Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Thursday, January 30, 2020

Kannada News | Karnataka News | India News

Kannada Dunia | Kannada News | Karnataka News | India News

Kannada News | Karnataka News | India News


ಶುಭ ಶುಕ್ರವಾರದಂದು ನಿಮ್ಮ ರಾಶಿ ಭವಿಷ್ಯ

Posted: 30 Jan 2020 11:36 AM PST

ಮೇಷ ರಾಶಿ:

ಆರೋಗ್ಯಕರ ಮನಸ್ಸು ಯಾವಾಗಲೂ ಆರೋಗ್ಯಕರ ದೇಹದಲ್ಲಿ ಪರ್ಯವಸಾನವಾಗುತ್ತದೆಂದು ನೆನಪಿಡಿ. ಇಂದು ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ ಇದೆ ಒಂದು ಅಂಚೆಯ ಮೂಲಕ ಬಂದ ಪತ್ರ ಇಡೀ ಕುಟುಂಬಕ್ಕೆ ಸಂತೋಷದ ಸುದ್ದಿ ತರುತ್ತದೆ.

ಪ್ರೀತಿಪಾತ್ರರಲ್ಲದೇ ನಿಮ್ಮ ಸಮಯ ಕೊಲ್ಲುವುದು ಕಷ್ಟ. ನಿಮ್ಮ ನಡೆಯಲ್ಲಿ ಪ್ರಾಮಾಣಿಕವಾಗಿರಿ – ನಿಮ್ಮ ಬದ್ಧತೆಯನ್ನು ಹಾಗೂ ನಿಮ್ಮ ಕೌಶಲ್ಯಗಳನ್ನು ಗುರುತಿಸಲಾಗುತ್ತದೆ.

ಇಂದು ಬೇರೆಯವರಿಗೆ ನೀವು ನೀಡಿದ ನೆರವನ್ನು ಒಪ್ಪಿಕೊಂಡಾಗ ನೀವೇ ಕೇಂದ್ರಬಿಂದುವಾಗಿರುತ್ತೀರಿ.

ಅದೃಷ್ಟ ಸಂಖ್ಯೆ: 6

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ವೃಷಭ ರಾಶಿ:

ನಿಮ್ಮ ಕಚೇರಿಯನ್ನು ಬೇಗನೆ ಬಿಡಲು ಮತ್ತು ನೀವು ನಿಜವಾಗಿಯೂ ಆನಂದಿಸುವುದನ್ನು ಮಾಡಲು ಪ್ರಯತ್ನಿಸಿ. ವಿವಾಹಿತ ಜನರು ಇಂದು ತಮ್ಮ ಮಕ್ಕಳ ಶಿಕ್ಷಣದ ಮೇಲೆ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ನಿಮ್ಮ ಸಂಗಾತಿಯ ಆರೋಗ್ಯ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗಬಹುದು ಪ್ರಣಯಕ್ಕೆ ಒಳ್ಳೆಯ ದಿನ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರಕಲಿದೆ. ದಿನ ಉತ್ತಮವಾಗಿದೆ,

ಇತರರೊಂದಿಗೆ ನೀವು ನಿಮಗಾಗಿ ಸಹ ಸಮಯವನ್ನು ತೆಗೆದುಕೊಳ್ಳುವಿರಿ ಸುದೀರ್ಘ ಸಮಯದ ನಂತರ, ನಿಮ್ಮ ಜೀವನ ಸಂಗಾತಿಯ ಜೊತೆ ಕಾಲ ಕಳೆಯಲು ನಿಮಗೆ ಸಾಕಷ್ಟು ಸಮಯ ಸಿಗುತ್ತದೆ.

ಅದೃಷ್ಟ ಸಂಖ್ಯೆ: 9

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮಿಥುನ ರಾಶಿ:

ನೀವು ಕುಟುಂಬದಲ್ಲಿ ಒಂದು ಸಂಧಿಗಾರನಂತೆ ವರ್ತಿಸುತ್ತೀರಿ. ಎಲ್ಲರ ಸಮಸ್ಯೆಗಳಿಗೂ ಕಿವಿಗೊಡಿ ಹಾಗೂ ವಿಷಯಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಪ್ರಣಯ ನಿಮ್ಮ ಪ್ರೀತಿಪಾತ್ರರು ಇಂದು ಅತಿಯಾದ ಬೇಡಿಕೆಗಳನ್ನಿಡುವುದರಿಂದ ಪ್ರಣಯದಲ್ಲಿ ಹಿನ್ನೆಡೆಯಿರುತ್ತದೆ.

ವೃತ್ತಿಯಲ್ಲಿನ ನಿಮ್ಮ ಕೌಶಲ್ಯದ ಪರೀಕ್ಷೆ ನಡೆಯಲಿದೆ. ನೀವು ಬಯಸಿದ ಫಲಿತಾಂಶ ನೀಡಲು ನಿಮ್ಮ ಪ್ರಯತ್ನಗಳ ಮೇಲೆ ಗಮನ ಹರಿಸಬೇಕು. ಹೃದಯದ ನಿಕಟ ಜನರೊಂದಿಗೆ ಸಮಯವನ್ನು ಕಳೆಯಲು ನಿಮ್ಮ ಮನಸ್ಸು ಬಯಸುತ್ತದೆ, ಆದರೆ ನೀವು ಅದನ್ನು ಮಾಡಲು ಸಾಧ್ಯವಾಗುವುದಿಲ್ಲ.

ಅದೃಷ್ಟ ಸಂಖ್ಯೆ: 7

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕಟಕ ರಾಶಿ:

ವ್ಯಾಪರದಲ್ಲಿ ಪ್ರಯೋಜನ ಇಂದು ಅನೇಕ ವ್ಯಾಪಾರಿಗಳ ಮುಖದ ಮೇಲೆ ಸಂತೋಷವನ್ನು ತರಬಹುದು. ಸ್ನೇಹಿತರೊಂದಿಗಿನ ಸಂಜೆ ಆನಂದ ಹಾಗೂ ಕೆಲವು ರಜಾ ಯೋಜನೆಗಳಿಗೆ ಉತ್ತಮವಾಗಿರುತ್ತದೆ. ನೀವು ಸಂಜೆ ಸ್ನೇಹಿತರೊಂದಿಗೆ ಹೊರಗೆ ಹೋದರೆ ತತ್ಕ್ಷಣದ ಪ್ರಣಯ ನಿಮಗೆ ದೊರಕಬಹುದು.

ನುರಿತ ಜನರೊಡನೆ ಒಡನಾಟ ಹೊಂದಿ ಮತ್ತು ಅವರು ನಿಮಗೆ ಭವಿಷ್ಯದ ಪ್ರವೃತ್ತಿಗಳ ಬಗ್ಗೆ ಒಳನೋಟ ನೀಡಬಲ್ಲರು. ಸಮಯದ ಸೌಂದರ್ಯವನ್ನು ಅರ್ಥಮಾಡಿಕೊಳ್ಳುತ್ತ, ಇಂದು ನೀವು ಎಲ್ಲಾ ಜನರಿಂದ ದೂರವಾಗಿ ಏಕಾಂತದಲ್ಲಿ ಸಮಯವನ್ನು ಕಳೆಯಲು ಇಷ್ಟಪಡುವಿರಿ.

ಅದೃಷ್ಟ ಸಂಖ್ಯೆ: 5

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಸಿಂಹ ರಾಶಿ :

ಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಸಾಲ ತೆಗೆದುಕೊಳ್ಳಲು ಹೊರಟಿದ್ದರೆ ಮತ್ತು ಈ ಕೆಲಸದಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರೆ, ಇಂದು ನೀವು ಸಾಲ ಪಡೆಯಬಹುದು. ಕುಟುಂಬದ ಪರಿಸ್ಥಿತಿ ಇಂದು ನೀವು ಯೋಚಿಸುವ ಹಾಗೆ ಇರುವುದಿಲ್ಲ.

ಇಂದು ಮನೆಯಲ್ಲಿ ಯಾವುದೇ ವಿಷಯದ ಬಗ್ಗೆ ಅಪಶ್ರುತಿ ಉಂಟಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿಯಲ್ಲಿ ನಿಮ್ಮನ್ನು ನಿಯಂತ್ರಿಸಿ. ಈ ದಿನ ನಿಮ್ಮ ಪ್ರೀತಿ ಜೀವನದ ವಿಚಾರದಲ್ಲಿ ಅಸಾಧಾರಣವಾಗಿದೆ. ಪ್ರೀತಿ ಮಾಡುತ್ತಿರಿ. ಹೊಸ ಗ್ರಾಹಕರೊಂದಿಗೆ ಮಾತುಕತೆಗೆ ಇದೊಂದು ಅದ್ಭುತ ದಿನ.

ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. ಇಂದು, ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿ ಮತ್ತು ಸಂವೇದನೆಗಳ ಜಗತ್ತಿನಲ್ಲಿ ಕೊಂಡೊಯ್ಯಬಹುದು.

ಅದೃಷ್ಟ ಸಂಖ್ಯೆ: 6

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕನ್ಯಾ ರಾಶಿ:

ನಿಮ್ಮ ಕುಟುಂಬದ ಜೊತೆ ಕಟ್ಟುನಿಟ್ಟಾಗಿ ವರ್ತಿಸಬೇಡಿ ಇದು ಶಾಂತಿ ಭಂಗವುಂಟುಮಾಡಬಹುದು. ಪ್ರೇಮನಿವೇದನೆ ನಿಮ್ಮ ಹೊರೆಯನ್ನು ಇಳಿಸುವುದರಿಂದ ನಿಮಗೆ ಆನಂದವಾಗಬಹುದು.

ನೀವು ಒಂದು ದಿನದ ರಜೆಯ ಮೇಲೆ ಹೋಗುತ್ತಿದ್ದಲ್ಲಿ ಚಿಂತಿಸಬೇಡಿ – ವಿಷಯಗಳನ್ನು ನೀವಿಲ್ಲದಿರುವಾಗ ಚೆನ್ನಾಗಿಯೇ ಇರುತ್ತವೆ – ಯಾವುದೇ ವಿಚಿತ್ರ ಕಾರಣಕ್ಕಾಗಿ ಏನಾದರೂ ಸಮಸ್ಯೆ ಉಂಟಾದಲ್ಲಿ – ನೀವು ಹಿಂತಿರುಗಿದಾಗ ನೀವು ಅದನ್ನು ಸುಲಭವಾಗಿ ಬಗೆಹರಿಸಬಹುದು.

ಸಮಯಕ್ಕೆ ಅನುಗುಣವಾಗಿ ಪ್ರತಿಯೊಂದು ಕೆಲಸವನ್ನು ಪೂರೈಸುವುದು ಉತ್ತಮ. ನೀವು ಅದನ್ನು ಮಾಡಿದರೆ ನೀವು ನಿಮಗಾಗಿ ಸಹ ಸಮಯವನ್ನು ತೆಗೆಯುತ್ತೀರಿ.

ಅದೃಷ್ಟ ಸಂಖ್ಯೆ: 8

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ತುಲಾ ರಾಶಿ:

ನೀವು ನಿಮ್ಮ ಮೇಲೆ ನಂಬಿಕೆಯನ್ನಿಡುವ ಅಗತ್ಯವಿದೆ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುವುದು ಆನಂದಮಯವಾಗಿರುತ್ತದೆ. ನಾಳೆ ಬಹಳ ತಡವಾಗುವುದರಿಂದ ನೀವು ನಿಮ್ಮ ಪ್ರಿಯತಮೆಗೆ ನಿಮ್ಮ ಸಂದೇಶವನ್ನು ಕೂಡಲೇ ತಿಳಿಸಬೇಕು.

ಇಂದು ನೀವು ಕೇಂದ್ರಬಿಂದುವಾಗಿರುತ್ತೀರಿ- ಮತ್ತು ಯಶಸ್ಸು ನಿಮ್ಮ ನಿಲುಕಿನೊಳಗಿದೆ. ಈ ರಾಶಿಚಕ್ರದ ಜನರು ಇಂದು ಜನರನ್ನು ಭೇಟಿಯಾಗುವುದಕ್ಕಿಂತ ಒಂಟಿಯಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ.

ಇಂದು ನಿಮ್ಮ ಉಚಿತ ಸಮಯ ಮನೆಯನ್ನು ಸ್ವಚ್ಛಗೊಳಿಸುವಲ್ಲಿ ಕಳೆಯಬಹುದು. ನೀವು ಇಂದು ನಿಮ್ಮ ಜೀವನ ಸಂಗಾತಿಯ ಪ್ರೀತಿಯ ಬೆಚ್ಚನೆಯ ಭಾವವನ್ನು ಅನುಭವಿಸುತ್ತೀರಿ.

ಅದೃಷ್ಟ ಸಂಖ್ಯೆ: 4

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ವೃಶ್ಚಿಕ ರಾಶಿ:

ಯೋಗ ಮತ್ತು ಧ್ಯಾನ ನೀವು ಒಳ್ಳೆಯ ದೇಹರಚನೆ ಕಾಯ್ದುಕೊಳ್ಳಲು ಮತ್ತು ಮಾನಸಿಕವಾಗಿ ಸಧೃಢವಾಗಿರಲು ಸಹಾಯ ಮಾಡುತ್ತದೆ. ಈ ರಾಶಿಚಕ್ರದ ದೊಡ್ಡ ಉದ್ಯಮಿಗಳು ಇಂದು ತುಂಬಾ ಯೋಚಿಸಿ ಅರ್ಥಮಾಡಿಕೊಂಡು ಹಣದ ಹೂಡಿಕೆ ಮಾಡುವ ಅಗತ್ಯವಿದೆ.

ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ಏಕಪಕ್ಷೀಯ ವ್ಯಾಮೋಹ ನಿಮಗೆ ಕೇವಲ ಎದೆಗುದಿ ತರುತ್ತದೆ. ಕೆಲಸದಲ್ಲಿ ನಿಮ್ಮ ಮೇಲಿನವರು ಇಂದು ದೇವದೂತರಂತೆ ಕೆಲಸ ಮಾಡುವಂತೆ ಕಾಣುತ್ತದೆ.

ಇಂದು ಜೇವನ ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ನಿಮ್ಮ ಹತ್ತಿರ ಸಾಕಷ್ಟು ಸಮಯವಿರುತ್ತದೆ. ನಿಮ್ಮ ಪ್ರೀತಿಯನ್ನು ನೋಡಿ ಇಂದು ನಿಮ್ಮ ಪ್ರೀತಿಪಾತ್ರರು ಸಂತೋಷಪಡುತ್ತಾರೆ.

ಅದೃಷ್ಟ ಸಂಖ್ಯೆ: 6

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಧನುಸ್ಸು ರಾಶಿ:

ನಿರಾಶಾದಾಯಕ ಮನೋಭಾವವು ಕೇವಲ ನಿಮ್ಮ ಅವಕಾಶಗಳನ್ನು ಸೀಮಿತಗೊಳಿಸುವುದಷ್ಟೇ ಅಲ್ಲದೇ ದೇಹದ ಸಾಮರಸ್ಯವನ್ನೂ ಭಂಗಪಡಿಸುವುದರಿಂದ ಅವುಗಳನ್ನು ತಡೆಯಬೇಕು.

ಇಂದು ನಿಮಗೆ ಹಣದ ಲಾಭವಾಗುವ ಪೂರ್ತಿ ಸಾಧ್ಯತೆ ಇದೆ, ಆದರೆ ಇದರೊಂದಿಗೆ ನೀವು ದಾನವನ್ನು ಸಹ ಮಾಡಬೇಕು ಏಕೆಂದರೆ ಇದರಿಂದ ನಿಮಗೆ ಮಾನಸಿಕ ಶಾಂತಿ ಸಿಗುತ್ತದೆ. ನಿಮ್ಮಲ್ಲಿ ಕೆಲವು ಆಭರಣ ಅಥವಾ ಗೃಹಬಳಕೆಯ ಸಾಧನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಕನಸಿನ ಚಿಂತೆಗಳನ್ನು ಬಿಟ್ಟು ನಿಮ್ಮ ಪ್ರೀತಿಪಾತ್ರ ಸಂಗಾತಿಯ ಜೊತೆಯಿರಿ. ನಿಮ್ಮ ಕೆಲಸಗಳಿಗೆ ಬೇರೆಯವರು ಗೌರವ ಪಡೆಯಲು ಬಿಡಬೇಡಿ.

ಅದೃಷ್ಟ ಸಂಖ್ಯೆ: 7

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮಕರ ರಾಶಿ:

ಇಂದು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ತೊಂದರೆಗೊಳಗಾಗಬಹುದು. ಇದಕ್ಕಾಗಿ ನೀವು ನಿಮ್ಮ ಯಾವುದೇ ವಿಶ್ವಾಸಾರ್ಹರಿಂದ ಸಲಹೆಯನ್ನು ತೆಗೆದುಕೊಳ್ಳಬೇಕು.

ನೆರೆಮನೆಯವರ ಜೊತಗಿನ ಜಗಳ ನಿಮ್ಮ ಮನಸ್ಸು ಕೆಡಿಸುತ್ತದೆ. ಆದರೆ ನಿಮ್ಮ ಸಹನೆ ಕಳೆದುಕೊಳ್ಳಬೇಡಿ, ಏಕೆಂದರೆ ಇದು ಬೆಂಕಿಗೆ ತುಪ್ಪ ಸುರಿಯುತ್ತದೆ. ನೀವು ಸಹಕರಿಸದಿದ್ದಲ್ಲಿ ಯಾರೂ ನಿಮ್ಮ ಜೊತ ಜಗಳ ಮಾಡಲು ಸಾಧ್ಯವಿಲ್ಲ. ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಲು ಶ್ರಮಿಸಿ.

ಅದೃಷ್ಟ ಸಂಖ್ಯೆ: 1

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕುಂಭ ರಾಶಿ:

ಭಾವನಾತ್ಮಕ ಭರವಸೆಗಳನ್ನು ಬಯಸುವವರು ಹಿರಿಯರು ಅವರ ನೆರವಿಗೆ ಬರುವುದನ್ನು ನೋಡಬಹುದು. ನಿಮ್ಮ ಪ್ರಿಯತಮೆಯ ಕಠಿಣ ಪದಗಳಿಂದ ನಿಮ್ಮ ಮನಸ್ಥಿತಿ ಹಾಳಾಗಬಹುದು. ಯಾವುದೇ ಹೊಸ ಜಂಟಿ ಯೋಜನೆಗಳು ಮತ್ತು ಪಾಲುದಾರಿಕೆಗಳಿಗೆ ಸಹಿ ಹಾಕಬೇಡಿ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ.

ನೀವು ಇಂದು ನಿಮ್ಮ ಸಂಗಾತಿಯ ಒಂದು ಕಠಿಣವಾದ ಮತ್ತು ಧೈರ್ಯಶಾಲಿಯಾದ ಬದಿಯನ್ನು ನೋಡಬಹುದಾಗಿದ್ದು ಇದು ನಿಮಗೆ ಇರುಸುಮುರುಸುಂಟುಮಾಡಬಹುದು.

ಅದೃಷ್ಟ ಸಂಖ್ಯೆ: 4

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮೀನ ರಾಶಿ:

ನಿಮ್ಮ ತಂದೆಯ ಯಾವುದೇ ಸಲಹೆ ಇಂದು ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಹಣದ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಸಂಗಾತಿ ಬೆಂಬಲ ನೀಡುತ್ತಾರೆ ಹಾಗೂ ಸಹಾಯ ಮಾಡುತ್ತಾರೆ. ನಿಮ್ಮ ಪ್ರೀತಿಪಾತ್ರರಿಗೆ ಒರಟಾಗಿ ಏನೂ ಹೇಳಬೇಡಿ-ಇಲ್ಲದಿದ್ದರೆ ನೀವು ನಂತರ ಪಶ್ಚಾತ್ತಾಪಪಡಬಹುದು.

ಒಂದು ಕಠಿಣ ಸಮಯದ ನಂತರ, ಕೆಲಸದಲ್ಲಿ ಏನಾದರೂ ಸುಂದರವಾದ್ದರಿಂದ ಈ ದಿನ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಉತ್ತಮ ಸಂಜೆ ಹೊಂದಲು, ನೀವು ದಿನವಿಡೀ ಶ್ರದ್ಧೆಯಿಂದ ಕೆಲಸ ಮಾಡಬೇಕಾಗುತ್ತದೆ.

ಅದೃಷ್ಟ ಸಂಖ್ಯೆ: 6

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕರೋನಾ ವೈರಸ್‌ ಗೂ ಕರೋನಾ ಬಿಯರ್‌ ಗೂ ಏನು ಸಂಬಂಧ…?

Posted: 30 Jan 2020 07:53 AM PST

ಚೀನಾದಲ್ಲಿ ವ್ಯಾಪಕವಾಗಿರುವ ಕರೋನಾ ವೈರಸ್‌ ಅದಾಗಲೇ 132 ಮಂದಿಯನ್ನು ಬಲಿ ತೆಗೆದುಕೊಂಡಿದ್ದು, 6,000 ಕ್ಕೂ ಅಧಿಕ ಮಂದಿಗೆ ಸೋಂಕು ಅಂಟಿಕೊಂಡಿದೆ.

ಶ್ವಾಸಕೋಶ ಸಂಬಂಧಿ ಸಮಸ್ಯೆಯಾದ ಈ ಕರೋನಾ ವೈರಸ್‌‌ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಸಹ ಗಂಭೀರವಾಗಿ ಪರಿಗಣಿಸಿದ್ದು, ಚೀನಾದಲ್ಲಿ ತುರ್ತು ಪರಿಸ್ಥಿತಿ ನೆಲೆಸಿದೆ ಎಂದು ಒಪ್ಪಿಕೊಂಡಿದೆ.

ಚೀನಾದ 16 ನಗರಗಳು ಇದೇ ಕಾರಣದಿಂದ ಲಾಕ್‌ ಡೌನ್ ಆಗಿದ್ದು, ನೆರೆಯ ದೇಶಗಳಾದ ದಕ್ಷಿಣ ಕೊರಿಯಾ, ಭಾರತ, ಜಪಾನ್, ಥಾಯ್ಲೆಂಡ್, ತೈವಾನ್, ಅಮೆರಿಕಗಳಲ್ಲೂ ಒಂದಷ್ಟು ಪ್ರಕರಣಗಳು ದಾಖಲಾಗಿವೆ.

ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಈ ವೈರಸ್‌ ಕುರಿತಂತೆ ತಿಳಿದುಕೊಳ್ಳಲು ಜನರು ಗೂಗಲ್ ಸರ್ಚ್ ಮಾಡುತ್ತಿದ್ದಾರೆ.

ಸರ್ಚ್ ಮಾಡುವ ಭರದಲ್ಲಿ ಕರೋನಾ ವೈರಸ್ ಜೊತೆಯಲ್ಲಿ ಕರೋನಾ ಬಿಯರ್‌ ಸಹ ಸುದ್ದಿಗೆ ಬಂದಿದ್ದು, ಇವೆರಡಕ್ಕೂ ಸಂಬಂಧವಿದೆ ಎಂದು ಜನರು ಭಾವಿಸಿಬಿಟ್ಟಿದ್ದಾರೆ.

ಆದರೆ ಬಿಯರ್‌ಗೂ ಈ ವೈರಸ್‌ಗೂ ಯಾವುದೇ ಸಂಬಂಧವಿಲ್ಲ. ಕರೋನಾ ಬಿಯರ್‌ 1925 ರಿಂದಲೂ ಇದೆ.

ನಡುರಸ್ತೆಯಲ್ಲೇ ಮೊಂಡಾಟ ನಡೆಸಿದ ಹಠಮಾರಿ ಶ್ವಾನ

Posted: 30 Jan 2020 07:49 AM PST

ನಿಯತ್ತಿನ ಪ್ರಾಣಿ ನಾಯಿ ಒಮ್ಮೊಮ್ಮೆ ಮಾಲೀಕರಿಗೂ ಸಂತಸದ ಜತೆ ಸಂಕಷ್ಟ ಉಂಟು ಮಾಡುವುದೂ ಇದೆ. ಇಂತಹದ್ದೇ ಒಂದು ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ನಡುರಸ್ತೆಯಲ್ಲಿ ಮಲಗುವ ಮುದ್ದಿನ ನಾಯಿ ಮಾಲೀಕ ‌ಬಲವಾಗಿ ಕುತ್ತಿಗೆ ಬೆಲ್ಟ್ ಎಳೆದರೂ ಜಗ್ಗದೆ ಮಲಗುತ್ತದೆ. ಹೊರಳಿ ಹೊರಳಿ ರಸ್ತೆಯಲ್ಲಿ ಮಲಗುವ ಈ ನಾಯಿ ಅಂತಿಮವಾಗಿ ಎದ್ದು ಬರುತ್ತದೆ.

ರಾಯಿಟರ್ಸ್‌‌‌ ಅಂತರ್ಜಾಲದಲ್ಲಿ ಹರಿಯ ಬಿಟ್ಟಿರುವ ಈ ಮುದ್ದಿನ ನಾಯಿಯ ಹಠಮಾರಿ ದೃಶ್ಯಗಳನ್ನು 6 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಜತೆಗೆ ಅದರ ಮಾಲೀಕ ಮನೆಗೆ ಹೋಗಲು ಬಯಸಿದರೂ ನಾಯಿಗೆ ಬೇಕಿಲ್ಲ ಎನ್ನುವುದು ಸೇರಿದಂತೆ ಹತ್ತಾರು ರೀತಿಯಲ್ಲಿ ವಿಭಿನ್ನ ಹೇಳಿಕೆ ಪೋಸ್ಟ್ ಆಗಿವೆ.

ಶುಲ್ಕ: ಖಾಸಗಿ ಶಾಲೆಗಳಿಗೆ ಹೈಕೋರ್ಟ್ ಶಾಕ್

Posted: 30 Jan 2020 06:22 AM PST

ವೆಬ್ ಸೈಟ್ ನಲ್ಲಿ ಖಾಸಗಿ ಶಾಲೆಗಳ ಶುಲ್ಕ ಪ್ರಕಟಣೆ ಕಡ್ಡಾಯವಾಗಿದ್ದು, ಸರ್ಕಾರದ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್ ಸಲ್ಲಿಸಲಾಗಿತ್ತು. ಶ್ರೀವಾಣಿ ವಿದ್ಯಾಕೇಂದ್ರ ವತಿಯಿಂದ ಹೈಕೋರ್ಟ್ ಗೆ ಸಲ್ಲಿಸಿದ್ದು, ಇದಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ ಎನ್ನಲಾಗಿದೆ. ಖಾಸಗಿ ಶಾಲೆಗಳ ಶುಲ್ಕ ವೆಚ್ಚ ಬಹಿರಂಗ ಕಡ್ಡಾಯವೆಂದು 2019ರ ಜುಲೈ 14 ರಂದು ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.

ಶುಲ್ಕ ವಿವರ ಲೆಕ್ಕಪರಿಶೋಧನೆ ವಿವರವನ್ನು ಕಡ್ಡಾಯವಾಗಿ ಸರ್ಕಾರ ನಿಗದಿಪಡಿಸಿದಂತೆ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕೆಂದು ಹೇಳಿದ್ದು, ರಾಜ್ಯ ಸರ್ಕಾರದ ಈ ಅಧಿಸೂಚನೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ ಎಂದು ಹೇಳಲಾಗಿದೆ.

ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆ ಹಣ ಬರುತ್ತೆ ಎಂದುಕೊಂಡಿದ್ದ ರೈತರಿಗೆ ‘ಬಿಗ್ ಶಾಕ್’

Posted: 30 Jan 2020 06:15 AM PST

Image result for kisan-samman-farmers"

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಲೋಪ ಕಂಡು ಬಂದಿದ್ದು, ಹಲವು ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಫಲ ಸಿಕ್ಕಿಲ್ಲ ಎಂದು ಹೇಳಲಾಗಿದೆ.

ಅಧಿಕಾರಿಗಳ ನಿರ್ಲಕ್ಷದಿಂದ ಹಲವು ರೈತರಿಗೆ ಹಣ ತಲುಪಿಲ್ಲ ಎನ್ನಲಾಗಿದ್ದು, ಇದರಿಂದಾಗಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಹಣ ಪಡೆಯಲು ರೈತರು ಅಲೆದಾಟ ನಡೆಸುವಂತಾಗಿದೆ.

ಕಂದಾಯ ಸಚಿವ ಆರ್. ಅಶೋಕ್ ಅವರು ಉಸ್ತುವಾರಿ ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ರೀತಿ ಆಗಿದೆ ಎನ್ನಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಹಣಕ್ಕಾಗಿ ರೈತರ ಅಲೆದಾಟ ನಡೆಸುವಂತಾಗಿದೆ. ಎಲ್ಲ ದಾಖಲೆ ನೀಡಿದರೂ ರೈತರಿಗೆ ಪ್ರೋತ್ಸಾಹ ಧನ ತಲುಪಿಲ್ಲ ಎಂದು ನೆಲಮಂಗಲ ತಾಲ್ಲೂಕು ಆಡಳಿತ ವ್ಯವಸ್ಥೆಗೆ ರೈತರು ಹಿಡಿಶಾಪ ಹಾಕಿದ್ದಾರೆನ್ನಲಾಗಿದೆ.

ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ: ನಿಗದಿಯಾಯ್ತು ದಿನಾಂಕ

Posted: 30 Jan 2020 05:45 AM PST

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ನಿಶ್ಚಿತಾರ್ಥ ಫೆಬ್ರವರಿ 10 ರಂದು ನಡೆಯಲಿದೆ. ಏಪ್ರಿಲ್ ವೇಳೆಗೆ ಮದುವೆ ನಡೆಯುವ ಸಾಧ್ಯತೆ ಇದೆ.

ಮಾಜಿ ಪ್ರಧಾನಿ ದೇವೇಗೌಡರು, ಚೆನ್ನಮ್ಮ, ಹೆಚ್.ಡಿ. ಕುಮಾರಸ್ವಾಮಿ ಕುಟುಂಬದವರೊಂದಿಗೆ ಗುರುವಾರ ಹೆಣ್ಣು ನೋಡುವ ಶಾಸ್ತ್ರ ನಡೆದಿದೆ.

'ಸೀತಾರಾಮ ಕಲ್ಯಾಣ', 'ಕುರುಕ್ಷೇತ್ರ', 'ಜಾಗ್ವಾರ್' ಚಿತ್ರಗಳಲ್ಲಿ ನಟಿಸಿರುವ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ನೀರು ಕುಡಿಯಲು ಹೋಗಿ ನೀರು ಪಾಲಾದ ಸಹೋದರರು

Posted: 30 Jan 2020 05:36 AM PST

ನೀರು ಕುಡಿಯಲು ಹೋದ ಸಹೋದರರಿಬ್ಬರು ನೀರುಪಾಲಾದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮೆದಿಕೆರೆಯಲ್ಲಿ ನಡೆದಿದೆ.

21 ವರ್ಷದ ಕೃಷ್ಣಮೂರ್ತಿ, 19 ವರ್ಷದ ಬೀರಲಿಂಗೇಶ್ವರ ನೀರು ಪಾಲಾದವರು ಎಂದು ಹೇಳಲಾಗಿದೆ. ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮದ ನಿವಾಸಿಗಳಾಗಿರುವ ಇವರು ಹಬ್ಬಕ್ಕೆ ಸಂಬಂಧಿಕರ ಮನೆಗೆ ತೆರಳಿದ್ದರು. ನೀರು ಕುಡಿಯಲು ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ಭದ್ರಾ ನಾಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಸಂತೆಬೆನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಶೋಧ ನಡೆಸಿದ್ದಾರೆ.

ಸಹಕಾರಿ ಬ್ಯಾಂಕ್ ಗಳಿಗೆ ತೆರಿಗೆ ವಿನಾಯಿತಿ ನೀಡಿ

Posted: 30 Jan 2020 05:15 AM PST

ಸಹಕಾರಿ ಬ್ಯಾಂಕುಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದ 264 ನಗರ ಸಹಕಾರಿ ಬ್ಯಾಂಕುಗಳು ಸೇರಿದಂತೆ ದೇಶದಲ್ಲಿ ಸುಮಾರು 1500 ಕ್ಕೂ ಹೆಚ್ಚು ಸಹಕಾರಿ ಬ್ಯಾಂಕುಗಳಿವೆ. ಈ ಸಹಕಾರಿ  ಬ್ಯಾಂಕ್ ಗಳಿಂದ ಸಣ್ಣ ಮತ್ತು ಮಧ್ಯಮ ಉದ್ಯಮ, ವ್ಯಾಪಾರಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಬ್ಯಾಂಕ್ ಗಳು ಶೇಕಡ 22 ರಷ್ಟು ತೆರಿಗೆ ಪಾವತಿಸಿದ್ದು, ಸಹಕಾರಿ ಬ್ಯಾಂಕ್ ಗಳು ಶೇಕಡ 30 ರಷ್ಟು ತೆರಿಗೆ ಪಾವತಿಸುತ್ತಿವೆ. ರಾಸಾಯನಿಕ ಗೊಬ್ಬರ ಸಹಕಾರ ಸಂಘವಾಗಿರುವ iffco ಕೂಡ ಶೇಕಡ 30 ರಷ್ಟು ತೆರಿಗೆ ಪಾವತಿಸುತ್ತಿದೆ. ರಾಸಾಯನಿಕ ಗೊಬ್ಬರ ಉತ್ಪಾದನೆ ಮಾಡುವ ಕಂಪನಿಗಳು ಶೇಕಡ 22 ರಷ್ಟು ತೆರಿಗೆ ಪಾವತಿಸುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಬಜೆಟ್ ನಲ್ಲಿ ಸಣ್ಣ ಉದ್ದಿಮೆದಾರರು, ಸಹಕಾರಿ ಬ್ಯಾಂಕ್ ಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಹೆಚ್.ಕೆ. ಪಾಟೀಲ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲೂ ‘ಕೊರೋನಾ’ ಆತಂಕ: ಚೀನಾದಿಂದ ಬರದಂತೆ ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಸೂಚನೆ

Posted: 30 Jan 2020 05:03 AM PST

ರಾಜ್ಯದಲ್ಲಿಯೂ ಕೊರೋನಾ ವೈರಸ್ ಆತಂಕ ಶುರುವಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ. ಚೀನಾ ವಿದ್ಯಾರ್ಥಿಗಳು ಮೈಸೂರಿಗೆ ಬರದಂತೆ ಮೈಸೂರು ವಿಶ್ವವಿದ್ಯಾಲಯ ವತಿಯಿಂದ ಸೂಚನೆ ನೀಡಲಾಗಿದೆ.

ಮೈಸೂರು ವಿವಿಯಲ್ಲಿ ಓದುತ್ತಿರುವ ಚೀನಾದ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಚೀನಾದಿಂದ ಹಿಂತಿರುಗದಂತೆ ವಿಶ್ವವಿದ್ಯಾಲಯ ಸೂಚಿಸಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ 120 ಚೀನಾ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಲ್ಲಿ 18 ಮಂದಿ ಚೀನಾಗೆ ವಾಪಸ್ ತೆರಳಿದ್ದಾರೆ.

ಜನವರಿ 25 ರಂದು ಚೀನಾದಲ್ಲಿ ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ 18 ವಿದ್ಯಾರ್ಥಿಗಳು ತೆರಳಿದ್ದರು. ಕೊರೋನಾ ವೈರಸ್ ಕಾಣಿಸಿಕೊಂಡಿದ್ದರಿಂದ ಅವರು ಹಿಂತಿರುಗಿಲ್ಲ. ವಿದ್ಯಾರ್ಥಿ ವಿನಿಮಯ ಯೋಜನೆಯಡಿ ಮೈಸೂರು ವಿವಿಗೆ ಚೀನಾದಿಂದ 120 ವಿದ್ಯಾರ್ಥಿಗಳು ಬಂದಿದ್ದಾರೆ. ಕೊರೋನಾ ವೈರಸ್ ಭೀತಿ ಕಡಿಮೆಯಾಗುವವರೆಗೆ ಬರದಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಸಾಲ ವಸೂಲಿ ವೇಳೆಯಲ್ಲೇ ನಡೆದಿದೆ ನಡೆಯಬಾರದ ಘಟನೆ

Posted: 30 Jan 2020 04:52 AM PST

ಬೆಂಗಳೂರು: ಸಾಲ ವಸೂಲಿಗೆ ತೆರಳಿದ್ದ ವೇಳೆ ಫೈರಿಂಗ್ ಮಾಡಿದ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಾಲ ಪಡೆದುಕೊಂಡ ವ್ಯಕ್ತಿ ಸಹಾಯಕ್ಕೆ ಬಂದ ಉದ್ಯಮಿ ಸಾಲ ವಸೂಲಿಗೆ ಬಂದಿದ್ದ ಬ್ಯಾಂಕ್ ಸಿಬ್ಬಂದಿ ಜೊತೆಗೆ ಬಂದ ವ್ಯಕ್ತಿಯ ಮೇಲೆ ಫೈರಿಂಗ್ ಮಾಡಿದ್ದಾರೆ. ಉದ್ಯಮಿ ಮಯೂರೇಶ್ ಎಂಬುವರು ಹಾರ್ಲೆ ಡೇವಿಡ್ಸನ್ ಬೈಕ್ ಖರೀದಿಸಿದ್ದು ಹೆಚ್.ಡಿ.ಎಫ್.ಸಿ. ಬ್ಯಾಂಕ್ ನಲ್ಲಿ ಲೋನ್ ಪಡೆದುಕೊಂಡಿದ್ದಾರೆ. ಕಂತು ಪಾವತಿಸಿದ್ದು, 32 ಸಾವಿರ ರೂ. ಬಾಕಿ ಉಳಿದಿದೆ.

ಸಾಲದ ಕಂತು ಪಾವತಿಸುವಂತೆ ಸೈಯದ್ ಅರ್ಷದ್ ಎಂಬುವರು ಮಯೂರೇಶ್ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಜಗಳವಾಗಿದ್ದು ಮನೆ ಬಳಿ ಬಂದು ಗಲಾಟೆ ಮಾಡಲಾಗಿದೆ. ಸೈಯದ್ ಅರ್ಷದ ಸಂಬಂಧಿ ಅಬ್ದುಲ್ ಸಲೀಂ ಮತ್ತು ಆತನ ಸಹಚರರು ಮಯೂರೇಶ್ ಮನೆ ಬಳಿ ಗಲಾಟೆ ಮಾಡುವ ವೇಳೆ ಮತ್ತೊಬ್ಬ ಉದ್ಯಮಿ ಅಮರೀಂದರ್, ಮಯೂರೇಶ್ ನೆರವಿಗೆ ಬಂದು ಫೈರಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಸಲೀಂ ಎದೆಗೆ ಗುಂಡೇಟು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಣ್ಣೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.

ಬಾರ್ಬಿ ಗೊಂಬೆಯ ಹೊಸ ಅವತಾರ; ಚರ್ಮದ ಬಿಳಿ ಕಲೆ, ಬೋಳು ತಲೆ

Posted: 30 Jan 2020 04:35 AM PST

ಗೊಂಬೆಗಳ ಕ್ಷೇತ್ರದಲ್ಲಿ ಭಾರಿ ಹೆಸರು ಮಾಡಿರುವ ಬಾರ್ಬಿ ಗೊಂಬೆಯ ಉತ್ಪನ್ನಗಳು ಈಗ ಹೊಸ ಅವತಾರ ಎತ್ತಿವೆ. ಇಷ್ಟು ದಿನ ಚೆಂದದ, ಸುಂದರವಾದ ಗೊಂಬೆಗಳು ನಿಮಗೆ ಸಿಗುತ್ತಿದ್ದವು.

ಈಗ ಅದರ ಜೊತೆ ಅಂಗವೈಕಲ್ಯ, ಚರ್ಮದ ಬಿಳಿ ಕಲೆ, ಬೋಳುತಲೆ ಹೊಂದಿರುವ ಗೊಂಬೆಗಳು ಸಹ ಲಭಿಸಲಿದ್ದು, ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಸಂದೇಶ ಸಾರಲು ಹೊರಟಿದೆ.

ಸಮಾಜದಲ್ಲಿರುವ ಎಲ್ಲ ವರ್ಗದವರನ್ನು ತಲುಪುವ ನಿಟ್ಟಿನಲ್ಲಿ ಕಂಪನಿ ಮುಂದಾಗಿದ್ದು, ಕಳೆದ ವರ್ಷ ಬೊಕ್ಕತಲೆಯ ಗೊಂಬೆಯನ್ನು ಉತ್ಪಾದಿಸಿತ್ತು.

ಈ ಬಾರಿ ಹೊಸ ಅಂಶಗಳನ್ನು ಸೇರಿಸಿಕೊಂಡು ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಇದಕ್ಕೋಸ್ಕರ ಐದು ವರ್ಷದಿಂದ ತಯಾರಿ ನಡೆಸಿಕೊಂಡು ಬರಲಾಗಿತ್ತು ಎಂದು ಬಾರ್ಬಿ ಕಂಪನಿಯ ಹಿರಿಯ ಜಾಗತಿಕ ಉಪಾಧ್ಯಕ್ಷೆ ಲಿಸಾ ಮೆಕ್ನೈಟ್ ಪ್ರತಿಕ್ರಿಯಿಸಿದ್ದಾರೆ.

ಕೆಲವು ಕಾರಣಾಂತರಗಳಿಂದ ಹುಡುಗಿಯೊಬ್ಬಳು ತನ್ನ ಕೂದಲನ್ನು ಕಳೆದುಕೊಂಡಿದ್ದರೆ, ಅವಳು ತನ್ನ ಪ್ರತಿನಿಧಿಯಾಗಿ ಈ ಗೊಂಬೆಯನ್ನು ನೋಡಿಕೊಂಡು ಸಮಾಧಾನ ಪಟ್ಟುಕೊಳ್ಳಬಹುದು ಎಂಬ ನಿಟ್ಟಿನಲ್ಲಿ ಇಂತಹ ಪ್ರಯತ್ನವನ್ನು ಮಾಡಲಾಗಿದೆ ಎಂದು ಲೀಸಾ ತಿಳಿಸಿದ್ದಾರೆ.

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಹಾಲು, ಮೊಸರು ದರ ಹೆಚ್ಚಳ

Posted: 30 Jan 2020 04:00 AM PST

ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

ನಂದಿನಿ ಹಾಲಿನ ದರ 2 ರೂಪಾಯಿ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಪ್ರತಿ ಲೀಟರ್ ಹಾಲಿನ ದರ ಹಾಗೂ ಮೊಸರಿನ ತರ 2 ರೂ. ಹೆಚ್ಚಳಕ್ಕೆ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಹಾಲು, ಮೊಸರಿನ ದರ ಎರಡು ರೂಪಾಯಿ ಹೆಚ್ಚಳ ಮಾಡಲು ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಫೆಬ್ರವರಿ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎನ್ನಲಾಗಿದೆ.

ನಿರ್ಭಯಾ ಪ್ರಕರಣ: ಫೆ.1ರ ಗಲ್ಲು ಶಿಕ್ಷೆ ಬಗ್ಗೆ ಸಸ್ಪೆನ್ಸ್

Posted: 30 Jan 2020 03:38 AM PST

निर्भया गैंगरेप केस : दोषी अक्षय की याचिका भी सुप्रीम कोर्ट ने की खारिज

ನಿರ್ಭಯಾ ಅತ್ಯಾಚಾರಿಗಳಿಗೆ ಫೆಬ್ರವರಿ 1ರಂದು ಗಲ್ಲು ಶಿಕ್ಷೆಯಾಗಲಿದೆಯಾ ಎಂಬ ಪ್ರಶ್ನೆ ಸಸ್ಪೆನ್ಸ್ ಆಗಿ ಉಳಿದಿದೆ. ಅಪರಾಧಿಯೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ತಿಹಾರ್ ಜೈಲು ಆಡಳಿತಕ್ಕೆ ಉತ್ತರ ಕೇಳಿದೆ. ತಿಹಾರ್ ಜೈಲಿನ ಆಡಳಿತ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕೋರ್ಟ್ ಗೆ ಉತ್ತರ ನೀಡಬೇಕಿದೆ.

ಅಪರಾಧಿ ವಿನಯ್ ದೆಹಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಕೆಲ ಅಪರಾಧಿಗಳು ತಮ್ಮ ಬಳಿಯಿರುವ ಕಾನೂನು ಅಧಿಕಾರವನ್ನು ಬಳಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಹಾಗಾಗಿ ಗಲ್ಲು ಶಿಕ್ಷೆಯನ್ನು ಮುಂದೂಡಬೇಕೆಂದು ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಬಗ್ಗೆ ತಿಹಾರ್ ಜೈಲಧಿಕಾರಿಗಳಿಂದ ಉತ್ತರ ಕೇಳಿದೆ.

ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳು ಒಂದಾದ್ಮೇಲೆ ಒಂದರಂತೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸುತ್ತಿದ್ದಾರೆ. ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳುವುದು ಅಪರಾಧಿಗಳ ಮುಖ್ಯ ಉದ್ದೇಶವಾಗಿದೆ. ಅಕ್ಷಯ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ – ಪುಣೆ ಪೊಲೀಸರ ಆಸಕ್ತಿಕರ ಟ್ವೀಟ್

Posted: 30 Jan 2020 03:21 AM PST

ಸಂಚಾರಿ ನಿಯಮಗಳು ಇರುವುದೇ ಉಲ್ಲಂಘಿಸುವುದಕ್ಕೆ ಅನ್ನುವ ಕೆಟ್ಟ ಚಾಳಿ ದಂಡದ ಮೊತ್ತ ದುಪ್ಪಟ್ಟಾದರೂ ಇನ್ನೂ ಬಿಟ್ಟಿಲ್ಲ. ಇದಕ್ಕೆ ಮತ್ತೊಂದು ‌ನಿದರ್ಶನ ಪುಣೆಯಲ್ಲಿ ನಡೆದಿದೆ.

ವ್ಯಕ್ತಿಯೊಬ್ಬರು ಹೆಲ್ಮೆಟ್ ಧರಿಸದೆ, ಸ್ಟಿಕ್ಕರ್ ನಲ್ಲಿ ” ಖಾನ್ ಸಾಬ್ ” ಎಂದು ಭಿನ್ನ ಶೈಲಿಯಲ್ಲಿ ಬೈಕ್ ನಂಬರ್ ‌ಬರೆಸಿಕೊಂಡು ಹೋಗುತಿದ್ದ ಬಗ್ಗೆ‌ ಪುಣೆ ಪೊಲೀಸರಿಗೆ ದೂರು ಬಂದಿದೆ. ಅಷ್ಟೇ ಅಲ್ಲ ನಿಯಮಬಾಹಿರ ಗಾಡಿ ಎಲ್ಲಿ ಸಿಗುತ್ತದೆ ಅನ್ನುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಟ್ವಿಟ್ಟರ್ ನಲ್ಲಿ ಕ್ರಿಯಾಶೀಲವಾಗಿರುವ ಪುಣೆ ಪೊಲೀಸರು ಇದಕ್ಕೆ ಅಷ್ಟೇ ಆಸಕ್ತಿದಾಯಕ ಉತ್ತರ ಕೊಟ್ಟಿದ್ದಾರೆ.
“ಖಾನ್ ಸಾಬ್ ಬಹಳ ಆರಾಮವಾಗಿದ್ದಾರೆ
ಖಾನ್ ಸಾಬ್ ಕೇಶವಿನ್ಯಾಸ ಅದ್ಭುತವಾಗಿದೆ
ಒಳ್ಳೆಯ ಬೈಕ್ ನಲ್ಲಿ ಹೀರೋ ರೀತಿಯಲ್ಲಿ ಹೋಗುತ್ತಿದ್ದಾರೆ.
ಆದರೆ ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘಿಸೋದು ಸರೀನಾ ಖಾನ್ ಸಾಬ್”

ಹೀಗೆಂದು ರೀಟ್ವೀಟ್ ಮಾಡಿದ್ದು ಇದು ನೆಟ್ಟಿಗರಿಂದ ಭಾರೀ ಮೆಚ್ಚುಗೆ ಜತೆಗೆ ಸ್ಪಷ್ಟ ಸಂದೇಶ ರವಾನೆ ಮಾಡಿದೆ ಎಂದಿದ್ದಾರೆ.
ವಿವಿಧ ವಿನ್ಯಾಸದ ಸಂಖ್ಯಾ ಫಲಕ ಅಳವಡಿಸಿ ಒಮ್ಮೊಮ್ಮೆ ಗಾಡಿ ನೋಂದಣಿ ಸಂಖ್ಯೆ ಕಾಣದಂತೆ ಇರುವ ಕಾರಣ ನಮಗೂ ಕಷ್ಟವಾಗುತ್ತದೆ ಎನ್ನುವುದು ಪೊಲೀಸರ ಅಸಹಾಯಕತೆ.

ನಾಯಿ ಮೂತಿ ಹಿಡಿದು ಕುಲುಕಿದ ಮಿಚೆಲ್: ವಿಡಿಯೋ ವೈರಲ್

Posted: 30 Jan 2020 03:19 AM PST

ನ್ಯೂಯಾರ್ಕ್: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮೊಕ್ರಾಟಿಕ್ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ, ನ್ಯೂಯಾರ್ಕ್ ನಗರದ ಮಾಜಿ ಮೇಯರ್ ಮಿಚೆಲ್ ಬ್ಲೂಂಬರ್ಗ್ ಅವರು ಪ್ರಚಾರ ವೇಳೆ ನಾಯಿಯ ಮೂತಿಯನ್ನು ಹಿಡಿದು ಕುಲುಕಿದ ವಿಡಿಯೋ ಈಗ ಭರ್ಜರಿ ವೈರಲ್ ಆಗಿದೆ.

ಈ ವಿಡಿಯೋವನ್ನು ಪತ್ರಕರ್ತರೊಬ್ಬರು ಚಿತ್ರೀಕರಿಸಿದ್ದು, ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇದಕ್ಕೆ ಸಾಕಷ್ಟು ಪರ -ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಬಹುತೇಕರು ತಮಗೆ ಮಿಚೆಲ್ ಇಷ್ಟವಿಲ್ಲದಿದ್ದರೂ ಅವರು ಮಾಡಿದ್ದರಲ್ಲಿ ತಪ್ಪಿಲ್ಲ ಎಂದು ಹೇಳಿಕೊಂಡಿದ್ದಾರೆ.

ಪ್ರತಿಸ್ಪರ್ಧಿ ಬೆರ್ನಿ ಸ್ಯಾಂಡರ್ಸ್ ಅವರ ಕ್ಷೇತ್ರವಾದ ವರ್ಮೋಂಟ್ ನಲ್ಲಿ ಸೋಮವಾರ ಪ್ರಚಾರದಲ್ಲಿ ಮಿಚೆಲ್ ಭಾಗಿಯಾಗಿದ್ದರು.

ಈ ವೇಳೆ ಮುನ್ನೂರಕ್ಕೂ ಹೆಚ್ಚು ಜನ ಅಲ್ಲಿ ಸೇರಿದ್ದರು. ಆಗ ಅಭಿಮಾನಿಯೊಬ್ಬರು ನಾಯಿಯೊಂದಿಗೆ ಆಗಮಿಸಿದ್ದರು. ಅಲ್ಲಿ ಮಿಚೆಲ್ ಅವರನ್ನು ಕಂಡ ನಾಯಿ ಬಾಯಿ ಕಳೆದು ಒಂದು ರೀತಿಯಲ್ಲಿ ವರ್ತಿಸುತ್ತಿತ್ತು. ಆಗ ಮಿಚೆಲ್ ಅದಕ್ಕೆ ಸಮಾಧಾನ ಪಡಿಸುವ ನಿಟ್ಟಿನಲ್ಲಿ ಅದರ ತಲೆ ಸವರಿ ಮೂತಿಯನ್ನು ಹಿಡಿದು ಕುಲುಕಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

‘ಟಿಕ್ ಟಾಕ್’ ಗೆ ಟಕ್ಕರ್ ನೀಡಲು ಹೊಸ ಅಪ್ಲಿಕೇಷನ್ ಶುರು

Posted: 30 Jan 2020 03:16 AM PST

ಗೂಗಲ್ ಹೊಸ ಸಾಮಾಜಿಕ ವೀಡಿಯೊ ಹಂಚಿಕೆ ಅಪ್ಲಿಕೇಷನ್ Tangi  ಬಿಡುಗಡೆ ಮಾಡಿದೆ. ಇದು ಪ್ರಾಯೋಗಿಕ ಅಪ್ಲಿಕೇಷನ್ ಆಗಿದ್ದು  Google Area 120ರಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಇದು ಮೊಬೈಲ್ ಮತ್ತು ವೆಬ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ.

ಟಿಕ್ ಟಾಕ್ ನ ಜನಪ್ರಿಯತೆಯನ್ನು ನೋಡಿದ ನಂತರ ಫೇಸ್‌ಬುಕ್ ನಂತರ ಗೂಗಲ್ ಕೂಡ ಇಂಥಹ ಅಪ್ಲಿಕೇಷನ್ ಶುರು ಮಾಡಿದೆ. ಈ ಅಪ್ಲಿಕೇಶನ್ ಟಿಕ್ ಟಾಕ್ ನಂತಹ ಮನರಂಜನೆಯನ್ನು ಕೇಂದ್ರೀಕರಿಸಲಿದೆ. ಗೂಗಲ್‌ನ ಟ್ಯಾಂಗಿ ಅಡಿಯಲ್ಲಿ 60 ಸೆಕೆಂಡುಗಳ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. ಇದು ಟಿಕ್ ಟಾಕ್  ಗಿಂತ  ಭಿನ್ನವಾಗಿದೆ. ಬಳಕೆದಾರರು ಅನೇಕ ವಿಷಯಗಳಲ್ಲಿ 60 ಸೆಕೆಂಡ್ ವೀಡಿಯೊಗಳನ್ನು ಇಲ್ಲಿ ಮಾಡಬಹುದು. ಇವುಗಳಲ್ಲಿ ಅಡುಗೆ, ಕರಕುಶಲ, ಮೇಕಪ್ ಮತ್ತು ಬಟ್ಟೆ ಸೇರಿವೆ.

ಟ್ಯಾಂಗಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. 60 ಸೆಕೆಂಡುಗಳ ಟ್ಯುಟೋರಿಯಲ್ ವೀಡಿಯೊಗಳು ಇಲ್ಲಿದ್ದು, ಈ ವೀಡಿಯೊಗಳನ್ನು ನೋಡಿ  ಅಪ್‌ಲೋಡ್ ಮಾಡಬಹುದು.

ಐಸ್ ಕ್ಯಾಸ್ಟಲ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಮಹಿಳೆ

Posted: 30 Jan 2020 02:09 AM PST

ನ್ಯೂ ಹ್ಯಾಂಪ್ಶೈರ್ನಲ್ಲಿ ಮಹಿಳೆಯೊಬ್ಬರು ಪ್ರತಿ ವರ್ಷದ ಐಸ್ ಕ್ಯಾಸ್ಟಲ್ (ಐಸ್ ಕೋಟೆ) ವಿರುದ್ಧ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಾರಣ ಇದನ್ನು ನಿರ್ವಹಿಸುವವರು ಅದರ ಕರಗುವಿಕೆಯಿಂದ ಬರುವ ನೀರನ್ನು ವ್ಯವಸ್ಥಿತ ರೂಪದಲ್ಲಿ ನೋಡಿಕೊಳ್ಳದಿದ್ದರಿಂದ ಈ ಮಹಿಳೆಯ ಮನೆ ಮುಂದಿನ ಹೊಲಕ್ಕೆ ನೀರು ಸೇರುತ್ತಿದೆ. ಇದೇ ವಿವಾದಕ್ಕೆ ಈಗ ಕಾರಣವಾಗಿದೆ.

ಕಳೆದ ಬಾರಿ ಇದರಿಂದ 15000 ಗ್ಯಾಲನ್ ನೀರು ನೆಲಮಹಡಿಯನ್ನು ಸೇರಿತ್ತು. ಈ ಬಾರಿಯ ವಸಂತ ಋತುವಿನಲ್ಲಿ ಇದೇ ರೀತಿಯಾದರೆ ಎಂಬ ಭಯ ಈ ಮಹಿಳೆಯನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ವಹಣಾಕಾರರ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಕಿಲ್ಲೆ ಟ್ರಿಂಕಲ್ ಎಂಬುವರೇ ಹೀಗೆ ದೂರು ನೀಡಿದ್ದು, ಕಳೆದ ಏಪ್ರಿಲ್ ನಲ್ಲಿ ನೆಲಮಾಳಿಗೆಯಲ್ಲಿ 16 ಅಡಿ ನೀರು ನಿಂತಿತ್ತು ಎಂದು ದೂರು ನೀಡಿದ್ದಾರೆ. ಹೀಗಾಗಿ ತಮಗಾದ ನಷ್ಟಕ್ಕೋಸ್ಕರ 1 ಲಕ್ಷ ಡಾಲರ್ ಪರಿಹಾರ ಕೊಡಬೇಕು ಎಂದು ಕೇಳಿದ್ದಾರೆ.

ಈ ವಾದವನ್ನು ತಳ್ಳಿ ಹಾಕಿರುವ ಐಸ್ ಕ್ಯಾಸ್ಟಲ್ ಪರ ವಕೀಲರು, ಜಲಾನಯ ಪ್ರದೇಶದ ಬಳಿ ಕಿಲ್ಲೆ ಅವರ ಮನೆ ಇದೆ ಎಂದು ಹೇಳಿದ್ದಾರೆ. ಅಲ್ಲದೇ ಟ್ರಿಂಕಲ್ ಸಹ ಅಲ್ಲಿನ ಪರಿಸ್ಥಿತಿಯನ್ನು ವಿಡಿಯೋ ಮಾಡಿಕೊಂಡಿದ್ದು, ಕೋರ್ಟ್ ಮುಂದೆ ಹೋಗಲು ಸಿದ್ಧರಿದ್ದಾರೆ.

ಆಹಾರವಿಲ್ಲದೇ ನಿತ್ರಾಣವಾಗಿದ್ದ ಸಿಂಹಗಳ ನೆರವಿಗೆ ಧಾವಿಸಿದ ಪ್ರಾಣಿ ಪ್ರಿಯರು

Posted: 30 Jan 2020 02:01 AM PST

ಸುಡಾನ್‌ನ ಅಲ್‌-ಖುರೇಸಿ ಪಾರ್ಕ್‌ನ ಖಾರ್ತೊಮ್‌ ಮೃಗಾಲಯದಲ್ಲಿ ಆಹಾರವಿಲ್ಲದೇ ಬಸವಳಿದು ಹೋಗಿದ್ದ ಸಿಂಹಗಳ ಚಿತ್ರಗಳು ಎಲ್ಲೆಡೆ ವೈರಲ್‌ ಆಗಿದ್ದು, ಪ್ರಾಣಿಪ್ರಿಯರ ಮನ ಮರುಗುವಂತೆ ಮಾಡಿದೆ.

ಇದೀಗ ಸಿಂಹಗಳ ನೆರವಿಗೆ ನಿಂತಿರುವ ವಿಶ್ವಾದ್ಯಂತ ಪ್ರಾಣಿಪ್ರಿಯರು ಇವುಗಳಿಗೆ ಆಹಾರ ಪೂರೈಕೆ ಮಾಡಲು ಧಾರಾಳವಾಗಿ ನೆರವು ನೀಡಲು ಮುಂದಾಗಿದ್ದಾರೆ.

ಫೋರ್‌ ಪಾ ಎನ್‌ಜಿಓ ತಂಡದ ಪಶುವೈದ್ಯರು ಹಾಗೂ ವನ್ಯಜೀವಿ ತಜ್ಞರು ಈ ಮೃಗಾಲಯಕ್ಕೆ ಭೇಟಿ ನೀಡಿದ್ದು, ಸಿಂಹಗಳ ಶುಶ್ರೂಷೆಯಲ್ಲಿ ತೊಡಗಿದೆ.

ಈ ಶುಶ್ರೂಷೆಯ ಪರಿಣಾಮದಿಂದಾಗಿ ಸಿಂಹಗಳು ಚೇತರಿಕೆ ಕಾಣುತ್ತಿದ್ದು, ಈ ಚಿತ್ರಗಳನ್ನು ಎನ್‌ಜಿಓ ತನ್ನ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದೆ.

 

ಎಲ್ಲೆಂದರಲ್ಲಿ ಮಲ ವಿಸರ್ಜನೆ ಮಾಡಿ ಪೊಲೀಸರ ಅತಿಥಿಯಾದ ಮಹಿಳೆ

Posted: 30 Jan 2020 01:57 AM PST

ಎಲ್ಲೆಂದರಲ್ಲಿ ಬಂದುಬಿಡುವ ಪ್ರಕೃತಿಯ ಕರೆಗೆ ಓಗೊಡಲೇ ಬೇಕಾಗುತ್ತದೆ. ಕೆಲವೊಮ್ಮೆ ಸಾರ್ವಜನಿಕ ಶೌಚಾಲಯಗಳು ಇಲ್ಲದೇ ಹೋದಲ್ಲಿ ಈ ವಿಚಾರವಾಗಿ ಬಲು ಸಂಕಟ ಅನುಭವಿಸಬೇಕಾಗುತ್ತದೆ.

ಮಸ್ಸಾಚುಸೆಟ್ಸ್‌ನ 51 ವರ್ಷದ ವ್ಯಕ್ತಿಯೊಬ್ಬರು ಇಂಥದ್ದೇ ಪರಿಸ್ಥಿತಿಗಳಿಗೆ ಸಿಲುಕಿಕೊಂಡು 'ಸೀರಿಯಲ್ ಪೂಪರ್‌' ಎಂಬ ಅಡ್ಡನಾಮ ಸಂಪಾದಿಸಿದ್ದಲ್ಲದೇ, ಇದೀಗ ತನ್ನ 'ತಪ್ಪಿಗೆ' ಶಿಕ್ಷೆ ಎದುರಿಸುತ್ತಿದ್ದಾಳೆ.

ಮಸ್ಸಾಚುಸೆಟ್ಸ್‌ನ ಕ್ರೀಡಾ ಅಂಗಡಿಯೊಂದರ ಪಾರ್ಕಿಂಗ್ ಲಾಟ್‌ ಒಂದರಲ್ಲಿ ಪದೇ ಪದೇ ಮಲ ವಿಸರ್ಜನೆ ಮಾಡುತ್ತಿದ್ದ ಆಪಾದನೆ ಮೇರೆಗೆ ಆಂಡ್ರೆಯಾ ಗ್ರಾಸರ್‌ ಹೆಸರಿನ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರದಂದು ತನ್ನ ಎಂದಿಗೆ 'ಕಾಯಕ'ದಲ್ಲಿ ತೊಡಗಿದ್ದ ಈಕೆಯನ್ನು ಪೊಲೀಸರು 'ರೆಡ್‌ ಹ್ಯಾಂಡ್‌' ಆಗಿ ಹಿಡಿಯಲು ಸಫಲರಾಗಿದ್ದಾರೆ.

ಸದ್ಯ ಬೇಲ್ ಮೇಲೆ ಬಿಡುಗಡೆ ಆಗಿರುವ ಈಕೆ ಮಾರ್ಚ್ 2ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ.

ಒಲ್ಲೆ ಎಂದರೂ ಪೂಜಾರಿಯನ್ನು ಎಳೆದೊಯ್ದು ಪೂಜೆ ಮಾಡಿಸಿದರು…!

Posted: 30 Jan 2020 01:55 AM PST

ಕೋಲ್ಕತಾ: ವಸಂತ ಪಂಚಮಿ ನಿಮಿತ್ತ ಸರಸ್ವತಿ ಪೂಜೆ ಮಾಡಬೇಕೆಂದು ನಿರ್ಧರಿಸಿ, ಸಕಲ ಸಿದ್ಧತೆ ಕೈಗೊಂಡಿದ್ದ ಸಂಘಟನೆಯೊಂದಕ್ಕೆ ಪೂಜಾರಿ ಸಿಗಲಿಲ್ಲ.

ಕೊನೆಗೆ ಏನು ಮಾಡಿದರು ಗೊತ್ತೆ..? ರಸ್ತೆಯಲ್ಲಿ ಕಂಡ ಪೂಜಾರಿಯನ್ನು ಕೇಳಿದ್ದಾರೆ. ಆದರೆ ಅವರು ಬರಲು ಆಗಲ್ಲವೆಂದು ಹೇಳಿದ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ದರದರನೆ ಎಳೆದುಕೊಂಡು ಬಂದು ಮನೆಯಲ್ಲಿ ಕೂರಿಸಿ ಪೂಜೆ ಮಾಡಿಸಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭರ್ಜರಿ ವೈರಲ್ ಆಗಿದೆ.

ಪಶ್ಚಿಮ ಬಂಗಾಳದ ಅತಿದೊಡ್ಡ ಹಬ್ಬ ಎಂದೇ ಕರೆಯಲ್ಪಡುವ ವಸಂತ ಪಂಚಮಿಯು ಈಗ ಪೂಜಾರಿಗಳಿಗೆ ಸಂಕಷ್ಟ ತಂದೊಡ್ಡಿದೆ. ಈ ದಿನ ಪೂಜಾರಿಗಳಿಗೆ ಅದ್ಯಾವ ರೀತಿ ಬೇಡಿಕೆ ಇದೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.

ಕೋಲ್ಕತ್ತಾದ ಬೆಹಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋವನ್ನು ಗಮನಿಸಿದರೆ, ಪೂಜಾರಿ ಪೂಜೆಗೆ ಬರಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದರೂ ಮಕ್ಕಳು ಹಾಗೂ ಮಹಿಳೆಯೊಬ್ಬರು ಎಳೆದುತಂದಿದ್ದಾರೆ.

ಎಲ್ಲ ಸಿದ್ಧತೆಗಳು ಆಗಿದ್ದು ಬಂದು ಪೂಜೆ ಮಾಡಿದರೆ ಸಾಕು ಎಂದು ಕೇಳಿದ್ದಾರೆ. ಕೊನೆಗೆ ದೇವರ ಮನೆ ಬಳಿ ಬಿಟ್ಟು ಬಾಗಿಲನ್ನು ಹಾಕಿದ್ದಾರೆ. ಅಲ್ಲಿ ಕೆಲವು ಸಿದ್ಧತೆಗಳು ಕಾಣದಿದ್ದರಿಂದ ಪೂಜಾರಿ ಸಹ ಸಿಡಿಮಿಡಿಗೊಂಡಿದ್ದಾರೆ.

ಸನ್ನತಿ ನಂಬರ್ ಸಂಘದವರು ಈ ಪೂಜೆಯನ್ನು ಮಾಡಿಸಿದ್ದು, ಬಳಿಕ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Thakurmosai on high demand

Posted by Tarun Das on Tuesday, January 28, 2020

Senhati nabarun sangha saraswati puja

Posted by Tarun Das on Tuesday, January 28, 2020

ಬಾಲಕನ ಮೇಲೆ ಸಾಕು ನಾಯಿಯ ಭೀಕರ ದಾಳಿ

Posted: 30 Jan 2020 01:54 AM PST

ನಾಯಿಗಳು ಎಷ್ಟು ಮುದ್ದಿನ ಪ್ರಾಣಿಯೋ ಅಷ್ಟೇ ಮೃಗೀಯ ಕೂಡಾ. ಇದಕ್ಕೆ ಸ್ಪಷ್ಟ ನಿದರ್ಶನ ಪಂಜಾಬಿನ ಜಲಂಧರ್ ನಲ್ಲಿ ನಡೆದಿದೆ.

15 ವರ್ಷದ ಬಾಲಕ ಎಂದಿನಂತೆ ಟ್ಯೂಷನ್ ಮುಗಿಸಿ ಸೈಕಲ್ ನಲ್ಲಿ ಮನೆ ಮುಂದೆ ಬರುತಿದ್ದಂತೆ ಏಕಾಏಕಿ ನಾಯಿ ದಾಳಿ ನಡೆಸಿದೆ.

ಬಾಲಕನ ಕಾಲನ್ನು ಕಚ್ಚಿ ಹಿಡಿದ ನಾಯಿ ಯಾವುದೇ ಏಟಿಗೂ ಜಗ್ಗಲಿಲ್ಲ. ಆತನ ತಾಯಿ ಕಾಲಿನಿಂದ ಒದ್ದಿದ್ದಾರೆ.

ಅಷ್ಟೇ ಏಕೆ ನೆರೆಹೊರೆಯ ಜನ ತಕ್ಷಣವೇ ಕೈಗೆ ಸಿಕ್ಕಿದ ವಸ್ತುಗಳಲ್ಲಿ ನಾಯಿಗೆ ಹೊಡೆದರೂ ಅದು ಬಿಟ್ಟಿಲ್ಲ. ಕಲ್ಲು, ಬಕೆಟ್. ಎಸೆದು‌ ಮುಖಕ್ಕೆ ನೀರು ಸುರಿದರೂ ಬಾಲಕನ ಕಾಲು ಬಿಟ್ಟಿಲ್ಲ. ವ್ಯಕ್ತಿಯೊಬ್ಬರು ದೊಣ್ಣೆಯಿಂದ ಎಲ್ಲಂದರಲ್ಲಿ ಥಳಿಸಿದರೂ ಕ್ರೂರ ನಾಯಿ ಬಾಲಕನ ಕಾಲು ಬಿಡಲಿಲ್ಲ.

ಸುಮಾರು 15 ನಿಮಿಷಗಳ ಕಾಲ ಈ ದೃಶ್ಯಗಳು ರಸ್ತೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಾಲಕ ಎಷ್ಟು ಕಿರುಚಿದರೂ ನಾಯಿ ಮಾತ್ರ ಬಾಯಿ ತೆಗೆದಿಲ್ಲ. ಬಳಿಕ ಹೊಡೆತ ತಡೆಯದೆ ನಾಯಿ ಬಾಲಕನ ಕಾಲು ಬಿಟ್ಟಿದೆ.

ಎರಡೂ ಕಾಲಿಗೆ ತೀವ್ರವಾದ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಸಿ ಟಿವಿಯಲ್ಲಿ ದಾಖಲಾದ ದೃಶ್ಯಗಳ ಸಹಿತ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಆದಿತ್ಯ ತಿವಾರಿ ಎಂಬುವರು ಈ ನಾಯಿ ದಾಳಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ನೇಹಿತೆ ಸೌಂದರ್ಯಕ್ಕೆ ಅಸೂಯೆ ಪಡುತ್ತಿದ್ದ ಗೆಳತಿ ಮಾಡಿದ್ದೇನು…?

Posted: 30 Jan 2020 01:45 AM PST

ಗ್ವಾಲಿಯರ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬಿ.ಕಾಂ ವಿದ್ಯಾರ್ಥಿನಿಯೊಬ್ಬಳ ನಕಲಿ ಖಾತೆ ಫೇಸ್ಬುಕ್ ನಲ್ಲಿ ಹರಿದಾಡ್ತಿದೆ. ಅದ್ರಲ್ಲಿ ಹುಡುಗಿಯ ಬೋಲ್ಡ್ ಫೋಟೋಗಳನ್ನು ಹಾಕಲಾಗಿತ್ತು. ನಕಲಿ ಖಾತೆ ಸೃಷ್ಟಿ ಮಾಡಿದವರು ಯಾರು ಎಂಬ ವಿಷ್ಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿ ದಂಗಾಗಿದ್ದಾಳೆ.

ವಿದ್ಯಾರ್ಥಿನಿ ಸ್ನೇಹಿತೆಯೇ ನಕಲಿ ಖಾತೆ ಸೃಷ್ಟಿಸಿ ಫೋಟೋ ಹಾಕಿದ್ದಾಳೆ. ಇದಕ್ಕೆ ಸ್ನೇಹಿತೆ ಸೌಂದರ್ಯ ಕಾರಣವಾಗಿದೆ. ಸ್ನೇಹಿತೆ ಸುಂದರವಾಗಿದ್ದಾಳೆ. ಕಾಲೇಜು, ಕಾಲೋನಿಯಲ್ಲಿ ಸ್ನೇಹಿತೆಯನ್ನೇ ನೋಡ್ತಾರೆ. ಇದ್ರಿಂದ ಬೇಸರಗೊಂಡು ಹೀಗೆ ಮಾಡಿದ್ದೇನೆಂದಿ ಆರೋಪಿ ಸ್ನೇಹಿತೆ ಹೇಳಿದ್ದಾಳೆ.

ಪೀಡಿತೆ ಗೆಳತಿ ಸೈಬರ್ ಪೊಲೀಸ್ ಗೆ ದೂರು ನೀಡಿದ್ದಳು. ವಿಚಾರಣೆ ವೇಳೆ ಆಕೆ ಸ್ನೇಹಿತೆಯದ್ದೇ ಈ ಕೆಲಸ ಎಂಬುದು ಗೊತ್ತಾಗಿದೆ. ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಜಾಮೀನಿನ ಮೇಲೆ ಆರೋಪಿ ಸ್ನೇಹಿತೆಯನ್ನು ಬಿಡುಗಡೆ ಮಾಡಿದ್ದಾರೆ.

ನಿರ್ಭಯಾ ಅಪರಾಧಿ ಅಕ್ಷಯ್ ಅರ್ಜಿ ಸುಪ್ರೀಂನಲ್ಲಿ ವಜಾ

Posted: 30 Jan 2020 01:10 AM PST

निर्भया केस : दोषी अक्षय की याचिका भी सुप्रीम कोर्ट ने की खारिज

ನಿರ್ಭಯಾ ಅತ್ಯಾಚಾರಿಗಳು ಗಲ್ಲಿಗೇರುವುದನ್ನು ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ವಕೀಲರು ಒಂದಾದ್ಮೇಲೆ ಒಂದರಂತೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸುತ್ತಿದ್ದಾರೆ. ಆದ್ರೆ ಯಾವುದೂ ಪ್ರಯೋಜನಕ್ಕೆ ಬರ್ತಿಲ್ಲ. ಅಪರಾಧಿ ಅಕ್ಷಯ್ ಕುಮಾರ್ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ನಿರ್ಭಯಾ ಅಪರಾಧಿಗಳಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಇದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ಅಕ್ಷಯ್ ಕುಮಾರ್ ಪರ ವಕೀಲರು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಗುರುವಾರ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿ ವಜಾಗೊಳಿಸಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಸಾರ್ವಜನಿಕರ ಒತ್ತಡ ಮತ್ತು ಸಾರ್ವಜನಿಕ ಅಭಿಪ್ರಾಯದಿಂದಾಗಿ ನ್ಯಾಯಾಲಯಗಳು ಅಪರಾಧಿಗಳಿಗೆ ಮರಣದಂಡನೆ ವಿಧಿಸುತ್ತಿವೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಈ ಪ್ರಕರಣದ ಇತರ ಇಬ್ಬರು ಅಪರಾಧಿಗಳಾದ ವಿನಯ್ ಕುಮಾರ್ ಶರ್ಮಾ ಮತ್ತು ಮುಖೇಶ್ ಕುಮಾರ್ ಸಿಂಗ್  ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಈಗಾಗಲೇ ವಜಾಗೊಳಿಸಿದೆ. ವಿನಯ್ ರಾಷ್ಟ್ರಪತಿ ಮುಂದೆ ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದಾನೆ. ನಾಲ್ಕನೇ ಅಪರಾಧಿ ಪವನ್ ಗುಪ್ತಾಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಅವಕಾಶವಿದೆ.

ಮೀನುಗಾರರ ಬಲೆಗೆ ಬಿದ್ದಿದ್ದ ಅಪರೂಪದ ಶಾರ್ಕ್ ಮತ್ತೆ ಸಮುದ್ರ ಸೇರಿತು…!

Posted: 30 Jan 2020 12:56 AM PST

 ಕೇರಳ: ಮೀನುಗಾರರ ತಂಡವೊಂದು ಬಲೆ ಬೀಸಿದಾಗ ಭರ್ಜರಿ ಬೇಟೆ ಸಿಕ್ಕಿತ್ತು. ಬಳಿಕ ನೋಡಿದರೆ ಅದು ಅಳಿವಿನಂಚಿನಲ್ಲಿ ಇರುವ ವೇಲ್ ಶಾರ್ಕ್ ಆಗಿತ್ತು.

ಇದನ್ನು ಗಮನಿಸಿದ ತಂಡ ಕೊನೆಗೆ ಈ ಪ್ರಭೇದವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪುನಃ ಸಮುದ್ರಕ್ಕೆ ಬಿಟ್ಟಿದ್ದಾರೆ. ಇವರ ಮಾನವೀಯ ಗುಣವುಳ್ಳ ಈ ವಿಡಿಯೋ ಈಗ ವೈರಲ್ ಆಗಿದೆ.

ಕೇರಳದ ಪುಥಿಯಪ್ಪ ಮೀನುಗಾರಿಕಾ ಬಂದರಿನಲ್ಲಿ ಈ ಘಟನೆ ನಡೆದಿದೆ. ವೇಲ್ ಶಾರ್ಕ್ ಎಂದರೆ ಶಾರ್ಕ್ ಪ್ರಭೇದದಲ್ಲಿ ಅತಿ ದೊಡ್ಡದಾಗಿದೆ. ಈಗ ಮೀನುಗಾರರ ಬಲೆಗೆ ಸಿಲುಕಿ ಅಳಿವಿನಂಚಿಗೆ ಬಂದಿದೆ. ಇದೇ ರೀತಿ ಮೀನುಗಾರಿಕೆ ನಡೆಸುವಾಗ ಈ ತಂಡಕ್ಕೆ ಈ ಶಾರ್ಕ್ ದೊರಕಿತ್ತು.

‍ಆದರೆ ತಾವು ಹಿಡಿದಿದ್ದು ವೇಲ್ ಶಾರ್ಕ್ ಎಂದು ತಿಳಿದ ಕೂಡಲೇ ಈ ಮೀನುಗಾರರು ಅದರ ಉಳಿವಿನ ಬಗ್ಗೆ ಚಿಂತಿಸಿದ್ದಾರೆ. ಹೀಗಾಗಿ ಪುನಃ ಅದನ್ನು ನೀರಿಗೆ ಬಿಡಲು ಯತ್ನಿಸಿದ್ದಾರೆ. ಅದರ ಬಾಲಕ್ಕೆ ಹಗ್ಗ ಸಿಲುಕಿ ಹೋಗಲು ಒದ್ದಾಡುತ್ತಿತ್ತು. ಕೊನೆಗೆ ಪುನಃ ಅದನ್ನು ಹಗ್ಗದಿಂದ ಕಟ್ಟಿ ಸುರಕ್ಷಿತವಾಗಿ ನೀರಿಗೆ ಬಿಡಲಾಯಿತು. ಇವರ ಈ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

No comments:

Post a Comment

Gameforumer QR Scan

Gameforumer QR Scan
Gameforumer QR Scan