Translate

Sunday, January 12, 2020

Kannada News | Karnataka News | India News

Kannada News | Karnataka News | India News


ಸೋಮವಾರ ಶ್ರೀ ನಂಜುಂಡೇಶ್ವರಸ್ವಾಮಿ ಅನುಗ್ರಹ ಯಾವ ರಾಶಿಗಳಿಗೆ

Posted: 12 Jan 2020 12:00 PM PST

ಮೇಷ ರಾಶಿ:

ನಿಮ್ಮ ತಂದೆಯ ಯಾವುದೇ ಸಲಹೆ ಇಂದು ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಹಣದ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಸಂಗಾತಿ ಬೆಂಬಲ ನೀಡುತ್ತಾರೆ ಹಾಗೂ ಸಹಾಯ ಮಾಡುತ್ತಾರೆ.

ಇಂದು ನೀವು ಒಂದು ಹೃದಯ ಒಡೆಯುವುದನ್ನು ತಪ್ಪಿಸುತ್ತೀರಿ. ಹೊಸ ಯೋಜನೆ ಮತ್ತು ವೆಚ್ಚಗಳನ್ನು ಮುಂದೂಡಿ. ನಿಮ್ಮ ಜೀವನದಲ್ಲಿ ಆಸಕ್ತಿದಾಯಕ ವಿಷಯಗಳು ಸಂಭವಿಸಲು ನೀವು ದೀರ್ಘಕಾಲದಿಂದ ಕಾಯುತ್ತಿದ್ದಲ್ಲಿ ನಿಮಗೆ ಈಗ ಸ್ವಲ್ಪವಾದರೂ ಪರಿಹಾರ ದೊರಕುವುದು ಖಚಿತ.

ಹಾಗೆ, ನೀವು ನಿಮ್ಮ ಸಂಗಾತಿಯ ಮೇಲೆ ಇಂದು ಬಹಳ ಹಣ ಖರ್ಚು ಮಾಡುವಂತೆ ತೋರುತ್ತದೆ, ಆದರೆ ಒಳ್ಳೆಯ ಸಮಯವನ್ನಂತೂ ಹೊಂದಿರುತ್ತೀರಿ.

ಅದೃಷ್ಟ ಸಂಖ್ಯೆ: 1

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

9845626805

ವೃಷಭ ರಾಶಿ:

ಇಂದು ಹಣದ ನಷ್ಟವು ಸಂಭವಿಸಬಹುದು. ಆದ್ದರಿಂದ ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಎಷ್ಟು ಜಾಗರೂಕರಾಗಿರುತ್ತಿರೋ ಅಷ್ಟೇ ನಿಮಗೆ ಉತ್ತಮವಾಗಿರುತ್ತದೆ ಯುವಕರು ಶಾಲಾ ಯೋಜನೆಗಳಲ್ಲಿ ಕೆಲವು ಸಲಹೆ ಪಡೆಯಬಹುದು.

ತಮ್ಮ ಪ್ರೀತಿಪತ್ರರೊಡನೆ ಸಣ್ಣ ಪ್ರಯಾಣ ಕೈಗೊಳ್ಳುವವರು ಅತ್ಯಂತ ಸ್ಮರಣೀಯ ಸಮಯವನ್ನು ಹೊಂದುತ್ತಾರೆ. ಇಂದು ಕೆಲಸದಲ್ಲಿ ನಿಮಗೆ ನಿಜಕ್ಕೂ ಒಳ್ಳೆಯದಾಗಬಹುದು, ಇಂದು ನಿಮ್ಮನ್ನು ದ್ವೇಷಿಸುವವರಿಗೆ “ಹಲೋ” ಎಂದಲ್ಲಿ.

ಅದೃಷ್ಟ ಸಂಖ್ಯೆ: 4

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮಿಥುನ ರಾಶಿ:

ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲ ಅಗತ್ಯವಾದ ವಸ್ತುಗಳ ಮಾತ್ರ ಇಂದು ಖರೀದಿಸಲು ಪ್ರಯತ್ನಿಸಿ. ಕುಟುಂಬದ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವ ಮೂಲಕ ನೀವು ನಿಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುತ್ತೀರಿ.

ಈ ದಿನ ನಿಮ್ಮ ಪ್ರೀತಿ ಜೀವನದ ವಿಚಾರದಲ್ಲಿ ಅಸಾಧಾರಣವಾಗಿದೆ. ಪ್ರೀತಿ ಮಾಡುತ್ತಿರಿ. ನೀವು ದೀರ್ಘಕಾಲದ ಪ್ರಯೋಜನಗಳನ್ನು ಹೊಂದಿರುವ ಯೋಜನೆಗಳ ಮೇಲೆ ಕೆಲಸ ಮಾಡಬೇಕು. ಉಚಿತ ಸಮಯವನ್ನು ಪೂರ್ತಿಯಾಗಿ ಆನಂದಿಸಲು.

ಅದೃಷ್ಟ ಸಂಖ್ಯೆ: 2

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕಟಕ ರಾಶಿ:

ಆಸ್ತಿ ವ್ಯವಹಾರಗಳು ಅಸಾಧಾರಣ ಲಾಭ ತರುತ್ತವೆ. ನಿಮ್ಮ ನೆರವು ಅಗತ್ಯವಿರುವ ಒಬ್ಬ ಸ್ನೇಹಿತರನ್ನು ಭೇಟಿ ಮಾಡಿ. ಪ್ರೇಮ ಜೀವನ ರೋಮಾಂಚಕವಾಗಿರುತ್ತದೆ. ಮಾರುಕಟ್ಟೆ ಕ್ಷೇತ್ರವನ್ನು ಸೇರುವ ಧೀರ್ಘಕಾಲೀನ ಮಹತ್ವಾಕಾಂಕ್ಷೆ ಸಫಲವಾಗಬಹುದು. ಇದು ನಿಮಗೆ ಪ್ರಚಂಡ ಸಂತೋಷ ನೀಡುತ್ತದೆ ಮತ್ತು ನೀವು ಕೆಲಸ ಪಡೆಯುವಾಗ ಎದುರಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇದ್ದಕ್ಕಿದ್ದಂತೆ ಇಂದು ನೀವು ಕೆಲಸದಿಂದ ವಿರಾಮ ತೆಗೆದುಕೊಳ್ಳಲು ಯೋಜಿಸಬಹುದು ಮತ್ತು ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯಬಹುದು. ಈ ದಿನ ನಿಜವಾಗಿಯೂ ಪ್ರೇಮಭರಿತವಾಗಿದೆ. ಒಳ್ಳೆಯ ಆಹಾರ, ಸುಗಂಧ, ಸಂತೋಷಗಳ ಜೊತೆ ನೀವು ನಿಮ್ಮ ಅರ್ಧಾಂಗಿಯ ಜೊತೆ ಒಳ್ಳೆಯ ಸಮಯ ಕಳೆಯುತ್ತೀರಿ.

ಅದೃಷ್ಟ ಸಂಖ್ಯೆ: 9

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಸಿಂಹ ರಾಶಿ :

ನಿಮ್ಮ ಅನುಮಾನದ ಪ್ರಕೃತಿ ನಿಮಗೆ ಸೋಲಿನ ಮುಖ ತೋರಿಸಬಹುದು. ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆ ವಹಿಸಿ. ನಿಮಗೆ ಕೆಟ್ಟ ಹವ್ಯಾಸಗಳ ಪ್ರಭಾವ ಬೀರಬಹುದಾದ ಕೆಟ್ಟ ಜನರಿಂದ ದೂರವಿರಿ.

ನಿಮ್ಮ ನಗು ಯಾವುದೇ ಅರ್ಥ ಹೊಂದಿಲ್ಲ – ನಗುವಿಗೆ ಧ್ವನಿಯಿಲ್ಲ – ನಿಮ್ಮ ಸಂಗವಿಲ್ಲದಿದ್ದಾಗ ಹೃದಯ ಬಡಿಯುವುದನ್ನು ಮರೆಯುತ್ತದೆ. ನೀವು ಕೆಲಸದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ ಮತ್ತು ಪ್ರಭಾವವನ್ನು ಬಳಸಬೇಕಾಗುತ್ತದೆ.

ನಿಮ್ಮ ಸಂವಹನ ಕೌಶಲಗಳನ್ನು ಪರಿಣಾಮಕಾರಿ ಎಂದು. ನಿಮ್ಮ ಸಂಗಾತಿಯು ಇಂದು ನಿಮ್ಮ ಅಗತ್ಯಗಳನ್ನು ಅಂತಿಮವಾಗಿ ಪೂರೈಸಲು ನಿರಾಕರಿಸಬಹುದು ಹಾಗೂ ಇದು ಅಂತಿಮವಾಗಿ ನಿಮ್ಮನ್ನು ನಿರಾಶೆಗೊಳಿಸುತ್ತದೆ.

ಅದೃಷ್ಟ ಸಂಖ್ಯೆ: 1

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕನ್ಯಾ ರಾಶಿ:

ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ತನ್ನಿ. ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ದಿನ ನಿಕಟ ಸಂಬಂಧಿಗಳು ಅಥವಾ ಸ್ನೇಹಿತರಿಂದ ಉತ್ತಮ ಸುದ್ದಿಯೊಡನೆ ಆರಂಭವಾಗುತ್ತದೆ.

ನಿಮ್ಮ ಧೈರ್ಯ ಪ್ರೀತಿಯನ್ನು ಗೆಲ್ಲಬಹುದು. ನಿಮ್ಮ ಬಾಸ್ ಮತ್ತು ಹಿರಿಯರನ್ನು ನಿಮ್ಮಲ್ಲಿ ಆಮಂತ್ರಿಸಲು ಒಳ್ಳೆಯ ದಿನವಲ್ಲ. ಮನೆಯಿಂದ ಹೊರಗೆ ವಾಸಿಸುವವರು, ಇಂದು ಅವರು ತಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಸಂಜೆಯ ವೇಳೆಯಲ್ಲಿ ಯಾವುದೇ ಉದ್ಯಾನವನ ಅಥವಾ ಏಕಾಂತ ಸ್ಥಳದಲ್ಲಿ ಸಮಯ ಕಳೆಯಲು ಇಷ್ಟಪಡುತ್ತಾರೆ. ಮದುವೆ ಮೊದಲೆಂದೂ ಇಂದಿಗಿಂತ ಹೆಚ್ಚು ಅದ್ಭುತವಾಗಿರಲಿಲ್ಲ.

ಅದೃಷ್ಟ ಸಂಖ್ಯೆ: 3

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ತುಲಾ ರಾಶಿ:

ಮಕ್ಕಳು ನಿಮ್ಮ ದಿನವನ್ನು ಕಠಿಣಗೊಳಿಸುತ್ತಾರೆ. ಅವರ ಆಸಕ್ತಿ ಕಾಯ್ದುಕೊಳ್ಳಲು ಪ್ರೀತಿಯ ಅಸ್ತ್ರ ಬಳಸಿ ಮತ್ತು ಯಾವುದೇ ಅನಗತ್ಯ ಒತ್ತಡ ತಪ್ಪಿಸಿ. ಪ್ರೀತಿಯಿಂದ ಪ್ರೀತ ಜನಿಸುತ್ತದೆಂದು ನೆನಪಿಡಿ. ನಿಮ್ಮ ಸಂಗಾತಿಯ ಕುಟುಂಬದ ಸದಸ್ಯರ ಅಡ್ಡಿಯ ಕಾರಣದಿಂದ ನಿಮ್ಮ ದಿನ ಸ್ವಲ್ಪ ಏರುಪೇರಾಗಬಹುದು.

ಇಂದು ಮಾಡಿದ ಹೂಡಿಕೆ ಲಾಭದಾಯಕವಾಗಿದ್ದರೂ ನೀವು ಬಹುಶಃ ಪಾಲುದಾರರಿಂದ ವಿರೋಧ ಎದುರಿಸುತ್ತೀರಿ. ಇವತ್ತು ನಿಮಗೆ ಹೇಗೆನಿಸುತ್ತಿದೆಯೆಂದು ಇತರರಿಗೆ ತಿಳಿಸುವ ಉತ್ಸಾಹವನ್ನು ನಿಯಂತ್ರಿಸಿ. ಒಬ್ಬ ಸಂಬಂಧಿ, ಸ್ನೇಹಿತರು, ಅಥವಾ ನೆರೆಯವರು ಇಂದು ನಿಮ್ಮ ವೈವಾಹಿಕ ಜೀವನಕ್ಕೆ ಆತಂಕವುಂಟುಮಾಡಬಹುದು.

ಅದೃಷ್ಟ ಸಂಖ್ಯೆ: 8

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ವೃಶ್ಚಿಕ ರಾಶಿ:

ಕೋಪ ಭುಗಿಲೇಳುವುದನ್ನು ತಪ್ಪಿಸಲು ಅವಳ ಅನುಮತಿ ತೆಗೆದುಕೊಳ್ಳಿ. ನೀವು ಸುಲಭವಾಗಿ ಸಮಸ್ಯೆಯನ್ನು ತಪ್ಪಿಸಬಹುದು. ಪ್ರೀತಿಯ ಸಂಗೀತವನ್ನು ಯಾವಾಗಲೂ ಅದರಲ್ಲೇ ಮುಳುಗಿರುವವರು ಕೇಳಬಹುದು. ಇದು ನೀವು ಈ ಪ್ರಪಂಚದ ಎಲ್ಲಾ ಹಾಡುಗಳನ್ನು ಮರೆಯುವಂತೆ ಮಾಡುತ್ತದೆ.

ಕೆಲಸದ ಒತ್ತಡ ಇನ್ನೂ ನಿಮ್ಮ ಮನಸ್ಸನ್ನು ಆವರಿಸುತ್ತದೆ ಹಾಗೂ ಇದು ಕುಟುಂಬ ಮತ್ತು ಸ್ನೇಹಿತರಿಗೆ ಯಾವುದೇ ಸಮಯವಿಲ್ಲದಂತೆ ಮಾಡುತ್ತದೆ. ಉಚಿತ ಸಮಯದಲ್ಲಿ ಯಾವುದೇ ಪುಸ್ತಕವನ್ನು ಓದಬಹುದು. ಆದಾಗ್ಯೂ ನಿಮ್ಮ ಮನೆಯ ಉಳಿದ ಸದಸ್ಯರು ನಿಮ್ಮ ಏಕಾಗ್ರತೆಗೆ ಭಂಗ ಉಂಟುಮಾಡಬಹುದು. ನೀವು ಮತ್ತು ನಿಮ್ಮ ಸಂಗಾತಿ ಇತ್ತೀಚಿನ ದಿನಗಳಲ್ಲಿ ಬಹಳ ಸಂತೋಷದಿಂದಿಲ್ಲದಿದ್ದರೆ, ನೀವಿಂದು ಹುಚ್ಚು ಮೋಜನ್ನು ಹೊಂದಲಿದ್ದೀರಿ.

ಅದೃಷ್ಟ ಸಂಖ್ಯೆ: 1

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಧನುಸ್ಸು ರಾಶಿ:

ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿದ್ದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಕುಟುಂಬದ ಸದಸ್ಯರ ಖುಷಿಯ ಸ್ವಭಾವ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸುತ್ತದೆ. ಇತರರ ಹಸ್ತಕ್ಷೇಪ ವ್ಯಾಜ್ಯವುಂಟುಮಾಡುತ್ತದೆ.

ನಿಮ್ಮ ಕೆಲಸದ ಪರಿಸರ ಇಂದು ಒಳ್ಳೆಯದಕ್ಕೆ ಬದಲಾಯಿಸಬಹುದು. ನಿಮ್ಮ ಭಾರೀ ಆತ್ಮವಿಶ್ವಾಸದ ಲಾಭ ತೆಗೆದುಕೊಳ್ಳಿ ಮತ್ತು ಕೆಲವು ಹೊಸ ಗೆಳೆಯರು ಮತ್ತು ಸ್ನೇಹಿತರನ್ನು ಸಂಪಾದಿಸಿ. ನಿಮ್ಮ ಸಂಗಾತಿ ನಿಮ್ಮ ಜೊತೆಗಿರುವ ಬಗ್ಗೆ ನಿಮಗೆ ಕೆಲವು ಅಷ್ಟೇನೂ ಒಳ್ಳೆಯದಲ್ಲದ ವಿಷಯಗಳನ್ನು ಹೇಳಬಹುದು.

ಅದೃಷ್ಟ ಸಂಖ್ಯೆ: 2

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮಕರ ರಾಶಿ:

ಕೆಲವು ದುಃಖದ ಸಮಯದಲ್ಲಿ ನೀವು ಸಂಗ್ರಹಿಸುವ ಹಣ ಮಾತ್ರ ನಿಮ್ಮ ಕೆಲಸಕ್ಕೆ ಬರುತ್ತದೆ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಆದ್ದರಿಂದ ಇಂದು ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ಸ್ನೇಹಿತರು ಉಪಯುಕ್ತವಾಗಿರುತ್ತಾರೆ ಮತ್ತು ಹೆಚ್ಚು ಬೆಂಬಲ ನೀಡುತ್ತಾರೆ.

ಇಂದು ನಿಮ್ಮ ಪ್ರೀತಿಯ ಜೀವನದಲ್ಲಿ ಅದ್ಭುತ ದಿನವಾಗಿದೆ. ಹೊಸ ವಿಚಾರಗಳನ್ನು ಉತ್ಪಾದಕವಾಗಿರುತ್ತವೆ. ಇಲ್ಲಿಯವರೆಗೆ ಕೆಲವು ಕೆಲಸಗಳಲ್ಲಿ ನಿರತರಾಗಿರುವವರು ತಮಗಾಗಿ ಸಮಯವನ್ನು ಕಂಡುಕೊಳ್ಳಬಹುದು ಆದರೆ ಯಾವುದೇ ಕೆಲಸ ಬರುವುದರಿಂದ ನೀವು ಮತ್ತೆ ನಿರತರಾಗಿರಬಹುದು.

ಅದೃಷ್ಟ ಸಂಖ್ಯೆ: 5

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಕುಂಭ ರಾಶಿ:

ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯ ದಿನ. ಸ್ವಲ್ಪ ಸಂಘರ್ಷದ ಹೊರತಾಗಿಯೂ, ನಿಮ್ಮ ಪ್ರೀತಿಯ ಜೀವನವು ಇಂದು ಉತ್ತಮವಾಗಿರುತ್ತದೆ ಮತ್ತು ನೀವು ನಿಮ್ಮ ಸಂಗಾತಿಯನ್ನು ಸಂತೋಷವಾಗಿಡಲು ಯಶಸ್ವಿಯಾಗುತ್ತೀರಿ ನೀವು ನಿರಾಸೆ ಅನುಭವಿಸುತ್ತೀರಿ – ಅದೇಕೆಂದರೆ ನೀವು ಬಯಸುತ್ತಿದ್ದ ಗುರುತಿಸುವಿಕೆ ಮತ್ತು ಪ್ರತಿಫಲಗಳು ಮುಂದೂಡಲ್ಪಡುತ್ತವೆ.

ಧರ್ಮಾರ್ಥ ಮತ್ತು ಸಮಾಜ ಸೇವೆ ಇಂದು ನಿಮ್ಮನ್ನು ಸೆಳೆಯುತ್ತವೆ – ನೀವು ಧರ್ಮಾರ್ಥ ಕಾರಣಕ್ಕಾಗಿ ನಿಮ್ಮ ಸಮಯ ವ್ಯಯಿಸಿದಲ್ಲಿ ಅಗಾಧವಾದ ವ್ಯತ್ಯಾಸ ಉಂಟುಮಾಡಬಹುದು. ಇಂದು, ನೀವು ಒಬ್ಬ ಅದ್ಭುತ ಜೀವನ ಸಂಗಾತಿಯನ್ನು ಪಡೆಯುವುದೆಂದರೇನು ಎಂದು ತಿಳಿದುಕೊಳ್ಳುತ್ತೀರಿ.

ಅದೃಷ್ಟ ಸಂಖ್ಯೆ: 1

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ಮೀನ ರಾಶಿ:

ಕೆಲವು ದುಃಖದ ಸಮಯದಲ್ಲಿ ನೀವು ಸಂಗ್ರಹಿಸುವ ಹಣ ಮಾತ್ರ ನಿಮ್ಮ ಕೆಲಸಕ್ಕೆ ಬರುತ್ತದೆ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಆದ್ದರಿಂದ ಇಂದು ಹಣವನ್ನು ಸಂಗ್ರಹಿಸುವ ಬಗ್ಗೆ ಆಲೋಚಿಸಿ. ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು.

ನ್ಯಾಯಯುತವಾದ ಮತ್ತು ಉದಾರ ಪ್ರೀತಿಯಿಂದ ಪುರಸ್ಕೃತಗೊಳ್ಳುವ ಸಾಧ್ಯತೆಯಿದೆ. ಇಂದು ನಿಮ್ಮ ಹೃದಯ ಬಡಿತವು ನಿಮ್ಮ ಸಂಗಾತಿಯೊಡನೆ ಲಯದಲ್ಲಿ ಪ್ರೀತಿಯ ಸಂಗೀತವನ್ನು ನುಡಿಸುತ್ತದೆ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ.

ಅದೃಷ್ಟ ಸಂಖ್ಯೆ: 8

ಸಲಹೆ ಮತ್ತು ಪರಿಹಾರ ತಿಳಿಯಲು : ಪ: ಅನಂತ್ ಪ್ರಸಾದ್ ಶರ್ಮ( ಕೊಲ್ಲೂರು) 9845626805

ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರ್, ನಾಲ್ವರ ಸಾವು

Posted: 12 Jan 2020 06:16 AM PST

ಬೆಂಗಳೂರು ದಕ್ಷಿಣ ತಾಲ್ಲೂಕಿನ ದೇವಮಾಚೋಹಳ್ಳಿ ಸಮೀಪ ಕೆರೆಗೆ ಕಾರು ಉರುಳಿ ಬಿದ್ದು ನಾಲ್ವರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಮಂಜು, ರಘು, ಸುನಿಲ್, ಸಂತೋಷ್ ಮೃತಪಟ್ಟವರೆಂದು ಹೇಳಲಾಗಿದೆ. ಬೆಂಗಳೂರಿನಿಂದ ಹುಲಿಯೂರು ದುರ್ಗಕ್ಕೆ ತೆರಳುತ್ತಿದ್ದ ವೇಳೆ ದುರಂತ ನಡೆದಿದೆ. ಅತಿ ವೇಗವಾಗಿ ಬಂದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ.

ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಚಿಕ್ಕಮ್ಮನ ಸೆಕ್ಸ್ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಸೊಸೆ ಮೇಲೆ ಅತ್ಯಾಚಾರ

Posted: 12 Jan 2020 05:56 AM PST

ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಸಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಲು ಕಾರಣನಾದ 26 ವರ್ಷದ ಯುವಕನನ್ನು ಮುಂಬೈನ ಬಂಗೂರ್ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಅಜ್ಮಲ್ ಲಷ್ಕರ್ ಅಲಿಯಾಸ್ ಆಶಿಶ್ ದುಬೆ ಬಂಧಿತ ಆರೋಪಿ. ಬಾಲಕಿಯ ಆಂಟಿಯಾಗಿರುವ 23 ವರ್ಷದ ಮಹಿಳೆಯನ್ನು ವಿವಾಹವಾಗುವುದಾಗಿ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಗೆ ಗೊತ್ತಿಲ್ಲದಂತೆ ವಿಡಿಯೋ ಮಾಡಿಕೊಂಡಿದ್ದಾನೆ.

ಅತ್ಯಾಚಾರದ ದೃಶ್ಯ ಸೆರೆ ಹಿಡಿದಿದ್ದ ಆಶಿಶ್ ಅದನ್ನು ಬಹಿರಂಗಪಡಿಸುವುದಾಗಿ ಮಹಿಳೆಯ ಸೋದರ ಸೊಸೆ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಲು ಕಾರಣಾಗಿದ್ದಾನೆ. ಬಂಗೂರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಪನಗರ ಖಾರ್ ನಿಂದ ಆತನನ್ನು ಬಂಧಿಸಲಾಗಿದೆ. ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕೇಸ್ ದಾಖಲಿಸಲಾಗಿದೆ. ಅಸ್ಸಾಂ ಮೂಲದ ಆರೋಪಿ ಪಾರ್ಟಿಯೊಂದರಲ್ಲಿ ಮಹಿಳೆ ಮತ್ತು ಆಕೆಯ ಸೊಸೆಗೆ ಪರಿಚಿತನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ

ಶಾಪಿಂಗ್‌ ಗೆ ಬಿಟ್ಟು ಹೋಗಿದ್ದಕ್ಕೆ ಹಾರ್ನ್ ಹಾಕಿ ಕರೆದ ಶ್ವಾನ…!

Posted: 12 Jan 2020 04:53 AM PST

ಮಾಲೀಕ ತನ್ನನ್ನು ಕಾರಲ್ಲೇ ಬಿಟ್ಟು ಹೋಗಿದ್ದಕ್ಕೆ ನಾಯಿಯೊಂದು ಹಾರ್ನ್ ಹಾಕಿ ಆತ ಬರುವಂತೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

ನಾಯಿ ಹಾರ್ನ್ ಹಾಕುತ್ತಲೇ ಇದ್ದಿದ್ದರಿಂದ ಆತ ಬೇಗ ಬಂದು ಬಾಗಿಲು ತೆಗೆಯಬೇಕಾದ ಪ್ರಸಂಗ ನಡೆದಿತ್ತು.

ದಕ್ಷಿಣ ಮೆಲ್ಬೋರ್ನ್‌ನ ಮಾರ್ನಿಂಗ್ಟನ್ ಸ್ಟ್ರೀಟ್‌ನಲ್ಲಿ ವೃತ್ತಿಪರ ಸೈಕ್ಲಿಸ್ಟ್ ಸ್ಟೀಲ್ ವೊನ್ ಹಾಫ್ ಈ ವಿಡಿಯೋ ಮಾಡಿ ಹಂಚಿಕೊಂಡಿದ್ದರು.

ತನಿಖೆಯಲ್ಲಿ ಬಯಲಾಯ್ತು ಅಪಘಾತಕ್ಕೀಡಾದ ಲಾರಿಯಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಮದ್ಯ ಕಳುವಾದ ರಹಸ್ಯ

Posted: 12 Jan 2020 04:43 AM PST

ತುಮಕೂರು ಜಿಲ್ಲೆ ಸಿರಾ ತಾಲೂಕು ಕಳ್ಳಂಬೆಳ್ಳ ಠಾಣೆ ಪೊಲೀಸರು 20 ಲಕ್ಷ ರೂಪಾಯಿ ಮೌಲ್ಯದ ಮದ್ಯ ದೋಚಿದ್ದ ಲಾರಿ ಚಾಲಕನನ್ನು ಬಂಧಿಸಿದ್ದಾರೆ.

ಅಬಕಾರಿ ಇಲಾಖೆಗೆ ಸೇರಿದ ಮದ್ಯದ ಬಾಕ್ಸ್ ದೋಚಿದ್ದ ಲಾರಿ ಚಾಲಕ ಲಾರಿ ಅಪಘಾತವಾಗಿದೆ ಎನ್ನುವಂತೆ ಬಿಂಬಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

ನೆಲಮಂಗಲ ತಾಲೂಕು ಮಾರೋಹಳ್ಳಿಯಿಂದ ವಿವಿಧ ಬಗೆಯ 550 ಮದ್ಯದ ಬಾಕ್ಸ್ ಗಳನ್ನು ಲಾರಿಯಲ್ಲಿ ತುಂಬಿ ಹುಬ್ಬಳ್ಳಿಗೆ ಕಳುಹಿಸಲಾಗುತ್ತಿತ್ತು. ಜನವರಿ 4 ರಂದು ಲಾರಿ ಹೊರಟಿದ್ದು ಚಾಲಕ ತಿಪ್ಪೇಸ್ವಾಮಿ ಶಿರಾ ತಾಲೂಕು ಎಲ್.ಹೆಚ್. ಪಾಳ್ಯ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗೆ ವಾಹನ ಬೀಳಿಸಿ ಅಪಘಾತವಾಗಿದೆ ಎನ್ನುವಂತೆ ಬಿಂಬಿಸಿದ್ದಾನೆ. ಅಪಘಾತವಾದ ಸ್ಥಳದಿಂದ ಮದ್ಯದ ಬಾಕ್ಸ್ ಗಳನ್ನು ಸ್ಥಳೀಯರು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾನೆ.

ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 271 ಮದ್ಯದ ಬಾಕ್ಸ್ ದೋಚಿರುವುದು ಗೊತ್ತಾಗಿದ್ದು ಸಿರಾ ಕಳ್ಳಂಬೆಳ್ಳ ಪೊಲೀಸರು ತನಿಖೆ ನಡೆಸಿ ಚಾಲಕ ತಿಪ್ಪೇಸ್ವಾಮಿ ವಿಚಾರಣೆ ನಡೆಸಿದಾಗ ತಾನೇ ಸಹಚರರೊಂದಿಗೆ ಸೇರಿ 271 ಮದ್ಯದ ಬಾಕ್ಸ್ ಇಳಿಸಿ ಬಳಿಕ ಲಾರಿಯನ್ನು ಅಪಘಾತವಾಗಿದೆ ಎನ್ನುವಂತೆ ಬಿಂಬಿಸಿದ್ದಾಗಿ ತಿಳಿಸಿದ್ದಾನೆ. ಆತನನ್ನು ಬಂಧಿಸಿರುವ ಪೊಲೀಸರು ಪರಾರಿಯಾಗಿರುವ ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಅರ್ಹ ಶಾಸಕರಿಗೆ ಸಂಕ್ರಾಂತಿ ಹಬ್ಬದ ಗಿಫ್ಟ್

Posted: 12 Jan 2020 04:18 AM PST

ಕೊಪ್ಪಳ: ಉಪಚುನಾವಣೆಯಲ್ಲಿ ಆಯ್ಕೆಯಾದ ಅರ್ಹ ಶಾಸಕರಿಗೆ ಸಂಕ್ರಾಂತಿ ಬಳಿಕ ಒಳ್ಳೆ ಕಾಲ ಬರಲಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಹರಾಗಿರುವ ಶಾಸಕರಿಗೆ ಸಂಕ್ರಾಂತಿ ನಂತರ ಒಳ್ಳೆ ಕಾಲ ಬರುತ್ತೆ. ಈ ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ಸಿಎಂ ತೀರ್ಮಾನ ಕೈಗೊಳ್ಳಲಿದ್ದಾರೆ. ಮಾಜಿ ಸಿಎಂಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೊಳಕು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ಹುಳುಕು ಹೊರ ತೆಗೆಯುವುದಾಗಿ ಹೇಳಿದ್ದಾರೆ.

ಮೋದಿ ಮೋದಿ ಎಂದು ಕೂಗುವುದು ಫ್ಯಾಷನ್ ಆಗಿದೆ: ಜಾತ್ರೆಯಲ್ಲೂ ಮೋದಿ ಅಂದ್ರೆ ಏನು ಪ್ರಯೋಜನ…?

Posted: 12 Jan 2020 04:05 AM PST

ಕೊಪ್ಪಳ: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇಂತಹ ಕೊಳಕು ಹೇಳಿಕೆ ನೀಡಬಾರದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೀಡಿದ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಬೇಜವಾಬ್ದಾರಿ ಹೇಳಿಕೆ ಕೊಡುವವರಿಗೆಲ್ಲ ಉತ್ತರ ಕೊಡಬಾರದು. ಕೊಳಕು ಅಂದರೆ ಏನು? ಆಡಳಿತರೂಢ ಸರ್ಕಾರದ ತಪ್ಪುಗಳನ್ನು ತೋರಿಸಿದರೆ ತಪ್ಪಾ ಎಂದು ಪ್ರಶ್ನಿಸಿದ್ದಾರೆ.

ತಪ್ಪುಗಳನ್ನು ತೋರಿಸದೆ ಮುತ್ತು ಕೊಡಬೇಕಾ? ಅವರ ಬಳಿ ಸಿಡಿ ಇದ್ದರೆ ಬಿಡುಗಡೆ ಮಾಡಲಿ. ಮೋದಿ ಮೋದಿ ಎಂದು ಕೂಗುವುದು ಫ್ಯಾಶನ್ ಆಗೋಗಿದೆ. ಆರೆಸ್ಸೆಸ್ಸಿನವರು ಇದನ್ನು ಫ್ಯಾಶನ್ ಮಾಡಿಕೊಂಡಿದ್ದಾರೆ. ಜಾತ್ರೆಯಲ್ಲೂ ಮೋದಿ ಎಂದು ಕೂಗಿದರೆ ಏನು ಪ್ರಯೋಜನ? ಅವರಿಗೆ ರಾಜಕೀಯ ಗಂಧಗಾಳಿ ಇಲ್ಲ. ಬ್ಲೂ ಫಿಲಂ ನೋಡುವವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಪರೋಕ್ಷವಾಗಿ ಸವದಿಗೆ ಟಾಂಗ್ ನೀಡಿದ್ದಾರೆ.

ನಾನು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರ ಇಲ್ಲವೆಂದು ನನಗೇನು ಭ್ರಮನಿರಸನ ಆಗಿಲ್ಲ ಎಂದು ಹೇಳಿದ್ದಾರೆ.

ಸಿಎಎ ಬೆಂಬಲಿಸಿ ಮೋದಿಗೆ ಪೋಸ್ಟ್ ಕಾರ್ಡ್ ಮೂಲಕ ಧನ್ಯವಾದ

Posted: 12 Jan 2020 03:42 AM PST

ಪೌರತ್ವ ತಿದ್ದಪಡಿ ಕಾಯ್ದೆ ಜಾರಿಗೆ ತಂದ ಬೆನ್ನಲ್ಲೇ ಇದನ್ನು ವಿರೋಧಿಸಿ ಅನೇಕ ಕಡೆ ಪ್ರತಿಭಟನೆ ನಡೆದಿವೆ. ಇದನ್ನು ಜಾರಿಗೆ ತರದಂತೆ ಸಾಕಷ್ಟು ಮಂದಿ ಇಂದಿಗೂ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.

ಇದರ ನಡುವೆ ಅನೇಕ ಮಂದಿ ಸಿಎಎ ಪರ ಕೂಡ ಮಾತನಾಡಿದ್ದಾರೆ. ಇದೀಗ ಇದನ್ನು ಬೆಂಬಲಿಸಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಹೌದು, ಗುಜರಾತ್‌ನ ಅಹಮದಬಾದ್ ನಿವಾಸಿಗಳು ಸಿಎಎ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಹೀಗಾಗಿ 5.5 ಲಕ್ಷಕ್ಕಿಂತ ಹೆಚ್ಚಿನ ಪೋಸ್ಟ್‌ಕಾರ್ಡ್‌ಗಳಲ್ಲಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಪೋಸ್ಟ್ ಕಾರ್ಡ್‌ಗಳನ್ನು ಅಹಮದಬಾದ್‌ನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅನಾವರಣಗೊಳಿಸಿದ್ದಾರೆ. ಎಲ್ಲಾ ಪೋಸ್ಟ್ ಕಾರ್ಡ್ ಬಳಕೆ ಮಾಡಿಕೊಂಡು ದೊಡ್ಡದಾಗಿ ಸಿಎಎ ಎಂದು ಬರೆಯಲಾಗಿತ್ತು.

ಹೀಗೆ ವಿಭಿನ್ನವಾಗಿ ಜೋಡಿಸಲಾದ ಈ ಕಾರ್ಡ್‌ಗಳನ್ನು ಅಮಿತ್ ಶಾ ಅನಾವರಣಗೊಳಿಸಿದ್ದು, ಈ ಪೋಸ್ಟ್ ಕಾರ್ಡ್ ವಿನ್ಯಾಸ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮತ್ತು ಭಾರತದ ದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆಯಂತೆ. ಈ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರಿಗೆ ಇದೊಂದು ಉತ್ತರ ಎಂದಿದ್ದಾರೆ ಅಮಿತ್ ಶಾ.

ನಾವು ಕೆಲಸಕ್ಕೂ ಸೈ, ರಂಜಿಸೋದಿಕ್ಕೂ ಜೈ ಎಂದ ಪೊಲೀಸ್

Posted: 12 Jan 2020 03:38 AM PST

ಪೊಲೀಸ್ ಅಂದರೆ ಭಯ. ಅವರನ್ನು ನೋಡಿದರೆ ಸಾಕು ಭಯದ ವಾತಾವರಣ ಸೃಷ್ಟಿಯಾಗೋದು ಗ್ಯಾರಂಟಿ. ಅದರಲ್ಲೂ ಮಕ್ಕಳು ಪೊಲೀಸ್ ಎಂದರೆ ಸಾಕು ಒಮ್ಮೊಮ್ಮೆ ಬೆಚ್ಚಿ ಬೀಳುತ್ತಾರೆ.

ಹೀಗಿರುವಾಗ ಅದೇ ಪೊಲೀಸ್ ವೇದಿಕೆ ಮೇಲೆ ಬಂದು ನೆರೆದವರಿಗೆ ರಂಜಿಸಿದರೆ ಹೇಗಿರುತ್ತೆ..? ಇಂತಹದ್ದೇ ಘಟನೆಯೊಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಡೆದಿದೆ.

ಹೌದು, ಎರಡು ದಿನಗಳ ಕಾಲ ಆನೆಗೊಂದಿ ಉತ್ಸವ ನಡೆದಿದೆ. ಈ ವೇದಿಕೆಯಲ್ಲಿ ಪಿಎಸ್‌ಐ ಒಬ್ಬರು ನನ್ನ ಗೆಳತಿ ನನ್ನ ಗೆಳತಿ ಎಂಬ ಹಾಡನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದ್ದಾರೆ.

ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿರುವ ದೊಡ್ಡಪ್ಪ ಎನ್ನುವವರು ಈ ಹಾಡು ಹೇಳಿದ್ದು ಅಲ್ಲಿದ್ದ ಅಧಿಕಾರಿಗಳು ಇವರ ಹಾಡಿಗೆ ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದ್ದಾರೆ.

ಇನ್ನು ಇವರ ಈ ಹಾಡಿಗೆ ಅಲ್ಲಿ ನೆರೆದಿದ್ದ ಅಧಿಕಾರಿಗಳು ಕೂಡ ಸ್ಟೆಪ್ ಹಾಕುವ ಮೂಲಕ ನಾವು ಕೆಲಸಕ್ಕೆ ಅಷ್ಟೆ ಅಲ್ಲ ರಂಜಿಸೋದಕ್ಕು ಸೈ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದವರು ಪಿಎಸ್‌ಐ ಹಾಡಿಗೆ ಫಿದಾ ಆಗಿದ್ದಾರೆ.

ಸಂಕ್ರಾಂತಿ ಹಬ್ಬಕ್ಕೆ ‘ರಾಬರ್ಟ್’ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ

Posted: 12 Jan 2020 03:36 AM PST

ವರ್ಷಕ್ಕೆ ಮೂರು ಸಿನಿಮಾ ಮಾಡುತ್ತಾ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ರಾಬರ್ಟ್ ಸಿನಿಮಾದ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಅನ್ನು ಸಂಕ್ರಾಂತಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ.

ಫಸ್ಟ್ ಲುಕ್ ಮೋಷನ್ ಪೋಸ್ಟರ್  ನಲ್ಲಿ ದರ್ಶನ್ ಅವರ ಹೊಸ ಲುಕ್ ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಿಸಿದೆ. ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಗೂ ಸಜ್ಜಾಗಿದೆ.

ದೀಪಿಕಾ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ…?

Posted: 12 Jan 2020 03:34 AM PST

ದೀಪಿಕಾ ಪಡುಕೋಣೆ ಅಭಿನಯದ ಭಾರೀ ಸುದ್ದಿಯಲ್ಲಿರುವ ಚಪಾಕ್ ನಿರೀಕ್ಷಿತ ಪ್ರಮಾಣದ ಗಳಿಕೆ ಕಂಡಿಲ್ಲ.

ಜ. 11ರಂದು ತೆರೆಕಂಡ ಈ ಸಿನಿಮಾದ ಮೊದಲ ದಿನದ ಒಟ್ಟು ಗಳಿಕೆ ₹4.77 ಕೋಟಿ. ಆದರೆ ಅಜಯ್ ದೇವಗನ್ ಹಾಗೂ ಕಾಜೋಲ್ ಅಭಿನಯದ ತನ್ಹಾಜಿ ಸಿನಿಮಾವು ಭರ್ಜರಿ ಯಶಸ್ಸು ಕಂಡಿದೆ.

ಚಪಾಕ್ ಸಿನಿಮಾ ಬಗ್ಗೆ ಸಿನಿಮಾ ವಿಮರ್ಶಕ ಹಾಗೂ ಟ್ರೇಡ್ ಅನಾಲಿಸ್ಟ್ ಆಗಿರುವ ತರಣ್ ಆದರ್ಶ್ ಗಳಿಕೆಯ ಮೊತ್ತವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.

ಇವರ ಪ್ರಕಾರ ಈ ಸಿನಿಮಾಗೆ ಸಾಮಾನ್ಯ ಪ್ರತಿಕ್ರಿಯೆ ಲಭ್ಯವಾಗಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲಿ ಚೆನ್ನಾಗಿ ಓಡಿದೆ. ಆದರೆ, ಎರಡನೇ ಹಾಗೂ ಮೂರನೇ ದರ್ಜೆ ನಗರಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸಿನಿಮಾ ಅಷ್ಟಾಗಿ ಉತ್ತಮ ಪ್ರದರ್ಶನ ಕಂಡಿಲ್ಲ.

ಆದರೆ ಇದರ ನಡುವೆ ತೆರೆಕಂಡ ಅಜಯ್ ದೇವಗನ್ ಅಭಿನಯದ ತನ್ಹಾಜಿ ಸಿನಿಮಾದ ಪ್ರಥಮ ದಿನದ ಗಳಿಕೆ ₹15.1 ಕೋಟಿ. ಆದರ್ಶ್ ಪ್ರಕಾರ ಈ ಸಿನಿಮಾಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಲಭ್ಯವಾಗಿದ್ದು, ಮಹಾರಾಷ್ಟ್ರದಲ್ಲಿ ಅಭೂತಪೂರ್ವ ಪ್ರದರ್ಶನ ಕಾಣುತ್ತಿದೆ. 17ನೇ ಶತಮಾನದ ತಾನಾಜಿ ಮಾಲುಸಾರೆ ಅವರ ಜೀವನಾಧಾರಿತ ಕಥೆ ಇದಾಗಿದೆ.

ಬಿಗ್ ನ್ಯೂಸ್: ಬಿಜೆಪಿ, ಕಾಂಗ್ರೆಸ್ ಗೆ ಪರ್ಯಾಯ – ಜನತಾ ಪರಿವಾರ ಮತ್ತೆ ಒಂದುಗೂಡಿಸಲು ಸದ್ದಿಲ್ಲದೆ ಸಿದ್ಧತೆ

Posted: 12 Jan 2020 03:28 AM PST

ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಜನತಾ ಪರಿವಾರ ಒಂದುಗೂಡಿಸಬೇಕು ಎಂಬ ಪ್ರಯತ್ನಗಳು ಹಿಂದಿನಿಂದಲೂ ನಡೆದಿವೆ.

ಕರ್ನಾಟಕ, ಬಿಹಾರ, ಉತ್ತರಪ್ರದೇಶ ಮೊದಲಾದ ರಾಜ್ಯಗಳಲ್ಲಿ ಪ್ರಬಲವಾಗಿದ್ದ ಜನತಾ ಪರಿವಾರ ಛಿದ್ರ ಛಿದ್ರವಾಗಿದೆ. ಅನೇಕ ರಾಜ್ಯಗಳಲ್ಲಿ ಆಡಳಿತ ನಡೆಸಿದ ಜನತಾ ಪರಿವಾರವನ್ನು ಒಂದುಗೂಡಿಸಬೇಕು ಎಂಬ ಪ್ರಯತ್ನಗಳು ಹಿಂದಿನಿಂದಲೂ ನಡೆದಿದ್ದು, ಈಗ ಮಾಜಿ ಶಾಸಕ ಮಹಿಮಾ ಪಟೇಲ್ ನೇತೃತ್ವದಲ್ಲಿ ಮತ್ತೆ ಪ್ರಯತ್ನ ಆರಂಭವಾಗಿದೆ.

ಕೆಲವು ತಿಂಗಳ ಹಿಂದೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇಂತಹ ಚಿಂತನೆ ನಡೆಸಿದ್ದು ಇದರ ಮುಂದುವರೆದ ಭಾಗವಾಗಿ ಮಹಿಮಾ ಪಟೇಲ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಜನವರಿ ಬೆಂಗಳೂರಿನಲ್ಲಿ ಜನತಾ ಪರಿವಾರ ಒಂದುಗೂಡಿಸುವ ಕುರಿತು ಪ್ರಮುಖ ಸಭೆ ನಡೆಸಲಾಗುವುದು ಎಂದು ಹೇಳಲಾಗಿದೆ.

ದೇಶದಲ್ಲಿ ಜಾತ್ಯತೀತ ಜನತಾದಳ, ಸಂಯುಕ್ತ ಜನತಾ ದಳ, ರಾಷ್ಟ್ರೀಯ ಜನತಾ ದಳ, ಜನತಾ ಪಕ್ಷ ಮೊದಲಾದ ಪಕ್ಷಗಳಾಗಿ ಛಿದ್ರವಾಗಿರುವ ಜನತಾ ದಳವನ್ನು ಒಂದೇ ವೇದಿಕೆಯಡಿ ತರಲಾಗುವುದು. ಜನತಾ ಪರಿವಾರದಿಂದ ಬೆಳೆದು ಬಂದ ನಾಯಕರು ಹಲವು ಪಕ್ಷಗಳಲ್ಲಿದ್ದಾರೆ. ಸಮಾನ ಮನಸ್ಕರನ್ನು ಒಂದೇ ವೇದಿಕೆಯಡಿ ತಂದು ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿಗೆ ಪರ್ಯಾಯವಾಗಿ ಜನತಾ ಪರಿವಾರ ಬೆಳೆಸುವ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

ಪತಿಯ ಈ ಗೀಳಿಗೆ ಡೈವೋರ್ಸ್ ಕೊಟ್ಟ ಪತ್ನಿ

Posted: 12 Jan 2020 02:53 AM PST

ಕೆಲವೊಬ್ಬರಿಗೆ ನೀರು ಅಂದರೆ ಎಲ್ಲಿಲ್ಲದ ಪ್ರೀತಿ. ಕೆರೆ, ಹೊಳೆ, ಅಥವಾ ಬಾತ್‌ಟಬ್‌ಗಳಲ್ಲಿ ಹೆಚ್ಚಾಗಿ ಕಾಲ ಕಳೆಯೋವ್ರನ್ನ ನೋಡಿರ್ತೇವೆ.

ಆದರೆ ಪ್ರತಿ ನಿತ್ಯ ಸ್ನಾನ ಅಥವಾ ನೀರಿನಲ್ಲಿರುವುದೇ ಜೀವನದ ಒಂದು ಕೆಲಸವಾದರೆ ಹೇಗಿರಬೇಡ. ಯೋಚನೆ ಮಾಡಿ.

ಇದೇ ಕಾರಣಕ್ಕೆ ಹೆಂಡತಿಯೊಬ್ಬಳು ಗಂಡನಿಗೆ ಡೈವೋರ್ಸ್ ಕೊಟ್ಟಿದ್ದಾಳೆ. ಹೌದು, ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ಸಿಲಿಕಾನ್ ಸಿಟಿಯ ಟೆಕ್ಕಿಯೊಬ್ಬ ದಿನಕ್ಕೆ ಸುಮಾರು ಎಂಟು ಗಂಟೆಗಳ ಕಾಲ ಸ್ನಾನ ಮಾಡುತ್ತಾರಂತೆ. ಇವರ ಈ ಕೆಲಸಕ್ಕೆ ಬೇಸತ್ತ ಪತ್ನಿ ಡಿವೋರ್ಸ್ ನೀಡಿದ್ದಾರೆ.

ಇವರಿಗೆ ಐದಾರು ವರ್ಷದಿಂದ ಈ ರೋಗ ಇದೆ ಎನ್ನಲಾಗಿದೆ. ಇದನ್ನು ಗೀಳು ರೋಗ ಎಂದು ಹೇಳಲಾಗುತ್ತಿದೆ. ಈ ಟೆಕ್ಕಿ ದಿನಕ್ಕೆ 8 ಗಂಟೆಗಳ ಕಾಲ ಸ್ನಾನ ಮಾಡುತ್ತಾರಂತೆ. ಒಂದು ಬಾರಿ ಸ್ನಾನಕ್ಕೆ ಹೋದರೆ ಒಂದು ಸೋಪ್ ಖಾಲಿಯಾಗುತ್ತಿದೆಯಂತೆ.

ಹೀಗಾಗಿಯೇ ಇವರ ಈ ಸ್ನಾನದ ಗೀಳು ರೋಗದಿಂದ ಬೇಸತ್ತ ಪತ್ನಿ ತವರು ಮನೆ ಸೇರಿದ್ದಾರೆ. ಈ ಹಿಂದೆ ಇವರಿಗೆ ಬೆಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆಯಂತೆ. ಆದರೂ ಪ್ರಯೋಜನವಾಗಿಲ್ಲ.

ಗುರು ರಾಘವೇಂದ್ರ ಬ್ಯಾಂಕ್ ಮುಂದೆ ಜಮಾಯಿಸಿದ ಗ್ರಾಹಕರು: ಕಾರಣ ಗೊತ್ತಾ…?

Posted: 12 Jan 2020 02:51 AM PST

ಬ್ಯಾಂಕ್ ವ್ಯವಹಾರದಲ್ಲಿ ಕೆಲವೊಂದು ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಗುರು ರಾಘವೇಂದ್ರ ಕೋ-ಆಪರೇಟೀವ್ ಬ್ಯಾಂಕ್‌ನಿಂದ ಹಣ ಡ್ರಾ ಮಾಡದಂತೆ ಆರ್‌ಬಿಐ ನಿರ್ಬಂಧ ಹೇರಿದೆ.

ಹೀಗಾಗಿ ಈ ಬ್ಯಾಂಕ್‌ನಲ್ಲಿ ಹಣವಿಟ್ಟ ಠೇವಣಿದಾರರು ಹಾಗೂ ಷೇರುದಾರರು ಇಂದು ಕಣ್ಣೀರಿಡುವ ಪರಿಸ್ಥಿತಿ ಎದುರಾಗಿದೆ.

ಲೋನ್ ರಿಕವರಿ ಸೇರಿದಂತೆ ಈ ಬ್ಯಾಂಕ್ ವ್ಯವಹಾರ, ವಹಿವಾಟಿನಲ್ಲಿ ಕೆಲವೊಂದು ಲೋಪದೋಷಗಳು ಕಂಡು ಬಂದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆಯಂತೆ.

ಇನ್ನು ಆರ್‌ಬಿಐನಿಂದ ಈ ಮೆಸೇಜ್ ಗ್ರಾಹಕರಿಗೆ ಬರುತ್ತಿದ್ದಂತೆ 500ಕ್ಕೂ ಹೆಚ್ಚು ಗ್ರಾಹಕರು ನೆಟ್ಕಲಪ್ಪ ಸರ್ಕಲ್ ಬಳಿ ಇರುವ ಗುರು ರಾಘವೇಂದ್ರ ಬ್ಯಾಂಕ್ ಮುಂದೆ ಜಮಾಯಿಸಿದ್ದರು. ಈ ಮೆಸೇಜ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬ್ಯಾಂಕ್‌ನ ಒಟ್ಟು 6 ಶಾಖೆಗಳಿವೆ.

ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ 1949ರ ಸೆಕ್ಷನ್ 35ಎ ಹಾಗೂ 56ರ ಅಡಿಯಲ್ಲಿ ಈ ಸೂಚನೆ ನೀಡಲಾಗಿದ್ದು, ಮುಂದಿನ ನೋಟಿಸ್ ಹೊರಡಿಸುವ ತನಕ, ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ಹೊಂದಿರುವ ಗ್ರಾಹಕರು ಮೂವತ್ತೈದು ಸಾವಿರ ರೂಪಾಯಿ ತನಕ ನಗದು ಮಾತ್ರ ವಿಥ್ ಡ್ರಾ ಮಾಡಬಹುದು ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಭಿಮಾನಿ ಆಸೆ ಈಡೇರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted: 12 Jan 2020 02:46 AM PST

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬರ ಆಸೆ ಈಡೇರಿಸಿದ್ದಾರೆ. ತಮ್ಮ ಅಭಿಮಾನಿ ರತನ್ ಜೊತೆಗೆ ಕೆಲ ಸಮಯವನ್ನು ಕಳೆದಿದ್ದಾರೆ.

ಹಾಸನ ಮೂಲದ ಬಾಲಕ ರತನ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ರತನ್ ದರ್ಶನ್ ಅಭಿಮಾನಿಯಾಗಿದ್ದು, ಒಮ್ಮೆ ನೆಚ್ಚಿನ ನಟ ದರ್ಶನ್ ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದಾರೆ.

ಈ ಮಾಹಿತಿ ತಿಳಿದ ದರ್ಶನ್ ಆಪ್ತರ ಮೂಲಕ ಬಾಲಕ ಮತ್ತು ಆತನ ಕುಟುಂಬದವರನ್ನು ಮನೆಗೆ ಕರೆಸಿಕೊಂಡು ಕೆಲ ಸಮಯ ಕಳೆದಿದ್ದಾರೆ. ಅಭಿಮಾನಿಯ ಆಸೆ ಈಡೇರಿಸಿದ್ದಾರೆ.

ಉಗ್ರರಿಗೆ ಆಶ್ರಯ ನೀಡಿದ್ದ ಮೌಲ್ವಿಗಳು ಅರೆಸ್ಟ್

Posted: 12 Jan 2020 02:37 AM PST

ಶಂಕಿತ ಉಗ್ರರಿಗೆ ಆಶ್ರಯ ನೀಡಿದ ಆರೋಪದಲ್ಲಿ ಇಬ್ಬರು ಮೌಲ್ವಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಉಗ್ರರೊಂದಿಗೆ ಸಂಪರ್ಕವಿರುವ ಮಾಹಿತಿ ಹಿನ್ನೆಲೆಯಲ್ಲಿ ಚಾಮರಾಜನಗರ ಪೊಲೀಸರು, ಭಯೋತ್ಪಾದಕ ನಿಗ್ರಹದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.

ಬಂಧಿತರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೌಲ್ವಿಗಳು ಶಂಕಿತ ಉಗ್ರರಿಗೆ ಆಶ್ರಯ ನೀಡಿದ್ದು, ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗಿದೆ. ಮಾಹಿತಿ ಆಧರಿಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಸಂಪುಟ ವಿಸ್ತರಣೆಗೆ ನೂತನ ಶಾಸಕರಿಂದ ಯಡಿಯೂರಪ್ಪಗೆ ಗಡುವು…?

Posted: 12 Jan 2020 02:26 AM PST

ಮೈತ್ರಿ ಸರ್ಕಾರಕ್ಕೆ ಕೈ ಕೊಟ್ಟು ಬಿಜೆಪಿ ಸೇರ್ಪಡೆಯಾಗಿ ಚುನಾವಣೆಯಲ್ಲಿ ಗೆದ್ದು ಬಂದಿರುವ ಅರ್ಹ ಶಾಸಕರು ಇದೀಗ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ.

ಶಾಸಕರಾಗಿ ಪ್ರಮಾಣವಚನ ಸ್ವೀಕಾರ ಮಾಡಿ ಹದಿನೈದು ದಿನಗಳು ಕಳೆದರೂ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಯಡಿಯೂರಪ್ಪಗೆ ಗಡುವು ನೀಡಿದ್ದಾರೆ ಎನ್ನಲಾಗಿದೆ.

ಹೌದು ಸಚಿವ ಸಂಪುಟ ವಿಸ್ತರಣೆ ಯಾವಾಗ ಎನ್ನುವ ಪ್ರಶ್ನೆ ಎಲ್ಲಾ ಅರ್ಹ ಶಾಸಕರಲ್ಲೂ ಕಾಡತೊಡಗಿದೆ. ಈಗಾಗಲೇ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ನೂತನ ಶಾಸಕರು ಸಿಡಿದೆದ್ದಿದ್ದಾರೆ ಎನ್ನಲಾಗಿದೆ.

ಈ ವಿಚಾರವಾಗಿ ಅರ್ಹ ಶಾಸಕರು ರಹಸ್ಯ ಸಭೆಗಳನ್ನು ಮಾಡಿದ್ದಾರೆ. ಈ ಸಭೆಯಲ್ಲಿ ಒಮ್ಮತದ ತೀರ್ಮಾನ ಒಂದನ್ನು ಮಾಡಿದ್ದಾರೆ ನೂತನ ಅರ್ಹ ಶಾಸಕರು.

ರಾಜ್ಯಕ್ಕೆ ಅಮಿತ್ ಶಾ ಜನವರಿ 18 ರಂದು ಬರುತ್ತಿದ್ದು, ಅಂದೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಹಾಗೂ ಜನವರಿ ತಿಂಗಳೊಳಗೆ ಸಚಿವ ಸಂಪುಟ ವಿಸ್ತರಣೆಯಾಗಬೇಕು ಎಂದು ಬಿಎಸ್‌ವೈಗೆ ಗಡುವು ನೀಡಿದ್ದಾರೆ ನೂತನ ಅರ್ಹ ಶಾಸಕರು ಎಂದು ಹೇಳಲಾಗಿದೆ. ಈ ದಿನಾಂಕದಂದೇ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ಆಗಬೇಕು ಎಂದು ಹೇಳಿದ್ದಾರಂತೆ.

ಕ್ರೈಂ ಶೋನಿಂದ ಸ್ಪೂರ್ತಿ ಪಡೆದು ಸಹೋದರ ಸಂಬಂಧಿಯನ್ನೇ ಕಿಡ್ನಾಪ್ ಮಾಡಿದ ಮಹಿಳೆ

Posted: 12 Jan 2020 01:57 AM PST

ಟಿವಿ ಧಾರಾವಾಹಿಗಳು ಹಾಗೂ ಸಿನೆಮಾಗಳಿಂದ ಪ್ರೇರಿತರಾಗುವ ಸಾಕಷ್ಟು ಮಂದಿ ನಿಜ ಜೀವನದಲ್ಲೂ ಅಲ್ಲಿ ಬರುವ ಪಾತ್ರಗಳಂತೆಯೇ ಮಾಡಲು ಹೋಗಿ ಬಹಳ ಫಜೀತಿ ಮಾಡಿಕೊಳ್ಳುವ ಸಾಕಷ್ಟು ನಿದರ್ಶನಗಳನ್ನು ಕಂಡಿದ್ದೇವೆ.

ಇದೇ ರೀತಿಯಲ್ಲಿ ಪ್ರೇರಿತಳಾದ ನಾಗ್ಪುರದ ಮಹಿಳೆಯೊಬ್ಬರು ತನ್ನ ಸಹೋದರ ಸಂಬಂಧಿಯ 12 ವರ್ಷದ ಮಗನನ್ನು ಅಪಹರಣ ಮಾಡಲು ವ್ಯಕ್ತಿಯೊಬ್ಬನಿಗೆ 50,000 ರೂ.ಗಳನ್ನು ನೀಡಿದ್ದಾಳೆ.

36 ವರ್ಷದ ಮಹಿಳೆ ಸಾರಿಕಾ, ಈ ಕೆಲಸಕ್ಕೆಂದು ಯೆರ್ನೆ ಎಂಬ 27 ವರ್ಷದ ವ್ಯಕ್ತಿಯೊಬ್ಬನಿಗೆ ದುಡ್ಡು ಕೊಟ್ಟಿದ್ದಾಳೆ.

ಬಳಿಕ ಇಬ್ಬರೂ ಸೇರಿ ಹುಡುಗನನ್ನು ಹತ್ತಿರದ ಬುಲ್ಡಾನಾ ಜಿಲ್ಲೆಯ ಶೆಗಾಂವ್‌ಗೆ ಕರೆದೊಯ್ದಿದ್ದಾರೆ. ಸಾರಿಕಾ ಮನೆಗೆ ಮರಳಿದರೆ, ಅಪಹರಣಕಾರ ಆ ಹುಡುಗನೊಂದಿಗೆ ಅಲ್ಲಿಯೇ ಉಳಿದುಕೊಂಡಿದ್ದಾನೆ. ಎಷ್ಟು ಹೊತ್ತಾದರೂ ಮನೆಗೆ ಬರದ ಕಾರಣ ಬಾಲಕನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅನುಮಾನದ ಮೇಲೆ ಸಾರಿಕಾಳನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು, ಆಕೆಯಿಂದ ಸತ್ಯಾಂಶ ಹೊರತರುವಲ್ಲಿ ಸಫಲರಾಗಿದ್ದಾರೆ. ಯೆರ್ನೆಗೆ ಕರೆ ಮಾಡಿದ ಸಾರಿಕಾ, ಹುಡುಗನನ್ನು ಬಿಟ್ಟುಬಿಡಲು ಬೇಡಿಕೊಂಡಿದ್ದಾಳೆ.

ಆತನನ್ನು ವಾರ್ಧಾ ಬಳಿ ಬಿಟ್ಟ ಯೆರ್ನೆ, ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಬಸ್‌ ಏರಿದ ಬಾಲಕ ಮನೆ ತಲುಪಿದ್ದಾನೆ. ಟಿವಿಯಲ್ಲಿ ಬರುವ ಕ್ರೈಂ ಶೋ ಒಂದನ್ನು ನೋಡಿ ಸ್ಫೂರ್ತಿ ಪಡೆದುಕೊಂಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ನಗೆಪಾಟಲಿಗೆ ಕಾರಣವಾಗಿದೆ ಕೆಲಸ ತಪ್ಪಿಸಿಕೊಳ್ಳಲು ಈಕೆ ಹೇಳಿದ ‘ಸುಳ್ಳು’

Posted: 12 Jan 2020 01:54 AM PST

ನವದೆಹಲಿ: ಅಯ್ಯೊ ಯಾರಪ್ಪ ಇವತ್ತು ಆಫೀಸಿಗೆ ಹೋಗ್ತಾರೆ ಅಂತ ಇಲ್ಲೊಬ್ಬ ಮಹಿಳೆ ತನ್ನ ಬಾಸ್ ಗೆ ಕಾರಿನ ಟಯರ್ ಪಂಕ್ಚರ್ ಆಗಿದೆ ಎಂದು ಎಡಿಟೆಡ್ ಫೋಟೋವನ್ನು ಕಳಿಸಿದ್ದಾಳೆ.

ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ನಗೆಪಾಟಲಿಗೂ ಈಡಾಗಿದೆ.

ನನಗೆ ಇಂದು ಕೆಲಸಕ್ಕೆ ಬರಲು ಆಗುತ್ತಿಲ್ಲ. ತನ್ನ ಕಾರಿನ ಟಯರ್ ಫ್ಲಾಟ್ ಆಗಿದ್ದು, ಅದಕ್ಕೆ ಮೊಳೆ ಚುಚ್ಚಿಕೊಂಡು ಪಂಕ್ಚರ್ ಆಗಿದೆ ಎಂದು ಅದರ ಫೋಟೋವನ್ನು ಕಳಿಸಿದ್ದಳು. ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎಡಿಟೆಡ್ ಫೋಟೋ ಎಂದು ತಿಳಿದು ಬರುತ್ತದೆ.

ಈಕೆ ನೆಪ ಹೇಳಬೇಕೆಂದು ಮೊದಲು ಟಯರ್ ನ ಫೋಟೋವನ್ನು ತೆಗೆದುಕೊಂಡಿದ್ದಾಳೆ. ಬಳಿಕ ಮೊಳೆಯ ಫೋಟೊವನ್ನು ತೆಗೆದುಕೊಂಡು ಅದಕ್ಕೆ ಕೂರುವಂತೆ ಮಾಡಿದ್ದಾಳೆ.

ಇದು ನಕಲಿ ಎಂದು ತಿಳಿದ ಸಹೋದ್ಯೋಗಿ ಆ ಫೋಟೊವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಳಿಕ ಇದು ನೆಟ್ಟಿಗರ ವ್ಯಂಗ್ಯಕ್ಕೆ ಗುರಿಯಾಗಿದೆ.

ಈ ಫೋಟೋವನ್ನು ನೋಡಿದ ಮತ್ತೆ ಕೆಲವರು ನಿಜವಾಗಿಯೂ ಟಯರ್ ಪಂಕ್ಚರ್ ಆದರೆ…..ಮೊಳೆ ಅದಕ್ಕೆ ಹೊಕ್ಕರೆ ಹೇಗಿರುತ್ತದೆ ಎಂಬ ರೀತಿಯ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಮುಂದಿನ ಬಾರಿ ಹೇಳುವುದಿದ್ದರೆ ಇಂತಹ ಫೋಟೋವನ್ನು ಹಾಕಿ ಎಂದು ಸಲಹೆ ಕೊಟ್ಟಿದ್ದಾರೆ.

ಇನ್ನೊಬ್ಬರು ಟ್ರಕ್ ಒಂದರ ಪಂಕ್ಚರ್ ಆಗಿರುವ ಫೋಟೋವನ್ನು ಹಾಕಿದ್ದಾರೆ. ಮಗದೊಬ್ಬರು ಕಾರು ಅಪಘಾತದ ಫೋಟೋಗಳನ್ನು……ಹೀಗೆ ತರಹೇವಾರಿ ಫೋಟೋಗಳನ್ನು ಹಾಕಿ ಮಹಿಳೆಯ ಸುಳ್ಳಿಗೆ ಕಾಲೆಳೆದಿದ್ದಾರೆ.

 

ಅಪರೂಪದ ಸಾಧನೆ ಮಾಡಿದ್ದಾರೆ ಭಾರತದ ಈ ಮಹಿಳೆ

Posted: 12 Jan 2020 01:43 AM PST

ಮಹಿಳೆಯೊಬ್ಬರು ಒಂದು ಸಾವಿರ ದಿನಗಳಲ್ಲಿ ಒಂದು ಸಾವಿರ ಗೀತೆ ರಚಿಸಿ, ಸಂಗೀತ ಸಂಯೋಜಿಸಿ ಹಾಡುವ ಮೂಲಕ ಸಾಧನೆ ಮೆರೆದಿದ್ದಾರೆ.

ದುಬೈನಲ್ಲಿ ನೆಲೆಸಿರುವ ಭಾರತೀಯ ಮಹಿಳೆ ಸ್ವಪ್ನಾ ಅಬ್ರಹಾಂ ಈ ಸಾಧಕಿ. ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಕಂಪನಿಯ ಉದ್ಯೋಗಿ ಆಗಿದ್ದುಕೊಂಡೇ ಇವರು ಈ ಸಾಧನೆ ಮಾಡಿದ್ದಾರೆ.

2017ರ ಏಪ್ರಿಲ್ 8ರಿಂದ ಆರಂಭಿಸಿ, 2020ರ ಜನವರಿ 2ರ ವರೆಗಿನ ಅವಧಿಯಲ್ಲಿ ಅವರು ಈ ಸಾಹಸ ಮೆರೆದಿದ್ದಾರೆ.

24 ವರ್ಷ ಸಂಗೀತ ಕ್ಷೇತ್ರದಲ್ಲಿದ್ದು 22 ಆಲ್ಬಮ್ ಮಾಡಿದ ಮೇಲೂ ಏನೋ ಅಸಂತೃಪ್ತಿ ಕಾಡಿತು. ಇಲ್ಲೇ ಅಸಾಧ್ಯವಾದದ್ದನ್ನು ಏನಾದರೂ ಮಾಡಿ ಬಿಟ್ಟು ಬಿಡೋಣ ಎಂದುಕೊಂಡು ಇದನ್ನು ಮಾಡಿದೆ ಎಂಬುದಾಗಿ ಆಕೆ ಹೇಳಿಕೊಂಡಿದ್ದಾರೆ.

ಕನ್ನ ಕೊರೆದು ಸಣ್ಣದೊಂದು ನಿದ್ರೆ ಬಳಿಕ ಕಳ್ಳತನ ಮಾಡಿ ಹೋದ ಭೂಪ

Posted: 12 Jan 2020 01:31 AM PST

ಇತ್ತೀಚಿನ ದಿನಗಳಲ್ಲಿ ತಂತಮ್ಮ ಉದ್ಯಮಗಳನ್ನು ಹಾಗೂ ಮನೆಗಳನ್ನು ಕಳ್ಳತನದಿಂದ ಕಾಪಾಡಿಕೊಳ್ಳಲೆಂದು ಜನರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.

ಆದರೂ ಸಹ ಭದ್ರತಾ ಕ್ರಮಗಳನ್ನು ಭೇದಿಸಿ ತಮ್ಮ ಎಂದಿನ ಕೈಂಕರ್ಯ ಮುಂದುವರೆಸಲು ಕಳ್ಳರೂ ಸಹ ಸ್ಮಾರ್ಟ್ ಆಗಲು ಶುರು ಮಾಡಿದ್ದಾರೆ.

ಕಳ್ಳತನ ಮಾಡುವುದಲ್ಲದೇ, ನೋಟ್‌ಗಳನ್ನು ಬರೆದಿಟ್ಟು ಹೋಗುವುದು, ಅಲ್ಲೇ ತಿಂದು, ಸಿಗರೇಟ್‌ ಸೇದಿ ಹೋಗುವುದು ಸೇರಿದಂತೆ ಕ್ರೇಜೀ ಕೆಲಸಗಳನ್ನು ಮಾಡುವುದರಲ್ಲಿ ಕಳ್ಳರು ನಿಪುಣರಾಗುತ್ತಿದ್ದಾರೆ.

ಅಮೆರಿಕದ ಜಾರ್ಜಿಯಾದ ಲಾರೆನ್ಸ್‌ವೆಲ್ಲೆಯಲ್ಲಿರುವ ಟಾಕೋ ಬೆಲ್ ರೆಸ್ಟಾರಂಟ್‌ ಒಂದನ್ನು ಅದರ ಡ್ರೈವ್‌ ಥ್ರೂ ಪ್ರದೇಶದ ಮೂಲಕ ಹೊಕ್ಕಿದ್ದಾನೆ.

ಅಲ್ಲಿನ ಪಾತ್ರೆ ಪಗಡಗಳನ್ನು ಬಳಸಿಕೊಂಡು ಅಡುಗೆ ಮಾಡಿಕೊಂಡು ತಿಂದಿರುವ ಈ ಮಹಾನ್ ಕಳ್ಳ, ತನ್ನ ಡ್ಯೂಟಿ ಶುರು ಮಾಡುವ ಮುನ್ನ ಸಣ್ಣದೊಂದು ನಿದ್ರೆ ತೆಗೆದು, ಮೂರು ಗಂಟೆಗಳ ಬಳಿಕ ಎದ್ದು, ಲ್ಯಾಪ್ ಟಾಪ್ ಹಾಗೂ ಟ್ಯಾಬ್ಲೆಟ್‌ಗಳನ್ನು ಕದ್ದು ಅಲ್ಲಿಂದ ಕಾಲ್ಕಿತ್ತಿದ್ದಾನೆ

ಕ್ಯಾಮೆರಾಗಳಲ್ಲಿ ಸೆರೆಯಾದ ಆತನ ಚಹರೆಗಳ ಜಾಡನ್ನು ಹಿಡಿದಿರುವ ಪೊಲೀಸರು ಕಳ್ಳನ ಬೇಟೆಗೆ ಬಲೆ ಬೀಸಿದ್ದಾರೆ.

ಉಕ್ರೇನ್ ವಿಮಾನ ಪತನಗೊಂಡಿದ್ದು ತನ್ನಿಂದಲೇ ಎಂದು ಒಪ್ಪಿಕೊಂಡ ಇರಾನ್

Posted: 12 Jan 2020 01:27 AM PST

ಉಕ್ರೇನ್‌‌ನಲ್ಲಿ ಪತನಗೊಂಡ ನಾಗರಿಕ ವಿಮಾನವನ್ನು ಉದ್ದೇಶಪೂರ್ವಕವಲ್ಲದೇ ಹೊಡೆದುರುಳಿಸಿದ್ದಾಗಿ ಇರಾನ್ ಒಪ್ಪಿಕೊಂಡಿದೆ.

ತನ್ನ ಈ ಪ್ರಮಾದಕ್ಕೆ ಮಾನವ ಸಹಜ ತಪ್ಪುಗಳು ಹಾಗೂ ಅಮೆರಿಕದ ಪ್ರಚೋದನೆಯೂ ಒಂದು ಕಾರಣ ಎಂದು ಟೆಹರಾನ್ ತಿಳಿಸಿದೆ.

ಭವಿಷ್ಯದಲ್ಲಿ ಇಂಥ ಅವಘಡಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಇರಾನ್ ಅಧ್ಯಕ್ಷ ಅಯತೊಲ್ಲ ಖೋಮೆನಿ ತಿಳಿಸಿದ್ದಾರೆ.

ಅಪಘಾತದಲ್ಲಿ 176 ಮಂದಿ ಮೃತಪಟ್ಟಿದ್ದು, ಇದರಲ್ಲಿ 82 ಮಂದಿ ಇರಾನ್‌ ಪ್ರಜೆಗಳು, 57 ಕೆನಡಿಯನ್ನರು, 11 ಉಕ್ರೇನಿಯನ್ನರು, 10 ಸ್ವೀಡಿಶ್‌ ಪ್ರಜೆಗಳು ಹಾಗೂ ಬ್ರಿಟನ್ ಹಾಗೂ ಜರ್ಮನಿಯ ತಲಾ ಮೂವರು ನಾಗರಿಕರು ಇದ್ದರು.

ಇರಾನಿನ ಅಗ್ರ ಸೇನಾ ಮುಖ್ಯಸ್ಥನನ್ನು ಕೊಂದ ಅಮೆರಿಕದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲೆಂದು ಇರಾನ್ ದಾಳಿ ಮಾಡಿದಾಗ ಈ ಅಚಾತುರ್ಯ ನಡೆದಿತ್ತು.

ಗಲ್ಲಿಗೇರಿಸುವ ದಿನ ಸಮೀಪಿಸುತ್ತಿದ್ದಂತೆ ಸಾವಿನ ಭಯದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಅತ್ಯಾಚಾರಿ

Posted: 12 Jan 2020 01:24 AM PST

ನಿರ್ಭಯಾ ಅತ್ಯಾಚಾರಿಗಳ ಗಲ್ಲಿಗೆ ದಿನಗಣನೆ ಆರಂಭವಾಗಿದೆ. ಎಲ್ಲವೂ ಸರಿಯಾದ್ರೆ ಜನವರಿ 22ರಂದು ನಾಲ್ವರು ಆರೋಪಿಗಳು ಗಲ್ಲಿಗೇರಲಿದ್ದಾರೆ. ಅತ್ಯಾಚಾರಿಗಳ ಭೇಟಿಗೆ ಕುಟುಂಬಸ್ಥರು ಬರ್ತಿದ್ದಾರೆ. ಅತ್ಯಾಚಾರಿಗಳ ಕಣ್ಣಲ್ಲಿ ಸಾವಿನ ಭಯ ಮನೆ ಮಾಡಿದೆ.

ವರದಿ ಪ್ರಕಾರ, ಶನಿವಾರ ಅಪರಾಧಿ ಮುಖೇಶ್ ಸಿಂಗ್‌ ಭೇಟಿಗೆ ಕುಟುಂಬಸ್ಥರು ಬಂದಿದ್ದರು. ಈ ವೇಳೆ ತಾಯಿ ಮುಂದೆ ಮುಖೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ ಎನ್ನಲಾಗಿದೆ. ಕುಟುಂಬಸ್ಥರು ಗಲ್ಲಿಗೇರಿಸುವುದಿಲ್ಲ. ಜೀವಾವಧಿ ಶಿಕ್ಷೆಯಾಗುತ್ತೆ ಎಂದು ಮನವೊಲಿಸುವ ಯತ್ನ ನಡೆಸಿದ್ದಾರಂತೆ.

ಇದು ಕುಟುಂಬಸ್ಥರಿಗೆ ಕೊನೆ ಭೇಟಿಯಲ್ಲ. ವಾರಕ್ಕೆ ಎರಡು ಬಾರಿ ಕುಟುಂಬಸ್ಥರು ಅಪರಾಧಿಗಳನ್ನು ಭೇಟಿ ಮಾಡಬಹುದು. ಮರಣದಂಡನೆ ದಿನಾಂಕ ಹತ್ತಿರ ಬರ್ತಿದ್ದಂತೆ ಅಪರಾಧಿಗಳ ಭಯ ಹೆಚ್ಚಾಗಿದೆ. ಜೈಲಿನ ಇತರ ಕೈದಿಗಳ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.

 

ಶಿಕ್ಷೆಗೊಳಗಾಗುವ ಭೀತಿಯಲ್ಲಿದ್ದಾರೆ ಮಕ್ಕಳನ್ನು ರಕ್ಷಿಸಿದ ತಾಯಿ

Posted: 12 Jan 2020 01:15 AM PST

ಸರ್ವಾಧಿಕಾರಿಗಳ ಕ್ರೌರ್ಯದಿಂದ ನಲುಗುತ್ತಿರುವ ಉತ್ತರ ಕೊರಿಯಾದಲ್ಲಿ, ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡಿದ್ದ ತಮ್ಮ ಮನೆಯಿಂದ ದೇಶದ ನಾಯಕರ ಭಾವಚಿತ್ರಗಳನ್ನು ಹೊರತೆಗೆಯುವ ಬದಲು ತನ್ನಿಬ್ಬರು ಮಕ್ಕಳನ್ನು ರಕ್ಷಿಸಲು ಪ್ರಾಶಸ್ತ್ಯ ನೀಡಿದ್ದಕ್ಕಾಗಿ ಜೈಲು ಪಾಲಾಗುವ ಭೀತಿಯಲ್ಲಿ ಸಿಲುಕಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 30ರಂದು ಈ ಘಟನೆ ಜರುಗಿದ್ದು, ಇಲ್ಲಿನ ಆನ್ಸಾಂಗ್ ಕೌಂಟಿಯ ಉತ್ತರ ಹ್ಯಾಮ್ಮಿಗ್ಯಾಂಗ್ ಪ್ರಾಂತ್ಯದಲ್ಲಿ ಘಟಿಸಿದೆ.

ಎರಡು ಕುಟುಂಬಗಳಿಗೆ ಸೇರಿದಂತಿದ್ದ ಮನೆಯೊಂದಕ್ಕೆ ಬೆಂಕಿ ಹಚ್ಚಿಕೊಂಡ ಸಂದರ್ಭದಲ್ಲಿ ಮಕ್ಕಳು ಮನೆಯೊಳಗೆ ಇದ್ದರು. ಹೊರಗಡೆ ಇದ್ದ ಪೋಷಕರು ಗಾಬರಿಗೊಂಡು ಒಂದೇ ಉಸಿರಿನಲ್ಲಿ ಓಡೋಡಿ ಬಂದು ತಮ್ಮ ಮಕ್ಕಳನ್ನು ರಕ್ಷಿಸಿದ್ದಾರೆ.

ಈ ಸಂದರ್ಭದಲ್ಲಿ ತಾಯಿಯೊಬ್ಬರಿಗೆ ಕಿಮ್‌‌ ಇಲ್‌ ಸಂಗ್ ಹಾಗೂ ಕಿಮ್‌ ಜಾಂಗ್‌ ಇಲ್‌ರ ಭಾವಚಿತ್ರಗಳನ್ನು ಬೆಂಕಿಯಿಂದ ರಕ್ಷಿಸಿಕೊಳ್ಳಲು ಆಗಿಲ್ಲ. ಆಕೆ ಈಗ ಆಂತರಿಕ ಭದ್ರತಾ ಸಚಿವಾಲಯದ ತನಿಖೆ ಎದುರಿಸುತ್ತಿದ್ದಾರೆ. ಇದೇ ವೇಳೆ ಈ ಭಾವಚಿತ್ರಗಳನ್ನು ಬೆಂಕಿಯಿಂದ ರಕ್ಷಿಸಲು ಮತ್ತೊಂದು ಕುಟುಂಬ ಸಫಲವಾಗಿದೆ.

ಮೂರು ದಿನಗಳಲ್ಲಿ ಬಂದ್ ಆಗಲಿದೆ ಮೋದಿಯ ಈ ಯೋಜನೆ

Posted: 12 Jan 2020 12:56 AM PST

बंद हो रही मोदी सरकार की ये स्कीम, आपके पास बस तीन दिन का मौका

ಸೇವಾ ತೆರಿಗೆ ಮತ್ತು ಕೇಂದ್ರ ಅಬಕಾರಿ ಸುಂಕಕ್ಕೆ ಸಂಬಂಧಿಸಿದ ಹಳೆಯ ಬಾಕಿ ವಿವಾದಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಕಳೆದ ವರ್ಷವಷ್ಟೇ ವಿಶೇಷ ಯೋಜನೆಯನ್ನು ಪ್ರಾರಂಭಿಸಿತ್ತು.

2019 ರ ಸೆಪ್ಟೆಂಬರ್‌ನಲ್ಲಿ ಜಾರಿಗೆ ಬಂದ ‘ಸಬ್ಕಾ ವಿಶ್ವಾಸ್’ ಯೋಜನೆಯ ಕೊನೆಯ ದಿನಾಂಕ ಡಿಸೆಂಬರ್ 31ಕ್ಕೆ ಕೊನೆಗೊಂಡಿತ್ತು. ಆದರೆ ನಂತರ ಸರ್ಕಾರ ಇದನ್ನು ಜನವರಿ 15ರವರೆಗೆ ಮುಂದೂಡಿತ್ತು.

ಈಗ ಈ ಯೋಜನೆ ಕೊನೆಗೊಳ್ಳಲು ಮೂರು ದಿನ ಬಾಕಿಯಿದೆ. ತೆರಿಗೆದಾರರು ಈ ಯೋಜನೆ ಬಗ್ಗೆ ನೀಡಿದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಗಡುವನ್ನು ವಿಸ್ತರಿಸಿತ್ತು. ತೆರಿಗೆದಾರರ ಹಿತದೃಷ್ಟಿಯಿಂದ ಒಮ್ಮೆ ಮಾತ್ರ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸರ್ಕಾರ ಹೇಳಿತ್ತು.

2019-20ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಯೋಜನೆಯನ್ನು ಪ್ರಕಟಿಸಿದ್ದರು. ಹಳೆಯ ವಿವಾದಿತ ಪ್ರಕರಣಗಳನ್ನು ಇತ್ಯರ್ಥಪಡಿಸಲು ಈ ಯೋಜನೆಯನ್ನು ಶುರು ಮಾಡಲಾಗಿತ್ತು.

ನಿಖಿಲ್ ಕುಮಾರಸ್ವಾಮಿ ‘ಶೂ’ ಕೇಳಿದ ನಟಿ

Posted: 12 Jan 2020 12:46 AM PST

ನಟ ನಿಖಿಲ್ ಕುಮಾರಸ್ವಾಮಿ ಕನ್ನಡ ಅಷ್ಟೇ ಅಲ್ಲದೆ ಟಾಲಿವುಡ್‌ ನಲ್ಲೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮ ವಿಭಿನ್ನ ನಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬರುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ.

ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆ ನಂತರ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಈ ನಟ ಕಾಣಿಸಿದ್ದು, ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

ನಿಖಿಲ್ ಫೋಟೋಗೆ ಅನೇಕ ಅಭಿಮಾನಿಗಳು ಕಮೆಂಟ್ ಕೂಡ ಮಾಡಿದ್ದಾರೆ. ಆದರೆ ತೆಲುಗಿನ ನಟಿಯೊಬ್ಬರು ನಿಖಿಲ್ ಬದಲು ಅವರ ಶೂಗೆ ಕಮೆಂಟ್ ಮಾಡಿದ್ದಾರೆ.

ಹೌದು, ನಿಖಿಲ್ ಕುಮಾರಸ್ವಾಮಿ ಗೋಡೆಗೆ ಒರಗಿ ಫೋಟೋ ಒಂದನ್ನು ತೆಗೆಸಿದ್ದಾರೆ. ಈ ಫೋಟೋದಲ್ಲಿ ನಿಖಿಲ್ ಹಾಕಿರುವ ಶೂಗೆ ಮೋಹನ್ ಬಾಬು ಮಗಳು, ತೆಲುಗಿನ ನಟಿ ಲಕ್ಷ್ಮಿ ಮಂಚು ಕಮೆಂಟ್ ಮಾಡಿದ್ದಾರೆ. ಈ ಶೂ ನನಗೆ ಬೇಕು ಎಂದು ಕಮೆಂಟ್ ಮಾಡಿದ್ದು, ಈ ಫೋಟೋ ಇದೀಗ ವೈರಲ್ ಆಗಿದೆ.

ಯುವರಾಜ ಹ್ಯಾರಿ ದಂಪತಿಗೆ ಇಂತಹ ‘ಆಫರ್’ ನೀಡಿದೆ ಈ ಕಂಪನಿ

Posted: 12 Jan 2020 12:36 AM PST

ಕೂಡು ಕುಟುಂಬದಿಂದ ಹೊರಬಂದು ಆರ್ಥಿಕ ಸ್ವಾತಂತ್ರ‍್ಯ ಕಂಡುಕೊಳ್ಳುವ ನಿರ್ಧಾರ ಮಾಡಿದ ಬ್ರಿಟನ್ ಯುವರಾಜ ಹ್ಯಾರಿ ಹಾಗೂ ಮೇಘನ್ ಮಾರ್ಕೆಲ್‌‌ ನಿರ್ಧಾರವನ್ನು ಸ್ವಾಗತಿಸಿರುವ ಕೆನಡಾದ ಕಾಫಿ ಚೇನ್ ಸಂಸ್ಥೆಯೊಂದು, ಈ ಜೋಡಿಗೆ ಜೀವನಪೂರ್ತಿ ಉಚಿತ ಕಾಫಿ ನೀಡುವುದಾಗಿ ಘೋಷಿಸಿದೆ.

ಟಿಮ್ ಹಾರ್ಟನ್‌ ಎಂಬ ಫಾಸ್ಟ್ ಫುಡ್‌ ಚೇನ್‌ ತನ್ನ ಟ್ವಿಟರ್‌ ಹ್ಯಾಂಡಲ್‌ ನಲ್ಲಿ ಬರೆದುಕೊಂಡಿದ್ದು, “ಮೇಘನ್ ಮತ್ತು ಹ್ಯಾರಿ, ನಿಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ನೀವೇನಾದರೂ ಕೆನಡಾಗೆ ಬರಲು ಇಚ್ಛಿಸಿದಲ್ಲಿ ಜೀವನಪರ್ಯಂತ ಉಚಿತ ಕಾಫಿ ನೀಡಲಿದ್ದೇವೆ. ಇದರ ಬಗ್ಗೆ ಒಮ್ಮೆ ಯೋಚಿಸಿ ನೋಡಿ” ಎಂದು ಹೇಳಿದೆ.

ರೆಸ್ಟೋರೆಂಟ್‌ನ ಈ ಆಫರ್‌ ಕುರಿತಂತೆ ನೆಟ್ಟಿಗರು ಸಾಕಷ್ಟು ಅಡ್ವೈಸ್‌ಗಳನ್ನು ಕೊಟ್ಟಿದ್ದಾರೆ. “ಅವರಿಬ್ಬರಿಗೆ ನಿಮ್ಮ ಕಂಪನಿಯನ್ನು ಖರೀದಿ ಮಾಡುವ ತಾಕತ್ತಿದೆ. ಅವರು ನಿಮ್ಮ ಉದ್ಯೋಗಿಯಲ್ಲ. ಮೊದಲು ಸಮಸ್ಯೆ ಏನೆಂದು ಅರಿತು ಆಮೇಲೆ ಟ್ವೀಟ್ ಮಾಡಿ” ಎಂದು ಟ್ಟಿಟಿಗರೊಬ್ಬರು ಹೇಳಿದ್ದಾರೆ.

ಜಾತ್ರೆಯ ವೇಳೆ ಎತ್ತಿನ ಬಂಡಿ ಹರಿದು ಅವಘಡ

Posted: 12 Jan 2020 12:32 AM PST

ಜಾತ್ರೆಯ ಸಮಯದಲ್ಲಿ ಹಾಗೂ ಲಕ್ಷಾಂತರ ಜನ ಸೇರಿರುವ ಜಾತ್ರೆಗಳಲ್ಲಿ ಕೆಲವೊಮ್ಮೆ ಎಷ್ಟೇ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡರೂ ಅವಘಡಗಳು ನಡೆದು ಹೋಗುತ್ತವೆ.

ಇದೀಗ ಟಿ.ನರಸೀಪುರದಲ್ಲಿ ನಡೆದ ಜಾತ್ರೆಯಲ್ಲೂ ಎತ್ತಿನ ಬಂಡಿಗೆ ಸಿಲುಕಿ ಇಬ್ಬರಿಗೆ ಗಂಭಿರ ಗಾಯಗಳಾಗಿವೆ.

ಹೌದು, ಟಿ.ನರಸೀಪುರದ ಮೂಗೂರಿನಲ್ಲಿ ತ್ರಿಪುರ ಸುಂದರಿ ಜಾತ್ರೆ ನಡೆಯುತ್ತದೆ. ಈ ಪ್ರಸಿದ್ದ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಈ ವರ್ಷ ಕೂಡ ಜಾತ್ರಾ ಮಹೋತ್ಸವ ನಡೆದಿದೆ. ಈ ವೇಳೆ ಜಾತ್ರೆಯಲ್ಲಿ ದೇವರ ವಿಗ್ರಹವನ್ನು ಎತ್ತಿನ ಬಂಡಿಯಲ್ಲಿ ಇಟ್ಟುಕೊಂಡು ಸಾಗುವಾಗ ಅವಘಡ ನಡೆದಿದೆ.

ಎತ್ತಿನ ಬಂಡಿಯಲ್ಲಿ ದೇವರ ವಿಗ್ರಹ ಇಟ್ಟು ಮೆರವಣಿಗೆ ಮಾಡುವಾಗ ಎತ್ತುಗಳು ದಿಕ್ಕಾಪಾಲಾಗಿ ಓಡಿಹೋಗಿವೆ. ಈ ವೇಳೆ ಬಂಡಿ ಹಿಡಿದು ಬರುತ್ತಿದ್ದ ರವಿಕುಮಾರ್ ಹಾಗೂ ಮಹೇಶ್ ಎಂಬ ಯುವಕರು ಎತ್ತಿನ ಬಂಡಿಯ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಯಾಮ್ಸಂಗ್ ನ ಈ ಫೋನ್ ನಲ್ಲಿ ಅಚಾನಕ್ ಬಂದ ಹೊಗೆ….ಆಮೇಲೆ…?

Posted: 12 Jan 2020 12:20 AM PST

ಚಾರ್ಜಿಂಗ್ ವೇಳೆ ಫೋನ್ ಬ್ಯಾಟರಿ ಒಡೆದು ಸ್ಫೋಟಗೊಂಡ ಅನೇಕ ಘಟನೆಗಳು ನಡೆದಿವೆ. ಈಗ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ಸ್ಯಾಮ್ಸಂಗ್ ನ ಜನಪ್ರಿಯ ಸ್ಮಾರ್ಟ್‌ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ಎಡ್ಜ್ ಸ್ಮಾರ್ಟ್ಫೋನ್ ಸ್ಫೋಟಗೊಂಡಿದೆ. ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ.

ಸೀಮಾ ಎಂಬಾಕೆ ಬಳಿಯಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ಎಡ್ಜ್ ಫೋನ್ ನಲ್ಲಿ ಅಚಾನಕ್ ಬೆಂಕಿ ಕಾಣಿಸಿಕೊಂಡಿದೆ. ಅನೇಕ ಪ್ರಕರಣಗಳಲ್ಲಿ ಚಾರ್ಜಿಂಗ್ ವೇಳೆ ಮೊಬೈಲ್ ಬಿಸಿಯಾಗಿ ಮೊಬೈಲ್ ನಲ್ಲಿ ಬೆಂಕಿಕಾಣಿಸಿಕೊಳ್ಳುತ್ತದೆ. ಆದ್ರೆ ಈ ಮೊಬೈಲನ್ನು ಚಾರ್ಜಿಗೆ ಹಾಕಿರಲಿಲ್ಲ ಎನ್ನಲಾಗಿದೆ.

ಸೀಮಾ ಈ ಮೊಬೈಲನ್ನು ಡಿಸೆಂಬರ್ 28, 2016ರಲ್ಲಿ ಖರೀದಿ ಮಾಡಿದ್ದಳು. ಮೊಬೈಲ್ ಹಾಳಾಗಿರಲಿಲ್ಲ. ಎಂದೂ ಮೊಬೈಲ್ ರಿಪೇರಿ ಮಾಡಿರಲಿಲ್ಲ. ಇಷ್ಟು ವರ್ಷ ಯಾವುದೇ ಸಮಸ್ಯೆಯಿಲ್ಲದೆ ಮೊಬೈಲ್ ಬಳಸಿದ್ದಳು. ಆದ್ರೆ 2019ರ ಅಂತ್ಯದ ವೇಳೆಗೆ ಮೊಬೈಲ್ ಬಿಸಿಯಾಗಲು ಶುರುವಾಗಿತ್ತಂತೆ.

‘ನಿಂಬೆಹಣ್ಣು ಮಾರುತ್ತಿದ್ದ ನಾನು ಮುಖ್ಯಮಂತ್ರಿಯಾದೆ’

Posted: 12 Jan 2020 12:19 AM PST

ಬೆಂಗಳೂರು: ನಾನು ಮಂಡ್ಯದಲ್ಲಿ ತರಕಾರಿ, ನಿಂಬೆಹಣ್ಣು ಮಾರುತ್ತಿದ್ದೆ. ಜನರ ಆಶಿರ್ವಾದದಿಂದ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಂಕಲ್ಪ ಮಾಡಿದ್ದರಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಹೇಳಿದ್ದಾರೆ.

ಬಾಲ್ಯದ ನೆನಪು ಬಿಚ್ಚಿಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು. ನಾನು ಪ್ರೌಢಶಾಲೆಯಲ್ಲಿದ್ದಾಗ ನಿಂಬೆಹಣ್ಣು ಮಾರುತ್ತಿದ್ದೆ. ಮಂಡ್ಯದಲ್ಲಿ ತರಕಾರಿ, ನಿಂಬೆಹಣ್ಣು ಮಾರುತ್ತಿದ್ದ. ಬೂಕನಕೆರೆ ಬಡಕುಟುಂಬದಿಂದ ಬಂದ ನಾನು ರಾಜ್ಯದ ಜನರ ಆಶಿರ್ವಾದದಿಂದ 4 ಸಲ ಮುಖ್ಯಮಂತ್ರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ವಿದೇಶಕ್ಕೆ ಹೋಗಿ ಕೆಲಸ ಮಾಡಬೇಕೆಂದು ಯೋಚಿಸಬೇಡಿ. ನಮ್ಮ ದೇಶದಲ್ಲಿ ಇದ್ದು ಸಾಧನೆ ಮಾಡಿ. ವಿದ್ಯಾರ್ಥಿಗಳು ವಿದೇಶಿ ವ್ಯಾಮೋಹದಿಂದ ಹೊರಗೆ ಬನ್ನಿ ಎಂದು ತಿಳಿಸಿದ್ದಾರೆ.