Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Saturday, January 4, 2020

Kannada News | Karnataka News | India News

Kannada News | Karnataka News | India News


ಅಗತ್ಯ ನೆರವು ನೀಡದ ಪ್ರಧಾನಿ ಕೈ ಕುಲುಕಲು ನಿರಾಕರಿಸಿದ ಮಹಿಳೆ…!

Posted: 04 Jan 2020 08:38 AM PST

ಸಾವಿರಾರು ಚದರ ಕಿಮೀ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಹಬ್ಬಿರುವ ಆಸ್ಟ್ರೇಲಿಯಾ ಕಾಡ್ಗಿಚ್ಚು ವಿಶ್ವಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸೂತಕ ಛಾಯೆ ಮೂಡುವಂತೆ ಮಾಡಿದೆ.

ಮನೆಗಳನ್ನು ಕಳೆದುಕೊಂಡ ಸಾವಿರಾರು ಜನರು ಆಹಾರ, ಇಂಧನ ಹಾಗೂ ನೀರಿನಂತಹ ಅತ್ಯಗತ್ಯ ವಸ್ತುಗಳಿಗೆ ಸಾಲುಗಟ್ಟಿ ನಿಲ್ಲುತ್ತಿರುವ ಮನಕಲಕುವ ದೃಶ್ಯಗಳು ಎಲ್ಲಡೆ ವ್ಯಾಪಕವಾಗಿವೆ.

ಇದೇ ವೇಳೆ, ಪ್ರಾಕೃತಿಕ ವಿಪತ್ತನ್ನು ನಿರ್ವಹಣೆ ಮಾಡಲು ವಿಫಲವಾದ ಸರ್ಕಾರದ ವಿರುದ್ಧ ಸಾರ್ವಜನಿಕರು ಸಿಟ್ಟಿಗೆದ್ದಿದ್ದಾರೆ.

ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್‌ ಈ ವಿಚಾರವಾಗಿ ಸಾಕಷ್ಟು ಟೀಕೆಗಳನ್ನು ಕೇಳುವಂತಾಗಿದೆ. ಕಾಳ್ಗಿಚ್ಚಿನೊಂದಿಗೆ ಹೋರಾಡುತ್ತ ತನ್ನ ಮನೆಯನ್ನೇ ಕಳೆದುಕೊಂಡ ಅಗ್ನಿಶಾಮಕ ಪೇದೆಯಿಂದ ಬಯ್ಯಿಸಿಕೊಂಡ ಬಳಿಕ ಸ್ಕಾಟ್‌ಗೆ ಮತ್ತೊಬ್ಬರಿಂದ ನೇರವಾಗಿ ಕಪಾಳಮೋಕ್ಷವಾಗಿದೆ.

ಮನೆಯನ್ನು ಕಳೆದುಕೊಂಡ ಗರ್ಭಿಣಿ ಮಹಿಳೆಯೊಬ್ಬರು ಪ್ರಧಾನಿಯೊಂದಿಗೆ ಕೈಕುಲುಕಲು ನಿರಾಕರಿಸಿ, “ಅಗ್ನಿಶಾಮಕ ದಳದವರಿಗೆ ನೀವು ಮತ್ತಷ್ಟು ಹಣವನ್ನು ನೀಡಿದ್ದೇ ಆಗಿದ್ದಲ್ಲಿ, ನನ್ನಂತೆ ಸಾಕಷ್ಟು ಮಂದಿ ಮನೆ ಕಳೆದುಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ನಮಗೆ ಇನ್ನೂ ಹೆಚ್ಚಿನ ಸಹಾಯ ಬೇಕು” ಎಂದ ಮಹಿಳೆ, ಮಾರಿಸನ್‌ಗೆ ನೇರವಾಗಿ ವಾಕ್ಪ್ರಹಾರ ನಡೆಸಿ ನಡೆದಿದ್ದಾರೆ.

'You're not welcome here': The prime minister receives a hostile welcome during tour of bushfire hit areas

A firefighter who lost his home has refused to shake the Prime Minister's hand during a tour of communities in NSW destroyed by bushfires

Posted by SBS News on Thursday, January 2, 2020

ಈ ಶ್ವಾನದ ʼಸರ್ಕಸ್‌ʼ ನೋಡಿದ್ರೆ ಬಿದ್ದು ಬಿದ್ದು ನಗ್ತೀರಿ…!

Posted: 04 Jan 2020 08:24 AM PST

ಪೆಕ್ಯೂಲಿಯರ್‌ ಸ್ವಭಾವದವರನ್ನು ಸಾಕಷ್ಟು ನೋಡಿದ್ದೇವೆ. ತಮ್ಮ ವಿಭಿನ್ನ ಹಾವಭಾವಗಳಿಂದಾಗಿ ಅಂಥ ಜನರು ಸ್ನೇಹಿತರ ಹಾಗೂ ಬಂಧುಗಳ ವರ್ತುಲಗಳಲ್ಲಿ ವಿಶಿಷ್ಟವಾಗಿ ಗುರುತಿಸಲ್ಪಡುತ್ತಾರೆ.

ಕೆಲವೊಮ್ಮೆ ಇದೇ ಪೆಕ್ಯೂಲಿಯರ್‌ ಬುದ್ಧಿಗಳು ಪ್ರಾಣಿಗಳಲ್ಲೂ ಕಂಡುಬರುತ್ತದೆ. ಇಲ್ಲೊಂದು ನಾಯಿ, ತೆಂಗಿನ ಮರ ಹಾಗೂ ಕಾಂಪೌಂಡ್‌ ನಡುವಿನ ಜಾಗದಲ್ಲಿ ತನ್ನ ಇಡೀ ಮೈಯನ್ನು ಸ್ಟ್ರೆಚ್‌ ಮಾಡಿಕೊಂಡು ವಿಶಿಷ್ಟ ರೀತಿಯಲ್ಲಿ ವ್ಯಾಯಾಮ ಮಾಡುವ ಖಯಾಲಿ ಬೆಳೆಸಿಕೊಂಡಿದೆ.

ಈ ಶ್ವಾನಾಸನವನ್ನು ವಿಡಿಯೋ ಮಾಡಿಕೊಂಡ ಜೀನಿಯರ್‌ ಬಾರ್ಲೆ ಎಂಬುವವರು ಫೇಸ್ಬುಕ್‌ ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಕೆಲವರು ಇದನ್ನು ವಿಧ ವಿಧವಾಗಿ ವರ್ಣಿಸುತ್ತಿದ್ದು, ಪಕ್ಕದ ಮನೆಯ ವಿದ್ಯಾಮಾನವನ್ನು ವೀಕ್ಷಿಸಲು ಈ ಸರ್ಕಸ್‌ ಮಾಡುತ್ತಿದೆ ಈ ಶ್ವಾನ ಎಂದಿದ್ದಾರೆ.

Já vi gente curioso , mais cachorro é a primeira vez. 😂😂😂😂

Posted by Junior Barley on Wednesday, January 1, 2020

ಹೊಸ ವರ್ಷಕ್ಕೆ ಬೊಕೆ ಬದಲಿಗೆ ಬ್ಲಾಂಕೆಟ್‌ ಕೇಳಿದ ಕಲೆಕ್ಟರ್‌‌…! ಕಾರಣ ಗೊತ್ತಾ…?

Posted: 04 Jan 2020 08:20 AM PST

ವಿಪರೀತ ಚಳಿಗಾಲದಿಂದ ರಕ್ಷಿಸಿಕೊಳ್ಳಲು ಬ್ಲಾಂಕೆಟ್‌ ಗಳನ್ನೂ ಖರೀದಿಸಲು ಚೈತನ್ಯವಿರದ ಮಂದಿಯ ನೆರವಿಗೆ ಬರಲು ತೆಲಂಗಾಣದ ಅದಿಲಾಬಾದ್‌ ಜಿಲ್ಲೆಯ ಕಲೆಕ್ಟರ್‌ ಡಿ. ದಿವ್ಯಾ, ತಮಗೆ ಹೊಸ ವರ್ಷದ ಉಡುಗೊರೆಗೆ ಬೊಕೆಗಳ ಬದಲಿಗೆ ಬ್ಲಾಂಕೆಟ್‌ ಗಳನ್ನು ನೀಡಲು ತಿಳಿಸಿದ್ದರು.

ಕಲೆಕ್ಟರ್‌ ಅವರ ಈ ಆಶಯಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತ್ತಿದ್ದು, ಜನವರಿ 1ನೇ ತಾರೀಖಿನಂದೇ 1000 ಬ್ಲಾಂಕೆಟ್‌ಗಳು, ಶಾಲುಗಳು ಹಾಗೂ ಸ್ವೆಟರ್‌ಗಳನ್ನು ಸಹೃದಯಿಗಳು ದೇಣಿಗೆ ನೀಡಿದ್ದಾರೆ.

ಇಲ್ಲಿಯವರೆಗೂ ಕಲೆಕ್ಟರ್‌ ಗೆ 3000ಕ್ಕಿಂತ ಹೆಚ್ಚಿನ ಚಳಿಗಾಲದ ಧಿರಿಸುಗಳು ಹರಿದುಬಂದಿದೆ. ಇದರಿಂದಾಗಿ ಚಳಿಗಾಲದ ಧಿರಿಸುಗಳನ್ನು ಮಾರಾಟ ಮಾಡುವ ಸಲಾರ್‌ ಖಾನ್ ಪಠಾನ್‌ ಬಹಳ ಖುಷ್ ಆಗಿದ್ದು, ಕಳೆದ ನಾಲ್ಕು ದಿನಗಳ ಅವಧಿಯಲ್ಲಿ 2,000 ಬ್ಲಾಂಕೆಟ್‌ ಗಳನ್ನು ಮಾರಾಟ ಮಾಡಿದ್ದೇವೆ. ಅವರ ಅಭಿಯಾನಕ್ಕೆ ಧನ್ಯವಾದಗಳು ಎಂದಿದ್ದಾರೆ.

ಇಲ್ಲಿದೆ ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ…!

Posted: 04 Jan 2020 07:31 AM PST

ಚಿರತೆಗಳ ಚರ್ಮವನ್ನು ಕಳ್ಳಸಾಗಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಪೊಲೀಸರು ಹಾಗೂ ಇನ್ನಿತರ ಐವರನ್ನು ಬಂಧಿಸಿರುವ ಘಟನೆ ಛತ್ತೀಸ್‌ಘಡದ ದಾಂತೇವಾಡ ಜಿಲ್ಲೆಯಲ್ಲಿ ಶುಕ್ರವಾರ ಜರುಗಿದೆ.

ಮಸ್ರಾಮ್ ಕಿಡಿಯಾಮಿ ಹಾಗೂ ಶಂಕರ್‌ ಪೋಯಮ್ ಎಂಬ ಪೇದೆಗಳೂ ಸಹ ಕಳ್ಳರೊಂದಿಗೆ ಶಾಮೀಲಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಇಲ್ಲಿನ ಬಸ್ತರ್‌ ಪ್ರದೇಶದಲ್ಲಿರುವ ಇಂದ್ರವತಿ ಹುಲಿ ಸಂರಕ್ಷಿತ ಧಾಮದಲ್ಲಿ ಪಕ್ಕಾ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇವರನ್ನು ಬಂಧನಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.

ಚಿರತೆ ಹಾಗೂ ಹುಲಿ ಚರ್ಮಗಳ ಕಳ್ಳಸಾಗಾಟಗಾರರ ದಂಡು ಸಕ್ರಿಯವಾಗಿದೆ ಎಂಬ ಪಕ್ಕಾ ಮಾಹಿತಿ ಆಧರಿಸಿ, ಸಾರ್ವಜನಿಕ ಧಿರಿಸಿನಲ್ಲಿ ಮಫ್ತಿಯಲ್ಲಿ ಬಂದು ದಾಳಿ ಮಾಡಿದ ಪೊಲೀಸರು, ಬಂಧಿತರಿಂದ ಮೊಬೈಲ್‌ಗಳು, ಮೋಟರ್‌ ಸೈಕಲ್‌ ಹಾಗೂ ಹರಿತವಾದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ವಿಡಿಯೋ ನೋಡಿ ಮೂಗು ಮುರಿಯುತ್ತಿದ್ದಾರೆ ಜನ…!

Posted: 04 Jan 2020 07:27 AM PST

ಕೆಲವರು ವಿಚಿತ್ರವಾಗಿಯೇ ಇರುತ್ತಾರೆ. ಅವರು ಹಾಗೆ ಏಕೆ ಎಂದು ಹೇಳುವುದು ಕಷ್ಟ. ಈ ಮಹಿಳೆಯೂ ಹಾಗೆಯೇ ತುಂಬಾ ವಿಚಿತ್ರವಾದ ಕೆಲಸ ಮಾಡಿ ಸುದ್ದಿಯಾಗಿದ್ದಾರೆ.

ಈ ಮಹಿಳೆ ಮಾಡಿದ್ದೇನೆಂದರೆ ಚಿಕನ್ ಟಿಕ್ಕಾದಲ್ಲಿ ಚಹಾ ಹಾಕಿ ಕಲಿಸಿಕೊಂಡು ತಿಂದಿದ್ದಾರೆ. ಅದರ ವಿಡಿಯೋವನ್ನು ರೆಡ್ಡಿಟ್‌ನಲ್ಲಿ ಹಾಕಿದ್ದು ಅದು ವೈರಲ್ ಆಗಿದೆ. ಹಾಗೆಯೇ ಈ ಕಾಂಬಿನೇಷನ್ ಚೆನ್ನಾಗಿತ್ತು ಎಂದಿದ್ದಾರೆ.

ಅವರ ಈ ವಿಡಿಯೋಗೆ ಹಲವು ಪ್ರತಿಕ್ರಿಯೆಗಳು ಬಂದಿದ್ದು ಅವರ ಈ ಕಾರ್ಯಕ್ಕೆ ಅಸಹ್ಯ ವ್ಯಕ್ತಪಡಿಸಿದವರೇ ಹೆಚ್ಚು. ಆದರೆ ಅವರು ನಿಜವಾಗಿ ಅದನ್ನು ತಿಂದಿದ್ದಾರೋ ಎಂದು ವಿಡಿಯೋದಲ್ಲಿ ಗೊತ್ತಾಗುವುದಿಲ್ಲ.

Hey, Guys! When I posted the tea & idli video, u/wromit suggested that I should try "tandoori leg" with tea. I couldn’t find a leg piece, but I found what they call "Tikka." At first, I wasn’t too sure about it, but after I tried it, I’m really digging the flavor. The after-taste was decent. from india

CAA ಬಗ್ಗೆ ಮೊದಲ ಬಾರಿ ಮೌನ ಮುರಿದ ವಿರಾಟ್ ಕೊಹ್ಲಿ

Posted: 04 Jan 2020 07:03 AM PST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ. ಸಂಪೂರ್ಣ ಜ್ಞಾನವಿಲ್ಲದೆ ಯಾವುದರ ಬಗ್ಗೆಯೂ ಮಾತನಾಡುವುದಿಲ್ಲವೆಂದು ಕೊಹ್ಲಿ ಹೇಳಿದ್ದಾರೆ. ಗುವಹಾಟಿಯಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ-20 ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಮುನ್ನ ಮಾತನಾಡಿದ ಕೊಹ್ಲಿ ಈ ಹೇಳಿಕೆ ನೀಡಿದ್ದಾರೆ.

ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಕೊಹ್ಲಿ, ಎರಡೂ ಕಡೆ ಬಲವಾದ ವಾದವಿದೆ. ಈ ಬಗ್ಗೆ ನಾನು ಬೇಜವಾಬ್ದಾರಿ ಹೇಳಿಕೆ ನೀಡಲು ಬಯಸುವುದಿಲ್ಲ. ಸಂಪೂರ್ಣ ಮಾಹಿತಿಯಿಲ್ಲದೆ ಹೇಳಿಕೆ ನೀಡುವುದು ಸರಿಯಲ್ಲವೆಂದು ಕೊಹ್ಲಿ ಹೇಳಿದ್ದಾರೆ. ಇದ್ರ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿದ ಮೇಲೆ ನಾನು ಜವಾಬ್ದಾರಿಯುತವಾಗಿ ಪ್ರತಿಕ್ರಿಯೆ ನೀಡಬಲ್ಲೆ ಎಂದಿದ್ದಾರೆ.

ಗುವಹಾಟಿಯಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆದಿದೆ. ಟಿ-20 ಪಂದ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಅಸ್ಸಾಂ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಮೈದಾನದ ಸುತ್ತ ನೀಡಿರುವ ಭದ್ರತೆಗೆ ಕೊಹ್ಲಿ ತೃಪ್ತರಾದಂತಿದೆ. ನಗರದಲ್ಲಿ ಸಂಪೂರ್ಣ ಸುರಕ್ಷತೆಯಿದೆ. ನಮಗೆ ಯಾವುದೇ ಸಮಸ್ಯೆಯಿಲ್ಲವೆಂದು ಕೊಹ್ಲಿ ಹೇಳಿದ್ದಾರೆ.

ಹೊಸ ವರ್ಷದಂದು ಈಕೆ ಪಡೆದ ಟಿಪ್ಸ್‌ ಕೇಳಿದ್ರೆ ದಂಗಾಗ್ತೀರಾ…!

Posted: 04 Jan 2020 07:00 AM PST

ಕೇವಲ $23ಗಳ (1650 ರೂ.ಗಳು) ಬಿಲ್‌ ಮೇಲೆ $2020ರಷ್ಟು (1.45 ಲಕ್ಷ ರೂ.) ಟಿಪ್ ಪಡೆದ ವೇಯ್ಟ್ರೆಸ್‌ ಡ್ಯಾನಿಯಲ್ ಫ್ರಾಂಝೋಯ್‌ ಬಹಳ ಖುಷಿಯಾಗಿದ್ದಾರೆ.

ಮಿಚಿಗನ್‌ ನ ಆಲ್ಪೆನಾದಲ್ಲಿ ಸರ್ವರ್‌ ಆಗಿ ಕೆಲಸ ಮಾಡುವ ಈಕೆಗೆ, ಹೊಸ ವರ್ಷದ ಪ್ರಯುಕ್ತ ನಡೆದ '2020 ಟಿಪ್ ಚಾಲೆಂಜ್' ಸಂದರ್ಭದಲ್ಲಿ ಒಲಿದು ಬಂದ ಅದೃಷ್ಟವನ್ನು ಖುದ್ದು ನಂಬಲಾಗಿಲ್ಲ.

ಇದೇ ಖುಷಿಯಲ್ಲಿ ತನ್ನ ಕೆಲಸ ಮುಗಿದ ಬಳಿಕ ಮತ್ತೊಂದು ಕಡೆ ಡಿನ್ನರ್‌ಗೆ ತೆರಳಿದ ಆಕೆ, ಖುದ್ದು ಅಲ್ಲಿದ್ದ ಸರ್ವರ್‌ ಒಬ್ಬರಿಗೆ $20.20 ಗಳನ್ನು ಟಿಪ್ ರೂಪದಲ್ಲಿ ಕೊಟ್ಟು ತನ್ನ ಖುಷಿ ಹಂಚಿಕೊಂಡಿದ್ದಾಳೆ.

ಮತ್ತೊಂದು ನಿದರ್ಶನದಲ್ಲಿ ಹಾಡುಗಾರ ಹಾಗೂ ಹಾಡು ಬರಹಗಾರ ಡೋನ್ನಿ ವಾಲ್ಹ್‌ಬರ್ಗ್ ಹಾಗೂ ಅವರ ಪತ್ನಿ ಜೆನ್ನಿ ಮೆಕ್‌ಕಾರ್ಥನಿ, 2020 ಟಿಪ್ ಟ್ರೆಂಡ್‌ ನಲ್ಲಿ ಭಾಗವಹಿಸಿದ್ದಾರೆ.

ಈ ಸಂದರ್ಭದಲ್ಲಿ ನ್ಯೂಯಾರ್ಕ್‌ನ IHOP ಸ್ಟೋರ್‌ನಲ್ಲಿ ಮೀಲ್ ಒಂದನ್ನು ಆರ್ಡರ್‌ ಮಾಡಿದ ದಂಪತಿ, ರೆಸ್ಟೊರೆಂಟ್‌ನಿಂದ ಹೊರಗೆ ಹೋಗುವ ಮುನ್ನ, ವೇಯ್ಟ್ರೆಸ್‌ ಬೆಥನಿ ಕೈಗೆ ಮಡಚಿದ ಬಿಲ್‌ ಕೊಟ್ಟು, ತಾವು ಅಲ್ಲಿಂದ ಹೋದ ಬಳಿಕ ತೆರೆದು ನೋಡಲು ಹೇಳಿದ್ದಾರೆ. ಬಿಲ್‌ ಅನ್ನು ತೆರೆದು ನೋಡಿದ ಬೆಥನಿಗೆ ಅಚ್ಚರಿ ಕಾದಿತ್ತು. ಆಕೆಯೂ ಸಹ ಈ ಚಾಲೆಂಜ್ ಭಾಗವಾಗಿ $2020‌ ಗಳನ್ನು ಟಿಪ್ ರೂಪದಲ್ಲಿ ಪಡೆದಿದ್ದಳು.

ಮಾತನಾಡುವಂತಿಲ್ಲ, ಮತ್ತೆ ಮಾತಾಡಿದ್ರೆ ಮೋದಿ ಎಲ್ಲಿ ಕತ್ತಿ ಹಾಕ್ತಾರೋ….

Posted: 04 Jan 2020 06:17 AM PST

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ ವಿರೋಧಿಸಿ ಹಾವೇರಿ ಜಿಲ್ಲೆ ಹಾನಗಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೋಟ್ ಬ್ಯಾನ್ ಆದಾಗ ಬಂದಿದ್ದ ದರಿದ್ರ ಇನ್ನೂ ಹೋಗಿಲ್ಲ. ಹುಚ್ಚನ ಕೈಯಲ್ಲಿ ಕತ್ತಿ ಕೊಟ್ಟು ಶೇವಿಂಗ್ ಗೆ ಕುಳಿತಂತೆ ಆಗಿದೆ. ಕುತ್ತಿಗೆ ಸೀಳ್ತಾನೋ ಅಥವಾ ಇನ್ನೆಲ್ಲಿ ಸೀಳ್ತಾನೋ ಗೊತ್ತಿಲ್ಲ. ಕತ್ತಿ ಕೊಟ್ಟು ಬಿಟ್ಟಿದ್ದೇವೆ. ಏನನ್ನೂ ಮಾತನಾಡುವಂತಿಲ್ಲ. ಮಾತನಾಡಿದರೆ ಮತ್ತೆಲ್ಲಿ ಕತ್ತಿ ಸೀಳುತ್ತಾನೋ ಗೊತ್ತಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಮೀಸಲಾತಿ ಕಂಡರೆ ಅನಂತಕುಮಾರ ಹೆಗಡೆಗೆ ಹೊಟ್ಟೆ ನೋವು. ದಲಿತರ ಏಳಿಗೆ ನೋಡಿ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಇವಿಎಂ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಮೋದಿ ಇರುತ್ತಾರೆ. ಎಲ್ಲ ಚುನಾವಣೆಗಳಲ್ಲಿಯೂ ನಾವು ಸೋಲುತ್ತೇವೆ. ಇವಿಎಂ ಗೆಲ್ಲುತ್ತದೆ. ನಾಯಿ, ಕತ್ತೆ ಕತೆ ಹೇಳಿದ ಇಬ್ರಾಹಿಂ ಮೋದಿ ಮತ್ತು ಅಮಿತ್ ಶಾ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಮ್ಮ ರಾಜ್ಯಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಬೇಕಿತ್ತಾ? ಹಳ್ಳಿಯ ಮುಖ್ಯಸ್ಥರನ್ನು ಕೇಳಿದರೆ ಹೊರಗಿನವರು ಯಾರು ಬಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಇವರಿಗೆ ಹೊರಗಿನಿಂದ ಬಂದವರ ಯಾವುದೇ ಲಿಸ್ಟ್ ಬೇಕಿಲ್ಲ. ಇವರಿಗೆ ಇಲ್ಲಿರುವವರ ಲಿಸ್ಟ್ ಬೇಕಾಗಿದೆ ಎಂದು ದೂರಿದ್ದಾರೆ.

ಮನೆಯಲ್ಲೇ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವಕರು ಅರೆಸ್ಟ್: ಯುವತಿಯರ ರಕ್ಷಣೆ

Posted: 04 Jan 2020 05:56 AM PST

ಮಂಡ್ಯದ ಗಾಂಧಿನಗರದ 5ನೇ ಕ್ರಾಸ್ ಮನೆಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.

ಗಾಂಧಿನಗರದ ಈ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತಾಗಿ ಸ್ಥಳೀಯರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮತ್ತು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದ್ದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.

ಮಗಳೊಂದಿಗೆ ಮಗುವಾಗಿ ಎಂಜಾಯ್ ಮಾಡಿದ ಧೋನಿ

Posted: 04 Jan 2020 05:55 AM PST

ಕಳೆದ ವಿಶ್ವಕಪ್‌ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಮ್ಮ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ.

ಹೊಸ ವರ್ಷದ ಪ್ರಯುಕ್ತ ಮಡದಿ ಸಾಕ್ಷಿ ಹಾಗೂ ಮಗಳು ಜೀವಾಳೊಂದಿಗೆ ಹಾಲಿಡೇ ಮೂಡ್‌ನಲ್ಲಿರುವ ಧೋನಿ, ಮಗಳೊಂದಿಗೆ ಮಂಜಿನಲ್ಲಿ ಆಟವಾಡುತ್ತಿರುವ ತಮ್ಮ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೇ ಲೈವ್‌ ವಿಡಿಯೋ ಮೂಲಕ ಈ ಸಂತಸದ ಘಳಿಗೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮಂಜಿನಲ್ಲಿ ಪ್ರತಿಮೆಯೊಂದನ್ನು ನಿರ್ಮಿಸುತ್ತಿರುವ ಧೋನಿ, ತಮ್ಮ ಮಗಳೊಂದಿಗೆ ತಾವೂ ಮಗುವಾಗಿ ಆಟವಾಡುತ್ತಿರುವುದನ್ನು ಕಂಡ ಅವರ ಅಭಿಮಾನಿಗಳು ಸಹ ಖುಷಿ ಪಟ್ಟಿದ್ದಾರೆ.

View this post on Instagram

2020 with this man ❤️ !

A post shared by Sakshi Singh Dhoni (@sakshisingh_r) on

ಕಣ್ಣೀರು ತರುವಂತಿದೆ ಕಾಳ್ಗಿಚ್ಚಿಗೆ ಸಿಲುಕಿ ಜೀವಂತ ದಹಿಸಿದ ಕಾಂಗರೂ ಚಿತ್ರ

Posted: 04 Jan 2020 05:53 AM PST

ರಾಕ್ಷಸ ಸ್ವರೂಪಿ ಕಾಳ್ಗಿಚ್ಚಿಗೆ ತುತ್ತಾಗಿರುವ ಆಸ್ಟ್ರೇಲಿಯಾ ಜಗತ್ತಿನಾದ್ಯಂತ ಮನುಕುಲ ಕಣ್ಣಿರಿಡುವಂಥದ ಸೂತಕದ ಮನೆಯಾಗಿ ಮಾರ್ಪಾಡಾಗಿದೆ.

ಲಕ್ಷಾಂತರ ಪ್ರಾಣಿಗಳು ಹಾಗೂ ಜನರು ಮನೆಗಳನ್ನು ಕಳೆದುಕೊಂಡಿದ್ದಲ್ಲದೇ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಅನೇಕ ಪ್ರಾಣಿ ಹಾಗೂ ಸಸ್ಯ ಸಂಕುಲದ ತಳಿಗಳೇ ಸಂಪೂರ್ಣವಾಗಿ ನಾಶವಾಗಿಬಿಡುವ ಭೀತಿ ಮೂಡಿಸುವ ಮಟ್ಟಿಗೆ ಸಾವುಗಳು ಸಂಭವಿಸುತ್ತಿವೆ. ಅದಾಗಲೇ ಕೋಟಿ ಸಂಖ್ಯೆಯಲ್ಲಿ‌ಪ್ರಾಣಿಗಳು ಮೃತಪಟ್ಟಿವೆ. ಹೌದು, 50 ಕೋಟಿ!

ಪರಿಸ್ಥಿತಿಯ ಭೀಕರತೆಯನ್ನು ಕಣ್ಣಿಗೆ ಕಟ್ಟಿಕೊಡುವ ಚಿತ್ರವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಕಾಂಗರೂ ಮರಿಯೊಂದು ಬೆಂಕಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ವೇಳೆ ಬೇಲಿಗೆ ಸಿಲುಕಿ ಜೀವಂತ ದಹಿಸಿಹೋದ ದೃಶ್ಯ ಎಂಥವರ ಮನವನ್ನೂ ಕಲಕುವಂತೆ ಮಾಡಿದ್ದು, ಸಹೃದಯಿಗಳು ನೋವಿನ ಕಣ್ಣೀರಿಡುವಂತೆ ಆಗಿದೆ.

ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ: ತನಿಖೆಯಲ್ಲಿ ಬಯಲಾಯ್ತು ರಹಸ್ಯ

Posted: 04 Jan 2020 05:28 AM PST

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಶಾಲೆಯೊಂದರ ಶೌಚಾಲಯದಲ್ಲಿ ಸಿಕ್ಕಿದ್ದ ನವಜಾತ ಶಿಶು ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಶಿಕ್ಷಕರೊಬ್ಬನನ್ನು ಬಂಧಿಸಿದ್ದಾರೆ.

ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಲೆಯ ಶೌಚಾಲಯದಲ್ಲಿ ಇತ್ತೀಚೆಗೆ ನವಜಾತ ಶಿಶು ಪತ್ತೆಯಾಗಿತ್ತು. ತಾಯಿ ಹೆರಿಗೆ ಬಳಿಕ ಶಿಶುವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅದೇ ಶಾಲೆಯ ಶಿಕ್ಷಕ 31 ವರ್ಷದ ಭೀಮಪ್ಪ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ ಎನ್ನಲಾಗಿದೆ. ಶಾಲೆಯ ಬಾಲಕಿಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದು ಗರ್ಭಿಣಿಯಾಗಿದ್ದ ವಿದ್ಯಾರ್ಥಿನಿ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿದ್ಯಾರ್ಥಿನಿಯನ್ನು ಬೆದರಿಸಿ ಅತ್ಯಾಚಾರ ಎಸಗುತ್ತಿದ್ದ ಶಿಕ್ಷಕ ಆಕೆಯ ಪೋಷಕರಿಗೂ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಫಾರ್ವಡ್‌ ಮೆಸೇಜ್‌ ಶೇರ್‌ ಮಾಡಿ ಪೇಚಿಗೆ ಸಿಲುಕಿದ ಕಿರಣ್ ಬೇಡಿ

Posted: 04 Jan 2020 05:25 AM PST

ಫಾರ್ವಡ್‌ ಮೆಸೇಜ್‌ಗಳ ಸತ್ಯಾಸತ್ಯತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಂತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡು ಫಜೀತಿಗೆ ಸಿಲುಕುವುದು ಸೆಲೆಬ್ರಿಟಿಗಳು ಹಾಗೂ ಖ್ಯಾತನಾಮರ ವಿಚಾರದಲ್ಲಿ ಸಾಮಾನ್ಯವಾಗಿಬಿಟ್ಟಿದೆ.

ಇದೀಗ ಪುದುಚೆರಿಯ ಲೆಫ್ಟೆನೆಂಟ್‌ ಗವರ್ನರ್‌ ಕಿರಣ್ ಬೇಡಿ ಸಹ ಇಂಥದ್ದೇ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ.

“ಸೂರ್ಯನ ಶಬ್ದವನ್ನು ನಾಸಾ ರೆಕಾರ್ಡ್ ಮಾಡಿಕೊಂಡಿದ್ದು, ಅವನು 'ಓಂ' ಎಂದು ಪಠಿಸುತ್ತಾನೆ” ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಕ್ಯಾಪ್ಷನ್‌ನೊಂದಿಗೆ ವಿಡಿಯೋವೊಂದನ್ನು ಬೇಡಿ ಶೇರ್‌ ಮಾಡಿಕೊಂಡಿದ್ದಾರೆ.

ಸಾಕಷ್ಟು ಹಿಂಬಾಲಕರಿರುವ ಬೇಡಿ ಖಾತೆಯಲ್ಲಿ ನಿರೀಕ್ಷೆಯಂತೆಯೇ ಈ ಪೋಸ್ಟ್‌ ಸಹ ವ್ಯಾಪಕವಾಗಿ ಚರ್ಚೆಯಾಗಿಬಿಟ್ಟಿದೆ.

ಆದರೆ ವಿಡಿಯೋದಲ್ಲಿ ಹೇಳಿಕೊಂಡಿರುವ ವಿಚಾರ ಸುಳ್ಳು ಎಂದು ಗೊತ್ತಾಗಿದೆ. ಜುಲೈ 2018ರಲ್ಲಿ ನಾಸಾ ಸೂರ್ಯನ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಹೇಗೆ ಸದ್ದು ಮಾಡುತ್ತಾನೆ ಎಂದು ತೋರಿದೆ.

ಬೇಡಿಯ ಮೆದುಳು ತಲೆಯಿಂದ ಬಿದ್ದು ಹೋಗಿದೆ ಎಂಬರ್ಥದಲ್ಲೆಲ್ಲಾ ನೆಟ್ಟಿಗರು ಅವರನ್ನು ಟ್ರೋಲ್ ಮಾಡುವ ಮೂಲಕ, ಮಾಜಿ ಐಪಿಎಸ್ ಅಧಿಕಾರಿಗೆ ತೀವ್ರ ಇರುಸುಮುರುಸುಂಟಾಗುವಂತೆ ಮಾಡಿಬಿಟ್ಟಿದ್ದಾರೆ.

ಅಪಘಾತ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕ್ತಾರಾ ಗಾಯಕಿ…?

Posted: 04 Jan 2020 05:22 AM PST

ಟ್ರಕ್ ವೊಂದನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಆದ ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸುವುದಾಗಿ ಗಾಯಕಿ ಹಾಗೂ ನರ್ತಕಿ ಸಪ್ನಾ ಚೌಧರಿ ಪೊಲೀಸರಿಗೆ ತಿಳಿಸಿದ್ದಾರೆ.

ಡಿಸೆಂಬರ್ 25ರಂದು ಮಧ್ಯರಾತ್ರಿ ಗುರ್ಗಾಂವ್ ನ ಹೀರೋಹೊಂಡಾ ವೃತ್ತದ ಮೇಲ್ಸೇತುವೆ ಬಳಿ ಸಪ್ನಾ ಅವರ ಕಾರು(ಎಸ್ಯುವಿ) ಟ್ರಕ್ ವೊಂದನ್ನು ಹಿಂದಿಕ್ಕುವ ವೇಳೆ ಟ್ರಕ್ ಗೆ ಗುದ್ದಿತ್ತು.

ಆದರೆ ಘಟನೆ ಬಳಿಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದರು. ಬಳಿಕ ಟ್ರಕ್ ಚಾಲಕ ದಾಖಲಿಸಿದ್ದ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಅದು ಸಪ್ನ ಚೌಧರಿಗೆ ಸೇರಿದ ಕಾರೆಂದು ಗೊತ್ತಾಗಿತ್ತು.

ಆದರೆ ಕಾರಿನಲ್ಲಿ ಸಪ್ನಾ ಚೌಧರಿ ಇದ್ದ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಸಪ್ನ ಅವರೇ ಪೊಲೀಸರ ತನಿಖೆಗೆ ಸಹಕರಿಸಲು ಮುಂದಾಗಿದ್ದಾರೆ. ಈಗಾಗಲೇ ಎಫ್ಐಆರ್ ಕೂಡಾ ದಾಖಲಾಗಿದೆ.

ಔಟಾಗಿಲ್ಲ ಎಂದು ವಾದ ಮಾಡಿದ ಬ್ಯಾಟ್ಸ್ ಮನ್, ಹತ್ತು ನಿಮಿಷ ಸ್ಥಗಿತಗೊಂಡ ಮ್ಯಾಚ್

Posted: 04 Jan 2020 05:18 AM PST

ಔಟಾಗಿಲ್ಲ, ಡಿಸಿಷನ್ ವಾಪಸ್ ತಗೋಳ್ಳಿ ಎಂದು ಕ್ರಿಕೆಟಿಗ ಶುಭ್‌ಮನ್ ಗಿಲ್ ವಾದ ಮಾಡಿದ್ದರಿಂದ ಮ್ಯಾಚ್ ಹತ್ತು ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು.

ಶುಕ್ರವಾರ ದೆಹಲಿ ಎದುರು ನಡೆದ ಪಂಜಾಬ್ ರಣಜಿ ಪಂದ್ಯ ವೇಳೆ ಈ ಘಟನೆ ನಡೆದಿದೆ. ಅಂಪೈರ್ ಡಿಸಿಷನ್ ತಪ್ಪಾಗಿದೆ, ಹಿಂಪಡೆಯಬೇಕು ಎಂದು ವಾದಿಸಿದ್ದರು.

ಬಳಿಕ ಸೈಡ್ ಅಂಪೈರ್ ಬಳಿ ಚರ್ಚಿಸಿ ಗಿಲ್‌ಗೆ ಆಡಲು ಅವಕಾಶ ನೀಡಲಾಯಿತು.

ಈ ಮುನ್ನ ಕೀಪರ್ ಕ್ಯಾಚ್ ಪಡೆದರೆಂದು ಗಿಲ್ ಅವರನ್ನು ಔಟೆಂದು ಅಂಪೈರ್ ಘೋಷಿಸಿದ್ದರು.

ಆದರೆ, ಬಳಿಕ ಹೆಚ್ಚು ಹೊತ್ತು ಇರದ ಶುಭ್‌ಮನ್ 41 ಬಾಲ್‌ಗಳಲ್ಲಿ 23 ರನ್ ಮಾಡಿ ಔಟಾದರು.

ಆದರೆ, ಗಿಲ್ ಪರ ಮತ್ತು ವಿರೋಧ ಒಂದಷ್ಟು ಅಭಿಪ್ರಾಯ, ಪ್ರತಿಕ್ರಿಯೆಗಳು ಬಂದಿವೆ.

ಕೋಟಿ ರೂ.ಗೆ ಸಿಗುತ್ತಿದ್ದ ಈ ಉಪಕರಣ ಈಗ ಲಕ್ಷಕ್ಕೇ ಲಭ್ಯ…!

Posted: 04 Jan 2020 05:15 AM PST

ಕೈಗಾರಿಕಾ ಮಟ್ಟದಲ್ಲಿ ಬಟ್ಟೆಯ ಮೃದುತ್ವ ಅಳೆಯುವ ಉಪಕರಣ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತೆ ದೆಹಲಿ ಐಐಟಿ ಸಂಶೋಧನೆ ಮಾಡಿದೆ.

ನಾವು ಬಟ್ಟೆಯ ಮೃದುತ್ವ ತಿಳಿಯಲು ಎರಡು ಬೆರಳುಗಳ ಮಧ್ಯೆ ಅದನ್ನು ಉಜ್ಜಿ ನೋಡುತ್ತೇವೆ.

ಆದರೆ ಇದನ್ನೇ ಬಟ್ಟೆಯ ಕಾರ್ಖಾನೆಗಳಲ್ಲಿ ದೊಡ್ಡಮಟ್ಟದಲ್ಲಿ ತಿಳಿಯುವ ಉಪಕರಣಕ್ಕೆ ಸುಮಾರು 1.5 ಕೋಟಿ ರೂ. ಇದೆ.

ಆದರೆ ದೆಹಲಿ ಐಐಟಿ ಪ್ರೊಫೆಸರ್ ಅಪೂರ್ಬಾ ದಾಸ್ ಮತ್ತವರ ತಂಡ ಅದಕ್ಕಿಂತ ನೂರುಪಟ್ಟು ಕಡಿಮೆ ಬೆಲೆಯಲ್ಲಿ ಈ ಉಪಕರಣವನ್ನು ಸಂಶೋಧಿಸಿದೆ.

ವೈರಲ್ ಆಗುತ್ತಿದೆ ಫುಟ್‌ಬಾಲ್ ಆಡುತ್ತಿರುವ ಜಿಂಕೆಯ ವಿಡಿಯೋ

Posted: 04 Jan 2020 05:13 AM PST

ಜಿಂಕೆಯೊಂದು ಫುಟ್‌ಬಾಲ್ ಜೊತೆ ಆಡುತ್ತಿರುವುದು ವಿಡಿಯೋವೊಂದರಲ್ಲಿ ಸೆರೆಯಾಗಿದೆ. ಆದರೆ ಈ ವಿಡಿಯೋದಲ್ಲಿ ಇನ್ನೂ ವಿಶೇಷವಿರುವುದು ಜಿಂಕೆ ನೀಡುತ್ತಿರುವ ಜೀವನ ಪಾಠ.

ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಹಂಚಿಕೊಂಡಿರುವ ವಿಡಿಯೋದಲ್ಲಿ ಜಿಂಕೆ ಫುಟ್‌ಬಾಲ್ ಅನ್ನು ತಲೆಯಿಂದ ಆಡುತ್ತಾ ಗೋಲ್ ಪೋಸ್ಟ್ ಒಳಗೆ ಹಾಕಿ ಕುಣಿಯುತ್ತ ಓಡುತ್ತದೆ.

ಇದಕ್ಕೆ ಸುಸಾಂತ ಅವರು ಯಾವಾಗಲೂ ಹೀಗೆ ನಮ್ಮ ಚಿಕ್ಕ ಚಿಕ್ಕ ಸಾಧನೆಗೆ ಹರ್ಷ ಪಡಬೇಕು ಎಂದಿದ್ದಾರೆ. ಅಲ್ಲಿ ಎದುರಾಳಿ ಇಲ್ಲದಿದ್ದರೂ ನಾವು ಗೆಲುವನ್ನು ಸಂಭ್ರಮಿಸಬೇಕು ಎಂದಿದ್ದಾರೆ. ನೆಟ್ಟಿಗರೂ ಕೂಡ ಅವರ ಮಾತಿಗೆ ತಲೆದೂಗಿದ್ದಾರೆ.

— Susanta Nanda IFS (@susantananda3) January 2, 2020

ನಿವೃತ್ತಿ ಘೋಷಿಸಿದ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್

Posted: 04 Jan 2020 05:04 AM PST

Image result for irfan-pathan-announces-retirement-from-all-forms-of-cricket

ಟೀಮ್ ಇಂಡಿಯಾ ಆಲ್ ರೌಂಡರ್ ಇರ್ಫಾನ್ ಪಠಾಣ್ ನಿವೃತ್ತಿ ಘೋಷಿಸಿದ್ದಾರೆ. 2003 ರಲ್ಲಿ ಅಂತರ ರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಇರ್ಫಾನ್ ಪಠಾಣ್ 16 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

29 ಟೆಸ್ಟ್ ಪಂದ್ಯಗಳಿಂದ 100 ವಿಕೆಟ್ ಪಡೆದಿರುವ ಇರ್ಫಾನ್ ಪಠಾಣ್, 120 ಏಕದಿನ ಪಂದ್ಯಗಳಿಂದ 173 ವಿಕೆಟ್ ಗಳಿಸಿದ್ದಾರೆ. 24 ಟಿ20 ಪಂದ್ಯಗಳಲ್ಲಿ 172 ವಿಕೆಟ್ ಗಳಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 301 ವಿಕೆಟ್ ಪಡೆದು, 2821 ರನ್ ಗಳಿಸಿದ್ದಾರೆ.

ಅವರು ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 2019 ರ ಫೆಬ್ರವರಿಯಲ್ಲಿ ಸೈಯದ್ ಅಲಿ ಮುಷ್ತಾಕ್ ಟ್ರೋಫಿ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಪ್ರತಿನಿಧಿಸಿದ್ದರು. ಕ್ರಿಕೆಟ್ ನಿಂದ ದೂರವಾದ ನಂತರ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2007 ರಲ್ಲಿ ಭಾರತ ತಂಡ ಟಿ 20 ವಿಶ್ವಕಪ್ ಗಳಿಸಿದ ತಂಡದಲ್ಲಿದ್ದ ಪಠಾಣ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ರಾಜ್ಯ ಕಾಂಗ್ರೆಸ್ ನಾಯಕರ ಮಹತ್ವದ ಸಭೆಯಿಂದ ಹೊರನಡೆದ ಡಿಕೆಶಿ

Posted: 04 Jan 2020 04:48 AM PST

ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತಾಗಿ ಇಂದು ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆದಿದೆ.

ರಾಜ್ಯ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗವಹಿಸಿದ್ದು, ಮಹತ್ವದ ಚರ್ಚೆ ನಡೆಸಿದ್ದಾರೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ 5 ನಿಮಿಷದಲ್ಲಿ ಅಲ್ಲಿಂದ ತೆರಳಿದ್ದಾರೆ. ಸಭೆಯಲ್ಲಿ ಹಾಜರಿ ಹಾಕಿ ಹೊರ ನಡೆದ ಡಿ.ಕೆ. ಶಿವಕುಮಾರ್ ಸಭೆಯ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.

ದೇವಸ್ಥಾನಕ್ಕೆ ತೆರಳಬೇಕಿದ್ದ ಡಿಕೆಶಿ ಸಭೆಯಿಂದ ಹೊರಟಿದ್ದು, ಸಭೆಯ ಬಳಿಕ ಪಕ್ಷದ ನಾಯಕರು ಸುದ್ದಿಗಾರರಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಅವರನ್ನು ನೇಮಕ ಮಾಡಲು ಮುಂದಾಗಿದ್ದು, ಇದನ್ನು ತಪ್ಪಿಸಲು ಸಿದ್ಧರಾಮಯ್ಯ ಬಣ ಮುಂದಾಗಿದೆ. ಎಂ.ಬಿ. ಪಾಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಜೊತೆಗೆ ಸತೀಶ್ ಜಾರಕಿ ಹೊಳಿ, ಈಶ್ವರ್ ಖಂಡ್ರೆ, ಯು.ಟಿ. ಖಾದರ್, ಕೃಷ್ಣ ಭೈರೇಗೌಡ, ತನ್ವೀರ್ ಸೇಠ್ ಅವರಲ್ಲಿ ಮೂವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಲು ಚರ್ಚೆ ನಡೆದಿದೆ. ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ ಮೂವರು ಕಾರ್ಯಾಧ್ಯಕ್ಷರ ನೇಮಿಸವುದು ಇಲ್ಲವೇ ಡಿಕೆಶಿಗೆ ಕಾರ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ಮನೆಯಲ್ಲೇ ಕಾಮುಕನಿಂದ ನಾಚಿಕೆಗೇಡಿನ ಕೃತ್ಯ

Posted: 04 Jan 2020 04:34 AM PST

ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಮುಕ ವೃದ್ಧನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಅಪ್ರಾಪ್ತ ಬಾಲಕಿಗೆ ಚಾಕೋಲೇಟ್ ಕೊಡುವುದಾಗಿ ಮನೆಗೆ ಕರೆದುಕೊಂಡ ಹೋದ ಕಾಮುಕ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, 65 ವರ್ಷದ ವೃದ್ಧನ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.

ಯುವಕನೊಂದಿಗೆ ಸಂಬಂಧ ಬೆಳೆಸಿ ಪರಾರಿಯಾದ ಗೃಹಿಣಿ: ಆಮೇಲೇನಾಯ್ತು ಗೊತ್ತಾ…?

Posted: 04 Jan 2020 04:24 AM PST

ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ಕೈಕೊಟ್ಟ ಪ್ರಿಯಕರನ ಮನೆ ಎದುರು ಮಹಿಳೆ ಧರಣಿ ನಡೆಸಿದ್ದಾರೆ.

ಮದುವೆಯಾಗಿ 3 ಮಕ್ಕಳಿರುವ ಮಹಿಳೆ 7 ತಿಂಗಳ ಹಿಂದೆ ಪ್ರಭು ಎಂಬಾತನೊಂದಿಗೆ ಪರಾರಿಯಾಗಿದ್ದಾಳೆ. ಮಹಾರಾಷ್ಟ್ರದ ಪುಣೆಯಲ್ಲಿ ಪ್ರಿಯಕರನೊಂದಿಗೆ ಆಕೆ ಇದ್ದಳು. ಆದರೆ 7 ತಿಂಗಳ ಬಳಿಕ ಪ್ರಿಯಕರ ಪರಾರಿಯಾಗಿದ್ದು ಇದರಿಂದ ನೊಂದ ಮಹಿಳೆ ಪ್ರಿಯಕರನ ಮನೆಯ ಎದುರು ಧರಣಿ ನಡೆಸಿದ್ದಾಳೆ.

ಮೊದಲಿಗೆ ಗಂಡನ ಮನೆಗೆ ಬಂದ ಆಕೆಯನ್ನು ಪತಿ ಮನೆಯವರು ಸೇರಿಸಿಕೊಂಡಿಲ್ಲ. ದಾರಿ ಕಾಣದ ಮಹಿಳೆ ಪ್ರಿಯಕರನ ಮನೆ ಎದುರು ಧರಣಿ ನಡೆಸಿದ್ದು, ಆಕೆಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಪ್ರಿಯಕರನ ಮನೆಯವರು ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾರೆ. ತಾಳಿಕೋಟೆ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ, ಅಚ್ಚರಿಯ ಹೆಜ್ಜೆ ಇಟ್ಟ ರಾಜ್ಯ ಕಾಂಗ್ರೆಸ್ ನಾಯಕರು

Posted: 04 Jan 2020 04:11 AM PST

ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಸರ್ವಸಮ್ಮತ ನಿರ್ಧಾರಕ್ಕೆ ಬಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಧಾನಪರಿಷತ್ ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡುವ ಕುರಿತು ಚರ್ಚೆ ನಡೆಸಿದ್ದಾರೆ.

ಮಾಜಿ ಡಿಸಿಎಂ ಜಿ. ಪರಮೇಶ್ವರ್ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ನಡೆದಿದ್ದು, ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್, ಮುನಿಯಪ್ಪ, ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ್, ಎಂ.ಬಿ. ಪಾಟೀಲ್, ಮಾರ್ಗರೇಟ್ ಆಳ್ವಾ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

ಹಿರಿಯ ನಾಯಕರು ಮತ್ತು ಸಿದ್ಧರಾಮಯ್ಯ ಬಣದ ನಡುವೆ ಒಮ್ಮತ ಮೂಡದ ಹಿನ್ನಲೆಯಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ಒಗ್ಗಟ್ಟು ಪ್ರದರ್ಶಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನದ ಆಯ್ಕೆಗೆ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

ಊಟವಾದ ತಕ್ಷಣ ಈ ‘ಹವ್ಯಾಸ’ಗಳು ಬೇಡ

Posted: 04 Jan 2020 04:07 AM PST

ಕೆಲವರಿಗೆ ಊಟವಾದ ತಕ್ಷಣ ಕೆಲ ಅಭ್ಯಾಸವಿರುತ್ತದೆ. ಆದರೆ ಆ ಅಭ್ಯಾಸಗಳು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದು ಆ ಅಭ್ಯಾಸಗಳು ತಿಳಿಬೇಕಾ?

* ಕೆಲವರು ಊಟವಾದ ತಕ್ಷಣ ಮಲಗುತ್ತಾರೆ. ಹೀಗೆ ನಿದ್ರಿಸುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಕಂಡುಬರುತ್ತವೆ.

* ಊಟದ ಬಳಿಕ ಚಹಾ ಸೇವನೆ ಅನಾರೋಗ್ಯಕರ. ಯಾಕೆಂದರೆ ಚಹಾ ಎಲೆಗಳು ಹೆಚ್ಚಿನ ಪ್ರಮಾಣದ ಆಮ್ಲೀಯತೆಯನ್ನು ಹೊಂದಿರುವುದರಿಂದ ಆಹಾರದಲ್ಲಿನ ಪ್ರೊಟೀನ್ ಅಂಶ ದುಪ್ಪಟ್ಟಾಗಿ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ.

* ಊಟದ ನಂತರ ಸ್ನಾನ ಮಾಡುವ ಹವ್ಯಾಸದಿಂದ ಕೈಕಾಲು ಮತ್ತು ದೇಹದಲ್ಲಿ ರಕ್ತದ ಹರಿಯುವಿಕೆಯು ತೀವ್ರಗೊಳ್ಳುವುದರಿಂದ ಜೀರ್ಣ ವ್ಯವಸ್ಥೆ ಬಲಹೀನಗೊಳ್ಳುತ್ತದೆ.

* ಊಟದ ನಂತರ ಹಣ್ಣುಗಳನ್ನು ತಿನ್ನುವ ಬದಲು ಕನಿಷ್ಠ ಪಕ್ಷ ಒಂದು ಗಂಟೆಗಳ ನಂತರ ಸೇವಿಸುವುದು ಒಳ್ಳೆಯದು. ಇಲ್ಲದಿದ್ದರೆ ಹೊಟ್ಟೆ ಉಬ್ಬಿದಂತಾಗುತ್ತದೆ.

* ಊಟದ ನಂತರ ಧೂಮಪಾನ ಮಾಡುವುದು ಸರಿಯಲ್ಲ. ಇದು ಅನೇಕ ರೋಗಗಳಿಗೆ ದಾರಿ ಮಾಡಿ ಕೊಡುತ್ತದೆ.

“ಎಕ್ಸ್‌ಕ್ಯೂಸ್‌ ಮೀ, ಇದು ನನ್ನ ಹಣ” ಎಂದ ದೀಪಿಕಾ

Posted: 04 Jan 2020 03:12 AM PST

‘ಛಪಾಕ್‌' ಮೂಲಕ ಚಿತ್ರ ನಿರ್ಮಾಣಕ್ಕೆ ಧುಮುಕಿರುವ ನಟಿ ದೀಪಿಕಾಗೆ ಈ ಚಿತ್ರಕ್ಕೆ ನಿಮ್ಮ ಪತಿ ರಣವೀರ್‌ ಸಿಂಗ್‌ ಹಣ ಹೂಡಿರುವರೇ ಎಂಬ ಪ್ರಶ್ನೆಗೆ ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

“ಎಕ್ಸ್‌ಕ್ಯೂಸ್ ಮಿ, ಇದು ಖುದ್ದು ನನ್ನ ಹಣ. ನಿಮಗೆ ಯಾರು ಹೀಗೆ ಹೇಳಿದರು? ಎಕ್ಸ್‌ಕ್ಯೂಸ್‌ ಮೀ ಇದು ನನ್ನದೇ ಹಣ” ಎಂದು ಈ ಪ್ರಶ್ನೆ ಕೇಳಿದವರಿಗೆ ಪ್ರತಿಕ್ರಿಯಿಸಿದ್ದಾರೆ.

ಈ ಪ್ರಶ್ನೆ ಹಾಗೂ ಅದಕ್ಕೆ ದೀಪಿಕಾ ಕೊಟ್ಟ ಉತ್ತರಕ್ಕೆ ಅಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಾಡಿದ್ದಾರೆ.

ಚಿತ್ರದಲ್ಲಿ ಮುಂಚೂಣಿ ಪಾತ್ರಧಾರಿಯಾಗಿ ನಟಿಸಿರುವ ದೀಪಿಕಾ ಖುದ್ದು ಚಿತ್ರವನ್ನು ತಾವೇ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಆಸಿಡ್ ದಾಳಿ ಸಂತ್ರಸ್ತೆಯ ನಿಜ ಜೀವನವನ್ನಾಧರಿಸಿದ ಈ ಚಿತ್ರದ ಟ್ರೇಲರ್‌ ಅದಾಗಲೇ ಜನರಿಗೆ ಸಾಕಷ್ಟು ಇಷ್ಟವಾಗಿದೆ.

ರಾಕ್ ಸ್ಟಾರ್ ಲುಕ್… ಸ್ಟೈಲಿಶ್ ಕಿಕ್… ರೇಮೊ ಮೋಷನ್ ಝಲಕ್

Posted: 04 Jan 2020 03:00 AM PST

ಸೆಟ್ಟೇರಿದಾಗಿನಿಂದ್ಲೂ ಬಗೆಬಗೆಯಾಗಿ ಸದ್ದು  ಮಾಡ್ತಿದ್ದ ರೇಮೊ  ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಹೊಸ ವರ್ಷದ ಪ್ರಯುಕ್ತ ಚಿತ್ರ ತಂಡ  ಸಿನಿಪ್ರಿಯರಿಗೆ ಶುಭ ಸುದ್ದಿ ನೀಡಿದೆ. ಹೊಸ ವರ್ಷದ ಶುಭಾಷಯಗಳ ಜೊತೆ ತಮ್ಮ ಚಿತ್ರದ ಮೋಷನ್ ಪೋಸ್ಟರ್  ರಿಲೀಸ್ ಮಾಡಿದೆ.

ರೇಮೊ ಮೋಷನ್ ಪೋಸ್ಟರ್ ಆಕರ್ಷಕವಾಗಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನ ಎಬ್ಬಿಸುವ  ಸೂಚನೆಯನ್ನು ಚಿತ್ರ ಕೊಡ್ತಿದೆ. ಮೋಷನ್ ಪೋಸ್ಟರ್ ನಲ್ಲಿರೋ ಶಾನ್ ಲುಕ್ ತೆಲುಗಿನ ಪ್ರಿನ್ಸ್ ಮಹೇಶ್ ಬಾಬುರನ್ನ ನೆನಪಿಸ್ತಿದೆ. ಇನ್ನೂ ಅರ್ಜುನ್ ಜನ್ಯ ಬೀಟ್ಸ್ ಮತ್ತೊಂದು ಅದ್ಭುತ ಹಿಟ್ ಆಲ್ಬಂ ಕೊಡೋ ನಿರೀಕ್ಷೆ ಹುಟ್ಟಿಸಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಗೂಗ್ಲಿ ಯಂತಹ ಮೆಗಾ ಹಿಟ್ ಸಿನಿಮಾ ಕೊಟ್ಟಿದ್ದ ಪವನ್ ಒಡೆಯರ್ ಮತ್ತೊಮ್ಮೆ ಅಂತಹ ದೊಡ್ಡ ಸಕ್ಸಸ್ ಕೊಡೋ ಭರವಸೆ ಹುಟ್ಟಿಸಿದ್ದಾರೆ.

ರೇಮೊ ಚಿತ್ರವನ್ನ ಜೈಯಾದಿತ್ಯ ಫಿಲಂಸ್ ಬ್ಯಾನರ್ ನಲ್ಲಿ ಸಿ.ಆರ್. ಮನೋಹರ್ ಜೊತೆಗೆ ಸಿ.ಆರ್ ಗೋಪಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಿ.ಆರ್. ಮನೋಹರ್ ಮುದಗ್ದು ಸಹೋದರ ಇಶಾನ್ ಗಾಗಿ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.  ಸದ್ಯ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಸೆನ್ಸೇಷನ್ ಸೃಷ್ಟಿಸ್ತಿರೋ ಚಿತ್ರತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಇಶಾನ್ ಜೊತೆ ಅಶಿಕಾ ರಂಗನಾಥ್ ಕಾಣಿಸಿಕೊಳ್ತಿದ್ದಾರೆ.

ಪುತ್ರನಿಗೆ ನೀಡಿದ್ದ ವಾಗ್ದಾನ 13 ವರ್ಷಗಳ ಬಳಿಕ ಈಡೇರಿದ್ದಕ್ಕೆ ಆನಂದಭಾಷ್ಪ ಸುರಿಸಿದ ಅಪ್ಪ

Posted: 04 Jan 2020 02:33 AM PST

ಫುಟ್ಬಾಲ್ ಕ್ರೀಡೆ ಎಷ್ಟು ರಂಜನೀಯವೋ ಅಷ್ಟೇ ಭಾವನಾತ್ಮಕ ಎಂಬುದು ಸತ್ಯ. ಅಂತಹ ಒಂದು ಅಪರೂಪದ ಸನ್ನಿವೇಶ ಮರುಕಳಿಸಿದೆ.

ಮಾಂಟೆರಿ ಫುಟ್ಬಾಲ್ ಕ್ಲಬ್ ನ ವ್ಯವಸ್ಥಾಪಕ ಆ್ಯಂಟೊನಿಯೊ ಮಹಮ್ಮದ್ ಅವರ ಬದುಕಿನ ಅಪೂರ್ವ ಕ್ಷಣವಿದು.

ಮಾಂಟೆರಿ ಕ್ಲಬ್ ಪೆನಾಲ್ಟಿ ಶೂಟೌಟ್ ನಲ್ಲಿ 4-2 ಗೋಲುಗಳಿಂದ ಅಮೆರಿಕಾ ಕ್ಲಬ್ ಮಣಿಸಿ ಲೀಗ್ ಎಂಎಕ್ಸ್ ಚಾಂಪಿಯನ್ ಶಿಪ್ ಗೆದ್ದುಕೊಂಡಿತು.

ಆದರೆ ನಮ್ಮ ಕ್ಲಬ್ ಚಾಂಪಿಯನ್ ಆಗೇ ಆಗುತ್ತದೆ ಎಂದು ಆಂಟೊನಿಯೊ ತನ್ನ 9 ವರ್ಷದ ಪುತ್ರ ಫರೀದ್ ಗೆ ಭರವಸೆ ನೀಡಿದ್ದರು. ಆದರೆ 2006ರಲ್ಲಿ ರಸ್ತೆ ಅಪಘಾತದಲ್ಲಿ ಅತ ಅಸುನೀಗಿದ್ದ.

ಹಾಗಾಗಿ ಪುತ್ರನಿಗೆ ಕೊಟ್ಟಿದ್ದ ಭರವಸೆ ಇದೀಗ 13 ವರ್ಷಗಳ ಬಳಿಕ ಗೆಲುವಿನೊಂದಿಗೆ ಈಡೇರಿರುವುದು ಆಂಟೊನಿಯೊ ಅವರನ್ನು ಭಾವೋದ್ವೇಗಕ್ಕೆ ಒಳಗಾಗಿಸಿ ಕಣ್ಣೀರಿಡುವಂತೆ ಮಾಡಿದೆ. ಈ ಬಗ್ಗೆ ಆಂಟೊನಿಯೊ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು ಹಲವು ಭಾವನಾತ್ಮಕ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ.

— Troll Football (@TrollFootball) December 31, 2019

ಡಾರ್ಕ್ ಸರ್ಕಲ್ ದೂರ ಮಾಡುತ್ತೆ ಗ್ರೀನ್ ಟೀ

Posted: 04 Jan 2020 02:32 AM PST

ಕಣ್ಣುಗಳು ದೇಹದ ಪ್ರಮುಖ ಭಾಗಗಳಲ್ಲಿ ಒಂದು. ಮಿತಿ ಮೀರಿದ ಮೊಬೈಲ್, ಟಿವಿ ಬಳಕೆ ಕಣ್ಣಿನ ಸೌಂದರ್ಯವನ್ನು ಹಾಳು ಮಾಡುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಒಮ್ಮೆ ಕಾಣಿಸಿಕೊಳ್ಳುವ ಕಣ್ಣಿನ ಕಲೆಗಳನ್ನು ತೆಗೆಯುವುದು ಸುಲಭವಲ್ಲ.

ಇದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಳಸುವ ಗ್ರೀನ್ ಟೀ ನಿಮ್ಮ ಕಣ್ಣಿನ ಕಪ್ಪು ಕಲೆಯನ್ನು ತೆಗೆದುಹಾಕಲು ನೆರವಾಗಲಿದೆ.

ಗ್ರೀ ಟೀ ಬ್ಯಾಗನ್ನು ನೀರು ಅಥವಾ ರೋಸ್ ವಾಟರ್ ನಲ್ಲಿ 2-3 ನಿಮಿಷ ನೆನೆಸಿಡಿ. ನಂತ್ರ ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಗ್ರೀನ್ ಟೀ ಬ್ಯಾಗನ್ನು ಸುಮಾರು 10 ನಿಮಿಷಗಳ ಕಾಲ ಡಾರ್ಕ್ ಸರ್ಕಲ್ ಇರುವ ಜಾಗದಲ್ಲಿ ಇಡಿ. ಹೀಗೆ ಮಾಡುವುದ್ರಿಂದ ನಿಮ್ಮ ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ.

ನಿಯಮಿತವಾಗಿ ನೀವು ಇದನ್ನು ಮಾಡುವುದ್ರಿಂದ ಕಪ್ಪು ಕಲೆ ಕೂಡ ಕಡಿಮೆಯಾಗುತ್ತದೆ. ಕಪ್ಪು ಕಲೆಗಳಿಗೆ ಮಾತ್ರವಲ್ಲ ಮೊಡವೆಗಳಿಗೂ ಗ್ರೀನ್ ಟೀ ಬೆಸ್ಟ್. ಗ್ರೀನ್ ಟೀ ಬ್ಯಾಗನ್ನು ಮೊಡವೆಯಿರುವ ಜಾಗದಲ್ಲಿ ಇಟ್ಟುಕೊಂಡ್ರೆ ಮೊಡವೆ ಕಡಿಮೆಯಾಗುತ್ತದೆ.

ಎಣ್ಣೆಯುಕ್ತ ಚರ್ಮವುಳ್ಳವರಿಗೆ ಗ್ರೀನ್ ಟೀ ಬ್ಯಾಗ್ ಪ್ರಯೋಜನಕಾರಿ. ಟೀ ಬ್ಯಾಗನ್ನು ನೀರಿನಲ್ಲಿ ಅದ್ದಿ ನಂತ್ರ ಮುಖದ ಮೇಲೆ ಇಟ್ಟುಕೊಳ್ಳಬೇಕು. ನಾಲ್ಕರಿಂದ ಐದು ಬ್ಯಾಗನ್ನು ಒಮ್ಮೆ ಬಳಸಬಹುದು.

ಅತಿಗಣ್ಯರ ಭದ್ರತಾ ವಾಹನ ಹೊರತುಪಡಿಸಿ ಹಿಂಬಾಲಿಸುವ ಇತರೆ ವಾಹನಗಳು ಕಟ್ಟಬೇಕು ‌ʼಟೋಲ್ʼ

Posted: 04 Jan 2020 02:16 AM PST

ಯಾವುದೇ ಅತಿಗಣ್ಯರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಗಳಲ್ಲಿ ಹಾದುಹೋಗುವ ವೇಳೆ ಭದ್ರತಾ ವಾಹನಗಳ ಹೊರತಾಗಿಯೂ ಹಿಂಬಾಲಿಸುವ ಹತ್ತಾರು ವಾಹನಗಳಿಗೆ ಇನ್ನು ಮುಂದೆ ಟೋಲ್ ಶುಲ್ಕ ಪಾವತಿ ಅನಿವಾರ್ಯ ಆಗಲಿದೆ.

ತಿದ್ದುಪಡಿ ಮೋಟಾರು ವಾಹನ ಕಾಯ್ದೆಯಂತೆ ಗಣ್ಯರ ಭದ್ರತಾ ವಾಹನಗಳು ಮಾತ್ರ ವಿನಾಯಿತಿ ಪಡೆಯಲಿದ್ದು, ಉಳಿದಂತೆ ಹಿಂಬಾಲಿಸುವ ವಾಹನಗಳು ಕಡ್ಡಾಯವಾಗಿ ರಸ್ತೆ ಬಳಕೆ ಶುಲ್ಕವನ್ನು ಪಾವತಿಸಲೇಬೇಕಾಗುತ್ತದೆ.

ನಿಯಮದಂತೆ ರಾಷ್ಟ್ರಪತಿ, ಪ್ರಧಾನಿ, ಸುಪ್ರೀಂ ಮತ್ತು ಹೈಕೋರ್ಟ್ ಸಿಜೆ, ನ್ಯಾಯಾಧೀಶರು, ಕೇಂದ್ರ ಸಚಿವರು, ರಕ್ಷಣಾ ಮುಖ್ಯಸ್ಥರು ಹಾಗೂ ಸಂಸದರು ಶುಲ್ಕ ವಿನಾಯಿತಿ ಪಡೆಯಲಿದ್ದಾರೆ. ಗಣ್ಯರಿಗೆ ಭದ್ರತೆ ಒದಗಿಸುವ ಕೇಂದ್ರೀಯ ಭದ್ರತಾ ಪಡೆ ಮತ್ತು ರಾಜ್ಯ ಪೊಲೀಸ್ ವಾಹನಗಳು ಮಾತ್ರ ವಿನಾಯಿತಿ ಪಡೆಯಲಿವೆ. ಹಿಂಬಾಲಕ ವಾಹನಗಳಿಂದ ಆಗುತ್ತಿರುವ ನಷ್ಟದಿಂದ ಹೊರಬರಲು ನೂತನ ನಿಯಮ ಸಹಕಾರಿಯಾಗಲಿದೆ.

ಶ್ರೀದೇವಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್: ಈಗ ಮತ್ತೊಂದು ʼರಹಸ್ಯʼ ಬಹಿರಂಗ

Posted: 04 Jan 2020 02:14 AM PST

ಬಾಲಿವುಡ್ ಹಿರಿಯ ನಟಿ ದಿವಂಗತ ಶ್ರೀದೇವಿ ಸಾವಿನ ಬಗ್ಗೆ ಮತ್ತೊಂದು ರಹಸ್ಯ ಹೊರಗೆ ಬಿದ್ದಿದೆ. `ಶ್ರೀದೇವಿ: ದಿ ಎಟರ್ನಲ್ ಗಾಡ್ಸ್’ ಎಂಬ ಜೀವನ ಚರಿತ್ರೆ ಬರೆದ ಲೇಖಕ ಸತ್ಯಾರ್ಥ್ ನಾಯಕ್ ಶ್ರೀದೇವಿಗಿರುವ ಖಾಯಿಲೆಯೊಂದರ ಬಗ್ಗೆ ಬರೆದಿದ್ದಾರೆ. ಶ್ರೀದೇವಿಗೆ ಕಡಿಮೆ ರಕ್ತದೊತ್ತಡ ಸಮಸ್ಯೆಯಿತ್ತಂತೆ. ಆಗಾಗ ಶ್ರೀದೇವಿ ಪ್ರಜ್ಞೆ ತಪ್ಪುತ್ತಿದ್ದರಂತೆ.

ಶ್ರೀದೇವಿ ಆಪ್ತರ ಜೊತೆ ಮಾತುಕತೆ ನಡೆಸಿದಾಗ ಈ ಸಂಗತಿ ಗೊತ್ತಾಗಿದೆ ಎಂದು ಸತ್ಯಾರ್ಥ್ ಹೇಳಿದ್ದಾರೆ. ನಾಗಾರ್ಜುನ್ ಅವ್ರನ್ನು ಭೇಟಿಯಾದಾಗ ಅವ್ರು ನನಗೆ ಕಡಿಮೆ ರಕ್ತದೊತ್ತಡವಿದೆ ಎಂದಿದ್ದರು. ಬಾತ್ ರೂಮಿನಲ್ಲಿ ಅನೇಕ ಬಾರಿ ಬಿದ್ದಿರುವುದಾಗಿ ಹೇಳಿದ್ದರು. ಆ ನಂತ್ರ ನಾನು ಶ್ರೀದೇವಿ ಸೋದರ ಸೊಸೆ ಮಹೇಶ್ವರಿಯವರನ್ನು ಭೇಟಿಯಾದೆ ಎಂದು ಅವ್ರು ಹೇಳಿದ್ದಾರೆ.

ಶ್ರೀದೇವಿ ಬಾತ್ ಟಬ್ ಬಳಿ ಬಿದ್ದಾಗ ಅವ್ರ ಮುಖದಿಂದ ರಕ್ತ ಬಂದಿತ್ತಂತೆ. ಇದಕ್ಕೂ ಮುನ್ನ ಒಮ್ಮೆ ಹೀಗೆ ಆಗಿತ್ತು ಎಂದು ಬೋನಿ ಕಪೂರ್ ಕೂಡ ಹೇಳಿದ್ದರಂತೆ. ಶ್ರೀದೇವಿ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ಬೋನಿ ಹೇಳಿದ್ದಾರೆ. ಕೇರಳದ ಡಿಜಿಪಿ ಶ್ರೀದೇವಿಯ ಸಾವು ಅಪಘಾತವಲ್ಲ ಅದು ಕೊಲೆ ಎಂದಿದ್ದರು.

ನಿಮ್ಮ ಮೊಬೈಲ್ ನಲ್ಲಿ ಈ ‘ಆಪ್’ ಇದ್ರೆ ಈಗ್ಲೇ ಡಿಲೀಟ್ ಮಾಡಿ

Posted: 04 Jan 2020 01:45 AM PST

Google की इस App से फोन पर बड़ा खतरा! फौरन डिलीट करने की दी गई सलाह

ಗೂಗಲ್ ತನ್ನ ಮೆಸ್ಸೇಜಿಂಗ್ ಆಪ್ Allo ವನ್ನು 2018ರಲ್ಲಿಯೇ ಬಂದ್ ಮಾಡಿದೆ. ಈ ಆಪ್ ವರ್ಕ್ ಆಗ್ತಿಲ್ಲ. ಆದ್ರೆ ಈ ಆಪ್ ಇನ್ನೂ ಕೆಲ ಜನರ ಮೊಬೈಲ್ ನಲ್ಲಿದೆ ಎನ್ನಲಾಗ್ತಿದೆ. ಕೆಲವು ಹುವಾವೇ ಫೋನ್‌ಗಳು, ಗೂಗಲ್ ಅಲೋ ಅಪ್ಲಿಕೇಶನ್ ಭದ್ರತಾ ಬೆದರಿಕೆ ಎಂದು ಕರೆದಿವೆ.

ಸ್ಮಾರ್ಟ್‌ಫೋನ್‌ ಬಳಕೆದಾರರು ಇದನ್ನು ಡಿಲೀಟ್ ಮಾಡುವ ಅವಶ್ಯಕತೆಯಿದೆ. ಈ ಆಪ್ ವೈರಸ್ ಹರಡುತ್ತಿದೆ ಎಂದು ಎಚ್ಚರಿಕೆ ನೀಡಿವೆ. ಆಂಡ್ರಾಯ್ಡ್ ಪ್ರಾಧಿಕಾರದಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಗೂಗಲ್ Allo ಬಗ್ಗೆ ಇಂತಹ ಎಚ್ಚರಿಕೆ ಹುವಾವೇ ಪೇಟ್ ಪ್ರೊ ಮತ್ತು ಹುವಾವೇ ಮೇಟ್ ಪ್ರೊನಲ್ಲಿ ಕಂಡು ಬಂದಿದೆ.

ಹುವಾವೇ ಫೋನ್‌ನ ಅವ್ಯವಸ್ಥೆಯಿಂದ ಹೀಗಾಗಿದೆಯೋ ಅಥವಾ Allo ಈಗಾಗಲೇ ಸೇವೆ ಬಂದ್ ಮಾಡಿದ್ದರಿಂದ ಈ ಸುದ್ದಿ ಹರಡಿದೆಯಾ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ಇನ್ನೂ ಇದ್ದರೆ ಅದನ್ನು ಫೋನ್‌ನಿಂದ ತಕ್ಷಣ ಅಳಿಸಿ.

No comments:

Post a Comment

Gameforumer QR Scan

Gameforumer QR Scan
Gameforumer QR Scan