Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Saturday, January 11, 2020

Kannada News | Karnataka News | India News

Kannada News | Karnataka News | India News


ಬಸ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಸಾವು

Posted: 11 Jan 2020 06:09 AM PST

ತುಮಕೂರು ಜಿಲ್ಲೆ ಶಿರಾ ತಾಲೂಕು ಬುಕ್ಕಾಪಟ್ಟಣ ಸಮೀಪದ ಕಂಬದಹಳ್ಳಿ ಗೇಟ್ ಬಳಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬುಕ್ಕಾಪಟ್ಟಣದ ತಿಮ್ಮಣ್ಣ(60) ಮತ್ತು ಅವರ ಪುತ್ರ ಬಸವರಾಜ್(32) ಮೃತಪಟ್ಟವರು ಎಂದು ಹೇಳಲಾಗಿದೆ. ಶಿರಾ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ತಿಮ್ಮಣ್ಣ, ಬಸವರಾಜ್ ತೆರಳುತ್ತಿದ್ದ ಬೈಕ್ ಕಂಬದಹಳ್ಳಿ ಗೇಟ್ ಬಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಶಿರಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡಿಸಿಎಂ ಅಶ್ವತ್ ನಾರಾಯಣ್ ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು

Posted: 11 Jan 2020 05:45 AM PST

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ, ಉದ್ಯೋಗಕ್ಕೆ ಬರವಿಲ್ಲ, ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ ನಾರಾಯಣ ನೀಡಿರುವ ಹೇಳಿಕೆ ಬೌದ್ಧಿಕ ದಿವಾಳಿತನದಿಂದ ಕೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕೋಡ ತಯಾರಿಸಲು ಕೂಡ ಈರುಳ್ಳಿ ಖರೀದಿಸಲು ಆರ್ಥಿಕವಾಗಿ ನಿಶಕ್ತರಾಗಿರುವ ನಿರುದ್ಯೋಗಿ ಯುವಕರ ಕಣ್ಣಲ್ಲಿ ಏಕೆ ನೀರು ತರಿಸುತ್ತೀರಿ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ರಾಜ್ಯ ಸೇರಿದಂತೆ ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಹೊಸ ಉದ್ಯೋಗ ಸೃಷ್ಟಿ ಒತ್ತಟ್ಟಿಗಿರಲಿ, ಇರುವ ಉದ್ಯೋಗ ಕಳೆದುಕೊಂಡು ಉದ್ಯೋಗಸ್ಥರು ಬೀದಿಗೆ ಬಿದ್ದಿದ್ದಾರೆ. ಉದ್ಯೋಗಾಕಾಂಕ್ಷಿಗಳು ಕಂಗಾಲಾಗಿದ್ದಾರೆ. ಇಂತಹ ಹಸಿ ಸುಳ್ಳುಗಳನ್ನು ಯಾರನ್ನು ಮೆಚ್ಚಿಸಲು ಹೇಳುತ್ತೀರಿ? ನಾಚಿಗೆ ಆಗಬೇಕು ನಿಮಗೆ, ಯೋಗ್ಯ ಉದ್ಯೋಗಾಕಾಂಕ್ಷಿಗಳನ್ನು ನಿಮ್ಮ ಮನೆಗೆ ಕಳುಹಿಸಲೇ? ಕಚೇರಿಗೆ ಕಳುಹಿಸಲೇ? ಕೆಲಸ ಕೊಡಿಸುತ್ತೀರಾ? ಎಂದು ಸವಾಲು ಹಾಕಿದ್ದಾರೆ.

ಕಾಡುವ ಕಾಲು ನೋವಿಗೆ ಇಲ್ಲಿದೆ ʼಟಿಪ್ಸ್ʼ

Posted: 11 Jan 2020 05:37 AM PST

ಜಾಸ್ತಿ ಓಡಾಡುವುದರಿಂದ, ನಿಂತುಕೊಂಡು ಕೆಲಸ ಮಾಡುವುದರಿಂದ ಸಾಮಾನ್ಯವಾಗಿ ಕಾಲುನೋವಿನ ಸಮಸ್ಯೆ ಕಂಡು ಬರುತ್ತದೆ. ಆದರೆ ಇದು ಹಗಲಿನ ವೇಳೆ ಅಷ್ಟಾಗಿ ಗೊತ್ತಾಗುವುದಿಲ್ಲ ರಾತ್ರಿ ನಿದ್ದೆ ಮಾಡುವಾಗ ಕಾಲಿನ ನೋವು ಕಾಣಿಸಿಕೊಳ್ಳುತ್ತದೆ.

ಇದರಿಂದ ಸರಿಯಾಗಿ ನಿದ್ದೆ ಕೂಡ ಮಾಡುವುದಕ್ಕೆ ಆಗುವುದಿಲ್ಲ. ಅಂತಹವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್.

*2 ಕಪ್ ಬಿಸಿನೀರಿಗೆ ½ ಟಿ ಸ್ಪೂನ್ ಆ್ಯಪಲ್ ಸೈಡರ್ ವಿನೇಗರ್ ಹಾಕಿಕೊಂಡು ಕುಡಿಯುವುದರಿಂದ ಕಾಲುನೋವಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

*ಸರಿಯಾದ ವಿಧಾನದ ಡಯೆಟ್ ಅನ್ನು ಪಾಲಿಸುವುದರಿಂದ ಕೂಡ ಕಾಲು ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪೋಟ್ಯಾಷಿಯಂ, ಮಗ್ನೇಷಿಯಂ ಹೆಚ್ಚಿರುವ ಆಹಾರವನ್ನು ಸೇವಿಸಿದರೆ ಒಳ್ಳೆಯದು. ಬಾಳೆಹಣ್ಣು, ಖರ್ಜೂರ, ಮೊಸರು, ಮೀನು ಅನ್ನು ಹೆಚ್ಚಾಗಿ ಸೇವಿಸಿ.

*ಮೆಡಿಕಲ್ ಶಾಪ್ ನಲ್ಲಿ ಸಿಗುವ 0.38 ಮಿ.ಮೀ ದಪ್ಪವಿರುವ ರಿಜಿಡ್ ಸ್ಪೋರ್ಟ್ಸ್ ಟೇಪ್ ಅನ್ನು ತಂದು ರಾತ್ರಿ ಮಲಗುವಾಗ ಕಾಲಿನ ಹೆಬ್ಬೆರಳು ಹಾಗೂ ಮಧ್ಯದ ಬೆರಳುಗಳನ್ನು ಸೇರಿಸಿ ಸುತ್ತಿ. ಬೆಳಿಗ್ಗೆ ಇದನ್ನು ತೆಗೆಯಿರಿ. ಇದರಿಂದ ಕೂಡ ಕಾಲು ನೋವಿನ ಸಮಸ್ಯೆ ಕಡಿಮೆಯಾಗುತ್ತದೆ.

ಮೋದಿ ಭೇಟಿಯಾದ ದೀದಿ: CAA, NRC ಹಿಂಪಡೆಯಲು ಆಗ್ರಹ

Posted: 11 Jan 2020 05:32 AM PST

Image result for mamata-banerjee-meets-pm-modi-asks-him-to-rethink-caa-citizens-list"

 ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾರೆ. ಕೊಲ್ಕತ್ತಾದ ರಾಜಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿಯಾಗಿದ್ದಾರೆ.

ದೇಶದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಮೋದಿ ಪಶ್ಚಿಮ ಬಂಗಾಳ ಭೇಟಿಯ ಸಂದರ್ಭದಲ್ಲಿ ಗೋ ಬ್ಯಾಕ್ ಘೋಷಣೆ ಕೂಗಿ ಪ್ರತಿಭಟನೆಯ ಸ್ವಾಗತ ನೀಡಲಾಗಿದೆ. ರಾಜಭವನದಲ್ಲಿ ಪ್ರಧಾನಿಯವರನ್ನು ಭೇಟಿಯಾದ ಮಮತಾ ಬ್ಯಾನರ್ಜಿ ಮಾತುಕತೆ ನಡೆಸಿದ್ದಾರೆ. ಕೇಂದ್ರದಿಂದ ಪಶ್ಚಿಮ ಬಂಗಾಳಕ್ಕೆ ಬರಬೇಕಾದ ಅನುದಾನ ಬಗ್ಗೆ ಚರ್ಚೆ ನಡೆಸಿದ್ದಾರೆ. ಭೇಟಿಯ ಬಳಿಕ ಮಾತನಾಡಿದ ಅವರು, ಪಶ್ಚಿಮ ಬಂಗಾಳಕ್ಕೆ ಕೇಂದ್ರದಿಂದ 28,000 ಕೋಟಿ ರೂಪಾಯಿ ಅನುದಾನ ಬರಬೇಕಿದೆ. ಇದನ್ನು ನೀಡುವಂತೆ ಮನವಿ ಮಾಡಲಾಗಿದೆ. ಅದೇ ರೀತಿ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

Posted: 11 Jan 2020 05:06 AM PST

ಬೆಂಗಳೂರಿನಲ್ಲಿ ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 35 ವರ್ಷದ ಮಂಜುಳಾ ಹತ್ಯೆಗೀಡಾದವರೆಂದು ಹೇಳಲಾಗಿದೆ.

ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಂಜುಳಾ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದು, ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸಂಪುಟ ವಿಸ್ತರಣೆ: ವರಿಷ್ಠರ ನಿರ್ಧಾರ ಒಪ್ಪದ ಸಿಎಂ ಯಡಿಯೂರಪ್ಪ…?

Posted: 11 Jan 2020 04:59 AM PST

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಪ್ರಕ್ರಿಯೆ ಆರಂಭವಾಗಿದ್ದು, ಉಪ ಚುನಾವಣೆಯಲ್ಲಿ ಗೆದ್ದ 12 ಶಾಸಕರಲ್ಲಿ 11 ಮಂದಿಗೆ ಸಚಿವ ಸ್ಥಾನ ನೀಡುವ ಕುರಿತು ಬಿಜೆಪಿ ವಲಯದಲ್ಲಿ ಚರ್ಚೆ ನಡೆದಿದೆ.

ಸಿಎಂ ಯಡಿಯೂರಪ್ಪ 11 ಮಂದಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದು, ಇದಕ್ಕೆ ಒಪ್ಪದ ವರಿಷ್ಠರು 6 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ವೇಳೆಗಾಗಲೇ ಸಂಪುಟ ವಿಸ್ತರಣೆ ಆಗಬೇಕಿತ್ತು. ಈಗ ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ ಆಗಲಿದೆ.

ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ದೆಹಲಿಗೆ ತೆರಳಬೇಕಿತ್ತು. ಆದರೆ, ಜನವರಿ 17, 18 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ದೆಹಲಿ ಭೇಟಿ ರದ್ದು ಮಾಡಿದ್ದಾರೆ. ಅಮಿತ್ ಶಾ ಅವರು ಎರಡು ದಿನ ರಾಜ್ಯದಲ್ಲಿರುವಾಗಲೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು 6 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಬೇಕೆಂಬ ಪಕ್ಷದ ವರಿಷ್ಠರ ನಿರ್ಧಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಲ್ಲ. ಹೆಚ್ಚುವರಿ ಸಚಿವ ಸ್ಥಾನ ನೀಡುವಂತೆ ವರಿಷ್ಠರ ಬಳಿ ಪಟ್ಟು ಹಿಡಿದಿದ್ದಾರೆ. ಬಳಿಕ 8 ಮಂದಿಯನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನವೆನ್ನಲಾಗಿದೆ. ಹೀಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನಾ ಚರ್ಚೆಗಳು ನಡೆದಿದ್ದು, ಅಮಿತ್ ಶಾ ರಾಜ್ಯಕ್ಕೆ ಬಂದ ಬಳಿಕವೇ ನಿರ್ಧಾರವಾಗಲಿದೆ ಎಂದು ಹೇಳಲಾಗಿದೆ.

ಶಾಕಿಂಗ್ ನ್ಯೂಸ್: ತಂಗಿ ಜೊತೆಗಿನ ರಾಸಲೀಲೆ ವಿಡಿಯೋ ಹರಿಬಿಟ್ಟ

Posted: 11 Jan 2020 04:35 AM PST

ಸಂಬಂಧದಲ್ಲಿ ಸಹೋದರಿ ಆಗಬೇಕಿದ್ದ ಯುವತಿಯನ್ನು ಪ್ರೀತಿಸಿದ್ದ ಯುವಕ ಮದುವೆ ಮಾಡಿಕೊಡಲು ಒಪ್ಪದ ಕಾರಣಕ್ಕೆ ಖಾಸಗಿ ಕ್ಷಣದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸರು ಪಾಂಡಿಚೇರಿ ಮೂಲದ ಯುವಕನನ್ನು ಬಂಧಿಸಿದ್ದಾರೆ. ಪಾಂಡಿಚೇರಿ ಮೂಲದವರೇ ಆಗಿರುವ ಯುವತಿಯ ತಂದೆ ಕೆಲಸದ ನಿಮಿತ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ತಾಯಿಯ ಕಡೆಯ ಸಂಬಂಧಿಯಾಗಿದ್ದ ಯುವಕ, ಯುವತಿಯೊಂದಿಗೆ ಹೆಚ್ಚು ಒಡನಾಟ ಹೊಂದಿದ್ದ. ಇಬ್ಬರು ಪ್ರೀತಿಸಿದ್ದು ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ವಿಡಿಯೋ ಮಾಡಿಕೊಂಡಿದ್ದಾರೆ.

ಸಂಬಂಧದಲ್ಲಿ ಸಹೋದರ-ಸಹೋದರಿ ಆಗಬೇಕಿದ್ದ ಕಾರಣ ಮನೆಯಲ್ಲಿ ಮದುವೆಗೆ ನಿರಾಕರಿಸಲಾಗಿದೆ. ಇದಕ್ಕೆ ಒಪ್ಪದ ಯುವಕ ಆಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ. ಒಪ್ಪದಿದ್ದಾಗ ವಿಡಿಯೋ ಹರಿಬಿಟ್ಟಿದ್ದಾನೆ ಎನ್ನಲಾಗಿದೆ. ಇದರಿಂದ ನೊಂದ ಯುವತಿ ಕುಟುಂಬದವರು ಧಾರವಾಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಂಕ್ರಾಂತಿಗೆ ‘ಭರ್ಜರಿ ಗಿಫ್ಟ್’

Posted: 11 Jan 2020 04:27 AM PST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಭರ್ಜರಿ ಉಡುಗೊರೆ ಸಿಕ್ಕಿದೆ. ಸುದೀಪ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಅಭಿನಯದ 'ಪೈಲ್ವಾನ್' ಚಿತ್ರ ನಾಳೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಸಂಕ್ರಾಂತಿ ಹಬ್ಬದ ಅಂಗವಾಗಿ ಜೀ ಕನ್ನಡ ವಾಹಿನಿಯಲ್ಲಿ ಜನವರಿ 12 ರಂದು ಭಾನುವಾರ ಸಂಜೆ 7 ಗಂಟೆಗೆ 'ಪೈಲ್ವಾನ್' ಚಿತ್ರ ಪ್ರಸಾರವಾಗಲಿದೆ.

ಕನ್ನಡ ಮಾತ್ರವಲ್ಲದೆ, ಬಹುಭಾಷೆಗಳಲ್ಲಿ ನಿರ್ಮಾಣವಾಗಿದ್ದ 'ಪೈಲ್ವಾನ್' ಭರ್ಜರಿ ಯಶಸ್ಸು ಕಂಡಿದೆ. ಈಗಾಗಲೇ ಬೆಳ್ಳಿತೆರೆಯಲ್ಲಿ 'ಪೈಲ್ವಾನ್' ಕಣ್ತುಂಬಿಕೊಂಡ ಅಭಿಮಾನಿಗಳು ಕಿರುತೆರೆಯಲ್ಲಿಯೂ ವೀಕ್ಷಿಸಬಹುದಾಗಿದೆ.

ರೈಲು ಬೋಗಿಯಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

Posted: 11 Jan 2020 02:08 AM PST

ಉತ್ತರ ಪ್ರದೇಶದ ಕಾನ್ಪುರದ ದಂಪತಿ ರೈಲು ಪ್ರಯಾಣವನ್ನು ಎಂದೂ ಮರೆಯುವುದಿಲ್ಲ. ಹೃತೇಶ್ ತಮ್ಮ ಪತ್ನಿ ಜತೆ ದುರ್ಗಾಪುರದಿಂದ ಕಾನ್ಪುರಕ್ಕೆ ಹೊರಟಿದ್ದರು. ರೈಲಿನಲ್ಲಿಯೇ ಪತ್ನಿ ಜ್ಯೋತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ರೈಲು ಬೋಗಿಯಲ್ಲೇ ಬಟ್ಟೆಯನ್ನು ಕಟ್ಟಿ ಹೆರಿಗೆ ಮಾಡಿಸಲಾಗಿದೆ.

ಮಹಿಳೆ ರೈಲಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ನಂತ್ರ ತಾಯಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆಂದು ಮೂಲಗಳು ಹೇಳಿವೆ. ಘಟನೆ ಪೂರ್ವಾ ಎಕ್ಸ್‌ಪ್ರೆಸ್ ನಲ್ಲಿ ನಡೆದಿದೆ. ಜ್ಯೋತಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ದಾನಾಪುರ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿದೆ.

ಅವ್ರು ಬಕ್ಸರ್ ರೈಲ್ವೆ ನಿಲ್ದಾಣಕ್ಕೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ರೈಲು ನಿಲ್ದಾಣ ತಲುಪುವ ಮೊದಲೇ ಎಲ್ಲ ವ್ಯವಸ್ಥೆಯಾಗಿತ್ತು. ನಿಲ್ದಾಣ ತಲುಪುತ್ತಿದ್ದಂತೆ ಬೋಗಿಯಲ್ಲೇ ಹೆರಿಗೆ ಮಾಡಿಸಲಾಗಿದೆ.

ವಿಚಿತ್ರ ದಾಖಲೆ ಬರೆದ ಸಂಜು ಸ್ಯಾಮ್ಸನ್…!

Posted: 11 Jan 2020 02:04 AM PST

ಐಪಿಎಲ್‌ ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ
ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರನೆಂದು‌ ಗುರುತಿಸಿಕೊಂಡಿರುವ ಸಂಜು ಸ್ಯಾಮ್ಸನ್ ಅನಗತ್ಯ ದಾಖಲೆಯೊಂದಕ್ಕೆ‌ ಸೇರ್ಪಡೆಗೊಂಡಿದ್ದಾರೆ.

ಹೌದು,‌ ಭಾರತದ ವಿಕೆಟ್ ಕೀಪರ್ ಆಗಿರುವ ಸಂಜು ಶ್ರೀಲಂಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಪಂತ್ ಬದಲು ಆಡಿದ್ದಾರೆ. ಆದರೆ ಈ ರೀತಿ ಆಡುವ ಮೂಲಕ ವಿಚಿತ್ರ ದಾಖಲೆಯೊಂದನ್ನು ಬರೆದಿದ್ದಾರೆ.

ಜಿಂಬಾಬ್ವೆ ವಿರುದ್ಧ 2015 ರಲ್ಲಿಯೇ ಅಂತಾರಾಷ್ಟ್ರೀಯ ಟಿ-20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದು,‌ ಸಂಜು ಅಲ್ಲಿಂದ ಇಲ್ಲಿಯವರೆಗೆ ಅಂದರೆ ಬರೋಬ್ಬರಿ ಐದು ವರ್ಷಗಳ ಕಾಲ ತಂಡದ 11ರ‌ ಬಳಗದಲ್ಲಿ ಕಾಣಿಸಿರಲಿಲ್ಲ. ಶುಕ್ರವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗುವ ಮೂಲಕ ಎರಡನೇ ಪಂದ್ಯವಾಡುತ್ತಿದ್ದಾರೆ.

ಆದರೆ ಈ ಐದು ವರ್ಷದ ಅವಧಿಯಲ್ಲಿ ಭಾರತ 73 ಟಿ-20 ಪಂದ್ಯವನ್ನು ಆಡಿದೆ. ಸಂಜು ಬಳಿಕ‌ ಎರಡನೇ ಸ್ಥಾನದಲ್ಲಿ ಉಮೇಶ್ ಯಾದವ್ ಇದ್ದು, ಅವರು 65 ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ದಾಖಲೆ ನೋಡುವುದಾದರೆ ಇಂಗ್ಲೆಂಡ್‌ನ ಜೋಯ್ ಡೆನ್ಲಿ 79 ಪಂದ್ಯ ಮಿಸ್ ಮಾಡಿಕೊಳ್ಳುವುದರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಲಿಯಮ್ ಪ್ಲಂಕಿಟ್ ಇದ್ದಾರೆ. ಈ ರೀತಿ ಅನಗತ್ಯ ‌ದಾಖಲೆ ಬರೆದ ಸಂಜು ಬಗ್ಗೆ ನೆಟ್ಟಿಗರು ಭಾರಿ ಚರ್ಚೆ ನಡೆಸಿದ್ದಾರೆ.

ಮಾಲಿನ್ಯ ತಡೆಗೆ ಹೊಸ ಪ್ಲಾನ್ ಮಾಡಿದ ಒಲಂಪಿಕ್ಸ್ ಆಯೋಜಕರು

Posted: 11 Jan 2020 02:02 AM PST

ಪ್ರಸಕ್ತ ವರ್ಷ ಕ್ರೀಡಾ ಪ್ರೇಮಿಗಳಲ್ಲಿ ಭರಪೂರ ಮನೋರಂಜನೆ ನೀಡಲು ಟೋಕಿಯೋ ಸಿದ್ಧವಾಗುತ್ತಿದೆ. ಒಲಂಪಿಕ್ಸ್ ಗೆ ಸಜ್ಜಾಗುತ್ತಿರುವ‌ ಟೋಕಿಯೋ ಮನೋರಂಜನೆ ಜತೆ ಪರಿಸರ ರಕ್ಷಣೆ ಬಗ್ಗೆಯೂ ನಿಗಾ ವಹಿಸಿದೆ.

ಹೌದು, ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್‌ಗಾಗಿ ಸಜ್ಜುಗೊಳಿಸಲಾಗುತ್ತಿದ್ದು, ಕ್ರೀಡಾಳುಗಳು ಉಳಿದುಕೊಳ್ಳುವ ಗ್ರಾಮದಲ್ಲಿ ನಿರ್ಮಾಣವಾಗುವ ಬೆಡ್‌ಗಳನ್ನು ಮರುಬಳಕೆ ಬರುವಂತೆ ತಯಾರಿಸಿದ್ದಾರೆ.

ಕಾರ್ಬನ್ ಡೈಆಕ್ಸೈಡ್ ಕಡಿಮೆಗೊಳಿಸಲು, ಕಾರ್ಡ್‌ ಬೋರ್ಡ್‌ನಿಂದ ಬೆಡ್‌ಗಳನ್ನು ತಯಾರಿಸಿದ್ದು, ಬಳಿಕ ಇದನ್ನು ಪೇಪರ್‌ ತಯಾರಿಸಲು ಬಳಸಬಹುದು ಎಂದು ಆಯೋಜಕರು ಹೇಳಿದ್ದಾರೆ. 200 ಕೆಜಿ ತೂಕವನ್ನು ಈ ಬೆಡ್‌ಗಳು ತಡೆಯುತ್ತವೆ ಅಂತೆ.

ಈ ಬಾರಿ ಒಲಂಪಿಕ್ಸ್‌‌ಗೆ ಅಗತ್ಯವಿರುವ 18 ಸಾವಿರ ಬೆಡ್ ಹಾಗೂ ಪ್ಯಾರಾ ಒಲಂಪಿಕ್ಸ್‌ಗೆ 8ಸಾವಿರ ಬೆಡ್‌ಗಳು ಅಗತ್ಯವಿದೆಯಂತೆ. ಈ ಎಲ್ಲ ಬೆಡ್‌ಗಳು ಮರುಬಳಕೆ ಮಾಡಬಹುದು ಎಂದು ತಿಳಿದುಬಂದಿದೆ.

ಮಾರುತಿ ಕಾರು ಪ್ರಿಯರಿಗೆ ಇಲ್ಲಿದೆ ಒಂದು ‘ಬಂಪರ್’ ಸುದ್ದಿ

Posted: 11 Jan 2020 02:00 AM PST

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಕಾರುಗಳ ಪಾವತಿಯನ್ನು ಕಡಿಮೆ ಮಾಡಲು ಬ್ಯಾಂಕ್, ಕಾರು ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಲ್ಲಿ ಗ್ರಾಹಕರ ಡೌನ್ ಪೇಮೆಂಟ್ ಕಡಿಮೆಯಾಗಲಿದೆ. ಸದ್ಯ ಈ ಯೋಜನೆ ಚರ್ಚಾ ಹಂತದಲ್ಲಿದೆ.

ಕಳೆದ ಕೆಲವು ವರ್ಷಗಳಲ್ಲಿ ಕಾರುಗಳ ಬೆಲೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಬ್ಯಾಂಕ್ ಡೌನ್ ಪೇಮೆಂಟ್ ಗೆ ಹೆಚ್ಚಿನ ಹಣ ಪಾವತಿಸಿಕೊಳ್ಳುತ್ತದೆ. ಇದ್ರಿಂದ ಹೊರಬರಲು ಬ್ಯಾಂಕ್ ಜೊತೆ ಕಾರು ಕಂಪನಿಗಳು ಒಪ್ಪಂದ ಮಾಡಿಕೊಳ್ಳುತ್ತವೆ. ಕಂಪನಿಯು ತನ್ನ ವಿಶೇಷ ಯೋಜನೆಯ ಮೂಲಕ ಕಡಿಮೆ ಡೌನ್ ಪೇಮೆಂಟ್ ಗೆ ಕಾರುಗಳನ್ನು ಮಾರಾಟ ಮಾಡುತ್ತದೆ. ಇದ್ರಿಂದ ಕಾರಿನ ಮಾರಾಟ ಹೆಚ್ಚಿಸುವುದು ಕಂಪನಿ ಉದ್ದೇಶ.

ಪ್ರಸ್ತುತ ಗ್ರಾಹಕರು ಕಾರಿನ ಆನ್‌ರೋಡ್ ಬೆಲೆಯಲ್ಲಿ ಶೇಕಡಾ 20 ರಷ್ಟು ಹಣವನ್ನು ಡೌನ್ ಪೇಮೆಂಟ್ ಮಾಡಬೇಕು. ಒಂದು ವೇಳೆ ಮಾರುತಿ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಲ್ಲಿ ಶೇಕಡಾ 10ರಷ್ಟು ಹಣವನ್ನು ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ.

 

BSNL ಹೊಸ ಪ್ಲಾನ್ ನಲ್ಲಿ ಸಿಗ್ತಿದೆ 15000ಜಿಬಿ ಡೇಟಾ

Posted: 11 Jan 2020 01:10 AM PST

ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್  ಹೊಸ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಬೆಲೆ 1,999 ರೂಪಾಯಿ. ಪ್ರಸ್ತುತ ಈ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಕಾಂಬೊ ಯೋಜನೆ ಕೆಲವು ವಲಯಗಳಲ್ಲಿ ಮಾತ್ರ ಲಭ್ಯವಾಗಲಿದೆ.

ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 200Mbps ವೇಗದಲ್ಲಿ ನೆಟ್ ಸಿಗಲಿದೆ. ಈ ಪ್ಲಾನ್ 90 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಹೊಸ ಯೋಜನೆಯ  ಎಫ್‌ಯುಪಿ ಡೇಟಾ ಮಿತಿ 1500 ಜಿಬಿ ಅಂದರೆ 1.5 ಟಿಬಿ. ಇಂಡಿಯಾ ಫೈಬರ್ ಪೋರ್ಟ್ಫೋಲಿಯ ಭಾಗವಾಗಿದೆ. ಎಫ್‌ಯುಪಿ ಮಿತಿ ಮುಗಿದ ನಂತರ ಇಂಟರ್ನೆಟ್ ವೇಗ 2 ಎಮ್‌ಬಿಪಿಎಸ್‌ಗೆ ಇಳಿಯಲಿದೆ.

ಸದ್ಯ ಚೆನ್ನೈ ಮತ್ತು ತೆಲಂಗಾಣ ವಲಯದಲ್ಲಿ ಈ ಯೋಜನೆ ಲಭ್ಯವಿದೆ. ಗ್ರಾಹಕರು ಭಾರತದ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು 200Mbps ವೇಗದಲ್ಲಿ 1.5 ಟಿಬಿ ಡೇಟಾ ಪಡೆಯಬಹುದು. ಏಪ್ರಿಲ್ 6, 2020ರವರೆಗೆ ಇದಕ್ಕೆ ಅವಕಾಶವಿದೆ.

ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ನಾನು ಮತ್ತು ಗುಂಡ ಸಾಂಗ್

Posted: 11 Jan 2020 12:50 AM PST

ಸ್ಯಾಂಡಲ್ವುಡ್ ನ ನಾನು ಮತ್ತು ಗುಂಡ ಚಿತ್ರ ಸೆನ್ಸಾರ್ ನಿಂದ ಶಹಬ್ಬಾಸ್ ಗಿರಿ ಪಡೆದಿದೆ. ಇದೇ ಉತ್ಸಾಹದಲ್ಲಿ ಚಿತ್ರ ತಂಡ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿದೆ.

ಅಯ್ಯಯ್ಯೋ ರಾಮ ರಾಮ ಎಂಬ ಹಾಡು ಈಗಾಗಲೇ ಚಿತ್ರಪ್ರೇಮಿಗಳ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದೆ. ಆಟೋ ಡ್ರೈವರ್ ಶಂಕರನ ಬೆನ್ನು ಹತ್ತುವ  ಗುಂಡನ ಕಾಟ ತಡೆಯಲಾರದ ಶಂಕರನ ಪರಿಸ್ಥಿತಿ ಈ ಹಾಡಿನಲ್ಲಿ ತಿಳಿಹಾಸ್ಯದೊಂದಿದೆ ವ್ಯಕ್ತವಾಗಿದೆ.

ಕಾರ್ತಿಕ್ ಶರ್ಮಾ ಕಂಪೋಸ್ ಮಾಡಿರುವ ಕ್ಯಾಚಿ ಟ್ಯೂನ್ ಗೆ ರೋಹಿತ್ ರಮಣ್ ಸಾಹಿತ್ಯ ನೀಡಿದ್ದಾರೆ. ಈ ಹಾಡು ಚಿತ್ರಪ್ರೇಮಿಗಳ ಹಾಗೂ ಶ್ವಾನಪ್ರೇಮಿಗಳ ಆಸಕ್ತಿಯನ್ನ ಮತ್ತಷ್ಟು ಹೆಚ್ಚಿಸುತ್ತಿದೆ. ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತಾ ಹೊರನಾಡು ಮುಖ್ಯಪಾತ್ರದಲ್ಲಿ ನಟಿಸಿರುವ `ನಾನು ಮತ್ತು ಗುಂಡ’ ಚಿತ್ರವನ್ನು ರಘು ಹಾಸನ್ ನಿರ್ದೇಶಿಸಿದ್ದಾರೆ.

 

ಕಾಡ್ಗಿಚ್ಚಿನಿಂದ ಮನೆ ಕಳೆದುಕೊಂಡವನಿಗೆ ಬಂದಿದ್ದು ಬರೋಬ್ಬರಿ ₹4.88 ಕೋಟಿ ಲಾಟರಿ…!

Posted: 11 Jan 2020 12:32 AM PST

 ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ದಿನೇ ದಿನೇ ಕಾಡ್ಗಿಚ್ಚು ಹೆಚ್ಚುತ್ತಲೇ ಇದ್ದು, ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದರ ನಡುವೆ 8 ಸಾವಿರ ಹೆಕ್ಟೇರ್ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ 2000 ಮನೆಗಳು ನಾಶವಾಗಿವೆ.

ಅದೆಷ್ಟೋ ಮಂದಿ ನಿರ್ಗತಿಕರಾಗಿದ್ದಾರೆ. ಹಲವರು ಪ್ರಾಣವನ್ನು ಬಿಟ್ಟಿದ್ದರೆ, ಕೋಟಿಗಟ್ಟಲೆ ಪ್ರಾಣಿಗಳು ಜೀವ ತೆತ್ತಿವೆ. ಆದರೆ ಒಂದು ಸಮಾಧಾನಕರ ಸಂಗತಿಯೆಂದರೆ ಈ ಕಾಡ್ಗಿಚ್ಚಿನಲ್ಲಿ ಮನೆ ಕಳೆದುಕೊಂಡಾತನಿಗೆ ಲಾಟರಿ ಹೊಡೆದಿದೆ.

ಮನೆಯನ್ನೇನೋ ಕಟ್ಟಿಸಿಕೊಂಡಿದ್ದ ಈತ ಅದಕ್ಕೆ ವಿಮೆಯನ್ನು ಮಾಡಿಸಿರಲಿಲ್ಲ. ಈಗ ಗ್ರಹಚಾರ ಸಹ ಕೆಟ್ಟಿದ್ದರಿಂದ ಕಾಡ್ಗಿಚ್ಚಿಗೆ ಮನೆ ಭಸ್ಮವಾಗಿದೆ. ಆದರೆ ಅದೃಷ್ಟ ಕೈ ಹಿಡಿದಿದ್ದು ₹4.88 ಕೋಟಿ ಲಾಟರಿ ಹೊಡೆದಿದೆ. ಅಂದ ಹಾಗೆ ಈತ ರೆಡ್ ಲ್ಯಾಂಡ್ ನ ಮೌಂಟ್ ಕಾಟನ್ ನಿವಾಸಿಯಾಗಿದ್ದು ಹೆಸರು ತಿಳಿದು ಬಂದಿಲ್ಲ.

ಲಾಟರಿಯಲ್ಲಿ ಹಣ ಬಂದ ವಿಷಯವನ್ನು ಲಾಟರಿ ಸಂಸ್ಥೆಯವರು ತಿಳಿಸಿದಾಗ ಖುಷಿಗೊಂಡ ಈ ವ್ಯಕ್ತಿ, ತನ್ನ ಮನೆ ಕಾಡ್ಗಿಚ್ಚಿನಲ್ಲಿ ಭಸ್ಮವಾಗಿದ್ದರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಹೀಗಾಗಿ ಈ ಹಣ ಆತನಿಗೆ ತುಂಬಾ ಅವಶ್ಯಕತೆ ಉಳ್ಳದ್ದಾಗಿದೆ. ಮನೆ ಕಟ್ಟಿಕೊಳ್ಳಲು ಸಹಾಯಕವಾಗಲಿದೆ ಎಂದು ಲಾಟರಿ ಸಂಸ್ಥೆ ಹೇಳಿದೆ.

ಪತ್ನಿಗಾಗಿ ಪತಿ ತೋರಿದ ಪ್ರೀತಿ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ

Posted: 11 Jan 2020 12:04 AM PST

ಗಂಡ ಹೆಂಡತಿಯ ಸಂಬಂಧ ಬಹಳ ಆಳವಾಗಿರುತ್ತದೆ. ಇಬ್ಬರ ಮಧ್ಯೆ ನಿಜವಾದ ಪ್ರೀತಿಯಿದ್ದಾಗ ಅದ್ರಲ್ಲೂ ವಿಶೇಷ ಅತಿಥಿ ಮನೆಗೆ ಬರ್ತಾರೆ ಎಂದಾಗ ದಂಪತಿ ಮಧ್ಯೆ ಪ್ರೀತಿ ದುಪ್ಪಟ್ಟಾಗುತ್ತದೆ. ಗರ್ಭಿಣಿ ಪತ್ನಿ ಸಹಾಯಕ್ಕೆ ನಿಂತ ಪತಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ಚೀನಾದ ಆಸ್ಪತ್ರೆಯೊಂದರದ್ದು ಎನ್ನಲಾಗಿದೆ. ಗರ್ಭಿಣಿ ತುಂಬಾ ಸಮಯ ಬಾಗಿಲ ಬಳಿ ಕಾಯುತ್ತ ನಿಂತಿದ್ದಾಳೆ. ಎಷ್ಟು ಸಮಯವಾದ್ರೂ ಆಕೆಗೆ ಖುರ್ಚಿ ಸಿಗುವುದಿಲ್ಲ. ಆಗ ಪತಿ ಖುರ್ಚಿಯಾಗ್ತಾನೆ. ಪತಿ ಬೆನ್ನಿನ ಮೇಲೆ ಪತ್ನಿ ಕುಳಿತುಕೊಳ್ತಾಳೆ. ಹೆಂಡತಿಗಾಗಿ ಗಂಡ ತೋರಿಸಿದ ಪ್ರೀತಿ ವಿಡಿಯೋವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವಿಡಿಯೋದಲ್ಲಿ ನೋಡುವಂತೆ ಖುರ್ಚಿ ಮೇಲೆ ಅನೇಕರು ಕುಳಿತಿದ್ದಾರೆ. ಆದ್ರೆ ಯಾರೂ ಮಹಿಳೆಗೆ ಖುರ್ಚಿ ನೀಡುವುದಿಲ್ಲ.

 

 

ಉಕ್ರೇನ್ ವಿಮಾನ ಪತನಕ್ಕೆ ಕ್ಷಿಪಣಿ ಕಾರಣ…!

Posted: 10 Jan 2020 11:45 PM PST

ತೆರ್ಹಾನ್, ಇರಾನ್: ಉಕ್ರೇನ್ ಏರ್ಲೈನ್ಸ್ ಪತನವಾಗಿ 176 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರಕಿದ್ದು, ಇದಕ್ಕೆ ಇರಾನ್ ಹಾರಿಸಿದ ಕ್ಷಿಪಣಿಯೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗೆ ಕ್ಷಿಪಣಿ ವಿಮಾನಕ್ಕೆ ಡಿಕ್ಕಿ ಹೊಡೆದ ವಿಡಿಯೋ ವೈರಲ್ ಆಗುತ್ತಿದೆ.

ಇರಾಕ್ ಅಮೆರಿಕ ಸೇನಾ ನೆಲೆಗಳ ಮೇಲೆ ಹಾರಿಸಿದ ಕ್ಷಿಪಣಿ ತಪ್ಪಿ ವಿಮಾನಕ್ಕೆ ಬಡಿದಿದೆ ಎಂದು ಬ್ರಿಟನ್ ಮತ್ತು ಕೆನಡಾ ಅಭಿಪ್ರಾಯಪಟ್ಟಿದ್ದವು.

ಈಗ ಅದಕ್ಕೆ ಪೂರಕವೆಂಬಂತೆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜ.8 ರಂದು ಪತನಗೊಂಡಿದ್ದ ವಿಮಾನದಲ್ಲಿ 168 ಪ್ರಯಾಣಿಕರು ಹಾಗೂ 9 ಸಿಬ್ಬಂದಿ ಸಾವನ್ನಪ್ಪಿದ್ದರು. ಇವರಲ್ಲಿ ಕೆನಡಾದ 63 ಮಂದಿ ಇದ್ದರು.

ಐದು ಮರಿಗಳೊಂದಿಗೆ ವಿಹರಿಸುತ್ತಿರುವ ಹುಲಿ ಫೋಟೋ ವೈರಲ್

Posted: 10 Jan 2020 11:44 PM PST

ಹೆಣ್ಣು ಹುಲಿಯೊಂದು ತನ್ನ ಐದು ಮರಿಗಳೊಂದಿಗೆ ವಿಹಾರಕ್ಕೆ ಹೋಗುತ್ತಿರುವ ಪೋಟೋವೊಂದು ಆನ್ಲೈನ್‌ನಲ್ಲಿ ವೈರಲ್ ಆಗಿದೆ. ತೆರಾಯಿಯ ಅರಣ್ಯ ಪ್ರದೇಶದಲ್ಲಿ ಹುಲಿಯು ತನ್ನ ಮರಿಗಳೊಂದಿಗೆ ಅಡ್ಡಾಡುತ್ತಿರುವ ಈ ಚಿತ್ರ ನೆಟ್ಟಿಗರ ಕಣ್ಮನ ಸೆಳೆಯುತ್ತಿದೆ.

ಸಿದ್ಧಾರ್ಥ ಸಿಂಗ್ ಎಂಬುವವರು ಸೆರೆಹಿಡಿದ ಈ ಚಿತ್ರವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಸ್ವಾನ್ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

“ಇದೊಂದು ಮಾಯಾದಂಥ ಚಿತ್ರ. ಹುಲಿಯೊಂದಿಗೆ ಇರುವ ಮರಿಗಳನ್ನು ಲೆಕ್ಕ ಹಾಕಿ. ಏನೋ ಒಂದು ಕಾರಣಕ್ಕೆ ಈ ಚಿತ್ರ ಬಹಳ ಖುಷಿ ಕೊಡಲಿದೆ ಎಂದು ನನಗೆ ಗೊತ್ತಿದೆ. ನಶಿಸಿ ಹೋಗುವ ಹಂತದಲ್ಲಿದ್ದ ಹುಲಿಗಳು ಮತ್ತೆ ಎದ್ದು ಬರುವಂತೆ ಕೈಗೊಳ್ಳುತ್ತಿರುವ ಪ್ರಯತ್ನಗಳು ಫಲಗೂಡುತ್ತಿವೆ” ಎಂದು ಕಸ್ವಾನ್ ಸಂತಸ ಹಂಚಿಕೊಂಡಿದ್ದಾರೆ.

ದ್ರಾವಿಡ್ ಹುಟ್ಟುಹಬ್ಬದಂದು ಸೆಹ್ವಾಗ್ ತಮಾಷೆ ಟ್ವೀಟ್

Posted: 10 Jan 2020 11:43 PM PST

द्रविड़ के बर्थडे पर सहवाग का मजेदार ट्वीट, मिक्सर ग्राइंडर से की तुलना

ಟೀಮ್  ಇಂಡಿಯಾದ ಮಾಜಿ ಸ್ಫೋಟಕ ಓಪನರ್ ವೀರೇಂದ್ರ ಸೆಹ್ವಾಗ್ ವೃತ್ತಿ ತೊರೆದ ನಂತರ ಸಾಮಾಜಿಕ ಜಾಲತಾಣದಲ್ಲಿ  ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ದ್ರಾವಿಡ್ ಗೆ ಸೆಹ್ವಾಗ್  ಜನ್ಮದಿನದ ಶುಭ ಕೋರಿದ್ದಾರೆ. ದ್ರಾವಿಡ್ ಗೆ ಸೆಹ್ವಾಗ್, ವಿನೋದವಾಗಿ ಶುಭಕೋರಿದ್ದಾರೆ.

ಟೀಂ ಇಂಡಿಯಾ ವಾಲ್ ದ್ರಾವಿಡ್‌ ಇಂದು 47 ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಜನವರಿ 11, 1973 ರಂದು ಜನಿಸಿರುವ ದ್ರಾವಿಡ್ ಗೆ ಅಭಿಮಾನಿಗಳಿಂದ ಹುಟ್ಟುಹಬ್ಬದ ಶುಭಾಶಯ ಹರಿದು ಬರ್ತಿದೆ. ಈ ವೇಳೆ ಸೆಹ್ವಾಗ್ ಕೂಡ ದ್ರಾವಿಡ್ ಗೆ ಶುಭಕೋರಿದ್ದಾರೆ. ದ್ರಾವಿಡ್ ಅವರೊಂದಿಗಿರುವ ಫೋಟೋ ಹಂಚಿಕೊಂಡಿರುವ ಸೆಹ್ವಾಗ್, ನನಗೆ ಅರ್ಥವಾಗುವ ಮಟ್ಟಿಗೆ ರುಬ್ಬುವುದು  ಅಡುಗೆಮನೆಯಲ್ಲಿರುವ ಮಿಕ್ಸರ್, ಗ್ರೈಂಡರ್ನಲ್ಲಿ ಮಾತ್ರ ನಡೆಯುತ್ತದೆ ಎಂದು ಭಾವಿಸಿದ್ದೆ. ಆದರೆ ಕ್ರಿಕೆಟ್ ಪಿಚ್ನಲ್ಲಿಯೂ ಇದು ಸಾಧ್ಯ ಎಂದು ದ್ರಾವಿಡ್ ಕಲಿಸಿದ್ದರು. ಹ್ಯಾಪಿ ಬರ್ತ್‌ಡೇ ರಾಹುಲ್‌ಡ್ರಾವಿಡ್ ' ಎಂದು ಸೆಹ್ವಾಗ್ ಹೇಳಿದ್ದಾರೆ.

ಸೆಹ್ವಾಗ್ ವಿನೋದಕರ ಟ್ವಿಟ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಅಭಿಮಾನಿಗಳು, ಕ್ರಿಕೆಟ್  ದಿಗ್ಗಜರು ಸೇರಿದಂತೆ ಅನೇಕರು ದ್ರಾವಿಡ್ ಗೆ ಶುಭಕೋರಿದ್ದಾರೆ.

ವಿಶ್ವದ ಅತ್ಯಂತ ಚಿಕ್ಕ ಸ್ಮಾರ್ಟ್ಫೋನ್ ಮಾರುಕಟ್ಟೆಗೆ

Posted: 10 Jan 2020 11:14 PM PST

ಸ್ಮಾರ್ಟ್ಫೋನ್ ಪ್ರಿಯರಿಗೊಂದು ಖುಷಿ ಸುದ್ದಿಯಿದೆ. ವಿಶ್ವದ ಅತ್ಯಂತ ಚಿಕ್ಕ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಯುಕೆ ಕಂಪನಿ Zini Mobiles ಚಿಕ್ಕ ಮೊಬೈಲ್ ಬಿಡುಗಡೆ ಮಾಡಿದೆ. Zanco tiny t2 ಮೊಬೈಲ್ ಗಾತ್ರ ಹೆಬ್ಬೆರಳಿನಷ್ಟಿದೆ.

ಇದಕ್ಕೂ ಮೊದಲು ಕಂಪನಿ Zanco tiny t1 ಫೋನ್ ಬಿಡುಗಡೆ ಮಾಡಿತ್ತು. ಹೊಸ ಫೋನ್ ಇದ್ರ ನವೀಕರಣವೆನ್ನಲಾಗಿದೆ. ಈ ಚಿಕ್ಕ ಫೋನ್ ನಲ್ಲಿ ಗ್ರಾಹಕರಿಗೆ ಕ್ಯಾಮರಾ ಸಿಗಲಿದೆ. ಈ ಫೋನ್ ತೂಕ ಕೇವಲ 31 ಗ್ರಾಂ. 3 ಜಿ ಸಾಧನವು ಬ್ಲೂಟೂತ್ ಸಂಪರ್ಕ ಮತ್ತು ಎಸ್‌ಒಎಸ್ ಮೆಸ್ಸೇಜ್ ಫಂಕ್ಷನ್ ಹೊಂದಿದೆ.

ಪ್ರಸ್ತುತ ಫೋನನ್ನು ಯುಎಸ್ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಬಳಕೆದಾರರು ಅಧಿಕೃತ ವೆಬ್‌ಸೈಟ್ ಮೂಲಕ ಮೊಬೈಲ್ ಬುಕ್ ಮಾಡಬಹುದು. ಫೋನ್ ನಲ್ಲಿ ಕ್ಯಾಮರಾ ಜೊತೆ ವಿಡಿಯೋ ರೆಕಾರ್ಡಿಂಗ್, ಎಂಪಿ 3 ಮತ್ತು ಎಂಪಿ 4 ಪ್ಲೇಬ್ಯಾಕ್, ಗೇಮ್, ಕ್ಯಾಲೆಂಡರ್ ಇದೆ. ಬಳಕೆದಾರರು ಎಫ್ ಎಂ ರೆಡಿಯೋ ಕೇಳಬಹುದು. ಇದ್ರ ಬೆಲೆ ಸುಮಾರು 4,200 ರೂಪಾಯಿ.

ಈ ಬ್ಯಾಂಕ್ ಖಾತೆದಾರರಿಗೆ ಖುಷಿ ಸುದ್ದಿ…! ಕಡಿಮೆಯಾಯ್ತು ಇಎಂಐ

Posted: 10 Jan 2020 11:03 PM PST

ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಬ್ಯಾಂಕ್ ಎಂಸಿಎಲ್ಆರ್ ದರವನ್ನು ಪರಿಷ್ಕರಿಸಿದೆ. ಎಂಸಿಎಲ್ಆರ್ ದರವನ್ನು ಶೇಕಡಾ 7.65 ರಿಂದ ಶೇಕಡಾ 7.60 ಕ್ಕೆ ಇಳಿಸಲಾಗಿದೆ. ಪರಿಷ್ಕೃತ ದರ ಜನವರಿ 12, 2020ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಹೇಳಿದೆ.

ಪರಿಷ್ಕೃತ ದರದ  ಪ್ರಕಾರ ಎಂಸಿಎಲ್‌ಆರ್ ಒಂದು ರಾತ್ರಿಗೆ ಶೇ 7.65 ರಷ್ಟಾಗಲಿದೆ. ಒಂದು ತಿಂಗಳಿಗೆ ಶೇಕಡಾ 7.60ರಷ್ಟಾಗಲಿದೆ. ಮೂರು ತಿಂಗಳಿಗೆ ಶೇಕಡಾ 7.80ರಷ್ಟಾಗಲಿದೆ. ಆರು ತಿಂಗಳಿಗೆ ಶೇಕಡಾ 8.10 ಮತ್ತು ಒಂದು ವರ್ಷಕ್ಕೆ ಶೇಕಡಾ 8.25ರಷ್ಟಾಗಲಿದೆ. ಎಂ ಸಿ ಎಲ್ ಆರ್ ಇಳಿಕೆ ನಂತ್ರ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗಲಿದೆ. ಪ್ರತಿ ತಿಂಗಳು ಗ್ರಾಹಕರು ಪಾವತಿ ಮಾಡುವ ಇಎಂಐನಲ್ಲಿ ಇಳಿಕೆಯಾಗಲಿದೆ.

ಜನವರಿ 3ರಂದು ಇಂಡಿಯನ್ ಬ್ಯಾಂಕ್ ದರ ಪರಿಷ್ಕರಣೆ ಮಾಡಿತ್ತು. ಇಂಡಿಯನ್ ಬ್ಯಾಂಕ್ ಒಂದು ರಾತ್ರಿ ಎಂಸಿಎಲ್ಆರ್ ನ್ನು ಶೇಕಡಾ 7.95 ರಿಂದ ಶೇಕಡಾ 7.90 ಕ್ಕೆ ಇಳಿಸಿತ್ತು.

ಒಂದು ವರ್ಷವೂ ಪತಿ ಜೊತೆಗಿರದ ನಟಿ ಹಣಕ್ಕಾಗಿ ದೇಹ ವ್ಯಾಪಾರಕ್ಕಿಳಿದಿದ್ಲು…!

Posted: 10 Jan 2020 10:59 PM PST

ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟಿ ಶ್ವೇತಾ ಬಸು ಪ್ರಸಾದ್ ಬಗ್ಗೆ ಎಲ್ಲರಿಗೂ ಗೊತ್ತು. ಉತ್ತಮ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದ ಶ್ವೇತಾ ಈಗ ಸಿನಿಮಾ ರಂಗದಿಂದ ದೂರವಿದ್ದಾರೆ. ಬೆಸ್ಟ್ ಬಾಲ ನಟಿ ಪ್ರಶಸ್ತಿ ಪಡೆದಿದ್ದ ಕಲಾವಿದೆ ಹೆಸರು ಸೆಕ್ಸ್ ರಾಕೆಟ್ ನಲ್ಲಿ ಕೇಳಿ ಬಂದಾಗ ಎಲ್ಲರೂ ದಂಗಾಗಿದ್ದರು.

ಶ್ವೇತಾ ಕೈನಲ್ಲಿ ಹಣವಿಲ್ಲದೆ ಹೋದಾಗ ದೇಹ ವ್ಯಾಪಾರಕ್ಕಿಳಿದಿದ್ದರು. ಇಂದು ಶ್ವೇತಾ ಹುಟ್ಟುಹಬ್ಬ. 2014 ರಲ್ಲಿ ಹೈದರಾಬಾದ್‌ನ ‘ಬಂಜಾರ ಹಿಲ್ಸ್’ ನಲ್ಲಿ ನಡೆಯುತ್ತಿರುವ ಲೈಂಗಿಕ ದಂಧೆಯಲ್ಲಿ ಶ್ವೇತಾ ಬಸು ಪ್ರಸಾದ್ ಹೆಸರು ಕೇಳಿ ಬಂದಿತ್ತು. ಎರಡು ತಿಂಗಳ ಕಾಲ ರೆಸ್ಕ್ಯೂ ಮನೆಯಲ್ಲಿದ್ದ ಶ್ವೇತಾಗೆ ಕ್ಲೀನ್  ಚಿಟ್ ಸಿಕ್ಕಿತ್ತು.

ಶ್ವೇತಾ ಮದುವೆ ಒಂದು ವರ್ಷವೂ ನಿಲ್ಲಲಿಲ್ಲ. ವರ್ಷದೊಳಗೆ ಪತಿಯಿಂದ ಶ್ವೇತಾ ಬೇರೆಯಾಗಿದ್ದರು. ಕ್ಲೀನ್ ಚಿಟ್ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದ ಶ್ವೇತಾ, ಪ್ರಸಿದ್ಧಿ ಪಡೆಯುತ್ತಿದ್ದಂತೆ ಆರೋಪಗಳು ಸಾಮಾನ್ಯ. ಅದನ್ನು ಎಂಜಾಯ್ ಮಾಡ್ಬೇಕು. ಅದು ಕುಟುಂಬಸ್ಥರು, ಸ್ನೇಹಿತರ ಮೇಲೆ ಪ್ರಭಾವ ಬೀರಬಾರದು ಎಂದಿದ್ದರು.

PF ಖಾತೆದಾರರೇ ಗಮನಿಸಿ: ಇಪಿಎಫ್ಓ ನೀಡಿದೆ ಈ ಮಹತ್ವದ ಸೂಚನೆ

Posted: 10 Jan 2020 10:46 PM PST

ನೌಕರರ ಭವಿಷ್ಯ ನಿಧಿ ಸಂಸ್ಥೆ, ಪಿಎಫ್ ಖಾತೆದಾರರಿಗೆ ಎಚ್ಚರಿಕೆ ಸಂದೇಶ ನೀಡಿದೆ. ಯಾವುದೇ ಮಾಹಿತಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳಬೇಡಿ ಎಂದಿದೆ. ಪಿಎಫ್ ಖಾತೆದಾರರಿಗೆ ನೌಕರರ ಭವಿಷ್ಯ ನಿಧಿಯಿಂದ ಯಾವುದೇ ಕರೆ ಬರುವುದಿಲ್ಲ.

ನಿಮ್ಮ ಖಾತೆ ನಂಬರ್, ಠೇವಣಿ ಮೊತ್ತ ಸೇರಿದಂತೆ ಯಾವುದೇ ಮಾಹಿತಿಯನ್ನು ನೌಕರರ ಭವಿಷ್ಯ ನಿಧಿ ಕೇಳುವುದಿಲ್ಲ. ಹಾಗಾಗಿ ನಿಮ್ಮ ಮೊಬೈಲ್ ಗೆ ಬರುವ ನಕಲಿ ಕರೆಗಳಿಗೆ ಪ್ರತಿಕ್ರಿಯೆ ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ.

ಕಳೆದ ತಿಂಗಳು ಇಪಿಎಫ್‌ಒ ತನ್ನ  ಗ್ರಾಹಕರಿಗೆ  ಆಧಾರ್ ಸಂಖ್ಯೆ, ಪ್ಯಾನ್, ಬ್ಯಾಂಕ್ ವಿವರಗಳಿಗೆ ಸಂಬಂಧಿಸಿದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಫೋನ್‌ನಲ್ಲಿ ಹಂಚಿಕೊಳ್ಳದಂತೆ ಮನವಿ ಮಾಡಿತ್ತು. ಯುನಿವರ್ಸಲ್ ಅಕೌಂಟ್ ಸಂಖ್ಯೆ  ಹಂಚಿಕೊಳ್ಳುವುದನ್ನು ಇಪಿಎಫ್‌ಒ ನಿಷೇಧಿಸಿದೆ. ಕಳೆದ ತಿಂಗಳು  ಇಪಿಎಫ್‌ಒ ತನ್ನ ವೆಬ್‌ಸೈಟ್ ಮತ್ತು ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿತ್ತು.

ನಾವು ಎಂದಿಗೂ ಪ್ಯಾನ್, ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಫೋನ್‌ನಲ್ಲಿ ಕೇಳುವುದಿಲ್ಲ. ನಕಲಿ ಕರೆಗಳಿಗೆ ಪ್ರತಿಕ್ರಿಯೆಯಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಮಾಹಿತಿ ಹಂಚಿಕೊಂಡಲ್ಲಿ ನಿಮ್ಮ ಖಾತೆ ಖಾಲಿಯಾಗುತ್ತದೆ ಎಂದಿತ್ತು.

ಹೃತಿಕ್ ಹುಟ್ಟುಹಬ್ಬಕ್ಕೆ ಅವರ ತಾಯಿ ಶೇರ್ ಮಾಡಿದ ಫೋಟೋ ಯಾವುದು ಗೊತ್ತಾ…?

Posted: 10 Jan 2020 10:39 PM PST

ಮುಂಬೈ: ಜ.10 ರಂದು ಖ್ಯಾತ ಬಾಲಿವುಡ್ ನಟ ಹೃತಿಕ್‌ ರೋಷನ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ತಾಯಿ ಪಿಂಕಿ ರೋಷನ್, ಮಗನ ಮೆದುಳು ಶಸ್ತ್ರ ಚಿಕಿತ್ಸೆಯ ಫೋಟೊವನ್ನು ಶೇರ್ ಮಾಡಿದ್ದು, ಭಾವುಕರಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

2013 ರಲ್ಲಿ ಹೃತಿಕ್ ನಾಯಕನಾಗಿ ನಟಿಸಿರುವ ಬ್ಯಾಂಗ್ ಬ್ಯಾಂಗ್ ಚಲನಚಿತ್ರದ ಸ್ಟಂಟ್ ಮಾಡುವಾಗ ಕೆಳಗೆ ಬಿದ್ದು ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಕೈ- ಕಾಲು, ತಲೆನೋವು ತೀವ್ರವಾಗಿ ಕಾಣಿಸಿಕೊಂಡಿದ್ದರಿಂದ ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಯಿತು.

ಆಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಗುಣಮುಖರಾಗಿ ಎಂದಿನಂತೆ ಶೂಟಿಂಗ್ ನಲ್ಲಿ ನಿರತರಾಗಿದ್ದರು.

ಮಗನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು ಕೇಳಿ ತಾಯಿಗೆ ಆತಂಕವೇ ಆಗಿತ್ತು. ಗಾಬರಿಗೊಂಡಿದ್ದ ಪಿಂಕಿಗೆ ತಲೆಸುತ್ತು ಬಂದು ಬಿದ್ದಿದ್ದರು. ಅಲ್ಲದೆ ಅಧಿಕ ರಕ್ತದೊತ್ತಡ ಆಗಿದ್ದಲ್ಲದೆ ದೇವರಲ್ಲಿ ಮೊರೆ ಹೋಗಿದ್ದರು.

ಇದನ್ನೆಲ್ಲ ಈಗ ಪುನಃ ನೆನೆಸಿಕೊಂಡು ಮಗನ ಶಸ್ತ್ರಚಿಕಿತ್ಸೆಯ ಬಳಿಕ ಫೋಟೋವನ್ನು ಅಪ್ಲೋಡ್ ಮಾಡಿ, ಪ್ರೀತಿಯ ಮಗ ಡುಗ್ಗು (ಹೃತಿಕ್ ರೋಷನ್) ಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

View this post on Instagram

#Today I share these never before seen images with a heavy heart. However, it is not heavy with regret, sadness or concern. It is heavy from the immense love that flows through it, with each blood cell empowered by the immense gratitude I feel to be Duggu's mother. We set an example in the way we behave, we instil character in our children, support and encourage them, but what happens when their compassion, strength and courage outgrows that of the parent? What happens when everything you hoped to be, aspired for in terms of strength and inspiration is right before you in the eyes of your own son? Before Duggu was going for his brain surgery, I was almost fainting. Palpitations in my heart, blood pressure high, prayers on my tongue, I felt every inch of me was overwhelmed with a shadow of concern. Seeing my son so vulnerable physically in the hands of the doctors made him seem as helpless as a newborn and he was again those same beautiful eyes looking up at me just as the day he arrived in the world. The eyes had no fear, no worry, no stress. I saw my reflection in them and found his strength empowering me and my own being changing because of his courage and determination to beat this. There has never been a challenge Duggu hasn't faced head on and failed. His power of mind is his superpower and the beauty of it is that it inspires all around him too, giving us strength. As he saw the sadness in my eyes, he winked and as if by magic he made me smile. A warmth enveloped my entire being as if I was bathed in light. A smile and a wink was all it took for me to feel reassured, energised, inspired and confident that he would be OK. Look at these pictures and those eyes. Does this look the face of a man about to have major brain surgery? No, it looks like someone who has already conquered it. The small child I had carried for 9 months, given birth to and held in my arms was now cradling me in his and returning all the strength and love back to me and I gave him a million blessings in that moment.

A post shared by Pinkie Roshan (@pinkieroshan) on

View this post on Instagram

#My dear Duggu, you are one of the noblest souls on the planet who never fails to stand up for what you believe in, see the best in others and better yourself. There is no finish line you cross because once completing a challenge you always look past it at the next milestone and push further, harder, higher. It is no wonder that so many look up to you and you have inspired millions to change their body and their mindset. You are an inspiration to me too and have brought so much to my life. On this day, I am grateful for you and the lessons YOU taught ME. I am in awe of your good heart and pray it never changes, only grows. I wish you everything and more. And I write this with a heavy heart.. heavy because it is full of love, gratitude and blessings for you. Thank you and happy birthday.

A post shared by Pinkie Roshan (@pinkieroshan) on

ನಿರ್ಭಯಾ ಪ್ರಕರಣ: ಜ.14ರಂದು ಕ್ಯುರೇಟಿವ್ ಅರ್ಜಿ ವಿಚಾರಣೆ

Posted: 10 Jan 2020 10:27 PM PST

ನಿರ್ಭಯಾ ಪ್ರಕರಣದಲ್ಲಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಅಪರಾಧಿಗಳಿಗೆ ಡೆತ್ ವಾರಂಟ್ ಹೊರಡಿಸಿದ ನಂತರ ಇಬ್ಬರು ಅಪರಾಧಿಗಳು ಸುಪ್ರೀಂ ಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು. ತಪ್ಪಿತಸ್ಥರ  ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಜನವರಿ 14 ರಂದು ನಡೆಯಲಿದೆ.

ನಿರ್ಭಯ ಅಪರಾಧಿಗಳಿಗೆ  ಜನವರಿ 22 ರಂದು ಗಲ್ಲುಶಿಕ್ಷೆ ನಿಗಧಿಯಾಗಿದೆ. ಅಪರಾಧಿಗಳು ಕ್ಯುರೇಟಿವ್ ಅರ್ಜಿ ಸಲ್ಲಿಸಿರುವುದ್ರಿಂದ ಸುಪ್ರೀಂ ಕೋರ್ಟ್ ಅದ್ರ ವಿಚಾರಣೆಯನ್ನು ಜನವರಿ 14ರಂದು ಮಾಡಲಿದೆ. ಆ ದಿನ ನಿರ್ಭಯಾ ಅಪರಾಧಿಗಳಿಗೆ ಜನವರಿ 22ರಂದು ಗಲ್ಲಾಗಲಿದ್ಯಾ ಇಲ್ಲ ಇನ್ನು ಕೆಲ ದಿನ ಅವಕಾಶ ಸಿಗಲಿದೆಯಾ ಎಂಬುದು ಬಹಿರಂಗವಾಗಲಿದೆ.

ನಿರ್ಭಯಾ ಅತ್ಯಾಚಾರಿಗಳಾದ ವಿನಯ್ ಶರ್ಮಾ ಮತ್ತು ಮುಖೇಶ್ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾರೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಿಸಬೇಕೆಂದು ಮನವಿ ಮಾಡಲಾಗಿದೆ.

ಎರಡನೇ ಮದುವೆಗಾಗಿ ಪತ್ನಿ, ಮಗನ ಹತ್ಯೆಗೈದ ಪಾಪಿ

Posted: 10 Jan 2020 10:07 PM PST

गिरफ्तार आरोपी

ಜೈಪುರದಲ್ಲಿ ತಾಯಿ, ಮಗನ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪತಿ ರೋಹಿತ್ ಎಂಬಾತ ಪತ್ನಿ ಶ್ವೇತಾ ಹಾಗೂ ಮಗನ ಹತ್ಯೆ ಮಾಡಿದ್ದಾನಂತೆ.

ಮಗನಿಗೆ ಇನ್ನೂ 21 ತಿಂಗಳು ಎಂದು ಪೊಲೀಸರು ಹೇಳಿದ್ದಾರೆ. ಹತ್ಯೆ ನಂತ್ರ ತಾನು ಇನ್ನೊಂದು ಮದುವೆಯಾಗಬಹುದು ಎಂಬ ಪ್ಲಾನ್ ನಲ್ಲಿ ಪತಿ ಈ ಕೃತ್ಯವೆಸಗಿದ್ದನಂತೆ.

ಮದುವೆಯಾದಾಗಿನಿಂದಲೂ ರೋಹಿತ್ ಹಾಗೂ ಶ್ವೇತಾ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇಬ್ಬರ ಮಧ್ಯೆ ಪ್ರೀತಿ ಇರಲಿಲ್ಲ. ಹಿಂದಿನ ಜೀವನವನ್ನು ಮುಗಿಸಿ ಹೊಸ ಜೀವನ ಶುರು ಮಾಡುವ ಪ್ಲಾನ್ ನಲ್ಲಿ ರೋಹಿತ್ ಇದ್ದನಂತೆ. ಇದೇ ಕಾರಣಕ್ಕೆ ಸುಫಾರಿ ಕಿಲ್ಲರ್ ಗೆ ಹಣ ನೀಡಿ ಪತ್ನಿ ಮತ್ತು ಮಗನ ಹತ್ಯೆ ಮಾಡಿಸಿದ್ದಾನೆ.

ಪ್ರಕರಣ ಬೇಧಿಸುವುದು ಪೊಲೀಸರಿಗೆ ಕಠಿಣವಾಗಿತ್ತು. ರೋಹಿತ್ ಮೇಲೆ ಅನುಮಾನ ಬಂದ್ರೂ 21 ತಿಂಗಳ ಮಗುವನ್ನು ರೋಹಿತ್ ಕೊಲ್ಲಲಾರ ಎಂದು ಪೊಲೀಸರು ಭಾವಿಸಿದ್ದರು. ಆದ್ರೆ ವಿಚಾರಣೆ ವೇಳೆ ರೋಹಿತ್ ಸತ್ಯ ಬಾಯ್ಬಿಟ್ಟಿದ್ದಾನೆ.

ಕನೌಜ್ ಭೀಕರ ಅಪಘಾತಕ್ಕೆ ಸಂತಾಪ ಸೂಚಿಸಿದ ಮೋದಿ, ರಾಹುಲ್

Posted: 10 Jan 2020 09:56 PM PST

Image result for kannauj-bus-fire-accident-dead-injured-bjp-pm-modi-congress-rahul-gandhi-express-condolences"

ಉತ್ತರ ಪ್ರದೇಶದ ಕನೌಜ್ ನಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ಅಪಘಾತದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಷಾಧ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ, ರಾಜನಾಥ್ ಸಿಂಗ್ ಸೇರಿದಂತೆ ಅನೇಕ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ಮೋದಿ ಶನಿವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಕನೌಜ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ವಿಷ್ಯ ದುಃಖ ತರಿಸಿದೆ. ಈ ಅಪಘಾತದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸತ್ತವರ ಸಂಬಂಧಿಕರಿಗೆ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಪ್ರಿಯಾಂಕಾ ಗಾಂಧಿ, ಮಾಯಾವತಿ, ಯೋಗಿ ಆದಿತ್ಯನಾಥ್ ಕೂಡ ಸಂತಾಪ ಸೂಚಿಸಿದ್ದಾರೆ. ಬಸ್ ಮತ್ತು ಟ್ರಕ್ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಡಿಕ್ಕಿಯಾಗಿದೆ. ಬಸ್ ನಲ್ಲಿ 45ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಡಿಕ್ಕಿ ಹೊಡೆದ ಮೇಲೆ ಬಸ್ ಗೆ ಬೆಂಕಿ ಹತ್ತಿಕೊಂಡಿದೆ. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಹೊರಗೆ ಬರಲು ಸಾಧ್ಯವಾಗದೆ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಯೋಗಿ ಸರ್ಕಾರ, ಸಾವನ್ನಪ್ಪಿದವರ ಕುಟುಂಬಕ್ಕೆ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

ಮನ ಕಲಕುವಂತೆ ಮಾಡಿದ 19 ತಿಂಗಳ ಮಗು

Posted: 10 Jan 2020 09:37 PM PST

ಆಸ್ಟ್ರೇಲಿಯಾದ ಕಾಡ್ಗಿಚ್ಚಿಗೆ ಬಲಿಯಾದ ಅಗ್ನಿಶಾಮಕ ಸಿಬ್ಬಂದಿಯ 19 ತಿಂಗಳ ಮಗಳ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರ ಮನ ಕರಗಿಸಿದೆ.

ಮೃತ ಆ್ಯಂಡ್ರ್ಯೂ ಒ’ಡ್ವಯರ್ಸ್ ಅಂತಿಮ ಸಂಸ್ಕಾರ ವೇಳೆ ಗೌರವ ಪದಕದ ಜೊತೆಗೆ ಅವರು ಧರಿಸುತ್ತಿದ್ದ ಹೆಲ್ಮೆಟ್ ಮಗಳಿಗೆ ನೀಡಲಾಗಿತ್ತು. ಆಗ ಆ ಮಗು ಹೆಲ್ಮೆಟ್ ಧರಿಸಿತ್ತು.

ಈ ಕುರಿತ ವಿಡಿಯೋ ಒಂದನ್ನು ದಿ ನ್ಯೂ ಸೌತ್ ವೇಲ್ಸ್ ರೂರಲ್ ಫೈರ್ ಸರ್ವಿಸ್‌ನವರು ಮಾಹಿತಿ ಸಮೇತ ಹಂಚಿಕೊಂಡಿದ್ದರು.

ಅದು ವೈರಲ್ ಆಗಿ ವ್ಯಾಪಕ ಪ್ರತಿಕ್ರಿಯೆ ಗಳಿಸಿ, ಹಲವರನ್ನು ಭಾವುಕವಾಗಿಸಿದೆ.

Today we celebrate the life of firefighter Andrew O'Dwyer of the Horsley Park Rural Fire Brigade. Andrew was tragically…

Posted by NSW Rural Fire Service on Monday, January 6, 2020

ಆಸ್ಟ್ರೇಲಿಯಾ ಕಾಡ್ಗಿಚ್ಚಿನಲ್ಲಿ‌ ನಲುಗಿದ ಜನರಿಗೆ ನೌಕಾಸೇನೆಯಿಂದ ಬೀರ್ ರವಾನೆ

Posted: 10 Jan 2020 09:25 PM PST

ಆಸ್ಟ್ರೇಲಿಯಾದಲ್ಲಿ ಸಂಭವಿಸಿರುವ ಭಾರಿ‌ ಕಾಡ್ಗಿಚ್ಚಿನಲ್ಲಿ ಲಕ್ಷಾಂತರ ಜನರ ಜೀವನ ಬೀದಿಗೆ ಬಂದಿದ್ದು, ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸೇರಿಸಲು ನೌಕಾಸೇನೆ ಹರಸಾಹಸಪಡುತ್ತಿದೆ. ಇದರೊಂದಿಗೆ ಇನ್ನೊಂದು ಕಾರ್ಯದ ಮೂಲಕ ಅಚ್ಚರಿ ಮೂಡಿಸಿದೆ.

ಹೌದು, ಆಸ್ಟ್ರೇಲಿಯಾದ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಸರಬರಾಜು ಮಾಡುವ ಕಾರ್ಯದೊಂದಿಗೆ ಶುಕ್ರವಾರ ಬೀರ್ ಕ್ಯಾನ್‌ಗಳನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಹುತೇಕ ಕಂಟ್ರಿ ಕ್ಲಬ್‌ನಲ್ಲಿ ಬೀರ್ ಖಾಲಿಯಾಗುತ್ತಿದ್ದರಿಂದ ಸೇನೆ ಈ ರೀತಿ ಬೀರ್‌ನ್ನು ಸರಬರಾಜು ಮಾಡಿದೆ ಎನ್ನಲಾಗಿದೆ.

ಈ ಬಗ್ಗೆ ಆಸ್ಟ್ರೇಲಿಯಾ ನೌಕಾಸೇನೆ ವಕ್ತಾರರು ಸ್ಪಷ್ಟನೆ ನೀಡಿದ್ದು, ಇತರೆ ಅಗತ್ಯ ವಸ್ತುಗಳಿಗೆ ಸಮಸ್ಯೆಯಾಗದ ರೀತಿಯಲ್ಲಿ ಬೀರ್‌ನ್ನು ಕಳುಹಿಸಿದ್ದೇವೆ ಎಂದಿದ್ದಾರೆ.

ಇನ್ನು ಬೀರ್ ಸಂಸ್ಥೆಗಳು ನೌಕಾಸೇನೆಯ ಬೇಸ್ ಬೀರ್ ಕಳುಹಿಸಿರುವುದನ್ನು ಒಪ್ಪಿಕೊಂಡಿದ್ದು, 20 ಕೆಗ್ಸ್, ಸೈಡರ್ ಹಾಗೂ ನಾಲ್ಕು ಪ್ಯಾಲೆಟ್ ಬೀರ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾಲ್ ಮಾಡಿ ಕಾಟ ಕೊಡ್ತಿದ್ದ ನಟಿ ನಂಬರ್ ಬ್ಲಾಕ್ ಮಾಡಿದ ಪಂತ್

Posted: 10 Jan 2020 09:23 PM PST

ಭಾರತದ ಯುವ ವಿಕೆಟ್‌ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಸರಿಯಾದ ಫಾರ್ಮ್ ನಲ್ಲಿ ಆಡ್ತಿಲ್ಲ. ಶುಕ್ರವಾರ ಶ್ರೀಲಂಕಾ ವಿರುದ್ಧ ನಡೆದ ಮೂರನೇ ಮತ್ತು ಅಂತಿಮ ಟಿ 20 ಪಂದ್ಯದಲ್ಲಿ ಅವ್ರು ಮೈದಾನಕ್ಕೆ ಇಳಿದಿಲ್ಲ. ಇದೇ ಸಮಯದಲ್ಲಿ ಪಂತ್ ಬಾಲಿವುಡ್ ನಟಿ ಊರ್ವಶಿ ರೌತೆಲಾ ಅವರ ವಾಟ್ಸಾಪ್ ನಂಬರ್ ಮತ್ತು ಫೋನ್ ನಂಬರ್ ಬ್ಲಾಕ್ ಮಾಡಿದ್ದಾರೆ.

ವರದಿ ಪ್ರಕಾರ, ಪಂತ್, ಊರ್ವಶಿಯೊಂದಿಗೆ ಮಾತನಾಡಲು ಬಯಸುತ್ತಿಲ್ಲವಂತೆ. ಹಾಗಾಗಿ ನಟಿ ನಂಬರ್ ಬ್ಲಾಕ್ ಮಾಡಿದ್ದಾರೆ ಎನ್ನಲಾಗ್ತಿದೆ. ಪಂತ್ ಅವರ ಆಪ್ತ ಸಹಾಯಕರೊಬ್ಬರ ಪ್ರಕಾರ, ಊರ್ವಶಿ ಪಂತ್ ಅವರೊಂದಿಗೆ ನಿರಂತರವಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದರಂತೆ. ಹಾಗಾಗಿ ಭಾರತದ ವಿಕೆಟ್ ಕೀಪರ್ ಈ ದೊಡ್ಡ ಹೆಜ್ಜೆ ಇಟ್ಟಿದ್ದಾರೆ.

ಈ ಬಗ್ಗೆ ಉರ್ವಶಿ ವಕ್ತಾರರು ಪ್ರತಿಕ್ರಿಯೆ ನೀಡಿದ್ದಾರೆ.  ಪರಸ್ಪರ ಒಪ್ಪಿಗೆಯೊಂದಿಗೆ ಬ್ಲಾಕ್ ಮಾಡಿದ್ದಾರೆಂದು ವಕ್ತಾರರು ಹೇಳಿದ್ದಾರೆ. ಕಳೆದ ವರ್ಷ ಪಂತ್ ಹೆಸರು ಊರ್ವಶಿ ರೌತೆಲಾ ಜೊತೆ ಥಳಕು ಹಾಕಿಕೊಂಡಿತ್ತು.