Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Sunday, January 19, 2020

Kannada News | Karnataka News | India News

Kannada Dunia | Kannada News | Karnataka News | India News

Kannada News | Karnataka News | India News


ಅಪ್ಪನಿಗೇ ಆಟ ಆಡಿಸಲು ಹೊರಟ ಪುತ್ರ ಯಾವಾಗ ಸಿಕ್ಕಿಬಿದ್ದ ಗೊತ್ತೇ?

Posted: 19 Jan 2020 07:28 AM PST

ಸ್ವತಃ ಅಪ್ಪನಿಗೇ ಪ್ರಾಂಕ್‌ ಮಾಡುವಷ್ಟು ಧೈರ್ಯ ಅದೆಷ್ಟು ಮಂದಿಗೆ ಇರುತ್ತದೆ ಹೇಳಿ? ಇಂಥದ್ದೇ ಒಂದು ಘಟನೆಯ ಬಗ್ಗೆ ರೆಡ್ಡಿಟ್ ಬಳಕೆದಾರನೊಬ್ಬ ಹೇಳಿಕೊಂಡಿದ್ದಾನೆ.

ಸೀಮನ್‌ದಿಸೇಲರ್‌ ಹೆಸಿರಿನ ಈತ ತನ್ನ ಅಪ್ಪನಿಗೆ ಸೇರಿದ ಪದಾರ್ಥಗಳನ್ನು ಒಂದೊಂದಾಗಿ ಮೇಲ್ಛಾವಣಿಗೆ ಅಂಟಿಸುತ್ತಲೇ ಬಂದಿದ್ದಾನೆ.

ಮೊದಲಿಗೆ ಅಪ್ಪನ ಕನ್ನಡಕವನ್ನು ಮೇಲ್ಛಾವಣಿಗೆ ಅಂಟಿಸಿದ ಈತ, ಅದನ್ನು ಆತನ ತಂದೆ ಗಮನಿಸದೇ ಇದ್ದಾಗ, ಮಾರನೇ ದಿನ ಅವರ ಫೋನ್‌ ಕ್ಲಿಪ್‌ಅನ್ನು ಅಲ್ಲಿಗೆ ಅಂಟಿಸಿದ್ದಾನೆ.

ಇಷ್ಟಾದ ಮೇಲೂ ಏನಾಗುತ್ತಿದೆ ಎಂದು ಅಪ್ಪನಿಗೆ ಗೊತ್ತಾಗದೇ ಇದ್ದಾಗ ಈ ಚೇಷ್ಟೆ ಪುತ್ರ ತನ್ನಪ್ಪನ ಶೂವೊಂದನ್ನೇ ಗೋಡೆಗೆ ತಗುಲಿಹಾಕಿದ್ದಾನೆ.

ಇದಾದ ಬಳಿಕ ಟಿವಿ ರಿಮೋಟ್ ಅಂಟಿಸಿದ್ದಾನೆ. ಎಷ್ಟು ದಿನ ಅಂತ ಹೀಗೇ ನಡೆಯಲು ಸಾಧ್ಯ? ಮೇಲ್ಛಾವಣಿಯನ್ನು ಒಂದು ದಿನ ಹೀಗೇ ಗಮನಿಸಿದ ತಂದೆ, ಅವೆಲ್ಲವನ್ನೂ ಕೆಳಗೆ ಇಳಿಸಲು ಪುತ್ರನಿಗೆ ಸೂಚಿಸಿದ್ದಾರೆ.

ಆಮೇಲೆ ಇನ್ನೇನು? ತನ್ನ ತುಂಟಾಟಕ್ಕೆ ಬ್ರೇಕ್‌ ಬಿದ್ದ ಬಳಿಕ ಮಗ ಅವುಗಳನ್ನು ಒಂದೊಂದಾಗಿ ಕೆಳಗೆ ಇಳಿಸಿದ್ದಾನೆ.

“ನಡೆದಾಡುವ ಸ್ನೇಹಿತ” ಊಬರ್ ಕ್ಯಾಬ್ ನ ಹೊಸ ಅಯ್ಕೆ?

Posted: 19 Jan 2020 07:26 AM PST

ಪ್ರಸ್ತುತ ದಿನಗಳಲ್ಲಿ ಕ್ಯಾಬ್ ಬಳಕೆ ಅನಿವಾರ್ಯ ಎನಿಸುವಷ್ಟರಮಟ್ಟಿಗೆ ಬೆಸೆದುಕೊಂಡಿದೆ.

ವಿಶೇಷವೆಂದರೆ ಊಬರ್ ಕ್ಯಾಬ್ ಸೇವೆಯಲ್ಲಿ ನಡೆದಾಡುವ ಸ್ನೇಹಿತ (ವಾಕಿಂಗ್ ಬುಡ್ಡಿ) ಆಯ್ಕೆ ಸಿಕ್ಕಿದ್ದು ಬಳಕೆ ದಾರರು ಸಂತಸದಿಂದ ಹಂಚಿಕೊಂಡಿದ್ದಾರೆ.

ಜಾಸ್ಮಿನ್ ಎಂಬ ಅಮೆರಿಕದ ಮಹಿಳೆ ಲಗ್ವಾರ್ಡಿಯಾ ವಿಮಾನ ನಿಲ್ದಾಣ ಕ್ಕೆ ತೆರಳಲು ಆ್ಯಪ್ ಮುಖೇನ ಟ್ಯಾಕ್ಸಿ ಬುಕ್ ಮಾಡಿದ್ದಾರೆ.

ಈ ವೇಳೆ ವಾಕಿಂಗ್ ಬುಡ್ಡಿ ( ನಡೆದಾಡುವ ಸ್ನೇಹಿತ) ಎಂಬ ಆಯ್ಕೆ ಮೂಲಕ ಕಾದಿರಿಸಿದ್ದಾರೆ.
ವಾಸ್ತವವಾಗಿ 1400 ರೂಪಾಯಿ ಆಗಬೇಕಿದ್ದ ಕಾರಿನ ಬಾಡಿಗೆ ವಾಕಿಂಗ್ ಬುಡ್ಡಿಯಲ್ಲಿ ಕೇವಲ 500 ರೂಪಾಯಿ ಮಾತ್ರ ವಿಧಿಸಲ್ಪಟ್ಟಿದೆ.

ಈ ಬಗ್ಗೆ ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಹಲವರು ಇಂತಹ ಆಯ್ಕೆ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದಾರೆ.

ಫ್ಲೈ ಓವರ್ ಕೆಳಗೆ ಮಲಗುತ್ತಿದ್ದ ಕ್ಯಾನ್ಸರ್ ರೋಗಿಗಳಿಗೆ ಕೊನೆಗೂ ಸಿಕ್ತು “ಗುಡ್ ನ್ಯೂಸ್”

Posted: 19 Jan 2020 07:24 AM PST

ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಕ್ಯಾನ್ಸರ್ ಚಿಕಿತ್ಸೆಗೆ ಬಂದ ನೂರಾರು ಬಡ ರೋಗಿಗಳು ಕೊಠಡಿಗಳಿಗೆ ಹಣ ನೀಡಲಾಗದೆ ಹಿಂದ್ ಮಾತಾ ಫ್ಲೈ ಓವರ್ ಕೆಳಗೆ ಆಶ್ರಯ ಪಡೆಯುತ್ತಿದ್ದರು.

ಈ ಸುದ್ದಿ ಮಾಧ್ಯಮದಲ್ಲಿ ಪ್ರಕಟ ಆಗುತ್ತಿದ್ದಂತೆ ಜಾಲತಾಣದಲ್ಲಿ ವೈರಲ್ ಆಗಿತ್ತು.

ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದವರು ಕೂಡ ಅಲ್ಲಿ ಸರಿಯಾದ ಹಾಸಿಗೆ ಹಾಗೂ ಹೊದ್ದುಕೊಳ್ಳಲು ಇಲ್ಲದೆ ದೂಳಿನಲ್ಲಿ ಮಲಗುತ್ತಿದ್ದರು.

ಈ ಸುದ್ದಿ ವೈರಲ್ ಆದ ನಂತರ ಸರ್ಕಾರದ ವಿರುದ್ದ ಕಠಿಣವಾದ ಟೀಕೆ ವ್ಯಕ್ತವಾಗಿತ್ತು.ನಂತರ ಎಚ್ಚೆತ್ತ ಸರ್ಕಾರ ಈ ರೋಗಿಗಳಿಗೆ ಬೇರೆ ಕಡೆ ಆಶ್ರಯ ನೀಡಿದೆ. ದಾದರ್ ಹಾಗೂ ಪರೇಲ್‌ನಲ್ಲಿರುವ ಧರ್ಮಶಾಲಾಗಳಿಗೆ ರೋಗಿ ಹಾಗೂ ಅವರ ಸಂಬಂಧಿಕರಿಗೆ ಸ್ಥಳಾಂತರಿಸಲಾಗಿದ್ದು ಉಚಿತ ಆಹಾರ ಕೂಡ ನೀಡಲಾಗುತ್ತಿದೆ. ಅವರ ಜೊತೆ ಹಲವು ಸ್ವಯಂ ಸೇವಾ ಸಂಸ್ಥೆಗಳೂ ಕೈ ಜೋಡಿಸಿವೆ.

ಒಂದು ವರ್ಷದಿಂದ ಒಂದೇ ಅಂಗಡಿಗೆ ನಿತ್ಯ ಭೇಟಿ ಕೊಡುತ್ತಿರುವ ಬೀದಿ ನಾಯಿ.. ತಪ್ಪದೆ ನೋಡಿ ಅದರ ಕಥೆ

Posted: 19 Jan 2020 07:22 AM PST

ತಾನು ಕೆಲಸ ಮಾಡುವ ಸ್ಟೋರ್‌ಗೆ ಪ್ರತಿನಿತ್ಯ ಸಂಜೆ ವೇಳೆಗೆ ಸ್ನಾಕ್ಸ್‌‌ ಬೇಕೆಂದು ಭೇಟಿ ನೀಡುವ ಬೀದಿ ನಾಯಿಯೊಂದರ ಕಥೆಯನ್ನು ಸಬ್‌ವೇ ಉದ್ಯೋಗಿಯೊ‌ಬ್ಬ ಹಂಚಿಕೊಂಡಿದ್ದಾನೆ.

ಈ ನಾಯಿಗೆ ಪ್ರೀತಿಯಿಂದ 'ಸಬ್‌ವೇ ಸಾಲ್ಲಿ' ಎಂದು ಹೆಸರಿಡಲಾಗಿದ್ದು, ನ್ಯೂ ಮೆಕ್ಸಿಕೋ ನಗರದಲ್ಲಿರುವ ಪೋರ್ಟೆಲ್ಸ್‌‌ನಲ್ಲಿರುವ ಸ್ಯಾಂಡ್‌ವಿಚ್‌ ಸ್ಟೋರ್‌ಗೆ ಪ್ರತಿನಿತ್ಯ ಸಂಜೆ ಭೇಟಿ ನೀಡುತ್ತದೆ.

ಕಳೆದೊಂದು ವರ್ಷದಿಂದ ಪ್ರತಿ ಸಂಜೆ ಸ್ಟೋರ್‌ಗೆ ಬರುತ್ತಿರುವ ಸಾಲ್ಲಿಯ ವಿಡಿಯೋವೊಂದನ್ನು ಟಿಕ್‌ಟಾಕ್‌ ಮೂಲಕ ಶೇ‌ರ್‌ ಮಾಡಿಕೊಂಡಿದ್ದಾರೆ ಸ್ಟೋರ್‌ ಉದ್ಯೋಗಿ ಗಿಯೋವಾನ್ನಿ ಲೂಮನ್.

ಟಿಕ್‌ಟಾಕ್‌ನಲ್ಲಿ 33 ಲಕ್ಷ ವೀವ್ಸ್‌ ಕಂಡ ಈ ವಿಡಿಯೋ ಟ್ವಿಟರ್‌ನಲ್ಲೂ ಭಾರೀ ಸದ್ದು ಮಾಡುತ್ತಿದೆ. ಒಂದು ವೇಳೆ ಸಬ್‌ವೇನಲ್ಲಿ ಊಟ ಸಿಗುವುದು ತಡವಾದರೆ ಸಾಲ್ಲಿ ಬೇರೊಂದು ಸ್ಟೋರ್‌ಗೆ ಹೋಗಿಬಿಡುತ್ತಾಳೆ. ಅಷ್ಟರ ಮಟ್ಟಿಗೆ ಇದೆ ಇವಳ ಹವಾ.

ಈ ಕನ್ನಡ ಸಿನಿಮಾದ ಟ್ರೈಲರ್ ಗೆ ಬಂತು ನೋಡಿ ಸೂಪರ್ ರೆಸ್ಪಾನ್ಸ್!

Posted: 19 Jan 2020 07:10 AM PST

ಸ್ಯಾಂಡಲ್ವುಡ್ ನಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ನಾನು ಮತ್ತು ಗುಂಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಿದೆ. ಜನವರಿ 24ರಂದು ಚಿತ್ರ ತೆರೆಗೆ ಅಪ್ಪಳಿಸಿದೆ. ಈಗಾಗ್ಲೇ ಪೋಸ್ಟರ್ಸ್ ಮತ್ತು ಟೀಸರ್ ಗಳಿಂದ ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಹುಟ್ಟಿಸಿದ ಈ ಚಿತ್ರದ ಟ್ರೈಲರ್ ಈಗ ಅಭಿಮಾನಿಗಳ ಕುತೂಹಲವನ್ನು ಡಬಲ್ ಮಾಡಿದೆ.

ನಾನು ಮತ್ತು ಗುಂಡ ಟ್ರೈಲರ್  ಸಖತ್ ಇಂಟ್ರೆಸ್ಟಿಂಗ್ ಆಗಿದೆ.  ಮನುಷ್ಯ ಮತ್ತು ಪ್ರಾಣಿ ನಡುವಿನ ಭಾವನಾತ್ಮಕ ಸಂಬಂಧ ಹೊಂದಿರುವ ಒಂದು ನೈಜ್ಯ ಘಟನೆಯನ್ನಾಧರಿಸಿ ಮಾಡಿರುವ ನಾನು ಮತ್ತು ಗುಂಡ ಸಿನಿಮಾದ ಟ್ರೈಲರ್ ಎಲ್ಲಾ ರೀತಿಯ ಮನರಂಜನೆ ನೀಡಲು ಯಶಸ್ವಿಯಾಗಿದೆ.

ಚಿತ್ರದಲ್ಲಿ ಶಿವರಾಜ್ ಕೆ.ಆರ್ ಪೇಟೆ ಪಾತ್ರ ಪ್ರಮುಖವಾಗಿ ಕಾಣ್ತಿದ್ದು, ಸಿಂಬಾ ( ನಾಯಿ) ಪಾತ್ರ ಹೈಲೈಟ್ ಆಗಿದೆ. ಇವ್ರ ಜೊತೆಗೆ ಸಂಯುಕ್ತ ಹೊರನಾಡು, ಗೋವಿಂದೇ ಗೌಡ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನ ಭರವಸೆ ಮೂಡಿಸಿದ್ದು, ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಗಾಂಧಿಗಿರಿ ನಿರ್ದೇಶಕ ರಘು ಹಾಸನ್  ಚಿತ್ರವನ್ನ ನಿರ್ಮಿಸಿದ್ದಾರೆ.

ಪೊಲೀಸ್ ಇಲಾಖೆ ಹೆಸರಲ್ಲಿ ಹರಿದಾಡಿದೆ ಹೀಗೊಂದು ಸುಳ್ಳುಸುದ್ದಿ: ಕಠಿಣ ಕ್ರಮದ ‘ಎಚ್ಚರಿಕೆ’

Posted: 19 Jan 2020 06:17 AM PST

ಯಾದಗಿರಿ: ಫೇಸ್‌ಬುಕ್ ಮತ್ತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಪ್ರಕಟಣೆ ಹೆಸರಿನಲ್ಲಿ ಸುಳ್ಳುಸುದ್ದಿ ಹರಿದಾಡುತ್ತಿದ್ದು, ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು ಮತ್ತು ಬೇರೆಯವರಿಗೆ ಕಳುಹಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಅವರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲಾ ಪೊಲೀಸ್ ಪ್ರಕಟಣೆ ಎಂದು ನಮೂದಿಸಿ, "ಯಾರಾದರೂ ಮನೆ ಹತ್ತಿರ ಬಂದು ನಾವು ಸರಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ. ಇನ್ಸುಲಿನ್, ವಿಟಾಮಿನ್ ಇಂಜೆಕ್ಷನ್ ಮಾಡ್ತಿವಿ ಅಂತಾ ಹೇಳಿದರೆ ನಂಬಬೇಡಿ. ನಂಬಿ ಆತುರಪಟ್ಟು ಮಾಡಿಸಿಕೊಳ್ಳದಿರಿ. ಜಿಹಾದಿ ಟೆರರಿಸ್ಟಗಳು ಈ ರೀತಿ ಯಾಮಾರಿಸಿ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್ ಮಾಡುತ್ತಿದ್ದಾರೆ ಅಂತೆ, ಜಾಗೃತಿಯಿಂದಿರಿ. ನಿಮಗೆ ಸಂಬಂಧಿಸಿದ ಎಲ್ಲಾ ಗ್ರೂಪ್‌ಗಳಿಗೆ ಕಳುಹಿಸಿ ಅಮಾಯಕರ ಪ್ರಾಣ ಉಳಿಸಿರಿ. ಇಂತಿ ನಿಮ್ಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಯಾದಗಿರಿ ಜಿಲ್ಲೆ" ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಪರಿಶೀಲಿಸಿ ಸಂದೇಶ ಕಳಿಸಿದವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಅಥವಾ ಶೇರ್ ಮಾಡುವವರ ವಿರುದ್ಧ ಕೂಡ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ಬರೆದ ರೋಹಿತ್ ಶರ್ಮಾ

Posted: 19 Jan 2020 06:14 AM PST

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ.

ಏಕದಿನ ಕ್ರಿಕೆಟ್ನಲ್ಲಿ 9 ಸಾವಿರ ರನ್ ಕಲೆಹಾಕಿದ ರೋಹಿತ್ ಶರ್ಮಾ ಅತಿವೇಗವಾಗಿ 9 ಸಾವಿರ ರನ್ ಗಳಿಸಿದ ಮೂರನೇ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಂದ್ಯದ ಮೊದಲ ಓವರ್ ನಲ್ಲಿ ಎರಡು ರನ್ ಗಳಿಸಿದ ಕೂಡಲೇ ಅವರು ಈ ಸಾಧನೆ ಮಾಡಿದ್ದಾರೆ.

ರೋಹಿತ್ ಶರ್ಮಾ 216 ಇನಿಂಗ್ಸ್ ಗಳಲ್ಲಿ 9 ಸಾವಿರ ರನ್  ಕಲೆಹಾಕಿದ್ದಾರೆ. ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧ ಶತಕ ಗಳಿಸಿದ್ದು, ಇದು 44 ನೇ ಅರ್ಧ ಶತಕವಾಗಿದೆ. 72 ರನ್ ಗಳಿಸಿದ ರೋಹಿತ್ ಶರ್ಮಾ ಆಟ ಮುಂದುವರೆಸಿದ್ದಾರೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 196 ಇನಿಂಗ್ಸ್ ಗಳಲ್ಲಿ 9 ಸಾವಿರ  ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 205 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ 235, ಎಂಎಸ್ ಧೋನಿ 244, ಸೌರವ್ ಗಂಗೂಲಿ 288 ಇನ್ನಿಂಗ್ಸ್ ಗಳಲ್ಲಿ 9 ಸಾವಿರ ರನ್ ಗಳಿಸಿದ್ದಾರೆ.

ಶೂಟಿಂಗ್ ವೇಳೆಯಲ್ಲೇ ಮತ್ತೊಂದು ವಿಘ್ನ, ಚಿತ್ರೀಕರಣ ಸ್ಥಗಿತಗೊಳಿಸಿ ‘ಭಜರಂಗಿ 2’ ಚಿತ್ರತಂಡ ವಾಪಸ್

Posted: 19 Jan 2020 04:55 AM PST

'ಭಜರಂಗಿ 2' ಚಿತ್ರದ ಪ್ರಮುಖ ದೃಶ್ಯ ಚಿತ್ರೀಕರಣ ನಡೆಯುತ್ತಿದ್ದ ವೇಳೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಮರಸರ ಹಳ್ಳಿ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಚಿತ್ರತಂಡ ನಡೆಯುವ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದೆ.

ಬೆಂಕಿ ಶೂಟಿಂಗ್ ಸೆಟ್ ಗೆ ವ್ಯಾಪಿಸಿ ಸೆಟ್ ಗೆ ವ್ಯಾಪಿಸಿದ್ದು, ಸಂಪೂರ್ಣ ಹಾನಿಯಾಗಿದೆ. ದುಬಾರಿ ವೆಚ್ಚದಲ್ಲಿ ನಿರ್ಮಿಸಿದ್ದ ಸೆಟ್ ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಇನ್ನು ಅವಘಡದ ವೇಳೆ ಶಿವಣ್ಣ ಸೇರಿದಂತೆ ಚಿತ್ರತಂಡದವರು ಅಪಾಯದಿಂದ ಪಾರಾಗಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳದಲ್ಲಿದ್ದ ಎಲ್ಲರನ್ನು ಹೊರಗೆ ಕರೆತರಲಾಗಿದೆ. ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಅನಾಹುತ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಳಿಸಿದ ಚಿತ್ರತಂಡ ಸ್ಥಳದಿಂದ ವಾಪಸ್ಸಾಗಿದೆ. 4 ದಿನದ ಅವಧಿಯಲ್ಲಿ 'ಭಜರಂಗಿ 2' ಚಿತ್ರಕ್ಕೆ 3 ನೇ ಅವಘಡ ಉಂಟಾಗಿದೆ.

ಮೃತಪಟ್ಟ ಮೂಕ ಪ್ರಾಣಿಗಳಿಗೆ ಕಲಾವಿದ ಶ್ರದ್ಧಾಂಜಲಿ ಅರ್ಪಿಸಿದ್ದು ಹೇಗೆ ಗೊತ್ತಾ?

Posted: 19 Jan 2020 04:44 AM PST

 

ಕಳೆದ ಸೆಪ್ಟೆಂಬರ್‌ನಿಂದಲೂ ಬೆಂದು ಹೋಗಿರುವ ಆಸ್ಟ್ರೇಲಿಯಾದ ಕಾಳ್ಗಿಚ್ಚು ಕಳೆದ ಗುರುವಾದ ಬಿದ್ದ ಮಳೆಯಿಂದಾಗಿ ಸ್ವಲ್ಪ ತಣ್ಣಗಾಗಿದ್ದರೂ ಸಹ ದಕ್ಷಿಣ ಹಾಗೂ ಆಗ್ನೇಯ ಭಾಗಗಳಲ್ಲಿನ ಕೆನ್ನಾಲಗೆ ಇನ್ನೂ ಆರಿಲ್ಲ.

ಜೀವ ವೈವಿಧ್ಯ ತಜ್ಞರ ಅಂದಾಜಿನ ಪ್ರಕಾರ ಕಾಳ್ಗಿಚ್ಚಿನಲ್ಲಿ ಮೃತಪಟ್ಟ ಪ್ರಾಣಿಗಳ ಸಂಖ್ಯೆ ಶತಕೋಟಿ ದಾಟಿರುವ ಸಾಧ್ಯತೆ ಇದೆ. ಈ ದುರಂತದ ಘನಘೋರತೆಯನ್ನು ಕಣ್ಣಿಗೆ ಕಟ್ಟಿಕೊಡುವ ಯತ್ನ ಮಾಡಿರುವ ಕಲಾವಿದರೊಬ್ಬರು, ಇಲ್ಲಿನ ಕಡಲ ತೀರದಲ್ಲಿ ಕೊಲಾದ ಬೃಹತ್‌ ಚಿತ್ರವೊಂದನ್ನು ಬಿಡಿಸಿ, ತಮ್ಮದಲ್ಲದ ತಪ್ಪಿಗೆ ಪ್ರಾಣತೆತ್ತ ಮೂಕ ಜೀವಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇಲ್ಲಿನ ಸರ್ಫ್‌ಕೋಸ್ಟ್ ಹಾಗೂ ಗೀಲಾಂಗ್ ಬೀಚ್‌ಗಳಲ್ಲಿ ಬೃಹತ್‌ ಚಿತ್ರಗಳನ್ನು ಕಲಾವಿದ ಬಿಡಿಸಿದ್ದಾನೆ. ಈ ಸಂದರ್ಭದಲ್ಲೂ ಸಹ ಕಾಳ್ಗಿಚ್ಚಿನಿಂದ ದಟ್ಟವಾಗಿ ಹೊರಬರುತ್ತಿದ್ದ ಹೊಗೆಯನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

View this post on Instagram

Australia Burns – in this photo smoke over powers the afternoon sun and I am standing in the artwork smelling the smoke the fire 🔥- SurfCoast and Geelong Beaches "CLOSED" – Wildlife Death Toll estimated over ONE BILLION animals – some species may now become endangered

Gameforumer QR Scan

Gameforumer QR Scan
Gameforumer QR Scan