Translate

Wednesday, January 15, 2020

Kannada News | Karnataka News | India News

Kannada News | Karnataka News | India News


ಬ್ಯಾಂಕ್ ಗ್ರಾಹಕರಿಗೆ ಒಂದು ಮುಖ್ಯವಾದ ಮಾಹಿತಿ

Posted: 15 Jan 2020 06:42 AM PST

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ತಮ್ಮ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ.

ತಿಂಗಳ ಅಂತ್ಯಕ್ಕೆ ಮತ್ತು ಫೆಬ್ರವರಿ 1ರಂದು ಎರಡು ದಿನ ಬ್ಯಾಂಕ್ ಮುಷ್ಕರಕ್ಕೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಮುಂದಾಗಿದೆ. ಬ್ಯಾಂಕ್ ಸಿಬ್ಬಂದಿ ವೇತನ ಪರಿಷ್ಕರಣೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಜನವರಿ 31 ಹಾಗೂ ಫೆಬ್ರವರಿ 1 ರಂದು ಎರಡು ದಿನಗಳ ಕಾಲ ಮುಷ್ಕರ ನಡೆಸಲಿದ್ದು ಈ ಎರಡು ದಿನಗಳಲ್ಲಿ ಯಾವುದೇ ಬ್ಯಾಂಕ್ ವಹಿವಾಟು ಇರುವುದಿಲ್ಲ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ತಿಳಿಸಿದೆ.

9 ಬ್ಯಾಂಕ್ ನೌಕರರ ಸಂಘಟನೆಗಳ ವೇದಿಕೆಯಾಗಿರುವ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ ವೇತನ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದು ಇದಕ್ಕೆ ಸೂಕ್ತ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡಿಸಲಿದ್ದಾರೆ ಅದೇ ದಿನ ಮುಷ್ಕರ ಕೈಗೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಬೆರಗಾಗುವಂತಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಂಜನೇಯನ ಲುಕ್

Posted: 15 Jan 2020 06:08 AM PST

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ಎರಡನೇ ಲುಕ್ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಪೋಸ್ಟರ್ ನಲ್ಲಿ ಆಂಜನೇಯನ ಅವತಾರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಬೆರಗಾಗುವ ರೀತಿಯಲ್ಲಿ ಹೊಸ ಗೆಟಪ್ ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಆಂಜನೇಯನ ಲುಕ್ ನಲ್ಲಿ ಕಂಗೊಳಿಸಿದ್ದಾರೆ.

'ಸಂಗೊಳ್ಳಿ ರಾಯಣ್ಣ', 'ಕುರುಕ್ಷೇತ್ರ' ಬಳಿಕ 'ರಾಬರ್ಟ್' ಚಿತ್ರದ ದರ್ಶನ್ ಲುಕ್ ಅಭಿಮಾನಿಗಳ ಗಮನಸೆಳೆದಿದೆ. ಮಾತ್ರವಲ್ಲ, ಅಭಿಮಾನಿಗಳ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ಹೆಚ್ಚು ಮಾಡಿದೆ. ಕರ್ನಾಟಕ ಮಾತ್ರವಲ್ಲದೆ, ದೇಶದ ವಿವಿಧೆಡೆ 'ರಾಬರ್ಟ್' ಚಿತ್ರೀಕರಣ ನಡೆದಿದೆ. ಹೈಬಜೆಟ್ ನಲ್ಲಿ ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿರುವ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಮೊದಲ ಪೋಸ್ಟರ್ ಲ್ಲಿ ದರ್ಶನ್ ವಿಶೇಷ ಗೆಟಪ್ ಗಮನಸೆಳೆದಿತ್ತು. ಈಗ ಆಂಜನೇಯನ ಅವತಾರವಂತೂ ಅಭಿಮಾನಿಗಳನ್ನು ಬೆರಗಾಗುವಂತೆ ಮಾಡಿದೆ.

ಅಯ್ಯಪ್ಪನ ಸನ್ನಿಧಿಯಲ್ಲಿ ಮಕರ ಜ್ಯೋತಿ ದರ್ಶನ, ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

Posted: 15 Jan 2020 05:45 AM PST

ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲದಲ್ಲಿ ಮಕರ ಸಂಕ್ರಾಂತಿ ಉತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದಾರೆ.

ಇದೇ ವೇಳೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಕರ ಜ್ಯೋತಿಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಪೊನ್ನಂಬಲಮೇಡುವಿನಲ್ಲಿ ಕಾಣಿಸಿಕೊಂಡ ಮಕರ ಜ್ಯೋತಿಯನ್ನು ಅಯ್ಯಪ್ಪ ಸ್ವಾಮಿ ಭಕ್ತರು ಕಂಡು ಭಕ್ತಿ ಪರವಶರಾಗಿದ್ದಾರೆ. ಪೂಜೆಯ ವೇಳೆ ಅಯ್ಯಪ್ಪನ ಸನ್ನಿಧಿಯಲ್ಲಿ ಗರುಡ ದರ್ಶನವಾಗಿದೆ. ಅಯ್ಯಪ್ಪನ ಸನ್ನಿಧಾನದಲ್ಲಿ ಗರುಡ ದರ್ಶನ ಪಡೆದ ಭಕ್ತರು  ಮಕರ ಜ್ಯೋತಿ ಕಣ್ತುಂಬಿಕೊಂಡಿದ್ದಾರೆ. ಪೊನ್ನಂಬಲಮೇಡು ಮಕರಜ್ಯೋತಿ ದೇವಾಲಯದಿಂದ ಕೈಗೊಳ್ಳುವ ಕಾರ್ಯಕ್ರಮವಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ: ಅಚ್ಚರಿ ಹೇಳಿಕೆ ನೀಡಿದ ಡಿ.ಕೆ. ಶಿವಕುಮಾರ್

Posted: 15 Jan 2020 05:43 AM PST

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಕ ಮಾಡಲಿದ್ದು, ಜೊತೆಗೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕಕ್ಕೆ ಹೈಕಮಾಂಡ್ ವಲಯದಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಬಳಿ ಡಿಕೆಶಿ ಬದಲಿಗೆ ಎಂ.ಬಿ. ಪಾಟೀಲ್ ಅವರನ್ನು ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಹೈಕಮಾಂಡ್ ನಿರ್ಧಾರದಂತೆ ಬಹುತೇಕ ಡಿಕೆಶಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ .

ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ ಎಂದು ಹೇಳುವ ಮೂಲಕ ಡಿಕೆಶಿ ಅಚ್ಚರಿ ಮೂಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಲಿಸ್ಟ್ ನಲ್ಲಿ ನನ್ನ ಹೆಸರಿಲ್ಲ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

ಪತ್ನಿಗೆ ಗೊತ್ತಾಯ್ತು ಅಕ್ರಮ ಸಂಬಂಧ, ಪತಿಯಿಂದ ಘೋರ ಕೃತ್ಯ

Posted: 15 Jan 2020 04:59 AM PST

ರಾಮನಗರ: ಗಂಡನ ಅಕ್ರಮ ಸಂಬಂಧ ಗೊತ್ತಾಗಿ ಪೋಷಕರಿಗೆ ಹೇಳುವುದಾಗಿ ತಿಳಿಸಿದ ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ನೀಡಿ ಕೊಲೆ ಮಾಡಿದ ಘಟನೆ ರಾಮನಗರದಲ್ಲಿ ನಡೆದಿದೆ.

22 ವರ್ಷದ ದೀಪಾ ಕೊಲೆಯಾದವರೆಂದು ಹೇಳಲಾಗಿದೆ. ಪತಿ ವೆಂಕಟೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಅಲ್ಲೇ ಕೆಲಸಕ್ಕೆ ಬರುತ್ತಿದ್ದ ಯುವತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾನೆ. ಈ ವಿಚಾರ ಪತ್ನಿಗೆ ಗೊತ್ತಾಗಿ ಪೋಷಕರಿಗೆ ತಿಳಿಸುವುದಾಗಿ ಗಂಡನಿಗೆ ಬೆದರಿಸಿದ್ದು ಇದರಿಂದಾಗಿ ಆಕ್ರೋಶಗೊಂಡ ವೆಂಕಟೇಶ್, ಪತ್ನಿಗೆ ದೈಹಿಕ ಮಾನಸಿಕ ಹಿಂಸೆ ನೀಡಿದ್ದಾನೆ.

ಆಸ್ಪತ್ರೆಯಿಂದ ಕೆಲವು ಮಾತ್ರೆ ತೆಗೆದುಕೊಂಡು ಹೋಗಿ ಪತ್ನಿಗೆ ಬಲವಂತವಾಗಿ ನುಂಗಿಸಿ ಪ್ರಜ್ಞೆ ತಪ್ಪಿಸಿ ತಾನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ನಂತರದಲ್ಲಿ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಿ ಕ್ರಿಮಿನಾಶಕದ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ್ದಾನೆ. ಅನುಮಾನದ ಮೇಲೆ ಆತನನ್ನು ವಶಕ್ಕೆ ಪಡೆದ ಐಜೂರು ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಸಚಿವ ಸ್ಥಾನದ ಒತ್ತಡಕ್ಕೆ ಸಿಡಿದ ಸಿಎಂ, ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ ಎಂದ್ರು ಸ್ವಾಮೀಜಿ

Posted: 15 Jan 2020 04:28 AM PST

ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಹನಗವಾಡಿ ಪಂಚಮಸಾಲಿ ಗುರುಪೀಠದಲ್ಲಿ ನಡೆದ ಹರಜಾತ್ರೆಯಲ್ಲಿ ನಿನ್ನೆ ನಡೆದ ಘಟನೆಗೆ ವಚನಾನಂದ ಸ್ವಾಮೀಜಿ ಕ್ಷಮೆ ಕೇಳಿದ್ದು ನನ್ನಿಂದ ಏನಾದರೂ ತಪ್ಪಾಗಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ ಎಂದು ಭಕ್ತರಿಗೆ ಹೇಳಿದ್ದಾರೆ.

ಪಂಚಮಸಾಲಿ ಸಮಾಜದ ಮೂವರಿಗೆ ಸಚಿವ ಸ್ಥಾನ ನೀಡಬೇಕು. ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಪಂಚಮಸಾಲಿ ಸಮಾಜ ನಿಮ್ಮೊಂದಿಗೆ ಇರುವುದಿಲ್ಲ ಎಂದು ಸ್ವಾಮೀಜಿ ಮಾತನಾಡಿದ್ದರು.

ಇದರಿಂದ ಅಸಮಾಧಾನಗೊಂಡ ಸಿಎಂ ಯಡಿಯೂರಪ್ಪ ವೇದಿಕೆಯಿಂದ ಇಳಿಯಲು ಮುಂದಾಗಿದ್ದರು. ಬೆದರಿಕೆ ಮಾತನಾಡಬೇಡಿ, ಸಲಹೆ ಕೊಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತಾಗಿ ಪರ-ವಿರೋಧ ಚರ್ಚೆಗಳು ನಡೆದಿವೆ.

ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ನಾನು ಸಮಾಜಕ್ಕಾಗಿ ಇದ್ದೇನೆ. ನನ್ನೊಂದಿಗೆ ಸಮಾಜವಿದೆ ನನ್ನಿಂದ ಯಾವುದಾದರೂ ತಪ್ಪಾಗಿದ್ದರೆ ಕ್ಷಮಿಸಿ. ತಪ್ಪಾಗಿದ್ದರೆ ಹೊಟ್ಟೆಯಲ್ಲಿ ಹಾಕಿಕೊಳ್ಳಿ. ನಾನು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ಉದ್ದೇಶದಿಂದ ಬಂದಿದ್ದೇನೆ ಎಂದು ಹೇಳಿದ್ದಾರೆ.

ಮಾತೃ ಹೃದಯಕ್ಕೆ ಭಾಷೆಯ ಎಲ್ಲೆಯಿಲ್ಲ…. ನೆಟ್ಟಿಗರ ಮನಕರಗಿಸುತ್ತಿದೆ ಈ ಚಿತ್ರ

Posted: 15 Jan 2020 04:16 AM PST

ಮಾತೃ ಹೃದಯ ಎಂಬುದು ಸಕಲ ಜೀವಿಗಳಲ್ಲಿ ಒಂದೇ. ಈ ಸತ್ಯ ಮತ್ತೊಮ್ಮೆ ಸಾಬೀತಾಗುವ ಘಟನೆಯೊಂದರಲ್ಲಿ, ಆಸ್ಟ್ರಿಯಾದ ವಿಯೆನ್ನಾದ ಮೃಗಾಲಯವೊಂದರಲ್ಲಿ, ತನ್ನ ಮಗುವಿಗೆ ಹಾಲುಣಿಸುತ್ತಿದ್ದ ತಾಯಿಯೊಬ್ಬಳಿಗೆ ಬೆಂಬಲವಾಗಿ ನಿಲ್ಲಲು ಒಂದು ಅಪರೂಪದ ಜೀವಿಯೊಂದು ಬಂದಿದೆ.

30 ವರ್ಷದ ಜೆಮ್ಮಾ ಕೋಪ್ಲಾಂಡ್ ಎಂಬ ಮಹಿಳೆ ಇಲ್ಲಿನ ಶಾನ್ಬರ್ನ್ ಮೃಗಾಲಯಕ್ಕೆ ಭೇಟಿ ನೀಡಿದ ವೇಳೆ ತನ್ನ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಸೊಲ್ ಹೆಸರಿನ ಹೆಣ್ಣು ಒರಾಂಗುಟನ್ ಒಂದು ಆಕೆಯ ಬಳಿ ನಿಂತಿರುವ ಈ ಪುಟ್ಟ ವಿಡಿಯೋ ನೆಟ್ಟಿಗರ ಹೃದಯ ಗೆಲ್ಲುತ್ತಿದೆ.

ಖುದ್ದು ತಾನೂ ಸಹ ಕೆಲವೇ ದಿನಗಳ ಹಿಂದೆ ಮರಿಯೊಂದಕ್ಕೆ ಜನ್ಮವಿತ್ತ ಈ ಒರಾಂಗುಟನ್, ಅಮ್ಮ ಮತ್ತು ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ, ಅವರನ್ನು ರಕ್ಷಿಸುವ ಮನಸ್ಥಿತಿಯನ್ನು ತೋರುತ್ತಿದೆ.

ಗವಿಗಂಗಾಧರೇಶ್ವರನ ಸ್ಪರ್ಶಿಸಿದ ಸೂರ್ಯ ರಶ್ಮಿ, ವಿಸ್ಮಯ ಕಣ್ತುಂಬಿಕೊಂಡ ಭಕ್ತರು

Posted: 15 Jan 2020 04:07 AM PST

ಬೆಂಗಳೂರು: ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಬೆಳಕಿನ ವಿಸ್ಮಯವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ.

ಮಕರ ಸಂಕ್ರಾಂತಿಯಂದು ಪಥವನ್ನು ಬದಲಿಸುವ ಸೂರ್ಯನ ಕಿರಣಗಳು ಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸುತ್ತವೆ.

ಪ್ರತಿವರ್ಷ ನಡೆಯುವ ಈ ಕೌತುಕವನ್ನು ನೋಡಲು ಅಪಾರ ಭಕ್ತರು ಆಗಮಿಸಿದ್ದರು. ಸಂಜೆ 5.20 ರ ಸುಮಾರಿಗೆ ದೇವಾಲಯವನ್ನು ಪ್ರವೇಶಿಸಿ ಸೂರ್ಯ ರಶ್ಮಿ ಪ್ರವೇಶದ್ವಾರ 2 ಕಿಟಕಿ ನಂದಿಯ ಮೂಲಕ ಹಾದು, ಶಿವಲಿಂಗವನ್ನು ಸ್ಪರ್ಶಿಸಿದೆ. ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಹೆಚ್ಚಿನ ಭಕ್ತರು ಆಗಮಿಸಿದ್ದ ಹಿನ್ನಲೆಯಲ್ಲಿ ದೇವಾಲಯ ಆಡಳಿತ ಮಂಡಳಿಯಿಂದ ಸಕಲ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಎಲ್ಇಡಿ ಸ್ಕ್ರೀನ್ ಮೂಲಕ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

ಸೂರ್ಯ ಮಕರ ಸಂಕ್ರಾಂತಿಯಂದು ಪಥವನ್ನು ಬದಲಿಸುತ್ತಾನೆ. ಸೂರ್ಯನ ಕಿರಣಗಳು ಗವಿ ಗಂಗಾಧರೇಶ್ವರನನ್ನು ಈ ದಿನ ಸ್ಪರ್ಶಿಸುತ್ತವೆ. ಅಂತೆಯೇ ಇಂದು ದೇವಾಲಯವನ್ನು ಪ್ರವೇಶಿಸಿದ ಸೂರ್ಯನ ಕಿರಣಗಳು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಿವೆ.

ಹಾವಿನಂತೆ ಪೊರೆ ಕಳಚುವ ಬಾಲಕ

Posted: 15 Jan 2020 04:05 AM PST

ಸಾಮಾನ್ಯವಾಗಿ ಹಾವು ಪೊರೆ ಕಳಚುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ನೋಡಿರಬಹುದು. ಆದರೆ ಮನುಷ್ಯ ಪೊರೆ ಕಳಚುತ್ತಾನೆಂದರೆ ಅದು ನಂಬಲು ಅಸಾಧ್ಯವಾದ ಮಾತು. ಆದರೆ ಅದನ್ನು ಪ್ರಕೃತಿ ಸತ್ಯಗೊಳಿಸಿದೆ.

ಇಂತಹದ್ದೊಂದು ಅಪರೂಪದ ವಿದ್ಯಮಾನ ಒಡಿಶಾದಲ್ಲಿ ನಡೆದಿದೆ. ಹತ್ತು ವರ್ಷ ಬಾಲಕ ಜಗನ್ನಾಥ್ ಪ್ರತೀ ಐದಾರು ವಾರಕ್ಕೊಮ್ಮೆ ತನ್ನ ದೇಹದ ಪೊರೆ ಕಳಚುತ್ತಾನೆ. ಈ ಸಂದರ್ಭದಲ್ಲಿ ಆತ ಅನುಭವಿಸುವ ಹಿಂಸೆ ಮಾತ್ರ ಶತ್ರುವಿಗೂ ಬೇಡ ಎನಿಸುತ್ತದೆ.

ಹೌದು ಹುಟ್ಟಿನಿಂದಲೇ ಈತ ಇಂತಹ ಅಪರೂಪದ ಚರ್ಮರೋಗಕ್ಕೆ ತುತ್ತಾಗಿದ್ದಾನೆ. ಜಗತ್ತಿನಲ್ಲಿ ಪ್ರತಿ 6 ಲಕ್ಷ ಜನರಲ್ಲಿ ಒಬ್ಬರಿಗೆ ಇಂತಹ ರೋಗ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.

ಕೆಲವು ವರ್ಷಗಳ ಹಿಂದೆ ಪರೀಕ್ಷೆ ನಡೆಸಿದಾಗ ಈತನಿಗೆ ಲೆಮೆಲರ್ ಇಥ್ಯೋಸಿಸ್ ಎಂಬ ಅಪರೂಪದ ಚರ್ಮರೋಗ ಇರುವುದು ಗೊತ್ತಾಗಿದೆ. ಆದರೆ ಇದಕ್ಕೆ ಚಿಕಿತ್ಸೆ ಇಲ್ಲ ಎನ್ನುವುದು ಈತನ ತಂದೆ ಪ್ರಭಾಕರ್ ಪ್ರಧಾನ್ ಹೇಳುತ್ತಾರೆ. ಬಹುತೇಕ ವೈದ್ಯರು ಇದನ್ನೇ ಹೇಳಿದ್ದಾರೆ ಎನ್ನುವ ಈ ಅಪರೂಪದ ಪ್ರಕರಣ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ವರದಿಯಾಗಿದೆ‌.

ಹುಟ್ಟಿನಿಂದಲೇ ನನ್ನ ಮಗ ಈ ಸಮಸ್ಯೆ ಎದುರಿಸುತಿದ್ದು ಹೆಚ್ಚಿನ ಅಥವಾ ಉನ್ನತ ಚಿಕಿತ್ಸೆ ಕೊಡಿಸಲು ನಮ್ಮ ಬಳಿ ಹಣವಿಲ್ಲ ಎಂದು ಅಸಹಾಯಕತೆ ಹೇಳಿಕೊಂಡಿದ್ದಾರೆ.

ತಂಡ ಗೆಲ್ತಿದ್ದಂತೆ ಇನ್ಸ್ಟ್ರಾಗ್ರಾಮ್ ಮಾಡೆಲ್ ಗಳ ಜೊತೆ ಆಟಗಾರರ ಪಾರ್ಟಿ

Posted: 15 Jan 2020 04:00 AM PST

ಇಂಗ್ಲೆಂಡ್‌ನ ಪ್ರಸಿದ್ಧ ಫುಟ್‌ಬಾಲ್ ತಂಡವಾದ ಮ್ಯಾಂಚೆಸ್ಟರ್ ಸಿಟಿಯ ಆಟಗಾರರು ಅದ್ಭುತ ಗೆಲುವಿನ ನಂತರ ಇನ್ಸ್ಟ್ರಾಗ್ರಾಮ್ ಪ್ರಸಿದ್ಧ ಮಾಡೆಲ್ ಗಳ ಜೊತೆ ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ದಾರೆ. ವರದಿಯ ಪ್ರಕಾರ ಅನೇಕ ಇಟಾಲಿಯನ್  ಮಾಡೆಲ್ ಗಳು ಸ್ವತಃ ಹೋಟೆಲ್ ನಲ್ಲಿ ಮಾಡಿದ ಪಾರ್ಟಿ ಫೋಟೋ ಹಂಚಿಕೊಂಡಿದ್ದಾರೆ

ಮ್ಯಾಂಚೆಸ್ಟರ್ ಸಿಟಿಯ ತಂಡವು ಎಸ್ಟನ್ ವಿಲ್ಲಾವನ್ನು 6–1ರಿಂದ ಸೋಲಿಸಿತ್ತು. ಭಾನುವಾರ  ಆಟಗಾರರು ನಟ್ಸ್‌ಫೋರ್ಡ್‌ನ ಮೆರ್ ಗಾಲ್ಫ್ ರೆಸಾರ್ಟ್‌ನಲ್ಲಿ ಪಾರ್ಟಿ ಮಾಡಿದ್ದಾರೆ. ತಂಡದ ವ್ಯವಸ್ಥಾಪಕರು ಪಾರ್ಟಿಗೆ ಒಪ್ಪಿಗೆ ನೀಡಿದ್ದರಂತೆ. ಆದ್ರೆ ಮಾಡೆಲ್ ಗಳು ಬರುವುದು ಅವ್ರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿ ಅನೇಕ ಮಾಡೆಲ್ ಗಳು ವೈನ್ ಬಾಟಲಿಯನ್ನು ಹಿಡಿದು ಫೋಟೋ ತೆಗೆಸಿಕೊಂಡಿದ್ದಾರೆ.  ಪಾರ್ಟಿಗೆ ಮುಂಚಿತವಾಗಿ ಪಂದ್ಯವನ್ನು ವೀಕ್ಷಿಸಲು ಮಾಡೆಲ್ ಗಳು ಬಂದಿದ್ದರು ಎನ್ನಲಾಗಿದೆ.

 

50 ವರ್ಷ ವಯಸ್ಸಿನ ಮೀನನ್ನು ಹಿಡಿದು ವೈರಲ್ ಆದ ಫ್ಲೋರಿಡಾದ ಮೀನುಗಾರ

Posted: 15 Jan 2020 03:40 AM PST

ಅಮೆರಿಕದ ಫ್ಲೋರಿಡಾದ ಮೀನುಗಾರನೊಬ್ಬ ಬರೋಬ್ಬರಿ 158 ಕೆಜಿ ತೂಗುವ ವಾರ್ಸಾವ್ ಗ್ರೂಪರ್ ಎನ್ನುವ ಮೀನನ್ನು ಹಿಡಿದಿದ್ದು, ಈ ಮೀನು ಈಗ ಸುದ್ದಿ ಮಾಡುತ್ತಿದೆ.

ಅದು ಸುದ್ದಿಯಾಗಲು ಮುಖ್ಯ ಕಾರಣ ಅದರ ವಯಸ್ಸು. ತಜ್ಞರ ಪ್ರಕಾರ ಅದರ ವಯಸ್ಸು 50 ಆಗಿದ್ದು ಈವರೆಗೆ ಹಿಡಿದ ಅತ್ಯಂತ ಹಳೆಯ ಗ್ರೂಪರ್ ಮೀನು ಇದಾಗಿದೆ. ಆದ್ದರಿಂದ ಇದರ ಅಂಗಗಳು ಸಂಶೋಧಕರಿಗೆ ಬೇಕಾಗಿವೆ.

ಜೇಸನ್ ಬೊಯಾಲ್ ಎನ್ನುವ ಮೀನುಗಾರ ಡಿಸೆಂಬರ್ 29ರಂದು ಇದನ್ನು 600 ಅಡಿ ಆಳದಲ್ಲಿ ಹಿಡಿದಿದ್ದಾರೆ.

ಅದರ ಒಟೊಲಿತ್ ಎನ್ನುವ ಅಂಗ ಬಹಳ ಪ್ರಮುಖವಾದದ್ದು ಎಂದು ಎಫ್‌ಡಬ್ಲ್ಯೂಸಿ ಎನ್ನುವ ಮೀನು ಸಂಶೋಧನಾ ಸಂಸ್ಥೆ ತಿಳಿಸಿದೆ.

A big old fish! This 350-lb Warsaw grouper was caught by hook-and-line on December 29th 2019, off Southwest Florida in…

Posted by FWC Fish and Wildlife Research Institute on Friday, January 10, 2020

ಕಳ್ಳತನ ಮಾಡಲು ಹೋಗಿ ಪೆಚ್ಚಾದ ಕಳ್ಳ!

Posted: 15 Jan 2020 03:37 AM PST

ಕಳ್ಳತನ ಮಾಡಲು ಕೂಡ ಬುದ್ಧಿವಂತಿಕೆ ಬೇಕು. ಇಲ್ಲದಿದ್ದರೆ ಪೇಚಿಗೆ ಸಿಲುಕಿ ಅವರು ಬೇರೆಯವರ ಹತ್ತಿರ ನಗೆಪಾಟಲಿಗೆ ಈಡಾಗುವುದಂತೂ ಖಚಿತ. ಅದೂ ಸಿಸಿಟಿವಿ ಕಾಲದಲ್ಲಿ ಅದು ಜಾಸ್ತಿ.

ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿ ಇಂತಹದೊಂದು ಘಟನೆ ನಡೆದಿದೆ. ಕಳ್ಳನೊಬ್ಬ ಜೊತೆಗಾರನೊಡನೆ ತಂಬಾಕಿನ ಅಂಗಡಿ ಲೂಟಿ ಮಾಡಲು ಹೋಗಿದ್ದಾನೆ.

ಅಂಗಡಿ ಮೇಲಿದ್ದ ಖಾಲಿ ಕಟ್ಟಡದ ಒಳಗಿನಿಂದ ರಂಧ್ರ ಮಾಡಿ ಇಳಿಯಲು ಪ್ರಯತ್ನಿಸಿದ್ದಾನೆ.

ಆದರೆ ಆಯತಪ್ಪಿ ಅಂಗಡಿಯ ಛಾವಣಿಯಿಂದ ಕೆಳಗೆ ಬಿದ್ದಿದ್ದಾನೆ. ಆಗ ಅಲಾರಂ ಚಾಲು ಆಗಿದ್ದು ಗಡಿಬಿಡಿಯಲ್ಲಿ ಒಂದು ತಂಬಾಕಿನ ಪ್ಯಾಕೆಟ್ ಹಾಗೂ ಎನರ್ಜಿ ಡ್ರಿಂಕ್ ಎತ್ತುಕೊಂಡು ಹೋಗಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ.

ಕಳ್ಳನನ್ನು 40ವರ್ಷದ ಸ್ಟಾರ್ಮ್ ಕೊರಲ್ ಎಂದು ಗುರುತಿಸಲಾಗಿದೆ. ಅಂಗಡಿಯಲ್ಲಿ ಜಾಸ್ತಿ ಕಳ್ಳತನವಾಗಿಲ್ಲದಿದ್ದರು ಗೋಡೆ ರಂಧ್ರದಿಂದ ಸಾವಿರಾರು ಡಾಲರ್‌ನಷ್ಟು ಅಂಗಡಿಗೆ ನಷ್ಟವಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ.

ಮೊದಲ ಶಸ್ತ್ರಚಿಕಿತ್ಸೆಯಲ್ಲಿ ಹಾಳಾಗಿದ್ದ ಮುಖವನ್ನು ಎರಡನೇ ಸರ್ಜರಿಯಲ್ಲಿ ಸರಿಮಾಡಿಕೊಂಡ ನಟಿ..

Posted: 15 Jan 2020 03:34 AM PST

ಬಾಲಿವುಡ್ ಮಹಾ ಸಾಗರವಿದ್ದಂತೆ.ಅಲ್ಲಿಗೆ ದಿನಕ್ಕೆ ನೂರಾರು ಜನರು ಬರ್ತಾರೆ. ಕೆಲವೇ ಕೆಲವು ಮಂದಿ ಹೆಸರು ಮಾಡಿ ಅಲ್ಲಿಯೇ ನೆಲೆ ನಿಲ್ಲುತ್ತಾರೆ. ಹೆಸರು ಮಾಡಿಯೂ ನಂತ್ರ ಕಾಣೆಯಾಗುವ ಕಲಾವಿದರ ಸಂಖ್ಯೆಯೂ ಹೆಚ್ಚಿದೆ. ಅದ್ರಲ್ಲಿ ಆಯೇಷಾ ಟಕಿಯಾ ಕೂಡ ಒಬ್ಬರು. ಬಾಲಿವುಡ್ ನಲ್ಲಿ ಕೆಲವೇ ಕೆಲವು ಚಿತ್ರಗಳನ್ನು ಮಾಡಿದ್ರೂ ಆಯೇಷಾ ಟಕಿಯಾ ಹೆಸರು ಮಾಡಿದ್ದರು.

ಆಯೇಷಾ ಟಕಿಯಾ ಸಿನಿಮಾದಿಂದ ದೂರವಾಗ್ತಿದ್ದಂತೆ ಸೌಂದರ್ಯ ಹೆಚ್ಚಿಸಿಕೊಳ್ಳಲು ತುಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದ್ರೆ 2017ರಲ್ಲಿ ಮಾಡಿಸಿಕೊಂಡ ಶಸ್ತ್ರಚಿಕಿತ್ಸೆ ಆಯೇಷಾ ಟಕಿಯಾ ಸೌಂದರ್ಯ ಹಾಳು ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಮೆಂಟ್ ಬಂದಿತ್ತು.

ಇದಾದ್ಮೇಲೆ ಇತ್ತೀಚಿಗಷ್ಟೆ ಆಯೇಷಾ ಟಕಿಯಾ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅದ್ರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಈ ಬಾರಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಸುಂದರವಾಗಿ ಕಾಣ್ತಿದ್ದಾರೆ ಆಯೇಷಾ ಟಕಿಯಾ.

 

ಕೈಯಿಲ್ಲದ ಬಾಲಕನಿಗೆ ಹೊಸ ಜೀವನವನ್ನು ಕೊಟ್ಟ ಸಂಬಂಧಿಕರು

Posted: 15 Jan 2020 02:24 AM PST

ದೇಹದ ಯಾವುದೇ ಅಂಗವಿಲ್ಲದಿದ್ದರೂ ಜೀವನ ನಡೆಸುವುದು ಬಹಳ‌ ಚಾಲೆಂಜ್. ಅದರಲ್ಲಿಯೂ ಕೈ ಇಲ್ಲದಿದ್ದರೆ ಇನ್ನು ಕಷ್ಟ. ಆದರೆ ಈ ಕಷ್ಟದಿಂದ ಹೊರಬಂದ ಬಾಲಕ‌ ಕಥೆ ಇದೀಗ ವೈರಲ್ ಆಗುತ್ತಿದೆ.

ಹೌದು, ಕ್ಲಾರ್ಕ್ಸ್‌ವಿಲ್ಲೆಯ 11 ವರ್ಷದ ‌ಬಾಲಕನಿಗೆ ಕೈ ಇರಲಿಲ್ಲ. ಆತನಿಗೆ ಈ‌ ಬಾರಿ ಕ್ರಿಸ್ಮಸ್‌ಗೆ ಸಪ್ರೈಸ್ ಗಿಫ್ಟ್ ಆಗಿ 3ಡಿ ಕೈಯನ್ನು ನೀಡಿದ್ದಾರೆ.

ಸಂಬಂಧಿಯೊಬ್ಬರಿಗೆ ಪ್ರಶಸ್ತಿ ಕಾರ್ಯಕ್ರಮವಿದೆ ಎಂದು ಕರೆದುಕೊಂಡು ಬಂದ ಸಂಬಂಧಿಕರು, ಅಲ್ಲಿ ಬಾಲಕನಿಗೆ 3ಡಿ ಕೈಗಳನ್ನು ನೀಡಿದ್ದಾರೆ.

ಇಷ್ಟು ದಿನ ಪ್ರತಿಯೊಂದನ್ನು ಬೇರೆಯವರ ಸಹಾಯ ಬೇಕಿದ್ದ ಬಾಲಕನಿಗೆ 3ಡಿ ಕೈಗಳಿಂದ ಕೊಂಚ‌ ಸಹಾಯವಾಗಿದೆ.

ಇದರಿಂದ ಬಹಳ‌ ಖುಷಿಯಾಗಿರುವ ಬಾಲಕ ಗೋವಿನ್ ಸೋವಿರ್, ನಾನು ಸ್ವಾತಂತ್ರ್ಯ ಎಂದು ಹೇಳಿಕೊಂಡಿದ್ದಾನೆ. ಈ 3ಡಿ ಕೈಗಳ ಸಹಾಯದಿಂದ,‌ ಮುಚ್ಚಳವನ್ನು ತಾನೇ ತೆರೆಯಬಹುದು ಎನ್ನುವುದೇ ಬಾಲಕನಿಗೆ ಖುಷಿ.

ಈ‌ ಬಗ್ಗೆ ಮಾತನಾಡಿರುವ ಸಂಬಂಧಿಗಳು, ಇದು ಬಾಲಕ ಸಂತೋಷದ‌ ದಿನ. ಆತನ ಕೆಲಸವನ್ನು ‌ಆತನೇ ಮಾಡಿಕೊಳ್ಳುವುದನ್ನು ನೋಡಲು‌ ಖುಷಿಯಾಗುತ್ತದೆ. ಇದು‌ ಮರೆಯಲಾಗದ ಕ್ಷಣ ಎಂದಿದ್ದಾರೆ.

Today was nothing short of amazing! Not only did Gavin's wish for hands come true, but they were presented to him by the…

Posted by Kori Suitter on Monday, December 23, 2019

ಈ ಸೂಪರ್‌ ಮ್ಯಾನ್‌ಗೆ ಸಿಂಹಗಳೇ ಕುಟುಂಬ ಸದಸ್ಯರು

Posted: 15 Jan 2020 02:09 AM PST

ಇಲ್ಲೊಬ್ಬ ರಿಯಲ್ ಲೈಫ್ ಟಾರ್ಜನ್‌ ಒಬ್ಬ ಸಿಂಹಗಳನ್ನು ಬೆಕ್ಕಿನ ಮರಿಗಳಂತೆ ಸಾಕುವ ಮೂಲಕ ನೋಡುಗರನ್ನು ಚಕಿತಗೊಳಿಸಿದ್ದಾನೆ.

ಈತನ ಒಂದು ವಿಡಿಯೊ ಕ್ಲಿಪ್‌ ಅನ್ನು ಟ್ವಿಟರ್‌ ಬಳಕೆದಾರರೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ.

ಸಿಂಹಗಳ ಪಾಲನೆಯಿಂದಲೇ ಖ್ಯಾತರಾಗಿರುವ ಡೀನ್ ಶ್ನೀಡರ್‌ ಎಂಬ ಈ ಸೂಪರ್‌ ಮ್ಯಾನ್‌ನನ್ನು ಬರಮಾಡಿಕೊಳ್ಳಲು ಸಿಂಹಗಳ ಹಿಂಡು ಉತ್ಸುಕತೆಯಲ್ಲಿ ಮುಂದೆ ಬರುವುದನ್ನು ನೋಡುವುದೇ ಒಂದು ಚಂದ. ಕಾಡಿನ ಮಧ್ಯದಲ್ಲಿ ಸಿಂಹಗಳ ಹಿಂಡನ್ನು ಕರೆಯುವ ಶ್ನೀಡರ್‌ ಕೂಗಿಗೆ ಸಿಂಹದ ಮರಿಗಳು ಓಡೋಡಿ ಬರುವುದು, ಅವುಗಳ ಹಿಂದೆ ಒಂದಿಡೀ ಕುಟುಂಬ ಓಡಿ ಬರುವುದನ್ನು ಕಾಣುವುದೇ ಚಂದ.

ಈ ದೊಡ್ಡ ಬೆಕ್ಕುಗಳೆಲ್ಲಾ ಶ್ನಿಡರ್‌ನನ್ನು ಅ‌ಪ್ಪಿ ಮುದ್ದಾಡುವುದನ್ನು ನೋಡಲು ಈ ವಿಡಿಯೊವನ್ನೊಮ್ಮೆ ವೀಕ್ಷಿಸಿ. ಸಿಂಹಗಳನ್ನೇ ತನ್ನ ಕಟುಂಬವನ್ನಾಗಿ ಮಾಡಿಕೊಂಡಿದ್ದಾನೆ ಶ್ನೀಡರ್‌.

ಟೀಂ ಇಂಡಿಯಾ ಜೊತೆ ರಾಜ್ಕೋಟ್ ಗೆ ಹೋಗಲ್ಲ ರಿಷಭ್ ಪಂತ್..ಯಾಕೆ ಗೊತ್ತಾ?

Posted: 15 Jan 2020 01:48 AM PST

ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಎರಡನೇ ಪಂದ್ಯ ಜನವರಿ 17ರಂದು ರಾಜ್ಕೋಟ್ ನಲ್ಲಿ ನಡೆಯಲಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಎರಡನೇ ಪಂದ್ಯಕ್ಕಾಗಿ ರಾಜ್ಕೋಟ್ ಗೆ ಟೀಂ ಇಂಡಿಯಾ ಜೊತೆ ಹೋಗ್ತಿಲ್ಲ.

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ವೇಳೆ ಪಂತ್ ಹೆಲ್ಮೆಟ್ ಗೆ ಚೆಂಡು ಹೊಡೆದಿತ್ತು.ಹಾಗಾಗಿ ಅವ್ರು ವಿಕೆಟ್ ಕೀಪಿಂಗ್ ಮಾಡಿರಲಿಲ್ಲ.ಬಿಸಿಸಿಐ ಮೂಲಗಳ ಪ್ರಕಾರ ಟೀಂ ಇಂಡಿಯಾ ಜೊತೆ ಪಂತ್ ರಾಜ್ಕೋಟ್ ಗೆ ಹೋಗ್ತಿಲ್ಲ. ಸಾಮಾನ್ಯವಾಗಿ ತಲೆಗೆ ಚೆಂಡು ತಾಗಿದ್ರೆ 24 ಗಂಟೆಗಳ ಕಾಲ ನಿಗಾ ಇಡಲಾಗುತ್ತದೆ.

ಪಂತ್ ಮುಂದಿನ ಪಂದ್ಯದಲ್ಲಿ ಪಾಲ್ಗೊಳ್ತಾರಾ ಇಲ್ವಾ ಎಂಬ ಪ್ರಶ್ನೆಗೆ 24 ಗಂಟೆಗಳ ನಂತ್ರ ಉತ್ತರ ಸಿಗಲಿದೆ.ಪಂತ್ ಗೆ ಗಾಯವಾದ ಕಾರಣ ಮೊದಲ ಏಕದಿನ ಪಂದ್ಯದಲ್ಲಿ ಲೋಕೇಶ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಿದ್ದರು.

 

ಮುಖ್ಯಮಂತ್ರಿಗೆ ಇಷ್ಟವಾದ ಹೂ ಬೆಳೆದು ಕೈತುಂಬ ಗಳಿಸ್ತಿದ್ದಾರೆ ಇಂಜಿನಿಯರ್ ರೈತ

Posted: 15 Jan 2020 01:23 AM PST

ಇತ್ತೀಚಿನ ದಿನಗಳಲ್ಲಿ ಜನರು ಕೃಷಿ ಬಿಟ್ಟು ಉದ್ಯೋಗವರಸಿ ನಗರ ಪ್ರದೇಶಗಳಿಗೆ ಹೋಗ್ತಾರೆ. ಆದ್ರೆ ಉತ್ತರ ಪ್ರದೇಶದ ಕಂಪ್ಯೂಟರ್ ಇಂಜಿನಿಯರ್ ಒಬ್ಬರು ಕೆಲಸ ಬಿಟ್ಟು ಕೃಷಿ ಶುರು ಮಾಡಿದ್ದಾರೆ. ಮುಖ್ಯಮಂತ್ರಿ ಯೋಗಿ ಪ್ರೀತಿಯ ಬಣ್ಣದ ಹೂಗಳನ್ನು ಬೆಳೆದು ಕೈತುಂಬ ಗಳಿಸುತ್ತಿದ್ದಾರೆ.

ಬುಂದೇಲ್‌ಖಂಡ್‌ನ ಕಂಪ್ಯೂಟರ್ ಎಂಜಿನಿಯರ್ ಅಮಿತ್, 2015ರಲ್ಲಿ ತಂದೆ ಸಾವನ್ನಪ್ಪಿದ ನಂತ್ರ ಕೃಷಿ ಕೆಲಸ ಅನಿವಾರ್ಯವಾಯ್ತು. ಆದ್ರೆ ಬೇರೆ ಕೃಷಿ ಸಾಧ್ಯವಾಗದ ಕಾರಣ ಅವ್ರು ಹೂ ಬೆಳೆಯಲು ಶುರು ಮಾಡಿದ್ದರು. ಯೋಗಿಗೆ ಇಷ್ಟವಾದ ಬಣ್ಣ ಕೇಸರಿ. ಹಾಗಾಗಿ ಅಮಿತ್ ಕೇಸರಿ ಬಣ್ಣದ ಹೂ ಬೆಳೆಯಲು ಹೆಚ್ಚಿನ ಮಹತ್ವ ನೀಡಿದ್ದಾರೆ.

ಗುಲಾಬಿ,ಜರ್ಬರಾ ಹೂವನ್ನು ಅವ್ರು ಬೆಳೆಯುತ್ತಿದ್ದಾರೆ. ಯೋಗಿ ಸಮಾರಂಭಗಳಲ್ಲಿ ಕೇಸರಿ ಹೂವಿಗೆ ಬೇಡಿಕೆ ಹೆಚ್ಚು.ಹಾಗಾಗಿ ಹೆಚ್ಚು ಲಾಭ ಸಿಗ್ತಿದೆ ಎಂದು ಅಮಿತ್ ಹೇಳ್ತಾರೆ. ಅಮಿತ್ ಕೃಷಿ ನೋಡಿ ಆಕರ್ಷಿತರಾದ ಬೇರೆ ರೈತರು ಹೂ ಬೆಳೆಯಲು ಶುರು ಮಾಡಿದ್ದಾರೆ.

 

ಗುಡ್ ನ್ಯೂಸ್ ಕೊಟ್ಟ ಅಮೆಜಾನ್, ಇನ್ಮುಂದೆ ನೀವು ಮಾಡಬಹುದು ಆನ್ಲೈನಲ್ಲಿ ಮನೆ ಮಾರಾಟ

Posted: 15 Jan 2020 01:21 AM PST

ಇನ್ಮುಂದೆ ಮನೆ ಖರೀದಿ ಅಥವಾ ಮಾರಾಟಕ್ಕೆ ಬ್ರೋಕರ್ ಬಳಿ ಹೋಗ್ಬೇಕಾಗಿಲ್ಲ.ಅಮೆಜಾನ್ ಆನ್ಲೈನ್ ಸೇವೆಯನ್ನು ನೀಡ್ತಿದೆ. ಅಮೆಜಾನ್ ಮೂಲಕವೇ ನೀವು ಮನೆ ಖರೀದಿ ಮತ್ತು ಮಾರಾಟ ಮಾಡಬಹುದು.

ಇದಕ್ಕೆ ಸಂಬಂಧಿಸಿದಂತೆ ಅಮೆಜಾನ್ ವೆಬ್ಸೈಟ್ ಶುರು ಮಾಡಿದೆ. ಸಿದ್ಧವಾಗಿರುವ ಮನೆಯನ್ನು ಅಮೆಜಾನ್ ಆನ್ಲೈನ್ ಮೂಲಕ ಮಾರಾಟ ಮಾಡಬಹುದು. ಫೆಬ್ರವರಿ 14 ರಿಂದ ಮನೆ ಖರೀದಿದಾರರಿಗೆ ಪೋರ್ಟಲ್ ತೆರೆಯಲಾಗುವುದು. ಖರೀದಿದಾರರು ಕೇವಲ 25 ಸಾವಿರ ರೂಪಾಯಿಗಳನ್ನು ಪಾವತಿಸಿ ಪೋರ್ಟಲ್‌ನಲ್ಲಿ ತಮ್ಮ ಹೆಸರು ಕಾಯ್ದಿರಿಸಬಹುದು. ಖರೀದಿದಾರನು ಯಾವುದೇ ಮನೆಯನ್ನು ಖರೀದಿಸದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುತ್ತದೆ.

ಫೆಬ್ರವರಿ 14ರಿಂದ ಮನೆ ಮಾರಾಟಗಾರರು ಇದ್ರ ಬಗ್ಗೆ ಮಾಹಿತಿ ನೀಡಲು ಶುರು ಮಾಡಲಿದ್ದಾರೆ..ಮಾರ್ಚ್ 1ರಿಂದ ಮಾರ್ಚ್ 31ರೊಳಗೆ ಮನೆ ಖರೀದಿ ಪ್ರಾರಂಭವಾಗಲಿದೆ. ಅಮೆಜಾನ್ ಈ ವೆಬ್ಸೈಟ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷೆ ಮಾಡಲಾಗಿದೆ.

 

 

ಸಿಲ್ಲಿ ಪ್ರಶ್ನೆ ಕೇಳುವವರಿಗೆ ಚಾರ್ಜ್ ಮಾಡುವ ಹೋಟೆಲ್!

Posted: 15 Jan 2020 12:56 AM PST

ಹೋಟೆಲ್‌ಗಳಲ್ಲಿ ಕೆಲವೊಮ್ಮೆ ಚಿತ್ರ ವಿಚಿತ್ರ ಸರ್ವಿಸ್‌ಗೆ ಶುಲ್ಕವಿಡುತ್ತಾರೆ. ಆದರೆ ಇಲ್ಲೊಂದು ಹೋಟೆಲ್ ಸಿಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಶುಲ್ಕ ವಿಧಿಸುತ್ತದೆಯಂತೆ.

ಹೌದು, ವಿಚಿತ್ರವಾದರೂ ಇದು ಸತ್ಯ. ಡೆನ್ವೀರ್‌ನ ರೆಸ್ಟೋರೆಂಟ್ ಒಂದರ ಮೆನು ಕಾರ್ಡ್‌ನಲ್ಲಿ ಈ ಶುಲ್ಕವಿದೆ ಎಂದು ಹೇಳಿದೆ.

ಈ ರೀತಿ ಕ್ಷುಲ್ಲಕ ಪ್ರಶ್ನೆ ಕೇಳಿದ್ದಕ್ಕೆ 38 ಸೆಂಟ್ ವಿಧಿಸುವುದಾಗಿ ನಮೂದಿಸಲಾಗಿದೆ. ಇದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ವ್ಯಕ್ತಿಯೊಬ್ಬ ಹಾಕಿದ್ದು, ವೈರಲ್ ಆಗಿದೆ.

ಆದರೆ ಇದಕ್ಕೆ ಟಾಮ್ ಡಿನ್ನರ್‌ನ ವ್ಯವಸ್ಥಾಪಕ ನಿರ್ದೇಶಕ ಹಂಟರ್ ಲ್ಯಾಂಡ್ರಿ ಪ್ರತಿಕ್ರಿಯೆ ನೀಡಿದ್ದು, ರೆಸ್ಟೋರೆಂಟ್ ಮೆನುವಿನಲ್ಲಿ ಹಾಸ್ಯ ಸೇರಿಸಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ಕೆಲ ಅಂಶಗಳನ್ನು ಸೇರಿಸಲಾಗಿದೆ. ಆದರೆ ಯಾರಿಗೂ ಈ‌ ಶುಲ್ಕ ವಿಧಿಸುವುದಿಲ್ಲ ಎಂದಿದ್ದಾರೆ.

ಕೆಲವರು ಟೆಸ್ಟ್ ಮಾಡಲೆಂದು ಸಿಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಐಸ್ ಕ್ರೀಂನಲ್ಲಿ ನೀರು ಇದೆಯೇ? ಎನ್ನುವುದು ಬಹಳ‌ ನೆನಪಿನಲ್ಲಿ ಉಳಿಯವ‌ ಪ್ರಶ್ನೆ ಎಂದು‌ ನೆನಪು ಮಾಡಿಕೊಂಡಿದ್ದಾರೆ.

ಇದರೊಂದಿಗೆ ಮೆನು ಕಾರ್ಡ್‌ನಲ್ಲಿ ಇನ್ನಷ್ಟು ಹಾಸ್ಯಮಿಶ್ರಿತ ಶುಲ್ಕವನ್ನು ಸೇರಿಸಲಾಗಿದೆ ಎಂದಿದ್ದಾರೆ.

 

ಯುವಕನ ಡ್ಯಾನ್ಸ್ ಮೂಡಿಗೆ ಫಿದಾ ಆದ ಪ್ರಸಿದ್ಧ ನಟ!

Posted: 15 Jan 2020 12:43 AM PST

ಟಿಕ್ ಟಾಕ್‌ನಲ್ಲಿ ದಿನವೂ ಹಲವು ಜನರು ವಿಚಿತ್ರವಾಗಿ ಆಡುತ್ತಿರುವುದು ನೋಡುತ್ತೇವೆ.

ಆದರೆ ಅದರಿಂದಲೂ ಸಹ ಕೆಲವು ಪ್ರತಿಭಾವಂತ ರತ್ನಗಳು ಮೂಡಿಬರುತ್ತಿವೆ ಎಂದರೆ ತಪ್ಪಾಗಲಾರದು.

ಇದೀಗ ಟಿಕ್‌ಟಾಕ್ ಕಂಡುಹಿಡಿದಿರುವ ಹೊಸ ಪ್ರತಿಭೆ ಯುವರಾಜ್ ಸಿಂಗ್, ಟಿಕ್‌ಟಾಕ್‌ನಲ್ಲಿ 1.1 ಮಿಲಿಯನ್ ಹಿಂಬಾಲಕರಿರುವ ಅವರ ಡಾನ್ಸ್ ವಿಡಿಯೋ ಇತ್ತೀಚಿಗೆ ಸಕತ್ ವೈರಲ್ ಆಗಿದೆ.

ಅದರಲ್ಲಿ ಮೈಕೆಲ್ ಜಾಕ್ಸನ್ ಅವರಂತೆ ಇರುವ ಅವರ ನೃತ್ಯ ಗಮನ ಸೆಳೆಯುವಂತಿದೆ.

ಶಾಹ್ ಎನ್ನುವವರು ಆ ವಿಡಿಯೋ ಹಂಚಿಕೊಂಡಿದ್ದು ಹೃತಿಕ್ ರೋಷನ್ ಅವರಿಗೆ ಟ್ಯಾಗ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ನಂತರ ಹೃತಿಕ್ ಕೂಡ ಪ್ರತಿಕ್ರಿಯಿಸಿದ್ದು ಅವನ ಪ್ರತಿಭೆಯನ್ನು ಪ್ರಶಂಸಿಸಿದ್ದಾರೆ.

ವೋಡಾಫೋನ್ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ನೀಡಲಿದೆ 1 ಜಿಬಿ ಡೇಟಾ

Posted: 15 Jan 2020 12:20 AM PST

ದೈತ್ಯ ಟೆಲಿಕಾಂ ಕಂಪನಿ ವೊಡಾಫೋನ್ ಗ್ರಾಹಕರಿಗೆ ಅನುಕೂಲವಾಗುವಂತೆ 99 ಮತ್ತು 555 ರೂಪಾಯಿಗಳ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ಯೋಜನೆಗಳಲ್ಲಿ ಡೇಟಾ ಮತ್ತು ಎಸ್‌ಎಂಎಸ್ ಸೌಲಭ್ಯವನ್ನು ಗ್ರಾಹಕರಿಗೆ ಸಿಗಲಿದೆ.  ಕಳೆದ ವರ್ಷ ವೊಡಾಫೋನ್-ಐಡಿಯಾ, ಏರ್‌ಟೆಲ್ ಮತ್ತು ಜಿಯೋ ಸುಂಕದ ಬೆಲೆಯನ್ನು ಹೆಚ್ಚಿಸಿವೆ. ಇದರಿಂದಾಗಿ ಜನರು ಮೊದಲಿಗಿಂತ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತಿದೆ.

ಸುಂಕ ಹೆಚ್ಚಳದ ನಂತರ ವೊಡಾಫೋನ್-ಐಡಿಯಾ ಮತ್ತು ಏರ್ಟೆಲ್ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯವನ್ನು ಒದಗಿಸಿದೆ. ಜಿಯೋಗೆ ಟಕ್ಕರ್ ನೀಡಲು ವೊಡಾಫೋನ್ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ವೊಡಾಫೋನ್ ಗ್ರಾಹಕರ ಬಜೆಟ್ ಗಮನದಲ್ಲಿಟ್ಟುಕೊಂಡು 99 ರೂಪಾಯಿ ಯೋಜನೆಯನ್ನು ಪ್ರಾರಂಭಿಸಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ 1 ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್ ಸಿಗಲಿದೆ.

ವೊಡಾಫೋನ್‌ನ 249 ರೂಪಾಯಿ ಯೋಜನೆಯಲ್ಲಿ ಬಳಕೆದಾರರು ದಿನಕ್ಕೆ 1.5 ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್ ಪಡೆಯಲಿದ್ದಾರೆ. ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ  ಸೌಲಭ್ಯ ಪಡೆಯಲಿದ್ದಾರೆ. ಈ ಪ್ಯಾಕ್ ಸಿಂಧುತ್ವ  70 ದಿನಗಳು.

ವೊಡಾಫೋನ್-ಐಡಿಯಾ ತನ್ನ ಗ್ರಾಹಕರಿಗೆ 219 ರೂಪಾಯಿಗಳ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಕಂಪನಿಯು ಗ್ರಾಹಕರಿಗೆ 1 ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್ ನೀಡಲಿದೆ. ಹೆಚ್ಚುವರಿಯಾಗಿ ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಪಡೆಯಲಿದ್ದಾರೆ.

 

ಒಂದು ತಿಂಗಳ ವೇತನವನ್ನು ಏತಕ್ಕೆ ಈ ಆದರ್ಶ ಶಿಕ್ಷಕ ಖರ್ಚು ಮಾಡಿದ್ದಾರೆ ನೋಡಿ!

Posted: 15 Jan 2020 12:17 AM PST

ನಮಗೆ ಅದೆಷ್ಟೇ ವಯಸ್ಸಾದರೂ ಸಹ, ಬಾಲ್ಯದಲ್ಲಿ ಪಾಠ ಹೇಳಿಕೊಟ್ಟ ಕೆಲ ಸಹೃದಯೀ ಶಿಕ್ಷಕರನ್ನು ನಾವು ಎಂದಿಗೂ ಮರೆಯುವುದಿಲ್ಲ.

ಅವರು ನೀಡುವ ಕೆಲ ಸಲಹೆಗಳು ನಿಮ್ಮ ಜೀವನಕ್ಕೆ ಹೊಸ ತಿರುವನ್ನೇ ನೀಡಿದಂಥ ನಿದರ್ಶನಗಳೂ ಇರುತ್ತವೆ.

ಇಂಥದ್ದೇ ಒಬ್ಬ ಶಿಕ್ಷಕರೊಬ್ಬರು, ತಮಿಳುನಾಡಿನ ಕೊಯಮತ್ತೂರಿನಲ್ಲಿ ಸರ್ಕಾರೀ ಶಾಲೆಯಲ್ಲಿ ಇದ್ದಾರೆ. ಸಾಯಿ ಸೆಂದಿಲ್‌ನಾಥನ್ ಎಂಬ ಹೆಸರಿನ ಇವರು, ತಮ್ಮ ಒಂದು ತಿಂಗಳ ವೇತನವನ್ನು ಮಕ್ಕಳಿಗೆ ಪೊಂಗಲ್ ಹಬ್ಬದ ಬಟ್ಟೆಗಳನ್ನು ಖರೀದಿ ಮಾಡಲೆಂದು ವಿನಿಯೋಗಿಸಿದ್ದಾರೆ.

ಸೆಂದಿಲ್‌ನಾಥನ್‌ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಅರ್ಥಿಕವಾಗಿ ಹಿಂದುಳಿದ ನೀರಾಡಿ, ಬಿಲ್ಲೂರು ಹಾಗೂ ತಂಡಾಯಿ ಪ್ರದೇಶಗಳಿಂದ ಬಂದವರಾಗಿದ್ದಾರೆ.

ತಮ್ಮ ಮಕ್ಕಳಿಗೆ ಹಬ್ಬಕ್ಕೆಂದು ಹೊಸ ಬಟ್ಟೆಗಳನ್ನು ಖರೀದಿ ಮಾಡಲೂ ಈ ಕುಟುಂಬಗಳ ಬಳಿ ಸಾಕಷ್ಟು ದುಡ್ಡು ಇರುವುದಿಲ್ಲ. ಹೀಗಾಗಿ ಸೆಂದಿಲ್‌ನಾಥನ್ ಖುದ್ದು ತಾವೇ ಈ ಕೆಲಸ ಮಾಡಲು ಮುಂದಾಗಿದ್ದಾರೆ.

ಕಳೆದ ವರ್ಷದ ದೀಪಾವಳಿ ಸಂದರ್ಭ ಇಂಥದ್ದೇ ಸತ್ಕಾರ್ಯವನ್ನು ಸೆಂದಿಲ್‌ನಾಥನ್‌ ಮಾಡಿದ್ದರು. ಬರಾಲಿ ಸರ್ಕಾರಿ ಪ್ರೌಢ ಶಾಲೆಯು ಸೆಂದಿಲ್‌ನಾಥನ್ ಆಗಮನದಿಂದ ಸಾಕಷ್ಟು ಸಕಾರಾತ್ಮಕತೆ ಎದ್ದು ಕಾಣುತ್ತಿದೆ

2017ರಲ್ಲಿ ಇವರು ಬರುವುದಕ್ಕಿಂತ ಮುಂಚೆ ಇದ್ದ 17 ಮಕ್ಕಳಿಂದ ಈ ವರ್ಷ 33 ಮಕ್ಕಳವರೆಗೂ ದಾಖಲಾತಿಯಲ್ಲಿ ಏರಿಕೆ ಕಂಡುಬಂದಿದೆ. ಸ್ವತಃ ತಾವೇ ಬುಡಕಟ್ಟು ಮನೆಗಳಿಗೆ ತೆರಳಿ, ಪೋಷಕರಲ್ಲಿ ಶಿಕ್ಷಣದ ಅರಿವು ಮೂಡಿಸುವ ಸೆಂದಿಲ್‌, ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪ್ರೇರೇಪಿಸುತ್ತಾ ಬಂದಿದ್ದಾರೆ.

ಮಕ್ಕಳನ್ನು ಶಾಲೆಗೆ ಸೇರಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಇದ್ದ ಕಾರಣ ಖುದ್ದು ತಾವೇ ಸರ್ಕಾರೀ ಇಲಾಖೆ 'ಸಮಗ್ರ ಶಿಕ್ಷಾ'ಗೆ ಮನವಿ ಮಾಡಿ ವಾಹನದ ವ್ಯವಸ್ಥೆಯನ್ನೂ ಮಾಡಿಸಿದ್ದಾರೆ. ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡಲು ಖುದ್ದು ಆಸ್ಥೆ ವಹಿಸುವ ಸೆಂದಿಲ್‌ಗೆ ಸಹ ಶಿಕ್ಷಕರೂ ನೆರವಿಗೆ ನಿಂತಿದ್ದಾರೆ.

ಪ್ರೇಯಸಿ ತಂಗಿ ಜೊತೆ ಸಂಬಂಧ ಬೆಳೆಸಲು ಬಯಸಿದ್ದ ಪ್ರೇಮಿ ಕಥೆ ದಂಗಾಗಿಸುತ್ತೆ…

Posted: 15 Jan 2020 12:10 AM PST

ಉತ್ತರ ಪ್ರದೇಶದ ಹಾರ್ಡೋಯ್ ನಲ್ಲಿ ಪ್ರಿಯತಮೆ ತಂಗಿ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಒತ್ತಾಯ ಮಾಡ್ತಿದ್ದ ಯುವಕ ಯಮಲೋಕ ತಲುಪಿದ್ದಾನೆ. ಜನವರಿ 8ರಂದು ನಡೆದ ಸಚಿನ್ ಎಂಬಾತನ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಚಿನ್ ಶವ ರಸ್ತೆ ಬದಿ ಬಿದ್ದಿತ್ತು.

ಸಚಿವ್ ಹುಡುಗಿಯೊಬ್ಬಳನ್ನು ಪ್ರೀತಿ ಮಾಡ್ತಿದ್ದನಂತೆ. ಆದ್ರೆ ಆಕೆ ತಂಗಿ ಮೇಲೂ ಈತ ಕಣ್ಣು ಹಾಕಿದ್ದನಂತೆ. ತಂಗಿ ಜೊತೆ ಸಂಬಂಧ ಬೆಳೆಸುವ ಆಸೆ ವ್ಯಕ್ತಪಡಿಸಿ ಆಕೆಗೆ ಒತ್ತಡ ಹೇರುತ್ತಿದ್ದನಂತೆ. ಈ ವಿಷ್ಯವನ್ನು ಆಕೆ ತನ್ನ ಪ್ರೇಮಿಗೆ ಹೇಳಿದ್ದಾಳೆ. ಇದ್ರಿಂದ ಕೋಪಗೊಂಡ ಆಕೆ ಪ್ರೇಮಿ ಸ್ನೇಹಿತರ ಜೊತೆ ಸೇರಿ ಹತ್ಯೆಗೆ ಸ್ಕೆಚ್ ಹಾಕಿದ್ದಾನೆ.

ಸಚಿನ್ ಪ್ರಿಯತಮೆ ತಂಗಿಯೇ ಕರೆ ಮಾಡಿ ನಿರ್ಜನ ಪ್ರದೇಶಕ್ಕೆ ಬರಲು ಹೇಳಿದ್ದಾಳೆ. ನಂತ್ರ ಅಲ್ಲಿಗೆ ಬಂದ ಮೂವರು ಚಾಕು ಇರಿದು ಹತ್ಯೆ ಮಾಡಿದ್ದಾರೆ.

 

ಸೋಲಿನ ಮಧ್ಯೆಯೂ ಟೀಂ ಇಂಡಿಯಾಕ್ಕೆ ಸಿಕ್ತು ಖುಷಿ ಸುದ್ದಿ

Posted: 14 Jan 2020 11:59 PM PST

ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡಿರುವ ಟೀಂ ಇಂಡಿಯಾಕ್ಕೆ ಐಸಿಸಿ ಖುಷಿ ಸುದ್ದಿ ನೀಡಿದೆ. ಐಸಿಸಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಿಗೆ ದೊಡ್ಡ ಗೌರವ ನೀಡಿದೆ. ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ 2019 ರ ಅತ್ಯುತ್ತಮ ಏಕದಿನ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಕ್ರಿಕೆಟ್ ವಿಶ್ವಕಪ್‌ನಲ್ಲಿ ಕ್ರೀಡಾ ಮನೋಭಾವವನ್ನು ತೋರಿಸಿದ್ದಕ್ಕಾಗಿ ಕೊಹ್ಲಿಗೆ  ಸ್ಪಿರಿಟ್ ಕ್ರಿಕೆಟ್ ಪ್ರಶಸ್ತಿ ನೀಡಲಾಗ್ತಿದೆ.

ಒಂದು ವರ್ಷದಲ್ಲಿ 59 ವಿಕೆಟ್ ಪಡೆದ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಅವರನ್ನು ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗ ಎಂದು ಆಯ್ಕೆ ಮಾಡಲಾಗಿದೆ.  ರಿಚರ್ಡ್ ಇಲಿಂಗ್ವರ್ತ್ ಅವರಿಗೆ ವರ್ಷದ ಅಂಪೈರ್ ಪ್ರಶಸ್ತಿ ನೀಡಲಾಯಿತು. 2019 ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 7 ರನ್‌ಗಳಿಗೆ 6 ವಿಕೆಟ್ ಪಡೆದ ದೀಪಕ್ ಚಹರ್ ಅವರನ್ನು  ಗೌರವಿಸಲಾಗ್ತಿದೆ.

ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು 2019 ರ ಅತ್ಯುತ್ತಮ ಕ್ರಿಕೆಟಿಗರಾಗಿ ಆಯ್ಕೆಯಾಗಿದ್ದಾರೆ.

 

ವಿಚಿತ್ರ ಸುದ್ದಿ:ಈತನಿಗೆ ಜನರಿಟ್ಟ ಹೆಸರು `ಮಾನವ ಹಾವು’..!

Posted: 14 Jan 2020 11:46 PM PST

ಹಾವು ತನ್ನ ಚರ್ಮವನ್ನು ಬಿಡುತ್ತದೆ. ಹಾವು ಬಿಟ್ಟ ಪೊರೆ ಆಗಾಗ ಕಾಣಿಸುತ್ತಿರುತ್ತದೆ. ಆದ್ರೆ ಮನುಷ್ಯರೂ ಪೊರೆ ಬಿಡ್ತಾರೆ ಅಂದ್ರೆ ನೀವು ನಂಬಲೇಬೇಕು.ಒಡಿಶಾದಲ್ಲಿರುವ ಬಾಲಕನೊಬ್ಬನ ಚರ್ಮ ಹಾವಿಗೆ ಹೋಲುತ್ತದೆ. ಆತ ಕೂಡ ತಿಂಗಳಿಗೊಮ್ಮೆ ಪೊರೆ ಬಿಡ್ತಾನೆ. ಆತನನ್ನು ಮಾನವ ಹಾವು ಎಂದು ಜನರು ಕರೆಯುತ್ತಾರೆ.

10 ವರ್ಷದ ಈ ಮಗುವಿನ ಹೆಸರು ಜಗನ್ನಾಥ್. ಜಗನ್ನಾಥ್ ತನ್ನ ಹೆತ್ತವರೊಂದಿಗೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ವಾಸಿಸುತ್ತಾನೆ. ಆತನ ಚರ್ಮದ ಮೇಲೆ ದಪ್ಪ ಕಪ್ಪು ಚರ್ಮದ ದದ್ದುಗಳಿವೆ. ಈ ದದ್ದುಗಳು ಪ್ರತಿ ತಿಂಗಳು ಕಳಚುತ್ತವೆ.ಅದೇ ಸ್ಥಳದಲ್ಲಿ ಹೊಸ ದದ್ದುಗಳು ಮತ್ತೆ ಕಾಣಿಸಿಕೊಳ್ಳುತ್ತವೆ.

ಇದು ಗುಣಪಡಿಸಲಾಗದ ರೋಗ. ಜಗನ್ನಾಥ್ ಪ್ರತಿ ಒಂದು ಗಂಟೆಗೆ ಸ್ನಾನ ಮಾಡ್ತಾನಂತೆ. ಹಾಗಾಗಿ ಆತನ ಚರ್ಮ ಶುಷ್ಕವಾಗುವುದಿಲ್ಲ. ಶುಷ್ಕವಾದ್ರೆ ಚರ್ಮ ಬಿಡಲು ಶುರುವಾಗುತ್ತದೆ.ಇದು ನೋವುಂಟು ಮಾಡುತ್ತದೆಯಂತೆ. ಚರ್ಮ ಗಟ್ಟಿಯಿರುವ ಕಾರಣ ನಡೆದಾಡುವುದು ಕಷ್ಟ. ಮಡಚಿದ ಕೈ ಬಿಚ್ಚಲು ಬೇರೆಯವರ ಸಹಾಯಬೇಕಂತೆ.

 

ರಸ್ತೆಯಲ್ಲಿ ಹರಿದಾಡಿದ ಹಿಮಗಲ್ಲು…ವಿಡಿಯೋ ನೋಡಿದರೆ ಮೈ ಜುಮ್ಮೆನ್ನುವುದು ಗ್ಯಾರಂಟಿ!

Posted: 14 Jan 2020 11:41 PM PST

ಜನರು ಅದೆಷ್ಟೇ ನಿರ್ಲಕ್ಷ್ಯ ಮಾಡಿದರೂ ಸಹ ಹವಾಮಾನ ಬದಲಾವಣೆ ಎಂಬುದು ಬಹಳ ಅಪಾಯಕಾರಿಯಾಗಿಯಾದ ವಿದ್ಯಮಾನ. ಕರಗುತ್ತಿರುವ ಹಿಮಗಲ್ಲುಗಳು, ಕಾಳ್ಗಿಚ್ಚುಗಳು, ಬರ ಹಾಗೂ ಬೇಸಿಗೆ ಹಾಗೂ ಚಳಿಗಾಲದಲ್ಲಿ ದಾಖಲೆ ಉಷ್ಣಾಂಶಗಳ ಕಾರಣ ಭೂಮಂಡಲ ಅಕ್ಷರಶಃ ಹೊತ್ತಿ ಉರಿಯುತ್ತಿದೆ.

ಹಿಮಾಚಲ ಪ್ರದೇಶದ ಕಿನ್ನೌರ್‌ ಬಳಿ ಹಿಮಗಡ್ಡೆಯೊಂದು ಮುರಿದುಕೊಂಡು ಹೈವೇಯಲ್ಲಿ ಜಾರಿ ಹೋಗುತ್ತಿರುವುದು ಭೀತಿ ಮೂಡಿಸಿದೆ.

ರಾಷ್ಟ್ರೀಯ ಹೆದ್ದಾರಿ 5ರಲ್ಲಿ ಟಿಂಕು ನಲ್ಲಾ ಬಳಿಯ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

10 ಅಡಿ ಎತ್ತರದ ಈ ಹಿಮಗಲ್ಲು ಪ್ರವಾಸೀ ವಾಹನಗಳನ್ನು ತಡೆದು ನಿಲ್ಲಿಸಿದೆ. ಈ ಹಿಮಗಲ್ಲು ಕಾರುಗಳಿಗೆ ಅಪ್ಪಳಿಸಲು ಮುಂದಾಗಿದ್ದರೂ ಸಹ ಪ್ರವಾಸಿಗರು ಇದರ ವಿಡಿಯೋ ಮಾಡಿಕೊಳ್ಳಲೆಂದು ಉತ್ಸಾಹದಿಂದ ಮುಂದೆ ಬರುತ್ತಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.

ಮದುವೆಗೂ ಮುನ್ನ ತಾಯಿಯಾದ ನಟಿ ಈಗ ತಪ್ಪು ತಿದ್ದಿಕೊಳ್ತಾಳಂತೆ…!

Posted: 14 Jan 2020 11:15 PM PST

ಬಾಲಿವುಡ್ ನಲ್ಲಿ ಕಲಾವಿದರ ನಟನೆ ಜೊತೆ ಅವ್ರ ವೈಯಕ್ತಿಕ ಜೀವನವೂ ಸದಾ ಚರ್ಚೆಯಲ್ಲಿರುತ್ತದೆ. ಅನೇಕ ನಟಿಯರು ಮದುವೆಯಾಗುವ ಮೊದಲೇ ಮಗು ಪಡೆದಿದ್ದಾರೆ. ಇನ್ನು ಕೆಲ ಮಹಿಳೆಯರು ಒಂಟಿಯಾಗಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಈ ವಿಷ್ಯದ ಬಗ್ಗೆ ಹಿರಿಯ ನಟಿ ನೀನಾ ಗುಪ್ತಾ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ನೀನಾ ಗುಪ್ತಾ ಮದುವೆಯಾಗದೆ ಮಗು ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿದ ನೀನಾ,ನನಗೆ ತಪ್ಪು ತಿದ್ದಿಕೊಳ್ಳುವ ಅವಕಾಶ ಸಿಕ್ಕರೆ ಮದುವೆಯಾದ್ಮೇಲೆ ಮಗು ಪಡೆಯುತ್ತೇನೆ ಎಂದಿದ್ದಾರೆ. ಮಕ್ಕಳಿಗೆ ಇಬ್ಬರು ಪಾಲಕರು ಬಹಳ ಮುಖ್ಯ. ಮದುವೆಯಾಗದೆ ಹೆರಿಗೆ ಮತ್ತು ಮಕ್ಕಳ ಪಾಲನೆ ವೇಳೆ ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದು ನೀನಾ ಹೇಳಿದ್ದಾರೆ.

ಮಗಳ ಜೊತೆ ನಾನು ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದೆ. ಹಾಗಾಗಿ ಆಕೆಗೆ ತಂದೆ ಕೊರತೆ ಕಾಡಲಿಲ್ಲ. ಆದ್ರೆ ಮಕ್ಕಳಿಗೆ ಇಬ್ಬರು ಪಾಲಕರ ಅಗತ್ಯವಿದ್ದೇ ಇರುತ್ತದೆ ಎಂದಿದ್ದಾರೆ. 1980 ರ ದಶಕದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಜೊತೆನ ನೀನಾ ಸಂಬಂಧ ಸುದ್ದಿಯಲ್ಲಿತ್ತು.

 

ಟೇಕ್ವಾಂಡೋನಲ್ಲಿ ಗಿನ್ನಿಸ್ ವಿಶ್ವದಾಖಲೆ ಬರೆದ 5ರ ಪೋರ

Posted: 14 Jan 2020 11:03 PM PST

ಗಿನ್ನಿಸ್ ದಾಖಲೆ ಪುಸ್ತಕ ಸೇರಿರುವ ಹೈದರಾಬಾದ್‌ನ 5 ವರ್ಷದ ಬಾಲಕನೊಬ್ಬ, ಈ ವಯಸ್ಸಿನಲ್ಲಿಯೇ ಟೇಕ್ವಾಂಡೋ ಕ್ರೀಡೆಯಲ್ಲಿ ಅದ್ಭುತ ಸಾಧನೆಗೈದಿದ್ದಾನೆ.

ಒಂದು ಗಂಟೆಯ ಅವಧಿಯಲ್ಲಿ ಅತಿ ಹೆಚ್ಚಿನ ಕಾಂಟಾಕ್ಟ್‌ ನೀ ಸ್ಟ್ರೈಕ್‌ಗಳನ್ನು ಪೂರೈಸಿದ ಆಶ್ಮಾನ್ ತನೇಹಾ ಎಂಬ ಈ ಪೋರ, ಅದಾಗಲೇ ಅಮೆರಿಕ ವಿಶ್ವ ಓಪನ್ ಟೇಕ್ವಾಂಡೋ ಕೂಟದ ಬೆಳ್ಳಿ ಪದಕ ವಿಜೇತನಾಗಿದ್ದಾನೆ.

ಗಂಟೆಯೊಳಗೆ 1200ಕ್ಕೂ ಹೆಚ್ಚು ನೀ ಸ್ಟ್ರೈಕ್‌ಗಳನ್ನು ಸಾಧಿಸಿದ ಈತ ಗಿನ್ನಿಸ್ ದಾಖಲೆಗೆ ಭಾಜನನಾಗಿದ್ದಾನೆ.

ಬಾಲಕನ ಸಹೋದರಿ ಅದಾಗಲೇ ಎರಡು ಗಿನ್ನೆಸ್ ದಾಖಲೆಗಳಿಗೆ ಭಾಜನಳಾಗಿದ್ದು, ಇದರಿಂದ ಸ್ಫೂರ್ತಿ ಪಡೆದ ಈತ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸಲು ಸಜ್ಜಾಗುತ್ತಿದ್ದಾನೆ.

ನಿರುದ್ಯೋಗಿಗಳಿಗೆ ಖುಷಿ ಸುದ್ದಿ..ಫಿಪ್ಕಾರ್ಟ್ ನಲ್ಲಿ ಸಿಗಲಿದೆ 5000 ಜನರಿಗೆ ನೌಕರಿ

Posted: 14 Jan 2020 10:55 PM PST

ವಾಲ್ಮಾರ್ಟ್ ಒಡೆತನದ ಇ-ಕಾಮರ್ಸ್ ಕಂಪನಿಯಾದ ಫ್ಲಿಪ್‌ಕಾರ್ಟ್ ಭಾರತೀಯರಿಗೆ ಖುಷಿ ಸುದ್ದಿ ನೀಡಿದೆ. ತನ ವ್ಯವಹಾರವನ್ನು ವಿಸ್ತರಿಸಲು ನಿರ್ಧರಿಸಿದೆ.ಇದ್ರ ಅಡಿಯಲ್ಲಿ ಹರ್ಯಾಣದಲ್ಲಿ ಎರಡು ಗೋದಾಮುಗಳನ್ನು ನಿರ್ಮಿಸಲಿದೆ.ಸ್ಥಳೀಯ ಮಟ್ಟದಲ್ಲಿ ಸುಮಾರು 5 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ.

ಒಂಬತ್ತು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಗೋದಾಮು ಉತ್ತರ ಭಾರತದಲ್ಲಿ ಪೂರೈಕೆಗೆ ಸಹಕಾರಿಯಾಗಲಿದೆ. ಈ ಕೇಂದ್ರಗಳು ಕಂಪನಿಯ ಉತ್ಪನ್ನಗಳ ವಿತರಣೆ ಮತ್ತು ಪೂರೈಕೆ ಸರಪಳಿ ಸಾಮರ್ಥ್ಯವನ್ನು ಹೆಚ್ಚಿಸಲಿವೆ. ದೊಡ್ಡ ವಸ್ತುಗಳು, ಮೊಬೈಲ್‌ಗಳು, ಬಟ್ಟೆ, ಕಿರಾಣಿ ಮತ್ತು ಪೀಠೋಪಕರಣಗಳಂತಹ  ವಸ್ತುಗಳು ಗೋದಾಮಿನಲ್ಲಿ ಪ್ರಾಮುಖ್ಯತೆ ಪಡೆಯಲಿವೆ.

ಫ್ಲಿಪ್‌ಕಾರ್ಟ್‌ನ ಹೊಸ ಹೂಡಿಕೆ ರಾಜ್ಯದಲ್ಲಿ 5,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆಯಂತೆ. ಕಂಪನಿಯು ಹರಿಯಾಣದಲ್ಲಿ 10,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ.

 

ಶಾಕಿಂಗ್ ನ್ಯೂಸ್:ಟೀಂ ಇಂಡಿಯಾ ಆಟಗಾರರನ್ನು ಹನಿಟ್ರಾಪ್ ಗೆ ಒಳಪಡಿಸುವ ಯತ್ನದಲ್ಲಿ ಬಾಲಿವುಡ್ ನಟಿ

Posted: 14 Jan 2020 10:40 PM PST

ಕ್ರಿಕೆಟಿಗರನ್ನು ಮ್ಯಾಚ್ ಫಿಕ್ಸಿಂಗ್ ಅಥವಾ ಸ್ಪಾಟ್ ಫಿಕ್ಸಿಂಗ್‌ಗೆ ಒತ್ತಾಯಿಸಲು, ಬುಕ್ಕಿಗಳು ಕೆಲವೊಮ್ಮೆ ವಿಭಿನ್ನ ತಂತ್ರಗಳನ್ನು ಬಳಸುತ್ತಾರೆ, ಅದರಲ್ಲಿ ಹನಿಟ್ರಾಪ್ ಕೂಡ ಒಂದು. ಬಾಲಿವುಡ್ ನಟಿ ಮೂಲಕ ಬುಕ್ಕಿಗಳು ಈಗ ಭಾರತೀಯ ಆಟಗಾರರನ್ನು ಹನಿಟ್ರಾಪ್  ಬಲೆಗೆ ಬೀಳಿಸಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ವರದಿ ಪ್ರಕಾರ, ಬಾಲಿವುಡ್ ನಟಿ ಭಾರತೀಯ ಕ್ರಿಕೆಟಿಗರನ್ನು ಹನಿಟ್ರಾಪ್  ಬಲೆಗೆ ಬೀಳಿಸಲು ಪ್ರಯತ್ನಿಸಿದ್ದಳು. ವರದಿಯಲ್ಲಿ ಆಟಗಾರರು ಅಥವಾ ನಟಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಈ ನಟಿ ಇಬ್ಬರು ಭಾರತೀಯ ಕ್ರಿಕೆಟಿಗರೊಂದಿಗೆ ಸ್ನೇಹವನ್ನು ಹೆಚ್ಚಿಸಲು ಪ್ರಯತ್ನಿಸಿದ್ದಾಳೆ ಎಂಬುದು ತಿಳಿದು ಬಂದಿದೆ. ನಟಿ ಬುಕ್ಕಿಗಳ ಜೊತೆ ಸಂಪರ್ಕ ಹೊಂದಿರಬಹುದು ಎಂಬ ಭಯದಿಂದ ಇಬ್ಬರೂ ಕ್ರಿಕೆಟಿಗರು ಅವಳನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ.

ವರದಿಯ ಪ್ರಕಾರ, ಮೂರು ಬುಕ್ಕಿಗಳು ಈ ನಟಿಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇತ್ತೀಚೆಗೆ ದುಬೈನಲ್ಲಿ ನಟಿಯನ್ನು ಭೇಟಿಯಾಗಿದ್ದರಂತೆ.  ಕೆಲವು ಕ್ರಿಕೆಟಿಗರನ್ನು ಹನಿಟ್ರಾಪ್ ಗೆ ಸಿಲುಕಿಸಲು ಬುಕ್ಕಿಗಳು ಈ ನಟಿ ಜೊತೆ ಒಪ್ಪಂದ ಮಾಡಿಕೊಂಡಿದ್ದರಂತೆ. ಮೂವರು ಬುಕ್ಕಿಗಳಲ್ಲಿ ಒಬ್ಬರು ಮಧ್ಯಪ್ರದೇಶದ ಜಬಲ್ಪುರದವರಾಗಿದ್ದರೆ, ಇಬ್ಬರು ಗುಜರಾತ್ ಮೂಲದವರು.