Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Thursday, January 23, 2020

Kannada News | Karnataka News | India News

Kannada News | Karnataka News | India News


ಮನೆಯ ಆರ್ಥಿಕ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

Posted: 23 Jan 2020 11:32 AM PST

ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚು. ಆರ್ಥಿಕ ಸಮಸ್ಯೆಯಿಂದ ಬಳಲುವವರು ಹಗಲು-ರಾತ್ರಿ ದುಡಿದ್ರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಫೆಂಗ್ ಶೂಯಿ ಉಪಾಯಗಳನ್ನು ಪಾಲಿಸಿದ್ರೆ ಆರ್ಥಿಕ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.

ಗ್ಯಾಜೆಟ್ ಒಂಟೆಯನ್ನು ಮನೆಯಲ್ಲಿ ಸ್ಥಾಪಿಸಬೇಕು ಎಂದು ಹೇಳಲಾಗುತ್ತದೆ. ಇದು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹೂಡಿಕೆಯನ್ನು ಸುರಕ್ಷಿತವಾಗಿಸಲು ಮತ್ತು ಅದರಿಂದ ಗರಿಷ್ಠ ಲಾಭವನ್ನು ಪಡೆಯಲು ಜೋಡಿ ಒಂಟೆ ಗಳನ್ನು ಸ್ಥಾಪಿಸಬೇಕು.

ಹಣ ಎಲ್ಲೋ ಸಿಲುಕಿಕೊಂಡಿದ್ದರೆ ಮತ್ತು ಅದು ಸರಿಯಾದ ಸಮಯದಲ್ಲಿ ಸಿಗದಿದ್ದರೆ ಅಥವಾ ನಗದು ಸಮಸ್ಯೆಗಳಿದ್ದರೆ  ಎರಡು ಡುಬ್ಬಗಳನ್ನು ಹೊಂದಿರುವ ಒಂಟೆ  ಜೋಡಿಯನ್ನು ಮನೆಯಲ್ಲಿ ಇಡಬೇಕು.

ಮನೆಯಲ್ಲಿ ಮಾತ್ರವಲ್ಲ ಕಚೇರಿಯಲ್ಲಿಯೂ ಇದನ್ನಿಡುವುದು ಒಳ್ಳೆಯದು. ಮನೆಯಲ್ಲಿ ಒಂಟೆಯನ್ನಿಡುವುದ್ರಿಂದ ದುರಾದೃಷ್ಟ ದೂರವಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹಲವು ದಿನಗಳವರೆಗೆ ತಿಂದು, ಕುಡಿಯದಿದ್ದರೂ  ತನ್ನ ಸವಾರನನ್ನು ತನ್ನ ಗಮ್ಯಸ್ಥಾನಕ್ಕೆ ಕರೆದೊಯ್ಯುವ ಸಾಮರ್ಥ್ಯವನ್ನು ಒಂಟೆ ಮಾತ್ರ ಹೊಂದಿದೆ. ಕುಟುಂಬಸ್ಥರಲ್ಲಿ ಅನಾರೋಗ್ಯ ಸಮಸ್ಯೆಯಿದ್ದರೂ ಒಂಟೆ ಇದಕ್ಕೆ ಪರಿಹಾರ.

ನಿಮ್ಮ ಭವಿಷ್ಯ ತಿಳಿಯಲು ಸಂಪರ್ಕಿಸಿ:
ಪಂಡಿತ್ ಅನಂತ್ ಪ್ರಸಾದ್ ಶರ್ಮಾ
ಮೊಬೈಲ್:‌ 9845626805

ಸುಖ ಸಂಸಾರಕ್ಕೆ ಪತ್ನಿಯೇ ವಿಲನ್: ಮತ್ತೆ ಸಂಪರ್ಕಕ್ಕೆ ಸಿಕ್ಕ ಪ್ರಿಯಕರನೊಂದಿಗೆ ಸೇರಿ ನೌಟಂಕಿ ಆಟವಾಡಿದ ಮಡದಿ

Posted: 23 Jan 2020 07:00 AM PST

ಮಂಡ್ಯದ ವಿದ್ಯಾನಗರ ಬಡಾವಣೆಯಲ್ಲಿ ರಾಜಸ್ಥಾನ ಮೂಲದ ಬುಂಡಾರಾಮ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬುಂಡಾರಾಮ್ ಪತ್ನಿ, ಆಕೆಯ ಪ್ರಿಯಕರ ಹಾಗೂ ಇಬ್ಬರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಕ್ಕಳು ಮತ್ತು ನನಗೆ ಕೈ ಕಾಲು ಕಟ್ಟಿ ಹಾಕಿ ಪತಿಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಬುಂಡಾಮ್ ಪತ್ನಿ ಚಂದ್ರಿಕಾ ಪೊಲೀಸರಿಗೆ ಹೇಳಿಕೆ ನೀಡಿದ್ದು, ಆಕೆಯ ನಡವಳಿಕೆ ಮೇಲೆ ಅನುಮಾನಗೊಂಡ ಪೊಲೀಸರು ಕಣ್ಣಿಟ್ಟಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸೋಮವಾರ ರಾತ್ರಿ ಮಂಡ್ಯದಲ್ಲಿ ಕೊಲೆ ಮಾಡಿದ ಆರೋಪಿಗಳು ಬಸ್ ನಲ್ಲಿ ಚನ್ನರಾಯಪಟ್ಟಣಕ್ಕೆ ಬಂದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕು, ಡ್ರ್ಯಾಗರ್, ಗನ್ ಇದ್ದ ಬ್ಯಾಗ್ ಬಿಟ್ಟು ಹೋಗಿದ್ದಾರೆ. ಬಸ್ ನಿಲ್ದಾಣದಲ್ಲಿ ಬ್ಯಾಗ್ ಗಮನಿಸಿದ ಸಾರ್ವಜನಿಕರು ಅನುಮಾನದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ತಪಾಸಣೆ ಮಾಡಿದ್ದು ಅದರಲ್ಲಿ ಚಾಕು, ಗನ್ ಇರುವುದು ಗೊತ್ತಾಗಿದೆ.

ದೂರದವರೆಗೂ ಹೋಗಿ ಬ್ಯಾಗ್ ನೆನಪಿಸಿಕೊಂಡ ಹಂತಕರು ಅದನ್ನು ತೆಗೆದುಕೊಂಡು ಹೋಗಲು ಬಸ್ ನಿಲ್ದಾಣಕ್ಕೆ ಬಂದಾಗ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಂಡ್ಯದಲ್ಲಿ ಬುಂಡಾರಾಮ್ ಕೊಲೆ ಮಾಡಿರುವ ಬಗ್ಗೆ ಹಂತಕರು ಮಾಹಿತಿ ನೀಡಿದ್ದಾರೆ.

ಮನೀಶ್ ಮತ್ತು ಕಿಶನ್ ಹಂತಕರಾಗಿದ್ದು ಅವರನ್ನು ಚೆನ್ನರಾಯಪಟ್ಟಣ ಪೊಲೀಸರು ಮಂಡ್ಯ ಪೊಲೀಸರ ವಶಕ್ಕೆ ನೀಡಿದ್ದಾರೆ. ಇವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಮಂಡ್ಯ ಪೊಲೀಸರಿಗೆ ಬುಂಡಾರಾಮ್ ಪತ್ನಿ ಚಂದ್ರಿಕಾ ಮತ್ತು ಆಕೆಯ ಪ್ರಿಯಕರ ಸುರೇಶ್ ಕೂಡ ಕೊಲೆಗೆ ಸಾಥ್ ನೀಡಿರುವುದು ಗೊತ್ತಾಗಿದೆ.

ಚಂದ್ರಿಕಾ ಮತ್ತು ಸುರೇಶ್ ರಾಜಸ್ಥಾನ ಮೂಲದವರಾಗಿದ್ದು ಹಿಂದೆ ಕುಣಿಗಲ್ ನಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಪ್ರೀತಿಸಿದ್ದರು. ಆದರೆ ಚಂದ್ರಿಕಾ ಮನೆಯಲ್ಲಿ ಮದುವೆಗೆ ಒಪ್ಪದೇ ಬುಂಡಾರಾಮ್ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಚಂದ್ರಿಕಾ ಬುಂಡಾರಾಮ್ ದಂಪತಿಗೆ ಇಬ್ಬರು ಮಕ್ಕಳಾಗಿದ್ದು ಮಂಡ್ಯದಲ್ಲಿ ವಾಸವಾಗಿದ್ದರು. ಹಾರ್ಡ್ ವೇರ್ ಶಾಪ್ ನಡೆಸುತ್ತಿದ್ದು ಆರ್ಥಿಕವಾಗಿಯೂ ಸದೃಢವಾಗಿದ್ದಾರೆ. ಸುರೇಶ್ ಕೂಡ ಮದುವೆಯಾಗಿದ್ದು ಆತನ ಪತ್ನಿ ಮೃತಪಟ್ಟಿದ್ದಾಳೆ. ನಂತರದಲ್ಲಿ ಸುರೇಶ್ ಮತ್ತು ಚಂದ್ರಿಕಾರ ನಡುವೆ ಸಂಪರ್ಕ ಬೆಳೆದು ಮದುವೆಯಾಗಲು ನಿರ್ಧರಿಸಿದ್ದಾರೆ. ತಮ್ಮ ಸಂಬಂಧಕ್ಕೆ ಅಡ್ಡಿಯಾದ ಬುಂಡಾರಾಮ್ ಕೊಲೆ ಮಾಡಲು ಸಂಚು ರೂಪಿಸಿದ್ದು ರಾಜಸ್ಥಾನದಿಂದ ಸುಪಾರಿ ಹಂತಕರಾದ ಮನೀಶ್ ಮತ್ತು ಕಿಶನ್ ಅವರನ್ನು ಕರೆಸಿಕೊಂಡು ಕೊಲೆಗೆ ಸುಪಾರಿ ನೀಡಿದ್ದಾರೆ. ಎಲ್ಲರೂ ಪ್ಲಾನ್ ಮಾಡಿಕೊಂಡು ಸೋಮವಾರ ರಾತ್ರಿ ಬುಂಡಾರಾಮ್ ನನ್ನು ಕೊಲೆ ಮಾಡಿದ್ದಾರೆ. ಬಳಿಕ ದರೋಡೆಕೋರರು ಕೊಲೆಮಾಡಿ ಚಿನ್ನಾಭರಣ ದೋಚಿರುವ ಕತೆ ಕಟ್ಟಿದ್ದಾರೆ. ಇದೆಲ್ಲವೂ ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದು, ನಾಲ್ವರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.

ಮಧ್ಯಪ್ರದೇಶದಲ್ಲಿ ದೇವರ ಮೊರೆ ಹೋದ ಡಿಕೆಶಿ: ಬಗೆಹರಿಯುತ್ತಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕಗ್ಗಂಟು…?

Posted: 23 Jan 2020 06:25 AM PST

ಕೆಪಿಸಿಸಿ ಅಧ್ಯಕ್ಷರಾಗಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಘೋಷಣೆಯಷ್ಟೇ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.

ಆದರೆ, ಡಿ.ಕೆ. ಶಿವಕುಮಾರ್ ಆಯ್ಕೆ ವಿಚಾರವೇ ಕಾಂಗ್ರೆಸ್ ನಲ್ಲಿ ಕಗ್ಗಂಟಾಗಿ ಪರಿಣಮಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಡಿಕೆಶಿ ನೇಮಕಕ್ಕೆ ಆಕ್ಷೇಪಿಸಿದ್ದಾರೆ. ಡಿಕೆಶಿ ನೇಮಕ ಮಾಡಿದಲ್ಲಿ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವಂತೆ ಹೈಕಮಾಂಡ್ ಬಳಿ ಸಲಹೆ ನೀಡಿದ್ದಾರೆ. ಈ ಮೂಲಕ ಪಕ್ಷದಲ್ಲಿನ ಹಿಡಿತ ಉಳಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿರುವುದರಿಂದ ಅಡೆತಡೆ ನಿವಾರಣೆಗೆ ಡಿ.ಕೆ. ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಮಧ್ಯಪ್ರದೇಶದಲ್ಲಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ, ಹೋಮ ನೆರವೇರಿಸಿದ್ದಾರೆ. ಗ್ವಾಲಿಯರ್ ನ ಧಾತಿಯಾ ಪೀತಾಂಬರ ಬಾಗಲ್ ಮುಖಿ, ಧೂಮವತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಇರುವ ಅಡ್ಡಿ-ಆತಂಕ ನಿವಾರಣೆಯಾಗಲಿ  ಎಂದು ಡಿಕೆಶಿ ಪ್ರಾರ್ಥಿಸಿ ವಿಶೇಷ ಪೂಜೆ ನೆರವೇರಿಸಿದ್ದಾರೆ ಎಂದು ಹೇಳಲಾಗಿದೆ.

ಸಿನಿಮೀಯ ಘಟನೆ: ಫಾಲೋ ಮಾಡಿ 3 ಲಕ್ಷ ರೂ. ದೋಚಿ ಕೆಲವೇ ಕ್ಷಣದಲ್ಲಿ ಸಿಕ್ಕಿಬಿದ್ರು

Posted: 23 Jan 2020 06:09 AM PST

ಬೆಂಗಳೂರಿನ ರಾಜಗೋಪಾಲನಗರದಲ್ಲಿ ಬೌನ್ಸ್ ಬೈಕ್ ನಲ್ಲಿ ಬಂದು ಮೂರು ಲಕ್ಷ ರೂಪಾಯಿ ಎಗರಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮಣ ಎಂಬುವರ 3 ಲಕ್ಷ ರೂಪಾಯಿ ದೋಚಲಾಗಿತ್ತು. ಪೀಣ್ಯದ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಹಣ ಡ್ರಾ ಮಾಡಿದ ಲಕ್ಷ್ಮಣ ಬ್ಯಾಂಕ್ ನಿಂದ ಮನೆಗೆ ಬಂದಿದ್ದರು. ಮನೆ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿ ಒಳ ಹೋಗಿ ಬರುವಷ್ಟರಲ್ಲಿ ದ್ವಿಚಕ್ರವಾಹನದ ಡಿಕ್ಕಿಯಲ್ಲಿದ್ದ ಹಣ ದೋಚಲಾಗಿತ್ತು.

ಬ್ಯಾಂಕ್ ನಿಂದಲೇ ಬೌನ್ಸ್ ಬೈಕ್ ನಲ್ಲಿ ಮೂವರು ಪೀಣ್ಯದಿಂದ ರಾಜಗೋಪಾಲನಗರದವರೆಗೆ ಹಿಂಬಾಲಿಸಿ ಬಂದಿದ್ದಾರೆ. ದ್ವಿಚಕ್ರವಾಹನದ ಡಿಕ್ಕಿ ತೆಗೆದು 3 ಲಕ್ಷ ರೂಪಾಯಿ ದೋಚಿದ ಕೆಲವೇ ಕ್ಷಣಗಳಲ್ಲಿ ಮನೆಯಿಂದ ಹೊರಗೆ ಬಂದಿದ್ದ ಲಕ್ಷ್ಮಣ ಹಣ ಎಗರಿಸಿದ್ದನ್ನು ಗಮನಿಸಿ ಬೈಕ್ ನಲ್ಲಿ ಚೇಸ್ ಮಾಡಿದ್ದರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಬ್ಬನನ್ನು ಹಿಡಿದು ನೆರವಿಗಾಗಿ ಕೂಗಿಕೊಂಡು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕರ ನೆರವಿನಿಂದ ಮೂವರನ್ನು ಹಿಡಿದಿದ್ದಾರೆ. ಆರೋಪಿಗಳನ್ನು ಮರಕ್ಕೆ ಕಟ್ಟಿಹಾಕಿದ ಸಾರ್ವಜನಿಕರು ಥಳಿಸಿದ್ದು ಕಳ್ಳರ ಬಳಿ ಇದ್ದ ಹಣ ವಾಪಸ್ ಪಡೆದುಕೊಂಡಿದ್ದಾರೆ. ಬಳಿಕ ಸಾರ್ವಜನಿಕರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪ್ರಾಪ್ತೆಯನ್ನು ಅಪಹರಿಸಿ ನಿರಂತರ ಅತ್ಯಾಚಾರ

Posted: 23 Jan 2020 05:52 AM PST

ಬೆಳಗಾವಿ ತಾಲ್ಲೂಕಿನ ಕಾಕತಿಯಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಎಂಟು ದಿನಗಳ ಕಾಲ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಕತಿಯ ಅಂಬೇಡ್ಕರ್ ಗಲ್ಲಿ ನಿವಾಸಿಯಾಗಿರುವ 22 ವರ್ಷದ ಯುವಕ ಬಂಧಿತ ಆರೋಪಿಯಾಗಿದ್ದಾನೆ. ಅಪ್ರಾಪ್ತೆಯನ್ನು ಪ್ರೀತಿಸುವಂತೆ ಯುವಕ ಪೀಡಿಸುತ್ತಿದ್ದು ಇದಕ್ಕೆ ಆಕೆ ನಿರಾಕರಿಸಿದ್ದಾಳೆ. ಜನವರಿ 13 ರಂದು ಸಂಜೆ ಮನೆಯಿಂದ ಹೊರಗೆ ಬಂದಿದ್ದ ಅಪ್ರಾಪ್ತೆಯನ್ನು ಚಾಕು ತೋರಿಸಿ ಬೆದರಿಸಿದ ಯುವಕ ಅಪಹರಿಸಿಕೊಂಡು ಹೋಗಿದ್ದಾನೆ.

8 ದಿನ ನಿರಂತರ ಅತ್ಯಾಚಾರ ಎಸಗಿ ಬೆದರಿಸಿದ್ದು, ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಕಾಕತಿ ಪೊಲೀಸರು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಬಿಗ್ ನ್ಯೂಸ್: ಕಾರವಾರ ಬಂದರು ಅಭಿವೃದ್ಧಿ ಕಾಮಗಾರಿಗೆ ತಡೆ

Posted: 23 Jan 2020 05:21 AM PST

ಕಾರವಾರ ವಾಣಿಜ್ಯ ಬಂದರು ಅಭಿವೃದ್ಧಿ ಕಾಮಗಾರಿಗೆ ತಡೆ ನೀಡಲಾಗಿದೆ. ಎರಡನೇ ಹಂತದ ಬಂದರು ಅಭಿವೃದ್ಧಿ ಕಾಮಗಾರಿಗೆ ಹೈಕೋರ್ಟ್ ತಡೆ ನೀಡಿದೆ.

ಬೈತಕೋಲ ಬಂದರು ಮೀನುಗಾರರ ಸಂಘದ ವತಿಯಿಂದ ಧಾರವಾಡ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದ್ದು ಇದಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ ಎನ್ನಲಾಗಿದೆ.

ಅನುಮತಿ ಪಡೆಯದೇ ಕಾಮಗಾರಿ ಮುಂದುವರಿಕೆ ಹಿನ್ನೆಲೆಯಲ್ಲಿ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರದ ಅನುಮತಿ ಪಡೆದಿಲ್ಲ. ನೋಟಿಸ್ ನೀಡಿದ್ದರೂ ಕಾಮಗಾರಿ ಮುಂದುವರಿಸಲಾಗಿತ್ತು. ಹೀಗೆ ಕಾಮಗಾರಿ ಮುಂದುವರಿಸಿದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್ ಕಡಲತೀರ ಹಿಂದಿನಂತೆ ಮರುಸ್ಥಾಪಿಸಲು ಆದೇಶಿಸಿದೆ ಎಂದು ಹೇಳಲಾಗಿದೆ.

ಸಾಗರಮಾಲಾ ಯೋಜನೆಯಡಿ ಕಾರವಾರದಲ್ಲಿ ಎರಡನೇ ಹಂತದ ಬಂದರು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಇದಕ್ಕೆ ಮೀನುಗಾರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾಮಗಾರಿಯಿಂದ ಮೀನುಗಾರಿಕೆಗೆ ತೊಂದರೆಯಾಗುತ್ತದೆ ಎಂದು ಮೀನಗಾರರು ಪ್ರತಿಭಟನೆ, ಬಂದ್ ನಡೆಸಿದ್ದರು.

ಮಲೆನಾಡಿನ ಜನತೆಗೆ ಮತ್ತೊಂದು ಕೊಡುಗೆ

Posted: 23 Jan 2020 04:48 AM PST

ಶಿವಮೊಗ್ಗ: ಮುಂದಿನ ದಿನಗಳಲ್ಲಿ ಶಿವಮೊಗ್ಗ ನಗರಕ್ಕೆ ಇನ್ನಷ್ಟು ರೈಲು ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಅವರು ಗುರುವಾರ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಶಿವಮೊಗ್ಗ ಟೌನ್-ಯಶವಂತಪುರ ವಾರದಲ್ಲಿ 4 ದಿನಗಳ ತತ್ಕಾಲ್ ವಿಶೇಷ ಎಕ್ಸ್‍ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಪ್ರಸ್ತುತ ಶಿವಮೊಗ್ಗ ನಗರಕ್ಕೆ ಒಟ್ಟು 16 ರೈಲುಗಳು ಆಗಮಿಸುತ್ತಿದ್ದು, ಕೋಟೆ ಗಂಗೂರಿನಲ್ಲಿ ರಾಜ್ಯದ ನಾಲ್ಕನೇ ರೈಲ್ವೇ ಕೋಚಿಂಗ್ ಟರ್ಮಿನಲ್ ಪ್ರಾರಂಭವಾದ ಬಳಿಕ ಇನ್ನಷ್ಟು ರೈಲು ಸಂಪರ್ಕ ಸಾಧ್ಯವಾಗಲಿದೆ. ಶಿವಮೊಗ್ಗ ರೈಲು ನಿಲ್ದಾಣ ಟರ್ಮಿನಲ್ ಆಗಿ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಲ್ಕು ರೈಲ್ವೇ ಮೇಲ್ಸೇತುವೆಗಳ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದ್ದು, ಸಧ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಇದೇ ರೀತಿ ಸವಳಂಗ ರಸ್ತೆ ಹಾಗೂ ಕಾಶೀಪುರದಲ್ಲಿ ರೈಲ್ವೇ ಮೇಲ್ಸೇತುವೆ ಮಂಜೂರಾತಿ ದೊರೆತಿದೆ. ಭದ್ರಾವತಿಯ ಕಡದಕಟ್ಟೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಶಿವಮೊಗ್ಗ ನಗರದಲ್ಲಿ ಹಲವು ವರ್ಷಗಳಿಂದ ಬಾಕಿಯಿದ್ದ ವರ್ತುಲ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ವರ್ತುಲ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಭೂಸ್ವಾಧೀನ ಇತ್ಯಾದಿ ಕಾರ್ಯಗಳಿಗೆ 20 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ 15 ದಿನಗಳಲ್ಲಿ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

420 ಕೋಟಿ ರೂ. ವೆಚ್ಚದಲ್ಲಿ ಸಿಗಂದೂರು-ಕಳಸವಳ್ಳಿ ಸೇತುವೆ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಕೊಲ್ಲೂರು ಕೊಡಚಾದ್ರಿ ನಡುವೆ 11 ಕಿಮಿ ಉದ್ದದ ಕೇಬಲ್ ಕಾರ್ ಯೋಜನೆ ಅನುಷ್ಟಾನಗೊಳಿಸಲಾಗುವುದು. ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ ಎಂದರು.

ಸ್ಮಾರಕ ಧ್ವಜ ಅನಾವರಣ: ಶಿವಮೊಗ್ಗ ರೈಲು ನಿಲ್ದಾಣದ ಹೊರಭಾಗದಲ್ಲಿ ಪ್ರತಿಷ್ಟಾಪಿಸಲಾಗಿರುವ 100ಅಡಿ  ಎತ್ತರದ ಕಂಬದ ಮೇಲೆ ಬೃಹತ್ ತ್ರಿವರ್ಣ ಸ್ಮಾರಕ ಧ್ವಜವನ್ನು ಅವರು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು.

ಶಾಸಕ ಅಶೋಕ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಮೇಯರ್ ಲತಾ ಗಣೇಶ್, ಆರ್ಯ ವೈಶ್ಯ ನಿಗಮದ ಅಧ್ಯಕ್ಷ ಅರುಣ್ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಶಾಂತರಾಜು ಮತ್ತಿತರರು ಉಪಸ್ಥಿತರಿದ್ದರು.

ಬೈಎಲೆಕ್ಷನ್ ನಲ್ಲಿ ಗೆದ್ದು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿಜೆಪಿ ನೂತನ ಶಾಸಕರಿಗೆ ‘ಬಿಗ್ ಶಾಕ್’

Posted: 23 Jan 2020 04:36 AM PST

ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನೂತನ ಶಾಸಕರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಲು ಬಿಜೆಪಿಯ ಒಂದು ಬಣ ಪ್ರಯತ್ನ ನಡೆಸಿದೆ ಎನ್ನಲಾಗಿದೆ.

ಹೊಸ ಶಾಸಕರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಲು ಬಿಜೆಪಿ ಒಂದು ತಂಡ ಕೈಹಾಕಿದೆ ಎಂದು ಹೇಳಲಾಗಿದೆ. ಉಪ ಚುನಾವಣೆಯಲ್ಲಿ ಗೆದ್ದ 6 ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುವುದು. ಉತ್ತಮ ಆಡಳಿತಕ್ಕಾಗಿ ಮೂಲ ಬಿಜೆಪಿಯವರಿಗೆ ಸಚಿವ ಸ್ಥಾನ ಕೊಡಲಾಗುವುದು. ಮೂಲ ಬಿಜೆಪಿಯ ಐವರಿಗೆ ಅವಕಾಶ ನೀಡಲೇಬೇಕಿದೆ ಎಂದು ಉಪ ಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಹೀಗೊಂದು ಸಂದೇಶ ರವಾನೆಯಾಗಿದೆ ಎಂದು ಹೇಳಲಾಗಿದೆ.

ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬನ್ನಿ. ಸ್ಪಷ್ಟ ನಿರ್ಧಾರಕ್ಕೆ ಬರುವಂತೆ 11 ಶಾಸಕರಿಗೆ ಸಂದೇಶ ನೀಡಲಾಗಿದೆ. ಒಮ್ಮತದ ನಿರ್ಧಾರ ಆಗದಿದ್ದರೆ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ.

ಈ ಬಗ್ಗೆ ಚರ್ಚೆಗಾಗಿ ಬಿಜೆಪಿ ನಾಯಕ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರ ಭೇಟಿಗೆ ಶಾಸಕರು ತೆರಳಿದ್ದು ಭೇಟಿ ಸಾಧ್ಯವಾಗದಿರುವುದಕ್ಕೆ ನಿರಾಸೆಯಾಗಿದೆ. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಕೇಂದ್ರ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ ಅಮಿತ್ ಶಾ ಭೇಟಿಗೆ ನೂತನ ಶಾಸಕರು ಹುಬ್ಬಳ್ಳಿಯಲ್ಲಿ ಪ್ರಯತ್ನಿಸಿದ್ದರೂ ಭೇಟಿಯಾಗಿರಲಿಲ್ಲ.

11 ಶಾಸಕರು, ಮೂವರು ಅನರ್ಹ ಶಾಸಕರು, ಇಬ್ಬರು ಪರಾಜಿತ ಶಾಸಕರು ಒಗ್ಗಟ್ಟಾಗಿದ್ದು, ಅವರ ಒಗ್ಗಟ್ಟು ಒಡೆಯುವ ಪ್ರಯತ್ನ ನಡೆದಿದೆ. 6  ಸಚಿವ ಸ್ಥಾನ ನೂತನ ಶಾಸಕರಿಗೆ, 5 ಸ್ಥಾನ ಮೂಲ ಬಿಜೆಪಿಗರಿಗೆ ಎಂದು ಒಗ್ಗಟ್ಟು ಒಡೆಯಲು ಒಂದು ಬಣ ಮುಂದಾಗಿರುವುದರಿಂದ ಮಿತ್ರಮಂಡಳಿ ಆತಂಕಗೊಂಡಿದೆ ಎಂದು ಹೇಳಲಾಗಿದೆ.

ಮಾವನ ಜೊತೆ ಮಲಗುವಂತೆ ಬಲವಂತ: ಮಹಿಳೆ ಮಾಡಿದ್ದೇನು ಗೊತ್ತಾ…?

Posted: 23 Jan 2020 04:28 AM PST

ತನ್ನ ತಂದೆಯೊಂದಿಗೆ ಮಲಗುವಂತೆ ಪತಿಯೇ ಪತ್ನಿಗೆ ಕಿರುಕುಳ ನೀಡಿದ್ದು ಪತಿ ವಿರುದ್ದ ಗಂಭೀರ ಆರೋಪ ಮಾಡಿದ ಮಹಿಳೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಪತಿ ಗೋಕುಲ್ ವಿರುದ್ಧ ತಾವರಗೇರಾ ಠಾಣೆ ಪೊಲೀಸರು ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ಮಹಿಳೆ ದೂರು ನೀಡಿದ್ದಾರೆ. 2018ರಲ್ಲಿ ಕಳಮಳ್ಳಿ ತಾಂಡದ ಗೋಕುಲ್ ಜೊತೆ ಮದುವೆಯಾಗಿತ್ತು.  ತನ್ನ ಮೊದಲ ಮದುವೆ ವಿಚಾರ ಮುಚ್ಚಿಟ್ಟು ಗೋಕುಲ್ ಮದುವೆಯಾಗಿದ್ದ. ಮದುವೆಯಾದ ಬಳಿಕ ಪತ್ನಿಗೆ ಕಿರುಕುಳ ನೀಡತೊಡಗಿದ್ದ. ಕಿರುಕುಳದ ಜೊತೆಗೆ ತನ್ನ ತಂದೆಯೊಂದಿಗೆ ಮಲಗುವಂತೆ ಬಲವಂತ ಮಾಡಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ದೂರು ನೀಡಲು ಹೋಗಿದ್ದರೂ ಪೊಲೀಸರು ಸ್ವೀಕರಿಸಿಲ್ಲ. ತಾವರಗೇರಾ ಠಾಣೆ ಪೊಲೀಸರ ವಿರುದ್ಧ ಮಹಿಳೆ ಆರೋಪ ಮಾಡಿದ್ದು, ಪತಿ, ತಾವರಗೇರಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್‌ ನಟ: ಸಂಭಾವನೆ ಕೇಳಿದ್ರೆ ದಂಗಾಗ್ತೀರಾ…!

Posted: 23 Jan 2020 04:19 AM PST

ಇತ್ತೀಚಿನ ವರ್ಷಗಳಲ್ಲಿ ಹತ್ತು ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಅಕ್ಷಯ್ ಕುಮಾರ್ ಇದೀಗ ಬಾಲಿವುಡ್‌ನ ಅತಿ ಬೇಡಿಕೆಯ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿ ಹೊರಹೊಮ್ಮಿದ್ದಾರೆ.

2019 ರಲ್ಲಿ ವಿಶ್ವದ ಫೋರ್ಬ್ಸ್ ಪಟ್ಟಿಯಲ್ಲಿ ಅತಿ ಹೆಚ್ಚು ಸಂಭಾವನೆ ನಟ ಎಂದು ಬಿಂಬಿತವಾಗಿದ್ದ ಅಕ್ಕಿ ಇದೀಗ ಬಾಲಿವುಡ್ ನಲ್ಲೂ ಖಾನ್ ತ್ರಯರನ್ನು ಬದಿಗೆ ಸರಿಸಿ ಗಳಿಕೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ತನು ವೆಡ್ಸ್ ಮನು ಚಿತ್ರದ ನಿರ್ದೇಶಕ ಆನಂದ್ ಎಲ್ ರೈ ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ಅಕ್ಷಯ್ ಬರೋಬ್ಬರಿ 120 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.

ಎಂಟರ್ಟೈನ್ಮೆಂಟ್ ವೆಬ್ ಸೈಟ್ ಈ ಬಗ್ಗೆ ಸುದ್ದಿ ನೀಡಿದೆ. ಅಲ್ಲದೆ ಸಾರಾ ಆಲಿಖಾನ್, ಧನುಷ್ ಜತೆ ಮತ್ತೊಂದು ‌ಚಿತ್ರದಲ್ಲೂ ಅಕ್ಷಯ್ ನಟಿಸಲಿದ್ದಾರೆ.

ಕೇವಲ ಸಿನಿಮಾ ಮಾತ್ರವಲ್ಲದೆ ಡಿಜಿಟಲ್ ಮತ್ತು ಸ್ಯಾಟಲೈಟ್ ನಲ್ಲೂ ಭಾರೀ ಬೇಡಿಕೆ ಹೊಂದಿರುವ ಅಕ್ಕಿ ಅಭಿನಯದ ‌ಚಿತ್ರಗಳು ಗಳಿಕೆಯ ಖಾತರಿ ಹೊಂದಿರುವುದು ವಿಶೇಷವಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಗುಡ್ ನ್ಯೂಸ್ 200 ಕೋಟಿ ಕ್ಲಬ್ ಸೇರಿದೆ. 2019ರಲ್ಲಿ ತೆರೆಕಂಡ ಅಕ್ಕಿ ಅಭಿನಯದ ಕೇಸರಿ. ಮಿಷನ್ ಮಂಗಲ್, ಹೌಸ್ ಫುಲ್ -4 ಕ್ರಮವಾಗಿ 154, 202, 194 ಕೋಟಿ ರೂಪಾಯಿ ಗಳಿಸಿದ್ದವು. ಹಾಗಾಗಿ ಅಕ್ಷಯ್ ಕುಮಾರ್ ಸಧ್ಯಕ್ಕೆ ಬಾಲಿವುಡ್ ನ ಭಾರೀ ಬೇಡಿಕೆಯ ನಟ ಎಂಬುದು ನಿಸ್ಸಂಶಯ.

ಮಣ್ಣಿನ ನೆರವಿಲ್ಲದ ಪೌಷ್ಟಿಕ ಬೆಳೆ ಬೆಳೆಯುವ ಪ್ರಗತಿಪರ ಕೃಷಿಕ

Posted: 23 Jan 2020 04:04 AM PST

ಒಂದು ಕಾಲದಲ್ಲಿ ಇದು ಸಾಧ್ಯ ಎನ್ನುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಿತ್ತು. ಆದರೆ ಮುಂದುವರಿದ ತಂತ್ರಜ್ಞಾನ ಮಣ್ಣಿನ ಬಳಕೆಯಿಲ್ಲದೆ ಬೆಳೆ ಬೆಳೆಯುವುದು ಸಾಧ್ಯವಾಗಿದ್ದು ಯಶಸ್ವಿಯೂ ಆಗಿದೆ.

ಹಿಮಾಚಲ ಪ್ರದೇಶದ ಉನಾ ಪಟ್ಟಣದ ಸಮೀಪದ ಹಳ್ಳಿಯಲ್ಲಿ ಮಣ್ಣನ್ನು ಬಳಸದೆ ಸೌತೆಕಾಯಿ, ಟೊಮ್ಯಾಟೊ, ಸ್ಟ್ರಾಬೆರಿ ಮೊದಲಾದ ಬೆಳೆಗಳನ್ನು ಬೆಳೆಯುತ್ತಾರೆ.

ಸಂಶೋಧನೆ ಬಳಿಕ 51 ವರ್ಷದ ‌ಯೂಸೂಫ್ ಖಾನ್ ಇದೇ ಮಾದರಿಯಲ್ಲಿ ಪ್ರಗತಿಪರ ಕೃಷಿಕ ಎನಿಸಿದ್ದು ಸೀಮಿತ ಜಾಗದಲ್ಲಿ ದೊಡ್ಡ ಪ್ರಮಾಣದ ಸಂಪಾದನೆ ಮಾಡುತಿದ್ದಾರೆ.

ಜಲಕೃಷಿ ಎಂಬ ಈ ಹೆಸರಿನ ಪದ್ದತಿಯಲ್ಲಿ ಅತಿ ಕಡಿಮೆ ನೀರು ಬಳಸುವ ಜತೆ ಯಾವುದೇ ಕ್ರಿಮಿನಾಶಕ ಬಳಸದೆ ಅಪ್ಪಟ ನೈಸರ್ಗಿಕ ರೀತಿಯಲ್ಲಿ ತರಕಾರಿ ಮತ್ತಿತರ ಉತ್ಪನ್ನ ಬೆಳೆಯಲಾಗುತ್ತದೆ.

ಮನೆಯೊಳಗೆ, ಮೇಲ್ಚಾವಣಿಯಲ್ಲಿ ಅಥವಾ ಸೀಮಿತ ಜಾಗದಲ್ಲಿ ಮಣ್ಣನ್ನು ಬಳಸದೆ ನಿರ್ದಿಷ್ಟ ಅಂತರದಲ್ಲಿ ಪೈಪ್ ಮತ್ತಿತರ ಸಲಕರಣೆಗಳ ಬಳಸಿ ಅತಿ ಕಡಿಮೆ ನೀರನ್ನು ಬಳಸಿಕೊಂಡು ಬೆಳೆ ಬೆಳೆಯಲಾಗುತ್ತದೆ.

1000 ಚದರ ಅಡಿಯಲ್ಲಿ ಈ ಪದ್ಧತಿಯ ಕೃಷಿಯಲ್ಲಿ ಪ್ರತಿ ಬೆಳೆಗೆ 3.5 ಲಕ್ಷ ಸಂಪಾದನೆ ಇದೆ ಎನ್ನುತ್ತಾರೆ ಖಾನ್.
ಈಗಾಗಲೇ ಪಾಲಂಪುರ್ ಕೃಷಿ ಮಹಾವಿದ್ಯಾಲಯ ಜಲಕೃಷಿಗೆ ಆಕರ್ಷಿತವಾಗಿ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ಕೊಡಿಸುತ್ತಿದೆ. ನಬಾರ್ಡ್ ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ರೈತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಒಟ್ಟಾರೆ ಹೊಸಕೃಷಿ ಪದ್ಧತಿ ಕಡಿಮೆ ನೀರಿನ ಜತೆ ಭೂಮಿಯ ಆಸರೆಯಿಲ್ಲದೆ ಪ್ರಸಿದ್ದಿ ಪಡೆಯುತ್ತಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪೋರ್ನ್ ವಿಡಿಯೋ ಮಾಡಿಕೊಳ್ಳುತ್ತಿದ್ದ ಜೋಡಿ: ಪತ್ತೆಗಾಗಿ ಪೊಲೀಸರು ಮಾಡಿದ್ದೇನು ಗೊತ್ತೇ…?

Posted: 23 Jan 2020 02:30 AM PST

ಅಪರಾಧಿಗಳನ್ನು ರೆಡ್‌ಹ್ಯಾಂಡ್‌ ಆಗಿ ಸೆರೆಹಿಡಿಯಲು ಪೊಲೀಸರು ಥರಾವರಿ ಜಾಲಗಳನ್ನು ಬೀಸುವುದನ್ನು ಸಾಕಷ್ಟು ಬಾರಿ ಕೇಳಿದ್ದೇವೆ.

ಕಾನೂನು ಪಾಲನೆ ಮಾಡದವರನ್ನು ಸೆರೆಹಿಡಿಯಲು ಭಾರತೀಯ ಪೊಲೀಸರಿಂದ ವಿದೇಶೀ ಪೊಲೀಸರೂ ಕೆಲವೊಂದು ಟ್ರಿಕ್‌ಗಳನ್ನು ಕಲಿಯುತ್ತಿದ್ದಾರೆ ಎನಿಸುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ತಮ್ಮದೇ ಅಶ್ಲೀಲ ಚಿತ್ರವೊಂದನ್ನು ಮಾಡಿಕೊಳ್ಳುತ್ತಿದ್ದ ಜೋಡಿಯೊಂದನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲೆಂದು ಥಾಯ್ಲೆಂಡ್ ಪೊಲೀಸರು ಖುದ್ದು ತಾವೇ ಮರವೊಂದರ ಬುಡದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾದವರಂತೆ ನಟಿಸುವ ಮೂಲಕ ಮಸ್ತ್‌ ಜಾಲವೊಂದನ್ನು ಹೆಣೆದಿದ್ದಾರೆ.

ಟೆನಿಸ್  ಕೋರ್ಟ್, ಮೋಟರ್‌ವೇ, ಅಪಾರ್ಟ್‌ಮೆಂಟ್‌ನ ಲಿಫ್ಟ್‌ ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ವಿದೇಶಿ ವ್ಯಕ್ತಿಯೊಬ್ಬನೊಂದಿಗೆ ಥಾಯ್ ಮಹಿಳೆ ವಿವಿಧ ಭಾಗಗಳಲ್ಲಿ ಸೆಕ್ಸ್‌ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಅದರ ಜಾಡು ಹಿಡಿಯಲು ಪೊಲೀಸರು ಸಖತ್‌ ತಲೆ ಕೆಡಿಸಿಕೊಂಡಿದ್ದರು.

ವಯಸ್ಕರ ಜಾಲತಾಣವೊಂದಕ್ಕೆ ಈ ವಿಡಿಯೋಗಳನ್ನು ಮಾರಾಟ ಮಾಡುವ ಮೂಲಕ ದೇಶದ 'ನೈತಿಕ ಮೌಲ್ಯ'ಗಳನ್ನು ಹಾಳು ಮಾಡುತ್ತಿದ್ದ ಆಪಾದನೆ ಈ ಜೋಡಿ ಮೇಲೆ ಕೇಳಿ ಬಂದಿತ್ತು.

ಅಜ್ಜಿಗೆ ಬರೆದ ಪತ್ರಗಳನ್ನು ಹಂಚಿಕೊಂಡ ಸೆಲೆಬ್ರಿಟಿ ಶೆಫ್ ವಿಕಾಸ್ ಖನ್ನಾ

Posted: 23 Jan 2020 02:13 AM PST

ಟೆಕ್ಸ್ಟ್‌ ಸಂದೇಶಗಳನ್ನು ಕಳಿಸುವ ಸಾಕಷ್ಟು ಕಿರು ತಂತ್ರಾಂಶಗಳಿರುವ ಈಗಿನ ಕಾಲದಲ್ಲಿ ಪತ್ರ ಮುಖೇನ, ಬರವಣಿಗೆ ಮೂಲಕ ತಂತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಪರಿಪಾಠ ನಶಿಸಿಯೇ ಹೋಗಿದೆ.

ಸೆಲೆಬ್ರಿಟಿ ಶೆಫ್‌ ವಿಕಾಸ್ ಖನ್ನಾ 20 ವರ್ಷಗಳ ಹಿಂದೆ ತಮ್ಮ ಅಜ್ಜಿಗೆ ಬರೆಯುತ್ತಿದ್ದ ಪತ್ರಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ.

ಫೆಬ್ರವರಿ 2001ರಲ್ಲಿ ನ್ಯೂಯಾರ್ಕ್‌ನಲ್ಲಿ ಡಿಶ್ ವಾಷಿಂಗ್ ಮಾಡಿಕೊಂಡು ಹೋರಾಟದ ದಿನ ಕಳೆಯುತ್ತಿದ್ದ ಇವರು, ಈ ಪತ್ರಗಳನ್ನು ಎಂದಿಗೂ ಭಾರತಕ್ಕೆ ಕಳುಹಿಸಿಲ್ಲ.

ಅಮೃತಸರದಲ್ಲಿ ಹುಟ್ಟಿದ ವಿಕಾಸ್, ತಮ್ಮ ಅಜ್ಜಿ ಮಾಡುತ್ತಿದ್ದ ರುಚಿಕರ ತಿನಿಸುಗಳನ್ನು ನೋಡುತ್ತಲೇ ಬೆಳೆದು, ಪಾಕಶಾಸ್ತ್ರದ ಮೇಲೆ ಒಲವು ಬೆಳೆಸಿಕೊಂಡು ಬಳಿಕ ತಮ್ಮದೇ ಕ್ಯಾಟರಿಂಗ್ ಬ್ಯುಸಿನೆಸ್‌ ಆರಂಭಿಸಿದ್ದರು.

ಬಳಿಕ ಮಣಿಪಾಲದಲ್ಲಿ ಖಾದ್ಯ ಶಾಲೆಯಲ್ಲಿ ವ್ಯಾಸಂಗ ಮಾಡಿದ ಖನ್ನಾ ತಮ್ಮ ಕನಸುಗಳನ್ನು ಬೆನ್ನತ್ತಿ ನ್ಯೂಯಾರ್ಕ್‌ನತ್ತ ಧಾವಿಸಿದರು.

ಈಗ ಅವರು ಮ್ಯಾನ್‌ಹಟನ್ ಹಾಗೂ ದುಬಾಯ್‌ಗಳಲ್ಲಿ ತಮ್ಮದೇ ರೆಸ್ಟೊರೆಂಟ್‌ಗಳನ್ನು ಹೊಂದಿದ್ದಾರೆ.

View this post on Instagram

Found an old letter I had written to my grandma from my early days in New York, but never mailed it. I think it was Feb, 2001. My dearest Biji (Grandma), Bow to touch your feet. I hope your health is fine. I started a new job at a small café near WTC. Its American food, I find it very bland. But I work very hard to fit in. One dishwasher is from Mexico, he is very nice to me. Reminds me of home. New York is very big and very bright and I feel invisible and lost. Winters here hurt my bones. The rain does not have any fragrance. The sweater you knitted keeps me warm. Somedays I feel that I will never find my identity here but I will keep going to make you proud one day. Promise. I miss you and my Golden Temple and my city and my Lawrence Garden and whatever I left behind. Somedays I feel that your tired prince is a slave and would never be anyone or anything. Whatever remains of me is still hopeful because of you. Remember that you used to tell me a story of a heroic seed that broke through the wall and grew. I feel good then. I am far but very close to you. Your Prince Viku

A post shared by Vikas Khanna (@vikaskhannagroup) on

ಡಾನ್ಸ್‌ ಮೂಲಕ ಮಗ್ಗಿ ಕಲಿಯುತ್ತಿರುವ ಮಕ್ಕಳ ವಿಡಿಯೋ ವೈರಲ್

Posted: 23 Jan 2020 01:55 AM PST

ಈಗ ಕರ್ನಾಟಕದ ಸರ್ಕಾರಿ ಶಾಲೆಯೊಂದು ಸುದ್ದಿಯಲ್ಲಿದೆ. ಕಾರಣ ನಲಿ- ಕಲಿ ಯೋಜನೆಯಡಿ ಇಲ್ಲಿ ವಿಶಿಷ್ಟವಾಗಿ ಹೇಳಿಕೊಡುತ್ತಿರುವುದು ನೆಟ್ಟಿಗರ ಮನ ಸೆಳೆದಿದೆ.

ಇಲ್ಲಿ ಮಕ್ಕಳು ಕುಣಿಯುತ್ತಾ ಕುಣಿಯುತ್ತಾ ಮಗ್ಗಿಯನ್ನು ಹೇಳುತ್ತಾ ಸಂತೋಷದಿಂದ ಮಸ್ತಕದಲ್ಲಿ ಮಗ್ಗಿಯನ್ನು ಅಚ್ಚಾಗಿ ಉಳಿಯುವಂತೆ ಮಾಡಿಕೊಳ್ಳುತ್ತಿರುವ ತಂತ್ರ ತುಂಬಾ ಫೇಮಸ್ ಆಗಿದೆ.

ರಾಜ್ಯದ ಹಲವು ಶಾಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ಸೃಜನಶೀಲ ಕಲಿಕೆ ಇಲ್ಲಿ ಸಾಧ್ಯವಾಗುತ್ತಿದೆ.

ಇಲ್ಲಿ ಮಕ್ಕಳು ಕೈಕೈ ಹಿಡಿದು ನೃತ್ಯ ಮಾಡುತ್ತ ಅಲ್ಲೇ ಮಗ್ಗಿಗಳನ್ನು ಪಠಿಸುತ್ತಾ ಮನನ ಮಾಡಿಕೊಳ್ಳುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

ವಾಸಂತಿ ಹರಿಪ್ರಕಾಶ್ ಎಂಬುವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹರಿಬಿಟ್ಟಿದ್ದು, ನೆಟ್ಟಿಗರಿಂದ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ನಾನು ಇಂಥ ಕನ್ನಡ ಶಾಲೆಗಳಲ್ಲಿ ಈ ರೀತಿ ಮೂರು ಮಗ್ಗಿಗಳನ್ನು ಕಲಿತಿದ್ದೇ ಆದಲ್ಲಿ ಗಣಿತ ಬರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನೃತ್ಯವಂತೂ ಖಂಡಿತಾ ಬರುತ್ತಿತ್ತು ಎಂದು ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ.

ಒಟ್ಟು 45 ಸೆಕೆಂಡ್ ಇರುವ ಈ ವಿಡಿಯೋ 10,000 ವೀಕ್ಷಣೆ ಕಂಡಿದೆ.

ಗರ್ಲ್‌ಫ್ರೆಂಡ್‌ ಮದುವೆಯಾಗುವುದನ್ನು ತಪ್ಪಿಸಿಕೊಳ್ಳಲು ಈತ ಮಾಡಿದ ಇಂಥಾ ಕೆಲಸ

Posted: 23 Jan 2020 01:50 AM PST

ಡೇಟಿಂಗ್ ಹಾಗೂ ಲಿವಿಂಗ್ ಟುಗೆದರ್‌ ಶೋಕಿಗಳು ಹೆಚ್ಚಾಗುತ್ತಿರುವ ಇಂದಿನ ದಿನಮಾನದಲ್ಲಿ ಸಾಕಷ್ಟು ಮಂದಿಗೆ ತಾವು ಪ್ರೇಮಿಸಿದ ವ್ಯಕ್ತಿಯನ್ನು ವಿವಾಹವಾಗಲು ಮನಸ್ಸಿಲ್ಲ.

ಈ ಕಾರಣದಿಂದಾಗಿ, ಮದುವೆ ಎನ್ನುವ ಕಮಿಟ್‌ಮೆಂಟ್‌ ತಪ್ಪಿಸಿಕೊಳ್ಳಲು ಸಾಕಷ್ಟು ಕಾರಣಗಳನ್ನು ಜನರು ಹುಡುಕುತ್ತಿರುತ್ತಾರೆ.

ಇಂಥದ್ದೇ ಒಂದು ನಿದರ್ಶನದಲ್ಲಿ, ಚೀನಾದ ಚೆನ್‌ ಎಂಬಾತ ತನ್ನ ಗರ್ಲ್‌ಫ್ರೆಂಡ್‌ಅನ್ನು ವಿವಾಹವಾಗುವುದನ್ನು ತಪ್ಪಿಸಿಕೊಳ್ಳಲು ವಿಚಿತ್ರ ಪ್ಲಾನ್‌ ಒಂದನ್ನು ಹೂಡಿದ್ದಾನೆ.

ಕಳ್ಳತನವೊಂದಕ್ಕೆ ಮುಂದಾಗಿ, ಪೊಲೀಸರಿಂದ ಬಂಧಿತನಾಗಿ ಕಳಂಕ ಹೊತ್ತುಕೊಂಡರೆ ತನ್ನ ಪ್ರೇಯಸಿ ಮದುವೆಯಾಗೆಂದು ಪೀಡಿಸುವುದಿಲ್ಲ ಎಂದು ಸ್ಕೆಚ್ ಹಾಕಿದ್ದಾನೆ ಈತ.

ಶಾಂಘಾಯ್‌ನ ಅಂಗಡಿಯೊಂದರಲ್ಲಿ $287 ಮೌಲ್ಯ ಬ್ಲೂಟೂತ್‌ ಸ್ಪೀಕರ್‌ ಅನ್ನು ಕದ್ದ ಈತ ನಿರೀಕ್ಷೆಯಂತೆಯೇ ಪೊಲೀಸರ ಅತಿಥಿಯಾಗಿದ್ದಾನೆ. ತನಿಖೆ ವೇಳೆ ತಾನು ಯಾಕೆ ಹೀಗೆ ಮಾಡಿದೆ ಎಂದು ಚೆನ್ ಒಪ್ಪಿಕೊಂಡಿದ್ದಾನೆ.

ಸಣ್ಣ ಅಪರಾಧಕ್ಕಾಗಿ ಹೆಚ್ಚು ದಿನ ಜೈಲಿನಲ್ಲಿ ಕಳೆಯಬೇಕಾದ ಅಗತ್ಯವಿಲ್ಲ ಎಂಬುದನ್ನು ಅರಿತೇ ತಾನು ಈ ರೀತಿ ಮಾಡಿದ್ದಾಗಿ ಚೆನ್‌ ಹೇಳಿದ್ದನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.

ತನ್ನ ಈ ಪ್ರಸಂಗದ ಬಗ್ಗೆ ತಿಳಿದು, ತನ್ನ ಪ್ರೇಯಸಿ ತನ್ನನ್ನು ವರಿಸುವ ಪ್ಲಾನ್‌ ಕೈಬಿಡಲಿದ್ದಾಳೆ ಎಂದು ಚೆನ್ ನಿರೀಕ್ಷಿಸಿದ್ದಾನೆ.

ʼಟಿಕ್ ಟಾಕ್ʼ ಸ್ಟಾರ್ ಬಾಬಾ ಜಾಕ್ಸನ್ ಜೊತೆ ಹೆಜ್ಜೆ ಹಾಕಿದ ವರುಣ್ ಧವನ್

Posted: 23 Jan 2020 01:34 AM PST

ಮುಂಬೈ: ಟಿಕ್ ಟಾಕ್ ಸ್ಟಾರ್ ಯುವರಾಜ್ ಸಿಂಗ್ ಉರುಫ್ ಬಾಬಾ ಜಾಕ್ಸನ್ ನಿಮಗೆಲ್ಲ ಗೊತ್ತೇ ಇದೆ. ಮೈಕಲ್ ಜಾಕ್ಸನ್ ರೀತಿಯ ಇವರ ಹೆಜ್ಜೆಗೆ ಮೋಡಿ ಆಗದವರೇ ಇಲ್ಲ. ಎಂತೆಂಥ ದಿಗ್ಗಜರೇ ತಲೆದೂಗಿದ್ದಾರೆ. ಈಗ ಬಾಲಿವುಡ್ ನ ಖ್ಯಾತ ನಟ ವರುಣ್ ಧವನ್ ಸರದಿ.

ತಮ್ಮ ಮುಂದಿನ ಚಿತ್ರ ಸ್ಟ್ರೀಟ್ ಡ್ಯಾನ್ಸರ್ ತ್ರಿ ಡಿ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಬಾಬಾ ಜಾಕ್ಸನ್ ಜೊತೆ ಹೆಜ್ಜೆ ಹಾಕಿದ್ದಾರೆ.

ಬಳಿಕ ಇದರ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಖ್ಯಾತ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹಾಗೂ ಮತ್ತಿತರ ಸಂಗಡಿಗರು ಈ ವೇಳೆ ಹಾಜರಿದ್ದರು. ಅವರದ್ದೇ ಚಿತ್ರದ ಮುಕಾಬಲಾ ಹಾಡಿಗೆ ಇಲ್ಲಿ ಹೆಜ್ಜೆ ಹಾಕಲಾಗಿದೆ.

ಬಾಬಾ ಜಾಕ್ಸನ್ ಅವರನ್ನು ನಿಜವಾದ “ಸ್ಟ್ರೀಟ್ ಡ್ಯಾನ್ಸರ್” ಎಂದು ಧವನ್ ಕರೆದಿದ್ದಾರೆ. ಅಲ್ಲದೆ ಅವರೊಂದಿಗೆ ಡ್ಯಾನ್ಸ್ ಮಾಡುವಾಗ ತುಂಬಾ ಮಜಾ ಬಂತು ಎಂದು ಹೇಳಿಕೊಂಡಿದ್ದಾರೆ.

ಸದ್ಯ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ 5,61,712 ವೀಕ್ಷಣೆ ಕಂಡಿದೆ.

ಲಾಹೋರ್ ನಲ್ಲಿ ಭಯ ಹುಟ್ಟಿಸಿದ ಬ್ಲ್ಯಾಕ್ ರಿಂಗ್!

Posted: 23 Jan 2020 01:28 AM PST

ಲಾಹೋರ್, ಪಾಕಿಸ್ತಾನ: ಬ್ಲ್ಯಾಕ್ ರಿಂಗ್ (ಕಪ್ಪುಬಣ್ಣದ ವೃತ್ತಾಕಾರ) ಆಗಸದಲ್ಲಿ ಕಂಡು ಲಾಹೋರ್ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಇದು ಏತಕ್ಕೆ ಆಯಿತು? ಅಸಲಿ ಕಾರಣ ಏನು? ಇದು ಅಪಾಯದ ಮುನ್ಸೂಚನೆಯೆ? ಎಂಬಿತ್ಯಾದಿ ಪ್ರಶ್ನೆಗಳು ಅಲ್ಲಿನ ನಾಗರಿಕರಲ್ಲಿ ಎದ್ದಿದ್ದು, ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಆದರೆ ನೆಟ್ಟಿಗರಿಂದ ಭಾರೀ ಚರ್ಚೆಗೆ ಒಳಗಾಗಿದೆ.

ಇದನ್ನು ಕೆಲವು ನೆಟ್ಟಿಗರು ಏಲಿಯನ್ಸ್ ಎಂದು ಹೇಳಿದರೆ, ಮತ್ತೆ ಕೆಲವರು ಎವಿಲ್ ಕ್ಲೌಡ್ (ಪ್ರೇತ ಮೋಡ) ಎಂಬಿತ್ಯಾದಿ ಆತಂಕಗಳನ್ನು ಹೊರಹಾಕಿದ್ದಾರೆ.

ಆದರೆ ಈ ರೀತಿಯ ಕಪ್ಪು ಹೊಗೆ ಇದೇ ಹೊಸತೇನಲ್ಲ. ಅಂತರ್ಜಾಲದಲ್ಲಿ ಹುಡುಕಿದರೆ ಹಲವಾರು ಇಂತಹ ನಿದರ್ಶನಗಳು ಸಿಗಲಿವೆ. ಕಳೆದ ವರ್ಷ ಖಜಾಕ್ ಎಂಬ ಹಳ್ಳಿಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಇದೇ ರೀತಿಯಾಗಿ ವೃತ್ತಾಕಾರ ಕಂಡಿತ್ತು.

ಆದರೆ ಬಳಿಕ ಇದನ್ನು ಅಧ್ಯಯನ ನಡೆಸಿದಾಗ ಅಲ್ಲೇ ಹಳ್ಳಿಯ ಸಮೀಪದಲ್ಲೇ ಬೆಂಕಿಯ ಕೆಲಸ ನಡೆಯುತ್ತಿದ್ದು, ಅದರಿಂದ ಹೀಗಾಗಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು.

ಹೀಗಾಗಿ ಈಗ ಕಂಡಿರುವ ವೃತ್ತಾಕಾರದ ಮಾದರಿಯ ಹೊಗೆ ಫ್ಯಾಕ್ಟರಿಯಿಂದ ಇಲ್ಲವೇ ಯಾವುದೋ ಮನೆಗಳಿಂದ ಬಂದಿರುವ ಹೊಗೆಯಿಂದ ನಿರ್ಮಿತವಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಈಗ ಈ ಚಿತ್ರ ನೆಟ್ಟಿಗರಿಂದ ಭಾರೀ ಪ್ರಮಾಣದಲ್ಲಿ ಶೇರ್ ಗೆ ಒಳಗಾಗುತ್ತಿದ್ದು, ಹೊಗೆಯಿಂದ ಆವೃತವಾಗಿರುವ ಲಾಹೋರ್ ನಲ್ಲಿ ಈಗ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಹಲವರು ಹಾಸ್ಯವನ್ನು ಮಾಡುತ್ತಿದ್ದಾರೆ.

ದೈತ್ಯ ಹಲ್ಲಿ ಬೇಟೆಯಾಡಿದ ಹೆಬ್ಬಾವಿನ ಚಿತ್ರ ವೈರಲ್

Posted: 23 Jan 2020 01:25 AM PST

ಪ್ರಬಲವಾಗಿ ಹಿಡಿದುಕೊಳ್ಳುವ ಹೆಬ್ಬಾವು ತನ್ನ ಬೇಟೆಯನ್ನು ಉಸಿರುಗಟ್ಟಿಸಿಯೇ ಸಾಯಿಸಿಬಿಡಬಲ್ಲದು. ಈ ಕಾರಣಕ್ಕಾಗಿಯೇ ಈ ಹೆಬ್ಬಾವುಗಳೆಂದರೆ ಜನಕ್ಕೆ ವಿಪರೀತ ಭಯ.

ಆಸ್ಟ್ರೇಲಿಯಾದಲ್ಲಿ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ನಂಬೌರ್‌ ಗ್ರಾಮದಲ್ಲಿರುವ ಚರ್ಚ್ ಒಂದರ ಕಂಬಕ್ಕೆ ಅಂಟಿಕೊಂಡಿದ್ದ ಭಾರೀ ಹಲ್ಲಿಯೊಂದನ್ನು ಹೆಬ್ಬಾವೊಂದು ನುಂಗಿಹಾಕುತ್ತಿರುವ ದೃಶ್ಯಾವಳಿಯನ್ನು ಛಾಯಾಚಿತ್ರದಲ್ಲಿ ಸೆರೆ ಹಿಡಿಯಲಾಗಿದ್ದು, ಇದೀಗ ವೈರಲ್ ಆಗಿದೆ.

ಬರಗಾಲದ ಹಿನ್ನೆಲೆಯಲ್ಲಿ ಈ ಊರಿನ ಪಕ್ಕದಲ್ಲಿಯೇ ಇರುವ ರಾಷ್ಟ್ರೀಯ ಉದ್ಯಾನವೊಂದರಲ್ಲಿ ಇರುವ ಪ್ರಾಣಿಗಳೆಲ್ಲಾ ನೀರು ಹಾಗೂ ಆಹಾರವನ್ನು ಅರಸುತ್ತಾ ಊರಿಗೆ ಬರುವುದು ಸಾಮಾನ್ಯವಾಗಿದೆ.

Our Sanctuary Park Retirement Community residents got quite the show last week when this #carpetpython landed on their…

Posted by Churches of Christ Care – Seniors Lifestyles on Monday, January 20, 2020

ದೇವಮಾನವನ ವಿರುದ್ಧ ಬ್ಲೂ ಕಾರ್ನರ್ ನೊಟೀಸ್..!!

Posted: 23 Jan 2020 01:08 AM PST

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಜಾರಿಗೊಳಿಸಲಾಗಿದ್ದು, ರೆಡ್ ಕಾರ್ನರ್ ಜಾರಿಗೊಳಿಸುವ ಬಗ್ಗೆ ಗೃಹ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ಕಳೆದ ವರ್ಷ ದಾಖಲಾಗಿರುವ ಅತ್ಯಾಚಾರ ಪ್ರಕರಣ ಹಾಗೂ ಗುಜರಾತ್‌ ಪೊಲೀಸರಿಗೂ ನಿತ್ಯಾನಂದ ಬೇಕಾಗಿದ್ದಾನೆ.

ಆದರೀಗ ವಿದೇಶದಲ್ಲಿ ತಲೆಮರೆಸಿಕೊಂಡಿರುವುದರಿಂದ ಆತನ ಪತ್ತೆಗೆ ಬ್ಲೂ ಕಾರ್ನರ್ ನೊಟೀಸ್ ಜಾರಿಗೊಳಿಸಿದ್ದಾರೆ.

ಇನ್ನು ಗೃಹ ಇಲಾಖೆ ಅಧಿಕಾರಿಗಳು ನಿತ್ಯಾನಂದ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿಗೊಳಿಸಲು ಚಿಂತನೆ ನಡೆಸಿದ್ದರು, ಕೆಲ ದೇಶಗಳು ಇದಕ್ಕೆ ಸಮ್ಮತಿಸದೇ ಇರುವುದರಿಂದ ಈ‌ ಬಗ್ಗೆ ಚಿಂತನೆ ನಡೆಸಿದ್ದಾರೆ.

ಒಂದು ವೇಳೆ ರೆಡ್ ಕಾರ್ನರ್ ನೊಟೀಸ್ ಜಾರಿಯಾದರೆ, ಈ‌ ನಿಯಮದಲ್ಲಿ ಬರುವ‌ ದೇಶದಲ್ಲಿ ನಿತ್ಯಾನಂದ ಇದ್ದರೆ ಆತನನ್ನು ಬಂಧಿಸಿ ಭಾರತೀಯ ಪೊಲೀಸರಿಗೆ ಹಸ್ತಾಂತರಿಸಬಹುದು. ಆದರೆ ಬ್ಲೂ ಕಾರ್ನರ್‌‌ನಲ್ಲಿ ಕೇವಲ ವಿಷಯ ವಿನಿಮಯಕ್ಕೆ ಮಾತ್ರ ಅವಕಾಶವಿದೆ.

ವೇತನದಾರರಿಗೆ EPFO ದಿಂದ ‘ಸಿಹಿ ಸುದ್ದಿ’

Posted: 22 Jan 2020 11:58 PM PST

ಒಂದು ವೇಳೆ ಹಳೆಯ ಉದ್ಯೋಗದಾತರು ತಮ್ಮ ನೌಕರರು ಕೆಲಸ ಬಿಟ್ಟ ನಂತರ ಅವರ ಇಪಿಎಫ್‌ಓ ಖಾತೆಯಲ್ಲಿ ಡೇಟ್ ಆಫ್ ಎಕ್ಸಿಟ್ (ಅಂದರೆ ಕೆಲಸ ಬಿಟ್ಟ ದಿನವನ್ನು ) ನಮೂದಿಸದಿದ್ದರೆ ಇನ್ನು ಮುಂದೆ ಉದ್ಯೋಗಿಯೇ ಸ್ವತಃ ಅದನ್ನು ತುಂಬಿಕೊಳ್ಳುವ ವ್ಯವಸ್ಥೆ ಇಪಿಎಫ್‌ಓ ತಂದಿದೆ.

ಈ ಹಿಂದೆ ಕೇವಲ ಕೆಲಸ ನೀಡಿದವರು ಮಾತ್ರ ಈ ಮಾಹಿತಿ ತುಂಬಬಹುದಾಗಿತ್ತು. ಕೆಲವು ಬಾರಿ ಅವರು ಡೇಟ್ ಆಫ್ ಎಕ್ಸಿಟ್ ಹಾಕುತ್ತಿರಲಿಲ್ಲ.

ಆಗ ಉದ್ಯೋಗಿಗೆ ಮುಂದೆ ಪಿಎಫ್ ಕ್ಲೇಮ್ ಮಾಡುವಾಗ ತೊಂದರೆಯಾಗುತ್ತಿತ್ತು.

ಅದನ್ನು ತಪ್ಪಿಸಲು ಕಾರ್ಮಿಕ ಭವಿಷ್ಯ ನಿಧಿ(ಇಪಿಎಫ್‌ಓ) ಈ ವ್ಯವಸ್ಥೆಯನ್ನು ತಂದಿದೆ. ಇದನ್ನು ಯುಎಎನ್ ಪೋರ್ಟಲ್‌ಗೆ ಲಾಗಿನ್ ಆಗಿ ದಿನಾಂಕವನ್ನು ಸಲ್ಲಿಸಬಹುದು. ಅದನ್ನು ಕೊನೆಯ ಸಂಬಳ ತೆಗೆದುಕೊಂಡ ಎರಡು ತಿಂಗಳ ನಂತರ ಸಲ್ಲಿಸಬಹುದು.

ಬಜೆಟ್ ದಿನವೂ ಕೆಲಸ ಮಾಡಲಿವೆ BSE ಮತ್ತು NSE

Posted: 22 Jan 2020 11:56 PM PST

ಕೇಂದ್ರ ಬಜೆಟ್‌ ಮಂಡನೆಯಾಗುವ ಫೆಬ್ರವರಿ 1ರ ಶನಿವಾರದಂದು ದೇಶದ ಮಾರುಕಟ್ಟೆಗಳಾದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ ತೆರೆದಿರಲಿವೆ ಎಂದು ಘೋಷಿಸಲಾಗಿದೆ.

2015ರಲ್ಲಿ ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡುತ್ತಿದ್ದ ಸಂದರ್ಭದಲ್ಲಿ, ಫೆಬ್ರವರಿಯ ಕಡೆಯ ಕೆಲಸದ ದಿನವಾದ 28ರಂದೂ ಸ್ಟಾಕ್ ಮಾರುಕಟ್ಟೆಗಳು ತೆರೆದೇ ಇದ್ದವು.

ಬಜೆಟ್ ಕುರಿತಂತೆ ಅದಾಗಲೇ ದಲಾಲ್ ಬೀದಿಯಲ್ಲಿ ಸಾಕಷ್ಟು ಮಾತುಕತೆಗಳು ಜೋರಾಗಿ ನಡೆಯುತ್ತಿವೆ.

ಖರೀದಿ ಹಾಗೂ ಬಳಕೆಗೆ ಉತ್ತೇಜನ ನೀಡಲೆಂದು ವೈಯಕ್ತಿಕ ತೆರಿಗೆಗಳಲ್ಲಿ ಕಡಿತ, ಸಣ್ಣ & ಮಧ್ಯಮ ಉದ್ಯಮಗಳಿಗೆ ಉತ್ತೇಜನ ಹಾಗೂ ಗೃಹ ನಿರ್ಮಾಣ ಕ್ಷೇತ್ರ ಮತ್ತು ನೀತಿಗಳಲ್ಲಿ ಇನ್ನಷ್ಟು ಆಕರ್ಷಕ ಸುಧಾರಣೆಗಳನ್ನು ತರುವ ಮೂಲಕ ಖಾಸಗಿ ಹಾಗೂ ವಿದೇಶೀ ಹೂಡಿಕೆದಾರರನ್ನು ಸೆಳೆಯುವ ಯತ್ನಗಳನ್ನು ಕೇಂದ್ರ ಸರ್ಕಾರ ಮಾಡಬಹುದೆಂಬ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಸಿಂಹಗಳ ವಿಡಿಯೋ ವೈರಲ್…!

Posted: 22 Jan 2020 11:54 PM PST

ಕಾಡಿನ ರಾಜನಿಗೆ ಎಂಥಾ ಗತಿ ಬಂತು ನೋಡಿ. ಸೂಡಾನ್ ರಾಜಧಾನಿ ಖಾರ್ಟೋಮ್ ನ ಅಲ್ ಖುರೇಷಿ ಪಾರ್ಕ್ ನಲ್ಲಿರುವ ಈ ಆಫ್ರಿಕಾದ ಸಿಂಹಗಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿವೆ.

ಇವುಗಳ ಫೋಟೋ ನೋಡಿದರೆ ಹೊಟ್ಟೆಗೆ ಏನನ್ನೂ ಕೊಡುವುದಿಲ್ಲವೇನೋ, ವೈದ್ಯಕೀಯ ಚಿಕಿತ್ಸೆ ಸಿಕ್ಕು ಯಾವ ಕಾಲವಾಯಿತೇನೊ ಎಂದೆನಿಸುವಷ್ಟು ಕನಿಕರ ಎಂಥವರಿಗೂ ಬಾರದೇ ಇರದು.

ಓಸ್ಮಾನ್ ಸಲೀಹ್ ಎಂಬ ಫೇಸ್ ಬುಕ್ ಖಾತೆದಾರರು ಇವುಗಳ ಫೋಟೋವನ್ನು ಅಪ್ಲೋಡ್ ಮಾಡಿದ್ದು, ಇನ್ ಸ್ಟಿಟ್ಯೂಷನ್ ಗಳು ಹಾಗೂ ಸಾರ್ವಜನಿಕರಿಗೆ ಸಹಾಯಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹಲವು ಆಸಕ್ತರು ಪಾರ್ಕ್ ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಕೆಲ ದಾನಿಗಳು ತಾಜಾ ಮಾಂಸ ಹಾಗೂ ಅಗತ್ಯ ವೈದ್ಯಕೀಯ ಸಲಕರಣೆಗಳೊಂದಿಗೆ ಪಾರ್ಕ್ ಗೆ ಆಗಮಿಸಿ ಸ್ಪಂದಿಸಿದ್ದಾಗಿ ಫೇಸ್ ಬುಕ್ ಪೋಸ್ಟ್ ನಲ್ಲಿ ಫೋಟೋ ಸಹಿತ ಹಾಕಿಕೊಳ್ಳಲಾಗಿದೆ. ಅಲ್ಲದೆ, ಓಸ್ಮಾನ್ ಅವರ ಪ್ರಾಣಿ ಪ್ರೀತಿ ಬಗ್ಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

ಪಾರ್ಕ್ ಅನ್ನು ಸಮರ್ಪಕವಾಗಿ ನಿರ್ವಹಿಸದಿರುವುದೂ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅಲ್ಲಿನ ಉಸ್ತುವಾರಿಯೊಬ್ಬರು ಹೇಳಿಕೊಂಡಿದ್ದಾಗಿ ವರದಿಯಾಗಿದೆ. ಆದರೆ, ನಾವು ಸ್ವಂತ ಹಣದಿಂದ ಇವುಗಳಿಗೆ ಆಹಾರ ನೀಡುತ್ತಿದ್ದೇವೆಂದು ಪಾರ್ಕ್ ನ ವ್ಯವಸ್ಥಾಪಕ ಸ್ಪಷ್ಟೀಕರಣ ಕೊಟ್ಟಿದ್ದಾರೆ.

Posted by Osman Salih on Monday, January 20, 2020

Today was a positive day at Qurashi Park. We had good meetings with the park administration and the wildlife police. It…

Posted by Osman Salih on Sunday, January 19, 2020

ಕರಡಿಗೆ ಹೆದರಿ ಪಲಾಯನ ಮಾಡಿದ ಹುಲಿಗಳು

Posted: 22 Jan 2020 11:21 PM PST

ಇದು ಹೌದೋ ಹುಲಿಯಾ ಕಥೆಯಲ್ಲ. ಓಡೋ ಹುಲಿಯಾ ವ್ಯಥೆ! ಕರಡಿಯೊಂದು 2 ಹುಲಿಗಳನ್ನೇ ಓಡಿಸಿದ್ದು, ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.
ಅದೊಂದು ಆಲಸ್ಯ ಕರಡಿ. ತನ್ನ ಪಾಡಿಗೆ ತಾನಿತ್ತು. ಅಲ್ಲಿಗೆ ಹುಲಿಯೊಂದು ಹೋಯಿತು. ಆದರೂ ಸುಮ್ಮನಿದ್ದ ಕರಡಿ ನಿಧಾನಕ್ಕೆ ಅಲ್ಲಿಂದ ಮುಂದೆ ಸಾಗಿತು. ಅಲ್ಲಿಗೂ ಹಿಂಬಾಲಿಸಿಕೊಂಡು ಬಂದಿದೆ.

ಆಗ ಸಿಟ್ಟಿಗೆದ್ದ ಕರಡಿ ಒಮ್ಮೆಲೆ ಮೈಕೊಡವಿ ಎದ್ದು ನಿಂತಿದೆ. ಇದಕ್ಕೆ ಹೆದರಿದ ಹುಲಿ ಒಂದು ಹೆಜ್ಜೆ ಹಿಂದೆ ಸರಿದಿದೆ. ಸರಿ ಹೆದರಿತು ಎಂದು ಕರಡಿ ವಾಪಸ್ ಹೊರಟರೆ ಮತ್ತೆ ಹುಲಿ ಹಿಂದೆ ಬಂದಿದೆ. ಇದು ಕರಡಿಯ ಸಿಟ್ಟನ್ನು ನೆತ್ತಿಗೇರಿಸಿತ್ತು.

ಹಾಗಾಗಿ ವಾಪಸ್ ಬಂದು ಹುಲಿಯನ್ನು ಓಡಿಸಿದೆ. ಅಲ್ಲದೆ, ಅದರ ಜತೆಗಿದ್ದ ಇನ್ನೊಂದು ಹುಲಿ ಸಹ ಹೆದರಿ ಪಲಾಯನ ಮಾಡಿದೆ.

ರಾಜಸ್ಥಾನದ ರಣತಂಬೂರ್ ನ್ಯಾಷನಲ್ ಪಾರ್ಕ್ ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ. 1.21 ನಿಮಿಷದ ವಿಡಿಯೋ ಇದಾಗಿದ್ದು, 2,000 ಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದರೆ, ಸಾವಿರಾರು ಲೈಕ್ ಗಳು ಬಂದಿವೆ.

ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಜ್ಯಸಭಾ ಸದಸ್ಯ ಪರಿಮಳ್ ನಾಥ್ವಾನಿ, ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

GST ಸಲ್ಲಿಕೆ ಇನ್ನು ಸಲೀಸು

Posted: 22 Jan 2020 11:07 PM PST

ತಂತ್ರಜ್ಞಾನ ಬಳಸಿಕೊಂಡು ಜಿ ಎಸ್ ಟಿ ರಿಟರ್ನ್ಸ್ ಸಲ್ಲಿಕೆಯನ್ನು ಮತ್ತಷ್ಟು ಸರಳೀಕೃತಗೊಳಿಸಲು ಕೇಂದ್ರ ಸರ್ಕಾರ ಐಟಿ ದಿಗ್ಗಜ ಇನ್ಫೋಸಿಸ್ ನೆರವು ಪಡೆಯುತ್ತಿದೆ.

ಇದೇ ವರ್ಷದ ಏಪ್ರಿಲ್ ಹೊತ್ತಿಗೆ ಈ ವ್ಯವಸ್ಥೆಗೆ ಚಾಲನೆ ಸಿಗಲಿದೆ. ಜತೆಗೆ ಸಲ್ಲಿಕೆಗೆ ಭಿನ್ನ ದಿನಾಂಕವನ್ನು ‌ನಿಗದಿಪಡಿಸಲಾಗುತ್ತಿದೆ.

ಜಿ ಎಸ್ ಟಿ ಆರ್3 ಬಿ ಯನ್ನು ಪ್ರತಿ ತಿಂಗಳ 20 ತಾರೀಖಿನಂದು ಸಲ್ಲಿಸಬೇಕಿದ್ದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ವಾರ್ಷಿಕ 5 ಕೋಟಿ ರೂ. ವಹಿವಾಟು ಹೊಂದಿರುವವರು ನೂತನ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ಜಿ ಎಸ್ ಟಿ ಪಾವತಿಸಬಹುದಾಗಿದೆ.

46 ಲಕ್ಷ ತೆರಿಗೆದಾರರು ತಿಂಗಳ 24ರೊಳಗೆ ರಿಟರ್ನ್ಸ್ ಸಲ್ಲಿಸಬೇಕು. ಇದರಲ್ಲಿ ಆಂಧ್ರಪ್ರದೇಶ, ಹರ್ಯಾಣ, ಹಿಮಾಚಲ ಪ್ರದೇಶ ಸಹಿತ 20 ರಾಜ್ಯಗಳು ಸೇರಿವೆ. ಕರ್ನಾಟಕ, ತಮಿಳುನಾಡು ಸಹಿತ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾವತಿದಾರರಿಗೆ ತಿಂಗಳ 22 ರ ತಾರೀಖಿನಂದು ಕೊನೆದಿನ ನಿಗದಿಗೊಳಿಸಲಾಗಿದೆ.

ತಮ್ಮ ಜೀವನದ ಅತ್ಯಂತ ಭಯಾನಕ ಸತ್ಯವನ್ನು ಬಿಚ್ಚಿಟ್ಟ ತೆಲುಗು ನಟ

Posted: 22 Jan 2020 11:01 PM PST

ಅರ್ಜುನ್ ರೆಡ್ಡಿ, ಗೀತ ಗೋವಿಂದಮ್, ಅಲಾ ವೆಂಕಟಪುರಮ್ಮಲೋನಂತಹ ಚಿತ್ರಗಳಲ್ಲಿ ನಟಿಸಿರುವ ರಾಹುಲ್ ರಾಮಕೃಷ್ಣ ತಮ್ಮ ಜೀವನದ ಅತ್ಯಂತ ಭಯಾನಕ ಸತ್ಯ ಬಿಚ್ಚಿಟ್ಟಿದ್ದಾರೆ.

ರಾಹುಲ್ ಅವರು ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದರಂತೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಆ ಘಟನೆಗಳನ್ನು ನೆನೆಸಿಕೊಂಡರೆ ಇನ್ನೂ ನೋವಾಗುತ್ತದೆ ಎಂದು ಬರೆದಿದ್ದಾರೆ.

ಹಾಗೂ ಇದರಲ್ಲಿ ಯಾವತ್ತೂ ನ್ಯಾಯ ದೊರಕುವುದಿಲ್ಲವೆಂದು ಹೇಳಿದ್ದಾರೆ.

ತಕ್ಷಣ ನೆಟ್ಟಿಗರು ರಾಹುಲ್ ಅವರಿಗೆ ಸಮಾಧಾನ ಹೇಳಿ ಧೈರ್ಯ ತುಂಬಿ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಧನ್ಯವಾದ ಅರ್ಪಿಸಿರುವ ರಾಹುಲ್ ಜನರಿಗೆ ತಮ್ಮ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಲು ಹೇಳಿದ್ದಾರೆ. ಹಾಗೂ ಅವರ ವರ್ತನೆಯಲ್ಲಿ ಬದಲಾವಣೆ ಕಂಡು ಬಂದರೆ ಸಮಾಲೋಚನೆ ನಡೆಸಲು ಹೇಳಿದ್ದಾರೆ.

ಆನಂದ್ ಮಹೀಂದ್ರ ಮನಗೆದ್ದ ಸ್ಮಾರ್ಟ್ ಶಿಕ್ಷಕಿ

Posted: 22 Jan 2020 10:08 PM PST

ಮಗ್ಗಿ ಕಲಿಯಲೆಂದು ನಾವೆಲ್ಲಾ ಶಾಲಾ ದಿನಗಳಲ್ಲಿ ಸಾಕಷ್ಟು ಶಾರ್ಟ್‌ಕಟ್‌ಗಳು ಹಾಗೂ ಟ್ರಿಕ್‌ಗಳನ್ನೆಲ್ಲಾ ಕಲಿತಿದ್ದೆವಲ್ಲ? ಅದೇ ರೀತಿಯ ಟ್ರಿಕ್‌ ಒಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ.

9ನೇ ಮಗ್ಗಿಯನ್ನು ಕಲಿಯಲು ಸರಳ ವಿಧಾನವೊಂದನ್ನು ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿರುವ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

“ಇಂಥ ಪ್ರತಿಭಾವಂತ ಗಣಿತ ಶಿಕ್ಷಕಿ ನನಗೆ ನನ್ನ ಶಾಲಾ ದಿನಗಳಲ್ಲಿ ಇದ್ದಿದ್ದರೆ, ನಾನು ಆ ವಿಷಯದಲ್ಲಿ ಇನ್ನಷ್ಟು ಹೆಚ್ಚಿನ ಅಂಕಗಳಿಸುತ್ತಿದ್ದೆ ಎನಿಸುತ್ತದೆ” ಎಂದು ಮಹೀಂದ್ರ ಈ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಕೇವಲ ಬೆರಳುಗಳನ್ನು ಬಳಸುವ ಮೂಲಕ 9ನೇ ಮಗ್ಗಿಯನ್ನು ಸುಲಭವಾಗಿ ಸ್ಮರಿಸುವಂಥ ನ್ಯಾಕ್ ಒಂದನ್ನು ಹೇಳಿಕೊಡುತ್ತಿರುವ ಶಿಕ್ಷಕಿಯ ಈ ವಿಡಿಯೋವನ್ನು ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ ಕೂಡಾ ರೀಟ್ವೀಟ್ ಮಾಡಿದ್ದಾರೆ.

“ನನ್ನ ಜೀವನ ಅನೇಕ ವಿಚಾರಗಳನ್ನು ಈ ಒಂದು ಸರಳ ಲೆಕ್ಕಾಚಾರ ಪರಿಹರಿಸಿದೆ ಎಂದು ನಾನು ಹೇಳಲಾರೆ,” ಎಂದು ಖಾನ್ ಈ ಪೋಸ್ಟ್‌ ಮೂಲಕ ಹೇಳಿಕೊಂಡಿದ್ದಾರೆ.

ತಾಜ್‌ಮಹಲ್‌ಗೆ ಗರ್ಲ್‌ಫ್ರೆಂಡ್ ಜತೆ ಭೇಟಿ ಕೊಟ್ಟ ಅಮೆಜಾನ್ ಸಂಸ್ಥಾಪಕ

Posted: 22 Jan 2020 10:04 PM PST

ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಯ ಸಂಸ್ಥಾಪಕ‌ ಹಾಗೂ ಸಿಇಒ ಆಗಿರುವ ಜೆಫ್ ಬೆಜೋಸ್ ಭಾರತ ಪ್ರವಾಸದಲ್ಲಿದ್ದು, ತಾಜ್‌ಮಹಲ್ ಮುಂದೆ ತಮ್ಮ ಗರ್ಲ್ ಫ್ರೆಂಡ್ ಜತೆ ಫೋಟೋಗೆ ಪೋಸ್ ನೀಡಿದ್ದಾರೆ.

ಭಾರತ ಪ್ರವಾಸದಲ್ಲಿರುವ 56 ವರ್ಷದ ಜೆಫ್ ತಮ್ಮ ಗರ್ಲ್ ಫ್ರೆಂಡ್ ಲೌರೆನ್ ಸನ್ಛೇಜ್ ಜತೆ ಪ್ರೇಮದ ಸಂಕೇತವಾಗಿರುವ ಆಗ್ರದ ತಾಜ್‌ಮಹಲ್‌ಗೆ ಭೇಟಿ ನೀಡಿದ್ದಾರೆ.

ಈ ವೇಳೆ ಸ್ಮಾರಕದ ಮುಂದೆ ಫೋಟೋ ತೆಗೆಸಿಕೊಂಡಿದ್ದು, ಇದೀಗ ಈ ಫೋಟೋ ವೈರಲ್ ಆಗಿದೆ.

ಈ ಹಿಂದೆ ಅನೇಕ ಸೆಲೆಬ್ರಿಟಿ‌ಗಳು ಇಲ್ಲಿ ಫೋಟೋ ತೆಗೆಸಿಕೊಂಡಿದ್ದರು. ತಾಜ್‌ಗೆ ಭೇಟಿ ನೀಡಿದ ವೇಳೆ ಜೆಫ್ ಸೂಟ್‌ನಲ್ಲಿದ್ದರೆ, ಲೌರೆನ್ ಆರೆಂಜ್ ಹಾಗೂ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ.

ಇದಕ್ಕೂ ಮೊದಲು ಪರಿಸರ ಜಾಗೃತಿಯ ನಿಟ್ಟಿನಲ್ಲಿ ಅಮೆಜಾನ್ ಆರಂಭಿಸಿರುವ ಎಲೆಕ್ಟ್ರಿಕ್ ಡೆಲಿವರಿ ವಾಹನಗಳನ್ನು ಅವರು ಬಿಡುಗಡೆಗೊಳಿಸಿದರು.

ನಿರ್ಭಯ ‘ಹತ್ಯಾ’ಚಾರಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಏಕೆ ಸಾಧ್ಯವಿಲ್ಲ…? ಇಲ್ಲಿದೆ ನೋಡಿ….

Posted: 22 Jan 2020 09:38 PM PST

Nirbhaya convicts unlikely to be hanged on February 1

ಇಡೀ ದೇಶವನ್ನು ತಲ್ಲಣ‌ಗೊಳಿಸಿದ್ದ ದೆಹಲಿ ನಿರ್ಭಯ ‘ಹತ್ಯಾ’ಚಾರದ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಿ, ಎರಡು ವಾರ ಕಳೆದರೂ ಗಲ್ಲುಕಂಬಕ್ಕೆ ಮಾತ್ರ ಅಪರಾಧಿಗಳು ಏರಿಲ್ಲ. ಇದಕ್ಕೆ ಕಾರಣ ಇಲ್ಲಿದೆ.

ಈ ಹಿಂದೆ ಜ.22ಕ್ಕೆ ಗಲ್ಲಿಗೇರಿಸಲು ಸುಪ್ರೀಂ ಕೋರ್ಟ್ ಡೆತ್ ವಾರೆಂಟ್ ಹೊರಡಿಸಿತ್ತು. ಆದರೆ ನಾಲ್ವರ ಪೈಕಿ‌ ಇಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರಿಂದ ಇದು ರದ್ದಾಗಿತ್ತು.

ಇದೀಗ ನಾಲ್ಕರ ಪೈಕಿ ವಿನಯ್ ರಾಷ್ಟ್ರಪತಿಗಳ ಮುಂದೆ ಕ್ಷಮಾಪಣಾ ಅರ್ಜಿ‌ ಸಲ್ಲಿಸಿದ್ದು, ನ್ಯಾಯಾಂಗ ಹೋರಾಟವನ್ನು ಮುಂದುವರಿಸುವ ಲೆಕ್ಕಾಚಾರದಲ್ಲಿರುವುದರಿಂದ ಫೆ.1 ದಿನಾಂಕವೂ ಮುಂದೆ‌ ಹೋಗುವುದು ಖಚಿತ.

ಆದರೆ ಅನೇಕರಲ್ಲಿ ನಾಲ್ವರ ಪೈಕಿ ಒಬ್ಬರು ಅರ್ಜಿ ಸಲ್ಲಿಸಿದರೂ ಎಲ್ಲರ ಗಲ್ಲು ಶಿಕ್ಷೆಯನ್ನು ಏಕೆ ಮುಂದಾಕಬೇಕು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಣ, 1982ರ ಸುಪ್ರೀಂ ಕೋರ್ಟ್ ತೀರ್ಪು. ಹರ್ಬನ್ಸ್ ಸಿಂಗ್ ಹಾಗೂ ಉತ್ತರಪ್ರದೇಶ ಸರಕಾರದ‌ ನಡುವಿನ ಕೊಲೆ ಪ್ರಕರಣ‌ ಒಂದರ ಮೂವರು ಅಪರಾಧಿಗಳ ಪೈಕಿ ಒಬ್ಬ ನ್ಯಾಯಾಂಗ ಹೋರಾಟ ಮುಂದುವರಿಸಿದ್ದ. ಆ ವೇಳೆ ಅವನನ್ನು ಬಿಟ್ಟು ಇನ್ನಿಬ್ಬರನ್ನು ಗಲ್ಲಿಗೇರಿಸಲು ಮಂದಾದಾಗ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿ, ಒಂದು‌ ಅಪರಾಧಕ್ಕೆ‌ ಒಂದೇ ರೀತಿಯ ಶಿಕ್ಷೆಯಾಗಬೇಕು.

ಇನ್ನೊಬ್ಬರು‌ ನ್ಯಾಯಾಂಗ ಹೋರಾಟದಲ್ಲಿರುವಾಗ ಉಳಿದವರಿಗೆ ಗಲ್ಲಾಗಿ, ಆತನಿಗೆ ಮಾತ್ರ ಕ್ಷಮಾದಾನ ಸಿಕ್ಕರೆ ಇನ್ನುಳಿದವರಿಗೆ ಅನ್ಯಾಯವಾಗುತ್ತದೆ ಎನ್ನುವ‌ ವಾದ‌ ಮಂಡಿಸಿದ್ದರು.

ಆದ್ದರಿಂದ ಪ್ರಕರಣವೊಂದರಲ್ಲಿ ಗಲ್ಲುಶಿಕ್ಷೆಗೆ ಗುರಿಯಾದ ಎಲ್ಲರನ್ನೂ ಒಂದೇ ಬಾರಿಗೆ ಗಲ್ಲಿಗೆ ಏರಿಸಬೇಕು ಎಂದು ಅದೇಶ‌ ನೀಡಿತ್ತು.‌ ಅದೇ ಆದೇಶ ನಿರ್ಭಯ ಅಪರಾಧಿಗಳ ಗಲ್ಲುಶಿಕ್ಷೆಯನ್ನು ಇನ್ನಷ್ಟು ದಿನ ವಿಳಂಬವಾಗುವಂತೆ ಮಾಡುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ಮಕ್ಕಳ ಮುದ್ದಾದ ಚಿತ್ರ ಶೇರ್‌ ಮಾಡಿಕೊಂಡ ಸ್ಮೃತಿ ಇರಾನಿ

Posted: 22 Jan 2020 09:09 PM PST

ತಮ್ಮ ಸೋಷಿಯಲ್ ಮೀಡಿಯಾ ಕೌಶಲ್ಯಗಳಿಗೆ ಹೆಸರಾಗಿರುವ ಕೆಲವೇ ಭಾರತೀಯ ಸಚಿವರಲ್ಲಿ ಒಬ್ಬರು ಸ್ಮೃತಿ ಇರಾನಿ.

ಕೇಂದ್ರ ಸಚಿವೆ ಸ್ಮೃತಿ ತಮ್ಮ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ ಖಾತೆಗಳ ಮೂಲಕ ಅನೇಕ ಇಂಟರೆಸ್ಟಿಂಗ್ ಮೆಮೆಗಳು ಹಾಗೂ ತಮ್ಮ ಕುಟುಂಬದ ಫನ್ನಿ ಘಟನೆಗಳ ಬಗ್ಗೆ ವಿವರಿಸುವ ಮೂಲಕ ತಮ್ಮ ಫಾಲೋವರ್‌ಗಳನ್ನು ಎಂಟರಟೇನ್ ಮಾಡುತ್ತಾ ಇರುತ್ತಾರೆ.

ತಮ್ಮ ಮುದ್ದು ಮಕ್ಕಳಾದ ಝೋಹ್ರ್‌ ಇರಾನಿ ಹಾಗೂ ಶಾನೆಲ್ಲೆ ಇರಾನಿಯವರ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸ್ಮೃತಿ, “ನನ್ನ ಮಕ್ಕಳು….. ಜಗಳವಾಡುವ ಮೂಡ್‌ನಲ್ಲಿ ಇಲ್ಲದೇ ಇರುವಾಗ” ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಈ ಚಿತ್ರವನ್ನು ಕಂಡ ಅನೇಕ ನೆಟ್ಟಿಗರು ಖುದ್ದು ತಂತಮ್ಮ ಬಾಲ್ಯದ ದಿನಗಳಲ್ಲಿ ಒಡಹುಟ್ಟಿದವರೊಂದಿಗೆ ಕಚ್ಚಾಡಿಕೊಂಡ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ.

ಆದಾಯ ತೆರಿಗೆ ಸ್ಲಾಬ್‌ಗಳಲ್ಲಿ ಮಹತ್ವದ ಮಾರ್ಪಾಡುಗಳ ನಿರೀಕ್ಷೆ

Posted: 22 Jan 2020 09:07 PM PST

ಆದಾಯ ತೆರಿಗೆ ಸ್ಲಾಬ್‌ಗಳಲ್ಲಿ ಮಾರ್ಪಾಡು ಮಾಡಬಹುದು ಎಂಬ ಕಾತರದಿಂದ ದೇಶದ ಮಧ್ಯಮ ವರ್ಗ ಈ ಬಾರಿಯ ಬಜೆಟ್ ಗೆ ಕಾಯುತ್ತಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಈ ನಿಟ್ಟಿನಲ್ಲಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

ಐದು ಪ್ರತಿಶತ ಆದಾಯ ತೆರಿಗೆ ಸ್ಲಾಬ್‌ಅನ್ನು 2.5 – 5 ಲಕ್ಷ ರೂ.ಗಳ ಬದಲಾಗಿ 2.5 – 7 ಲಕ್ಷ ರೂ.ಗಳಿಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 7-10 ಲಕ್ಷ ರೂ ವಾರ್ಷಿಕ ವರಮಾನದವರಿಗೆ 10 ಪ್ರತಿಶತ ಹಾಗೂ 10 – 20 ಲಕ್ಷ ರೂ. ವರಮಾನದವರಿಗೆ 20 ಪ್ರತಿಶತದಷ್ಟು ತೆರಿಗೆ ವಿಧಿಸುವ ಸಾಧ್ಯತೆಗಳಿವೆ.

ಇನ್ನು 20 ಲಕ್ಷ ರೂ.ಗಳಿಂದ 10 ಕೋಟಿ ರೂ.ಗಳ ವರೆಗೆ 30 ಪ್ರತಿಶತ ಹಾಗೂ 10 ಕೋಟಿ ರೂ.ಗಳಿಗಿಂತ ಮೇಲ್ಪಟ್ಟ ಆದಾಯದವರಿಗೆ 35 ಪ್ರತಿಶತದಷ್ಟು ಆದಾಯ ತೆರಿಗೆ ಅನ್ವಯವಾಗುವ ಸಾಧ್ಯತೆಗಳಿವೆ.

ಈ ಮೇಲ್ಕಂಡ ಮಾರ್ಪಾಡುಗಳಾದಲ್ಲಿ ವೇತನದಾರ ವರ್ಗಗಳಿಗೆ ದೊಡ್ಡ ರಿಲೀಫ್‌ ಕೊಟ್ಟಂತೆ ಆಗಲಿದೆ.