Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Wednesday, February 26, 2020

Kannada News | Karnataka News | India News

Kannada News | Karnataka News | India News


ತನ್ನ ಲೈಂಗಿಕ ಆಸಕ್ತಿ ಕುರಿತು ಮನಬಿಚ್ಚಿ ಮಾತನಾಡಿದ ನಟ

Posted: 26 Feb 2020 05:37 PM PST

ತಮ್ಮ ಹುರಿಗಟ್ಟಾದ ದೇಹ ಹಾಗೂ ದೈಹಿಕ ಸಾರ್ಮರ್ಥ್ಯದಿಂದ ಪ್ರಸಿದ್ದರಾಗಿರುವ ಸೂಪರ್ ಮಾಡೆಲ್ ಹಾಗೂ ನಟ ಮಿಲಿಂದ್ ಸೋಮನ್ ತಮ್ಮ ಜೀವನ ಕಥೆಯಿರುವ ಮೇಡ್ ಇನ್ ಇಂಡಿಯಾ ಪುಸ್ತಕ ಬಿಡುಗಡೆಗೊಳಿಸಿದ್ದಾರೆ.

ಅದರ ಬಗ್ಗೆ ಮಾತನಾಡುತ್ತಾ ಹಲವು ವಿಷಯಗಳ ಬಗ್ಗೆ ಮನಬಿಚ್ಚಿರುವ ಅವರು, ತಮ್ಮ ಲೈಂಗಿಕತೆಯ ಬಗ್ಗೆ ಕೇಳಿದಾಗ ತಾವು ಯಾವಾಗಲೂ ಹುಡುಗಿಯರಿಗೆ ಆಕರ್ಷಿತರಾಗಿದ್ದು ಪುರುಷರಿಗೆ ಆಕರ್ಷಿತರಾಗಿಲ್ಲ ಎಂದಿದ್ದಾರೆ.

ಅದಕ್ಕಾಗಿ ಸಲಿಂಗವನ್ನು ತಮ್ಮ ಜೀವನದಲ್ಲಿ ಪ್ರಯೋಗ ಮಾಡಿಲ್ಲ ಎಂದಿದ್ದಾರೆ. ಹಾಗೆ ಸಿಗರೇಟ್ ಚಟ ಬಿಟ್ಟಿರುವುದನ್ನೂ ಹೇಳಿದ್ದಾರೆ. ಹೀಗೆ ಹತ್ತು ಹಲವು ವಿಷಯಗಳನ್ನು ತಮ್ಮ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.

ನೀವೂ ಪ್ರತಿದಿನ ಬ್ಲಾಕ್ ಕಾಫಿ ಕುಡಿಯುತ್ತೀರಾ…?

Posted: 26 Feb 2020 05:35 PM PST

ಬೆಳಿಗ್ಗೆ ಕಾಫಿ ಕುಡಿದರೆ ಅಷ್ಟೇ ಆ ದಿನ ಶುರುವಾಗುವುದು. ಕಾಫಿ ಕುಡಿಯದಿದ್ದರೆ ಯಾವ ಕೆಲಸ ಮಾಡುವುದಕ್ಕೂ ಕೆಲವರಿಗೆ ಮನಸ್ಸು ಬರುವುದಿಲ್ಲ. ಘಂ ಎಂದು ಕಾಫಿ ಪರಿಮಳ ಮೂಗಿಗೆ ಅಡರಿದರೆ ಎಷ್ಟು ಲೋಟ ಹೊಟ್ಟೆಗೆ ಸೇರಿತು ಎಂಬುದೇ ತಿಳಿಯುವುದಿಲ್ಲ. ಕಾಫಿಗೆ ಹಾಲು ಸೇರಿಸಿಕೊಂಡು ಕೆಲವರು ಕುಡಿಯುತ್ತಾರೆ. ಇನ್ನು ಕೆಲವರು ಬ್ಲಾಕ್ ಕಾಫಿ ಕುಡಿಯುತ್ತಾರೆ. ಈ ಬ್ಲಾಕ್ ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ ಅದೇನೆಂದು ತಿಳಿಯೋಣ.

ಕಾಫಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿದೆ. ಜತೆಗೆ ಪೋಟ್ಯಾಷಿಯಂ, ಮೆಗ್ನೇಷಿಯಂ, ಸೋಡಿಯಂ ಕೂಡ ಇದೆ. ಇನ್ನು ಬ್ಲಾಕ್ ಕಾಫಿಯಲ್ಲಿ ಕ್ಯಾಲೋರಿ ಕೂಡ ತುಂಬ ಕಡಿಮೆ ಇದೆ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳುವವರು ಇದನ್ನು ಸಂತೋಷದಿಂದ ಕುಡಿಯಬಹುದು.

ಇನ್ನು ನಮ್ಮ ದೇಹದಲ್ಲಿನ ಜೀವಕೋಶಗಳು ಹಾನಿಯಾಗದಂತೆ ಈ ಕಾಫಿ ತಡೆಯುತ್ತದೆ. ಬ್ಲಾಕ್ ಕಾಫಿ ಕುಡಿಯುವುದರಿಂದ ಮರೆವಿನ ರೋಗ, ಪಾರ್ಕಿನ್ ಸನ್ ರೋಗ ಬಾರದಂತೆ ತಡೆಯುವಲ್ಲಿ ಸಹಾಯಕಾರಿಯಾಗಿದೆ.

ಇದರಲ್ಲಿ ವಿಟಮಿನ್ ಬಿ5, ವಿಟಮಿನ್ ಬಿ3, ವಿಟಮಿನ್ ಬಿ2 ಹೇರಳವಾಗಿದೆ. ಇನ್ನು ವರ್ಕ್ ಔಟ್ ಮಾಡುವ ಮೊದಲು ಈ ಬ್ಲಾಕ್ ಕಾಫಿ ಸೇವನೆ ಮಾಡುವುದರಿಂದ ಶಕ್ತಿ ಹೆಚ್ಚುತ್ತದೆ.

ಬೇಕಾಗುವ ಸಾಮಗ್ರಿಗಳು:

1 ಕಪ್ ನೀರು, 2 ಟೀ ಸ್ಪೂನ್ ಕಾಫಿ ಪುಡಿ. 1 ಟೇಬಲ್ ಸ್ಪೂನ್ ತಣ್ಣಗಿನ ನೀರು.

ಮಾಡುವ ವಿಧಾನ: ಮೊದಲಿಗೆ ಒಂದು ಕಪ್ ನೀರನ್ನು ಕುದಿಸಿಕೊಳ್ಳಿ. ಒಂದು ಟೀ ಸ್ಪೂನ್ ತಣ್ಣಗಿನ ನೀರಿಗೆ ಕಾಫಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಕುದಿಯುತ್ತಿರುವ ನೀರಿಗೆ ಈ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಿಸಿ ಬಿಸಿ ಇರುವಾಗಲೇ ಕುಡಿಯಿರಿ.

ಜೈನ ಧರ್ಮ ಅನುಸರಿಸಲು ಭಾರತಕ್ಕೆ ಬರುತ್ತಿರುವ ಜಪಾನಿಯರು

Posted: 26 Feb 2020 05:31 PM PST

ಬೌದ್ಧ ಧರ್ಮೀಯರೇ ಬಾಹುಳ್ಯದಲ್ಲಿ ಇರುವ ಜಪಾನ್‌ನ ನಾಗಾನೋಕೆನ್‌ ಎಂಬ ಜನಪ್ರಿಯ ಪ್ರವಾಸೀ ತಾಣವೊಂದರಲ್ಲಿ ಏಳನೇ ಶತಮಾನಕ್ಕೆ ಸೇರಿದ ಝೆಂಕೋ-ಜೀ ದೇಗುಲವಿದ್ದು, ಇಲ್ಲಿ ಬುದ್ಧನ ಪ್ರತಿಮೆಯೊಂದು ಇದೆ. ಅದು ಹೆಚ್ಚಿನ ಜನರ ಕಣ್ಣಿಗೆ ಬೀಳದು.

ಈ ನಗರವು ಜೈನ ಧರ್ಮಕ್ಕೆ ಬದಲಾಗಲು ಇಚ್ಛಿಸುವ ಜಪಾನೀ ಜನರ ಪಾಲಿನ ಮೆಚ್ಚಿನ ತಾಣವಾಗಿದೆ. ಜೈನ ಅನುಯಾಯಿಯಾಗಲು ಪ್ರತಿ ವರ್ಷ ಸಾವಿರಾರು ಜಪಾನಿಗಳು ಈ ನಾಗಾನೋಕೆನ್‌ಗೆ ಬರುತ್ತಾರೆ.

ಬಿಳಿ ಬಣ್ಣದ ಬಟ್ಟೆ ಧರಿಸಿ, ನವಕಾರ ಮಂತ್ರ ಜಪಿಸುವ ಇವರು ಸೂರ್ಯಾಸ್ತಕ್ಕೂ ಮುನ್ನ ದಿನದ ಕೊನೆಯ ಊಟ ಮುಗಿಸಿ, ಬೆಚ್ಚನೆಯ ನೀರು ಕುಡಿದು ಬಳಿಕ ಗಂಟೆಗಳ ಕಾಲ ಧ್ಯಾನ ಮಾಡುತ್ತಾರೆ.

ಇದೇ ವೇಳೆ, ಉತ್ತರ ಗುಜರಾತಿನ ತರದ್‌ನಲ್ಲಿರುವ ಜೈನ ದೇಗುಲಕ್ಕೆ ಸಹಸ್ರಾರು ಜಪಾನೀಯರು ಆಗಮಿಸುತ್ತಿದ್ದು, ಇಲ್ಲಿನ ಜಯಂತ್‌ ಸೆನ್‌ಸುರಿಸ್ವರಾಜೀ ಮಹಾರಾಜ್‌ ಗುರುಗಳ ಅನುಯಾಯಿಗಳಾಗಿಬಿಟ್ಟಿದ್ದಾರೆ.

ಕಳೆದ ವರ್ಷ 2500 ಜಪಾನೀಯರು ಗುಜರಾತ್‌ಗೆ ಭೇಟಿ ನೀಡಿದ್ದಾರೆ. ಜಪಾನ್‌ನಲ್ಲಿ ಇತ್ತೀಚೆಗೆ 5000 ಕುಟುಂಬಗಳು ಜೈನ ಧರ್ಮ ಸ್ವೀಕರಿಸಿದ್ದು, ಜಪಾನ್‌ನಲ್ಲೊಂದು ಜೈನ ದೇಗುಲ ನಿರ್ಮಾಣ ಮಾಡಲಾಗುತ್ತಿದೆ.

ಬ್ರೇಕಿಂಗ್ ನ್ಯೂಸ್: ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಹೃದಯಾಘಾತ

Posted: 26 Feb 2020 05:29 PM PST

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಲಘು ಹೃದಯಾಘಾತವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರಿನ ತಮ್ಮ ನಿವಾಸದಲ್ಲಿ ಇದ್ದ ವೇಳೆಯಲ್ಲಿ ಲಘು ಹೃದಯಾಘಾತವಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಅರ್ಜುನ್ ಜನ್ಯಗೆ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ರಕ್ತದೊತ್ತಡ ಸಮಸ್ಯೆ ನಿವಾರಿಸುತ್ತೆ ಸಗಣಿ ಚಪ್ಪಲಿ

Posted: 26 Feb 2020 05:28 PM PST

ಸಗಣಿ ಚಪ್ಪಲಿ ಮಾನಸಿಕ ಕಾಯಿಲೆ ಮತ್ತು ರಕ್ತದೊತ್ತಡ ಸಮಸ್ಯೆಗಳಿಂದ ರಕ್ಷಿಸಲಿದೆ. ಈ ವಿಶೇಷ ಚಪ್ಪಲಿಯನ್ನು ಅಂತರರಾಷ್ಟ್ರೀಯ ಶಿವರಾತ್ರಿ ಉತ್ಸವದಲ್ಲಿ ಪಶುಸಂಗೋಪನಾ ಇಲಾಖೆಯ ಪ್ರದರ್ಶನಕ್ಕಿಟ್ಟಿತ್ತು. ಇದಕ್ಕೆ ಪಾದುಕೆ  ಎಂದು ಹೆಸರಿಡಲಾಗಿದೆ. ಇದು ಗೋವಿನ ಸಗಣಿಯಿಂದ ಮಾಡಿದ ಮೊದಲ ಚಪ್ಪಲಿ ಎನ್ನಲಾಗಿದೆ. ಇದನ್ನು ಧರಿಸುವುದರಿಂದ ವ್ಯಕ್ತಿಯ ಬಿಪಿ ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ.

ಸ್ನಾಯುಗಳ ಸೆಳೆತವು ನಿವಾರಣೆಯಾಗುತ್ತದೆ. ಮಾನಸಿಕ ಕಾಯಿಲೆಗಳ ಕಡಿಮೆಯಾಗುತ್ತವೆ. ಹಸುವಿನ ಸಗಣಿಯಿಂದ ತಯಾರಿಸಿದ ಪಾದುಕೆ ಒತ್ತಡ ನಿವಾರಿಸುತ್ತದೆ. ಹಸುವಿನ ಸಗಣಿ ಬ್ಯಾಕ್ಟೀರಿಯಾ ನಾಶಕ. ವೈರಸ್ ನಿಯಂತ್ರಣ ಶಕ್ತಿಯನ್ನು ಹೊಂದಿದೆ.

ಇಟಾಲಿಯನ್ ವಿಜ್ಞಾನಿಗಳು ಸಗಣಿ ಬಗ್ಗೆ ಸಂಶೋಧನೆ ನಡೆಸಿದ್ದರು. ಇದ್ರಲ್ಲೂ ಸಗಣಿ ಬಗ್ಗೆ ಸಾಕಷ್ಟು ಮಹತ್ವದ ವಿಷ್ಯಗಳು ಬಹಿರಂಗವಾಗಿದ್ದವು. ಸಗಣಿ ಆರೋಗ್ಯಕರ ಎಂಬುದು ದೃಢಪಟ್ಟಿತ್ತು.

ಸಗಣಿಗೆ ನೈಸರ್ಗಿಕ ಎಣ್ಣೆ ಹಾಕಿ ಒಣಗಿಸಲಾಗುತ್ತದೆ. ನಂತ್ರ ಎಣ್ಣೆ ಮಿಶ್ರಿತ ಸಗಣಿಯನ್ನು ಯಂತ್ರಕ್ಕೆ ಹಾಕಿ ಚಪ್ಪಲಿ ಆಕಾರ ನೀಡಲಾಗಿದೆ. ಚಪ್ಪಲಿಯನ್ನು ಪ್ರದರ್ಶನಕ್ಕೆ ಮಾತ್ರ ಇಡಲಾಗಿತ್ತು. ಆದ್ರೆ ಬೇಡಿಕೆ ಆಧಾರದ ಮೇಲೆ ಅದನ್ನು ತಯಾರಿಸಲಾಗುವುದು. ಅದ್ರ ಬೆಲೆ 700 ರೂಪಾಯಿ ಎನ್ನಲಾಗಿದೆ.

 

ಪತ್ನಿ ಹತ್ಯೆಗೈದು 300 ತುಂಡು ಮಾಡಿ ಟಿಫನ್ ನಲ್ಲಿ ತುಂಬಿದ್ದ ನಿವೃತ್ತ ಕರ್ನಲ್

Posted: 26 Feb 2020 05:26 PM PST

ಪತ್ನಿ ಹತ್ಯೆಗೈದ ನಿವೃತ್ತ ಕರ್ನಲ್ ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಭುವನೇಶ್ವರದಲ್ಲಿ ಸುಮಾರು 6 ವರ್ಷಗಳ ಹಿಂದೆ, ನಿವೃತ್ತ ಕರ್ನಲ್ ಸೋಮನಾಥ್ ಪರಿಡಾ ತಮ್ಮ 61 ವರ್ಷದ ಹೆಂಡತಿಯನ್ನು ಹತ್ಯೆಗೈದಿದ್ದರು. ಆಕೆಯ ದೇಹವನ್ನು 300 ತುಂಡುಗಳನ್ನಾಗಿ ಮಾಡಿ ಟಿಫಿನ್ ಪೆಟ್ಟಿಗೆಯಲ್ಲಿ ತುಂಬಿಸಿದ್ದರು. ಒಡಿಶಾದ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

24 ಸಾಕ್ಷಿಗಳು ಮತ್ತು ತನಿಖಾ ತಂಡದ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯ ಈ ತೀರ್ಪು ನೀಡಿದೆ. ಕೊಲೆಗಾರನಿಗೆ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಶಿಕ್ಷೆ  ಕಡಿಮೆ ಮಾಡುವಂತೆ ಸೋಮನಾಥ್ ಕೋರ್ಟ್ ಮುಂದೆ ಕಣ್ಣಿರು ಹಾಕಿದ್ದರಂತೆ. ಆದ್ರೆ ನ್ಯಾಯಾಲಯ ಈ ಮಾತಿಗೆ ಬೆಲೆ ನೀಡಿಲ್ಲ.

ಪತಿ-ಪತ್ನಿ ಮಧ್ಯೆ ಗಲಾಟೆ ನಡೆದಿತ್ತಂತೆ. ಕೋಪಗೊಂಡ ಪತಿ ತಲೆ ಮೇಲೆ ಹೊಡೆದಿದ್ದಾನೆ. ಪತ್ನಿ ಅಲ್ಲೇ ಸಾವನ್ನಪ್ಪಿದ್ದಾಳೆ. ನಂತ್ರ ಆಕೆ ದೇಹವನ್ನು 300 ತುಂಡುಗಳಾಗಿ ಕತ್ತರಿಸಿದ್ದಾನೆ.

 

ಉಳಿದ ಕಂಪನಿ ಸುಂಕ ಬೆಲೆ ಹೆಚ್ಚಾಗ್ತಿದ್ದಂತೆ ಬಿಎಸ್ಎನ್ಎಲ್ ಭಲ್ಲೆ ಭಲ್ಲೆ

Posted: 26 Feb 2020 05:25 PM PST

ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಸುಂಕ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಆದರೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಸುಂಕ ಯೋಜನೆಗಳ ಬೆಲೆಯನ್ನು ಹೆಚ್ಚಿಸಿರಲಿಲ್ಲ. ಈಗ ಇದ್ರ ಲಾಭ ಕಂಪನಿಗಾಗಿದೆ. ಡಿಸೆಂಬರ್ ನಲ್ಲಿ 4.2 ಲಕ್ಷ ಜನರು ಬಿಎಸ್ಎನ್ಎಲ್ ಜೊತೆ ಕೈಜೋಡಿಸಿದ್ದಾರೆ. ಕೇವಲ 82,308 ಹೊಸ ಗ್ರಾಹಕರನ್ನು ಜಿಯೋ ಪಡೆದಿದೆ. ಜಿಯೋ ಒಂದು ತಿಂಗಳಲ್ಲಿ ಲಕ್ಷಕ್ಕಿಂತ ಕಡಿಮೆ ಹೊಸ ಚಂದಾದಾರರನ್ನು ಪಡೆದಿರುವುದು ಇದೇ ಮೊದಲು.

ವೊಡಾಫೋನ್ ಐಡಿಯಾ ಡಿಸೆಂಬರ್ ತಿಂಗಳಲ್ಲಿ ತುಂಬಾ ಹಿನ್ನಡೆ ಅನುಭವಿಸಿದೆ. 3.6 ಲಕ್ಷ ಗ್ರಾಹಕರು ಕಂಪನಿಗೆ ವಿದಾಯ ಹೇಳಿದ್ದಾರೆ. ಅದೇ ಸಮಯದಲ್ಲಿ ಏರ್ಟೆಲ್ ಸಹ ದೊಡ್ಡ ನಷ್ಟವನ್ನು ಅನುಭವಿಸಿದೆ. 2019 ರ ಡಿಸೆಂಬರ್‌ನಲ್ಲಿ 11,000 ಕ್ಕೂ ಹೆಚ್ಚು ಗ್ರಾಹಕರು ಏರ್ಟೆಲ್ ತೊರೆದಿದ್ದಾರೆ.

ಟ್ರಾಯ್ ಪ್ರತಿ ತಿಂಗಳು ಮೊಬೈಲ್ ಗ್ರಾಹಕರಿಗೆ ವರದಿಯನ್ನು ನೀಡುತ್ತದೆ. ಇದರಲ್ಲಿ ಡೇಟಾ ವೇಗದಿಂದ ಬಳಕೆದಾರರ ಸಂಖ್ಯೆಯವರೆಗೆ ಮಾಹಿತಿ ಇರುತ್ತದೆ. ಈಗ ಟ್ರಾಯ್ ಡಿಸೆಂಬರ್ ವರದಿಯನ್ನು ಬಿಡುಗಡೆ ಮಾಡಿದೆ.

 

 

ಎಟಿಎಂನಲ್ಲಿ ಸಿಗಲ್ಲ 2 ಸಾವಿರ ರೂ.ನೋಟು: ಭಯಪಡುವ ಅಗತ್ಯವಿಲ್ಲ ಗ್ರಾಹಕರು

Posted: 26 Feb 2020 05:22 PM PST

ನೋಟು ನಿಷೇಧದ ನಂತ್ರ 2000 ರೂಪಾಯಿ ನೋಟುಗಳು ಮಾರುಕಟ್ಟೆಗೆ ಬಂದಿದ್ದವು. ಈಗ 2000 ರೂಪಾಯಿ ನೋಟಿನ ಭವಿಷ್ಯದ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಎಟಿಎಂಗಳಲ್ಲಿ ಮಾರ್ಚ್ 1ರಿಂದ 2 ಸಾವಿರ ರೂಪಾಯಿ ನೋಟು ಸಿಗುವುದಿಲ್ಲ ಎಂಬ ಸುದ್ದಿ ಕಾರಣ.

ದೇಶಾದ್ಯಂತ 2.40 ಲಕ್ಷ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟಿನ ಬದಲು 500 ರೂಪಾಯಿ ನೋಟುಗಳನ್ನು ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. 2 ಸಾವಿರ ರೂಪಾಯಿ ನೋಟಿಗೆ ಚಿಲ್ಲರೆ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗ್ತಿದೆ.

ಎಟಿಎಂನಲ್ಲಿ ನಾಲ್ಕು ಕ್ಯಾಸೆಟ್ ಗಳಿವೆ. ಅದ್ರಲ್ಲಿ 2 ಸಾವಿರ, ಐದು ನೂರು, 200 ಮತ್ತು 100 ರೂಪಾಯಿ ನೋಟುಗಳಿವೆ. ಹೊಸ ವ್ಯವಸ್ಥೆಯಲ್ಲಿ ಮೂರು ಕ್ಯಾಸೆಟ್ ನಲ್ಲಿ 500 ರೂಪಾಯಿ ನೋಟಿರಲಿದೆ. ಉಳಿದ ಒಂದರಲ್ಲಿ 100 ಹಾಗೂ 200 ನೋಟಿರಲಿದೆ. ಎಟಿಎಂನಲ್ಲಿ ಮಾತ್ರ 2 ಸಾವಿರ ರೂಪಾಯಿ ನೋಟು ಸಿಗುವುದಿಲ್ಲ. ಗ್ರಾಹಕರು ಬ್ಯಾಂಕ್ ಗೆ ಹೋಗಿ ಪಡೆಯಬಹುದು.

2 ಸಾವಿರ ರೂಪಾಯಿ ನೋಟುಗಳನ್ನು ಕಾನೂನು ಬದ್ಧವಾಗಿ ಮುಚ್ಚಲಾಗುವುದಿಲ್ಲ. ಎಟಿಎಂ ಚಲಾವಣೆ ನಿಲ್ಲಲಿದೆ. ಮುಂದಿನ ಮಾರ್ಚ್ 1 ರಿಂದ ಇಂಡಿಯನ್ ಬ್ಯಾಂಕ್ ಎಟಿಎಂನಲ್ಲಿ 2,000 ರೂಪಾಯಿ ನೋಟುಗಳನ್ನು ಹೊಂದಿರುವ ಕ್ಯಾಸೆಟ್‌ಗಳನ್ನು ತೆಗೆದುಹಾಕಲಾಗುವುದು ಎಂದು ಬ್ಯಾಂಕ್ ಈಗಾಗಲೇ ಸುತ್ತೋಲೆ ಹೊರಡಿಸಿದೆ.

 

ರಾತ್ರಿ ಮಹಿಳೆಯರು ಅಪ್ಪಿತಪ್ಪಿಯೂ ಮಾಡ್ಬಾರದು ಈ ಕೆಲಸ

Posted: 26 Feb 2020 05:19 PM PST

ಪ್ರಪಂಚದ ಪ್ರತಿಯೊಬ್ಬ ಮಹಿಳೆ ತನ್ನ ಕುಟುಂಬದ ಸಂತೋಷವನ್ನು ಬಯಸುತ್ತಾಳೆ. ಮನೆಯಲ್ಲಿ ಯಾವಾಗ್ಲೂ ಶಾಂತಿ ನೆಲೆಸಿರಬೇಕು. ದುಃಖಕ್ಕೆ ಕುಟುಂಬಸ್ಥರು ಗುರಿಯಾಗಬಾರದು ಎಂದು ಬಯಸ್ತಾಳೆ. ಮನೆ ಸಂತೋಷಕ್ಕೆ ಮಹಿಳೆ ಮುಖ್ಯವಾದ ಪಾತ್ರ ವಹಿಸ್ತಾಳೆ. ಆದ್ರೆ ಮಹಿಳೆ ಕೆಲವೊಮ್ಮೆ ಮಾಡುವ ಸಣ್ಣಪುಟ್ಟ ತಪ್ಪುಗಳು ಮನೆ ಸಮಸ್ಯೆಗೆ ಕಾರಣವಾಗುತ್ತದೆ.

ಮಹಿಳೆ ಸಂಜೆ ಸಮಯದಲ್ಲಿ ಹಾಲು ಅಥವಾ ಮೊಸರನ್ನು ಯಾರಿಗೂ ನೀಡಬಾರದು. ಹೀಗೆ ಮಾಡಿದಲ್ಲಿ ಮನೆ ಶಾಂತಿ ನಾಶವಾಗುತ್ತದೆ. ಮನೆಯಲ್ಲಿನ ಸಂತೋಷ ಮಾಯವಾಗುತ್ತದೆ.

ರಾತ್ರಿ ಮಲಗುವ ವೇಳೆ ಊಟ ಮಾಡಿದ ಪಾತ್ರೆಯನ್ನು ಹಾಗೆ ಇಟ್ಟು ಮಲಗಬಾರದು. ಎಲ್ಲ ಪಾತ್ರೆಗಳನ್ನು ಸ್ವಚ್ಛಗೊಳಿಸಿಯೇ ಮಲಗಬೇಕು. ಮನೆಯಲ್ಲಿ ಸ್ವಚ್ಛತೆ ಇಲ್ಲವೆಂದ್ರೆ ಲಕ್ಷ್ಮಿ ಮನೆ ಪ್ರವೇಶ ಮಾಡುವುದಿಲ್ಲ.

ಮನೆ ಮಹಿಳೆಯರು ಎಂದೂ ಕೂದಲನ್ನು ಬಿಚ್ಚಿ ಮಲಗಬಾರದು. ಹೀಗೆ ಮಾಡಿದ್ರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ದುಃಖ ನೆಲೆಸುತ್ತದೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

 

ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಇಂದಿನ ನಿಮ್ಮ ಭವಿಷ್ಯ

Posted: 26 Feb 2020 05:18 PM PST

ಮೇಷ ರಾಶಿ:

ಸಂತೋಷದಿಂದ ತುಂಬಿದ ಒಳ್ಳೆಯ ದಿನ. ಗಡಿಬಿಡಿಯ ನಿರ್ಧಾರಗಳನ್ನು ಕೈಗೊಳ್ಳಬೇಡಿ – ವಿಶೇಷವಾಗಿ ಪ್ರಮುಖ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾತನಾಡುವಾಗ. ಭೇಟಿ ನೀಡುವ ಅತಿಥಿಗಳು ನಿಮ್ಮ ಸಂಜೆಯನ್ನು ಆಕ್ರಮಿಸಿಕೊಳ್ಳಬಹುದು.

ಪ್ರಣಯದ ಬಂಧಗಳು ನಿಮ್ಮ ಸಂತೋಷವನ್ನು ಆಸಕ್ತಿಕರವಾಗಿಸುತ್ತವೆ. ನೀವು ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ನೀವು ಕೆಲಸ ಮಾಡುವ ವಿಧಾನವನ್ನು ನೋಡುವ ಅವಶ್ಯಕತೆಯಿದೆ.

ಅದೃಷ್ಟ ಸಂಖ್ಯೆ: 7

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವೃಷಭ ರಾಶಿ:

ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿದ್ದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು.

ಸಂಗಾತಿಯು ಸಂತೋಷ ನೀಡಲು ಪ್ರಯತ್ನ ಮಾಡಿದಾಗಿನ ಪೂರ್ಣ ಸಂತೋಷದ ಒಂದು ದಿನ.

ಅದೃಷ್ಟ ಸಂಖ್ಯೆ: 4

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಮಿಥುನ ರಾಶಿ:

ನಕಾರಾತ್ಮಕ ಆಲೋಚನೆಗಳು ಮಾನಸಿಕ ಕಾಯಿಲೆಗಳಾಗುವ ಮೊದಲೇ ನೀವು ಅವುಗಳನ್ನು ನಾಶಮಾಡಬೇಕು. ನೀವು ನಿಮಗೆ ಸಂಪೂರ್ಣ ಮಾನಸಿಕ ತೃಪ್ತಿ ನೀಡುವ ದಾನ ಮತ್ತು ಧರ್ಮಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡು ಅವುಗಳನ್ನು ತೊಡೆದುಹಾಕಬಹುದು.

ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು -ಬಾಕಿಯಿರುವ ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು.

ಅದೃಷ್ಟ ಸಂಖ್ಯೆ: 6

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಕಟಕ ರಾಶಿ:

ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನೀವು ಯಾತ್ರೆಯಲ್ಲಿ ಹೋಗುತ್ತಿದ್ದರೆ ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಗಮನ ಹರಿಸಿ ಅವುಗಳನ್ನು ಕದಿಯುವ ಸಾಧ್ಯತೆ ಇದೆ.

ವಿಶೇಷವಾಗಿ ನಿಮ್ಮ ಹಣದ ಚೀಲವನ್ನು ಎಚ್ಚರಿಕೆಯಿಂದಿಡಿ. ಜನರು ನಿಮಗೆ ಹೊಸ ಭರವಸೆ ಹಾಗೂ ಕನಸುಗಳನ್ನು ನೀಡುತ್ತಾರೆ -ಇದು ನಿಮ್ಮ ಸ್ವಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ನಿಮ್ಮ ಪ್ರೀತಿಪಾತ್ರರ ಅತೃಪ್ತಿಗೆ ನಿಮ್ಮ ನಗು ನಿಮ್ಮ ಅತ್ಯುತ್ತಮ ಔಷಧವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಜನರು ಇಂದು ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಅದೃಷ್ಟ ಸಂಖ್ಯೆ: 7

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಸಿಂಹ ರಾಶಿ :

ನಿಮ್ಮ ದೊಡ್ಡ ಆಸ್ತಿಯೆಂದರೆ ನಿಮ್ಮ ಹಾಸ್ಯಪ್ರಜ್ಞೆಯಾಗಿದೆ ಇದನ್ನು ನಿಮ್ಮ ಅನಾರೋಗ್ಯ ಗುಣಪಡಿಸಲು ಬಳಸಲು ಪ್ರಯತ್ನಿಸಿ. ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಕಲ್ಪನೆಗಳನ್ನು ಪ್ರಸ್ತುತಪಡಿಸುತ್ತೀರಿ. ಮಕ್ಕಳು ನಿಮಗೆ ಮನೆಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಾರೆ.

ನೀವು ಇನ್ನು ಮುಂದೆ ನಿಮ್ಮ ಕಾಮಪ್ರಚೋದಕ ಕಲ್ಪನೆಗಳ ಬಗ್ಗೆ ಕನಸು ಕಾಣಬೇಕಾಗಿಲ್ಲ; ಅವು ಇಂದು ನಿಜವಾಗಬಹುದು.

ಅದೃಷ್ಟ ಸಂಖ್ಯೆ: 1

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಕನ್ಯಾ ರಾಶಿ:

ಧ್ಯಾನ ಪರಿಹಾರ ತರುತ್ತದೆ. ಹಣದ ಚಲನೆ ದಿನವಿಡೀ ಮುಂದುವರಿಯುತ್ತದೆ ಮತ್ತು ದಿನದ ಅಂತ್ಯದ ನಂತರ ನೀವು ಉಳಿಸಲು ಸಾಧ್ಯವಾಗುತ್ತದೆ. ಸ್ನೇಹಿತರು ಇಂದು ರಾತ್ರಿ ರೋಮಾಂಚಕವಾದದ್ದನ್ನೇನಾದರೂ ಯೋಜಿಸಿ ನಿಮಗೆ ಆನಂದ ತರುತ್ತಾರೆ.

ಪ್ರೇಮ ವೈಫಲ್ಯದ ನೋವಿಗೆ ಇವತ್ತು ನಿದ್ರಿಸಲು ಸಾಧ್ಯವಾಗುವುದಿಲ್ಲ. ನೀವು ಒಂದು ದಿನದ ರಜೆಯ ಮೇಲೆ ಹೋಗುತ್ತಿದ್ದಲ್ಲಿ ಚಿಂತಿಸಬೇಡಿ – ವಿಷಯಗಳು ನೀವಿಲ್ಲದಿರುವಾಗ ಚೆನ್ನಾಗಿಯೇ ಇರುತ್ತವೆ – ಯಾವುದೇ ವಿಚಿತ್ರ ಕಾರಣಕ್ಕಾಗಿ ಏನಾದರೂ ಸಮಸ್ಯೆ ಉಂಟಾದಲ್ಲಿ – ನೀವು ಹಿಂತಿರುಗಿದಾಗ ನೀವು ಅದನ್ನು ಸುಲಭವಾಗಿ ಬಗೆಹರಿಸಬಹುದು.

ಅದೃಷ್ಟ ಸಂಖ್ಯೆ: 3

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ತುಲಾ ರಾಶಿ:

ಪತ್ನಿ ನಿಮ್ಮನ್ನು ಹುರಿದುಂಬಿಸಬಹುದು. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು.

ಕೌಟುಂಬಿಕ ಸಂತೋಷ ಕಾಣುತ್ತಿಲ್ಲ. ಸೆಕ್ಸ್ ಅಪೀಲ್ ಬೇಕಾದ ಫಲಿತಾಂಶವನ್ನು ನೀಡುತ್ತದೆ ಯಾರಾದರೂ ಕೆಲಸದಲ್ಲಿ ನಿಮಗೆ ಅಡ್ಡಿ ಮಾಡಬಹುದು – ಆದ್ದರಿಂದ ಏನಾಗುತ್ತದೆ ಎನ್ನುವುದರ ಬಗ್ಗೆ ಗಮನವಿರಲಿ.

ಅದೃಷ್ಟ ಸಂಖ್ಯೆ: 5

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವೃಶ್ಚಿಕ ರಾಶಿ:

ಅತಿಯಾಗಿ ತಿನ್ನುವುದು ಮತ್ತು ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಪ್ಪಿಸಬೇಕು. ಮೌಲ್ಯ ಹೆಚ್ಚಾಗುವ ವಸ್ತುಗಳನ್ನು ಖರೀದಿಸಲು ಪರಿಪೂರ್ಣ ದಿನ. ವೈಯಕ್ತಿಕ ವಿಷಯಗಳನ್ನು ಬಗೆಹರಿಸುವಲ್ಲಿ ಉದಾರತೆ ತೋರಿ, ಆದರೆ ನಿಮ್ಮನ್ನು ಪ್ರೀತಿಸುವ ಮತ್ತು ಕಾಳಜಿ ತೋರುವವರನ್ನು ನೋಯಿಸದಿರಲು ನಿಮ್ಮ ಭಾಷೆಯ ಬಗ್ಗೆ ಎಚ್ಚರ ವಹಿಸಿ.

ಸರೋವರದಲ್ಲಿನ ಸೊಗಸಾದ ಮೀನನ್ನು ಸಂಧಿಸುವ ಅವಕಾಶಗಳು ಸಾಧ್ಯತೆಗಳು ಇಂದು ಹೆಚ್ಚಿವೆ. ನಿಮ್ಮ ಪಾಲುದಾರರು ನಿಮ್ಮ ಯೋಜನೆಗಳಿಗೆ ಅಂಟಿಕೊಂಡಿರುವಂತೆ ಮಾಡುವಲ್ಲಿ ನೀವು ಸಮಸ್ಯೆಗಳನ್ನು ಹೊಂದಿರುತ್ತೀರಿ.

ಅದೃಷ್ಟ ಸಂಖ್ಯೆ: 5

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಧನುಸ್ಸು ರಾಶಿ:

ನೀವು ವಿಶ್ರಾಂತಿ ಪಡೆಯಲು ಸಾಧ್ಯವಾಗುವ ಒಂದು ದಿನ. ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ತೈಲದಿಂದ ನಿಮ್ಮ ದೇಹಕ್ಕೆ ಮಸಾಜ್ ಮಾಡಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಹಣದ ಯಾವುದೇ ವಿಷಯದ ಬಗ್ಗೆ ಇಂದು ಜಗಳವಾಗಬಹುದು.

ಆದಾಗ್ಯೂ ನೀವು ನಿಮ್ಮ ಶಾಂತ ಸ್ವಭಾವದಿಂದ ಎಲ್ಲವನ್ನು ಸರಿಗೊಳಿಸಬಹುದು. ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯ ದಿನ. ನೀವು ಸ್ವಲ್ಪ ಪ್ರೀತಿ ಹಂಚಿಕೊಂಡಲ್ಲಿ ಇಂದು ನಿಮ್ಮ ಪ್ರಿಯತಮೆ ನಿಮ್ಮ ದೇವತೆಯಾಗುತ್ತಾಳೆ.

ಅದೃಷ್ಟ ಸಂಖ್ಯೆ: 8

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಮಕರ ರಾಶಿ:

ಫಿಟ್ ನೆಸ್ ಮತ್ತು ತೂಕ ನಷ್ಟ ಕಾರ್ಯಕ್ರಮಗಳು ನೀವು ಒಳ್ಳೆಯ ದೇಹರಚನೆ ಹೊಂದಲು ಸಹಾಯ ಮಾಡುತ್ತದೆ. ತಮ್ಮ ಹಣವನ್ನು ಇನ್ನೊಬ್ಬರಿಗೆ ನೀಡಲು ಇಷ್ಟಪಡುವುದಿಲ್ಲ ಆದರೆ ಇಂದು ನೀವು ಅಗತ್ಯವಿರುವವರಿಗೆ ಹಣವನ್ನು ಕೊಟ್ಟು ವಿಶ್ರಾಂತಿಯನ್ನು ಅನುಭವಿಸುವಿರಿ.

ಸಂತೋಷದ – ಚೈತನ್ಯದಾಯಕ – ಪ್ರಿಯವಾದ ಚಿತ್ತದ – ನಿಮ್ಮ ಖುಷಿಯ ಸ್ವಭಾವ ನಿಮ್ಮ ಸುತ್ತಲಿನವರಿಗೆ ಸಂತೋಷ ಮತ್ತು ಖುಷಿಯನ್ನು ತರುತ್ತದೆ.

ಅದೃಷ್ಟ ಸಂಖ್ಯೆ: 7

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಕುಂಭ ರಾಶಿ:

ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಕೆಲಸ ಮಾಡಲು ಸಾಕಷ್ಟು ಸಮಯ ಹೊಂದಿರುತ್ತೀರಿ ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು ಮತ್ತು ನೀವು ಹಣದ ಲಾಭವನ್ನು ಪಡೆಯಬಹುದು. ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯ ದಿನ.

ಅದೃಷ್ಟ ಸಂಖ್ಯೆ: 4

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಮೀನ ರಾಶಿ:

ತೊಂದರೆಯಲ್ಲಿರುವ ಯಾರಿಗಾದರೂ ಸಹಾಯ ಮಾಡಲು ನಿಮ್ಮ ಚೈತನ್ಯವನ್ನು ಬಳಸಿ. ಲೋಕೋಪಕಾರಕ್ಕಾಗಲ್ಲದಿದ್ದಲ್ಲಿ ಈ ನಶ್ವರ ದೇಹದ ಉಪಯೋಗವಾದರೂ ಏನು. ಸಣ್ಣ ಉದ್ಯೋಗವನ್ನು ಮಾಡುವ ಜನರು, ಇಂದು ತಮ್ಮ ಆಪ್ತರಿಂದ ಯಾವುದೇ ಸಲಹೆಯನ್ನು ಪಡೆಯಬಹುದು.

ಇದರಿಂದ ಅವರಿಗೆ ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ. ನಿಮ್ಮ ಕುಟುಂಬ ಸದಸ್ಯರೆಡೆಗೆ ನಿಮ್ಮ ಸರ್ವಾಧಿಕಾರಿ ಧೋರಣೆ ಕೇವಲ ಅನುಪಯುಕ್ತ ವಾದಗಳನ್ನು ಪ್ರಾರಂಭಿಸುತ್ತದೆ ಮತ್ತು ಇದು ಟೀಕೆಯನ್ನೂ ತರಬಹುದು.

ಅದೃಷ್ಟ ಸಂಖ್ಯೆ: 6

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ಇಡಬಾರದ ಜಾಗದಲ್ಲಿ ಚಿನ್ನ ಇಟ್ಕೊಂಡು ಸಿಕ್ಕಿಬಿದ್ದ

Posted: 26 Feb 2020 05:10 PM PST

ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 26 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.

ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದುಬೈನಿಂದ ಮಂಗಳೂರಿಗೆ ಬಂದ ಪ್ರಯಾಣಿಕ ಕೇರಳದ ಉಪ್ಪಳದ ಮೊಹಿದ್ದೀನ್ ಆರ್ಝಾನ್ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಪರಿಶೀಲನೆ ಸಂದರ್ಭದಲ್ಲಿ ಗೊತ್ತಾಗಿದೆ. ರಬ್ಬರ್ ಗುಳಿಗೆಯೊಳಗೆ ದ್ರವರೂಪದಲ್ಲಿ ಇದ್ದ ಚಿನ್ನವನ್ನು ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡಿದ್ದ ಆತನಿಂದ 619 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಗುಡ್ ನ್ಯೂಸ್: ಕಾರ್ಮಿಕರ ಕುಟುಂಬ ಸದಸ್ಯರಿಗೂ ಉಚಿತ ಬಸ್ ಪಾಸ್

Posted: 26 Feb 2020 05:09 PM PST

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕುಟುಂಬ ಸದಸ್ಯರಿಗೆ ಕೂಡ ಉಚಿತವಾಗಿ ಬಸ್ ಪಾಸ್ ನೀಡುವ ಪ್ರಸ್ತಾವನೆಯನ್ನು ಬಿಎಂಟಿಸಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಮತ್ತು ಬಿಎಂಟಿಸಿ ಸಹಯೋಗದಲ್ಲಿ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ ಇದಕ್ಕೆ ಕಾರ್ಮಿಕರ ಕಲ್ಯಾಣ ನಿಧಿ ಹಣ ಬಳಕೆ ಕಾರ್ಮಿಕ ಮಾಡಿಕೊಳ್ಳಲಾಗುತ್ತಿದೆ. ಬಿಎಂಟಿಸಿ ಉಚಿತ ಬಸ್ ಪಾಸ್ ಸೌಲಭ್ಯವನ್ನು 5,800 ಮಂದಿ ಪಡೆಯುತ್ತಿದ್ದಾರೆ. ಈ ಸೌಲಭ್ಯವನ್ನು ಕಾರ್ಮಿಕರ ಕುಟುಂಬ ಸದಸ್ಯರಿಗೂ ವಿಸ್ತರಿಸಲು ಬಿಎಂಟಿಸಿ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು ಕಾರ್ಮಿಕ ಇಲಾಖೆ ಒಪ್ಪಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾರ್ಚ್ 5 ರಂದು ಮಂಡಿಸಲಿರುವ ಬಜೆಟ್ನಲ್ಲಿ ಕಾರ್ಮಿಕರ ಕುಟುಂಬ ಸದಸ್ಯರಿಗೆ ಉಚಿತ ಬಸ್ ಪಾಸ್ ನೀಡುವ ಘೋಷಣೆ ಮಾಡಬಹುದು ಎಂದು ಹೇಳಲಾಗಿದೆ.

ರೈತರಿಗೆ ಶುಭ ಸುದ್ದಿ: ಸಾಲ ಮನ್ನಾ ಮಾಡಲು ಸಿಎಂ ತೀರ್ಮಾನ

Posted: 26 Feb 2020 05:07 PM PST

ಬೆಳಗಾವಿ: 'ರೈತರ ಸಾಲ ಮನ್ನಾ ಮಾಡಲು ಮತ್ತು ವಿಶೇಷ ಬಜೆಟ್ ಮಂಡಿಸಲು ಸಿಎಂ ಯಡಿಯೂರಪ್ಪ ತೀರ್ಮಾನ ತೆಗೆದುಕೊಂಡಿದ್ದಾರೆ.'

ಹೀಗೆಂದು ಹೇಳಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್. ಬೆಳಗಾವಿಯಲ್ಲಿ ನಗರ ಹಾಗೂ ಗ್ರಾಮಾಂತರ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ನೇಕಾರರ ಸಾಲ ಮನ್ನಾ ಮಾಡಿದ್ದರು. ಆ ಮೂಲಕ ನೇಕಾರರ ಕಣ್ಣೀರು ಒರೆಸಿದ್ದರು. ಅವರು ಕಣ್ಣೀರು ಒರೆಸುವ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿ ರೈತರಿಗೆ ವಿಶೇಷ ಬಜೆಟ್ ಮಂಡಿಸಿ ಸಾಲ ಮನ್ನಾ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ.

ಗುಡ್ ನ್ಯೂಸ್: ಮೀನುಗಾರ ಮಹಿಳೆಯರಿಗೆ ಸರ್ಕಾರದಿಂದ ದ್ವಿಚಕ್ರವಾಹನ

Posted: 26 Feb 2020 05:07 PM PST

ದಾವಣಗೆರೆ: ಒಳನಾಡು ಮತ್ತು ಕರಾವಳಿ ಮಹಿಳೆಯರಿಗೆ ಮೀನು ಮಾರಾಟ ಮಾಡಲು ಪ್ರಾಯೋಗಿಕವಾಗಿ 1 ಸಾವಿರ ದ್ವಿಚಕ್ರ ವಾಹನಗಳನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ದಾವಣಗೆರೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದವರು ಮತ್ತು ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಇಲಾಖೆಯಲ್ಲಿ ಯೋಜನೆಗಳನ್ನು ರೂಪಿಸಿದ್ದು, ಕೊನೆಯ ಮೀನುಗಾರರವರೆಗೆ ಸೌಲಭ್ಯಗಳು ದೊರೆಯುವಂತೆ ಕೆಲಸ ಮಾಡಬೇಕು. ಇಲಾಖೆಯಲ್ಲಿ ಕೆರೆಗಳಿಗೆ ಗುತ್ತಿಗೆ ನೀಡಿದ ನಂತರ ಅಧಿಕಾರಿಗಳು ಇಳುವರಿ, ಉತ್ಪಾದನೆ ಕುರಿತು ಕಣ್ಗಾವಲು ತಂಡದಂತೆ ಕೆಲಸ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

ಎಲ್ಲ ಜಿಲ್ಲೆಗಳಲ್ಲಿ ಮತ್ಸ್ಯ ಖಾದ್ಯಗಳನ್ನು ಕಡಿಮೆ ದರ ಮತ್ತು ಉತ್ತಮ ಗುಣಮಟ್ಟದಲ್ಲಿ ನೀಡುವ ಯೋಚನೆ ಇದೆ. ಹಿರಿಯ ಮೀನುಗಾರರಿಂದ ಸಲಹೆ ಪಡೆದು ವಿವಿಧ ಅಭಿವೃದ್ದಿಪರ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಮೀನುಗಾರರಿಗೆ ಸಾಮಗ್ರಿ ವಿತರಿಸಲಾಗುವುದು, ಶಿಥೀಲಕರಣ ಘಟಕ, ಮೀನು ಮಾರುಕಟ್ಟೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.

ಹತ್ಯೆ ನಂತ್ರವೂ ಜೀವಂತವಾಗಿದ್ಲು ಮಗಳು: ಶೀನಾ ಬೋರಾ ಪ್ರಕರಣಕ್ಕೆ ಹೊಸ ಟ್ವಿಸ್ಟ್

Posted: 26 Feb 2020 06:21 AM PST

इन्द्राणी मुखर्जी का सनसनीखेज दावा, कोर्ट में कहा- हत्या के बाद भी जिन्दा थी शीना

ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನಡೆದ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೊಲೆ ಪ್ರಕರಣದ ಅಪರಾಧಿ ಇಂದ್ರಾಣಿ ಮುಖರ್ಜಿ ತನ್ನ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ಸಿಬಿಐ ನ್ಯಾಯಾಲಯದ ಮುಂದೆ ಆಶ್ಚರ್ಯಕರ ಹೇಳಿಕೆ ನೀಡಿದ್ದಾಳೆ.

ಏಪ್ರಿಲ್ 24, 2012 ರಂದು ಕೊಲೆ ನಡೆದಿತ್ತು. ಕೊಲೆ ನಡೆದ 6 ತಿಂಗಳ ತನಕ ಶೀನಾ ಜೀವಂತವಾಗಿದ್ದಳು. ಆಕೆಯ ಪ್ರೇಮಿ ರಾಹುಲ್ ಮುಖರ್ಜಿ ಜೊತೆಗಿದ್ದಳು ಎಂದು ಇಂದ್ರಾಣಿ ಹೇಳಿದ್ದಾಳೆ.

ಐದನೇ ಬಾರಿ ಇಂದ್ರಾಣಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು. ಅರ್ಜಿವಿಚಾರಣೆ ವೇಳೆ ಇಂದ್ರಾಣಿ ಈ ವಿಷ್ಯ ಹೇಳಿದ್ದಾಳೆ. ಸೆಪ್ಟೆಂಬರ್ 26,27 ಮತ್ತು 28ರಂದು ಇಬ್ಬರ ಮಧ್ಯೆ ರವಾನೆಯಾದ ಸಂದೇಶಗಳನ್ನು ಇಂದ್ರಾಣಿ ನ್ಯಾಯಾಲಯದ ಮುಂದೆ ಓದಿದ್ದಾಳೆ. ಸೆಪ್ಟೆಂಬರ್ 27,2012ರಂದು ಶೀನಾ ಫೋನ್ ಗೆ ರಾಹುಲ್ ಸಂದೇಶ ಕಳುಹಿಸಿದ್ದ. ಕೆಳಗಿದ್ದೇನೆ ಬಾ ಎಂದಿದ್ದ. ಅದಕ್ಕೆ ಶೀನಾ ಯಸ್ ಎಂದು ಉತ್ತರ ನೀಡಿದ್ದಳು. ನನ್ನನ್ನು ಉದ್ದೇಶಪೂರ್ವಕವಾಗಿ ಸಿಕ್ಕಿಹಾಕಿಸಲಾಗ್ತಿದೆ ಎಂದು ಆರೋಪ ಮಾಡಿದ್ದಾಳೆ.

ಆಗಸ್ಟ್ 2015 ರಲ್ಲಿ ನಾನು ಬಂಧನಕ್ಕೊಳಗಾದ ತಕ್ಷಣ, ಪೀಟರ್ ಮುಖರ್ಜಿ ತನ್ನ ಖಾತೆಯಿಂದ 6 ಕೋಟಿ ರೂಪಾಯಿಯನ್ನು  ಇಬ್ಬರು ಪುತ್ರರಾದ ರಾಹುಲ್ ಮತ್ತು ರಾಬಿನ್ ಗೆ ವರ್ಗಾಯಿಸಿದ್ದಾರೆ ಎಂದು ಇಂದ್ರಾಣಿ ಹೇಳಿದ್ದಾಳೆ. 2012 ರ ಏಪ್ರಿಲ್‌ನಲ್ಲಿ ಶೀನಾ ಹತ್ಯೆಯ ನಂತರ, ಆಗಸ್ಟ್ 2015 ರ  ಬಂಧನವಾಗುವವರೆಗೂ 19 ಬಾರಿ ವಿದೇಶಕ್ಕೆ ಹೋಗಿದ್ದೇನೆ. ನಾನು ಅಪರಾಧ ಮಾಡಿದ್ದರೆ ಯಾಕೆ ಮರಳುತ್ತಿದ್ದೆ ಎಂದು ಇಂದ್ರಾಣಿ ಪ್ರಶ್ನೆ ಕೇಳಿದ್ದಾಳೆ.

ಸಂಸದ ಅಜಮ್ ಖಾನ್, ಮಗ, ಪತ್ನಿಗೆ ಜೈಲು ಶಿಕ್ಷೆ

Posted: 26 Feb 2020 06:19 AM PST

पत्नी तंजीन फातिम और बेटे अब्दुल्लाह आजम के साथ आजम खान (फाइल फोटो)

ಸಮಾಜವಾದಿ ಪಕ್ಷದ ಸಂಸದ ಅಜಮ್ ಖಾನ್, ಅವರ ಪತ್ನಿ ತಾಂಜಿನ್ ಫಾತಿಮ್ ಮತ್ತು ಮಗ ಅಬ್ದುಲ್ಲಾ ಅಜಮ್ ಖಾನ್ ಜೈಲು ಸೇರಿದ್ದಾರೆ. ಮಾರ್ಚ್ 2 ರವರೆಗೆ ಅಜಮ್ ಖಾನ್ ಜೈಲಿನಲ್ಲಿ ಕಾಲ ಕಳೆಯಬೇಕಾಗಿದೆ. ಅಜಮ್ ಖಾನ್ ತಮ್ಮ ಕುಟುಂಬದೊಂದಿಗೆ ಕೋರ್ಟ್ ಮುಂದೆ ಹಾಜರಾಗದ ಕಾರಣ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು.

ಅಜಮ್ ಖಾನ್ ಅವರ ಪುತ್ರ ಅಬ್ದುಲ್ಲಾ ಅಜಮ್  ಎರಡು ಡಿಗ್ರಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಅಜಮ್ ಖಾನ್, ಅವರ ಪತ್ನಿ ತಾಂಜಿನ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಹಾಜರಾಗುವಂತೆ ಆದೇಶಿಸಿತ್ತು. ಆದ್ರೆ ಮೂವರು ಹಾಜರಾಗಿರಲಿಲ್ಲ.

ಈ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇಂದು ಮೂವರೂ ನ್ಯಾಯಾಲಯಕ್ಕೆ ಯಹಾಜರಾಗಿದ್ದರು. ಅಜಮ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ ಮೂವರನ್ನು ವಶಕ್ಕೆ ಪಡೆದಿದೆ.

 

ಶಾಲಾ-ಕಾಲೇಜುಗಳಲ್ಲಿ ಸ್ಟ್ರೈಕ್ ನಿಷೇಧ

Posted: 26 Feb 2020 06:17 AM PST

ತಿರುವನಂತಪುರಂ: ಶಾಲಾ-ಕಾಲೇಜುಗಳಲ್ಲಿ ಸ್ಟ್ರೈಕ್ ನಡೆಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ತಿಳಿಸಿದೆ. ಕ್ಯಾಂಪಸ್ ಸ್ಟ್ರೈಕ್ ಗೆ ನಿಷೇಧ ಹೇರಿರುವ ಕೋರ್ಟ್, ಶಾಲಾ, ಕಾಲೇಜು ಕ್ಯಾಂಪಸ್ ಗಳ ಕಾರ್ಯನಿರ್ವಹಣೆ ಮೇಲೆ ಪ್ರತಿಭಟನೆಗಳು ಪರಿಣಾಮ ಬೀರಬಾರದು ಎಂದು ಹೇಳಿದೆ.

ಕ್ಯಾಂಪಸ್ ಕಾರ್ಯಚಟುವಟಿಕೆಗಳಿಗೆ ಪ್ರತಿಭಟನೆಗಳಿಂದ ಧಕ್ಕೆ ಉಂಟಾಗಬಾರದು ಎಂದು ಅಭಿಪ್ರಾಯಪಟ್ಟಿದೆ. ಶಾಲಾ-ಕಾಲೇಜುಗಳು ಶಿಕ್ಷಣ, ವಿದ್ಯಾಭ್ಯಾಸಕ್ಕಾಗಿ ಇವೆ. ಪ್ರತಿಭಟನೆ ನಡೆಸಲು ಅಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಪಿ.ಬಿ. ಸುರೇಶ್ ಕುಮಾರ್ ಅವರ ನ್ಯಾಯಪೀಠ ತಿಳಿಸಿದೆ.

ಕ್ಯಾಂಪಸ್ ಗಳಲ್ಲಿ ಮುಷ್ಕರಕ್ಕೆ ಯಾರೂ ಪ್ರಚೋದನೆ ನೀಡಬಾರದು. ಕ್ಯಾಂಪಸ್ ಗಳಲ್ಲಿ ಪ್ರತಿಭಟನೆ ಬದಲಿಗೆ ಶಾಂತಿಯುತ ಚರ್ಚೆ ಸಮಾಲೋಚನೆಗಳಿಗೆ ಕಾಲೇಜುಗಳು ವೇದಿಕೆಯಾಗಬೇಕಿದೆ ಎಂದು ನ್ಯಾಯಮೂರ್ತಿ ಸುರೇಶ್ ಕುಮಾರ್ ಹೇಳಿದ್ದಾರೆ. ಸುಮಾರು 20 ಶಿಕ್ಷಣ ಸಂಸ್ಥೆಗಳು ಕ್ಯಾಂಪಸ್ ರಾಜಕೀಯದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೇರಳ ಹೈಕೋರ್ಟ್ ಶಾಲಾ, ಕಾಲೇಜ್ ಗಳಲ್ಲಿ ಪ್ರತಿಭಟನೆಗೆ ನಿಷೇಧ ಹೇರಿದೆ.

ಹುಟ್ಟುಹಬ್ಬಕ್ಕೆ ಹಾರ, ಶಾಲು ತರಬೇಡಿ: ಯಡಿಯೂರಪ್ಪ ಮನವಿ

Posted: 26 Feb 2020 06:00 AM PST

ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಬೆಂಬಲಿಗರು ಬಿಜೆಪಿ ಕಾರ್ಯಕರ್ತರು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಇದೇ ವೇಳೆ ಹುಟ್ಟುಹಬ್ಬಕ್ಕೆ ಯಾರೂ ಹಾರ, ಶಾಲು, ಗಿಫ್ಟ್ ಫಲಪುಷ್ಪ ತರಬೇಡಿ ಎಂದು ಸಿಎಂ ಮನವಿ ಮಾಡಿದ್ದಾರೆ.

ನಾಡಿನ ಜನರಿಗೆ ಸ್ನೇಹಿತರಿಗೆ ಬಂಧುಗಳಿಗೆ ಮನವಿ. ನಿಮ್ಮ ಪ್ರೀತಿಯಲ್ಲಿ ಮಿಂದು ಪುನೀತನಾಗಿದ್ದೇನೆ. ದಯವಿಟ್ಟು ಹಾರ ಗಿಫ್ಟ್ ತರಬೇಡಿ. ನಿಮ್ಮ ಆಶೀರ್ವಾದಗಳಿಂದಲೇ ಸೇವೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ಹೇಳಿದ್ದಾರೆ.

ನಾಳೆ ಸಂಜೆ 5 ಗಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಗ್ರಂಥ, ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಾಗುವುದು. ಕೇಂದ್ರ ಸಚಿವ ರಾಜನಾಥ್ ಸಿಂಗ್, ಎಸ್.ಎಂ. ಕೃಷ್ಣ, ಸಿದ್ಧರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ, ಬಿ.ಎಲ್. ಸಂತೋಷ್ ಮೊದಲಾದವರು ಭಾಗವಹಿಸಲಿದ್ದಾರೆ.

ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

Posted: 26 Feb 2020 05:59 AM PST

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಗಲಭೆ ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್ ಮುಖ್ಯಪೇದೆ ಹುತಾತ್ಮ ಎಂದು ಘೋಷಿಸಲಾಗಿದೆ.

ಕೇಂದ್ರ ಸರ್ಕಾರ ಮೃತರಾದ ರತನ್ ಲಾಲ್ ಅವರನ್ನು ಹುತಾತ್ಮ ಎಂದು ಘೋಷಿಸಿದ್ದು, ದೆಹಲಿ ಸರ್ಕಾರದಿಂದ 1 ಕೋಟಿ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಗೋಕುಲ್ ಪುರಿ ಎಸಿಪಿ ಕಚೇರಿಯಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ರತನ್ ಲಾಲ್ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಹತ್ತಿಕ್ಕುವಾಗ ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಅವರನ್ನು ಹುತಾತ್ಮ ಎಂದು ಘೋಷಿಸುವಂತೆ ಕುಟುಂಬದವರು ಮತ್ತು ತವರು ರಾಜ್ಯ ರಾಜಸ್ತಾನದಿಂದ ಒತ್ತಾಯ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ದೆಹಲಿ ಗಲಭೆಯಲ್ಲಿ ಮೃತಪಟ್ಟ ಮುಖ್ಯಪೇದೆ ರತನ್ ಲಾಲ್ ಹುತಾತ್ಮ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದು, ರತನ್ ಲಾಲ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ.

ದೊರೆಸ್ವಾಮಿ ಪಾಕ್ ಏಜೆಂಟ್ ಎಂದ ಶಾಸಕ ಯತ್ನಾಳ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Posted: 26 Feb 2020 05:58 AM PST

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ಕುಮಾರ್, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಜಮೀರ್ ಅಹಮದ್, ಸೌಮ್ಯ ರೆಡ್ಡಿ ಮೊದಲಾದವರು ಭಾಗವಹಿಸಿದ್ದರು.

ಬಸವನ ಗೌಡ ಪಾಟೀಲ್ ಯತ್ನಾಳ್ ಅವರ ಶಾಸಕತ್ವ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ನಕಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಪಾಕಿಸ್ತಾನ ಏಜೆಂಟ್ ಎಂದು ಬಸವನಗೌಡ ಪಾಟೀಲ್ ಟೀಕಿಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಇದು ಸಾಂಕೇತಿಕ ಪ್ರತಿಭಟನೆ ಆಗಿದ್ದು, ಯತ್ನಾಳ್ ವಿರುದ್ಧ ಹೋರಾಟ ಮುಂದುವರೆಸಲಾಗುವುದು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಕ್ಯಾಸಿನೋ ಆರಂಭವಿಲ್ಲ, ಸಿ.ಟಿ. ರವಿ ಸ್ಪಷ್ಟನೆ

Posted: 26 Feb 2020 04:40 AM PST

ಬೆಂಗಳೂರು: ರಾಜ್ಯದಲ್ಲಿ ಕ್ಯಾಸಿನೋ ಆರಂಭಿಸುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಸಂಸ್ಕೃತಿಗೆ ಅದು ಸರಿಹೋಗುವುದಿಲ್ಲ. ಕೆಲವರು ಸುಮ್ಮನೆ ಅಪಪ್ರಚಾರ ಮಾಡಿದ್ದಾರೆ ಎಂದು ದೂರಿದ್ದಾರೆ.

ಕ್ಯಾಸಿನೋ ಆರಂಭಿಸುವುದಿಲ್ಲ ಎಂದು ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಪ್ರವಾಸೋದ್ಯಮ ಕುರಿತು ಮಾತನಾಡುವಾಗ ವಿವಿಧ ವಿಷಯಗಳ ಬಗ್ಗೆ ಗಂಟೆಗಟ್ಟಲೇ ಚರ್ಚಿಸಲಾಗಿದೆ. ಗೋವಾ ಮೊದಲಾದ ಕಡೆ ಇರುವ ಕ್ಯಾಸಿನೋ ಬಗ್ಗೆಯೂ ಪ್ರಸ್ತಾಪವಾಗಿದೆ. ಆದರೆ, ಎಲ್ಲಿಯೂ ಕ್ಯಾಸಿನೋ ಆರಂಭಿಸಲಾಗುವುದು ಎಂದು ಹೇಳಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

ಕ್ಯಾಸಿನೋ ವಿಚಾರವಾಗಿ ಕೆಲವರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಯಾಸಿನೋ ಆರಂಭಿಸುವ ಬಗ್ಗೆ ಯಾವ ಚಿಂತನೆಯೂ ನಡೆದಿಲ್ಲ ಇನ್ನೂ ತೀರ್ಮಾನ ಕೈಗೊಳ್ಳುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಬಜೆಟ್ ನಲ್ಲಿ ರೈತರಿಗೆ ಬಂಪರ್ ಕೊಡುಗೆ ಸುಳಿವು

Posted: 26 Feb 2020 04:40 AM PST

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶೇಷವಾದ ಬಜೆಟ್ ಮಂಡಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಬಗ್ಗೆ ಸುಳಿವು ನೀಡಿದ್ದಾರೆ. ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ನೇಕಾರರ ಸಾಲ ಮನ್ನಾ ಮಾಡಿದ್ದರು. ಸಾಲ ಮನ್ನಾ ಮಾಡುವ ಮೂಲಕ ನೇಕಾರರ ಕಣ್ಣೀರು ಹೊರೆಸಿದ್ದರು.

ಈ ಬಾರಿ ರೈತರಿಗಾಗಿ ವಿಶೇಷ ಬಜೆಟ್ ಮಂಡಿಸಿ ಯೋಜನೆ ಘೋಷಿಸುತ್ತಾರೆ. ಯಡಿಯೂರಪ್ಪ ಬಜೆಟ್ ನಲ್ಲಿ ವಿಶೇಷ ಘೋಷಣೆ ಮಾಡುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಸುಳಿವು ನೀಡಿದ್ದಾರೆ.

38ನೇ ವರ್ಷದಲ್ಲಿ ಜಿಮ್ ನಲ್ಲಿ ಧೋನಿ ಮಾಡಿದ್ದಾರೆ ಕಸರತ್ತು

Posted: 26 Feb 2020 01:17 AM PST

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸದ್ಯ ಕ್ರಿಕೆಟ್ ನಿಂದ ದೂರವಿದ್ದಾರೆ. ಧೋನಿ ಮೈದಾನಕ್ಕೆ ಯಾವಾಗ ಬರ್ತಾರೆ ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ವರದಿಗಳ ಪ್ರಕಾರ, ಧೋನಿ ಮಾರ್ಚ್ 2 ರಿಂದ ಚೆನ್ನೈ ಸೂಪರ್ ಕಿಂಗ್ಸ್ ಶಿಬಿರಕ್ಕೆ ಸೇರಲಿದ್ದಾರೆ. ಸದ್ಯ ಅವರು ರಾಂಚಿಯಲ್ಲಿದ್ದು, ಮಂಗಳವಾರ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿದ್ದಾರೆ.

ಕ್ರೀಡಾಂಗಣದ ಜಿಮ್ ನಲ್ಲಿ ಧೋನಿ ಬೆವರಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಧೋನಿ ವಿಡಿಯೋ ವೈರಲ್ ಆಗಿದೆ. ಧೋನಿ ಜಿಮ್ ನಲ್ಲಿ ಸಾಹಸ ಮಾಡಿದ್ದಾರೆ. ವಿಡಿಯೋದಲ್ಲಿ ಧೋನಿ ಕಪ್ಪು ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿ ಸ್ಟಂಟ್ ಮಾಡಿದ್ದಾರೆ. ಧೋನಿ ವಿಡಿಯೋಕ್ಕೆ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

38 ನೇ ವಯಸ್ಸಿನಲ್ಲಿ ಧೋನಿಯ ಫಿಟ್ನೆಸ್ ಅದ್ಭುತವಾಗಿದೆ ಎಂದು ಅಭಿಮಾನಿಗಳು ಬರೆದಿದ್ದಾರೆ. ಧೋನಿ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದು, ಪಿಚ್‌ನಲ್ಲಿ ಮತ್ತು ಜಿಮ್ ನಲ್ಲಿ ಕೆಲಸ ಮಾಡುತ್ತಿದ್ದು, ಇದರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

 

ಹೋಳಿಗೆಂದು ತವರಿಗೆ ಬಂದ ನವವಿವಾಹಿತೆ ಮೇಲೆ ಅತ್ಯಾಚಾರ

Posted: 26 Feb 2020 01:15 AM PST

ಪಟಿಯಾಲಿ ಕೊಟ್ವಾಲಿ ಪ್ರದೇಶದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ನವ ವಿವಾಹಿತೆ ಮೇಲೆ ಅತ್ಯಾಚಾರ ನಡೆದಿದೆ. ಹೋಳಿ ಆಚರಿಸಲು ತವರಿಗೆ ಬಂದಿದ್ದ ಮಹಿಳೆ ಮೇಲೆ ಸಂಬಂಧಿ ಅತ್ಯಾಚಾರವೆಸಗಿದ್ದಾನೆ.

ಪೀಡಿತೆಗೆ ಕೆಲ ತಿಂಗಳ ಹಿಂದೆ ಮದುವೆಯಾಗಿತ್ತಂತೆ. ಹೋಳಿ ಆಚರಿಸಲು ಮಹಿಳೆ ಕೆಲ ದಿನಗಳ ಹಿಂದೆ ತವರಿಗೆ ಬಂದಿದ್ದಳು ಎನ್ನಲಾಗಿದೆ. ತೋಟದಲ್ಲಿ ನವ ವಿವಾಹಿತೆ ನೋಡಿದ ಆರೋಪಿ ಮನಸ್ಸು ಬದಲಾಗಿದೆ. ಆಕೆಯನ್ನು ಕಟ್ಟಿಹಾಕಿ ಅತ್ಯಾಚಾರವೆಸಗಿದ್ದಾನೆ. ಮನೆಗೆ ಬಂದ ಪೀಡಿತೆ ತಂದೆಗೆ ವಿಷ್ಯ ತಿಳಿಸಿದ್ದಾಳೆ.

ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಆರೋಪಿ ಸಂಬಂಧಿ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

 

ಠಾಣೆಗೆ ಬಂದ ನಾಯಿ ಬುದ್ಧಿವಂತಿಕೆ ನೋಡಿ ದಂಗಾದ ಪೊಲೀಸ್

Posted: 26 Feb 2020 01:14 AM PST

ನಾಯಿ ನಿಷ್ಠೆ ಬಗ್ಗೆ ಅನೇಕ ಕಥೆಗಳನ್ನು ಕೇಳಿರುತ್ತೇವೆ. ಆದ್ರೆ ನಾಯಿಗಳಿಗೆ ತಿಳುವಳಿಕೆ ಕೂಡ ಹೆಚ್ಚಿರುತ್ತದೆ. ಈ ನಾಯಿ ಸುದ್ದಿ ಕೇಳಿದ್ರೆ ನೀವು ನಾಯಿ ಮನುಷ್ಯನಿಗಿಂತ ಬುದ್ಧಿವಂತ ಹಾಗೂ ತಿಳುವಳಿಕೆಯುಳ್ಳ ಪ್ರಾಣಿ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

ಅಮೆರಿಕಾದ ಟೆಕ್ಸಾಸ್ ನಗರದ ಜರ್ಮನ್ ಶಫರ್ಡ್ ಚಿಕು, ಒಡೆಸ್ಸಾ ಪೊಲೀಸ್ ಠಾಣೆಗೆ ಬಂದಿತ್ತು. ಪೊಲೀಸ್ ಮುಂದೆ ತನ್ನ ಎರಡು ಕಾಲುಗಳನ್ನು ಮುಂದಕ್ಕೆ ಚಾಚಿದೆ. ಇದನ್ನು ನೋಡಿದ ಪೊಲೀಸ್ ಅಧಿಕಾರಿಗೆ ನಾಯಿ ತನ್ನ ಮನೆ ಮರೆತಿದೆ ಎಂಬುದು ಗೊತ್ತಾಗಿದೆ. ಚಿಕು ಜೊತೆ ಮೋಜು, ಮಸ್ತಿ ಮಾಡಿದ ಅಧಿಕಾರಿಗಳು ಪ್ರಾಣಿಗಳ ನಿಯಂತ್ರಣ ಮಂಡಳಿಗೆ ತಿಳಿಸಿದ್ದಾರೆ.

ಅಲ್ಲಿ ನಾಯಿ ಕಳೆದು ಹೋಗಿದೆ ಎಂಬ ದೂರು ಬಂದಿತ್ತಂತೆ. ಇದ್ರ ಆಧಾರದ ಮೇಲೆ ನಾಯಿಯನ್ನು ಮಾಲೀಕನಿಗೆ ನೀಡಲಾಗಿದೆ. ಮಾಲೀಕನನ್ನು ನೋಡ್ತಿದ್ದಂತೆ ಚಿಕು ಖುಷಿಯಾಗಿ ಓಡಿದೆ.

ಮಾ.1 ರಿಂದ ಬದಲಾಗಲಿದೆ ಈ ಎಲ್ಲ ನಿಯಮ

Posted: 26 Feb 2020 12:02 AM PST

ಮುಂದಿನ ಭಾನುವಾರದಿಂದ ಪ್ರಾರಂಭವಾಗುವ ಹೊಸ ತಿಂಗಳಲ್ಲಿ ಅನೇಕ ವಿಷಯಗಳು ಬದಲಾಗಲಿವೆ. ಇವು ಜನರ ಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ. ಮಾರ್ಚ್ 2020 ರಲ್ಲಿ 5 ದೊಡ್ಡ ನಿಯಮಗಳು ಬದಲಾಗುತ್ತಿವೆ.

ಎಸ್ಬಿಐ ತನ್ನ ಗ್ರಾಹಕರಿಗೆ ಕೆವೈಸಿ ಕಡ್ಡಾಯಗೊಳಿಸಿದೆ. ಈ ಬಗ್ಗೆ ಈಗಾಗಲೇ ಎಸ್ಎಂಎಸ್ ಕಳುಹಿಸಿದೆ. ಫೆಬ್ರವರಿ 28ರೊಳಗೆ ಗ್ರಾಹಕರು ಕೆವೈಸಿ ನೀಡಬೇಕು. ಇಲ್ಲವಾದ್ರೆ ಮಾರ್ಚ್ 1ರಿಂದ ಖಾತೆ ಬಂದ್ ಆಗಲಿದೆ.

ಸರ್ಕಾರಿ ಬ್ಯಾಂಕ್ ಇಂಡಿಯನ್ ಬ್ಯಾಂಕ್ ನೀಡಿದ ಹೇಳಿಕೆ ಪ್ರಕಾರ, ಈ ಬ್ಯಾಂಕ್ ಎಟಿಎಂಗಳಲ್ಲಿ 2,000 ರೂಪಾಯಿ ನೋಟುಗಳು ಸಿಗುವುದಿಲ್ಲ. 2 ಸಾವಿರ ರೂಪಾಯಿ ನೋಟು ಬಯಸುವ ಗ್ರಾಹಕರು ಬ್ಯಾಂಕ್ ಶಾಖೆಗೆ ಹೋಗಬೇಕು.

ಮಾರ್ಚ್ 1ರಿಂದ ಜಿಎಸ್‌ಟಿಯ ಹೊಸ ನಿಯಮ ಜಾರಿಗೆ ಬರಲಿದೆ. ಲಾಟರಿ, ಜಿಎಸ್‌ಟಿಯನ್ನು ಶೇಕಡಾ 28ಕ್ಕೆ ಹೆಚ್ಚಿಸಲಾಗಿದೆ.

ಮಾರ್ಚ್ ಒಂದರಿಂದ ಎಸ್ಬಿಐ ಎಟಿಎಂ ಕಾರ್ಡ್ ನಲ್ಲಿಯೂ ಬದಲಾವಣೆಯಾಗಲಿದೆ. ಗ್ರಾಹಕರಿಗೆ ದೇಶಿಯ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿದೆ. ಈ ಹಿಂದೆ ಎಲ್ಲರಿಗೂ ವಿದೇಶಿ ಮಾನ್ಯ ಕಾರ್ಡ್ ನೀಡಲಾಗ್ತಿತ್ತು.

 

ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ ಈ ಫುಟ್ಬಾಲ್ ಆಟಗಾರ್ತಿ

Posted: 25 Feb 2020 10:49 PM PST

ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಮಂಡಿ ಡಿಸ್‌ಲೊಕೇಟ್ ಆದರೂ ಸಹ ಅದನ್ನು ಮರಳಿ ಜಾಗಕ್ಕೆ ಎಳೆದುಕೊಂಡು ಮುಂದಿನ 40 ನಿಮಿಷಗಳ ಆಟವನ್ನು ಮುಂದುವರೆಸಿದ ಸ್ಕಾಟ್ಲೆಂಡ್‌ನ ಮಹಿಳಾ ಫುಟ್ಬಾಲರ್‌ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ.

St Mirren WFC ಹಾಗೂ Inverness Caledonian Thistle ಎಂಬ ಸ್ಥಳೀಯ ತಂಡಗಳ ನಡುವಿನ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. St Mirren WFC ತಂಡದ ನಾಯಕಿ ಜೇನ್‌ ಒ ಟೂಲೆ ಈ ಅದ್ಭುತ ಕಮಿಟ್‌ಮೆಂಟ್‌ ತೋರಿದ್ದಾರೆ.

ಮಹಿಳೆಯರು ಪುರುಷರಿಗಿಂತ ದೈಹಿಕವಾಗಿ ದುರ್ಬಲರು ಎನ್ನುವ ಮಂದಿಗೆ ಉತ್ತರ ಕೊಟ್ಟಂತೆ ಇರುವ ಈಕೆಯ ಛಲಭರಿತ ಆಟದ ವಿಡಿಯೋ ಈಗ ವೈರಲ್ ಆಗಿದೆ.

ಇನ್ನು ಸ್ವಲ್ಪ ಸಮಯ, ನಂತ್ರ ಬಿಡ್ತೇವೆ ಎಂದ್ರು ಅತ್ಯಾಚಾರಿಗಳು

Posted: 25 Feb 2020 10:47 PM PST

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗಿವೆ. ಬಿಹಾರದಲ್ಲಿ ಇದ್ರ ಸಂಖ್ಯೆ ಹೆಚ್ಚಾಗ್ತಿದೆ. ಬಿಹಾರದಲ್ಲಿ ಔಷಧಿ ತೆಗೆದುಕೊಂಡು ಮನೆಗೆ ಬರ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ಮಹಿಳೆ ಔಷಧಿ ತೆಗೆದುಕೊಂಡು ಮನೆಗೆ ಬರ್ತಿದ್ದ ವೇಳೆ ಬೊಲೆರೊದಲ್ಲಿ ಬಂದ ಅತ್ಯಾಚಾರಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರಂತೆ. ಅಲ್ಲಿ ಕೈ ಕಟ್ಟಿಹಾಕಿ ಅತ್ಯಾಚಾರವೆಸಗಿದ್ದಾರಂತೆ. ಮಹಿಳೆ ತನ್ನನ್ನು ಬಿಡುವಂತೆ ಕೇಳಿಕೊಂಡಿದ್ದಳಂತೆ. ಇನ್ನು ಸ್ವಲ್ಪ ಹೊತ್ತು. ಬಿಟ್ಟುಬಿಡ್ತೇವೆಂದು ಅತ್ಯಾಚಾರಿಗಳು ಹೇಳಿದ್ದರು ಎಂದು ಮಹಿಳೆ ಹೇಳಿದ್ದಾಳೆ.

ಪಾಪಿಗಳಿಂದ ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಎಲ್ಲ ಆರೋಪಿಗಳು ಮುಸುಕು ಧರಿಸಿದ್ದರಿಂದ ಅವ್ರ ಪತ್ತೆ ಕಷ್ಟವಾಗಲಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

 

ಮುತ್ತಿನ ವಿಚಾರಕ್ಕೆ ಕ್ಷಮೆ ಕೇಳ್ತಾರಾ ಕಮಲ್ ಹಾಸನ್…?

Posted: 25 Feb 2020 10:46 PM PST

ದಕ್ಷಿಣ ಭಾರತದ ನಟಿ ರೇಖಾ ಅವರ ಹಳೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ರೇಖಾ, ಕಮಲ್ ಹಾಸನ್ ಅವರೊಂದಿಗೆ ನಟಿಸಿದ Punnagai Mannan ಚಿತ್ರದ ಚುಂಬನ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. ಈ ದೃಶ್ಯವನ್ನು ನನಗೆ ತಿಳಿಸದೆ ಚಿತ್ರೀಕರಿಸಲಾಗಿತ್ತು ಎಂದವರು ಹೇಳಿದ್ದಾರೆ.

ಚುಂಬನದ ದೃಶ್ಯವನ್ನು ನನಗೆ ಹೇಳದೆ ಚಿತ್ರೀಕರಿಸಲಾಗಿದೆ. ಸುರೇಶ್ ಕೃಷ್ಣ ಮತ್ತು ವಸಂತ್ ಈ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದರು. ಈ ದೃಶ್ಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಬಿಗ್ ಕಿಂಗ್ ಸಣ್ಣ ಮಗುವಿಗೆ ಮುತ್ತಿಡುತ್ತಿದ್ದಾರೆ ಎಂದುಕೊಳ್ಳಿ ಎಂದು ಅವರು ಹೇಳಿದ್ದರಂತೆ. ಕಮಲ್ ಹಾಗೂ ಕೆಲ ಸಿಬ್ಬಂದಿಗೆ ಮಾತ್ರ ಇದು ಗೊತ್ತಿತ್ತು. ನನಗೆ ಮುತ್ತಿನ ಸಂಗತಿ ಗೊತ್ತಿರಲಿಲ್ಲವೆಂದ್ರೆ ಯಾರೂ ನಂಬುವುದಿಲ್ಲವೆಂದು ರೇಖಾ ವಿಡಿಯೋದಲ್ಲಿ ಹೇಳಿದ್ದರು.

ಈ ಬಗ್ಗೆ ನಿರ್ದೇಶಕರು ಹಾಗೂ ಕಮಲ್ ಹಾಸನ್ ಕ್ಷಮೆ ಕೇಳಿದ್ರಾ ಎಂಬ ಪ್ರಶ್ನೆಗೆ ಇಲ್ಲ. ಅವ್ರು ಯಾಕೆ ಕೇಳ್ತಾರೆ. ಚಿತ್ರ ಸೂಪರ್ ಹಿಟ್ ಆಗಿತ್ತು. ಚಿತ್ರದ ನಂತ್ರ ನನಗೆ ಸಾಕಷ್ಟು ಚಿತ್ರ ಸಿಕ್ಕಿತ್ತು. ಆದ್ರೆ ಆ ದೃಶ್ಯವನ್ನು ನನಗೆ ತಿಳಿಯದೆ ಮಾಡಿದ್ದರು. ಅದನ್ನು ನಾನು ಮತ್ತೆ ನೋಡಲು ಇಚ್ಛಿಸುವುದಿಲ್ಲ ಎಂದಿದ್ದರು.

ರೇಖಾ ಈ ವಿಡಿಯೋ ಈಗ ವೈರಲ್ ಆಗಿದೆ. ಕಮಲಹಾಸನ್ ಕ್ಷಮೆ ಕೇಳಬೇಕೆಂಬ ಕೂಗು ಕೇಳಿ ಬಂದಿದೆ. ಕಮಲ್ ಹಾಸನ್ ಅಭಿನಯದ ಇಂಡಿಯನ್-2 ಚಿತ್ರ ಸದ್ಯ ತೆರೆಗೆ ಬರಲಿದ್ದು, ಇದ್ರ ಮೇಲೆ ಈ ವಿಡಿಯೋ ಪ್ರಭಾವ ಬೀರುವ ಸಾಧ್ಯತೆಯಿದೆ.

 

ಜನಿಸಿದ ಮಗುವಿನ ನೋಟ ಕಂಡು ದಂಗಾದ ವೈದ್ಯರು

Posted: 25 Feb 2020 10:44 PM PST

ಈ ಇಂಟರ್ನೆಟ್ಟೇ ಹಾಗೆ ನೋಡಿ! ಸಾಗರದಷ್ಟು ಫನ್ನಿ ವಿಡಿಯೋಗಳು ಹಾಗೂ ಚಿತ್ರಗಳನ್ನೂ ನಮಗೆ ಕೊಡಮಾಡುವ ಮೂಲಕ ಅನ್‌ಲಿಮಿಟೆಡ್‌ ಮನರಂಜನೆ ನೀಡುತ್ತವೆ.

ಛಾಯಾಗ್ರಾಹಕ ರಾಡ್ರಿಗೋ ಕುಮಟ್ಸ್‌ಮನ್‌ ಅದಾಗ ತಾನೇ ಜನಿಸಿರುವ ಮಗುವಿನ ಚಿತ್ರವೊಂದನ್ನು ಸೆರೆ ಹಿಡಿದಿದ್ದು, ಭೂಮಿಗೆ ಬಂದ ಕೆಲವೇ ಹೊತ್ತಿನಲ್ಲಿ ಸಿಟ್ಟಿನ ಮುಖ ಮಾಡಿಕೊಂಡಿರುವ ಈ ಹಸುಗೂಸಿನ ಚಿತ್ರವು ವೈರಲ್‌ ಆಗಿದೆ.

ಸಾಮಾನ್ಯವಾಗಿ ಆಗ ತಾನೇ ಜನಿಸಿದ ಮಕ್ಕಳು ಅಳುತ್ತಿರುತ್ತವೆ. ಆದರೆ ರಯೋ ಡಿ ಜನೈರೋದ ಇಸಾಬೆಲಾ ಹೆಸರಿನ ಈ ಕೂಸು, ಅದಾಗಲೆ ಎಕ್ಸ್‌ಪ್ರೆಶನ್‌ಗಳನ್ನೂ ಕೊಡಲು ಆರಂಭಿಸಿದ್ದು, ಇದನ್ನು ಕಂಡ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ.

Gameforumer QR Scan

Gameforumer QR Scan
Gameforumer QR Scan