Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Wednesday, March 18, 2020

Kannada News | Karnataka News | India News

Kannada News | Karnataka News | India News


ಕಾಲಿಗೆ ಕಪ್ಪು ದಾರ ಕಟ್ಟುವ ಮೊದಲಿರಲಿ ಮುನ್ನೆಚ್ಚರಿಕೆ

Posted: 18 Mar 2020 01:34 PM PDT

ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪುದಾರ ಕಟ್ಟುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಕಪ್ಪುದಾರ ಕಟ್ಟುವುದ್ರಿಂದ ಸಾಕಷ್ಟು ಲಾಭವಿದೆ. ಸುತ್ತಲಿನ ನಕಾರಾತ್ಮಕ ಶಕ್ತಿ ದೂರವಾಗುವ ಜೊತೆಗೆ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಆದ್ರೆ ಕಪ್ಪು ದಾರ ಕಟ್ಟುವ ಮೊದಲು ಕೆಲವೊಂದು ಮುನ್ನೆಚ್ಚರಿಕೆ ವಹಿಸಬೇಕು.

ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸೇರಿದಂತೆ ಶನಿದೋಷ ನಿವಾರಣೆಗೆ ಕಪ್ಪುದಾರವನ್ನು ಕಟ್ಟಲಾಗುತ್ತದೆ. ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಮಕ್ಕಳಿಗೆ ಕಪ್ಪು ದಾರವನ್ನು ಧರಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಿಂಬೆ-ಮೆಣಸಿನಕಾಯಿಯನ್ನು ಕಪ್ಪು ದಾರದಲ್ಲಿ ಕಟ್ಟಿ ಮನೆಯ ಮುಖ್ಯ ಬಾಗಿಲಿಗೆ ಹಾಕಲಾಗುತ್ತದೆ.ಮನೆ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ.

ಕಪ್ಪುದಾರವನ್ನು ಕಟ್ಟುವ ಮೊದಲು ಮುನ್ನೆಚ್ಚರಿಕೆ ವಹಿಸಬೇಕು.ಕಪ್ಪುದಾರವನ್ನು ಮಂತ್ರಿಸಿ ಕಟ್ಟಿಕೊಳ್ಳುವುದು ಉತ್ತಮ.ಇದಕ್ಕೆ ಅರ್ಹ ಜ್ಯೋತಿಷಿಗಳ ಸಲಹೆ ಕೇಳಬೇಕು.ಕಪ್ಪುದಾರ ಕಟ್ಟುವ ಮೊದಲು ಗಾಯತ್ರಿ ಮಂತ್ರವನ್ನು ಜಪಿಸಬೇಕು.ಕಪ್ಪುದಾರ ಕಟ್ಟಿದಾಗ ದೇಹದ ಬೇರೆ ಭಾಗಕ್ಕೆ ಬೇರೆ ಬಣ್ಣದ ದಾರವನ್ನು ಕಟ್ಟಬಾರದು.ಶನಿವಾರ ಕಪ್ಪುದಾರವನ್ನು ಕಟ್ಟುವುದು ಶುಭ.

ಗುರುವಾರದ ದಿನ ಭವಿಷ್ಯ: ಯಾವ ರಾಶಿಗೆ ಶುಭ…? ಯಾವ ರಾಶಿಗೆ ಲಾಭ…?

Posted: 18 Mar 2020 01:29 PM PDT

 

ಮೇಷ ರಾಶಿ:

ಮನೆಯ ಅಗತ್ಯವಾದ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುವುದು ಖಂಡಿತವಾಗಿಯೂ ನಿಮಗೆ ಆರ್ಥಿಕ ತೊಂದರೆಗಳನ್ನು ನೀಡುತ್ತದೆ ಆದರೆ ಇದರಿಂದ ನೀವು ಭವಿಷ್ಯದ ಅನೇಕ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು.

ನಿಮ್ಮ ಪೋಷಕರನ್ನು ಸಂತುಷ್ಟಪಡಿಸುವುದು ನಿಮಗೆ ಕಷ್ಟವೆನಿಸಬಹುದು. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಅವರ ದೃಷ್ಟಿಯಲ್ಲಿ ನೋಡಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿ. ಅವರು ನಿಮ್ಮ ಎಲ್ಲಾ ಗಮನ, ಪ್ರೀತಿ ಮತ್ತು ಸಮಯದ ಹಕ್ಕುದಾರರಾಗಿದ್ದಾರೆ.

ಅದೃಷ್ಟ ಸಂಖ್ಯೆ: 4

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವೃಷಭ ರಾಶಿ:

ಇಂದು ಹಣ ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ. ಇಂದು ನೀವು ಹಣವನ್ನು ಉಳಿಸುವಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಹಳೆಯ ಸ್ನೇಹಿತರು ಬೆಂಬಲ ನೀಡುತ್ತಾರೆ ಮತ್ತು ಉಪಯುಕ್ತವಾಗಿರುತ್ತಾರೆ.

ಪ್ರೀತಿಪಾತ್ರರೊಡನೆ ಸಿಹಿತಿಂಡಿ ಮತ್ತು ಮಿಠಾಯಿ ಹಂಚಿಕೊಳ್ಳುವ ಸಾಧ್ಯತೆಯಿದೆ. ನೀವು ಕೆಲಸದಲ್ಲಿ ಇಂದು ನಿಜವಾಗಿಯೂ ಏನಾದರೂ ಅದ್ಭುತವಾದದ್ದನ್ನು ಮಾಡಬಹುದು.

ಅದೃಷ್ಟ ಸಂಖ್ಯೆ: 7

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಮಿಥುನ ರಾಶಿ:

ಜೀವನ ಸಂಗಾತಿಯೊಂದಿಗೆ ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಜಗಳವಾಗುವ ಸಾಧ್ಯತೆ ಇದೆ. ಇಂದು ನಿಮ್ಮ ದುಂದುಗಾರಿಕೆಯ ಮೇಲೆ ನಿಮ್ಮ ಸಂಗಾತಿ ನಿಮಗೆ ಮಾತುಗಳು ಹೇಳಬಹುದು.

ನೀವು ಮಕ್ಕಳೊಡನೆ ಸ್ವಲ್ಪ ಸಮಯ ಕಳೆಯಬೇಕು ಮತ್ತು ಅವರಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಬೇಕು ಮತ್ತು ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಲು ಕಲಿಸಬೇಕು. ಇಂದು, ನೀವು ನಿಮ್ಮ ಪ್ರಿಯತಮೆ ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿದುಕೊಳ್ಳುತ್ತೀರಿ.

ಅದೃಷ್ಟ ಸಂಖ್ಯೆ: 5

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಕಟಕ ರಾಶಿ:

ನಿಮ್ಮ ಒರಟು ವರ್ತನೆ ನಿಮ್ಮ ಸ್ನೇಹಿತರಿಗೆ ಸ್ವಲ್ಪ ಸಮಸ್ಯೆ ಉಂಟುಮಾಡಬಹುದು. ನೀವು ನಿಮ್ಮ ಇಂದಿನ ದಿನವನ್ನು ಉತ್ತಮಗೊಳಿಸಲು ಕಳೆದ ದಿನಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ, ಅದರ ಪ್ರಯೋಜನವನ್ನು ಇಂದು ನೀವು ಪಡೆಯಬಹುದು.

ಸಂಬಂಧಗಳೊಂದಿಗಿನ ಸಂಬಂಧಗಳು ಹಾಗೂ ಬಂಧಗಳ ನವೀಕರಣದ ಒಂದು ದಿನ. ನಿಮ್ಮ ಪ್ರೇಮಿಯ ಭಾವನಾತ್ಮಕ ಬೆದರಿಕೆಯ ಬೇಡಿಕೆಗಳಿಗೆ ಸಮ್ಮತಿಸಬೇಡಿ. ಕೆಲಸದ ಸ್ಥಳದಲ್ಲಿ ನೀವು ಉತ್ತಮವಾಗಿ ಮಾಡಲು ಬಯಸಿದರೆ, ನಿಮ್ಮ ಕೆಲಸದಲ್ಲಿ ಆಧುನಿಕತೆಯನ್ನು ತರಲು ಪ್ರಯತ್ನಿಸಿ.

ಅದೃಷ್ಟ ಸಂಖ್ಯೆ: 3

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಸಿಂಹ ರಾಶಿ:

ನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ಇಂದು ನೀವು ಅನಗತ್ಯವಾಗಿ ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಅಗತ್ಯವಾದ ಸಮಯದಲ್ಲಿ ನಿಮ್ಮ ಹತ್ತಿರ ಹಣದ ಕೊರತೆ ಇರಬಹುದು.

ನೀವು ಇಂದು ಹಾಜರಾಗುವ ಒಂದು ಸಾಮಾಜಿಕ ಸಮಾರಂಭದಲ್ಲಿ ನೀವೇ ಕೇಂದ್ರ ಬಿಂದುವಾಗಿರುತ್ತೀರಿ. ಪ್ರಯಾಣದಲ್ಲಿ ಪ್ರಣಯ ಸಂಪರ್ಕದ ಸಾಧ್ಯತೆಯಿದೆ. ವ್ಯವಹಾರದ ಜೊತೆ ಸಂತೋಷವನ್ನು ಬೆರೆಸಬೇಡಿ.

ಅದೃಷ್ಟ ಸಂಖ್ಯೆ: 5

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಕನ್ಯಾ ರಾಶಿ:

ಆರೋಗ್ಯದ ಬಗ್ಗೆ ಸ್ವಲ್ಪ ಗಮನ ನೀಡಬೇಕು. ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ ಬರುತ್ತದೆ. ಒಂದು ಧಾರ್ಮಿಕ ಸ್ಥಳಕ್ಕೆ ಭೇಟಿ ಅಥವಾ ಒಂದು ಸಂತನಂಥ ವ್ಯಕ್ತಿ ಸಾಂತ್ವನ ಮತ್ತು ಮನಸ್ಸಿನ ಶಾಂತಿ ತರುತ್ತಾರೆ.

ಸರೋವರದಲ್ಲಿನ ಸೊಗಸಾದ ಮೀನನ್ನು ಸಂಧಿಸುವ ಅವಕಾಶಗಳು ಸಾಧ್ಯತೆಗಳು ಇಂದು ಹೆಚ್ಚಿವೆ. ಕಾರ್ಯಸ್ಥಾನಗಳಲ್ಲಿ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ – ವಿಶೇಷವಾಗಿ ನೀವು ವಿಷಯಗಳನ್ನು ಸಭ್ಯತೆಯಿಂದ ನಿರ್ವಹಿಸದಿದ್ದಲ್ಲಿ.

ಅದೃಷ್ಟ ಸಂಖ್ಯೆ: 6

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ತುಲಾ ರಾಶಿ:

ನಿಮ್ಮ ಮಗುವಿನ ಸಾಧನೆ ನಿಮಗೆ ಅಪಾರ ಸಂತೋಷ ನೀಡಬಹುದು. ದೀರ್ಘ ಕಾಲದ ದೃಷ್ಟಿಕೋನದಿಂದ ಹೂಡಿಕೆ ಮಾಡಬೇಕು. ಯುವಕರನ್ನು ಹೊಂದಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಳ್ಳೆಯ ಸಮಯ. ಪ್ರೀತಿಯ ಸಂತೋಷವನ್ನು ಅನುಭವಿಸಬಹುದು.

ನೀವು ಯಾವುದೇ ಹೊಸ ಯೋಜನೆಯನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಆಲೋಚಿಸಿ. ಇಂದು ಖಾಲಿ ಸಮಯವೂ ಕೆಲವು ಅನುಪಯುಕ್ತ ಕೆಲಸಗಳಲ್ಲಿ ಹಾಳಾಗಬಹುದು.

ಅದೃಷ್ಟ ಸಂಖ್ಯೆ: 3

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವೃಶ್ಚಿಕ ರಾಶಿ:

ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸಗಳನ್ನು ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ. ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ ಬರುತ್ತದೆ.

ಇಂದು ನೀವು ಇತರರ ಅಗತ್ಯಗಳಿಗೆ ಗಮನ ನೀಡಬೇಕಾದರೂ ಮಕ್ಕಳೊಂದಿಗೆ ಅತೀ ಉದಾರತೆ ತೋರಿಸುವುದು ತೊಂದರೆಗೆ ಕಾರಣವಾಗುತ್ತದೆ. ನೀವು ಯಾರಾದರೂ ವಿಶೇಷವಾದವರ ಗಮನ ಸೆಳೆಯುತ್ತೀರಿ – ನೀವು ನಿಮ್ಮ ಗುಂಪಿನಲ್ಲಿ ಚಲಿಸಿದಲ್ಲಿ ಇಂದು ನೀವು ಕೇಂದ್ರಬಿಂದುವಾಗಿರುತ್ತೀರಿ- ಮತ್ತು ಯಶಸ್ಸು ನಿಮ್ಮ ನಿಲುಕಿನೊಳಗಿದೆ.

ಅದೃಷ್ಟ ಸಂಖ್ಯೆ: 5

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಧನಸ್ಸು ರಾಶಿ:

ನಿಮ್ಮ ಹೆಚ್ಚು ಆತ್ಮವಿಶ್ವಾಸವನ್ನು ಇಂದು ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಒತ್ತಡದ ದಿನದ ಹೊರತಾಗಿಯೂ ನೀವು ನಿಮ್ಮ ಚೈತನ್ಯವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ.

ಇಂದು ಸಾಲಗಾರನು ನಿಮ್ಮ ಮನೆ ಬಾಗಿಲಿಗೆ ಬರಬಹುದು ಮತ್ತು ನಿಮ್ಮ ಹತ್ತಿರ ಸಾಲ ಕೇಳಬಹುದು.ಅವರಿಗೆ ಹಣವನ್ನು ಹಿಂದಿರುಗಿಸಿ ನೀವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಬಹುದು. ಸಾಲ ಪಡೆಯುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ.

ನಿಮ್ಮ ವರ್ತನೆಯಲ್ಲಿ, ವಿಶೇಷವಾಗಿ ನಿಮ್ಮ ಸಂಗಾತಿಯ ಜೊತೆ, ತಾಳ ತಪ್ಪದಿರಲಿ. ಇಲ್ಲವಾದರೆ ಅದು ಮನೆಯಲ್ಲಿನ ಶಾಂತಿಯನ್ನು ಹಾಳಾಗಿಸಬಹುದು.

ಅದೃಷ್ಟ ಸಂಖ್ಯೆ: 6

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಮಕರ ರಾಶಿ:

ಏನಾದರೂ ಸರಿಪಡಿಸಲು ಹಾಗೂ ಸ್ನೇಹಿತರ ಜೊತೆ ಏನಾದರೂ ಕುತೂಹಲಕಾರಿ ಹಾಗೂ ಮನರಂಜನೀಯವಾದದ್ದನ್ನು ಮಾಡಲು ಒಂದು ಪರಿಪೂರ್ಣ ದಿನ. ಸಾಮಾಜಿಕ ಅಡೆತಡೆಗಳನ್ನು ದಾಟಲು ಸಾಧ್ಯವಾಗುವುದಿಲ್ಲ. ವೃತ್ತಿಪರ ಗುರಿಗಳನ್ನು ಸಾಧಿಸಲು ನಿಮ್ಮ ಚೈತನ್ಯವನ್ನು ಹೊಂದಿಸಲು ಇದು ಸರಿಯಾದ ಸಮಯ.

ಇಂದು ನೀವು ಉಚಿತ ಕ್ಷಣಗಳಲ್ಲಿ ಯಾವುದೇ ಹೊಸ ಕೆಲಸವನ್ನು ಮಾಡಲು ಯೋಚಿಸುವಿರಿ ಆದರೆ ನಿಮ್ಮ ಅಗತ್ಯವಾದ ಕೆಲಸಗಳು ಸಹ ತಪ್ಪುವಷ್ಟು ನೀವು ಈ ಕೆಲಸದಲ್ಲಿ ಸಿಲುಕಬಹುದು.

ಅದೃಷ್ಟ ಸಂಖ್ಯೆ: 9

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಕುಂಭ ರಾಶಿ:

ನೀವು ಮಾನಸಿಕವಾಗಿ ಅತ್ಯಂತ ದುರ್ಬಲರಾಗಿರುತ್ತೀರಿ – ಆದ್ದರಿಂದ ನೀವು ನೋವಿಗೀಡಾಗಬಹುದಾದ ಸಂದರ್ಭಗಳಿಂದ ದೂರ ಉಳಿಯಿರಿ. ಯಾರಾದರೂ ನಿಮ್ಮ ನೆರೆಹೊರೆಯವರು ಇಂದು ನಿಮ್ಮ ಹತ್ತಿರ ಹಣ ಸಾಲ ಕೇಳಲು ಬರಬಹುದು,

ಅವರಿಗೆ ಸಾಲ ಕೊಡುವುದಕ್ಕಿಂತ ಮುಂಚೆ ಅವರ ನಂಬಿಕೆಯನ್ನು ಅಗತ್ಯವಾಗಿ ಪರೀಕ್ಷಿಸಿ, ಇಲ್ಲದಿದ್ದರೆ ಹಣದ ನಷ್ಟವಾಗುವ ಸಾಧ್ಯತೆ ಇದೆ. ಸಂತೋಷದ – ಚೈತನ್ಯದಾಯಕ – ಪ್ರಿಯವಾದ ಚಿತ್ತದ – ನಿಮ್ಮ ಖುಷಿಯ ಸ್ವಭಾವ ನಿಮ್ಮ ಸುತ್ತಲಿನವರಿಗೆ ಸಂತೋಷ ಮತ್ತು ಖುಷಿಯನ್ನು ತರುತ್ತದೆ.

ಅದೃಷ್ಟ ಸಂಖ್ಯೆ: 2

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಮೀನ ರಾಶಿ:

ನೀವು ಅಭಿಪ್ರಾಯ ನೀಡುವಾಗ ಇತರರ ಭಾವನೆಗಳನ್ನು ವಿಶೇಷವಾಗಿ ಪರಿಗಣಿಸಿ. ನೀವು ಮಾಡಿದ ಯಾವುದೇ ತಪ್ಪು ನಿರ್ಧಾರ ಅವರಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟುಮಾಡದೇ ನಿಮಗೂ ಮಾನಸಿಕ ಒತ್ತಡ ನೀಡುತ್ತದೆ.

ಇನ್ನೂ ಸಂಬಳ ಪಡೆಯದವರು, ಇಂದು ಅವರು ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು ಮತ್ತು ನಿಮ್ಮ ಸ್ನೇಹಿತರಿಂದ ಸಾಲವನ್ನು ಕೇಳಬಹುದು. ಕೆಲವರು ಅವರಿಗೆ ಸಾಧ್ಯವಿರುವುದಕ್ಕಿಂತ ಹೆಚ್ಚು ನೀಡುವ ಭರವಸೆ ನೀಡುತ್ತಾರೆ – ಕೇವಲ ಮಾತನಾಡುವ ಮತ್ತು ಯಾವುದೇ ಫಲಿತಾಂಶಗಳ ನೀಡದ ಇಂಥ ಜನರನ್ನು ಮರೆತುಬಿಡಿ.

ಅದೃಷ್ಟ ಸಂಖ್ಯೆ: 4

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ದೀರ್ಘ ಕಾಲದ ಬಳಿಕ ವಿವಾಹದ ಬಹುದೊಡ್ಡ ಗುಟ್ಟನ್ನು ಬಿಚ್ಚಿಟ್ಟ ಖ್ಯಾತ ನಟಿ

Posted: 18 Mar 2020 08:18 AM PDT

ಸಿನಿಮಾ ನಟಿಯರಿಗೆ ತಮ್ಮ ಕೆರಿಯರ್ ಬಗ್ಗೆ ಭಾರಿ ಭಯ ಇರುತ್ತದೆ. ಇದಕ್ಕೆ ಬಾಲಿವುಡ್ ನ ಖ್ಯಾತ ನಟಿ ಜೂಹಿ ಚಾವ್ಲಾ ಸಹ ಹೊರತಲ್ಲ. ಅವರು ತಾವು ವಿವಾಹವಾಗಿರುವ ವಿಷಯ ಹೊರಗಡೆ ಗೊತ್ತಾದ್ರೆ ಎಲ್ಲಿ ತಮ್ಮ ಮಾರ್ಕೆಟ್ ಕಡಿಮೆಯಾಗುತ್ತದೆಯೋ ಎಂಬ ಹೆದರಿಕೆಯಲ್ಲಿಯೇ ಬಹಳಷ್ಟು ದಿನ ಈ ವಿಷಯವನ್ನು ಮುಚ್ಚಿಟ್ಟಿದ್ದರು. ಹಾಗಾದ್ರೆ ವಿವಾಹದ ಹಿಂದಿನ ಕಹಾನಿ ಬಗ್ಗೆ ಮುಂದೆ ನೋಡೋಣ.

ಭಾರತದ ಸಿನಿಮಾ ಕ್ಷೇತ್ರದಲ್ಲಿ ಮೇರು ನಟಿ ಎಂಬ ಹೆಸರು ಪಡೆದಿದ್ದಾಗ ಅಂದರೆ 1996 ರಲ್ಲಿ ಅವರು ಜೈ ಮೆಹ್ತಾ ಅವರನ್ನು ವಿವಾಹವಾಗುತ್ತಾರೆ. ಈ ಸುಂದರ ಘಳಿಗೆಗೆ ಅವರ ಕುಟುಂಬ ಸದಸ್ಯರು ಹಾಗೂ ಕೆಲವೇ ಸೀಮಿತ ಸ್ನೇಹಿತರನ್ನು ಮಾತ್ರ ಕರೆಯಲಾಗಿತ್ತು. ಇದೊಂದು ರೀತಿ ಗುಸುಗುಸು ಮದುವೆ ಎಂದೇ ಹೇಳಬಹುದಾಗಿತ್ತು.

ಜೂಹಿ ಸಿನಿಮಾ ಕ್ಷೇತ್ರಕ್ಕೆ ಬರುವ ಮುಂಚೆಯೇ ಮೆಹ್ತಾ ಅವರನ್ನು ಭೇಟಿಯಾಗಿದ್ದರು. ಸ್ನೇಹಿತರ ಡಿನ್ನರ್ ಪಾರ್ಟಿಯಲ್ಲಿ ಅವರೊಂದಿಗೆ ಮೊದಮೊದಲು ಮಾತನಾಡಲು ಶುರು ಮಾಡಿದರು.

ಒಂದು ವರ್ಷ ಜೂಹಿ ಅವರ ಹುಟ್ಟುಹಬ್ಬದ ದಿನ ಒಂದು ಟ್ರಕ್ ಗುಲಾಬಿ ಹೂವನ್ನು ಜೈ ಮೆಹ್ತಾ ಕಳುಹಿಸಿದ್ದರು. ವರ್ಷದ ಬಳಿಕ ಜೂಹಿಗೆ ಪ್ರಪೋಸ್ ಮಾಡಿದ್ದರು. ಆದರೆ ಅದಕ್ಕೆ ಜೂಹಿ ಏನೂ ಪ್ರತಿಕ್ರಿಯೆಯನ್ನು ಕೊಟ್ಟಿರಲಿಲ್ಲ.

ಈ ಸಮಯದಲ್ಲಿ ನಡೆದ ಅಪಘಾತದಲ್ಲಿ ಜೂಹಿ ಅವರ ತಾಯಿ ತೀರಿಕೊಂಡಿದ್ದರು. ಆಗ ಜೂಹಿ ಜೊತೆಗೆ ಮೆಹ್ತಾ ಇದ್ದು ಎಲ್ಲ ರೀತಿಯಲ್ಲೂ ಸಹಾಯ ಮಾಡಿದ್ದರು.

ಈ ವೇಳೆ ಮೆಹ್ತಾ ಮೇಲೆ ಜೂಹಿಗೆ ಪ್ರೇಮಾಂಕುರವಾಗಿತ್ತು. ಆಗ ಇಂಟರ್ನೆಟ್ ಹಾಗೂ ಎಲ್ಲೂ ಫೋನ್ ಕ್ಯಾಮೆರಾ ಇರಲಿಲ್ಲ. ಹೀಗಾಗಿ ವಿವಾಹವಾಗಿರುವುದನ್ನು ಹೆಚ್ಚು ಕಾಲ ಗುಟ್ಟಾಗಿ ಇಡಲು ಅನುಕೂಲವಾಯಿತು ಎಂದು ಜೂಹಿ ಹೇಳಿಕೊಂಡಿದ್ದಾರೆ.

ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆಗೆ ಮುಂದಾದ ಪರ್ಫ್ಯೂಮ್ ಕಂಪನಿ…!

Posted: 18 Mar 2020 07:43 AM PDT

ಕರೋನಾ ವೈರಸ್‌ ಭೀತಿಯಿಂದಾಗಿ ಭಾರೀ ಬೇಡಿಕೆಯಲ್ಲಿರುವ ಟಾಯ್ಲೆಟ್ ರೋಲ್‌ಗಳು, ಸ್ಯಾನಿಟರಿ ನ್ಯಾಪ್ಕಿನ್‌ಗಳು, ಮುಖದ ಮಾಸ್ಕ್‌ಗಳು ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ಗಳ ಮಾರಾಟ ತುರುಸಿನಿಂದ ಸಾಗಿದೆ.

ಮಾರುಕಟ್ಟೆಯಲ್ಲಿ ಎದ್ದಿರುವ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಮೇಲ್ಕಂಡ ವಸ್ತುಗಳ ಉತ್ಪಾದಕರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಪರೀತ ಬೇಡಿಕೆ ಹೆಚ್ಚಿರುವ ಕಾರಣ ಐಷಾರಾಮಿ ಉತ್ಪನ್ನಗಳ ಉತ್ಪಾದಕ ಲೂಯಿ ವ್ಯೂಟನ್‌ ಮುಂದಿನ ದಿನಗಳಲ್ಲಿ ಸ್ಯಾನಿಟೈಸರ್‌ಗಳ ಉತ್ಪಾದನೆ ಮಾಡಲಿದ್ದು, ಆಸ್ಪತ್ರೆಗಳಿಗೆ ಪೂರೈಕೆ ಮಾಡಲಿದೆ.

ತನ್ನ ಮೂರು ಪರ್ಫ್ಯೂಮ್‌ ಹಾಗೂ ಕಾಸ್ಮೆಟಿಕ್ ಕಾರ್ಖಾನೆಗಳಲ್ಲಿ ಈ ಉತ್ಪನ್ನಗಳನ್ನು ಲೂಯಿ ವ್ಯೂಟನ್ ಉತ್ಪಾದಿಸಲಿದ್ದು, ಮುಂದಿನ ದಿನಗಳಲ್ಲಿ 12 ಟನ್‌ಗಳಷ್ಟು ಹ್ಯಾಂಡ್ ಸ್ಯಾನಿಟೈಸರ್‌ ಅನ್ನು ತಯಾರಿಸಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಿದೆ.

ನಿಖಿಲ್ ಕುಮಾರಸ್ವಾಮಿ ಮದುವೆಗೂ ತಟ್ಟಿದ ಕೊರೋನಾ ಬಿಸಿ

Posted: 18 Mar 2020 07:40 AM PDT

ರಾಮನಗರ: ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆಗೂ ಕೊರೋನಾ ಬಿಸಿ ತಟ್ಟಿದ್ದು ಮದುವೆಯನ್ನು ರಾಮನಗರದಿಂದ ಬೆಂಗಳೂರು ಅರಮನೆ ಮೈದಾನಕ್ಕೆ ಸ್ಥಳಾಂತರಗೊಳಿಸಲು ಸಿದ್ಧತೆ ನಡೆದಿದೆ.

ಕಳೆದ ಒಂದು ತಿಂಗಳಿಂದ ನಿಖಿಲ್ ಕುಮಾರ್ ಮದುವೆಗಾಗಿ ರಾಮನಗರ ಹೊರವಲಯದ ಜಾನಪದ ಲೋಕ ಬಳಿ ಸೆಟ್ ನಿರ್ಮಿಸಲಾಗುತ್ತಿತ್ತು. ಅದ್ದೂರಿ ಸೆಟ್ ನಲ್ಲಿ ನಿಖಿಲ್ ಮದುವೆಗೆ ಸಿದ್ಧತೆಗಳು ನಡೆದಿದ್ದು, ಕೊರೋನಾ ಸೋಂಕಿನ ಪರಿಣಾಮ ಮದುವೆಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಮದುವೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ರಾಮನಗರದ ಬಳಿ 90 ಎಕರೆ ಪ್ರದೇಶದಲ್ಲಿ ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ಕೊರೋನಾ ಕಾರಣದಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುವುದು. ನಿಗದಿಯಂತೆಯೇ ಏಪ್ರಿಲ್ 17 ರಂದು ನಿಖಿಲ್ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.

ಪ್ರಿಯಕರನಿಂದಲೇ ನಿರಂತರ ಅತ್ಯಾಚಾರ, ಮದುವೆ ಎನ್ನುತ್ತಿದ್ದಂತೆ ಖಾಸಗಿ ಫೋಟೋ ತೋರಿಸಿ ಬೆದರಿಕೆ

Posted: 18 Mar 2020 07:17 AM PDT

 ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಪ್ರಿಯಕರನ ವಿರುದ್ಧ ಯುವತಿ ಚಂದ್ರಾ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಲಾ ದಿನಗಳಿಂದ ಗೆಳೆಯನಾಗಿದ್ದ ಯುವಕನನ್ನು ಯುವತಿ 7 ವರ್ಷಗಳಿಂದ ಪ್ರೀತಿಸಿದ್ದಾರೆ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ ಯುವಕ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ನಂತರದಲ್ಲಿ ಯುವತಿ ಮನೆಗೆ ಬಂದ ಯುವಕನ ಮನೆಯವರು ಜಗಳವಾಡಿದ್ದಾರೆ.

ಫೆಬ್ರವರಿ 20 ರಂದು ಪ್ರಿಯಕರನ ಮನೆಗೆ ಹೋಗಿದ್ದ ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದು, ಮದುವೆಯಾಗಲು ನಿರಾಕರಿಸಿದ ಯುವಕ, ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಇದರಿಂದ ನೊಂದ ಯುವತಿ ಪ್ರಿಯಕರ, ಆತನ ಅಕ್ಕ, ಬಾವ ಮತ್ತು ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ನಟ, ನಿರ್ದೇಶಕ ಎಸ್. ನಾರಾಯಣ್ ಗೆ ಭಾರೀ ವಂಚನೆ

Posted: 18 Mar 2020 06:45 AM PDT

Image result for s narayan

ಬೆಂಗಳೂರು: ನಟ, ನಿರ್ದೇಶಕ ಎಸ್. ನಾರಾಯಣ್ ಅವರಿಗೆ 1.60 ಕೋಟಿ ರೂಪಾಯಿ ವಂಚನೆ ಮಾಡಿದ್ದು, ಈ ಸಂಬಂಧ ಅವರು ಸಿಸಿಬಿ ಡಿಸಿಪಿ ರವಿಕುಮಾರ್ ಅವರಿಗೆ ದೂರು ನೀಡಿದ್ದಾರೆ.

ನಾರಾಯಣ್ ಕಳೆದ ವರ್ಷ ಮೂವರೊಂದಿಗೆ ಸೇರಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು ಚಿತ್ರದ ಮುಹೂರ್ತ ನೆರವೇರಿ ಚಿತ್ರೀಕರಣ ಆರಂಭವಾಗಿಲ್ಲ. ನಂತರದಲ್ಲಿ ಚಿತ್ರದ ಪಾಲುದಾರರು ಸಿನಿಮಾದ ಸಂಭಾವನೆ ಬದಲಿಗೆ ನಿವೇಶನ ಖರೀದಿಸುವಂತೆ ನಾರಾಯಣ್ ಗೆ ಸೂಚಿಸಿದ್ದು, ಬಳಿಕ ನಾರಾಯಣ್ ಅವರಿಂದ 1.60 ಕೋಟಿ ರೂಪಾಯಿ ಹಣ ಪಡೆದುಕೊಂಡು ಹೆಚ್.ಬಿ.ಆರ್. ಲೇಔಟ್ ನಲ್ಲಿ ನಿವೇಶನ ಕೊಟ್ಟಿದ್ದಾರೆ.

ಆದರೆ, ನಾರಾಯಣ್ ಹಣ ಕೊಟ್ಟು ಖರೀದಿಸಿದ ನಿವೇಶನದ ದಾಖಲೆಗಳು ನಕಲಿಯಾಗಿದೆ ಎನ್ನುವುದು ಗೊತ್ತಾಗಿದೆ. ನಕಲಿ ದಾಖಲೆ ನೀಡಿ 1.60 ಕೋಟಿ ರೂಪಾಯಿ ಪಡೆದು ವಂಚಿಸಿದ್ದ ಬಗ್ಗೆ ದೂರು ನೀಡಿದ್ದು, ನಿವೇಶನ ಖರೀದಿಗೆ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದು, ಅದರ ಮೊತ್ತ 2 ಕೋಟಿ ರೂಪಾಯಿ ದಾಟಿದ್ದು, ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರು ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ 14 ಮಂದಿಗೆ ಕೊರೋನಾ ಪಾಸಿಟಿವ್: 32 ಮಂದಿ ಆಸ್ಪತ್ರೆಗೆ ದಾಖಲು

Posted: 18 Mar 2020 06:29 AM PDT

ಬೆಂಗಳೂರು: ಮ್ಯಾಡ್ರಿಡ್ ನಿಂದ ಬಂದ 25 ವರ್ಷದ ವ್ಯಕ್ತಿ, ಅಮೆರಿಕದಿಂದ ಬಂದ 56 ವರ್ಷದ ಮಹಿಳೆ ಹಾಗೂ 35 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದೆ.

35 ವರ್ಷದ ವ್ಯಕ್ತಿ ಮಾರ್ಚ್ 10 ರಂದು ಅಮೆರಿಕದಿಂದ ಭಾರತಕ್ಕೆ ವಾಪಸ್ ಆಗಿದ್ದರು. ಮನೆಯಲ್ಲಿ ಪ್ರತ್ಯೇಕವಾಗಿ ಇದ್ದ ಅವರಲ್ಲಿ ಮಾರ್ಚ್ 14 ರಂದು ಸೋಂಕು ಪತ್ತೆಯಾಗಿತ್ತು.

ಇಂದು ಒಂದೇ ದಿನ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು ಇದುವರೆಗೆ ರಾಜ್ಯದಲ್ಲಿ 14 ಜನರಲ್ಲಿ ಕೊರೋನಾ ಸೋಂಕು ತಗುಲಿದೆ. 1068 ಜನರಿಗೆ ಪರೀಕ್ಷೆ ಮಾಡಲಾಗಿದೆ. ಇವತ್ತು ಒಂದೇ ದಿನ 32 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದುವರೆಗೆ ಆಸ್ಪತ್ರೆಗಳಲ್ಲಿ 80 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 2281 ಜನ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ. ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರ ಮೇಲೆಯೂ ನಿಗಾ ವಹಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.

ಶಾಕಿಂಗ್ ನ್ಯೂಸ್: ರಾಜ್ಯದಲ್ಲಿ ಒಂದೇ ದಿನ ಮೂವರಲ್ಲಿ ಪಾಸಿಟಿವ್, ಏರುತ್ತಲೇ ಇದೆ ಕೊರೋನಾ ಸೋಂಕಿತರ ಸಂಖ್ಯೆ

Posted: 18 Mar 2020 06:13 AM PDT

ಬೆಂಗಳೂರು: ರಾಜ್ಯದಲ್ಲಿ ಮತ್ತೊಬ್ಬ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಅಮೆರಿಕದಿಂದ ಬಂದಿದ್ದ ಮತ್ತೊಬ್ಬ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಶಂಕಿತ ವ್ಯಕ್ತಿಯನ್ನು ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಮೂವರಿಗೆ ಸೋಂಕು ಇರುವುದು ಗೊತ್ತಾಗಿದೆ. ಅಮೆರಿಕದಿಂದ ಬಂದಿದ್ದ ವ್ಯಕ್ತಿ ಸೇರಿ ಒಂದೇ ದಿನ ರಾಜ್ಯದಲ್ಲಿ ಮೂವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮನೆಯಲ್ಲೇ ಮಗಳ ಬೆದರಿಸಿ ಕಾಮತೃಷೆ ತೀರಿಸಿಕೊಂಡ ಕಾಮುಕ, ಮೂರು ವರ್ಷದಿಂದ ನಿರಂತರ ಅತ್ಯಾಚಾರ

Posted: 18 Mar 2020 06:12 AM PDT

ಆಘಾತಕಾರಿ ಘಟನೆಯಲ್ಲಿ ತಂದೆಯೇ ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಸ್ವಸ್ಥಗೊಂಡಿರುವ ಅಪ್ರಾಪ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕಳೆದ ಮೂರು ವರ್ಷಗಳಿಂದ ಪುತ್ರಿಯನ್ನು ಬೆದರಿಸಿ ಮನೆಯಲ್ಲಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಸೋಮವಾರ ಕೂಡ ಮನೆಯಲ್ಲಿ ಯಾರು ಇಲ್ಲದ ವೇಳೆ ಮತ್ತೆ ಅತ್ಯಾಚಾರವೆಸಗಿದ್ದು ಅಸ್ವಸ್ಥಳಾದ ಅಪ್ರಾಪ್ತೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರ ಬಳಿ ಬಾಲಕಿ ಈ ಕುರಿತು ಮಾಹಿತಿ ನೀಡಿದ್ದು ವೈದ್ಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

‘ಸಿಎಂ ಯಡಿಯೂರಪ್ಪ ಹಸಿರು ಶಾಲಿನ ಒಳಗಿದೆ ಕೇಸರಿ ಶಾಲು’

Posted: 18 Mar 2020 05:39 AM PDT

ಬೆಂಗಳೂರು: ಹಸಿರು ಶಾಲು ಹಾಕಿಕೊಂಡು ಸಿಎಂ ಯಡಿಯೂರಪ್ಪ ಬಜೆಟ್ ಓದಿದ್ದಾರೆ ಎಂದು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ.

ನನಗೆ ಹಸಿರು ಶಾಲು ಮೇಲೆ ತುಂಬಾ ಗೌರವವಿದೆ. 1980 ರಿಂದ 1983 ರವರೆಗೆ ನಾನು ಹಸಿರು ಶಾಲು ಹಾಕಿದ್ದೆ. ಬಿಜೆಪಿಯಲ್ಲಿ ಎಲ್ಲರೂ ಕೇಸರಿ ಶಾಲು ಹಾಕುತ್ತಾರೆ.

ಯಡಿಯೂರಪ್ಪ ಒಬ್ಬರೇ ಬಿಜೆಪಿಯಲ್ಲಿ ಹಸಿರುಶಾಲು ಹಾಕುತ್ತಾರೆ. ಆದರೆ ಅವರು ಬಜೆಟ್ ನಲ್ಲಿ ರೈತರಿಗೆ ಅನುಕೂಲಕರ ಯೋಜನೆ ನೀಡಿಲ್ಲ. ಯಡಿಯೂರಪ್ಪನವರ ಹಸಿರು ಶಾಲು ಒಳಗೆ ಕೇಸರಿ ಶಾಲು ಇದೆ ಎನ್ನುವುದು ಬಜೆಟ್ ದಿನ ಗೊತ್ತಾಯ್ತು ಎಂದು ವಿಧಾನಸಭೆಯಲ್ಲಿ ಸಿದ್ಧರಾಮಯ್ಯ ಮಾತನಾಡಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಲೆಳೆದಿದ್ದಾರೆ.

ಹೆಚ್ಚಾಯ್ತು ಕೊರೊನಾ ಭೀತಿ..! ಚಿಂತೆಯಲ್ಲಿ ಸರ್ಕಾರ..?

Posted: 18 Mar 2020 05:34 AM PDT

ಕೊರೊನಾ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಶಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ಹೀಗಾಗಿ ಸರ್ಕಾರ ಚಿಂತೆ ಮಾಡುವಂತಾಗಿದೆ.

ಹೀಗಾಗಿ ಬೆಂಗಳೂರನ್ನೇ ಲಾಕ್ ಡೌನ್ ಮಾಡಲು ಚಿಂತನೆ ಮಾಡಲಾಗುತ್ತಿದೆ ಎನ್ನಲಾಗಿತ್ತು. ಆದರೆ ಇದರಿಂದ ಸರ್ಕಾರದ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಹಾಗಾಗಿ ಲಾಕ್ ಡೌನ್ ಮಾಡುವ ಬಗ್ಗೆ ಯಡಿಯೂರಪ್ಪ ನಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಇಂದು ಕೂಡ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಡೆಸಲಾಯ್ತು. ಸಭೆಯಲ್ಲಿಯೂ ಮಹತ್ವದ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಡಾ. ಸುಧಾಕರ್, ಹೊರರಾಷ್ಟ್ರಗಳಿಂದ ಬಂದವರನ್ನು ಪ್ರತ್ಯೇಕಿಸಿ ತಪಾಸಣೆ ಚಿಕಿತ್ಸೆ ಬಗ್ಗೆ ತೀರ್ಮಾನ ಮಾಡಲಾಗಿದೆ. ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಸಾಕಷ್ಟು ಚರ್ಚೆ ಮಾಡಿದ್ದೇವೆ. ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 200 ಕೋಟಿ ಅನುದಾನ ಇಡಲಾಗಿದೆ. ಏರ್‌ಪೋರ್ಟ್‌ಗಳ ಸುತ್ತಮುತ್ತಲ ಸರ್ಕಾರಿ ಆಸ್ಪತ್ರೆ ಮತ್ತು ಕಾಲೇಜು ಹಾಗೂ ಖಾಸಗಿ ಹೋಟೆಲ್, ರೆಸಾರ್ಟ್‌ಗಳನ್ನು ಬಳಸಿಕೊಳ್ಳಲು ತೀರ್ಮಾನ ಮಾಡಲಾಗಿದೆ.

ಮಾರ್ಚ್ 31 ರವರೆಗೆ ಪಬ್ ಬಂದ್ ಇರಲಿದೆ. ಜನಸಂದಣಿ ಇರುವ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ನಿಯಂತ್ರಣ ಮಾಡಲಾಗುತ್ತಿದೆ. ವಿಧಾನಸೌಧ, ವಿಕಾಸಸೌಧದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಕೊರೋನಾ ಸೋಂಕು ಹರಡುವ ಸಾಧ್ಯತೆ, ಎಸಿ ಬಳಕೆಗೆ ನಿರ್ಬಂಧ

Posted: 18 Mar 2020 05:32 AM PDT

ಬೆಂಗಳೂರಿನ ಎಲ್ಲ ಹೋಟೆಲ್ ಗಳಲ್ಲಿ ಎಸಿ ಬಳಕೆಗೆ ನಿರ್ಬಂಧ ಹೇರಲಾಗಿದೆ. ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಎಸಿಗೆ ನಿರ್ಬಂಧ ಹೇರಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸೂಚನೆ ನೀಡಿದ್ದಾರೆ.

ಹೋಟೆಲ್ ಮಾಲೀಕರ ಸಂಘದ ಜತೆ ಸಭೆ ನಡೆಸಿದ ಅವರು ಎಸಿಯಿಂದ ಕೊರೋನಾ ವೈರಸ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲಾ ಹೋಟೆಲ್ ಗಳಲ್ಲಿ ತಕ್ಷಣದಿಂದಲೇ ಎಸಿ ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಬಂಡಾಯ ಶಾಸಕರ ಭೇಟಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಗೆ ಬಿಗ್ ಶಾಕ್

Posted: 18 Mar 2020 05:21 AM PDT

ಬೆಂಗಳೂರು: ಕಾಂಗ್ರೆಸ್ ಶಾಸಕರ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ದಿಗ್ವಿಜಯಸಿಂಗ್ ರಿಟ್ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆದಿದೆ.

ಮಧ್ಯಪ್ರದೇಶದ ಶಾಸಕರ ಭೇಟಿಗೆ ಪೊಲೀಸರು ಅಡ್ಡಿಪಡಿಸಿದ್ದು, ಭೇಟಿಗೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡಲು ಮನವಿ ಮಾಡಿದ್ದಾರೆ. ಹೈಕೋರ್ಟ್ ಗೆ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಮನವಿ ಮಾಡಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ಈಗಾಗಲೇ ಈ ಕುರಿತಾದ ಅರ್ಜಿ ಸಲ್ಲಿಕೆಯಾಗಿದೆ. ಇದೆ ಮನವಿಯನ್ನು ಸಿ.ಎಲ್.ಪಿ. ನಾಯಕರು ಮಾಡಿದ್ದಾರೆ. ಹೀಗಾಗಿ ರಿಟ್ ಅರ್ಜಿ ವಜಾಗೊಳಿಸುವಂತೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮನವಿ ಮಾಡಿದ್ದಾರೆ. 22 ಶಾಸಕರು ಡಿಜಿ ಐಜಿಪಿಗೆ ಮನವಿ ಪತ್ರ ನೀಡಿ ಸ್ವಯಂಪ್ರೇರಿತರಾಗಿ ಬಂದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರು ಒತ್ತಡ ಹೇರಲು ಯತ್ನಿಸುತ್ತಿದ್ದಾರೆ. ತಮ್ಮನ್ನು ಭೇಟಿಯಾಗಿ ಸುಪ್ರೀಂಕೋರ್ಟಿಗೆ ತಪ್ಪು ಮಾಹಿತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಭದ್ರತೆ ನೀಡಲು 22 ಶಾಸಕರು ಮನವಿ ಮಾಡಿದ್ದಾರೆ. ಹಾಗಾಗಿ ಅವರಿಗೆ ಭದ್ರತೆ ಒದಗಿಸಲಾಗಿದೆ ಎಂದು ಅಡ್ವೋಕೇಟ್ ಜನರಲ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಬಾಕಿ ಇರುವ ಹಿನ್ನೆಲೆಯಲ್ಲಿ, ಶಾಸಕರು ಡಿಜಿ ಐಜಿಪಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಪೊಲೀಸರ ಕ್ರಮ ಕಾನೂನು ಬಾಹಿರವಲ್ಲ ಎಂದು ದಿಗ್ವಿಜಯಸಿಂಗ್ ಕೋರಿಕೆ ಅರ್ಜಿ ತಿರಸ್ಕರಿಸಿ ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದ್ದು, ಮಧ್ಯಪ್ರದೇಶದ ಶಾಸಕರು ತಂಗಿರುವ ರೆಸಾರ್ಟ್ ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮಾರ್ಚ್ 26 ಕ್ಕೆ ಮುಂದೂಡಲಾಗಿದೆ.

ಕರೋನಾ ಕಡಿಮೆ ಮಾಡಲು ನೆರವಾದ ಜಪಾನ್ ಜ್ವರದ ಲಸಿಕೆ

Posted: 18 Mar 2020 04:57 AM PDT

ಕರೋನಾ ವೈರಸ್ ಗೆ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಸೋಂಕಿನ ವಿರುದ್ಧ ಹೋರಾಡ್ತಿದ್ದಾರೆ. ಈವರೆಗೆ ಕರೋನಾಗೆ ಸೂಕ್ತ ಲಸಿಕೆ ಬಂದಿಲ್ಲ. ಲಸಿಕೆ ತಯಾರಿಸಲು ಇನ್ನೂ ಕೆಲವು ತಿಂಗಳುಗಳು ಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ.

ಆದ್ರೆ ಕರೋನಾದ ರೋಗಿಗಳ ಚಿಕಿತ್ಸೆಯಲ್ಲಿ ಜಪಾನ್‌ನ ಔಷಧಿಯು ಬಹಳ ಸಹಾಯಕವಾಗಿದೆ ಎಂದು ಚೀನಾ ಹೇಳಿಕೊಂಡಿದೆ.

ಗಾರ್ಡಿಯನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಲ್ಲಿ ಕೆಲಸ ಮಾಡುವ ಜಾಂಗ್ ಕ್ಸಿನ್ಮಿನ್, ಜಪಾನ್ ಜನರು ಸಾಮಾನ್ಯ ಜ್ವರದ ಚಿಕಿತ್ಸೆಗೆ ಬಳಸುವ ಔಷಧವು ಕರೋನಾ ಸೋಂಕಿನ ರೋಗಿಗಳಿಗೆ ಬಹಳ ಪ್ರಯೋಜನಕಾರಿ ಎಂದಿದ್ದಾರೆ.  ಈ ಔಷಧಿಯನ್ನು favipiravir ಕಂಪನಿ ತಯಾರಿಸುತ್ತದೆ. ಈ ಔಷಧಿಯನ್ನು ವುಹಾನ್‌ನ 340 ಕ್ಕೂ ಹೆಚ್ಚು ಕರೋನಾ ರೋಗಿಗಳಿಗೆ ನೀಡಲಾಗಿದೆ. ಅವರೆಲ್ಲ ಗುಣಮುಖರಾಗಿದ್ದಾರೆ.

ಉಳಿದ ಔಷಧಿಯಲ್ಲಿ ಸೋಂಕಿತರನ್ನು ಗುಣಪಡಿಸಲು 11 ದಿನಗಳ ಬೇಕು. ಈ ಔಷಧಿಯಲ್ಲಿ ನಾಲ್ಕೇ ದಿನಕ್ಕೆ ಸೋಂಕಿತರು ಗುಣಮುಖರಾಗಿದ್ದಾರೆ. ನಾಲ್ಕು ದಿನದ ನಂತ್ರ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಚೀನಾ ಹೇಳಿದೆ. ಜಪಾನ್ ವಿಜ್ಞಾನಿಗಳು ಕೂಡ ಇದ್ರ ಪ್ರಯೋಗ ಮಾಡ್ತಿದ್ದಾರೆ. ಆದ್ರೆ ಕರೋನಾ ಗಂಭೀರ ರೋಗಿಗಳಿಗೆ ಇದು ಪ್ರಭಾವ ಬೀರುತ್ತಿಲ್ಲವೆಂದು ವಿಜ್ಞಾನಿಗಳು ಹೇಳಿದ್ದಾರೆ.

ಕೋಟ್ಯಾಂತರ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಪೇಟಿಎಂ

Posted: 18 Mar 2020 04:54 AM PDT

Image result for paytm

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ.

ವೀಸಾ ವರ್ಚುವಲ್ ಡೆಬಿಟ್ ಕಾರ್ಡ್‌ಗಳನ್ನು ನೀಡುವುದಾಗಿ ಹೇಳಿದೆ. ಪಿಪಿಬಿಎಲ್ 2020-21ನೇ ಸಾಲಿನಲ್ಲಿ ಒಂದು ಕೋಟಿಗೂ ಹೆಚ್ಚು ಹೊಸ ಡಿಜಿಟಲ್ ಡೆಬಿಟ್ ಕಾರ್ಡ್‌ಗಳನ್ನು ವಿತರಿಸುವ ಗುರಿ ಹೊಂದಿದೆ ಎಂದು ಕಂಪನಿ ಹೇಳಿದೆ.

ವೀಸಾ ವರ್ಚುವಲ್ ಡೆಬಿಟ್ ಕಾರ್ಡ್‌ಗಳು ಗ್ರಾಹಕರಿಗೆ ಎಲ್ಲಾ ವ್ಯಾಪಾರಿಗಳಿಗೆ ಕಾರ್ಡ್‌ನೊಂದಿಗೆ ಪಾವತಿಸಲು ಅವಕಾಶ ನೀಡುತ್ತದೆ. ಮೊದಲ ಬಾರಿಗೆ ಬ್ಯಾಂಕಿನ ಗ್ರಾಹಕರು ತಮ್ಮ ವೀಸಾ ಡೆಬಿಟ್ ಕಾರ್ಡ್ ಅನ್ನು ಅಂತರರಾಷ್ಟ್ರೀಯ ವಹಿವಾಟಿಗೆ ಬಳಸಲು ಸಾಧ್ಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಗ್ರಾಹಕರಿಗೆ ಶೀಘ್ರವೇ  ಕಾರ್ಡ್ ಪಡೆಯಲು ಮನವಿ ಮಾಡುವ ಅವಕಾಶವನ್ನೂ ನೀಡಲಾಗ್ತಿದೆ. ಇದ್ರಿಂದ ಗ್ರಾಹಕರು ಚಿಪ್ ಕಾರ್ಡ್ ಗಳೊಂದಿಗೆ ಸಂಪರ್ಕವಿಲ್ಲದೆ ಪಾವತಿ ಮಾಡಲು ಅವಕಾಶ ನೀಡುತ್ತಿದೆ.

ಕರೋನಾ ಎಫೆಕ್ಟ್: ವಿದೇಶದಿಂದ ಮರಳಿದ ಸಚಿವರ ಪುತ್ರಿಗೆ ಮನೆಯಲ್ಲೇ ‘ದಿಗ್ಬಂಧನ’

Posted: 18 Mar 2020 04:12 AM PDT

ಕೊರೊನಾ ಭಯ ಎಲ್ಲರಲ್ಲೂ ಮನೆ ಮಾಡಿದೆ. ವಿದೇಶಗಳಿಂದ ಬರುವವರಿಂದಲೇ ಸೋಂಕು ಬರುತ್ತಿದೆ ಎಂಬುದು ಗೊತ್ತಿರುವ ವಿಚಾರವೇ. ಆದರೆ ನಮ್ಮ ದೇಶದ ಅನೇಕ ಮಂದಿ ಬೇರೆ ಬೇರೆ ದೇಶಗಳಲ್ಲಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ಸಚಿವ ಆನಂದ್ ಸಿಂಗ್ ಪುತ್ರಿ ಕೂಡ ಒಬ್ಬರು.

ಹೌದು, ಸಚಿವ ಆನಂದ್ ಸಿಂಗ್ ಪುತ್ರಿ ಇಟಲಿಯಲ್ಲಿ ಇದ್ದರು. ನಿನ್ನೆಯಷ್ಟೆ ಮಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಲು ಸಾಧ್ಯವಾಗಿಲ್ಲ ಅಂತಾ ಅಳಲು ತೋಡಿಕೊಂಡಿದ್ದರು ಆನಂದ್ ಸಿಂಗ್. ಇಂದು ಇವರ ಪುತ್ರಿ ಇಟಲಿಯಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ.

ಇದೀಗ ಇವರ ಮೇಲೂ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಇಂದು ಬೆಳಗ್ಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟಲಿಯ ರೋಮ್ ಇಂದ ಬಂದಿಳಿದಿದ್ದಾರೆ ಸಚಿವ ಆನಂದ್ ಸಿಂಗ್ ಪುತ್ರಿ. ಇವರಿಗೆ ಕಡ್ಡಾಯವಾಗಿ 14 ದಿನ ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚನೆ ನೀಡಲಾಗಿದೆ.

ಮನೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ ಇವರನ್ನು ಐಸೋಲೇಟ್ ಮಾಡಲಾಗಿದೆ. ಯಾರ ಜೊತೆಗೂ ಸಂಪರ್ಕ ಹೊಂದುವಂತಿಲ್ಲ ಎಂದು ಸೂಚಿಸಲಾಗಿದೆ.

ಇನ್ನು ಪ್ರತ್ಯೇಕ ಕೊಠಡಿ, ಪ್ರತ್ಯೇಕ ತಟ್ಟೆ ಲೋಟ, ಪ್ರತ್ಯೇಕ ಟಾಯ್ಲೆಟ್ ಬಳಸಬೇಕು. ಸ್ವಲ್ಪ, ಜ್ವರ, ಕೆಮ್ಮು, ನೆಗಡಿ ಇದ್ದರೆ ತಕ್ಷಣ ತಿಳಿಸಬೇಕು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಕೂಡ ನಿತ್ಯ ಎರಡು ಬಾರಿ ಕರೆ ಮಾಡುತ್ತಾರೆ. ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿರುತ್ತಾರೆ. ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಅಕ್ವೇರಿಯಂ ಸುತ್ತು ಹಾಕಿದ ಪೆಂಗ್ವಿನ್‌ಗಳು

Posted: 18 Mar 2020 04:09 AM PDT

ಅಮೆರಿಕದ ಚಿಕಾಗೋದ ಶೆಡ್ ಅಕ್ವೆರಿಯಂ ತಮ್ಮಲ್ಲಿ ಇದ್ದ ರಾಕ್‌ಹಾಪರ್ ಪೆಂಗ್ವಿನ್‌ಗಳನ್ನು ಆಕ್ವೇರಿಯಂ ಸುತ್ತ ಬೇರೆ ಜೀವಿಗಳನ್ನು ತೋರಿಸಲು ಟ್ರಿಪ್ ಮಾಡಿಸಿದ್ದಾರೆ.

ಕೊರೊನಾ ವೈರಸ್ ಹರಡದಂತೆ ಅಕ್ವೇರಿಯಂ ಅನ್ನು ಮಾ.29ರವರೆಗೆ ಬಂದ್ ಮಾಡಲಾಗಿದ್ದು ಪೆಂಗ್ವಿನ್‌ಗಳಿಗೆ ಬೇಸರವಾಗದಂತೆ ಇಡಲು ಈ ರೀತಿ ಸುತ್ತಿಸಿದ್ದಾರಂತೆ.

ಈ ಪೆಂಗ್ವಿನ್‌ಗಳು ಕುತೂಹಲದಿಂದ ಬೇರೆ ಮೀನುಗಳನ್ನು ನೋಡುತ್ತಾ ಸುತ್ತಾಡಿದ್ದು ಅವುಗಳ ವಿಡಿಯೋಗಳನ್ನು ಸಿಬ್ಬಂದಿ ಹಂಚಿಕೊಂಡಿದ್ದಾರೆ, ಅವು ವೈರಲ್ ಆಗಿವೆ. ಪೆಂಗ್ವಿನ್‌ಗಳ ಪ್ರತಿಕ್ರಿಯೆಗೆ ನೆಟ್ಟಿಗರು ಮನಸೋತಿದ್ದಾರೆ.

ಪುಟ್ಟ ನಾಯಿ ದತ್ತು ಪಡೆಯುವ ಕುರಿತು ರತನ್ ಟಾಟಾರಿಂದ ಹೃದಯಸ್ಪರ್ಶಿ ಪೋಸ್ಟ್

Posted: 18 Mar 2020 04:07 AM PDT

ಸಾಮಾಜಿಕ ಜಾಲತಾಣ ಹೇಗೆ ಸದ್ಬಳಕೆ ಆಗಬಲ್ಲದು ಎಂಬುದಕ್ಕೆ ಹಲವು ನಿದರ್ಶನಗಳಿದ್ದು‌ ಇದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವಲ್ಲಿ ಉದ್ಯಮಿ ರತನ್ ಟಾಟಾ ನಿಸ್ಸೀಮರು. ಇದಕ್ಕೆ ತಾಜಾ ನಿದರ್ಶನ ಇಲ್ಲಿದೆ.

ಇನ್ಸ್ಟಾಗ್ರಾಂನಲ್ಲಿ 10 ತಿಂಗಳ ನಾಯಿಮರಿಯನ್ನು ದತ್ತು ಪಡೆದುಕೊಳ್ಳುವ ಕುರಿತು ಉದ್ಯಮಿ ರತನ್ ಟಾಟಾ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

82 ವರ್ಷದ ಉದ್ಯಮಿ ಇಂತಹ ಹಲವು ಪರಿಣಾಮಕಾರಿ ಕೆಲಸಗಳಲ್ಲಿ ಎತ್ತಿದ ಕೈ ಎನಿಸಿದ್ದಾರೆ. ಸೂರ್ ಎಂದು ಹೆಸರು ಉಲ್ಲೇಖಿಸಿ ಈ ಹತ್ತು ತಿಂಗಳ ನಾಯಿಮರಿ ಈವರೆಗೆ ಕುಟುಂಬ ಸದಸ್ಯರ ಜತೆಯಿತ್ತು. ಆದರೆ ಇದೀಗ ಏಕಾಂಗಿಯಾಗಿದ್ದು ಮುಂದೆ ಯಾರೂ ನೋಡಿಕೊಳ್ಳಲು ಇಲ್ಲ…. ಹಾಗಾಗಿ ‌ಯಾರಾದರೂ ಮನಸ್ಸು ಮಾಡಿ ದತ್ತು ‌ಪಡೆಯಿರಿ. ಇವಳಿಗೆ ನಿಮ್ಮ ಮನೆಯ ಬಾಗಿಲು ತೆರೆಯಿರಿ ಎಂಬ ಕೋರಿಕೆ ಮುಂದಿಟ್ಟಿದ್ದಾರೆ. ಜತೆಗೆ ಇದು ಪುಣೆಯ ಸ್ಥಳೀಯರಿಗೆ ಮಾತ್ರ ಎಂದು ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಅನೇಕ ನೆಟ್ಟಿಗರು ಸ್ಪಂದಿಸುವ ಮೂಲಕ ಟಾಟಾರವರ ಸಾಮಾಜಿಕ ಮತ್ತು ಪ್ರಾಣಿಪ್ರಿಯ ಕಾಳಜಿಯನ್ನು ಕೊಂಡಾಡಿದ್ದಾರೆ.

ಹಿಂದೊಮ್ಮೆ ಇಂತಹದ್ದೇ ಪೋಸ್ಟ್ ಗೆ ವ್ಯಾಪಕ ಸ್ಪಂದನೆ ಸಿಕ್ಕಿತ್ತು.

BIG NEWS: ವಿದೇಶದಲ್ಲಿರುವ 276 ಭಾರತೀಯರಿಗೆ ‘ಕರೋನಾ’ ಸೋಂಕು

Posted: 18 Mar 2020 04:05 AM PDT

ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ಈಗ 151 ಕ್ಕೆ ಏರಿದೆ. ಇತರ ದೇಶಗಳಲ್ಲಿ ವಾಸಿಸುವ ಒಟ್ಟು 276 ಭಾರತೀಯರು ಸಹ ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಅವುಗಳಲ್ಲಿ  ಇರಾನ್‌ನಲ್ಲಿರುವ ಹೆಚ್ಚಿನ ಭಾರತೀಯರು ಈ ವೈರಸ್‌ನಿಂದ ಬಳಲುತ್ತಿದ್ದಾರೆ. ವಿದೇಶಾಂಗ ಸಚಿವಾಲಯ ಈ ಮಾಹಿತಿಯನ್ನು ನೀಡಿದೆ.

ವಿದೇಶಾಂಗ ಸಚಿವಾಲಯದ ಮಾಹಿತಿಯ ಪ್ರಕಾರ, ವಿದೇಶದಲ್ಲಿ 276 ಭಾರತೀಯರಿಗೆ ಕರೋನಾ ವೈರಸ್ ಸೋಂಕು ಇದೆ. ಇರಾನ್‌ನಲ್ಲಿ ಸಿಕ್ಕಿಬಿದ್ದ 255 ಭಾರತೀಯರು ಈ ವೈರಸ್‌ಗೆ ತುತ್ತಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಇದಲ್ಲದೆ ಹಾಂಕಾಂಗ್‌ನಲ್ಲಿ 1, ಇಟಲಿಯಲ್ಲಿ 5, ಕುವೈತ್-ರುವಾಂಡಾ ಮತ್ತು ಶ್ರೀಲಂಕಾದಲ್ಲಿ ತಲಾ ಒಂದು ಮತ್ತು ಸೌದಿ ಅರೇಬಿಯಾದಲ್ಲಿ 12 ಭಾರತೀಯರಲ್ಲಿ ಕರೋನಾ ವೈರಸ್ ಸೋಂಕು ಕಂಡು ಬಂದಿದೆ.

ಇರಾನ್‌ನ ಟೆಹ್ರಾನ್‌ನಿಂದ ಒಟ್ಟು 201 ಭಾರತೀಯರನ್ನು ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿದೆ. ಇಲ್ಲಿಯವರೆಗೆ ಒಟ್ಟು 509 ಭಾರತೀಯರನ್ನು ಇರಾನ್‌ನಿಂದ ಕರೆತರಲಾಗಿದೆ. ಈ ಜನರನ್ನು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

 

ಮಾಜಿ ಸಚಿವ ರೇವಣ್ಣರಿಗಿಲ್ವಾ ಕೊರೊನಾ ಭಯ…?

Posted: 18 Mar 2020 04:03 AM PDT

ದೇಶದೆಲ್ಲೆಡೆ ಕೊರೊನಾ ಭಯಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಮನೆಯಿಂದ ಹೊರ ಬರುವುದಕ್ಕೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಸಾಕಷ್ಟು ಕಚೇರಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್ ಇಡಲಾಗಿದೆ. ವಿಧಾನಸೌಧದಲ್ಲಿಯೂ ಈ ಕ್ರಮ ಅನುಸರಿಸಲಾಗುತ್ತಿದೆ.

ಆದರೆ ಕೊರೊನಾ ಭಯ ಮಾಜಿ ಸಚಿವ ಹೆಚ್.ಡಿ. ರೇವಣ್ಣರಿಗೆ ಇಲ್ವಾ ಎಂಬ ಅನುಮಾನ ಕಾಡುತ್ತಿದೆ. ಏಕೆಂದರೆ ಇಂದು ವಿಧಾನಸೌಧದ ಬಳಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್‌ನ ವಿಧಾನಸೌಧದ ಒಳ ಹೋಗುವ ಎಲ್ಲರಿಗೂ ನೀಡಲಾಗುತ್ತಿತ್ತು. ಆದರೆ ರೇವಣ್ಣ ಮಾತ್ರ ಇದನ್ನು ಧಿಕ್ಕರಿಸಿ ಹೋಗಿದ್ದಾರೆ.

ವಿಧಾನಸೌಧದ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮಾಡಲು ಬಂದರೆ ಬೇಡ ಎಂದಿದ್ದಾರೆ. ಹಾಗೂ ಹ್ಯಾಂಡ್ ಸ್ಯಾನಿಟೈಸರ್‌ನ ಕೈಗೆ ಹಾಕಲು ಬಂದರೆ ಹಾಗೆ ಮುಂದೆ ಹೋಗಿದ್ದಾರೆ.

ಇವರ ಈ ವರ್ತನೆಗೆ ಕಾರಣ, ಶಾಸ್ತ್ರ ಪಾಲಿಸುವ ಉದ್ದೇಶ ಎಂದು ಹೇಳಲಾಗುತ್ತಿದೆ. ಆದರೆ ಶಾಸಕರುಗಳೇ ಈ ರೀತಿ ಹೋದರೆ ಜನ ಸಾಮಾನ್ಯರು ಇನ್ನೇನು ಪಾಲಿಸುತ್ತಾರೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಮಹಾಮಾರಿ ‘ಕೊರೊನಾ’ ಬಗ್ಗೆ ಇಲ್ಲಿದೆ ಅಚ್ಚರಿಯ ಸಂಗತಿ..!

Posted: 18 Mar 2020 04:02 AM PDT

ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಬೆಂಗಳೂರು ಜನರಲ್ಲಿ ಕೊರೊನಾ ಭೀತಿ ಸ್ವಲ್ಪ ಹೆಚ್ಚೇ ಇದೆ. ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೂ, ಹರಡುವಿಕೆ ಹೆಚ್ಚಾಗುತ್ತಲೇ ಇದೆ. ಇಂದು ಮತ್ತೆ ಸೋಕಿತರ ಸಂಖ್ಯೆ ಹೆಚ್ಚಾಗಿದೆ. 13 ಜನಕ್ಕೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ.

ಈ ಕೊರೊನಾ ಮಾಹಾಮಾರಿ ಸುಮಾರು ಎರಡರಿಂದ ಮೂರು ದಿನಗಳ ಕಾಲ ಬದುಕಿರುತ್ತದೆ ಎಂದು ಸಂಶೋಧನೆಯಿಂದ ಬಹಿರಂಗವಾಗಿದೆ.

ಇದು ಕೆಮ್ಮಿದಾಗ ಅಥವಾ ಸೀನಿದಾಗ ಮಾತ್ರ ಎಂಜಲಿನ ಮೂಲಕ ಬೇರೊಂದು ವಸ್ತುವಿನ ಮೇಲೆ ಕೂರುತ್ತದೆ. ಆಗ ವ್ಯಕ್ತಿ ಇದನ್ನು ಮುಟ್ಟಿದರೆ ಆ ವ್ಯಕ್ತಿಗೂ ಸೋಂಕು ತಗುಲುತ್ತದೆ.

ಸೋಂಕು ಇರುವ ವ್ಯಕ್ತಿ ಸೀನಿದರೆ ಈ ವೈರಸ್ ಗಾಳಿಯಲ್ಲಿ ಸುಮಾರು ಮೂರು ದಿನಗಳ ಕಾಲ ಇರುತ್ತದೆಯಂತೆ. ಹೀಗೆ ಗಾಳಿಯಲ್ಲಿ ಇರುವ ವೈರಸ್ ಜಾಗದಲ್ಲಿ ಜನ ಓಡಾಡಿದ್ದಲ್ಲಿ ಅವರಿಗೂ ತಗುಲಬಹುದು ಎನ್ನಲಾಗಿದೆ.

ಭಾರತೀಯ ಸಾಂಪ್ರದಾಯಿಕ ಉಡುಗೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ವಿದೇಶಿ ಕ್ರಿಕೆಟಿಗ

Posted: 18 Mar 2020 03:52 AM PDT

ನವದೆಹಲಿ: ಭಾರತೀಯ ಮೂಲದ ವಿನಿ ರಾಮನ್ ಅವರನ್ನು ಕೈಹಿಡಿಯಲು ಮುಂದಾಗಿರುವ ಖ್ಯಾತ ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಸೋಮವಾರ ರಾತ್ರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಅಲ್ಲದೆ, ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಶೇರ್ವಾನಿ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಹಸಿರು ಬಣ್ಣದ ಶೇರ್ವಾನಿ ತೊಟ್ಟಿರುವ ಮ್ಯಾಕ್ಸ್ ವೆಲ್ ಹಣೆಗೆ ತಿಲಕವನ್ನು ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಾಕಿ ಬರೆದುಕೊಂಡಿರುವ ವಿನಿ ರಾಮನ್, ಇದು ಟೀಸರ್ ಅಷ್ಟೇ ಮದುವೆ ಇನ್ನೂ ಹೇಗಿರಬಹುದು ಎಂದು ಹೇಳಿದ್ದಾರೆ.

ಅಲ್ಲದೆ ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನಾನು ಕೃತಜ್ಞಳಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಮ್ಯಾಕ್ಸ್ ವೆಲ್ ನನಗೆ ಇನ್ ಸ್ಟಾ ಗ್ರಾಂನಲ್ಲಿ ಒಂದು ಫೋಟೋ ಜತೆ ಉಂಗುರದ ಎಮೋಜಿ ಹಾಕಿ ಮದುವೆಯಾಗುವಂತೆ ಕೇಳಿಕೊಂಡಿದ್ದರು ಎಂಬ ವಿಷಯವನ್ನು ವಿನಿ ಈ ಸಂದರ್ಭದಲ್ಲಿ ಹೊರಹಾಕಿದ್ದಾರೆ.

ಅಲ್ಲದೆ ನಿಶ್ಚಿತಾರ್ಥ ಸಂಭ್ರಮದ ಸಾಕಷ್ಟು ಫೋಟೊಗಳನ್ನು ಅವರು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿನಿ ಸಹ ಹಸಿರು ಬಣ್ಣದ ಲೆಹಂಗಾ ತೊಟ್ಟಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಭರ್ಜರಿ ವೈರಲ್ ಆಗಿದೆ.

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆಫ್ರಿಕಾ ಮಹಿಳೆಯಿಂದ ರಸ್ತೆಯಲ್ಲೇ ರಂಪಾಟ

Posted: 18 Mar 2020 03:51 AM PDT

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಪೋಲೀಸರು ಬಂಧಿಸಿದ್ದಾರೆ. ಬಾಣಸವಾಡಿ ರಸ್ತೆಯಲ್ಲಿ ಈ ಮಹಿಳೆಯರು ಪುರುಷರಿಗೆ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಇವರನ್ನು ಬಂಧಿಸಲಾಗಿದೆ. ಇವರೆಲ್ಲಾ ಆಫ್ರಿಕಾ ಮೂಲದ ಮಹಿಳೆಯರು ಎಂದು ಹೇಳಲಾಗುತ್ತಿದೆ.

ಸುಮಾರು 9 ಮಂದಿಯನ್ನು ಪೂರ್ವ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲಾ ಪಾಸ್‌ಪೋರ್ಟ್ ಹಾಗೂ ವೀಸಾ ಇಲ್ಲದೆ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಂಧಿತರ ವಿರುದ್ಧ ಪ್ರತ್ಯೇಕವಾಗಿ ಐದು ಕೇಸ್ ಗಳನ್ನು ದಾಖಲಿಸಲಾಗಿದೆ ಹಾಗೂ ಇನ್ನು ಈ ವಿಶೇಷ ಕಾರ್ಯಾಚರಣೆಯ ವೇಳೆ ಡ್ರಗ್ಸ್ ಮಾರುತ್ತಿರುವವನನ್ನೂ ಬಂಧಿಸಲಾಗಿದೆ ಎಂದು ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದಾರೆ.

ಇನ್ನು ನೈಜೀರಿಯಾದ ಮಹಿಳೆಯೊಬ್ಬರ ಪತಿಯನ್ನು ಸಿಸಿಬಿ ಪೊಲೀಸರು ಬಂಧನ ಮಾಡುವ ವೇಳೆ ರಂಪಾಟ ಮಾಡಿದ್ದಾರೆ. ಪೊಲೀಸರ ಮುಂದೆಯೇ ಅರೆ ನಗ್ನಳಾಗಿ ಕೂಗಾಡಿದ್ದಾಳೆ ಎನ್ನಲಾಗಿದೆ.

ಸಂಬಳವಿಲ್ಲದೆ ನೌಕರರಿಗೆ ರಜೆ ನೀಡಿದ ಪ್ರಸಿದ್ಧ ಹೊಟೇಲ್

Posted: 18 Mar 2020 03:01 AM PDT

ವಿಶ್ವದ ಅತಿದೊಡ್ಡ ಹೋಟೆಲ್ ಸರಪಳಿಯಾದ ಮ್ಯಾರಿಯಟ್ ಇಂಟರ್ನ್ಯಾಷನಲ್ ನೌಕರರನ್ನು ರಜೆ ಮೇಲೆ ಕಳುಹಿಸಿದೆ. ಈ ರಜಾದಿನಗಳಲ್ಲಿ ನೌಕರರಿಗೆ ಯಾವುದೇ ಸಂಬಳ ಸಿಗುವುದಿಲ್ಲ. ಕರೋನಾ ವೈರಸ್ ರೋಗದಿಂದಾಗಿ  ಪ್ರವಾಸಿಗರ ಸಂಖ್ಯೆ ನಿಂತಿದೆ. ಈ ಕಾರಣದಿಂದಾಗಿ ಹೋಟೆಲ್ ವ್ಯವಹಾರ ಸ್ಥಗಿತಗೊಳ್ಳುತ್ತಿದೆ. ಮ್ಯಾರಿಯಟ್ ತನ್ನ ಎಲ್ಲಾ ಮಟ್ಟದ ಉದ್ಯೋಗಿಗಳನ್ನು ರಜೆ ಮೇಲೆ ಕಳುಹಿಸಿದೆ. ಹಾಗೆ ಕೆಲವು ಹೋಟೆಲ್‌ಗಳನ್ನು ಮುಚ್ಚಲು ಪ್ರಾರಂಭಿಸಿದೆ.

ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ವ್ಯವಹಾರ ಕುಸಿಯುತ್ತಿದೆ ಎಂದು ಮ್ಯಾರಿಯಟ್ ತಿಳಿಸಿದೆ.  ವ್ಯಾಪಾರ ಕಡಿಮೆಯಾದ ಕಾರಣ ಕಂಪನಿಗೆ ನಷ್ಟವಾಗ್ತಿದೆ. ಸಂಬಳ ನೀಡುವುದು ಕಷ್ಟ. ಹಾಗಾಗಿ ಸಂಬಳವಿಲ್ಲದೆ ನೌಕರರಿಗೆ ರಜೆ ನೀಡಲಾಗಿದೆ.

ಇನ್ನು ಕರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗೋ ಏರ್ ತನ್ನ ಅಂತರರಾಷ್ಟ್ರೀಯ ವಿಮಾನಯಾನವನ್ನು ಮಂಗಳವಾರದಿಂದ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ವಿಮಾನಗಳ ಸಂಖ್ಯೆಯಲ್ಲಿನ ಕಡಿತದಿಂದಾಗಿ ಕಂಪನಿಯು ಕ್ರಮೇಣ ವೇತನವಿಲ್ಲದೆ ತನ್ನ ನೌಕರರನ್ನು ರಜೆ ಮೇಲೆ ಕಳುಹಿಸಲಿದೆ. ನೌಕರರ ವೇತನವನ್ನು ಶೇಕಡಾ 20 ರಷ್ಟು ಕಂತುಗಳಲ್ಲಿ ಕಡಿತಗೊಳಿಸಲು ಕಂಪನಿ  ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಗಳ ಸಾವಿನ ನೋವಿನಲ್ಲೂ ಆಟಿಕೆ ಮಾರಾಟ ಮಾಡಿದ ತಾಯಿ

Posted: 18 Mar 2020 02:20 AM PDT

मुर्दाघर में बेटी का शव रख मां ने लगाई मेले में खिलौने की दुकान, अगले दिन किया अंतिम संस्कार

ರಾಜಸ್ತಾನದ ಪಾಲಿಯಲ್ಲಿ ಕರಳು ಹಿಂಡುವ ಘಟನೆ ಬೆಳಕಿಗೆ ಬಂದಿದೆ. ಮಗಳು ಸಾವನ್ನಪ್ಪಿರುವ ದುಃಖದಲ್ಲೇ ಜಾತ್ರೆಯಲ್ಲಿ ಆಟಿಕೆ ಸಾಮಗ್ರಿ ಅಂಗಡಿ ಹಾಕಿದ ತಾಯಿ, ಮರುದಿನ ಮಗಳ ಅಂತ್ಯಸಂಸ್ಕಾರ ಮಾಡಿದ್ದಾಳೆ.

ಮಾಹಿತಿ ಪ್ರಕಾರ,ಸುಗುಣಾ ಮಗಳು ಪಾರ್ಕ್ ನಲ್ಲಿ ಆಟವಾಡುವಾಗ ಕೇಳಗೆ ಬಿದ್ದಿದ್ದಳು. ಮೆದುಳಿಗೆ ತೀವ್ರ ಗಾಯವಾಗಿ ಮಗು ಸತ್ತಿದೆ ಎಂದು ವೈದ್ಯರು ಹೇಳಿದ್ದರು. ಸುಗುಣಾ ಜಾತ್ರೆಯಲ್ಲಿ ಅಂಗಡಿ ತೆರೆಯಲು 35 ಸಾವಿರ ರೂಪಾಯಿ ಸಾಲ ಮಾಡಿದ್ದಳು. ಬಡತನದಿಂದಾಗಿ ಜಾತ್ರೆಯಲ್ಲಿ ಅಂಗಡಿ ತೆರೆಯುವುದು ಅನಿವಾರ್ಯವಾಗಿತ್ತು.

ಮಗು ಶವವನ್ನು ಆಸ್ಪತ್ರೆಯಲ್ಲೇ ಇಟ್ಟ ಸುಗುಣಾ ಇಡೀ ದಿನ ಆಟಿಕೆ ಮಾರಾಟ ಮಾಡಿದ್ದಾಳೆ. ಮರುದಿನ ಮಗಳ ಅಂತ್ಯಸಂಸ್ಕಾರ ಮಾಡಿದ್ದಾಳೆ. ಎರಡು ಮಕ್ಕಳ ತಾಯಿ ಸುಗುಣಾ ಪತಿ ಪಾರ್ಶ್ವವಾಯುಗೆ ತುತ್ತಾಗಿದ್ದಾನಂತೆ. ಆತನ ಶ್ವಾಸಕೋಶದಲ್ಲಿ ರಂಧ್ರವಿದೆಯಂತೆ. ಮನೆಗೆ ಆಧಾರವಾಗಿರುವ ಸುಗುಣಾ ಎಲ್ಲ ನೋವನ್ನು ಸಹಿಸಿಕೊಂಡು ಆಟಿಕೆ ಮಾರಾಟ ಮಾಡಿದ್ದಾಳೆ.

ಒಲಿಂಪಿಕ್ಸ್ ಜೊತೆ ನಡೆಯಲಿದೆ ಐಪಿಎಲ್ ಪಂದ್ಯ…!

Posted: 18 Mar 2020 02:03 AM PDT

IPL पर आई बड़ी खबर, टोक्‍यो ओलिंपिक्‍स के साथ आयोजित हो सकता है टूर्नामेंट

ಕರೊನಾ ವೈರಸ್ ಕಾರಣದಿಂದಾಗಿ ಐಪಿಎಲ್ ನ್ನು ಏಪ್ರಿಲ್ 15ರವೆಗೆ ಮುಂದೂಡಲಾಗಿತ್ತು. ಈಗ ಐಪಿಎಲ್ ಪಂದ್ಯಾವಳಿ ಜುಲೈ ಮತ್ತು ಸೆಪ್ಟೆಂಬರ್ ನಲ್ಲಿ ನಡೆಸುವ ಬಗ್ಗೆ ಆಲೋಚನೆ ಮಾಡಲಾಗ್ತಿದೆ. ಒಂದು ವೇಳೆ ಜುಲೈ ನಲ್ಲಿ ಐಪಿಎಲ್ ಪಂದ್ಯಾವಳಿ ನಡೆದ್ರೆ ಕ್ರೀಡಾಭಿಮಾನಿಗಳಿಗೆ ಟೋಕಿಯೋ ಒಲಿಂಪಿಕ್ಸ್ ಜೊತೆ ಐಪಿಎಲ್ ಮಜಾ ಸಿಗಲಿದೆ.

ಕರೋನ ವೈರಸ್ ಪ್ರಪಂಚದಾದ್ಯಂತ ಹಾನಿಯುಂಟು ಮಾಡಿದೆ. ಭಾರತದಲ್ಲಿಯೂ ಸುಮಾರು 150 ಜನರು ಸೋಂಕಿಗೆ ಒಳಗಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್  ಸಂಘಟಿಸುವುದು ಅಸಾಧ್ಯ. ಬಿಸಿಸಿಐ ಈಗ ಹೊಸ ಹಾದಿಯನ್ನು ಹುಡುಕಲು ಹೊರಟಿದೆ.  ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ,  ಐಪಿಎಲ್ ಪಂದ್ಯಗಳನ್ನು ಇಳಿಕೆ ಮಾಡುವ ಬದಲು ಎಲ್ಲ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದೆ.

ವರದಿಯ ಪ್ರಕಾರ, ಯಾವುದೇ ಪರಿಸ್ಥಿತಿಯಲ್ಲಿ ಐಪಿಎಲ್  ರದ್ದುಗೊಳಿಸಲು ಬಿಸಿಸಿಐ ಬಯಸುವುದಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ ಪಂದ್ಯಾವಳಿಯನ್ನು ಜುಲೈನಿಂದ ಸೆಪ್ಟೆಂಬರ್ ನಡುವೆ ನಡೆಸುವ ಬಗ್ಗೆ ಆಲೋಚನೆ ನಡೆಸಲಾಗ್ತಿದೆ.

ಎಲ್ಲರ ಗಮನ ಸೆಳೆಯುತ್ತಿದೆ ಕೇರಳದ ಈ ಕರೋನಾ ಟೆಕ್ಸ್ ಟೈಲ್ ಶಾಪ್…!

Posted: 18 Mar 2020 01:29 AM PDT

ಕೊಚ್ಚಿ, ಕೇರಳ: ಕರೋನಾ ವೈರಸ್ ಎಂಬುದು ಇತ್ತೀಚೆಗೆ ಹೆಸರಾಗಿರುವ ಮಾರಣಾಂತಿಕ ಸಾಂಕ್ರಾಮಿಕ ರೋಗ. ಆದರೆ ಇಲ್ಲೊಂದು ಅಂಗಡಿಯ ಹೆಸರು ಏನು ಗೊತ್ತಾ ಅದೇ ಕರೋನಾ!!! ಈಗ ಈ ಅಂಗಡಿ ಹೆಚ್ಚಿನ ಜನರ ಗಮನ ಸೆಳೆಯುತ್ತಿದೆ.

ಕೊಚ್ಚಿಯಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿರುವ ಈ ಟೆಕ್ಸ್ ಟೈಲ್ ಅಂಗಡಿಯಲ್ಲಿ ಬಟ್ಟೆ ಉತ್ಪನ್ನಗಳ ಮಾರಾಟ ನಡೆಯುತ್ತವೆ. ಜತೆಗೆ ಹೊಲಿಗೆ ಘಟಕವು ಇಲ್ಲಿದೆ. ಇದರ ಮಾಲೀಕನ ಹೆಸರು ಫರೀದ್. ಆದರೆ ಇವರನ್ನು ಸ್ಥಳೀಯರು ಕರೋನಾ ಫರೀದ್ ಎಂದೇ ಕರೆಯುತ್ತಾರೆ.

ಈಗ ಈ ಅಂಗಡಿ ಎಷ್ಟರ ಮಟ್ಟಿಗೆ ಫೇಮಸ್ ಆಗಿದೆ ಎಂದರೆ ರಸ್ತೆ ಬದಿ ನಡೆದು ಹೋಗುತ್ತಿದ್ದವರು ಈ ಬೋರ್ಡ್ ಅನ್ನು ನೋಡುತ್ತಾರೆ. ಬಳಿಕ ಫರೀದ್ ಅವರನ್ನು ನೋಡಿ ನಗುತ್ತಾರೆ.

ಅಷ್ಟಕ್ಕೇ ಸುಮ್ಮನಾಗದೇ ಅವರೊಂದಿಗೆ ಆ ಅಂಗಡಿಯ ಬೋರ್ಡ್ ಕಾಣುವಂತೆ ಸೆಲ್ಫಿಯನ್ನು ತೆಗೆದುಕೊಳ್ಳುತ್ತಾರೆ. ಬಳಿಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಾರೆ.

ಬಳಿಕ ಹೊರ ಹೋಗುವುದಿದ್ದರೂ ಸಹ ಮತ್ತೊಮ್ಮೆ ಮಗದೊಮ್ಮೆ ಆ ಬೋರ್ಡನ್ನು ನೋಡಿ ನಕ್ಕು ಹೋಗುವುದನ್ನು ಫರೀದ್ ಗಮನಿಸಿದ್ದಾರೆ.

ಹೀಗಾಗಿ ಮಾಧ್ಯಮದವರು ನೀವು ಈ ಹೆಸರನ್ನು ಏಕೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದಾಗ, ತಾನು ನಿಘಂಟನ್ನು ನೋಡಿದಾಗ ಈ ಹೆಸರು ಹೆಚ್ಚು ಗಮನ ಸೆಳೆದಿತ್ತು. ಹಾಗಾಗಿ ಇಟ್ಟಿದ್ದೇನೆ ಎಂದು ಫರೀದ್ ಹೇಳಿದ್ದಾರೆ.

ಮನೆಯಲ್ಲೇ ಕ್ರೂಸ್ ಅನುಭವ ಪಡೆದ ಹಿರಿಯ ದಂಪತಿ

Posted: 18 Mar 2020 01:16 AM PDT

ಎಲ್ಲೆಲ್ಲೂ ಭೀತಿ ಮೂಡಿಸಿರುವ ಕರೋನಾ ವೈರಸ್‌ನಿಂದಾಗಿ ಅಂತಾರಾಷ್ಟ್ರೀಯ ಮಟ್ಟದ ಇವೆಂಟ್‌ಗಳಿಂದ ಹಿಡಿದು ಮದುವೆ ಸಮಾರಂಭಗಳ ತನಕ ಎಲ್ಲ ರೀತಿಯ ಕಾರ್ಯಕ್ರಮಗಳೂ ಸಹ ಮುಂದೂಡಲ್ಪಟ್ಟಿವೆ.

ಆಸ್ಟ್ರೇಲಿಯಾದ ನೊರ್ಮಾ ಹಾಗೂ ಡೇವ್‌ ಟ್ರಿಲ್‌ ದಂಪತಿಗಳು ತಮ್ಮ 53ನೇ ವಿವಾಹ ವಾರ್ಷಿಕೋತ್ಸವ ಆಚರಿಸಲೆಂದು ಪೆಸಿಫಿಕ್ ದ್ವೀಪಗಳನ್ನು ಹಾದು ಬರಲು 10 ದಿನಗಳ ಕಾಲ ಕ್ರೂಸ್ ಹೋಗಲು ನಿರ್ಧರಿಸಿದ್ದರು.

ಆದರೆ, ಇವರ ಈ ಪ್ಲಾನ್‌ಗೂ ಸಹ ಕರೋನಾ ವೈರಾಣುಗಳು ವಿಲನ್ ಆಗಿರುವ ಕಾರಣ ಕ್ರೂಸ್ ಪ್ರೋಗ್ರಾಂ ರದ್ದಾಗಿದೆ.

ದಂಪತಿಗಳನ್ನು ಸಂತೈಸಲು ಆಗಮಿಸಿದ ಇವರಿಬ್ಬರ ಪುತ್ರಿ ಮನೆಯಲ್ಲೇ ಕ್ರೂಸ್‌ನಲ್ಲಿ ಇರುವಂತೆ ವಾತಾವರಣ ಸೃಷ್ಟಿಸಿದ್ದು, ದೊಡ್ಡ ಟಿವಿ ಪರದೆ ಮೇಲೆ ಸಾಗರದ ಫುಟೇಜ್ ಬಿತ್ತರಿಸುತ್ತಾ 74 ವರ್ಷ ವಯಸ್ಸಿನ ಈ ಹಿರಿಯ ದಂಪತಿಗೆ ಕ್ರೂಸ್ ಅನುಭೂತಿಯನ್ನು ಕೊಡಮಾಡಿದ್ದಾಳೆ.

Cruise Cancelled? No problem #covid_19 #coronavirus

Posted by Jane Trill on Friday, March 13, 2020

ಮದ್ದು-ಗುಂಡು ಖರೀದಿಸಲು ಮುಗಿಬೀಳುತ್ತಿರುವ ಅಮೆರಿಕನ್ನರು

Posted: 18 Mar 2020 12:58 AM PDT

ಕರೋನಾ ವೈರಸ್‌ ವ್ಯಾಪಕವಾಗುತ್ತಿರುವ ನಡುವೆ ಜಗತ್ತಿನಾದ್ಯಂತ ಹ್ಯಾಂಡ್ ಸ್ಯಾನಿಟೈಸರ್‌ ಹಾಗೂ ಟಾಯ್ಲೆಟ್ ಪೇಪರ್‌ ಖರೀದಿ ಮಾಡಲು ಜನರು ಮುಗಿಬೀಳುತ್ತಿದ್ದರೆ, ಅತ್ತ ಅಮೆರಿಕದಲ್ಲಿ ಬೇರೆಯದ್ದೇ ಕಥೆ ನಡೆಯುತ್ತಿದೆ.

ಕರೋನಾ ವೈರಸ್‌ ಭೀತಿಯಿಂದಾಗಿ, ಆಹಾರ ಪೂರೈಕೆಯಲ್ಲಿ ಶಾರ್ಟೇಜ್ ಆಗಬಹುದು ಸಾಮಾಜಿಕ ಗಲಭೆಗಳು ಏಳಬಹುದು ಎಂಬ ಭೀತಿಯಲ್ಲಿ ಅಮೆರಿಕನ್ನರು ದೊಡ್ಡ ಪ್ರಮಾಣದಲ್ಲಿ ಗನ್‌ಗಳು ಹಾಗೂ ಮದ್ದುಗುಂಡುಗಳನ್ನು ಖರೀದಿ ಮಾಡುತ್ತಿದ್ದಾರೆ. ಪರಿಣಾಮ, ಅಮೆರಿಕಾದ್ಯಂತ ಶಸ್ತ್ರಾಸ್ತ್ರಗಳ ಮಾರಾಟ ದೊಡ್ಡ ಮಟ್ಟದಲ್ಲಿ ಸಾಗುತ್ತಿದೆ.

ಪಶ್ಚಿಮ ಕರಾವಳಿಯ ನಗರಗಳಲ್ಲಿ ಜನರು ಶಸ್ತ್ರಾಸ್ತ್ರಗಳ ಅಂಗಡಿಗಳ ಮುಂದೆ ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಹಾಗೂ ವಾಶಿಂಗ್ಟನ್‌ಗಳಲ್ಲಿ ಶಸ್ತ್ರಗಳ ಮಾರಾಟ ಭರದಿಂದ ಸಾಗುತ್ತಿದೆ.

No comments:

Post a Comment

Gameforumer QR Scan

Gameforumer QR Scan
Gameforumer QR Scan