Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Tuesday, January 28, 2020

Kannada News | Karnataka News | India News

Kannada News | Karnataka News | India News


ಗುಂಡನ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್: ಹೆಚ್ಚಾಗ್ತಿದೆ ಥಿಯೇಟರ್ ಸಂಖ್ಯೆ

Posted: 28 Jan 2020 07:28 AM PST

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಅಭಿನಯದ ನಾನು ಮತ್ತು ಗುಂಡ ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕ ಹಿನ್ನೆಲೆಯಲ್ಲಿ ಥಿಯೇಟರ್​ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಾಗಿದೆ.

ಇದೇ ಶುಕ್ರವಾರದಿಂದ ಬೆಂಗಳೂರಿನ ಕೆ.ಜಿ.ರೋಡಿನ ಅನುಪಮ ಥಿಯೇಟರ್​ನಲ್ಲಿ ನಾನು ಮತ್ತು ಗುಂಡ ಚಿತ್ರ ಪ್ರದರ್ಶನಗೊಳ್ಳಲಿದೆ. ಜೊತೆಗೆ ರಾಜ್ಯಾಂದ್ಯಂತ ಥಿಯೇಟರ್ ಸಂಖ್ಯೆ ಹೆಚ್ಚಿಸಲಾಗಿದೆ. ಮಲ್ಟಿಫೆಕ್ಸ್’ನಲ್ಲೂ ಶೋ ಡಬ್ಬಲ್ ಆಗಿದೆ. ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ವ್ಯಕ್ತವಾಗಿರೋ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಚಿತ್ರಮಂದಿರ ಮಾಲೀಕರು ಹಾಗೂ ಚಿತ್ರ ಪ್ರದರ್ಶಕರು ಖುದ್ದಾಗಿ ಮುಂದೆ ಬಂದು ನಾನು ಮತ್ತು ಗುಂಡ ಚಿತ್ರ ಪ್ರದರ್ಶಿಸಲು ಮುಂದಾಗಿದ್ದಾರೆ.

ಒಳ್ಳೆಯ ‌ಸಿನಿಮಾಗಳನ್ನ‌ ಕನ್ನಡಿಗರು‌  ಕೈಬಿಡುವುದಿಲ್ಲ ಎಂಬುದಕ್ಕೆ ನಾನು ಮತ್ತು ಗುಂಡ ಚಿತ್ರ ಉತ್ತಮ ನಿದರ್ಶನ.

ವಾಹನ ನೋಂದಣಿಗೆ ಒಂದೇ ತೆರಿಗೆ ಜಾರಿ

Posted: 28 Jan 2020 06:12 AM PST

ಕೇಂದ್ರ ಸರ್ಕಾರ ಒನ್ ನೇಷನ್ ಒನ್ ಟ್ಯಾಕ್ಸ್ ಜಾರಿಗೆ ತರಲು ಮುಂದಾಗಿದ್ದು, ರಾಜ್ಯ ಸರ್ಕಾರ ಮುಂದಿನ ಅಧಿವೇಶನದಲ್ಲಿ ಕಾನೂನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬೇರೆ ಬೇರೆ ರಾಜ್ಯಗಳಲ್ಲಿ ದುಬಾರಿ ಬೆಲೆ ವಾಹನ ನೋಂದಣಿ ಮಾಡಿಸಿ ರಾಜ್ಯಕ್ಕೆ ತರಲಾಗುತ್ತಿದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಒಂದೇ ರೀತಿಯ ತೆರಿಗೆ ಪದ್ಧತಿ ಜಾರಿಗೊಳಿಸಲು ಕ್ರಮ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕಾನೂನು ರೂಪಿಸಲಿದ್ದು, ವಿಧಾನ ಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯ ಸರ್ಕಾರ ಶೇಕಡ 16, 18, 20 ಸ್ಲ್ಯಾಬ್ ಗಳಲ್ಲಿ ತೆರಿಗೆ ವಿಧಿಸುತ್ತದೆ. ಕೇಂದ್ರ ಸರ್ಕಾರದ ಶೇಕಡ 8, 10, 12 ರಷ್ಟು ತೆರಿಗೆ ವಿಧಿಸುತ್ತದೆ. ಹೀಗಾಗಿ ರಾಜ್ಯಕ್ಕೆ ಒಂದು ದೇಶ ಒಂದು ತೆರಿಗೆ ಪದ್ಧತಿಯಿಂದ ಸುಮಾರು 1000 ಕೋಟಿ ರೂ. ನಷ್ಟು ಕೊರತೆ ಆಗಬಹುದೆಂದು ಅಂದಾಜು ಮಾಡಲಾಗಿದೆ. ಇದಕ್ಕೆ ಪರಿಹಾರ ಮಾರ್ಗಗಳ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

ಬಿಗ್ ಬ್ರೇಕಿಂಗ್ ನ್ಯೂಸ್: ಬಂಡೀಪುರ ಕಾಡಲ್ಲಿ ಶೂಟಿಂಗ್ ವೇಳೆಯಲ್ಲೇ ರಜನಿಕಾಂತ್ ಗೆ ಗಾಯ

Posted: 28 Jan 2020 05:41 AM PST

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯದ ವ್ಯಾಪ್ತಿಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆದಿದೆ. ದಿಢೀರ್ ಶೂಟಿಂಗ್ ಸ್ಥಗಿತಗೊಳಿಸಿದ ರಜನಿಕಾಂತ್ ಚೆನ್ನೈಗೆ ವಾಪಸಾಗಿದ್ದಾರೆ.

ಸಾಕ್ಷ್ಯ ಚಿತ್ರದ ಶೂಟಿಂಗ್ ವೇಳೆ ನಟ ರಜನಿಕಾಂತ್ ಅವರಿಗೆ ಗಾಯವಾಗಿದ್ದು ಶೂಟಿಂಗ್ ಮೊಟಕುಗೊಳಿಸಿ ವಾಪಸ್ ತೆರಳಿದ್ದಾರೆ. ಚಮನಹಳ್ಳಿಯ ಸಮೀಪ ಸಾಕ್ಷಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಗ್ರಾಮ ಇದಾಗಿದೆ. ಶೂಟಿಂಗ್ ವೇಳೆ ಗಾಯಗೊಂಡ ರಜನಿಕಾಂತ್ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ.

ವನ್ಯಜೀವಿ ಸಾಕ್ಷ್ಯಚಿತ್ರದ ಶೂಟಿಂಗ್ ಗಾಗಿ ನಿನ್ನೆ ಚೆನ್ನೈನಿಂದ ಆಗಮಿಸಿದ್ದ ಅವರು ಬಂಡೀಪುರದ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು. ಬಾಲಿವುಡ್ ನಟ ಅಕ್ಷಯ್ ಕುಮಾರ್, ಖಾಸಗಿ ವಾಹಿನಿಯ ಗ್ರಿಲ್ ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಆದರೆ, ಗಾಯಗೊಂಡ ರಜನಿ ವಾಪಸ್ ತೆರಳಿದ್ದಾರೆ.

ಖ್ಯಾತ ನೃತ್ಯ ನಿರ್ದೇಶಕನಿಂದ ಲೈಂಗಿಕ ಕಿರುಕುಳ ಆರೋಪ: ಮಹಿಳೆ ದೂರು

Posted: 28 Jan 2020 05:27 AM PST

'ಪೈಲ್ವಾನ್' ಮತ್ತು 'ಕೆಜಿಎಫ್' ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದ ಬಾಲಿವುಡ್ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

33 ವರ್ಷದ ಮಹಿಳೆ ಗಣೇಶ್ ಆಚಾರ್ಯ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿದ್ದು, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಗಣೇಶ್ ಆಚಾರ್ಯ ಬಳಿ ಸಹಾಯಕಿ ಕೋರಿಯೋಗ್ರಾಫರ್ ಆಗಿರುವ ಸಂತ್ರಸ್ತೆಗೆ ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯ ಮಾಡಲಾಗಿದೆ.

ಮುಂಬೈನ ಅಂಧೇರಿಯಲ್ಲಿ ಭಾನುವಾರ ನಡೆದ ಇಂಡಿಯನ್ ಫಿಲಂ ಟೆಲಿವಿಷನ್ ಕೊರಿಯೋಗ್ರಾಫರ್ಸ್ ಕಾರ್ಯಕ್ರಮದಲ್ಲಿ ಗಣೇಶ್ ಆಚಾರ್ಯ ಹಾಗೂ ಇಬ್ಬರು ಮಹಿಳೆಯರು ಹಲ್ಲೆ ಮಾಡಿರುವುದಾಗಿ ಸಂತ್ರಸ್ತೆ ದೂರಿದ್ದಾರೆ. ಗಣೇಶ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಶ್ಲೀಲ ವಿಡಿಯೋ ನೋಡುವಂತೆ ಒತ್ತಾಯ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಸಹೋದರನೊಂದಿಗೆ ಸೇರಿ ಪತ್ನಿಯಿಂದಲೇ ಘೋರ ಕೃತ್ಯ

Posted: 28 Jan 2020 05:19 AM PST

ಚಾಮರಾಜನಗರ: ಸಹೋದರ ಮತ್ತು ಆತನ ಸಹಚರರೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಕೊಳ್ಳೇಗಾಲದ ಮುಡಿಗುಂಡಂ ನಿವಾಸಿ ಸುಬ್ರಹ್ಮಣ್ಯ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಮೃತನ ಪತ್ನಿ ರಶ್ಮಿ, ಆಕೆಯ ಸಹೋದರ ರಾಕೇಶ್ ಮತ್ತು ಆತನ ಸಹಚರರಾದ ಪ್ರದೀಪ್, ಮತ್ತೊಬ್ಬ ರಾಕೇಶ್ ವಿರುದ್ಧ ಪ್ರಕರಣ ದಾಖಲಾಗಿದೆ,

ರಶ್ಮಿಗೆ ಸುಬ್ರಹ್ಮಣ್ಯ ಎರಡನೇ ಪತಿಯಾಗಿದ್ದಾನೆ. ಈ ಮೊದಲೇ ಮದುವೆಯಾಗಿದ್ದ ರಶ್ಮಿಗೆ 11 ವರ್ಷದ ಮಗ ಇದ್ದು, ಮೊದಲ ಪತಿಯಿಂದ ದೂರವಾಗಿದ್ದಳು. ಬಳಿಕ ಸುಬ್ರಮಣ್ಯನನ್ನು ಎರಡನೇ ಮದುವೆಯಾಗಿದ್ದ ರಶ್ಮಿ ಮತ್ತೆ ಮೊದಲ ಗಂಡನೊಂದಿಗೂ ಕೆಲ ಕಾಲ ವಾಸವಾಗಿದ್ದಳೆನ್ನಲಾಗಿದೆ.

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರನೊಂದಿಗೆ ಸೇರಿ ಸುಬ್ರಹ್ಮಣ್ಯನನ್ನು ಅಪಹರಿಸಿದ ರಶ್ಮಿ 5 ದಿನಗಳ ಕಾಲ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುಬ್ರಹ್ಮಣ್ಯನನ್ನು ಮನೆಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಕೊಳ್ಳೇಗಾಲ ಆಸ್ಪತ್ರೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದ ಸುಬ್ರಹ್ಮಣ್ಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾವಿಗೂ ಮುನ್ನ ಸುಬ್ರಮಣ್ಯ ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರಶ್ಮಿಯನ್ನು ಬಂಧಿಸಿದ್ದು ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ.

ಸಚಿವ ಸ್ಥಾನಕ್ಕಾಗಿ ಮಿತ್ರಮಂಡಳಿಯಲ್ಲಿ ಒಡಕು: ದೂರ ಉಳಿದ ವಿಶ್ವನಾಥ್

Posted: 28 Jan 2020 05:02 AM PST

ಸೋತವರಿಗೆ ಸಚಿವ ಸ್ಥಾನ ನೀಡುವ ವಿಚಾರವೀಗ ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೆಚ್. ವಿಶ್ವನಾಥ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸಿಎಂ ಸಲಹೆ ನೀಡಿದ್ದರೂ, ಅವರು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸೋತ ಅವರಿಗೆ ಸಚಿವ ಸ್ಥಾನ ಸದ್ಯಕ್ಕೆ ನೀಡುವ ಸಾಧ್ಯತೆ ಇಲ್ಲವೆನ್ನಲಾಗಿದೆ.

ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಡಾ.ಕೆ. ಸುಧಾಕರ್ ಅವರೂ ಇದೇ ಮಾತುಗಳನ್ನಾಡಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ, 11  ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದು. ಹೆಚ್. ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಅವರು ಹಿರಿಯರಿದ್ದು, ಅವರಿಗೂ ಸಚಿವ ಸ್ಥಾನ ನೀಡಬೇಕೆಂದು ಹೇಳಿದ್ದೇವೆ. ಚುನಾವಣೆಗೂ ಮೊದಲೇ ಸಿಎಂ ವಿಶ್ವನಾಥ್ ಜೊತೆಗೆ ಮಾತನಾಡಿದ್ದರು ಎಂದು ತಿಳಿಸಿದ್ದಾರೆ.

ಇನ್ನು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲವು ಶಾಸಕರು ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿದ್ದು, ಮೈಸೂರಿನಲ್ಲಿ ಇದ್ದರೂ ಮಿತ್ರಮಂಡಳಿಯನ್ನು ವಿಶ್ವನಾಥ್ ಭೇಟಿಯಾಗಿಲ್ಲ. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಇಲ್ಲ ಎಂದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದು, ಅವರ ಮಾತಿನಿಂದ ಬೇಸರಗೊಂಡ ವಿಶ್ವನಾಥ್ ಮಿತ್ರ ಮಂಡಳಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಚಿವ ಸ್ಥಾನಕ್ಕಾಗಿ ಮಿತ್ರ ಮಂಡಳಿಯಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ.

ಜಾಲತಾಣಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವಹೇಳನ: ಜೆಡಿಎಸ್ ದೂರು

Posted: 28 Jan 2020 04:42 AM PST

ಮಂಗಳೂರು: ಮಂಗಳೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಜೆಡಿಎಸ್ ಯುವ ಘಟಕದಿಂದ ಪೊಲೀಸರಿಗೆ ದೂರು ನೀಡಲಾಗಿದೆ.

ಮಿಣಿ ಮಿಣಿ ಪೌಡರ್ ಹೇಳಿಕೆ ಆಧರಿಸಿ ಕುಮಾರಸ್ವಾಮಿ ಅವರನ್ನು ಜಾಲತಾಣಗಳಲ್ಲಿ ಅವಹೇಳನ ಮಾಡಲಾಗಿದ್ದು ಇದಕ್ಕೆ ಹೆಚ್.ಡಿ.ಕೆ. ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಅವಹೇಳನ ಮಾಡಿದ್ದಕ್ಕೆ ಗರಂ ಆಗಿರುವ ಜೆಡಿಎಸ್ ಯುವ ಘಟಕ ದೂರು ನೀಡಿದೆ. ಅವಹೇಳನ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಲಾಗಿದೆ.

‘ಸೋತವರಿಗೆ ಸಚಿವ ಸ್ಥಾನವಿಲ್ಲ ಎನ್ನುವುದು ನನಗೆ ಅನ್ವಯಿಸಲ್ಲ’

Posted: 28 Jan 2020 04:41 AM PST

ಸೋತವರಿಗೆ ಸಚಿವ ಸ್ಥಾನ ಇಲ್ಲ ಎನ್ನುವುದು ನನಗೆ ಅನ್ವಯವಾಗುವುದಿಲ್ಲ ಎಂದು ಆರ್. ಶಂಕರ್ ಹೇಳಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಪಕ್ಷಕ್ಕೆ ಬಂದಾಗ ನನ್ನನ್ನು ಮಂತ್ರಿ ಮಾಡುವುದಾಗಿ ಹೇಳಿದ್ದಾರೆ. ಚುನಾವಣೆಗೆ ನಿಲ್ಲದಂತೆ ಸಲಹೆ ಕೊಟ್ಟಿದ್ದರು. ಅದರಂತೆ ನಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಅವರ ಮಾತಿಗೆ ಬದ್ಧವಾಗಿ ನಡೆದುಕೊಂಡಿದ್ದೇನೆ. ಈಗಲೂ ಅವರ ಮಾತನ್ನು ಕೇಳುತ್ತೇನೆ.

ನನ್ನನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದರು. ಸಿಎಂ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದು ಶಂಕರ್ ಹೇಳಿದ್ದಾರೆ.

ಹೆಚ್. ವಿಶ್ವನಾಥ್ ಗೆ ಸಚಿವ ಸ್ಥಾನ: ರಮೇಶ್ ಜಾರಕಿಹೊಳಿ ಹೇಳಿದ್ದೇನು ಗೊತ್ತಾ…?

Posted: 28 Jan 2020 04:26 AM PST

ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಹಲವು ಶಾಸಕರು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಶಾಸಕರು ಶ್ರೀಕಂಠೇಶ್ವರನ ದರ್ಶನ ಪಡೆದಿದ್ದಾರೆ.

ಆರ್. ಶಂಕರ್, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಮಾಜಿ ಶಾಸಕ ನಾಗರಾಜು ಮೊದಲಾದವರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ನಂತರದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ದೇವರ ಆಶೀರ್ವಾದದಿಂದ ನಾವು ಗೆದ್ದು ಬಂದಿದ್ದೇವೆ. ಸಂಪುಟ ವಿಸ್ತರಣೆ ವಾರವಲ್ಲ, ಇನ್ನೊಂದು ತಿಂಗಳಾದರೂ ಸಂತೋಷವೇ? ಅದರ ಬಗ್ಗೆ ಏನು ಹೇಳಲ್ಲ. 11 ಮಂದಿಗೆ ಸಚಿವ ಸ್ಥಾನ ಖಚಿತವಾಗಿದೆ. ಮಾಧ್ಯಮದಲ್ಲಿ ಬಂದ ವರದಿಗಳ ಬಗ್ಗೆ ನನಗೆ ಮಾಹಿತಿಯಿಲ್ಲ. ಎಲ್ಲ ವಿಷಯ ಬಹಿರಂಗಪಡಿಸಲು ಆಗಲ್ಲ ಎಂದು ಹೇಳಿದ್ದಾರೆ.

ಹೆಚ್. ವಿಶ್ವನಾಥ್ ಬಳಿ ಮುಖ್ಯಮಂತ್ರಿ ಮಾತನಾಡಿದ್ದರು. ಅವರು ಸಚಿವರಾಗಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಅವರನ್ನು ಮಂತ್ರಿ ಮಾಡಿದರೆ ಎಲ್ಲರಿಗೂ ಸಂತೋಷವಾಗುತ್ತದೆ. ಪಕ್ಷ, ಸಿದ್ಧಾಂತ ಒಪ್ಪಿ ನಾವೆಲ್ಲರೂ ಬಿಜೆಪಿಗೆ ಬಂದಿದ್ದೇವೆ. ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಸಿಎಂ ಯಡಿಯೂರಪ್ಪ ತೀರ್ಮಾನಕ್ಕೆ ಬದ್ಧನಾಗಿರುತ್ತೇವೆ. 17 ಮಂದಿ ಮಾತ್ರವಲ್ಲ ಎಲ್ಲಾ ಬಿಜೆಪಿ ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದ್ದಾರೆ.

ಫೆನ್ಸ್ ಪೇಂಟರ್‌ನೊಂದಿಗೆ ಆನೆಯ ಚಿನ್ನಾಟದ ವಿಡಿಯೋ ವೈರಲ್

Posted: 28 Jan 2020 04:22 AM PST

ಮರಿ ಆನೆಯೊಂದು ಮಾನವನೊಂದಿಗೆ ಸ್ವಚ್ಛಂದವಾಗಿ ಆಟವಾಡುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ನೆಟ್‌ನಲ್ಲಿ ವೈರಲ್‌ ಆಗುತ್ತಿದೆ.

ತನ್ನ ಕೆಲಸದಲ್ಲಿ ನಿರತನಾಗಿದ್ದ ಫೆನ್ಸ್ ಪೇಂಟರ್‌ನ ‌ಗಮನ ಸೆಳೆಯಲು ಯತ್ನಿಸುತ್ತಿರುವ ಆನೆ ಮರಿ, ಬೇಲಿ ದಾಟಿ ಆತನೊಂದಿಗೆ ಆಟವಾಡಲು ನೋಡುತ್ತಿದೆ.

ಆನೆ ಮರಿಯ ಮೊಗದಲ್ಲಿ ಮೂಡಿರುವ ಸಂತಸದ ಕಳೆಯನ್ನು ವಿಡಿಯೋದಲ್ಲಿ ಕಂಡ ನೆಟ್ಟಿಗರು ಆನಂದಗೊಂಡಿದ್ದಾರೆ.

ಈ ವಿಡಿಯೋವನ್ನು ರಾಜಕೀಯ ಮುಖಂಡ ಪರಿಮಳ್ ನಾಥ್ವಾನಿ ಹಂಚಿಕೊಂಡಿದ್ದಾರೆ. ಮಾನವ ಹಾಗೂ ಪ್ರಾಣಿಗಳು ಸಹಬಾಳ್ವೆಯಿಂದ ಬದುಕಬಹುದು ಎಂಬುದಕ್ಕೆ ಈ ವಿಡಿಯೋ ಒಂದು ಅತ್ಯುತ್ತಮ ನಿದರ್ಶನವಾಗಿದೆ ಎಂದು ನಾಥ್ವಾನಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.

 

2400 ಮಂದಿಯ ಪ್ಲಾಂಕ್ ಚಾಲೆಂಜ್: ಗಿನ್ನೆಸ್ ರೆಕಾರ್ಡ್

Posted: 28 Jan 2020 04:07 AM PST

ಮುಂಬೈ: 71ನೇ ಗಣರಾಜ್ಯೋತ್ಸವ ಮತ್ತೊಂದು ವಿಶ್ವ ದಾಖಲೆಗೆ ಸಾಕ್ಷಿಯಾಗಿದೆ.

ಮುಂಬೈನ ಎಂಎಂಆರ್ ಡಿಎ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 2400 ಜನರು ಪ್ಲಾಂಕ್ ಚಾಲೆಂಜ್ ನಲ್ಲಿ ಭಾಗವಹಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದು, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಈ ಸಾಧನೆ ದಾಖಲಾಗಿದೆ.

ಬಜಾಜ್ ಅಲಯನ್ಸ್ ಲೈಫ್ ಪ್ಲಾಂಕಥಾನ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಪ್ರಮಾಣದ ಜನರು ಏಕಕಾಲದಲ್ಲಿ ಅಬ್ಡೊಮಿನಲ್ ಪ್ಲಾಂಕ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಕಳೆದ ವರ್ಷ ಪುಣೆಯಲ್ಲಿ ನಡೆದಿದ್ದ ಇದೇ ಕಾರ್ಯಕ್ರಮದಲ್ಲಿ 1353 ಜನರು ಒಟ್ಟಿಗೆ 60 ಸೆಕೆಂಡ್ ಗಳ ಕಾಲ ಅಬ್ಡೊಮಿನಲ್ ಪ್ಲಾಂಕ್ ಆಯಾಮದಲ್ಲಿ ಪ್ರದರ್ಶನ ಮಾಡಿ ದಾಖಲೆಯನ್ನು ನಿರ್ಮಿಸಿದ್ದರು. ಈಗ ಆ ದಾಖಲೆಯನ್ನು ಮುರಿಯಲಾಗಿದೆ.

ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್, ಕ್ರೀಡಾಪಟುಗಳಾದ ಮಿಥಾಲಿ ರಾಜ್, ಮೇರಿಕೋಮ್, ದ್ಯುತಿ ಚಂದ್, ಸುನಿಲ್ ಚೆಟ್ರಿ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಇಂಥ ಒಂದು ಅಪರೂಪದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನಗೆ ಅತೀವ ಆನಂದವನ್ನು ಉಂಟು ಮಾಡಿದೆ ಎಂದು ನಟ ಅನಿಲ್ ಕಪೂರ್ ಪ್ರತಿಕ್ರಿಯಿಸಿದ್ದಾರೆ.

ಕಾಲಿಲ್ಲದ ವ್ಯಕ್ತಿಯ ಸಾಹಸಕ್ಕೆ ಬೆರಗಾದ ಆನಂದ್ ಮಹೀಂದ್ರಾ

Posted: 28 Jan 2020 03:27 AM PST

ಮಹಿಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹಿಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಶಿಷ್ಟ ವಿಡಿಯೋ, ಫೋಟೋ ಹಾಕುತ್ತಾರೆ. ಇದೀಗ ಮತ್ತೊಂದು ಇದೇ ರೀತಿಯ ವಿಡಿಯೋವನ್ನು ಹಾಕಿದ್ದಾರೆ.

ಹೌದು, ಗಣರಾಜ್ಯೋತ್ಸವದ ಮರುದಿನ ಹಾಕಿರುವ ವಿಡಿಯೋದಲ್ಲಿ ಕಾಲಿಲ್ಲದ ಯುವಕನೊಬ್ಬ ತ್ರಿವರ್ಣ ಧ್ವಜದಂತೆ ಕಾಣುವ ಶರ್ಟ್ ಧರಿಸಿ, ತೊಡೆಯ ಸಹಾಯದಿಂದ ಕಂಬವನ್ನು ಏರಿದ್ದಾನೆ.

ಬಳಿಕ ಧ್ವಜ ಕಾಣುವ ರೀತಿ ಆತ ಬಾಗಿ ನಿಂತಿದ್ದಾನೆ. ಈ ಮೂಲಕ ತನ್ನ ದೇಶಭಕ್ತಿಯನ್ನು ತೋರಿಸಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು,‌ ವ್ಯಕ್ತಿಯ ಪರಿಶ್ರಮವನ್ನು ಕೊಂಡಾಡಿದ್ದಾರೆ.

ಇನ್ನು ಆನಂದ್ ಮಹಿಂದ್ರಾ ಈ ವಿಡಿಯೋ ಹಾಕಿ, ಮೊದಲೇ ಸಿಕ್ಕಿದ್ದರೆ ಗಣರಾಜ್ಯೋತ್ಸವದ ದಿನವೇ ಹಾಕುತ್ತಿದ್ದೆ. ಆದರೆ ಸೋಮವಾರ ಬೆಳಗ್ಗೆ ಈ ವಿಡಿಯೋ ಸಿಕ್ಕಿದೆ. ಒಳ್ಳೆಯ ವಿಷಯ ಶೇರ್ ಮಾಡಲು ಯಾವುದು ತಡವಲ್ಲ ಎನ್ನುವ ಕಾರಣಕ್ಕೆ ಮಾಡುತ್ತಿದ್ದೇನೆ ಎಂದಿದ್ದಾರೆ.

 

ಅಕ್ಷಯ್ ಕುಮಾರ್‌ ಗೆ ಅಮೀರ್‌ ಧನ್ಯವಾದ ಹೇಳಿದ್ದೇಕೆ ಗೊತ್ತಾ…?

Posted: 28 Jan 2020 03:24 AM PST

ತಮ್ಮ ಲಾಲ್‌ಸಿಂಗ್ ಛಡ್ಡಾ ಸಿನಿಮಾದ ರಿಲೀಸ್ ದಿನದಂದೇ ಬಚ್ಚನ್ ಪಾಂಡೆ ಸಿನಿಮಾ ಬಿಡುಗಡೆ ಮಾಡದಂತೆ ತಾವು ಮಾಡಿದ ಮನವಿಗೆ ಸ್ಪಂದಿಸಿದ ಅಕ್ಷಯ್‌ ಕುಮಾರ್‌ಗೆ ಅಮೀರ್‌ಖಾನ್ ಧನ್ಯವಾದ ಹೇಳಿದ್ದಾರೆ.

ಇದೀಗ ಹೊಸ ರಿಲೀಸ್ ದಿನಾಂಕವನ್ನು ಘೋಷಿಸಿರುವ ಅಕ್ಷಯ್ ಕುಮಾರ್‌, ಬಚ್ಚನ್ ಪಾಂಡೆ ಜನವರಿ 21, 2021ಕ್ಕೆಕ ತೆರೆ ಮೇಲೆ ಬರಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.

ಅಕ್ಷಯ್‌ರ ಈ ಗೆಸ್ಚರ್‌ಗೆ ಧನ್ಯವಾದ ಸಲ್ಲಿಸಿರುವ ಅಮೀರ್‌, “ಕೆಲವೊಮ್ಮೆ ಒಂದೇ ಒಂದು ಸಂವಹನದಿಂದ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ. ನನ್ನ ಕೋರಿಕೆ ಮೇರೆಗೆ ತಮ್ಮ ಬಚ್ಚನ್ ಪಾಂಡೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದ ಸ್ನೇಹಿತರಾದ ಅಕ್ಷಯ್ ಕುಮಾರ್‌ ಹಾಗೂ ಸಾಜಿದ್ ನಡಿಯಾದ್‌ವಾಲಾಗೆ ಧನ್ಯವಾದಗಳು. ಅವರ ಸಿನಿಮಾಗೆ ಆಲ್ ದಿ ವೆರಿ ಬೆಸ್ಟ್. ನಾನು ಆ ಸಿನಿಮಾವನ್ನು ಎದುರು ನೋಡುತ್ತಿದ್ದೇನೆ” ಎಂದು ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

82 ರ ಹರೆಯದಲ್ಲೂ ಬಡವರ ಸೇವೆಯಲ್ಲಿ ನಿರತವಾಗಿರುವ ವೈದ್ಯರಿಗೆ ಪದ್ಮಶ್ರೀ ಪುರಸ್ಕಾರ

Posted: 28 Jan 2020 03:21 AM PST

ಕಳೆದ ಕೆಲ ವರ್ಷಗಳಿಂದ ನಡೆದುಕೊಂಡು ಬಂದ ಪರಿಪಾಠದಂತೆ ಈ ಬಾರಿಯೂ ಸಹ ಪದ್ಮ ಪುರಸ್ಕಾರಗಳನ್ನು ಎಲೆ ಮರೆ ಸಾಧಕರಿಗೆ ನೀಡಲಾಗುತ್ತಿದೆ.

ಈ ಬಾರಿ 118 ಮಂದಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಗೌರವ ಸಂದಿದೆ.

ಇವರಲ್ಲಿ ಒಬ್ಬರು, 82 ವರ್ಷದ ಯೋಗಿ ಆರನ್. ಡೆಹರಾಡೂನ್‌ನ ಮಾಲ್ಸಿಯಲ್ಲಿ ಪ್ಲಾಸ್ಟಿಕ್‌ ಸರ್ಜನ್ ಆಗಿರುವ ಇವರು ಕಳೆದ 25 ವರ್ಷಗಳಿಂದಲೂ ಬಡವರಿಗೆ, ಸುಟ್ಟ ಮುಖ‌ಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ.

2006ರಿಂದಲೂ ಇವರು ಎರಡು ವಾರಗಳ ಮಟ್ಟಿಗೆ ವರ್ಷಕ್ಕೆರಡು ಬಾರಿ ಕ್ಯಾಂಪ್‌ಗಳನ್ನು ಆಯೋಜಿಸುತ್ತಾ ಬಂದಿದ್ದು, ಅಲ್ಲಿ ವಿರೂಪಗೊಂಡ ತುಟಿಗಳು, ಕೆನ್ನೆ, ಮೂಗು ಹಾಗೂ ಇತರ ಭಾಗಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ.

ಈ ಸಂದರ್ಭದಲ್ಲಿ ಸುಮಾರು 500 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದ್ದು, ಆರನ್‌ ಅವರಿಗೆ ಅಮೆರಿಕ ಮೂಲದ 15 ವೈದ್ಯರು ನೆರವಾಗಿ ನಿಲ್ಲುತ್ತಿದ್ದಾರೆ. ಈ ಶಸ್ತ್ರಚಿಕಿತ್ಸೆ ಪಡೆಯಲು ಸುಮಾರು 10,000 ರೋಗಿಗಳು ವೇಟಿಂಗ್ ಲಿಸ್ಟ್‌ ನಲ್ಲಿದ್ದಾರೆ.

 

ಪ್ರಿಯಾಂಕಾ ಚೋಪ್ರಾ ʼಹಾಟ್ ಡ್ರೆಸ್ʼ ಟ್ರೋಲ್ ಆಗುತ್ತಿರುವುದೇಕೆ ಗೊತ್ತಾ…?

Posted: 28 Jan 2020 02:53 AM PST

ಮುಂಬೈ: ಸದಾ ಒಂದಿಲ್ಲೊಂದು ಟ್ರೋಲ್ ಗಳಿಂದ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಗ್ರಾಮಿ ಪ್ರಶಸ್ತಿಯಲ್ಲಿ ಅವರು ಹಾಕಿರುವ ಅರ್ಧ ಎದೆ ಕಾಣುವ ಹಾಟ್ ಡ್ರೆಸ್ ಈಗ ಟೀಕೆಗೆ ಒಳಗಾಗಿದೆ. ಇದನ್ನು ಸರಿಯಾಗಿ 20 ವರ್ಷಗಳ ಹಿಂದೆ ಇದೇ ಕಾರ್ಯಕ್ರಮದಲ್ಲಿ ಅಮೆರಿಕದ ಖ್ಯಾತ ನಟಿ, ಗಾಯಕಿ ಜೆನ್ನಿಫರ್ ಲೊಪೆಜ್ ಈ ಮಾದರಿಯ ವಸ್ತ್ರವನ್ನು ಧರಿಸಿದ್ದರು.

ಈಗ ಅದನ್ನೇ ಪ್ರಿಯಾಂಕಾ ಚೋಪ್ರಾ ನಕಲು ಮಾಡಿದ್ದಾರೆಯೇ ಎಂಬ ಶಂಕೆ ನೆಟ್ಟಿಗರಲ್ಲಿ ಬಂದಿದೆ.

ಅಂದು ಜೆನ್ನಿಫರ್ ಧರಿಸಿದ್ದ ಉಡುಗೆ ಹಸಿರು ಬಣ್ಣದ್ದಾಗಿದ್ದು, ಕುತ್ತಿಗೆಯಿಂದ ಅರ್ಧ ಎದೆ ಭಾಗ ಬಳಸಿ ಹೊಕ್ಕಳಿನ ವರೆಗೆ ಕಾಣುವ ಹಾಗಿತ್ತು. ಅಲ್ಲದೆ ಕಾಲುಗಳು ಸಹ ನೀಳವಾಗಿ ಕಾಣುವಂತಹ ವಸ್ತ್ರ ಅದಾಗಿತ್ತು.

ಈಗ ಪ್ರಿಯಾಂಕಾ ಚೋಪ್ರಾ ಧರಿಸಿರುವ ಉಡುಗೆ ಬಿಳಿ ಬಣ್ಣದ್ದಾಗಿದ್ದು, ಕಾಲುಗಳು ಉಡುಗೆಯಿಂದ ಆವೃತವಾಗಿದ್ದರೂ ಕುತ್ತಿಗೆಯಿಂದ ಅರ್ಧ ಎದೆ ಹಾಗೂ ಹೊಟ್ಟೆಯ ಸ್ವಲ್ಪ ಭಾಗ ಮತ್ತು ಹೊಕ್ಕಳು ತೆರೆದುಕೊಂಡಿವೆ.

ಜೆನ್ನಿಫರ್ ಈ ಹಿಂದೆ ಧರಿಸಿದ್ದ ಉಡುಗೆಗೆ ಈಗ ಪ್ರಿಯಾಂಕಾ ಧರಿಸಿರುವ ಉಡುಗೆ ಹೋಲಿಕೆಯಾಗುವ ಹಿನ್ನೆಲೆಯಲ್ಲಿ ನೆಟ್ಟಿಗರು ಆ ಎರಡೂ ಫೋಟೋಗಳನ್ನು ಅಕ್ಕ ಪಕ್ಕ ಇಟ್ಟು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ ಆ ಉಡುಗೆಯನ್ನು ಪ್ರಿಯಾಂಕಾ ನಕಲು ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಮನಸೋಯಿಚ್ಛೆ ತಿಂದು ಅಸುನೀಗಿದ ವೃದ್ಧೆ

Posted: 28 Jan 2020 02:48 AM PST

ತಿನ್ನುವ ಸ್ಫರ್ಧೆಗಳು ಜಗತ್ತಿನಾದ್ಯಂತ ಸಾಕಷ್ಟು ಜನಪ್ರಿಯವಾಗಿಬಿಟ್ಟಿವೆ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ಭಾರತದಲ್ಲಿ ಮೆಣಸಿನಕಾಯಿ ತಿನ್ನುವ ಸ್ಫರ್ಧೆಯಿಂದ ಹಿಡಿದು ಮುದ್ದೆ ತಿನ್ನುವ ಸ್ಫರ್ಧೆಗಳವರೆಗೆ ಸಾಕಷ್ಟು ರೀತಿಯ ಸ್ಫರ್ಧೆಗಳನ್ನು ಏರ್ಪಡಿಸಲಾಗುತ್ತದೆ.

ಆದರೆ ಕೆಲವೊಮ್ಮೆ ಭರ್ಜರಿಯಾಗಿ ಬ್ಯಾಟಿಂಗ್ ಮಾಡುವ ಭರದಲ್ಲಿ ಜನರು ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನಲ್ಲಿರುವ ಹರ್ವೆ ಬೇನಲ್ಲಿರುವ ಬೀಚ್‌ಹೌಸ್‌ ಹೊಟೇಲ್‌ನಲ್ಲಿ ಲ್ಯಾಮಿಂಗ್ಟನ್‌ ಹಾಗೂ ಪೈಗಳನ್ನು ತಿನ್ನುವ ಸ್ಫರ್ಧೆ ಏರ್ಪಡಿಸಲಾಗಿತ್ತು.

ರುಚಿಕಟ್ಟಾದ ಕೇಕ್‌ಗಳನ್ನು ಮನಬಂದಂತೆ ತಿಂದ 60ರ ಹಿರಿಯ ಜೀವವೊಂದು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

ಕರಗಿದ ಚಾಕೊಲೇಟ್ ಹಾಗೂ ತೆಂಗಿನಕಾಯಿ ತುರಿಯಿಂದ ಮಾಡಲಾದ ಲ್ಯಾಮಿಂಗ್ಟನ್‌ ಆಸ್ಟ್ರೇಲಿಯಾದ ರಾಷ್ಟ್ರೀಯ ಕೇಕ್ ಆಗಿದೆ.

40 ವರ್ಷದ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿದ್ದೇ ತಪ್ಪಾಯ್ತು

Posted: 28 Jan 2020 02:25 AM PST

40 ವರ್ಷದ ವ್ಯಕ್ತಿಯೊಬ್ಬ 18 ವರ್ಷದ ಹುಡುಗಿ ಜೊತೆ ಮದುವೆಯಾಗಲು ಮುಂದಾಗಿದ್ದ. ಇದಕ್ಕೆ ಹುಡುಗಿ ವಿರೋಧ ವ್ಯಕ್ತಪಡಿಸಿದ್ದಳು. ಆದ್ರೆ ಮನೆಯವರು ಹುಡುಗಿ ಕೈ-ಕಾಲು ಕಟ್ಟಿ ಹಲ್ಲೆ ನಡೆಸಿದ್ದಾರೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ತಂದೆ ವಯಸ್ಸಿನ ವ್ಯಕ್ತಿ ಜೊತೆ ಮದುವೆಯಾಗಲು ಹುಡುಗಿ ನಿರಾಕರಿಸಿದ್ದೇ ಇದಕ್ಕೆ ಕಾರಣವಾಗಿದೆ. ಕೈಗಳನ್ನು ಕಟ್ಟಿ ಕುಟುಂಬಸ್ಥರು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಆಕೆ ಕೈಗಳನ್ನು ಬಿಚ್ಚಿದ್ದಾರೆ. ಹುಡುಗಿಗೆ ರಕ್ಷಣೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಡ್ ಬಾಕ್ಸ್ ನಲ್ಲಿ ಮಗನನ್ನು ತುಂಬಿ ಹತ್ಯೆಗೈದ ತಾಯಿ

Posted: 28 Jan 2020 02:19 AM PST

पुलिस मामले की छानबीन कर रही है ( सांकेतिक तस्वीर)

ಚಂಡೀಗಢದಲ್ಲಿ ಬೆಡ್ ಬಾಕ್ಸ್ ನಲ್ಲಿ ಎರಡುವರೆ ವರ್ಷದ ಮಗುವನ್ನು ತುಂಬಿ ಹತ್ಯೆಗೈದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿ ರೂಪಾಳನ್ನು ಪೊಲೀಸರು ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಬಂಧಿಸಿದ್ದಾರೆ. ಶನಿವಾರ ಮಗುವಿನ ಬಾಯಿಗೆ ಬಟ್ಟೆ ಕಟ್ಟಿ ಬೆಡ್ ಬಾಕ್ಸ್ ನಲ್ಲಿ ತುಂಬಿ ತಾಯಿ ಪರಾರಿಯಾಗಿದ್ದಳು.

ಮೂಲತಃ ಬಿಹಾರದವರಾದ ರೂಪಾ ಹಾಗೂ ದಶರಥ ಮದುವೆ ನಂತ್ರ ಚಂಡೀಗಢಕ್ಕೆ ಬಂದಿದ್ದರು. ಶನಿವಾರ ಪತಿ ಕೆಲಸಕ್ಕೆ ಹೋಗಿ ಮನೆಗೆ ಬಂದಾಗ ಮನೆಯಲ್ಲಿ ರೂಪಾ ಇರಲಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ನೀಡಿ ರಾತ್ರಿ ಕಳೆದು ಎಂದಿನಂತೆ ಮರುದಿನ ದಶರಥ ಕೆಲಸಕ್ಕೆ ಹೋಗಿದ್ದ. ಮನೆಗೆ ಬಂದಾಗ ಅಪರಿಚಿತ ನಂಬರ್ ನಿಂದ ಕರೆ ಮಾಡಿದ್ದ ರೂಪಾ ಮಗುವನ್ನು ಬೆಡ್ ಬಾಕ್ಸ್ ನಲ್ಲಿ ಹಾಕಿರುವುದಾಗಿ ಹೇಳಿದ್ದಳು. ದಶರಥ ನೋಡುವ ವೇಳೆಗೆ ಮಗು ಸಾವನ್ನಪ್ಪಿತ್ತು.

ಪೊಲೀಸರು ರೂಪಾಳನ್ನು ಬಂಧಿಸಿದ್ದಾರೆ. ರೂಪಾ 6 ತಿಂಗಳ ಮಗುವನ್ನು ಕೂಡ ಹತ್ಯೆ ಮಾಡಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ. ಕೆಲ ತಿಂಗಳ ಹಿಂದೆ  6 ತಿಂಗಳ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಮಗನ ಹತ್ಯೆಯನ್ನು ತಾಯಿ ಒಪ್ಪಿಕೊಂಡಿದ್ದಾಳೆ. ಕೆಲ ದಿನಗಳ ಹಿಂದೆ ಇಡೀ ಕುಟುಂಬವನ್ನು ನಾಶಮಾಡುವ ಪ್ರಯತ್ನ ನಡೆಸಿದ್ದಳು ಎನ್ನಲಾಗಿದೆ.

ಜೈಲಿನಲ್ಲಿ ಸೆಕ್ಸ್ ಗೆ ಒತ್ತಾಯ..! ನಿರ್ಭಯಾ ಅತ್ಯಾಚಾರಿಯ ಗಂಭೀರ ಆರೋಪ

Posted: 28 Jan 2020 01:50 AM PST

ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮುಖೇಶ್ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ವೇಳೆ ಗಂಭೀರ ಆರೋಪ ಮಾಡಿದ್ದಾನೆ. ಈ ಪ್ರಕರಣದ ಇತರ ಅಪರಾಧಿಗಳ ಜೊತೆ  ತಿಹಾರ್ ಜೈಲಿನಲ್ಲಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲಾಗಿದೆ ಎಂದು ಆರೋಪ ಮಾಡಿದ್ದಾನೆ.

ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದು, ಅದನ್ನು ಪ್ರಶ್ನಿಸಿ ಮುಖೇಶ್ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು. ಮುಖೇಶ್ ಗೆ ಫೆಬ್ರವರಿ ಒಂದರಂದು ಗಲ್ಲು ಶಿಕ್ಷೆಯಾಗಲಿದೆ. ಇದನ್ನು ತಪ್ಪಿಸಿಕೊಳ್ಳಲು ಮುಖೇಶ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾನೆ. ಮುಖೇಶ್ ಗೆ ಅಪರಾಧಿ ಅಕ್ಷಯ್ ಜೊತೆ ಲೈಂಗಿಕ ಸಂಬಂಧ ಬೆಳೆಸಲು ಒತ್ತಡ ಹೇರಲಾಗಿತ್ತು ಎಂದು ಆರೋಪ ಮಾಡಲಾಗಿದೆ.

ಜೈಲಿನಲ್ಲಿ ಅನೇಕ ಬಾರಿ ನನ್ನನ್ನು ಥಳಿಸಿದ್ದಾರೆಂದು ಮುಖೇಶ್ ಆರೋಪ ಮಾಡಿದ್ದಾನೆ. ನಿರ್ಭಯಾ ಪ್ರಕರಣದಲ್ಲಿ 6 ಮಂದಿ ತಪ್ಪಿತಸ್ಥರಾಗಿದ್ದರು. ಅಪರಾಧಿ ರಾಮ್ ಸಿಂಗ್  ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಅಪ್ರಾಪ್ತ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಗೆ ಬಂದಿದ್ದಾನೆ. ಉಳಿದ ನಾಲ್ವರಿಗೆ ಮರಣದಂಡನೆ ವಿಧಿಸಲಾಗಿದೆ.

 

ನಿರಾಶ್ರಿತರೊಂದಿಗೆ ಮದುವೆ ಊಟ ಮಾಡಿದ ನವದಂಪತಿ

Posted: 28 Jan 2020 01:48 AM PST

ಹೊಸ ಜೀವನಕ್ಕೆ ಕಾಲಿಟ್ಟ ಟರ್ಕಿಯ ನೂತನ ವಧುವರರು ತಮ್ಮ ವಿವಾಹ ಸಮಾರಂಭದಲ್ಲಿ 4,000 ಸಿರಿಯನ್ ನಿರಾಶ್ರಿತರೊಂದಿಗೆ ಊಟ ಹಂಚಿಕೊಳ್ಳುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ.

ಸಿರಿಯಾ ಗಡಿಯಲ್ಲಿರುವ ಕಿಲಿಸ್‌ ಎಂಬಲ್ಲಿ ಮದುವೆಯಾದ ಫೆತುಲ್ಲಾಹ್‌ ಅಝ್ಮ್‌ಕೋಗುಲು ಹಾಗೂ ಎಸ್ರಾ ಪೊಲಾತ್‌‌, ಯುದ್ಧ ಪೀಡಿತ ಪ್ರದೇಶದ ಸಾವಿರಾರು ನಿರಾಶ್ರಿತರೊಂದಿಗೆ ಈ ರಸಘಳಿಗೆಗಳನ್ನು ಹಂಚಿಕೊಂಡಿದ್ದಾರೆ.

ಈ ಊರಿನಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಲಾಗಿದ್ದರೂ ಸಹ ಆಹಾರ, ನೀರುಗಳಂಥ ಮೂಲ ಅವಶ್ಯಕತೆಗಳಿಗೆ ತತ್ವಾರವಿದೆ.

ದಂಪತಿಗಳು ನಿರಾಶ್ರಿತರೊಂದಿಗಿರುವ ತಮ್ಮ ವಿವಾಹದ ಫೋಟೋಗಳನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಅದೀಗ ವೈರಲ್ ಆಗಿದ್ದು, ನೂರಾರು ಮಂದಿ ಹಂಚಿಕೊಂಡಿದ್ದಾರೆ.

TIRDA DÜĞÜN YEMEĞİOğlunu evlendiren Ali Üzümcüoğlu adlı vatandaş düğün yemeği olarak 4 bin Suriyeli'ye yemek verdi….

Posted by Serhat Kilis Gazetesi on Saturday, August 1, 2015

ಸಲಿಂಗ ಕಾಮದ ಬಗ್ಗೆ ನಟನ ಪುತ್ರ ಹೇಳಿದ್ದೇನು…?

Posted: 28 Jan 2020 01:19 AM PST

ಆಯುಷ್ಮಾನ್ ಖುರಾನಾ ಮುಂಬರುವ ಚಿತ್ರ ಶುಭ್ ಮಂಗಲ್ ಜ್ಯಾದಾ ಸಾವಧಾನ್ ಚಿತ್ರ ಚರ್ಚೆಯಲ್ಲಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಗೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಬಿಡುಗಡೆಯ ನಂತರ ಆಯುಷ್ಮಾನ್ ಖುರಾನಾ ಪತ್ನಿ ಎಂಟು ವರ್ಷದ ಮಗನ ಬಳಿ ಚಿತ್ರದ ಬಗ್ಗೆ ಪ್ರಶ್ನೆ ಕೇಳಿದ್ದಾಳೆ. ಮಗ ನೀಡಿದ ಉತ್ತರ ಕಣ್ಣಲ್ಲಿ ನೀರು ತರಿಸಿತು ಎಂದು ಅವರು ಬರೆದುಕೊಂಡಿದ್ದಾರೆ.

ಆಯುಷ್ಮಾನ್ ಖುರಾನಾ ಪತ್ನಿ ತಾಹೀರಾ, ಖುರಾನಾ ಮುಂದಿನ ಚಿತ್ರ ಶುಭ್ ಮಂಗಲ್ ಜ್ಯಾದಾ ಸಾವಧಾನ್ ಚಿತ್ರದ ಬಗ್ಗೆ 8 ವರ್ಷದ ಮಗನ ಬಳಿ ಪ್ರಶ್ನೆ ಕೇಳಿದೆ. ಸಲಿಂಗಕಾಮ ಅಥವಾ ಗೇ ಬಗ್ಗೆ ನಿನಗೆ ತಿಳಿದಿದೆಯೇ ಎಂದು ಕೇಳಿದೆ. ಇದಕ್ಕೆ ಮಗ ಯಸ್ ಎಂದು ಉತ್ತರ ನೀಡಿದ. ನಿನಗೆ ಇದ್ರಿಂದ ಸಮಸ್ಯೆಯಾಗ್ತಿದೆಯೇ ಎಂಬ ಪ್ರಶ್ನೆಯನ್ನೂ ಕೇಳಿದೆ. ಇದ್ರಲ್ಲಿ ಸಮಸ್ಯೆಯಾಗುವಂತಹ ವಿಷ್ಯ ಏನಿದೆ ಎಂದು ಉತ್ತರ ನೀಡಿದ. ಆತನ ಉತ್ತರ ಕಣ್ಣಲ್ಲಿ ನೀರು ತರಿಸಿತು. ನನಗೆ ಹೆಮ್ಮೆಯಾಯ್ತು ಎಂದು ತಾಹೀರಾ ಬರೆದಿದ್ದಾರೆ.

ಇದಕ್ಕೂ ಮುನ ಆಯುಷ್ಮಾನ್ ಖುರಾನಾ ತನ್ನ ಪಾಲಕರ ಪ್ರತಿಕ್ರಿಯೆ ಹೇಳಿದ್ದರು. ಪಾಲಕರಿಗೆ ಚಿತ್ರದ ಟ್ರೈಲರ್ ಇಷ್ಟವಾಗಿದೆ. ಇದ್ರಲ್ಲಿರುವ ಹಾಸ್ಯ ದೃಶ್ಯಗಳನ್ನು ನೋಡಿ ಅವ್ರು ಖುಷಿಯಾಗಿದ್ದಾರೆ ಎಂದಿದ್ದರು. ಚಿತ್ರ ಫೆಬ್ರವರಿ 21ರಂದು ತೆರೆಗೆ ಬರಲಿದೆ.

ಗಡ್ಡ ಬಿಟ್ಟ ಒಮರ್ ಅಬ್ದುಲ್ಲಾಗೆ ರೇಜರ್ ಕಳುಹಿಸಿದ ಬಿಜೆಪಿ

Posted: 28 Jan 2020 12:35 AM PST

ಜಮ್ಮು ಮತ್ತು ಕಾಶ್ಮೀರದಲ್ಲಿ 2 ಜಿ ಇಂಟರ್ನೆಟ್ ಸೇವೆಯನ್ನು ಶನಿವಾರ ಪುನಃಸ್ಥಾಪಿಸಲಾಗಿದೆ. ಇದಾದ್ಮೇಲೆ ರಾಜ್ಯದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಒಮರ್ ಅಬ್ದುಲ್ಲಾ ಗಡ್ಡ ಬೆಳೆದಿರುವುದು ಕಂಡುಬಂದಿದೆ. ಫೋಟೋ ವೈರಲ್ ಆಗ್ತಿದ್ದಂತೆ ಈ ಬಗ್ಗೆ ವಿವಿಧ ಚರ್ಚೆಗಳು ನಡೆದಿವೆ. ಮಂಗಳವಾರ, ತಮಿಳುನಾಡು ಬಿಜೆಪಿ ಅಬ್ದುಲ್ಲಾಗೆ ರೇಜರ್ ಕಳುಹಿಸಿದೆ.

ಬಿಜೆಪಿ ತನ್ನ ಟ್ವೀಟ್‌ನಲ್ಲಿ ಒಮರ್ ಅಬ್ದುಲ್ಲಾ ಅವರ ವಿಳಾಸಕ್ಕೆ ರೇಜರ್ ಆರ್ಡರ್ ಮಾಡಿರುವ ಸ್ಕ್ರೀನ್‌ಶಾಟ್ ಹಂಚಿಕೊಂಡಿದೆ. ಪ್ರಿಯ ಒಮರ್ ಅಬ್ದುಲ್ಲಾ, ನಿಮ್ಮನ್ನು ಹೀಗೆ ನೋಡುವುದು ಕಷ್ಟವಾಗ್ತಿದೆ. ನಿಮ್ಮ ಬಹಳಷ್ಟು’ ಭ್ರಷ್ಟ ‘ಸ್ನೇಹಿತರು ಹೊರಗೆ ಎಂಜಾಯ್ ಮಾಡ್ತಿದ್ದಾರೆ. ನಮ್ಮ ಉಡುಗೊರೆಯನ್ನು ಸ್ವೀಕರಿಸಿ ಮತ್ತು ನಿಮಗೆ ಯಾವುದೇ ರೀತಿಯ ಸಹಾಯ ಬೇಕಾದರೆ ಕಾಂಗ್ರೆಸ್  ಸಂಪರ್ಕಿಸಿ ಎಂದು ಟ್ವೀಟ್ ಮಾಡಿದೆ.

ಇದಕ್ಕೂ ಮೊದಲು ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಕೂಡ ಅಬ್ದುಲ್ಲಾ ಅವರ ಫೋಟೋಕ್ಕೆ ಕಮೆಂಟ್ ಮಾಡಿದ್ದರು. ಕಾಶ್ಮೀರದಲ್ಲಿ 370 ಹಾಗೂ 35ಎ ಕಲಂ ತೆಗೆದು ಹಾಕಲಾಗಿದೆ. ಆದ್ರೆ ರೇಜರ್ ಬಂದ್ ಆಗಿಲ್ಲ ಎಂದು ಕಮೆಂಟ್ ಮಾಡಿದ್ದರು.

ಧೋನಿ ಕುಳಿತುಕೊಳ್ತಿದ್ದ ಕಾರ್ನರ್ ಸೀಟನ್ನು ಈಗ್ಲೂ ಖಾಲಿ ಬಿಟ್ಟ ಟೀಂ ಇಂಡಿಯಾ…!

Posted: 28 Jan 2020 12:32 AM PST

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಅಭಿಮಾನಿಗಳು ಮಾತ್ರ ಮಿಸ್ ಮಾಡಿಕೊಳ್ತಿಲ್ಲ. ತಂಡದ ಆಟಗಾರರು ಕೂಡ ಧೋನಿಯನ್ನು ಮಿಸ್ ಮಾಡಿಕೊಳ್ತಿದ್ದಾರೆ. ಇದಕ್ಕೆ ಆಟಗಾರ ಯಜ್ವೇಂದ್ರ ಚಾಹಲ್ ವಿಡಿಯೋ ಉತ್ತಮ ನಿದರ್ಶನ.

ಟೀಮ್ ಇಂಡಿಯಾ ಮೂರನೇ ಟಿ 20 ಅಂತರರಾಷ್ಟ್ರೀಯ ಪಂದ್ಯಕ್ಕಾಗಿ ಆಕ್ಲೆಂಡ್‌ನಿಂದ ಹ್ಯಾಮಿಲ್ಟನ್‌ಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಯುಜ್ವೇಂದ್ರ ಚಾಹಲ್  ಬಸ್‌ನಲ್ಲಿದ್ದ ಟೀಮ್ ಇಂಡಿಯಾದ ಆಟಗಾರರ ಸಂದರ್ಶನ ಮಾಡಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.

ಸಂದರ್ಶನದ ವೇಳೆ ಚಾಹಲ್, ಟೀಮ್ ಇಂಡಿಯಾ ಮಹೇಂದ್ರ ಸಿಂಗ್ ಧೋನಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ತಿದೆ ಎಂದಿದ್ದಾರೆ. ಬಸ್‌ನಲ್ಲಿರುವ ಮೂಲೆಯ ಸೀಟಿಗೆ ಹೋಗುವ ಚಾಹಲ್, ಸೀಟ್ ತೋರಿಸಿ ಇದು ದಿಗ್ಗಜ ಆಟಗಾರ ಕುಳಿತುಕೊಳ್ಳು ಸೀಟ್. ಮಹಿ ಬ್ರೋ. ಈಗ್ಲೂ ಯಾರೂ ಇಲ್ಲಿ ಕುಳಿತುಕೊಳ್ಳುವುದಿಲ್ಲ. ನಾವು ಅವರನ್ನು ಮಿಸ್ ಮಾಡಿಕೊಳ್ತೇವೆ ಎನ್ನುತ್ತಾರೆ.

ಚಾಹಲ್, ಧೋನಿ ಬಗ್ಗೆ ಹೇಳಿದ್ದು ಇದೇ ಮೊದಲಲ್ಲ. ವಿಶ್ವಕಪ್ ಸೆಮಿಫೈನಲ್ ನಲ್ಲಿ ಧೋನಿ ಔಟ್ ಆಗಿ ಬರ್ತಿದ್ದಂತೆ ತುಂಬಾ ಬೇಸರವಾಗಿತ್ತು. ವಿಶ್ವಕಪ್ ಇಲ್ಲಿಗೆ ಮುಗಿತು ಅನ್ನಿಸಿತ್ತು ಎಂದು ಚಾಹಲ್ ಹೇಳಿದ್ದರು.

 

 

ಕೊರೊನಾ ವೈರಸ್: 4 ದಿನಗಳಲ್ಲಿ ಸಿದ್ಧವಾಗ್ತಿದೆ 1000 ಹಾಸಿಗೆಯ ಆಸ್ಪತ್ರೆ

Posted: 28 Jan 2020 12:28 AM PST

कोरोना वायरस मरीजों के लिए चीन 4 दिन में बना देगा 1000 बेड का अस्पताल

ಜಗತ್ತಿನಾದ್ಯಂತ ಕೊರೊನಾ ವೈರಸ್ ಭೀತಿ ಎದುರಾಗಿದೆ. 15 ರಾಷ್ಟ್ರಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಭಾರತದಲ್ಲಿ ಕೊರೊನಾ ವೈರಸ್ ಒಂದು ಬಲಿ ಪಡೆದಿದೆ. ಥೈಲ್ಯಾಂಡ್ ಮೂಲದ ಮಹಿಳೆಯೊಬ್ಬಳು ಕೊಲ್ಕತ್ತಾ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾಳೆ.

ಚೀನಾದಲ್ಲಿ ಕೊರೊನಾ ವೈರಸ್ ಗೆ ಈವರೆಗೆ 106 ಮಂದಿ ಸಾವನ್ನಪ್ಪಿದ್ದಾರೆ. ಚೀನಾದ ವುಹಾನ್ ಪರಿಸ್ಥಿತಿ ಹದಗೆಟ್ಟಿದೆ. ವೈರಸ್‌ನಿಂದ ಬಳಲುತ್ತಿರುವ ರೋಗಿಗಳನ್ನು ಪ್ರತ್ಯೇಕ ವಾರ್ಡ್‌ಗಳಲ್ಲಿ ಇರಿಸಲಾಗುತ್ತದೆ. ಆದರೆ ಚೀನಾದ ಎಲ್ಲಾ ಆಸ್ಪತ್ರೆಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ. ಹಾಗಾಗಿ ಮುಂದಿನ 4 ದಿನಗಳಲ್ಲಿ 1000 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲು ಚೀನಾ ಸರ್ಕಾರ ನಿರ್ಧರಿಸಿದೆ.

ಕೊರೊನೊ ವೈರಸ್ ಪೀಡಿತರನ್ನು ಒಂದು ಕಡೆ ತಂದು ಅವ್ರಿಗೆ ವಿಶೇಷ ಚಿಕಿತ್ಸೆ ನೀಡಲು ಈ ಆಸ್ಪತ್ರೆ ಸಿದ್ಧವಾಗ್ತಿದೆ. ಕಾರ್ಮಿಕರು ಹಗಲು-ರಾತ್ರಿ ದುಡಿಯುತ್ತಿದ್ದಾರೆ. ನಾಲ್ಕು ದಿನಗಳಲ್ಲಿ 1000 ಹಾಸಿಗೆಯ ಆಸ್ಪತ್ರೆ ಸಿದ್ಧವಾಗಲಿದೆ. 2003ರಲ್ಲೂ SARS ಕಾಯಿಲೆಯಿಂದ ಜನರನ್ನು ರಕ್ಷಿಸಲು ಚೀನಾ ಒಂದು ವಾರದಲ್ಲಿ ಆಸ್ಪತ್ರೆಯೊಂದನ್ನು ನಿರ್ಮಿಸಿತ್ತು. ವುಹಾನ್ ಸೇರಿದಂತೆ ಚೀನಾದ ಅನೇಕ ಕಡೆ ಪ್ರವಾಸಿಗರ ಓಡಾಟವನ್ನು ನಿಲ್ಲಿಸಲಾಗಿದೆ.

ಜಿಮ್ ನಲ್ಲಿ ಕೊಹ್ಲಿ ಕಸರತ್ತು ನೋಡಿ ದಂಗಾದ ಅಭಿಮಾನಿಗಳು

Posted: 28 Jan 2020 12:15 AM PST

Virat Kohli

ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಜಿಮ್‌ ನಲ್ಲಿ ಬೆವರಿಳಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ತಾಲೀಮು ಮಾಡುವ ಜೊತೆಗೆ ಸ್ಟಂಟ್ ಕೂಡ ಮಾಡಿದ್ದಾರೆ.

ವಿಡಿಯೋ ಜೊತೆ ಶೀರ್ಷಿಕೆಯನ್ನು ಹಾಕಿದ್ದಾರೆ. ನಿಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಒಂದು ಆಯ್ಕೆ ಮಾತ್ರವಾಗದೆ ನಿಮ್ಮನ್ನು ಉತ್ತಮಗೊಳಿಸಲು ಅತ್ಯವಶ್ಯಕವಾಗಬೇಕೆಂದು ಬರೆದಿದ್ದಾರೆ. ವಿರಾಟ್ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಅಭಿಮಾನಿಗಳು ಕೊಹ್ಲಿ ಸ್ಟಂಟ್ ಇಷ್ಟಪಟ್ಟಿದ್ದಾರೆ.

2008ರಲ್ಲಿ ಭಾರತದ ಪರ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಕೊಹ್ಲಿ ದುಂಡು ಮುಖ ಹೊಂದಿದ್ದರು. ಈಗ ವಿಶ್ವದ ಅತ್ಯಂತ ಫಿಟ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ವಿರಾಟ್ ಕೊಹ್ಲಿ ಫಿಟ್ ಮಾತ್ರವಲ್ಲ, ಫಿಟ್ನೆಸ್ ಸಂಸ್ಕೃತಿಯನ್ನು ತಂಡದೊಳಗೆ ತಂದಿದ್ದಾರೆ. ಫಿಟ್ನೆಸ್ ವಿಚಾರದಲ್ಲಿ ಇತರ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ.

 

ಟ್ರಾಫಿಕ್ ತಪ್ಪಿಸಿಕೊಳ್ಳಲು ಈ ಚಾಲಕ ಮಾಡಿದ್ದೇನು ಗೊತ್ತಾ…?

Posted: 27 Jan 2020 11:41 PM PST

ಟ್ರಾಫಿಕ್ ಸಿಗ್ನಲ್‌ಗಳನ್ನು ತಪ್ಪಿಸಿಕೊಂಡು, ಶಾರ್ಟ್‌ ಕಟ್‌ ಹಿಡಿಯಲು ವಾಹನ ಸವಾರರು ಸಾಕಷ್ಟು ಟ್ರಿಕ್‌ ಗಳನ್ನು ಬಳಸುತ್ತಾ ಇರುತ್ತಾರೆ.

ಸಾಕಷ್ಟು ಮಂದಿ ಈ ಸರ್ಕಸ್ಸನ್ನು ಯಶಸ್ವಿಯಾಗಿ ಮಾಡಿದರೆ, ಕೆಲವರು ಸಿಕ್ಕಿಬಿದ್ದು ದಂಡ ಪೀಕುತ್ತಾರೆ.

ಆದರೆ ಇಲ್ಲೊಬ್ಬ ಅಸ್ಥಿಪಂಜರವೊಂದನ್ನು ಪ್ರಯಾಣಿಕನಂತೆ ಕಾಣಿಸಿ, ಕಾರ್‌ ಪೂಲಿಂಗ್ ಲೇನ್‌‌ ಮೂಲಕ ಹಾದು ಹೋಗುವ ಯತ್ನದಲ್ಲಿ ಸಿಕ್ಕಿಬಿದ್ದಿದ್ದಾನೆ.

ಚಾಲಕನೊಂದಿಗೆ ಒಬ್ಬ ಅಥವಾ ಹೆಚ್ಚಿನ ಪ್ರಯಾಣಿಕರು ಇರುವ ಕಾರುಗಳಿಗೆ ಹಾದು ಹೋಗಲೆಂದು ಇರುವ ಎಕ್ಸ್‌ಕ್ಲೂಸಿವ್‌ ಲೇನ್‌ ನಲ್ಲಿ ಹೋಗಲು ಈತ ಹೀಗೆ ಮಾಡಿದ್ದಾನೆ.

ಇಂಥ ಹುಚ್ಚು ಸಾಹಸಕ್ಕೆ ಕೈ ಹಾಕಿದ 62 ವರ್ಷದ ವ್ಯಕ್ತಿಗೆ ದೊಡ್ಡ ಮಟ್ಟದಲ್ಲಿ ದಂಡ ವಿಧಿಸಲಾಗಿದೆ. ಈ ಘಟನೆಯನ್ನು ಅರಿಝೋನಾ ಸಾರ್ವಜನಿಕ ಸುರಕ್ಷತೆ ವಿಭಾಗದ ಟ್ವಿಟರ್‌ ಹ್ಯಾಂಡಲ್‌ ಮೂಲಕ ಶೇರ್‌ ಮಾಡಲಾಗಿದ್ದು, ಅದೀಗ ವೈರಲ್ ಆಗಿದೆ.

ಭೌತಶಾಸ್ತ್ರದ ಪಾಠ ಹೇಳಿ ಟ್ರೋಲ್‌ಗೆ ತುತ್ತಾದ ದೆಹಲಿ ಡಿಸಿಎಂ

Posted: 27 Jan 2020 11:06 PM PST

ರಾಜಕಾರಣಿಗಳು ಏನಾದರೂ ಎಡವಟ್ಟಾದ ಹೇಳಿಕೆ ನೀಡಿದಲ್ಲಿ ಟ್ವಿಟರ್‌‌ನಲ್ಲಿ ಕ್ರೂರವಾದ ಅಣಕಗಳು ಹಾಗೂ ಟ್ರೋಲಿಂಗ್‌ಗೆ ತುತ್ತಾಗುವುದು ಸರ್ವೇ ಸಾಮಾನ್ಯ.

ಈ ಬಾರಿ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಇಂಥದ್ದೇ ಟ್ರೋಲಿಂಗ್‌ ಗೆ ತುತ್ತಾಗಿದ್ದಾರೆ.

ಪತ್ರಕರ್ತನೊಬ್ಬನಿಗೆ ಸಂದರ್ಶನ ನೀಡುವ ವೇಳೆ, ದೆಹಲಿಯಲ್ಲಿ ಕಲುಷಿತಗೊಳ್ಳುತ್ತಿರುವ ಕುಡಿಯುವ ನೀರಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಸೋಡಿಯಾ, “ಸೂಕ್ತವಾದ ಸಮಯದಲ್ಲಿ ನೀರು ಹಿಡಿಯದಿರುವ ಕಾರಣ ದೆಹಲಿ ಜನತೆ ಅಶುದ್ಧ ನೀರನ್ನು ಪಡೆಯುತ್ತಿದ್ದಾರೆ” ಎಂದಿದ್ದಾರೆ.

“ನೀರಿನ ಪೂರೈಕೆ ಇಲ್ಲದ ವೇಳೆಯಲ್ಲಿ ಮೋಟರ್‌ ಚಾಲನೆ ಮಾಡಿದಲ್ಲಿ, ಪೈಪ್‌ಲೈನ್‌ ಗಳಲ್ಲಿರುವ ಕಸವನ್ನು ಮೋಟರ್‌ ಪಂಪ್ ಮಾಡುತ್ತದೆ. ನೀರಿನ ಪೂರೈಕೆ ಇಲ್ಲದ ವೇಳೆಯಲ್ಲಿ ಮೋಟರ್‌ ಚಾಲೂ ಮಾಡಿದರೆ ಕಸವನ್ನು ಮೇಲೆತ್ತುತ್ತದೆ ಎಂದು ಭೌತಶಾಸ್ತ್ರ ಹೇಳುತ್ತದೆ” ಎಂದು ಸಿಸೋಡಿಯಾ ಹೇಳಿದ್ದಾರೆ. ನಿರೀಕ್ಷೆಯಂತೆಯೇ ಸಿಸೋಡಿಯಾ ಟ್ರೋಲರ್‌ ಗಳಿಗೆ ಆಹಾರವಾಗಿದ್ದಾರೆ.

ಲೈವ್ ಟಿವಿಯಲ್ಲಿ ಚಾಹಲ್ ನಿಂದಿಸಿದ ಮಾರ್ಟಿನ್ ಗಪ್ಟಿಲ್

Posted: 27 Jan 2020 11:05 PM PST

ಆಕ್ಲೆಂಡ್ ನ ಈಡನ್ ಪಾರ್ಕ್ ನಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ  ಟಿ-20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಜಯ ಸಾಧಿಸಿದೆ.

ಈ ಮೂಲಕ 2-0 ಮುನ್ನಡೆ ಸಾಧಿಸಿದೆ. ಆದರೆ ಪಂದ್ಯ ಮುಗಿದ ವೇಳೆ ನಡೆದ ಲೈವ್ ಟಿವಿ ಸಂದರ್ಶನವೊಂದರಲ್ಲಿ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಗೆ ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಮಾರ್ಟಿನ್ ಗಪ್ಟಿಲ್ ನಿಂದಿಸಿರುವುದು ಬೆಳಕಿಗೆ ಬಂದಿದೆ.

ಸ್ಟಾರ್ ಸ್ಪೋರ್ಟ್ಸ್ ಆ್ಯಂಕರ್ ಜತಿನ್ ಸಪ್ರು ಜೊತೆ ಗಪ್ಟಿಲ್ ಸಂದರ್ಶನ ನಡೆಯುತ್ತಿತ್ತು. ಈ ವೇಳೆ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸಹ ಜೊತೆಗಿದ್ದರು. ಆಗ ಮಧ್ಯಪ್ರವೇಶಿಸಿದ ಚಾಹಲ್ ಇವರಿಬ್ಬರಿಗೂ ಶುಭಾಶಯ ಕೋರುತ್ತ ವಾಟ್ಸ್ ಅಪ್ ಬಾಯ್ಸ್ (ಏನು ವಿಶೇಷ) ಎಂದು ಕೇಳಿದ್ದಾರೆ.

ಇದು ಗಪ್ಟಿಲ್ ಅವರನ್ನು ಕೆರಳಿಸಿದ್ದು, ಅಶ್ಲೀಲವಾಗಿ ನಿಂದಿಸಿದ್ದಾರೆ. ಈ ವೇಳೆ ರೋಹಿತ್ ಶರ್ಮಾ, ಗಪ್ಟಿಲ್ ಪಕ್ಕದಲ್ಲೇ ಇದ್ದರು. ಇದರಿಂದ ಕಸಿವಿಸಿಗೊಂಡ ರೋಹಿತ್ ಅಲ್ಲಿಂದ ನಿರ್ಗಮಿಸಿದರು ಎಂದು ಚಾಹಲ್ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

Posted: 27 Jan 2020 10:37 PM PST

ಬ್ಯಾಂಕಿನಲ್ಲಿ ಕೆಲಸ ಮಾಡಲು ಬಯಸಿದವರಿಗೆ ಒಳ್ಳೆ ಸುದ್ದಿಯೊಂದಿದೆ. ಇಂಡಿಯನ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್‌ನ 138 ಹುದ್ದೆಗಳಲ್ಲಿ ಭರ್ತಿಗೆ ಮುಂದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿ ಪದವೀಧರನಾಗಿರಬೇಕು.

ಇಂಡಿಯನ್ ಬ್ಯಾಂಕ್ , ಸಹಾಯಕ ವ್ಯವಸ್ಥಾಪಕ, ವ್ಯವಸ್ಥಾಪಕ ಮತ್ತು ಹಿರಿಯ ವ್ಯವಸ್ಥಾಪಕರ ಹುದ್ದೆಗಳಿಗೆ ನೇಮಕಾತಿ ಮಾಡಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 10. ಮಾರ್ಚ್‌ನಲ್ಲಿ ಪರೀಕ್ಷೆ ನಡೆಯಲಿದೆ. ಇಲಾಖೆಯ ಅಧಿಕೃತ ವೆಬ್‌ಸೈಟ್ https://www.indianbank.in/  ನಲ್ಲಿ ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಕೆಲಸ ಮಾಡುವ ಅವಕಾಶ ಸಿಕ್ತಿದೆ. ಬ್ಯಾಂಕ್ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿಗಳು ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಮುಂದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 12, 2020. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪದವೀಧರನಾಗಿರಬೇಕು.

ಇನ್ನು ಪಶ್ಚಿಮ ಮಧ್ಯ ರೈಲ್ವೆ (ಡಬ್ಲ್ಯುಸಿಆರ್) ಅಪ್ರೆಂಟಿಸ್‌ನ 1273 ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 14, 2020.

 

ಬಾಲಕಿ ಮೇಲೆರಗಿ ಶವವನ್ನು ತುಂಡು ತುಂಡಾಗಿ ಕತ್ತರಿಸಿದ್ದ ಪಾಪಿಗೆ ಬೆಂಬಲ ನೀಡಿದ್ಲು ತಾಯಿ

Posted: 27 Jan 2020 10:30 PM PST

प्रतीकात्मक तस्वीरಹರಿಯಾಣದ ಪಾಲ್ವಾಲ್ ನಲ್ಲಿ 5 ವರ್ಷದ ಮುಗ್ದೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಅಪರಾಧಿಗೆ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದು ದೇಹವನ್ನು ತುಂಡುಗಳಾಗಿ ಕತ್ತರಿಸಿ ಮನೆಯ ಹಿಟ್ಟಿನ ಪೆಟ್ಟಿಗೆಯಲ್ಲಿ ಅಡಗಿಸಿಟ್ಟಿದ್ದ.

ಘಟನೆ ಮೇ.31,2018 ರಲ್ಲಿ ನಡೆದಿತ್ತು. 27 ವರ್ಷದ ವಿವಾಹಿತ ವೀರೇಂದ್ರ ತನ್ನ ಬಾಸ್‌ ಮಗಳ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಚಾಕುವಿನಿಂದ ಹತ್ಯೆಗೈದಿದ್ದ. ಘಟನೆ ವೇಳೆ ತಾಯಿ, ಮಗನಿಗೆ ಬೆಂಬಲ ನೀಡಿದ್ದಳು. ಪ್ರಕರಣ ವಿಚಾರಣೆ ನಡೆಸಿದ ಕೋರ್ಟ್ ತಾಯಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮೃತ ದೇಹವನ್ನು ಮನೆಯಲ್ಲಿ ಮುಚ್ಚಿಟ್ಟಿದ್ದ ವೀರೇಂದ್ರ ಅದನ್ನು ರೈಲು ಹಳಿ ಮೇಲಿಟ್ಟು ಅಪಘಾತವೆಂದು ಸಾಬೀತುಪಡಿಸುವ ಪ್ರಯತ್ನ ನಡೆಸಿದ್ದ. ಇದಕ್ಕೆ ತಾಯಿ ಬೆಂಬಲ ನೀಡಿದ್ದಳು ಎನ್ನಲಾಗಿದೆ. ಆದ್ರೆ ಆತನ ಈ ಯೋಜನೆ ಯಶಸ್ವಿಯಾಗುವ ಮೊದಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

 

 

Gameforumer QR Scan

Gameforumer QR Scan
Gameforumer QR Scan