Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Thursday, January 9, 2020

Kannada News | Karnataka News | India News

Kannada News | Karnataka News | India News


300 ವರ್ಷಗಳ ಹಳೆಯ ಬನ್ನಿ ಮರ ಯುಗಾಂತ್ಯ

Posted: 09 Jan 2020 08:12 AM PST

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ 300 ವರ್ಷಗಳ ಹಳೆಯ ಬನ್ನಿ ಮರ ಇತ್ತು. ಆದರೆ ಈ ಮರ ಇದೀಗ ನೆಲಕ್ಕುರುಳಿದೆ.

ಮಳೆ ಗಾಳಿಗೂ ಜಗ್ಗದೇ ಇದ್ದ ಶಮಿ ವೃಕ್ಷ ಇದೀಗ ಇದ್ದಕ್ಕಿದ್ದಂತೆ ಧರೆಗುರುಳಿದ್ದು, ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಮರ ಪೇಜಾವರ ಶ್ರೀ ಕೃಷ್ಣೈಕ್ಯರಾದ 10 ದಿನಗಳಲ್ಲಿಯೇ ನೆಲಕ್ಕುರುಳಿದೆ. ಹೀಗಾಗಿ ಶ್ರೀಗಳ ಸಾವಿನ ಬೆನ್ನಲ್ಲೇ ಮರ ಕೂಡ ಬುಡ ಸಮೇತ ಧರೆಗುರುಳಿದರಿಂದ ಶ್ರೀಗಳ ಸಾವಿಗೂ ಇದಕ್ಕೂ ತಾಳೆ ಹಾಕಲಾಗುತ್ತಿದೆ.

ಎರಡು ಮಹಾನ್ ಶಕ್ತಿಗಳು ಯುಗಾಂತ್ಯವಾಗಿವೆ ಎಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ. ಪ್ರತಿ ಬಾರಿ ವಿಜಯದಶಮಿ ಸಮಯದಲ್ಲಿ ಈ ಮರದ ಬಳಿ ಗ್ರಾಮಸ್ಥರು ಅಂಬು ಹೊಡೆಯುತ್ತಿದ್ದರಂತೆ.

‘ಒಂಬತ್ತನೇ ದಿಕ್ಕು’ ಸಿನಿಮಾಗೆ ಹಿನ್ನೆಲೆ ಧ್ವನಿ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted: 09 Jan 2020 08:01 AM PST

ನಟ ಲೂಸ್ ಮಾದ ಯೋಗಿ ಅಭಿನಯದ ಒಂಬತ್ತನೇ ದಿಕ್ಕು ಎಂಬ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಿನ್ನೆಲೆ ದ್ವನಿ ನೀಡಿದ್ದಾರೆ. ಈ ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದು, ಸಿನಿಮಾ ನಿರೀಕ್ಷೆ ಹೆಚ್ಚಿಸುತ್ತಿದೆ.

ಇದೇ ತಿಂಗಳು 15ಕ್ಕೆ ಸಿನಿಮಾ ಟೀಸರ್ ಬಿಡುಗಡೆಯಾಗುತ್ತಿದೆ. ಲೂಸ್ ಮಾದ ಯೋಗಿ ಅವರಿಗೆ ದಾವಣಗೆರೆ ಬೆಡಗಿ ಅದಿತಿ ಪ್ರಭುದೇವ್ ನಾಯಕಿಯಾಗಿ  ನಟಿಸಿದ್ದಾರೆ. ಇದೊಂದು ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗುತ್ತಿದೆ.

ಬ್ರೇಕಿಂಗ್ ನ್ಯೂಸ್: JNU ಉಪ ಕುಲಪತಿ ವಜಾಗೊಳಿಸಲು ಹಿರಿಯ ಬಿಜೆಪಿ ನಾಯಕ ಆಗ್ರಹ

Posted: 09 Jan 2020 07:54 AM PST

ಜೆ ಎನ್ ಯು ವಿವಿಯಲ್ಲಿ ಶುಲ್ಕ ಹೆಚ್ಚಳಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಜೆ ಎನ್ ಯು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಶುಲ್ಕ ಹೆಚ್ಚಳ ಮಾಡಬೇಡಿ ಎಂದು ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ವಿಚಾರವಾಗಿ ಇದೀಗ ಬಿಜೆಪಿ ನಾಯಕ ಉಪಕುಲಪತಿ ಅವರ ವಜಾಗೆ ಆಗ್ರಹಿಸಿದ್ದಾರೆ.

ಹೌದು, ಜೆಎನ್‌ಯು ವಿವಿ ಆವರಣದಲ್ಲಿ ಶುಲ್ಕ ಹೆಚ್ಚಳ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ 50 ಜನರ ಗುಂಪೊಂದು ವಿವಿ ಆವರಣಕ್ಕೆ ಪ್ರವೇಶ ಮಾಡಿ ಮನಸೋ ಇಚ್ಚೆ ಹಲ್ಲೆ ನಡೆಸಿತ್ತು. ಈ ಹಲ್ಲೆ ಖಂಡಿಸಿ ಪ್ರತಿಭಟನೆಯ ಕಾವು ಜೋರಾಗಿತ್ತು. ಇನ್ನು ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಕೂಡ ಬೀದಿಗಿಳಿದಿದ್ದರು.

ಆದರೆ ಇದೀಗ ವಿವಿಯ ಉಪಕುಲಪತಿ ಶುಲ್ಕ ಹೆಚ್ಚಳ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿದ್ದಾರೆ ಹಾಗೂ ಶುಲ್ಕ ಹೆಚ್ಚಳ ವಿಷಯದಲ್ಲಿ ಅವರ ವರ್ತನೆ ಶೋಚನೀಯ ಹಾಗಾಗಿ ಆ ಸ್ಥಾನದಿಂದ ಅವರನ್ನು ವಜಾ ಮಾಡಿ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಮಾನವ ಸಂಪನ್ಮೂಲ ಮಾಜಿ ಸಚಿವ ಮುರಳಿ ಮನೋಹರ್ ಜೋಶಿ ಟ್ವಿಟ್ ಮಾಡಿದ್ದಾರೆ.

— Murli Manohar Joshi (@drmmjoshibjp) January 9, 2020

ಸಚಿವ ಸಂಪುಟ ವಿಸ್ತರಣೆಯಲ್ಲಿ ಇಬ್ಬರು ನೂತನ ಶಾಸಕರಿಗೆ ಕೊಕ್..?

Posted: 09 Jan 2020 07:45 AM PST

ಯಡಿಯೂರಪ್ಪ ಸರ್ಕಾರ ರಚನೆಗೆ ಕಾರಣರಾಗಿದ್ದ ಅನರ್ಹ ಶಾಸಕರು ಗೆದ್ದು ಅರ್ಹ ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಪ್ರಮಾಣವಚನ ಸ್ವೀಕಾರ ಮಾಡಿ ಎರಡ್ಮೂರು ವಾರಗಳೇ ಕಳೆದಿವೆ.

ಆದರೆ ಇನ್ನೂ ನೂತನ ಶಾಸಕರಿಗೆ ಸಚಿವ ಸ್ಥಾನ ಹಂಚಿಲ್ಲ. ಯಾರಿಗೆ ಯಾವ ಸ್ಥಾನ ಎಂಬ ಗೊಂದಲದಲ್ಲಿಯೇ ಯಡಿಯೂರಪ್ಪ ಇದ್ದಾರೆ. ಜೊತೆಗೆ ಈಗಾಗಲೇ ನೂತನ ಶಾಸಕರು ಕೂಡ ಯಡಿಯೂರಪ್ಪ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ಧನುರ್ಮಾಸ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎನ್ನುತ್ತಿವೆ ಮೂಲಗಳು. ಆದರೆ ಗೆದ್ದ ಅಷ್ಟು ಜನ ಅನರ್ಹ ಶಾಸಕರಲ್ಲಿ 9 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್​ ಹಾಗೂ ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಅವರಿಗೆ ಸಿಎಂ ಕೊಕ್​ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈಗಾಗಲೇ ಮೂಲ ಬಿಜೆಪಿಗರು ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿರುವುದರಿಂದ ಜೊತೆಗೆ ಅವರ ಮುನಿಸನ್ನು ಶಮನ ಮಾಡುವ ದೃಷ್ಟಿಯಿಂದ ಇವರಿಬ್ಬರಿಗೆ ಸಚಿವ ಸ್ಥಾನ ನೀಡುವುದು ಡೌಟ್ ಎನ್ನಲಾಗುತ್ತಿದೆ.

ಮಹಿಳೆ ಅಂತ್ಯಸಂಸ್ಕಾರದ ವೇಳೆಯಲ್ಲೇ ನಡೆದಿದೆ ಅಚ್ಚರಿಯ ಘಟನೆ

Posted: 09 Jan 2020 07:30 AM PST

ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದಲ್ಲಿ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರದ ಸಿದ್ಧತೆಯ ವೇಳೆಯಲ್ಲಿ ಕಣ್ಣುಬಿಟ್ಟ ಅಚ್ಚರಿಯ ಘಟನೆ ನಡೆದಿದೆ.

5 ವರ್ಷದ ಮಹಿಳೆ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಜನವರಿ 7 ರಂದು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಬದುಕುವುದು ಕಷ್ಟ ಸಾಧ್ಯವೆಂದು ವೈದ್ಯರು ಹೇಳಿದ್ದಾರೆ. ಮಹಿಳೆ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ವಿಫಲವಾಗಿದ್ದರಿಂದ ಮನೆಯವರು ಆಂಬುಲೆನ್ಸ್ ನಲ್ಲಿ ಮಹಿಳೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.

ಆಂಬುಲೆನ್ಸ್ ನಲ್ಲಿ ಮಹಿಳೆ ಚಲನೆ ನಿಂತಿದ್ದು, ಮೃತಪಟ್ಟಿರುವುದಾಗಿ ಭಾವಿಸಿದ ಕುಟುಂಬದವರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಸಂಬಂಧಿಕರಿಗೂ ವಿಷಯ ತಿಳಿಸಿದ್ದು, ಬಂಧು ಬಾಂಧವರೆಲ್ಲ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ್ದಾರೆ. ಅಂತ್ಯಕ್ರಿಯೆಗೆ ಸಿದ್ಧತೆ ನಡೆದಾಗ ಸಂಬಂಧಿಕರು ಯಲ್ಲಮ್ಮನ ದೇವಾಲಯದಿಂದ ತಂದಿದ್ದ ನೀರು ಬಾಯಿಗೆ ಹಾಕಿದಾಗ ಮಹಿಳೆ ಕಣ್ಣು ಬಿಟ್ಟಿದ್ದು ಅಂತ್ಯಕ್ರಿಯೆಗೆ ಬಂದವರೆಲ್ಲ ಕಕ್ಕಾಬಿಕ್ಕಿಯಾಗಿದ್ದಾರೆ. ಬಳಿಕ ಯಲ್ಲಮ್ಮನ ಪವಾಡವಿದೆಂದು ಮಾತನಾಡಿಕೊಂಡಿದ್ದಾರೆ.

ಚರ್ಚೆಗೆ ಗ್ರಾಸವಾಗಿದೆ ಈ ‘ಆಹಾರ’

Posted: 09 Jan 2020 06:51 AM PST

ವೇಗನ್ ಎನ್ನುವುದು ಹೊಸದಾಗಿ ಟ್ರೆಂಡ್ ಆಗುತ್ತಿರುವ ಆಹಾರ ಪದ್ಧತಿಯಾಗಿದೆ. ಇದರಲ್ಲಿ ಮಾಂಸಾಹಾರ ಅಷ್ಟೇ ಅಲ್ಲದೆ ಹಾಲು ಅದರಿಂದ ತಯಾರಿಸುವ ಪದಾರ್ಥ ಹಾಗೂ ಯಾವುದೇ ಪ್ರಾಣಿಜನ್ಯ ಆಹಾರವನ್ನು ಸೇರಿಸಲಾಗುವುದಿಲ್ಲ.

ಇದು ಬೇಗನೆ ಹರಡುತ್ತಿದ್ದು ಹಲವು ರೆಸ್ಟೋರೆಂಟ್‌ಗಳು ವೇಗನ್ ಆಹಾರವನ್ನು ತಮ್ಮ ಮೆನುವಿಗೆ ಸೇರಿಸುತ್ತಿದ್ದಾರೆ. ಇದೀಗ ಟಿಜಿಐ ಫ್ರೈಡೇಸ್ ಎನ್ನುವ ಹೊಟೇಲ್ ಕಲ್ಲಂಗಡಿ ಹಣ್ಣಿನ ಸ್ಟೇಕ್‌ ಅನ್ನು ಪರಿಚಯಿಸಿದ್ದು ಅದು ಚರ್ಚೆಗೆ ಗ್ರಾಸವಾಗಿದೆ.

ಸ್ಟೇಕ್ ಎನ್ನುವುದು ಸಾಮಾನ್ಯವಾಗಿ ಮಾಂಸಾಹಾರದಿಂದ ಮಾಡುತ್ತಾರೆ. ಆದರೆ ಕಲ್ಲಂಗಡಿ ಸ್ಟೇಕ್ ಎಂದಿದ್ದಕ್ಕೆ ಮಾಂಸಹಾರಿಗಳು ಕಣ್ಣು ಕೆಂಪು ಮಾಡಿಕೊಂಡಿದ್ದಾರೆ.

ಈ ರೀತಿ ಆಹಾರವನ್ನು ಕೆಡಿಸಿದ್ದೀರಿ ಎಂದರೆ ವೇಗನ್ ಜನರು ಇದನ್ನು ಸ್ವಾಗತಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪರ – ವಿರೋಧ ಚರ್ಚೆ ನಡೆಯುತ್ತಿದ್ದು ಯಾವ ಪಕ್ಷ ಸರಿ ಎಂದು ಹೇಳುವುದು ಕಷ್ಟ.

ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ವ್ಯಕ್ತಿಗೆ ಜಗ್ಗೇಶ್ ನೀಡ್ತಾರಂತೆ ಒಂದು ಲಕ್ಷ ಹಣ

Posted: 09 Jan 2020 06:47 AM PST

ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು ಕೋರ್ಟ್. ಇದೀಗ ಈ ಗಲ್ಲು ಶಿಕ್ಷೆಯ ದಿನವನ್ನು ನಿಗಧಿ ಮಾಡಲಾಗಿದೆ.

ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಈ ಅಪರಾಧಿಗಳನ್ನು ಗಲ್ಲಿಗೇರಿಸಲು ದೆಹಲಿ ಪಟಿಯಾಲಾ ನ್ಯಾಯಾಲಯ ಆದೇಶ ನೀಡಿದೆ. ಈ ಅಪರಾಧಿಗಳನ್ನು ಗಲ್ಲಿಗೇರಿಸುವ ಕೆಲಸವನ್ನು ಉತ್ತರ ಪ್ರದೇಶದ ಪೊಲೀಸರು ಪವನ್ ಜಲ್ಲಾದ್ ಗೆ ಒಪ್ಪಿಸಿದ್ದಾರೆ.

ಪವನ್ ಅವರ ಮಗಳ ಮದುವೆಗೆ ಹಣ ಹೊಂದಿಸುತ್ತಿದ್ದಾರಂತೆ. ಹೀಗಾಗಿ ಈ ಕೆಲಸದಿಂದ ನನ್ನ ಮಗಳ ಮದುವೆಗೆ ಹಣ ಸಿಗುತ್ತದೆ ಎಂದು ಹೇಳಿದ್ದಾರೆ. ಇದನ್ನು ಗಮನಿಸಿದ ಜಗ್ಗೇಶ್ ಹ್ಯಾಂಗ್ ಮ್ಯಾನ್ ಪವನ್ ಅವರ ಈ ಕೆಲಸಕ್ಕೆ ಉಡುಗೊರೆ ನೀಡುತ್ತಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿರುವ ಜಗ್ಗೇಶ್, ಮಾನ್ಯರೇ ರಾಕ್ಷಸ ಸಂಹಾರವೆಂಬುದು ದೇವರ ನಿಯಮ. ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದು ನೀವು ಹೇಳಿದ್ದು ಕೇಳಿ ಭಾವುಕನಾದೆ. ನೀವೇ ಆ ಪಾಪಿಗಳನ್ನು ನೇಣಿಗೇರಿಸಿದರೆ ನಾನು ನನ್ನ ಕಲೆಯಿಂದ ದುಡಿದ 1 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ. ಆ ಹಣವನ್ನು ನಿಮಗಾಗಿ ಇಂದೇ ಮೀಸಲಿಟ್ಟಿದ್ದೇನೆ. ದುರುಳ ನಿಗ್ರಹವೂ ದೇವರ ಸೇವೆ. ಹರಿ ಓಂ ಎಂದು ಟ್ವೀಟ್​ ಮಾಡಿದ್ದಾರೆ.

ಮಲ ಎರಚಲು ಹೋಗಿ ಮೈಮೇಲೆ ಸುರಿದುಕೊಂಡ ಮಹಿಳೆ

Posted: 09 Jan 2020 06:46 AM PST

ಓಸ್ಟೀನ್, ಫ್ಲೋರಿಡಾ: ಮನೆ ಮಾಲೀಕಳಿಗೆ ಒಂದು ಬಕೆಟ್ ಒಣಗಿದ ಮಲವನ್ನು ಮೇಲಕ್ಕೆ ಎಸೆದಿದ್ದಾಕೆಯ ಮುಖದ ಮೇಲೆಯೇ ಅದು ಬಿದ್ದ ಘಟನೆ ನಡೆದಿದೆ.

59 ವರ್ಷದ ಜೊಹಾನ್ನೆ ಮರ್ಕೆಡರ್ ಎಂಬುವರ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ.

ಇವರು ಹೇಳುವ ಪ್ರಕಾರ ಮೊದಲು ಮನೆಯ ಮಾಲೀಕಳು ತನ್ನ ಮೇಲೆ ಮಲವನ್ನು ಎರಚಿದ್ದಾಳೆ. ತದ್ವಿರುದ್ಧವಾಗಿ, ಆರೋಪವೂ ಬಂದಿದೆ.

ಬಳಿಕ ವಿಡಿಯೋ ಫೂಟೇಜ್ ಅನ್ನು ಪರಿಶೀಲಿಸಿದಾಗ ಈಕೆ ಮುಖಕ್ಕೆ ಒಣ ಮಲ ಮೆತ್ತಿಕೊಂಡಿದ್ದು ಕಂಡಿದೆ. ಆದರೆ ಅದೇ ಸಮಯದಲ್ಲಿ ಮಾಲೀಕಳ ಮುಖಕ್ಕೆ ಹಸಿ ಮಲ ಮೆತ್ತಿಕೊಂಡಿರುವುದು ಕಂಡು ಬಂದಿದೆ.

ಆದರೆ ಈ ಬಗ್ಗೆ ಮಾತನಾಡಿದ ಜೊಹಾನ್ನಾ, ಮೊದಲು ಬಕೇಟಿನಲ್ಲಿ ನೀರನ್ನು ತುಂಬಿಕೊಂಡು ಹೋಗಿ ಮನೆ ಮಾಲೀಕಳಿಗೆ ಸುರಿದಿದ್ದೇನೆ. ಇದರಿಂದ ಆಕೆ ಸಿಟ್ಟಾಗುತ್ತಾಳೆ ಎಂದು ಗೊತ್ತಿದ್ದು, ನಾನು ಸೀದಾ ಬಚ್ಚಲು ಮನೆಗೆ ಓಡಿದ್ದೆ. ಆದರೆ ಗೊಂದಲಕ್ಕೆ ಬಿದ್ದ ಮನೆ ಮಾಲೀಕರು ನನ್ನ ಮೇಲೆ ಮಲವನ್ನು ತಂದು ಸುರಿದಿದ್ದಾಳೆ ಎಂದು ಪೊಲೀಸರಿಗೆ ಹೇಳಿದ್ದಾಳೆ. ಆದರೆ ಈಕೆಯ ಈ ಹೇಳಿಕೆಯನ್ನು ಪೊಲೀಸರು ಅನುಮಾನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮನೆ ಮಾಲೀಕಳು, ಶನಿವಾರ ಮನೆಯ ಬೆಲ್ ಹೊಡೆದಿದೆ. ಹೊರಗೆ ಬಂದರೆ ಮೊದಲಿಗೆ ಯಾರೂ ಕಾಣಲಿಲ್ಲ. ಕೊನೆಗೆ ಇದ್ದಕ್ಕಿದ್ದಂತೆ ನನ್ನ ಮೇಲೆ ಮಲ ಬಂದು ಬಿತ್ತು. ಬಳಿಕ ಜೊಹಾನ್ನ ಮನೆಗೆ ಹೋಗಿ ನೋಡಿದರೆ ಎಲ್ಲ ವಸ್ತುಗಳು ಮುರಿದುಕೊಂಡು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ವಿಡಿಯೋವನ್ನು ಪರಿಶೀಲಿಸಿದಾಗ ಪೊಲೀಸರಿಗೆ ಜೊಹಾನ್ನಾಳೆ ತಪ್ಪಿತಸ್ಥರೆಂದು ತಿಳಿದು ಆಕೆಯನ್ನು ಬಂಧಿಸಿದ್ದಾರೆ.

ಬ್ರೇಕ್ ಹಾಕಿದ್ದಕ್ಕೆ ಕಳಚಿ ಬಿದ್ದ ಬಸ್ ಚಕ್ರಗಳು

Posted: 09 Jan 2020 06:39 AM PST

Image result for bus-wheels"

ಬ್ರೇಕ್ ಹಾಕಿದ್ದಕ್ಕೆ ಬಸ್ ಚಕ್ರಗಳು ಕಳಚಿ ಬಿದ್ದ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ರಾಷ್ಟ್ರೀಯ ಹೆದ್ದಾರಿ 9ರ ಸಸ್ತಾಪುರ ಬಂಗ್ಲ ಬಳಿ ನಡೆದಿದೆ.

ಬಸವಕಲ್ಯಾಣ ಘಟಕಕ್ಕೆ ಸೇರಿದ ಸರ್ಕಾರಿ ಬಸ್ ಆಳಂದ ತಾಲೂಕಿನ ವಿಕೆಸಲಗದಿಂದ ಬಸವಕಲ್ಯಾಣಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕುರಿಯೊಂದು ಒಮ್ಮೆಲೆ ಅಡ್ಡ ಬಂದಿದೆ. ಚಾಲಕ ತಕ್ಷಣ ಬ್ರೇಕ್ ಹಾಕಿದ್ದು ಈ ವೇಳೆ ಬಸ್ ಹಿಂಬದಿಯ ಚಕ್ರಗಳು ಕಳಚಿ ಬಿದ್ದಿವೆ. ಬಸ್ ನ ಹಿಂಭಾಗ ನೆಲಕ್ಕೆ ತಾಗಿದ್ದು ಅದೃಷ್ಟವಶಾತ್ ಎಲ್ಲರೂ ಪಾರಾಗಿದ್ದಾರೆ ಎನ್ನಲಾಗಿದೆ.

ಬಸವಕಲ್ಯಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸರ್ಕಾರದ ಅಸಹಕಾರದ ನಡುವೆಯೂ ಅದ್ಧೂರಿ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ

Posted: 09 Jan 2020 06:17 AM PST

ಜನವರಿ 10 ರಿಂದ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ರಾಜ್ಯ ಸರ್ಕಾರದ ಅಸಹಕಾರ ಮುಂದುವರೆದಿದೆ.

ಅಸಹಕಾರದ ನಡುವೆಯೂ ನಾಳೆಯಿಂದ ಎರಡು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ನಡೆಸಲು ಆಯೋಜಕರು ಸಿದ್ಧತೆ ಪೂರ್ಣಗೊಳಿಸಿದ್ದಾರೆ. ಕನ್ನಡ ಸಮ್ಮೇಳನಾಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಆಯ್ಕೆ ಮಾಡಿರುವುದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದು, ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡದೆ ತಡೆಹಿಡಿಯಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಸೂಚನೆ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅನುದಾನ ತಡೆಹಿಡಿದಿದೆ. ಇನ್ನು ಸಮ್ಮೇಳನ ನಡೆಸಲು ಪೊಲೀಸರು ಅನುಮತಿ ನೀಡಲು ನಿರಾಕರಿಸಿ, ಸಮ್ಮೇಳನ ಮುಂದೂಡುವಂತೆ ಸೂಚಿಸಿದ್ದಾರೆ. ಅಲ್ಲದೆ ಶೃಂಗೇರಿ ಪಟ್ಟಣ ಪಂಚಾಯಿತಿ ಆಡಳಿತದಿಂದ ಬ್ಯಾನರ್ ಬಂಟಿಂಗ್ಸ್ ಕಟ್ಟಲು ಅವಕಾಶ ನಿರಾಕರಿಸಲಾಗಿದೆ. ಇದಾದ ನಂತರ ಸಮ್ಮೇಳನಕ್ಕೆ ಹೋಗುವ ಶಿಕ್ಷಕರಿಗೆ ಒಒಡಿ ನೀಡದಿರಲು ಶಿಕ್ಷಣ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಇದಲ್ಲದೇ ನಾಳೆ ಶೃಂಗೇರಿ ಬಂದ್ ಗೂ ಕರೆ ನೀಡಲಾಗಿದೆ ಎನ್ನಲಾಗಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಸಹಕಾರ ಮುಂದುವರೆದಿದ್ದು, ಇದರ ನಡುವೆಯೇ ಸಮ್ಮೇಳನ ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಅನುದಾನ ಬಿಡುಗಡೆ ಮಾಡದ ಹಿನ್ನಲೆಯಲ್ಲಿ ದಾನಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳ ಧನ ಸಹಾಯ ಪಡೆಯಲಾಗಿದೆ.

ಶಾಕಿಂಗ್ ನ್ಯೂಸ್: ನರಭಕ್ಷಕ ಚಿರತೆ ದಾಳಿಗೆ 5 ವರ್ಷದ ಬಾಲಕ ಬಲಿ

Posted: 09 Jan 2020 05:52 AM PST

Image result for cheetah"

ಚಿರತೆ ದಾಳಿಗೆ 5 ವರ್ಷದ ಬಾಲಕ ಬಲಿಯಾದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಮಣಿಕುಪ್ಪೆ ಗ್ರಾಮದ ಬಳಿ ನಡೆದಿದೆ.

ಸಮರ್ಥ ಗೌಡ ಚಿರತೆ ದಾಳಿಗೆ ಬಲಿಯಾದ ಬಾಲಕ ಎಂದು ಹೇಳಲಾಗಿದೆ. ಚಿರತೆ ಹಾವಳಿಯಿಂದ ಬೇಸತ್ತ ಮಣಿಕುಪ್ಪೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರತೆ ಸೆರೆಗೆ ಕಂಡಲ್ಲಿ ಗುಂಡಿಕ್ಕಲು ಜಿಲ್ಲಾಡಳಿತದಿಂದ ಆದೇಶ ನೀಡಲಾಗಿತ್ತು. ಈ ಹಿಂದೆ ಇಬ್ಬರನ್ನು ಬಲಿ ಪಡೆದ ನರಭಕ್ಷಕ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಮಣಿಕುಪ್ಪೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಆಟೋದಲ್ಲೇ ಬರೋಬ್ಬರಿ 39 ಲಕ್ಷ ರೂ. ಇದ್ದ ಬ್ಯಾಗ್ ಮರೆತ ದಂಪತಿ ಕಂಗಾಲು

Posted: 09 Jan 2020 05:47 AM PST

ದಾವಣಗೆರೆ: ಆಟೋದಲ್ಲಿ ಬ್ಯಾಗ್ ಬಿಟ್ಟ ದಂಪತಿ ಬರೋಬ್ಬರಿ 39 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ದಾವಣಗೆರೆ ನಗರದ ಕೆ ಆರ್ ಮಾರ್ಕೆಟ್ ಬಳಿ ಘಟನೆ ನಡೆದಿದೆ.

39 ಲಕ್ಷ ರೂಪಾಯಿ ಬ್ಯಾಂಕಿಗೆ ಕಟ್ಟಲು ಹೋಗಿದ್ದ ಮಾಣಿಕ್ಯ ವಾಸಗರ್ ಮತ್ತು ತಿಲಕವತಿ ದಂಪತಿ ಮನೆಯಿಂದ ಆಟೋದಲ್ಲಿ ಬ್ಯಾಂಕಿಗೆ ಆಗಮಿಸಿದ್ದಾರೆ. ಆದರೆ ಆಟೋದಲ್ಲಿಯೇ ಹಣವಿದ್ದ ಬ್ಯಾಗ್ ಬಿಟ್ಟು ಬ್ಯಾಂಕ್ ಗೆ ತೆರಳಿದ್ದಾರೆ.

ವಾಪಸ್ ಬಂದು ನೋಡುವಷ್ಟರಲ್ಲಿ ಆಟೋ ಸ್ಥಳದಲ್ಲಿ ಇರಲಿಲ್ಲ. ಜಮೀನು ಮಾರಾಟದಿಂದ ಬಂದಿದ್ದ ಹಣವನ್ನು ಬ್ಯಾಂಕ್ ಗೆ ಕಟ್ಟಲು ತಂದಿದ್ದರು. ವೃದ್ಧ ದಂಪತಿ ಹಣ ಕಳೆದುಕೊಂಡು ಕಂಗಾಲಾಗಿದ್ದು, ದಾವಣಗೆರೆಯ ಬಸವನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಫೇಸ್ಬುಕ್ ಸುಂದರಿಗೆ ಮನಸೋತು ಬರೋಬ್ಬರಿ 15 ಲಕ್ಷ ರೂ. ಹೋಯ್ತು

Posted: 09 Jan 2020 05:17 AM PST

ಧಾರವಾಡ: ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದು ಉದ್ಯಮಿಗೆ ವಂಚಿಸಿದ್ದು, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ.

ಹುಬ್ಬಳ್ಳಿ ತಾಲೂಕು ಗಂಜಿಹಾಳ ಗ್ರಾಮದ ಟ್ರಾನ್ಸ್ ಪೋರ್ಟ್ ಉದ್ಯಮಿ ರುದ್ರಗೌಡ 15 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಸುಷ್ಮಾ ಎಂದು ನಕಲಿ  ಫೇಸ್ಬುಕ್ ಖಾತೆ ತೆರೆದು ಯುವಕನೊಬ್ಬ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ರುದ್ರಗೌಡನನ್ನ ಪರಿಚಯಿಸಿಕೊಂಡ ಸುಷ್ಮಾ ಖಾತೆ ನಿರ್ವಹಿಸುತ್ತಿದ್ದ ವ್ಯಕ್ತಿ ಮೊದಲಿಗೆ ಫೋಟೋ ಕಳಿಸಿದ್ದಾನೆ. ಚೆಂದನೆಯ ಹುಡುಗಿ ಫೋಟೋಗಳನ್ನು ಕಳುಹಿಸಿದ್ದು ಮೊಬೈಲ್ ನಂಬರ್ ಪಡೆದ ರುದ್ರಗೌಡ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ್ದಾರೆ. ಕಷ್ಟ ಎಂದು ಹೇಳಿಕೊಂಡಾಗಲೆಲ್ಲ ಹಣ ಹಾಕಿದ್ದು ಸುಮಾರು 15 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ. ಮೂರು ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ.

ಮದುವೆಯಾಗುವುದಾಗಿ ನಂಬಿಸಿ ರುದ್ರಗೌಡನಿಂದ ಹಣ ಪಡೆದುಕೊಳ್ಳಲಾಗಿದೆ. ಅಲ್ಲದೆ ಮಾತನಾಡಲು ಫೋನ್ ಮಾಡಿದ್ದ ಸಂದರ್ಭದಲ್ಲಿ ಮಾತು ಬರಲ್ಲ, ಕಿವಿ ಕೇಳಲ್ಲ ಎಂದೆಲ್ಲ ನಂಬಿಸಲಾಗಿದೆ. ಕೊನೆಗೆ ಪ್ರತಾಪ್ ಎಂಬ ವ್ಯಕ್ತಿ ಈ ರೀತಿ ಮೋಸ ಮಾಡಿರುವುದು ರುದ್ರಗೌಡನಿಗೆ ಗೊತ್ತಾಗಿದೆ. ಹಣ ಕೊಡುವುದಾಗಿ ಹೇಳಿದ್ದ ಪ್ರತಾಪ್ ಕೈ ಕೊಟ್ಟಿದ್ದು ರುದ್ರಗೌಡ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ದುಬೈನಿಂದ ಬಂದವನ ಬಳಿ ಇದ್ದ ಚಿನ್ನವೆಷ್ಟು ಗೊತ್ತಾ…?

Posted: 09 Jan 2020 05:13 AM PST

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ಪಡೆದುಕೊಂಡಿದ್ದಾರೆ.

3 ಪ್ರಕರಣಗಳಲ್ಲಿ ಮೂವರು ಪ್ರಯಾಣಿಕರ ಬಳಿ ಇದ್ದ ಚಿನ್ನ ಜಪ್ತಿ ಮಾಡಲಾಗಿದೆ. ಜನವರಿ 6ರಂದು ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದ ಪ್ರಯಾಣಿಕನಿಂದ 13.43 ಲಕ್ಷ ರೂಪಾಯಿ ಮೌಲ್ಯದ 336 ಗ್ರಾಂ ಚಿನ್ನ ಪತ್ತೆಯಾಗಿದೆ. ಪರಿಶೀಲನೆ ಸಂದರ್ಭದಲ್ಲಿ ಪ್ರಯಾಣಿಕ ಸಾಕ್ಸ್ ನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಕಂಡುಬಂದಿದೆ. ಆತನನ್ನು ವಶಕ್ಕೆ ಪಡೆಯಲಾಗಿದೆ.

ಮತ್ತೊಬ್ಬ ಪ್ರಯಾಣಿಕನಿಂದ ಪೇಸ್ಟ್ ರೂಪದಲ್ಲಿದ್ದ 21.24 ಲಕ್ಷ ರೂಪಾಯಿ ಮೌಲ್ಯದ 523 ಗ್ರಾಂ ಚಿನ್ನ ವಶ ಪಡಿಸಿಕೊಳ್ಳಲಾಗಿದೆ. ಮೂರನೇ ಪ್ರಕರಣದಲ್ಲಿ ಪ್ರಯಾಣಿಕ ಅಕ್ರಮವಾಗಿ ಸಾಗಿಸುತ್ತಿದ್ದ 29 ಲಕ್ಷ ರೂಪಾಯಿ ಮೌಲ್ಯದ 716 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಮೂರು ಪ್ರಕರಣಗಳಲ್ಲಿ 63.73 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 575 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಖಾಸಗಿ ಕ್ಷಣದಲ್ಲಿ ಮೈಮರೆತಿದ್ದ ದಂಪತಿ ದೃಶ್ಯ ಸೆರೆ ಹಿಡಿದ ಕಿರಾತಕ

Posted: 09 Jan 2020 04:57 AM PST

ಬೆಂಗಳೂರು: ದಂಪತಿಯ ಖಾಸಗಿ ಕ್ಷಣದ ದೃಶ್ಯಗಳನ್ನು ಸೆರೆ ಹಿಡಿದ ಅಪರಿಚಿತ ವ್ಯಕ್ತಿ ಬ್ಲಾಕ್ ಮೇಲ್ ಮಾಡಿದ್ದು ಬಂಡೆಪಾಳ್ಯ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

ಪತಿ-ಪತ್ನಿಯ ಖಾಸಗಿ ಕ್ಷಣದ ದೃಶ್ಯಗಳನ್ನು ಸೆರೆಹಿಡಿದ ಅಪರಿಚಿತ ವ್ಯಕ್ತಿ, ಮಹಿಳೆಯ ನಂಬರ್ ಹ್ಯಾಕ್ ಮಾಡಿ ಅಶ್ಲೀಲ ವೀಡಿಯೋ ಮತ್ತು ಸಂದೇಶ ಕಳುಹಿಸಿದ್ದಾನೆ.

ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪಿ ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಪರಿಚಿತರೇ ಈ ರೀತಿ ಮಾಡಿರುವ ಅನುಮಾನ ವ್ಯಕ್ತಪಡಿಸಿರುವ ದಂಪತಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಹಂಪಿ ಉತ್ಸವಕ್ಕೆ ಸಿಎಂ ಯಡಿಯೂರಪ್ಪ ಚಾಲನೆ: ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್

Posted: 09 Jan 2020 04:35 AM PST

Image result for hampi-utsav"

ಜನವರಿ 10, 11 ರಂದು ಹಂಪಿ ಉತ್ಸವ ಅದ್ದೂರಿಯಾಗಿ ನಡೆಯಲಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಕೂಡ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಐತಿಹಾಸಿಕ ತಾಣ ಹಂಪಿಯಲ್ಲಿ ಹಂಪಿ ಉತ್ಸವ ಹಿಂದೆಯೇ ನಡೆಯಬೇಕಿತ್ತಾದರೂ, ಕಾರಣಾಂತರದಿಂದ ಮುಂದೂಡಲ್ಪಟ್ಟಿತ್ತು. ಇದೇ ಜನವರಿ 10 ಮತ್ತು 11ರಂದು ನಡೆಯಲಿದ್ದು, ಅದರ ಅಂಗವಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಾಲ್ಕು ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು ಜನವರಿ 8ರಿಂದ ಹೆಲಿಕಾಪ್ಟರ್ ನಲ್ಲಿ ಹಂಪಿ ಸೌಂದರ್ಯ ಕಣ್ತುಂಬಿಕೊಳ್ಳುವ ಹಂಪಿ ಬೈಸ್ಕೈ ಆಯೋಜಿಸಲಾಗಿದೆ. ಸಾಹಸ ಕ್ರೀಡೆಗಳು, ಪವಾಡ ಬಯಲು, ಪಾರಂಪರಿಕ ಸ್ಪರ್ಧೆ, ಮತ್ಸ್ಯಮೇಳ, ರಂಗೋಲಿ, ಮೆಹಂದಿ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮ ಜರುಗಲಿದ್ದು ಜನವರಿ 11 ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಭಾಗವಹಿಸಲಿದ್ದಾರೆ.

ಚಿನ್ನ ಪ್ರಿಯರಿಗೆ ಬಂಪರ್: ಒಂದೇ ದಿನ ಇಷ್ಟೊಂದು ಇಳಿಕೆ ಕಂಡ ‘ಬಂಗಾರ’

Posted: 09 Jan 2020 04:30 AM PST

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಕುಸಿಯುತ್ತಿದ್ದಂತೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಇಳಿಮುಖ ಕಂಡಿವೆ. ಜನವರಿ 9ರಂದು ಈ ವರ್ಷದ ದೊಡ್ಡ ಕುಸಿತವಾಗಿದೆ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಗುರುವಾರ 10 ಗ್ರಾಂ ಚಿನ್ನದ ಬೆಲೆ 766 ರೂಪಾಯಿ ಇಳಿದಿದೆ. ಬೆಳ್ಳಿಯ ಬೆಲೆ 1148 ರೂಪಾಯಿ ಇಳಿದಿದೆ.

ಯುಎಸ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಕಡಿಮೆಯಾದ ಕಾರಣ ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದೆ. ಇದು ದೇಶಿ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1546 ಡಾಲರ್ ಪ್ರತಿ ಔನ್ಸ್ ಆಗಿದೆ.

ಚಿನ್ನದ ಹೊಸ ಬೆಲೆ ಗುರುವಾರ 10 ಗ್ರಾಂಗೆ 40,634 ರೂಪಾಯಿಯಾಗಿದೆ.  ಬುಧವಾರ ಬಂಗಾರದ ಬೆಲೆ 10 ಗ್ರಾಂಗೆ 41,810 ರೂಪಾಯಿಯಾಗಿತ್ತು. ಗುರುವಾರ ಬೆಳ್ಳಿ ಬೆಲೆಯಲ್ಲಿ ದಾಖಲೆ ಮಟ್ಟದಲ್ಲಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ 1148 ರೂಪಾಯಿ ಇಳಿಕೆ ಕಂಡು ಕೆ.ಜಿ ಬೆಳ್ಳಿ ಬೆಲೆ 47,932 ರೂಪಾಯಿಯಾಗಿದೆ.

ಮೀನ ರಾಶಿಯವರಿಗೆ ಲಕ್ಷ್ಮೀದೇವಿ ಒಲಿಯಬೇಕೆಂದರೆ ಹೀಗೆ ಮಾಡಿ

Posted: 09 Jan 2020 04:05 AM PST

ಹಣದ ಸಮಸ್ಯೆ ಎಲ್ಲರಿಗೂ ಇರುತ್ತದೆ. ಪರಿಹಾರದ ದಾರಿ ಹೇಗೆ ಎಂದು ಗೊತ್ತಿರುವುದಿಲ್ಲ. ನಿಮ್ಮ ರಾಶಿ, ನಕ್ಷತ್ರದ ಅನುಗುಣವಾಗಿ ಇದಕ್ಕೆ ಸರಿಯಾದ ಮಾರ್ಗವನ್ನು ಕಂಡುಹಿಡಿಯಬಹುದು.

ಮೀನ ರಾಶಿಯವರು ತಮ್ಮ ಆರ್ಥಿಕ ಸ್ಥಿತಿ ಗತಿಯನ್ನು ಸುಧಾರಿಸಿಕೊಳ್ಳಲು ಕೆಲವೊಂದು ಗಿಡವನ್ನು ನೆಡಬೇಕು. ಜಾಜಿ, ಮಲ್ಲಿಗೆ, ನಂದಿ ಬಟ್ಟಲು ಗಿಡಗಳನ್ನು ನೆಟ್ಟು ಪ್ರತಿ ದಿನ ಅದಕ್ಕೆ ನೀರನ್ನು ಹಾಕಬೇಕು. ಆಗ ಲಕ್ಷ್ಮೀ ದೇವಿ ಪ್ರಸನ್ನಳಾಗಿ ಸಮಸ್ಯೆಯು ನಿವಾರಣೆಯಾಗುತ್ತದೆ.

ಇನ್ನು ಅಮಾವಾಸ್ಯೆ ಸಮಯದಂದು ಪಿತೃಗಳ ಫೋಟೊವನ್ನು ದಕ್ಷಿಣ ದಿಕ್ಕಿನ ಭಾಗಕ್ಕೆ ಇಟ್ಟು ಪೂಜೆ ಮಾಡಬೇಕು. ಇನ್ನು ನೈವೇದ್ಯದ ಪ್ರಸಾದವನ್ನು ಮನೆಯವರೆಲ್ಲರೂ ತಿನ್ನಬೇಕು. ಪಿತೃಗಳ ಆಶೀರ್ವಾದದಿಂದ ಆರ್ಥಿಕ ಸಂಕಷ್ಟ ನೀಗುತ್ತದೆ.

ನಿಮ್ಮ ಭವಿಷ್ಯ ತಿಳಿಯಲು ಸಂಪರ್ಕಿಸಿ:
ಪಂಡಿತ್ ಅನಂತ್ ಪ್ರಸಾದ್ ಶರ್ಮಾ
ಮೊಬೈಲ್:‌ 9845626805

ಸೆಕ್ಸಿ ಔಟ್ ಫಿಟ್ ನಲ್ಲಿ ನಿದ್ರೆ ಕದ್ದ ನಟಿ

Posted: 09 Jan 2020 03:51 AM PST

ಬಾಲಿವುಡ್‌ ನಟಿ ಕರಿಷ್ಮಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಆಗಾಗ ಬೋಲ್ಡ್ ಫೋಟೋ ಹಾಕುವ ಮೂಲಕ ಅಭಿಮಾನಿಗಳ ಮನಸ್ಸು ಕದಿಯುತ್ತಿರುತ್ತಾಳೆ. ಈಗ ಕರಿಷ್ಮಾ ಶರ್ಮಾ ಮತ್ತೊಂದು ಫೋಟೋ ಮೂಲಕ ಸುದ್ದಿ ಮಾಡಿದ್ದಾಳೆ.

ಕೆಂಪು ಬಣ್ಣದ ಬಟ್ಟೆಯಲ್ಲಿ ಕರಿಷ್ಮಾ ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಈ ಫೋಟೋದಲ್ಲಿ ಕರಿಷ್ಮಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಫೋಟೋ ಜೊತೆ ಆಕರ್ಷಕ ಶೀರ್ಷಿಕೆಯನ್ನು ನೀಡಿದ್ದಾಳೆ ಶರ್ಮಾ. ನಟಿಯ ಇನ್ಸ್ಟ್ರಾಗ್ರಾಮ್ ನಲ್ಲಿ ಒಂದಲ್ಲ ಎರಡಲ್ಲ ಅನೇಕ ಸೆಕ್ಸಿ ಫೋಟೋಗಳನ್ನು ನೋಡಬಹುದು.

ರಾಗಿಣಿ ಎಂಎಂಎಸ್ ರಿಟರ್ನ್ಸ್ ವೆಬ್ ಸರಣಿಯಲ್ಲಿ ನಟಿಸಿದ್ದ ಕರಿಷ್ಮಾ ಸಾಕಷ್ಟು ಸುದ್ದಿ ಮಾಡಿದ್ದಳು. ವೆಬ್ ಸರಣಿಯಲ್ಲಿ ಬೋಲ್ಡ್ ದೃಶ್ಯಗಳನ್ನು ಮಾಡಿದ್ದ ಕರಿಷ್ಮಾ ಅನೇಕರ ನಿದ್ರೆ ಕದ್ದಿದ್ದಳು.

 

ಮನಕಲಕುವ ಘಟನೆ: ಹಸಿದಿದ್ದ ಮಹಿಳೆಗೆ ಪಾರಿವಾಳ ಆಹಾರವಾಯ್ತು

Posted: 09 Jan 2020 03:45 AM PST

ಮಾಧ್ಯಮಗಳ ವರದಿ ಪ್ರಕಾರ ದೇಶದಲ್ಲಿ ಬಡತನದ ಸಂಖ್ಯೆ ಹೆಚ್ಚಾಗ್ತಿದೆ. ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಹೃದಯ ಕದಡುವ ಘಟನೆ ಬೆಳಕಿಗೆ ಬಂದಿದೆ. ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ ನಲ್ಲಿ ಮಾನಸಿಕವಾಗಿ ಕುಂಠಿತಗೊಂಡ ಮಹಿಳೆ ಪಾರಿವಾಳವನ್ನು ಕೊಂದಿದ್ದಾಳೆ. ನಂತ್ರ ಅದನ್ನು ತಿಂದಿದ್ದಾಳೆ.

ಮಾನಸಿಕ ರೋಗಿಗಳಿರುವ ರಿಮ್ಸ್ ಆಸ್ಪತ್ರೆಯಲ್ಲಿ ಉಚಿತ ಆಹಾರ ನೀಡಲಾಗುತ್ತದೆಯಂತೆ. ಆದ್ರೆ ಮಾನವ ಸಂಪನ್ಮೂಲಗಳ ಕೊರತೆ ಹಾಗೂ ಸೌಲಭ್ಯಗಳ ಕೊರತೆಯಿಂದ ಇಂಥ ಘಟನೆಗಳು ನಡೆಯುತ್ತಿವೆ ಎನ್ನಲಾಗ್ತಿದೆ. ಮಹಿಳೆ ವರಾಂಡದಲ್ಲಿ ಓಡಾಡುತ್ತಿದ್ದ ಜನರ ಬಳಿ ಆಹಾರ ಕೇಳಿದ್ದಾಳಂತೆ.

ಆಹಾರ ಸಿಗದ ಕಾರಣ ಪಕ್ಕದಲ್ಲಿದ್ದ ಪಾರಿವಾಳವನ್ನು ಹತ್ಯೆಗೈದು ತಿಂದಿದ್ದಾಳಂತೆ. ಈಕೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ರೋಗಿಗಳನ್ನು ಒಂದೇ ಸೆಲ್ ನಲ್ಲಿ ಇಡಲಾಗುತ್ತದೆ. ಸರಿಯಾಗಿ ಆಹಾರ ನೀಡುವುದಿಲ್ಲ ಎಂಬ ಆರೋಪ ರಿಮ್ಸ್ ಮೇಲಿದೆ. ಆದ್ರೆ ಈ ಆರೋಪವನ್ನು ಸಂಸ್ಥೆ ತಳ್ಳಿಹಾಕಿದೆ.

ಡಬ್ಬದಲ್ಲಿ 3 ದಿನ ಸಿಕ್ಕಿಹಾಕಿಕೊಂಡ ಮಹಿಳೆ…!

Posted: 09 Jan 2020 03:28 AM PST

ಮಹಿಳೆಯೊಬ್ಬಳು 3 ದಿನ ಬಟ್ಟೆ ದಾನ ಮಾಡುವ ಡಬ್ಬಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ನಂತರ ಪೊಲೀಸರು ಅವರನ್ನು ರಕ್ಷಿಸಿದ್ದಾರೆ.

ನ್ಯೂಜರ್ಸಿಯ ಅಪಾರ್ಟ್ಮೆಂಟ್ ಹಿಂದೆ ಇದ್ದ ಬಟ್ಟೆ ದಾನ ಮಾಡುವ ಡಬ್ಬಿಯಲ್ಲಿ ಈ 38 ವರ್ಷದ ಮಹಿಳೆ ಸಿಕ್ಕಿಹಾಕಿಕೊಂಡಿದ್ದು ಅವರು ಅಲ್ಲಿ ಬಟ್ಟೆ ಹುಡುಕುತ್ತಿದ್ದಾಗ ಹಿಂದಿನಿಂದ ಬಂದು ಯಾರೋ ದೂಕಿದಾಗ ಒಳಗೆ ಸಿಕ್ಕಿಹಾಕಿಕೊಂಡಿದ್ದಾಗಿ ಹೇಳಿದ್ದಾರೆ.

ನಂತರ ಅವರ ಕೂಗು ಕೇಳಿ ಪೊಲೀಸರಿಗೆ ಫೋನ್ ಮಾಡಿದಾಗ ಬಂದು ರಕ್ಷಿಸಿದ್ದಾರೆ. ಆದರೆ ಈ ಮಹಿಳೆ ಈ ರೀತಿ ಸಿಕ್ಕಿದ್ದು ಇದು ಎರಡನೇ ಬಾರಿ ಆಗಿದ್ದು ಅವರ ಮಾತಿನ ನಿಜಾಂಶದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೆಹಲಿ ಪೊಲೀಸ್ ಕೈಗೆ ಸಿಕ್ಕಿಬಿದ್ದ ಮೂವರು ಭಯೋತ್ಪಾದಕರು

Posted: 09 Jan 2020 03:28 AM PST

सांकेतिक तस्वीर

ದೆಹಲಿ ಪೊಲೀಸ್ ವಿಶೇಷ ಸೆಲ್ ಮೂವರು ಐಎಸ್ ಐಎಸ್ ಉಗ್ರರನ್ನು ಬಂಧಿಸಿದೆ. ಎನ್ಕೌಂಟರ್ ನಂತ್ರ ವಾಜಿಯಾಬಾದ್ ನಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತ ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಸದ್ಯ ಪೊಲೀಸರು ಮೂವರನ್ನು ವಿಚಾರಣೆ ನಡೆಸುತ್ತಿದೆ. ಬಂಧಿತ ಮೂವರು ಭಯೋತ್ಪಾದಕರು ತಮಿಳುನಾಡಿನವರು. ಭಯೋತ್ಪಾದಕರು ಈಗಾಗಲೇ ಕ್ರಿಮಿನಲ್ ಘಟನೆಗಳಲ್ಲಿ ಭಾಗಿಯಾಗಿದ್ದಾರೆ. 2014 ರಲ್ಲಿ ಹಿಂದೂ ನಾಯಕನ ಹತ್ಯೆ ಮಾಡಿದ್ದರು ಎನ್ನಲಾಗಿದೆ. ಘಟನೆ ನಂತ್ರ ಮೂವರು ತಮಿಳುನಾಡಿನಿಂದ ಪರಾರಿಯಾಗಿದ್ದರು.

ಬಂಧಿತರಲ್ಲಿ ಇಬ್ಬರ ಹೆಸರು ಗೊತ್ತಾಗಿದೆ. ಖುಜಾ ಮೊಯೀದಿನ್, ಅಬ್ದುಲ್ ನವಾಜ್. ಇನ್ನೊಬ್ಬನ ಹೆಸ್ರು ಗೊತ್ತಾಗಿಲ್ಲ. ಬಂಧಿತರು ಎನ್‌ಸಿಆರ್ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ದಾಳಿ ಮಾಡಲು ಸಂಚು ಹೂಡಿದರು ಎನ್ನಲಾಗಿದೆ.

ನಗೆಪಾಟಲಿಗೆ ಕಾರಣವಾಗಿದೆ ಕ್ರಿಕೆಟ್ ಮಂಡಳಿ ಕಾರ್ಯದರ್ಶಿಯ ಈ ಹೇಳಿಕೆ

Posted: 09 Jan 2020 03:25 AM PST

ನಿರಂತರ ಮಳೆಯಿಂದಾಗಿ ಭಾರತ ಹಾಗೂ ಶ್ರೀಲಂಕಾ ವಿರುದ್ಧ ಗೌಹಾಟಿಯಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಒಂದೂ ಎಸೆತ ಕಾಣದೇ ರದ್ದಾಗಿದೆ.

ಪಿಚ್‌ ಹೊದಿಕೆ ಹಾಕಿದ್ದರೂ ಸಹ ಅಲ್ಲಲ್ಲಿ ನೀರು ನಿಂತಿರುವ ದೃಶ್ಯಗಳು ಸಾಕಷ್ಟು ಹಾಸ್ಯಮಯ ಮೆಮೆಗಳಿಗೆ ಕಾರಣವಾಗಿದೆ. ಏನಾದರೂ ಮಾಡಿ ಕನಿಷ್ಠ 5 ಓವರ್‌ಗಳ ಮಟ್ಟಿಗಾದರೂ ಪಂದ್ಯವನ್ನು ಆಯೋಜಿಸಬೇಕೆಂಬ ಭರದಲ್ಲಿ ಕ್ರೀಡಾಂಗಣದ ಸಿಬ್ಬಂದಿ ತೀರಾ ಹೇರ್‌ ಡ್ರೈಯರ್‌‌ಗಳು ಹಾಗೂ ವ್ಯಾಕ್ಯೂಮ್ ಕ್ಲೀನರ್‌ಗಳನ್ನೂ ಬಳಸಿ ಪಿಚ್‌ ಒಣಗಿಸಲು ಯತ್ನಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರೆಲ್ಲಾ ಒಂದೇ ಬಾರಿಗೆ ಎದ್ದು ನಿಂತು ತಂತಮ್ಮ ಮೊಬೈಲ್‌ಗಳಲ್ಲಿ ಇದ್ದ ಲೈಟ್‌ಗಳನ್ನು ಆನ್ ಮಾಡಿ, ಒಕ್ಕೊರಲಿನಿಂದ ವಂದೇ ಮಾತರಂ ಹಾಡಿಗೆ ದನಿಗೂಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅಸ್ಸಾಂ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ದೇಬೋಜಿತ್‌ ಸೈಕಾ, “ಮೊಬೈಲ್ ಫ್ಲಾಶ್‌ಲೈಟ್‌ಗಳನ್ನು ಆನ್ ಮಾಡುವ ಮೂಲಕ ಅವುಗಳಿಂದ ಬಿತ್ತರಗೊಳ್ಳುವ ಬೆಳಕು ಹಾಗೂ ಅಲ್ಪ ಶಾಖದಿಂದ ಮೈದಾನವನ್ನು ಒಣಗಿಸಲು ಅವರೆಲ್ಲಾ ಮುಂದಾಗಿದ್ದರು” ಎಂದು ಹೇಳುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ.

ಇವರ ಈ ಹೇಳಿಕೆಯನ್ನು ಬಳಸಿಕೊಳ್ಳುತ್ತಿರುವ ನೆಟ್ಟಿಗರು, ವಿವಿಧ ರೀತಿಯ ಮೆಮೆಗಳನ್ನು ಮಾಡುವ ಮೂಲಕ ಸಖತ್‌ ಎಂಜಾಯ್ ಮಾಡುತ್ತಿದ್ದಾರೆ.

Hair Dryer ৰ idea দিয়া মহান পণ্ডিতজন

Hair Dryer ৰ idea দিয়া মহান পণ্ডিতজনVideo via: @News18Assam

Posted by Magical Assam on Monday, January 6, 2020

Mobile flashlight theory সন্দৰ্ভত কি ক'লে অসম ক্ৰিকেট সন্থাৰ সম্পাদক দেৱজিৎ শইকীয়াই?

Mobile flashlight theory সন্দৰ্ভত কি ক'লে অসম ক্ৰিকেট সন্থাৰ সম্পাদক দেৱজিৎ শইকীয়াই?

Posted by Pratidin Time on Monday, January 6, 2020

ಬಾಹ್ಯಾಕಾಶ ನಿಲ್ದಾಣಕ್ಕೆ ರವಾನೆಯಾಯ್ತು ವೈನ್ ಬಾಟಲ್…! ಕಾರಣವೇನು ಗೊತ್ತಾ…?

Posted: 09 Jan 2020 03:22 AM PST

ಬಾಹ್ಯಾಕಾಶ ಕೇಂದ್ರದಲ್ಲಿ ಆಲ್ಕೋಹಾಲಿಕ್ ಪೇಯಗಳನ್ನು ತೆಗೆದುಕೊಳ್ಳುವಂತಿಲ್ಲ. ಆದರೂ 12 ವೈನ್ ಬಾಟಲಿಗಳು ಅಲ್ಲಿಗೆ ಹೋಗಿದ್ದಾದರೂ ಹೇಗೆ?

ಕಳೆದ ನವೆಂಬರ್‌ನಲ್ಲಿ, ಒಂದು ಕೇಸ್‌ ವೈನ್ ಹಾಗೂ ಕುಕ್ಕೀಗಳನ್ನು ಬೇಕ್ ಮಾಡಲೆಂದು ಓವನ್‌ ಒಂದನ್ನು ಬಾಹ್ಯಾಕಾಶ ಕೇಂದ್ರಕ್ಕೆ ಲಿಫ್ಟ್‌ ಮಾಡಲಾಗಿತ್ತು.

ಬಾಹ್ಯಾಕಾಶದಲ್ಲಿನ ತೂಕರಹಿತ ವಾತಾವರಣ ಹಾಗೂ ವಿಕಿರಣಗಳ ಪಸರುವಿಕೆಯಿಂದಾಗಿ ಹೇಗೆಲ್ಲಾ ಪ್ರಭಾವ ಬೀರಬಹುದು ಎಂಬುದನ್ನು ಅರಿಯಲು ಈ ರೀತಿ ಮಾಡಲಾಗಿದೆ.

ಬಾಹ್ಯಾಕಾಶದಲ್ಲಿ ಒಂದು ವರ್ಷದ ಮಟ್ಟಿಗೆ ಈ ವೈನ್‌ ಅನ್ನು ಇಟ್ಟು ಬಳಿಕ ಅದನ್ನು ಮತ್ತೆ ಭೂಮಿಗೆ ಕಳುಹಿಸಲಾಗುತ್ತದೆ. ಇಷ್ಟೇ ದಿನಗಳ ಕಾಲ ಭೂಮಿ ಮೇಲೆ ಇಡಲಾದ ವೈನ್‌ಗಳ ಜೊತೆಗೆ ಇದನ್ನು ತುಲನೆ ಮಾಡುವ ಮೂಲಕ ಅದೆಷ್ಟರ ಮಟ್ಟಿಗೆ ಹುಳಿ ಬಂದಿದೆ ಎಂದು ತಿಳಿಯುವ ಕುತೂಹಲ ಸಂಶೋಧಕರದ್ದು.

ಅಂದ ಹಾಗೆ ಈ ಪ್ರಯೋಗದಲ್ಲಿ ಫ್ರಾನ್ಸ್‌, ಬವಾರಿಯಾ ಹಾಗೂ ಜರ್ಮನಿಯ ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿವೆ.

ಈ ಹಿಂದೆ, 1985ರಲ್ಲಿ ಫ್ರೆಂಚ್‌ ಗಗನಯಾನಿಯೊಬ್ಬ ಡಿಸ್ಕವರಿ ಗಗನ ನೌಕೆಯಲ್ಲಿ ಹೋಗುವಾಗ ತನ್ನೊಂದಿಗೆ ವೈನ್ ಬಾಟಲಿಯೊಂದನ್ನು ಕೊಂಡೊಯ್ದಿದ್ದ.

ಗಗನಯಾನಿಗಳಿಗೆ ಸಿದ್ಧವಾಯ್ತು ವಿಶೇಷ ಅಡುಗೆ

Posted: 09 Jan 2020 02:58 AM PST

ಮಹತ್ವಾಕಾಂಕ್ಷೆಯ ಮಿಷನ್ ಗಗನಯಾನಕ್ಕೆ ಆಯ್ಕೆಯಾದ ಭಾರತೀಯ ಬಾಹ್ಯಾಕಾಶ ಯಾನಿಗಳಾಗಿ ದೇಸಿ ಆಹಾರವನ್ನು ಇಲ್ಲಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯವು ಸಿದ್ಧಪಡಿಸಿದೆ.

2022ರ ವೇಳೆಗೆ ಗಗನಯಾನಕ್ಕೆ ಹೋಗುವ ಸಲುವಾಗಿ ಈ ಸಂಶೋಧನಾ ಪ್ರಯೋಗಾಲಯವು ಆಹಾರವನ್ನು ಸಿದ್ಧಪಡಿಸುತ್ತಿದೆ.

ಎಗ್ ರೋಲ್, ವೆಜ್ರೋಲ್, ಇಡ್ಲಿ, ಹೆಸರು ಬೇಳೆ ಹಲ್ವಾ ಮತ್ತು ವೆಜ್ ಪಲಾವ್ ಗಳನ್ನು ತಯಾರಿಸಲಾಗಿದೆ. ಅಲ್ಲದೆ ಬಾಹ್ಯಾಕಾಶಯಾನಿಗಳಿಗೆ ಫುಡ್ ಹೀಟರ್ ಗಳನ್ನು ಸಹ ನೀಡಲಾಗುತ್ತದೆ.

ಬಾಹ್ಯಾಕಾಶದಲ್ಲಿ ಶೂನ್ಯ ಗುರುತ್ವಾಕರ್ಷಣೆ ಬಲ ಇದ್ದ ಸಂದರ್ಭದಲ್ಲಿ ಬಾಹ್ಯಾಕಾಶಯಾನಿಗಳು ನೀರು ಇಲ್ಲವೇ ಜ್ಯೂಸ್ ಅನ್ನು ಕುಡಿಯಬಹುದಾಗಿದೆ.

ಈ ಬಗ್ಗೆ ನೆಟ್ಟಿಗರು ಸಹ ಅನೇಕ ಕಾಮೆಂಟ್ ಗಳನ್ನು ಮಾಡಿದ್ದು, ಈ ಪಟ್ಟಿಗೆ ಇನ್ನೊಂದಿಷ್ಟು ಆಹಾರವನ್ನು ಸೇರ್ಪಡೆ ಮಾಡಬಾರದೇಕೆ ಎಂದು ಪ್ರಶ್ನಿಸುತ್ತಿದ್ದಾರೆ.

ಬಿರಿಯಾನಿ, ಉಪ್ಪಿನಕಾಯಿ, ಸಮೋಸ, ಲಡ್ಡು ಈ ಪಟ್ಟಿಯಲ್ಲಿ ಕಾಣುತ್ತಿಲ್ಲ ಎಂದು ಹಲವರು ಕಾಲೆಳೆದಿದ್ದಾರೆ. ಇನ್ನೊಬ್ಬ ಟ್ವಿಟರ್ ಬಳಕೆದಾರ ಹೀಗೆ ಬರೆದಿದ್ದು, “ಆನ್‌ಲೈನ್ ಮೂಲಕ ಬುಕ್ ಮಾಡಿದರೆ, ಸ್ವಿಗ್ಗಿ ಆಹಾರವನ್ನು ಸರಬರಾಜು ಮಾಡುತ್ತದೆ” ಎಂದು ಹೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ವಿಗ್ಗಿ ಸಂಸ್ಥೆ, ನಾವು ಈಗಾಗಲೇ ಶುರು ಮಾಡಿದ್ದೇವೆ ಎಂದು ಬರೆದುಕೊಂಡಿದೆ.

ಗೊರಿಲ್ಲಾಗೆ ಕಣ್ಣಿನ ಶಸ್ತ್ರ ಚಿಕಿತ್ಸೆ

Posted: 09 Jan 2020 02:54 AM PST

ವಿಶ್ಚದಲ್ಲಿ ಮೊದಲ ಬಾರಿಗೆ ಗೊರಿಲ್ಲಾ ಕಣ್ಣಿನ ಆಪರೇಷನ್ ಮಾಡುವ ಮೂಲಕ ಹೊಸ ಇತಿಹಾಸವನ್ನು ಕ್ಯಾಲಿಫೋರ್ನಿಯಾ ವೈದ್ಯಕೀಯ ತಂಡ ನಿರ್ಮಿಸಿದೆ.

ಹೌದು, ಕ್ಯಾಲಿಫೋರ್ನಿಯಾ ಬಳಿಯ ಸ್ಯಾನ್ ಡಿಯಾಗೊ ಸಫಾರಿ ಝೂ‌ನಲ್ಲಿದ್ದ ಗೊರಿಲ್ಲಾ ಒಂದಕ್ಕೆ ದೃಷ್ಟಿ ಸಮಸ್ಯೆಯಿತ್ತು.

ಹತ್ತುವಾಗ ಅಥವಾ ಆಟವಾಡುವಾಗ ಬಡಿಸಿಕೊಂಡು ಈ ರೀತಿ ಆಗಿರಬಹುದು ಎನ್ನಲಾಗಿದೆ.

ಆದ್ದರಿಂದ ಎಡಗಣ್ಣಿನ ಪೊರೆ ತೆಗೆಯಲು ಝೂ ವೈದ್ಯರ ನೇತ್ರ ತಜ್ಞರನ್ನು ಸಂಪರ್ಕಿಸಿದಾಗ ಶಸ್ತ್ರಚಿಕಿತ್ಸೆ ಮಾಡಲು ಒಪ್ಪಿಗೆ ನೀಡಿದ್ದಾರೆ.

ಬಳಿಕ ಪಶು ವೈದ್ಯರು ಹಾಗೂ ನೇತ್ರ ತಜ್ಞರು ವಿಶ್ವದ ಮೊದಲ ಗೊರಿಲ್ಲಾ ನೇತ್ರ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ.

ಇದೀಗ ಆಪರೇಷನ್ ಯಶಸ್ವಿಯಾಗಿದ್ದು, ಗೊರಿಲ್ಲಾವನ್ನು ಪುನಃ ಝೂಗೆ ಬಿಡಲಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಎಡಗಣ್ಣಿನಲ್ಲಿದ್ದ ಪೊರೆಯನ್ನು ತೆಗೆದು ಹೊಸ ಲೆನ್ಸ್ ಹಾಕಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮನುಷ್ಯ ದೇಹದ ರೀತಿಯಲ್ಲಿಯೇ ಇರುವುದರಿಂದ ಸುಲಭವಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ. ಇದೀಗ ಗೊರಿಲ್ಲಾ ತನ್ನ ಸ್ನೇಹಿತರೊಂದಿಗೆ ಆಟವಾಡಿಕೊಂಡಿದ್ದರೂ, ವೈದ್ಯರ ತಂಡ ಮುಂದಿನ ಕೆಲ ತಿಂಗಳ ಕಾಲ ಚಲನವಲನ ಗಮನಿಸುತ್ತಿರುತ್ತದೆ ಎಂದು ಹೇಳಲಾಗಿದೆ.

ವಿಟಮಿನ್ ಇ ಕ್ಯಾಪ್ಸೂಲ್ ಬಳಸಿ ಕಲೆ ನಿವಾರಿಸಿಕೊಳ್ಳಿ

Posted: 09 Jan 2020 02:51 AM PST

ವಿಟಮಿನ್ ಇ ಕ್ಯಾಪ್ಸೂಲ್ ಅನ್ನು ಉಪಯೋಗಿಸುವುದರಿಂದ ಮುಖದ ಕಲೆ ನಿವಾರಿಸಿಕೊಳ್ಳುವುದರ ಜತೆಗೆ ತಲೆಕೂದಲಿನ ಸಮಸ್ಯೆ, ಸ್ಟ್ರೆಚ್ ಮಾರ್ಕ್ ಅನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.

ವಿಟಮಿನ್ ಈ ಕ್ಯಾಪ್ಸೂಲ್ ಹೇಗೆ ಉಪಯೋಗಿಸಬೇಕು ಎಂಬುದರ ಕುರಿತು ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.

ನಿಮ್ಮದು ಎಣ್ಣೆ ತ್ವಚೆಯಾದರೆ ಒಂದು ವಿಟಮಿನ್ ಈ ಕ್ಯಾಪ್ಸೂಲ್ ತೆಗೆದುಕೊಂಡು ಒಂದು ಪಿನ್ ಅಥವಾ ಸೂಜಿಯ ಸಹಾಯದಿಂದ ಚುಚ್ಚಿ ಅದರಲ್ಲಿರುವ ಎಣ್ಣೆಯನ್ನು ನಿಮ್ಮ ಅಂಗೈಗೆ ಹಾಕಿಕೊಂಡು ಮುಖದ ಮೇಲೆ ನಿಧಾನಕ್ಕೆ ಮಸಾಜ್ ಮಾಡಿಕೊಳ್ಳಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಗುಳ್ಳೆ, ಕಲೆಗಳು ನಿಧಾನಕ್ಕೆ ಕಡಿಮೆಯಾಗುತ್ತದೆ.

ಇನ್ನು ಡೆಲಿವರಿ ನಂತರ ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ಸ್ ನಿವಾರಿಸುವುದರಲ್ಲಿ ಕೂಡ ಈ ವಿಟಮಿನ್ ಇ ಕ್ಯಾಪ್ಸೂಲ್ ತುಂಬಾನೇ ಸಹಕಾರಿ. 2 ದೊಡ್ಡ ಚಮಚ ಆಲಿವ್ ಎಣ್ಣೆ ತೆಗೆದುಕೊಳ್ಳಿ. ಅದಕ್ಕೆ ಒಂದು ವಿಟಮಿನ್ ಈ ಮಾತ್ರೆ ಕ್ಯಾಪ್ಸೂಲ್ ಹಾಕಿ ಇವೆರೆಡು ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಹೊಟ್ಟೆಯ ಭಾಗಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಸ್ಟ್ರೆಚ್ ಮಾರ್ಕ್ ಕಡಿಮೆಯಾಗುತ್ತದೆ.

ಮಾವನ ಪ್ರೀತಿಗೆ ಬಿದ್ದವಳು ಗಂಡನ ಹತ್ಯೆ ಮಾಡಿದ್ಲು…!

Posted: 09 Jan 2020 02:49 AM PST

ಮಾವನ ಪ್ರೀತಿಗೆ ಬಿದ್ದ ವಿವಾಹಿತೆಯೊಬ್ಬಳು ತನ್ನ ಪತಿ ಹತ್ಯೆ ಮಾಡಿದ್ದಾಳೆ. ಘಟನೆ ಹರ್ಯಾಣದ ಹಿಸಾರ್ ನಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆ ಹಾಗೂ ಆಕೆ ಮಾವನನ್ನು ಬಂಧಿಸಿದ್ದಾರೆ.

ಮಹಿಳೆ ಮದುವೆಗೂ ಮುನ್ನವೇ ಸಂಬಂಧದಲ್ಲಿ ಮಾವನಾಗುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳಂತೆ. 2007ರಲ್ಲಿ ಮಹಿಳೆಯನ್ನು ಬೇರೆ ಯುವಕನ ಜೊತೆ ಮದುವೆ ಮಾಡಲಾಗಿದೆ. ಇದಾದ್ಮೇಲೆ ಮಹಿಳೆಗೆ ಒಂದು ಗಂಡು ಮಗು ಹುಟ್ಟಿದೆ. 2015ರಲ್ಲಿ ತವರಿಗೆ ಬಂದಾಗ ಮತ್ತೆ ಮಾವನ ಭೇಟಿಯಾಗಿದೆ. ಮಾವನನ್ನು ಬಿಟ್ಟಿರಲು ಸಾಧ್ಯವಾಗದ ಮಹಿಳೆ ಆಗಾಗ ಆತನನ್ನು ಭೇಟಿಯಾಗ್ತಿದ್ದಳು ಎನ್ನಲಾಗಿದೆ.

ಪತಿಗೆ ವಿಚ್ಛೇದನ ನೀಡುವಂತೆ ಮಾವ ಹೇಳಿದ್ದನಂತೆ. ಮಗನ ಕಾರಣ ವಿಚ್ಛೇದನ ನೀಡಲು ಮಹಿಳೆ ನಿರಾಕರಿಸಿದ್ದಳಂತೆ. ಆದ್ರೆ ಪತಿಯನ್ನು ದಾರಿಯಿಂದ ದೂರ ಮಾಡಲು ಇಬ್ಬರೂ ಪ್ರಯತ್ನಿಸಿದ್ದಾರೆ. ಸ್ನೇಹಿತರ ಜೊತೆ ಸೇರಿ ಮಾವನ ಹತ್ಯೆ ಪ್ಲಾನ್ ಗೆ ಮಹಿಳೆ ನೆರವಾಗಿದ್ದಾಳೆ. ಆದ್ರೆ ವಿಚಾರಣೆ ವೇಳೆ ಇಬ್ಬರೂ ಬಾಯ್ಬಿಟ್ಟಿದ್ದಾರೆ.

ರಾಣಿ ಎಲಿಜಬೆತ್ ಗೆ ದೊಡ್ಡ ಶಾಕ್ ನೀಡಿದ ಹ್ಯಾರಿ, ಮೇಘನ್

Posted: 09 Jan 2020 02:44 AM PST

ಬ್ರಿಟನ್ ರಾಜಮನೆತನದಲ್ಲಿ ದೊಡ್ಡ ಬದಲಾವಣೆಯಾಗ್ತಿದೆ. ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವ್ರ ಪತ್ನಿ ಮೇಘನ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಹ್ಯಾರಿ ಹಾಗೂ ಮೇಘನ್ ರಾಜಮನೆತನದ ಹಿರಿಯ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದಾರೆ. ಆರ್ಥಿಕವಾಗಿ ಸ್ವಾವಲಂಭಿಯಾಗುವ ಬಗ್ಗೆ ದಂಪತಿ ಆಲೋಚನೆ ಮಾಡ್ತಿದ್ದಾರೆ ಎನ್ನಲಾಗಿದೆ.

ಹಲವಾರು ತಿಂಗಳು ಈ ಬಗ್ಗೆ ಗಂಭೀರ ಚರ್ಚೆ ನಡೆಸಿ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆಂದು ದಂಪತಿ ಹೇಳಿದ್ದಾರೆ. ಉತ್ತರ ಅಮೆರಿಕಾದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವ ದಂಪತಿ, ರಾಜಮನೆತನದ ಹಿರಿಯ ಸ್ಥಾನ ತೊರೆಯಲಿದ್ದಾರೆ. ಆದ್ರೆ ಬ್ರಿಟಿಷ್ ರಾಣಿಗೆ ಈಗಿನಂತೆ ಮುಂದೆಯೂ ಗೌರವ ಹಾಗೂ ಬೆಂಬಲ ನಮ್ಮಿಂದ ಸಿಗಲಿದೆ ಎಂದಿದ್ದಾರೆ.

ಹ್ಯಾರಿ ಹಾಗೂ ಮೇಘನ್ ನಿರ್ಧಾರ ರಾಣಿ ಎರಡನೇ ಎಲಿಜಬೆತ್ ಗೆ ಶಾಕ್ ನೀಡಿದೆ. ಈ ಬಗ್ಗೆ ಅರಮನೆ ಮೂಲಗಳು ಹೇಳಿಕೆ ಕೂಡ ನೀಡಿವೆ. ಅವ್ರ ನಿರ್ಧಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಮಯ ಹಿಡಿಯುತ್ತದೆ ಎಂದು ರಾಜಮನೆತನದ ಮೂಲಗಳು ಹೇಳಿವೆ.

ದಂಗಾಗಿಸುವಂತಿದೆ ಖ್ಯಾತ ಫುಟ್ಬಾಲ್ ಆಟಗಾರ ರೋನಾಲ್ಡೊ ವಾಚ್ ಬೆಲೆ…!

Posted: 09 Jan 2020 01:17 AM PST

ವಿಶ್ವದ ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಅವರ ಧರಿಸುವ ಪ್ರತಿಯೊಂದು ಅವರಷ್ಟೇ ದುಬಾರಿ ವಸ್ತುಗಳು ಅನ್ನೋದು ಅವರನ್ನು ಬಲ್ಲವರಿಗೆ ಮಾತ್ರ ಗೊತ್ತು.

ದುಬೈನಲ್ಲಿ ಇತ್ತೀಚೆಗೆ ನಡೆದ 14ನೇ ದುಬೈ ಅಂತಾರಾಷ್ಟ್ರೀಯ ಕ್ರೀಡಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರೊನಾಲ್ಡೊ ಅವರು ಧರಿಸಿದ್ದ ವಾಚ್ ಹಲವರ ಆಕರ್ಷಣೆಗೆ ಕಾರಣವಾಗಿತ್ತು.

“ದಿ ಸನ್” ಪತ್ರಿಕೆ ವರದಿ ಮಾಡಿರುವಂತೆ ರೋಲೆಕ್ಸ್ ಕಂಪನಿಯ ಅತ್ಯಂತ ಅಪರೂಪದ ವಾಚಾಗಿರುವ ಇದು 18 ಕ್ಯಾರಟ್ ಅಪ್ಪಟ ಚಿನ್ನ ಮತ್ತು 30 ಕ್ಯಾರಟ್ ನಷ್ಟು ವಜ್ರ ಲೇಪಿತವಾಗಿದೆ. ಅವರ ಪತ್ನಿ ಜಾರ್ಜಿಯಾ ರೋಡ್ರಿಗಸ್ ಜತೆಯಲ್ಲಿ ವಾಚ್ ಧರಿಸಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಭಾರೀ ವೈರಲ್ ಆಗಿದೆ.

ಈ ವಾಚ್ ನ ಬೆಲೆ 485,350 ಅಮೆರಿಕನ್ ಡಾಲರ್ ಅಂದರೆ ರೂಪಾಯಿ ಮೌಲ್ಯ ಬರೋಬ್ಬರಿ 3.48 ಕೋಟಿ. ಅಂದರೆ ಭಾರತದಲ್ಲಿ ಈ ವಾಚಿನ ಬೆಲೆಗೆ ಹೊಸ ಮಾದರಿಯ 7 ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಬಹುದಾಗಿದೆ.

ಜಗತ್ತಿನ ಪ್ರತಿಷ್ಠಿತ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಮೊದಲಾದ ಕ್ಲಬ್ ಪರ ಆಡಿರುವ ರೊನಾಲ್ಡೊ ಇತ್ತೀಚೆಗೆ 4 ವರ್ಷಗಳ ಅವಧಿಗೆ ಇಟಾಲಿಯನ್ ಕ್ಲಬ್ ಜುವೆಂಟಸ್ ಪರ ಆಡಲು 852 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.