Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Saturday, January 18, 2020

Kannada News | Karnataka News | India News

Kannada News | Karnataka News | India News


ಕಡಿಮೆ ಸಂಭೋಗ ಬೆಳೆಸುವ ಮಹಿಳೆಯರಿಗೆ ಬೇಗ ಕಾಡುತ್ತೆ ಋತುಬಂಧ

Posted: 18 Jan 2020 07:27 AM PST

ಲೈಂಗಿಕತೆ ಹಾಗೂ ಋತುಬಂಧಕ್ಕೆ ಸಂಬಂಧವಿದೆ. ಹೆಚ್ಚು ಸಂಭೋಗ ಬೆಳೆಸುವ ಮಹಿಳೆಯರಲ್ಲಿ ಋತುಬಂಧ ಬಹುಬೇಗ ಬರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಸಂಶೋಧನೆಯೊಂದರ ಪ್ರಕಾರ ವಾರಕ್ಕೆ ಒಂದು ಬಾರಿ ಸಂಭೋಗ ಬೆಳೆಸುವ ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ತಿಂಗಳಿಗೆ ಒಮ್ಮೆ ಸಂಭೋಗ ಬೆಳೆಸುವ ಮಹಿಳೆಯರಲ್ಲಿ ಬೇಗ ಮುಟ್ಟು ನಿಲ್ಲುತ್ತದೆಯಂತೆ.

ಜೀವನದ ಮಧ್ಯ ವಯಸ್ಸಿನಲ್ಲಿ ಅಂದ್ರೆ 35 ವರ್ಷ ವಯಸ್ಸಿನಲ್ಲಿ ಅತಿ ಕಡಿಮೆ ಬಾರಿ ಸಂಭೋಗ ಬೆಳೆಸುವ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಮಹಿಳೆ ಲೈಂಗಿಕತೆಯನ್ನು ಹೊಂದಿಲ್ಲದಿದ್ದರೆ ಮತ್ತು ಗರ್ಭಧರಿಸಲು ಅವಕಾಶವಿಲ್ಲದಿದ್ದರೆ, ದೇಹವು ಅಂಡೋತ್ಪತ್ತಿಯನ್ನು ನಿಲ್ಲಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದು ದೇಹ ಹೆಚ್ಚು ರೋಗಕ್ಕೊಳಗಾಗುವಂತೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಮಹಿಳೆಯರ ಮುಟ್ಟು ನಿಂತಾಗ ಅದನ್ನು ಋತುಬಂಧದ ಸ್ಥಿತಿ ಎಂದು ಕರೆಯಲಾಗುತ್ತದೆ. ಇದನ್ನು ಫಲವತ್ತತೆಯ ಅಂತ್ಯವೆಂದು ಪರಿಗಣಿಸಲಾಗುತ್ತದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕುರಿತು ಹರಿದಾಡ್ತಿದೆ ಇಂತಹ ಸುದ್ದಿ

Posted: 18 Jan 2020 07:08 AM PST

'ಬಾಹುಬಲಿ 2' ಬಳಿಕ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶಿಸುತ್ತಿರುವ 'ಆರ್.ಆರ್.ಆರ್.' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಲಿದ್ದಾರೆ.

ರಾಜಮೌಳಿ ನಿರ್ದೇಶನದ 'ಈಗ' ಮತ್ತು 'ಬಾಹುಬಲಿ'ಯಲ್ಲಿ ಅಭಿನಯಿಸಿದ್ದ ಸುದೀಪ್ 'ಬಾಹುಬಲಿ 2'ರಲ್ಲಿ ಕಾಣಿಸಿಕೊಂಡಿರಲಿಲ್ಲ. 'ಆರ್.ಆರ್.ಆರ್.' ಚಿತ್ರದಲ್ಲಿ ಸುದೀಪ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸುದೀಪ್ ಪೊಲೀಸ್ ಅಧಿಕಾರಿಯಾಗಿ ಮಹತ್ವದ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಜೂನಿಯರ್ ಎನ್.ಟಿ.ಆರ್. ಮತ್ತು ರಾಮ್ ಚರಣ್ ಅವರು ಸುದೀಪ್ ಪಾತ್ರ ಮಾಡಲಿ ಎಂದು ಅಪೇಕ್ಷಿಸಿದ್ದಾರೆ. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್.ಆರ್.ಆರ್.' ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿರುವ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಭರ್ಜರಿ ಸುದ್ದಿಯಾಗಿದೆ. 'ಸೈರಾ ನರಸಿಂಹ ರೆಡ್ಡಿ', 'ದಬಾಂಗ್-3', 'ಪೈಲ್ವಾನ್'ನಂತಹ ಬಹುಭಾಷೆಯ ಚಿತ್ರಗಳಲ್ಲಿ 2019 ರಲ್ಲಿ ಮಿಂಚು ಹರಿಸಿದ್ದ ಸುದೀಪ್ ಈ ವರ್ಷ 'ಕೋಟಿಗೊಬ್ಬ 3' ಮೂಲಕ ಎಂಟ್ರಿ ಕೊಡಲಿದ್ದಾರೆ.

ಶಿವರಾಜ್ ಕೆ.ಆರ್. ಪೇಟೆ ಕೊಟ್ಟ ಸರ್ಪ್ರೈಜ್ ಏನು…?

Posted: 18 Jan 2020 07:00 AM PST

ಶಿವರಾಜ್ ಕೆ.ಆರ್.ಪೇಟೆ ಅಭಿನಯದ ನಾನು ಮತ್ತು ಗುಂಡ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಸ್ಯಾಂಡಲ್ವುಡ್ ಗೆ ಅನೇಕ ದಿನಗಳ ನಂತ್ರ ಪ್ರಾಣಿಯನ್ನು ಮುಖ್ಯ ಪಾತ್ರವನ್ನಾಗಿಟ್ಟುಕೊಂಡು ಚಿತ್ರ ನಿರ್ಮಾಣ ಮಾಡಲಾಗ್ತಿದೆ. ಈಗಾಗಲೇ ಅಭಿಮಾನಿಗಳ ಗಮನ ಸೆಳೆದಿರುವ ನಾನು ಮತ್ತು ಗುಂಡ ಚಿತ್ರದ ಟ್ರೈಲರ್ ಜನವರಿ 18ರಂದು ಸಂಜೆ 6.30ಕ್ಕೆ ಬಿಡುಗಡೆಯಾಗಬೇಕಾಗಿತ್ತು. ಆದ್ರೆ ಕಾರಣಾಂತರದಿಂದ ಟ್ರೈಲರ್ ಬಿಡುಗಡೆ ಒಂದು ದಿನ ಮುಂದಕ್ಕೆ ಹೋಗಿದೆ.

ಈ ಬಗ್ಗೆ ನಟ ಶಿವರಾಜ್ ಕೆ ಆರ್ ಪೇಟೆ ಹಾಗೂ ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದೆ ಜನವರಿ 19ರಂದು ಭಾನುವಾರ ಸಂಜೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ಮೂಲಕ ಸಿನಿಮಾದ ಟ್ರೈಲರ್ ಬಿಡುಗಡೆಗೊಳ್ಳಲಿದೆ ಎಂದವರು ಹೇಳಿದ್ದಾರೆ.

ವಿಶೇಷ ಅಂದ್ರೆ ಲೇಟಾದ್ರು ಲೇಟೆಸ್ಟಾಗಿ ಚಿತ್ರರಸಿಕರಿಗೆ ಒಂದು ಸರ್ಪ್ರೈಸ್ ಕೊಡೋಕೆ ಚಿತ್ರ ತಂಡ ರೆಡಿಯಾಗಿದೆ. ಆ ಸರ್ಪ್ರೈಜ್ ಏನೂ ಎಂಬ ಗುಟ್ಟನ್ನ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಬಿಗ್ ನ್ಯೂಸ್: ಮಲೆನಾಡು ಬೆಚ್ಚಿ ಬೀಳಿಸಿದ್ದ ಪ್ರಕರಣ: ಹಂತಕರಿಬ್ಬರಿಗೆ ಮರಣ ದಂಡನೆ

Posted: 18 Jan 2020 06:24 AM PST

ಚಿಕ್ಕಮಗಳೂರು: ಶೃಂಗೇರಿ ತಾಲ್ಲೂಕಿನಲ್ಲಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಇಬ್ಬರಿಗೆ ಚಿಕ್ಕಮಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಪ್ರದೀಪ್ ಮತ್ತು ಸಂತೋಷ್ ಶಿಕ್ಷೆಗೆ ಒಳಗಾದವರು.

2016ರ ಫೆಬ್ರವರಿ 16ರಂದು ಕಾಲುದಾರಿಯಲ್ಲಿ ಮನೆಗೆ ತೆರಳುತ್ತಿದ್ದ ಪ್ರಥಮ ಪದವಿ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರವೆಸಗಿದ್ದ ಇಬ್ಬರು ಬಳಿಕ ಆಕೆಯನ್ನು ಕೊಲೆ ಮಾಡಿ ಪಾಳುಬಾವಿಗೆ ಹಾಕಿದ್ದರು. ಈ ಘಟನೆಯಿಂದಾಗಿ ಮಲೆನಾಡು ಬೆಚ್ಚಿಬಿದ್ದು ಹೆಣ್ಣುಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸಲು ಪೋಷಕರು ಭಯ ಪಡುವಂತಾಗಿತ್ತು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಇಬ್ಬರಿಗೆ ಮರಣದಂಡನೆ ಶಿಕ್ಷೆ ನೀಡಿದೆ. ಮೃತ ವಿದ್ಯಾರ್ಥಿನಿಯ ತಂದೆ ದಿನವೂ ಬೈಕ್ ನಲ್ಲಿ ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದರು. ಬಳಿಕ ಅವರೇ ಮನೆಗೆ ಕರೆದುಕೊಂಡು ಬರುತ್ತಿದ್ದರು. ಘಟನೆ ನಡೆದ ದಿನದಂದು ಬೇಗನೆ ಪರೀಕ್ಷೆ ಮುಗಿದ ಕಾರಣ ವಿದ್ಯಾರ್ಥಿನಿ ಓದಿಕೊಳ್ಳುವ ಉದ್ದೇಶದಿಂದ ಬೇಗನೆ ಮನೆಗೆ ಹೊರಟಿದ್ದಾಳೆ. ಆಕೆ ಕಾಲುದಾರಿಯಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಸಂತೋಷ್ ಮತ್ತು ಪ್ರದೀಪ್ ಅತ್ಯಾಚಾರವೆಸಗಿ ಕೊಲೆ ಮಾಡಿ ಮೃತದೇಹವನ್ನು ಹಾಳುಬಾವಿಗೆ ಎಸೆದಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದು, ನ್ಯಾ. ಉಮೇಶ ಎಂ. ಅಡಿಗೆ ತೀರ್ಪು ನೀಡಿದ್ದು ಸರ್ಕಾರಿ ಅಭಿಯೋಜಕ ಯಳಗೇರಿ ವಾದ ಮಂಡಿಸಿದ್ದರು.

ಸ್ವಂತ ನಗರ ನಿರ್ಮಿಸಲು ಮುಂದಾದ ಆಫ್ರಿಕಾದ ಹಾಡುಗಾರ

Posted: 18 Jan 2020 05:52 AM PST

90 ರ ದಶಕದ ಮಕ್ಕಳಿಗೆ ಚೆನ್ನಾಗಿ ಪರಿಚಿತವಿರುವ ರ‍್ಯಾಪರ್‌‌ ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಆಫ್ರಿಕಾದ ಗ್ರಾಮೀಣ ಪ್ರದೇಶಗಳಲ್ಲಿರುವ ಜನರ ಜೀವನಮಟ್ಟಗಳಲ್ಲಿ ಸುಧಾರಣೆ ತರಲು ಶ್ರಮಿಸುತ್ತಿರುವ ಈತ,

ಇದೀಗ ತನ್ನದೇ ಥೀಮ್‌ ಇರುವ ‘ವಕಾಂಡಾ' ಹೆಸರಿನ ನಗರವೊಂದನ್ನು ನಿರ್ಮಿಸಲು ಚಿಂತನೆ ನಡೆಸಿದ್ದಾರೆ.

2018ರಲ್ಲಿ ತಮ್ಮ ಕನಸಿನ ‘ಕ್ರಿಪ್ಟೋ ಸಿಟಿ' ನಿರ್ಮಾಣದ ಘೋಷಣೆ ಮಾಡಿದ್ದ ಅಕಾನ್‌, ಇದೀಗ ತನ್ನ 'ಅಕಾನ್ ಸಿಟಿ'ಯ ರೂಪುರೇಷೆಗೆ ಅಂತಿಮ ಟಚ್‌ ಕೊಟ್ಟಿದ್ದು,

ಈ ಕುರಿತಂತೆ ಟ್ವಿಟರ್‌ನಲ್ಲಿ ಘೋಷಿಸಿರುವ ಅವರು, ತನ್ನ ಈ ನಗರದಲ್ಲಿ ಅಕಯಾನ್ ಎಂಬ ಡಿಜಿಟಲ್ ಕರೆನ್ಸಿಯಲ್ಲಿಯೇ ಎಲ್ಲ ವ್ಯವಹಾರವೂ ನಡೆಯಲಿದೆ ಎಂದಿದ್ದಾರೆ. ನಗರದ ಇಂಧನ ಬೇಡಿಕೆಯನ್ನು ನವೀಕರಿಸಬಲ್ಲ ಮೂಲಗಳಿಂದ ಪೂರೈಕೆ ಮಾಡಲಾಗುವುದು.

ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿರುವ ಈ ನಗರವನ್ನು 2000 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಗಾಯಕನಿಗೆ ಆ ದೇಶದ ಅಧ್ಯಕ್ಷರು ಗಿಫ್ಟ್ ಕೊಟ್ಟಿದ್ದಾರೆ. ಮಾರ್ಚ್‌ನಲ್ಲಿ ನಗರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದ್ದು, ದಶಕದ ಕಾಲ ನಡೆಯಲಿದೆ.

ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Posted: 18 Jan 2020 05:45 AM PST

ಶಿವಮೊಗ್ಗ: ಪ್ರಯಾಣಿಕರೊಬ್ಬರು ಆಟೋದಲ್ಲಿಯೇ ಬಿಟ್ಟು ಹೋಗಿದ್ದ ಹಣದ ಬ್ಯಾಗ್ ಮರಳಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಮೈಸೂರಿನಿಂದ ಶಿವಮೊಗ್ಗಕ್ಕೆ ರೈಲ್ ನಲ್ಲಿ ಬಂದ ಪ್ರಯಾಣಿಕರು ಅಲ್ಲಾ ಬಕಶ್ ಅವರ ಆಟೋ ಹತ್ತಿದ್ದು, ಅಲ್ಲೇ ತಮ್ಮ ಬ್ಯಾಗ್ ಅನ್ನು ಬಿಟ್ಟು ಹೋಗಿದ್ದಾರೆ. ಆ ಬ್ಯಾಗ್ ಗಮನಿಸಿದ ಅಲ್ಲಾ ಬಕಶ್ ಪ್ರಾಮಾಣಿಕತೆಯಿಂದ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಜೀರ್ ಸಾಬ್, ರೈಲ್ವೆ ಸ್ಟೇಷನ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಸಮ್ಮುಖದಲ್ಲಿ ಪ್ರಯಾಣಿಕರಿಗೆ ವಾಪಸ್ ಕೊಟ್ಟಿದ್ದಾರೆ.

ಬ್ಯಾಗ್ ನಲ್ಲಿ 3000 ನಗದು, 5 ಸಾವಿರ ರೂ. ಮೌಲ್ಯದ ಹೊಸ ಬಟ್ಟೆಗಳು ಇದ್ದವು. ಆಟೋ ಚಾಲಕ ಅಲ್ಲಾ ಬಕಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸಚಿವ ಸ್ಥಾನಾಕಾಂಕ್ಷಿಗಳಿಗೆ ಶುಭ ಸುದ್ದಿ: ಸಂಪುಟ ವಿಸ್ತರಣೆಗೆ ಅಮಿತ್ ಶಾ ‘ಗ್ರೀನ್ ಸಿಗ್ನಲ್’

Posted: 18 Jan 2020 05:10 AM PST

ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯಕ್ಕೆ ಭೇಟಿ ನೀಡಿರುವ ಅಮಿತ್ ಶಾ ಬೆಳಗ್ಗೆಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆದಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಿದ ಇಬ್ಬರು ನಾಯಕರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿ ನೀವೇ ಸಮಯ ನಿಗದಿ ಮಾಡಿಕೊಳ್ಳಿ ಎಂದು ಯಡಿಯೂರಪ್ಪ ಅವರಿಗೆ ಅಮಿತ್ ಶಾ ತಿಳಿಸಿದ್ದಾರೆ ಎನ್ನಲಾಗಿದೆ.

ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಾಳೆ ಯಡಿಯೂರಪ್ಪ ವಿದೇಶ ಪ್ರವಾಸಕ್ಕೆ ತೆರಳಿ ದಾವೋಸ್ ನಿಂದ ವಾಪಸಾದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎನ್ನಲಾಗಿದೆ.

ಇಂದಿನ ಸ್ಥಿತಿಗೆ ಧರ್ಮದ ಆಧಾರದಲ್ಲಿ ದೇಶ ವಿಭಜಿಸಿದ ಕಾಂಗ್ರೆಸ್ ಕಾರಣ: ಅಮಿತ್ ಶಾ ಆಕ್ರೋಶ

Posted: 18 Jan 2020 04:58 AM PST

ಯಾವ ಪಕ್ಷ ದೇಶ ವಿಭಜನೆ ಮಾಡಿದೆಯೋ ಅವರು ಕೇಳಿಸಿಕೊಳ್ಳಲಿ. ರಾಹುಲ್ ಗಾಂಧಿಯವರೇ ನಾವು ಹೇಳುವುದನ್ನು ಕೇಳಿಸಿಕೊಳ್ಳಿ. ದೇಶದ ಇಂದಿನ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸಿಎಎ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಎರಡನೇ ಬಾರಿಗೆ ಪ್ರಧಾನಿಯಾದ ನಂತರ ಹಲವು ಬದಲಾವಣೆ ಮಾಡಿದ್ದಾರೆ. ದೇಶದಲ್ಲಿ 70 ವರ್ಷ ಮಾಡಲಾಗದ ಬದಲಾವಣೆ ಮಾಡಿದ್ದಾರೆ. ಪ್ರಧಾನಿ ಮೋದಿ ಕಠಿಣ ನಿರ್ಧಾರ ಕೈಗೊಂಡಿರುವ ಕಾರಣ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ದೂರಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಅಲ್ಪಸಂಖ್ಯಾತರಿಗೆ ನಾಗರಿಕತ್ವ ನೀಡುವ ಕಾನೂನಾಗಿದೆ. ರಾಹುಲ್ ಗಾಂಧಿಯವರೇ ಕೇಳಿಸಿಕೊಳ್ಳಿ. ಕಾಂಗ್ರೆಸ್ ದೇಶವನ್ನು ಇಬ್ಬಾಗ ಮಾಡಿದೆ. ಧರ್ಮದ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿದ್ದು ಕಾಂಗ್ರೆಸ್. ದೇಶದ ಇಂದಿನ ಸ್ಥಿತಿಗೆ ಕಾಂಗ್ರೆಸ್ ಕಾರಣ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು ಆ ಪಕ್ಷದವರಿಗೆ ಇಷ್ಟವಿಲ್ಲ. ಕಾಯ್ದೆಯ ಬಗ್ಗೆ ಅವರಿಗೆ ಮಾಹಿತಿ ಇಲ್ಲವಾಗಿದೆ ಎಂದು ಹೇಳಿದ್ದಾರೆ.

ನೆಹರೂ, ಲಿಯಾಖತ್ ಅಲಿ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲಿನ ಅಲ್ಪಸಂಖ್ಯಾತರು ಭಾರತಕ್ಕೆ ಬಂದರೆ ನಾಗರಿಕತ್ವ ಕೊಡುವ ಒಪ್ಪಂದ ಮಾಡಿಕೊಂಡಿದ್ದರು. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಏನಾಗಿದೆ ಎಂದು ತಿಳಿದುಕೊಳ್ಳಿ. ಪಾಕಿಸ್ತಾನದಲ್ಲಿ ಶೇಕಡ 30 ರಷ್ಟು ಅಲ್ಪಸಂಖ್ಯಾತರು ಇದ್ದರು. ಈಗ ಪಾಕಿಸ್ತಾನದಲ್ಲಿ ಹಿಂದೂಗಳ ಶೋಷಣೆ ನಡೆಯುತ್ತಿದೆ. ದೇವಾಲಯ ಕೆಡವಲಾಗುತ್ತಿದೆ. ಅಲ್ಲಿನ ಹಿಂದುಗಳಿಗೆ ರಕ್ಷಣೆ ಕೊಡುವುದು ತಪ್ಪಾ? ಅವರಿಗೆ ಪೌರತ್ವ ನೀಡುವುದು ಅಪರಾಧವೇ? ನಮ್ಮವರಿಗೆ ನಾವು ರಕ್ಷಣೆ ನೀಡಬಾರದೆ? ಇದಕ್ಕೆ ಕಾಂಗ್ರೆಸ್ ವಿರೋಧ ಏಕೆ ಎಂದು ಪ್ರಶ್ನಿಸಿದ್ದಾರೆ.

ಸರ್ದಾರ್ ವಲ್ಲಭ ಭಾಯ್ ಪಟೇಲ್ ಬಳಿಕ ದೇಶದ ಸಮರ್ಥ ಗೃಹಸಚಿವ ಅಮಿತ್ ಶಾ

Posted: 18 Jan 2020 04:50 AM PST

ಹುಬ್ಬಳ್ಳಿ: ದೇಶದ ಜ್ವಲಂತ ಸಮಸ್ಯೆಗಳಿಗೆ ಅಮಿತ್ ಶಾ ಅವರಿಂದ ಪರಿಹಾರ ಸಿಕ್ಕಿದೆ. ಹೆಚ್ಚಿನ ಸ್ಥಾನ ಗೆದ್ದು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ನಡೆದ ಪೌರತ್ವ ಕಾಯ್ದೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಬಳಿಕ ಗೃಹ ಸಚಿವರಾಗಿ ಅಮಿತ್ ಶಾ ಪರಿಣಾಮಕಾರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಬೇಕಾದ ಅನಿವಾರ್ಯತೆ ಇತ್ತು. ಇದಕ್ಕಾಗಿ ಅಮಿತ್ ಶಾ ಲೋಕಸಭೆ ರಾಜ್ಯಸಭೆಯಲ್ಲಿ ಯಾವ ರೀತಿ ಅಂಗೀಕಾರ ಪಡೆದರು ಎಂಬುದು ನಮಗೆಲ್ಲ ಗೊತ್ತಿರುವ ವಿಷಯ. ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತರ ಶೋಷಣೆ ನಡೆಯುತ್ತಿತ್ತು. ಭಾರತದಲ್ಲಿ ಆಶ್ರಯ ಪಡೆದ ಅವರಿಗೆಲ್ಲ ಪೌರತ್ವ ಸಿಗುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಅಮಿತ್ ಶಾ ಬಂದಿದ್ದಾರೆ ಎಂದು ಹೇಳಿದ್ದಾರೆ.

ಬಜೆಟ್ ನಲ್ಲಿ ರೈತರು, ದಲಿತರು, ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಖ್ಯಾತ ನಟಿ: ಆಸ್ಪತ್ರೆಗೆ ದಾಖಲು

Posted: 18 Jan 2020 04:17 AM PST

ಮುಂಬೈ: ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಮುಂಬೈ -ಪುಣೆ ಎಕ್ಸ್ ಪ್ರೆಸ್ ವೇ ನಲ್ಲಿ ಶನಿವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ ನಟಿ ಶಬಾನಾ ಆಜ್ಮಿ ಗಾಯಗೊಂಡಿದ್ದಾರೆ.

ಮುಂಬೈನಿಂದ 60 ಕಿಲೋಮೀಟರ್ ದೂರದಲ್ಲಿರುವ ಖಲಾಪುರ ಸಮೀಪ ಮಧ್ಯಾಹ್ನ 3.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ರಾಯಘಡ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಪರಾಸ್ಕರ್ ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಶಬಾನಾ ಆಜ್ಮಿ ಅವರನ್ನು ಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಲ್ಮೆಟ್ ಧರಿಸದಿದ್ದರೆ ಪ್ರಬಂಧ ಬರೆಯುವ ಶಿಕ್ಷೆ

Posted: 18 Jan 2020 04:14 AM PST

ಪರಿಷ್ಕೃತ ಮೋಟಾರು ವಾಹನ ಕಾಯಿದೆ ಪ್ರಕಾರ ದೊಡ್ಡ ಮೊತ್ತದ ದಂಡ ಹಾಕಿದರೂ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸುವವರ ಸಂಖ್ಯೆ ಕಡಿಮೆಯಾಗಿಲ್ಲ.

ಹಾಗಾಗಿ ‌ಮಧ್ಯಪ್ರದೇಶ ಪೊಲೀಸರು ಇದಕ್ಕೊಂದು ಹೊಸ ಉಪಾಯ ಕಂಡುಕೊಂಡಿದ್ದಾರೆ.

ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್ ಪೊಲೀಸರು ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವವರಿಗೆ 100 ಪದಗಳಲ್ಲಿ ಯಾವ ಕಾರಣಕ್ಕೆ ಹೆಲ್ಮೆಟ್ ಹಾಕಿಲ್ಲ ಎಂದು ಪ್ರಬಂಧ ಬರೆಯುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಕಳೆದ ಆರು ದಿನಗಳಲ್ಲಿ 150 ಮಂದಿ ಹೆಲ್ಮೆಟ್ ಹಾಕದೆ ಗಾಡಿ ಓಡಿಸುವವರು ಸಿಕ್ಕಿಬಿದ್ದಿದ್ದು, 100 ಪದಗಳ ಪ್ರಬಂಧ ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ಅಧಿಕಾರಿ ರಸ್ತೆ ಸುರಕ್ಷತಾ ಸಪ್ತಾಹದ ಬಳಿಕವೂ ಇದೇ ನೀತಿ ಮುಂದುವರೆಸಲಾಗುವುದು ಎಂದಿದ್ದಾರೆ.

ಕೋಪಗೊಂಡ ಆನೆ ಈ ಲಾರಿಗೆ ಏನು ಮಾಡಿತೆಂದು ನೋಡಿ

Posted: 18 Jan 2020 04:03 AM PST

ಕೋಪಗೊಂಡ ಆನೆಯೊಂದು ಲಾರಿಯೊಂದನ್ನು ಓಡಿ ಬಂದು ಗುದ್ದಿ ಬಾನೆಟ್ ಕಿತ್ತು ಹಾಕಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ.

ಮೈಕೆಲ್ ಡಾಯರ್ ಎನ್ನುವವರು ಹಂಚಿಕೊಂಡಿರುವ ವಿಡಿಯೋದಲ್ಲಿ ಆನೆ ಲಾರಿಯನ್ನು ಹಿಂಬಾಲಿಸಿಕೊಂಡು ಬಂದಿದೆ.

ಆಗ ಲಾರಿ ಹಿಂಬದಿಯಲ್ಲಿ ಹೋಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಆದರೂ ಆನೆ ಬಂದು ಲಾರಿಗೆ ಗುದ್ದಿದೆ.

ಆನೆ ಬರುವಾಗ ಎಲ್ಲರೂ ಭಯದಿಂದ ಕೂಗಾಡುವುದನ್ನು ಕೇಳಬಹುದು. ಈ ಭಯಾನಕ ದೃಶ್ಯ ವೈರಲ್ ಆಗಿದ್ದು ಹಲವರು ಪ್ರತಿಕ್ರಿಯಿಸಿ ತಮ್ಮ ದುಗುಡ ವ್ಯಕ್ತಪಡಿಸಿದ್ದಾರೆ.

ತಮ್ಮ ಕುರ್ಚಿ ಬಿಟ್ಟುಕೊಡದ ವೈದ್ಯರ ಮೇಲೆ ಮ್ಯಾಜಿಸ್ಟ್ರೇಟ್ ದರ್ಪ

Posted: 18 Jan 2020 03:46 AM PST

ಕರ್ತವ್ಯ ನಿರತ ವೈದ್ಯರೊಬ್ಬರು ತಪಾಸಣೆಗೆಂದು ಬಂದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್(ಎಸ್‌ಡಿಎಂ) ಅವರಿಗೆ ತಮ್ಮ ಕುರ್ಚಿ ಬಿಟ್ಟುಕೊಡಲಿಲ್ಲವೆಂದು ಎಸ್‌ಡಿಎಂ ಕೂಗಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಹನುಮಘಡದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಲ್ಲಿನ ಎಸ್‌ಡಿಎಂ ಪ್ರಿಯಾಂಕಾ ತಲನಿಯಾ ತಪಾಸಣೆಗೆ ಬಂದಿದ್ದಾರೆ. ಆಗ ಅಲ್ಲಿ ಕರ್ತವ್ಯ ನಿರತರಾಗಿದ್ದ ವೈದ್ಯ ನರೇಂದ್ರ ಬಿಶ್ನೋಯಿ ಅವರನ್ನು ತಮ್ಮ ಕುರ್ಚಿ ಬಿಟ್ಟುಕೊಡಲು ಕೇಳಿದ್ದಾರೆ.

ಆಗ ಬಿಶ್ನೋಯಿ ಅವರು ನಯವಾಗಿ ತಮ್ಮ ಜಾಗ ಬಿಟ್ಟುಕೊಡಲು ನಿರಾಕರಿಸಿದ್ದು, ತಾವು ರೋಗಿಗಳ ತಪಾಸಣೆ ಮಾಡಬೇಕಾಗಿದ್ದು ಪಕ್ಕಕ್ಕೆ ಕುಳಿತುಕೊಳ್ಳಲು ಕೇಳಿಕೊಂಡಿದ್ದಾರೆ.

ಇದಕ್ಕೆ ಕೆರಳಿದ ಪ್ರಿಯಾಂಕಾ ತಮ್ಮ ಅಧಿಕಾರದ ದರ್ಪ ತೋರಿ ಕೂಗಾಡಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ.

ನೆಟ್ಟಿಗರು ಮ್ಯಾಜಿಸ್ಟ್ರೇಟ್ ಅವರ ಈ ವರ್ತನೆಯನ್ನು ಖಂಡಿಸಿದ್ದಾರೆ. ಜೈಪುರ ವೈದ್ಯರ ಸಂಘ ಅವರ ಮೇಲೆ ದೂರು ನೀಡಿದ್ದಾರೆ. ಜೊತೆಗೆ ಮ್ಯಾಜಿಸ್ಟ್ರೇಟ್ ಅವರೂ ವೈದ್ಯರ ಮೇಲೆ ಹಲವು ಪ್ರಕರಣ ದಾಖಲಿಸಿದ್ದಾರೆ.

ವಿಶ್ವದಾಖಲೆ ಸೇರಿದ ಅತಿ ಉದ್ದದ ಕೇಕ್

Posted: 18 Jan 2020 03:19 AM PST

ಕೇರಳದಲ್ಲಿ ವಿಶ್ವದಲ್ಲೇ ಅತಿ ಉದ್ದದ ‌ಕೇಕ್ ನಿರ್ಮಿಸುವ ಮೂಲಕ ಹೊಸ ದಾಖಲೆ ‌ನಿರ್ಮಿಸಲಾಗಿದೆ.

ಕೇರಳದ ತ್ರಿಶೂರ್ ನಲ್ಲಿ 12 ಸಾವಿರ ಕೆಜಿ ಸಕ್ಕರೆ ಮತ್ತು ಹಿಟ್ಟು ಬಳಸುವ ಮೂಲಕ 6.5 ಕಿಮೀ ( ಸುಮಾರು ನಾಲ್ಕು ಮೈಲು) ಉದ್ದದ ಕೇಕ್ ತಯಾರಿಸಲಾಗಿದೆ.

ನಾಲ್ಕು ಇಂಚು(10 ಸೆಂಟಿಮೀಟರ್) ಅಗಲವಿರುವ ಈ ಕೇಕ್ ತೂಕ ಬರೋಬ್ಬರಿ 28 ಸಾವಿರ ಕೆಜಿಗಳಷ್ಟಿದೆ. ಇಲ್ಲಿನ ಹಬ್ಬದಾಚರಣೆ ಮೈದಾನದಲ್ಲಿ ಸುಮಾರು 100 ಮೇಜು ಬಳಸಿ ನಿರ್ಮಿಸಲಾಗಿದೆ.

ಈ ಹಿಂದೆ ಚೀನಾದ ಬಾಣಸಿಗರು 3.2 ಕಿಮೀ ದೂರದ ಕೇಕ್ ತಯಾರಿಸಿದ್ದೇ ದಾಖಲೆಯಾಗಿತ್ತು. ಇದೀಗ ಕೇರಳದ ತ್ರಿಶೂರ್ ನಲ್ಲಿ 1500 ಬೇಕರ್ಸ್ ಸತತ ನಾಲ್ಕು ಗಂಟೆಗಳ ಕಾಲ ಕೆಲಸ ಮಾಡಿ ವಿಶ್ವದಾಖಲೆ ಕೇಕ್ ತಯಾರಿಸಿದ್ದಾರೆ.

ವೋಲ್ವೋ ಬಸ್ ಡ್ರೈವಿಂಗ್ ಮಾಡಿದ ಶಿಖಾ

Posted: 18 Jan 2020 03:16 AM PST

ಸೇನೆ, ವಾಯುಪಡೆಯ ಮುಂಚೂಣಿ ಹುದ್ದೆಗಳಲ್ಲೆಲ್ಲಾ ಮಹಿಳೆಯರು ಮಿಂಚುತ್ತಿರುವ ಘಳಿಗೆಗಳಿಗೆ ಈ ತಲೆಮಾರು ಸಾಕ್ಷಿಯಗುತ್ತಿದೆ.

ಆದರೂ ಸಹ ಮಹಿಳೆಯರು ಇನ್ನೂ ಸಾಕಷ್ಟು ಮುಂದೆ ಬರಲು ಅವಕಾಶಗಳಿದ್ದು, ಈ ಸಾಧ್ಯತೆಗಳನ್ನು ಬಳಸಿಕೊಳ್ಳಲು ಉತ್ಸಾಹ ತೋರಬೇಕಾದ ಅಗತ್ಯವಿದೆ.

ಬಿಎಂಟಿಸಿಯ ನಿದರ್ಶನವನ್ನೇ ತೆಗೆದುಕೊಳ್ಳೋಣ; ಲಿಂಗಬೇಧವಿಲ್ಲದೇ ಅರ್ಹವಾದ ಯಾರು ಬೇಕಾದರೂ ಚಾಲಕ ವೃತ್ತಿಗೆ ಬರಲು ಈ ಸಾರಿಗೆ ಸಂಸ್ಥೆಯಲ್ಲಿ ಅವಕಾಶವಿದೆ. ಆದರೆ, 14,000 ಚಾಲಕರು ಇರುವ ಈ ಸಂಸ್ಥೆಯಲ್ಲಿ ಕೇವಲ ಒಬ್ಬರು ಮಾತ್ರ ಮಹಿಳಾ ಚಾಲಕಿ ಇದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಿಎಂಟಿಸಿ ಚಾಲಕ ವೃತ್ತಿಯತ್ತ ಗಮನ ಹರಿಸಲಿ ಎಂಬ ಉದ್ದೇಶದಿಂದ ಖುದ್ದು ತಾವೇ ಸ್ಫೂರ್ತಿಯಾಗಲು ಮುಂದಾದ ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಸಿ ಶಿಖಾ ಇತ್ತೀಚೆಗೆ ಖುದ್ದು ತಾವೇ ವೋಲ್ವೋ ಬಸ್‌ ಒಂದನ್ನು ಚಲಾಯಿಸಿದ್ದಾರೆ.

ಖುದ್ದು ಮಹಿಳಾ ಐಎಎಸ್‌ ಅಧಿಕಾರಿಯೊಬ್ಬರು ತಾವೇ ಬಸ್ಸೊಂದನ್ನು ಓಡಿಸುತ್ತಿರುವ ಮೊದಲ ನಿದರ್ಶನ ಇದಾಗಿದೆ.

ಜಿಯೋ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಸಿಗಲಿದೆ ಉಚಿತ ಕರೆ, 2ಜಿಬಿ ಡೇಟಾ

Posted: 17 Jan 2020 11:44 PM PST

ಸದಾ ಗ್ರಾಹಕರನ್ನು ಆಕರ್ಷಿಸುವ ರಿಲಾಯನ್ಸ್ ಜಿಯೋ ಅಗ್ಗದ ಯೋಜನೆ ಮೂಲಕವೇ ಗ್ರಾಹಕರ ಮನಸ್ಸು ಕದ್ದಿದೆ. ರಿಲಾಯನ್ಸ್ ಜಿಯೋ 100 ರೂಪಾಯಿಗಿಂತ ಕಡಿಮೆ ಬೆಲೆ ಯೋಜನೆಯಲ್ಲಿ ಗ್ರಾಹಕರಿಗೆ ಸಾಕಷ್ಟು ಲಾಭ ನೀಡ್ತಿದೆ. ರಿಲಾಯನ್ಸ್ ಜಿಯೋ 98 ರೂಪಾಯಿ ಪ್ಲಾನ್ ನಲ್ಲಿ ಉಚಿತ ಕರೆ ಸೌಲಭ್ಯ ಗ್ರಾಹಕರಿಗೆ ಸಿಗ್ತಿದೆ.

ಜಿಯೋ ಡಾಟ್ ಕಾಂ ನೀಡಿರುವ ಮಾಹಿತಿ ಪ್ರಕಾರ 98 ರೂಪಾಯಿ ಪ್ಲಾನ್ 28 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು 2ಜಿಬಿ ಡೇಟಾ ಪಡೆಯಲಿದ್ದಾರೆ. ಈ ಯೋಜನೆಯಲ್ಲಿ ಪ್ರತಿ ದಿನ 300 ಎಸ್ ಎಂ ಎಸ್ ಲಭ್ಯವಾಗಲಿದೆ. ಈ ಯೋಜನೆಯಲ್ಲಿ ಜಿಯೋ ಟು ಜಿಯೋ ಕರೆ ಉಚಿತವಾಗಿದೆ.

ಇನ್ನೊಂದು ನೆಟ್ವರ್ಕ್ ಗೆ ಗ್ರಾಹಕರು ಕರೆ ಮಾಡಬೇಕಾದ್ರೆ 124 ಐಯುಸಿ ನಿಮಿಷಗಳು ಲಭ್ಯವಾಗಲಿವೆ. ಹೆಚ್ಚಿನ ಉಚಿತ ಕರೆ ಬಯಸುವ ಗ್ರಾಹಕರು 10 ರೂಪಾಯಿ ಟಾಪ್ ಅಪ್ ಪ್ಲಾನ್ ರಿಚಾರ್ಜ್ ಮಾಡಬೇಕು.  ಟಾಪ್ ಅಪ್ ಪ್ಲಾನ್ ಸೇರಿಸಿದ್ರೆ ಈ ಯೋಜನೆ ಬೆಲೆ 108 ರೂಪಾಯಿಯಾಗಲಿದೆ.

ಕೋಟ್ಯಾಂತರ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದ SBI

Posted: 17 Jan 2020 10:40 PM PST

ದೇಶದ ಅತಿದೊಡ್ಡ ಸರ್ಕಾರಿ  ಬ್ಯಾಂಕ್ ಎಸ್‌.ಬಿ.ಐ. ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಎಫ್‌ಡಿ ನಂತರ ಆರ್‌ಡಿಯ ಬಡ್ಡಿ ದರಗಳನ್ನುಇಳಿಸಿದೆ. ಒಂದು ವಾರದ ಹಿಂದಷ್ಟೆ ಎಸ್‌.ಬಿ.ಐ., ಎಫ್.ಡಿ. ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿತ್ತು. ಎಸ್‌.ಬಿ.ಐ. ಆರ್‌.ಡಿ. ಖಾತೆದಾರರಿಗೆ ಈಗ ಶೇಕಡಾ 0.15ರಷ್ಟು ಕಡಿಮೆ ಬಡ್ಡಿ ಸಿಗಲಿದೆ.

ಬ್ಯಾಂಕ್ ಹೊಸ ದರದ ಪ್ರಕಾರ 1 ರಿಂದ 10 ವರ್ಷಗಳ ಅವಧಿಯ ಆರ್‌.ಡಿ. ಖಾತೆಗಳ ಬಡ್ಡಿ ದರಗಳು ಶೇಕಡ 6.25 ರಿಂದ 6.10 ಕ್ಕೆ ಇಳಿದಿವೆ. 1 ವರ್ಷದಿಂದ 10 ವರ್ಷಗಳವರೆಗೆ ಪಕ್ವವಾಗುವ ದೀರ್ಘಾವಧಿಯ ಠೇವಣಿಗಳ ಮೇಲೆ ಜನವರಿ 10 ರಂದು ಎಸ್‌.ಬಿ.ಐ., ಎಫ್‌.ಡಿ. ದರವನ್ನು ಶೇಕಡಾ 0.15 ರಷ್ಟು ಇಳಿಸಿತ್ತು.

ಎಸ್‌.ಬಿ.ಐ., ಆರ್‌.ಡಿ. ಖಾತೆದಾರರು ಪ್ರತಿ ತಿಂಗಳು ಕನಿಷ್ಠ 100 ರೂಪಾಯಿಗಳನ್ನು ಜಮಾ ಮಾಡಬೇಕಾಗುತ್ತದೆ. ಆದ್ರೆ ಬ್ಯಾಂಕ್ ಆರ್‌.ಡಿ. ಗಿಂತ ಜನರು ಅಂಚೆ ಕಚೇರಿ ಆರ್.ಡಿ.ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರ್‌.ಡಿ. ಮೇಲೆ ಶೇಕಡಾ 6.10 ರಂತೆ ಬಡ್ಡಿ ನೀಡುತ್ತದೆ. ಆದ್ರೆ ಅಂಚೆ ಕಚೇರಿಯಲ್ಲಿ ಶೇಕಡಾ 7.20 ರಷ್ಟು ಬಡ್ಡಿ ಸಿಗ್ತಿದೆ.

 

ಅತ್ಯಾಚಾರ ಯತ್ನದಲ್ಲಿ ಜೈಲು ಸೇರಿದ್ದ ಆರೋಪಿ ಹೊರ ಬಂದಾಗ ಮಾಡ್ದ ದಂಗಾಗಿಸುವ ಕೆಲಸ

Posted: 17 Jan 2020 10:36 PM PST

आरोपियों ने पीड़िता को मां को पीटा (फोटो-स्क्रीनशॉट)

ಅತ್ಯಾಚಾರ ಯತ್ನ ಆರೋಪದ ಮೇಲೆ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಸೇಡು ತೀರಿಸಿಕೊಳ್ಳಲು ಖತರ್ನಾಕ್ ಕೆಲಸ ಮಾಡಿದ್ದಾನೆ. ಆತ ಮಾಡಿದ ಕೆಲಸ ಕೇಳಿ ಸುತ್ತಮುತ್ತಲಿನವರು ದಂಗಾಗಿದ್ದಾರೆ. ಜೈಲಿನಿಂದ ಹೊರ ಬರ್ತಿದ್ದಂತೆ ಪೀಡಿತೆ ತಾಯಿಯನ್ನು ಆರೋಪಿ ಹತ್ಯೆಗೈದಿದ್ದಾನೆ.

ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಜಾಮೀನಿನ ಮೇಲೆ ಬಿಡಲಾಗಿದೆ. ಜೈಲಿನಿಂದ ಬರ್ತಿದ್ದಂತೆ ಆರೋಪಿ ಪೀಡಿತೆ ತಾಯಿ ಹಾಗೂ ಚಿಕ್ಕಮ್ಮನ ಮೇಲೆ ದಾಳಿ ನಡೆಸಿದ್ದಾನೆ. ಆರೋಪಿ ಜೊತೆ ನಾಲ್ವರು ಸೇರಿ ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿದ್ದರು. ಇದ್ರ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಗಂಭೀರ ಗಾಯಗೊಂಡಿದ್ದ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಪೀಡಿತೆ ತಾಯಿ ಜನವರಿ 17ರಂದು ಕೊನೆಯುಸಿರೆಳೆದಿದ್ದಾಳೆ.

 

ಭಜರಂಗಿ -2 ಚಿತ್ರ ತಂಡ ಬೆನ್ನು ಹತ್ತಿದ ಅಪಾಯ

Posted: 17 Jan 2020 10:21 PM PST

ಭಜರಂಗಿ-2 ಚಿತ್ರ ತಂಡಕ್ಕೆ ಆಘಾತದ ಮೇಲೆ ಆಘಾತವಾಗಿದೆ. ಸೆಟ್ ಗೆ ಬೆಂಕಿ ಹತ್ತಿಕೊಂಡ ಬೆನ್ನಲ್ಲೆ ಈಗ ಕಲಾವಿದರನ್ನು ತುಂಬಿದ್ದ ಬಸ್ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಭಜರಂಗಿ-2 ಚಿತ್ರದ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್ ನೆಲಮಂಗಲ ಸಮೀಪ ಮೋಹನ್ ಬಿ. ಕೆರೆ ಸ್ಟುಡಿಯೋ ಬಳಿ ಅಪಘಾತಕ್ಕೀಡಾಗಿದೆ. ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಮೇಲೆ ಕಂಬ ಬಿದ್ದಿದೆ.

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಚಿತ್ರದ ಸೆಟ್ ಬೆಂಕಿಗಾಹುತಿಯಾಗಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿತ್ತು. ಅದೃಷ್ಟವಶಾತ್ ಯಾವುದೇ ಅಪಾಯವಾಗಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಿವಣ್ಣ ಆಂಜನೇಯ ಕಾಪಾಡಿದ್ದಾನೆ ಎಂದಿದ್ದರು.

ಬದಲಾಗಲಿದೆ ಮುಂಬೈ ಚಿತ್ರಣ: ರಾತ್ರಿ ತೆರೆದಿರಲಿದೆ ಮಾಲ್, ಹೊಟೇಲ್

Posted: 17 Jan 2020 10:19 PM PST

ದೇಶದ ಆರ್ಥಿಕ ರಾಜಧಾನಿ ಮುಂಬೈ ಜನರಿಗೆ ಮತ್ತು ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಒಳ್ಳೆ ಸುದ್ದಿ ಇದೆ. ಇನ್ಮುಂದೆ ಬದಲಾದ ಮುಂಬೈ ನೋಡಬಹುದು. ಇನ್ಮುಂದೆ ಮುಂಬೈನ ಹೋಟೆಲ್‌ಗಳು, ಮಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ರಾತ್ರಿ ಕೂಡ ತೆರೆದಿರುತ್ತವೆ.

ಹಿಂದಿನ ಸರ್ಕಾರ ಮುಂಬಯಿಯಲ್ಲಿ ಪಬ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಮಾಲ್‌ಗಳು 24 ಗಂಟೆಗಳ ಕಾಲ ತೆರೆಯಲು ಅನುಮತಿ ನೀಡಿರಲಿಲ್ಲ.  ಹಿಂದಿನ ಸರ್ಕಾರದ ಹಲವಾರು ಮಂತ್ರಿಗಳೊಂದಿಗೆ ಆದಿತ್ಯ ಠಾಕ್ರೆ ಮಾತುಕತೆ ನಡೆಸಿದ್ದರು. ಈಗ ಠಾಕ್ರೆ ಸರ್ಕಾರ 24 ಗಂಟೆ ಕೆಲಸ ಮಾಡಲು ಮಾಲ್, ರೆಸ್ಟೋರೆಂಟ್ ಗಳಿಗೆ ಅನುಮತಿ ನೀಡಿದೆ.

ಪೈಲೆಟ್ ಯೋಜನೆಯಡಿ ಪಬ್, ಮಾಲ್, ರೆಸ್ಟೋರೆಂಟ್ 24 ಗಂಟೆ ಕೆಲಸ ಮಾಡಲು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಒಪ್ಪಿಗೆ ನೀಡಿದ್ದಾರೆ. ಸದ್ಯ ಮುಂಬೈನ ಕೆಲ ಭಾಗಗಳ ರೆಸ್ಟೋರೆಂಟ್, ಮಾಲ್ ಗಳು ಮಾತ್ರ ತೆರೆದಿರಲಿವೆ. ನಂತ್ರ ಎಲ್ಲ ಕಡೆ ಈ ಯೋಜನೆ ಜಾರಿಗೆ ಬರಲಿದೆ.

ಖಾಸಗಿ ಅಂಗಕ್ಕೆ ಹುಡುಗಿಯರು ತಂಬಾಕು ಹಾಕಿಕೊಳ್ತಿರೋದೇಕೆ..!?

Posted: 17 Jan 2020 10:14 PM PST

ಮಾದಕ ವಸ್ತುವಾಗಿ ಬಳಸುವ ತಂಬಾಕನ್ನು ಈಗ ಸೆಕ್ಸ್ ಡ್ರೈವ್ ಹೆಚ್ಚಿಸಲು ಬಳಸಲಾಗುತ್ತಿದೆ. ವರದಿಯ ಪ್ರಕಾರ, ಮಹಿಳೆಯರು ಯೋನಿಯಲ್ಲಿ ತಂಬಾಕು ಇಟ್ಟುಕೊಳ್ಳುವ ಮೂಲಕ ಉತ್ತೇಜನ ಹೆಚ್ಚಿಸಿಕೊಳ್ಳುವ ಘಟನೆಗಳು ಹೊರಬೀಳ್ತಿವೆ. ಸೆಕ್ಸ್ ಉತ್ತೇಜನಕ್ಕೆ ಮಹಿಳೆಯರು ಈ ಕೆಲಸ ಮಾಡಿ ತಮ್ಮ ಜೀವನ ಹಾಳು ಮಾಡಿಕೊಳ್ತಿದ್ದಾರೆಂದು ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಧೂಮಪಾನ ಉತ್ಪನ್ನಗಳ ಮೂಲಕ ಸೆಕ್ಸ್ ಡ್ರೈವ್ ಹೆಚ್ಚಿಸುವುದು ಸಾವನ್ನು ಆಹ್ವಾನಿಸಿದಂತೆ. ಪ್ರೊಫೆಸರ್ ಪ್ಯಾಸ್ಕಲ್ ಫೋಮೆನ್, ತಂಬಾಕು ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಕಾರಣವಾಗಿದೆ. ಇದು ಯೋನಿಯನ್ನು ಕುಗ್ಗಿಸುವ ಮೂಲಕ ಅದನ್ನು ಗಟ್ಟಿಗೊಳಿಸುತ್ತದೆ ಮತ್ತು ಅದನ್ನು ಶಾಶ್ವತವಾಗಿ ಮುಚ್ಚಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಪಶ್ಚಿಮ ಆಫ್ರಿಕಾದ ದೇಶ ಸೆನೆಗಲ್‌ನಲ್ಲಿ ಇಂಥ ಘಟನೆ ಹೆಚ್ಚಾಗಿದೆ. 13 ಪೈಸೆಗೆ ಸಿಗುವ ತಂಬಾಕು ಸ್ವರ್ಗ ಸುಖ ಕೊಡುತ್ತದೆ ಎಂದು ಅಲ್ಲಿನ ಜನರು ನಂಬಿದ್ದಾರಂತೆ. ಸೆಕ್ಸ್ ಡ್ರೈವ್ ಗೆ ತಂಬಾಕು ಬಳಸುವ ಜನರು ಅದ್ರ ಅಡ್ಡ ಪರಿಣಾಮವನ್ನು ಈಗಾಗಲೇ ಅನುಭವಿಸುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಕುಟುಂಬಕ್ಕೆ ಇನ್ನೊಂದು ‘ಶಾಕ್’

Posted: 17 Jan 2020 10:12 PM PST

ನಟಿ ರಶ್ಮಿಕಾ ಮಂದಣ್ಣಗೆ ಇನ್ನೊಂದು ಶಾಕ್ ಕಾದಿದೆ. ರಶ್ಮಿಕಾ ಮನೆ ಮೇಲೆ ಐಟಿ ದಾಳಿ ನಡೆಸಿದ ಬೆನ್ನಲ್ಲೇ ಈಗ ರಶ್ಮಿಕಾ ಕುಟುಂಬಸ್ಥರಿಗೆ ಸಮನ್ಸ್ ಜಾರಿಯಾಗಿದೆ. ಮೈಸೂರಿನ ಐಟಿ ಕಚೇರಿಗೆ ಹಾಜರಾಗುವಂತೆ ರಶ್ಮಿಕಾ ಕುಟುಂಬಕ್ಕೆ ಸಮನ್ಸ್ ಜಾರಿಯಾಗಿದೆ. ಸೋಮವಾರ ರಶ್ಮಿಕಾ ಸೇರಿದಂತೆ ಕುಟುಂಬಸ್ಥರು ವಿಚಾರಣೆಗೆ ಹಾಜರಾಗಬೇಕಾಗಿದೆ.

ಗುರುವಾರ ರಶ್ಮಿಕಾ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದರು. ನಂತ್ರ ಕೊಡಗಿನ ವಿರಾಜಪೇಟೆ ಮನೆಗೆ ರಶ್ಮಿಕಾ ಬರ್ತಿದ್ದಂತೆ ಅವ್ರನ್ನು ಸುತ್ತವರೆದ ಅಧಿಕಾರಿಗಳು ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ದಾಳಿ ವೇಳೆ ಅಧಿಕಾರಿಗಳಿಗೆ 25 ಲಕ್ಷ ರೂಪಾಯಿ ನಗದು ಸಿಕ್ಕಿದೆ ಎನ್ನಲಾಗಿದೆ. ಹಾಗೆ ರಶ್ಮಿಕಾ ಜಮೀನು ಖರೀದಿ ಮಾಡಿದ್ದು ಅದ್ರ ದಾಖಲೆಯನ್ನು ಐಟಿ ಅಧಿಕಾರಿಗಳು ಪಡೆದಿದ್ದಾರೆ. ಶುಕ್ರವಾರ ಶೂಟಿಂಗ್ ಇದ್ದ ಕಾರಣ ರಶ್ಮಿಕಾ ವಿಚಾರಣೆ ನಡೆದಿರಲಿಲ್ಲ. ಶನಿವಾರ ಕುಟುಂಬಸ್ಥರಿಗೆ ನೊಟೀಸ್ ಕಳುಹಿಸಿದ್ದು, ಸೋಮವಾರ ರಶ್ಮಿಕಾ ಕುಟುಂಬಸ್ಥರು ಐಟಿ ಕಚೇರಿಗೆ ಹಾಜರಾಗಬೇಕಾಗಿದೆ.

ಎರಡು,ಮೂರು ಮದುವೆಯಾಗುವ ಪುರುಷರಿಗೆ ಮದುವೆ ಹಾಲ್ ನೀಡ್ತಿದೆ ಬಂಪರ್ ಆಫರ್

Posted: 17 Jan 2020 09:39 PM PST

ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಆಫರ್ ನೀಡುವ ಬಗ್ಗೆ ನಾವು ಕೇಳಿರ್ತೇವೆ.ಸಾಮಾಜಿಕ ಜಾಲತಾಣಗಳಲ್ಲಿ ಅದು ಸುದ್ದಿ ಮಾಡುತ್ತದೆ.ಪಾಕಿಸ್ತಾನದ ಮದುವೆ ಹಾಲ್ ಒಂದು ಈಗ ಭರ್ಜರಿ ಸುದ್ದಿ ಮಾಡ್ತಿದೆ. ಎರಡು,ಮೂರು,ನಾಲ್ಕೈದು ಮದುವೆಯಾಗುವ ವಿವಾಹಿತ ಪುರುಷರಿಗೆ ಈ ಮದುವೆ ಹಾಲ್ ನಲ್ಲಿ ಬಂಪರ್ ಆಫರ್ ಸಿಗ್ತಿದೆ.

ಎರಡನೇ ಮದುವೆಯಾದ್ರೆ ಹಾಲ್ ಬೆಲೆಯಲ್ಲಿ ಶೇಕಡಾ 50ರಷ್ಟು ರಿಯಾಯಿತಿ ಸಿಗಲಿದೆ. ಮೂರನೇ ವಿವಾಹದ ಮೇಲೆ ಶೇಕಡಾ 75ರಷ್ಟು ಮತ್ತು ನಾಲ್ಕನೇ ವಿವಾಹದ ಸ್ವಾಗತ ಉಚಿತವಾಗಿರಲಿದೆ.  ಮದುವೆ ಹಾಲ್ ಮಾಲೀಕರ ಷರತ್ತನ್ನು ಈಡೇರಿಸಬೇಕಾಗುತ್ತದೆ.

ಜಿ. ದರ್ಸಾಕ್, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಎಷ್ಟು ರಿಯಾಯಿತಿ ಸಿಗಲಿದೆ ಎಂಬ ಮಾಹಿತಿ ಜೊತೆಗೆ ಷರತ್ತೇನು ಎಂಬುದನ್ನು ಹೇಳಲಾಗಿದೆ. ಎರಡು,ಮೂರು ಮತ್ತು ಅದಕ್ಕಿಂತ ಹೆಚ್ಚು ಮದುವೆಯಾಗುವ ಪುರುಷರ ಮದುವೆ ಬುಕ್ಕಿಂಗ್ ಮೊದಲ ಪತ್ನಿ ಮಾಡಬೇಕು. ಮೊದಲ ಪತ್ನಿಯಿಂದ ಮದುವೆ ಹಾಲ್ ಬುಕ್ ಆದ್ರೆ ಮಾತ್ರ ಈ ರಿಯಾಯಿತಿ ಸಿಗಲಿದೆ.

 

ಆನ್ಲೈನ್ ಬ್ಯಾಂಕಿಂಗ್ ಐಡಿ,ಪಾಸ್ವರ್ಡ್ ಮರೆತು ಹೋದ್ರೆ ಚಿಂತೆ ಬೇಡ

Posted: 17 Jan 2020 09:29 PM PST

ಪಾಸ್ವರ್ಡ್ ಗಳನ್ನು ನೆನಪಿಟ್ಟುಕೊಳ್ಳುವುದು ಇಂಟರ್ನೆಟ್ ಜಗತ್ತಿನಲ್ಲಿ ಒಂದು ದೊಡ್ಡ ಕೆಲಸ. ಇಂಟರ್ನೆಟ್ ಬ್ಯಾಂಕಿಂಗ್  ಬಳಸುವಾಗ ಐಡಿ ಮತ್ತು ಪಾಸ್ವರ್ಡ್ ನೆನಪಿಲ್ಲದೆ ಹೋದ್ರೆ ಕಾರಣ  ತೊಂದರೆ ಎದುರಿಸಬೇಕು. ಆದರೆ ಇನ್ಮುಂದೆ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಈ ಕಷ್ಟವಿಲ್ಲ.

ಐಸಿಐಸಿಐ ಬ್ಯಾಂಕ್ ಈಗ ಒಟಿಪಿ ಆಧಾರಿತ ಲಾಗಿನ್ ಸೌಲಭ್ಯವನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಗ್ರಾಹಕರು ಈಗ ನೋಂದಾಯಿತ ಮೊಬೈಲ್ ಸಂಖ್ಯೆ, ಒಟಿಪಿ ಮತ್ತು ಡೆಬಿಟ್ ಕಾರ್ಡ್ ಪಿನ್ ಬ್ಯಾಂಕಿನೊಂದಿಗೆ ಲಾಗ್ ಇನ್ ಮಾಡಬಹುದು. ಗ್ರಾಹಕರು ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೂ ಲಾಗ್ ಇನ್ ಮಾಡಬಹುದು.

ಮೊದಲು ಗ್ರಾಹಕರು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ www.icicibank.com ಗೆ ಹೋಗಬೇಕು. ‘ಲಾಗಿನ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿಬೇಕು.  ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.ಒಟಿಪಿ ಆಯ್ಕೆಯನ್ನು ಆರಿಸಬೇಕು. ಹೊಸ ವಿಂಡೋ ತೆರೆದುಕೊಳ್ಳಲಿದೆ. ಅಲ್ಲಿ ಒಟಿಪಿ ನಮೂದಿಸಿ. ನಂತ್ರ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಕೆಲಸವನ್ನು ಮುಗಿದ ನಂತರ ಲಾಗೌಟ್ ಮಾಡಬೇಕು.

 

ಅಪರಾಧಿಗಳನ್ನು ಕ್ಷಮಿಸಿ ಎಂದ ವಕೀಲೆ ಇಂದಿರಾಗೆ ಖಡಕ್ ಉತ್ತರ ನೀಡಿದ ನಿರ್ಭಯಾ ತಾಯಿ

Posted: 17 Jan 2020 09:17 PM PST

ಭಾರತದ ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಿರ್ಭಯಾ ತಾಯಿ ಆಶಾ ದೇವಿಗೆ ಇಂದಿರಾ ಸಲಹೆಯೊಂದನ್ನು ನೀಡಿದ್ದಾರೆ. ಸೋನಿಯಾ ಗಾಂಧಿಯಂತೆ ನಿರ್ಭಯಾ ಅತ್ಯಾಚಾರಿಗಳನ್ನು ಕ್ಷಮಿಸಿ ಎಂದಿದ್ದಾರೆ.

ಸೋನಿಯಾ ಗಾಂಧಿ ಎಲ್ಲವನ್ನು ಮರೆತು ಕ್ಷಮಿಸಿದ್ದರು. ಹಾಗಾಗಿ ರಾಜೀವ್ ಗಾಂಧಿ ಆರೋಪಿ ನಳಿನಿಗೆ ಗಲ್ಲು ಶಿಕ್ಷೆ ತಪ್ಪಿದೆ.ನಿಮ್ಮ ಕಷ್ಟ,ನೋವು,ಸಂಕಟ ನನಗೆ ಗೊತ್ತಾಗುತ್ತದೆ. ಆದ್ರೆ ನಾನು ಗಲ್ಲು ಶಿಕ್ಷೆ ವಿರೋಧಿ. ನೀವೂ ನಿರ್ಭಯಾ ಹತ್ಯೆ ಆರೋಪಿಗಳನ್ನು ಕ್ಷಮಿಸಿ.ಅವ್ರಿಗೆ ಜೀವದಾನ ಮಾಡಿ ಎಂದು ಇಂದಿರಾ ಟ್ವಿಟ್ ಮಾಡಿದ್ದಾರೆ.

ಇದಕ್ಕೆ ಆಶಾ ದೇವಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನನಗೆ ಸಲಹೆ ನೀಡಲು ಇಂದಿರಾ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಇಂತ ಜನರಿಂದ ಅತ್ಯಾಚಾರಕ್ಕೊಳಗಾದವರಿಗೆ ನ್ಯಾಯ ಸಿಗ್ತಿಲ್ಲವೆಂದು ಆಶಾ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಇಂದಿರಾ ವಿರುದ್ಧ ಸಾಕಷ್ಟು ಕಮೆಂಟ್ ಗಳು ಬರ್ತಿವೆ.

 

 

ಎರಡು ವರ್ಷ ಪ್ರೇಯಸಿಯನ್ನು ನಗ್ನವಾಗಿಟ್ಟಿದ್ದ ಪ್ರೇಮಿ ಅತ್ಯಾಚಾರಕ್ಕೂ ಮುನ್ನ

Posted: 17 Jan 2020 09:04 PM PST

ಸ್ನೇಹಿತನೊಬ್ಬ ಪ್ರೇಯಸಿಯನ್ನು ಎರಡು ವರ್ಷಗಳ ಕಾಲ ಬಂಧಿ ಮಾಡಿಟ್ಟ ಘಟನೆ ಬೆಳಕಿಗೆ ಬಂದಿದೆ.ವ್ಯಕ್ತಿ ಅತ್ಯಾಚಾರವೆಸಗುವವರೆಗೂ ಪ್ರೇಯಸಿಗೆ ಆಹಾರ ನೀಡ್ತಿರಲಿಲ್ಲವಂತೆ. ಪೀಡಿತೆಗೆ ಸರಿಯಾಗಿ ಮಾತನಾಡಲು ಬರ್ತಿರಲಿಲ್ಲ. ಹಾಗಾಗಿ ಆಕೆ ಎದುರಿಸಿದ ನೋವನ್ನು ಪುಸ್ತಕದಲ್ಲಿ ಬರೆದಿದ್ದಾಳೆ.

ಎರಡು ವರ್ಷಗಳ ನಂತ್ರ ಪೀಡಿತೆ ಸೋಫಿ ಅಲ್ಲಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಳು. ಘಟನೆ ನಡೆದ ಒಂದು ವರ್ಷದ ನಂತ್ರ ಆರೋಪಿ ತಪ್ಪೊಪ್ಪಿಕೊಂಡಿದ್ದನಂತೆ. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ಜೈಲಿಗಟ್ಟಿತ್ತು. ಮಾನಸಿಕ ಅಸ್ವಸ್ಥ ಎನ್ನುವ ಕಾರಣ ನೀಡಿ ಆಸ್ಪತ್ರೆ ಸೇರಿದ್ದ ಆರೋಪಿ ನಾಲ್ಕು ವರ್ಷದ ನಂತ್ರ ವಾಪಸ್ ಬಂದಿದ್ದಾನೆ.

ಆತ ಮತ್ತೆ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಸೋಫಿ ಹೇಳಿದ್ದಾಳೆ.ಘಟನೆ ನಂತ್ರ ಸೋಫಿ ಭಯ,ಖಿನ್ನತೆಯಿಂದ ಬಳಲುತ್ತಿದ್ದಾಳಂತೆ. ಮನೆಯಿಂದ ಹೊರ ಬರಲು ಭಯವಂತೆ.ಆರೋಪಿ ಎರಡು ವರ್ಷಗಳ ಕಾಲ ನಗ್ನವಾಗಿಟ್ಟಿದ್ದನಂತೆ.ಚಿಕ್ಕಮಕ್ಕಳ ಬಟ್ಟೆ ನೀಡ್ತಿದ್ದನಂತೆ.ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.

 

ವಿಷಪೂರಿತ ಹಾವಿನ ಜೊತೆ ಈತನ ಆಟ ನೋಡಿ ದಂಗಾದ ಜನ

Posted: 17 Jan 2020 09:02 PM PST

ಹಾವೆಂದ್ರೆ ಮಾರು ದೂರ ಓಡುವವರು ಹೆಚ್ಚು. ಹಾವಿನ ಕನಸು ಬಿದ್ರೂ ಕೆಲವರು ಬೆಚ್ಚಿ ಬೀಳ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲವರು ಹಾವಿನ ಜೊತೆ ಆಟವಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುತ್ತವೆ. ಈಗ ಇನ್ನೊಂದು ವಿಡಿಯೋ ವೈರಲ್ ಆಗಿದೆ.

ಬಿಹಾರದ ವ್ಯಕ್ತಿಯೊಬ್ಬ ಸುಮಾರು 9 ನಿಮಿಷಗಳ ಕಾಲ ಹಾವಿನ ಜೊತೆ ಆಟವಾಡಿದ್ದಾನೆ. ಹಾವನ್ನು ಕೈನಲ್ಲಿ ಹಿಡಿದು ಬೇರೆ ಬೇರೆ ಆಟಗಳನ್ನು ಆಡುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾನೆ. ನಂತ್ರ ವಿಷಪೂರಿತ ಹಾವನ್ನು ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾನೆ.

ಗೋಪಾಲ್ ಶರ್ಮಾ ಮನೆಯಲ್ಲಿ ವಿಷಪೂರಿತ ಹಾವಿರುವ ಸುದ್ದಿ ತಲುಪುತ್ತಿದ್ದಂತೆ ಅಲ್ಲಿಗೆ ಬಂದ ಭಗವಾನ್ ಕುಮಾರ್ ಎಂಬ ವ್ಯಕ್ತಿ ಹಾವನ್ನು ಕೈನಲ್ಲಿ ಹಿಡಿದಿದ್ದಾನೆ.ಹಾವನ್ನು ಬಕೆಟ್ ಗೆ ಹಾಕಿ ಸ್ವಚ್ಛಗೊಳಿಸುವ ಭಗವಾನ್ ನಂತ್ರ ಬಟ್ಟೆಯಲ್ಲಿ ಹಾವಿನ ಮೈ ಒರೆಸುತ್ತಾನೆ.ನಂತ್ರ ಹಾವಿನ ಜೊತೆ ಆಟವಾಡ್ತಾನೆ.

 

ಶಾಕಿಂಗ್ ನ್ಯೂಸ್: ಸದ್ದಿಲ್ಲದೆ ಲೋಡ್ ಶೆಡ್ಡಿಂಗ್ ಜಾರಿ..?

Posted: 17 Jan 2020 08:53 PM PST

ವಿದ್ಯುತ್ ಬೇಡಿಕೆ ತೀವ್ರ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಸದ್ದಿಲ್ಲದೆ ಜಾರಿಯಾಗಿದೆ.

ಅನೇಕ ನಗರ, ಪಟ್ಟಣ ಪ್ರದೇಶಗಳಲ್ಲಿ ಅದರಲ್ಲಿಯೂ ಗ್ರಾಮಾಂತರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ. ಜನವರಿಯಲ್ಲೇ ಪವರ್ ಕಟ್ ಬಿಸಿ ತಟ್ಟಿರುವುದು ಬೇಸಿಗೆಯಲ್ಲಿ ಇನ್ನಷ್ಟು ಲೋಡ್ ಶೆಡ್ಡಿಂಗ್ ಮುನ್ಸೂಚನೆ ನೀಡಿದಂತಿದೆ.

ಉತ್ಪಾದನೆಗಿಂದ ವಿದ್ಯುತ್ ಬೇಡಿಕೆ ಜಾಸ್ತಿ ಇದೆ. 3 -4 ಸಾವಿರ ಮೆಗಾವ್ಯಾಟ್ ಕೊರತೆ ಇರುವುದರಿಂದ ಹಲವೆಡೆ ಅಘೋಷಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಗ್ರಾಮಾಂತರ ಭಾಗದಲ್ಲಿ ಕಾಮಗಾರಿ ನಿರ್ವಹಣೆ ಹೆಸರಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಲೋಡ್ ಶೆಡ್ಡಿಂಗ್ ಜಾರಿಯಾಗದೇ ಈಗಾಗಲೇ ಹಲವೆಡೆ ಪವರ್ ಕಟ್ ಮಾಡಲಾಗುತ್ತಿದೆ. ದುರಸ್ತಿ, ನಿರ್ವಹಣೆ ಕಾಮಗಾರಿ ನೆಪದಲ್ಲಿ ವಿದ್ಯುತ್ ಕಡಿತ ಮಾಡಲಾಗಿದೆ ಎನ್ನಲಾಗಿದೆ.

ಕುತೂಹಲ ಮೂಡಿಸಿದೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಪತ್ತೆ ಪೋಸ್ಟರ್

Posted: 17 Jan 2020 08:46 PM PST

ಚಿರಂಜೀವಿ ಸರ್ಜಾ, ರಚಿತಾ ರಾಮ್ ಅಭಿನಯದ 'ಏಪ್ರಿಲ್' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಪೋಸ್ಟರ್ ಕುತೂಹಲ ಮೂಡಿಸಿದೆ.

ರಚಿತಾ ರಾಮ್ ನಾಪತ್ತೆಯಾಗಿದ್ದಾರೆ ಎಂದು ಚಿರಂಜೀವಿ ಸರ್ಜಾ ಫಲಕ ಹಿಡಿದುಕೊಂಡಿದ್ದು ಅದೇ ಫಲಕದಲ್ಲಿರುವ ರಚಿತಾ ರಾಮ್ ಕೂಡ ಬಾಲಕಿ ನಾಪತ್ತೆಯಾದ ಪೋಸ್ಟರ್ ಹಿಡಿದಿದ್ದಾರೆ. ಕುತೂಹಲ ಮೂಡಿಸಿರುವ 'ಏಪ್ರಿಲ್' ಚಿತ್ರದ ಫಸ್ಟ್ ಲುಕ್ ಅನ್ನು ಚಿರಂಜೀವಿ ಸರ್ಜಾ ಟ್ವೀಟ್ ಮಾಡಿದ್ದು, ನನ್ನ ಮುಂದಿನ ಚಿತ್ರ 'ಏಪ್ರಿಲ್'ಗೆ ನಿಮ್ಮ ಪ್ರೀತಿ ಮತ್ತು ಬೆಂಬಲವಿರಲಿ, ಜೈ ಆಂಜನೇಯ ಎಂದು ಹೇಳಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಒಂದಾದ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

Posted: 17 Jan 2020 08:24 PM PST

ನಿರ್ಜನ ಪ್ರದೇಶದಲ್ಲಿ ಜೋಡಿಯೊಂದು ಅಶ್ಲೀಲ ಚಟುವಟಿಕೆಯಲ್ಲಿ ನಿರತವಾಗಿತ್ತು. ಇದನ್ನು ಸ್ಥಳೀಯ ಹುಡುಗರು ನೋಡಿದ್ದಾರೆ.ಯುವಕರನ್ನು ನೋಡಿದ ಜೋಡಿ ಎಚ್ಚೆತ್ತುಕೊಳ್ಳುವ ಮೊದಲೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಘಟನೆ ಬಿಹಾರ ಗಯಾದಲ್ಲಿ ನಡೆದಿದೆ.

ವಿಡಿಯೋದಲ್ಲಿ ಹುಡುಗ-ಹುಡುಗಿ ನಿರ್ಜನ ಪ್ರದೇಶದಲ್ಲಿ ಒಂದಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.ಗ್ರಾಮಸ್ಥರು ಹುಡುಗ-ಹುಡುಗಿಗೆ ಎಚ್ಚರಿಕೆ ನೀಡಿದ್ದಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಲು ಗಯಾ ಎಸ್ ಎಸ್ ಪಿ ನಿರಾಕರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಸ್ಪಿ, ವಿಡಿಯೋ ವೈರಲ್ ಆಗಿದೆ. ಪೊಲೀಸರು ವಿಡಿಯೋ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಯತ್ತಿದೆ. ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

 

Gameforumer QR Scan

Gameforumer QR Scan
Gameforumer QR Scan