Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Saturday, February 15, 2020

Kannada News | Karnataka News | India News

Kannada News | Karnataka News | India News


ರವಿವಾರ ಶ್ರೀ ಸೂರ್ಯ ನಾರಾಯಣ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ

Posted: 15 Feb 2020 12:09 PM PST

ಮೇಷ ರಾಶಿ:

ಒತ್ತಡ ತೊಡೆದು ಹಾಕಲು ನಿಮ್ಮ ಮಕ್ಕಳ ಜೊತೆ ನಿಮ್ಮ ಅಮೂಲ್ಯ ಸಮಯ ಕಳೆಯಿರಿ. ನೀವು ಮಗುವಿನ ಗುಣಪಡಿಸುವ ಶಕ್ತಿಯನ್ನು ಅನುಭವಿಸುತ್ತೀರಿ. ಅವರು ಭೂಮಿಯ ಮೇಲೆ ಅತ್ಯಂತ ಶಕ್ತಿಯುತ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ವ್ಯಕ್ತಿತ್ವವಾಗಿರುತ್ತಾರೆ.

ನೀವೇ ಮರುಚೈತನ್ಯ ಹೊಂದುತ್ತೀರಿ. ನೀವು ಜನರು ನಿಮ್ಮಿಂದ ಏನು ಬಯಸುತ್ತಾರೆಂದು ನಿಖರವಾಗಿ ತಿಳಿದಿರುವಂತೆ ತೋರುತ್ತದೆ – ಆದರೆ ಇಂದು ನಿಮ್ಮ ಖರ್ಚುಗಳಲ್ಲಿ ತುಂಬಾ ಉದಾರಿಯಾಗದಿರಲು ಪ್ರಯತ್ನಿಸಿ. ನಿಮ್ಮ ವಂಶಸ್ಥರಿಗೆ ಏನಾದರೂ ವಿಶೇಷವಾದದ್ದನ್ನು ಯೋಜಿಸಿ.

ಅದೃಷ್ಟ ಸಂಖ್ಯೆ: 6

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ವೃಷಭ ರಾಶಿ:

ಕಣ್ಣಿನ ಪೊರೆ ರೋಗಿಗಳಿಗೆ ಧೂಮಪಾನವು ಅವರ ಕಣ್ಣುಗಳಿಗೆ ಮತ್ತಷ್ಟು ಹಾನಿಯುಂಟುಮಾಡಬಹುದಾದ್ದರಿಂದ ಅವರು ಕಲುಷಿತ ಪರಿಸರದಲ್ಲಿ ಹೋಗಬಾರದು. ಸಾಧ್ಯವಾದರೆ ಸೂರ್ಯನ ಬೆಳಕಿಗೆ ಅತಿಯಾದ ಒಡ್ಡಿಕೊಳ್ಳುವಿಕೆಯನ್ನು ತಪ್ಪಿಸಿ. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ.

ಮನೆಯ ಸುತ್ತ ಸಣ್ಣ ಬದಲಾವಣೆಗಳು ಅದರ ನೋಟವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಪ್ರಣಯ ರೋಮಾಂಚಕಾರಿಯಾಗಿರುತ್ತದೆ ಆದ್ದರಿಂದ ನೀವು ಪ್ರೀತಿಸುವವರನ್ನು ಸಂಪರ್ಕಿಸಿ ಮತ್ತು ದಿನದ ಅತ್ಯುತ್ತಮ ಲಾಭ ಪಡೆಯಿರಿ.

ಅದೃಷ್ಟ ಸಂಖ್ಯೆ: 6

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ಮಿಥುನ ರಾಶಿ:

ಪ್ರೀತಿ, ಭರವಸೆ, ನಂಬಿಕೆ, ಸಹಾನುಭೂತಿ, ಆಶಾವಾದ ಮತ್ತು ನಿಷ್ಠೆಗಳಂಥ ಧನಾತ್ಮಕ ಭಾವನೆಗಳನ್ನು ಗ್ರಹಿಸಲು ಮನಸ್ಸನ್ನು ಪ್ರೋತ್ಸಾಹಿಸಿ. ಒಮ್ಮೆ ಈ ಭಾವನೆಗಳು ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡ ನಂತರ ಮನಸ್ಸು ತಾನಾಗಿಯೇ ಪ್ರತಿ ಪರಿಸ್ಥಿತಿಗೂ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ.

ನೀವು ನಿಮ್ಮನ್ನು ಒಂದು ರೋಮಾಂಚಕಾರಿ ಪರಿಸ್ಥಿತಿಯಲ್ಲಿ ಕಂಡುಕೊಳ್ಳಬಹುದು-ಇದು ನಿಮಗೆ ಆರ್ಥಿಕ ಲಾಭವನ್ನೂ ತರುತ್ತದೆ. ಒಂದು ಕುಟುಂಬದ ಒಟ್ಟಾಗುವಿಕೆಯಲ್ಲಿ ನೀವೇ ಕೇಂದ್ರಬಿಂದುವಾಗಿರುತ್ತೀರಿ.

ಅದೃಷ್ಟ ಸಂಖ್ಯೆ: 9

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ಕಟಕ ರಾಶಿ:

ಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನಿಧಿಗಳ ಹಠಾತ್ ಒಳಹರಿವು ನಿಮ್ಮ ಪಾವತಿಗಳು ಮತ್ತು ತಕ್ಷಣದ ವೆಚ್ಚಗಳನ್ನು ನೋಡಿಕೊಳ್ಳುತ್ತದೆ. ನಿಮ್ಮ ಪ್ರೀತಿಪಾತ್ರರ ಜೊತೆಗಿನ ನಿಮ್ಮ ಸಂಬಂಧದಲ್ಲಿ ಹುಳಿ ಹಿಂಡಬಹುದಾದ ಸಮಸ್ಯೆಗಳನ್ನು ಕೆದಕುವುದನ್ನು ತಪ್ಪಿಸುವುದು ಅತ್ಯುತ್ತಮ. ಪ್ರೇಮಪ್ರಯಾಣ ಮಧುರವಾಗಿದ್ದರೂ ಅಲ್ಪಾವಧಿಯದ್ದಾಗಿರುತ್ತದೆ.

ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ಸಂಬಂಧಿಕರಿಂದಾಗಿ ವ್ಯಾಜ್ಯವುಂಟಾಗುವ ಸಾಧ್ಯತೆಯಿದೆ, ಆದರೆ ಕೊನೆಯಲ್ಲಿ ಎಲ್ಲವೂ ಸುಂದರವಾಗಿಯೇ ಕೊನೆಗೊಳ್ಳುತ್ತದೆ.

ಅದೃಷ್ಟ ಸಂಖ್ಯೆ: 7

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ಸಿಂಹ ರಾಶಿ :

ನೀವು ವ್ಯಾಯಾಮದ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಬಹುದು. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ಮತ್ತು ಇಂದು ತುಂಬಾ ಖರ್ಚು ಮಾಡಬೇಡಿ. ನಿಮ್ಮ ಅತಿಥಿಗಳ ಜೊತ ಒರಟಾಗಿ ನಡೆದುಕೊಳ್ಳಬೇಡಿ. ನಿಮ್ಮ ವರ್ತನೆ ಕೇವಲ ನಿಮ್ಮ ಕುಟುಂಬಕ್ಕೆ ಮಾತ್ರವೇ ಅಸಮಾಧಾನ ತರದೇ ಸಂಬಂಧಗಳಲ್ಲೂ ಶೂನ್ಯತೆಯನ್ನು ತರಬಹುದು.

ಪ್ರೀತಿಪಾತ್ರರು ಇಂದು ನಿಮ್ಮಿಂದ ಏನು ಬೇಕಾದರೂ ಬೇಡಿಕೊಳ್ಳಬಹುದು ಆದರೆ ನೀವು ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ನಿಮ್ಮ ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಗೊಳ್ಳಬಹುದು.

ಅದೃಷ್ಟ ಸಂಖ್ಯೆ: 5

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ಕನ್ಯಾ ರಾಶಿ:

ಕೆಲಸದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ಸ್ವಲ್ಪ ಉದ್ವೇಗ ತರಬಹುದು. ಇಂದು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಹೊಂದಿರುವ ಸಾಧ್ಯತೆ ಇದೆ ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಈ ಹಾನಿಯನ್ನು ಲಾಭದಲ್ಲಿ ಪರಿವರ್ತಿಸಬಹುದು ಸ್ನೇಹಿತರು ಇಂದು ರಾತ್ರಿ ರೋಮಾಂಚಕವಾದದ್ದನ್ನೇನಾದರೂ ಯೋಜಿಸಿ ನಿಮಗೆ ಆನಂದ ತರುತ್ತಾರೆ.

ನಿಮ್ಮ ನಗು ಯಾವುದೇ ಅರ್ಥ ಹೊಂದಿಲ್ಲ – ನಗುವಿಗೆ ಧ್ವನಿಯಿಲ್ಲ – ನಿಮ್ಮ ಸಂಗವಿಲ್ಲದಿದ್ದಾಗ ಹೃದಯ ಬಡಿಯುವುದನ್ನು ಮರೆಯುತ್ತದೆ.

ಅದೃಷ್ಟ ಸಂಖ್ಯೆ: 7

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ತುಲಾ ರಾಶಿ:

ಸಂತೋಷದಿಂದಿರಲು ನಿಮ್ಮ ಆಕಾಂಕ್ಷೆಗಳನ್ನು ಪರಿಶೀಲಿಸಿ. ಯೋಗದ ಸಹಾಯ ತೆಗೆದುಕೊಳ್ಳಿ – ಇದು ನಿಮಗೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಿಮ್ಮ ಮನೋಧರ್ಮವನ್ನು ಸುಧಾರಿಸುವ ಆರೋಗ್ಯಕರ ಜೀವನ ಕಲೆ ಕಲಿಸುತ್ತದೆ.

ನೀವು ಸಂಪ್ರದಾಯಬದ್ಧ ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ನೀವು ಬಯಸುವಲ್ಲಾ ಗಮನವನ್ನೂ ನೀವು ಪಡೆಯುವ ಒಳ್ಳೆಯ ದಿನ – ನಿಮ್ಮ ಮನಸ್ಸಿನಲ್ಲಿ ಅನೇಕ ವಿಷಯಗಳಿರುತ್ತವೆ ಹಾಗೂ ನೀವು ಯಾವುದನ್ನು ಅನುಸರಿಸಬೇಕೆನ್ನುವ ಸಮಸ್ಯೆ ಹೊಂದಿರುತ್ತೀರಿ.

ಅದೃಷ್ಟ ಸಂಖ್ಯೆ: 8

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ವೃಶ್ಚಿಕ ರಾಶಿ:

ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ಇಂದು, ನೀವು ಸಾಕಷ್ಟು ಸಕಾರಾತ್ಮಕತೆಯೊಂದಿಗೆ ಮನೆಯಿಂದ ಹೊರಬರುತ್ತೀರಿ, ಆದರೆ ಕೆಲವು ಅಮೂಲ್ಯ ವಸ್ತುವಿನ ಕಳ್ಳತನದಿಂದಾಗಿ, ನಿಮ್ಮ ಮನಸ್ಥಿತಿಗೆ ತೊಂದರೆಯಾಗಬಹುದು. ಹೊಸ ಸಂಬಂಧಗಳು ದೀರ್ಘಾವಧಿಯದ್ದಾಗಿರುತ್ತವೆ ಮತ್ತು ಹೆಚ್ಚು ಅನುಕೂಲಕರವಾಗಿರುತ್ತವೆ.

ಇಂದು ನೀವು ನಿಮ್ಮ ಸ್ನೇಹಿತನ ಅನುಪಸ್ಥಿತಿಯಲ್ಲಿ ಅವರ ಸುಗಂಧವನ್ನು ಅನುಭವಿಸುತ್ತೀರಿ. ಒಬ್ಬ ಆಧ್ಯಾತ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ಒದಗಿಸುತ್ತಾರೆ.

ಅದೃಷ್ಟ ಸಂಖ್ಯೆ: 5

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ಧನುಸ್ಸು ರಾಶಿ:

ಜನರನ್ನು ನಿಮ್ಮಿಷ್ಟದಂತೆ ನಡೆದುಕೊಳ್ಳುವಂತೆ ಒತ್ತಾಯಿಸಬೇಡಿ. ಇತರರ ಬಯಕೆ ಮತ್ತು ಆಸಕ್ತಿಯ ಬಗ್ಗೆ ಯೋಚಿಸಿದಲ್ಲಿ ನಿಮಗೆ ಅನಿಯಮಿತ ಸಂತೋಷ ಬರುತ್ತದೆ. ನಿಮ್ಮ ಸ್ನೇಹಿತರೊಬ್ಬರು ಇಂದು ದೊಡ್ಡ ಸಾಲವನ್ನು ಕೇಳಬಹುದು, ನೀವು ಅವರಿಗೆ ಈ ಹಣವನ್ನು ಕೊಟ್ಟರೆ, ನೀವು ಆರ್ಥಿಕ ತೊಂದರೆಗೊಳಗಾಗಬಹುದು.

ಕೆಲಸದ ಒತ್ತಡ ಕಡಿಮೆಯಿದ್ದು ನೀವು ಕುಟುಂಬದ ಸದಸ್ಯರ ಜೊತೆಗಿನ ಸಮಯವನ್ನು ಆನಂದಿಸುವ ಒಂದು ದಿನ. ಇಂದು ರಾತ್ರಿ ಸಣ್ಣ ವಿಷಯಗಳಲ್ಲೂ ಕೂಡ ನಿಮ್ಮ ಪ್ರಿಯತಮೆಯ ಜೊತೆಗಿನ ಸಂಬಂಧಗಳು ಶಿಥಿಲಗೊಳ್ಳುತ್ತವೆ. ಹೆಚ್ಚಾಗಿ ದೂರದ ಸ್ಥಳದಿಂದ ಕೊನೆಯಲ್ಲಿ ಸಂಜೆಯಲ್ಲಿ ಶುಭ ಸುದ್ದಿಯನ್ನು ನಿರೀಕ್ಷಿಸಲಾಗಿದೆ.

ಅದೃಷ್ಟ ಸಂಖ್ಯೆ: 7

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ಮಕರ ರಾಶಿ:

ಹಿರಿಯರು ಉತ್ತಮ ಲಾಭ ಪಡೆಯಲು ತಮ್ಮ ಹೆಚ್ಚುವರಿ ಶಕ್ತಿಯನ್ನು ಸಕಾರಾತ್ಮಕ ಬಳಕೆಗೆ ವಿನಿಯೋಗಿಸಬೇಕು. ನೀವು ಇಂದು ನಿಮಗೆ ನೀಡಲಾದ ಹೂಡಿಕೆಯ ಯೋಜನೆಗಳ ಬಗ್ಗೆ ಚೆನ್ನಾಗಿ ಆಲೋಚಿಸಬೇಕು.

ನೀವು ಇಂದು ಹಾಜರಾಗುವ ಒಂದು ಸಾಮಾಜಿಕ ಸಮಾರಂಭದಲ್ಲಿ ನೀವೇ ಕೇಂದ್ರಬಿಂದುವಾಗಿರುತ್ತೀರಿ. ನಿಮ್ಮ ಪ್ರೀತಿಪಾತ್ರರ ನಿಷ್ಠೆಯನ್ನು ಅನುಮಾನಿಸಬೇಡಿ. ಹೆಚ್ಚಾಗಿ ದೂರದ ಸ್ಥಳದಿಂದ ಕೊನೆಯಲ್ಲಿ ಸಂಜೆಯಲ್ಲಿ ಶುಭ ಸುದ್ದಿಯನ್ನು ನಿರೀಕ್ಷಿಸಲಾಗಿದೆ. ನಿಮ್ಮ ಸಂಗಾತಿಯ ಪ್ರೀತಿಗಾಗಿ ನೀವು ಹಂಬಲಿಸುತ್ತಿದ್ದಲ್ಲಿ, ಈ ದಿನ ನಿಮ್ಮನ್ನು ಆಶೀರ್ವದಿಸುತ್ತದೆ.

ಅದೃಷ್ಟ ಸಂಖ್ಯೆ: 3

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ಕುಂಭ ರಾಶಿ:

ಆರೋಗ್ಯ ವಿಷಯಗಳಲ್ಲಿ ನಿಮ್ಮ ಬಗ್ಗೆ ನೀವೇ ನಿರ್ಲಕ್ಷ್ಯ ಮಾಡದಂತೆ ಎಚ್ಚರಿಕೆ ವಹಿಸಿ. ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ.

ಇದುವರೆಗೂ ಒಂಟಿಯಾಗಿ ಇರುವವರು ಇಂದು ಯಾರೋ ವಿಶೇಷ ಭೇಟಿಯಾಗುವ ಸಾಧ್ಯತೆ ಇದೆ ಆದರೆ ವಿಷಯವನ್ನು ಮುಂದುವರಿಸುವ ಮೊದಲು, ಆ ವ್ಯಕ್ತಿ ಯಾರೊಂದಿಗಾದರೂ ಸಂಬಂಧದಲ್ಲಿ ಇದ್ದರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ನೀವು ಅತುರದ ನಿರ್ಣಯಗಳನ್ನು ಕೈಗೊಂಡರೆ ಮತ್ತು ಅನಗತ್ಯ ಕ್ರಮಗಳನ್ನು ಕೈಗೊಂಡರೆ ಈ ದಿನ ನಿಮ್ಮನ್ನು ನಿರಾಸೆಗೊಳಿಸುತ್ತದೆ.

ಅದೃಷ್ಟ ಸಂಖ್ಯೆ: 1

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ಮೀನ ರಾಶಿ:

ಖಿನ್ನತೆಯನ್ನು ಹೊಡೆದೋಡಿಸಿ – ಇದು ನಿಮ್ಮನ್ನು ಆವರಿಸಿಕೊಳ್ಳುತ್ತಿದೆ ಮತ್ತು ನಿಮ್ಮ ಪ್ರಗತಿಗೆ ಅಡ್ಡಿಪಡಿಸುತ್ತಿದೆ. ಇಂದು ಮನೆಯಿಂದ ಹೊರಗೆ ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ಹೋಗಿ, ಇದರಿಂದ ನೀವು ಹಣದ ಲಾಭವನ್ನು ಪಡೆಯಬಹುದು.

ನಿಮ್ಮ ಹೆತ್ತವರ ಆರೋಗ್ಯದ ಬಗೆಗೆ ಹೆಚ್ಚುವರಿ ಗಮನ ಮತ್ತು ಎಚ್ಚರಿಕೆ ಅಗತ್ಯವಿದೆ. ಪ್ರೀತಿ ನಿಮ್ಮ ಪ್ರೀತಿಪಾತ್ರರೊಡನೆ ಹಂಚಿಕೊಳ್ಳಬೇಕಾದ ಭಾವನೆ. ಇಂದು ಇಡೀ ದಿನ ನೀವು ಖಾಲಿಯಾಗಿರಬಹುದು ಮತ್ತು ಟಿವಿಯಲ್ಲಿ ಅನೇಕ ಚಲನಚಿತ್ರಗಳು ಅಥವಾ ಕಾರ್ಯಕ್ರಮವನ್ನು ನೋಡಬಹುದು.

ಅದೃಷ್ಟ ಸಂಖ್ಯೆ: 4

ಸಲಹೆ ಮತ್ತು ಪರಿಹಾರ ತಿಳಿಯಲು: ಪಂ. ಅನಂತ್ ಪ್ರಸಾದ್ ಶರ್ಮಾ (ಕೊಲ್ಲೂರು) 9845626805

ಕಳ್ಳನತಕ್ಕೆ ಬಂದವನ ಕಣ್ಣಿಗೆ ಬಿತ್ತು ಷಾಂಪೇನ್ ಬಾಟಲಿ

Posted: 15 Feb 2020 07:32 AM PST

ಕಳ್ಳತನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಘಟನೆಗಳು ನಡೆಯುತ್ತಿರುತ್ತವೆ. ಈಗ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ಕಳ್ಳತನ ಮಾಡಲು ಬಂದವನ ಕಣ್ಣಿಗೆ ಷಾಂಪೆನ್ ಬಾಟಲಿ ಕಂಡಿದೆ. ನಂತ್ರ ಆತ ಊಹಿಸಲಾಗದ ಘಟನೆ ನಡೆದಿದೆ.

ಈ ಘಟನೆ ಮುಂಬೈನ ಮೆರೈನ್ ಡ್ರೈವ್ ಪ್ರದೇಶದ ಗಿರಿಕುಂಜ್ ಕಟ್ಟಡದಲ್ಲಿ ನಡೆದಿದೆ. ಇಲ್ಲಿಗೆ ಕದಿಯಲು ಬಂದ ವ್ಯಕ್ತಿ ಕಣ್ಣು ಷಾಂಪೇನ್ ಬಾಟಲಿ ಮೇಲೆ ಬಿದ್ದಿದೆ. ಬಾಟಲಿ ನೋಡಿದ ಕಳ್ಳ, ಕಳ್ಳತನ ಮಾಡುವುದನ್ನು ಬಿಟ್ಟು ಷಾಂಪೇನ್ ಕುಡಿಯಲು ಶುರು ಮಾಡಿದ್ದಾನೆ.

ಅತಿಯಾಗಿ ಕುಡಿದ ಕಳ್ಳ ಅಲ್ಲೇ ಮಲಗಿದ್ದಾನೆ. ಬೆಳಿಗ್ಗೆ ಮನೆ ಸ್ವಚ್ಛಗೊಳಿಸಲು ಬಂದ ಮಹಿಳೆಗೆ ಮನೆ ಒಳಗಿನಿಂದ ಬಾಗಿಲು ಹಾಕಿರುವುದು ಗೊತ್ತಾಗಿದೆ. ಇದಾದ ನಂತ್ರ ಆಕೆ ಪೊಲೀಸರಿಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರ ಮುಂದೆ ಕಳ್ಳ ವಿಷ್ಯ ಬಿಚ್ಚಿಟ್ಟಿದ್ದಾನೆ. ಬಾಲ್ಕನಿಯಿಂದ ಮನೆ ಪ್ರವೇಶ ಮಾಡಿದವನ ಮನಸ್ಸನ್ನು ಷಾಂಪೇನ್ ಬದಲಿಸಿದೆ. ಕಳ್ಳ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಬ್ರೇಕಿಂಗ್ ನ್ಯೂಸ್: ವೇಗವಾಗಿ ಬಂದ ಬಸ್ ಬಂಡೆಗೆ ಡಿಕ್ಕಿ: ಸ್ಥಳದಲ್ಲೇ 7 ಮಂದಿ ದುರ್ಮರಣ

Posted: 15 Feb 2020 06:41 AM PST

ಟೂರಿಸ್ಟ್ ಬಸ್ ಬಂಡೆಗೆ ಡಿಕ್ಕಿಯಾಗಿ 7 ಮಂದಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಮಾಳ ಬಳಿ ಸಂಭವಿಸಿದೆ.

ಟೂರಿಸ್ಟ್ ಬಸ್ ಬಂಡೆಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಘಾಟ್ ರಸ್ತೆಯಲ್ಲಿ ವೇಗವಾಗಿ ಬಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಪ್ರವಾಸಿಗರಿದ್ದ ಬಸ್ ಇದಾಗಿದೆ.

ಘಾಟ್ ರಸ್ತೆಯಲ್ಲಿ ಅಪಘಾತದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ತೊಂದರೆಯಾಗಿದೆ. ಹತ್ತಿರದಲ್ಲಿ ಆಸ್ಪತ್ರೆಗಳು ಇಲ್ಲದ ಕಾರಣ ಗಾಯಾಳುಗಳನ್ನು ಮಣಿಪಾಲ್, ಕಾರ್ಕಳದ ಆಸ್ಪತ್ರೆಗೆ ಸಾಗಿಸಲು ತುರ್ತು ಕಾರ್ಯಾಚರಣೆ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸಹಕಾರಿ ಸಂಸ್ಥೆ, ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಪಡೆದ ರೈತರಿಗೆ ಸರ್ಕಾರದಿಂದ ಭರ್ಜರಿ ‘ಗುಡ್ ನ್ಯೂಸ್’

Posted: 15 Feb 2020 06:27 AM PST

ಸಹಕಾರಿ ಸಂಸ್ಥೆಗಳಿಂದ ಪಡೆದ ಸುಸ್ತಿ ಸಾಲದ ಬಡ್ಡಿ ಮನ್ನಾ  ಮಾಡಲಾಗುವುದು. ಜನವರಿ 31ಕ್ಕೆ ಸುಸ್ತಿಯಾಗಿರುವ ಮಧ್ಯಮ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಹೇಳಲಾಗಿದೆ.

ವಿಶೇಷ ಪ್ರಕರಣವೆಂದು ಪರಿಗಣಿಸಿ ಸುಸ್ತಿ ಸಾಲದ ಬಡ್ಡಿ ಮನ್ನಾ ಮಾಡಲಾಗುವುದು. ಮಾರ್ಚ್ 31 ರೊಳಗೆ ರೈತರು ಅಸಲು ಪಾವತಿಸಿದಲ್ಲಿ ಬಡ್ಡಿ ಮನ್ನಾ ಮಾಡಲಾಗುವುದು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ ಬ್ಯಾಂಕ್ ಪಿಕಾರ್ಡ್ ಬ್ಯಾಂಕ್ ಲ್ಯಾಂಪ್ಸ್ ಸೊಸೈಟಿ ಗಳಿಂದ ಪಡೆದ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಲಾಗಿದೆ.

‘ರೈತರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಪರ್ ಗಿಫ್ಟ್’

Posted: 15 Feb 2020 06:09 AM PST

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ ನಲ್ಲಿ ಈ ಬಾರಿ ರೈತರಿಗೆ ಬಂಪರ್ ಗಿಫ್ಟ್ ನೀಡಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಜೆಟ್ನಲ್ಲಿ ರೈತರಿಗೆ ವಿವಿಧ ಯೋಜನೆ ಘೋಷಿಸುವ ಮೂಲಕ ಸಿಎಂ ಬಂಪರ್ ಗಿಫ್ಟ್ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿರುವ ಕೃಷಿಮೇಳ, ಸಿರಿಧಾನ್ಯ ಮೇಳ, ಫಲಪುಷ್ಪ ಪ್ರದರ್ಶನಕ್ಕೆ ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ ಕ್ಷೇತ್ರಗಳ ಶಾಸಕರು ಆಗಮಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರು ರಾಜಕಾರಣ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ ಸುಧಾಕರ್, ಇನ್ನಾದರೂ ರಾಜಕಾರಣಿಗಳ ಮನಸ್ಸು ಪರಿವರ್ತನೆಯಾಗಲಿ ಎಂದು ಹೇಳಿದ್ದಾರೆ.

ಓಟದಲ್ಲಿ ಉಸೇನ್ ಬೋಲ್ಟ್ ಮೀರಿಸಿದ ಕಂಬಳ ವೀರನಿಗೆ ‘ಬಂಪರ್’

Posted: 15 Feb 2020 05:55 AM PST

ಕರಾವಳಿಯ ಜಾನಪದ ಕ್ರೀಡೆ ಕಂಬಳ ಸ್ಪರ್ಧೆಯಲ್ಲಿ ಶ್ರೀನಿವಾಸಗೌಡ ವಿಶ್ವದ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆಯನ್ನು ಮೀರಿಸಿದ್ದು ದೇಶಾದ್ಯಂತ ಸುದ್ದಿಯಾಗಿದೆ.

ಶ್ರೀನಿವಾಸಗೌಡ ಅವರ ದಾಖಲೆ ಓಟಕ್ಕೆ ಅನೇಕ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತೆಯೇ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು, ಶ್ರೀನಿವಾಸ ಗೌಡರ ಸಾಧನೆ ಬಗ್ಗೆ ತಿಳಿದುಕೊಂಡಿದ್ದಾರೆ. ಈಗಾಗಲೇ ಸಾಯ್ ಅಧಿಕಾರಿಗಳು ಶ್ರೀನಿವಾಸ ಗೌಡರನ್ನು ಸಂಪರ್ಕಿಸಿ ರೈಲು ಟಿಕೆಟ್ ಬುಕ್ ಮಾಡಿದ್ದಾರೆ. ಸೋಮವಾರ ಸಾಯ್ ಕೇಂದ್ರವನ್ನು ಶ್ರೀನಿವಾಸಗೌಡರು ಸಂಪರ್ಕಿಸಲಿದ್ದು ಅವರಿಗೆ ರಾಷ್ಟ್ರೀಯ ತರಬೇತುದಾರರಿಂದ ಸೂಕ್ತ ತರಬೇತಿ ಕೊಡಿಸಲಾಗುವುದು ಎಂದು ಹೇಳಿದ್ದಾರೆ.

ಉದ್ಯಮಿ ಆನಂದ್ ಮಹೀಂದ್ರಾ ಕೂಡ ಶ್ರೀನಿವಾಸ ಗೌಡರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರಿಗೆ ಸೂಕ್ತ ತರಬೇತಿ ನೀಡಿದಲ್ಲಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗ್ಯಾರಂಟಿ ಎಂದು ಹೇಳಿದ್ದಾರೆ.

5 ನೇ ಮಗುವಿಗೆ ತಂದೆಯಾದ ಶಾಹಿದ್ ಅಫ್ರಿದಿ: ವ್ಯಂಗ್ಯವಾಡಿದ ನೆಟ್ಟಿಗರು

Posted: 15 Feb 2020 05:23 AM PST

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ 5 ನೇ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಟ್ವೀಟ್ ಮಾಡುವ ಮೂಲಕ ಈ ಸಂತಸ ಹಂಚಿಕೊಂಡಿರುವ ಶಾಹಿದ್ ಅಫ್ರಿದಿ ದೇವರ ಕೃಪೆಯಿಂದ ಈಗಾಗಲೇ ನಾಲ್ಕು ಹೆಣ್ಣು ಮಕ್ಕಳನ್ನು ಹೊಂದಿರುವ ನನಗೆ ಮತ್ತೊಂದು ಹೆಣ್ಣು ಮಗು ಕರುಣಿಸಲಾಗಿದೆ. ಈ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಆಫ್ರಿದಿ ಟ್ವೀಟ್ ಗೆ ಅನೇಕರು ಅಭಿನಂದಿಸಿದ್ದಾರೆ. ಮತ್ತೆ ಕೆಲವರು ವ್ಯಂಗ್ಯವಾಡಿದ್ದಾರೆ. ಪಾಕಿಸ್ತಾನದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ನೀವು ಕೈಜೋಡಿಸುವುದಿಲ್ಲವೇ ಎಂದೆಲ್ಲ ಪ್ರಶ್ನಿಸಿದ್ದಾರೆ.

ಈಗಾಗಲೇ ನಾಲ್ವರು ಹೆಣ್ಣು ಮಕ್ಕಳು ಇರುವಾಗ ಗಂಡು ಮಗು ಪಡೆಯಲು ಪ್ರಯತ್ನಿಸಿದ್ದೀರಾ ಎಂದೆಲ್ಲಾ ಪ್ರಶ್ನಿಸಲಾಗಿದೆ. ಅಫ್ರಿದಿ ಅವರಿಗೆ ಗಂಡು ಮಗು ಆಗುವ ವೇಳೆಗೆ ಅಂಡರ್ 19 ಮಹಿಳಾ ಕ್ರಿಕೆಟ್ ತಂಡವೇ ಸಿದ್ಧವಾಗಿಬಿಡಬಹುದು ಎಂದು ಹೇಳಲಾಗಿದೆ. ಆಫ್ರಿದಿ – ನಾದಿಯಾ ದಂಪತಿಗೆ ಅಕ್ಸಾ, ಅಂಶಾ,  ಅಜ್ವಾ ಮತ್ತು ಅಸ್ಮಾರಾ ಎಂಬ ನಾಲ್ವರು ಪುತ್ರಿಯರಿದ್ದಾರೆ.

‘ನಿರಪರಾಧಿಯನ್ನು ಅಪರಾಧಿ ಎನ್ನುವುದು ಸಿದ್ಧರಾಮಯ್ಯರಿಗೆ ಶೋಭೆ ತರಲ್ಲ’

Posted: 15 Feb 2020 04:56 AM PST

ಮಾಜಿ ಸಿಎಂ ಸಿದ್ಧರಾಮಯ್ಯ ಹೋರಾಟಗಾರರೆಂಬುದು ಇಂದು ಗೊತ್ತಾಯಿತು. ಅವರು ಹೋರಾಟ ಮಾಡಿಕೊಂಡೇ ಇರಲಿ. ನಮಗೆ ಸಂತಸ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನಿರಪರಾಧಿಯನ್ನು ಅಪರಾಧಿ ಎನ್ನುವುದು ಶೋಭೆ ತರುವುದಿಲ್ಲ. ಮಾಜಿ ಮುಖ್ಯಮಂತ್ರಿ ಎನಿಸಿಕೊಂಡವರಿಗೆ ಶೋಭೆ ತರಲ್ಲ. ಬೆಂಜ್ ಕಾರು ಅಪಘಾತ ಪ್ರಕರಣ ಸಂಬಂಧಿಸಿದಂತೆ ಬಳ್ಳಾರಿ ಪೊಲೀಸ್ ಅಧೀಕ್ಷಕರು ಸೇರಿದಂತೆ ಎಲ್ಲರೂ ಸ್ಪಷ್ಟೀಕರಣ ನೀಡಿದ್ದಾರೆ.

ಅಪಘಾತ ಪ್ರಕರಣದ ತನಿಖೆಗೆ ವಿಶೇಷ ತಂಡ ನೇಮಕ ಮಾಡಲಾಗಿದೆ. ತನಿಖೆಯಲ್ಲಿ ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗುತ್ತದೆ. ಸಚಿವರ ಮಕ್ಕಳನ್ನು ರಕ್ಷಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಿನಾಕಾರಣ ನಿರಪರಾಧಿಯನ್ನು ಅಪರಾಧಿ ಎನ್ನುವುದು ತಪ್ಪು ಎಂದು ಹೇಳಿದ್ದಾರೆ.

ಈಜಲು ಹೋದಾಗಲೇ ನಡೆದಿದೆ ನಡೆಯಬಾರದ ಘಟನೆ

Posted: 15 Feb 2020 04:39 AM PST

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಇಂಡುವಳ್ಳಿ ಹೊಸೂರಿನ ಹೊಳೆಹಟ್ಟಿಯ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ.

11 ವರ್ಷದ ಪ್ರತೀಕ್ ಮತ್ತು ನಿಖಿಲ್ ಶನಿವಾರ ಬೆಳಿಗ್ಗೆ ಶಾಲೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದ ಬಳಿಕ ಕೆರೆಗೆ ಈಜಲು ತೆರಳಿದ್ದಾರೆ. ಈಜಾಡುವ ವೇಳೆ ನೀರಿನ ಸೆಳತಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಸೊರಬ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಹುಬ್ಬಳ್ಳಿ ಕಾಲೇಜ್ ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಕಾಶ್ಮೀರ ವಿದ್ಯಾರ್ಥಿಗಳಿಗೆ ಗೂಸಾ

Posted: 15 Feb 2020 04:19 AM PST

 

ಹುಬ್ಬಳ್ಳಿಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಪುಲ್ವಾಮಾ ಹುತಾತ್ಮರ ದಿನದಂದು ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಜಮ್ಮು ಮತ್ತು ಕಾಶ್ಮೀರದ ಮೂವರು ವಿದ್ಯಾರ್ಥಿಗಳನ್ನು ಕಾಲೇಜ್ ಆಡಳಿತ ಮಂಡಳಿ ಅಮಾನತು ಮಾಡಿದೆ.

ಅಮೀರ್, ಬಾಸಿತ್, ತಾಲಿಬ್ ಪಾಕ್ ಪರ ಘೋಷಣೆ ಕೂಗಿ ಸೆಲ್ಫಿ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅವರನ್ನು ಹುಬ್ಬಳ್ಳಿ ಗೋಕುಲ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಲೇಜ್ ನಿಂದ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಸಂದರ್ಭದಲ್ಲಿ ಆಕ್ರೋಶಗೊಂಡ ಸ್ಥಳೀಯರು ಗೂಸಾ ನೀಡಿದ್ದಾರೆ.

ಕೆಎಲ್ಇ ಕಾಲೇಜಿನಿಂದ ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳಾದ ಅಮೀರ್, ಬಾಸಿತ್ ತಾಲಿಬ್ ಅವರನ್ನು ಅಮಾನತು ಮಾಡಲಾಗಿದೆ. ಪುಲ್ವಾಮಾ ಹುತಾತ್ಮರ ದಿನದಂದು ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದು, ದೇಶ ವಿರೋಧಿ ಘೋಷಣೆ ಕೂಗಿದ ಈ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ಈತನಿಗೆ ಹೆಣ್ಣು ಹುಡುಕಿಕೊಟ್ಟವರಿಗೆ ಸಿಗಲಿದೆ ಭಾರೀ ಹಣ…!

Posted: 15 Feb 2020 03:35 AM PST

ಪ್ರತಿ ವರ್ಷ ಪ್ರೇಮಿಗಳ ದಿನಾಚರಣೆ ಆಚರಿಸಲು ಸಾಕಷ್ಟು ಸಿಂಗಲ್ ಮಂದಿ ಸಂಗಾತಿಗಾಗಿ ಹುಡುಕಾಟ ನಡೆಸುವುದು ಸರ್ವೇ ಸಾಮಾನ್ಯ. ಅಮೆರಿಕದ ಕಾನ್ಸಾನ್‌ನ ಜೆಫ್‌ ಗೆಬ್ಹರ್ಟ್ ಎಂಬ 47 ವರ್ಷದ ವ್ಯಕ್ತಿ ಆನ್ಲೈನ್‌ನಲ್ಲಿ ಪಾರ್ಟ್‌ನರ್‌ ಸಿಗದೇ ಹೈರಾಣಾಗಿದ್ದು, ತನಗೊಬ್ಬ ಗರ್ಲ್‌ಫ್ರೆಂಡ್ ಹುಡುಕಿಕೊಟ್ಟಲ್ಲಿ $25,000ಗಳ (17 ಲಕ್ಷ ರೂ.ಗಳು) ಇನಾಮು ಕೊಡುವುದಾಗಿ ಘೋಷಿಸಿದ್ದಾನೆ.

ವೆಬ್‌ಸೈಟ್ ಒಂದರಲ್ಲಿ ಕಳೆದ ಆರು ತಿಂಗಳಿನಿಂದ ಕೆಲಸ ಮಾಡುತ್ತಿರುವ ಜೆಫ್‌ ತನ್ನ ಲೈಫ್‌ ಅನ್ನೇನೋ ಸಖತ್‌ ಎಂಜಾಯ್ ಮಾಡುತ್ತಿದ್ದಾನೆ. ಆದರೆ, ಅದಕ್ಕೊಂದು ಪರಿಪೂರ್ಣತೆ ಕಂಡುಕೊಳ್ಳಲು ಒಬ್ಬ ಸಂಗಾತಿಯ ಶೋಧದಲ್ಲಿ ಅವಿರತ ಶ್ರಮ ಹಾಕುತ್ತಿದ್ದಾನೆ. ಅದಾಗಲೇ ಎರಡು ಕಂಪನಿಗಳನ್ನು ಕಟ್ಟಿ, ಮಾರಾಟ ಮಾಡಿರುವ ಈತ ಸಖತ್‌ ಸೌಂಡ್ ಪಾರ್ಟಿಯು ಹೌದು.

ತನ್ನ ಜಾಲತಾಣದಲ್ಲಿ ತನ್ನ ಬಗ್ಗೆ ಪೂರ್ತಿ ವಿವರಗಳನ್ನು ಕೊಟ್ಟಿರುವ ಜೆಫ್‌, ಸಾಕಷ್ಟು ಚಿತ್ರಗಳನ್ನು ಹಾಕಿಕೊಂಡಿದ್ದು ತನ್ನ ಹವ್ಯಾಸಗಳು ಹಾಗೂ ಸಕಾರಾತ್ಮಕ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟಿದ್ದಾನೆ.

ʼವ್ಯಾಲೆಂಟೈನ್ಸ್ ಡೇʼಯಂದು ಪತ್ನಿಯೊಂದಿಗಿರುವ ಫೋಟೋ ಶೇರ್‌ ಮಾಡಿದ ಧವನ್

Posted: 15 Feb 2020 03:33 AM PST

ವ್ಯಾಲೆಂಟೈನ್ಸ್ ಡೇಗೆ ಹಲವು ಸೆಲೆಬ್ರಿಟಿಗಳು ತಮ್ಮ ಜೋಡಿಗಳೊಂದಿಗೆ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಸಹ ಹೊರತಲ್ಲ.

ತಮ್ಮ ಪತ್ನಿ ಆಯಿಷಾ ಧವನ್ ಜತೆ ತೆಗೆಸಿಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಧವನ್ ತೋಳಲ್ಲಿ ಆಯಿಷಾ ಮಲಗಿದ್ದು, ಇದೀಗ ಈ ಫೋಟೋ ಭಾರಿ ವೈರಲ್ ಆಗಿದೆ. ಕ್ಯೂಟ್ ಕಪಲ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇನ್ನು ಗಾಯಾಳುವಾಗಿರುವ ಶಿಖರ್, ನ್ಯೂಜಿಲೆಂಡ್ ತಂಡದಿಂದ ಮಿಸ್ ಆಗಿದ್ದರು. ಇದೀಗ ಗಾಯದಿಂದ ಗುಣಮುಖರಾಗಿದ್ದು, ಇದೀಗ ಕ್ರಿಕೆಟ್‌ ಅಂಗಳದಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದಾರೆ.

View this post on Instagram

Valentine's Day with my one and only 🥰 @aesha.dhawan5

A post shared by Shikhar Dhawan (@shikhardofficial) on

ಸಿಂಗಲ್ ಯುವಕರಿಗೆ ಪುಣೆ ಪೊಲೀಸರಿಂದ ಚಾಯ್‌ – ಡೇಟ್‌

Posted: 15 Feb 2020 02:47 AM PST

ಸಿಂಗಲ್ ಆಗಿದ್ದು, ಪ್ರೇಮಿಗಳ ದಿನದಂದು ಆಚರಿಸಲು ಸಂಗಾತಿ ಇಲ್ಲದವರಿಗೆ ಪುಣೆ ಪೊಲೀಸರು ವಿಶೇಷ ಅವಕಾಶವೊಂದನ್ನು ನೀಡಿದ್ದರು.

ತನ್ನ ಹಾಸ್ಯ ಪ್ರಜ್ಞೆ ಮೂಲಕ ಸಾರ್ವಜನಿಕರಿಗೆ ಶಿಸ್ತು ಮತ್ತು ಸಂಯಮಗಳ ಅರಿವು ಮೂಡಿಸುತ್ತಿರುವ ಪುಣೆ ಪೊಲೀಸ್ ನಗರದ ಜನತೆಗೆ ಚಾಯ್‌-ಡೇಟ್‌ ಅನ್ನು ಆಯೋಜಿಸಿತ್ತು.

ಪ್ರೇಮಿಗಳ ದಿನಾಚರಣೆಗೆ ಏನು ಪ್ಲಾನ್ ಎಂದು ಕೇಳಿದ ಟ್ವಿಟರ್‌ ಬಳಕೆದಾರನೊಬ್ಬ ಈ ಪ್ರಯುಕ್ತ ಮುಂಬೈ ಪೊಲೀಸರೊಂದಿಗೆ ಭೇಟಿಯಾಗುತ್ತಿರುವಿರಾ ಎಂದಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿದ ಪುಣೆ ಪೊಲೀಸ್, "ಲಾಂಗ್ ಡಿಸ್ಟೆನ್ಸ್ ಸಂಬಂಧಗಳು ಹೇಗೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ನಾವು ದೂರ ಇರಬಹುದು, ಆದರೆ ಒಬ್ಬರಿಗೊಬ್ಬರು ಸಂಪರ್ಕದಲ್ಲಿ ಇರುತ್ತೇವೆ” ಎನ್ನುವ ಮೂಲಕ ಸ್ಮಾರ್ಟ್ ಪ್ರತಿಕ್ರಿಯೆ ಕೊಟ್ಟಿದೆ.

ಇದಾದ ಬಳಿಕ ಮತ್ತೊಂದು ಟ್ವೀಟ್‌ನಲ್ಲಿ ನಗರದ ಸಿಂಗಲ್ ಯುವಕರಿಗೆ ಚಾಯ್‌-ಡೇಟ್‌ ಬಗ್ಗೆ ತಿಳಿಸಿದ ಪುಣೆ ಪೊಲೀಸ್, ಫೆಬ್ರವರಿ 14ರ ಮಧ್ಯಾಹ್ನ 3-5ರ ನಡುವೆ ಚಾಯ್ ಪಾರ್ಟಿ ಇಟ್ಟುಕೊಳ್ಳುವುದಾಗಿ ತಿಳಿಸಿತ್ತು.

ಶಾಹೀನ್ ಬಾಗ್ ಪ್ರತಿಭಟನಾನಿರತ ಮಹಿಳೆಯರನ್ನು ಗೌರವಿಸುವ ಅನಿಮೇಷನ್ ವಿಡಿಯೋ ವೈರಲ್

Posted: 15 Feb 2020 02:44 AM PST

ಸಿಎಎ ವಿರುದ್ಧ ಪ್ರತಿಭಟಿಸುತ್ತ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಧರಣಿ ಕುಳಿತಿರುವ ಮಹಿಳೆಯರಿಗೆ ಹಲವು ಕಲಾವಿದರ ಬೆಂಬಲ ಸಿಕ್ಕಿದೆ. ಇದೀಗ ನಿರ್ದೇಶಕಿ ಗೀತಾಂಜಲಿ ರಾವ್ ಕೂಡ ತಮ್ಮದೇ ರೀತಿಯಲ್ಲಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಶಾಹೀನ್ ಬಾಗ್ ಮಹಿಳೆಯರ ಅನಿಮೇಟೆಡ್ ವಿಡಿಯೋ ಅವರು ಮಾಡಿದ್ದು ಅಹಮದ್ ಫೈಜ್ ಬರೆದಿರುವ ಹಾಗೂ ಇಕ್ಬಾಲ್ ಹಾಡಿರುವ ಹಮ್ ದೇಖ್ಹೆಂಗೆ ಹಾಡನ್ನು ಹಿನ್ನೆಲೆಯಾಗಿ ಬಳಸಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು ಹಲವರು ವಿಡಿಯೋವನ್ನು ಹೊಗಳಿದ್ದಾರೆ. ಶಾಹೀನ್ ಬಾಗ್‌ನಲ್ಲಿ ಧರಣಿ ಕುಳಿತ ಮಹಿಳೆಯರ ಮನೋಬಲವನ್ನು ರಾವ್ ಶ್ಲಾಘಿಸಿದ್ದಾರೆ.

ಎಲ್ಲರನ್ನೂ ಮೋಡಿ ಮಾಡಿದೆ ಅಮ್ಮ – ಮಗಳ ಈ ಜೋಡಿ

Posted: 15 Feb 2020 02:44 AM PST

ಕೆಲವು ಹೆಂಗಸರು ಅದೆಷ್ಟು ಯಂಗ್ ಆಗಿಯೇ ಇರುತ್ತಾರೆಂದರೆ, ಬೆಳೆದು ನಿಂತ ತಮ್ಮದೇ ಮಕ್ಕಳ ಜೊತೆಯಲ್ಲಿ ಹುಟ್ಟಿದವರಷ್ಟು ತಾರುಣ್ಯ ಭರಿತರಾಗಿರುತ್ತಾರೆ.

ಇಂಥದ್ದೇ ಒಂದು ನಿದರ್ಶನವೊಂದರಲ್ಲಿ, ಜೋಲೀನ್ ಡಯಝ್ ಎಂಬ 43 ವರ್ಷದ ಮಹಿಳೆ ತನ್ನ 19 ವರ್ಷದ ಮಗಳೊಂದಿಗೆ ಫೋಟೋ ಒಂದರಲ್ಲಿ ಪೋಸ್ ಕೊಟ್ಟಿದ್ದು, ಅಮ್ಮ-ಮಗಳು ನೋಡಲು ಅವಳಿ ಸಹೋದರಿಯರಂತೆ ಕಾಣುತ್ತಿದ್ದಾರೆ.

ತಮ್ಮ ನಡುವೆ 23 ವರ್ಷಗಳ ಅಂತರವಿದ್ದರೂ ಸಹ ಇಬ್ಬರೂ ಗೆಳತಿಯರಂತೆ ಬದುಕುತ್ತಿದ್ದಾರೆ. ಒಟ್ಟಿಗೇ ಇರುವುದರ ಜೊತೆಗೆ ಶಾಪಿಂಗ್, ಟ್ರಾವೆಲಿಂಗ್‌ ಎಲ್ಲವನ್ನೂ ಜೊತೆಯಾಗಿ ಮಾಡುವ ಈ ವಿಶಿಷ್ಟವಾದ ಅಮ್ಮ-ಮಗಳ ಜೋಡಿ ಲೈಫ್‌ಅನ್ನು ಸಖತ್‌ ಎಂಜಾಯ್ ಮಾಡುತ್ತಿದೆ.

ಅಪರೂಪಕ್ಕೊಮ್ಮೆ ಆಲ್ಕೋಹಾಲ್ ಹೊರತುಪಡಿಸಿ ಮಿಕ್ಕಂತೆ ಸಮತೋಲಿತ ಆಹಾರ ಮತ್ತು ಪರಿಣಾಮಕಾರಿ ವಿಶ್ರಾಂತಿಯಿಂದಾಗಿ ತಾನು ಇಷ್ಟೆಲ್ಲಾ ಯಂಗ್ ಆಗಿರಲು ಕಾರಣ ಎಂದು ಸೀಕ್ರೆಟ್‌ ತಿಳಿಸಿದ್ದಾರೆ ಈ ಎವರ್‌ ಗ್ರೀನ್‌ ಮಮ್ಮಿ.

View this post on Instagram

happy holidays❤💚 . . 📷: @christinayoshi

A post shared by Joleen Diaz (@joleendiaz) on

ವಿಮಾನ ಟೇಕ್ ಆಫ್ ಆಗ್ತಿದ್ದಾಗ ರನ್ ವೇಯಲ್ಲಿ ವೇಗವಾಗಿ ಬಂದ ಜೀಪ್

Posted: 15 Feb 2020 02:33 AM PST

पुणे एयरपोर्ट के रनवे पर जीप लेकर आ गया शख्स, पायलट ने पहले ही उड़ान भरकर बचाई कई जान

ಪುಣೆ ವಿಮಾನ ನಿಲ್ದಾಣದಲ್ಲಿ ದೊಡ್ಡ ಅಪಘಾತವೊಂದು ಕೂದಲೆಳೆಯಲ್ಲಿ ತಪ್ಪಿದೆ. ಏರ್ ಇಂಡಿಯಾ ವಿಮಾನ ಟೇಕ್ಆಫ್ ಆಗುವಾಗ  ವ್ಯಕ್ತಿಯೊಬ್ಬ ರನ್ ವೇ ಗೆ ಜೀಪ್ ತೆಗೆದುಕೊಂಡು ಬಂದಿದ್ದಾನೆ. ಈ ಸಮಯದಲ್ಲಿ ಪೈಲಟ್ ತೆಗೆದುಕೊಂಡ ನಿರ್ಧಾರದಿಂದ ಆತನ ಪ್ರಾಣ ಉಳಿದಿದೆ. ಪೈಲೆಟ್ ಬೇಗ ಟೇಕ್ ಆಫ್ ಮಾಡಿದ್ದರಿಂದ ದೊಡ್ಡ ಅಪಘಾತವಾಗಿಲ್ಲ.

ಎ 321 ವಿಮಾನ ಪುಣೆ ವಿಮಾನ ನಿಲ್ದಾಣದಿಂದ ಹೊರಟಾಗ ಈ ಘಟನೆ ನಡೆದಿದೆ. ಈ ಘಟನೆಯ ನಂತ್ರವೂ ವಿಮಾನ ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ರನ್ ವೇಯಲ್ಲಿ ಬರ್ತಿದ್ದ ಜೀಪ್ ನೋಡಿ ಪೈಲೆಟ್ ಶೀಘ್ರ ಹಾರಾಟಕ್ಕೆ ಮುಂದಾಗಿದ್ದರಿಂದ ಅಪಾಯ ತಪ್ಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ವಿಮಾನವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕೆಳ ಭಾಗದಲ್ಲಿ ಗೆರೆ ಕಾಣಿಸುತ್ತಿದೆ. ಮತ್ತ್ಯಾವ ಅಪಾಯವೂ ಆಗಿಲ್ಲವೆಂದು ಮೂಲಗಳು ಹೇಳಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಕೆಲ ಆಟಗಾರರು ಟೀಕಿಸಲು ಹಣ ಪಡೀತಾರೆ: ಮೊಹಮ್ಮದ್ ಶಮಿ

Posted: 15 Feb 2020 02:21 AM PST

Image result for mohammed shami

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಜಸ್ಪ್ರೀತ್ ಬುಮ್ರಾ ಸಾಧನೆ ಉತ್ತಮವಾಗಿಲ್ಲ. ಟಿ 20 ಸರಣಿಯಲ್ಲಿ ಬುಮ್ರಾ ದುಬಾರಿ ಎಂದು ಸಾಭೀತಾಗಿದ್ದರು. ಆದ್ರೆ ಏಕದಿನ ಸರಣಿಯಲ್ಲಿ ಒಂದು ವಿಕೆಟ್ ಕೂಡ ತೆಗೆಯಲಿಲ್ಲ. ಏಕದಿನ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರ ಆಟವನ್ನು ಅನೇಕರು ಪ್ರಶ್ನಿಸಿದ್ದಾರೆ. ಈಗ ಕ್ರಿಕೆಟರ್ ಮೊಹಮ್ಮದ್ ಶಮಿ  ಎಲ್ಲರಿಗೂ ಉತ್ತರ ನೀಡಿದ್ದಾರೆ. ಮೊಹಮ್ಮದ್ ಶಮಿ ದೊಡ್ಡ ಹೇಳಿಕೆ ನೀಡಿದ್ದಾರೆ. ಕೆಲವರು ಟೀಕಿಸಲು ಸಂಬಳ ಪಡೆಯುತ್ತಾರೆ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

ಮೊಹಮ್ಮದ್ ಶಮಿ ಬುಮ್ರಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಹೊರಗೆ ಕುಳಿತುಕೊಂಡು ಹೇಳಿಕೆ ನೀಡುವುದು ಸುಲಭ. ಆದರೆ ಮರಳಿ ಬರುವುದು ಅಷ್ಟು ಸುಲಭವಲ್ಲ. ಇತ್ತೀಚಿನ ದಿನಗಳಲ್ಲಿ ಜನರು ಆಟಗಾರರನ್ನು ಟೀಕಿಸುವ ಮೂಲಕ ಹಣ ಸಂಪಾದಿಸುತ್ತಿದ್ದಾರೆ ಎಂದಿದ್ದಾರೆ.

ಬುಮ್ರಾ ದೇಶಕ್ಕಾಗಿ ಆಡಿದ್ದನ್ನು ಹೇಗೆ ಮರೆಯುತ್ತಿದ್ದೀರಿ. ಜನರು ಬುಮ್ರಾ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ನಿಜ. ಆದರೆ 3 ಅಥವಾ 4 ಏಕದಿನ ಪಂದ್ಯಗಳ ನಂತರ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಸಕಾರಾತ್ಮಕ ವಿಷಯಗಳತ್ತ ಗಮನ ಹರಿಸಬೇಕು ಎಂದು ಶಮಿ ಹೇಳಿದ್ದಾರೆ.

ಬೊಜ್ಜು, ಮಾನಸಿಕ ಒತ್ತಡಕ್ಕೆ ಇದು ಉತ್ತಮ ʼಪರಿಹಾರʼ

Posted: 15 Feb 2020 02:14 AM PST

Image result for ಸೋಂಪು

ಔಷಧೀಯ ಗುಣಗಳನ್ನು ಹೊಂದಿರುವ ಸೋಂಪನ್ನು ಬಹಳ ವರ್ಷಗಳಿಂದ ಬಳಸಲಾಗ್ತಿದೆ. ಆಹಾರದ ನಂತರ ಸೋಂಪು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರ ಹೊರತಾಗಿ ಅನೇಕ ಪ್ರಯೋಜನಗಳಿವೆ.

ಸೋಂಪು ನಮ್ಮ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಸೋಂಪಿನಿಂದ ಮಾಡಿದ ಚಹಾ ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.  ತಲೆಸುತ್ತುವುದು ಮತ್ತು ಅತಿಯಾದ ತಲೆನೋವಿಗೆ ತಕ್ಷಣ ಪರಿಹಾರ ಸಿಗುತ್ತದೆ.

ತೂಕ ಇಳಿಸಿಕೊಳ್ಳಲು ಬಯಸುವ ಜನರು ಗ್ರೀನ್ ಟೀ ಕುಡಿಯುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸಿದರೆ ಗ್ರೀನ್ ಟೀ ಜೊತೆ ಸೋಂಪನ್ನು ಹಾಕಿ ಕುಡಿಯುವುದರಿಂದ ಡಬಲ್ ಪ್ರಯೋಜನವನ್ನು ಪಡೆಯಬಹುದು. ಸೋಂಪಿನ ಚಹಾ ಆಮ್ಲೀಯತೆ, ಅಜೀರ್ಣ ಮತ್ತು ಆ್ಯಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಒಂದು ನಿಮಿಷದಲ್ಲಿ ಮಾರಾಟವಾಯ್ತು 200 ಕೋಟಿ ಮೌಲ್ಯದ ಫೋನ್

Posted: 15 Feb 2020 02:12 AM PST

लोगों में Xiaomi के इस नए 5G स्मार्टफोन की दीवानगी, 1 मिनट में बिक गए 200 करोड़ के फोन

ಶಿಯೋಮಿಯ ಹೊಸ ಫೋನ್ ಮಿ 10 ಬಹಳ ಜನಪ್ರಿಯವಾಗುತ್ತಿದೆ. ಕಂಪನಿಯು ಇತ್ತೀಚೆಗೆ ಈ ಸರಣಿಯ ಮಿ 10 ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ನ ಮೊದಲ ಸೇಲ್ ಫೆಬ್ರವರಿ 14 ರಂದು ನಡೆದಿದೆ. 108 ಮೆಗಾಪಿಕ್ಸೆಲ್ 5 ಜಿ ಫೋನ್‌ನ ಬಗ್ಗೆ ತುಂಬಾ ಕ್ರೇಜ್ ಕಂಡು ಬಂದಿದ್ದು, ಫೋನ್‌ನ ಮೊದಲ ಬಂಚ್ 1 ನಿಮಿಷದಲ್ಲೇ ಮಾರಾಟವಾಗಿದೆ.

ವರದಿ ಪ್ರಕಾರ, ಈ ಫೋನ್ 1 ನಿಮಿಷದಲ್ಲಿ 200 ಕೋಟಿ ರೂಪಾಯಿ ವ್ಯವಹಾರ ಮಾಡಿದೆಯಂತೆ. ಶಿಯೋಮಿಯ ಪ್ರಕಾರ, ಈ ಫೋನ್ Tmall, JD ಡಾಟ್ ಕಾಂ ಮತ್ತು ಶಿಯೋಮಿ ಎಲ್ಲಾ ಮೂರು ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಿದೆ. ಫೋನ್‌ನ ಮುಂದಿನ ಸೇಲ್ ಫೆಬ್ರವರಿ 21 ರಂದು ನಡೆಯಲಿದೆ.

ಶಿಯೋಮಿ ಮಿ 10 ಸ್ಮಾರ್ಟ್‌ಫೋನ್  ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ರೂಪಾಂತರದ ಬೆಲೆ 3,999 ಯುವಾನ್ (ಸುಮಾರು 40,800 ರೂಪಾಯಿ).ಶಿಯೋಮಿ ಮಿ 10 ರ 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ 4,299 ಯುವಾನ್ (ಸುಮಾರು 44,000 ರೂ.) 12 ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ 4,699 ಯುವಾನ್ (ಸುಮಾರು 48,000 ರೂಪಾಯಿ).

ಕುಮಾರ್ ವಿಶ್ವಾಸ್ ಮನೆ ಮುಂದಿದ್ದ ಫಾರ್ಚೂನರ್ ಕಾರ್ ಕದ್ದೊಯ್ದ ಖದೀಮರು

Posted: 15 Feb 2020 02:07 AM PST

कुमार विश्वास को भी चोरों ने नहीं बख्शा, घर के आगे से लग्जरी गाड़ी चोरी

ಕಳ್ಳರು, ಆಮ್ ಆದ್ಮಿ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರು ಹಾಗೂ ಕವಿ ಕುಮಾರ್ ವಿಶ್ವಾಸ್ ಅವ್ರನ್ನೂ ಬಿಟ್ಟಿಲ್ಲ. ಕುಮಾರ್ ವಿಶ್ವಾಸ್ ಐಷಾರಾಮಿ ಕಾರು ಕಳ್ಳತನವಾಗಿದೆ. ಗಾಜಿಯಾಬಾದ್‌ನ ಇಂದಿರಪುರಂನಲ್ಲಿರುವ ಕುಮಾರ್ ವಿಶ್ವಾಸ್ ಅವರ ನಿವಾಸದ ಹೊರಗೆ ನಿಲ್ಲಿಸಿದ್ದ ಫಾರ್ಚೂನರ್ ಕಳ್ಳತನವಾಗಿದೆ.

ಯುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾರನ್ನು ಹುಡುಕಲು ಹಲವಾರು ತಂಡಗಳನ್ನು ರಚಿಸಲಾಗಿದೆ. ಕುಮಾರ್ ವಿಶ್ವಾಸ್  ವ್ಯವಸ್ಥಾಪಕರು ಕಾರು ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರದೇಶದ ಸಿಸಿ ಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಐಪಿ ಪ್ರಕರಣವಾದ ಕಾರಣ ಆದಷ್ಟು ಬೇಗ ವಾಹನ ಪತ್ತೆಕಾರ್ಯ ನಡೆಸುವ ಒತ್ತಡದಲ್ಲಿದ್ದೇವೆಂದು ಪೊಲೀಸರು ಹೇಳಿದ್ದಾರೆ. ಈವರೆಗೂ ಕಳ್ಳರ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.

ತನ್ನ ಮಕ್ಕಳ ಪ್ಲೇ ರೂಂ ಪರಿಚಯಿಸಿದ ಕಿಮ್

Posted: 15 Feb 2020 01:20 AM PST

ರಿಯಾಲಿಟಿ ಟಿವಿ ಸ್ಟಾರ್‌ ಕಿಮ್ ಕರ್ದಶಿಯನ್ ತನ್ನ ಮನೆಯ ಅಡುಗೆ ಮನೆ ಹಾಗೂ ಫ್ರಿಡ್ಜ್‌ನ ಟೂರ್‌ ನೀಡಿದ್ದನ್ನು ನೀವೆಲ್ಲಾ ನೋಡಿರಬಹುದು.

ಇದೀಗ ತನ್ನ ಮಕ್ಕಳ ಆಟವಾಡುವ ಕೋಣೆಯನ್ನು ಪರಿಚಯಿಸುವ ಮೂಲಕ ಮತ್ತಷ್ಟು ಅಚ್ಚರಿ ಮೂಡಿಸುವುದನ್ನು ಮುಂದುವರೆಸಿದ್ದಾಳೆ ಕಿಮ್.

“ಇದು ನನ್ನ ಮಕ್ಕಳು ಆಟವಾಡುವ ಜಾಗ,” ಎಂದು ತನ್ನ ಮಕ್ಕಳ ಪ್ಲೇ ರೂಂ ಚಿತ್ರಗಳನ್ನು ಕಿಮ್ ಇನ್‌ಸ್ಟಾಗ್ರಾಂನಲ್ಲಿ ಪರಿಚಯಿಸಿದ್ದಾಳೆ.

ತನ್ನ ನಾಲ್ಕು ಮಕ್ಕಳಿಗೆ ಆಟವಾಡಲು ಹಾಗೂ ತಾನು & ತನ್ನ ಪತಿಗೆ ಪ್ರತ್ಯೇಕ ಜಾಗಗಳನ್ನು ಈ ಕೋಣೆ ಹೊಂದಿದೆ.

ಟೆಡ್ಡಿ ಬೇರ್‌ಗಳು, ಆಟದ ಕಾರುಗಳು, ಗೊಂಬೆಗಳು ಹಾಗೂ ಲೆಗೋ ಸೆಟ್‌ಗಳನ್ನು ಹೊಂದಿರುವ ಈ ಕೋಣೆಯಲ್ಲಿ ಪ್ರೊಜೆಕ್ಟರ್‌ಗಳು, ಮೈಕ್ರೋಫೋನ್‌ಗಳು, ಗಿಟಾರ್‌ಗಳು ಹಾಗೂ ಡ್ರಮ್ ಕಿಟ್‌ಗಳು ಸೇರಿದಂತೆ ಬೇಕಾದ/ಬೇಡವಾದ ಎಲ್ಲ ಆಟಿಕೆಗಳೂ ಇವೆ.

View this post on Instagram

⛈ StormiWorld ⛈

A post shared by Kim Kardashian West (@kimkardashian) on

ಪ್ರೀತಿಗೆ ಅಡ್ಡಿಯಾಗಿದ್ದ ತಾಯಿಯನ್ನೇ ಮುಗಿಸಿದ್ಲು ಅಪ್ರಾಪ್ತೆ

Posted: 15 Feb 2020 12:43 AM PST

ಗಾಜಿಯಾಬಾದ್‌ನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದ ಅಪ್ರಾಪ್ತ ಮಗಳೊಬ್ಬಳು ತನ್ನ ತಾಯಿ ಹತ್ಯೆಗೈದಿದ್ದಾಳೆ.

ದೆಹಲಿಯ ಬ್ರಿಜ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡ್ತಿದ್ದ ಮುಖ್ಯ ಕಾನ್ಸ್ಟೇಬಲ್ ಶಶಿ ಶುಕ್ಲಾರನ್ನು ಅಪ್ರಾಪ್ತ ಮಗಳು ಹತ್ಯೆಗೈದಿದ್ದಾಳೆ. ತಾಯಿ, ಪ್ರೀತಿಗೆ ಅಡ್ಡಿಯಾಗಿದ್ದೇ ಈ ಘಟನೆಗೆ ಕಾರಣವಾಗಿದೆ.

ಹುಡುಗನ ಸಹವಾಸ ಬಿಡುವಂತೆ ತಾಯಿ, ಮಗಳಿಗೆ ಆಗಾಗ ಹೇಳ್ತಿದ್ದಳಂತೆ. ಇದು ಮಗಳ ಕೋಪಕ್ಕೆ ಕಾರಣವಾಗಿತ್ತಂತೆ. ಪ್ರೀತಿಗೆ ಅಡ್ಡಿಯಾಗ್ತಿದ್ದ ತಾಯಿಯನ್ನು ಮುಗಿಸಲು ಪ್ಲಾನ್ ಮಾಡಿ ಹತ್ಯೆ ಮಾಡಿದ್ದಾಳೆ. ಪ್ರಕರಣದ ವಿಚಾರಣೆ ವೇಳೆ ಮಗಳು ಬಾಯ್ಬಿಟ್ಟಿದ್ದಾಳಂತೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಗಳು ಹಾಗೂ ಆಕೆ ಪ್ರೇಮಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ತಿರುಪತಿ ಭಕ್ತರಿಗೊಂದು ಖುಷಿ ಸುದ್ದಿ

Posted: 15 Feb 2020 12:28 AM PST

IRCTC दे रहा है सस्ते में तिरुपति बालाजी के दर्शन का मौका, सिर्फ इतने रुपये होंगे खर्च

ಭಾರತೀಯ ರೈಲ್ವೆಗೆ ಟಿಕೆಟ್ ಬುಕಿಂಗ್ ಸೌಲಭ್ಯಗಳನ್ನು ಒದಗಿಸುವ ಐಆರ್‌ಸಿಟಿಸಿ ತಿರುಪತಿಗೆ ಆಂಧ್ರಪ್ರದೇಶದ ಟಿಕೆಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಇದಕ್ಕಾಗಿ ಐಆರ್‌ಸಿಟಿಸಿ ಆಕರ್ಷಕ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಈ ಪ್ಯಾಕೇಜ್ ಅಡಿಯಲ್ಲಿ  ತಿರುಪತಿ ನಗರದ ಸಮೀಪ ತಿರುಚನೂರಿನಲ್ಲಿರುವ ಪದ್ಮಾವತಿ ದೇವಿಯನ್ನು ನೋಡಲು ಭಕ್ತರಿಗೆ ಅವಕಾಶ ಸಿಗುತ್ತಿದೆ.

ಐಆರ್‌ಸಿಟಿಸಿ ಈ ಪ್ರವಾಸ ಪ್ಯಾಕೇಜ್‌ಗೆ ‘ತಿರುಪತಿ ದೇವಸ್ತಾನಂ’ ಎಂದು ಹೆಸರಿಟ್ಟಿದೆ. ಭಗವಾನ್ ಬಾಲಾಜಿ, ಪದ್ಮಾವತಿ ದೇವಸ್ಥಾನ ಮತ್ತು ಕಾಳಹಸ್ತಿ ದೇವಾಲಯವನ್ನು ವೀಕ್ಷಿಸುವ ಅವಕಾಶವಿದೆ. ಫೆಬ್ರವರಿ 22, ಫೆಬ್ರವರಿ 29, ಮಾರ್ಚ್ 7, ಮಾರ್ಚ್ 14 ಮತ್ತು ಮಾರ್ಚ್ 21 ಕ್ಕೆ ಪ್ರವಾಸ ನಿಗದಿಯಾಗಿದೆ. ಭಕ್ತರಿಗೆ ಉತ್ತಮ ಹೊಟೇಲ್ ನಲ್ಲಿ ವಸತಿ ಸೌಲಭ್ಯವನ್ನೂ ನೀಡಲಾಗ್ತಿದೆ.

ಎಸಿ ರೈಲಿನಲ್ಲಿ ಚೆನ್ನೈ-ತಿರುಪತಿ-ಚೆನ್ನೈ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗುವುದು. ತಿರುಪತಿಯ ಉತ್ತಮ ಹೋಟೆಲ್‌ನಲ್ಲಿ ರಾತ್ರಿ ತಂಗಬಹುದು. ಈ ಪ್ರವಾಸಕ್ಕಾಗಿ ಪ್ರಯಾಣ ವಿಮೆ ಸಹ ಲಭ್ಯವಿರುತ್ತದೆ.

ಪತಿಯ ಐಪ್ಯಾಡ್ ಪಾಸ್‌ ವರ್ಡ್ ಬದಲಿಸಿದ ಹಿಂದಿನ ಕಾರಣ ಬಹಿರಂಗಪಡಿಸಿದ ನಟಿ…!

Posted: 14 Feb 2020 11:56 PM PST

ಸಾಂಸಾರಿಕ ಜೀವನವೇ ಹಾಗೆ. ಸಂಗಾತಿ ಹಾಗೂ ಮಕ್ಕಳಿಗೆ ಸಾಕಷ್ಟು ಗಮನ ನೀಡುವ ಮೂಲಕ ಅವರನ್ನು ಖುಷಿಯಾಗಿ ನೋಡಿಕೊಳ್ಳಲು ಬೇಕಾದ ಟ್ರಿಕ್‌ಗಳು ಹಾಗೂ ಸಂಯಮವನ್ನು ಬೆಳೆಸಿಕೊಂಡರೆ ಯಶಸ್ವಿ ಜೀವನ ಸಾಗಿಸಬಹುದು.

ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಪತ್ನಿ ಟ್ವಿಂಕಲ್ ಖನ್ನಾ ಇದೇ ವಿಚಾರವಾಗಿ ತಮ್ಮ ಫ್ಯಾಮಿಲಿಯಲ್ಲಿ ನಡೆದ ನಿದರ್ಶನವೊಂದನ್ನು ವಿವರಿಸಿದ್ದಾರೆ.

ತಮ್ಮ ಪುತ್ರಿಯ ಕರಾಟೆ ಪ್ರಾಕ್ಟೀಸ್‌‌ ಮೇಲೆ ತಮ್ಮ ಪತಿ ಅಕ್ಷಯ್‌ ಸಾಕಷ್ಟು ಗಮನ ನೀಡದೇ ಇದ್ದ ವೇಳೆ, ತಾವೇನು ಮಾಡಿದೆ ಟ್ವಿಂಕಲ್ ತಿಳಿಸಿದ್ದಾರೆ.

“ನಾನು ಮನೆಗೆ ಮರಳಿ ಪತಿಯ ಐಪ್ಯಾಡ್‌ ಪಾಸ್ ವರ್ಡ್ ಬದಲಿಸಿದೆ. ಆತ ಪದೇ ಪದೇ ತನ್ನ ಡಿವೈಸ್‌ನ ಪಾಸ್‌ ವರ್ಡ್‌ಅನ್ನು ಎಂಟರ್‌ ಮಾಡುತ್ತಿದುದ್ದನ್ನು ಕಂಡು ಅಂದು ರಾತ್ರಿ ನನಗಾದ ಸಂತಸವನ್ನು ಹಂಚಿಕೊಳ್ಳುವುದು ಅಸಾಧ್ಯ” ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಹೇಗೆ ಪ್ರತೀಕಾರ ತೀರಿಸಿಕೊಳ್ಳಬಹುದು ಎಂದು ತಮ್ಮ ಫಾಲೋವರ್‌ಗಳಿಂದ ಸಲಹೆಗಳನ್ನು ಕೇಳಿದ್ದಾರೆ ಅಕ್ಷಯ್ ಕುಮಾರ್‌.

ಟೈರ್‌ ನಲ್ಲಿ ಸಿಕ್ಕಿಹಾಕಿಕೊಂಡ ಮೊಸಳೆಯನ್ನು ಕಾಪಾಡಲು ಆಸ್ಟ್ರೇಲಿಯಾದಿಂದ ಬಂದ ತಜ್ಞ

Posted: 14 Feb 2020 11:53 PM PST

ಇಂಡೋನೇಷಿಯಾದಲ್ಲಿ ದೊಡ್ಡ ಗಾತ್ರದ ಮೊಸಳೆಯ ಕತ್ತಿಗೆ ಟೈರ್ ಸಿಕ್ಕಿಹಾಕಿಕೊಂಡಿದ್ದು ಅದು ಇತ್ತೀಚಿಗೆ ಸುದ್ದಿಯಾಗಿತ್ತು. ಅಲ್ಲಿನ ವನ್ಯ ಜೀವಿ ರಕ್ಷಣಾ ಸಂಸ್ಥೆ ಅದನ್ನು ಹಿಡಿದುಕೊಟ್ಟವರಿಗೆ ಬಹುಮಾನ ಕೂಡ ಘೋಷಿಸಿತ್ತು. ನಂತರ ಅದನ್ನು ವಾಪಸ್ ಪಡೆದಿತ್ತು.

ಇದೀಗ ಆ ಮೊಸಳೆಯನ್ನು ಕಾಪಾಡಲು ಆಸ್ಟ್ರೇಲಿಯಾದ ಮೊಸಳೆ ತಜ್ಞ ಮ್ಯಾಟ್ ರೈಟ್ ಅವರು ಸೂಲಾವೇಶಿ ದ್ವೀಪಕ್ಕೆ ಬಂದಿದ್ದಾರೆ.

ಸದ್ಯಕ್ಕೆ ಚಿಕ್ಕ ಮೊಸಳೆ ಹಿಡಿದು ಅವರು ಪ್ರಯೋಗ ಮಾಡುತ್ತಿದ್ದು ಅದನ್ನು ಹಿಡಿಯಲು ಕಷ್ಟವಾಗಬಹುದು ಎನ್ನುತ್ತಿದ್ದಾರೆ.

ಅವರ ಜೊತೆ ಕ್ರಿಸ್ ವಿಲ್ಸನ್ ಕೂಡ ಸೇರುತ್ತಿದ್ದು ಸ್ಥಳೀಯ ರಕ್ಷಣಾ ಸಂಸ್ಥೆಯ ಜೊತೆ ಕೈಜೋಡಿಸಿ ಮೊಸಳೆ ಹಿಡಿಯಲು ಪ್ರಯತ್ನ ಪಡುತ್ತಾರಂತೆ. ಈ ಮೊಸಳೆ 13 ಅಡಿ ಉದ್ದ ಇದ್ದು ಮನುಷ್ಯರನ್ನು ಕಂಡ ಕ್ಷಣ ನೀರಿನೊಳಗೆ ಹೋಗುತ್ತದಂತೆ.

ಹಾಗೂ ಇದನ್ನು ಹಿಡಿಯುವ ಕಾರ್ಯ ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದು ಮೊಸಳೆ ಕಾಣುವುದೇ ಕಷ್ಟಕರವಾಗಿದೆಯಂತೆ.

ಆದೇಶ ನೀಡುತ್ತಿದ್ದ ವೇಳೆ ಕುಸಿದ ನ್ಯಾಯಾಧೀಶೆ

Posted: 14 Feb 2020 11:04 PM PST

ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವೇಳೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಆರ್‌. ಭಾನುಮತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಹಂತಕರನ್ನು ಪ್ರತ್ಯೇಕವಾಗಿ ನೇಣಿಗೆ ಏರಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರದ ವಾದವನ್ನು ಆಲಿಸುತ್ತಿದ್ದ ವೇಳೆ ಕುಸಿದ ಭಾನುಮತಿರನ್ನು ಕೂಡಲೇ ಅವರ ಚೇಂಬರ್‌ಗೆ ಗಾಲಿ ಕುರ್ಚಿಯಲ್ಲಿ ಕೊಂಡೊಯ್ಯಲಾಗಿದೆ.

ಪೀಠದಲ್ಲಿ ಇತರ ನ್ಯಾಯಾಧೀಶರಾಗಿ ಎ.ಎಸ್. ಭೋಪಣ್ಣ ಹಾಗು ಅಶೋಕ್ ಭೂಷಣ್ ಸಹ ಇದ್ದರು.

ಇದೇ ವೇಳೆ, ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದನ್ನು ಪ್ರಶ್ನಿಸಿದ್ದ ಆಪಾದಿತರಲ್ಲಿ ಒಬ್ಬನಾದ ವಿನಯ್ ಶರ್ಮ ಮನವಿಯನ್ನು ಸುಪ್ರೀಂ ಕೋರ್ಟ್ ಪೀಠ ತಿರಸ್ಕರಿಸಿದೆ.

ಹುಲಿ ಫೋಟೋ‌ ಸೆರೆಹಿಡಿದು ಸಂಭ್ರಮಿಸಿದ ಧೋನಿ

Posted: 14 Feb 2020 11:03 PM PST

ಭಾರತ ಕ್ರಿಕೆಟ್ ತಂಡದ ಸೂಪರ್ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಇದೀಗ ಐಪಿಎಲ್‌ನಲ್ಲಿ ಕಮಾಲ್ ಮಾಡಲು ಸಜ್ಜಾಗುತ್ತಿದ್ದಾರೆ. ಅದಕ್ಕೂ ಮೊದಲು ಅವರು ಶೇರ್ ಮಾಡಿರುವ ಪೋಟೋ‌ ಒಂದು ವೈರಲ್ ಆಗಿದೆ.

ಹೌದು ಕ್ರಿಕೆಟ್ ಅಂಗಳದಿಂದ ದೂರವಿರುವ‌ ಧೋನಿ ಕೆಲ ದಿನಗಳ‌‌ ಹಿಂದೆ ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹುಲಿಯೊಂದರ ಫೋಟೋ ತೆಗೆದಿದ್ದು, ಇದೀಗ ಭಾರಿ ಸದ್ದು ಮಾಡುತ್ತಿದೆ.

ಉದ್ಯಾನವನದಲ್ಲಿ ಸೆರೆಸಿಕ್ಕ ಹುಲಿಯೊಂದರ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಅವರು, ನೀವೇ ಸ್ವಂತಕ್ಕೆ ಹುಲಿಯೊಂದನ್ನು ಹುಡುಕಿದಾಗ ಕೆಲ ಕ್ಲಿಕ್ ಎಂದು ಹಾಕಿದ್ದಾರೆ.

ಹಾಕಿದ ಕೆಲ ಕ್ಷಣದಲ್ಲಿ ಭಾರಿ ವೈರಲ್ ಆಗಿ, ಅಭಿಮಾನಿಯೊಬ್ಬ ಹುಲಿಯನ್ನು ಸೆರೆ ಹಿಡಿದ ಹುಲಿ ಎಂದು ಕಾಮೆಂಟ್ ಮಾಡಿದ್ದಾನೆ.

ಬಿಸಿಸಿಐ ಧೋನಿ ಅವರನ್ನು ಗುತ್ತಿಗೆಯಿಂದ ಕೈಬಿಟ್ಟರೂ, ಇದೀಗ ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

 

ʼಆಧಾರ್ʼ ಬಳಸಬೇಕೆಂದ್ರೆ ಈ ನಂಬರ್ ಗೊತ್ತಿರಬೇಕು

Posted: 14 Feb 2020 10:58 PM PST

Image result for e-aadhaar-or-online-aadhaar-card-downloading-process-masked-aadhaar-know-stepwise-process-in-detail

ಆಧಾರ್ ಕಾರ್ಡ್‌ನ ಎಲೆಕ್ಟ್ರಾನಿಕ್ ನಕಲನ್ನು ಸುಲಭವಾಗಿ ಪಡೆಯಬಹುದು. ಕೇವಲ 2 ರಿಂದ 3 ಹಂತಗಳಲ್ಲಿ ಯುಐಡಿಎಐನ ವೆಬ್‌ಸೈಟ್‌ನಿಂದ ಸುಲಭವಾಗಿ ಆಧಾರ್ ಡೌನ್‌ಲೋಡ್ ಮಾಡಬಹುದು. ಆಧಾರ್‌ನ ಎಲೆಕ್ಟ್ರಾನಿಕ್ ನಕಲನ್ನು ಪಡೆಯಲು ಪಾಸ್ವರ್ಡ್ ಅಗತ್ಯವಿದೆ.

ಆಧಾರ್ ಕಾರ್ಡ್‌ನಂತೆ  ಅದರ ಎಲೆಕ್ಟ್ರಾನಿಕ್ ನಕಲು ಸಹ ಬಳಕೆಗೆ ಮಾನ್ಯವಾಗಿದೆ. ಆದಾಗ್ಯೂ, ಆಧಾರ್‌ನ ಎಲೆಕ್ಟ್ರಾನಿಕ್ ನಕಲನ್ನು ಡೌನ್ಲೋಡ್ ಮಾಡುವ ಮೊದಲು ಮತ್ತು ಡೌನ್ಲೋಡ್ ಮಾಡಿದ ನಂತರ ಕೆಲ ವಿಷ್ಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಡೌನ್ಲೋಡ್ ಮಾಡಿದ ನಂತರವೂ ನಿಮಗೆ ಪಾಸ್ವರ್ಡ್ ತಿಳಿದಿಲ್ಲದಿದ್ದರೆ ಆಧಾರ್ ನಕಲನ್ನು ತೆರೆಯಲು ಸಾಧ್ಯವಿಲ್ಲ. ಹಾಗೆ ಅದನ್ನು ಬಳಸಲು ಸಾಧ್ಯವಿಲ್ಲ.

ಯುಐಡಿಎಐನ ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡುವ ಮೂಲಕ ಆಧಾರನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಇದಕ್ಕಾಗಿ ವೆಬ್ಸೈಟ್‌ಗೆ ಭೇಟಿ ನೀಡಿದ ನಂತರ  ಮೈ ಆಧಾರ್ ವಿಭಾಗಕ್ಕೆ ಹೋಗಬೇಕು. ಅಲ್ಲಿ “ಆಧಾರ್ ಡೌನ್ಲೋಡ್” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ದಾಖಲಾತಿ ಸಂಖ್ಯೆ, ಪೂರ್ಣ ಹೆಸರು ಮತ್ತು ಪಿನ್ ಕೋಡ್ ನೀಡುವ ಮೂಲಕ ಆಧಾರ್ ಪಡೆಯಬಹದು. ನಿಮ್ಮ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಬೇಕು. ಈ ಆಧಾರ್ ಪಿಡಿಎಫ್ ರೂಪದಲ್ಲಿರುತ್ತದೆ.

28 ಅಂಕಿಯ ಆಧಾರ್ ದಾಖಲಾತಿ ಸಂಖ್ಯೆ ನೆನಪಿಲ್ಲವೆಂದ್ರೆ ಆಧಾರ್ ನಂಬರ್ ಹಾಕಿ ಡೌನ್ಲೋಡ್ ಮಾಡಬಹುದು. ಆನ್ಲೈನ್ ಆಧಾರ್ ಡೌನ್ಲೋಡ್ ಮಾಡಿದ ನಂತರ ಅದು ಪಿಡಿಎಫ್ ರೂಪದಲ್ಲಿರುತ್ತದೆ. ಅದನ್ನು ತೆರೆಯಲು ಪಾಸ್ವರ್ಡ್ ಅಗತ್ಯವಿದೆ. ಪಿಡಿಎಫ್ ರೂಪದಲ್ಲಿ ಆಧಾರ್‌ನ ಎಲೆಕ್ಟ್ರಾನಿಕ್ ನಕಲನ್ನು ತೆರೆಯಲು, ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ಕ್ಯಾಪಿಟಲ್ ನಲ್ಲಿ ಮತ್ತು ಹುಟ್ಟಿದ ವರ್ಷವನ್ನು ಯಾವುದೇ ಸ್ಪೇಸ್ ಇಲ್ಲದೆ ಟೈಪ್ ಮಾಡಬೇಕು.

ಈ ಕೆಲಸ ಮಾಡದೆ ಹೋದಲ್ಲಿ 45 ದಿನಗಳಲ್ಲಿ ರದ್ದಾಗಲಿದೆ ಪಾನ್ ಕಾರ್ಡ್

Posted: 14 Feb 2020 10:45 PM PST

ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್‌ ಲಿಂಕ್ ಕಡ್ಡಾಯವಾಗಿದೆ. ದೇಶದಲ್ಲಿ 30.75 ಕೋಟಿಗೂ ಹೆಚ್ಚು ಮಂದಿ  ಪಾನ್ ಕಾರ್ಡ್ ಹೊಂದಿದ್ದಾರೆ. ಆದರೆ  ಜನವರಿ 27, 2020 ರ ಹೊತ್ತಿಗೆ  17.58 ಕೋಟಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿಲ್ಲ. ಇದರ ಗಡುವು ಮಾರ್ಚ್ 31ಕ್ಕೆ ಕೊನೆಯಾಗಲಿದೆ. ಈ ವರ್ಷದ ಮಾರ್ಚ್ 31 ರವರೆಗೆ  ಆಧಾರ್ – ಪಾನ್ ಲಿಂಕ್ ಮಾಡುವುದು ಕಡ್ಡಾಯ.

ಒಂದು ವೇಳೆ ಪಾನ್ – ಆಧಾರ್ ಲಿಂಕ್ ಆಗದೆ ಹೋದಲ್ಲಿ ಪಾನ್ ಕಾರ್ಡ್‌ಗೆ ಸಂಬಂಧಿಸಿದ ಕೆಲವು ಸೇವೆಗಳು ನಿಮಗೆ ಲಭ್ಯವಾಗುವುದಿಲ್ಲ. ಪಾನ್ ಕಾರ್ಡ್ ರದ್ದಾಗುವ ಸಾಧ್ಯತೆಯೂ ಇದೆ. ಪಾನ್-ಆಧಾರ್ ಲಿಂಕ್ ಗಡುವಿನ ದಿನಾಂಕವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಈಗ ಇದರ ಕೊನೆಯ ದಿನಾಂಕ ಮಾರ್ಚ್ 31 . ಇದರ ನಂತರ ಪಾನ್ ಕಾರ್ಯ ನಿರ್ವಹಿಸುವುದಿಲ್ಲ.

ಇನ್ನು ಕೆಲವೇ ದಿನ ಬಾಕಿಯಿದ್ದು ಅಷ್ಟರಲ್ಲಿ ಪಾನ್ ಜೊತೆ ಆಧಾರ್ ಲಿಂಕ್ ಮಾಡಿ.ಈಗಾಗಲೇ ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಎಚ್ಚರಿಕೆ ನಂತ್ರವೂ ಜನರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.

ನಟಿಯನ್ನು ಹತ್ಯೆಗೈದು ಶವ ಸುಟ್ಟ ಪತಿ

Posted: 14 Feb 2020 10:18 PM PST

ಟಿವಿ ನಟಿ ಹತ್ಯೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಪತಿ ಮತ್ತು ಸ್ನೇಹಿತ ಸೇರಿ ನಟಿಯನ್ನು ಹತ್ಯೆಗೈದಿದ್ದಾರೆ. ಪಂಜಾಬ್ ಮೂಲದ 29 ವರ್ಷದ ಟಿವಿ ನಟಿ ಅನಿತಾ ಸಿಂಗ್ ಹತ್ಯೆಗೊಳಗಾದ ನಟಿ. ಪತಿ ರವೀಂದರ್ ಪಾಲ್ ಸಿಂಗ್ ಹಾಗೂ ಆತನ ಸ್ನೇಹಿತ ಸೇರಿ ಹತ್ಯೆಗೈದಿದ್ದಾರೆ.

ನಟಿ ಅನಿತಾ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆ ಮೇಲೆ ಪತಿ ಈ ಕೃತ್ಯವೆಸಗಿದ್ದಾನೆ. ಪತ್ನಿ ಹತ್ಯೆ ನಂತ್ರ ಆಕೆ ಶವವನ್ನು ಸುಟ್ಟು ಪ್ರಕರಣ ಮುಚ್ಚುವ ಯತ್ನ ನಡೆಸಿದ್ದಾನೆ. ಸ್ನೇಹಿತ ಕುಲ್ದೀಪ್ ಚಿತ್ರಜಗತ್ತಿನ ಅನೇಕರ ಪರಿಚಯ ಹೊಂದಿದ್ದಾನೆಂದು ಹೇಳಿ ಪತ್ನಿಯನ್ನು ಆತನ ಬಳಿ ಕರೆದೊಯ್ದಿದ್ದನಂತೆ ರವೀಂದರ್.

ಕತ್ತು ಹಿಸುಕಿ ಹತ್ಯೆಗೈದು ನಂತ್ರ ಬೆಂಕಿ ಹಚ್ಚಿದ್ದಾರೆ. ಅರೆ ಸುಟ್ಟ ಮೃತದೇಹದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರಣೆ ವೇಳೆ ಸತ್ಯ ಬಹಿರಂಗವಾಗಿದೆ.

 

No comments:

Post a Comment

Gameforumer QR Scan

Gameforumer QR Scan
Gameforumer QR Scan