Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Wednesday, March 4, 2020

Kannada News | Karnataka News | India News

Kannada News | Karnataka News | India News


ಮೊದಲ ರಾತ್ರಿಯೇ ಅಶ್ಲೀಲ ವೀಡಿಯೋ ತೋರಿಸಿದ ಗಂಡ: ಬೆಚ್ಚಿ ಬಿದ್ದ ಪತ್ನಿ

Posted: 04 Mar 2020 05:18 PM PST

ಬೆಂಗಳೂರು: ಮದುವೆಯಾದ ಬಳಿಕ ಮೊದಲ ರಾತ್ರಿ ದಿನವೇ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ ನೀಡಿದ ಪತಿ ವಿರುದ್ಧ ಪತ್ನಿ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಅಶ್ಲೀಲ ವಿಡಿಯೋ ತೋರಿಸಿ ಅದರಲ್ಲಿ ಇರುವಂತೆಯೇ ನಡೆದುಕೊಳ್ಳಬೇಕೆಂದು ಪೀಡಿಸಿದ್ದು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ ಎಂದು ಚಾಮರಾಜಪೇಟೆಯ ಸಂತ್ರಸ್ತೆ ದೂರು ನೀಡಿದ್ದು 32 ವರ್ಷದ ಹರ್ಷವರ್ಧನ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2018 ರಲ್ಲಿ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ ಎರಡು ಲಕ್ಷ ರೂಪಾಯಿ ಹಣ ನೀಡಲಾಗಿತ್ತು. ಮೊದಲ ರಾತ್ರಿ ಅಶ್ಲೀಲ ವೀಡಿಯೋ ತೋರಿಸಿ ಪತ್ನಿಗೆ ಕೊಲೆ ಬೆದರಿಕೆ ಹಾಕಿದ್ದ ಹರ್ಷವರ್ಧನ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಪತ್ನಿಯ ಹಣವನ್ನು ಕಸಿದುಕೊಳ್ಳುತ್ತಿದ್ದ ಎಂದು ಹೇಳಲಾಗಿದ್ದು ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಮದ್ಯ ಪ್ರಿಯರು, ವಾಹನ ಮಾಲೀಕರಿಗೆ ‘ಬಿಗ್ ಶಾಕ್’…?

Posted: 04 Mar 2020 04:58 PM PST

ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರವನ್ನು 2.50 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲು ಪ್ರಯತ್ನ ನಡೆದಿದೆ. ಜನಪ್ರಿಯ ಅಗ್ಗದ ಯೋಜನೆಗಳ ಬದಲಿಗೆ ಜನಪರ ಯೋಜನೆಗಳಿಗೆ ಒತ್ತು ನೀಡಲಾಗುವುದು ಎಂದು ಹೇಳಲಾಗಿದೆ.

ತೀವ್ರ ಹಣಕಾಸಿನ ಬಿಕ್ಕಟ್ಟಿನ ನಡುವೆ ಕೃಷಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಿಎಂ ಒತ್ತು ನೀಡಿದ್ದಾರೆ. ಈ ಮೂಲಕ ರೈತಪರ ಬಜೆಟ್ ಮಂಡಿಸಲಿದ್ದಾರೆ. ಸಂಪನ್ಮೂಲ, ಆದಾಯ ಸಂಗ್ರಹಕ್ಕೆ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮದ್ಯ, ಮೋಟಾರು ವಾಹನ ತೆರಿಗೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇಂದಿರಾ ಕ್ಯಾಂಟೀನ್ ಊಟ-ತಿಂಡಿ ದರ ಹೆಚ್ಚಿಸಬಹುದೆಂದು ಹೇಳಲಾಗಿದೆ.

ವಿವಿಧ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ‘ಮುಖ್ಯ ಮಾಹಿತಿ’

Posted: 04 Mar 2020 04:46 PM PST

ನವದೆಹಲಿ: ವಿವಿಧ ಬ್ಯಾಂಕುಗಳ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ ಏಪ್ರಿಲ್ 1 ರಿಂದ ಬ್ಯಾಂಕ್ ಗಳ ವಿಲೀನ ಅನುಷ್ಠಾನಕ್ಕೆ ಬರಲಿದೆ.

ಆರ್ಥಿಕತೆಗೆ ಬಲ ತುಂಬಲು ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಸಾರ್ವಜನಿಕ ಸ್ವಾಮ್ಯದ 10 ಬ್ಯಾಂಕುಗಳನ್ನು 4 ಬ್ಯಾಂಕುಗಳಲ್ಲಿ ವಿಲೀನಗೊಳಿಸಲಾಗಿದೆ. ಏಪ್ರಿಲ್ 1 ರಿಂದ ವಿಲೀನ ಅನುಷ್ಠಾನಕ್ಕೆ ಬರಲಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

2017ರಲ್ಲಿ ಸಾರ್ವಜನಿಕ ಬ್ಯಾಂಕುಗಳ ಸಂಖ್ಯೆ 27 ಇದ್ದು, ಈಗ  12 ಕ್ಕೆ ಇಳಿಕೆಯಾಗಿದೆ. ಅಲಹಾಬಾದ್ ಬ್ಯಾಂಕ್ ನಲ್ಲಿ ಇಂಡಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಓಬಿಸಿ, ಯುನೈಟೆಡ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ವಿಲೀನವಾಗಲಿದೆ. ಕೆನರಾ ಬ್ಯಾಂಕ್ ನಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಲಿದೆ.

ಪಡಿತರದಾರರು, ಕೃಷಿ ನೀರಾವರಿ, ರೈತರಿಗೆ ಬಂಪರ್ ಗಿಫ್ಟ್…?

Posted: 04 Mar 2020 04:37 PM PST

ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬಜೆಟ್ ಮಂಡಿಸಲಿದ್ದಾರೆ. ಕೃಷಿ ನೀರಾವರಿ ರೈತರಿಗೆ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ.

ರೈತಪರ ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದು ಬಜೆಟ್ನಲ್ಲಿ ಜನಪ್ರಿಯ ಯೋಜನೆಗಳಿಗೆ ಬ್ರೇಕ್ ಬೀಳುತ್ತದೆ ಎನ್ನುವ ಚರ್ಚೆ ನಡೆದಿದೆ.

ಕೃಷಿಕರು, ಬಡವರ ಪರ ಬಜೆಟ್ ಮಂಡನೆ ಮಾಡುವ ಸಾಧ್ಯತೆಯಿದೆ. ಆರ್ಥಿಕ ಶಿಸ್ತಿನ ಹೆಸರಲ್ಲಿ ಜನಪ್ರಿಯ ಯೋಜನೆಗಳಿಗೆ ಬ್ರೇಕ್ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಂಬಲ ಬೆಲೆ ಘೋಷಣೆ, ನೀರಾವರಿಗೆ ಒತ್ತು ನೀಡಿ ಎತ್ತಿನಹೊಳೆ ಯೋಜನೆಗೆ ವೇಗ ನೀಡಲಿದ್ದು, ರಾಜ್ಯದ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಅನ್ನಭಾಗ್ಯ ಯೋಜನೆಯಡಿ ಗೋಧಿ ವಿತರಣೆ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.

‘ಕನಸು’ಗಳು ನೆನಪಿನಲ್ಲುಳಿಯುವುದಿಲ್ಲವೇಕೆ ಗೊತ್ತಾ…?

Posted: 04 Mar 2020 04:16 PM PST

Image result for Why Some People Can't Remember Their Dreamsಕೆಲವರಿಗೆ ಕನಸುಗಳು ಬಹಳ ಸುಲಭವಾಗಿ ನೆನಪುಳಿಯುತ್ತವೆ. ಮತ್ತೆ ಕೆಲವರು ನಿದ್ರೆಯಲ್ಲಿ ಕಂಡ ಸನ್ನಿವೇಶಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಕಷ್ಟಪಡ್ತಾರೆ. ಇನ್ನು ಕೆಲವರು ಎಚ್ಚರವಾಗುತ್ತಿದ್ದಂತೆ ಕನಸುಗಳನ್ನು ಮರೆಯುತ್ತಾರೆ ಯಾಕೆ?

ಇದಕ್ಕೆ ಕಾರಣ ನಾವು ನಿದ್ರೆ ಮಾಡುವ ವಿಧಾನ ಅಥವಾ ರೀತಿ ಮತ್ತು ನಿದ್ರಾವಸ್ಥೆಯಲ್ಲಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ರಾಸಾಯನಿಕಗಳು.

ನಾವು ಮಲಗಿದಾಗ, ನಮ್ಮ ಮೆದುಳು ನಾಲ್ಕು ವಿವಿಧ ಮಾನಸಿಕ ಹಂತಗಳಲ್ಲಿ ಕೆಲಸ ಮಾಡುತ್ತದೆ. ಮೆದುಳು ಕನಸು ಕಾಣುವ ಅಂತಿಮ ಹಂತ ಆರ್ ಇ ಎಂ ಅಥವಾ ರ್ಯಾಪಿಡ್ ಐ ಮೂವ್ ಮೆಂಟ್ ಅಂತೀವಿ. ಮೆದುಳು ಕನಸು ಕಾಣಲು ಶುರು ಮಾಡಿದ ಕೂಡಲೇ ಆರ್ ಇ ಎಂ ನಿದ್ರೆಗೆ ಜಾರುತ್ತದೆ. ಹೃದಯ ಬಡಿತ ಕಡಿಮೆಯಾಗುತ್ತದೆ , ದೇಹವೂ ಪಾರ್ಶ್ವವಾಯುವಿನ ಸ್ಥಿತಿಯನ್ನು ತಲಪುತ್ತದೆ. ಇದನ್ನು ಅಟೋನಿಯಾ ಅಂತೀವಿ. ಈ ಹಂತದಲ್ಲಿ ನಮ್ಮ ಮಿದುಳಿನಲ್ಲಿ ಎರಡು ರಾಸಾಯನಿಕಗಳ ಮಟ್ಟಗಳು ಬದಲಾಗುತ್ತವೆ.

ಅಸೆಟೈಲ್ಕೋಲಿನ್ ಮತ್ತು ನೊರ್ಪಿನ್ಫ್ರಿನ್ ಗಳಲ್ಲಿ ಆಗುವ ಬದಲಾವಣೆಗೆ ಕನಸುಗಳು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ನಾವು ಮೊದಲು ಎಚ್ಚರವಾದಾಗ ಕನಸುಗಳು ನಂಬಲಾಗದಷ್ಟು ದುರ್ಬಲವಾಗಿರುತ್ತವೆ? ಏಕೆ ಎನ್ನುವುದಕ್ಕೆ ನಿಜವಾಗ್ಲೂ ಉತ್ತರವಿಲ್ಲ ಅಂತಾರೆ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಸ್ಲೀಪ್ ಸಂಶೋಧಕ. ಇನ್ನು ಶನಿವಾರ ಅಥವಾ ಭಾನುವಾರ ನಿದ್ದೆ ಮಾಡುವಾಗ ಬೀಳುವ ಕನಸುಗಳನ್ನು ನೆನಪಿಡುವ ಅತ್ಯುತ್ತಮ ಸಮಯ ಅಂತಾರೆ ಸಂಶೋಧಕರು.

ಆರೋಗ್ಯಕರ ಸಿಹಿ ತಿಂಡಿ ಸೋರೆಕಾಯಿ ‘ಹಲ್ವಾ’

Posted: 04 Mar 2020 03:59 PM PST

Image result for recipe-lauki-halwa-sweet food

ಹೊರಗಿನ ಸಿಹಿ ತಿಂಡಿಗಳಿಗಿಂತ ಮನೆಯಲ್ಲಿ ಸಿಹಿತಿಂಡಿ ತಯಾರಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಸಾಮಾನ್ಯವಾಗಿ ಸೋರೆಕಾಯಿಯನ್ನು ಎಲ್ಲರೂ ಇಷ್ಟಪಡುವುದಿಲ್ಲ. ಆದ್ರೆ ಇದ್ರಲ್ಲಿ ಮಾಡಿದ ಸಿಹಿ ತಿಂಡಿ ಎಲ್ಲರಿಗೂ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಸೋರೆಕಾಯಿ ಹಲ್ವಕ್ಕೆ ಬೇಕಾಗುವ ಪದಾರ್ಥ:

ತುರಿದಿರುವ 2 ಕಪ್ ಸೋರೆಕಾಯಿ

ತುಪ್ಪ ಮೂರು ಚಮಚ

ಏಲಕ್ಕಿ 4

ಸಕ್ಕರೆ ರುಚಿಗೆ ತಕ್ಕಷ್ಟು

ಹಾಲು 2 ಕಪ್

ಗೋಡಂಬಿ, ಒಣ ದ್ರಾಕ್ಷಿ

ಸೋರೆಕಾಯಿ ಹಲ್ವಾ  :  ನಾನ್ ಸ್ಟಿಕ್ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ತುರಿದ ಸೋರೆಕಾಯಿ ಹಾಕಿ ಒಂದೇಳು ನಿಮಿಷಗಳ ಕಾಲ ಬೇಯಿಸಿ. ನಂತ್ರ ಹಾಲು ಹಾಗೂ ಏಲಕ್ಕಿಯನ್ನು ಹಾಕಿ 10 ನಿಮಿಷಗಳವರೆಗೆ ಬೇಯಿಸಿ. ಸಕ್ಕರೆ ಹಾಕಿ ಒಂದೆರಡು ನಿಮಿಷ ಕೈ ಆಡಿಸಿ. ಸೋರೆಕಾಯಿ ಸಕ್ಕರೆ, ಹಾಲಿನ ಜೊತೆ ಸರಿಯಾಗಿ ಬೆಂದ ನಂತ್ರ ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿಯನ್ನು ಹಾಕಿ ಸರ್ವ್ ಮಾಡಿ.

ಸೌಂದರ್ಯಕ್ಕೆ ಬೆಸ್ಟ್ ಗೋಧಿ ‘ಮೊಳಕೆ ತೈಲ’

Posted: 04 Mar 2020 03:44 PM PST

Image result for beauty-benefits-of-wheat-germ-oil

ಗೋಧಿ ಭಾರತೀಯರಿಗೆ ಅಪರೂಪದ ವಸ್ತುವೇನಲ್ಲ. ಗೋಧಿಯಿಂದ ಮಾಡಿದ ಪದಾರ್ಥಗಳು ಆರೋಗ್ಯಕ್ಕೆ ಬೆಸ್ಟ್ ಅನ್ನೋದು ವೈದ್ಯರ ಅಭಿಪ್ರಾಯ. ಕೇವಲ ಆರೋಗ್ಯ ಮಾತ್ರವಲ್ಲ ಸೌಂದರ್ಯಕ್ಕೂ ಗೋಧಿ ಬೇಕು.

ಪ್ರೋಟೀನ್, ಫೈಬರ್, ವಿಟಮಿನ್ ಮತ್ತು ಮಿನರಲ್ಸ್ ಉಳ್ಳ ಗೋಧಿ ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದು. ಗೋಧಿ ಮೊಳಕೆಯಿಂದ ಮಾಡಿದ ತೈಲವಂತೂ ನಿಮ್ಮ ಸೌಂದರ್ಯದ ಸಂಗಾತಿ. ಇದನ್ನು ಕಾಸ್ಮೆಟಿಕ್ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಆ್ಯಂಟಿ ಒಕ್ಸಿಡೆಂಟ್ ಗಳ ಸಮೃದ್ಧ ಮೂಲ : ಗೋಧಿ ಮೊಳಕೆಯ ತೈಲದಲ್ಲಿ ವಿಟಮಿನ್ ಇ ಹೇರಳವಾಗಿದೆ, ಇದೊಂದು ಉತ್ತಮ ಆ್ಯಂಟಿ ಒಕ್ಸಿಡೆಂಟ್. 22 ಬಗೆಯ ಪೋಷಕಾಂಶಗಳು ಇದರಲ್ಲಿವೆ. ಇದು ನಿಮ್ಮಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಚರ್ಮದ ಆರೋಗ್ಯಕ್ಕಂತೂ ಹೇಳಿ ಮಾಡಿಸಿದಂತಹ ಮದ್ದು.

ಉತ್ತಮ ಫೇಸ್ ಕ್ಲೆನ್ಸರ್ : ಗೋಧಿ ಮೊಳಕೆಯ ತೈಲ ನೈಸರ್ಗಿಕ ಎಣ್ಣೆಯಾಗಿರುವುದರಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸುತ್ತದೆ. ಮುಖದ ಮೃದುತ್ವವನ್ನು ಕಾಪಾಡುತ್ತದೆ. ಮೊಡವೆ ಬಾರದಂತೆ ತಡೆಗಟ್ಟುತ್ತದೆ. ಕೆಲವೇ ಹನಿಗಳಷ್ಟು ಗೋಧಿ ಮೊಳಕೆಯ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಅಥವಾ ಫೇಸ್ ಪ್ಯಾಕ್ ನಂತೆ ಬಳಸಬಹುದು. ಆಯ್ಲಿ ಸ್ಕಿನ್ ಇರುವವರು ವೈದ್ಯರ ಸಲಹೆ ಬಳಿಕ ಬಳಸುವುದು ಉತ್ತಮ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ : ಗೋಧಿ ಮೊಳಕೆಯ ಎಣ್ಣೆಯಲ್ಲಿ ಒಕ್ಟಾಕೋಸಾನೊಲ್ ಪ್ರಮಾಣ ಅಧಿಕವಾಗಿದೆ. ಅದು ದೇಹಕ್ಕೆ ಶಕ್ತಿ ಹಾಗೂ ಸ್ಟಾಮಿನಾ ಕೊಡುವುದರ ಜೊತೆಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಚರ್ಮದ ಮೇಲಿನ ಕಲೆಗಳಿಗೆ ಮದ್ದು : ಗೋಧಿ ಮೊಳಕೆ ತೈಲದಲ್ಲಿ ವಿಟಮಿನ್-ಇ ಹೇರಳವಾಗಿರುವುದರಿಂದ ನಿಮ್ಮ ಚರ್ಮಕ್ಕೂ ಕಾಂತಿ ಮತ್ತು ಶಕ್ತಿ ಬರುತ್ತದೆ. ನಿರಂತರವಾಗಿ ಈ ಎಣ್ಣೆಯನ್ನು ಹಚ್ಚುತ್ತಾ ಬಂದರೆ ಚರ್ಮದ ಮೇಲಿನ ಕಲೆಗಳು ಮಾಯವಾಗುತ್ತವೆ. ಆದ್ರೆ ಎಣ್ಣೆ ನೂರಕ್ಕೆ ನೂರರಷ್ಟು ನೈಸರ್ಗಿಕವಾಗಿರಬೇಕು. ನಿಮ್ಮ ಚರ್ಮವನ್ನು ಹೈಡ್ರೈಟ್ ಮಾಡುವ ಮೂಲಕ ಹೊಳಪು ತುಂಬುತ್ತದೆ.

ಕೂದಲಿನ ಕಾಂತಿಗಾಗಿ : ಆರೋಗ್ಯಕರ ತಲೆಗೂದಲಿಗೆ ಗೋಧಿ ಮೊಳಕೆ ತೈಲ ಬೆಸ್ಟ್. ಇದರಲ್ಲಿ ಲಿನೊಲಿಯಿಕ್ ಆಮ್ಲ ಇರುವುದರಿಂದ ನಿಮ್ಮ ಕೂದಲ ಪೋಷಣೆಗೆ ಸಹಕರಿಸುತ್ತದೆ. ಎಳ್ಳೆಣ್ಣೆ ಅಥವಾ ಆಲಿವ್ ಆಯಿಲ್ ಜೊತೆಗೆ 10 ರಲ್ಲಿ ಒಂದು ಭಾಗದಷ್ಟು ಗೋಧಿ ಮೊಳಕೆ ತೈಲವನ್ನು ಮಿಕ್ಸ್ ಮಾಡಿ ಕೂದಲ ಬುಡಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತಲೆಸ್ನಾನ ಮಾಡಿ.

ಆ್ಯಂಟಿ ಏಜಿಂಗ್ ಪ್ರಾಪರ್ಟಿ : ಯಾವಾಗಲೂ ಯೌವ್ವನ ಹಾಗೇ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಗೋಧಿ ಮೊಳಕೆ ತೈಲದಲ್ಲಿ ವಿಟಮಿನ್- ಬಿ6, ವಿಟಮಿನ್ ಇ, ಫಾಲಿಕ್ ಆಸಿಡ್ ಇರೋದ್ರಿಂದ ಇದು ವಯಸ್ಸಾಗಿದ್ದರೂ ನಿಮ್ಮ ಚರ್ಮ ಸುಕ್ಕುಗಟ್ಟದಂತೆ ಕಾಪಾಡುತ್ತದೆ. ಡ್ರೈ ಸ್ಕಿನ್, ಸೋರಿಯಾಸಿಸ್ ನಂತಹ ಸಮಸ್ಯೆಗಳು ಬರುವುದಿಲ್ಲ. ತೈಲದಲ್ಲಿರುವ ವಿಟಮಿನ್ ಬಿ ಅಂಗಾಂಶ ಹಾನಿಯನ್ನು ತಪ್ಪಿಸುತ್ತದೆ.

ಆದ್ರೆ ಒಂದು ಅಂಶ ನಿಮ್ಮ ಗಮನದಲ್ಲಿರಲಿ, ಗೋಧಿ ಮೊಳಕೆ ತೈಲವನ್ನು ಡೀಪ್ ಫ್ರೈ ಮಾಡಲು ಬಳಸುವಂತಿಲ್ಲ. ಸಲಾಡ್ ಅಥವಾ ಪಾಸ್ತಾ ಜೊತೆಗೆ ಒಂದೆರಡು ಹನಿ ಮಿಕ್ಸ್ ಮಾಡಿಕೊಂಡು ತಿನ್ನಬಹುದು.

ಹಸಿರು ಸಿರಿ ‘ಕವಲೇದುರ್ಗ’ದ ಸೌಂದರ್ಯ ಕಣ್ತುಂಬಿಕೊಳ್ಳಿ

Posted: 04 Mar 2020 03:38 PM PST

Image result for kavaledurga-fort-tour

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಕವಲೇದುರ್ಗ ಹಸಿರು ಸಿರಿಯಿಂದ ಕೂಡಿದ ಮೋಹಕ ತಾಣವಾಗಿದೆ.

ತೀರ್ಥಹಳ್ಳಿ ಹೊಸನಗರ ರಸ್ತೆಯ ನೊಣಬೂರುವರೆಗೆ ರಸ್ತೆ ಸೌಲಭ್ಯವಿದ್ದು, ಅಲ್ಲಿಂದ ನಡೆದು ಹೋಗಬೇಕು. ಕೆಳದಿ ಅರಸರ ಅಭೇದ್ಯ ರಕ್ಷಣಾ ತಾಣವಾಗಿದ್ದ ಕವಲೇದುರ್ಗದಲ್ಲಿ ಸ್ಮಾರಕಗಳಿವೆ.

ಹಿಂದೆ ಕಾವಲುದುರ್ಗ ಎಂದು ಕರೆಯಲ್ಪಡುತ್ತಿದ್ದ ಕವಲೇದುರ್ಗ ಚಾರಣ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಮಗನಿಗೆ ಕವಲೇದುರ್ಗ ಸಂಸ್ಥಾನ ಆಶ್ರಯ ನೀಡಿತ್ತು ಎನ್ನಲಾಗಿದೆ. 3 ಸುತ್ತಿನ ಕೋಟೆ ಇದಾಗಿದ್ದು, ಬೆಟ್ಟ, ಗುಡ್ಡಗಳ ನೈಸರ್ಗಿಕತೆ ಜೊತೆಗೆ ಕಲ್ಲುಗಳನ್ನು ಜೋಡಿಸಿ ಕೋಟೆ ಕಟ್ಟಲಾಗಿದೆ.

ಮಹಾದ್ವಾರಗಳು, ರಕ್ಷಣಾ ಕೊಠಡಿಗಳು ಇವೆ. ಶ್ರೀಕಂಠೇಶ್ವರ ದೇವಾಲಯವಿದೆ. ನಂದಿ ಮಂಟಪ, ಮುಖ ಮಂಟಪಗಳಿದ್ದು, ಸಂಜೆಯ ವೇಳೆ ಸೂರ್ಯ ಮುಳುಗುವ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ಕೋಟೆಯ ಒಳಭಾಗದಲ್ಲಿನ ಅರಮನೆಯ ಪ್ರದೇಶದಲ್ಲಿ ಅಡಿಪಾಯ ಕಾಣುತ್ತದೆ. ಕೊಠಡಿಗಳು, ವಿಶಾಲ ಜಗುಲಿ, ಅಡುಗೆ ಕೋಣೆ, ನೀರು ಸರಬರಾಜು ವ್ಯವಸ್ಥೆ ಮೊದಲಾದವು ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಉತ್ಖನನದ ಸಂದರ್ಭದಲ್ಲಿ ಕಂಡುಬಂದಿವೆ.

ಪ್ರಶಾಂತ ಪರಿಸರದಿಂದ ಕೂಡಿರುವ ಕವಲೇದುರ್ಗದಲ್ಲಿ ಹಸಿರನ್ನು ಕಣ್ತುಂಬಿಕೊಳ್ಳುವುದೇ ಮನಸ್ಸಿಗೆ ಮುದ ನೀಡುತ್ತದೆ. ಕೆರೆ, ಮಠ, 7 ಹೆಡೆಯ ಏಕಶಿಲಾ ನಾಗರ ಶಿಲ್ಪಗಳು, ಕೊಳ ಮೊದಲಾದವುಗಳನ್ನು ನೋಡಬಹುದಾಗಿದೆ. ಮಾಹಿತಿ ಪಡೆದುಕೊಂಡು ಒಮ್ಮೆ ಹೋಗಿ ಬನ್ನಿ.

ಮಹಿಳೆಯರ ಎಲ್ಲ ‘ಆರೋಗ್ಯ’ ಸಮಸ್ಯೆಗೆ ಇದು ಮದ್ದು

Posted: 04 Mar 2020 03:27 PM PST

Image result for all-problems-of-women-will-be-eliminated-from-just-one-remidy garlic

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಏನೇ ಸಮಸ್ಯೆಯಾಗ್ಲಿ ತಕ್ಷಣ ಹೋಗೋದು ವೈದ್ಯರ ಬಳಿ. ಇನ್ನೂ ಕೆಲ ಮಹಿಳೆಯರು ಮೆಡಿಕಲ್ ಶಾಪ್ ಗೆ ಹೋಗಿ ತಮಗೆ ಗೊತ್ತಿರುವ ಮಾತ್ರೆ ತಂದು ನುಂಗ್ತಾರೆ. ದೊಡ್ಡ ರೋಗಕ್ಕೆ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಆದ್ರೆ ಸಣ್ಣ-ಸಣ್ಣ ರೋಗಕ್ಕೆ ಮಾತ್ರೆ ಸೇವಿಸುವ ಬದಲು ಮನೆ ಮದ್ದು ಉತ್ತಮ.

ಆಹಾರದಲ್ಲಿ ಬೆಳ್ಳುಳ್ಳಿ ಬಳಸುವುದರಿಂದ ಮಹಿಳೆಯರು ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ. ಪ್ರತಿದಿನ ಒಂದು ಬೆಳ್ಳುಳ್ಳಿ ತಿಂದು ಮಾತ್ರೆಯಿಂದ ದೂರವಿರಬಹುದು.

ಬಹುತೇಕ ಮಹಿಳೆಯರಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಆದ್ರೆ ಅನೇಕ ಮಹಿಳೆಯರು ಈ ಬಗ್ಗೆ ಯಾರ ಬಳಿಯೂ ಹೇಳುವುದಿಲ್ಲ. ಹಾಗಾಗಿ ಅದು ದೊಡ್ಡ ರೋಗಕ್ಕೆ ದಾರಿ ಮಾಡಿಕೊಡುತ್ತದೆ. ಪ್ರತಿದಿನ ಒಂದು ಬೆಳ್ಳುಳ್ಳಿ ಮೊಗ್ಗನ್ನು ಜೇನು ತುಪ್ಪದ ಜೊತೆ ಬೆರೆಸಿ ತಿನ್ನುವುದರಿಂದ ವಿಷಕಾರಿ ಪದಾರ್ಥ ದೇಹದಿಂದ ಹೊರಹೋಗುತ್ತದೆ. ಜೊತೆಗೆ ಮಲಬದ್ಧತೆ ಕಡಿಮೆಯಾಗುತ್ತದೆ.

ಪಾದದ ಬಿರುಕನ್ನು ಮಹಿಳೆಯರು ಸಾಮಾನ್ಯವಾಗಿ ದೊಡ್ಡ ಸಮಸ್ಯೆಯೆಂದು ಪರಿಗಣಿಸುವುದಿಲ್ಲ. ಬೆಳ್ಳುಳ್ಳಿಯಲ್ಲಿ ಪ್ರೋಟೀನ್ ಕೊಬ್ಬಿನ ಅಂಶವಿದ್ದು, ಇದು ಬಿರುಕಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಒಂದು ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಕಾಲಿನ ಬಿರುಕು ದೂರವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗುತ್ತಿದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ರಕ್ತದೊತ್ತಡ ಸಮಸ್ಯೆ ಕಡಿಮೆಯಾಗುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ಹೃದಯಕ್ಕೂ ಬಹಳ ಒಳ್ಳೆಯದು.

ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿದ್ದರೆ ಮಹಿಳೆಯರು ಪದೇ ಪದೇ ಅನಾರೋಗ್ಯಕ್ಕೊಳಗಾಗುತ್ತಾರೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಪೇಸ್ಟ್ ಸಿದ್ಧಪಡಿಸಿ ಜೇನುತುಪ್ಪ ಬೆರೆಸಿ ಸೇವನೆ ಮಾಡಿ. ಇದ್ರಿಂದ ಪ್ರತಿರಕ್ಷಣಾ ವ್ಯವಸ್ಥೆ ಉತ್ತಮವಾಗುತ್ತದೆ.

ಎಚ್ಚರ….! ʼಆಹಾರʼ ಸೇವನೆ ಮುನ್ನ ಇದು ತಿಳಿದಿರಲಿ

Posted: 04 Mar 2020 03:24 PM PST

ಆಹಾರ ಸೇವನೆಗೂ ಒಂದು ಪದ್ಧತಿಯಿದೆ. ತಪ್ಪಾದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಯಾವ ಹಣ್ಣು, ತರಕಾರಿ, ಆಹಾರವನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬುದನ್ನು ತಿಳಿದಿರಬೇಕು. ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ನಾವು ಕೆಲ ಆಹಾರ ಸೇವನೆ ಮಾಡಿದ್ರೆ ಅದು ನಮ್ಮ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.

ಪೊಟ್ಯಾಸಿಯಮ್ ಯುಕ್ತ ಆಹಾರ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಖಾಲಿ ಹೊಟ್ಟೆಯಲ್ಲಿ ಇದನ್ನು ಎಂದೂ ಸೇವನೆ ಮಾಡಬಾರದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಿದ್ರೆ ಸಮಸ್ಯೆಗೆ ಕಾರಣವಾಗುತ್ತದೆ. ಮೈಗ್ರೇನ್ ಅಥವಾ ಆಮ್ಲೀಯತೆ ಸಮಸ್ಯೆಯಿರುವವರಿಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವನೆ ಮಾಡುವುದ್ರಿಂದ ಸಮಸ್ಯೆ ಹೆಚ್ಚಾಗುತ್ತದೆ.

ಸೂಪರ್ ಫುಡ್ ಗಳಲ್ಲಿ ಬಾಳೆ ಹಣ್ಣು ಕೂಡ ಒಂದು. ಆದ್ರೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಬಾರದು. ಬಾಳೆ ಹಣ್ಣಿನಲ್ಲಿ ಮೆಗ್ನೀಸಿಯಮ್ ಹಾಗೂ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ತಿಂದ್ರೆ ರಕ್ತ ಸೇರುವ ಮೆಗ್ನೀಸಿಯಮ್ ಹಾಗೂ ಪೊಟ್ಯಾಸಿಯಂ ಸಮಸ್ಯೆಗೆ ಕಾರಣವಾಗುತ್ತದೆ.

ಹುಳಿ ಹಣ್ಣು ಹಾಗೂ ಮೊಸರನ್ನು ಕೂಡ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಹುಳಿ ಹಣ್ಣುಗಳನ್ನು ಯಾವಾಗ್ಲೂ ಆಹಾರ ಸೇವನೆ ಮಾಡಿದ ನಂತ್ರ ತಿನ್ನಬೇಕು. ಹಾಗೆ ಮೊಸರನ್ನು ಕೂಡ ಆಹಾರ ಸೇವನೆ ಮಾಡಿದ ನಂತ್ರ ತೆಗೆದುಕೊಳ್ಳಬೇಕು. ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದ್ರೆ ಆಮ್ಲೀಯ ಪ್ರಮಾಣ ಹೆಚ್ಚಾಗುತ್ತದೆ.

ಟೊಮ್ಯಾಟೋ ಹಾಗೂ ಕಾಫಿ ಕೂಡ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ಒಳ್ಳೆಯದಲ್ಲ. ಅಜೀರ್ಣ, ಆಮ್ಲೀಯ ಸಮಸ್ಯೆ ಇದ್ರಲ್ಲಿ ಕಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಸೇವನೆ ಮಾಡಿದ್ರೆ ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತದೆ.

ಮಲಗುವ ವೇಳೆ ಈ ಬಗ್ಗೆ ಗಮನ ನೀಡಿದ್ರೆ ಬದಲಾಗುತ್ತೆ ʼಅದೃಷ್ಟʼ

Posted: 04 Mar 2020 12:36 PM PST

Image result for tips-for-bedtime night

ಚೆನ್ನಾಗಿ ನಿದ್ರೆ ಮಾಡಲು ಪ್ರತಿಯೊಬ್ಬರು ಬಯಸ್ತಾರೆ. ಸುಖ ನಿದ್ರೆಯಿಲ್ಲದೆ ಪರಿತಪಿಸುವವರು ಸಾಕಷ್ಟು ಮಂದಿ. ಶಾಂತ ಪ್ರದೇಶ, ಸುಂದರ ಹಾಸಿಗೆಯಿದ್ದರೂ ಅನೇಕ ಬಾರಿ ಸುಖ ನಿದ್ರೆ ಹತ್ತಿರ ಸುಳಿಯೋದಿಲ್ಲ. ಇದಕ್ಕೆ ವಾಸ್ತುದೋಷವೂ ಕಾರಣವಾಗುತ್ತದೆ. ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಸುಖ ನಿದ್ರೆ ನಿಮ್ಮನ್ನು ಆವರಿಸುತ್ತದೆ.

ಒಂಟಿ ಮನೆಯಲ್ಲಿ ಒಬ್ಬರೇ ನಿದ್ರೆ ಮಾಡಬಾರದು. ದೇವಸ್ಥಾನ ಹಾಗೂ ಚಿತಾಗಾರದಲ್ಲಿ ಕೂಡ ನಿದ್ರೆ ಮಾಡಬಾರದು.

ನಿದ್ರೆ ಮಾಡಿದ ವ್ಯಕ್ತಿಯನ್ನು ಅಚಾನಕ್ಕಾಗಿ ಏಳಿಸಬಾರದು.

ವಿದ್ಯಾರ್ಥಿಗಳು, ಉದ್ಯೋಗಿಗಳು, ದ್ವಾರಪಾಲಕರು ತುಂಬಾ ಹೊತ್ತು ಮಲಗಬಾರದು.

ಗಾಢ ಕತ್ತಲಿರುವ ಕೋಣೆಯಲ್ಲಿ ಮಲಗಬಾರದು.

ಒದ್ದೆ ಕಾಲಿನಲ್ಲಿ ಹಾಸಿಗೆ ಮೇಲೆ ಮಲಗಬಾರದು. ಒಣಗಿದ ಕಾಲಿನಲ್ಲಿ ಮಲಗಬೇಕು. ಇಲ್ಲವಾದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ.

ಹರಿದ ಹಾಸಿಗೆಯಲ್ಲಿ ಮಲಗಬಾರದು.

ನಗ್ನವಾಗಿ ಎಂದೂ ನಿದ್ರೆ ಮಾಡಬಾರದು.

ಹಗಲಿನಲ್ಲಿ ಮಲಗಬಾರದು. ಜೇಷ್ಠ ಮಾಸದಲ್ಲಿ ಮಧ್ಯಾಹ್ನ ಕೊಂಚ ಹೊತ್ತು ಮಲಗಬಹುದು.

ಸೂರ್ಯಾಸ್ತವಾದ ಮೂರು ಗಂಟೆ ನಂತ್ರ ಮಲಗಬೇಕು.

ಎಡ ಭಾಗಕ್ಕೆ ವಾಲಿ ಮಲಗುವುದು ಶುಭಕರ.

ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಅಶುಭ.

ಮಲಗಿ ಓದಬಾರದು.

ತಿಲಕವಿಟ್ಟು ಮಲಗುವುದು ಅಶುಭ. ಹಾಗಾಗಿ ಮಲಗುವ ಮುನ್ನ ತಿಲಕವನ್ನು ತೆಗೆಯಬೇಕು.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಗುರುಗಳ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ

Posted: 04 Mar 2020 12:01 PM PST

 

ಮೇಷ ರಾಶಿ:

ನೀವು ಇಂದು ನಿಮಗಾಗಿ ಸಾಕಷ್ಟು ಸಮಯ ಹೊಂದಿರುವುದರಿಂದ ನಿಮ್ಮ ಒಳ್ಳೆಯ ಆರೋಗ್ಯದ ಸಲುವಾಗಿ ಒಂದು ಧೀರ್ಘ ನಡಿಗೆಗೆ ಹೋಗಿ. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಕಲಿತುಕೊಳ್ಳಬೇಕು.

ನಿಮ್ಮ ಕುಟುಂಬ ಸದಸ್ಯರಿಗೆ ಧನಾತ್ಮಕ ಪ್ರಯೋಜನಗಳ ಸಲಹೆಗಳನ್ನು ನೀಡುವ ಮೂಲಕ ನಿಮ್ಮ ಉಪಯುಕ್ತತೆಯ ಬಲವನ್ನು ಅಭಿವೃದ್ಧಿಪಡಿಸಿ.

ಅದೃಷ್ಟ ಸಂಖ್ಯೆ: 2

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ವೃಷಭ ರಾಶಿ:

ಜೀವನದಲ್ಲಿ ಒತ್ತಡದ ಮನೋಭಾವವನ್ನು ತಪ್ಪಿಸಿ ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಕುಟುಂಬದ ಸದಸ್ಯರೊಂದಿಗೆ ಕೆಲವು ವಿಶ್ರಾಂತಿಯ ಕ್ಷಣಗಳನ್ನು ಕಳೆಯಿರಿ.

ಪ್ರೀತಿಯ ಸಂಗೀತವನ್ನು ಯಾವಾಗಲೂ ಅದರಲ್ಲೇ ಮುಳುಗಿರುವವರು ಕೇಳಬಹುದು. ಇದು ನೀವು ಈ ಪ್ರಪಂಚದ ಎಲ್ಲಾ ಹಾಡುಗಳನ್ನು ಮರೆಯುವಂತೆ ಮಾಡುತ್ತದೆ.

ಅದೃಷ್ಟ ಸಂಖ್ಯೆ: 5

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮಿಥುನ ರಾಶಿ:

ಸ್ವಯಂ ಸುಧಾರಣೆಯ ಯೋಜನೆಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಫಲ ನೀಡುತ್ತವೆ – ನಿಮ್ಮ ಬಗ್ಗೆ ನಿಮಗೇ ಒಳ್ಳೆಯದೆನಿಸುತ್ತದೆ ಮತ್ತು ವಿಶ್ವಾಸ ಮೂಡುತ್ತದೆ. ಪ್ರಾಚೀನ ವಸ್ತುಗಳು ಮತ್ತು ಆಭರಣಗಳಲ್ಲಿ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ.

ಸಂಬಂಧಿಗಳಿದ್ದಲ್ಲಿ ಸಣ್ಣ ಪ್ರಯಾಣ ನಿಮ್ಮ ದೈನಂದಿನ ಒತ್ತಡದ ಜೀವನದಿಂದ ನಿಮಗೆ ಸುಖ ಮತ್ತು ವಿಶ್ರಾಂತಿಯನ್ನು ತರುತ್ತದೆ ನಿಮ್ಮ ಉಪಸ್ಥಿತಿ ನಿಮ್ಮ ಪ್ರೀತಿಪಾತ್ರರಿಗೆ ಈ ವಿಶ್ವವನ್ನು ಒಂದು ಯೋಗ್ಯ ಸ್ಥಾನವನ್ನಾಗಿ ಮಾಡುತ್ತದೆ.

ಅದೃಷ್ಟ ಸಂಖ್ಯೆ: 3

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕಟಕ ರಾಶಿ:

ಇಂದು ನಿಮ್ಮ ವ್ಯಕ್ತಿತ್ವ ಒಂದು ಸುಗಂಧದಂತೆ ಕೆಲಸ ಮಾಡುತ್ತದೆ. ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ ಬರುತ್ತದೆ.

ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ನೀವು ಎಂದಾದರೂ ಶುಂಠಿ ಮತ್ತು ಗುಲಾಬಿಗಳ ಚಾಕೋಲೇಟ್ ಅನ್ನು ಆಘ್ರಾಣಿಸಿದ್ದೀರೇ? ನಿಮ್ಮ ಪ್ರೇಮ ಜೀವನ ಇಂದು ಈ ರೀತಿಯಾಗಿರುತ್ತದೆ.

ಹೊಸ ಯೋಜನೆಗಳು ಮತ್ತು ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಒಳ್ಳೆಯ ದಿನ.

ಅದೃಷ್ಟ ಸಂಖ್ಯೆ: 1

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಸಿಂಹ ರಾಶಿ :

ನೀವು ಆರೋಗ್ಯ ಸಮಸ್ಯೆಯಿಂದಾಗಿ ಒಂದು ಪ್ರಮುಖ ಕೆಲಸಕ್ಕೆ ಹೋಗಲು ಸಾಧ್ಯವಾಗದಿರುವುದರಿಂದ ಕೆಲವು ಹಿನ್ನಡೆ ಎದುರಿಸುವ ಸಾಧ್ಯತೆಯಿದೆ. ಆದರೆ ನಿಮ್ಮನ್ನು ಮೇಲೆತ್ತಲು ನಿಮ್ಮ ತಾರ್ಕಿಕತೆಯನ್ನು ಬಳಸಿ.

ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು -ಬಾಕಿಯಿರುವ ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು. ನಿಮ್ಮ ಸಕಾಲಿಕ ಸಹಾಯ ಇನ್ನೊಬ್ಬರ ಜೀವ ಉಳಿಸುತ್ತದೆ.

ಅದೃಷ್ಟ ಸಂಖ್ಯೆ: 3

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕನ್ಯಾ ರಾಶಿ:

ನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.

ಇಂದು ನೀವು ನಿಮ್ಮ ಮಕ್ಕಳ ಕಾರಣದಿಂದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಕಂಡುಬರುತ್ತಿದೆ. ಇದರಿಂದ ನೀವು ತುಂಬಾ ಸಂತೋಷಪಡುತ್ತೀರಿ. ನಿಮ್ಮ ಮನೆಯಲ್ಲಿ ಸ್ವಲ್ಪ ಸ್ವಚ್ಛತಾ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು.

ಅದೃಷ್ಟ ಸಂಖ್ಯೆ: 4

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ತುಲಾ ರಾಶಿ:

ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ಫಿಟ್ ಆಗಿ ಉಳಿಯಲು ನಿಯಮಿತವಾಗಿ ಹೆಲ್ತ್ ಕ್ಲಬ್‌ಗೆ ಭೇಟಿ ನೀಡಿ. ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುತ್ತವೆ.

ಒಬ್ಬ ಹಳೆಯ ಸ್ನೇಹಿತ ದಿನದ ಅಂತ್ಯದಲ್ಲಿ ಒಂದು ಆಹ್ಲಾದಕರ ಭೇಟಿ ನೀಡುತ್ತಾರೆ. ನಿಮ್ಮ ಶಾಶ್ವತವಾದ ಪ್ರೀತಿ ನಿಮ್ಮ ಪ್ರೀತಿಪಾತ್ರರಿಗೆ ಒಂದು ಸೆಲೆಯಾಗಿದೆ.

ಅದೃಷ್ಟ ಸಂಖ್ಯೆ: 1

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ವೃಶ್ಚಿಕ ರಾಶಿ:

ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸಲು ನಿರಾಕರಿಸಿ. ಇದು ಅನಾರೋಗ್ಯದ ವಿರುದ್ಧ ಪ್ರಬಲ ಚುಚ್ಚುಮದ್ದು. ನಿಮ್ಮ ಸರಿಯಾದ ಮನೋಭಾವ ತಪ್ಪು ಮನೋಭಾವವನ್ನು ಸೋಲಿಸುತ್ತದೆ.

ನಿಮ್ಮ ತಾಯಿ ಅಥವಾ ತಂದೆಯ ಆರೋಗ್ಯಕ್ಕಾಗಿ ನೀವು ಇಂದು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು. ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಹದಗೆಡಿಸುತ್ತದೆ ಆದರೆ ಸಂಬಂಧವನ್ನು ಬಲಪಡಿಸುತ್ತದೆ.

ಅದೃಷ್ಟ ಸಂಖ್ಯೆ: 3

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಧನುಸ್ಸು ರಾಶಿ:

ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ಬಯಸದೆ ಇರುವ ಯಾವುದೇ ಅತಿಥಿ ಇಂದು ನಿಮ್ಮ ಮನೆಗೆ ಬರಬಹುದು ,

ಅವರು ಬರುವುದರಿಂದಾಗಿ ನೀವು ಬರುವ ತಿಂಗಳಿಗೆ ಮುಂದೂಡಲಾಯಿಸಿರುವ ಮನೆಯ ಆ ವಸ್ತುಗಳ ಮೇಲು ಖರ್ಚು ಮಾಡಬಹುದು .

ಸರಿಯಾದ ಸಂಭಾಷಣೆ ಮತ್ತು ಸಹಕಾರ ಸಂಗಾತಿಯ ಜೊತೆಗಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ.

ಅದೃಷ್ಟ ಸಂಖ್ಯೆ: 3

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮಕರ ರಾಶಿ:

ನೀವು ಸಾಮಾನ್ಯವಾಗಿ ಇರುವುದಕ್ಕಿಂತ ಕಡಿಮೆ ಚೈತನ್ಯವನ್ನು ಇಂದು ಕಾಣುತ್ತೀರಿ -ನಿಮ್ಮ ಮೇಲೆ ನೀವೇ ಹೆಚ್ಚುವರಿ ಕೆಲಸಕ್ಕೆ ಒತ್ತಡ ಹೇರಬೇಡಿ – ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ನಿಮ್ಮ ಕೆಲಸಗಳನ್ನು ಇನ್ನೊಂದು ದಿನಕ್ಕೆ ವರ್ಗಾಯಿಸಿ.

ನಿಮ್ಮ ಜೇವನ ಸಂಗಾತಿಯೊಂದಿಗೆ ಹಣದ ಯಾವುದೇ ವಿಷಯದ ಬಗ್ಗೆ ಇಂದು ನಿಮ್ಮ ಜಗಳವಾಗಬಹುದು. ಆದಾಗ್ಯೂ ನೀವು ನಿಮ್ಮ ಶಾಂತ ಸ್ವಭಾವದಿಂದ ಎಲ್ಲವನ್ನು ಸರಿಗೊಳಿಸಬಹುದು.

ಅದೃಷ್ಟ ಸಂಖ್ಯೆ: 7

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕುಂಭ ರಾಶಿ:

ಮನೆಯಲ್ಲಿ ಒತ್ತಡ ನಿಮಗೆ ಸಿಟ್ಟು ತರಿಸಬಹುದು. ಅವುಗಳನ್ನು ದಮನಗೊಳಿಸುವುದು ಕೇವಲ ದೈಹಿಕ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದೈಹಿಕ ಚಟುವಟಿಕೆಯೊಂದಿಗೆ ಇದನ್ನು ತೊಡೆದುಹಾಕಿ. ಕಿರಿಕಿರಿಯುಂಟುಮಾಡುವ ಪರಿಸ್ಥಿತಿಯಿಂದ ಹೊರಬರುವುದು ಉತ್ತಮ.

ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದವರು, ಅವರು ಇಂದು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು, ಇದು ಜೀವನದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

ಅದೃಷ್ಟ ಸಂಖ್ಯೆ: 9

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮೀನ ರಾಶಿ:

ದ್ವೇಷ ಪ್ರೀತಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು ನಿಮ್ಮ ದೇಹದ ಮೇಲೆ ಪ್ರಾಣಾಂತಿಕ ಪರಿಣಾಮ ಬೀರುವದರಿಂದ ನಿಮ್ಮ ದ್ವೇಷವನ್ನು ಸಾಯಿಸಲು ಒಂದು ಸಮರಸದ ಸ್ವಭಾವವನ್ನು ರೂಪಿಸಿಕೊಳ್ಳಿ. ದುಷ್ಟತೆಯು ಒಳಿತಿಗಿಂತ ಬೇಗ ವಿಜಯ ಸಾಧಿಸುತ್ತದೆಂದು ನೆನಪಿಡಿ.

ಆಸ್ತಿ ವ್ಯವಹಾರಗಳು ಅಸಾಧಾರಣ ಲಾಭ ತರುತ್ತವೆ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಒಂದು ಪರಿಪೂರ್ಣ ಅವಕಾಶವಾಗಿರುತ್ತದೆ. .

ಅದೃಷ್ಟ ಸಂಖ್ಯೆ: 2

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕರೊನಾ ಎಫೆಕ್ಟ್: ಐಷಾರಾಮಿ ಹೋಟೆಲ್ ಸಿಬ್ಬಂದಿಗೆ ಬಲವಂತದ ರಜೆ

Posted: 04 Mar 2020 06:47 AM PST

ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಭೀತಿ ಮೂಡಿಸಿರುವ ಮಾರಕ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೆಹಲಿಯ ಐಷಾರಾಮಿ ಹೋಟೆಲ್ ನ ಸಿಬ್ಬಂದಿಯನ್ನು ಸ್ವಯಂ ಮೂಲೆಗುಂಪಾಗಿಸಲು ತೀರ್ಮಾನಿಸಲಾಗಿದೆ.

ಫೆಬ್ರವರಿ 28 ರಂದು ದೆಹಲಿಯ ಹಯಾತ್ ರೆಸಿಡೆನ್ಸಿಯ ಲಾ ಪಿಯಾಜ್ಜಾ ರೆಸ್ಟೋರೆಂಟ್ ನಲ್ಲಿ ಕಾರ್ಯನಿರ್ವಹಿಸುತಿದ್ದ ಎಲ್ಲ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಸಿಬ್ಬಂದಿ 14 ದಿನಗಳ ಕಾಲ ಕಾಣಿಸಿಕೊಳ್ಳದಂತೆ ಹೋಟೆಲ್ ಆಡಳಿತ ಮಂಡಳಿ‌ ಸೂಚಿಸಿದೆ.

ಜತೆಗೆ ನಿತ್ಯ ಅವರೆಲ್ಲರ ದೇಹದ ಉಷ್ಣತೆ ತಪಾಸಣೆ ಮಾಡಲಾಗುತ್ತಿದೆ. ಚೀನಾದಲ್ಲಿ ಈಗಾಗಲೇ 3080 ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್ ಗೆ ಸಾವಿರಾರು ಮಂದಿ ಸೋಂಕಿತರಾಗಿದ್ಧಾರೆ. ಅಷ್ಟೇ ಅಲ್ಲದೆ ಕೊರಿಯಾ, ಜಪಾನ್, ಇಟಲಿ, ಇರಾನ್ ಕೂಡಾ ಸೋಂಕಿನಿಂದ ತತ್ತರಿಸುತ್ತಿದೆ.

ಪವಿತ್ರ ಸ್ಥಳದಲ್ಲಿ ನೆಕ್ಕಲು ಹೋಗಿ ಅರೆಸ್ಟಾದ ಭಕ್ತ

Posted: 04 Mar 2020 06:46 AM PST

ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್ ಇದೀಗ ಬೇರೆ ದೇಶಗಳಲ್ಲೂ ಹರಡುತ್ತಿದೆ. ಇರಾನ್‌ನಲ್ಲೂ ಇದು ಹರಡುತ್ತಿದ್ದು ಈಗಾಗಲೇ 50ಕ್ಕೂ ಹೆಚ್ಚು ಬಲಿ ಪಡೆದಿದೆ.

ಆದರೆ ಇರಾನ್‌ನ ಕೋಮ್ ನಗರದಲ್ಲಿರುವ ಶಿಯಾ ಪವಿತ್ರ ಸ್ಥಳದಲ್ಲಿ ಹಲವು ಅನುಯಾಯಿಗಳು ಅಲ್ಲಿನ ಸಮಾಧಿಗಳಿಗೆ ಮುತ್ತು ಕೊಡುತ್ತಿರುವ ಹಾಗೂ ನೆಕ್ಕುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ಅಲ್ಲಿನ ಪತ್ರಕರ್ತೆ ಮಸೀಹ್ ಅಲಿನೇಜದ್ ಈ ವಿಡಿಯೋಗಳನ್ನು ಹಂಚಿಕೊಂಡಿದ್ದು ಈ ಸ್ಥಳಗಳನ್ನು ಮುಚ್ಚದ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಅವು ವೈರಲ್ ಆದ ನಂತರ ಈ ರೀತಿ ಮಾಡಿದವರನ್ನು ಬಂಧಿಸಲಾಗಿದೆ.

ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ನೆಕ್ಕುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎಂದರೂ ಅಲ್ಲಿನ ಮೌಲ್ವಿಗಳು ಕೇಳುತ್ತಿಲ್ಲವಂತೆ. ಈ ಪವಿತ್ರ ಸ್ಥಳ ರೋಗ ನಿವಾರಣೆಗಿದ್ದು ಮುಚ್ಚುವುದಿಲ್ಲವೆನ್ನುತ್ತಿದ್ದಾರಂತೆ.

ಪುಟ್ಟ ಹುಡುಗಿಯ ಫೇವರಿಟ್ ಹಾಡಿಗೆ ಹೆಜ್ಜೆ ಹಾಕಿದ ಚಾಲಕ

Posted: 04 Mar 2020 06:42 AM PST

ಪುಟ್ಟ ಬಾಲಕಿಯೊಬ್ಬಳು ಬಸ್ ಡ್ರೈವರ್ ಬಳಿ ತನಗೆ ಇಷ್ಟವಾದ ಹಾಡಿನ ಬಗ್ಗೆ ಹೇಳುತ್ತಾಳೆ.

ಆಗ ಚಾಲಕ ಗಾಡಿ ನಿಲ್ಲಿಸಿ ಆ ಹಾಡು ಹಾಕಿ ಈ ಮಗುವಿನ ಜೊತೆ ಮಗುವಿನಂತೆ ಹೆಜ್ಜೆ ಹಾಕಿ ಸಂತಸಪಡಿಸುತ್ತಾರೆ.

ಈ ವಿಡಿಯೋಗೆ ಭರ್ಜರಿ ವೈರಲ್ ಆಗಿದೆ. ಒರ್ಲಾಂಡೋದಲ್ಲಿ ಈ ಘಟನೆ ನಡೆದಿದೆ.

ಈ ಪುಟ್ಟ ಬಾಲಕಿ ಬಸ್ ಇಳಿಯುವ ವೇಳೆ ತನಗಿಷ್ಟವಾದ “ಶೇಕ್ ಇಟ್ ಆಫ್” ಹಾಡಿನ ಬಗ್ಗೆ ಹೇಳುತ್ತಾಳೆ.

ಹೀಗಾಗಿ ಆಕೆಯನ್ನು ಖುಷಿ ಪಡಿಸಲೇಬೇಕು ಎಂದು ನಿರ್ಧರಿಸಿದ ಚಾಲಕ ತನ್ನ ಕೆಲಸವನ್ನು ಮರೆತು ರಸ್ತೆ ಬದಿ ಬಸ್ ನಿಲ್ಲಿಸಿ ಹಾಡನ್ನು ಹಾಕಿ ಈಕೆಯ ಜತೆ ಹೆಜ್ಜೆ ಹಾಕುತ್ತಾನೆ.

ಈ ವಿಡಿಯೋವನ್ನು ಬಾಲಕಿಯ ತಾಯಿ ಫೆಬ್ರವರಿ 2018ರಂದು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. ಇದುವರೆಗೂ ಹತ್ತು ಮಿಲಿಯನ್ ಮಂದಿ ಈ ವಿಡಿಯೊವನ್ನು ವೀಕ್ಷಣೆ ಮಾಡಿದ್ದಾರೆ.

ಅಲ್ಲದೆ ಸಾಕಷ್ಟು ಪ್ರತಿಕ್ರಿಯೆಗಳು ಲಭ್ಯವಾಗಿದ್ದು ಚಾಲಕನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಡಿ ಬಾಸ್ ಅಭಿಮಾನಿಗಳಿಗೆ ʼಗುಡ್ ನ್ಯೂಸ್ʼ

Posted: 04 Mar 2020 06:37 AM PST

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾರೋಗ್ಯದ ಕಾರಣ ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದು ನಿರ್ಗಮಿಸಿದ್ದಾರೆ.

ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಬೆಳಗಿನ ಜಾವ ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದರು. ದರ್ಶನ್ ಅವರಿಗೆ ಎರಡು ದಿನಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.

ಚಿಕಿತ್ಸೆ ಪಡೆದು ಬಿಡುಗಡೆಯಾದ ದರ್ಶನ್, ಸರಿಯಾದ ಸಮಯಕ್ಕೆ ಊಟ ಉಪಹಾರ ಸೇವಿಸದ ಕಾರಣ ಸಮಸ್ಯೆಯಾಗಿತ್ತು. ವೈದ್ಯರು ಚೆನ್ನಾಗಿ ನೋಡಿಕೊಂಡಿದ್ದು ಈಗ ಆರಾಮಾಗಿದ್ದೇನೆ ಎಂದು ಹೇಳಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾತನಾಡಿದ ದರ್ಶನ್, ನನಗೆ ಏನೂ ಆಗಿಲ್ಲ. ಫಸ್ಟ್ ಕ್ಲಾಸ್ ಆಗಿದ್ದೇನೆ, ಗ್ಯಾಸ್ಟ್ರಿಕ್ ಸಮಸ್ಯೆಯಾಗಿತ್ತು ಅಷ್ಟೇ ಎಂದು ತಿಳಿಸಿದ್ದಾರೆ.

ಮನ ಕಲಕುತ್ತೆ ಮಂಗಗಳು ತೋರಿರುವ ಮಾನವೀಯ ವರ್ತನೆ

Posted: 04 Mar 2020 06:26 AM PST

ಮನುಷ್ಯನಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಆದರೆ ಪ್ರಾಣಿಗಳಲ್ಲಿ ಇನ್ನು ಪಾಪ – ಪುಣ್ಯ ಜೀವಂತವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ನಕಲಿ ಮಂಗ ಸತ್ತಿದೆ ಎಂದು ತಿಳಿದು ಕಣ್ಣೀರಿಟ್ಟಿರುವ ಪ್ರಸಂಗ ನೆಟ್ಟಿಗರ ಮನ ತಟ್ಟಿದೆ.

ಮಂಗಗಳ ಚಲನವಲನವನ್ನು ವೀಕ್ಷಿಸುವ ಸಲುವಾಗಿ ಒಂದು ನಕಲಿ ಮಂಗವೊಂದನ್ನು ಕೊಂಬೆಯ ಮೇಲೆ ಇಟ್ಟು ಅದಕ್ಕೆ ಸ್ಪೈ ಕ್ಯಾಮೆರಾವನ್ನು ಫಿಕ್ಸ್ ಮಾಡಲಾಗಿತ್ತು. ಇದನ್ನು ಕೆಲವು ಮಂಗಗಳು ಕುತೂಹಲದಿಂದ ವೀಕ್ಷಿಸಿ ಬಳಿಕ ಹತ್ತಿರ ಹೋಗಿವೆ.

ಒಂದು ಮಂಗ ಆ ಕೊಂಬೆ ಮೇಲಿದ್ದ ನಕಲಿ ಮಂಗವನ್ನು ಎತ್ತಿಕೊಂಡಿತ್ತು. ಆದರೆ ಕೈತಪ್ಪಿ ಕೆಳಗೆ ಬಿದ್ದುಬಿಟ್ಟಿತು. ಎಲ್ಲಾ ಮಂಗಗಳು ಸುತ್ತುವರಿದು ಹತ್ತಿರ ಬಂದು ನೋಡಿವೆ.

ಅದರಿಂದ ಯಾವುದೇ ಚಲನೆ ಇರಲಿಲ್ಲ. ಇದರಿಂದ ಅದಕ್ಕೆ ಅಪರಾಧಿ ಭಾವನೆ ಕಾಡತೊಡಗಿತ್ತು. ಅಯ್ಯೋ ತನ್ನಿಂದಲೇ ಹೀಗಾಯಿತಲ್ಲ. ಇದು ಪ್ರಾಣ ಬಿಟ್ಟು ಬಿಟ್ಟಿತಲ್ಲ ಎಂದು ಕಣ್ಣೀರಿಡಲು ಶುರು ಮಾಡಿತ್ತು. ಇದರಿಂದ ಅಲ್ಲಿ ಇದ್ದ ಎಲ್ಲಾ ಮಂಗಗಳು ಶೋಕಾಚರಣೆಯಲ್ಲಿ ಪಾಲ್ಗೊಂಡವು.

ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಶೇರ್ ಮಾಡಿದ್ದಾರೆ. ಮಾ.2ರಂದು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದು, ಇದುವರೆಗೆ 3,600ಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಚೀನಾಗೆ ಗಡೀಪಾರಾಗಬೇಕಿದ್ದ ಬೆಕ್ಕಿನ ಪರ ಪೆಟಾ ಬ್ಯಾಟಿಂಗ್

Posted: 04 Mar 2020 06:24 AM PST

ಕರೋನಾ ವೈರಾಣುಗಳಿಗೆ ಬಾಧಿತನಾಗಿರುವ ಅನುಮಾನದಲ್ಲಿ ಚೀನಾಗೆ ಗಡಿಪಾರಾಗಲಿರುವ ಬೆಕ್ಕೊಂದನ್ನು ಬಿಡುಗಡೆ ಮಾಡಲು ಕೋರಿ ಪ್ರಾಣಿ ದಯಾ ಸಂಘಟನೆ ಪೆಟಾ ಬೇಡಿಕೆ ಇಟ್ಟಿದೆ.

20 ದಿನಗಳ ಹಿಂದೆ ಚೀನಾದಿಂದ ಚೆನ್ನೈಗೆ ಆಗಮಿಸಿದ ಈ ಬೆಕ್ಕನ್ನು ಸದ್ಯ ಚೆನ್ನೈ ಬಂದರಿನಲ್ಲಿ ಇಟ್ಟುಕೊಳ್ಳಲಾಗಿದೆ.

ಸಾಮಾನ್ಯವಾಗಿ ಬೆಕ್ಕುಗಳನ್ನು ಚರ್ಮ ಹಾಗೂ ಮಾಂಸಕ್ಕಾಗಿ ಬಳಸಲು ಚೀನಾಗೆ ಇದನ್ನು ಗಡೀಪಾರು ಮಾಡಲು ಇಡಲಾಗಿದೆ.

ಬೆಕ್ಕುಗಳಿಂದ COVID-19 ಹಬ್ಬುವುದು ಸಾಧ್ಯವಿಲ್ಲ ಎನ್ನಲು ವೈಜ್ಞಾನಿಕ ಸಾಕ್ಷ್ಯಾಧಾರಗಳಿರುವ ಕಾರಣ ಬೆಕ್ಕನ್ನು ಬಿಡುಗಡೆ ಮಾಡಬೇಕೆಂದು ಪೆಟಾ ಪಟ್ಟು ಹಿಡಿದು ಕುಳಿತಿದೆ.

ಸರಿಯಾದ ಆಹಾರವಿಲ್ಲದೇ ಭಾರತದಿಂದ ಚೀನಾಗೆ 20 ದಿನಗಳ ಪ್ರಯಾಣವನ್ನು ಬೆಕ್ಕು ಮಾಡಲಾರದು ಎಂದು ಸಂಘಟನೆ ಕಾಳಜಿ ವ್ಯಕ್ತಪಡಿಸಿದೆ.

ಕರೋನಾ ವೈರಾಣುಗಳು ಸಾಕು ಪ್ರಾಣಿಗಳಿಂದ ಹಬ್ಬುವುದಿಲ್ಲ ಎಂದು ಅಮೆರಿಕದ ಪಶು ವೈದ್ಯಕೀಯ ಸಂಘಟನೆ ಸ್ಪಷ್ಟಪಡಿಸಿದೆ.

ಅಶ್ಲೀಲವಾಗಿ ಟ್ರೋಲ್ ಮಾಡಿ ಕಿರಿಕ್: ನಟಿ ಮಾಡಿದ್ದೇನು ಗೊತ್ತಾ…?

Posted: 04 Mar 2020 05:55 AM PST

ಬೆಂಗಳೂರು: ಅವಾಚ್ಯ ಪದಗಳಿಂದ ನಿಂದಿಸಿ ಟ್ರೋಲ್ ಮಾಡಿದ್ದರಿಂದ ಆಕ್ರೋಶಗೊಂಡ ಸ್ಯಾಂಡಲ್ ವುಡ್ ನಟಿ ಭೂಮಿಕಾ ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಟ್ರೋಲಿಗರು ಟಿಕ್ ಟಾಕ್ ವಿಡಿಯೋದಲ್ಲಿ ಟ್ರೋಲ್ ಮಾಡಿ ಕಿರಿಕಿರಿಯುಂಟು ಮಾಡುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಬೆಂಗಳೂರು ನಂದಿನಿ ಲೇಔಟ್ ರಾಜೀವ್ ಗಾಂಧಿ ನಗರ ನಿವಾಸಿಯಾಗಿರುವ ಭೂಮಿಕಾ ಡ್ರೆಸ್, ಫೋಟೋ, ವಿಡಿಯೋ ಬಗ್ಗೆ ಟ್ರೋಲ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿ ಅಶ್ಲೀಲವಾಗಿ ಕಮೆಂಟ್ ಮಾಡಲಾಗುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಹೇಳಲಾಗಿದೆ.

ಭೂಮಿಕಾ ಆಪ್ತಮಿತ್ರ, ಹಲೋ ಮಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಸನ್ನಿಗೆ ನೆಟ್ಟಿಗರಿಂದ ಮಿಸೆಸ್ ಇಂಡಿಯಾ ಬಿರುದು…! ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಿ…!!

Posted: 04 Mar 2020 05:32 AM PST

ನೀಲಿ ಜಗತ್ತಿನ ಮಾಜಿ ಸುಂದರಿ, ಬಾಲಿವುಡ್ ನ ಖ್ಯಾತ ನಟಿ ಸನ್ನಿ ಲಿಯೋನ್ ಈಗ ಮಿಸೆಸ್ ಇಂಡಿಯಾ ಆಗಿದ್ದಾರೆ. ಅವರು ಈಗ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ನೆಟ್ಟಿಗರಿಂದ ಈ ಬಿರುದನ್ನು ತಂದುಕೊಟ್ಟಿದೆ.

ಹಳದಿ ಬಣ್ಣದ ಜಂಪ್ ಸೂಟ್ ನಲ್ಲಿ ಮಿಂಚುತ್ತಿರುವ ಸನ್ನಿ ಒಂದು ರಿಂಗ್ ಅನ್ನು ಹಿಡಿದುಕೊಂಡಿದ್ದಾರೆ. ಅದನ್ನು ಅವರು ತಮ್ಮ ದೇಹದ ಎದುರು ತಲೆಯಿಂದ ಕೆಲವರಿಗೆ ಹಿಡಿದಾಗಲೆಲ್ಲ ಆ ಭಾಗಗಳು ಕಣ್ಮರೆಯಾಗುತ್ತವೆ.

ಈ ಮೂಲಕ ಈ ಹಿಂದೆ ಅನಿಲ್ ಕಪೂರ್ ನಟನೆಯ ಮಿಸ್ಟರ್ ಇಂಡಿಯಾ ಸಿನಿಮಾವನ್ನು ನೆನಪಿಸುವಂತೆ ಇದು ಮಾಡಿದೆ.

ಇದೇ ಹಿನ್ನೆಲೆಯಲ್ಲಿ ಸನ್ನಿಗೆ ಮಿಸೆಸ್ ಇಂಡಿಯಾ ಎಂಬ ಬಿರುದನ್ನು ನೆಟ್ಟಿಗರು ನೀಡಿದ್ದಾರೆ. ಅವರು ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿ ಕೇವಲ ಒಂದು ಗಂಟೆಯಲ್ಲಿ 4 ಮಿಲಿಯನ್ ಗೂ ಹೆಚ್ಚು ವೀಕ್ಷಣೆಯನ್ನು ಕಂಡಿದೆ.

ಮುರಿದ ಹೆಬ್ಬೆರಳನ್ನು ಫ್ರಿಡ್ಜ್ ನಲ್ಲಿಟ್ಟು ಸ್ಮಾರ್ಟ್‌ ಫೋನ್ ಅನ್‌ ಲಾಕ್‌…!

Posted: 04 Mar 2020 05:28 AM PST

ಹೆಬ್ಬೆರಳು ಮುರಿದುಹೋದಲ್ಲಿ ಬರೆಯುವ ಸಾಧ್ಯತೆಯನ್ನೇ ಕಳೆದುಕೊಂಡು ನರಳುವ ಸಾಕಷ್ಟು ನಿದರ್ಶನಗಳನ್ನು ನೋಡಿದ್ದೇವೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಬಾಳನ್ನು ಇಲ್ಲೊಬ್ಬ ಬದುಕುತ್ತಿದ್ದಾನೆ.

ಅಪಘಾತವೊಂದರಲ್ಲಿ ಹೆಬ್ಬೆರಳನ್ನು ಮುರಿದುಕೊಂಡ ಯೂರಿ ವಿನೋಗ್ರಾಡೋವ್‌, ಕಳೆದ ಮೂರು ತಿಂಗಳುಗಳಿಂದ ಫ್ರೀಝರ್‌ನಲ್ಲಿ ತನ್ನ ಹೆಬ್ಬೆರಳನ್ನು ಇಟ್ಟುಕೊಂಡಿದ್ದಾನೆ.

ಈ ಹೆಬ್ಬೆರಳನ್ನು ಮತ್ತೆ ಕೂಡಿಸಿಕೊಳ್ಳಬಹುದಾಗಿದ್ದರೂ ಸಹ ಆತ ಡಯಾಬೆಟಿಕ್ ಆದ ಕಾರಣ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎದು ವೈದ್ಯರು ತಿಳಿಸಿದ್ದಾರೆ.

ತನ್ನ ಸ್ಮಾರ್ಟ್‌ ಫೋನ್‌ನ ಬೆರಳಚ್ಚು ಸೆನ್ಸಾರ್‌ ಮೂಲಕ ಅನ್‌ ಲಾಕ್‌ ಮಾಡಲು ಈ ಮುರಿದು ಬಿದ್ದ ಬೆರಳನ್ನು ಬಳಸಿ, ಅದರ ವಿಡಿಯೋ ಮಾಡಿ ಶೇರ್‌ ಮಾಡಿದ್ದಾರೆ.

ಈ ಪ್ರಯೋಗ ಮಾಡುವ ಮುನ್ನ, ಹೆಪ್ಪುಗಟ್ಟಿದ ತನ್ನ ಬೆರಳನ್ನು ಬೆಚ್ಚನೆಯ ನೀರಿನಲ್ಲಿ ಇಟ್ಟು, ಅದರ ಮೇಲಿರುವ ಮಂಜನ್ನು ತೆಗೆಯಬೇಕಾಗುತ್ತದೆ.

ಸೆಕೆಂಡ್ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ಬರೆದ ವಿದ್ಯಾರ್ಥಿ ಸೇರಿ ಇಬ್ಬರು ಅರೆಸ್ಟ್

Posted: 04 Mar 2020 05:26 AM PST

ವಿಜಯಪುರ: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಪರೀಕ್ಷೆ ಆರಂಭವಾದ ಒಂದು ಗಂಟೆ ಅವಧಿಯಲ್ಲಿ ಭೌತಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.

ಕೂಡಲೇ ತನಿಖೆ ಕೈಗೊಂಡ ವಿಜಯಪುರ ಜಿಲ್ಲೆ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಲು ಸಹಕಾರ ನೀಡಿದ ವಿದ್ಯಾರ್ಥಿ ಮತ್ತು ಸೋರಿಕೆ ಮಾಡಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಂಡಿ ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಪದವಿ ಪೂರ್ವ ಕಾಲೇಜ್ ನಲ್ಲಿ ಬುಧವಾರ ಬೆಳಿಗ್ಗೆ ಪರೀಕ್ಷಾ ಕೇಂದ್ರದಲ್ಲಿದ್ದ ಮುರುಗೇಂದ್ರ ಎಂಬ ವಿದ್ಯಾರ್ಥಿ ಕಿಟಕಿಯಿಂದ ಹೊರಗೆ ಪ್ರಶ್ನೆಪತ್ರಿಕೆ ತೋರಿಸಿದ್ದು ಮುರುಗೇಶ್ ಎಂಬಾತ ಪ್ರಶ್ನೆ ಪತ್ರಿಕೆ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ಕೂಡ ಅಮಾನತು ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಕೊರೊನಾ ಸಹಾಯವಾಣಿಗೆ ಕರೆ ಮಾಡಿದಾಗ ಸಿಕ್ತು ಅದ್ಭುತ ಸ್ಪಂದನೆ

Posted: 04 Mar 2020 05:19 AM PST

ಭಾರತದಲ್ಲಿ ಮತ್ತೆರಡು ಕೊರೊನಾ ವೈರಸ್ ಪೀಡಿತ ರೋಗಿಗಳು ಪತ್ತೆಯಾಗಿದ್ದು ಇದೀಗ ಅದರ ಸಂಖ್ಯೆ ಆರಕ್ಕೇರಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮ ಕೈಗೊಳ್ಳುತ್ತಿವೆ.

ಇದೀಗ ಕೇಂದ್ರ ಸರ್ಕಾರ ಶಂಕಿತ ಕೊರೊನಾವೈರಸ್ ರೋಗಿಗಳಿಗೆ ಸಹಾಯವಾಣಿ ಶುರುಮಾಡಿದೆ(+91 1123978046) ಹಾಗೂ ಇ-ಮೇಲ್ (ncov2019@gmail.com). ಇದನ್ನು ಪತ್ರಿಕೆಯೊಂದು ಪರೀಕ್ಷೆ ಮಾಡಿದೆ.

ಅವರು ಫೋನ್ ಮಾಡಿದಾಗ ತಕ್ಷಣ ಸ್ಪಂದನೆ ಸಿಕ್ಕಿದ್ದು ಫೋನ್ ಮಾಡಿದವರಿಂದ ಎಲ್ಲ ಮಾಹಿತಿ ಪಡೆದಿದ್ದಾರೆ. ಕರೆ ಮಾಡಿದವರು ಕೆಮ್ಮಿನ ಬಗ್ಗೆ ಹೇಳಿದ್ದು ಸಹಾಯಕ ಮೊದಲು ಹತ್ತಿರದ ವೈದ್ಯರಿಗೆ ತೋರಿಸಲು ಹೇಳಿದ್ದಾರೆ.

ಒಂದು ವೇಳೆ 2-3 ದಿನದಲ್ಲಿ ಸರಿ ಹೋಗದಿದ್ದರೆ ಕೊರೊನಾ ವೈರಸ್ ಅನ್ನು ಪರೀಕ್ಷಿಸುವ ವಿಶೇಷ ಆಸ್ಪತ್ರೆಗೆ ತೆರಳಲು ಸೂಚಿಸಲಾಗಿತ್ತಂತೆ. ಹಾಗೂ ಪರೀಕ್ಷೆ ಮತ್ತು ತಪಾಸಣೆ ಮಾಡಲು 24 ಘಂಟೆ ಅಲ್ಲಿ ವೈದ್ಯರಿದ್ದು ಎಲ್ಲವೂ ಉಚಿತವಂತೆ.

ಒಂದು ವೇಳೆ ವೈರಸ್ ಪತ್ತೆಯಾದರೆ ಅವರನ್ನು ಪ್ರತ್ಯೇಕ ಇಡುವ ವ್ಯವಸ್ಥೆಗೆ ಅಥವಾ ಮನೆಯಲ್ಲಿಯೇ ಒಂಟಿಯಾಗಿರುವುದಕ್ಕೆ ತಿಳಿಸಲಾಗುತ್ತದಂತೆ. ಸದ್ಯಕ್ಕೆ ಸಹಾಯವಾಣಿಯಲ್ಲಿ 10ಜನ ಕೆಲಸ ಮಾಡುತ್ತಿದ್ದು ಅದನ್ನು 15ಕ್ಕೆ ಏರಿಸಲಾಗುತ್ತದಂತೆ.

2 ವರ್ಷ ಪೋಷಣೆ ಮಾಡಿದ್ದ ಗಿಡದ ಅಸಲಿಯತ್ತು ತಿಳಿದು ದಂಗಾದ ಮಹಿಳೆ

Posted: 04 Mar 2020 05:17 AM PST

ಎರಡು ವರ್ಷಗಳ ಕಾಲ ನೀರೆರೆದು ಪೋಷಣೆ ಮಾಡಿದ ಗಿಡವೊಂದು ಅಸಲಿಯದ್ದಲ್ಲ ಎಂದು ತಿಳಿದ ಮಹಿಳೆಯೊಬ್ಬರು ಬಹಳ ನಿರಾಶರಾಗಿದ್ದಾರೆ.

ಕೇಯ್ಲೀ ವಿಲ್ಕ್ಸ್ ಎಂಬ ಹೆಸರಿನ ಈ ಮಹಿಳೆಯೊಬ್ಬರು ಈ ಚಿತ್ರವನ್ನು ಫೇಸ್ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ತನ್ನ ಅಡುಗೆ ಮನೆಯ ಕಿಟಕಿ ಬಳಿ ಈ ಗಿಡವನ್ನು ಇಟ್ಟುಕೊಂಡು ಬಹಳ ಜತನದಿಂದ ಪೋಷಣೆ ಮಾಡುತ್ತಿದ್ದ ಈಕೆ ಅದರ ಆರೈಕೆ ಮಾಡುತ್ತಿದ್ದರು.

ಇತ್ತೀಚೆಗೆ ಗಿಡವನ್ನು ಬೇರೊಂದು ಕುಂಡಕ್ಕೆ ಹಾಕುವ ಆಲೋಚನೆ ಮಾಡಿದ ವಿಲ್ಕ್ಸ್‌, ಗಿಡವನ್ನು ಪ್ಲಾಸ್ಟಿಕ್ ಕಂಟೇನರ್‌ನಿಂದ ಎಳೆದಾಗ ಅದೊಂದು ಕೃತಕ ಗಿಡವೆಂದು ತಿಳಿದಿದ್ದಾರೆ.

ಅಷ್ಟೆಲ್ಲಾ ಕಷ್ಟಪಟ್ಟು ಪೋಷಣೆ ಮಾಡಿದ ಬಳಿಕ ಇದೊಂದು ಕೃತಕ ಹೂವು ಎಂದು ತಿಳಿದ ಆಕೆ ಬೆಚ್ಚಿಬಿದ್ದಿದ್ದಾರೆ.

Story time. I've had this beautiful succulent for about 2 years now. I was so proud of this plant. It was full,…

Posted by Caelie Wilkes on Friday, February 28, 2020

ರಾಮಚಂದ್ರಾಪುರ ಮಠದಲ್ಲಿ ರಾಘವೇಶ್ವರ ಶ್ರೀ ಆಶೀರ್ವಾದ ಪಡೆದ ಮೋದಿ ಪತ್ನಿ

Posted: 04 Mar 2020 05:15 AM PST

ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಮಠದಲ್ಲಿ ನಡೆಯುತ್ತಿರುವ ಶ್ರೀ ಕೃಷ್ಣಾರ್ಪಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಆಗಮಿಸಿದ್ದಾರೆ. ಮಠಕ್ಕೆ ಆಗಮಿಸಿದ ಅವರು, ಗೋವರ್ಧನ ಗಿರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಸ್ವಾಮೀಜಿಯಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ.

ವೇದಿಕೆಯಲ್ಲಿ ಮಾತನಾಡಿದ ಅವರು, ತಮಗೆ ಸಾಧು-ಸಂತರ ಬಗ್ಗೆ ಅಪಾರ ಗೌರವವಿದ್ದು, ದೇಶದ ವಿವಿಧೆಡೆ ಸಾಧು-ಸಂತರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿರುವುದಾಗಿ ತಿಳಿಸಿದ್ದಾರೆ. ಬೇಟಿ ಪಡಾವೋ ಬೇಟಿ ಬಚಾವೋ ಬಗ್ಗೆ ಹೆಚ್ಚು ಆಸಕ್ತಿ ತೋರುವಂತೆ ಅವರು ತಿಳಿಸಿದ್ದು, ರಾಘವೇಶ್ವರ ಸ್ವಾಮೀಜಿ ಅವರಲ್ಲಿ ಆದಿ ಶಂಕರಾಚಾರ್ಯರನ್ನು ಕಂಡೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಜಶೋದಾ ಬೆನ್ ಅವರಿಗೆ ಸ್ವಾಮೀಜಿ ಸ್ಮರಣಿಕೆ ನೀಡಿದ್ದಾರೆ.

ಹೈದರಾಬಾದ್ ನಲ್ಲಿ ಮತ್ತಿಬ್ಬರಿಗೆ ಕೊರೋನಾ ವೈರಸ್: ಸೋಂಕಿತರ ಸಂಖ್ಯೆ ಏರಿಕೆ

Posted: 04 Mar 2020 04:57 AM PST

ಹೈದರಾಬಾದ್ ನಲ್ಲಿ ಮತ್ತಿಬ್ಬರು ವ್ಯಕ್ತಿಗಳಿಗೆ ಕೊರೋನಾ ವೈರಸ್(ಕೋವಿಡ್ 19) ಸೋಂಕು ತಗಲಿದೆ. ತೆಲಂಗಾಣ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಮಾಹಿತಿ ನೀಡಿದೆ.

ಈ ಹಿಂದೆ ಟೆಕ್ಕಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಬುಧವಾರ ಇಬ್ಬರಲ್ಲಿ ಸೋಂಕು ತಗುಲಿರುವುದು ಗೊತ್ತಾಗಿದೆ. ಇತ್ತೀಚೆಗೆ ಇಟಲಿಗೆ ಹೋಗಿ ಬಂದ ವ್ಯಕ್ತಿಗೆ ಸೋಂಕು ತಗಲಿದ್ದು ಅವರೊಂದಿಗೆ ಸಂಪರ್ಕದಲ್ಲಿದ್ದ ಮತ್ತೊಬ್ಬ ವ್ಯಕ್ತಿಗೂ ಸೋಂಕು ತಗುಲಿದೆ ಎಂದು ಹೇಳಲಾಗಿದ್ದು, ಇಬ್ಬರನ್ನು ಹೈದರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.

ಟೆಕ್ಕಿಯೊಬ್ಬರಿಗೆ ಸೋಂಕು ತಗುಲಿದ್ದು, ಅವರು ಕಾರ್ಯನಿರ್ವಹಿಸುತ್ತಿದ್ದ ಕಂಪನಿಯ ನೌಕರರನ್ನು ಮನೆಗೆ ಕಳಿಸಲಾಗಿದೆ ಎಂದು ಹೇಳಲಾಗಿದೆ.

ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕನ್ನಡಿಗ ಸುನಿಲ್ ಜೋಷಿ

Posted: 04 Mar 2020 04:39 AM PST

Image result for sunil-joshi

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆಸಮಿತಿ ನೂತನ ಅಧ್ಯಕ್ಷರಾಗಿ ಕರ್ನಾಟಕದ ಸುನೀಲ್ ಜೋಷಿ ಆಯ್ಕೆಯಾಗಿದ್ದಾರೆ.

ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಸೇರಿದಂತೆ ಐದು ಮಂದಿಯ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿತ್ತು. ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಎಂ.ಎಸ್.ಕೆ. ಪ್ರಸಾದ್ ಅವರ ಜಾಗಕ್ಕೆ ಸುನಿಲ್ ಜೋಷಿ ನೇಮಕವಾಗಿದ್ದಾರೆ.

ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸುನಿಲ್ ಜೋಶಿ ನೇಮಕವಾಗಿದ್ದು, ಸಮಿತಿಯಲ್ಲಿ ದೇವಾಂಗ್ ಗಾಂಧಿ, ಶರಣ್ ದೀಪ್ ಸಿಂಗ್, ಜತಿನ್ ಪರಾಂಜಪೆ, ಹರವಿಂದರ್ ಸಿಂಗ್ ಇರಲಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ದರ್ಶನ್: ಆರೋಗ್ಯ ವಿಚಾರಿಸಿದ ಸಂದೇಶ್ ನಾಗರಾಜ್

Posted: 04 Mar 2020 04:23 AM PST

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾರೋಗ್ಯದ ಕಾರಣ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಮೂರು ದಿನಗಳಿಂದ ಮೈಸೂರಿನಲ್ಲಿದ್ದ ದರ್ಶನ್ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಬೆಳಗಿನ ಜಾವ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ದರ್ಶನ್ ಫಾರ್ಮ್ ಹೌಸ್ ಗೆ ಹೊಸ ಕುದುರೆಗಳು ಬಂದಿದ್ದು ಅವುಗಳನ್ನು ನೋಡಲು ಮೈಸೂರಿಗೆ ಆಗಮಿಸಿದ್ದರು. ಮೂರು ದಿನಗಳಿಂದ ಮೈಸೂರಿನಲ್ಲೇ ಇದ್ದ ದರ್ಶನ್ ಅವರಿಗೆ ಎರಡು ದಿನಗಳಿಂದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಈ ರೀತಿ ಆಗಿದೆ ಎನ್ನಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿದ ನಿರ್ಮಾಪಕ ಸಂದೇಶ್ ನಾಗರಾಜ್, ಆರೋಗ್ಯ ವಿಚಾರಿಸಿದ್ದಾರೆ. ಗ್ಯಾಸ್ಟ್ರಿಕ್ ಸಮಸ್ಯೆ ಕಾರಣ ದರ್ಶನ್ ಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈಗ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಹೇಳಿದ್ದಾರೆ.

ಪತ್ನಿ ಕೊಲೆ ಪ್ರಕರಣದಿಂದ ಈ ವ್ಯಕ್ತಿ ಪಾರಾಗಿದ್ದು ಹೇಗೆ ಗೊತ್ತಾ…?

Posted: 04 Mar 2020 03:45 AM PST

ಒಡಿಶಾದ ವ್ಯಕ್ತಿಯೊಬ್ಬನ ಮೇಲೆ ಹೆಂಡತಿ ಕೊಲೆ ಪ್ರಕರಣ ದಾಖಲಾಗಿದ್ದು ಜಾಮೀನಿನ ಮೇಲೆ ಹೊರಬಂದು ಏಳು ವರ್ಷ ಆದ ಮೇಲೆ ತನ್ನ ಹೆಂಡತಿಯನ್ನು ಹುಡುಕಿ ಪ್ರಕರಣದಿಂದ ಖುಲಾಸೆಯಾಗಿದ್ದಾರೆ.

ಪಟ್‌ ಕುರಾದ ಚೌಲಿಯಾ ಹಳ್ಳಿಯ ವಾಸಿಯಾದ ಅಭಯ ಸುತಾರ್ ಫೆ.2013ರಂದು ಇತಿಶ್ರೀ ಮೊಹರಾಣಾ ಎನ್ನುವವರ ಜೊತೆ ಮದುವೆಯಾಗಿದ್ದರು. ಆದರೆ ಎರಡು ತಿಂಗಳ ನಂತರ ಅವರ ಹೆಂಡತಿ ನಾಪತ್ತೆಯಾಗಿದ್ದರು.

ಅಭಯ ಅವರ ಮೇಲೆ ಹುಡುಗಿಯ ತಂದೆ ಕೊಲೆ ಪ್ರಕರಣ ದಾಖಲಿಸಿದ್ದರು. ಆಗ ಅವರನ್ನು ಪೊಲೀಸರು ಬಂಧಿಸಿದ್ದರು. ಅಭಯ 1ತಿಂಗಳು ಜೈಲಿನಲ್ಲಿದ್ದು ಆಮೇಲೆ ಜಾಮೀನಿನ ಮೇಲೆ ಹೊರಬಂದಿದ್ದರು.

ನಂತರ 7 ವರ್ಷ ಅವರ ಹೆಂಡತಿಗಾಗಿ ಹುಡುಕಾಡಿದ ಅವರು ಇತ್ತೀಚಿಗೆ ಪಿಪಿಲಿ ಎನ್ನುವ ಹಳ್ಳಿಯಲ್ಲಿ ಅವರನ್ನು ಪತ್ತೆಹಚ್ಚಿದ್ದರು. ಇತಿಶ್ರೀ 7 ವರ್ಷದ ಹಿಂದೆ ರಾಜೀವ್ ಎನ್ನುವವರ ಜೊತೆ ಓಡಿ ಹೋಗಿ ಮದುವೆಯಾಗಿದ್ದರಂತೆ.

ಇದೀಗ ಅವರು ದೊರೆತಿದ್ದು ಅಭಯ ಪ್ರಕರಣದಿಂದ ಖುಲಾಸೆಯಾಗಿದ್ದಾರೆ. ಅಂತೂ ಇಷ್ಟು ವರ್ಷ ಕಷ್ಟ ಪಟ್ಟಿದ್ದಕ್ಕೆ ಫಲ ದೊರೆತಿದೆ.

ಗೋಲ್ಡ್‌ ರೋಲ್ಸ್ ರಾಯ್ಸ್ ಕಾರು ಕಂಡು ನೆಟ್ಟಿಗರಿಗೆ ಅಚ್ಚರಿ

Posted: 04 Mar 2020 02:46 AM PST

ರೋಲ್ಸ್ ರಾಯ್ಸ್ ಕಾರನ್ನು ಭಾರತದಲ್ಲಿ ಟ್ಯಾಕ್ಸಿಯಾಗಿ ಬಳಸುವುದನ್ನು ಎಲ್ಲಾದರೂ ಕೇಳಿದ್ದೀರಾ? ಇಲ್ಲ ಅಲ್ಲವೇ? ಕೇರಳದಲ್ಲಿ ಈಗ ಇದು ಸಂಭವಿಸುತ್ತಿದ್ದು, ಇದರ ಬಗ್ಗೆ ಟ್ವಿಟರ್‌ನಲ್ಲಿ ನೋಡಿ ತಿಳಿಯುತ್ತಿದ್ದೇವೆ.

ಹಿಂದಿನ ತಲೆಮಾರಿನ ಹೊಂಬಣ್ಣದ ರೋಲ್ಸ್‌ ರಾಯ್ಸ್‌ ಕಾರಿನ ಚಿತ್ರವೊಂದನ್ನು ಶಿರೀಶ್ ಚಂದ್ರನ್ ಶೇರ್‌ ಮಾಡಿಕೊಂಡಿದ್ದಾರೆ. ಹಳದಿ ನಂಬರ್‌ ಪ್ಲೇಟ್‌ನ ಈ ಕಾರನ್ನು ಟ್ರಕ್‌ನಲ್ಲಿ ಹೊತ್ತೊಯ್ಯಲಾಗುತ್ತಿದ್ದು, ನಿಜವೇ ಇದು ಎಂದು ಜನರ ಉದ್ಗಾರ ತೆಗೆದಿದ್ದಾರೆ.

ಕೇರಳದ ಆಕ್ಸಿಝನ್ ರೆಸಾರ್ಟ್ಸ್‌ನ ಮಾಲೀಕ ಬಾಬು ಚೆಮ್ಮನೂರ್‌ ಈ ಕಾರನ್ನು ಬಳಸುತ್ತಿದ್ದಾರೆ. ಈಗಿನ ತಲೆಮಾರಿನ ರೋಲ್ಸ್‌-ರಾಯ್ಸ್‌ ಫ್ಯಾಂಟಮ್ ಕಾರಿನ ಬೆಲೆಯು 9.5 ಕೋಟಿ ರೂ.ಗಳಷ್ಟಿದೆ.

ಆಕ್ಸಿಜನ್ ರೆಸಾರ್ಟ್ಸ್‌ನ ಪ್ಯಾಕೇಜ್ ಒಂದರ ಭಾಗವಾಗಿ ಈ ಚಿನ್ನದ ಕಾರಿನಲ್ಲಿ ರೈಡ್ ಪಡೆಯಬಹುದಾಗಿದ್ದು, 25,000 ರೂ.ಗಳಿಗೆಲ್ಲಾ ಈ ಕಾರಿನಲ್ಲಿ ಚಲಿಸುವ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.

Gameforumer QR Scan

Gameforumer QR Scan
Gameforumer QR Scan