Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Saturday, March 21, 2020

Kannada News | Karnataka News | India News

Kannada News | Karnataka News | India News


ಪ್ರಾಣಿಗಳು ಕೈ ತೊಳೆದುಕೊಳ್ಳುವ ವಿಡಿಯೋ ಫುಲ್ ‘ವೈರಲ್’

Posted: 21 Mar 2020 09:12 AM PDT

ಇಡೀ ವಿಶ್ವದಲ್ಲಿ ಕರಾನೋದಿಂದ ಕೈತೊಳೆಯುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಜಾಗೃತಿ ಅಭಿಯಾನ ಆರಂಭಿಸಿದೆ. ಈ‌ ಆಭಿಯಾನದ ಭಾಗವಾಗಿ ಇದೀಗ ಪ್ರಾಣಿಗಳು ತಮ್ಮ ಕೈತೊಳೆಯುತ್ತಿರುವ ವಿಡಿಯೊಗಳು ವೈರಲ್ ಆಗಿವೆ.

ಹೌದು, ವಿಶ್ವ ಆರೋಗ್ಯ ಸಂಸ್ಥೆ ಆರಂಭಿಸಿರುವ safe hand ಅಭಿಯಾನಕ್ಕೆ ಅನೇಕರು ಬೆಂಬಲ ಸೂಚಿಸಿದ್ದು, ತಮ್ಮ ಕೈತೊಳೆಯುತ್ತಿರುವ ವಿಡಿಯೊವನ್ನು ಹಾಕುತ್ತಿದ್ದಾರೆ.

ಆದರೀಗ ಸಂಸ್ಥೆವೊಂದು ಪ್ರಾಣಿಗಳು‌‌ ತಮ್ಮ ಕೈ ಅಥವಾ ಮುಂಗಾಲು ತೊಳೆಯುವ ವಿಡಿಯೊವನ್ನು ಹಾಕಿದ್ದು ಇದು ವೈರಲ್ ಆಗಿದೆ.

ಇಂಡೋನೇಷ್ಯಾದ ಬೊರ್ನಿಯೋದಲ್ಲಿ‌ ಒರ್ಗುಂಟಾನ್ ಕೈತೊಳೆಯುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದ್ದು, ಇದಕ್ಕೆ ಚಿಂಟಾ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಶೇರ್ ಮಾಡಿರುವ ವಿಡಿಯೋ ಭಾರಿ ವೈರಲ್ ಆಗಿದೆ.

ಕರೋನಾ ಹರಡುವಿಕೆಯನ್ನು ಸರಳ ಭಾಷೆಯಲ್ಲಿ ವಿವರಿಸಿದ ಮೈಕ್ರೋ ಬಯಾಲಜಿಸ್ಟ್

Posted: 21 Mar 2020 09:09 AM PDT

ಕರೋನಾ ವೈರಸ್ ತಡೆಗೆ ನಾವು ಆದಷ್ಟು ಇನ್ನೊಬ್ಬರ ಸಂಪರ್ಕದಿಂದ ತಪ್ಪಿಸಿಕೊಳ್ಳುವುದೇ ಉತ್ತಮ ಎಂಬ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈಗ ಮೈಕ್ರೊ ಬಯಾಲಜಿಸ್ಟ್ ಒಬ್ಬರು ತುಂಬಾ ಸರಳವಾಗಿ ಕ್ರಿಕೆಟ್ ಭಾಷೆಯಲ್ಲಿ ರೋಗ ಹರಡುವಿಕೆ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಇವರ ಈ ಟ್ವೀಟ್ ಭರ್ಜರಿ ವೈರಲ್ ಆಗಿದೆ.

ಕರೋನಾ ವೈರಸ್ ಎಂಬುದು ಉಸಿರಾಟದ ಸೋಂಕು. ಇದು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ. ಒಬ್ಬರಿಗೆ ಬಂದ ಸೋಂಕು ಇಬ್ಬರಿಗಿಂತ ಹೆಚ್ಚು ಮಂದಿಗೆ ಹರಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೀಗಾಗಿ ಎಚ್ಚರ ವಹಿಸಿ ಎಂದು ಸಲಹೆ ಕೊಟ್ಟಿದ್ದಾರೆ.

ಇದನ್ನೇ ಕ್ರಿಕೆಟ್ ಭಾಷೆಯಲ್ಲಿ ಸರಳವಾಗಿ ಹೀಗೆ ಹೇಳಿದ್ದಾರೆ. ಕರೋನಾ ವೈರಸ್ ಆಲ್ ರೌಂಡರ್ ಇದ್ದಂತೆ. ಇದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡನ್ನೂ ಚೆನ್ನಾಗಿ ಮಾಡುತ್ತದೆ.

ಆದರೆ ಇದು ಎರಡರಲ್ಲೂ ಸ್ಪೆಷಲಿಸ್ಟ್ ಅಲ್ಲ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮನ ಕಲಕುತ್ತೆ ನಿರಂತರ ಡ್ಯೂಟಿ ಮಾಡಿದ ಈ ನರ್ಸ್ ಕಣ್ಣೀರ ಕಥೆ…!

Posted: 21 Mar 2020 09:07 AM PDT

ಯಾರ್ಕ್, ಇಂಗ್ಲೆಂಡ್: ವಿಶ್ವಕ್ಕೆ ಅಂಟಿದ ಮಹಾಮಾರಿ ಕರೋನಾ ವೈರಸ್ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವವರು ವೈದ್ಯರು ಹಾಗೂ ನರ್ಸ್ ಗಳು. ಇವರ ಸೇವೆ ಗಣನೀಯ. ಆದರೆ ಇಲ್ಲೊಬ್ಬ ನರ್ಸ್ ಗೆ 48 ಗಂಟೆ ಪಾಳಿ ಮುಗಿಸಿ ಬಂದರೆ ಆಘಾತ ಕಾದಿತ್ತು. ಹಾಗಾದರೆ ಏನಾಗಿತ್ತು? ಮುಂದೆ ಓದಿ.

ಇಲ್ಲಿನ ಯಾರ್ಕ್ ನ ಡಾನ್ ಬಿಲ್ಬ್ರೋ ಎಂಬ ನರ್ಸ್ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಎನ್ನದೇ ಎರಡು ದಿನ ಕೆಲಸ ಮಾಡಿ ಸುಸ್ತಾಗಿ ಮನೆಯತ್ತ ಹೋಗುವಾಗ ಸೂಪರ್ ಮಾರ್ಕೆಟ್ ಗೆ ಬಂದಿದ್ದಾರೆ.

ಆದರೆ ಅಲ್ಲಿನ ತರಕಾರಿ ಹಾಗೂ ಹಣ್ಣುಗಳ ಶೆಲ್ಫ್ ನೋಡಿದರೆ ಒಂದು ವಸ್ತುವೂ ಇರಲಿಲ್ಲ. ಇದರಿಂದ ಆಘಾತಗೊಂಡಿದ್ದಾರೆ.

ಅಲ್ಲಿಂದ ಹೊರಬಂದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅಲ್ಲಿ ಯಾವುದೇ ಹಣ್ಣು ಹಾಗೂ ತರಕಾರಿಗಳು ಕಾಣುತ್ತಿಲ್ಲ. ನಾನು ಹೇಗೆ ಆರೋಗ್ಯವಾಗಿರಲಿ ಎಂದು ಹೇಳಿಕೊಳ್ಳುತ್ತಲೇ ತನ್ನ ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದರು.

ನೀವು ಕಷ್ಟದಲ್ಲಿರುವಾಗ ನನ್ನಂತಹ ನರ್ಸ್ ಗಳು ನಿಮ್ಮನ್ನು ನೋಡಿಕೊಳ್ಳುವವರು. ನಮ್ಮಂಥವರ ಬಗ್ಗೆ ನೀವು ಗಮನ ಕೊಡಿ. ಇಂತಹ ಕೆಲಸವನ್ನು ನೀವು ಮಾಡಬೇಡಿ, ಈಗಲೇ ನಿಲ್ಲಿಸಿಬಿಡಿ ಎಲ್ಲರಿಗೂ ಎಲ್ಲವೂ ಸಿಗುವಂತಾಗಲಿ ಎಂದು ಕಣ್ಣೀರಿಟ್ಟು ಹೇಳಿಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಾಕಿದ 22 ಗಂಟೆಯೊಳಗೆ 22,000 ಶೇರುಗಳನ್ನು ಕಂಡಿದೆ. ಇವರ ಈ ಸ್ಥಿತಿ ಬಗ್ಗೆ ಹಲವು ಫೇಸ್ಬುಕ್ ಬಳಕೆದಾರರು ಮರುಕ ವ್ಯಕ್ತಪಡಿಸಿದ್ದಲ್ಲದೆ, ನಿಮಗೆ ಯಾವ ಸಹಾಯ ಬೇಕಿದ್ದರೂ ಕೇಳಿ ನಾವು ಮಾಡುತ್ತೇವೆ ಎಂದು ಅಭಯ ನೀಡಿದ್ದಾರೆ. ಅಲ್ಲದೇ ಈ ರೀತಿ ಯಾರು ಮಾಡಬಾರದು ಎಂದು ನಾಗರಿಕರಿಗೆ ತಿಳಿಹೇಳುವ ಪ್ರಯತ್ನ ಮಾಡಿದ್ದಾರೆ.

This has to said 😔#corona virus #nurse #critical care. #NHS #share

Posted by Dawn Bilbrough on Thursday, March 19, 2020

ಕರೋನಾ ಭೀತಿ ಹಿನ್ನೆಲೆಯಲ್ಲಿ ಶ್ವಾನದ ವಾಕಿಂಗ್ ಹೇಗಿತ್ತು ಗೊತ್ತಾ…?

Posted: 21 Mar 2020 09:04 AM PDT

ಕೊರೊನಾ ವೈರಸ್ ಹಲವು ದೇಶಗಳಲ್ಲಿ ಜನರು ಹೊರಗೆ ಬರದಂತೆ ದುಸ್ತರದ ಸ್ಥಿತಿ ನಿರ್ಮಾಣ ಮಾಡಿದೆ. ಇದರಿಂದ ಜನರಿಗೆ, ಸಾಕು ಪ್ರಾಣಿಗಳಿಗೆ ಖುಷಿಯಾಗಿದ್ದರೂ ಅವಕ್ಕೆ ಹೊರಗೆ ಅಡ್ಡಾಡಿಸಲು ಕಷ್ಟವಾಗಿದೆ.

ಇದಕ್ಕೆ ಸೈಪ್ರಸ್‌ನ ವಾಕಿಸ್ ಡಿಮೆಟ್ರಿಯು ಎನ್ನುವವರು ವಿಶಿಷ್ಟ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಅವರು ಡ್ರೋನ್‌ಗೆ ನಾಯಿಯನ್ನು ಕಟ್ಟಿ ಅದರಿಂದ ವಾಕಿಂಗ್ ಮಾಡಿಸಿದ್ದಾರೆ.

ಅದರ ವಿಡಿಯೋ ಮಾಡಿ ಅವರು ಹಾಕಿದ್ದು ಅದು ವೈರಲ್ ಆಗಿದೆ. ಹಲವರು ಈ ಹೊಸ ವಿಚಾರಕ್ಕೆ ಶಹಬ್ಬಾಸ್ ಎಂದರೆ ಇನ್ನೂ ಕೆಲವರು ನಾಯಿಯ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

5th day quarantine.Stay Home Safe but don't forget your dog happiness.. 🦠🦠🦠😇😇😇IG: Vakis78For media you can use the link below: 👇👇👇👇https://youtu.be/ntKSj0qBYlA

Posted by Vakis Demetriou on Wednesday, March 18, 2020

ಚಿರತೆ ರಕ್ಷಿಸಲು ಹೋಗಿ ಬೇಸ್ತು ಬಿದ್ದ ಜನ…!

Posted: 21 Mar 2020 09:02 AM PDT

ಎಲ್ಲಾದರೂ ಕಾಡು ಪ್ರಾಣಿ ಬಂದಿದೆ ಎಂದು ಗೊತ್ತಾದರೆ ಜನ ಭಂಡ ಧೈರ್ಯ ತೋರಿ ಅವುಗಳ ಹತ್ತಿರ ಹೋಗುತ್ತಾರೆ. ಆದರೆ ಆ ರೀತಿ ಮಾಡುವುದು ಎಷ್ಟು ಅಪಾಯಕಾರಿ ಎಂದು ಈ ವಿಡಿಯೋ ತೋರಿಸುತ್ತದೆ.

ಐಎಫ್‌ಎಸ್ ಅಧಿಕಾರಿ ಸುಸಾಂತ ನಂದಾ ಹಂಚಿಕೊಂಡಿರುವ ವಿಡಿಯೋದಲ್ಲಿ ಜನ ಗುಂಪು ಸೇರಿ ಗುಂಡಿಯೊಳಗೆ ಬಿದ್ದಿರುವ ಚಿರತೆಯೊಂದನ್ನು ರಕ್ಷಿಸುತ್ತಾರೆ. ಆದರೆ ಆಮೇಲೆ ಆ ಚಿರತೆ ಜನರ ಮೇಲೆಯೇ ಎರಗುತ್ತದೆ.

ಇದರ ಕುರಿತು ಬರೆದಿರುವ ನಂದಾ ಅವರು, ಜನ ಈ ರೀತಿ ಚಿರತೆ ರಕ್ಷಿಸಿದ್ದು ದಡ್ಡತನ ಎಂದಿದ್ದಾರೆ. ಮೊದಲು ಬೋನು ಇಟ್ಟು ಅರಿವಳಿಕೆ ಮದ್ದು ನೀಡಿ ಸರಿಯಾದ ತರಬೇತಿ ಪಡೆದವರು ಇದನ್ನು ಹಿಡಿಯಬೇಕು ಎಂದಿದ್ದಾರೆ. ಚಿರತೆ ಆ ರೀತಿ ಜನರ ಮೇಲೆರಗಿದ್ದು ಅದರ ನೈಸರ್ಗಿಕ ಗುಣ ಎಂದಿದ್ದಾರೆ.

ಅಷ್ಟೇ ಅಲ್ಲದೆ ಜನ ಗುಂಪು ಕೂಡಿ ಅಲ್ಲಿ ಹೋಗಿರುವುದಕ್ಕೂ ಟೀಕೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಅಲ್ಲಿದ್ದ ಜನರ ದಡ್ಡತನವನ್ನು ಹೀಗಳೆದಿದ್ದಾರೆ.

ಕೈ ತೊಳೆದುಕೊಳ್ಳುವ ವಿಡಿಯೋ ಹಾಕಿ ಟ್ರೋಲ್ ಆದ ಏಕ್ತಾ

Posted: 21 Mar 2020 09:00 AM PDT

ಕರೋನಾ ವೈರಸ್ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಜನರನ್ನು ಉತ್ತೇಜಿಸಲೆಂದು ಆರಂಭಿಸಲಾದ ಕೈತೊಳೆಯುವ ಅಭಿಯಾನದ ಭಾಗವಾಗಿ, ಅಂತರ್ಜಾಲದಲ್ಲಿ Safe Hands Challenge ಸದ್ದು ಮಾಡುತ್ತಿದೆ.

ಈ ಚಾಲೆಂಜ್‌ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಗೆಳತಿ ಏಕ್ತಾ ಕಪೂರ್‌ ರನ್ನು ಆಹ್ವಾನಿಸಿದ್ದರು. ಈ ಸವಾಲನ್ನು ಸ್ವೀಕರಿಸಿದ ಕಪೂರ್‌, ಕೈತೊಳೆದುಕೊಳ್ಳುವ ವೇಳೆ ತಮ್ಮ ಉಂಗುರ, ಬ್ರೇಸ್‌ಲೆಟ್‌ಗಳನ್ನು ಸಹ ತೊಳೆದುಕೊಳ್ಳಲು ಒಂದಷ್ಟು ಸಮಯ ತೆಗೆದುಕೊಂಡಿದ್ದಾರೆ.

ಇದಕ್ಕಾಗಿ ಸಾಕಷ್ಟು ಟ್ರೋಲ್‌ಗೆ ಒಳಗಾದ ಏಕ್ತಾಗೆ, “ನಿಮ್ಮ ಒಡವೆಗಳೂ ಸಹ ಸಾಕಷ್ಟು ವೈರಾಣುಗಳನ್ನು ಹೊತ್ತುಕೊಂಡಿರುತ್ತವೆ. ಚಾಲೆಂಜ್ ಫೇಲ್ ಆಗಿದೆ. ಖಾಲಿ ಕೈಯ್ಯಲ್ಲಿ ಇನ್ನೊಮ್ಮೆ ಪ್ರಯತ್ನಿಸಿ” ಎಂದೆಲ್ಲಾ ಸಲಹೆಗಳು ಹರಿದುಬಂದಿವೆ.

ಇದಕ್ಕೆ ಪ್ರತಿಕ್ರಿಯಿಸಿದ ಏಕ್ತಾ, “ನನಗೆ 13 ತಿಂಗಳ ಮಗನಿದ್ದು, ಪ್ರೋಟೋಕಾಲ್‌ನಂತೆ ಈ ಮೊದಲೇ ತಯಾರಿ ಮಾಡಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದಗಳು” ಎಂದಿದ್ದಾರೆ.

‘ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ಶಶಿ ತರೂರ್ ಮಾಡಿದ ಟ್ವೀಟ್ ವೈರಲ್

Posted: 21 Mar 2020 08:56 AM PDT

ನವದೆಹಲಿ: ಕರೋನಾ ವೈರಸ್ ಗೆ ಸದ್ಯ ಮದ್ದಿಲ್ಲ. ಹೀಗಾಗಿ ನಾವು ಮುಂಜಾಗ್ರತೆ ವಹಿಸುವುದೇ ಅದಕ್ಕೆ ಔಷಧ. ಸಾಧ್ಯವಾದಷ್ಟು ನೀವು ಹೊರಗಡೆ ಬರಬೇಡಿ. ಭಾನುವಾರವಂತೂ ಜನತಾ ಕರ್ಫ್ಯೂ ಹೇರಿಕೊಂಡು ಮನೆಯಲ್ಲೇ ಕುಳಿತಿರಿ. ಸಂಜೆ ಐದು ಗಂಟೆ ನಂತರ ಹೊರ ಬಂದು ಒಮ್ಮೆ ಚಪ್ಪಾಳೆ ಹೊಡೆದು ಕರೋನಾ ವಿರುದ್ಧ ಹೋರಾಡುವ ವೈದ್ಯರು ಸೇರಿದಂತೆ ಸ್ವಯಂ ಸೇವಕರಿಗೆ ಅಭಿನಂದನೆ ಸಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ.

ಹಾಗಾದರೆ ಶಶಿ ತರೂರ್ ಯಾವ ಪೋಸ್ಟ್ ಹಾಕಿದ್ದಾರೆ ಎಂದು ನೋಡಿದರೆ ಅವರು ಮಲಯಾಳಂ ಸಿನಿಮಾದ ಒಂದು ತಟ್ಟೆ ಬಡಿಯುವ ದೃಶ್ಯವನ್ನು ಹಾಕಿ, ಜತೆಗೆ ಹೀಗೆ ಬರೆದಿದ್ದಾರೆ. “ದೇಶದ ಜನ ಮಾಡುವ ಮೊದಲು ಮಲಯಾಳಂ ಸಿನಿಮಾ ಇಂಡಸ್ಟ್ರಿ ಮಾಡಿದೆ ಎಂಬುದನ್ನು ನೀವು ನಂಬಬೇಕು. ನಾವು ಭಾನುವಾರ ಸಂಜೆ 5 ಗಂಟೆವರೆಗೆ ಕಾಯಲು ತಯಾರಿಲ್ಲ” ಎಂಬ ಒಕ್ಕಣೆಯೊಂದಿಗೆ ವಿಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ.

ಇದು 2007 ರಲ್ಲಿ ತೆರೆಕಂಡ ಮಾಯಾವಿ ಚಿತ್ರದ ತುಣುಕಾಗಿದ್ದು, ಆ ಹಾಡಿನ ವಿಡಿಯೋಗೆ ಬೇರೆ ಆಡಿಯೋ ಸೇರಿಸಿದ್ದು “ಕರೋನಾ ಗೋ, ಕರೋನಾ ಗೋ” ಎಂದು ಹೇಳುತ್ತಾ ತಟ್ಟೆ ಬಡಿಯುತ್ತಿರುವಂತೆ ಮಾಡಲಾಗಿದೆ.

14 ಸೆಕೆಂಡ್ ವುಳ್ಳ ವಿಡಿಯೊ ಇದಾಗಿದೆ. ಇದಕ್ಕೆ ನೆಟ್ಟಿಗರಿಂದ ಹಾಸ್ಯಮಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

“ನಾವು ನಿಮಗಾಗಿ ಕೆಲಸ ಮಾಡುತ್ತಿದ್ದೇವೆ, ನೀವು ನಮ್ಮೆಲ್ಲರಿಗಾಗಿ ಮನೆಯಲ್ಲೇ ಉಳಿಯಿರಿ”

Posted: 21 Mar 2020 08:54 AM PDT

ಕರೋನಾ ವೈರಾಣುಗಳು ಹಬ್ಬುವುದನ್ನು ತಡೆಗಟ್ಟಲು ಭಾರತವು ತೆಗೆದುಕೊಳ್ಳುತ್ತಿರುವ ಕ್ರಮಗಳು ಇಡೀ ಜಗತ್ತಿಗೇ ಅನುಕರಣನೀಯವಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವ 'ಜನತಾ ಕರ್ಫ್ಯೂ'ಗೆ ರಾಜಕೀಯ, ಸೈದ್ಧಾಂತಿಕ ವಿರೋಧಗಳನ್ನೂ ಮೀರಿ ವಿರೋಧಿಗಳಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ.

ಭಾನುವಾರದಂದು ಸಾಧ್ಯವಾದಷ್ಟು ಮಟ್ಟಿಗೆ ಜನರನ್ನು ಅವರವರ ಮನೆಗಳಲ್ಲೇ ಇರುವಂತೆ ಮಾಡುವ ಮೂಲಕ ಕರೋನಾ ವೈರಾಣುಗಳು ಪಸರಿಸುವ ರಿಸ್ಕ್‌ ಅನ್ನು ತಗ್ಗಿಸಲು ಸಮಾಜದ ಎಲ್ಲ ವರ್ಗಗಳಿಂದಲೂ ಕೂಗುಗಳು ಬರುತ್ತಿವೆ.

ಇದರ ಸಾಲಿಗೆ ಸೇರಿರುವ ಉತ್ತರಾಖಂಡದ ಪೊಲೀಸರು, “ನಾವು ನಿಮಗಾಗಿ ಕೆಲಸ ಮಾಡುತ್ತಿದ್ದೇವೆ. ನೀವು ನಮ್ಮೆಲ್ಲರಿಗಾಗಿ ಮನೆಗಳಲ್ಲೇ ಉಳಿಯಿರಿ” ಎಂದು ಸಂದೇಶವನ್ನು ಸಾರುವ ಮೂಲಕ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಈ ಸಂದರ್ಭದಲ್ಲಿ ಅದೆಷ್ಟು ಮುಖ್ಯ ಎಂದು ಒತ್ತಿ ಹೇಳುತ್ತಿರುವುದು ನೆಟ್ಟಿಗರ ಪ್ರಶಂಸೆಗೆ ಕಾರಣವಾಗಿದೆ.

ಭಾರತೀಯರ ಮೇಲಿನ ಕಾಳಜಿ ಮೆರೆದ ಇಂಗ್ಲೆಂಡ್ ಕ್ರಿಕೆಟಿಗ

Posted: 21 Mar 2020 08:52 AM PDT

ಚೀನಾದಲ್ಲಿ ಹುಟ್ಟಿಕೊಂಡು ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳನ್ನು ಕಾಡುತ್ತಿರುವ ಮಾರಕ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಕ್ರಿಕೆಟಿಗ ಭಾರತೀಯರ ಬಗ್ಗೆ ಕಾಳಜಿಯುತ ಸಂದೇಶ ರವಾನಿಸಿದ್ದಾರೆ.

ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಕೆವಿನ್ ಪೀಟರ್ಸನ್ ಟ್ವಿಟರ್ ಮೂಲಕ ಹಿಂದಿ ಭಾಷೆಯಲ್ಲಿ ಭಾರತದ ಜನತೆಗೆ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ತೀರ್ಮಾನಕ್ಕೆ ಬದ್ಧವಾಗಿರುವಂತೆ ಮನವಿ ಮಾಡಿದ್ದಾರೆ.

ಅಷ್ಟೇ ಅಲ್ಲ, ಆದಷ್ಟು ಎಲ್ಲರೂ ಮನೆಯೊಳಗೆ ಇದ್ದು ಸೋಂಕು ಹರಡುವುದನ್ನು ನಿಯಂತ್ರಿಸಿ ಎಂದು ಕರೆ ನೀಡಿದ್ದಾರೆ.
ಈಗಾಗಲೇ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಬಜನ್ ಸಿಂಗ್, ರಿಷಬ್ ಪಂತ್, ಕೆ.ಎಲ್. ರಾಹುಲ್ ‌ಮೊದಲಾದವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಮನವಿ ಮಾಡಿದ್ದರು.

ಇದೀಗ ಈ ಸಾಲಿಗೆ ವಿದೇಶಿ ಕ್ರಿಕೆಟಿಗ ಪೀಟರ್ಸನ್ ಸೇರಿದ್ದು ಭಾರತೀಯ ಪ್ರೀತಿ ಮತ್ತು ಕಾಳಜಿ ಮೆರೆದಿದ್ದಾರೆ.

ಕರೋನಾ ಭೀತಿ ಹಿನ್ನೆಲೆಯಲ್ಲಿ ಈ ವಧು – ವರ ಮಾಡಿದ್ದೇನು ಗೊತ್ತಾ…?

Posted: 21 Mar 2020 08:50 AM PDT

ಈ ಕರೋನಾ ವೈರಸ್ ಎಂಬುದು ಮಾಡಿರುವ ತೊಂದರೆ ಒಂದೇ, ಎರಡೇ? ಒಂದು ಕಡೆ ಜೀವ ಹಾನಿ, ಇನ್ನೊಂದೆಡೆ ಭಯ ಇವುಗಳನ್ನು ಹುಟ್ಟಿಸಿದೆ. ಮತ್ತೊಂದೆಡೆ ಯಾವುದೇ ಸಂಭ್ರಮದಲ್ಲಿ ಖುಷಿಯಿಂದ ಪಾಲ್ಗೊಳ್ಳುವಂತೆ ಆಗುತ್ತಿಲ್ಲ. ಇನ್ನು ಕೆಲವೊಂದು ಅನಿವಾರ್ಯ ಕಾರಣಗಳಿಂದ ಈ ಮೊದಲೇ ಇಟ್ಟುಕೊಳ್ಳಲಾಗಿದ್ದ ವಿವಾಹಗಳಂತಹ ಸಮಾರಂಭಗಳನ್ನು ಮುಂದೂಡಲಾಗದೆ, ನೆರವೇರಿಸಿಕೊಳ್ಳಲಾಗಿರುತ್ತದೆ.

ಆದರೆ ಇದರಲ್ಲಿ ಸಂಭ್ರಮಕ್ಕಿಂತ ಸುರಕ್ಷತಾ ಕ್ರಮಗಳೇ ಹೆಚ್ಚು ಕಂಡುಬರುತ್ತಿದೆ. ಇಲ್ಲೊಂದು ವಿವಾಹ ಹಾಗೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ನವಿ ಮುಂಬಯಿಯಲ್ಲಿ ಈಚೆಗೆ ನಡೆದ ವಿವಾಹದಲ್ಲಿ ಕರೋನಾ ವೈರಸ್ ಬಂದರೆ ಎಂಬ ಭೀತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

ತಾಳಿ ಕಟ್ಟುವ ಸಂದರ್ಭದಲ್ಲಿ ನವ ಜೋಡಿ ಮಾಸ್ಕ್ ಗಳನ್ನು ಹಾಕಿಕೊಂಡಿತ್ತು. ಕೇವಲ ಐವತ್ತು ಮಂದಿಯಷ್ಟೇ ಬಂಧುಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಅವರು ಸಹ ಫೇಸ್ ಮಾಸ್ಕ್ ಗಳನ್ನು ಹಾಕಿಕೊಂಡಿದ್ದರು.

ಈ ಸಮಾರಂಭಕ್ಕೋಸ್ಕರ ಟೇಬಲ್ ಗಳ ಮೇಲೆ ಪ್ರತ್ಯೇಕ ಪ್ಯಾಕ್ಡ್ ಫುಡ್ ಹಾಗೂ ಸ್ಯಾನಿಟೈಸರ್ ಗಳ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದಷ್ಟು ಒಬ್ಬರಿಗೊಬ್ಬರು ಸಂಪರ್ಕ ಇಲ್ಲದಂತೆಯೇ ಇರುವ ಹಾಗೆ ವ್ಯವಸ್ಥೆ ಮಾಡಲಾಗಿತ್ತು.

ಈ ವಿಶಿಷ್ಟ ಆಚರಣೆಯನ್ನು ಕೆಲ ನೆಟ್ಟಿಗರು ಕೊಂಡಾಡಿದ್ದಾರೆ. ಮತ್ತೆ ಕೆಲವರು ಇಂತಹ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಮುಂದೂಡಿದರೆ ಒಳ್ಳೆಯದಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕರೋನಾ ಕಾರಣಕ್ಕೆ ಸ್ವಯಂ ‘ನಿರ್ಬಂಧ’ ವಿಧಿಸಿಕೊಂಡ ಕ್ರಿಕೆಟಿಗ

Posted: 21 Mar 2020 08:48 AM PDT

ಕೊರೊನಾ ಸೋಂಕು ಭೀತಿಯಿಂದ ಐಸೋಲೇಷನ್ ( ಪ್ರತ್ಯೇಕವಾಗಿರುವುದು) ಬಗ್ಗೆ ಆತಂಕಪಡುವುದೇ ಹೆಚ್ಚು. ಆದರೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಮನೆಯಲ್ಲೇ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ.

ವಿಶೇಷವೆಂದರೆ ಮನೆಯಲ್ಲಿ ಬೋರ್ ಅಗದಂತೆ ಕ್ರಿಕೆಟ್ ಚೆಂಡಿನ ಜತೆ ಆಟವಾಡುವ ರಾಹುಲ್ ಐಪ್ಯಾಡ್ ಮೂಲಕ ಮನರಂಜನೆ ಪಡೆಯುವುದಲ್ಲದೆ, ಪುಸ್ತಕ ಓದುವುದನ್ನೂ ಮೈಗೂಡಿಸಿಕೊಂಡಿರುವುದಾಗಿ ಇನ್ಸ್ಟಾಗ್ರಾಂನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಟಿ20 ಸರಣಿಯಲ್ಲಿ ಒಟ್ಟು 224 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಧೋನಿ ಬಳಿಕ ಸತತ ಅರ್ಧ ಶತಕಗಳ ಈ ಸಾಧನೆ ಮಾಡಿದ ವಿಕೆಟ್ ಕೀಪರ್ ಎನಿಸಿಕೊಂಡ ರಾಹುಲ್ ಏಕದಿನ ಸರಣಿಯಲ್ಲಿಯೂ 204 ರನ್ ಬಾರಿಸಿ ಗಮನ ಸೆಳೆದಿದ್ದರು.

View this post on Instagram

Mask o̸f̸f̸ ON! #stayathomechallenge

A post shared by KL Rahul👑 (@rahulkl) on

ಕರೋನಾ ಪೀಡಿತ ಗಾಯಕಿಯೊಂದಿಗೆ ಡಿನ್ನರ್‌‌ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗಾಗಿ ನಡೆದಿದೆ ಹುಡುಕಾಟ..!

Posted: 21 Mar 2020 08:46 AM PDT

ಕರೋನಾ ವೈರಸ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಆಗಿರುವುದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಗಾಯಕಿ ಕನಿಕಾ ಕಪೂರ್‌ ಖಾತ್ರಿಪಡಿಸಿದ ಬಳಿಕ, ಲಖನೌನದಲ್ಲಿ ಅವರು ಭಾಗವಹಿಸಿದ್ದ ಡಿನ್ನರ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದ ರಾಜಕಾರಣಿಗಳಿಗೆಲ್ಲಾ ಒಂದು ರೀತಿಯ ಭಯ ಸೃಷ್ಟಿಸಿದೆ.

ಸಂಸತ್ತು, ರಾಷ್ಟ್ರಪತಿ ಭವನ ಸೇರಿದಂತೆ ದೆಹಲಿಯಿಂದಲೂ ಸಹ ಈ ಪಾರ್ಟಿಯಲ್ಲಿ ಭಾಗಿಯಾಗಲು ಗಣ್ಯರು ಆಗಮಿಸಿದ್ದರು. ಖುದ್ದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಸಹ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದು, ಅವರೂ ಸಹ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸಂಸದರೊಬ್ಬರನ್ನು ಭೇಟಿಯಾಗಿದ್ದು, ವೈರಾಣುಗಳಿಗೆ ಎಕ್ಸ್‌ಪೋಸ್ ಆಗಿರುವ ಸಾಧ್ಯತೆ ಇದೆ.

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಪುತ್ರ, ಸಂಸದ ದುಷ್ಯಂತ್ ಸಿಂಗ್ ಸಹ ಈ ಡಿನ್ನರ್‌ನಲ್ಲಿ ಭಾಗಿಯಾಗಿದ್ದು, ಅವರೂ ಸಹ ಸ್ವಯಂ ದಿಗ್ಭಂಧನಕ್ಕೆ ಶರಣಾಗಿದ್ದಾರೆ.

ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರರಾಪ್ ಸಿಂಗ್ ಸಹ ಈ ಡಿನ್ನರ್‌ನಲ್ಲಿ ಭಾಗಿಯಾಗಿದ್ದರು.

ಮುದ್ರಣವನ್ನೇ ನಿಲ್ಲಿಸಿದ ಪ್ಲೇ ಬಾಯ್…! ಕಾರಣವೇನು ಗೊತ್ತಾ…?

Posted: 21 Mar 2020 08:43 AM PDT

ಕರೋನಾ ವೈರಸ್ ಕಾರಣದಿಂದಾಗಿ ಅಮೆರಿಕದ ಲೈಫ್‌ ಸ್ಟೈಲ್ ಮ್ಯಾಗಝೀನ್ 'ಪ್ಲೇ ‌ಬಾಯ್‌' 66 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತನ್ನ ಪ್ರಿಂಟಿಂಗ್ ಆವೃತ್ತಿಯನ್ನು ನಿಲ್ಲಿಸುತ್ತಿದೆ.

ಲೈಂಗಿಕ ವಿಚಾರಗಳ ಬಗ್ಗೆ ಬಹಳ ರಸವತ್ತಾಗಿ ವಿವರಿಸುತ್ತಾ, 1950ರ ದಶಕದಿಂದಲೂ ಮನೆಮಾತಾಗಿರುವ ಈ ಮ್ಯಾಗಝಿನ್, ಸದ್ಯದ ಮಟ್ಟಿಗೆ ನ್ಯೂಸ್ ಸ್ಟಾಲ್‌ಗಳಲ್ಲಿ ಸಿಗುವುದಿಲ್ಲ.

ಕರೋನಾ ವೈರಾಣುಗಳ ಕಾರಣದಿಂದ ಕಂಟೆಂಟ್ ನಿರ್ಮಾಣ ಹಾಗೂ ಪೂರೈಕೆ ವ್ಯವಸ್ಥೆ ಮೇಲೆ ಪರಿಣಾಮವಾಗುತ್ತಿರುವ ಕಾರಣದಿಂದಾಗಿ ಸದ್ಯದ ಮಟ್ಟಿಗೆ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ವೈರಲ್ ಆಗಿದೆ ಕರೋನಾ ಕುರಿತ ‘ವಿರುಷ್ಕಾ’ ದಂಪತಿ ಸಂದೇಶ

Posted: 21 Mar 2020 08:40 AM PDT

ಇಡೀ ವಿಶ್ವದಲ್ಲಿ ಕರೋನಾ ಬಾಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಭಾರತದ ಯೂತ್ ಐಕಾನ್ ಆಗಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಕರೋನಾದಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೇ ಇರುವಂತೆ ಕೇಂದ್ರ, ರಾಜ್ಯ ಸರಕಾರ ಮಾಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪೋಸ್ಟ್ ಮಾಡಿರುವ ದಂಪತಿ, ಸದ್ಯ ಭಾರತ ಮಾತ್ರವಲ್ಲದೇ ಇಡೀ ವಿಶ್ವ ಕಠಿಣ ಪರಿಸ್ಥಿತಿಯಲ್ಲಿದೆ. ಆದ್ದರಿಂದ ಇದನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಬ್ಬರ ಪಾತ್ರವಿದೆ. ಪ್ರತಿಯೊಬ್ಬರು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು, ಸ್ವಯಂ ಪ್ರೇರಿತವಾಗಿ ಒಂಟಿಯಾಗಿರಬೇಕು ಎಂದು ಮನವಿ ಮಾಡಿದ್ದಾರೆ.

View this post on Instagram

Stay Home. Stay Safe. Stay Healthy. 🙏🏻

A post shared by AnushkaSharma1588 (@anushkasharma) on

ಬ್ರಾ ಇಲ್ಲದೆ ಮಲಗುವ ನಿರಾಳತೆಯನ್ನು ವ್ಯಕ್ತಪಡಿಸಿದ ಮಹಿಳೆಯರು

Posted: 21 Mar 2020 08:38 AM PDT

ಕರೋನಾ ವೈರಸ್ ಹಾವಳಿಯಿಂದಾಗಿ ಈಗ ಎಲ್ಲೆಲ್ಲೂ ಮನೆಯಿಂದ ಕೆಲಸ ಮಾಡುವ ಅವಕಾಶ ಸಿಕ್ಕಿರುವ ಕಾರಣ ಜನರ ಈ ವೇಳೆಯಲ್ಲಿ ಹೊಸ ಹೊಸ ಕ್ರಿಯೇಟಿವ್‌ ಐಡಿಯಾಗಳನ್ನು ಹುಡುಕುತ್ತಿದ್ದಾರೆ.

ಸ್ವಯಂ ದಿಗ್ಬಂಧನದ ಕಾರಣ ಮಹಿಳೆಯರು ಇನ್ನಷ್ಟು ಸ್ವತಂತ್ರವಾಗಿರಲೆಂದು ಬ್ರಾ ಇಲ್ಲದೇ ಆರಾಮಾಗಿ ಮನೆಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ನೀವು ಮಹಿಳೆಯರಾಗಿದ್ದಲ್ಲಿ, ಬ್ರಾ ಹುಕ್ಸ್ ತೆಗೆದಾಗ ಅದೆಷ್ಟು ಆರಾಮ ಎನಿಸುತ್ತದೆ ಎಂದು ತಿಳಿಸಿ ಹೇಳಬೇಕಿಲ್ಲ.

ದಿನವಿಡೀ ಬ್ರಾನ ಬಿಗುವಾದ ಬಂಧನದಲ್ಲಿ ಇರಬೇಕಾದ ಅನಿವಾರ್ಯತೆಯಿಂದ ಮಹಿಳೆಯರಿಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದ್ದು, ಕರೋನಾ ವೈರಸ್ ಲಾಕ್‌ಡೌನ್‌ ವೇಳೆಯಲ್ಲಿ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡು ಕೆಲ ದಿನಗಳ ಮಟ್ಟಿಗೆ ಆರಾಮವಾಗಿ ಇರಲು ನಿರ್ಧರಿಸಿದ್ದಾರೆ.

ಈ ಅನುಭೂತಿಯಿಂದ ತಮಗೆ ಎರಡು ವಾರಗಳ ಮಟ್ಟಿಗೆ ನಿರಾಳತೆ ಸಿಗಲಿದೆ ಎಂದು ಮಹಿಳೆಯರು ತಮ್ಮ ಸಂತಸವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಜಗ್ಗೇಶ್ ಗೆ ಜೋಡಿಯಾಗುತ್ತಾರಾ ರಾಧಿಕಾ ಕುಮಾರಸ್ವಾಮಿ…?

Posted: 21 Mar 2020 08:36 AM PDT

ನಟ ಜಗ್ಗೇಶ್ ಅದ್ಭುತ ನಟ ಅನ್ನೋದು ಗೊತ್ತಿರುವ ವಿಚಾರ. ಯಾವುದೇ ಪಾತ್ರವನ್ನಾದರೂ ನೀರು ಕುಡಿದ ರೀತಿಯಲ್ಲಿ ನಟಿಸೋದ್ರ ಜೊತೆಗೆ ಕಾಮಿಡಿ ಮೂಲಕ ಅನೇಕರನ್ನು ನಕ್ಕು ನಗಿಸುವ ಮೂಲಕ ಜನ ಮನ ಗೆದ್ದಿದ್ದಾರೆ. ಸದ್ಯ ಈ ನಟ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.

ಹೌದು, ಜಗ್ಗೇಶ್ ಹಾಗೂ ಗುರುಪ್ರಸಾದ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ರಂಗನಾಯಕ ಸಿನಿಮಾ ಸದ್ಯ ಮುಹೂರ್ತ ಕಂಡಿದೆ. ಈ ಸಿನಿಮಾ ಸೆಟ್ಟೇರಲು ಕೊರೊನಾ ಎಫೆಕ್ಟ್ ಇರುವುದರಿಂದ ಚಿತ್ರೀಕರಣ ತಡವಾಗಿದೆ. ಈ ಸಿನಿಮಾಗೆ ಇನ್ನು ನಾಯಕಿಯನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಈ ಸಿನಿಮಾಗೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗುತ್ತಾರೆ ಎನ್ನಲಾಗಿದೆ. ಜೊತೆಗೆ ರಚಿತಾ ರಾಮ್ ಕೂಡ ಸಿನಿಮಾದಲ್ಲಿರಲಿದ್ದಾರಂತೆ. ಈ ಸುದ್ದಿ ಗಾಂಧಿ ನಗರದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರ ತಂಡ ಇನ್ನು ಅಧಿಕೃತ ಮಾಡಿಲ್ಲ.

ಪ್ರಧಾನಿ ಮೋದಿಯವರ ‘ಜನತಾ ಕರ್ಫ್ಯೂ’ ಹೊಗಳಿದ ಆನಂದ್ ಮಹೀಂದ್ರ

Posted: 21 Mar 2020 08:34 AM PDT

ನವದೆಹಲಿ: ಕರೋನಾ ವೈರಸ್ ತಡೆಗೆ ಸ್ವಯಂ ನಿರ್ಬಂಧ ಹೇರಿಕೊಳ್ಳುವುದೇ ಉತ್ತಮ ನಡೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಮನೆಯಲ್ಲೇ ಜನತಾ ಕರ್ಫ್ಯೂ ವಿಧಿಸಿಕೊಳ್ಳುವಂತೆ ನೀಡಿದ್ದ ಸಲಹೆಯನ್ನು ಉದ್ಯಮಿ ಆನಂದ್ ಮಹೇಂದ್ರಾ ಕೊಂಡಾಡಿದ್ದಾರೆ.

ಈ ಬಗ್ಗೆ ಆನಂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ತಾವು ಭಾನುವಾರ ಸಂಜೆ ಕುಟುಂಬದವರ ಜೊತೆ ಬಾಲ್ಕನಿಗೆ ಬಂದು ಐದು ನಿಮಿಷ ಚಪ್ಪಾಳೆ ಹೊಡೆಯುವ ಮೂಲಕ ಕಣ್ಣಿಗೆ ಕಾಣದ ಹೀರೋಗಳನ್ನು ಅಭಿನಂದಿಸುತ್ತೇವೆ. ಈ ಸಂದರ್ಭದಲ್ಲಿ ಯಾವುದೇ ಅಡಚಣೆ ಇಲ್ಲದೆ ಒಂದು ದೇಶ ಒಂದು ಧ್ವನಿ ಎಂಬ ಘೋಷಣೆ ಮಾಡುತ್ತೇವೆ ಎಂದಿದ್ದಾರೆ.

ಇವರ ಈ ಮಾತು ಟ್ವಿಟ್ಟಿಗರ ಗಮನ ಸೆಳೆದಿದ್ದು ಭರ್ಜರಿ ಚರ್ಚೆಗಳನ್ನು ಹುಟ್ಟುಹಾಕಿದೆ. ಹಾಗೂ ಭಾರಿ ವೈರಲ್ ಆಗಿದೆ. ಹೌದು ನಾವು ಚಪ್ಪಾಳೆ ತಟ್ಟುತ್ತೇವೆ. ಈ ಮಹಾಮಾರಿಯನ್ನು ಹೊಡೆದೋಡಿಸಲು ಶ್ರಮಿಸುತ್ತಿರುವವರಿಗಾಗಿ ಎಂದು ಒಬ್ಬ ಬರೆದುಕೊಂಡಿದ್ದಾನೆ. ಹೀಗೆ ನಾನಾ ಕಮೆಂಟ್ ಗಳು ವ್ಯಕ್ತವಾಗಿವೆ.

ಮುದ್ದು ನಾಯಿ ಜೊತೆಗಿನ ಪುಟ್ಟ ಬಾಲಕಿಯ ಡಾನ್ಸ್ ವಿಡಿಯೋ ವೈರಲ್

Posted: 21 Mar 2020 08:32 AM PDT

ಮಕ್ಕಳು ಹಾಗೂ ಸಾಕು ಪ್ರಾಣಿಗಳದ್ದು ಯಾವಾಗಲೂ ಸಖತ್‌ ಬಾಂಡಿಂಗ್. ಸಾಕು ನಾಯಿಯೊಂದಿಗೆ ಡ್ಯಾನ್ಸ್ ಮಾಡುತ್ತಾ ಇರುವ ಪುಟಾಣಿ ಪುಟ್ಟಿಯ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಕಂಡು ಎಂಜಾಯ್ ಮಾಡುತ್ತಿದ್ದಾರೆ.

ಕಾಲೇಜೊಂದರಲ್ಲಿ ಸಹಾಯಕ ಪ್ರೊಫೆಸರ್‌ ಆಗಿರುವ ಕ್ಯಾರ‍್ರಿ ಲೆವಾನ್, ತನ್ನ ಮುದ್ದು ಮಗಳು ಮೆಚ್ಚಿನ ನಾಯಿ ಓಟಿಸ್‌ನೊಂದಿಗೆ ಚಿನ್ನಾಟದಲ್ಲಿ ತೊಡಗಿರುವ ವಿಡಿಯೋವನ್ನು ಮಾಡಿ ಟ್ವಿಟರ್‌ನಲ್ಲಿ ಶೇ‌ರ್‌ ಮಾಡಿಕೊಂಡಿದ್ದಾರೆ.

ಈ ಡ್ಯಾನ್ಸಿಂಗ್ ಪಾರ್ಟ್‌‌ನರ್‌ಗಳನ್ನು ಕಂಡ ನೆಟ್ಟಿಗರು ಸಖತ್‌ ಖುಷಿಯಾಗಿದ್ದು, ಈ ಪೋಸ್ಟಿಗೆ ಕಾಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದೆ.

ಶಾಕಿಂಗ್ ನ್ಯೂಸ್: ಬರಿಗೈನಲ್ಲೇ ಕರೋನಾ ಪೀಡಿತರ ಶುಶ್ರೂಷೆ ಮಾಡಿ ಮೃತಪಟ್ಟ ವೈದ್ಯ

Posted: 21 Mar 2020 08:31 AM PDT

ಕರೋನಾ ವೈರಸ್‌ನ ಕರಾಳರೂಪವನ್ನು ನೋಡುತ್ತಿರುವ ಇಟಲಿಯಲ್ಲಿ ಸಾವಿರಾರು ಮಂದಿಗೆ ಈ ವೈರಾಣುಗಳು ಅಂಟಿದ್ದು, ವೈದ್ಯರ ಗಂಭೀರ ಕೊರತೆ ಎದ್ದು ಕಾಣುತ್ತಿದೆ.

ಇದರೊಂದಿಗೆ ವೈದ್ಯಕೀಯ ಗ್ಲೌಸ್‌ಗಳು, ಮಾಸ್ಕ್‌ಗಳ ಪೂರೈಕೆಗೂ ತತ್ವಾರವೆದ್ದಿದ್ದು, ಕರೋನಾ ಪೀಡಿತ ರೋಗಿಗಳ ಶುಶ್ರೂಷೆ ಮಾಡುತ್ತಾ ತಮ್ಮ ಹಗಲು/ರಾತ್ರಿಗಳನ್ನು ಕಳೆಯುತ್ತಿರುವ ವೈದ್ಯರು ಹಾಗೂ ನರ್ಸ್‌ಗಳಿಗೆ ದೊಡ್ಡ ತಲೆನೋವಾಗಿದೆ.

ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿರುವ ಮಿಲನ್‌ನ ಉಪನಗರ ಕೊಡೋಗ್ನೋದಲ್ಲಿ ಕೆಲಸ ಮಾಡುತ್ತಿರುವ ಮಾರ್ಸೆಲ್ಲೋ ನಟಾಲಿ ಎಂಬ ವೈದ್ಯರೊಬ್ಬರಿಗೆ ಇದರ ಬಿಸಿ ತಟ್ಟಿದೆ.

ಅವರ ಆಸ್ಪತ್ರೆಯಲ್ಲಿ ಗ್ಲೌಸ್‌ಗಳ ಸಪ್ಲೈ ಇಲ್ಲದೇ ಇದ್ದ ಕಾರಣ, ಬರಿಗೈಯಲ್ಲೇ ರೋಗಿಗಳ ತಪಾಸಣೆ ಮಾಡಿದ ಅವರು, ಕರೋನಾ ವೈರಾಣುಗಳು ತಗುಲಿ, ದುರಂತಮಯ ಸಾವು ಕಂಡಿದ್ದಾರೆ.

ಕಳೆದ ವಾರವಷ್ಟೇ ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಾಲಿ, “ಇಂಥ ಪರಿಸ್ಥಿತಿ ಎದುರಿಸಲು ನಾವು ಸಿದ್ಧವಾಗಿಯೇ ಇರಲಿಲ್ಲ. ಅದರಲ್ಲೂ ನಮ್ಮ ತಲೆಮಾರಿನವರು, ಆಂಟಿಬಯಾಟಿಕ್‌ ನಂತರದ ಕಾಲಘಟ್ಟದವರು, ಎಲ್ಲ ರೀತಿಯ ರೋಗಕ್ಕೂ ಒಂದೇ ಒಂದು ಮಾತ್ರೆ ಸಾಕು ಎಂಬ ಮನೋಭಾವದಿಂದ ಬೆಳೆದುಬಿಟ್ಟಿದ್ದೇವೆ” ಎಂದಿದ್ದರು.

ಗುಡ್ ನ್ಯೂಸ್: ಪಡಿತರ ಅಂಗಡಿಗಳಲ್ಲೂ ಸಿಗುತ್ತೆ ಮಾಸ್ಕ್, ಸ್ಯಾನಿಟೈಸರ್

Posted: 21 Mar 2020 07:51 AM PDT

ನವದೆಹಲಿ: ನೈರ್ಮಲ್ಯ ಉತ್ಪನ್ನಗಳಾದ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಪಡಿತರ ಅಂಗಡಿಗಳ ಮೂಲಕ ನ್ಯಾಯಯುತ ಬೆಲೆಗಳಲ್ಲಿ ಸುಲಭವಾಗಿ ಲಭ್ಯವಾಗುವಂತೆ ವಿತರಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಗ್ರಾಹಕ ವ್ಯವಹಾರಗಳ ಸಚಿವಾಲಯ ಈ ಕುರಿತು ರಾಜ್ಯ ಸರ್ಕಾರಗಳಿಗೆ ಮಾಹಿತಿ ಕೇಳಿದ್ದು, ನೈರ್ಮಲ್ಯ ಉತ್ಪನ್ನಗಳಾದ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಫೇಸ್ ಮಾಸ್ಕ್ ಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲು ತಿಳಿಸಲಾಗಿದೆ.

ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಪವನ್ ಅಗರವಾಲ್, ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯ ಸರ್ಕಾರಗಳ ಪ್ರತಿನಿಧಿಗಳೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದು, ಉದ್ಯಮದ ಪ್ರತಿನಿಧಿಗಳು ಇಂತಹ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ವಿತರಿಸಲು ಆಸಕ್ತಿ ತೋರಿದ್ದಾರೆ. ಕಡಿಮೆ ಬೆಲೆಗೆ ಪಡಿತರ ಅಂಗಡಿಗಳ ಮೂಲಕ ವಿತರಿಸಬಹುದು ಎಂದು ಹೇಳಿದ್ದಾರೆ.

ಈಗಾಗಲೇ ಕೆಲವು ರಾಜ್ಯಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಈ ವಸ್ತುಗಳನ್ನು ವಿತರಿಸಲು ಆರಂಭಿಸಿದ್ದು ಉಳಿದ ರಾಜ್ಯಗಳು ಇಂತಹ ಮಾದರಿಯನ್ನು ಅನುಸರಿಸಬಹುದಾಗಿದೆ. ದೆಹಲಿ ಸರ್ಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಫೇಸ್ ಮಾಸ್ಕ್, ಗ್ಲೌಸ್, ಸೋಪ್, ಸ್ಯಾನಿಟೈಸರ್ ಗಳನ್ನು ವಿತರಿಸುತ್ತಿದೆ. ಅಗತ್ಯವಸ್ತುಗಳ ಕಾಯ್ದೆಯಡಿ ನೈರ್ಮಲ್ಯ ಉತ್ಪನ್ನಗಳಾದ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ತರಲಾಗಿದ್ದು, ಈ ಅಗತ್ಯ ಸಾಮಗ್ರಿಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ಸರಕುಗಳ ಬೆಲೆ ಬಗ್ಗೆ ಮೇಲ್ವಿಚಾರಣೆ ನಡೆಸುವಂತೆ ಅವರು ರಾಜ್ಯ ಸರ್ಕಾರಗಳಿಗೆ ತಿಳಿಸಿದ್ದಾರೆ. ಇನ್ನು ಆರು ತಿಂಗಳಿಗೆ ಆಗುವಷ್ಟು ಪಡಿತರ ವಿತರಣೆಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

‘ಕರೋನಾ’ ನಿಯಂತ್ರಣದ ಕುರಿತು ಹರಿದಾಡುತ್ತಿರುವ ಈ ವಾಟ್ಸಾಪ್ ಸುದ್ದಿಯನ್ನು ನಂಬಬೇಡಿ

Posted: 21 Mar 2020 07:29 AM PDT

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕರೋನಾದಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ದಿನಕ್ಕೆ ನೂರಾರು ಸಲಹೆ ಬರುತ್ತವೆ. ಆದರೆ ಇದರಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ ಎನ್ನುವುದೇ ಗೊಂದಲ.

ಇದೀಗ ಈ ರೀತಿಯ ಒಂದು ಸಲಹೆ ಪೈಕಿ ಒಂದಾಗಿರುವ, 15 ನಿಮಿಷಕ್ಕೊಮ್ಮೆ ನೀರು ಕುಡಿಯಬೇಕು‌. ಇದರಿಂದ ಕರೋನಾ‌ ನಿಲ್ಲಿಸಬಹುದು ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇದು ಸುಳ್ಳು ಎಂದು ಹೇಳಲಾಗಿದೆ.

ಈ‌ ಬಗ್ಗೆ ಪಿಐಬಿ ತನ್ನ ಟ್ವೀಟರ್ ಖಾತೆಯಲ್ಲಿ ಫ್ಯಾಕ್ಟ್ ಚೆಕ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ನೀರು ಕುಡಿಯುವುದರಿಂದ ಮಾತ್ರ ಕರೋನಾ ತಡೆಗಟ್ಟಲು ಸಾಧ್ಯವಿಲ್ಲ ಎಂದಿದೆ.

ಇನ್ನು ಕರೋನಾದಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗವೆಂದರೆ ಅದು ಉಸಿರಾಡುವ ಜಾಗವನ್ನು ಸ್ವಚ್ಛವಾಗಿಡುವಂತೆ ನೋಡಿಕೊಳ್ಳುವುದು, ಕೈ ತೊಳೆಯುವುದು ಹಾಗೂ ಹೆಚ್ಚು ಜನ ಸೇರದಿರುವಂತೆ ನೋಡಿಕೊಳ್ಳುವುದು ಎಂದು ಸ್ಪಷ್ಟಪಡಿಸಿದೆ.

ATM ಗಳಲ್ಲಿ ಕೊರೋನಾ ಸೋಂಕಿತರು ಹಣ ಡ್ರಾ ಮಾಡಿದ್ರೆ ಅಪಾಯ ಗ್ಯಾರಂಟಿ

Posted: 21 Mar 2020 07:10 AM PDT

ಕೊರೋನಾ ಸೋಂಕು ತಡೆಗೆ ರಾಜ್ಯದ ಎಲ್ಲ ಎಟಿಎಂಗಳಲ್ಲಿ ಮುಂಜಾಗ್ರತೆ ಕ್ರಮಕೈಗೊಳ್ಳುವಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದ ಯಾವುದೇ ಎಟಿಎಂಗಳಲ್ಲೂ ಸುರಕ್ಷೆ ಇಲ್ಲವಾಗಿದೆ. ನಿತ್ಯವೂ ಹಣ ಡ್ರಾ ಮಾಡಲು ನೂರಾರು ಗ್ರಾಹಕರು ಎಟಿಎಂಗಳಿಗೆ ಬಂದು ಹೋಗುತ್ತಾರೆ. ಕೊರೋನಾ ವೈರಸ್ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು. ಪ್ರತಿ ಎಟಿಎಂ ಕೇಂದ್ರಗಳಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಕಡ್ಡಾಯವಾಗಿ ಇಡಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ದುರದೃಷ್ಟವಶಾತ್ ಕೊರೋನಾ ಸೋಂಕಿತರು ಹಣ ಡ್ರಾ ಮಾಡಿದರೆ ಅಮಾಯಕರು ಬಲಿಯಾಗುವ ಸಾಧ್ಯತೆ ಇರುತ್ತದೆ. ಎಲ್ಲಾ ಬ್ಯಾಂಕುಗಳು ತುರ್ತಾಗಿ ಎಟಿಎಂಗಳಲ್ಲಿ ಸಮರೋಪಾದಿಯಲ್ಲಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಹೆಚ್.ಡಿ.ಕೆ. ಆಗ್ರಹಿಸಿದ್ದಾರೆ.

ಹಕ್ಕಿಜ್ವರ ಭೀತಿ: ಸದ್ಯಕ್ಕೆ ಚಿಕನ್, ಮೊಟ್ಟೆ ಸೇವನೆ ಬೇಡ

Posted: 21 Mar 2020 07:03 AM PDT

ಶಿವಮೊಗ್ಗ: ಸಾರ್ವಜನಿಕರು ಕೋಳಿ ಹಾಗೂ ಮೊಟ್ಟೆಗಳನ್ನು ಸೇವನೆ ಮಾಡದಂತೆ, ಕೋಳಿ ಮಾಂಸ ಮತ್ತು ಮೊಟ್ಟೆಗಳ ಮಾರಾಟಗಾರರು ಜಿಲ್ಲಾಡಳಿತ ಕೈಗೊಂಡಿರುವ ಮಹತ್ವದ ನಿರ್ಣಯಕ್ಕೆ ಸಹಕರಿಸುವಂತೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಅವರು ಇಂದು ಮಹಾನಗರಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಕೊರೋನಾ ವೈರಸ್ ಹರಡದಂತೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು ಹಾಗೂ ಜಿಲ್ಲಾಡಳಿತದ ವತಿಯಿಂದ ಈವರೆಗೆ ಆಯೋಜಿಸಲಾದ ಕಾರ್ಯಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ನೆರೆಯ ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯಲ್ಲಿ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾತ್ಕಾಲಿಕವಾಗಿ ಅಂದರೆ ರೋಗ ನಿಯಂತ್ರಣಕ್ಕೆ ಬರುವವರೆಗೆ ಸಾರ್ವಜನಿಕರು ಕೋಳಿ ಹಾಗೂ ಮೊಟ್ಟೆಗಳನ್ನು ಸೇವನೆ ಮಾಡದಂತೆ ಸೂಚಿಸಿರುವ ಅವರು, ಕೋಳಿ ಮಾಂಸ ಮತ್ತು ಮೊಟ್ಟೆಗಳ ಮಾರಾಟಗಾರರು ಜಿಲ್ಲಾಡಳಿತ ಕೈಗೊಂಡಿರುವ ಈ ಮಹತ್ವದ ನಿರ್ಣಯಕ್ಕೆ ಸಹಕರಿಸುವಂತೆ ತಿಳಿಸಿದ್ದಾರೆ.

ಕೊರೋನಾ ಶಂಕಾಸ್ಪದ ವ್ಯಕ್ತಿಗಳ ತಪಾಸಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು. ಚಿಕಿತ್ಸೆಗೆ ಆಸ್ಪತ್ರೆಗೆ ಬರುವ ಶಂಕಾಸ್ಪದ ವ್ಯಕ್ತಿಗಳಿಗೆ ವಿಶ್ವಾಸಪೂರ್ಣ ಚಿಕಿತ್ಸೆ ದೊರೆಯುವಂತಾಗಬೇಕು. ಅದಕ್ಕಾಗಿ ತಜ್ಞ ಸಿಬ್ಬಂದಿ ಸದಾ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಿದ ಅವರು, ಕೊರೋನಾ ರಾಜ್ಯದಲ್ಲಿ ಎರಡನೇ ಹಂತದಲ್ಲಿದ್ದು ಮುಂದಿನ ಹಂತಕ್ಕೆ ತಲುಪದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಷ್ಟೇ ಅಲ್ಲದೇ ಖಾಸಗಿ ಪ್ರಯೋಗಾಲಯಗಳಲ್ಲೂ ರಕ್ತದ ಮಾದರಿಗಳನ್ನು ತಪಾಸಣೆ ಮಾಡಲು ಅನುಮತಿ ನೀಡುವ ಕುರಿತು ಸಂಬಂಧಿಸಿದ ಇಲಾಖೆಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಶೀಘ್ರದಲ್ಲಿ ಆಸಕ್ತರಿರುವ ಖಾಸಗಿ ಪ್ರಯೋಗಾಲಯಗಳ ಮುಖ್ಯಸ್ಥರಿಗೂ ಇಲಾಖೆಯ ವತಿಯಿಂದ ಅಧಿಕೃತ ಪರವಾನಿಗೆ ನೀಡಲಾಗುವುದಲ್ಲದೇ ಪರೀಕ್ಷಾರ್ಥ ಕಿಟ್‍ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕೊರೋನ ನಿಯಂತ್ರಣದ ಕುರಿತು ದೇಶದಾದ್ಯಂತ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯರು, ದಾದಿಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲು ದೇಶದ ಪ್ರಧಾನಿ ಅವರು ಕೊಟ್ಟಿರುವ ಕರೆಯಂತೆ ಮಾರ್ಚ್ 22ರಂದು ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಸ್ವಯಂ ಜನತಾ ಕರ್ಫ್ಯೂ ವಿಧಿಸಿಕೊಂಡು ಸಂಜೆ 5ಗಂಟೆಗೆ ತಮ್ಮ ಮನೆಯಲ್ಲಿಯೇ ಇದ್ದು, ಮನೆಯ ಬಾಗಿಲಿಗೆ ಬಂದು ಶ್ರಮಿಕ ವೈದ್ಯರಿಗೆ ಕೃತಜ್ಞತಾಪೂರ್ವಕವಾಗಿ ಚಪ್ಪಾಳೆ ಮೂಲಕ ಸಹಕರಿಸುವಂತೆ ತಿಳಿಸಿದ್ದಾರೆ.

ಇದರಿಂದಾಗಿ ಕಾಯಿಲೆಯ ನಿಯಂತ್ರಣವಾಗಲಿದೆ. ಮಾತ್ರವಲ್ಲದೇ ಜನಸಾಮಾನ್ಯರಲ್ಲಿ ಕಾಯಿಲೆ ಹರಡುವಿಕೆಯ ತೀವ್ರತೆಯ ಅರಿವು ಮೂಡಲಿದೆ. ಇದರಿಂದಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಮನೆಯಲ್ಲಿರುವ ಅನುಷ್ಕಾ- ವಿರಾಟ್ ಮುದ್ದಾದ ಫೋಟೋ ವೈರಲ್

Posted: 21 Mar 2020 06:43 AM PDT

अनुष्का शर्मा और विराट कोहली

ಕರೋನಾ ವೈರಸ್‌ನಿಂದಾಗಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮನ್ನು ಪ್ರತ್ಯೇಕಿಸಿಕೊಳ್ಳುವ ಮೂಲಕ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.

ಈ ದಿನಗಳಲ್ಲಿ ಅನುಷ್ಕಾ ಶರ್ಮಾ ಮತ್ತು  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಇಬ್ಬರೂ ಹೆಚ್ಚು ಪ್ರೀತಿಯಲ್ಲಿ ಬಿದ್ದಂತೆ ಕಾಣ್ತಿದೆ. ಅನುಷ್ಕಾ ಇನ್ಸ್ಟ್ರಾಗ್ರಾಮ್ ನಲ್ಲಿ ಕೊಹ್ಲಿ ಜೊತೆಗಿರುವ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಇದ್ರಲ್ಲಿ ಇಬ್ಬರೂ ಮುಖವನ್ನು ವಿಚಿತ್ರವಾಗಿ ಮಾಡಿಕೊಂಡಿದ್ದಾರೆ. ಸ್ವಯಂ ಪ್ರತ್ಯೇಕತೆ ಪರಸ್ಪರ ಪ್ರೀತಿಸಲು ನೆರವಾಗುತ್ತದೆ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ಅನುಷ್ಕಾ ಈ ಪೋಸ್ಟ್ ಗೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೂಡ ಅನುಷ್ಕಾ ಫೋಟೋಕ್ಕೆ ಕಮೆಂಟ್ ಮಾಡಿದ್ದಾರೆ. ಕರೋನಾ ವೈರಸ್‌ಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಅನುಷ್ಕಾ ಶರ್ಮಾ ಹಾಗೂ ಕೊಹ್ಲಿ ಈಗಾಗಲೇ ಜನರಿಗೆ ಮನವಿ ಮಾಡಿದ್ದಾರೆ.

ಅವಶ್ಯಕತೆ ಬಿದ್ರೆ ದೆಹಲಿಯಲ್ಲಿ ‘ಲಾಕ್ ಡೌನ್’

Posted: 21 Mar 2020 06:40 AM PDT

ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿನ ದಿನಕ್ಕೆ ಹೆಚ್ಚುತ್ತಿದೆ. ಕರೋನಾ ಸೋಂಕಿತರ ಸಂಖ್ಯೆ 310ಕ್ಕೇರಿದೆ. ಕರೋನಾದ ಪರಿಣಾಮ ಪರಿಶೀಲಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬೆಳಗಿನ ನಡಿಗೆಯನ್ನು ಸ್ವಲ್ಪ ದಿನಗಳವರೆಗೆ ನಿಲ್ಲಿಸಿ ಮನೆಯಲ್ಲಿಯೇ ಇರಬೇಕೆಂದು ಜನರಿಗೆ ಮನವಿ ಮಾಡಿದ್ದಾರೆ. ಈ ಸಮಯದಲ್ಲಿ ಲಾಕ್ ಡೌನ್ ಮಾಡುತ್ತಿಲ್ಲ. ಆದರೆ ಅವಶ್ಯವೆನಿಸಿದ್ರೆ ಮುಂದಿನ ದಿನಗಳಲ್ಲಿ ಲಾಕ್ ಡೌನ್ ಮಾಡುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.

ಯಾವುದೇ ಸ್ಥಳದಲ್ಲಿ ಐದು ಅಥವಾ ಹೆಚ್ಚಿನ ಜನರು ಸೇರಲು ಸಾಧ್ಯವಿಲ್ಲ. ಐದು ಜನರು ಒಟ್ಟಿಗೆ ಇದ್ದರೆ ಅವರು ಪರಸ್ಪರ ಕನಿಷ್ಠ ಒಂದು ಮೀಟರ್ ದೂರವನ್ನು ಕಾಯ್ದುಕೊಳ್ಳಬೇಕು. ಮೊದಲ ಆದೇಶದಲ್ಲಿ 20 ಅಥವಾ ಹೆಚ್ಚಿನ ಜನರು ಒಂದೇ ಸ್ಥಳದಲ್ಲಿ ಸೇರುವುದನ್ನು ತಡೆಯಲಾಗಿತ್ತು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಭಾನುವಾರ ಸಾರ್ವಜನಿಕ ಕರ್ಫ್ಯೂ ಕಾರಣ ದೆಹಲಿಯಲ್ಲಿ ಶೇಕಡಾ 50ರಷ್ಟು ಬಸ್ಸುಗಳು ಓಡುವುದಿಲ್ಲ ಎಂದವರು ಹೇಳಿದ್ದಾರೆ. ಅಂತರ ಕಾಯ್ದುಕೊಳ್ಳಲು  ಹೋಟೆಲ್‌ಗಳಲ್ಲಿ ಉಳಿದುಕೊಂಡಿರುವ ಜನರಿಗೆ ಜಿಎಸ್‌ಟಿ ಮನ್ನಾ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.

ಕ್ಯಾರಂಟೈನ್ ಸೆಂಟರ್ ನಿಂದ ಪರಾರಿಯಾಗಿದ್ದ ಕೊರೋನಾ ಸೋಂಕಿತ ಅರೆಸ್ಟ್

Posted: 21 Mar 2020 06:21 AM PDT

ಬೆಂಗಳೂರು: ಕ್ವಾರಂಟೈನ್ ಸೆಂಟರ್ ನಿಂದ ಪರಾರಿಯಾಗಿದ್ದ ಕೊರೋನಾ ಶಂಕಿತ ವ್ಯಕ್ತಿ ಕೊನೆಗೂ ಪತ್ತೆಯಾಗಿದ್ದಾನೆ. ವಿದೇಶದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್ ಸೆಂಟರ್ ನಿಂದ ಎಸ್ಕೇಪ್ ಆಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

67 ವರ್ಷದ ವ್ಯಕ್ತಿ ಆಸ್ಟ್ರೇಲಿಯಾದಿಂದ ಬಂದು ತಪ್ಪಿಸಿಕೊಂಡಿದ್ದ. ತಮಿಳುನಾಡು ಕೊಯಮುತ್ತೂರು ಬಳಿ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಆಸ್ಟ್ರೇಲಿಯಾದಿಂದ ಬಂದಿದ್ದ ವ್ಯಕ್ತಿಗೆ ಪ್ರತ್ಯೇಕವಾಗಿ ಇರಲು ಸೂಚಿಸಲಾಗಿತ್ತು. 14 ದಿನ ಪ್ರತ್ಯೇಕವಾಗಿರಲು ತಿಳಿಸಿದ್ದರೂ, ಕ್ವಾರಂಟೈನ್ ಸೆಂಟರ್ ನಿಂದ ಪರಾರಿಯಾಗಿದ್ದ ಆತನನ್ನು ವಶಕ್ಕೆ ಪಡೆಯಲಾಗಿದೆ.

ದೇವನಹಳ್ಳಿ ಎಸ್.ಐ. ನಾಗರಾಜ್ ಅವರ ನೇತೃತ್ವದ ತಂಡದಿಂದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಆತನನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ಹೇಳಲಾಗಿದೆ.

70 ಕೆಜಿ ಅಕ್ಕಿ, 4 ಕೆಜಿ ಗೋಧಿ ವಿತರಣೆ: ಆಹಾರ ಖಾತೆ ಸಚಿವ ಗೋಪಾಲಯ್ಯ

Posted: 21 Mar 2020 06:04 AM PDT

ಬೆಂಗಳೂರು: ಕೊರೋನಾ ಸೋಂಕು ಹರಡುವ ಭೀತಿ ಹಿನ್ನಲೆಯಲ್ಲಿ ಎರಡು ತಿಂಗಳ ಪಡಿತರವನ್ನು ಒಂದೇ ಸಲ ವಿತರಿಸಲಾಗುವುದು.

ಏಪ್ರಿಲ್ ಮೊದಲ ವಾರ ಎರಡು ತಿಂಗಳ ಪಡಿತರ ವಿತರಿಸಲಿದ್ದು, 70 ಕೆಜಿ ಅಕ್ಕಿ, 4 ಕೆಜಿ ಗೋಧಿಯನ್ನು ಅಂತ್ಯೋದಯ ಕಾರ್ಡ್ ದಾರರಿಗೆ ವಿತರಿಸಲಾಗವುದು ಎಂದು ಹೇಳಳಾಗಿದೆ.

ಏಪ್ರಿಲ್ ಮೊದಲ ವಾರದಲ್ಲಿ ಎರಡು ತಿಂಗಳ ಪಡಿತರ ನೀಡಲಾಗುವುದು ಎಂದು ಆಹಾರ ಖಾತೆ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿ ಬಂದ್ ಮಾಡಲಾಗುವುದು. ಮಾರ್ಚ್ 23, 24 ರಂದು ನ್ಯಾಯಬೆಲೆ ಅಂಗಡಿ ತೆರೆದಿರಬೇಕು. ಎರಡು ದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕಡ್ಡಾಯವಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆದಿರಬೇಕು ಎಂದು ಮಾಹಿತಿ ನೀಡಿದ್ದಾರೆ.

ಶಾಕಿಂಗ್ ನ್ಯೂಸ್: ಒಂದೇ ದಿನ ಐವರಲ್ಲಿ ಕೊರೋನಾ ಪತ್ತೆ, ರಾಜ್ಯದಲ್ಲಿ ಏರುತ್ತಲೇ ಇದೆ ಸೋಂಕಿತರ ಸಂಖ್ಯೆ

Posted: 21 Mar 2020 05:40 AM PDT

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಾಗಿದೆ. ರಾಜ್ಯದಲ್ಲಿ ಇಂದು ಒಟ್ಟು ಐವರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಬೆಂಗಳೂರಿನಲ್ಲಿ ಮೂರು, ಗೌರಿಬಿದನೂರಿನಲ್ಲಿ ಒಂದು, ಸಾಂಸ್ಕೃತಿಕ ನಗರಿ ಮೈಸೂರಿನ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಕೋಲಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಈ ಬಗ್ಗೆ ಮಾಹಿತಿ ನೀಡಿ, ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಇಂದು 5 ಹೊಸ ಪ್ರಕರಣ ಪತ್ತೆಯಾಗಿದೆ. ಮೈಸೂರಿನ ಸೋಂಕಿತ ವ್ಯಕ್ತಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಬೆಂಗಳೂರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ ಬಂದಿದ್ದು, ಅವರು ಸಂಪರ್ಕಿಸಿದವರ ಮಾಹಿತಿ ಕಲೆ ಹಾಕಲಾಗಿದೆ.

ಕೊರೋನಾ ಸೋಂಕಿತರು ವಿಷಯ ಮುಚ್ಚಿಟ್ರೆ, ಕರ್ಫ್ಯೂ ವೇಳೆ ರಸ್ತೆಯಲ್ಲಿ ತಿರುಗಾಡಿದ್ರೆ ಶಿಸ್ತು ಕ್ರಮ

Posted: 21 Mar 2020 05:25 AM PDT

ಬೆಂಗಳೂರು: ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಮಾರ್ಚ್ 22 ರಂದು ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಜನತಾ ಕರ್ಫ್ಯೂ ಇರುತ್ತದೆ.

ಈ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಇರಬೇಕು. ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಹೇಳಿದ್ದಾರೆ.

ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಸೋಂಕು ತಗುಲಿದರೂ ಕೆಲವರು ಮುಚ್ಚಿಡುತ್ತಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂಶಯಸ್ಥರು ಕಂಡುಬಂದರೆ ಪೊಲೀಸರೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಿದ್ದಾರೆ. ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟುವ ಉದ್ದೇಶದಿಂದ ವಿಶೇಷ ಅಧಿಕಾರ ಬಳಸಿ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಕೊರೋನಾ ಎಫೆಕ್ಟ್: ಪಡಿತರ ಚೀಟಿದಾರರಿಗೆ ಇಲ್ಲಿದೆ ʼಮುಖ್ಯ ಮಾಹಿತಿʼ

Posted: 21 Mar 2020 05:13 AM PDT

ಶಿವಮೊಗ್ಗ: ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ ಮಾರ್ಚ್ 22 ರಂದು ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಫ್ಯೂ ಇರುತ್ತದೆ.

ಸ್ವಇಚ್ಛೆಯಿಂದ ಜನತಾ ಕರ್ಫ್ಯೂ ವಿಧಿಸಿಕೊಂಡ ಜನ ಮನೆಯಲ್ಲಿರುವುದರಿಂದ ಮಾರ್ಚ್ 22 ರಂದು ನ್ಯಾಯಬೆಲೆ ಅಂಗಡಿಗಳಿಗೆ ರಜೆ ನೀಡಲಾಗಿದೆ.

ಜನತಾ ಕರ್ಫ್ಯೂ ಇರುವುದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಪಡಿತರ ಚೀಟಿದಾರರು ಆಗಮಿಸುವ ಸಾಧ್ಯತೆ ಕಡಿಮೆ ಇರುವ ಕಾರಣ ಮಾರ್ಚ್ 22 ರಂದು ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ರಜೆ ನೀಡಲಾಗಿದೆ. ಈ ದಿನದ ವಿತರಣೆಯನ್ನು ಮಾರ್ಚ್ 24ರಂದು ಮಂಗಳವಾರ ನಿರ್ವಹಿಸುವಂತೆ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿ ವರ್ತಕರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಸೂಚನೆ ನೀಡಿದ್ದಾರೆ.

No comments:

Post a Comment

Gameforumer QR Scan

Gameforumer QR Scan
Gameforumer QR Scan