 24 Mar 2020 07:00 AM PDT

ಕೊರೋನಾ ವೈರಸ್ ಭೀತಿ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಹವಾಮಾನ ಇಲಾಖೆ ಈ ಮೊದಲೇ ಮುನ್ಸೂಚನೆ ನೀಡಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಚದುರಿದಂತೆ ತುಂತುರು ಮಳೆಯಾಗಿದೆ.

ಬೆಳಗಾವಿ, ಕೊಡಗು, ಚಿಕ್ಕಮಗಳೂರು, ಧಾರವಾಡ –ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ. ಶಿವಮೊಗ್ಗದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಬಿಸಿಲ ಬೇಗೆಯಿಂದ ಬಸವಳಿದವರಿಗೆ ತಂಪಿನ ಅನುಭವವಾಗಿದೆ.

ಅದೇ ರೀತಿ ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದ್ದು, ಕರಾವಳಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈತನ ಮಾನವೀಯ ಕಾರ್ಯಕ್ಕೆ ನೀವೂ ಹೇಳಿ ಹ್ಯಾಟ್ಸಾಫ್

Posted: 24 Mar 2020 06:56 AM PDT

ಕೀನ್ಯಾ: ಇದೊಂದು ಮಾನವೀಯ ಸನ್ನಿವೇಶ. ತಾಯಿಯನ್ನು ಕಳೆದುಕೊಂಡಿದ್ದ ಮರಿ ಜೀಬ್ರಾಕ್ಕೆ ವ್ಯಕ್ತಿಯೊಬ್ಬ ತಾಯಿಯಾಗಿದ್ದಾನೆ.

ಅದರ ತಾಯಿಯ ಕೊರತೆಯನ್ನು ನೀಗಿಸಲು ಅವನ ದಾರಿಯಲ್ಲಿ ಪ್ರಯತ್ನಿಸಿದ್ದಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಪ್ರಾಣಿಸ್ನೇಹಿ ಮನಸ್ಸನ್ನು ಕೊಂಡಾಡಿದ್ದಾರೆ.

ಒಮ್ಮೆ ಈತ ತನ್ನ ಮೇಕೆಗಳ ಜತೆ ಕಾಡಿನಲ್ಲಿ ಬರುತ್ತಿರುವಾಗ ಸಿಂಹವೊಂದು ಜೀಬ್ರಾವನ್ನು ಅಟ್ಟಿಸಿಕೊಂಡು ಬಂದಿದೆ. ಆಗ ಅದು ಪೊದೆಯಿಂದ ಓಡಲು ಪ್ರಯತ್ನಿಸಿದರೂ ಸಾಧ್ಯವಾಗದೆ ಸಿಂಹಕ್ಕೆ ಆಹಾರವಾಗಿದೆ.

ಈ ಸಂದರ್ಭದಲ್ಲಿ ಅಲ್ಲೇ ಇದ್ದ ಅದರ ಮರಿ ಜೀಬ್ರಾ ಹೆದರಿ ಇನ್ನೊಂದು ಪೊದೆಯಲ್ಲಿ ಅವಿತುಕೊಂಡಿತ್ತು. ಇದನ್ನು ದೂರದಲ್ಲಿ ಗಮನಿಸಿದ ದನಗಾಹಿ ವ್ಯಕ್ತಿ ಅಲ್ಲಿಗೆ ಹೋಗಿ ಅದನ್ನು ರಕ್ಷಿಸಿ ತನ್ನ ಪ್ರಾಣಿಗಳ ಪುನವರ್ಸತಿ ಕೇಂದ್ರಕ್ಕೆ ತಂದಿದ್ದಾನೆ.

ಬಳಿಕ ಅದಕ್ಕೆ ಡೈರಿಯಾ ಎಂದು ಹೆಸರಿಟ್ಟು ಸಾಕಲಾಗುತ್ತಿದೆ. ಆದರೆ, ತಾಯಿ ನೆನಪು ಕಾಡುತ್ತಿದೆ ಎಂದು ಭಾವಿಸಿ, ಆತನೇ ಜೀಬ್ರಾದಂತೆ ಹೋಲುವ ಕೋಟ್ ಅನ್ನು ಹೊಲಿಸಿಕೊಂಡು ಧರಿಸಿ ಇದನ್ನು ಪಾಲನೆ ಮಾಡುತ್ತಿದ್ದಾನೆ.

ಹಾಲು ಕುಡಿಸುವುದರಿಂದ ಹಿಡಿದು ಸಂಪೂರ್ಣ ನಿರ್ವಹಣೆ ಮಾಡುತ್ತಿದ್ದಾನೆ. ಇದನ್ನು ಶೆಲ್ಡ್ರಿಕ್ ವೈಲ್ಡ್ ಲೈಫ್ ಟ್ರಸ್ಟ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಈ ಮಾಹಿತಿಯನ್ನು ಫೋಟೋ ಸಹಿತ ಹಂಚಿಕೊಂಡಿದೆ.

A herd of goats played their part in saving this baby zebra's lifeIt is still a delicate time for this orphaned male…

Posted by Sheldrick Wildlife Trust on Thursday, March 12, 2020

https://www.facebook.com/watch/?t=1&v=513873489558356

ʼವಿಡಿಯೋʼ ಕಾಲ್ ನಲ್ಲಿದ್ದಾಗಲೇ ಟಾಯ್ಲೆಟ್‌ ನಲ್ಲಿ ಕುಳಿತ ಯುವತಿ

Posted: 24 Mar 2020 06:54 AM PDT

ಈ ಕರೋನಾ ವೈರಸ್ ಇನ್ನೂ ಏನೇನು ಅದ್ವಾನ ಮಾಡಬೇಕೋ ಆ ದೇವರಿಗೇ ಗೊತ್ತು. ಅತಿಯಾದ ಸೋಂಕಿನ ಹಾವಳಿಯಿಂದ ಲಾಕ್ ಡೌನ್ ಮಾಡಲಾಗಿದೆಯಾದರೂ, ಬಹುತೇಕ ಕಂಪನಿಗಳು ತನ್ನ ನೌಕರರಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆಯನ್ನು ಮಾಡಿದೆ.

ಈಗ ಇದೇ ಯುವತಿಯೊಬ್ಬರಿಗೆ ಮುಜುಗರವನ್ನು ತಂದೊಡ್ಡಿದೆ. ಅವರು ಟಾಯ್ಲೆಟ್ ನಲ್ಲೂ ಗಮನಕ್ಕೆ ಬಾರದೆ ವಿಡಿಯೋ ಕಾಲ್ ನಲ್ಲಿದ್ದರಿಂದ ಟ್ರೋಲ್ ಗೆ ಒಳಗಾಗಿದ್ದಾರೆ. ಆದರೆ, ಇವರ ಬೆಂಬಲಕ್ಕೆ ಟ್ವಿಟರ್ ನಿಂತಿದೆ.

ಜೆನಿಫರ್ ಎಂಬ ಮಹಿಳೆ ತನ್ನ ಬಾಸ್ ಹಾಗೂ ಸಹೋದ್ಯೋಗಿಗಳ ಜತೆ ವಿಡಿಯೋ ಕಾಲ್ ನಲ್ಲಿದ್ದರು. ಈ ವೇಳೆ ಮಾತನಾಡುತ್ತಾ ಯಾವುದೋ ಯೋಚನೆಯಲ್ಲಿ ಟಾಯ್ಲೆಟ್ ಗೆಂದು ಹೋಗಿದ್ದಾರೆ. ಹಾಗೇ ಮಾತನಾಡುತ್ತಾ ಲ್ಯಾಪ್ ಟಾಪ್ ಅನ್ನು ಅಲ್ಲೇ ಮೇಲಿಟ್ಟು ಸ್ಕ್ರೀನ್ ಆಫ್ ಆಗಿದೆ ಎಂದು ತಿಳಿದು ಕುಳಿತುಕೊಳ್ಳುತ್ತಾರೆ.

ಆಗ ಅಲ್ಲಿದ್ದವರಲ್ಲಿ ಕೆಲವರು ಜೋರಾಗಿ ಚಪ್ಪಾಳೆ ಹೊಡೆದು ಗಮನಕ್ಕೆ ತರುವ ಪ್ರಯತ್ನ ಮಾಡುತ್ತಾರೆ. ತಕ್ಷಣ ತಿಳಿದ ಜೆನ್ನಿಫರ್ ಲ್ಯಾಪ್ ಟಾಪ್ ಅನ್ನು ಬೇರೆಡೆ ತಿರುಗಿಸಿದರು. ಅಷ್ಟರೊಳಗೆ ಕಾಲ ಮಿಂಚಿಹೋಗಿತ್ತು. ಈಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಪ್ರಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಟ್ವಿಟ್ಟರ್, ಹೀಯಾಳಿಸುವುದಕ್ಕಿಂತ ಜೆನ್ನಿಫರ್ ಗೆ ಬೆಂಬಲಿಸುವ ಅಗತ್ಯವಿದೆ. ಇದು ಯಾರಿಗೆ ಬೇಕಾದರೂ ಆಗಬಹುದಾಗಿದೆ ಎಂದು ಹೇಳಿದೆ.

ಆದರೆ, ಹೀಗೆ ಮಾಡಬೇಕಾದರೆ ಮೊದಲು ನಾವು ಮನೆಯಲ್ಲಿ ಏನು ಮಾಡುತ್ತಿದ್ದೇವೆ, ಯಾವುದನ್ನು ಮಾಡಬೇಕು, ಮಾಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಸಲಹೆಗಳೂ ವ್ಯಕ್ತವಾಗಿವೆ.

Make sure you know how to use video conferencing if you're working from home!!🤣

Posted by Piers Mummery on Saturday, March 21, 2020

ಜಾಗೃತಿ ಮೂಡಿಸಲು ಮುಂದಾದ ತ್ರಿಪುರಾ ಕೈಗೊಂಬೆ ರಂಗಭೂಮಿ

Posted: 24 Mar 2020 06:50 AM PDT

ಮಾರಣಾಂತಿಕ ಕೊರೋನಾ ವೈರಾಣುಗಳ ವಿರುದ್ಧ ಜನಜಾಗೃತಿ ಮೂಡಿಸಲು ಮುಂದಾಗಿರುವ ತ್ರಿಪುರಾದ ಕೈಗೊಂಬೆ ರಂಗಭೂಮಿ, ಸಾಂಪ್ರದಾಯಿಕ 'ಪುತುಲ್ ನಾಚ್‌' ಮೂಲಕ ಜನರ ಗಮನವನ್ನು ಸೆಳೆಯುತ್ತಿದೆ.

ಮಾರ್ಚ್ 21ರಂದು ವಿಶ್ವ ಕೈಗೊಂಬೆ ದಿನದಂದು ವಿಶಿಷ್ಟ ಅಭಿಯಾನದ ಮೂಲಕ ನಾವೆಲ್ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮದ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಜನಮನ್ನಣೆ ಗಿಟ್ಟಿಸುತ್ತಿದೆ.

‘ಕೊರೋನಾ’ ವೈರಸ್ ನಿಯಂತ್ರಣಕ್ಕೆ ಇಲ್ಲಿದೆ ಮುಖ್ಯ ಮಾಹಿತಿ

Posted: 24 Mar 2020 06:49 AM PDT

ಕೊರೋನಾ ವೈರಸ್ ನಿಯಂತ್ರಣಕ್ಕೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಇಲ್ಲಿದೆ ಮುಖ್ಯ ಮಾಹಿತಿ. ವೈಯಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಮತ್ತು ಜನರೊಂದಿಗೆ ದೈಹಿಕ ಅಂತರವನ್ನು ಕಾಪಾಡುವುದು. ಆಗಾಗ್ಗೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು. ಕೈಗಳನ್ನು ಸೋಪ್ ಮತ್ತು ನೀರನ್ನು ಬಳಸಿ ತೊಳೆದುಕೊಳ್ಳುವುದು ಅಥವಾ ತಕ್ಷಣಕ್ಕೆ ನೀರು ಸಿಗದೆ ಇದ್ದಾಗ 60% ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ಬಳಸಿ ಕೈಗಳು ಸ್ವಚ್ಚಗೊಳಿಸುವುದು. ಕೈಗಳು ಸ್ವಚ್ಚವಾಗಿರುವಂತೆ ಗೋಚರಿಸಿದರೂ ಸಹ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು.

ಕೆಮ್ಮುವಾಗ ಮತ್ತು ಸೀನುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರದಿಂದ / ಟಿಶ್ಯೂ ಕಾಗದದಿಂದ ಮುಚ್ಚಿಕೊಳುವುದು. ಟಿಶ್ಯೂ ಕಾಗದವನ್ನು ಬಳಸಿದ ನಂತರ ಕೂಡಲೇ ಮುಚ್ಚಿದ ತ್ಯಾಜ್ಯದ ತೊಟ್ಟಿಯೊಳಗಡೆ ಬಿಸಾಡುವುದು. ಬೇರೆಯ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವಾಗ ಸುರಕ್ಷಿತ ಹಂತಗಳನ್ನು ಕಾಪಾಡಿಕೊಳ್ಳುವುದು. ಅದರಲ್ಲೂ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳಿಂದ ದೂರವಿರುವುದು.

ಸೀನುವಾಗ ಮತ್ತು ಕೆಮ್ಮುವಾಗ ಮೊಣಕೈನ ಒಳಭಾಗದಲ್ಲಿ ಸೀನುವುದು ಹಾಗೂ ಕೆಮ್ಮುವುದು. ಯಾವುದೇ ಕಾರಣಕ್ಕೂ ಅಂಗೈಗಳನ್ನು ಬಳಸಿ ಸೀನುವುದು ಹಾಗೂ ಕೆಮ್ಮುವುದು ಮಾಡಬಾರದು. ದೇಹದ ತಾಪಮಾನವನ್ನು ಹಾಗೂ ಉಸಿರಾಟದ ಲಕ್ಷಣಗಳನ್ನು ನಿಯಮಿತವಾಗಿ ಪರೀಶೀಲಿಸಿಕೊಳ್ಳುತ್ತಿರುವುದು. ಉಸಿರಾಟದ ತೊಂದರೆ ಇದ್ದಲ್ಲಿ ಹಾಗೂ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಲ್ಲಿ ಕೊಡಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು. ವೈದ್ಯರ ಬಳಿ ಹೋಗುವಾಗ ಮಾಸ್ಕ್ ಧರಿಸುವುದು ಅಥವಾ ಬಾಯಿ ಮತ್ತು ಮೂಗನ್ನು ಬಟ್ಟೆಯಿಂದ ಮುಚ್ಚಿಕೊಂಡು ಹೋಗುವುದು.

ಜ್ವರ / ನ್ಯೂಮೋನಿಯದಂತಹ ರೋಗ ಲಕ್ಷಣಗಳಿದ್ದಲ್ಲಿ ರಾಜ್ಯದ ಸಹಾಯವಾಣಿ ಸಂಖ್ಯೆ -104 ಹಾಗೂ ಕರ್ನಾಟಕ ಸರ್ಕಾರ ಸಚಿವಾಲಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹಗಲಿರುಳು ಕಾರ್ಯ ನಿರ್ವಹಿಸುತ್ತಿರುವ ಸಹಾಯವಾಣಿ ಸಂಖ್ಯೆ-080-46848600 ಮತ್ತು 080-66692000 ಗೆ ಅಥವಾ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ 24X7 ಸಹಾಯವಾಣಿ ಸಂಖ್ಯೆಯಾದ 011-23978046 ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಐಷಾರಾಮಿ ಹೋಟೆಲ್, ಲಾಡ್ಜ್, ರೆಸಾರ್ಟ್ ವಾಸ್ತವ್ಯ ‘ಬಂದ್’

Posted: 24 Mar 2020 06:17 AM PDT

ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರು/ಸಾರ್ವಜನಿಕರ ಹಿತಾಸಕ್ತಿಯಿಂದ ಮುಂದಿನ ಆದೇಶದವರೆಗೆ ಎಲ್ಲಾ ವಾಸ್ತವ್ಯ ಸೌಲಭ್ಯಗಳನ್ನು ಬಂದ್ ಮಾಡಲಾಗಿದೆ.

ಹೋಟೇಲ್, ಲಾಡ್ಜ್, ಐಷರಾಮಿ ಹೋಟೆಲ್, ರೆಸಾರ್ಟ್, ಹೋ-ಸ್ಟೇ, ಯಾವುದೇ ರೀತಿಯ ಚೌಟ್ರಿ, ಡಾರ್ಮೀಟರಿ ಹಾಲ್ ಮುಂತಾದವುಗಳಲ್ಲಿ ಪ್ರವಾಸಿಗರು/ಸಾರ್ವಜನಿಕರು ತಂಗುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ವಾಸ್ತವ್ಯಕ್ಕಾಗಿ ಆಗಮಿಸುವ ಬಗ್ಗೆ ಯಾವುದೇ ರೀತಿಯ ಬುಕ್ಕಿಂಗ್ ನಡೆಸಿದ್ದಲ್ಲಿ ಈ ಬಗ್ಗೆ ಮುಂಚಿತವಾಗಿ ಸೂಕ್ತ ಮಾಹಿತಿ ನೀಡಿ ಬುಕ್ಕಿಂಗ್ ರದ್ದುಪಡಿಸುವಂತೆ ಹಾಗೂ ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಮಂಗಳೂರಲ್ಲಿ 4 ಸೇರಿ ರಾಜ್ಯದಲ್ಲಿ 6 ಹೊಸ ಪ್ರಕರಣ: ಏರುತ್ತಲೇ ಇದೆ ಸೋಂಕಿತರ ಸಂಖ್ಯೆ

Posted: 24 Mar 2020 06:02 AM PDT

ಮಂಗಳೂರಿನಲ್ಲಿ 4 ಕೋರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ದುಬೈ, ಸೌದಿ ಅರೇಬಿಯಾದಿಂದ ಬಂದಿದ್ದ ನಾಲ್ವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಇಂದು ವೈದ್ಯಕೀಯ ಪರೀಕ್ಷೆ ವರದಿ ಬಂದಿದೆ.

ನಾಲ್ವರಲ್ಲಿ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಇವರೆಲ್ಲಾ ಕೇರಳದ ಕಾಸರಗೋಡು ಜಿಲ್ಲೆಗೆ ಸೇರಿದವರಾಗಿದ್ದಾರೆ. ಇದರೊಂದಿಗೆ ಮಂಗಳೂರಲ್ಲಿ ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.

ಇದರೊಂದಿಗೆ ರಾಜ್ಯದಲ್ಲಿ ಇಂದು ಒಂದೇ ದಿನ 6 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 43 ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.

BIG BREAKING NEWS: ಟೋಕಿಯೋ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆ

Posted: 24 Mar 2020 05:47 AM PDT

ಜಪಾನ್ ದೇಶದ ರಾಜಧಾನಿ ಟೋಕಿಯೋದಲ್ಲಿ ಆಯೋಜನೆಗೊಂಡಿದ್ದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದೂಡಲಾಗಿದೆ.

ಮಹಾಮಾರಿ ಕೋರೋನಾ ವೈರಸ್ ವಿಶ್ವದ 167 ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿ ಗಂಭೀರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಮುಂದಿನ ವರ್ಷ ಒಲಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ.

ಜುಲೈ 24 ರಿಂದ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಬೇಕಿತ್ತು, ಶುಕ್ರವಾರವಷ್ಟೇ ಟೋಕಿಯೋ ಕ್ರೀಡೆಗಳ ಒಲಿಂಪಿಕ್ಸ್ ಜ್ಯೋತಿಯನ್ನು ಸರಳ ಸಮಾರಂಭದಲ್ಲಿ ಬರಮಾಡಿಕೊಳ್ಳಲಾಗಿತ್ತು. ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಮುಖ್ಯಸ್ಥ ಥಾಮಸ್ ಬ್ಯಾಚ್, ಜಪಾನ್ ಪ್ರಧಾನಿ ನೇತೃತ್ವದ ಸಮಿತಿ ಕ್ರೀಡಾಕೂಟವನ್ನು ಮುಂದಿನ ವರ್ಷ ನಡೆಸಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ.

ಬ್ರೇಕಿಂಗ್ ನ್ಯೂಸ್: ATM ಹಣ ವಿತ್ ಡ್ರಾ – ಕನಿಷ್ಠ ಬ್ಯಾಲೆನ್ಸ್ ಬಗ್ಗೆ ಮಹತ್ವದ ಘೋಷಣೆ ಮಾಡಿದ ಹಣಕಾಸು ಸಚಿವೆ

Posted: 24 Mar 2020 05:37 AM PDT

ಕೊರೊನಾ ವೈರಸ್ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ಅನೇಕರ ಬದುಕು ಬೀದಿಗೆ ಬರ್ತಿದೆ. ಈ ಎಲ್ಲದರ ಮಧ್ಯೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅನೇಕ ಮಹತ್ವದ ಘೋಷಣೆ ಮಾಡಿದ್ದಾರೆ.

ಸಾಮಾನ್ಯ ಜನರಿಗೆ ನೆಮ್ಮದಿ ನೀಡಲು ಮುಂದಾದ ನಿರ್ಮಲಾ ಸೀತಾರಾಮನ್, ಮುಂದಿನ ಮೂರು ತಿಂಗಳವರೆಗೆ ಎಟಿಎಂನಿಂದ ಹಣವನ್ನು ಹಿಂಪಡೆಯಲು ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದಿದ್ದಾರೆ. ನೀವು ಯಾವುದೇ ಬ್ಯಾಂಕ್ ಎಟಿಎಂನಿಂದ ಎಷ್ಟು ಹಣವನ್ನು ಬೇಕಾದ್ರೂ ಯಾವುದೇ ಶುಲ್ಕವಿಲ್ಲದೆ ವಿತ್ ಡ್ರಾ ಮಾಡಬಹುದು.

ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಹಣ ಇಡಬೇಕಾಗಿಲ್ಲ. ಎಲ್ಲ ಹಣವನ್ನು ಅಗತ್ಯವಾದ್ರೆ ವಿತ್ ಡ್ರಾ ಮಾಡಬಹುದು. ಡಿಜಿಟಲ್ ವ್ಯಾಪಾರಕ್ಕಾಗಿ ಬ್ಯಾಂಕ್ ಶುಲ್ಕವನ್ನು ಕಡಿಮೆ ಮಾಡಲಿದೆ. ಡಿಜಿಟಲ್ ವಹಿವಾಟನ್ನು ಉತ್ತೇಜಿಸುವುದು ಇದರ ಉದ್ದೇಶ. ಮುಂದಿನ ಮೂರು ತಿಂಗಳವರೆಗೆ ಖಾತೆಯಲ್ಲಿ ಕನಿಷ್ಟ ಹಣವಿಲ್ಲದೆ ಹೋದ್ರೂ ಬ್ಯಾಂಕ್ ಯಾವುದೇ ಶುಲ್ಕ ವಿಧಿಸುವುದಿಲ್ಲ.

 

BIG NEWS: ರಾಜ್ಯದಲ್ಲಿ ಮತ್ತೊಂದು ಕೊರೋನಾ ಪ್ರಕರಣ ದೃಢ – ಸೋಂಕಿತ ಮಹಿಳೆ ದಾವಣಗೆರೆ ಆಸ್ಪತ್ರೆಗೆ ದಾಖಲು

Posted: 24 Mar 2020 05:34 AM PDT

ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಚಿತ್ರದುರ್ಗದ ಜಿಲ್ಲೆಯ 37 ವರ್ಷದ ಮಹಿಳೆಗೆ ಕೋರೋನಾ ಸೋಂಕು ಇರುವುದು ದೃಢಪಟ್ಟಿದೆ.

ಮಾರ್ಚ್ 22ರಂದು ಗಯಾನ ದೇಶದಿಂದ ಬಂದಿದ್ದ ಮಹಿಳೆಯನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಮಹಿಳೆಯನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಿ ರಕ್ತದ ಮಾದರಿ, ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಮಹಿಳೆಯನ್ನು ದಾವಣಗೆರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ದಾವಣಗೆರೆಯ ಐಸೋಲೇಶನ್ ವಾರ್ಡಿಗೆ ಮಹಿಳೆಯನ್ನು ಶಿಫ್ಟ್ ಮಾಡಲಾಗಿದೆ ಎಂದು ಹೇಳಲಾಗಿದೆ.

ಲಾಕ್ ಡೌನ್ ಖುಷಿಗೆ ಹಾಡಿ ಕುಣಿದ ಪೊಲೀಸರು…!

Posted: 24 Mar 2020 05:19 AM PDT

ಕರೋನಾ ಮುಕ್ತಕ್ಕೆ ಈಗ ಲಾಕ್ ಡೌನ್ ಒಂದೇ ಮದ್ದು ಎಂದು ಬಹುತೇಕ ದೇಶಗಳು ಅರಿತಿವೆ. ಈ ಕಾರಣಕ್ಕೆ ಸಂಪೂರ್ಣ ವ್ಯಾಪಾರ-ವಹಿವಾಟು ಸಹಿತ ಸಾರಿಗೆ ವ್ಯವಸ್ಥೆಯೂ ಇಲ್ಲದೆ, ಮನೆಯಲ್ಲೂ ಸ್ವ-ದಿಗ್ಬಂಧನ ವಹಿಸಿಕೊಳ್ಳುವಂತೆ ಆಯಾ ದೇಶಗಳ ಸರ್ಕಾರಗಳು ಆದೇಶ ಹೊರಡಿಸುತ್ತಿವೆ.

ಈಗ ಸ್ಪೇನ್ ನಲ್ಲಿ ಈ ಆದೇಶವು ಸಮರ್ಪಕವಾಗಿ ಜಾರಿಯಾದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಬೀದಿ ಬದಿ ಹಾಡಿ, ಕುಣಿದು ಸಂತಸವನ್ನು ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಜನತೆ ಮನೆಯಲ್ಲಿದ್ದುಕೊಂಡೇ ವೈರಸ್ ನಾಶಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂತೋಷಗೊಂಡ ಅಲ್ಲಿನ ಪೊಲೀಸರು, ಅಲ್ಜೈಡಾ, ಮಜೋರ್ಕದಲ್ಲಿ 2 ಕಾರುಗಳಲ್ಲಿ ಸೈರನ್ ಹಾಕಿಕೊಂಡು ಬಂದಿಳಿದು, ಖುಷಿಯನ್ನು ವ್ಯಕ್ತಪಡಿಸಿದರು.

ಬಳಿಕ ಗಿಟಾರ್ ನುಡಿಸಿ, ಹಾಡಿದರು, ಡಾನ್ಸ್ ಮಾಡಿದರು. ಈ ಸಂದರ್ಭದಲ್ಲಿ ಮನೆಯೊಳಗಿನಿಂದಲೇ ಇದನ್ನು ನೋಡಿದ ಜನತೆ ಸಂತಸಪಟ್ಟರು. ಅಲ್ಲದೆ, ಪೊಲೀಸರಿಗೆ ಧನ್ಯವಾದ ಅರ್ಪಿಸಿ ಚಪ್ಪಾಳೆ ಹೊಡೆದರು.

ಜತೆಗೆ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಈಗ ವಿಡಿಯೋಗೆ 17,000 ಲೈಕ್ ಗಳು ಬಂದಿದ್ದರೆ, 5,000 ವೀಕ್ಷಣೆ ಕಂಡಿದೆ.

— Ada Jo. March (@adamarch83) March 21, 2020

ಕೊರೋನಾ ವಿರುದ್ಧದ ಹೋರಾಟಕ್ಕೆ ಸರ್ಕಾರದೊಂದಿಗೆ ಕೈಜೋಡಿಸಿದ ಉದ್ಯಮಿಗಳು

Posted: 24 Mar 2020 05:16 AM PDT

ಕೊರೊನಾ ಮಹಾಮಾರಿ ದೇಶವನ್ನೇ ನಲುಗಿಸುತ್ತಿದೆ. ಕೊರೊನಾ ವಿರುದ್ಧ ಹೋರಾಡಲು ಸರ್ಕಾರ ಕರೆಯನ್ನು ನೀಡಿದೆ. ಮನೆಯಿಂದ ಹೊರ ಬರಬೇಡಿ ಎಂದು ಎಷ್ಟೇ ಹೇಳಿದರೂ ಜನ ಮಾತ್ರ ಕೇಳುತ್ತಿಲ್ಲ. ಇದರ ಜೊತೆಗೆ ಸರ್ಕಾರಗಳು ಕೊರೊನಾ ಓಡಿಸಲು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿವೆ.

ಇದೀಗ ಇಡೀ ಭಾರತ ಒಂದಾಗಿ ಕೊರೊನಾ ಅಟ್ಟಹಾಸ ಮಟ್ಟ ಹಾಕಲು ಹೋರಾಟ ಆರಂಭಿಸಿದೆ. ಕೊರೊನಾ ಪೀಡಿತರ ನೆರವಿಗೆ ಸರ್ಕಾರದ ಜೊತೆಗೆ ಉದ್ಯಮಿಗಳು ನಿಂತಿದ್ದಾರೆ.

ಅನಿಲ್ ಅಗರ್‌ವಾಲ್, ಆನಂದ್ ಮಹೀಂದ್ರ, ಮುಖೇಶ್ ಅಂಬಾನಿ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ಉದ್ಯಮಿಗಳು ಆರ್ಥಿಕ ಸಹಾಯ ಮಾಡುತ್ತಿದ್ದಾರೆ.

ತಮ್ಮ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ ಉದ್ಯಮಿಗಳು. ಇದೀಗ ಮುಖೇಶ್ ಅಂಬಾನಿ 5 ಕೋಟಿ ಹಣವನ್ನು ನೀಡುವ ಜೊತೆಗೆ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಮುಂಬೈನ ಸೆವೆನ್ ಹಿಲ್ಸ್‌ನಲ್ಲಿರುವ ಹೆಚ್.ಎನ್. ರಿಲಾಯನ್ಸ್ ಫೌಂಡೇಷನ್ ಆಸ್ಪತ್ರೆಯನ್ನು ಕೊರೊನಾ ಆಸ್ಪತ್ರೆಯಾಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಕೊರೊನಾ ವೈರಸ್ ಪೀಡಿತರಿಗೆ ಬೇಕಾಗುವ ಎಲ್ಲಾ ಸೌಲಭ್ಯ ಇದೆ. ಜೊತೆಗೆ ಬೇಕಾಗುವಷ್ಟು ಮಾಸ್ಕ್‌ಗಳನ್ನು ತಯಾರಿಸಲಾಗುತ್ತಿದೆ.

ಉಪ ಸಭಾಪತಿ ಸ್ಥಾನಕ್ಕೆ ಆಯ್ಕೆಯಾದ ಆನಂದ್ ಮಾಮನಿ

Posted: 24 Mar 2020 05:13 AM PDT

ಕೃಷ್ಣಾರೆಡ್ಡಿ ರಾಜೀನಾಮೆಯಿಂದ ತೆರವಾದ ಉಪಸಭಾಧ್ಯಕ್ಷ ಸ್ಥಾನಕ್ಕೆ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕರಾಗಿರುವ ಆನಂದ್ ಮಾಮನಿ ಇಂದು ಉಪ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಯಲ್ಲಿ ಮೂರನೇ ಬಾರಿ ಶಾಸಕರಾಗಿರುವ ಆನಂದ್ ಮಾಮನಿ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಚಿವ ಸ್ಥಾನದ ಬೇಡಿಕೆಯನ್ನು ಇಟ್ಟಿದ್ದರು ಎನ್ನಲಾಗಿದೆ.

ಆನಂದ್ ಮಾಮನಿಯವರು ವಿಧಾನಸಭೆಯ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಹಿನ್ನಲೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಭಿನಂದನೆ ಸಲ್ಲಿಸಿದ್ದಾರೆ.

ನಮ್ಮ ಬೆಳಗಾವಿ ಜಿಲ್ಲೆಯ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿಯವರು ಕರ್ನಾಟಕ ವಿಧಾನ ಸಭೆಯ ಉಪಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಆನಂದ್ ಮಾಮನಿಯವರ ತಂದೆ ಚಂದ್ರಶೇಖರ ಮಾಮನಿಯವರೂ ಸಹ ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದರು. 1996 ರಿಂದ 1999 ರವರೆಗೆ ಇವರ ತಂದೆ ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದರು.

ಕೊರೋನಾ ನಿಯಂತ್ರಣಕ್ಕೆ ಮತ್ತಷ್ಟು ಬಿಗಿ ಕ್ರಮ ಕೈಗೊಂಡ ಸರ್ಕಾರ

Posted: 24 Mar 2020 05:12 AM PDT

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಕೊರೋನಾ ವೈರಸ್ ಗೆ ಸಂಬಂಧಿತವಾದ ವಾರ್ ರೂಮ್ ಬೆಂಗಳೂರಿನಲ್ಲಿ ಸಿದ್ಧವಾಗಿದ್ದು, ಇಲ್ಲಿಂದಲೇ ಚಿಕಿತ್ಸೆ ಮೊದಲಾದ ವ್ಯವಸ್ಥೆ ನಿಯಂತ್ರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗಡಿ ಜಿಲ್ಲೆಗಳನ್ನು ಮುಚ್ಚಲಾಗಿದೆ. ಬೆಂಗಳೂರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು, ಕಾರವಾರ ಬಂದರಿನಲ್ಲಿ ಹೊರಗಿನಿಂದ ಬಂದರಲ್ಲಿ ತಪಾಸಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ ತಜ್ಞರು ಮತ್ತು ವಿಜ್ಞಾನಿಗಳೊಂದಿಗೆ ಖಾಸಗಿ ಸಂಸ್ಥೆಗಳ ವೈದ್ಯರೊಂದಿಗೆ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ. 173 ಜನರನ್ನು ಐಸೋಲೇಷನ್ ವಾರ್ಡ್ ನಲ್ಲಿ ಇಡಲಾಗಿದೆ. 38 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಲಾಕ್ ಡೌನ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸರಳವಾಗಿ ಹಬ್ಬ ಆಚರಿಸಬೇಕು. ಯಾರೂ ಹೊರಗೆ ಬರಬಾರದು. ಕರ್ಫ್ಯೂ ವಾತಾವರಣ ಇರಬೇಕೆಂಬ ಅಪೇಕ್ಷೆಯಿತ್ತು. ಇಂದು ಜನ ಹೊರಗೆ ಬಂದಿದ್ದಾರೆ. ಆರೋಗ್ಯದ ಹಿತದೃಷ್ಟಿಯಿಂದ ಇವತ್ತಿನಂತೆ ಯಾರೂ ಹೊರಗೆ ಬರಬಾರದು. ಬೆಂಗಳೂರಿನಿಂದ ಹೊರಗೆ ಹೋಗುವವರು ರಾತ್ರಿಯೊಳಗೆ ಹೋಗಲು ಅನುಮತಿ ನೀಡಲಾಗಿದೆ. ನಾಳೆಯಿಂದ ಬಿಗಿಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಚೀನಾ ನಂತ್ರ ಸಿಂಗಾಪುರದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ

Posted: 24 Mar 2020 04:48 AM PDT

ಚೀನಾ ನಂತ್ರ ಕೊರೊನಾ ಸೋಂಕು ಮೊದಲು ಕಾಣಿಸಿಕೊಂಡಿದ್ದು ಸಿಂಗಾಪುರದಲ್ಲಿ. ಆದ್ರೆ ಸಿಂಗಾಪುರದಲ್ಲಿ ಸೋಂಕಿತರ ಸಂಖ್ಯೆ ಇರೋದು 509 ಮಾತ್ರ. ಅದ್ರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸಿಂಗಾಪುರದ ನಂತ್ರ ಅಮೆರಿಕಾ, ಇಟಲಿ, ಇರಾನ್, ಸ್ಪೇನ್, ಭಾರತ, ಪಾಕಿಸ್ತಾನವನ್ನು ಸೋಂಕು ಪ್ರವೇಶ ಮಾಡಿತ್ತು. ಆದ್ರೆ ಈ ಎಲ್ಲ ದೇಶಗಳಲ್ಲಿ ಸಿಂಗಾಪುರಕ್ಕಿಂತ ಹೆಚ್ಚಿನ ಸೋಂಕಿತರಿದ್ದಾರೆ. ಹಾಗೆ ಸಾವನ್ನಪ್ಪಿರುವವರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಿದೆ. ಸಿಂಗಾಪುರ ಸೋಂಕು ನಿಯಂತ್ರಣಕ್ಕೆ ಏನು ಮಾಡಿದೆ ಎಂಬುದನ್ನು ಪ್ರತಿಯೊಬ್ಬರು ತಿಳಿಯುವ ಅಗತ್ಯವಿದೆ.

ಸಿಂಗಾಪುರದಲ್ಲಿ ಮೊದಲ ಬಾರಿ ಹರಡಿದ್ದು ಚೀನಾ ಔಷಧಿ ಮಳಿಗೆಯಲ್ಲಿ. ಅಲ್ಲಿಗೆ ಬಂದಿದ್ದ ಚೀನಾ ವ್ಯಕ್ತಿ ತವರಿಗೆ ವಾಪಸ್ ಆದ್ಮೇಲೆ ಅಂಗಡಿಯಲ್ಲಿದ್ದ ಮಹಿಳೆ ಹಾಗೂ ಪ್ರವಾಸ ಮಾರ್ಗದರ್ಶಿಗೆ ಸೋಂಕು ಕಾಣಿಸಿಕೊಂಡಿತ್ತು. ಜನವರಿ ಕೊನೆ ವಾರದಲ್ಲಿ ಇದು ನಡೆದಿತ್ತು. ಮಹಿಳೆ ಹಾಗೂ ವ್ಯಕ್ತಿ ಸಂಪರ್ಕಕ್ಕೆ ಬಂದ 18 ಮಂದಿಗೆ ಇದು ಕಾಣಿಸಿಕೊಂಡಿತ್ತು. ಮಾರ್ಚ್ 23ರ ವೇಳೆಗೆ 509 ಮಂದಿ ಸೋಂಕಿಗೊಳಗಾಗಿದ್ದರು. ಸಿಂಗಾಪುರ ಸರ್ಕಾರ ಸೋಂಕು ಸಾರ್ವಜನಿಕವಾಗಿ ಹರಡಿದೆ ಎಂದಿತ್ತು.

ಸಿಂಗಾಪುರ ಸರ್ಕಾರ ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದ 6 ಸಾವಿರ ಮಂದಿಯನ್ನು ಪತ್ತೆ ಮಾಡಿದೆ. ಸಿಸಿ ಟಿವಿ, ಪೊಲೀಸ್ ತನಿಖೆ ಮೂಲಕ ಪತ್ತೆ ಮಾಡಿದೆ. ಜನವರಿ 23 ರಂದು ಕೊರೊನಾ ವೈರಸ್‌ನ ಮೊದಲ ಪ್ರಕರಣ ಬಹಿರಂಗವಾದ ನಂತರ ಸಿಂಗಾಪುರ ಸರ್ಕಾರ ಫೆಬ್ರವರಿ 4 ರಂದು ಸಾಂಕ್ರಾಮಿಕ ರೋಗ ಹರಡದಂತೆ ಸಿದ್ಧತೆಗಳನ್ನು ಮಾಡಿಕೊಂಡಿತ್ತು.

ಸಿಂಗಾಪುರ ಸರ್ಕಾರ ಹಲವಾರು ಕೇಂದ್ರದ ಜೊತೆ ಆಸ್ಪತ್ರೆ ಸಿದ್ಧ ಮಾಡಿತ್ತು. ಸೋಂಕು ಹರಡುವವರನ್ನು ಹೊರಗೆ ಬಿಡಲಿಲ್ಲ. ಚೀನಾ ಕೂಡ ಇದನ್ನೇ ಮಾಡಿದೆ. ಶಂಕಿತರೆಲ್ಲರನ್ನು ಬೇರೆಯವರ ಸಂಪರ್ಕಕ್ಕೆ ಬರದಂತೆ ತಪ್ಪಿಸಿದೆ. ಸೌಮ್ಯ ಪ್ರಕರಣಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಅವ್ರನ್ನೂ ಆಸ್ಪತ್ರೆಯಲ್ಲೇ ಇರಿಸಿಕೊಂಡಿತ್ತು.

ರೋಗದ ಯಾವುದೇ ಲಕ್ಷಣ ಕಂಡು ಬರದೆ ಹೋದ್ರೂ ಆ ವ್ಯಕ್ತಿ ಮೇಲೆ ನಿಗಾಯಿಡಲಾಗಿತ್ತು. ದಿನಕ್ಕೆ ಎರಡು ಬಾರಿ ಎಸ್ ಎಂ ಎಸ್ ಬರ್ತಾಯಿತ್ತು. ಆತ ಅದನ್ನು ಕ್ಲಿಕ್ ಮಾಡಿದ್ರೆ ಆತ ಎಲ್ಲಿದ್ದಾನೆ ಎಂಬುದು ಗೊತ್ತಾಗುತ್ತಿತ್ತು. ನಿಯಮ ಉಲ್ಲಂಘಿಸಿದವರ ವಿರುದ್ಧ ತನಿಖೆ ನಡೆಯುತ್ತಿತ್ತು. ಈಗಲೂ ನಡೆಯುತ್ತಿದೆ. ಗೂಢಾಚಾರಿಗಳಿಂದ ಕರೆ ಮಾಡಿ ನೀವು ಎಲ್ಲಿ ಹೋಗಿದ್ದೀರಿ ಎಂದು ಪ್ರಶ್ನೆ ಮಾಡಲಾಗುತ್ತದೆ. ಅವ್ರು ಹೋಗಿದ್ದೆ ಎಂದು ಉತ್ತರ ನೀಡಿದ್ರೆ ಮರುದಿನ ಅವ್ರ ಮನೆಗೆ ಹೋಗಿ ಅವ್ರನ್ನು ಆಸ್ಪತ್ರೆಗೆ ಕರೆತಂದು ಪರೀಕ್ಷೆ  ಮಾಡಲಾಗುತ್ತದೆ. ಆರೋಗ್ಯ ಸಚಿವಾಲಯ ಈ ಕೆಲಸ ಮಾಡದೆ ಹೋದಲ್ಲಿ ಪೊಲೀಸರು ಕಾರ್ಯಾಚರಣೆಗಿಳಿಯುತ್ತಾರೆ. ಸಿಂಗಾಪುರದ ಈ ಎಲ್ಲ ಕ್ರಮಗಳಿಂದ ಅಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ.

ವರ್ಕ್ ಫ್ರಂ ಹೋಂನ ಫನ್ನಿ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ಟಿಕ್‌ ಟಾಕ್‌ ಬಳಕೆದಾರರು

Posted: 24 Mar 2020 03:52 AM PDT

ನಾವೆಲ್ ಕೊರೋನಾ ವೈರಾಣುಗಳು ಹುಟ್ಟಿಹಾಕಿರುವ ಅನಿಶ್ಚಿತತೆಯ ಸಂದರ್ಭದಲ್ಲಿ ಜಗತ್ತಿನಾದ್ಯಂತ ಜನರು ತಂತಮ್ಮ ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ.

ಆಫೀಸಿನಲ್ಲಿ ಕೆಲಸಕ್ಕೆ ಎಂದೇ ಇರುವ ವಾತಾವರಣಕ್ಕೂ ಮನೆಯ ಹೋಮ್ಲೀ ವಾತಾವರಣಕ್ಕೂ ಭಾರೀ ಅಂತರವಿದೆ. ಅದರಲ್ಲೂ ಮಕ್ಕಳು ಹಾಗೂ ಸಾಕು ‌ಪ್ರಾಣಿಗಳಿರುವ ಮನೆಗಳಿಂದ ಕೆಲಸ ಮಾಡುವುದು ಬಲೇ ಸವಾಲಿನ ಕೆಲಸ.

ಸಾಮಾಜಿಕ ಅಂತರದ ಈ ದಿನಮಾನದಲ್ಲಿ ಜನರು ತಂತಮ್ಮ ಮನೆಗಳಿಂದ ಕೆಲಸ ಮಾಡುವಾಗ ಆಗುತ್ತಿರುವ ಕೆಲ ವಿನೋದಮಯ ಅಡಚಣೆಗಳ ಕುರಿತಂತೆ ಟಿಕ್‌ಟಾಕ್‌ನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಅಂತರದ ಮಹತ್ವ ಸಾರುತ್ತಿದೆ 95ರ ಅಜ್ಜಿಯ ಹುಟ್ಟುಹಬ್ಬ

Posted: 24 Mar 2020 03:50 AM PDT

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯವಾದ ಇಂದಿನ ದಿನಮಾನದಲ್ಲಿ, ಜನರು ಕೊರೋನಾ ವೈರಾಣುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಾಡಬೇಕಾದ ಎಲ್ಲ ಸರ್ಕಸ್‌ಗಳನ್ನೂ ಮಾಡುತ್ತಿದ್ದಾರೆ.

ಬ್ರಿಟನ್‌ನಲ್ಲಿ ಕುಟುಂಬವೊಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನುಕರಣೀಯ ಹೆಜ್ಜೆಯೊಂದನ್ನು ಇಟ್ಟಿದ್ದು, ತನ್ನ ಕುಟುಂಬದ ಅತ್ಯಂತ ಹಿರಿಯ ಸದಸ್ಯೆ 95ನೇ ಹುಟ್ಟುಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ, ಪರಸ್ಪರರ ನಡುವೆ 1.5 ಮೀಟರ್‌ ಅಂತರ ಕಾಯ್ದುಕೊಂಡಿದ್ದಾರೆ ಎಲ್ಲ ಸದಸ್ಯರು.

ಮನೆಯ ಲಾನ್‌ನಲ್ಲಿ ಈ ಹುಟ್ಟುಹಬ್ಬವನ್ನು ಆಚರಿಸಿದ ಕುಟುಂಬ, ತನ್ನ ಆಚರಣೆಯ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದೆ.

ವೃದ್ಧರಿಗೆ ಉಚಿತ ಆಹಾರ ನೀಡುತ್ತಿದೆ ಈ ರೆಸ್ಟೋರೆಂಟ್

Posted: 24 Mar 2020 03:49 AM PDT

ಕೊರೋನಾ ವೈರಸ್‌ ಹಬ್ಬುವಿಕೆಯಿಂದ ಗಾಬರಿಗೊಂಡಿರುವ ಜನತೆ, ಮುಂದೇನಾಗುವುದೋ ಎಂಬ ಭೀತಿಯಲ್ಲಿ ಸಿಕ್ಕಸಿಕ್ಕದ್ದನ್ನೆಲ್ಲಾ ಕೊಳ್ಳಲು ಮುಂದಾಗುತ್ತಿದ್ದು, ಸೂಪರ್‌ ಮಾರ್ಕೆಟ್‌ಗಳ ಶೆಲ್ಫ್‌ಗಳೆಲ್ಲಾ ಅಗತ್ಯ ವಸ್ತುಗಳಿಲ್ಲದೇ ಬಿಕೋ ಎನ್ನುತ್ತಿವೆ.

ಇದರಿಂದಾಗಿ ವಯೋ ವೃದ್ಧರಿಗೆ ಅಗತ್ಯ ವಸ್ತುಗಳು ಸಿಗುವುದು ಕಷ್ಟವಾಗಿಬಿಟ್ಟಿದೆ. ಶುದ್ಧ ನೀರು ಹಾಗೂ ಮೂರು ಹೊತ್ತಿನ ಊಟ ಸಿಗುವುದು ಸಹ ಕೆಲವು ಕಡೆಗಳಲ್ಲಿ ಕಷ್ಟವಾಗಿಬಿಟ್ಟಿದೆ.

ಇಂಥ ಸಮಯದಲ್ಲಿ ಬ್ರಿಟನ್‌ನ ಲೀಡ್ಸ್‌ನಲ್ಲಿರುವ 'ಬೆಂಗಾಲ್ ಕಾಟೇ‌ಜ್' ಹೆಸರಿನ ಭಾರತೀಯ & ಬಾಂಗ್ಲಾದೇಶೀ ರೆಸ್ಟೋರೆಂಟ್ ಒಂದು ವೃದ್ಧ ಜನರಿಗೆ ಉಚಿತವಾಗಿ ಅನ್ನಾಹಾರ ನೀಡುತ್ತಿದೆ. ಸೂಪರ್‌ ಮಾರ್ಕೆಟ್‌ಗಳಿಂದ ಖಾಲಿ ಕೈಗಳಲ್ಲಿ ಬರುತ್ತಿರುವ ವೃದ್ಧರಿಗೆ ತಾನು ತಯಾರಿಸುವ ಅನ್ನ, ಸಾರು ಹಾಗು ರೋಲ್ಸ್‌ಗಳನ್ನು ಉಚಿತವಾಗಿ ಒದಗಿಸುತ್ತಿದೆ.

ಈ ವೈರಸ್‌ ಕಾಣೆಯಾಗುವ ತನಕ ತಾನು ಇದೇ ಥರ ವೃದ್ಧರಿಗೆ ಉಚಿತ ಆಹಾರ ಒದಗಿಸುವುದಾಗಿ ರೆಸ್ಟೋರೆಂಟ್‌ನ ಮಾಲೀಕ ಮೊಹಮ್ಮದ್ ಸಾಹೇಬ್‌ ಮಿಯಾ ತಿಳಿಸಿದ್ದಾರೆ.

Comments