Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Tuesday, January 7, 2020

Kannada News | Karnataka News | India News

Kannada News | Karnataka News | India News


ಸ್ನೇಹಿತೆಯನ್ನೇ ಅತ್ಯಾಚಾರ ಮಾಡಿದ ಟೆಕ್ಕಿ

Posted: 07 Jan 2020 07:29 AM PST

ಸ್ನೇಹಿತನ ಮಾತಿಗೆ ಬೆಲೆ ಕೊಟ್ಟು ಪಾರ್ಟಿ ಮಾಡಲು ಬಂದ ಉತ್ತರ ಭಾರತ ಮೂಲದ ಯುವತಿ ಮೇಲೆ ಸ್ನೇಹಿತನೇ ಅತ್ಯಾಚಾರ ಮಾಡಿದ್ದಾನೆ.

ತಾನೂ ಕುಡಿದು ಸ್ನೇಹಿತೆಗೂ ಕಂಠಪೂರ್ತಿ ಕುಡಿಸಿ, ಅತ್ಯಾಚಾರ ಮಾಡಿದ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುವ ವಿನೋದ್ ರಾಜ್ ಎಂಬಾತ ತನ್ನ ಸ್ನೇಹಿತೆ ಮೇಲೆಯೇ ಅತ್ಯಾಚಾರ ಮಾಡಿದ ಟೆಕ್ಕಿ.

ಕುಡಿದ ಮತ್ತಿನಲ್ಲಿದ್ದ ಸ್ನೇಹಿತೆ ಮೇಲೆ ವಿನೋದ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಯುವತಿ ದಿಶಾ ಪ್ರಕರಣ ತಿಳಿದಿದ್ದ ಯುವತಿ ನನ್ನನ್ನು ಸಾಯಿಸಬೇಡ ಎಂದು ಕಾಮುಕನನ್ನು ಬೇಡಿಕೊಂಡಿದ್ದಳಂತೆ. ಹೀಗಾಗಿ ಪೊಲೀಸರಿಗೆ ವಿಷಯ ತಿಳಿಸಬೇಡ ಎಂದು ಹೇಳಿದ್ದಾನೆ ವಿನೋದ್. ನಂತರ ಈ ಯುವತಿ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿನೋದ್ ಪೊಲೀಸರ ಅತಿಥಿಯಾಗಿದ್ದಾನೆ.

ಸಿದ್ದೇಶ್ವರ ಶ್ರೀಗಳ ಕೆಲಸಕ್ಕೆ ಅಪಾರ ಮೆಚ್ಚುಗೆ

Posted: 07 Jan 2020 07:11 AM PST

ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆಗೆ ಸಿದ್ಧತೆಗಳು ನಡೆಯುತ್ತಿವೆ. ಜನವರಿ 12, 13, 14ರಂದು ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಹೀಗಾಗಿ ಸಿದ್ದತೆಗಳು ಕೂಡ ಭರದಿಂದ ಸಾಗಿವೆ. ಜಾತ್ರೆಯ ನಿಮಿತ್ತ ವಿನೂತನ ವೃಕ್ಷ ಸಂಕಲ್ಪ ಜಾಗೃತಿ ಅಭಿಯಾನವನ್ನು ಇಂದು ಆಯೋಜಿಲಾಗಿತ್ತು.

ಈ ಜಾಥಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್‍ಕುಮಾರ ಚಾಲನೆ ನೀಡಿದ್ದಾರೆ.

ಈ‌ ಕಾರ್ಯಕ್ರಮದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದೇ ವೇಳೆ ವಿದ್ಯಾರ್ಥಿಯೊಬ್ಬನ ಶೂ ಲೇಸ್ ಬಿಚ್ಚಿದೆ. ಆಗ ಗವಿ ಮಠದ ಗವಿ ಸಿದ್ದೇಶ್ವರ ಶ್ರೀಗಳು ವಿದ್ಯಾರ್ಥಿಯೊಬ್ಬನ ಶೂ ಲೇಸ್ ಕಟ್ಟಿ ಸರಳತೆ ಮೆರೆದಿದ್ದಾರೆ. ಶ್ರೀಗಳ ಈ ಕೆಲಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಮುಷ್ಕರದಲ್ಲಿ ಪಾಲ್ಗೊಂಡ ನೌಕರರ ವಿರುದ್ಧ ಕಠಿಣ ಕ್ರಮ: ಸರ್ಕಾರದಿಂದ ‘ಎಚ್ಚರಿಕೆ’

Posted: 07 Jan 2020 07:05 AM PST

 ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು, ರೈತರು, ನೌಕರರ ಸಂಘಟನೆಗಳ ವತಿಯಿಂದ ಜನವರಿ 8 ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಿಂದ ಮುಷ್ಕರದಲ್ಲಿ ಭಾಗವಹಿಸದಂತೆ ತಡೆಯಲು ನಗದು ಸಹಿತ ರಜೆ ನಿರಾಕರಿಸಲು ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ನೌಕರರು, ಸಾರ್ವಜನಿಕ ವಲಯದ ಸಂಸ್ಥೆಗಳು, ಸರ್ಕಾರಿ ಬ್ಯಾಂಕ್ ಗಳ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಂಡಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದ್ದು, ಆದೇಶ ಉಲ್ಲಂಘಿಸಿ ನೌಕರರು ಪ್ರತಿಭಟನೆ ನಡೆಸಿದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ನಾಳೆ ಭಾರತ್ ಬಂದ್: ಲಭ್ಯವಿರುವ ಸೇವೆಗಳ ಕುರಿತು ಇಲ್ಲಿದೆ ಮಾಹಿತಿ

Posted: 07 Jan 2020 06:44 AM PST

Image result for bharat-bandhವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಸುಮಾರು 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ನಾಳೆ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ಆದರೆ ಕೆಲವೊಂದು ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಲ್ಲ ಎಂದು ಹೇಳುತ್ತಿವೆ.

ಸುಮಾರು 12 ಬೇಡಿಕೆಗಳನ್ನ ಇಟ್ಟು ಕೇಂದ್ರ ಸರ್ಕಾರದ ವಿರುದ್ಧ ನಾಳೆ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ. ಐ.ಎನ್.ಟಿ.ಯು., ಎಐಟಿಯುಸಿ. ಸಿಐಟಿಯುಸಿ, ಎಐಯುಟಿಯುಸಿ ಸೇರಿದಂತೆ ಸುಮಾರು 10 ಕ್ಕೂ ಹೆಚ್ವು ಸಂಘನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ.

ಕನಿಷ್ಟ 21 ಸಾವಿರ ರೂ.ವೇತನ ನಿಗದಿಪಡಿಸಬೇಕು. ಸ್ವಾಮಿನಾಥನ್ ವರದಿಯನ್ನ ಕೂಡಲೇ ಜಾರಿಗೊಳಿಸಬೇಕು. ಸಾರ್ವಜನಿಕ ಉದ್ಯಮಗಳನ್ನ ಖಾಸಗೀಕರಣ ಮಾಡುವುದನ್ನ ನಿಲ್ಲಿಸಬೇಕು. ಗುತ್ತಿಗೆ ಆಧಾರದ ಮೇಲೆ ನೇಮಕಾತಿಯನ್ನ ರದ್ದುಪಡಿಸಬೇಕು. ಎಲ್ಲಾ ನೌಕರರಿಗೂ ಸೇವಾ ಭದ್ರತೆ ಜೊತೆ ಜೀವನ ಭದ್ರತೆ ಕಲ್ಪಿಸಬೇಕು. ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಖಾಸಗಿ ವಲಯಗಳಲ್ಲಿ ನೇರ ನೇಮಕಾತಿ ಪದ್ದತಿ ಜಾರಿಯಾಗಬೇಕು. ಬ್ಯಾಂಕ್‌ ಗಳ ವಿಲೀನಿಕರಣ ನಿಲ್ಲಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನ ಇಟ್ಟು ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ.

ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದರೆ, ಒಂದಿಷ್ಟು ಸಂಘಟನೆಗಳು ಬೆಂಬಲ ನೀಡಲ್ಲ ಎಂದು ಹೇಳುತ್ತಿವೆ. ಲಾರಿ ಮಾಲೀಕರ ಸಂಘ, ಟ್ಯಾಕ್ಸಿ, ಓಲಾ, ಊಬರ್, ಹೋಟೆಲ್ ಮಾಲೀಕರು ಮುಷ್ಕರಕ್ಕೆ ಬೆಂಬಲ ನೀಡುತ್ತಿಲ್ಲ ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ತಟಸ್ಥ ನೀತಿ ಅನುಸರಿಸುತ್ತಿದ್ದು, ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಸಾರಿಗೆ ವ್ಯವಸ್ಥೆ ಯಥಾ ಸ್ಥಿತಿಯಲ್ಲಿರಲಿದೆ. ಆಸ್ಪತ್ರೆ ಸೇವೆ, ಹಾಲು, ಮೆಡಿಕಲ್ ಶಾಪ್, ತರಕಾರಿ ಸೇರಿದಂತೆ ಒಂದಿಷ್ಟು ಸೇವೆಗಳಿಗೆ ಯಾವುದೇ ಅಡ್ಡಿ ಇಲ್ಲ.

ಡಿಸಿಎಂ ಹುದ್ದೆ ಬಗ್ಗೆ ಸಚಿವ ಶ್ರೀರಾಮುಲು ಹೇಳಿದ್ದೇನು ಗೊತ್ತಾ…?

Posted: 07 Jan 2020 06:28 AM PST

ಚಿತ್ರದುರ್ಗ: ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದೆ ಎಂದು ಆರೋಗ್ಯ ಖಾತೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಭೇಟಿಯ ಸಂದರ್ಭದಲ್ಲಿ ವಾಲ್ಮೀಕಿ ಜಾತ್ರೆಗೆ ಮುಖ್ಯಮಂತ್ರಿಯವರನ್ನು ಆಹ್ವಾನಿಸಲಾಗಿದೆ. ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಕುರಿತಂತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ತಿಳಿಸಿದ್ದಾರೆ..

ನಾನು ಉಪಮುಖ್ಯಮಂತ್ರಿ ಆಗಬೇಕೆಂಬುದು ಸಮುದಾಯದ ಮತ್ತು ಜನರ ಅಪೇಕ್ಷೆಯಾಗಿದೆ. ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆಯಾಗಲಿದೆ. ನನಗೆ ಉನ್ನತ ಸ್ಥಾನ ನೀಡುವ ವಿಶ್ವಾಸವಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರು ಒಮ್ಮೆ ಕಾಯ್ದೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ನಾಳೆ ಮುಷ್ಕರ ಹಿನ್ನೆಲೆ: ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ

Posted: 07 Jan 2020 05:57 AM PST

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಜನವರಿ 8 ರಂದು ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ.

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು, ಎಐಟಿಯುಸಿ ಸೇರಿದಂತೆ ಅನೇಕ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ. ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ನೌಕರರು ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರು, ನೌಕರರು, ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ನೀಡಿದ್ದು, ನಾಳಿನ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಮುಷ್ಕರ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಎಂದಿನಂತೆಯೇ ಶಾಲಾ-ಕಾಲೇಜುಗಳು ನಡೆಯಲಿವೆ. ಸರ್ಕಾರ ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ನಾಳೆ ಎಂದಿನಂತೆ ಶಾಲಾ-ಕಾಲೇಜುಗಳನ್ನು ನಡೆಸಲಾಗುವುದು ಎಂದು ಹೇಳಲಾಗಿದೆ. ಆಯಾ ಜಿಲ್ಲೆಗಳಲ್ಲಿ ಮುಷ್ಕರದ ಪರಿಸ್ಥಿತಿ ನೋಡಿಕೊಂಡು ರಜೆ ಘೋಷಣೆ ಮಾಡುವಂತೆ ತಿಳಿಸಲಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲವೆಂದು ಹೇಳಲಾಗಿದೆ.

ಅಧಿಕಾರಿಗಳ ಯಡವಟ್ಟಿನಿಂದ 3.50 ಕೋಟಿ ರೂ. ಒಡೆಯನಾದ..!?

Posted: 07 Jan 2020 05:42 AM PST

ಹುಬ್ಬಳ್ಳಿಯ ಕೋರ್ಟ್ ರಸ್ತೆಯಲ್ಲಿ ಚಮ್ಮಾರಿಕೆ ಮಾಡುವ ವ್ಯಕ್ತಿಯೊಬ್ಬರು 3.50 ಕೋಟಿ ರೂ. ಒಡೆಯರಾಗಿದ್ದಾರೆ. ಆದರೆ ಅದು ದಾಖಲೆಯಲ್ಲಿ ಮಾತ್ರ.

ತಹಶೀಲ್ದಾರ್ ಕಚೇರಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಆದರ್ಶ ಅಡಿವೆಪ್ಪ ಚಂದಾವರಕರ್ ಅವರು 3.50 ಕೋಟಿ ರೂ. ಆದಾಯ ಹೊಂದಿರುವುದಾಗಿ ಪ್ರಮಾಣ ಪತ್ರ ನೀಡಿದ್ದಾರೆ.

ತಹಶೀಲ್ದಾರ್ ಕಚೇರಿಗೆ ಆದಾಯ ಪ್ರಮಾಣ ಪತ್ರಕ್ಕೆ ಬಡದಯ್ಯನಹಕ್ಕಲ ನಿವಾಸಿಯಾಗಿರುವ ಆದರ್ಶ ಅರ್ಜಿ ಸಲ್ಲಿಸಿದ್ದು ಅಧಿಕಾರಿಗಳು ಯಡವಟ್ಟಿನಿಂದ ಅವರ ಆದಾಯವನ್ನು 3.50 ಕೋಟಿ ರೂ. ತೋರಿಸಿದ್ದಾರೆ.

ಪ್ರಮಾಣಪತ್ರದಲ್ಲಿ ಅಂಕಿ ಮತ್ತು ಅಕ್ಷರದಲ್ಲಿ ಆದರ್ಶ ಅವರ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 3 ಕೋಟಿ 50 ಲಕ್ಷ ರೂಪಾಯಿ ಮಾತ್ರ ಎಂದು ದೃಢೀಕರಣ ನೀಡಲಾಗಿದೆ. ಡಾಟಾ ಎಂಟ್ರಿ ಆಪರೇಟರ್ ಯಡವಟ್ಟು ಮಾಡಿದ ಈ ವಿಷಯ ಗಮನಕ್ಕೆ ಬರುತ್ತಲೇ ತಹಶೀಲ್ದಾರ್ ಕಚೇರಿಯಿಂದ ಆ ಪ್ರಮಾಣಪತ್ರವನ್ನು ವಾಪಸ್ ಪಡೆದು ಬೇರೆ ಪ್ರಮಾಣಪತ್ರ ನೀಡಲಾಗಿದೆ ಎಂದು ಹೇಳಲಾಗಿದೆ.

ಗಲ್ಲು ಶಿಕ್ಷೆ ಸಮಯ ನಿಗದಿಯಾಗ್ತಿದ್ದಂತೆ ಬೆಚ್ಚಿಬಿದ್ದ ನಿರ್ಭಯಾ ಅತ್ಯಾಚಾರಿಗಳಿಂದ ಕ್ಯುರೇಟಿವ್ ಅರ್ಜಿ ಸಲ್ಲಿಕೆ ಸಾಧ್ಯತೆ

Posted: 07 Jan 2020 05:03 AM PST

ದೆಹಲಿಯಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ದಿನಾಂಕ  ನಿಗದಿಯಾಗಿದೆ.

ಪ್ರಕರಣದ ನಾಲ್ವರು ಅಪರಾಧಿಗಳಾದ ಅಕ್ಷಯ್, ಮುಕೇಶ್, ವಿನಯ್, ಪವನ್ ಗೆ ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲು ಶಿಕ್ಷೆ ವಿದಿಸಲು ದೆಹಲಿಯ ಪಾಟಿಯಾಲ ಹೌಸ್ ಕೋರ್ಟ್ ನಿಂದ ಡೆತ್ ವಾರೆಂಟ್ ಆದೇಶ ನೀಡಲಾಗಿದೆ.

ಅಪರಾಧಿಗಳು ಕ್ಯುರೇಟಿವ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ತೀರ್ಪಿನಲ್ಲಿ ಲೋಪಗಳಿದ್ದ ಮಾತ್ರಕ್ಕೆ ಕ್ಯುರೇಟಿವ್ ಅರ್ಜಿ ಸಲ್ಲಿಸಬಹುದು. ತೀರ್ಪು ಲೋಪ ಸರಿಪಡಿಸಲು ಸಲ್ಲಿಸುವ ಅರ್ಜಿ ಇದಾಗಿದೆ. ಓಪನ್ ಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆಯುವುದಿಲ್ಲ. ನ್ಯಾಯಮೂರ್ತಿಗಳ ಚೇಂಬರ್ ನಲ್ಲಿ ಅರ್ಜಿ ಇತ್ಯರ್ಥಪಡಿಸಲಾಗುವುದು.

ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಅನುಕೂಲವಾಗುವ ಸಾಧ್ಯತೆ ಇಲ್ಲ. ಈ ಕೇಸ್ ನಲ್ಲಿ ಕ್ಯುರೇಟಿವ್ ಅರ್ಜಿಯಿಂದ ಅನುಕೂಲವಿಲ್ಲ. ಅರ್ಜಿ ಹಾಕಿದರೂ ತಿರಸ್ಕೃತವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅತ್ಯಾಚಾರಿಗಳ ಪರ ವಕೀಲ ಎ.ಪಿ. ಸಿಂಗ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.

ಗಲ್ಲು ಶಿಕ್ಷೆ ಸಮಯ ನಿಗದಿ ಸುದ್ದಿ ಕೇಳಿ ಜೈಲ್ ನಲ್ಲೇ ಕುಸಿದು ಬಿದ್ದ ನಿರ್ಭಯಾ ಅತ್ಯಾಚಾರಿಗಳು

Posted: 07 Jan 2020 04:54 AM PST

ದೆಹಲಿಯಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನಿಗದಿಯಾಗಿದ್ದು ಅಪರಾಧಿಗಳಿಗೆ ಡೆತ್ ವಾರೆಂಟ್ ಜಾರಿ ಮಾಡಲಾಗಿದೆ.

ಪ್ರಕರಣದ ನಾಲ್ವರು ಅಪರಾಧಿಗಳಿಗೆ ಡೆತ್ ವಾರೆಂಟ್ ಜಾರಿ ಮಾಡಲಾಗಿದೆ. ಅಕ್ಷಯ್, ಮುಕೇಶ್, ವಿನಯ್, ಪವನ್ ಗೆ ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲು ಶಿಕ್ಷೆ ವಿದಿಸಲು ದೆಹಲಿಯ ಪಾಟಿಯಾಲ ಹೌಸ್ ಕೋರ್ಟ್ ನಿಂದ ಆದೇಶ ನೀಡಲಾಗಿದೆ. 2012ರ ಡಿಸೆಂಬರ್ 16ರಂದು ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ನಡೆದಿತ್ತು.

ನಾಲ್ವರು ಅಪರಾಧಿಗಳಿಗೆ ಡೆತ್ ವಾರೆಂಟ್ ಜಾರಿಯಾಗಿರುವ ಬಗ್ಗೆ ತಿಹಾರ್ ಜೈಲ್ ನಲ್ಲಿ ಜೈಲ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಇದನ್ನು ಕೇಳಿದ ಕೂಡಲೇ ಕುಸಿದುಬಿದ್ದ ಅಪರಾಧಿಗಳು ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

‘ಸಹೋದರ’ ಕಿಚ್ಚ ಸುದೀಪ್ ಗೆ ಸಲ್ಮಾನ್ ಖಾನ್ ದುಬಾರಿ ಗಿಫ್ಟ್

Posted: 07 Jan 2020 04:43 AM PST

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ದಬಾಂಗ್-3' ಯಶಸ್ವಿ ಪ್ರದರ್ಶನ ಕಂಡಿದೆ.

ಸುದೀಪ್ ಹಾಗೂ ಸಲ್ಮಾನ್ ಖಾನ್ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿದ ಚಿತ್ರ ಇದಾಗಿದೆ. ಅಂದ ಹಾಗೆ, ಸುದೀಪ್ ನನ್ನ ಸಹೋದರ ಇದ್ದಂತೆ ಎಂದು ಹೇಳಿಕೊಂಡಿದ್ದ ಸಲ್ಮಾನ್ ಖಾನ್, ಸಹೋದರಗೆ ದುಬಾರಿ ಗಿಫ್ಟ್ ನೀಡಿದ್ದಾರೆ.

ಬಿಎಂಡಬ್ಲ್ಯೂ ಎಂ5 ಕಾರ್ ಅನ್ನು ಸಲ್ಮಾನ್ ಖಾನ್ ಸುದೀಪ್ ಗೆ ನೀಡಿದ್ದಾರೆ. ಇದಕ್ಕೆ ಧನ್ಯವಾದ ಹೇಳಿರುವ ಸುದೀಪ್, ಒಳ್ಳೆಯದನ್ನು ಮಾಡಿದರೆ ಯಾವಾಗಲೂ ಒಳ್ಳೆಯದಾಗುತ್ತದೆ ಎಂಬ ಸಾಲನ್ನು ನಾನು ಇನ್ನಷ್ಟು ನಂಬುವಂತೆ ಮಾಡಿದವರು ಸಲ್ಮಾನ್ ಖಾನ್.

ಅವರು ಹೊಚ್ಚ ಹೊಸ ಬಿಎಂಡಬ್ಲ್ಯೂ ಎಂ5 ಕಾರ್ ಜೊತೆಗೆ ನನ್ನ ಮನೆಗೆ ಆಗಮಿಸಿದಾಗ ನನಗೆ ಆಶ್ಚರ್ಯವಾಗಿತ್ತು. ನಮ್ಮ ಕುಟುಂಬದ ಮೇಲೆ ಅವರು ತೋರಿದ ಪ್ರೀತಿಗೆ ಧನ್ಯವಾದಗಳು. ನಿಮ್ಮ ಜೊತೆಗೆ ಕೆಲಸ ಮಾಡಿದ್ದು ನನಗೊಂದು ಗೌರವ. ನೀವು ನಮ್ಮ ಮನೆಗೆ ಭೇಟಿ ನೀಡಿರುವುದು ದೊಡ್ಡ ಉಡುಗೊರೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

ಚಿನ್ನ ಖರೀದಿದಾರರಿಗೆ ಖುಷಿ ಸುದ್ದಿ: ವರ್ಷದಲ್ಲಿ ಮೊದಲ ಬಾರಿ ದೊಡ್ಡ ʼಇಳಿಕೆʼ ಕಂಡ ಬೆಲೆ

Posted: 07 Jan 2020 04:41 AM PST

Image result for gold jewellery

ಸೋಮವಾರ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದ ಬಂಗಾರದ ಬೆಲೆಯಲ್ಲಿ ಮಂಗಳವಾರ ಇಳಿಕೆ ಕಂಡು ಬಂದಿದೆ. ಮಂಗಳವಾರ ವರ್ಷದಲ್ಲಿಯೇ ಮೊದಲ ಬಾರಿ ದೊಡ್ಡ ಮಟ್ಟದಲ್ಲಿ ಬಂಗಾರ-ಬೆಳ್ಳಿ ಬೆಲೆ ಇಳಿದಿದೆ. ಮಂಗಳವಾರ ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 420 ರೂಪಾಯಿ ಇಳಿದಿದೆ.

ಅಮೆರಿಕಾ-ಇರಾನ್ ಉದ್ವಿಗ್ನತೆ ಸೋಮವಾರ ಬಂಗಾರದ ಬೆಲೆ ಏರಿಕೆಗೆ ಕಾರಣವಾಗಿತ್ತು. ಷೇರು ಮಾರುಕಟ್ಟೆ ಕುಸಿತದಿಂದ ಹೂಡಿಕೆದಾರರು ಬಂಗಾರದ ಮೇಲೆ ಹೂಡಿಕೆ ಶುರು ಮಾಡಿದ್ದರು. ಇದ್ರಿಂದಾಗಿ ಬಂಗಾರದ ಬೆಲೆ ಹೆಚ್ಚಾಗಿತ್ತು. ದೆಹಲಿಯಲ್ಲಿ ಮಂಗಳವಾರ ಬಂಗಾರದ ಬೆಲೆ 10 ಗ್ರಾಂಗೆ 41,210 ರೂಪಾಯಿಯಾಗಿದೆ.

ಮಂಗಳವಾರ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 830 ರೂಪಾಯಿ ಇಳಿದಿದೆ. ಕೆ.ಜಿ ಬೆಳ್ಳಿ ಬೆಲೆ ಮಂಗಳವಾರ 48,600 ರೂಪಾಯಿಯಾಗಿದೆ. ಸೋಮವಾರ ಕೆ.ಜಿ ಬೆಳ್ಳಿ ಬೆಲೆ 49,430 ರೂಪಾಯಿಯಿತ್ತು.

ಬಿಗ್‌ ನ್ಯೂಸ್: ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಗೆ ದಿನಾಂಕ ನಿಗದಿ: ತಿಹಾರ್ ಜೈಲ್ ನಲ್ಲಿ ನೇಣಿಗೇರಿಸಲು ಸಿದ್ಧತೆ

Posted: 07 Jan 2020 04:26 AM PST

ನವದೆಹಲಿ: 2012 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸಲು ದೆಹಲಿ ಕೋರ್ಟ್ ಡೆತ್ ವಾರೆಂಟ್ ಜಾರಿ ಮಾಡಿದೆ.

ನ್ಯಾಯಮೂರ್ತಿ ಸತೀಶ್ ಕುಮಾರ್ ಅರೋರಾ ಆದೇಶ ಹೊರಡಿಸಿದ್ದು ತೀರ್ಪಿನ ವಿರುದ್ಧ ದಿನಗಳೊಳಗೆ ಕಾನೂನಿನ ಮೊರೆ ಹೋಗಬಹುದು ಎಂದು ದೆಹಲಿಯ ಕೋರ್ಟ್ ಹೇಳಿದೆ.

ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸಲು ಡೆತ್ ವಾರೆಂಟ್ ಜಾರಿಯಾಗಿರುವ ಬಗ್ಗೆ ಅಪರಾಧಿಗಳಿಗೆ ಜೈಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಪರಾಧಿಗಳಾದ ಮುಖೇಶ್, ವಿನಯ್, ಅಕ್ಷಯ್ ಮತ್ತು ಪವನ್ ಅವರಿಗೆ ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ನೀವು ಎಷ್ಟು ಹೊತ್ತು ನಿದ್ರೆ ಮಾಡುತ್ತೀರಿ…?

Posted: 07 Jan 2020 03:31 AM PST

ನಿದ್ರೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಈಗಂತೂ ಯಾವುದೇ ತೊಂದರೆಯಿಲ್ಲದೇ ನೆಮ್ಮದಿಯಾಗಿ ನಿದ್ದೆ ಮಾಡುವುದಕ್ಕೂ ಆಗದಂತ ಪರಿಸ್ಥಿತಿ ಇದೆ. ಕೆಲವರಿಗೆ ಸಂತೆಯಲ್ಲೂ ನಿದ್ದೆ ಬರುತ್ತೆ ಇನ್ನು ಕೆಲವರಿಗೆ ಎಸಿ ರೂಂನಲ್ಲಿ ಮಲಗಿದರೂ ನಿದ್ದೆ ಹತ್ತಿರ ಸುಳಿಯುವುದಿಲ್ಲ.

ಆದರೆ ಇದೇ ನಿದ್ದೆ ಅತೀಯಾದರೆ ಮಾತ್ರ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.

*ಆರೋಗ್ಯವಂತ ಮನುಷ್ಯನಿಗೆ 8 ಗಂಟೆ ನಿದ್ದೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಈ ಎಂಟು ಗಂಟೆಗಿಂತ ಹೆಚ್ಚು ಹೊತ್ತು ಮಲಗಿದರೆ ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ ಇದರ ಜತೆಗೆ ಸೋಮಾರಿತನವೂ ಬರುತ್ತದೆ.

*ಇನ್ನು ನಮ್ಮ ದೇಹದಲ್ಲಿ ಬೊಜ್ಜು ಸೇರಿಕೊಳ್ಳುವುದಕ್ಕೆ ಕೂಡ ಈ ಅತಿಯಾದ ನಿದ್ದೆ ಕೂಡ ಒಂದು ಕಾರಣ.

* ತುಂಬಾ ಹೊತ್ತು ಮಲಗುವುದರಿಂದ ಬೆನ್ನು ನೋವಿನ ಸಮಸ್ಯೆ ಕೂಡ ಎದುರಿಸಬೇಕಾಗುತ್ತದೆ.

*ಖಿನ್ನತೆ, ಹಾಗೂ ತಲೆನೋವು ಕೂಡ ಈ ಅತಿಯಾದ ನಿದ್ರೆಯಿಂದ ಕಾಡುವ ಸಮಸ್ಯೆಯಾಗಿದೆ.
ಹಾಗಾಗಿ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳುವ ಅಭ್ಯಾಸವಿಟ್ಟುಕೊಂಡರೆ ಆರೋಗ್ಯಕ್ಕೆ ಒಳ್ಳೆಯದು

“ಇಬ್ಬರು ಪತಿ ಜೊತೆ ನೀನೂ ಮಜಾ ಮಾಡು’’

Posted: 07 Jan 2020 02:45 AM PST

ಪಂಜಾಬ್ ನ ಮೊಗಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಪೊಲೀಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಪತಿಯ ಎರಡನೇ ಮದುವೆ ಬಗ್ಗೆ ದೂರು ನೀಡಲು ಬಂದ ಮಹಿಳೆಗೆ ಪೊಲೀಸರು ಕೆಟ್ಟದಾದ ಸಲಹೆ ನೀಡಿದ್ದಾರಂತೆ.

ಮಹಿಳೆಯೊಬ್ಬಳು ಪತಿ ಕಾಟಕ್ಕೆ ಬೇಸತ್ತು ಒಂದು ತಿಂಗಳ ಹಿಂದೆ ತವರಿಗೆ ಹೋಗಿದ್ದಳಂತೆ. ಈ ವೇಳೆ ಪತಿ ಇನ್ನೊಂದು ಮದುವೆಯಾಗಿದ್ದಾನೆ. ಈ ವಿಷ್ಯ ತಿಳಿಯುತ್ತಿದ್ದಂತೆ ಮೊದಲ ಪತ್ನಿ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಅಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎನ್ನಲಾಗಿದೆ.

ಮಹಿಳೆ ದೂರು ಆಲಿಸಿದ ಪೊಲೀಸರು ಈಗ ಎರಡು ಪತ್ನಿ ಕಾಮನ್. ಪೊಲೀಸರು ಕೂಡ ಎರಡೆರಡು ಪತ್ನಿ ಹೊಂದಿರುತ್ತಾರೆ. ನೀನು ಎರಡು ಪುರುಷರ ಜೊತೆ ಮಜಾ ಮಾಡು. ಈ ಬಗ್ಗೆ ದೂರು ನೀಡುವ ಅಗತ್ಯವಿಲ್ಲ ಎಂದಿದ್ದಾರಂತೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ರೆ ಪೆಟ್ರೋಲ್ ಹಾಗೂ ಊಟಕ್ಕೆ ಹಣ ನೀಡು ಎಂದಿದ್ದಾರಂತೆ.

ಸಮುದ್ರದ ಮಧ್ಯೆ ಹುಟ್ಟುಹಬ್ಬ ಆಚರಿಸುವಾಗ ಮುಳುಗಲು ಶುರುವಾಯ್ತು ಬೋಟ್

Posted: 07 Jan 2020 02:42 AM PST

समुद्र के बीच मना रहे थे बर्थडे का जश्न, अचानक डूबने लगा क्रूज

ಮುಂಬೈನಲ್ಲಿ ದೊಡ್ಡ ಅಪಘಾತವೊಂದು ಸಂಭವಿಸಿದೆ.

ಗೇಟ್ವೇ ಆಫ್ ಇಂಡಿಯಾದಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿ ಬೋಟ್  (Catamaran) ಸಮುದ್ರದಲ್ಲಿ ಮುಳುಗಲು ಶುರುವಾಗಿತ್ತು.

ದೋಣಿಯಲ್ಲಿದ್ದ 55 ಮಂದಿಯೂ ಸುರಕ್ಷಿತವಾಗಿದ್ದಾರೆ. 45 ಮಂದಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.10 ಸಿಬ್ಬಂದಿ ಇದ್ರಲ್ಲಿ ಕೆಲಸ ಮಾಡ್ತಿದ್ದರು.

ಘಟನೆ ಭಾನುವಾರ ಸಂಜೆ ನಡೆದಿದೆ. ತ್ರಿಚಾ ಹೆಸರಿನ ಬೋಟ್ ನಲ್ಲಿ 45 ಮಂದಿ ಹುಟ್ಟುಹಬ್ಬದ ಪಾರ್ಟಿ ಮಾಡ್ತಿದ್ದರು. ಈ ಬೋಟ್ ಮಾಲೀಕ ವಿದೇಶದಲ್ಲಿ ವಾಸವಾಗಿದ್ದಾನೆ. ಮ್ಯಾನೇಜರ್ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ತಾನಂತೆ. ಪಾರ್ಟಿ ವೇಳೆ ವ್ಯಕ್ತಿಯೊಬ್ಬರು ಬೋಟ್ ಗೆ ನೀರು ಬರುವುದನ್ನು ನೋಡಿ ಕಿರುಚಿಕೊಂಡಿದ್ದಾರೆ. ತಕ್ಷಣ ಉಳಿದವರು ಎಚ್ಚೆತ್ತುಕೊಂಡಿದ್ದಾರೆ. ಮೀನುಗಾರರು ದೋಣಿ ತೆಗೆದುಕೊಂಡು ಬೋಟ್ ಬಳಿ ಹೋಗಿ ಜನರನ್ನು ರಕ್ಷಿಸಿದ್ದಾರೆ.

ಘಟನೆ ಬಗ್ಗೆ ಯಾರೂ ಪ್ರಕರಣ ದಾಖಲಿಸಿಲ್ಲ ಎನ್ನಲಾಗಿದೆ. ಆದ್ರೆ ಈ ಬಗ್ಗೆ ತನಿಖೆ ಶುರುವಾಗಿದೆ. ಬೋರ್ಟ್ ಮಾಲೀಕರು ಎಲ್ಲ ದಾಖಲೆಗಳನ್ನು ಹೊಂದಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಖತರ್ನಾಕ್ ಅತ್ಯಾಚಾರಿ: 190 ಪುರುಷರ ಮೇಲೆರಗಿದ್ದ ಪಾಪಿ

Posted: 07 Jan 2020 02:39 AM PST

ಅತ್ಯಂತ ಅಪಾಯಕಾರಿ ಅಪರಾಧಿಯೊಬ್ಬ ಒಂದಲ್ಲ ಎರಡಲ್ಲ ಬರೋಬ್ಬರಿ 190 ಪುರುಷರ ಮೇಲೆ ಅತ್ಯಾಚಾರವೆಸಗಿದ್ದಾನೆ. 36 ವರ್ಷದ ರೇನ್ಹಾರ್ಡ್ ಸಿನಾಗಾ 136 ಮಂದಿ ಮೇಲೆ ಅತ್ಯಾಚಾರವೆಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಬ್ರಿಟಿಷ್ ಮಾಧ್ಯಮಗಳು ರೇನ್ಹಾರ್ಡ್ ನನ್ನು ಅತ್ಯಂತ ಅಪಾಯಕಾರಿ ಅತ್ಯಾಚಾರಿ ಎಂದಿದೆ. 2015 ಮತ್ತು 2017 ರ ನಡುವೆ ಈ ಎಲ್ಲಾ ಘಟನೆ ನಡೆದಿದೆ. 2 ಕೊಠಡಿ ಫ್ಲ್ಯಾಟ್‌ನಲ್ಲಿ ಎಲ್ಲಾ ಘಟನೆಗಳನ್ನು ನಡೆಸಿದ್ದಾನೆ ಎನ್ನಲಾಗಿದೆ. 200ಕ್ಕೂ ಹೆಚ್ಚು ಮಂದಿ ಮೇಲೆ ಈತ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದ್ದು ತನಿಖೆ ನಡೆಯುತ್ತಿದೆ.

ಅಪರಾಧಿ ಬಂಧಿಸಿದ ನಂತ್ರ ಪೊಲೀಸರು ಮನೆ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ರಕ್ತದ ಕಲೆಗಳಿತ್ತಂತೆ. ಕೊನೆ ವ್ಯಕ್ತಿಗೆ ಲೈಂಗಿಕ ಕಿರುಕುಳ ನೀಡುವ ವೇಳೆ ಗಲಾಟೆ ನಡೆದಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಮದ್ಯಪಾನ ಮಾಡ್ತಿದ್ದ ಆರೋಪಿ ಪೀಡಿತರಿಗೆ ಡ್ರಗ್ಸ್ ನೀಡ್ತಿದ್ದನಂತೆ.

ಹುತಾತ್ಮ ತಂದೆ ಪರವಾಗಿ ಪದಕ ಪಡೆದ ಪುಟ್ಟ ಮಗು

Posted: 07 Jan 2020 02:35 AM PST

ಮೆಲ್ಬೋರ್ನ್: ಆಸ್ಟ್ರೇಲಿಯಾ ಭಾಗದಲ್ಲಿ ಕಾಡ್ಗಿಚ್ಚಿನ ತೀವ್ರತೆ ಗಂಭೀರವಾಗಿದೆ. ಅದೆಷ್ಟೋ ಲಕ್ಷ ಪ್ರಾಣಿಗಳು, ಹಕ್ಕಿಗಳು ಬಲಿಯಾಗಿವೆ.

ಅದರಲ್ಲೂ ಕೋಲಾಗಳು ಹಾಗೂ ಕಾಂಗರೂಗಳು ಅಕ್ಷರಶಃ ಬೆಂದು ಹೋಗಿವೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಆ ಬೆಂಕಿಯ ಧಗೆ ನಡುವೆ ರಕ್ಷಣೆ ಮಾಡುತ್ತಲೇ ಕೆಲವರು ವೀರ ಮರಣವನ್ನಪ್ಪಿದ್ದಾರೆ.

19 ತಿಂಗಳ ಮಗ ಅಪ್ಪನ ಈ ಸಾಹಸ ಕಾರ್ಯಕ್ಕೆ ಗೌರವಾರ್ಥವಾಗಿ ಮರಣೋತ್ತರ ಗೌರವ ಪದಕವನ್ನು ಸರ್ಕಾರದ ವತಿಯಿಂದ ಸ್ವೀಕರಿಸಿದ್ದಾನೆ.

ಹೀಗೆ ಬಾಲಕ ಸ್ವೀಕರಿಸುತ್ತಿರುವ ಫೋಟೋ ಈಗ ನೆಟ್ಟಿಗರ ಮನ ಮುಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ರಕ್ಷಣಾ ಕಾರ್ಯಾಚರಣೆ ವೇಳೆ ಡಿ.19 ಜೆಸ್ಸಿ ಕೇಟನ್ ಎಂಬುವರೇ ವೀರ ಮರಣವನ್ನಪ್ಪಿರುವುದು. ಈಗ ಇವರ ಪುತ್ರನೇ ತಂದೆಯ ಅಂತ್ಯಸಂಸ್ಕಾರ ವೇಳೆ ಗೌರವ ಪದಕವನ್ನು ಸ್ವೀಕರಿಸಿದ್ದಾನೆ.

ನ್ಯೂ ಸೌತ್ ವೇಲ್ಸ್ ಫೈರ್ ಸರ್ವೀಸ್ ತನ್ನ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಅಂತಿಮ ನಮನವನ್ನು ಸಲ್ಲಿಸಿದೆ. ಸದ್ಯ ಈ ಫೋಟೋ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ.

Today the NSW RFS family farewelled one of their own, with the funeral of Geoffrey Keaton held in western Sydney earlier…

Posted by NSW Rural Fire Service on Wednesday, January 1, 2020

ಭಿಕ್ಕುವಿನ ಧ್ಯಾನಕ್ಕೆ ಪರೀಕ್ಷೆಯೊಡ್ಡಿದ ಮುದ್ದಿನ ಬೆಕ್ಕು

Posted: 07 Jan 2020 02:16 AM PST

ಹೊಸ ವರ್ಷದ ದಿನದಂದು ನಿರಂತರ ಐದು ಗಂಟೆಗಳ ಧ್ಯಾನಸ್ತನಾಗಿದ್ದ ಥಾಯ್ಲೆಂಡ್‌ನ ಬೌದ್ಧ ಭಿಕ್ಕುವೊಬ್ಬರ ತಾಳ್ಮೆ ಹಾಗೂ ಏಕಾಗ್ರತೆ ಪರೀಕ್ಷಿಸುವ ಪರಿಸ್ಥಿತಿಯೊಂದರ ವಿಡಿಯೋ ವೈರಲ್ ಆಗಿದೆ.

ಬೆಕ್ಕೊಂದು ಬಂದು ತನ್ನನ್ನು ಮುದ್ದು ಮಾಡೆಂದು ಮುಂಗಾಲುಗಳಿಂದ ಚೇಷ್ಟೆ ಮಾಡುತ್ತಿರುವ ವಿಡಿಯೋ ಅದಾಗಿದ್ದು, ಸಾಕಷ್ಟು ಪ್ರತಿಕ್ರಿಯೆ ಗಿಟ್ಟಿಸಿದೆ.

ತನ್ನ ತೊಡೆ ಮೇಲೆ ಕುಳಿತುಕೊಳ್ಳಲು ನೋಡಿದ ಬೆಕ್ಕನ್ನು ಮೆಲುವಾಗಿ ಕೆಳಗೆ ತಳ್ಳುವ ಭಿಕ್ಕುವಿನ ವಿಡಿಯೋವನ್ನು ಕಂಡ ನೆಟ್ಟಿಗರು ಎಂಜಾಯ್ ಮಾಡಿದ್ದಾರೆ.

ಭಿಕ್ಕುವಿನ ಯಾವ ಪ್ರಯತ್ನವೂ ಫಲಗೂಡದೇ, ಆ ಬೆಕ್ಕು ಆತನ ತೊಡೆ ಬಿಟ್ಟು ಕದಲುವುದೇ ಇಲ್ಲ.

ಪುಸ್ತಕವನ್ನು ಓದುವ ಪ್ರಯತ್ನ ಮಾಡಿದರೂ ಸಹ, ತನ್ನ ಹೆಚ್ಚಿನ ಗಮನ ಬೆಕ್ಕಿನ ಮೇಲೆಯೇ ಇತ್ತು ಎಂದು ಭಿಕ್ಕು ಬಳಿಕ ಹೇಳಿಕೊಂಡಿದ್ದಾರೆ.

Posted by Flash Nophayong Sookphan on Tuesday, December 31, 2019

ಈಜುಕೊಳಕ್ಕೆ ಕಾರು ನುಗ್ಗಿಸಿದ ಚಾಲಕಿ; ಫೋಟೋ ವೈರಲ್

Posted: 07 Jan 2020 02:14 AM PST

ಫ್ಲಾರಿಡಾದ ವೆಸ್ಟ್ ಪಾಮ್ ಬೀಚ್‌ ಬಳಿಯ ಸಮುದಾಯ ಈಜುಕೊಳವೊಂದರಲ್ಲಿ ಮುಳುಗಿರುವ ಕಾರೊಂದರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಟ್ರೋಲ್‌ಗೆ ಗುರಿಯಾಗಿದೆ.

'ವಯಸ್ಕ' ಚಾಲಕರೊಬ್ಬರು ಕಾರನ್ನು ಚಲಿಸುತ್ತಿದ್ದಾಗ ಸಂದರ್ಭದಲ್ಲಿ ಈ ಕಾರು ಈಜುಕೊಳಕ್ಕೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಈ 'ವಯಸ್ಕ' ಚಾಲಕ ಯಾರೆಂದು ನೆಟ್ಟಿಗರು ಪ್ರಶ್ನಿಸಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ಚಾಲಕಿಯ ನಿಯಂತ್ರಣ ತಪ್ಪಿ ಈಜುಕೊಳಕ್ಕೆ ಬಿದ್ದ ಕೂಡಲೇ ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡಲೇ ಹೊರ ಬಂದು ತಮ್ಮ ಪ್ರಾಣ ಉಳಿಸಿಕೊಳ್ಳಲು ಸಫಲರಾಗಿದ್ದಾರೆ.

Thankfully, no one was injured. The adult driver and passenger escaped after accidentally backing into the hotel pool. #westpalmbeach.

Posted by West Palm Beach Police Department on Friday, January 3, 2020

ದಶಕದ ಪದ ಗೌರವಕ್ಕೆ ಭಾಜನವಾದ ಇಂಗ್ಲೀಷ್ ಪದ ಯಾವುದು ಗೊತ್ತಾ…?

Posted: 07 Jan 2020 02:00 AM PST

ಡಿಜಿಟಲ್ ಸಂಪರ್ಕದ ಇಂದಿನ ಯುಗದಲ್ಲಿ ಎಸ್‌ಎಂಎಸ್‌ನಿಂದ ಹಿಡಿದು ಇ-ಮೇಲ್‌, ಸೋಷಿಯಲ್ ಮೀಡಿಯಾವರೆಗೂ ನಾನಾ ರೀತಿಯ ಸ್ಲಗ್‌ಗಳು, ಪದಬಳಕೆಗಳು ಹಾಗೂ ಬರೆಯುವ ಶೈಲಿಗಳು ಹುಟ್ಟಿಕೊಂಡಿದ್ದು, ಸಂಪ್ರದಾಯವಾದಿಗಳಿಗೆ ಭಲೇ ಕಷ್ಟವಾಗಿಬಿಟ್ಟಿದೆ.

ಕಳೆದ ದಶಕದ ಪದ ಎಂದು ಬಿರುದು ನೀಡಲು ಹುಡುಕಾಡಿದ ಭಾಷಾ ತಜ್ಞರು ಇದಕ್ಕೆಂದು ಬಹಳವೇ ತ್ರಾಸಪಟ್ಟಿದ್ದಾರೆ ಅನ್ನಿ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ 'ಮೆಮೆ' ಹಾಗೂ 'ಕ್ಲೈಮೇಟ್‌' ಪದಗಳನ್ನೂ ಮೀರಿ, ಅನಿರೀಕ್ಷಿತ ಪದವೊಂದು ಈ 'ವರ್ಡ್ ಆಫ್ ದಿ ಇಯರ್‌' ಗೌರವಕ್ಕೆ ಭಾಜನವಾಗಿದೆ.

ಅಮೆರಿಕದ ಪದಕೋಶ ಮೆರ‍್ರಿಯಮ್-ವೆಬ್‌ಸ್ಟರ್‌ ಈ ಘೋಷಣೆ ಮಾಡಿದ್ದು, 'ದೆ' (they) ಪದವನ್ನು ವರ್ಷದ ಪದವೆಂದು ಆಯ್ಕೆ ಮಾಡಿದೆ.

ಈ ಪದವನ್ನು ಆಯ್ಕೆ ಮಾಡಿದ ಸಮಿತಿಯಲ್ಲಿ ಭಾಷಾತಜ್ಞರು, ವ್ಯಾಕರಣ ತಜ್ಞರು, ಇತಿಹಾಸಕಾರರು, ಬರಹಗಾರರು, ಸಂಪಾದಕರು ಹಾಗೂ ವಿದ್ವಾಂಸರು ಇದ್ದರು.

ವಾಲ್ಮಾರ್ಟ್‌ಗೆ ಅಟಕಾಯಿಸಿಕೊಂಡ ತಿಗಣೆಗಳು, ಬಿಟ್ಟವರ ಜಾಡು ಹಿಡಿದ ಪೊಲೀಸರು

Posted: 07 Jan 2020 01:53 AM PST

ಪೆನ್ಸಿಲ್ವೇನಿಯಾದ ವಾಲ್ಮಾರ್ಟ್ ಮಳಿಗೆಯೊಂದರಲ್ಲಿ ತಿಗಣೆಗಳ ಕಾಟ ನಿಯಂತ್ರಣ ಕೈ ಮೀರಿದ್ದು ಈ ಸಂಬಂಧ ಪೊಲೀಸ್ ತನಿಖೆಯಾಗುವ ಮಟ್ಟಕ್ಕೆ ಪರಿಸ್ಥಿತಿ ಗಂಭೀರತೆ ಪಡೆದುಕೊಂಡಿದೆ.

ಇಲ್ಲಿನ ಎಡಿನ್‌ಬರೋದ ಸ್ಟೋರ್‌ಗೆ ಈ ಕೀಟಗಳನ್ನು ಬಿಡುಗಡೆ ಮಾಡಿದ್ದು ಯಾರು ಎಂದು ಪೊಲೀಸರು ಶೋಧ ನಡೆಸಿದ್ದಾರೆ.

ಮಾತ್ರೆಗಳ ಬಾಟಲಿಯೊಂದರಲ್ಲಿ ಜೀವಂತ ಕೀಟಗಳನ್ನು ಕಂಡ ಸ್ಟೋರ್‌ ಮ್ಯಾನೇಜರ್‌ ಒಬ್ಬರು ಇದನ್ನು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಬಟ್ಟೆ ಬದಲಿಸುವ ಏರಿಯಾದಲ್ಲಿ ಈ ಕೀಟಗಳು ಕಂಡುಬಂದಿವೆ.

ಕೀಟಗಳ ಬಾಧೆಗೆ ತುತ್ತಾಗಿರುವ ಪ್ರದೇಶವನ್ನು ಮುಚ್ಚಿಹಾಕಿರುವ ಸ್ಟೋರ್‌ ಮ್ಯಾನೇಜ್‌ಮೆಂಟ್, ಮುಂದಿನ ಕ್ರಮ ತೆಗೆದುಕೊಳ್ಳಲು ಕೀಟ ನಿಯಂತ್ರಣ ಏಜೆನ್ಸಿಯ ಮೊರೆ ಹೋಗಿದೆ.

ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಯೋಜನೆ ಜಾರಿಗೆ ತರಲು ಪ್ರಧಾನಿ ಚಿಂತನೆ

Posted: 07 Jan 2020 01:37 AM PST

ಇನ್ನು ಮುಂದೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಹಾಗೂ ಮೂರು ರಜೆ ಇರಲಿದೆ ಎಂದರೆ ಆಫೀಸಿಗೆ ಹೋಗುವ ಯಾರಿಗೆ ತಾನೇ ಖುಷಿಯಾಗುವುದಿಲ್ಲ? ಇಂಥ ಸಾಧ್ಯತೆಯನ್ನು ನಿಜಕ್ಕೂ ಅನುಭವಿಸಬೇಕಾದಲ್ಲಿ ನೀವು ಫಿನ್ಲೆಂಡ್‌ಗೆ ತೆರಳಬೇಕಾಗಬಹುದು.

ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನ ಮಂತ್ರಿ ಎಂಬ ಖ್ಯಾತಿಯ ಸನ್ನಾ ಮಾರಿನ್ ತಮ್ಮ ದೇಶದಲ್ಲಿ ಈ ರೀತಿಯ ಹೊಸ ಕೆಲಸದ ವೇಳಾಪಟ್ಟಿಯನ್ನು ಪರಿಚಯಿಸಲು ಚಿಂತನೆ ನಡೆಸಿದ್ದಾರೆ.

ಪ್ರತಿನಿತ್ಯ 6 ಗಂಟೆ ಕೆಲಸವಿರುವಂತೆ ವಾರದಲ್ಲಿ ನಾಲ್ಕು ದಿನಗಳ ವೇಳಾಪಟ್ಟಿ ಮಾರಿನ್‌ ರ ಐಡಿಯಾ ಆಗಿದೆ.

ಕೆಲಸದ ಅವಧಿಯನ್ನು ತಗ್ಗಿಸಿದಲ್ಲಿ, ತನ್ನ ದೇಶದ ಪ್ರಜೆಗಳಿಗೆ ತಮ್ಮ ಕುಟುಂಬಗಳೊಂದಿಗೆ ಕಾಲ ಕಳೆಯಲು ಮತ್ತಷ್ಟು ಸಮಯ ಸಿಕ್ಕಂತಾಗುವುದು ಎಂಬುದು ಮಾರಿನ್‌ ವಾದ. ಈ ಪ್ರಸ್ತಾವನೆಯನ್ನು ಮಾರಿನ್‌ ಬಹಳ ಹಿಂದಿನಿಂದಲೂ ಹೊಂದಿದ್ದಾರೆ.

ಈ ಹಿಂದೆ, ಫಿನ್ಲೆಂಡ್‌ನ ಸಾರಿಗೆ ಸಚಿವೆಯಾಗಿದ್ದ ಸಂದರ್ಭದಲ್ಲಿ ಇಂಥದ್ದೇ ಆಲೋಚನೆ ಮುಂದಿಟ್ಟಿದ್ದರು ಮಾರಿನ್.

ನೌಕರರಿಗೆ ಕಾರ್ಯದೊತ್ತಡ ಕಡಿಮೆಯಾದಾಗ ಪರಸ್ಪರ ಹೊಂದಾಣಿಕೆ ಮತ್ತಷ್ಟು ವೃದ್ಧಿಸಲಿದ್ದು, ಇನ್ನಷ್ಟು ಸಕ್ರಿಯವಾಗಿ ಕೆಲಸದಲ್ಲಿ ಭಾಗಿಯಾಗಲು ನೆರವಾಗುವುದು ಎಂಬುದು ಮಾರಿನ್ ಮಾತು.

ಫಿನ್ಲೆಂಡ್‌ನ ಬಹುತೇಕ ಆಫೀಸ್‌ಗಳಲ್ಲಿ 8 ಗಂಟೆ/ನಿತ್ಯದಂತೆ ವಾರದಲ್ಲಿ ಐದು ದಿನಗಳ ವೇಳಾಪಟ್ಟಿಯನ್ನು ಅನುಸರಿಸಲಾಗುತ್ತಿದೆ. 2015ರಲ್ಲಿ 6 ಗಂಟೆ/ನಿತ್ಯ ವೇಳಾಪಟ್ಟಿ ಅನುಸರಿಸಿದ್ದ ಸ್ವೀಡನ್‌ನಲ್ಲಿ ಈ ನಿಟ್ಟಿನಲ್ಲಿ ಸಕಾರಾತ್ಮಕ ಫಲಿತಾಂಶಗಳು ಬಂದಿವೆ.

ಸಿಎಎ ಪ್ರತಿಭಟನೆ ದಾಂಧಲೆಯ ಬಂಧಿತರಲ್ಲಿ ಬಾಂಗ್ಲಾದೇಶಿಗರು

Posted: 07 Jan 2020 01:27 AM PST

ನವದೆಹಲಿ: ಈಶಾನ್ಯ ದೆಹಲಿಯ ಸೀಮಾಪುರಿಯಲ್ಲಿ ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾರೂಪ ತಿರುಗಿತ್ತು.

ಈ ಸಂಬಂಧ ಪೊಲೀಸರು ಹಲವರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಅವರಲ್ಲಿ ಐವರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಇಬ್ಬರು ಬಾಂಗ್ಲಾದೇಶಿಗರಾಗಿದ್ದಾರೆ.

ಉತ್ತರ ಪ್ರದೇಶ ಮತ್ತು ಸೀಮಾಪುರಿಯ ಕೆಲವೆಡೆ ಇವರು ದಾಂಧಲೆ ನಡೆಸಿರುವ ಆರೋಪವನ್ನು ಎದುರಿಸುತ್ತಿದ್ದಾರೆ.

ಗಾಜಿಯಾಬಾದ್ ನಿವಾಸಿ ಮಹ್ಮದ್ ಶೈಬಾ (91), ಫಿಲಿಬಿತ್ ನಿವಾಸಿ ಮಹಮ್ಮದ್ ಅಮೀರ್ (24), ಮತ್ತು ಸೀಮಾಪುರಿಯ ಯಾಸುಫ್ (40) ಹಾಗೂ ಬಾಂಗ್ಲಾದೇಶಿ ನಿವಾಸಿಗಳಾದ ಮಹಮ್ಮದ್ ಆಜಾದ್ ಮತ್ತು ಮಹಮ್ಮದ್ ಸುಭಾನ್ ಬಂಧಿತರಾಗಿದ್ದಾರೆ.

ದೆಹಲಿ ಪೊಲೀಸರು ಇವರನ್ನಲ್ಲದೆ ಇಬ್ಬರು ಬಾಲಾಪರಾಧಿಗಳನ್ನು ಬಂಧಿಸಿದ್ದು ಇವರನ್ನು ಬಾಲಾಪರಾಧ ನ್ಯಾಯಾಂಗ ಮಂಡಳಿ ವಶಕ್ಕೆ ನೀಡಿದ್ದಾರೆ.

ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ಭಾಗಿಯಾಗಿದ್ದಾರೆಂದು ದೆಹಲಿ ಪೊಲೀಸರ ತಂಡ ಹಾಗೂ ವಿಶೇಷ ತನಿಖಾ ದಳ ಶಂಕೆಯನ್ನು ವ್ಯಕ್ತಪಡಿಸಿದ್ದವು.

ಇದರ ಅನ್ವಯ ತನಿಖೆ ಕೈಗೊಂಡಾಗ 15ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರು ಭಾಗಿಯಾಗಿದ್ದು ಬೆಳಕಿಗೆ ಬಂದಿತ್ತು. ಈಗ ಐವರನ್ನು ಬಂಧಿಸಿದ್ದು ಉಳಿದವರ ಶೋಧಕ್ಕೆ ಬಲೆ ಬೀಸಲಾಗಿದೆ.

ಮೊದಲ ರಾತ್ರಿ ಪತ್ನಿ ಹೇಳಿದ ಮಾತು ಕೇಳಿ ವಿಚ್ಛೇದನಕ್ಕೆ ಮುಂದಾದ ಪತಿ

Posted: 07 Jan 2020 01:27 AM PST

ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾವನ್ನು ಬಹುತೇಕರು ನೋಡಿದ್ದಾರೆ. ಆ ಚಿತ್ರಕಥೆಯನ್ನು ಹೋಲುವ ಘಟನೆ ಭೋಪಾಲ್ ನಲ್ಲಿ ನಡೆದಿದೆ. ಮದುವೆಗೂ ಮುನ್ನವೇ ಪತ್ನಿ ಬೇರೆಯವರನ್ನು ಪ್ರೀತಿಸುತ್ತಿದ್ದಾಳೆ ಎಂಬುದು ಗೊತ್ತಾಗುತ್ತಿದ್ದಂತೆ ಪತಿ ಅವರಿಬ್ಬರನ್ನು ಒಂದು ಮಾಡಲು ಮುಂದಾಗಿದ್ದಾನೆ. ವಿಚ್ಛೇದನ ನೀಡಲು ಅರ್ಜಿ ಸಲ್ಲಿಸಿದ್ದಾನೆ.

ಭೋಪಾಲ್ ನಿವಾಸಿ ರೈಲ್ವೆ ಅಧಿಕಾರಿಯೊಬ್ಬರ ಮದುವೆ ಜುಲೈನಲ್ಲಿ ನಡೆದಿತ್ತು. ಮದುವೆಯಾದ ಮೊದಲ ದಿನ ರಾತ್ರಿಯೇ ಪತ್ನಿ, ತಾನು ಬೇರೆಯವರನ್ನು ಪ್ರೀತಿಸುತ್ತಿದ್ದೇನೆ ಎಂದಿದ್ದಳು. ಮೊದಲೇ ಈ ವಿಷ್ಯವನ್ನು ಏಕೆ ತಿಳಿಸಲಿಲ್ಲವೆಂದು ಪತಿ ಪ್ರಶ್ನೆ ಮಾಡಿದ್ದನಂತೆ. ಮನೆಯವರು ಬೆದರಿಸಿದ್ದರು ಎಂದು ಪತ್ನಿ ಉತ್ತರಿಸಿದ್ದಾಳೆ.

ಪ್ರೇಮಿಗಳಿಬ್ಬರನ್ನು ಒಂದು ಮಾಡಲು ಮುಂದಾದ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಪತ್ನಿಗೆ ಯಾವುದೇ ತೊಂದರೆಯಾಗದಿರಲಿ ಎಂಬುದು ಪತಿ ಆಶಯ. ಆಕೆ ಪ್ರೇಮಿಯನ್ನು ಭೇಟಿಯಾಗಿದ್ದೇನೆ. ಒಳ್ಳೆಯ ವ್ಯಕ್ತಿ ಎಂದು ಪತಿ ಹೇಳಿದ್ದಾನೆ. ಇಬ್ಬರೂ ಉದ್ಯೋಗದಲ್ಲಿದ್ದು, ತೀರ್ಮಾನ ತೆಗೆದುಕೊಳ್ಳಲು ಅರ್ಹರಾಗಿರುವ ಕಾರಣ ಇದ್ರಲ್ಲಿ ಮನೆಯವರು ಮೂಗುತೂರಿಸುವ ಪ್ರಯತ್ನ ನಡೆಸಿಲ್ಲವಂತೆ.

900 ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತು ಫ್ಯಾಷನ್ ಚಪ್ಪಲಿ…!

Posted: 07 Jan 2020 01:22 AM PST

ನವದೆಹಲಿ: ಚಪ್ಪಲಿಗಳು ಎಷ್ಟು ವರ್ಷಗಳ ಹಿಂದೆ ಹುಟ್ಟಿಕೊಂಡಿವೆ ಎಂಬುದಕ್ಕೆ ಉತ್ತರ ಕಂಡುಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. ಆದರೆ ಇಲ್ಲೊಬ್ಬ ಟ್ವಿಟ್ಟರ್ ಬಳಕೆದಾರರು 900 ವರ್ಷಗಳ ಹಿಂದೆಯೇ ಚಪ್ಪಲಿಗಳ ಬಳಕೆ ಇತ್ತು ಎಂಬುದನ್ನು ಶಿಲ್ಪಕಲೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಬೀತುಪಡಿಸಿದ್ದಾರೆ.

ಅದು ಖ್ಯಾತ ಬ್ರಾಂಡೆಡ್ ಕಂಪನಿಯಾದ ಬಾಟಾದ ಚಪ್ಪಲಿ ಹೋಲುವಂತಿದೆ ಎಂದು ಬಿ. ಗೋಪಾಲ್ ಎಂಬುವರು ಹೇಳಿದ್ದಾರೆ. ಈಗ ಎಲ್ಲೆಡೆ ಇದೇ ಹಾಟ್ ಚರ್ಚೆಯಾಗಿ ಪರಿಣಮಿಸಿದೆ.

ತಮಿಳುನಾಡಿ ಪುರಾತನ ದೇಗುಲವೊಂದರಲ್ಲಿ ಈ ಶಿಲ್ಪ ಕಲೆ ಪತ್ತೆಯಾಗಿದೆ. ಅವುಗಳ ಫೋಟೊಗಳನ್ನು ತೆಗೆದು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇದಕ್ಕೆ ಟ್ವಿಟ್ಟರ್ ನಲ್ಲಿ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ನಿಮ್ಮದು ಅತ್ಯುತ್ತಮ ಗ್ರಹಿಕೆ ಎಂದು ಒಬ್ಬರು ಹೇಳಿದರೆ, ಅತ್ಯುತ್ತಮ ಪತ್ತೆ ಎಂದು ಮಗದೊಬ್ಬರು ಹೇಳಿದ್ದಾರೆ. ಮತ್ತೆ ಕೆಲವರು ಇದು ಎಲ್ಲಿಯ ದೇವಸ್ಥಾನ ಎಂದು ಕೇಳಿಕೊಂಡರೆ ಹಲವರು ನಾವು ಈ ತರಹದ ಶಿಲ್ಪಕಲೆಯನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ.

ಅಲ್ಲದೆ ಇನ್ನೊಂದು ಫೋಟೊದಲ್ಲಿ ಭಾರತೀಯ ಮಹಿಳೆಯರೇನು ಫ್ಯಾಷನ್ ನಿಂದ ಹಿಂದೆ ಬಿದ್ದಿಲ್ಲ. 807 ವರ್ಷಗಳ ಹಿಂದಿನ ಈ ಶಿಲ್ಪಕಲೆಯನ್ನು ಗಮನಿಸಿ, ಅವರು ಹೈಹೀಲ್ಡ್ ಚಪ್ಪಲಿಯನ್ನು ಆಗಲೇ ಹಾಕಿಕೊಳ್ಳುತ್ತಿದ್ದರು ಎಂದು ಬರೆದಿದ್ದಾರೆ.

ಬೆತ್ತಲೆ ಫೋಟೋ ಕಳಿಸಿ ಕಾಡ್ಗಿಚ್ಚು ಪರಿಹಾರ ನಿಧಿಗೆ ₹3.5 ಕೋಟಿ ಸಂಗ್ರಹಿಸಿ ಕೊಟ್ಟ ವೇಶ್ಯೆ

Posted: 07 Jan 2020 01:09 AM PST

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಎಷ್ಟರ ಮಟ್ಟಿಗೆ ಹಬ್ಬಿದೆ ಎಂದರೆ ಅನೇಕ ಜೀವ ಸಂಕುಲಗಳು ನಾಶವಾಗಿವೆ. ಅನೇಕರ ಬದುಕು ಕಟ್ಟಿಕೊಳ್ಳಲಾರದಷ್ಟು ದುಸ್ತರವಾಗಿದೆ.

ಹಲವರು ಸಹಾಯ ಹಸ್ತವನ್ನು ಚಾಚುತ್ತಿದ್ದಾರೆ. ಆದರೆ ಅದ್ಯಾವುದಕ್ಕೂ ಸಾಲುತ್ತಿಲ್ಲ. ಕೆಲ ಸೆಲೆಬ್ರಿಟಿಗಳು ಸಹ ಸಹಾಯಕ್ಕೆ ಮುಂದಾಗುತ್ತಿದ್ದಾರೆ.

ಆದರೆ ಇಲ್ಲೊಬ್ಬಳು ಆನ್‌ಲೈನ್ ವೇಶ್ಯೆ ಬರೋಬ್ಬರಿ ₹3.5 ಕೋಟಿಯನ್ನು ($500000) ಸಂಗ್ರಹಿಸಿ ಕೊಟ್ಟಿದ್ದಾರೆ. ಅದೂ ತನ್ನ ಬೆತ್ತಲೆ ಫೋಟೊವನ್ನು ಮಾರಿ!

20 ವರ್ಷದ ಕ್ಲೇನ್ ವಾರ್ಡ್ ಎಂಬ ವೇಶ್ಯೆಯೇ ಈ ಮೂಲಕ ಧನ ಸಹಾಯ ಮಾಡಿದವರು. 10 ಡಾಲರ್ ಅನ್ನು ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರ ನಿಧಿಗೆ ಭರಿಸಿ ಅದರ ರಸೀದಿ ಇಲ್ಲವೇ ಸಾಕ್ಷಿಯನ್ನು ತಮ್ಮ ಟ್ವಿಟ್ಟರ್ ಇನ್ ಬಾಕ್ಸ್ ಗೆ ನೇರವಾಗಿ ಮೆಸೇಜ್ ಮಾಡಿ ಖಚಿತಪಡಿಸಿದಲ್ಲಿ ತಮ್ಮ ಒಂದು ಬೆತ್ತಲೆ ಫೋಟೋವನ್ನು ಕಳಿಸಲಾಗುವುದು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿ 10 ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಡಾಲರ್ ಅನ್ನು ಕಳುಹಿಸಿದವರಿಗೆ ತಲಾ ಒಂದೊಂದು ಫೋಟೋಗಳನ್ನು ಕಳಿಸಲಾಗುವುದು ಎಂದು ಹೇಳಿಕೊಂಡಿದ್ದಾರೆ.

ಇವರು ಟ್ವಿಟ್ಟರ್ ನಲ್ಲಿ ಹೀಗೆ ಪೋಸ್ಟ್ ಮಾಡುತ್ತಿದ್ದಂತೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ. ಕೊನೆಗೆ ಎಷ್ಟರ ಮಟ್ಟಿಗೆ ನೇರ ಮೆಸೇಜುಗಳು ಬರತೊಡಗಿದ ವೆಂದರೆ ಅದನ್ನು ಪರಿಶೀಲಿಸಲೆಂದೇ ಕೆಲವೊಂದಿಷ್ಟು ಜನರನ್ನು ಇವರು ನೇಮಕ ಮಾಡಿಕೊಳ್ಳಬೇಕಾಯಿತು. ಅಲ್ಲದೆ ಖಚಿತವಾದಲ್ಲಿ ಅವರಿಗೆ ಇವರ ಬೆತ್ತಲೆ ಫೋಟೋವನ್ನು ಕಳಿಸುವ ವ್ಯವಸ್ಥೆಯನ್ನು ಅವರ ಮೂಲಕ ಮಾಡಿದ್ದಾರೆ.

ಶನಿವಾರದಿಂದ ಇಲ್ಲಿಯವರೆಗೆ 3.5 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಅದನ್ನು ಪರಿಹಾರ ನಿಧಿಗೆ ಕೊಡಲಾಗಿದೆ. ಇದೇ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆ ಆರೋಪದಡಿ ಇವರ ಇನ್ಸ್ಟಾಗ್ರಾಂ ಖಾತೆಯನ್ನು ರದ್ದುಪಡಿಸಲಾಗಿದೆ.

ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಸರ್ಕಾರಕ್ಕಿಂತ ಒಳ್ಳೆಯ ಕೆಲಸವನ್ನು ಇವರು ಮಾಡಿದ್ದು ಇಂತಹ ನಿರ್ಣಯ ಒಳ್ಳೆಯದಲ್ಲ ಎಂದು ಕೆಲವರು ಹೇಳಿದ್ದಾರೆ.

ನೀವು ಧನುರಾಶಿಯವರಾಗಿದ್ದರೆ ಹೀಗೆ ಮಾಡಿ

Posted: 07 Jan 2020 12:49 AM PST

ಹಣವಂತರಾಗುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ದುಡಿದ ದುಡ್ಡು ಕೈಯಲ್ಲಿ ಉಳಿಯುವುದಿಲ್ಲ ಎಂಬ ಚಿಂತೆ ಎಲ್ಲರನ್ನು ಕಾಡುತ್ತಿರುತ್ತದೆ.

ನಾವು ಹುಟ್ಟಿದ ರಾಶಿ ಕೂಡ ನಮ್ಮ ಕಷ್ಟಕ್ಕೆ ಕಾರಣವಾಗುತ್ತದೆ. ಅದನ್ನು ಪರಿಹಾರ ಮಾಡಿಕೊಳ್ಳುವ ಬಗೆ ಇಲ್ಲಿದೆ ನೋಡಿ.

ನೀವು ಧನುರಾಶಿಯವರಾಗಿದ್ದರೆ ಅರಳಿ ಗಿಡವನ್ನು ತಂದು ನೆಟ್ಟು ಅದಕ್ಕೆ ಪ್ರತಿನಿತ್ಯ ನೀರು ಹಾಕಿ. ಪ್ರದಕ್ಷಿಣೆ ಬರಬೇಕು.

ಒಂದು ವೇಳೆ ಗಿಡ ನೆಡುವುದಕ್ಕೆ ಸಾಧ್ಯವಾಗದಿದ್ದರೆ ಅರಳಿಮರಕ್ಕೆ ಪ್ರತಿದಿನ ಬೆಳಿಗ್ಗೆ ಪ್ರದಕ್ಷಿಣೆ ಹಾಕಿದರೆ ನಿಮ್ಮ ಕಷ್ಟವೆಲ್ಲಾ ದೂರವಾಗಿ ಸಂಪತ್ತು ವೃದ್ಧಿಸುತ್ತದೆ.

ಹಾಗೇ ಯಾವುದಾದರೂ ಒಳ್ಳೆಯ ಕೆಲಸ ಕೈಗೊಳ್ಳುವುದಿದ್ದರೆ ಮನೆಯಲ್ಲಿರುವ ಹಿರಿಯರ ಆರ್ಶೀವಾದ ಪಡೆದುಕೊಂಡು. ಓಂ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ರಾಮ್ ಕಷ್ಟಂ ಸ್ವಾಹ ಎಂದು ಮಂತ್ರ ಪಠಿಸಿದರೆ ಒಳಿತಾಗುತ್ತದೆ.

ನಿಮ್ಮ ಭವಿಷ್ಯ ತಿಳಿಯಲು ಸಂಪರ್ಕಿಸಿ:
ಪಂಡಿತ್ ಅನಂತ್ ಪ್ರಸಾದ್ ಶರ್ಮಾ
ಮೊಬೈಲ್:‌ 9845626805

ಕರ್ತವ್ಯದಲ್ಲಿರುವಾಗ್ಲೇ ಕಾರಿನಲ್ಲಿ ಮಹಿಳಾ ಪೊಲೀಸ್ ಜೊತೆ ಕಾಮಕೇಳಿಗಿಳಿದ ಅಧಿಕಾರಿ

Posted: 07 Jan 2020 12:39 AM PST

ಕರ್ತವ್ಯದಲ್ಲಿರುವಾಗ್ಲೇ ಪೊಲೀಸ್ ಅಧಿಕಾರಿಗಳಿಬ್ಬರು ಮೈಮರೆತಿದ್ದಾರೆ. ಕಾರಿನಲ್ಲಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದ ಮಹಿಳಾ ಪೊಲೀಸ್ ಕೆಲಸ ಬಿಟ್ಟಿದ್ದಾಳೆ. ಪುರುಷ ಪೊಲೀಸ್ ಅಧಿಕಾರಿ ಕೆಲಸ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾನೆ.

ಘಟನೆ ಇಂಗ್ಲೆಂಡ್ ನ ವೇಲ್ಸ್ ನಲ್ಲಿ ನಡೆದಿದೆ. ಒಂದೇ ಠಾಣೆಯಲ್ಲಿ ಇಬ್ಬರೂ ಕೆಲಸ ಮಾಡ್ತಿದ್ದರು ಎನ್ನಲಾಗಿದೆ. ಅಲೆಕ್ಸ್ ಪ್ರಿಸ್ (59) ಮತ್ತು ಅಬ್ಬಿ ಪೊವೆಲ್ (28)  ಕಾರಿನಲ್ಲಿ ಸಂಬಂಧ ಬೆಳೆಸಿದ್ದರು. ಘಟನೆ ವೇಳೆ ಇಬ್ಬರೂ ಸಮವಸ್ತ್ರದಲ್ಲಿದ್ದರು. ಪೊವೆಲ್ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆ ಎರಡು ವರ್ಷಗಳ ಹಿಂದೆ ನಡೆದಿದೆ. ಆದ್ರೆ ಒಂದು ವರ್ಷದ ನಂತ್ರ ಈ ಬಗ್ಗೆ ದೂರು ನೀಡಲಾಗಿತ್ತು.

ಪ್ರಕರಣದ ತನಿಖೆ ನಡೆಯುತ್ತಿದೆ. ಆರಂಭದಲ್ಲಿ ಅಲೆಕ್ಸ್ ತಪ್ಪೊಪ್ಪಿಕೊಂಡಿರಲಿಲ್ಲವಂತೆ. ಹಾಗೆ ಪೊವೆಲ್ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪ ಮಾಡಿದ್ದಳಂತೆ. ನಂತ್ರ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಕುತೂಹಲ ಕೆರಳಿಸಿದೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಟೀಸರ್

Posted: 07 Jan 2020 12:36 AM PST

ತೀವ್ರ ಕುತೂಹಲ ಹುಟ್ಟಿಸಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಟೀಸರ್  ಬಿಡುಗಡೆಯಾಗಿದೆ. ಈ ಚಿತ್ರದ ಟ್ರೈಲರ್ ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಲಕ್ಷಾಂತರ ಬಾರಿ ಈ ಟ್ರೈಲರ್ ವೀಕ್ಷಣೆ ಮಾಡಿದ್ದಾರೆ ಪ್ರೇಕ್ಷಕರು.

ಸೈಲೆಂಟ್ ಆಗಿ ಚಿತ್ರ ಮಾಡಿದ್ದ ಚಿತ್ರ ತಂಡ ಈಗ ಟೀಸರ್ ರಿಲೀಸ್ ಮಾಡಿದೆ. ನಿರ್ದೇಶಕ ಸೂರಿ ಸ್ಟೈಲ್ ಚಿತ್ರದ ಸನ್ನಿವೇಶಗಳಲ್ಲಿ ಕಂಡುಬಂದರೂ ಅದಕ್ಕೆ ಡಾಲಿ ಧನಂಜಯ್ ಜೀವ ತುಂಬಿದ್ದಾರೆ. ಕ್ರೈಮ್​ ಮತ್ತು ಹಿಂಸಾಚಾರದ ಸುತ್ತ ಕಥಾನಾಯಕ ಹಾಗು ನಾಯಕಿ ಅನುಭವಿಸುವ ಘಟನೆಗಳು ಚಿತ್ರದಲ್ಲಿವೆ ಎಂದು ಚಿತ್ರ ತಂಡ ಹೇಳಿದೆ.

ಚಿತ್ರದಲ್ಲಿ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಆದ್ರೆ ಟ್ರೈಲರ್ ನಲ್ಲಿ ಅವರೆಲ್ಲರ ಪಾತ್ರ ಹಾಗು ನಟನೆಯನ್ನು ರಿವೀಲ್ ಮಾಡಿಲ್ಲ. ಕ್ರೈಮ್ ಬ್ಯಾಕ್​ಡ್ರಾಪ್  ಹಿಂದಿನ ಕಥೆಯೇನು ಎಂಬುದನ್ನು ಸೂರಿ ಸಸ್ಪೆನ್ಸ್ ಆಗಿಯೇ ಇರಿಸಿದ್ದಾರೆ. ಈ ಚಿತ್ರ ಮಾಸ್ ಟ್ರೆಂಡಿಗೆ ಸೂಕ್ತ ಎಂದು ಹೇಳಲಾಗಿದೆ.

 

ರೈಲಿಗೆ ತಲೆಕೊಟ್ಟು ಇಂಜಿನಿಯರ್ ವಿದ್ಯಾರ್ಥಿ ಸಾವು…?

Posted: 07 Jan 2020 12:08 AM PST

ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಧಾರವಾಡ ನಗರದ ಬಾರಾಕೊಟ್ರಿ ಬಳಿಯ ರೈಲ್ವೇ ಹಳಿ ಬಳಿ ವಿದ್ಯಾರ್ಥಿಯ ದೇಹ ಪತ್ತೆಯಾಗಿದೆ. 21 ವರ್ಷದ ಶ್ರೀಕರ ಮುತಾಲಿಕ್ ದೇಸಾಯಿ ಸಾವನ್ನಪ್ಪಿದ ವಿದ್ಯಾರ್ಥಿ.

ಈ ವಿದ್ಯಾರ್ಥಿ ಹುಬ್ಬಳ್ಳಿ ಜೈನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ. ನಿನ್ನೆ ಎರಡನೇ ಸೆಮಿಸ್ಟರ್ ಪರೀಕ್ಷೆ ಇತ್ತಂತೆ. ಮನೆಯಿಂದ ಪರೀಕ್ಷೆ ಬರೆಯಲು ಹೋಗಿದ್ದನು.

ಆದರೆ ಪರೀಕ್ಷೆ ಬರೆಯಲು ಹೋದ ಈ ವಿದ್ಯಾರ್ಥಿ ಮನೆಗೆ ವಾಪಸ್ ಬಂದಿಲ್ಲ. ಹೀಗಾಗಿ ಈತನ ಪೋಷಕರು ಆತನ ಮೊಬೈಲಿಗೆ ಹಲವು ಬಾರಿ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸಿಲ್ಲ. ಮೊಬೈಲ್ ಹಾಗೂ ಬ್ಯಾಗ್ ಎರಡು ಹಳಿ ಪಕ್ಕದಲ್ಲಿತ್ತು ಎನ್ನಲಾಗಿದೆ. ಇನ್ನು ಸ್ಥಳೀಯರು ಕರೆ ಸ್ವೀಕರಿಸಿ ಮಾತಾನಾಡಿದಾಗ ಘಟನೆ ಬೆಳಕಿಗೆ ಬಂದಿದೆ.

ಇನ್ನು ಈತ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಹುಬ್ಬಳ್ಳಿ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀಕರ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.