Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Friday, January 17, 2020

Kannada News | Karnataka News | India News

Kannada News | Karnataka News | India News


ಸೆಕ್ಸ್ ಜೀವನ ಹಾಳು ಮಾಡುತ್ತೆ ಲಿವ್ ಇನ್ ಸಂಬಂಧ…?

Posted: 17 Jan 2020 08:32 AM PST

ಇತ್ತೀಚಿಗೆ ಲೈವ್-ಇನ್-ಸಂಬಂಧ ಸಾಕಷ್ಟು ಜನಪ್ರಿಯವಾಗಿದೆ. ಲಿವ್-ಇನ್ ಸಂಬಂಧಗಳಲ್ಲಿ ವಾಸಿಸುವ ಜನರು ಮದುವೆಯ ನಂತರ ಲೈಂಗಿಕ ಜೀವನವನ್ನು ಆನಂದಿಸಲು ಸಾಧ್ಯವಿಲ್ಲ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. ಮದುವೆಗೆ ಮೊದಲು ಒಟ್ಟಿಗೆ ವಾಸಿಸುವ ಜೋಡಿ ಮದುವೆ ನಂತರ ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಾರೆ.

ಜರ್ನಲ್ ಆಫ್ ಸೆಕ್ಸ್ ರಿಸರ್ಚ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಲಿವ್-ಇನ್ ಸಂಬಂಧದ ನಂತರ ಮದುವೆಯಾಗುವ ಜೋಡಿ ಲೈಂಗಿಕ ಜೀವನದ ಬಗ್ಗೆ ತಾತ್ಸಾರ ಹೊಂದಿರುತ್ತಾರಂತೆ. ಲಿವ್-ಇನ್ ಸಂಬಂಧಗಳಲ್ಲಿರುವ ಜನರು ಮದುವೆಯ ನಂತರ ಲೈಂಗಿಕ ಜೀವನವನ್ನು ಆನಂದಿಸಲು ಸಾಧ್ಯವಿಲ್ಲ.ಅಲ್ಲದೆ ಮದುವೆಯ ನಂತರ ದೈಹಿಕ ಸಂಬಂಧ ಹೊಂದುವ ಜನರು ಮಲಗುವ ಕೋಣೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ ಎಂದು ವರದಿ ಹೇಳಿದೆ.

ಸುಮಾರು 100 ಜೋಡಿಗಳ ಮೇಲೆ ನಡೆಸಿದ ಈ ಸಂಶೋಧನೆಯಲ್ಲಿ, ಮದುವೆಗೆ ಮುಂಚಿತವಾಗಿ ಸಂಗಾತಿಯೊಂದಿಗೆ ಲೈಂಗಿಕ ಆನಂದವನ್ನು ಅನುಭವಿಸುವ ಜನರು ಮದುವೆ ನಂತ್ರ ಸಂಗಾತಿಯೊಂದಿಗೆ ಕಡಿಮೆ ತೃಪ್ತಿ ಪಡೆಯುತ್ತಾರೆಂದು ವರದಿ ಹೇಳಿದೆ.

ಒಮ್ಮೆ ಈ ರವಾ ಪಡ್ಡು ಮಾಡಿ ನೋಡಿ

Posted: 17 Jan 2020 07:55 AM PST

ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವ ಮಕ್ಕಳಿಗೆ ಒಮ್ಮೊಮ್ಮೆ ಈ ರವೆಯಿಂದ ಮಾಡಿದ ಪಡ್ಡುವನ್ನು ಮಾಡಿಕೊಡಿ. ಖುಷಿಯಿಂದ ತಿಂದು ಟಿಫಿನ್ ಖಾಲಿ ಮಾಡುತ್ತಾರೆ.

ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಿಬಿಡಬಹುದು.

ಬೇಕಾಗುವ ಸಾಮಾಗ್ರಿ-1 ಕಪ್ ರವೆ, ½ ಕಪ್-ಗಟ್ಟಿ ಮೊಸರು, 2.5 ಕಪ್-ನೀರು, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: 1 ಟೇಬಲ್ ಸ್ಪೂನ್ ಎಣ್ಣೆ, ½ ಟೀ ಸ್ಪೂನ್ ಸಾಸಿವೆ, 1 ಟೇಬಲ್ ಸ್ಪೂನ್-ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಶುಂಠಿ ಸ್ವಲ್ಪ 1 ಹಸಿಮೆಣಸು ಸಣ್ಣದ್ದಾಗಿ ಕತ್ತರಿಸಿದ್ದು, -5 ಎಸಳು ಕರಿಬೇವು.

ಮಾಡುವ ವಿಧಾನ: ಒಂದು ದೊಡ್ಡ ಬೌಲ್ ಗೆ ರವೆ, ಮೊಸರು, ನೀರು, ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ನಂತರ ಇದನ್ನು 20 ನಿಮಿಷ ಹಾಗೇಯೇ ಮುಚ್ಚಿಡಿ. ನಂತರ ಹಿಟ್ಟಿನ ಹದ ನೋಡಿಕೊಂಡು ನೀರು ಬೇಕಿದ್ದರೆ ಸೇರಿಸಿ. ನಂತರ ಒಂದು ಒಗ್ಗರಣೆ ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ. ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಈರುಳ್ಳಿ, ಹಸಿಮೆಣಸು, ಶುಂಠಿ, ಕರಿಬೇವು ಹಾಕಿ 1 ನಿಮಿಷ ಹಾಗೆ ತಿರುವಿಕೊಳ್ಳಿ.

ಇದನ್ನು ರವೆ ಮಿಶ್ರಣಕ್ಕೆ ಹಾಕಿ. ಪಡ್ಡು ಕಾವಲಿಗೆ ಎಣ್ಣೆ ಸವರಿ ಒಲೆಯ ಮೇಲಿಡಿ. ಈ ಹಿಟ್ಟನ್ನು ಒಂದು ಚಮಚದ ಸಹಾಯದಿಂದ ಕಾವಲಿಗೆ ಹಾಕಿ. ಎರಡು ಕಡೆ ಕಂದು ಬಣ್ಣ ಬರುವವರೆಗೆ ಕಾಯಿಸಿದರೆ ಗರಿಗರಿಯಾದ ರವಾ ಪಡ್ಡು ತಯಾರು. ಚಟ್ನಿ ಜತೆ ಸವಿಯಲು ರುಚಿಯಾಗಿರುತ್ತದೆ.

ನಾಳೆಯೇ ಸರ್ಕಾರಿ ಆದೇಶ, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರಿಗೆ ಸರ್ಕಾರದಿಂದ ‘ಬಿಗ್ ಶಾಕ್’

Posted: 17 Jan 2020 06:44 AM PST

ಬೆಂಗಳೂರು: ಬಿಬಿಎಂಪಿ ಕಾಯ್ದೆಗೆ ತಿದ್ದುಪಡಿ ತರಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಕ್ಕೆ ದುಪ್ಪಟ್ಟು ತೆರಿಗೆ ಹಾಕಲಾಗುವುದು. ನಿಯಮ ಉಲ್ಲಂಘನೆ ಮಾಡಿರುವಷ್ಟು ಜಾಗಕ್ಕೆ ದುಪ್ಪಟ್ಟು ತೆರೆಗೆ ವಿಧಿಸಲಾಗುವುದು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಅಕ್ರಮದ ಬಗ್ಗೆ ಕ್ರಮಕೈಗೊಳ್ಳುವವರೆಗೆ ಒತ್ತುವರಿ ತೆರವುಗೊಳಿಸುವವರೆಗೆ ಎರಡು ಬಾರಿ ದಂಡ ವಸೂಲಿಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತು ನಾಳೆಯೇ ಸರ್ಕಾರಿ ಆದೇಶ ಹೊರಡಿಸಲಾಗುವುದು. ಬಿಬಿಎಂಪಿ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಿದ್ದು ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ʼಗುಡ್ ನ್ಯೂಸ್ʼ

Posted: 17 Jan 2020 06:29 AM PST

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಬಳಿಕ ಕೆಲಸಕ್ಕೆ ಗೈರು ಹಾಜರಾಗಿ ಪ್ರತಿಭಟನೆ ಮುಂದುವರೆಸಿದ್ದು ಆಶಾ ಕಾರ್ಯಕರ್ತೆಯರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದರು.

ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸರ್ಕಾರ ಸಮ್ಮತಿಸಿದೆ. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ, ಆಶಾ ಕಾರ್ಯಕರ್ತೆಯರಿಗೆ ಒಂದು ಬಾರಿ ಸೆಟ್ಲ್ ಮೆಂಟ್ ಅಡಿ 3,000 ರೂ. ನೀಡಲಾಗುವುದು. 41,678 ಆಶಾ ಕಾರ್ಯಕರ್ತೆಯರಿಗೆ 12.48 ಕೋಟಿ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಲಾಗಿದೆ.

ಯಾದಗಿರಿ, ಹಾವೇರಿಗೆ ಸರ್ಕಾರದಿಂದ ಬಂಪರ್ ಕೊಡುಗೆ

Posted: 17 Jan 2020 06:21 AM PST

ಬೆಂಗಳೂರು: ಯಾದಗಿರಿ, ಹಾವೇರಿಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾವೇರಿ ಮತ್ತು ಯಾದಗಿರಿಯಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ.

ಸಂಪುಟ ಸಭೆಯ ಬಳಿಕ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಿಸಲಾಗುವುದು. ಕೇಂದ್ರದ ಪಾಲು ಶೇಕಡ 60, ರಾಜ್ಯ ಸರ್ಕಾರದ ಪಾಲು ಶೇಕಡ 40 ಇರಲಿದೆ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ 23 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಶಾಕಿಂಗ್ ನ್ಯೂಸ್: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಆಯೋಜಕನ ಜೀವ ತೆಗೆದ ಹೋರಿ

Posted: 17 Jan 2020 06:14 AM PST

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಹೋರಿ ತಿವಿದು ಆಯೋಜಕ ಮೃತಪಟ್ಟಿದ್ದಾರೆ.

34 ವರ್ಷದ ಶಿವಪ್ಪ ಮಲ್ಲೂರು ಮೃತಪಟ್ಟವರೆಂದು ಹೇಳಲಾಗಿದೆ. ಕೋಡದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ವೇಳೆಯಲ್ಲೇ ದುರಂತ ಸಂಭವಿಸಿದೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧೆ ಆಯೋಜನಾ ಸಮಿತಿ ಸದಸ್ಯರಾಗಿರುವ ಶಿವಪ್ಪ ಮಲ್ಲೂರು ಜನರನ್ನು ನಿಯಂತ್ರಿಸಲು ಮುಂದಾಗಿದ್ದ ಸಂದರ್ಭದಲ್ಲಿ ಹೋರಿ ತಿವಿದು ಮೃತಪಟ್ಟಿದ್ದಾರೆ. ಅವರ ಮೃತ ದೇಹವನ್ನು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎಂದು ಹೇಳಲಾಗಿದೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಶಾಕ್

Posted: 17 Jan 2020 05:44 AM PST

ಚಂಡಿಗಢ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೇರಳ ರಾಜ್ಯ ನಿರ್ಣಯ ಕೈಗೊಂಡ ಬಳಿಕ ಪಂಜಾಬ್ ಕೂಡ ನಿರ್ಣಯ ಅಂಗೀಕರಿಸಿದೆ.

ಪಂಜಾಬ್ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಕೇರಳ ವಿಧಾನಸಭೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಇಂತಹ ನಿರ್ಧಾರ ಕೈಗೊಂಡ ಮೊದಲ ರಾಜ್ಯ ಕೇರಳವಾಗಿದ್ದು ಇದಾದ ಬಳಿಕ ಪಂಜಾಬ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿರ್ಣಯ ಅಂಗೀಕರಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಮಾಡುತ್ತದೆ. ಪ್ರತಿ ನಾಗರಿಕರಿಗೆ ಸಮಾನತೆ ಕಲ್ಪಿಸುವ ಸಂವಿಧಾನದ ಮೂಲ ಆಶಯವಾದ ಸಮಾನತೆಗೆ ವಿರುದ್ಧವಾಗಿದೆ. ಹೀಗಾಗಿ ಪಂಜಾಬ್ ವಿಧಾನಸಭೆಯಲ್ಲಿ ಕಾಯ್ದೆ ವಿರೋಧಿಸಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಹೇಳಲಾಗಿದೆ. ವಿರೋಧ ಪಕ್ಷ ಬಿಜೆಪಿ ನಿರ್ಣಯ ಕೈಗೊಳ್ಳಲು ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ಮಿತ್ರ ಪಕ್ಷ ಶಿರೋಮಣಿ ಅಕಾಲಿದಳ ಕೂಡ ನಿರ್ಣಯ ವಿರೋಧಿಸಿದ್ದು, ಕಾಯ್ದೆಯಲ್ಲಿ ಬದಲಾವಣೆಗೆ ಒತ್ತಾಯಿಸಿದೆ.

ಬಿಗ್ ನ್ಯೂಸ್: ಸರ್ಕಾರಿ ಜಮೀನು ಒತ್ತುವರಿ –ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

Posted: 17 Jan 2020 05:03 AM PST

ಗಣಿ ಆಕ್ರಮ ತನಿಖಾ ಲೋಕಾಯುಕ್ತ ತಂಡದ ಅವಧಿಯನ್ನು ವಿಸ್ತರಣೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಂಡಿದ್ದು, ಲೋಕಾಯುಕ್ತ ತನಿಖೆ ತಂಡದ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ ನಿರ್ಧರಿಸಲಾಗಿದೆ.

ಸಂಪುಟ ಸಭೆಯ ಬಳಿಕ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ. ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕುರಿತ ಎ.ಟಿ. ರಾಮಸ್ವಾಮಿ ನೇತೃತ್ವದ ಸಮಿತಿಯನ್ನು ಪುನರ್ ರಚನೆ ಮಾಡಲಾಗುವುದು. ಸಂಪುಟ ಸಭೆಯಲ್ಲಿ ಚರ್ಚಿಸಿ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಸಮಿತಿಯನ್ನು ಪುನರ್ ರಚನೆ ಮಾಡಲು ತೀರ್ಮಾನಿಸಲಾಗಿದೆ. ಸಮಿತಿಗೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಎಂದು ಹೆಸರಿಡಲು ನಿರ್ಧರಿಸಲಾಗಿದೆ.

ಇವಿಎಂ, ವಿವಿಪ್ಯಾಟ್ ಗಳ ಸಂಗ್ರಹ, ಭದ್ರತೆಗೆ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳಲ್ಲಿ 130 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಟ್ರಾಂಗ್ ರೂಮ್ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.

ಬಿಗ್ ನ್ಯೂಸ್: ಕಾಮುಕ ವೃದ್ಧನಿಗೆ ಮರಣದಂಡನೆ

Posted: 17 Jan 2020 04:51 AM PST

ಕೋಲಾರದ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅತ್ಯಾಚಾರ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ 65 ವರ್ಷದ ಅಪರಾಧಿಗೆ ನ್ಯಾಯಾಧೀಶರಾದ ಬಿ.ಎಸ್. ರೇಖಾ ಮರಣದಂಡನೆ ಶಿಕ್ಷೆ ನೀಡಿದ್ದಾರೆ.

ಕೋಲಾರ ತಾಲೂಕಿನ ಬೈರಂಡಹಳ್ಳಿ ನಿವಾಸಿಯಾಗಿರುವ ವೆಂಕಟೇಶಪ್ಪ ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. 2018ರ ಮೇ 1ರಂದು ಅಪ್ರಾಪ್ತೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ವೆಂಕಟೇಶಪ್ಪ ವಿರುದ್ಧ ವೇಮಗಲ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕರಾದ ಮುನಿಸ್ವಾಮಿಗೌಡ ವಾದ ಮಂಡಿಸಿದ್ದರು.

ನಿರ್ಭಯಾ ಹಂತಕರಿಗೆ ಜಾರಿಯಾಯ್ತು ಹೊಸ ಡೆತ್ ವಾರೆಂಟ್

Posted: 17 Jan 2020 04:33 AM PST

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪಾಟಿಯಾಲಾ ಹೌಸ್ ಕೋರ್ಟ್ ನಿಂದ ಹೊಸ ಡೆತ್ ವಾರೆಂಟ್ ಜಾರಿ ಮಾಡಲಾಗಿದೆ.

ನಿರ್ಭಯಾ ಹಂತಕರಿಗೆ ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ನೀಡಲು ಆದೇಶಿಸಲಾಗಿದೆ. ನಿರ್ಭಯಾ ಗ್ಯಾಂಗ್ ರೇಪ್ ಹಂತಕರಿಗೆ ಹೊಸ ಡೆತ್ ವಾರೆಂಟ್ ಜಾರಿ ಮಾಡಿರುವ ಕೋರ್ಟ್ ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತೆ ಡೆತ್ ವಾರೆಂಟ್ ಜಾರಿ ಮಾಡಿದೆ.

ವಿನಯ್ ಶರ್ಮಾ(26), ಮುಖೇಶ್ ಕುಮಾರ್(32), ಅಕ್ಷಯ್ ಠಾಕೂರ್ ಸಿಂಗ್(31), ಪವನ್ ಗುಪ್ತಾ(25) ಅವರಿಗೆ ಗಲ್ಲು ಜಾರಿಗೆ ಆದೇಶಿಸಲಾಗಿದೆ.

ಬಿಜೆಪಿ, RSS ನಾಯಕರ ಹತ್ಯೆಗೆ ಸಂಚು: SDPI ನಿಷೇಧಕ್ಕೆ ಸಂಪುಟ ಸಭೆಯಲ್ಲಿ ಚರ್ಚೆ

Posted: 17 Jan 2020 04:31 AM PST

ಬೆಂಗಳೂರು: ಬಿಜೆಪಿ ಮತ್ತು ಆರ್.ಎಸ್.ಎಸ್. ನಾಯಕರ ಹತ್ಯಗೆ ಸಂಚು ರೂಪಿಸಿದ ಆರೋಪದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಎಸ್.ಡಿ.ಪಿ.ಐ. ನಿಷೇಧಕ್ಕೆ ಸಚಿವರು ಒತ್ತಡ ಹೇರಿದ್ದಾರೆ.

ಸಂಪುಟ ಸಭೆಯಲ್ಲಿ ಎಸ್.ಡಿ.ಪಿ.ಐ. ನಿಷೇಧಕ್ಕೆ ಒತ್ತಡ ಹೇರಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಈ ಕುರಿತು ಒತ್ತಾಯಿಸಿದ್ದಾರೆ ಎನ್ನಲಾಗಿದೆ. 6 ಎಸ್.ಡಿ.ಪಿ.ಐ. ಕಾರ್ಯಕರ್ತರ ಬಂಧನ ಹಿನ್ನೆಲೆಯಲ್ಲಿ ಸಂಘಟನೆಗೆ ನಿಷೇಧ ಹೇರಲು ಮುಖ್ಯಮಂತ್ರಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮೇಲೆ ಸಚಿವರು ಒತ್ತಡ ಹೇರಿದ್ದಾರೆ.

ಎಸ್.ಡಿ.ಪಿ.ಐ.ಗೆ ತಕ್ಕ ಪಾಠ ಕಲಿಸುವಂತೆ ಒಕ್ಕೊರಲ ಒತ್ತಾಯ ಕೇಳಿಬಂದಿದೆ. ನಾಳೆ ಕೇಂದ್ರ ಗೃಹಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಂಘಟನೆ ನಿಷೇಧಕ್ಕೆ ಮನವಿ ಸಲ್ಲಿಸಬೇಕು. ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಒತ್ತಡ ಹೇರಿದ್ದು,ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಕೇವಲ ಶರ್ಟ್ ಧರಿಸಿ ಡಾನ್ಸ್ ಮಾಡಿದ ಪಿಗ್ಗಿ-ನಿಕ್

Posted: 17 Jan 2020 03:59 AM PST

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಪತಿ ಹಾಡುಗಾರ ನಿಕ್ ಜೋನಸ್ ಹೊಸ ಹಾಡು ಬಿಡುಗಡೆಯಾಗಿದೆ. What A Man Gotta Do ಹಾಡು ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಯಾಗಿತ್ತು. ಹಾಡಿನ ಕೆಲ ಫೋಟೋಗಳನ್ನು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದರು. ಹಾಡು ಬಿಡುಗಡೆಯಾಗ್ತಿದ್ದಂತೆ ವೈರಲ್ ಆಗಿದೆ.

ಹಾಡಿನಲ್ಲಿ ನಿಕ್ ಜೊತೆ ಪ್ರಿಯಾಂಕಾ ಕೂಡ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಹಾಗೂ ನಿಕ್ ಇಬ್ಬರು ಬರೀ ಶರ್ಟ್ ನಲ್ಲಿ ಡಾನ್ಸ್ ಮಾಡಿದ್ದಾರೆ. ಇಂಗ್ಲೀಷ್ ಹಾಡುಗಳನ್ನು ಇಷ್ಟಪಡುವ ಸಂಗೀತ ಪ್ರಿಯರಿಗೆ ನಿಕ್ ಹೊಸ ಹಾಡು ಇಷ್ಟವಾಗಿದೆ. ಈ ಹಾಡಿನಲ್ಲಿ ಪ್ರಿಯಾಂಕಾ ಕುಟುಂಬವೇ ಕಾಣಿಸಿಕೊಂಡಿದೆ ಅಂದ್ರೆ ತಪ್ಪಾಗಲಾರದು. ಜೋ ಜೊನಸ್ ಅವರ ಪತ್ನಿ ಸೋಫಿ ಟರ್ನರ್ ಕೂಡ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಡಿನ ಆರಂಭದಲ್ಲಿ ನಿಕ್ ಜೋನಸ್ ಕೇವಲ ಶರ್ಟ್ ಧರಿಸಿ ನೃತ್ಯ ಮಾಡುತ್ತಿದ್ದರೆ, ಈ ಹಾಡಿನ ಕೊನೆಯಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಶರ್ಟ್ ಧರಿಸಿ ಡಾನ್ಸ್ ಮಾಡ್ತಾರೆ.

 

ಗುಡ್ ನ್ಯೂಸ್:ಭಾರತೀಯರಿಗೆ ಭರ್ಜರಿ ಉಡುಗೊರೆ ನೀಡಲಿದೆ ಅಮೆಜಾನ್

Posted: 17 Jan 2020 03:29 AM PST

ಜಾಗತಿಕ ಇ-ಕಾಮರ್ಸ್ ಕಂಪನಿ ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಭಾರತದ ಪ್ರವಾಸದಲ್ಲಿದ್ದಾರೆ. ಈ ವೇಳೆ ಜೆಫ್ ಬೆಜೋಸ್ ಭಾರತೀಯರಿಂದ ತೀವ್ರ ವಿವಾದಕ್ಕೊಳಗಾಗಿದ್ದಾರೆ. ಈ ಮಧ್ಯೆ ಅಮೆಜಾನ್,ಭಾರತೀಯರಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾಗಿದೆ.

ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವುದಾಗಿ ಅಮೆಜಾನ್ ಹೇಳಿದೆ. ಅಮೆಜಾನ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಕಂಪನಿಯು ಭಾರತದಲ್ಲಿ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್‌ನಲ್ಲಿ ಹೂಡಿಕೆ ಮಾಡಲಿದೆ. ಅದರ ಮೂಲಕ ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ.

ಇದಲ್ಲದೆ ಅಮೆಜಾನ್ ಶೀಘ್ರದಲ್ಲೇ ಭಾರತದಲ್ಲಿ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ವಿದ್ಯುತ್ ರಿಕ್ಷಾಗಳನ್ನು ರಸ್ತೆಗಿಳಿಸಲಿದೆ.  ಮಾಹಿತಿಯ ಪ್ರಕಾರ 10,000 ಇ-ರಿಕ್ಷಾಗಳನ್ನು ತಯಾರಿಸಲಿದೆ.ಕಂಪನಿಯು ಏಕ ಬಳಕೆ ಪ್ಲಾಸ್ಟಿಕ್ ಬ್ಯಾನ್ ಮಾಡುವುದಾಗಿ ಹೇಳಿದೆ.

 

ಸತತವಾಗಿ ಏರಿಕೆ ಕಾಣ್ತಿದೆ ಚಿನ್ನ-ಬೆಳ್ಳಿ ಬೆಲೆ

Posted: 17 Jan 2020 02:49 AM PST

ಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬರ್ತಿದೆ.ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 32 ರೂಪಾಯಿ ಏರಿಕೆ ಕಂಡಿದೆ.ಬೆಳ್ಳಿ ಬೆಲೆ ಶುಕ್ರವಾರ 116 ರೂಪಾಯಿ ಹೆಚ್ಚಾಗಿದೆ.ಈ ಏರಿಕೆಯಿಂದಾಗಿ ದೆಹಲಿ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 40,590 ರೂಪಾಯಿಯಾಗಿದೆ.

ಬೆಲೆ ಏರಿಕೆಗೆ ಎರಡು ಸಂಗತಿ ಕಾರಣವಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೆಲೆಗಳು ಹಾಗೂ ರೂಪಾಯಿ ಮೌಲ್ಯದಲ್ಲಿ ಆಗ್ತಿರುವ ಕುಸಿತ ಬೆಲೆ ಏರಿಕೆ. ಚಿನ್ನದ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಬೆಲೆ 41 ಸಾವಿರ ರೂಪಾಯಿ ಗಡಿದಾಟುವ ಸಾಧ್ಯತೆಯಿದೆ. ಒಂದು ವೇಳೆ ಇಳಿಕೆ ಕಂಡು ಬಂದ್ರೆ 10 ಗ್ರಾಂ ಚಿನ್ನದ ಬೆಲೆ 39 ರೂಪಾಯಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಸತತ ಮೂರು ದಿನಗಳಿಂದ ಚಿನ್ನ-ಬೆಳ್ಳಿ ಬೆಲೆ ಹೆಚ್ಚಾಗ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ.ಚಿನ್ನದ ಬೆಲೆ 1,555 ಡಾಲರ್ ಪ್ರತಿ ಔನ್ಸ್ ಆಗಿದೆ.ಬೆಳ್ಳಿ ಬೆಲೆ 18.02 ಡಾಲರ್ ಪ್ರತಿ ಔನ್ಸ್ ಆಗಿದೆ. ದೆಹಲಿ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಕೆ.ಜಿಗೆ 47,756 ರೂಪಾಯಿಯಾಗಿದೆ.

 

ಒಂದೂವರೆ ಲಕ್ಷ ರೂ. ಟಿವಿಗೆ ಕ್ರೀಂ ಬಳಿದ ತುಂಟ ಬಾಲಕ!

Posted: 17 Jan 2020 02:37 AM PST

ಮಕ್ಕಳ ತುಂಟಾಟಗಳ ಪ್ರಹಸನದಿಂದ ಮನೆಗಳಲ್ಲಿ ಏನೇನೆಲ್ಲಾ ಅದ್ವಾನಗಳಾಗಿಬಿಡುತ್ತವೆ.

ಅದರಲ್ಲೂ ಮನೆಯಲ್ಲಿ ಅಪ್ಪಿ ತಪ್ಪಿ ಒಂದೊಂದೇ ಮಗುವನ್ನು ಬಿಟ್ಟುಬಿಟ್ಟರಂತೂ ಅವುಗಳ ಚೇಷ್ಟೆಯನ್ನು ಕೇಳುವವರೇ ಇರುವುದಿಲ್ಲ.

ಸಾರಾ ರಕ್ ಎಂಬ ನಾಲ್ಕು ಮಕ್ಕಳ ತಾಯಿಯೊಬ್ಬಳು ತನ್ನ ಎರಡು ವರ್ಷದ ಮಗ ಅಲಿ ಹಾಗೂ ಆತನ ಪಟ್ಟ ಸಹೋದರನನ್ನು ಮನೆಯ ಲಿವಿಂಗ್ ರೂಂನಲ್ಲಿ ಆಡಲು ಬಿಟ್ಟು, ಕೆಲವೇ ನಿಮಿಷಗಳ ಕಾಲ ಅಡುಗೆಮನೆಯತ್ತ ಚಿತ್ತ ಹರಿಸಿದ್ದಾಳೆ.

ಆಕೆ ಮರಳಿ ಬರುವ ವೇಳೆಗೆ 1.4 ಲಕ್ಷ ರೂಗಳ ಟಿವಿಯನ್ನು ಎಲಿ ತನ್ನ ಡೈಪರ್‌ಕ್ರೀಂ ಬಳಿದು, ಕ್ರೀಂಮಯ ಮಾಡಿಬಿಟ್ಟಿದ್ದಾನೆ.

ಟೇಬಲ್‌ಮೇಲೆ ರಕ್‌ನ ಪತಿ ಕ್ರೀಂ ಅನ್ನು ಬಿಟ್ಟು ಹೊರಹೋಗಿದ್ದರು. ಸಾಮಾನ್ಯವಾಗಿ ಗದ್ದಲ ಮಾಡುತ್ತಲೇ ಇರುವ ಮಕ್ಕಳು ಒಂದಷ್ಟು ಹೊತ್ತು ಮೌನವಾಗಿದ್ದುದ್ದನ್ನು ಗಮನಿಸಿದ ಸಾರಾ, 'ಏನೋ ಎಡವಟ್ಟಾಗಿದೆಯಲ್ಲಾ' ಎಂದು ತಿರುಗಿ ನೋಡುವಷ್ಟರಲ್ಲಿ ಎಲಿ ಈ ಕೆಲಸ ಮಾಡಿಬಿಟ್ಟಿದ್ದಾನೆ. ಟಿವಿಗೂ ಮುನ್ನ ಖುದ್ದು ತನ್ನದೇ ಮುಖಕ್ಕೂ ಕ್ರೀಂ ಬಳಿದುಕೊಂಡಿದ್ದ ಎಲಿ.

ಒಂದು ಗಂಟೆಯ ಕಾಲ ಟಿವಿಗೆ ಬಳಿದುಕೊಂಡಿದ್ದ ಬಣ್ಣವನ್ನು ಒಣಗಿದ ಬಟ್ಟೆಯೊಂದರಿಂದ ತೆಗೆದು ಹಾಕಿದ ಸಾರಾ ಅದೃಷ್ಟಕ್ಕೆ ಟಿವಿ ನಾರ್ಮಲ್ ಆಗಿಯೇ ಕೆಲಸ ಮಾಡುತ್ತಿದೆ.

 

ಜಿಮ್ ನಲ್ಲಿ ಸಿಕ್ಕಿಹಾಕಿಕೊಂಡ ಗಂಡನಿಗೆ ಹೆಂಡತಿ ಕೊಟ್ಟ ಸಲಹೆ ಏನು ಗೊತ್ತಾ?

Posted: 17 Jan 2020 02:03 AM PST

ವಿಪರ್ಯಾಸದ ಘಟನೆಯೊಂದರಲ್ಲಿ '24 ಹವರ್‌ ಫಿಟ್ನೆಸ್‌' ಎಂಬ ಹೆಸರಿನ ಜಿಮ್‌ ಒಂದರ ಒಳಗೆ ವ್ಯಕ್ತಿಯೊಬ್ಬ ಲಾಕ್ ಆಗಿಬಿಟ್ಟಿದ್ದಾನೆ.

ಉತಾಹ್‌ನ ಸ್ಯಾಂಡಿಯಲ್ಲಿ ನಡೆದ ಈ ಘಟನೆಯಲ್ಲಿ, ಸ್ವಿಮ್ಮಿಂಗ್‌ಪೂಲ್‌ನಲ್ಲಿ ಈಜುತ್ತಿದ್ದ ಡ್ಯಾನ್‌ಹಿಲ್‌ಗೆ ತಾನು ಲಾಕ್ ಆಗಿದ್ದೇನೆಂದು ತಿಳಿಯುವ ವೇಳೆಗೆ ಬಹಳ ತಡವಾಗಿ ಹೋಗಿತ್ತು.

ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಕರೆ ಮಾಡಿದ ಡ್ಯಾನ್ ಹಿಲ್‌ಗೆ ಕೆಲವರು ಅಲ್ಲಿಂದ ಆಚೆ ಬರಲು ಸೂಚನೆ ನೀಡಿದರೆ, ಮತ್ತೆ ಕೆಲವರು ಪೊಲೀಸರಿಗೆ ಕಾಲ್ ಮಾಡಲು ಸೂಚಿಸಿದ್ದಾರೆ.

ಮಲಗಲು ಆರಾಮವಾದ ಜಾಗವೊಂದನ್ನು ಕಂಡುಕೊಳ್ಳಲು ಆತನ ಪತ್ನಿ ಸೂಚಿಸಿದ್ದಾಳೆ.

ಬಾಗಿಲನ್ನು ತೆರೆಯಲು ಯತ್ನಿಸಿದರೆ ಸೆಕ್ಯೂರಿಟಿ ಅಲಾರಂಗಳು ಬಡಿದುಕೊಂಡು, ಪೊಲೀಸರು ಎಲ್ಲಿ ತನ್ನ ಮೇಲೆ ಕಳ್ಳನೆಂದು ತಿಳಿದು ಮುಗಿಬೀಳುವರೋ ಎಂಬ ಭಯದಲ್ಲಿ ಈ ಐಡಿಯಾವನ್ನೂ ಕೈಬಿಡಬೇಕಾಯಿತು.

ಇದಾದ 20 ನಿಮಿಷಗಳ ಬಳಿಕ ಸಹೃದಯಿ ಪೊಲೀಸ್ ಪೇದೆಗಳ ನೆರವಿನಿಂದ ಡ್ಯಾನ್ ಸುರಕ್ಷಿತವಾಗಿ ಹೊರಬಂದಿದ್ದಾನೆ.

'24 ಹವರ್‌ಫಿಟ್ನೆಸ್‌' ಎಂಬ ಹೆಸರಿದ್ದರೂ ಸಹ ಬಾಗಿಲು ಮುಚ್ಚಿದ್ದ ಕಾರಣಕ್ಕೆ ಜಿಮ್‌ ಕ್ಷಮೆಯಾಚಿಸಿದ್ದು, ಬಳಕೆದಾರರ ಸಂಖ್ಯೆ ಕಡಿಮೆ ಇರುವ ಕಾರಣ 12 ಗಂಟೆ ಮಧ್ಯರಾತ್ರಿಯಿಂದ ಬೆಳಗ್ಗಿನ ಜಾವ 4ರವರೆಗೆ ಮುಚ್ಚಿರಲು ನಿರ್ಧಾರ ಮಾಡಿರುವುದಾಗಿ ತಿಳಿಸಿದೆ.

I am literally locked inside 24 hour fitness right now. They closed the doors and went home while I was swimming my laps…

Posted by Dan Hill on Saturday, January 11, 2020

Free at last! Free at last! Thanks to three nice cops I am free at last.

Posted by Dan Hill on Saturday, January 11, 2020

So I've felt bad about any poor publicity I may have caused. Despite all the fuss, I still love my 24 (even if it is now my 20). Maybe this is a workable solution…

Posted by Dan Hill on Tuesday, January 14, 2020

ಬಿಗ್ ಬಾಸ್ ಸ್ಪರ್ಧಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಖಾಸಗಿ ಅಂಗ ಕತ್ತರಿಸುತ್ತೇನೆಂದ ಅತ್ತಿಗೆ

Posted: 17 Jan 2020 01:41 AM PST

ಬಿಗ್ ಬಾಸ್ ಮನೆಗೆ ಕುಟುಂಬ ಸದಸ್ಯರು,ಪ್ರೀತಿಪಾತ್ರರು ಬರ್ತಿದ್ದಾರೆ. ಇದ್ರ ಮಧ್ಯೆ ಸ್ಪರ್ಧಿ ಆರತಿ ಸಿಂಗ್  ಹೇಳಿದ ಮಾತೊಂದು ಸಾಕಷ್ಟು ಸುದ್ದಿ ಮಾಡಿದೆ. ಈ ಹಿಂದೆ ಮನೆಕೆಲಸದಾತ ತನ್ನೊಂದಿಗೆ ತಪ್ಪಾಗಿ ನಡೆದುಕೊಳ್ಳಲು ಪ್ರಯತ್ನಿಸಿದ್ದ ಎಂದು ಆರತಿ ಹೇಳಿದ್ದಳು. ಇದು ಪ್ರೇಕ್ಷಕರ ಜೊತೆ ಕುಟುಂಬ ಸದಸ್ಯರಿಗೆ ಆಘಾತವನ್ನುಂಟು ಮಾಡಿದೆ.  ಆರತಿಯ ಅತ್ತಿಗೆ ಅಂದ್ರೆ ಕೃಷ್ಣ ಅಭಿಷೇಕ್ ಅವರ ಪತ್ನಿ ಕಾಶ್ಮೀರ ಷಾ, ಅತ್ತಿಗೆ ಹೇಳಿದ ಈ ಮಾತು ಕೇಳಿ ದಂಗಾಗಿದ್ದಾರೆ.

ವೆಬ್ಸೈಟ್ ಒಂದರಲ್ಲಿ ಮಾತನಾಡಿದ ಕಾಶ್ಮೀರಾ ಷಾ, ಈ ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇವು ಸಾಕಷ್ಟು ಗಂಭೀರ ವಿಷಯಗಳು. ದುರದೃಷ್ಟವಶಾತ್ ಕೃಷ್ಣ ಮತ್ತು ನನಗೆ ಈ ಘಟನೆಯ ಬಗ್ಗೆ ತಿಳಿದಿರಲಿಲ್ಲ. ಆರತಿ ಈ ಬಗ್ಗೆ ನಮಗೆ  ಹೇಳಿರಲಿಲ್ಲ ಎಂದಿದ್ದಾರೆ.

ಆರತಿಗೆ 13 ವರ್ಷದಲ್ಲಿದ್ಸಾಗ ದತ್ತು ಪಡೆದ ಗೀತಾ ಆಂಟಿಯೊಂದಿಗೆ ವಾಸಿಸುತ್ತಿದ್ದಳು. ಅವಳಿಗೆ 21 ವರ್ಷವಾದ್ಮೇಲೆ ನಮ್ಮ ಮನೆಗೆ ಬಂದಳು. ಇಂಥ ವಿಷ್ಯವನ್ನು ನಾನು ಎಂದಿಗೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನನಗೆ ಆ ವ್ಯಕ್ತಿ ಸಿಕ್ಕಿದ್ರೆ ಆತನ ಖಾಸಗಿ ಅಂಗ ಕತ್ತರಿಸುತ್ತೇನೆ ಎಂದಿದ್ದಾರೆ.

 

ಮದುವೆ ನೋಂದಣಿ ಕಚೇರಿ ಟೆರೇಸ್ ಗೆ ವಿಧವೆ ಎಳೆದೊಯ್ದ ಯುವಕ..

Posted: 17 Jan 2020 01:33 AM PST

ಜಬಲ್ಪುರದ ಸಂಜೀವನಿ ನಗರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 22 ವರ್ಷದ ವಿಧವೆ ಮಹಿಳೆಯನ್ನು ಮದುವೆಯಾಗುವ ಆಸೆ ತೋರಿಸಿ ಅತ್ಯಾಚಾರವೆಸಗಿದ್ದಾನೆ.ಮದುವೆ ನೋಂದಣಿ ಕಚೇರಿಗೆ ಕರೆದೊಯ್ದು ಕಿರುಕುಳ ನೀಡಿದ್ದಾನಂತೆ. ಕಚೇರಿಯ ಟೆರೇಸ್ ನಲ್ಲಿ ಕಿರುಕುಳ ನೀಡಿದ್ದಾನೆಂದು ಮಹಿಳೆ ದೂರಿದ್ದಾಳೆ.

ಏಳೆಂಟು ವರ್ಷಗಳಿಂದ ಲೌಕೇಶ್ ಮಹಿಳೆಗೆ ಪರಿಚಯವಂತೆ. ಪತಿ ಸತ್ತ ಮೇಲೆ ಮತ್ತಷ್ಟು ಹತ್ತಿರವಾಗಿದ್ದನಂತೆ. ಆರು ತಿಂಗಳ ಹಿಂದೆ ನಿನ್ನನ್ನು ಪ್ರೀತಿಸುತ್ತೇನೆ. ಮದುವೆಯಾಗ್ತೇನೆಂದ ಲೌಕೇಶ್ ಮದುವೆ ನೋಂದಣಿ ಕಚೇರಿಗೆ ಕರೆದೊಯ್ದಿದ್ದಾನಂತೆ. ಕಚೇರಿ ಟೆರೇಸ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನಂತೆ. ನಂತ್ರ ಮದುವೆಯಾಗಲು ನಿರಾಕರಿಸಿದ್ದಾನಂತೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಲೌಕೇಶ್ ಪತ್ತೆಗೆ ಬಲೆ ಬೀಸಿದ್ದಾರೆ.

 

ಇವರೇ ನಿಜವಾದ ಸೆಲೆಬ್ರಿಟಿ ಎಂದು ಹೊಗಳಿದ ಖ್ಯಾತ ಉದ್ಯಮಿ

Posted: 17 Jan 2020 01:15 AM PST

ಸೇನಾ ದಿವಸದಂದು ನಡೆದ ರಾಷ್ಟ್ರಮಟ್ಟದ ಕವಾಯತಿನಲ್ಲಿ ಪುರುಷ ಸಿಪಾಯಿಗಳೇ ಇದ್ದ ತಂಡವೊಂದನ್ನು ಮುನ್ನಡೆಸುವ ಮೂಲಕ ಭಾರೀ ಸದ್ದು ಮಾಡುತ್ತಿರುವ ತಾನ್ಯಾ ಶೆರ್ಗಿಲ್ ಇದೀಗ ಎಲ್ಲರ ಕಣ್ಮಣಿಯಾಗಿದ್ದಾರೆ.

ಟ್ವಿಟರ್‌ನಲ್ಲಿ ಅವರ ಹೆಸರಿನಲ್ಲಿ ಹ್ಯಾಶ್‌ಟ್ಯಾಗ್‌ಸದ್ದು ಮಾಡುತ್ತಿದ್ದು, ನೆಟ್ಟಿಗ ಸಮುದಾಯ ಈಕೆಯ ದಿಟ್ಟತನಕ್ಕೆ ಸೆಲ್ಯೂಟ್ ಮಾಡಿದೆ.

ಈಕೆಯ ಯಶೋಗಾಥೆಯನ್ನು ಮೆಚ್ಚಿಕೊಂಡಿರುವ ಭಾರೀ ಉದ್ಯಮಿ ಆನಂದ್ ಮಹೀಂದ್ರಾ, ತಾನ್ಯಾ ಕುರಿತು ಟ್ವೀಟ್ ಮಾಡಿದ್ದು, “ಇದನ್ನು ನೋಡಿದರೇ ಮಿಂಚಿನ ಸಂಚಲನವಾಗುತ್ತದೆ.

ಈಕೆಯೊಂದು ದೊಡ್ಡ ಸ್ಪೂರ್ತಿ. ತಾನ್ಯಾ ಶೆರ್ಗಿಲ್ ನಿಜವಾದ ಸೆಲೆಬ್ರಿಟಿ. ಈ ವಿಡಿಯೋ ಟ್ರೆಂಡಿಂಗ್ ಆಗಬೇಕಿದೆ. ಬರೀ ಟಿಕ್ ಟಾಕ್‌ವೆರೈಟಿ ಮಾತ್ರವಲ್ಲ ,” ಎಂದು ಆನಂದ್ ಹೇಳಿಕೊಂಡಿದ್ದಾರೆ.

ಎಲೆಕ್ಟ್ರಾನಿಕ್‌ಹಾಗೂ ಸಂಪರ್ಕದಲ್ಲಿ ಪದವಿ ಮುಗಿಸಿರುವ ತಾನ್ಯಾ, ಚೆನ್ನೈನ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಲ್ಲಿ ಮಿಲಿಟರಿ ತರಬೇತಿ ಪಡೆದಿದ್ದು, ಸಿಗ್ನಲ್ ವಿಭಾದಲ್ಲಿ ಅಧಿಕಾರಿಯಾಗಿದ್ದಾರೆ.

ಈ ವರ್ಷದ ಗಣತಂತ್ರ ದಿವಸದಂದು ಪುರುಷರೇ ಇರಲಿರುವ ಕವಾಯತು ತಂಡವೊಂದನ್ನು ತಾನ್ಯಾ ಮುನ್ನಡೆಸಲಿದ್ದಾರೆ.

 

ಒಂದು ಟ್ವೀಟ್ ಏನೆಲ್ಲಾ ಮಾಡಬಹುದು ನೀವೇ ನೋಡಿ!

Posted: 17 Jan 2020 01:08 AM PST

ಸಾಮಾಜಿಕ ಜಾಲತಾಣಗಳಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ನಾವು ಕೇಳಿರುತ್ತೇವೆ. ಆದರೆ ಆಗಾಗ ಇವೇ ಸಾಮಾಜಿಕ ಜಾಲತಾಣಗಳಿಂದ ಒಳ್ಳೆಯ ಕೆಲಸಗಳೂ ಆಗುತ್ತವೆ, ಅದಕ್ಕೆ ಈ ಕೆಳಗಿನ ನಿದರ್ಶನವೇ ಸಾಕ್ಷಿ.

ಆದದ್ದೇನೆಂದರೆ ಇಂಗ್ಲೆಂಡಿನ ಪೀಟರ್ಸ್‌ಫೀಲ್ಡ್ ಎನ್ನುವ 100 ವರ್ಷ ಹಳೆಯ ಪುಸ್ತಕದಂಗಡಿ ಕಷ್ಟದಲ್ಲಿದ್ದು ಅವತ್ತು ಒಂದೇ ಒಂದು ಪುಸ್ತಕ ಮಾರಾಟವಾಗಿರಲಿಲ್ಲ.

ಅದರ ಕುರಿತು ಕೆಲಸಗಾರನೊಬ್ಬ ಅಂಗಡಿಯ ಟ್ವೀಟರ್ ಖಾತೆಯಿಂದ ಟ್ವೀಟ್ ಮಾಡಿದ್ದ.

ತಕ್ಷಣ ಈ ಟ್ವೀಟ್ ವೈರಲ್ ಆಗಿದ್ದು 8000 ಬಾರಿ ರೀಟ್ವೀಟ್ ಆಗಿ 16000 ಮೆಚ್ಚುಗೆ ಪಡೆದಿದೆ. ಇದರ ಪರಿಣಾಮ ಅಂಗಡಿಗೆ ಪುಸ್ತಕಗಳ ಆರ್ಡರ್ ಬರಲು ಶುರುವಾಗಿದೆ. ತಕ್ಷಣ 95 ಆರ್ಡರ್ ಬಂದಿದ್ದು 300 ಜನ ವಿಚಾರಿಸಿದ್ದಾರಂತೆ.

ಇದರ ಕುರಿತು ಮಾತನಾಡಿದ ಅಂಗಡಿಯ ವ್ಯವಸ್ಥಾಪಕ ನಿರ್ದೇಶಕ ಜಾನ್ ವೆಸ್ಟ್‌ವೂಡ್ ಜನರ ಪ್ರತಿಕ್ರಿಯೆಯಿಂದ ಖುಷಿಯಾಗಿದೆ ಎಂದಿದ್ದಾರೆ. ಈ ಅಂಗಡಿ ಉಳಿಸಲು ಅವರು ತಮ್ಮ ಫ್ಲ್ಯಾಟ್ ಅನ್ನೂ ಮಾರಿದ್ದರಂತೆ.

 

ಶಾಕಿಂಗ್: BPO ಉದ್ಯೋಗಿ ಗೆ ಬಂತು 3.5 ಕೋಟಿ ರೂ.ಗಳ ಆದಾಯತೆರಿಗೆ ನೋಟಿಸ್!

Posted: 17 Jan 2020 01:06 AM PST

ಪಂಜಾಬ್‌ಲೂಧಿಯಾನದಲ್ಲಿರುವ BPO ಒಂದರಲ್ಲಿ ಕೆಲಸ ಮಾಡುವ ಮಧ್ಯ ಪ್ರದೇಶದ ಭಿಂಡ್ ಮೂಲದ ವ್ಯಕ್ತಿಯೊಬ್ಬರಿಗೆ ಜೀವಮಾನದ ಶಾಕ್‌ ಒಂದು ಕಾದಿತ್ತು.

ರವಿ ಗುಪ್ತಾ ಎಂಬ ಹೆಸರಿನ ಈತನ ಪಾನ್ ಕಾರ್ಡ್ ಹೆಸರಿನಲ್ಲಿ ಮುಂಬಯಿಯಲ್ಲಿ ಬ್ಯಾಂಕ್ ಖಾತೆಯೊಂದನ್ನು ತೆರೆದಿದ್ದು, ಅದರ ಮೂಲಕ 132 ಕೋಟಿ ರೂ.ಗಳ ವ್ಯವಹಾರ ನಡೆಸಲಾಗಿದೆ ಎಂದಿರುವ ಆದಾಯ ತೆರಿಗೆ ಇಲಾಖೆ, ಈ ಸಂಬಂಧ ವಿವರಣೆ ಕೇಳಿತ್ತು.

2011-12ರಲ್ಲಿ ಇಂದೋರ್‌ನಲ್ಲಿ ಬಿಪಿಓ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದ ತಮಗೆ ವಾರ್ಷಿಕ 60,000 ರೂಗಳ ವೇತನ ಬರುತ್ತಿತ್ತು ಎಂದು ಗುಪ್ತ ವಿವರಿಸಿದ್ದಾರೆ. ಯಾರೋ ದಂಧೆಕೋರರು ತಮ್ಮ ಪಾನ್ ಸಂಖ್ಯೆ ಬಳಸಿ ಬ್ಯಾಂಕ್ ಮೂಲಕ ಅವ್ಯವಹಾರ ನಡೆಸಿರಬೇಕೆಂದು ಗುಪ್ತಾ ತಿಳಿಸಿದ್ದಾರೆ.

ಗ್ವಾಲಿಯರ್‌ನಲ್ಲಿರುವ ಆದಾಯ ತೆರಿಗೆ ಇಲಾಖೆಯು ಗುಪ್ತಾಗೆ ಜನವರಿ 17ರ ಒಳಗೆ 3.49 ಕೋಟಿ ರೂ ದಂಡ ಕಟ್ಟಬೇಕೆಂದು ನೋಟಿಸ್ ಕಳುಹಿಸಿದೆ. ದಂಡದ ಮೊತ್ತ ಪಾವತಿ ಮಾಡದೇ ಇದ್ದಲ್ಲಿ, ಲೋನ್ ಪಡೆದು ಕಟ್ಟಿಕೊಂಡಿರುವ ತನ್ನ ಮನೆಯನ್ನು ಐ-ಟಿ ಇಲಾಖೆ ಜಪ್ತಿ ಮಾಡಿಕೊಂಡು ಸರ್ಕಾರದ ಖಜಾನೆ ಪಾಲಾಗಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಏನಾಗಿದೆ ಎಂದು ತಿಳಿಯಲು ಖುದ್ದು ತನಿಖೆ ನಡಿಸಿದ ಗುಪ್ತಾಗೆ ದೊಡ್ಡ ಸಂಗತಿಯೊಂದು ತಿಳಿದಿದೆ.

ಖದೀಮರಾದ ಮೇಹುಲ್ ಚೋಕ್ಸಿ ಹಾಗೂ ನೀರವ್‌ಮೋದಿಗೆ ನಂಟಿರುವ ಸೂರತ್‌ಮೂಲದ ವಜ್ರದ ಕಂಪನಿಯೊಂದು ಬೋಗಸ್ ಬ್ಯಾಂಕ್ ಖಾತೆಗೆ ಈತನ ಪಾನ್ ಸಂಖ್ಯೆಯನ್ನು ಲಗತ್ತಿಸಿ 132 ಕೋಟಿ ರೂ.ಗಳ ಅವ್ಯವಹಾರ ನಡೆಸಿದೆ ಎಂದು ತಿಳಿದುಬಂದಿದೆ.

 

ಆನ್ಲೈನ್ ನಲ್ಲಿ ಒಳ ಉಡುಪು ಖರೀದಿ ಇಷ್ಟವಿಲ್ವಂತೆ ಈ ನಟನಿಗೆ..!

Posted: 17 Jan 2020 12:36 AM PST

ಅಮೆಜಾನ್ ಗ್ಲೋಬಲ್ ಸಿಇಒ ಜೆಫ್ ಬೆಜೋಸ್ ಭಾರತ ಪ್ರವಾಸದಲ್ಲಿದ್ದಾರೆ. ಗುರುವಾರ ಅವರು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರನ್ನು ಭೇಟಿಯಾಗಿದ್ದರು. ಶಾರುಖ್ ಖಾನ್ ಈ ವೇಳೆ ಬೆಜೋನ್ ರಿಗೆ ಬಾಲಿವುಡ್ ಉದ್ಯಮವನ್ನು ಪರಿಚಯಿಸಿದರು.ಇದ್ರ ಜೊತೆಗೆ ಕೆಲ ವಿಷ್ಯಗಳ ಬಗ್ಗೆ ಮಾತನಾಡಿದ್ರು.

ಆನ್ಲೈನ್ ನಲ್ಲಿ ಒಳ ಉಡುಪು ಖರೀದಿಸುವುದಿಲ್ಲವೆಂದು ಶಾರುಖ್ ಖಾತ್ ಇದೇ ವೇಳೆ ಹೇಳಿದ್ದಾರೆ. ನಾನು ನನ್ನ ಎಲ್ಲ ಪುಸ್ತಕಗಳನ್ನು ಅಮೆಜಾನ್‌ ನಲ್ಲಿ ಖರೀದಿ ಮಾಡ್ತೇನೆ. ಬಿಗ್ ಬಾಸ್ಕೆಟ್‌ನಿಂದ ಮನೆ ವಸ್ತುಗಳನ್ನು ಖರೀದಿಸುತ್ತೇನೆ. ಆದ್ರೆ ಆನ್ಲೈನ್ ನಲ್ಲಿ ಒಳ ಉಡುಪು ಖರೀದಿ ಮಾಡಲು ನನಗೆ ಸರಿ ಎನ್ನಿಸುವುದಿಲ್ಲವೆಂದು ಶಾರುಖ್ ಹೇಳಿದ್ದಾರೆ.

ನಿದ್ರೆ ಸಮಯ ಹಾಳು ಮಾಡುತ್ತದೆ ಎಂಬುದು ನನ್ನ ಅಭಿಪ್ರಾಯ.ಹಾಗಾಗಿ ನಾನು ಹೆಚ್ಚು ಸಮಯವನ್ನು ನಿದ್ರೆಯಲ್ಲಿ ಕಳೆಯಲು ಇಷ್ಟಪಡುವುದಿಲ್ಲವೆಂದು ಶಾರುಖ್ ಹೇಳಿದ್ದಾರೆ.

 

 

`ಮಾದೇವ’ನ ಜಪದಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್: ಹೊಸ ಹಾಡಿಗೆ ಅಭಿಮಾನಿಗಳು ಫಿದಾ

Posted: 17 Jan 2020 12:27 AM PST

ಹೊಸ ರೀತಿಯ ಚಿತ್ರಗಳ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗೋದು ಸೂರಿ ಅಲಿಯಾಸ್ ದುನಿಯಾ ಸೂರಿ.  ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಸೂರಿ  ಇದೀಗ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದೊಂದಿಗೆ ಮತ್ತೆ ಮ್ಯಾಜಿಕ್ ಮಾಡಲು ಬರ್ತಿದ್ದಾರೆ.

ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್  ಬಿಡುಗಡೆ ಮಾಡಿ ಧಮಾಲ್ ಮಾಡಿದ್ದ ಈಗ ಚಿತ್ರದ  ಮೊದಲ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮಾದೇವ ಎನ್ನುವ ಕಂಗ್ಲೀಷ್ ಲಿರಿಕ್ಸ್ ಇರೋ ಟ್ರೆಂಡಿ  ಹಾಡು ಬಿಡುಗಡೆಯಾಗಿದೆ. ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಈ ಹಾಡು ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದೆ.

ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸೂರಿ ಟಗರು ನಂತ್ರ ಮತ್ತೆ ದೊಡ್ಡ ಹಿಟ್ ಸಾಂಗ್ ನೀಡಿ   ಸ್ಯಾಂಡಲ್ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ.  ಮಾದೇವ ಹಾಡಿಗೆ ರಿತ್ವಿಕ್ ಕಾಯ್ಕಿಣಿ ಮತ್ತು ಹನುಮಾನ್ ಕೈಂಡ್  ಸಾಹಿತ್ಯವಿದ್ದು, ಚರಣ್ ರಾಜ್  ಕಂಪೋಸ್ ಮಾಡಿದ್ದಾರೆ. ಸಂಚಿಂತ್ ಹೆಗ್ಗಡೆ, ಹನುಮಾನ್ಕೈಂಡ್ ಮತ್ತು ಚರಣ್ ರಾಜ್ ದನಿಯಲ್ಲಿ ಹಾಡು ಮೂಡಿ ಬಂದಿದೆ.

ಚಿತ್ರದಲ್ಲಿ ಡಾಲಿ ಧನಂಜಯ ನಾಯಕನಟನಾಗಿ ಕಾಣಿಸಿಕೊಂಡಿದ್ದು, ಸ್ಮಿತಾ ನಿವೇದಿತಾ, ಅಮೃತಾ ಅಯ್ಯಂಗರ್, ಸಪ್ತಮಿ, ಪೂರ್ಣಚಂದ್ರ ತೇಜಸ್ವಿ, ನವೀನ್ , ಕಾಕ್ರೋಚ್ ಸುಧೀ ಪ್ರಮುಖಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಈ ನಾಯಿಯ ಟ್ಯಾಲೆಂಟ್‌ ನೋಡುದ್ರೆ ದಂಗಾಗ್ತೀರಾ!

Posted: 17 Jan 2020 12:12 AM PST

ಸಾಮಾನ್ಯವಾಗಿ ಜಿಮ್‌ಗೆ ಹೋಗಲು ನಾವು ಹಲವು ಕಾರಣಗಳನ್ನು ಹುಡುಕುತ್ತೇವೆ. ಆದರೆ ಈ ಶ್ವಾನ ನಿಮ್ಮ ಜಿಮ್‌ನಲ್ಲಿದ್ದರೆ ಖಂಡಿತ ನೀವು ಒಂದು ದಿನವೂ ಜಿಮ್‌ಅನ್ನು ತಪ್ಪಿಸಲಾರಿರಿ.

ಟೆಸ್ಲಾ ಎನ್ನುವ ಈ ಆಸ್ಟ್ರೇಲಿಯನ್ ಶೇಫರ್ಡ್ ಜಾತಿಗೆ ಸೇರಿದ ನಾಯಿ ಜಿಮ್‌ನಲ್ಲಿ ದಿನವೂ ಬೇರೆಯವರ ಜೊತೆ ವ್ಯಾಯಾಮ ಮಾಡುತ್ತದೆ.

ಬರ್ಪಿಸ್ ಇಂದ ಹಿಡಿದು ಹ್ಯಾಂಡ್‌ಸ್ಟ್ಯಾಂಡ್, ವಾಲ್‌ಸ್ಟ್ಯಾಂಡ್ ಹೀಗೆ ಹಲವು ಕಸರತ್ತನ್ನು ಈ ನಾಯಿ ಸುಲಭವಾಗಿ ಮಾಡುತ್ತದೆ.

ತನ್ನದೇ ಇನ್ಸ್ಟಾಗ್ರಾಮ್ ಅಕೌಂಟ್ ಇರುವ ಈ ನಾಯಿಯ ವಿಡಿಯೋಗಳು ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಕತ್ ವೈರಲ್ ಆಗಿವೆ. ನೆಟ್ಟಿಗರಂತೂ ಇದರ ಟ್ಯಾಲೆಂಟ್‌ಗೆ ಸಲಾಂ ಎಂದಿದ್ದಾರೆ.

ಅದೃಷ್ಟ ಅಂದ್ರೆ ಇದು..ನಿರಂತರ 18 ಗಂಟೆ ಮಂಜಿನೊಳಗೆ ಇದ್ದು ಬದುಕಿಬಂದ ಬಾಲಕಿ

Posted: 16 Jan 2020 11:53 PM PST

ನಿರಂತರ 18 ಗಂಟೆಗಳ ಕಾಲ ಮಂಜಿನಲ್ಲಿ ಮುಚ್ಚಿಹೋಗಿದ್ದ 12 ವರ್ಷದ ಬಾಲಕಿಯನ್ನು ಪಾಕ್ ಆಕ್ರಮಿತ ಕಾಶ್ಮೀರದದಲ್ಲಿ ಸುರಕ್ಷಿತವಾಗಿ ಹೊರಗೆ ತರಲಾಗಿದೆ.

ತನ್ನ ಕುಟುಂಬ ವಾಸವಿದ್ದ ಮನೆಯ ಮೇಲೆ ಹಿಮಪಾತವು ಎರಗಿಕೊಂಡ ಪರಿಣಾಮ, ಇಡೀ ಮನೆಯೇ ಮಂಜಿನಡಿ ಸಿಲುಕಿಕೊಂಡಿತ್ತು.

ಹಲವಾರು ಗಂಟೆಗಳ ಕಾಲ ಕೋಣೆಯೊಂದರಲ್ಲಿ ಸಿಲುಕಿಕೊಂಡಿದ್ದ ಸಮೀನಾ ಬೀಬಿ, ತನ್ನನ್ನು ರಕ್ಷಿಸಲು ನೆರವಿಗೆ ಅಂಗಾಲಾಚಿ ಕೂಗಿಕೊಂಡಿದ್ದಾಳೆ.

ಮಂಜಿನಡಿ ರಕ್ಷಣಾ ತಂಡಕ್ಕೆ ಸಿಕ್ಕ ಬೀಬಿಯ ಕಾಲು ಫ್ರಾಕ್ಚರ್‌ ಆಗಿದ್ದು, ಆಕೆಯ ಬಾಯಿಯಿಂದ ರಕ್ತ ಜಿನುಗುತ್ತಿತ್ತು.

ಹಿಮಪಾತಕ್ಕೆ ಸಿಲುಕಿದ ಸಮೀನಾಳ ಮೂರಂತಸ್ತಿನ ಮನೆಯು ಮುಚ್ಚಿಹೋಗಿದ್ದು, ಅದರಲ್ಲಿದ್ದ 18 ಮಂದಿ ಮೃತಪಟ್ಟಿದ್ದಾರೆ. ಸಮೀನಾ ಸಿಗುತ್ತಾಳೆ ಎಂಬ ಭರವಸೆಯನ್ನೇ ಆಕೆಯ ತಾಯಿ ಬಿಟ್ಟು ಬಿಟ್ಟಿದ್ದರು.

ವಿಪರೀತ ಚಳಿ ಹಾಗೂ ಹಿಮಪಾತದ ಕಾರಣ 76 ಮಂದಿ ಮೃತಪಟ್ಟಿರುವ ಘಟನೆ ಈ ಪ್ರದೇಶದಲ್ಲಿ ಜರುಗಿದೆ.

ಬಾಲಿವುಡ್ ಸಿಕ್ರೇಟ್ ಸೆಕ್ಸ್ ರಾಕೆಟ್ : ಒಬ್ಬ ಗ್ರಾಹಕನ ಜೊತೆ ರಾತ್ರಿ ಕಳೆಯಲು ನಟಿಗೆ ಸಿಗ್ತಿತ್ತು ಇಷ್ಟು ಹಣ

Posted: 16 Jan 2020 11:33 PM PST

ಬಾಲಿವುಡ್ ನಟಿಯೊಬ್ಬಳು ಟೀಂ ಇಂಡಿಯಾದ ಇಬ್ಬರು ಆಟಗಾರರನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಡೆಸಿದ್ದಳು. ಈ ಸುದ್ದಿ ಬಹಿರಂಗವಾದ ಮರುದಿನ ಮುಂಬೈ ಪೊಲೀಸರು ಸೆಕ್ಸ್ ರಾಕೆಟ್ ದಂಧೆಯೊಂದರ ಬಣ್ಣ ಬಯಲು ಮಾಡಿದ್ದಾರೆ. ಇಬ್ಬರು ಹುಡುಗಿಯರನ್ನು ರಕ್ಷಿಸಿರುವ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಕಾಸ್ಟಿಂಗ್ ನಿರ್ದೇಶಕ ಎನ್ನಲಾಗಿದೆ.

ಸಿಕ್ಕಿಬಿದ್ದ ಹುಡುಗಿಯರಲ್ಲಿ ಒಬ್ಬಳು ಬಾಲಿವುಡ್ ನಟಿ. ಇತ್ತೀಚಿಗೆ ತೆರೆ ಕಂಡ ಸಿನಿಮಾ ಒಂದರಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದಾಳೆ. ಆಕೆ ಪ್ರಕಾರ ಬಾಲಿವುಡ್ ಗೆ ಬರುವ ಎಲ್ಲರಿಗೂ ಉತ್ತಮ ಪಾತ್ರ ಸಿಗುವುದಿಲ್ಲ. ಕೈತುಂಬ ಹಣ ಸಿಗುವುದಿಲ್ಲ. ಕಾಸ್ಟಿಂಗ್ ನಿರ್ದಶಕರು ಇಂಥ ಹುಡುಗಿಯರಿಗೆ ದೊಡ್ಡ ಪಾತ್ರದ ಆಸೆ ತೋರಿಸಿ ಇಂಥ ದಂಧೆಗೆ ತಳ್ಳುತ್ತಾರಂತೆ.

ಈ ಬಾಲಿವುಡ್ ನಟಿಗೆ ಒಬ್ಬ ಗ್ರಾಹಕರ ಜೊತೆ ಮಲಗಲು 60 ಸಾವಿರ ರೂಪಾಯಿ ಸಿಗುತ್ತಿತ್ತಂತೆ.ಅದ್ರಲ್ಲಿ ಶೇಕಡಾ 50ರಷ್ಟನ್ನು ಬ್ರೋಕರ್ ಗೆ ನೀಡಬೇಕಾಗಿತ್ತಂತೆ. ಗ್ರಾಹಕರ ಖರ್ಚುಗಳನ್ನು ಇವರೇ ನೋಡಿಕೊಳ್ಳಬೇಕಂತೆ. ಈ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದು,ದೊಡ್ಡವರ ಕೈ ಬಗ್ಗೆ ವಿಚಾರಣೆ ನಡೆಯುತ್ತಿದೆ.

 

ಪ್ರಪಂಚದ ಅತ್ಯಂತ ಶ್ರೀಮಂತ.. ಭಾರತದಲ್ಲಿ ಏನು ಮಾಡಿದರೆಂದು ನೋಡಿ!

Posted: 16 Jan 2020 11:31 PM PST

ಅಮೇಜಾನ್ ಸ್ಥಾಪಕ ಹಾಗೂ ಸಿಇಓ ಜೆಫ್ ಬೆಜೋಸ್ ಅಧಿಕೃತವಾಗಿ ಭಾರತ ಪ್ರವಾಸದಲ್ಲಿದ್ದಾರೆ. ಅದರ ಜೊತೆಗೆ ಅವರು ಇಲ್ಲಿನ ಸಂಸ್ಕೃತಿಯನ್ನೂ ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ.

ಭಾರತದಲ್ಲಿ ಅಮೇಜಾನ್ ಕಾರ್ಯವೈಖರಿಯನ್ನು ನೋಡಲು ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಜೊತೆ ಹಾಗೂ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಲು 3 ದಿನದ ಪ್ರವಾಸದಲ್ಲಿದ್ದಾರೆ.

ಅದರ ಜೊತೆಗೆ ಅವರು ರಾಜ್‌ಘಾಟ್‌ಗೆ ಭೇಟಿ ನೀಡಿ ಮಾಹಾತ್ಮಾ ಗಾಂಧಿಯವರಿಗೆ ನಮನ ಸಲ್ಲಿಸಿದರು.

ನಂತರ ಮಕ್ಕಳ ಜೊತೆ ಸೇರಿ ಗಾಳಿಪಟ ಕೂಡ ಹಾರಿಸಿದ್ದಾರೆ. ಅವುಗಳ ಫೋಟೋ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದು ಅವು ವೈರಲ್ ಆಗಿವೆ. ನೆಟ್ಟಿಗರು ಬೆಜೋಸ್ ಅವರನ್ನು ಭಾರತಕ್ಕೆ ಬರಮಾಡಿಕೊಂಡಿದ್ದಾರೆ.

ಬ್ರೇಕಿಂಗ್ ನ್ಯೂಸ್: ನಿರ್ಭಯಾ ಅತ್ಯಾಚಾರಿ ಮುಖೇಶ್ ಕ್ಷಮಾದಾನ ಮನವಿ ತಿರಸ್ಕರಿಸಿದ ರಾಷ್ಟ್ರಪತಿ

Posted: 16 Jan 2020 11:10 PM PST

ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ ಮುಖೇಶ್ ಗೆ ಭಾರೀ ಹಿನ್ನಡೆಯಾಗಿದೆ. ಮುಖೇಶ್ ಸಲ್ಲಿಸಿದ್ದ ಕ್ಷಮಾದಾನ ಮನವಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತಳ್ಳಿಹಾಕಿದ್ದಾರೆ. ಮುಖೇಶ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಶುಕ್ರವಾರ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಪತಿಗಳಿಗೆ ಕಳುಹಿಸಿತ್ತು.

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕ್ಷಮಾದಾನ ಮನವಿಯನ್ನು ತಿರಸ್ಕರಿಸಿದ್ದರಲ್ಲದೆ ಅದನ್ನು ಗುರುವಾರ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದರು. ಕೇಂದ್ರ ಗೃಹ ಸಚಿವಾಲಯ ಮನವಿ ತಿರಸ್ಕರಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತ್ತು.

ನಿರ್ಭಯಾ ಅತ್ಯಾಚಾರಿಗಳಿಗೆ ಜನವರಿ 7ರಂದು ದೆಹಲಿ ಕೋರ್ಟ್ ಡೆತ್ ವಾರೆಂಟ್ ಜಾರಿ ಮಾಡಿತ್ತು. ಜನವರಿ 22ರಂದು ನಾಲ್ವರನ್ನು ಗಲ್ಲಿಗೇರಿಸುವಂತೆ ಆದೇಶ ನೀಡಿತ್ತು. ಈ ಮಧ್ಯೆ ನಾಲ್ವರು ಅಪರಾಧಿಗಳು ಕಾನೂನು ಹೋರಾಟ ಮುಂದುವರೆಸಿದ್ದರು. ಅಪರಾಧಿ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ದೆಹಲಿ ಕೋರ್ಟ್,ರಾಷ್ಟ್ರಪತಿ ತೀರ್ಮಾನ ಬರುವವರೆಗೂ ಗಲ್ಲು ಶಿಕ್ಷೆ ಮುಂದೂಡುವಂತೆ ಹೇಳಿತ್ತು.

 

ಲೈಂಗಿಕ ಕಿರುಕುಳ ಆರೋಪ : ನೆಮ್ಮದಿ ಉಸಿರು ಬಿಟ್ಟ “ಗಾಯಕ”

Posted: 16 Jan 2020 10:57 PM PST

ಬಾಲಿವುಡ್ ಹಾಡುಗಾರ ಅನು ಮಲಿಕ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣದಿಂದ ಮಲಿಕ್ ಹೊರ ಬಂದಿದ್ದಾರೆ.ಮಲಿಕ್ ವಿರುದ್ಧ ಸೂಕ್ತ ಸಾಕ್ಷ್ಯ ಸಿಗದ ಕಾರಣ ಪ್ರಕರಣ ವಜಾಗೊಂಡಿದೆ. ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ಇದ್ರ ವಿಚಾರಣೆ ನಡೆಯುತ್ತಿತ್ತು. ಸಾಕ್ಷ್ಯ ಕೊರತೆಯಿಂದ ಪ್ರಕರಣದ ವಿಚಾರಣೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ಅನು ಮಲಿಕ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಾಗಿತ್ತು.ಸೋನು ಮಹಾಪಾತ್ರ ಟ್ವೀಟರ್ ನಲ್ಲಿ ಮಲಿಕ್ ಅನೇಕ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರಿದ್ದರು.ದೂರದರ್ಶನದಲ್ಲಿ ಪ್ರಸಾರವಾದ ಯಂಗ್ ಸ್ಟರ್ಸ್ ಕಾರ್ಯಕ್ರಮದಲ್ಲಿ ಅನು ಮಲಿಕ್ ಯುವತಿಯರಿಗೆ ಕಿರುಕುಳ ನೀಡಿದ್ದಾರೆಂದು ಅವ್ರು ಟ್ವಿಟ್ ಮಾಡಿದ್ದರು.

ಮಲಿಕ್ ವಿರುದ್ಧ ಸೂಕ್ತ ಸಾಕ್ಷ್ಯ ಸಿಕ್ಕಿಲ್ಲ.ದೂರು ಸ್ವೀಕರಿಸಿದ್ದ ಆಯೋಗ 45 ದಿನಗಳವರೆಗೆ ಪೀಡಿತರು ಮಾಹಿತಿ ನೀಡುವಂತೆ ಕೋರಿತ್ತು. ಆದ್ರೆ ಯಾರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

 

ತನ್ನ ಮದುವೆಗೆ ತಾನೇ ಗೈರಾದ ಸೈನಿಕ!

Posted: 16 Jan 2020 10:41 PM PST

ಹಿಮಾಚಲ ಪ್ರದೇಶದ ಮಂಡಿಯ ಸೈನಿಕನೊಬ್ಬ ಹಿಮಪಾತದಿಂದಾಗಿ ಗುರುವಾರ ತನ್ನ ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ. ಸೈನಿಕ ಸುನೀಲ್ ಕಾಶ್ಮೀರದಲ್ಲಿ ದೇಶ ಸೇವೆ ಮಾಡ್ತಿದ್ದಾರೆ. ಸುಮಾರು ಎರಡು ವಾರಗಳ ಕಾಲ ಹಿಮಪಾತದಿಂದಾಗಿ ಅವರು ಕಣಿವೆಯಲ್ಲಿ ಸಿಲುಕಿಕೊಂಡಿದ್ದಾರೆ.

ಸೈನಿಕ ಸುನೀಲ್ ವಿವಾಹ ಕಾರ್ಯಕ್ರಮ ಬುಧವಾರ ಶುರುವಾಗಿದೆ. ಗುರುವಾರ ಮೆರವಣಿಗೆ ವಧು ಮನೆ ತಲುಪಬೇಕಾಗಿತ್ತು. ಆದ್ರೆ ಸುನೀಲ್ ಮದುವೆ ಮನೆಗೆ ಬರಲಿಲ್ಲ.ಜನವರಿ 1ರಂದು ರಜೆ ಮೇಲೆ ಬಂದಿದ್ದ ಸುನೀಲ್ ಬಂಡಿಪೋರಾದ ಸೇನೆ ಶಿಬಿರವನ್ನು ತಲುಪಿದ್ದರು. ಆದ್ರೆ ವಾತಾವರಣ ಹದಗೆಟ್ಟು,ಹಿಮಪಾತವಾಗ್ತಿರುವ ಕಾರಣ ಎಲ್ಲ ರಸ್ತೆಗಳು ಬಂದ್ ಆಗಿವೆ.

ದೂರವಾಣಿ ಮೂಲಕ ಸುನೀಲ್ ಮನೆಗೆ ಸುದ್ದಿ ತಲುಪಿಸಿದ್ದಾರೆ. ರಸ್ತೆ ಬಂದ್ ಆಗಿರುವ ಕಾರಣ ಮನೆಗೆ ಬರಲು ಸಾಧ್ಯವಾಗ್ತಿಲ್ಲ ಎಂದಿದ್ದಾರೆ. ಮಗನ ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಮಗ ಮನೆಗೆ ಬರದಿರುವುದ್ರಿಂದ ನಿರಾಸೆಗೊಂಡಿದ್ದಾರೆ.

 

No comments:

Post a Comment

Gameforumer QR Scan

Gameforumer QR Scan
Gameforumer QR Scan