Translate

Monday, January 13, 2020

Kannada News | Karnataka News | India News

Kannada News | Karnataka News | India News


ಮನೆಯಲ್ಲಿ ಹಾಳಾದ ಎಲೆಕ್ಟ್ರಿಕ್ ವಸ್ತುಗಳಿದ್ಯಾ…? ಈಗ್ಲೇ ಎಚ್ಚೆತ್ತುಕೊಳ್ಳಿ

Posted: 13 Jan 2020 01:07 PM PST

ಪದೇ ಪದೇ ಸಮಸ್ಯೆಗಳು, ಆರ್ಥಿಕ ಮುಗ್ಗಟ್ಟು ಎದುರಾಗುತ್ತಿದ್ದರೆ ಮನೆಯಲ್ಲಿ ವಾಸ್ತು ದೋಷವಿದ್ಯಾ ಎಂಬ ಪ್ರಶ್ನೆ ಮೂಡುತ್ತದೆ. ವಾಸ್ತು ದೋಷ ಮನೆ ಬಾಗಿಲು, ಮನೆ ಕೋಣೆಗಳಿಂದ ಮಾತ್ರ ಬರುವುದಿಲ್ಲ. ಮನೆಯಲ್ಲಿರುವ ವಸ್ತುಗಳು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಮನೆಯಲ್ಲಿರುವ ಎಲೆಕ್ಟ್ರಿಕಲ್ ವಸ್ತುಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಅನೇಕ ಬಾರಿ ಮನೆಯಲ್ಲಿರುವ ಹಾಳಾದ ಚಾರ್ಜರ್, ಬ್ಯಾಟರಿ ಸೇರಿದಂತೆ ಪ್ರಯೋಜನಕ್ಕೆ ಬರದ, ಹಾಳಾದ ಎಲೆಕ್ಟ್ರಿಕಲ್ ವಸ್ತುಗಳನ್ನು ಮನೆಯ ಹೊರಗೆ ಎಸೆಯವ ಬದಲು ಮನೆ ಮೂಲೆಗೆ ಸೇರಿಸುತ್ತೇವೆ. ಇವು ನಕಾರಾತ್ಮಕ ಶಕ್ತಿ ಹರಡುವ ಕೆಲಸ ಮಾಡುತ್ತವೆ. ಇಂಥಹ ವಸ್ತುಗಳಿರುವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ.

ಮನೆಯಲ್ಲಿರುವ ಎಲೆಕ್ಟ್ರಿಕಲ್ ವಸ್ತು, ವಾಯರ್ ಗಳು ಅಲ್ಲಿ ಇಲ್ಲಿ ನೇತಾಡುತ್ತಿದ್ದರೆ ತಕ್ಷಣ ಅದನ್ನು ಸರಿಯಾಗಿಡಿ. ಒಂದಕ್ಕೊಂದು ಸುತ್ತಿರುವ ವಾಯರ್ ಗಳನ್ನು ಬೇರೆ ಬೇರೆಯಾಗಿಡಿ. ಇವು ಜೀವನದಲ್ಲಿ ಸಮಸ್ಯೆ ಉದ್ಭವಿಸಲು ಕಾರಣವಾಗುತ್ತವೆ.

ಎಲೆಕ್ಟ್ರಿಕಲ್ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಸರಿಯಾಗಿ ಇಡಬೇಕು. ಮನೆಯ ಎಲ್ಲ ಕಡೆ ಅವುಗಳನ್ನು ಎಸೆಯಬಾರದು. ಇವು ವಾಸ್ತು ದೋಷಕ್ಕೆ ಕಾರಣವಾಗುತ್ತವೆ.

ನಿಮ್ಮ ಭವಿಷ್ಯ ತಿಳಿಯಲು ಸಂಪರ್ಕಿಸಿ:
ಪಂಡಿತ್ ಅನಂತ್ ಪ್ರಸಾದ್ ಶರ್ಮಾ
ಮೊಬೈಲ್:‌ 9845626805

ಮಂಗಳವಾರ ಶ್ರೀ ಕೊಲ್ಲೂರು ಮೂಕಾಂಬಿಕಾ ಅನುಗ್ರಹದಿಂದ ಇಂದಿನ ನಿಮ್ಮ ರಾಶಿ ಭವಿಷ್ಯ

Posted: 13 Jan 2020 11:49 AM PST

ಮೇಷ ರಾಶಿ:

ಮಕ್ಕಳು ಅಧ್ಯಯನದಲ್ಲಿ ಅವರ ನಿರಾಸಕ್ತಿಯಿಂದಾಗಿ ಶಾಲೆಯಲ್ಲಿ ನಿರಾಸೆಯುಂಟುಮಾಡಬಹುದು. ಬಿಡುವಿಲ್ಲದ ಬೀದಿಗಳಲ್ಲಿ, ನಿಮ್ಮ ಪ್ರಿಯತಮೆಯೇ ಅತ್ಯುತ್ತಮವಾಗಿರುವುದರಿಂದ ನೀವು ಅದೃಷ್ಟಶಾಲಿಗಳು ಎಂದು ನಿಮಗೆ ಅರಿವಾಗುತ್ತದೆ.

ಸಹೋದ್ಯೋಗಿಗಳು ಮತ್ತು ಹಿರಿಯರ ಸಂಪೂರ್ಣ ಸಹಕಾರದಿಂದ ಕಛೇರಿಯಲ್ಲಿ ಕೆಲಸ ಬೇಗ ಮುಗಿಯುತ್ತದೆ.

ಇಂದು ನೀವು ನಿಮ್ಮ ದಿನವನ್ನು ಎಲ್ಲಾ ಸಂಬಂಧಗಳು ಮತ್ತು ಸಂಬಂಧಿಕರಿಂದ ದೂರವಿರಲು, ನೀವು ಶಾಂತಿಯನ್ನು ಪಡೆಯುವ ಸ್ಥಳದಲ್ಲಿ ಕಳೆಯಲು ಇಷ್ಟಪಡುತ್ತೀರಿ.

ಅದೃಷ್ಟ ಸಂಖ್ಯೆ: 6

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

9845626805

ವೃಷಭ ರಾಶಿ:

ದಿನದ ಆರಂಭವು ಚೆನ್ನಾಗಿ ಆದರು, ಸಂಜೆಯ ಸಮಯದಲ್ಲಿ ಯಾವುದೇ ಕಾರಣದಿಂದ ನಿಮ್ಮ ಹಣ ಖರ್ಚಾಗಬಹುದು. ಇದರಿಂದ ನೀವು ತೊಂದರೆಗೊಳಗಾಗಬಹುದು. ಮಕ್ಕಳು ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ವಿಫಲವಾಗಿ ನಿಮಗೆ ನಿರಾಶೆಯುಂಟುಮಾಡಬಹುದು. ನಿಮ್ಮ ಕನಸು ನನಸಾಗಿಸಲು ನೀವು ಅವರನ್ನು ಪ್ರೋತ್ಸಾಹಿಸಬೇಕು.

ಪ್ರೇಮ ಜೀವನ ಸ್ವಲ್ಪ ಕಠಿಣವಾಗಿರಬಹುದು. ನಿಮ್ಮ ರೆಸ್ಯೂಮ್ ಕಳುಹಿಸಲು ಅಥವಾ ಸಂದರ್ಶನಕ್ಕೆ ಹಾಜರಾಗಲು ಒಳ್ಳೆಯ ದಿನ. ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ.

ಅದೃಷ್ಟ ಸಂಖ್ಯೆ: 9

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮಿಥುನ ರಾಶಿ:

ಒತ್ತಡದ ದಿನದ ಹೊರತಾಗಿಯೂ ನೀವು ನಿಮ್ಮ ಚೈತನ್ಯವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಹಣಕಾಸಿನಲ್ಲಿ ಸುಧಾರಣೆ ನೀವು ಅಗತ್ಯ ವಸ್ತುಗಳನ್ನು ಖರೀದಿಸುವುದನ್ನು ಅನುಕೂಲಕರವಾಗಿಸುತ್ತದೆ. ನಿಮ್ಮ ಕುಟುಂಬದ ಸದಸ್ಯರ ಭಾವನೆಗಳನ್ನು ನೋಯಿಸುವುದನ್ನು ತಪ್ಪಿಸುವ ಮೂಲಕ ನಿಮ್ಮ ಕೋಪವನ್ನು ನಿಯಂತ್ರಿಸಿ. ಧೃತಿಗೆಡಬೇಡಿ – ವೈಫಲ್ಯಗಳು ಸಹಜ ಅವುಗಳು ಜೀವನದ ಸೌಂದರ್ಯವಾಗಿವೆ. ಕೆಲಸದ ಸ್ಥಳದಲ್ಲಿ ಸಾಮರ್ಥ್ಯವನ್ನು ಸುಧಾರಿಸಲು ನಿಮ್ಮ ಕೌಶಲ್ಯದ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ.

ಇಂದು ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯವನ್ನು ಕಳೆಯುವಿರಿ ಮತ್ತು ಅವರ ಮುಂದೆ ನಿಮ್ಮ ಭಾವನೆಗಳನ್ನು ಇಡಲು ಸಾಧ್ಯವಾಗುತ್ತದೆ. ಇಂದು ವೆಚ್ಚಗಳು ನಿಮ್ಮ ಜೀವನ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧಕ್ಕೆ ಧಕ್ಕೆ ತರಬಹುದು.

ಅದೃಷ್ಟ ಸಂಖ್ಯೆ: 7

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕಟಕ ರಾಶಿ:

ನೆರೆಮನೆಯವರ ಜೊತಗಿನ ಜಗಳ ನಿಮ್ಮ ಮನಸ್ಸು ಕೆಡಿಸುತ್ತದೆ. ಆದರೆ ನಿಮ್ಮ ಸಹನೆ ಕಳೆದುಕೊಳ್ಳಬೇಡಿ, ಏಕೆಂದರೆ ಇದು ಬೆಂಕಿಗೆ ತುಪ್ಪ ಸುರಿಯುತ್ತದೆ. ನೀವು ಸಹಕರಿಸದಿದ್ದಲ್ಲಿ ಯಾರೂ ನಿಮ್ಮ ಜೊತೆ ಜಗಳ ಮಾಡಲು ಸಾಧ್ಯವಿಲ್ಲ. ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಲು ಶ್ರಮಿಸಿ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ಸಂತೋಷವಾಗಿರಿಸಲು ಕೆಲಸಗಳನ್ನು ಮಾಡುತ್ತಾರೆ.

ಇಂದು ನೀವು ಕೇಂದ್ರಬಿಂದುವಾಗಿರುತ್ತೀರಿ – ಮತ್ತು ಯಶಸ್ಸು ನಿಮ್ಮ ನಿಲುಕಿನೊಳಗಿದೆ. ದಿನ ಉತ್ತಮವಾಗಿದೆ, ಇಂದು ನಿಮಗಾಗಿ ಸಮಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ನ್ಯೂನತೆಗಳು ಮತ್ತು ಸಾಮರ್ಥ್ಯಗಳ ಬಗ್ಗೆ ಗಮನ ಹರಿಸಿ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳು ಬರುತ್ತವೆ. ಇಂದು, ನೀವು ಮತ್ತೆ ನಿಮ್ಮ ಸಂಗಾತಿಯ ಜೊತೆ ಪ್ರೀತಿಯಲ್ಲಿ ಬೀಳುತ್ತೀರಿ.

ಅದೃಷ್ಟ ಸಂಖ್ಯೆ: 4

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಸಿಂಹ ರಾಶಿ :

ನಿಮ್ಮ ಗೌಪ್ಯ ಮಾಹಿತಿಯನ್ನು ನಿಮ್ಮ ಸಂಗಾತಿಯ ಜೊತೆ ಹಂಚಿಕೊಳ್ಳುವ ಮೊದಲು ಯೋಚಿಸಿ. ಅವಳು ಅದನ್ನು ಬೇರೆಯವರಿಗೆ ಹೇಳಬಹುದಾದ್ದರಿಂದ ಸಾಧ್ಯವಾದರೆ ಅದನ್ನು ತಪ್ಪಿಸಲು ಪ್ರಯತ್ನಿಸಿ. ಇಂದು ನೀವು ನಿಮ್ಮ ಜೀವನದಲ್ಲಿ ನಿಜವಾದ ಪ್ರೀತಿಯ ಅನುಪಸ್ಥಿತಿಯನ್ನು ಅನುಭವಿಸುತ್ತೀರಿ. ಚಿಂತಿಸಬೇಡಿ, ಕಾಲಕಳೆದಂತೆ ಎಲ್ಲವೂ ಬದಲಾಗುತ್ತದೆ,

ನಿಮ್ಮ ಪ್ರಣಯ ಜೀವನವೂ ಸಹ. ಕೆಲಸದಲ್ಲಿ ಮತ್ತು ಮನೆಯಲ್ಲಿ ಒತ್ತಡ ನಿಮ್ಮ ಸಹನೆಯನ್ನು ಪರೀಕ್ಷಿಸಬಹುದು. ಇಂದು ನೀವು ಉತ್ತಮ ವಿಚಾರಗಳಿಂದ ತುಂಬಿರುತ್ತೀರಿ ಮತ್ತು ಚಟುವಟಿಕೆಗಳ ನಿಮ್ಮ ಆಯ್ಕೆ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ನೀವು ಖಾದ್ಯಗಳು ಅಥವಾ ಅಪ್ಪುಗೆಯಂಥ ನಿಮ್ಮ ಜೀವನದ ಸಂಗಾತಿಯ ಸಣ್ಣ ಬೇಡಿಕೆಗಳನ್ನು ಕಡೆಗಣಿಸಿದಲ್ಲಿ ಅವರಿಗೆ ಬೇಸರವಾಗಬಹುದು.

ಅದೃಷ್ಟ ಸಂಖ್ಯೆ: 6

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕನ್ಯಾ ರಾಶಿ:

ನಿಮ್ಮ ನಗು ಯಾವುದೇ ಅರ್ಥ ಹೊಂದಿಲ್ಲ – ನಗುವಿಗೆ ಧ್ವನಿಯಿಲ್ಲ – ನಿಮ್ಮ ಸಂಗವಿಲ್ಲದಿದ್ದಾಗ ಹೃದಯ ಬಡಿಯುವುದನ್ನು ಮರೆಯುತ್ತದೆ. ಕೆಲಸದ ಪ್ರದೇಶದಲ್ಲಿ ನಿಮ್ಮ ಯಾವುದೇ ಸ್ಪರ್ಧಿಗಳು ಇಂದು ನಿಮ್ಮ ವಿರುದ್ಧ ಸಂಚು ರೂಪಿಸಬಹುದು, ಆದ್ದರಿಂದ ಇಂದು ನೀವು ಕಣ್ಣು ಮತ್ತು ಕಿವಿಗಳನ್ನು ತೆರೆದು ಕೆಲಸ ಮಾಡುವ ಅಗತ್ಯವಿದೆ.

ಸಮಯದ ಸೌಂದರ್ಯವನ್ನು ಅರ್ಥಮಾಡಿಕೊಳ್ಳುತ್ತ, ಇಂದು ನೀವು ಎಲ್ಲಾ ಜನರಿಂದ ದೂರವಾಗಿ ಏಕಾಂತದಲ್ಲಿ ಸಮಯವನ್ನು ಕಳೆಯಲು ಇಷ್ಟಪಡುವಿರಿ. ಅದನ್ನು ಮಾಡುವುದು ನಿಮಗೆ ಉತ್ತಮವಾಗಲಿದೆ. ನಿಮ್ಮ ಧರ್ಮಪತ್ನಿಯನ್ನು ನಿಯಮಿತವಾಗಿ ಅಚ್ಚರಿಗೊಳಿಸುತ್ತಿರಿ, ಇಲ್ಲದಿದ್ದರೆ ಅವರಿಗೆ ಅಭಧ್ರತೆಯ ಭಾವನೆ ಕಾಡಬಹುದು.

ಅದೃಷ್ಟ ಸಂಖ್ಯೆ: 4

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ತುಲಾ ರಾಶಿ:

ಕೇವಲ ಸಕಾರಾತ್ಮಕ ಆಲೋಚನೆಗಳ ಜೊತೆ ಮಾತ್ರ ನೀವು ಈ ಸಮಸ್ಯೆಯ ವಿರುದ್ಧ ಹೋರಾಡಬೇಕು. ಹಣದ ಪರಿಸ್ಥಿತಿ ದಿನದಲ್ಲಿ ನಂತರ ಸುಧಾರಿಸುತ್ತದೆ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ – ಇವು ನಿಮ್ಮ ಮನಸ್ಸಿನ ಮೇಲೆ ಒತ್ತಡ ತರುತ್ತವೆ. ಪ್ರೀತಿಯ ಸಂತೋಷವನ್ನು ಅನುಭವಿಸಬಹುದು.

ಯಾವುದೇ ಹೊಸ ಜಂಟಿ ಉದ್ಯಮಕ್ಕೆ ಬದ್ಧರಾಗಬೇಡಿ ಹಾಗೂ ಅಗತ್ಯವಿದ್ದರೆ ನಿಮ್ಮ ಹತ್ತಿರದವರ ಸಲಹೆ ಪಡೆಯಿರಿ. ವ್ಯಾಪಾರಿಗಳು ಇಂದು ವ್ಯಾಪಾರಕ್ಕಿಂತ ಹೆಚ್ಚಾಗಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯಲು ಇಷ್ಟಪಡುವಿರಿ. ಇದರಿಂದ ನಿಮ್ಮ ಕುಟುಂಬದಲ್ಲಿ ಸಾಮರಸ್ಯ ಉಂಟಾಗುತ್ತದೆ.

ಅದೃಷ್ಟ ಸಂಖ್ಯೆ: 8

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ವೃಶ್ಚಿಕ ರಾಶಿ:

ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಸ್ನೇಹಿತರು ಇಂದು ರಾತ್ರಿ ರೋಮಾಂಚಕವಾದದ್ದನ್ನೇನಾದರೂ ಯೋಜಿಸಿ ನಿಮಗೆ ಆನಂದ ತರುತ್ತಾರೆ.

ಪ್ರೀತಿಯ ಜೀವನವನ್ನು ಬಲವಾಗಿ ಇಟ್ಟುಕೊಳ್ಳಲು ಬಯಸುತ್ತಿದ್ದರೆ, ಯಾರೋ ಮೂರನೇ ವ್ಯಕ್ತಿಯ ಮಾತುಗಳನ್ನು ಕೇಳಿಕೊಂಡು ತನ್ನ ಪ್ರೀತಿಪಾತ್ರರ ಬಗ್ಗೆ ಯಾವುದೇ ನಿರ್ಧಾರವನ್ನು ಮಾಡಬೇಡಿ. ಸೃಜನಶೀಲ ಪ್ರಕೃತಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ.

ಕೆಲಸದ ಒತ್ತಡ ಹಿಂದಿನಿಂದಲೂ ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಪಡಿಸುತ್ತಿದೆ. ಆದರೆ ಇಂದು, ಎಲ್ಲಾ ಕುಂದುಕೊರತೆಗಳೂ ಮಾಯವಾಗುತ್ತವೆ.

ಅದೃಷ್ಟ ಸಂಖ್ಯೆ: 6

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಧನುಸ್ಸು ರಾಶಿ:

ಕುಟುಂಬದ ಸದಸ್ಯರ ಅಗತ್ಯಗಳಿಗೆ ಆದ್ಯತೆ ನೀಡಿ. ನೀವು ಅವರ ಸಲುವಾಗಿ ಕಾಳಜಿ ತೆಗೆದುಕೊಳ್ಳುತ್ತೀರೆಂದು ಅವರಿಗೆ ಅರ್ಥವಾಗುವ ಹಾಗೆ ಅವರ ಸಂತೋಷವನ್ನು ಹಂಚಿಕೊಳ್ಳಿ. ನಿಮ್ಮ ಸಂಗಾತಿಯ ಅನುಪಸ್ಥಿತಿ ಕಾಡುವ ಸಾಧ್ಯತೆಯಿದೆ. ಇಂದು ನೀವು ಕೇಂದ್ರಬಿಂದುವಾಗಿರುತ್ತೀರಿ- ಮತ್ತು ಯಶಸ್ಸು ನಿಮ್ಮ ನಿಲುಕಿನೊಳಗಿದೆ.

ಇಂದು, ನೀವು ಕಾರ್ಯನಿರತ ವೇಳಾಪಟ್ಟಿಯ ಹೊರತಾಗಿಯೂ ನೀವು ನಿಮಗಾಗಿ ಸಮಯವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಈ ಉಚಿತ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಬಹುದು.

ಈ ದಿನ ನಿಮ್ಮ ವೈವಾಹಿಕ ಜೀವನದಲ್ಲಿ ನಿಜಕ್ಕೂ ಅದ್ಭುತವಾಗಿದೆ. ನೀವು ನಿಮ್ಮ ಸಂಗಾತಿಯನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಅವರಿಗೆ ತಿಳಿಯಲಿ.

ಅದೃಷ್ಟ ಸಂಖ್ಯೆ: 7

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮಕರ ರಾಶಿ:

ಕೋಪದ ಬಡಿದೆಬ್ಬಿಸುವಿಕೆ ವಾದ ಮತ್ತು ಘರ್ಷಣೆಗೆ ಕಾರಣವಾಗಬಹುದು. ಡೈರಿ ಉದ್ಯಮಕ್ಕೆ ಸೇರಿರುವವರು ಇಂದು ಆರ್ಥಿಕ ಲಾಭವನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಶಿಶುವಿನ ಆರೋಗ್ಯ ಸ್ವಲ್ಪ ಚಿಂತೆಗೆ ಕಾರಣವಾಗಬಹುದು. ಪ್ರೀತಿಯಲ್ಲಿ ನಿರಾಶೆ ನಿಮ್ಮನ್ನು ಕಂಗೆಡಿಸುವುದಿಲ್ಲ. ಇದು ಕೆಲಸದಲ್ಲಿ ನಿಮ್ಮ ದಿನವಾಗಿದೆ!

ಈ ರಾಶಿಚಕ್ರದ ಜನರು ಇಂದು ಜನರನ್ನು ಭೇಟಿಯಾಗುವುದಕ್ಕಿಂತ ಒಂಟಿಯಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಇಂದು ನಿಮ್ಮ ಉಚಿತ ಸಮಯ ಮನೆಯನ್ನು ಸ್ವಚ್ಛಗೊಳಿಸುವಲ್ಲಿ ಕಳೆಯಬಹುದು.

ನಿಮ್ಮ ಸಂಗಾತಿ ಇಂದು ನಿಮ್ಮ ದೈನಂದಿನ ಅಗತ್ಯಗಳನ್ನು ಈಡೇರಿಸುವುದನ್ನು ನಿಲ್ಲಿಸಬಹುದು ಹಾಗೂ ಅಂತಿಮವಾಗಿ ಇದು ನಿಮ್ಮ ಮನಸ್ಥಿತಿಯನ್ನು ಹಾಳುಗೆಡವಬಹುದು.

ಅದೃಷ್ಟ ಸಂಖ್ಯೆ: 1

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕುಂಭ ರಾಶಿ:

ಹಣದ ಪ್ರಾಮುಖ್ಯತೆ ನಿಮಗೆ ಚೆನ್ನಾಗಿ ಗೊತ್ತಿದೆ, ಆದ್ದರಿಂದ ಇಂದು ನಿಮ್ಮ ಮೂಲಕ ಉಳಿಸಲಾಗಿರುವ ಹಣ ನಿಮ್ಮ ತುಂಬಾ ಕೆಲಸಕ್ಕೆ ಬರಬಹುದು ಮತ್ತು ನೀವು ಯಾವುದೇ ದೊಡ್ಡ ಸಮಸ್ಯೆಯಿಂದ ಹೊರಬರಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಚಿಂತೆ ಉಂಟುಮಾಡಬಹುದು ಮತ್ತು ಸ್ವಲ್ಪ ವೈದ್ಯಕೀಯ ಗಮನದ ಅಗತ್ಯವಿದೆ.

ನೀವು ಇಂದು ಪ್ರೀತಿ ಮಾಡುವ ಅವಕಾಶವನ್ನು ಕಳೆದುಕೊಳ್ಳದಿದ್ದಲ್ಲಿ, ನಿಮ್ಮ ಇಡೀ ಜೀವನದಲ್ಲಿ ಈ ದಿನವನ್ನು ಎಂದಿಗೂ ಮರೆಯುವುದಿಲ್ಲ. ಬಾಕಿಯಿರುವ ಯೋಜನೆಗಳು ಅಂತಿಮ ರೂಪ ಪಡೆಯುತ್ತವೆ. ಜೀವನದಲ್ಲಿ ನಡೆಯುತ್ತಿರುವ ಅಡಚಣೆಗಳ ನಡುವೆ ಇಂದು ನಿಮಗೆ ನಿಮಗಾಗಿ ಸಮಯ ಸಿಗುತ್ತದೆ ಮತ್ತು ನಿಮ್ಮ ನೆಚ್ಚಿನ ಕೆಲಸಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ.

ಇಂದು, ಪ್ರೀತಿಯ ಅಮಲು ನಿಮ್ಮನ್ನು ಆವರಿಸಿರುವುದರಿಂದ ಗುಲಾಬಿಗಳು ಇನ್ನೂ ಕೆಂಪಾಗಿ ಕಾಣುತ್ತವೆ ಮತ್ತು ವಯೋಲ ಹೂಗಳು ಇನ್ನೂ ನೀಲಿಯಾಗುತ್ತವೆ.

ಅದೃಷ್ಟ ಸಂಖ್ಯೆ: 3

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮೀನ ರಾಶಿ:

ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಭೇಟಿ ನೀಡುವ ಅತಿಥಿಗಳು ನಿಮ್ಮ ಸಂಜೆಯನ್ನು ಆಕ್ರಮಿಸಿಕೊಳ್ಳಬಹುದು. ಪ್ರಣಯದ ಬಂಧಗಳು ನಿಮ್ಮ ಸಂತೋಷವನ್ನು ಆಸಕ್ತಿಕರವಾಗಿಸುತ್ತವೆ. ನೀವು ನಿಮ್ಮ ಕೆಲಸದಲ್ಲಿ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು.

ಸಕಾಲಿಕ ಮತ್ತು ಶೀಘ್ರ ಕ್ರಮ ನಮ್ಮನ್ನು ಉಳಿದವರಿಗಿಂತ ಮುಂದಿಡುತ್ತದೆ. ನೀವು ಕೆಲವು ಉಪಯುಕ್ತ ಸಲಹೆಗಳಿಗಾಗಿ ನಿಮ್ಮ ಕೈಕೆಳಗಿನವರಿಗೆ ಕಿವಿಗೊಡಬಹುದು. ನಿಮ್ಮ ಹತ್ತಿರ ಕುಟುಂಬದವರಿಗೆ ಅಥವಾ ನಿಮ್ಮ ಸ್ನೇಹಿತರಿಗಾಗಿ ಸಮಯವಿಲ್ಲ ಎಂದು ಬಯಸಿದಾಗ ನಿಮ್ಮ ಮನಸ್ಸು ಕೆಟ್ಟುಹೋಗಬಹುದು.

ಇಂದು ಸಹ ನಿಮ್ಮ ಮನಸ್ಥಿತಿ ಹಾಗೆಯೆ ಉಳಿದಿರಬಹುದು. ನಿಮ್ಮ ಸಂಗಾತಿ ಎಲ್ಲ ಜಗಳಗಳನ್ನು ಮರೆತು ನಿಮ್ಮನ್ನು ಪ್ರೀತಿಯಿಂದ ಆಲಂಗಿಸಲು ಬಂದಾಗ, ಜೀವನ ನಿಜವಾಗಿಯೂ ಅದ್ಭುತವಾಗಿರುತ್ತದೆ.

ಅದೃಷ್ಟ ಸಂಖ್ಯೆ: 6

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಸಚಿನ್ ದಾಖಲೆಗೆ ಒಂದು ಶತಕ ಹಿಂದಿದ್ದಾರೆ ವಿರಾಟ್ ಕೊಹ್ಲಿ

Posted: 13 Jan 2020 08:47 AM PST

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮಧ್ಯೆ ಮುಂಬೈನಲ್ಲಿ ಜನವರಿ 14ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದೆ. ಈ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಗೆ ಸಮಬಲ ಸಾಧಿಸುವ ಅವಕಾಶ ವಿರಾಟ್ ಕೊಹ್ಲಿಗಿದೆ.

ತವರಿನಲ್ಲಿ ವಿರಾಟ್ ಕೊಹ್ಲಿ ಇನ್ನೊಂದು ಶತಕ ಸಿಡಿಸಿದ್ರೆ ತವರಿನಲ್ಲಿ ಸಚಿನ್ ಗಳಿಸಿದ ಶತಕಕ್ಕೆ ಕೊಹ್ಲಿ ಸಮಬಲ ಸಾಧಿಸಲಿದ್ದಾರೆ. ಏಕದಿನ ಪಂದ್ಯಗಳಲ್ಲಿ 49 ಶತಕ ಸಿಡಿಸಿದ್ದ ತೆಂಡೂಲ್ಕರ್ ತವರಿನಲ್ಲಿ 20 ಶತಕ ಸಿಡಿಸಿದ್ದರು. ಕೊಹ್ಲಿ ಈಗಾಗಲೇ ತವರಿನಲ್ಲಿ 19 ಶತಕ ಸಿಡಿಸಿದ್ದಾರೆ.

ಇತ್ತೀಚೆಗಷ್ಟೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವೇಗವಾಗಿ 11,000 ರನ್ ಗಳಿಸಿ ಕೊಹ್ಲಿ ದಾಖಲೆ ಬರೆದಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಇಲ್ಲಿ ಕೊಹ್ಲಿ ಶತಕ ಸಿಡಿಸಿದ್ರೆ ಈ ದಾಖಲೆ ಬರೆಯಲಿದ್ದಾರೆ.

ಸ್ವೀಟ್ ಬೋಂಡಾ ರೆಸಿಪಿ

Posted: 13 Jan 2020 08:10 AM PST

ಬೊಂಡ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಈ ಚಳಿಗಾಲದಲ್ಲಿ ಟೀ ಜೊತೆ ಬೋಂಡಾ ಇದ್ದರೆ ಕೇಳ್ಬೇಕಾ ಹಾಗಾದರೆ ಮಕ್ಕಳಿಗೂ ಇಷ್ಟವಾಗುವ ಸ್ವೀಟ್ ಬೋಂಡಾ ಮಾಡುವುದು ಹೇಗೆ ಅಂತ ನೋಡೋಣ ಬನ್ನಿ.

ಬೇಕಾಗುವ ಪದಾರ್ಥಗಳು

• ಕೊಬ್ಬರಿ ತುರಿ
• ಏಲಕ್ಕಿ ಪುಡಿ
• ತುಪ್ಪ- ಸ್ವಲ್ಪ
• ಅಕ್ಕಿ- ಅರ್ಧ ಬಟ್ಟಲು
• ಉದ್ದಿನ ಬೇಳೆ – 1/4 ಬಟ್ಟಲು
• ಬೆಲ್ಲ- 1 ಬಟ್ಟಲು
• ಕಡಲೆಬೇಳೆ -1 ಬಟ್ಟಲು
• ಎಣ್ಣೆ – ಕರಿಯಲು

ಮಾಡುವ ವಿಧಾನ

ಮೊದಲು ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು ನಂತರ ನೆನೆಸಿದ ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಂಡು ಸ್ವಲ್ಪ ಸಕ್ಕರೆ ಹಾಕಿ 8 ಗಂಟೆಗಳ ಕಾಲ ನೆನೆಯಲು ಬಿಡಬೇಕು, ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.

ಬೆಂದ ಕಡಲೆಬೇಳೆಗೆ ಬೆಲ್ಲ, ಏಲಕ್ಕಿ  ಪುಡಿ  ಹಾಗೂ ತುಪ್ಪವನ್ನು ಹಾಕಿ ಊರ್ಣವನ್ನು ಸಿದ್ಧಪಡಿಸಿಕೊಳ್ಳಬೇಕು. ನಂತರ ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದ ನಂತರ ಊರ್ಣವನ್ನು ಉಂಡೆಗಳನ್ನು ಮಾಡಿಟ್ಟುಕೊಂಡು ಈ ಹಿಂದೆಯೇ ರುಬ್ಬಿಕೊಂಡಿದ್ದ ಹಿಟ್ಟಿನಲ್ಲಿ ಅದ್ದಿ, ಅದನ್ನು ಎಣ್ಣೆಗೆ ಹಾಕಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಸ್ವೀಟ್ ಬೋಂಡಾ ಸವಿಯಲು ಸಿದ್ದ.

ಶಾಕಿಂಗ್: ಭಾರತದಲ್ಲಿ ನಿತ್ಯ 109 ಮಕ್ಕಳ ಮೇಲೆ ‘ಲೈಂಗಿಕ’ ದೌರ್ಜನ್ಯ

Posted: 13 Jan 2020 08:06 AM PST

ಭಾರತದಲ್ಲಿ 2018ರಲ್ಲಿ ಪ್ರತಿನಿತ್ಯ 109 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂಬುದನ್ನು ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಅಂಕಿ-ಅಂಶ ತಿಳಿಸಿದೆ.

ದುರಂತವೆಂದರೆ ಇದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ 2018ರಲ್ಲಿ ಈ ಅಪರಾಧದಲ್ಲಿ ಶೇ.22 ಹೆಚ್ಚಳ ಉಂಟಾಗಿದೆ.

ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ 2017ರಲ್ಲಿ 32,608 ಪ್ರಕರಣ ದಾಖಲಾಗಿದ್ದು, 2018ರಲ್ಲಿ 39,827 ಪ್ರಕರಣಗಳು ದಾಖಲಾಗಿವೆ.

ಸಂಕಷ್ಟಕ್ಕೆ ಸಿಲುಕಿರುವ ಪ್ರಾಣಿಗಳಿಗೆ ಹೆಲಿಕಾಪ್ಟರ್ ಮೂಲಕ ‘ಆಹಾರ’

Posted: 13 Jan 2020 08:04 AM PST

ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ನಿಲ್ಲುವಂತೆ ಕಾಣುತ್ತಿಲ್ಲ. ಕಾಡ್ಗಿಚ್ಚಿನಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ಪ್ರಾಣಿಗಳು ಪ್ರಾಣ ಕಳೆದುಕೊಂಡಿದೆ. ಆದರೆ ಬದುಕುಳಿದಿರುವ ಪ್ರಾಣಿಗಳಿಗೂ ಆಹಾರದ ಸಮಸ್ಯೆ ಶುರುವಾಗಿದೆ.
ಈ ಸಮಸ್ಯೆಗೆ ಸರಕಾರ ವಿನೂತನ ಯೋಜನೆ ಕೈಗೊಂಡಿದೆ.

ಹೌದು, ಬದುಕಿರುವ ಪ್ರಾಣಿಗಳಿಗೆ ತಾತ್ಕಾಲಿಕವಾಗಿ ಆಹಾರವನ್ನು ಒದಗಿಸಲು ನ್ಯೂ ಸೌಥ್ ವೇಲ್ಸ್‌ ಸರಕಾರ ಹೆಲಿಕಾಪ್ಟರ್ ಮೂಲಕ ತರಕಾರಿ ಹಾಕುವ ಕೆಲಸಕ್ಕೆ ಕೈಹಾಕಿದೆ.

ರಾಕ್ ವಲ್ಲಾಬೀಸ್ ಎನ್ನುವ ಪ್ರಬೇಧ ಪ್ರಾಣಿಗಳಿಗೆ ಆಹಾರ ಒದಗಿಸುವ ಉದ್ದೇಶದಿಂದ ಹೆಲಿಕಾಪ್ಟರ್‌ನಿಂದ ಕ್ಯಾರೆಟ್ ಹಾಗೂ ಸಿಹಿ ಆಲುಗಡ್ಡೆಯನ್ನು ಹಾಕಲಾಗುತ್ತಿದೆ.

ಈ ಬಗ್ಗೆ ಪರಿಸರ ಸಚಿವ ಮ್ಯಾಟ್ ಕೀನ್ ಮಾತನಾಡಿದ್ದು, ಸುಮಾರು 2200 ಕೆಜಿ ತರಕಾರಿಯನ್ನು ಪ್ರಾಣಿಗಳಿರುವ ಭಾಗದಲ್ಲಿ ಹಾಕಲಾಗಿದೆ. ಸ್ವಾಭಾವಿಕವಾಗಿ ಆಹಾರ ಸಿಗದಿರುವ ವಲ್ಲಾಬೀಸ್‌ಗಳಿಗೆ ಈ ರೀತಿ ಸರಬರಾಜು ಮಾಡುವ ಮೂಲಕ ಅವುಗಳಿಗೆ ಅಗತ್ಯ ಆಹಾರ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಸಂಕಟಪಡುತ್ತಿರುವ ಈ ಪ್ರಾಣಿಗಳಿಗೆ ಆಹಾರದಿಂದ ಕೊಂಚ ರಿಲ್ಯಾಕ್ಸ್ ಸಿಕ್ಕಿದೆ ಎನ್ನುವ ಮಾತನ್ನು ಅಧಿಕಾರಿಗಳು ಹೇಳಿದ್ದಾರೆ. ನ್ಯೂ ಸೌಥ್ ವೇಲ್ಸ್‌ ಸರಕಾರದ ಈ ಕಾರ್ಯವನ್ನು ನೆಟ್ಟಿಗರು ಮೆಚ್ಚಿದ್ದಾರೆ.

ಈ ಟ್ವೀಟ್‌ ಮೂಲಕ ಜನಮನ ಗೆದ್ದ ಕ್ರಿಕೆಟರ್

Posted: 13 Jan 2020 08:02 AM PST

ಕೆಲವರು ಸ್ವಲ್ಪ ಪ್ರಸಿದ್ಧಿ ಸಿಕ್ಕ ತಕ್ಷಣ ಅವರು ಯಾರು ಅಂತ ಮರೆತುಹೋಗುತ್ತಾರೆ. ಆದರೆ ಮೊಹಮ್ಮದ್ ಕೈಫ್ ಮಾತ್ರ ತಮ್ಮ ಈ ಟ್ವೀಟ್‌ನಿಂದ ತಾವು ಎಷ್ಟು ವಿನಯವಂತ ಎಂದು ತೋರಿಸಿ ಜನಮನ ಗೆದ್ದಿದ್ದಾರೆ.

ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದ ಮೊಹಮ್ಮದ್ ಕೈಫ್ ತಮ್ಮ ಭೇಟಿಯ ಚಿತ್ರವನ್ನು ಟ್ವೀಟರ್‌ನಲ್ಲಿ ಹಾಕಿ ಕೃಷ್ಣನನ್ನು ಭೇಟಿಯಾದ ಇದು ನನ್ನ ಸುಧಾಮನ ಕ್ಷಣ ಎಂದಿದ್ದಾರೆ.

ಸಚಿನ್ ಅವರನ್ನು ಕೃಷ್ಣನಿಗೆ ಹೋಲಿಸಿ ತಮ್ಮನ್ನು ಸುಧಾಮನಿಗೆ ಹೋಲಿಸಿಕೊಂಡ ಕೈಫ್ ಜನರ ಮೆಚ್ಚುಗೆ ಪಡೆದಿದ್ದಾರೆ.

ಹಲವರು ಅವರ ಗರ್ವರಹಿತ ನಡುವಳಿಕೆಯನ್ನು ಹೊಗಳಿದರೆ ಇನ್ನೂ ಹಲವರು ಅವರ ಧರ್ಮಾತೀತ ಜ್ಞಾನವನ್ನು ಪ್ರಶಂಸಿಸಿದ್ದಾರೆ.

ಎರಡು, ಮೂರು ಮದುವೆಯಾಗುವವರಿಗೆ ಭರ್ಜರಿ ‘ಆಫರ್’

Posted: 13 Jan 2020 08:01 AM PST

Image result for a-new-wedding-hall-in-pakistans-bahawalpur-is-offers-discounts-to-men-for-second-third-marriage"ಮೊದಲನೇ ಪತ್ನಿಗೆ ಡಿವೋರ್ಸ್ ಕೊಟ್ಟು ಅಥವಾ ಮೊದಲನೇ ಹೆಂಡತಿಗೆ ಗೊತ್ತಿಲ್ಲದೆ ಮದುವೆಯಾದವರಿಗೆ ಸಮಾಜದಲ್ಲಿ ಎಂತಹ ಮರ್ಯಾದೆ ಸಿಗುತ್ತೆ ಎಂಬುದು ಗೊತ್ತಿರುವ ವಿಚಾರವೇ. ಅಂತವರನ್ನು ಸಮಾಜ ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ.

ಆದರೆ ಇಲ್ಲೊಂದು ಕಡೆ ಎರಡು ಮೂರು ಮದುವೆಯಾಗುತ್ತಿದ್ದಾರೆ ಎಂದರೆ ಅವರಿಗೆ ಭರ್ಜರಿ ಆಫರ್ ಸಿಗುತ್ತದೆ.

ಹೌದು, ಪಾಕಿಸ್ತಾನದ ಬಹಾವಲ್ಪುರದಲ್ಲಿ ಪುರುಷರು ಎರಡನೇ ಅಥವಾ ಮೂರನೇ ಮದುವೆಯಾಗುತ್ತಿದ್ದರೆ ಅಂತವರಿಗೆ ಭರ್ಜರಿ ಆಫರ್ ಒಂದು ಸಿಗಲಿದೆ. ಮದುವೆಗೆ ಅಂತ ಬಾಡಿಗೆಗೆ ಬುಕ್ ಮಾಡುವ ಹಾಲ್ ದರ ಇಂತಹ ಪುರುಷರಿಗೆ ಕಡಿಮೆಗೆ ಸಿಗಲಿದೆಯಂತೆ. ಎರಡನೇ ಮದುವೆಗೆ ಶೇ 50 ರಷ್ಟು, ಮೂರನೇ ಮದುವೆಗೆ ಶೇ 75ರಷ್ಟು ಡಿಸ್ಕೌಂಟಿನಲ್ಲಿ ಹಾಲ್ ಬಾಡಿಗೆಗೆ ಸಿಗುತ್ತದೆಯಂತೆ. ನಾಲ್ಕನೇ ಮದುವೆಗೆ ಸಂಪೂರ್ಣ ಉಚಿತವಾಗಿ ಹಾಲ್ ದೊರೆಯುತ್ತದೆಯಂತೆ.

ಹೀಗೆ ವಿಭಿನ್ನ ಆಫರ್ ಒಂದನ್ನು ಈ ಹಾಲ್ ನ ಮಾಲೀಕ ನೀಡಿದ್ದಾರೆ. ಹೀಗೆ ಈ ಹಾಲ್ ನ ಡಿಸ್ಕೌಂಟ್ ನಲ್ಲಿ ಬುಕ್ ಮಾಡುವ ಪುರುಷರಿಗೆ ಷರತ್ತುಗಳು ಅನ್ವಯಿಸುತ್ತದೆ. ಎರಡನೇ ಮದುವೆಯಾಗುವ ಪುರುಷನ ಮೊದಲ ಪತ್ನಿ ಬಂದು ಈ ಹಾಲ್ ಬುಕ್ ಮಾಡಬೇಕಂತೆ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

— Naila Inayat नायला इनायत (@nailainayat) January 11, 2020

ಇಂಟರ್ನ್‌ಶಿಪ್‌ಗೆ ಸೇರಿ 3 ದಿನದೊಳಗೆ ಹೊಸ ಗ್ರಹ ಕಂಡು ಹಿಡಿದ ಬಾಲಕ

Posted: 13 Jan 2020 08:00 AM PST

ನಾಸಾದಲ್ಲಿ ಇಂಟರ್ನ್‌ಶಿಪ್‌ಗೆಂದು ಬಂದಿದ್ದ 17 ವರ್ಷದ ಬಾಲಕನೋರ್ವ ಇಂಟರ್ನ್ ಆಗಿ ಸೇರಿದ ಮೂರೇ ದಿನದಲ್ಲಿ ಹೊಸ ಗ್ರಹವೊಂದನ್ನು ಕಂಡು ಹಿಡಿದು ಗಮನ ಸೆಳೆದಿದ್ದಾನೆ.

ನ್ಯೂಯಾರ್ಕ್‌ನ ಸ್ಕಾರ್ಸ್‌ಡೇಲ್‌ನ ವೂಲ್ಫ್ ಕುಕೀಯರ್ ಜೂನಿಯರ್ ಹೈಸ್ಕೂಲ್ ಮುಗಿಸಿ ನಾಸಾದ ಗೋಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿ ಇಂಟರ್ನ್ ಆಗಿ ಸೇರಿದ್ದ.

ಅಲ್ಲಿ TOI 1338b ಎನ್ನುವ ಗ್ರಹವನ್ನು ಕಂಡು ಹಿಡಿದಿದ್ದು, ಅದು ಭೂಮಿಗಿಂತ ಏಳು ಪಟ್ಟು ದೊಡ್ಡದಿದೆಯಂತೆ.

ಅದಕ್ಕೆ ಎರಡು ನಕ್ಷತ್ರಗಳಿದ್ದು, ಒಂದು ಸೂರ್ಯನಿಗಿಂತ 10ಪ್ರತಿಶತ ದೊಡ್ಡದಿದೆಯಂತೆ. ವೆಸೆಲಿನ್ ಕೋಸ್ಟೋವ್ ಎನ್ನುವ ವಿಜ್ಞಾನಿಗಳ ಅಡಿ ಇಂಟರ್ನ್ ಆಗಿ ವೂಲ್ಫ್ ಸೇರಿದ್ದರು. ಅವರೇ ಈ ಗ್ರಹದ ಇರುವಿಕೆಯನ್ನು ವೂಲ್ಫ್ ಜೊತೆ ಸೇರಿ ಧೃಡೀಕರಿಸಿದ್ದಾರೆ.

ಬೆಳ್ಳಂಬೆಳಗ್ಗೆ ಭಿಕ್ಷುಕನ ವೇಷದಲ್ಲಿ ಬಂದವ ಮಾಡಿದ್ದೇನು ಗೊತ್ತಾ…? ಘಟನೆಯಿಂದ ಬೆಚ್ಚಿ ಬಿದ್ದ ಗ್ರಾಮಸ್ಥರು

Posted: 13 Jan 2020 07:05 AM PST

ಭಿಕ್ಷೆ ಕೇಳುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆಯ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾನೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬೋರೇಗೌಡನಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ಹಾಡಹಗಲೇ ನಡೆದ ಇಂತಹ ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ನಾಗರಾಜ್ ಎಂಬುವರು ಬೆಳಗ್ಗೆ 9.30 ರ ಸುಮಾರಿಗೆ ಮಕ್ಕಳನ್ನು ಶಾಲಾ ವಾಹನಕ್ಕೆ ಹತ್ತಿಸಲು ಹೋಗಿದ್ದು, ಇದೇ ವೇಳೆ ಮನೆಗೆ ಭಿಕ್ಷುಕನ ರೂಪದಲ್ಲಿದ್ದ ಮಾಂತ್ರಿಕನೊಬ್ಬ ಬಂದು ಭಿಕ್ಷೆ ಕೇಳಿದ್ದಾನೆ.

ನಾಗರಾಜ್ ಅವರ ಪತ್ನಿ ಮನೆಯಿಂದ ಹೊರಗೆ ಬಂದು ಭಿಕ್ಷೆ ಇಲ್ಲ ಎಂದು ಹೇಳಿದ್ದು ಆತ ಅಂಗಲಾಚಿದಾಗ ಮನೆ ಒಳಗಿಂದ ಅಕ್ಕಿ ತಂದು ಕೊಡುವ ಸಂದರ್ಭದಲ್ಲಿ ವಿಭೂತಿ ಧೂಳು ಊದಿದ್ದಾನೆ. ಮಹಿಳೆ ಮುಖಕ್ಕೆ ಧೂಳು ಆವರಿಸಿ ಪ್ರಜ್ಞಾಹೀನರಾಗಿದ್ದು ಕೂಡಲೇ ಮನೆಯೊಳಗೆ ಹೋದ ಬಿಕ್ಷುಕ 1.50 ಲಕ್ಷ ರೂಪಾಯಿ ನಗದು, ಸುಮಾರು 160 ಗ್ರಾಂ ಚಿನ್ನಾಭರಣ, ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ.

ಮಕ್ಕಳನ್ನು ಶಾಲಾ ವಾಹನಕ್ಕೆ ಹತ್ತಿಸಿ ಮನೆಗೆ ಬಂದ ನಾಗರಾಜ್ ಪತ್ನಿ ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ನೋಡಿ ಗಾಬರಿಯಾಗಿದ್ದಾರೆ. ಪತ್ನಿಯನ್ನು ಎಚ್ಚರಗೊಳಿಸಿದಾಗ ಭಿಕ್ಷುಕನ ಅಸಲಿಯತ್ತು ಗೊತ್ತಾಗಿದೆ. ಅಕ್ಕಪಕ್ಕದವರಿಗೆ ಮಾಹಿತಿ ನೀಡಿ ಕಳ್ಳನಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಬಳಿಕ ಪತ್ನಿಗೆ ಚಿಕಿತ್ಸೆ ಕೊಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಮದಾಹದ ಮದದಲ್ಲಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ, ದೂರು

Posted: 13 Jan 2020 06:29 AM PST

ಮುಂಬೈನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಆರ್.ಪಿ.ಎಫ್. ಪೊಲೀಸ್ ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಎಸಗಿದ್ದು, ಎಂ.ಆರ್.ಎ. ಮಾರ್ಗ್ ಠಾಣೆ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ.

ಆರ್.ಪಿ.ಎಫ್. ಪೋಲಿಸ್ ಆಗಿರುವ ಅಮಿತ್ ಧಂಕಡ್ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ನಿಲ್ದಾಣದ ಸಮೀಪ ವಿಶ್ರಾಂತಿ ಪಡೆಯುತ್ತಿದ್ದ ಕ್ಯಾಬ್ ಚಾಲಕನ ಬಳಿ ತೆರಳಿದ್ದು ದಕ್ಷಿಣ ಮುಂಬೈನ ವೇಶ್ಯಾವಾಟಿಕೆ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಕೇಳಿದ್ದಾನೆ.

ವೇಶ್ಯಾವಾಟಿಕೆಯ ಸ್ಥಳಕ್ಕೆ ಹೋಗಲ್ಲ ಎಂದು ಕ್ಯಾಬ್ ಚಾಲಕ ಹೇಳಿ ರೆಡ್ ಲೈಟ್ ಏರಿಯಾಗೆ ಬಾಡಿಗೆ ಹೋಗಲು ನಿರಾಕರಿಸಿದ್ದು ಇದರಿಂದ ಆಕ್ರೋಶಗೊಂಡ ಅಮಿತ್ ಚಾಲಕನ ಮೇಲೆ ಹಲ್ಲೆ ನಡೆಸಿ ರೈಲ್ವೆ ನಿಲ್ದಾಣದ ಮೂಲೆಗೆ ಕರೆದೊಯ್ದು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಬಳಿಕ ಚಾಲಕನ ಬಳಿ ಇದ್ದ ಹಣ, ಕಾರ್ ಕೀ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಎಂ.ಆರ್.ಎ. ಮಾರ್ಗ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಮಿತ್ ನನ್ನು ಬಂಧಿಸಿದ್ದಾರೆ. ಆರ್.ಪಿ.ಎಫ್. ಅಧಿಕಾರಿಗಳು ಪ್ರಕರಣದ ತನಿಖೆಗೆ ಆದೇಶಿಸಿದ್ದು, ಅಮಿತ್ ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಸಹೋದ್ಯೋಗಿಯೊಂದಿಗೆ ಸರಸದ ಮಾತನಾಡಿದ ವಾಹಿನಿ ಮುಖ್ಯಸ್ಥನ ತಲೆದಂಡ

Posted: 13 Jan 2020 05:52 AM PST

ತಿರುಪತಿ ತಿರುಮಲ ದೇವಸ್ಥಾನ ಸಮಿತಿ ನಡೆಸುವ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಮುಖ್ಯಸ್ಥ ಸಹೋದ್ಯೋಗಿ ಜೊತೆಗೆ ಸರಸ ಸಲ್ಲಾಪದ ಮಾತನಾಡಿ ರಾಜೀನಾಮೆ ನೀಡಿದ್ದಾರೆ.

ನಟ ಹಾಗೂ ವಾಹಿನಿ ಮುಖ್ಯಸ್ಥರಾಗಿರುವ ಪೃಥ್ವಿರಾಜ್ ಸಹೋದ್ಯೋಗಿ ಜೊತೆಗೆ ಸರಸ ಸಲ್ಲಾಪದ ಬಗ್ಗೆ ಮಾತು ಆಡಿರುವ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಭಾನುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೂಚನೆ ಮೇರೆಗೆ ಪೃಥ್ವಿರಾಜ್ ರಾಜೀನಾಮೆ ನೀಡಿದ್ದು ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಅಧ್ಯಕ್ಷ ಸುಬ್ಬಾರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ 4 ಗುಂಪು: ಅಚ್ಚರಿ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ

Posted: 13 Jan 2020 05:38 AM PST

ಕಾಂಗ್ರೆಸ್ ನಲ್ಲಿ ಎರಡಲ್ಲ, 4 ಗುಂಪುಗಳಿವೆ. ಅದು ಕೆಪಿಸಿಸಿ ಅಧ್ಯಕ್ಷರಾಗುವವರೆಗೆ ಮಾತ್ರ. ಬಳಿಕ ಎಲ್ಲರೂ ಒಟ್ಟಿಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಗುಂಪಿಗೆ ಅಧ್ಯಕ್ಷ ಸ್ಥಾನ ಸಿಗಲಿ ಎಂದು ಎಲ್ಲರೂ ಪ್ರಯತ್ನ ಮಾಡುತ್ತಾರೆ. ನೇಮಕಾತಿ ಮುಗಿದ ಬಳಿಕ ಎಲ್ಲರೂ ಒಂದೇ. ಯಾರು ಅಧ್ಯಕ್ಷರಾದರೂ ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಹೈಕಮಾಂಡ್ ಭೇಟಿಯಾದ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕಾತಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಪ್ರಾದೇಶಿಕವಾರು ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕ ಮಾಡುವ ಚಿಂತನೆ ಕೂಡ ಇದೆ ಎಂದು ತಿಳಿಸಿದ್ದಾರೆ.

PUC ಪಾಸಾಗಿ ಸೇನೆ ಸೇರ ಬಯಸುವವರಿಗೆ ʼಗುಡ್ ನ್ಯೂಸ್ʼ

Posted: 13 Jan 2020 05:18 AM PST

Image result for national-defence-academy-naval-academy-examination-upsc"

ಕೇಂದ್ರ ಲೋಕಸೇವಾ ಆಯೋಗದಿಂದ ಪಿಯುಸಿ ವಿದ್ಯಾರ್ಹತೆ ಹೊಂದಿದವರಿಂದ ಸೇನೆಗೆ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯಲ್ಲಿ 59 ಸಾವಿರ ರೂ., ತರಬೇತಿ ಮುಗಿದ ಬಳಿಕ 89,100 ರೂ. ವೇತನದೊಂದಿಗೆ ಸೇನೆಯಲ್ಲಿ ನಾವಿಕ, ಸೈನಿಕರಾಗಲು ಅವಕಾಶವಿದೆ.

ಕೇಂದ್ರ ಲೋಕಸೇವಾ ಆಯೋಗದ ವತಿಯಿಂದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನ್ಯಾಷನಲ್ ನೇವಲ್ ಅಕಾಡೆಮಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. 418 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ನೇವಲ್ ಅಕಾಡೆಮಿಗೆ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಗಣಿತ ಮತ್ತು ಭೌತ ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ಓದಿದವರು ಅರ್ಜಿ ಸಲ್ಲಿಸಬೇಕು.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಗೆ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ತರಬೇತಿ ಸಮಯದಲ್ಲಿ 59,600 ರೂಪಾಯಿ, ತರಬೇತಿ ಪೂರ್ಣಗೊಂಡ ಬಳಿಕ 89 ಸಾವಿರ ರೂ. ಆರಂಭಿಕ ವೇತನ ಹಾಗೂ ಇತರೆ ಭತ್ಯೆ ನೀಡಲಾಗುವುದು. 2001 ರ ಜುಲೈ 2 ರಿಂದ 2004ರ ಜುಲೈ 1 ರೊಳಗೆ ಜನಿಸಿದವರು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಜನವರಿ 28 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಆಯಾ ರಾಜ್ಯಗಳ ರಾಜಧಾನಿಯಲ್ಲಿ ಪರೀಕ್ಷೆ ನಡೆಯಲಿದೆ. ಮಾಹಿತಿ ಮತ್ತು ವಿವರಗಳಿಗೆ https://www.upsc.gov.in/sites/default/files/Notif-NDANA-I-2020-Eng.pdf ಗಮನಿಸಬಹುದಾಗಿದೆ.

ಸಾಹಿತ್ಯ ಸಮ್ಮೇಳನಕ್ಕೆ ಭದ್ರತೆ ಕಲ್ಪಿಸಲಾಗದಷ್ಟು ಸರ್ಕಾರ ದುರ್ಬಲವೇ…? ಜೆಡಿಎಸ್ ಆಕ್ರೋಶ

Posted: 13 Jan 2020 04:49 AM PST

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಶೃಂಗೇರಿಯಲ್ಲಿ ನಡೆದಿದ್ದು ಈ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುವ ಬೆದರಿಕೆ ಹಾಕಲಾಗಿತ್ತು ಎಂಬ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ.

ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದ ದುಷ್ಕರ್ಮಿಗಳ ಬಂಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿದೆ. ಶೃಂಗೇರಿಯಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಅವರ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ವಿರೋಧ ವ್ಯಕ್ತವಾಗಿತ್ತು.

ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತಪಡಿಸಿ ಶೃಂಗೇರಿ ಬಂದ್ ಗೆ ಕರೆ ನೀಡಲಾಗಿತ್ತು. ಅನುದಾನ ತಡೆಹಿಡಿಯಲಾಗಿತ್ತು. ಶಿಕ್ಷಕರ ಒಒಡಿ ರದ್ದು ಮಾಡಲಾಗಿತ್ತು. ಇವೆಲ್ಲ ಅಸಹಕಾರಗಳ ನಡುವೆಯೇ ಮೊದಲ ದಿನ ಸಮ್ಮೇಳನ ನಡೆಸಲಾಗಿದೆ.

ಮರುದಿನ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಹಾಕುವ ಬೆದರಿಕೆ ಕಾರಣದಿಂದ ಕಾರ್ಯಕ್ರಮ ರದ್ದು ಮಾಡಬೇಕೆಂದು ಪೊಲೀಸರು ಸಮ್ಮೇಳನದ ಆಯೋಜಕರಿಗೆ ಸೂಚನೆ ನೀಡಿದ್ದು ಈ ವಿಚಾರಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಜೆಡಿಎಸ್ ಕೂಡ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಚಿಕ್ಕಮಗಳೂರಿನಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಪೆಟ್ರೋಲ್ ಬಾಂಬ್ ಬೆದರಿಕೆ ಹಾಕುವ ಮಟ್ಟಿಗೆ ಈ ರಾಜ್ಯದ ಕಾನೂನು ಸುವ್ಯವಸ್ಥೆ ಬಲಹೀನವಾಗಿದೆ ಎಂದರೆ ಏನರ್ಥ? ಕನ್ನಡದ ಕೆಲಸಕ್ಕೆ ಭದ್ರತೆ ಕಲ್ಪಿಸಲಾಗದಷ್ಟು ಈ ಸರ್ಕಾರ ದುರ್ಬಲವೇ? ಅಥವಾ ಭಿನ್ನದನಿಯನ್ನು ದಮನಿಸುವ ಧಿಮಾಕೆ? ಎಂದು ಪ್ರಶ್ನಿಸಲಾಗಿದೆ.

‘ದೇಶ ಒಡೆಯುತ್ತಿರುವ ಕೇಂದ್ರ ಸರ್ಕಾರ, ಯುವಕರೊಂದಿಗೆ ಮಾತಾಡದ ಮೋದಿ’

Posted: 13 Jan 2020 04:29 AM PST

ನವದೆಹಲಿ: ಕೇಂದ್ರ ಸರ್ಕಾರ ಯುವಜನತೆಯ ಧ್ವನಿಯನ್ನು ಕೇಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, ದೇಶದ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ನಿರುದ್ಯೋಗ ಸಮಸ್ಯೆಯ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ ಎಂದು ದೂರಿದ್ದಾರೆ.

ದೇಶವನ್ನು ಒಡೆಯಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಪ್ರಧಾನಿ ಮೋದಿ ಯುವಕರ ಜೊತೆ ಏಕೆ ಮಾತನಾಡುತ್ತಿಲ್ಲ? ಯುವಜನತೆಯ ಧ್ವನಿಯನ್ನು ಹತ್ತಿಕ್ಕುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಸತ್ಯ ಪರೀಕ್ಷೆಯ ನೆಪದಲ್ಲಿ ಪ್ರಿಯತಮೆ ಜೀವ ತೆಗೆದ

Posted: 13 Jan 2020 04:14 AM PST

ಕೋಲಾರ ಜಿಲ್ಲೆ ಗೌರಿಬಿದನೂರು ತಾಲೂಕು ಕಮಲಾಪುರದಲ್ಲಿ ಪ್ರಿಯತಮೆಗೆ ವಿಷ ಕುಡಿಸಿದ ಪ್ರಿಯಕರನನ್ನು ಬಂಧಿಸಲಾಗಿದೆ.

ಅಪ್ರಾಪ್ತ ವಯಸ್ಸಿನ ಯುವತಿಯನ್ನು ಪ್ರೀತಿಸಿದ್ದ ವೆಂಕಟೇಶ್ ಆಕೆ ಬೇರೆಯವರೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಾಬೀತು ಮಾಡಲು ವಿಷ ಕುಡಿಯುವಂತೆ ಹೇಳಿದ್ದಾನೆ. ವಿಷ ಕುಡಿಯುವ ಪರೀಕ್ಷೆಗೆ ಒಳಗಾದ ಅಪ್ರಾಪ್ತೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಇನ್ನು ತಾನೂ ವಿಷ ಕುಡಿಯುವ ನಾಟಕವಾಡಿದ್ದ ವೆಂಕಟೇಶ್ ಅಸಲಿಯತ್ತು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಪ್ರಿಯತಮೆ ಮೇಲೆ ಅನುಮಾನಪಟ್ಟು ವಿಷ ಕುಡಿಸಿದ ವೆಂಕಟೇಶ್ ತಾನು ವಿಷ ಕುಡಿಯುವ ನಾಟಕವಾಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾನೆ.

ಅನುಮಾನದಿಂದ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ನಿಜ ಸಂಗತಿ ಗೊತ್ತಾಗಿದೆ ಮಂಚೇನಹಳ್ಳಿ ಠಾಣೆ ಪೊಲೀಸರು ವೆಂಕಟೇಶ್ ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಆಸ್ಟ್ರೇಲಿಯಾದ ಕಾಡ್ಗಿಚ್ಚಿನಿಂದ ಹೆಚ್ಚಾದ ಕಾರ್ಬನ್ ಡೈಆಕ್ಸೈಡ್ ಎಷ್ಟು ಗೊತ್ತಾ…?

Posted: 13 Jan 2020 03:39 AM PST

ಕಾಡ್ಗಿಚ್ಚಿನಿಂದಾಗಿ ಆಸ್ಟ್ರೇಲಿಯಾದಲ್ಲಿ ನಾಲ್ಕೇ ತಿಂಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ 400 ಮಿಲಿಯನ್ ಮೆಟ್ರಿಕ್ ಟನ್‌ನಷ್ಟಾಗಿದೆ.

ಕಳೆದ ವರ್ಷ ಅಮೆಜಾನ್ ಕಾಡ್ಗಿಚ್ಚಿನಲ್ಲಿ ಉಂಟಾದ್ದಕ್ಕಿಂತ ದುಪ್ಪಟ್ಟು ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಇದಾಗಿದೆ.

ಈಗಿನ ಆಸ್ಟ್ರೇಲಿಯಾದ ಕಾಡ್ಗಿಚ್ಚಿನಿಂದ ಉಂಟಾದ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆ ಇಂಗಾಲ ಹೊರಹಾಕುವ 116 ಸಣ್ಣ ದೇಶಗಳ ಕಾರ್ಬನ್ ಡೈಆಕ್ಸೈಡ್‌ಗೆ ಸಮನಾಗಿದೆ.

ಅದರಲ್ಲೂ ಇದು 2018ರಲ್ಲಿ ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನಿಂದ ಉಂಟಾದ ಕಾರ್ಬನ್ ಡೈಆಕ್ಸೈಡ್ ಪ್ರಮಾಣಕ್ಕಿಂತ ಒಂಬತ್ತು ಪಟ್ಟು ಹೆಚ್ಚಿನದ್ದಾಗಿದೆ.

32 ಸಾವಿರ ರೂ. ಮೌಲ್ಯದ ಟಿವಿ ಎರಡುವರೆ ಸಾವಿರಕ್ಕೆ ಸಿಕ್ಕರೆ..!?

Posted: 13 Jan 2020 03:25 AM PST

32 हजार का LED टीवी मिलने लगा ढाई हजार में, भीड़ देख बुलानी पड़ी पुलिस

ಉಚಿತವಾಗಿ ಸಿಕ್ಕರೆ ನನಗೂ ಬೇಕು, ನಮ್ಮವರಿಗೂ ಬೇಕು ಎನ್ನುವವರೇ ಹೆಚ್ಚು. ಕಡಿಮೆ ಬೆಲೆಗೆ ವಸ್ತುಗಳು ಸಿಕ್ಕರೂ ಜನ ಇದೇ ಕೆಲಸ ಮಾಡ್ತಾರೆ. 32 ಸಾವಿರ ರೂಪಾಯಿ ಮೌಲ್ಯದ ಬ್ರಾಂಡ್ ಎಲ್ ಇಡಿ ಟಿವಿ ಎರಡುವರೆ ಸಾವಿರ ರೂಪಾಯಿಗೆ ಸಿಕ್ಕಲ್ಲಿ ಏನಾಗಬೇಡ? ನಿಶ್ಚಿತವಾಗಿಯೂ ಜನರು ಟಿವಿ ಖರೀದಿಗೆ ಮುಗಿ ಬೀಳ್ತಾರೆ.

ಇಂಥಹದೆ ಘಟನೆಯೊಂದು ಫ್ರಾನ್ಸ್ ಶಾಪಿಂಗ್ ಮಾಲ್ ಒಂದರಲ್ಲಿ ಬೆಳಕಿಗೆ ಬಂದಿದೆ. ಶಾಪಿಂಗ್ ಮಾಲ್ ಬೋರ್ಡ್ ನಲ್ಲಿ ಆಕಸ್ಮಿಕವಾಗಿ32 ರೂಪಾಯಿ ಇದ್ದ ಟಿವಿ ಬೆಲೆ ಎರಡುವರೆ ಸಾವಿರವೆಂದು ತೋರಿಸಲು ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಕ್ಷಣ ಇದು ವೈರಲ್ ಆಗಿದೆ. ಮಾಲ್ ಬಗ್ಗೆ ಮಾಹಿತಿ ಪತ್ತೆ ಮಾಡಿದ ಜನರು ತಕ್ಷಣ ಮಾಲ್ ಗೆ ತೆರಳಿದ್ದಾರೆ.

ಮಾಲ್ ಗೆ ಬಂದವರು ಮೂರು, ನಾಲ್ಕು ಟಿವಿ ಖರೀದಿ ಮಾಡಿದ್ದಾರೆ. ಕೌಂಟರ್ ಗೆ ಬಂದು ಹಣ ನೀಡಲು ಮುಂದಾದಾಗ ಬೆಲೆ 32 ಸಾವಿರ ಎಂಬುದು ಗೊತ್ತಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದವರು ಎರಡುವರೆ ಸಾವಿರಕ್ಕೆ ಟಿವಿ ನೀಡುವಂತೆ ಕೇಳಿದ್ದಾರೆ. ಮಳಿಗೆ ಮಾಲೀಕನಿಗೆ ಜನರನ್ನು ನಿಯಂತ್ರಿಸಲಾಗದೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸ್ ಮಾತಿಗೆ ಮಣಿದ ಜನರು ಬರಿಗೈನಲ್ಲಿ ಮನೆಗೆ ಹೋಗಿದ್ದಾರೆ.

ಒಂದೇ ಬಾರಿ 16 ಪುರುಷರ ಜೊತೆ ಸಂಬಂಧ ಹೊಂದಿದ್ದವಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ಲು

Posted: 13 Jan 2020 03:01 AM PST

ದಾಂಪತ್ಯ ದ್ರೋಹವೆಸಗಿದ ಪತ್ನಿ ಮೇಲೆ ಪತಿಯೊಬ್ಬ ಸೇಡು ತೀರಿಸಿಕೊಂಡಿದ್ದಾನೆ. ಆಕೆ ಸುದ್ದಿ ಈಗ ಚರ್ಚೆಯ ವಿಷ್ಯವಾಗಿದೆ. ಪತಿಗೆ ಮೋಸ ಮಾಡಿ 16 ಪುರುಷರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಜಿಂಬಾಬ್ವೆ ಮೂಲದವಳು.

ನಾಲ್ಕು ವರ್ಷಗಳ ಹಿಂದೆ ಇಬ್ಬರ ಮದುವೆ ನಡೆದಿತ್ತಂತೆ. ಕೆಲ ದಿನಗಳಿಂದ ಪತಿ ಜೊತೆ ಪತ್ನಿ ಶಾರೀರಿಕ ಸಂಬಂಧ ಬೆಳೆಸುತ್ತಿರಲಿಲ್ಲವಂತೆ. ಹೊಟ್ಟೆ ನೋವಿನ ಕಾರಣ ಹೇಳಿ ದೂರವಿರುತ್ತಿದ್ದಳಂತೆ. ಈ ಮಧ್ಯೆ ಪತಿ ಕೈಗೆ ಪತ್ನಿ ಮೊಬೈಲ್ ಸಿಕ್ಕಿದೆ. ಮೊಬೈಲ್ ನಲ್ಲಿದ್ದ ಚಾಟ್, ಫೋಟೋ ನೋಡಿ ಪತಿ ದಂಗಾಗಿದ್ದಾನೆ. ಪತ್ನಿ ಒಂದಲ್ಲ ಎರಡಲ್ಲ ಬರೋಬ್ಬರಿ 16 ಪುರುಷರ ಜೊತೆ ಸಂಬಂಧ ಹೊಂದಿದ್ದಳಂತೆ.

ಕೆಲಸದ ಮೇಲೆ ಪತಿ ಬೇರೆ ಊರಿಗೆ ಹೋದ ಸಂದರ್ಭದಲ್ಲಿ ಪತ್ನಿ ಬಾಯ್ ಫ್ರೆಂಡ್ ಜೊತೆ ಮೂರು ದಿನ ಕಳೆದಿದ್ದಳಂತೆ. ಎಲ್ಲ ಸಾಕ್ಷಿ ಕಲೆಹಾಕಿದ ಪತಿ, ಪತ್ನಿ ಬಗ್ಗೆ ಸುದ್ದಿ ಪ್ರಕಟಿಸುವಂತೆ ಆನ್ಲೈನ್ ಪತ್ರಿಕೆ ಮೊರೆ ಹೋಗಿದ್ದಾನೆ. ಆನ್ಲೈನ್ ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾಗ್ತಿದ್ದಂತೆ ಪತ್ನಿ ಕೋಪಗೊಂಡಿದ್ದಾಳೆ. ಆಕೆ ಬಾಯ್ ಫ್ರೆಂಡ್ಸ್ ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ. ಆಕೆಗೆ ಮದುವೆಯಾಗಿದೆ ಎಂಬ ಸಂಗತಿ ನನಗೆ ಗೊತ್ತಿರಲಿಲ್ಲ ಎಂದಿದ್ದಾನೆ.

ನಶೆಯಲ್ಲಿ ಉಬರ್ ಕಾರ್ ಏರಿದವಳು ಎಚ್ಚರವಾದಾಗ ಕಾದಿತ್ತು ಶಾಕ್

Posted: 13 Jan 2020 02:35 AM PST

नशे में उबर कैब में सो गई महिला, जगी तो ड्राइवर कर रहा था रेप

ಪಾರ್ಟಿ ಮುಗಿಸಿ ಮನೆಗೆ ಬರ್ತಿದ್ದ ಮಹಿಳೆ ಮೇಲೆ ಉಬರ್ ಚಾಲಕ ಅತ್ಯಾಚಾರ ನಡೆಸಿದ್ದಾನೆ. ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಪಾರ್ಟಿ ಮುಗಿಸಿ ಬಂದಿದ್ದ ಮಹಿಳೆ ಕಾರಿನಲ್ಲಿಯೇ ನಿದ್ರೆ ಮಾಡಿದ್ದಳಂತೆ. ಎಚ್ಚರವಾದಾಗ ಕಾರ್ ಚಾಲಕ ಅತ್ಯಾಚಾರವೆಸಗುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ.

ಮಹಿಳೆ ದೂರು ನೀಡುವ ಮೊದಲೇ ಪೊಲೀಸ್ ಠಾಣೆಗೆ ಬಂದ ಚಾಲಕ, ಮಹಿಳೆ ಒಪ್ಪಿಗೆ ಮೇಲೆ ಸಂಬಂಧ ಬೆಳೆಸಿದ್ದೇನೆ. ಮಹಿಳೆ ಅತ್ಯಾಚಾರದ ಕೇಸ್ ಹಾಕುವ ಸಾಧ್ಯತೆಯಿದೆ ಎಂದಿದ್ದ. ವಿಚಾರಣೆ ವೇಳೆ ಮಹಿಳೆ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ಮಹಿಳೆ ನಶೆಯಲ್ಲಿದ್ದಳು ಎಂಬುದು ನನಗೆ ಗೊತ್ತಿತ್ತು. ಆದ್ರೆ ಆಕೆ ಒಪ್ಪಿಗೆ ಪಡೆದು ಅತ್ಯಾಚಾರವೆಸಗಿದ್ದೇನೆ ಎಂದಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ಟಿವಿ ಗ್ರಾಹಕರಿಗೆ ಸಿಕ್ಕಿದೆ ಖುಷಿ ಸುದ್ದಿ…! ಕಡಿಮೆಯಾಯ್ತು ಬೆಲೆ

Posted: 13 Jan 2020 02:33 AM PST

ಭಾರತದಲ್ಲಿ ಸುಮಾರು 200 ಮಿಲಿಯನ್ ಕುಟುಂಬಗಳು ಟಿವಿ ಹೊಂದಿವೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ  ಅಧ್ಯಕ್ಷ ಆರ್.ಎಸ್.ಶರ್ಮಾ  ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ್ದಾರೆ.  ಗ್ರಾಹಕರ ಹಿತದೃಷ್ಟಿಯಿಂದ ಗ್ರಾಹಕರಿಗೆ ಪ್ರತಿ ಚಾನಲ್‌ಗೆ ತಿಂಗಳಿಗೆ 12 ರೂಪಾಯಿ ವಸೂಲಿ ಮಾಡಲಾಗುವುದು ಎಂದಿದ್ದಾರೆ. ಈ ಮೊದಲು ಇದರ ಬೆಲೆ 19 ರೂಪಾಯಿಯಾಗಿತ್ತು. ಚಂದಾದಾರರು ಚಾನೆಲ್ ಗುಚ್ಛವನ್ನು ಪಡೆದಲ್ಲಿ ಗರಿಷ್ಠ ಬೆಲೆ ಪ್ರತಿ ಚಾನಲ್‌ಗೆ 12 ರೂಪಾಯಿಯಾಗಲಿದೆ.

ಕೆಲವು ಚಾನೆಲ್‌ಗಳಿಗೆ ಮೊದಲು  ಐದು ರೂಪಾಯಿಗಳನ್ನು ವಸೂಲಿ ಮಾಡಲಾಗ್ತಿತ್ತು. ನಂತರ ಅದನ್ನು 19 ರೂಪಾಯಿಗೆ ಏರಿಸಲಾಗಿತ್ತು ಎಂದವರು ಹೇಳಿದ್ದಾರೆ. ಎಸ್‌ಡಿ ಮತ್ತು ಎಚ್‌ಡಿ ಎರಡೂ ಒಂದೇ ಬೆಲೆಯನ್ನು ಹೊಂದಿದ್ದವು. ಭಾರತದಲ್ಲಿ ಸುಮಾರು ಆರು ಮಿಲಿಯನ್ ಕುಟುಂಬಗಳು ಒಂದಕ್ಕಿಂತ ಹೆಚ್ಚು ಸಂಪರ್ಕಗಳನ್ನು ಹೊಂದಿವೆ. ಹೊಸ ನಿಯಮ ಜಾರಿಗೆ ಬಂದ ನಂತ್ರ   ಗ್ರಾಹಕರು ಪ್ರತಿ ತಿಂಗಳು ಹಣವನ್ನು ಉಳಿಸಬಹುದು. ಒಂದಕ್ಕಿಂತ ಹೆಚ್ಚು ಸಂಪರ್ಕ ಹೊಂದಿರುವ ಗ್ರಾಹಕರು ತಿಂಗಳಿಗೆ 98 ರೂಪಾಯಿಗಳನ್ನು ಉಳಿತಾಯ ಮಾಡಬಹುದು. ಈ ಮೊದಲು ಗ್ರಾಹಕರು ಪ್ರತಿ ಸಂಪರ್ಕಕ್ಕೆ 130 ರೂಪಾಯಿ ನೀಡಬೇಕಾಗಿತ್ತು.

ಈಗ ಮೊದಲ ಸಂಪರ್ಕಕ್ಕೆ 130 ರೂಪಾಯಿ, ಎರಡನೇ ಸಂಪರ್ಕಕ್ಕೆ ಹಾಗೂ ಮೂರನೇ ಸಂಪರ್ಕಕ್ಕೆ 52 ರೂಪಾಯಿ ನೀಡಬೇಕು.  ಟೆಲಿವಿಷನ್ ಪ್ರಸಾರಕರು ಸುಂಕದ ಹೊಸ ಯೋಜನೆಯನ್ನು ಖಂಡಿಸಿದ್ದಾರೆ. ಇದು ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.

ನಾಯಿಗೆ ಒದ್ದು ಸಂಕಷ್ಟಕ್ಕೆ ಸಿಲುಕಿಕೊಂಡ ಆಟಗಾರ

Posted: 13 Jan 2020 01:31 AM PST

ಓಟಗಾರನೊಬ್ಬ ಪಂದ್ಯ ಒಂದರಲ್ಲಿ ಓಡುವಾಗ ಅವನ ಹತ್ತಿರ ಬಂದ ನಾಯಿಯೊಂದನ್ನು ಕಾಲಿನಿಂದ ಒದ್ದು ತೊಂದರೆಗೆ ಸಿಲುಕಿಕೊಂಡ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.

ಅಲ್ಲಿನ ನೀರಾ ನಗರದಲ್ಲಿ ನಡೆದ ಸೇಂಟ್ ಸಿಲ್ವೆಸ್ಟರ್ ರೋಡ್ ರೇಸ್ನಲ್ಲಿ ಪಾಲ್ಗೊಂಡಿದ್ದ ಜೇಮಿ ಅಲೆಜಾಂಡ್ರೋ ಎನ್ನುವ ಓಟಗಾರ ಓಡುತ್ತಿದ್ದಾಗ ಅವನ ಮುಂದೆ ನಾಯಿಯೊಂದು ಹಾದು ಹೋಗುತ್ತಿದ್ದು, ಜೋರಾಗಿ ಅದನ್ನು ಒದ್ದಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅದು ವೈರಲ್ ಆಗಿದೆ.

ತಕ್ಷಣ ಹಲವೆಡೆಯಿಂದ ಇದಕ್ಕೆ ಖಂಡನೆ ಕೇಳಿಬಂದಿದೆ. ಅವರ ಪ್ರಾಯೋಜಕರಾಗಿದ್ದ ಅಂಡರ್ ಆರ್ಮರ್ ಶೂ ಕಂಪನಿ ಕೂಡ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಅಲೆಜಾಂಡ್ರೋ ಇದಕ್ಕೆ ಕ್ಷಮೆ ಕೇಳಿದ್ದು ಪಂದ್ಯದ ಹುಮ್ಮಸ್ಸಿನಲ್ಲಿ ಈ ರೀತಿ ಮಾಡಿರುವುದಾಗಿ ಹೇಳಿದ್ದಾರೆ.

ಸ್ನೇಹಿತನ ಹತ್ಯೆ ಮಾಡಿದ ಬಳಿಕ ಹಣಕ್ಕೆ ಬೇಡಿಕೆ ಇಟ್ಟ ಆರೋಪಿ..!

Posted: 13 Jan 2020 01:29 AM PST

ಹಣದ ಆಸೆಗೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪುಣೆಯ ದಪೋಡಿ ಭಾಗದ ಉಮರ್ ನಾಸಿರ್ ಸೇಕ್ (21) ಬಂಧಿತ ಆರೋಪಿ. ಸಾವಿತ್ರಿ ಬಾಯಿ ಪುಲೆ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಆರೋಪಿ ತನ್ನ ಸ್ನೇಹಿತ ಅಬ್ದುಲ್ ಅಹದ್ ಸಿದ್ಧಕಿ (17) ನನ್ನು ಶನಿವಾರ ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಸಿದ್ಧಕಿ ಪೋಷಕರಿಗೆ 40 ಲಕ್ಷ ಡಿಮ್ಯಾಂಡ್ ಮಾಡಿದ್ದ ಎಂದು ತಿಳಿದುಬಂದಿದೆ.

ಸಿದ್ಧಕಿಯ ತಂದೆ ತರಕಾರಿ ವ್ಯಾಪಾರಿಯಾಗಿದ್ದು, ಅವರ ಸಹ ದಾಪೋಡಿಯಲ್ಲಿ ವಾಸವಿದ್ದರು. ಸಿದ್ಧಕಿ ಹಾಗೂ ನಾಸಿರ್ ಇಬ್ಬರು ವಿವಿ ಕ್ಯಾಂಪಸ್‌ನಲ್ಲಿ ಮದ್ಯ ಸೇವಿಸಿದ್ದರು.

ಬಳಿಕ ಆರೋಪಿ ಸಿದ್ಧಕಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿ ಸಿದ್ಧಕಿ ಪೋಷಕರಿಗೆ ಕರೆ ಮಾಡಿ ಹಣದ ಡಿಮ್ಯಾಂಡ್ ಇಟ್ಟಿರುವುದು ತಿಳಿದುಬಂದಿದ್ದು, ಬಳಿಕ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಧಾನಿ ಮೋದಿಯವರ ಪದವಿ ಪ್ರಮಾಣಪತ್ರ ಕೇಳಿದ ಅನುರಾಗ್ ಕಶ್ಯಪ್

Posted: 13 Jan 2020 01:26 AM PST

ಸರಕಾರದ ಧೋರಣೆಗಳನ್ನು ಆಗ್ಗಿಂದ್ದಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುವ ಹಾಗೂ ಕೆಲವೊಮ್ಮೆ ಬೀದಿಗಿಳಿದು ಪ್ರಶ್ನಿಸುವ ನಿರ್ದೇಶಕ ಅನುರಾಗ್ ಕಶ್ಯಪ್ ಸದಾ ಸುದ್ದಿಯಲ್ಲಿರುತ್ತಾರೆ.

ಈ ಬಾರಿಯೂ ಸಿಎಎ ಕಾಯಿದೆ ಬಗ್ಗೆ ಪ್ರಶ್ನಿಸುವ ವೇಳೆ, ಮೋದಿಯವರ ತಂದೆ ಬರ್ತ್ ಸರ್ಟಿಫಿಕೇಟ್ ಕೇಳುವ ಮೂಲಕ ಸದ್ದು ಮಾಡಿದ್ದಾರೆ.

ದೇಶದೆಲ್ಲೆಡೆ ಸಿಎಎ ಪರ – ವಿರೋಧ ಅಲೆ ಜೋರಾಗಿದೆ. ಈ ಹೋರಾಟದಲ್ಲಿ ಬೀದಿಗಿಳಿದಿದ್ದ ಅನುರಾಗ್, ಮೋದಿ ನೇತೃತ್ವದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿರುವ ಅನುರಾಗ್, ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣ ಪತ್ರವನ್ನು ಕೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾವಂತರಾಗಿದ್ದು, ಅವರ ಪದವಿ ಪ್ರಮಾಣ ಪತ್ರವನ್ನು ದೇಶದ ಜನರಿಗೆ ತೋರಿಸಲಿ. ಇದರೊಂದಿಗೆ ಮೊದಲು ಅವರು ಜನ್ಮಪ್ರಮಾಣ ಪತ್ರ, ಪೋಷಕರ ಹಾಗೂ ಇಡೀ ಕುಟುಂಬ ವಂಶವೃಕ್ಷವನ್ನು ತೋರಿಸಲಿ. ಬಳಿಕ ದೇಶದ ಜನರ ದಾಖಲೆಯನ್ನು ಕೇಳಲಿ ಎಂದು ಆಗ್ರಹಿಸಿದ್ದಾಾರೆ.

ಅನುರಾಗ್ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧ ಕಾಮೆಂಟ್‌ಗಳು ಬಂದಿವೆ. ಸುಮಾರು 12 ಸಾವಿರಕ್ಕೂ ಹೆಚ್ಚು ರಿಪ್ಲೆ ಹಾಗೂ 23 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ಒಲಂಪಿಕ್ಸ್ ಕ್ರೀಡಾಪಟುಗಳಿಗೆ ಸಿದ್ಧವಾದ ಮಂಚದ ಮೇಲೆ ಸಂಭೋಗ ಬೆಳೆಸಿದ್ರು ಮುರಿಯಲ್ಲ ಎಂದ ಕಂಪನಿ…!

Posted: 13 Jan 2020 01:21 AM PST

ओलंपिक एथलीटों को घटिया पलंग? कंपनी ने कहा- सेक्स करने पर भी नहीं टूटेंगे

ಈ ಬಾರಿ ಟೋಕಿಯೊದಲ್ಲಿ ನಡೆಯುವ  ಒಲಿಂಪಿಕ್ಸ್‌ ಗೆ ಮರು ಬಳಕೆಯ ವಸ್ತುಗಳನ್ನು ಬಳಸಲಾಗ್ತಿದೆ.

ಪದಕದಿಂದ ಹಿಡಿದು ಹಾಸಿಗೆಯವರೆಗೆ ಎಲ್ಲವೂ ಮರು ಬಳಕೆ ವಸ್ತುಗಳಾಗಿವೆ. ಇಂಥ ಸಂದರ್ಭದಲ್ಲಿ  ಕ್ರೀಡಾಪಟುಗಳು ದೈಹಿಕ ಸಂಬಂಧವನ್ನು ಬೆಳೆಸಿದ್ರೆ ಹಾಸಿಗೆಗಳು ಮುರಿಯುವುದಿಲ್ಲ ಎಂಬ ಸುದ್ದಿ ಹರಡಿದೆ. ಹಲಿಗೆಯಿಂದ ಮಂಚವನ್ನು ತಯಾರಿಸಲಾಗಿದೆ.

ಕಾರ್ಡ್ ಬೋರ್ಡ್ ನಿಂದ ತಯಾರಾದ ಮಂಚದ ಮೇಲೆ ಮಲಗಿದ್ರೆ ಮಂಚ ಮುರಿಯುತ್ತೆ ಎಂದು ಜನರು ವಾದಿಸಿದ್ದರು. ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗಿತ್ತು. ಆದ್ರೆ ಒಲಂಪಿಕ್ ಆಡಳಿತ ಮಂಡಳಿ ಸಲಹೆ ನೀಡಿದೆ. ಮಂಚ 200 ಕೆ.ಜಿ ಭಾರವನ್ನು ಹೊತ್ತುಕೊಳ್ಳಲು ಸಮರ್ಪಕವಾಗಿದೆಯಂತೆ.

ಇದಕ್ಕಿಂತ ಹೆಚ್ಚಿನ ಭಾರವನ್ನು ಹಾಸಿಗೆಗೆ ಹಾಕುವಂತಿಲ್ಲ. ಇಬ್ಬರು ಮಲಗಬಹುದೆಂದು ಆಡಳಿತ ಮಂಡಳಿ ಹೇಳಿದೆ. ಆಡಳಿತ ಮಂಡಳಿ ಹೇಳಿಕೆ ಆಧಾರದ ಮೇಲೆ ಮಾಧ್ಯಮಗಳು ಬೇರೆ ಸುದ್ದಿ ಹಬ್ಬಿಸಿವೆ. ಬೆಡ್ ಮೇಲೆ ಕ್ರೀಡಾಪಟುಗಳು ಶಾರೀರಿಕ ಸಂಬಂಧ ಬೆಳೆಸಿದ್ರೂ ಮುರಿಯುವುದಿಲ್ಲವೆಂಬ ಸುದ್ದಿ ಪ್ರಸಾರ ಮಾಡ್ತಿವೆ. ಹಾಸಿಗೆ ತಯಾರಿಸಿದ ಏರ್‌ವ್ಯೂ ಕಂಪನಿ ಕೂಡ ಈ ಮಂಚದ ಮೇಲೆ ಸಂಭೋಗ ಬೆಳೆಸಬಹುದು ಎಂಬ ಭರವಸೆ ನೀಡಿದೆ.

ಮನೆ ಬಾಡಿಗೆ ಉಳಿಸಲು ಈಕೆ ಮಾಡಿದ ಕೆಲಸ ಕೇಳಿದ್ರೆ ದಂಗಾಗ್ತಿರಾ…!

Posted: 13 Jan 2020 12:20 AM PST

Scotland Student converting 35-year-old campervan into her new home

ಮನೆಯಿಂದ ಹೊರಗೆ ಓದಲು ಅಥವಾ ಕೆಲಸಕ್ಕೆ ಬರುವ ಜನರಿಗೆ ಮನೆ ಬಾಡಿಗೆ ಒಂದು ದೊಡ್ಡ ಹೊರೆ. ಮನೆಯಲ್ಲಿ ತುಂಬಾ ಸಮಯ ಕಳೆಯದೆ ಹೋದ್ರೂ ಮನೆ ಬಾಡಿಗೆ ನೀಡ್ಲೇಬೇಕು. ಸ್ಕಾಟ್ಲ್ಯಾಂಡ್ ನ 25 ವರ್ಷದ ವಿದ್ಯಾರ್ಥಿನಿ ಕೈಟ್ಲಿನ್ ಕೂಡ ಇದೇ ಸಮಸ್ಯೆ ಎದುರಿಸಿದ್ದಳು.

ಕೈಟ್ಲಿನ್ ಕಾಲೇಜು, ಬೇರೆ ಬೇರೆ ಕೆಲಸಕ್ಕಾಗಿ ದಿನಪೂರ್ತಿ ಮನೆಯಿಂದ ಹೊರಗೆ ಇರ್ತಿದ್ದಳು. ರಾತ್ರಿ ಮಲಗಲು ಮಾತ್ರ ಮನೆಗೆ ಬರ್ತಿದ್ದಳು.ಇಷ್ಟಕ್ಕೆ ಆಕೆ ತಿಂಗಳಿಗೆ 25 ಸಾವಿರ ರೂಪಾಯಿ ನೀಡಬೇಕಾಗಿತ್ತು. ಇದ್ರಿಂದ ಬೇಸರಗೊಂಡಿದ್ದ ಕೈಟ್ಲಿನ್ ಹೊಸ ಪ್ಲಾನ್ ಮಾಡಿದ್ಲು. ವ್ಯಾನ್ ಒಂದನ್ನು ತನ್ನ ಮನೆ ಮಾಡಿಕೊಂಡಿದ್ದಾಳೆ.

ವ್ಯಾನ್ ಚಲಿಸುವ ತನ್ನ ಮನೆ ಎನ್ನುತ್ತಾಳೆ ಕೈಟ್ಲಿನ್. ಸಾಕು ನಾಯಿ ಜೊತೆ ಇದೇ ವ್ಯಾನ್ ನಲ್ಲಿ ನೆದರ್ ಲ್ಯಾಂಡ್ ಗೆ ಹೋಗಿದ್ದಳಂತೆ. ಕಾಲೇಜು ಮುಗಿದ ಮೇಲೆ ಇಂಗ್ಲೆಂಡ್, ಯುರೋಪ್ ಸುತ್ತುವ ಪ್ಲಾನ್ ಇದೆಯಂತೆ. ವ್ಯಾನ್ ನಲ್ಲಿಯೇ ಸಣ್ಣ ಕಿಚನ್ ಫಿಕ್ಸ್ ಮಾಡುವ ಪ್ಲಾನ್ ಇದೆಯಂತೆ. ಕೈಟ್ಲಿನ್ ಬಾಯ್ ಫ್ರೆಂಡ್ ಗೂ ವ್ಯಾನ್ ಮನೆ ಇಷ್ಟವಾಗಿದೆಯಂತೆ. ಬಾಡಿಗೆಯಿಲ್ಲದೆ ಅಷ್ಟು ಹಣವನ್ನು ಉಳಿತಾಯ ಮಾಡ್ತಿದ್ದೇನೆ ಎನ್ನುತ್ತಾಳೆ ಕೈಟ್ಲಿನ್.

ಜ್ವಾಲಾಮುಖಿ ಸ್ಫೋಟ: 6 ಸಾವಿರ ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Posted: 13 Jan 2020 12:12 AM PST

ಫಿಲಿಪ್ಪೀನ್ ರಾಜಧಾನಿ ಮನಿಲಾದಲ್ಲಿರುವ ಕೆರೆಯೊಂದರಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಸಹಸ್ರಾರು ಜನರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅಲ್ಲಿನ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಜ್ವಾಲಾಮುಖಿ, ಭೂಕಂಪಗಳ ಅಧ್ಯಯನ ಕೇಂದ್ರವು ತಿಳಿಸಿರುವಂತೆ, ತಾಲ್ ಹೆಸರಿನ ಈ ಜ್ವಾಲಾಮುಖಿಯು ಮನಿಲಾದ ದಕ್ಷಿಣದಲ್ಲಿರುವ ಬಟಂಗಾಸ್ ಪ್ರಾಂತ್ಯದಲ್ಲಿ ಭಾರೀ ಹೊಗೆ ಏಳಿಸುತ್ತಾ ಸುತ್ತಲಿನ 10-15 ಕಿಮೀಗಳವರೆಗೂ ವ್ಯಾಪಿಸಿದೆಯಂತೆ.

ಕೆರೆಯ ಮಧ್ಯದಲ್ಲಿರುವ ದ್ವೀಪವೊಂದರಲ್ಲಿ ನೆಲೆಸಿದ್ದ 6000 ಮಂದಿಯನ್ನು ರಕ್ಷಿಸಲು ಅಲ್ಲಿನ ಆಡಳಿತ ಮುಂದಾಗಿದ್ದು, ಸುತ್ತಮುತ್ತಲಿನ ಕರಾವಳಿ ಪ್ರದೇಶಗಳಲ್ಲಿರುವ ಹತ್ತಾರು ಸಾವಿರ ಮಂದಿಯೂ ಸಹ ಸುರಕ್ಷಿತ ಜಾಗಗಳಿಗೆ ತೆರಳಿದ್ದಾರೆ.

ಈ ಕ್ರಿಕೆಟಿಗನಿಂದ ಮಾನಸಿಕ ಸ್ಥೈರ್ಯ ಕಲಿತಿದ್ದಾರಂತೆ ಅಜಿಂಕ್ಯಾ ರೆಹಾನೆ

Posted: 13 Jan 2020 12:09 AM PST

ಕಠಿಣ ಪರಿಸ್ಥಿತಿಗಳನ್ನೆದುರಿಸಲು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ವಾ ತೋರುತ್ತಿದ್ದ ಮಾನಸಿಕ ಗಟ್ಟಿತನ ಹಾಗೂ ಸಮಚಿತ್ತತೆಯನ್ನು ಭಾರತ ತಂಡದ ಆಟಗಾರ ಅಜಿಂಕ್ಯಾ ರೆಹಾನೆ ಬಹಳ ಇಷ್ಟಪಡುತ್ತಾರಂತೆ.

168 ಟೆಸ್ಟ್‌ ಹಾಗೂ 325 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿರುವ 54 ವರ್ಷದ ಮಾಜಿ ನಾಯಕನೊಂದಿಗೆ ತೆಗೆಸಿಕೊಂಡ ಚಿತ್ರವೊಂದನ್ನು ರೆಹಾನೆ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಶೇರ್‌ ಮಾಡಿಕೊಂಡಿ‌ದ್ದಾರೆ.

ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿರುವ ಭಾರತ ತಂಡದ ಭಾಗವಾಗಿ ರಹಾನೆ ಆಯ್ಕೆಯಾಗಿಲ್ಲ.

ಬದಲಾಗಿ ಅವರು ನ್ಯೂಜಿಲೆಂಡ್ ತಂಡದ ವಿರುದ್ಧ ಫೆಬ್ರವರಿ 7-10ರ ನಡುವೆ ನಡೆಯಲಿರುವ ನಾಲ್ಕು ದಿನಗಳ ಪಂದ್ಯದಲ್ಲಿ ಭಾರತ 'ಎ' ತಂಡವನ್ನು ಪ್ರತಿನಿಧಿಸಲಿದ್ದಾರೆ.

ದೈಹಿಕ ಕಸರತ್ತಿನ ವಿಡಿಯೋ ಶೇರ್ ಮಾಡಿದ ಮಲ್ಲಿಕಾ

Posted: 12 Jan 2020 11:39 PM PST

ಬಾಲಿವುಡ್ ನಿಂದ ಇತ್ತೀಚೆಗೆ ಸ್ವಲ್ಪ ದೂರ ಸರಿದಿದ್ದರೂ ಒಂದು ಕಾಲದ ಖ್ಯಾತ ನಟಿ ಮಲ್ಲಿಕಾ ಶೆರಾವತ್ ತನ್ನ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅವರು ಯೋಗ ಮಾಡುತ್ತಿರುವ ದೃಶ್ಯಗಳ ವಿಡಿಯೋ ಜಾಲತಾಣದಲ್ಲಿ ಪೋಸ್ಟ್ ಆಗಿವೆ.

ಇದರಲ್ಲಿ ವೃತ್ತಿಪರ ಯೋಗ ಪಟುವಿನ ಜತೆ ತನ್ನ ದೇಹವನ್ನು ಬಾಗಿಸುವ ಮೂಲಕ ಯೋಗ ಪ್ರದರ್ಶನದಲ್ಲಿ ತೊಡಗಿದ್ದಾರೆ ಮಲ್ಲಿಕಾ ಶೆರಾವತ್.

ಚಿತ್ರರಂಗದಿಂದ ಕೊಂಚ ಮಟ್ಟಿಗೆ ದೂರ ಸರಿದಿದ್ದರೂ ದೈಹಿಕ ಕ್ಷಮತೆ ಬಗ್ಗೆ ಕಾಳಜಿ ವಹಿಸಿರುವುದು ನಟಿಯ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಕಿಕೂ ಶಾರ್ದ, ಕೃಷ್ಣ ಅಭಿಷೇಕ್ ಮತ್ತು ತುಷಾರ್ ಕಪೂರ್‌ ಜತೆ ಕಾಮೆಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಳಿಕ ಬಹಿರಂಗವಾಗಿ ಮಲ್ಲಿಕಾ ಕಾಣಿಸಿಕೊಂಡಿರಲಿಲ್ಲ.