Translate

Friday, November 1, 2019

Kannada News | Karnataka News | India News

Kannada News | Karnataka News | India News


ಮಹಿಳೆಯರು ಎಷ್ಟು ಸಮಯ ಸಂಭೋಗ ಸುಖ ಬಯಸ್ತಾರೆ ಗೊತ್ತಾ…?

Posted: 01 Nov 2019 09:15 AM PDT

ಸಂಭೋಗದ ಬಗ್ಗೆ ಪುರುಷ ಹಾಗೂ ಮಹಿಳೆ ಇಬ್ಬರಿಗೂ ಅನೇಕ ಕುತೂಹಲ, ಪ್ರಶ್ನೆಗಳಿರುತ್ತವೆ. ಸಂಭೋಗ ಸುಖವನ್ನು ಎಷ್ಟು ಸಮಯ ಪಡೆಯಬೇಕು? ಹೆಚ್ಚು ಹೊತ್ತು ಶಾರೀರಿಕ ಸಂಬಂಧ ಬೆಳೆಸಿದ್ರೆ ಅನಾರೋಗ್ಯ ಸಮಸ್ಯೆ ಕಾಡುತ್ತಾ? ಎಷ್ಟು ಸಮಯದ ಸಂಭೋಗ ನಡೆಸಿದ್ರೆ ಮಹಿಳೆಯರು ಖುಷಿಗೊಳ್ತಾರೆ? ಹೀಗೆ ಅನೇಕ ಪ್ರಶ್ನೆಗಳು ಕಾಡುತ್ತವೆ.

ಸಂಶೋಧಕರು ಕೆಲ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿರುತ್ತಾರೆ. ಈಗ ಸಮೀಕ್ಷೆಯೊಂದರಲ್ಲಿ ಮಹಿಳೆಯರು ಎಷ್ಟು ಸಮಯ ಸಂಭೋಗ ಸುಖ ಬಯಸ್ತಾರೆ ಎಂಬುದು ಬಹಿರಂಗವಾಗಿದೆ. ಸಮೀಕ್ಷೆಯಲ್ಲಿ ಮಹಿಳೆಯರನ್ನು ಲೈಂಗಿಕತೆಯಲ್ಲಿ ಎಷ್ಟು ಸಮಯ ಕಳೆಯುತ್ತೀರಿ ಎಂದು ಕೇಳಲಾಗಿದೆ. ಹೆಚ್ಚಿನ ಮಹಿಳೆಯರು ಸಾಮಾನ್ಯವಾಗಿ 5 ರಿಂದ 9 ನಿಮಿಷಗಳನ್ನು ಫೋರ್‌ಪ್ಲೇಯಲ್ಲಿ ಮತ್ತು 10 ರಿಂದ 14 ನಿಮಿಷಗಳನ್ನು ಸೆಕ್ಸ್ ಗೆ ಕಳೆಯುತ್ತೇವೆ ಎಂದಿದ್ದಾರೆ.

ಸಮೀಕ್ಷೆ ಪ್ರಕಾರ, ಲೈಂಗಿಕ ಅನ್ಯೋನ್ಯತೆಯಲ್ಲಿ ಸುಮಾರು 106 ನಿಮಿಷ ಕಳೆಯಲು ಮಹಿಳೆಯರು ಬಯಸ್ತಾರೆ. ಆದ್ರೆ ವಾಸ್ತವ ಅದಾಗಿರುವುದಿಲ್ಲ. ಫೋರಲ್ ಪ್ಲೇನಲ್ಲಿ ಅವ್ರು ಹೆಚ್ಚು ಸಮಯ ಕಳೆಯುತ್ತಾರೆಂದು ತಜ್ಞರು ಹೇಳಿದ್ದಾರೆ. ಆದರೆ ಯೋಚಿಸಬೇಕಾದ ವಿಷಯವೆಂದರೆ  106 ನಿಮಿಷಗಳ ಕಾಲ ಸಂಭೋಗಿಸಬಹುದೆ? ಲೈಂಗಿಕ ಸಮಯ ಮತ್ತು ಫೋರಲ್ ಪ್ಲೇನಿಂದ ತೃಪ್ತರಾಗ್ತಾರಾ? ಎಂಬುದು. ಇದಕ್ಕೆ ಉತ್ತರವಿಲ್ಲವೆಂದಾದ್ರೆ ಸಂಗಾತಿ ಜೊತೆ ಮಾತನಾಡಿ, ಸಂಗಾತಿಗೆ ಗರಿಷ್ಠ ಸಮಯ ನೀಡಿ ನೋಡಿ.

ಟಿ-20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ಹಿನ್ನಡೆ

Posted: 01 Nov 2019 08:00 AM PDT

ಬಾಂಗ್ಲಾದೇಶದ ವಿರುದ್ಧ ಭಾರತ ಮೂರು ಟಿ-20 ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಸರಣಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದಾರೆ.

ರೋಹಿತ್ ಶರ್ಮಾಗೆ ಅಭ್ಯಾಸದ ವೇಳೆ ಎಡ ತೊಡೆಗೆ ಚೆಂಡು ಬಿದ್ದಿದೆ. ತಕ್ಷಣ ಶರ್ಮಾ ಮೈದಾನ ಬಿಟ್ಟು ಹೋಗಿದ್ದಾರೆ. ಅಭ್ಯಾಸದ ಆರಂಭದಲ್ಲಿಯೇ ರೋಹಿತ್ ಶರ್ಮಾ ನೋವುಣ್ಣಬೇಕಾಯ್ತು. ರೋಹಿತ್ ಶರ್ಮಾಗೆ ಚಿಕಿತ್ಸೆ ನೀಡಲಾಗ್ತಿದೆ. ಇದ್ರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರವೇ ನೀಡುವುದಾಗಿ ತಂಡದ ಮೂಲಗಳು ಹೇಳಿವೆ.

ಟೀಂ ಇಂಡಿಯಾ, ಬಾಂಗ್ಲಾ ಬಗ್ಗು ಬಡಿಯುವ ಪ್ರಯತ್ನದಲ್ಲಿದೆ. ರಿಷಬ್ ಪಂತ್ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಶುಕ್ರವಾರ ಮೈದಾನದಲ್ಲಿ ಬೆವರಿಳಿಸಿದ್ದಾರೆ. ವಿರಾಟ್ ಕೊಹ್ಲಿ ಟಿ-20 ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದು ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ.

ಸಹೋದರಿ ಸ್ನಾನದ ದೃಶ್ಯವನ್ನು ವಿಡಿಯೋ ಕಾಲ್ ಮಾಡಿ ತೋರಿಸಿದ ಅಕ್ಕ

Posted: 01 Nov 2019 07:45 AM PDT

ಮುಂಬೈ: ಆಘಾತಕಾರಿ ಘಟನೆಯಲ್ಲಿ ಯುವತಿ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಆಕೆಯ ಅಕ್ಕ ವಿಡಿಯೋಕಾಲ್ ನಲ್ಲಿ ತನ್ನ ಪತಿಗೆ ತೋರಿಸಿದ್ದಾಳೆ.

ದಕ್ಷಿಣ ಮುಂಬೈನ ಅಗ್ರಿಪಾದ ಪ್ರದೇಶದ ಪೊಲೀಸರು 25 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಮುಂಬೈನ ಬೈಕುಲಾ ಪ್ರದೇಶದ ನಿವಾಸಿಯಾಗಿರುವ 20 ವರ್ಷದ ಯುವತಿ ತನ್ನ ಹಿರಿಯ ಸಹೋದರಿ ವಿರುದ್ಧ ದೂರು ನೀಡಿದ್ದಾಳೆ.

ಯುವತಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಗಂಡನಿಗೆ ವಿಡಿಯೋ ಕಾಲ್ ಮಾಡಿದ್ದ ಅಕ್ಕ ಸ್ನಾನದ ದೃಶ್ಯಗಳನ್ನು ತೋರಿಸಿದ್ದಾಳೆ. ಅಕ್ಕನ ಗಂಡ ಯುವತಿಯ ಬೆತ್ತಲೆ ದೇಹದ ಚಿತ್ರಗಳ ದೃಶ್ಯದ ಸ್ಕ್ರೀನ್ ಶಾಟ್ ತೆಗೆದು ಯುವತಿಯ ಸಂಬಂಧಿಕರಿಗೆ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಕಳುಹಿಸಿದ್ದಾನೆ ಎಂದು ದೂರಲಾಗಿದೆ.

ಯುವತಿಯ ಅಕ್ಕ ಮತ್ತು ಆಕೆಯ ಗಂಡನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಕ್ಕನನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

‘ಎಲ್ಲಿದ್ದೀಯಮ್ಮ ಸುಮಲತಾ’ ಎಂದವರಿಗೆ ತಿರುಗೇಟು ಕೊಟ್ಟ ಸಂಸದೆ

Posted: 01 Nov 2019 07:25 AM PDT

 ಮಂಡ್ಯ: 40 ವರ್ಷದಲ್ಲಿ ನಾನು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ನಾಟಕ ಮಾಡಲು ರಾಜಕಾರಣಕ್ಕೆ ಬಂದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

'ಎಲ್ಲಿದ್ದೀಯಮ್ಮ ಸುಮಲತಾ' ಎಂದವರಿಗೆ ತಿರುಗೇಟು ನೀಡಿರುವ ಅವರು, ಫೋಟೋ, ಟಿವಿಯಲ್ಲಿ ಕಾಣಿಸಿಕೊಂಡು ತೋರಿಕೆಗಾಗಿ ಕೆಲಸ ಮಾಡುತ್ತಿಲ್ಲ. ರೈತರ ಪರವಾಗಿ ಇದ್ದೇನೆ ಎಂದು ತಿಳಿಸಿದ್ದಾರೆ.

ಚುನಾವಣೆಯಿಂದಲೂ ಎಲ್ಲಿದ್ದೀಯಪ್ಪ ಎನ್ನುವುದನ್ನು ಹೇಳಲಾಗುತ್ತಿದೆ. ಅದು ಯಾರಿಗೆ ಅನ್ವಯಿಸುತ್ತದೆಯೋ ಅವರಿಗೆ ಅನ್ವಯವಾಗುತ್ತದೆ. ನಾನು ರೈತ ಮಹಿಳೆಯರು, ರೈತರೊಂದಿಗೆ ಕೆಲಸ ಮಾಡುತ್ತೇನೆ. ತೋರಿಕೆಗಾಗಿ ನಾಟಕ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನಾನು ಫೋಟೋ ತೆಗೆಸಿಕೊಂಡು ನಿಮ್ಮ ಜೊತೆಗೆ ಇದ್ದೇನೆ ಎಂದು ಹೇಳುವುದಿಲ್ಲ. ಕೆಲಸ ಮಾಡುವ ಮೂಲಕ ನಿಮ್ಮೊಂದಿಗೆ ಇದ್ದೇನೆ ಎಂದು ಹೇಳುತ್ತೇನೆ. ಆಗಬೇಕಿರುವ ಕೆಲಸಗಳ ಬಗ್ಗೆ ಚರ್ಚೆ ಮಾಡಲಿ. ತಿಳಿಸಲಿ ಎಂದು ಹೇಳಿದ್ದಾರೆ.

ಶಾಕಿಂಗ್ ನ್ಯೂಸ್: ಉದ್ಯೋಗ ನಷ್ಟದಲ್ಲಿ ಐತಿಹಾಸಿಕ ದಾಖಲೆ ಬರೆದ ಮೋದಿ ಸರ್ಕಾರ

Posted: 01 Nov 2019 07:14 AM PDT

ಉದ್ಯೋಗ ನಷ್ಟದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐತಿಹಾಸಿಕ ದಾಖಲೆ ಬರೆದಿದೆ. ಕಳೆದ 6 ವರ್ಷದಲ್ಲಿ 90 ಲಕ್ಷ ಉದ್ಯೋಗ ನಷ್ಟವಾಗಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ.

ಕಳೆದ 6 ವರ್ಷದ ಅವಧಿಯಲ್ಲಿ 90 ಲಕ್ಷ ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಈ ಮೂಲಕ ಉದ್ಯೋಗ ನಷ್ಟದಲ್ಲಿಯೂ ಭಾರತ ಐತಿಹಾಸಿಕ ದಾಖಲೆ ಬರೆದಿದೆ. ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಸುಸ್ಥಿರ ಉದ್ಯೋಗ ಕೇಂದ್ರದಿಂದ ಪ್ರಕಟಿಸಿದ ಶೈಕ್ಷಣಿಕ ಪ್ರಬಂಧದಿಂದ ಈ ಮಾಹಿತಿ ಗೊತ್ತಾಗಿದೆ.

ಸಂತೋಷ್ ಮಹೋತ್ರಾ ಮತ್ತು ಜಜತಿ ಕೆ. ಪರಿಡಾ ಅವರು ಶೈಕ್ಷಣಿಕ ಪ್ರಬಂಧ ಬರೆದಿದ್ದು, ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯ ಪ್ರಕಟಿಸಿದೆ. 2011 -12 ಮತ್ತು 2017 – 18 ರ ನಡುವೆ ಉದ್ಯೋಗದ ಪ್ರಮಾಣ ದಾಖಲೆಯ ಪ್ರಮಾಣದಲ್ಲಿ ಕುಸಿದಿದೆ ಎಂದು ಹೇಳಲಾಗಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗ ನಷ್ಟವಾಗಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಇನ್ನು ಇದೇ ವಿಷಯದ ಕುರಿತಾಗಿ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ಹಿಮಾಂಶು ಪ್ರಬಂಧ ಮಂಡಿಸಿದ್ದಾರೆ.

ಪಟ್ಟು ಹಿಡಿದ ಶಿವಸೇನೆಗೆ ಬಿಜೆಪಿ ಬಿಗ್ ಶಾಕ್, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ..?

Posted: 01 Nov 2019 06:44 AM PDT

ಮುಖ್ಯಮಂತ್ರಿ ಹುದ್ದೆ ಮತ್ತು 50:50 ಅಧಿಕಾರ ಹಂಚಿಕೆಗೆ ಬಿಜೆಪಿ ಜೊತೆಗೆ ಪಟ್ಟು ಹಿಡಿದಿರುವ ಶಿವಸೇನೆ ಸರ್ಕಾರ ರಚನೆ ಪ್ರಯತ್ನದಲ್ಲಿದೆ.

ಬಿಜೆಪಿಯನ್ನು ಹೊರಗಿಟ್ಟು ಸರ್ಕಾರ ರಚಿಸಲು ಶಿವಸೇನೆ ಪ್ರಯತ್ನ ನಡೆಸಿರುವ ಬಗ್ಗೆ ಅಸಮಾಧಾನಗೊಂಡಿರುವ ಬಿಜೆಪಿ ನಾಯಕರು ರಾಷ್ಟ್ರಪತಿ ಆಡಳಿತ ಹೇರುವ ಬಗ್ಗೆಯು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 10 ದಿನಗಳಾಗುತ್ತಾ ಬಂದರೂ ಸರ್ಕಾರ ರಚನೆ ಬಗ್ಗೆ ಹಗ್ಗಜಗ್ಗಾಟ ಮುಂದುವರೆದಿದೆ. ಬಿಜೆಪಿ-ಶಿವಸೇನೆ ಮೈತ್ರಿ ಬಗ್ಗೆ ಚರ್ಚೆಗಳು ನಡೆದಿದ್ದು, ಬಿಜೆಪಿ ಹೊರತಾದ ಸರ್ಕಾರ ರಚನೆ ಪ್ರಯತ್ನವೂ ನಡೆದಿದೆ.

ನವಂಬರ್ 7 ರ ಒಳಗೆ ಸರ್ಕಾರ ರಚನೆ ಮಾಡದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕ ಸುಧೀರ್ ಮುಗಂತಿವಾರ್ ಹೇಳಿದ್ದಾರೆ.

ನಮ್ಮ ಮೈತ್ರಿ ಅಂಬುಜಾ ಸಿಮೆಂಟ್,  ಫೆವಿಕಾಲ್ ಗಿಂತಲೂ ಗಟ್ಟಿಯಾಗಿದೆ. ನಿರ್ದಿಷ್ಟ ಸಮಯದೊಳಗೆ ಸರ್ಕಾರ ರಚನೆಯಾಗದಿದ್ದರೆ, ರಾಷ್ಟ್ರಪತಿ ಮಧ್ಯ ಪ್ರವೇಶಿಸಲಿದ್ದಾರೆ. ನಿಗದಿತ ಗಡುವಿನೊಳಗೆ ಸರ್ಕಾರ ರಚನೆಯಾಗದಿದ್ದರೆ, ಅನಿವಾರ್ಯವಾಗಿ ರಾಷ್ಟ್ರಪತಿಗಳು ಪ್ರವೇಶಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ರಚನೆಗೆ ಬಿಜೆಪಿ, ಶಿವಸೇನೆ ಪ್ರಯತ್ನ ಮುಂದುವರೆಸಿವೆ.

ಪಠ್ಯದಿಂದ ಟಿಪ್ಪು ಕೈಬಿಡುವ ಬಿಜೆಪಿ ನಿರ್ಧಾರಕ್ಕೆ ಹೆಚ್. ವಿಶ್ವನಾಥ್ ಆಕ್ಷೇಪ

Posted: 01 Nov 2019 06:43 AM PDT

ಮೈಸೂರು: ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಕುರಿತ ಅಧ್ಯಾಯ ಕೈಬಿಡುವ ವಿಚಾರಕ್ಕೆ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಕೂಡ ಟಿಪ್ಪುಸುಲ್ತಾನ್ ಪಠ್ಯ ಕೈಬಿಡುವ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದ್ದರು. ಪಠ್ಯಪುಸ್ತಕದಿಂದ ಟಿಪ್ಪು ಕೈಬಿಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್. ವಿಶ್ವನಾಥ್, ಟಿಪ್ಪುಸುಲ್ತಾನ್ ಮೈಸೂರು ಹುಲಿ ಎಂದು ಬಣ್ಣಿಸಿದ್ದಾರೆ.

ಇತಿಹಾಸದಲ್ಲಿ ನಾಯಕರು ಇರುತ್ತಾರೆ. ಅದೇ ರೀತಿ ಖಳನಾಯಕರು ಇರುತ್ತಾರೆ. ಟಿಪ್ಪು ಸುಲ್ತಾನ್ ಅನೇಕ ದೇವಾಲಯಗಳಿಗೆ ನೆರವು ನೀಡಿದ್ದಾರೆ. ಪಠ್ಯಪುಸ್ತಕದಿಂದ ಟಿಪ್ಪುಸುಲ್ತಾನ್ ತೆಗೆದುಹಾಕಿದರೆ ಇತಿಹಾಸ ಬದಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಟಿಪ್ಪುಸುಲ್ತಾನ್ ಕುರಿತಾಗಿ ಅಸಂಖ್ಯಾತ ಪುಸ್ತಕಗಳು ಇವೆ. ಅನೇಕ ಮಂದಿ ಅವರ ಬಗ್ಗೆ ಬರೆದಿದ್ದಾರೆ. ಟಿಪ್ಪು ಸುಲ್ತಾನ್ ಇತಿಹಾಸದಿಂದ ತೆಗೆಯುವುದು ಸರಿಯಲ್ಲ. ಐತಿಹಾಸಿಕ ವ್ಯಕ್ತಿಯಾಗಿರುವ ಟಿಪ್ಪುಸುಲ್ತಾನ್ ಬಗ್ಗೆ ಈಗ ರಾಜಕೀಯಕ್ಕಾಗಿ ವಿಶ್ಲೇಷಣೆ ಮಾಡುವುದು ಕೂಡ ಸರಿಯಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಹುದ್ದೆ, ಮುರುಗೇಶ್ ನಿರಾಣಿ ಹೇಳಿದ್ದೇನು ಗೊತ್ತಾ..?

Posted: 01 Nov 2019 06:13 AM PDT

ಮುಂದೊಂದು ದಿನ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿಎಂ ಆಗುವ ಅವಕಾಶ ಸಿಕ್ಕರೆ ಯಾರು ತಾನೆ ಬೇಡವೆನ್ನುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆಗೆ ಬೆನ್ನು ಬೀಳುವ ಜಾಯಮಾನ ನನ್ನದಲ್ಲ. ಅವಕಾಶ ಸಿಕ್ಕರೆ ಯಾರು ತಾನೆ ಬೇಡವೆಂದು ಹೇಳುತ್ತಾರೆ. ಮುಖ್ಯಮಂತ್ರಿ ಅಥವಾ ಅದಕ್ಕಿಂತ ಹೆಚ್ಚಿನ ಹುದ್ದೆ ಕೊಟ್ಟರೂ ನಾನು ನಿಭಾಯಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೈತ ಕುಟುಂಬದಿಂದ ಬಂದ ನಾನು ಹಲವು ಉದ್ಯಮ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಸಾಕಷ್ಟು ಅನುಭವ ಹೊಂದಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ. ಕೊಡದಿದ್ದರೂ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಶಾಸಕ ಉಮೇಶ್ ಕತ್ತಿ ಮುಖ್ಯಮಂತ್ರಿ ಹುದ್ದೆಗೇರುವ ಬಗ್ಗೆ ಹೇಳಿದ್ದರು. ಈಗ ಮುರುಗೇಶ್ ನಿರಾಣಿ ಕೂಡ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದಾರೆ.

ಟೀಸರ್ ನಲ್ಲಿ ದಾಖಲೆ ಬರೆದ ‘ಒಡೆಯ’ ದರ್ಶನ್

Posted: 01 Nov 2019 06:05 AM PDT

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಚಿತ್ರದ ಟೀಸರ್ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಂದು ಬಿಡುಗಡೆಯಾಗಿದ್ದು ದಾಖಲೆ ಬರೆದಿದೆ.

ಒಂದು ನಿಮಿಷ 4 ಸೆಕೆಂಡ್ಗಳ 'ಒಡೆಯ' ಟೀಸರ್ ನಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ನಾನು ಅಧಿಕಾರದ ಆಸೆಯಿಂದ ಬಂದಿಲ್ಲ. ಅಧಿಕಾರವೇ ಆಸೆ ಪಟ್ಟು ನನ್ನನ್ನು ಇಲ್ಲಿಗೆ ಕರೆಸಿಕೊಂಡಿದೆ. ಇನ್ನು ಮುಂದೆ ಅಧಿಕಾರವೂ ನಂದೇ ಆಜ್ಞೆಯೂ ನಂದೇ ಎನ್ನುವ ದರ್ಶನ್ ಡೈಲಾಗ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.

'ಒಡೆಯ' ಟೀಸರ್ ಬಿಡುಗಡೆಯಾದ ಮೂರು ನಿಮಿಷದಲ್ಲಿ ಒಂದು ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡಿದೆ. 12 ನಿಮಿಷದಲ್ಲಿ 5 ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡು ದಾಖಲೆ ಬರೆದಿದೆ. 2 ಗಂಟೆ 55 ನಿಮಿಷದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದು ಕನ್ನಡ ಚಿತ್ರರಂಗದಲ್ಲಿ ದಾಖಲೆ ಎಂದು ಹೇಳಲಾಗಿದೆ. ಎಂ.ಡಿ. ಶ್ರೀಧರ್ ನಿರ್ದೇಶನದ 'ಒಡೆಯ' ಚಿತ್ರವನ್ನು ಎನ್. ಸಂದೇಶ್ ನಿರ್ಮಾಣ ಮಾಡಿದ್ದಾರೆ.

ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ರೇಣುಕಾಚಾರ್ಯ

Posted: 01 Nov 2019 05:40 AM PDT

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಹೋರಿ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ರೇಣುಕಾಚಾರ್ಯ ಅಪಾಯದಿಂದ ಪಾರಾಗಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ದೊಡ್ಡೇರಿ ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಮುಖ್ಯ ಅತಿಥಿಯಾಗಿ ರೇಣುಕಾಚಾರ್ಯ ಭಾಗವಹಿಸಿದ್ದ ಸಂದರ್ಭದಲ್ಲಿ ಬೆಂಬಲಿಗರು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸುವಾಗಲೇ ಹೋರಿಯೊಂದು ಬೆದರಿ ಓಡಿ ಬಂದು ಗುದ್ದಿದೆ.

ಹೋರಿ ಗುದ್ದಿದ ರಭಸಕ್ಕೆ ಬೆಂಬಲಿಗರ ಮೇಲಿದ್ದ ರೇಣುಕಾಚಾರ್ಯ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಉಂಟಾಗಿಲ್ಲ. ಕೆಳಗೆ ಬಿದ್ದ ರೇಣುಕಾಚಾರ್ಯ ಮತ್ತು ಅವರ ಬೆಂಬಲಿಗರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ.

ಸರ್ಕಾರ ಉಳಿಸುವ ಧಾಟಿಯಲ್ಲಿ ಯಾರೂ ಮಾತಾಡ್ತಿಲ್ಲ: ಸ್ವಪಕ್ಷೀಯರ ವಿರುದ್ಧ ಬಿ.ಎಸ್.ವೈ. ಗರಂ

Posted: 01 Nov 2019 05:34 AM PDT

ನಮ್ಮನ್ನು ನಂಬಿ ಅನರ್ಹ ಶಾಸಕರು ಮೂರ್ಖರಾಗಿದ್ದಾರೆ. ಅವರು ರಾಜೀನಾಮೆ ಕೊಡುವ ಅಗತ್ಯವಾದರೂ ಏನಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶ್ನಿಸಿದ್ದಾರೆ

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಚುನಾವಣೆ ಸಿದ್ಧತಾ ಸಭೆಯಲ್ಲಿ ತೀವ್ರ ಬೇಸರದಿಂದ ಮಾತುಗಳನ್ನಾಡಿದ ಯಡಿಯೂರಪ್ಪ, ಪಕ್ಷದ ನಾಯಕರ ಹೇಳಿಕೆಗಳ ಬಗ್ಗೆ ಗರಂ ಆಗಿದ್ದಾರೆ.

ನಮ್ಮನ್ನು ನಂಬಿ ಅನರ್ಹ ಶಾಸಕರು ರಾಜೀನಾಮೆ ನೀಡಿದ್ದಾರೆ. ಸುಪ್ರೀಂಕೋರ್ಟಿನಿಂದ ನಾಳೆ-ನಾಡಿದ್ದು ತೀರ್ಪು ಬರುತ್ತದೆ. ಶೇಕಡ 90 ರಷ್ಟು ಅನರ್ಹ ಶಾಸಕರು ಚುನಾವಣೆಗೆ ನಿಲ್ಲುತ್ತಾರೆ. ಅನರ್ಹ ಶಾಸಕರ ಬಗ್ಗೆ ಹೇಳಿಕೆಗಳಿಂದ ನನಗೆ ನೋವಾಗಿದೆ ಎಂದು ಹೇಳಿದ್ದಾರೆ.

ಹಿರಿಯ-ಕಿರಿಯ ನಾಯಕರ ಹೇಳಿಕೆಗಳಿಂದ ನನಗೆ ಬೇಸರವಾಗಿದೆ. ಸರ್ಕಾರ ಉಳಿಸುವ ಧಾಟಿಯಲ್ಲಿ ಯಾರೂ ಮಾತನಾಡಿಲ್ಲ. 17 ಅನರ್ಹ ಶಾಸಕರ ಬಗ್ಗೆ ಯಡಿಯೂರಪ್ಪ ತೀರ್ಮಾನ ಕೈಗೊಂಡಿಲ್ಲ. ರಾಷ್ಟ್ರೀಯ ಅಧ್ಯಕ್ಷರು ಮುಂಬೈನಲ್ಲಿ ಎರಡು ತಿಂಗಳು ಅವರನ್ನು ಇಟ್ಟಿದ್ದರು. ಇದೆಲ್ಲವೂ ನಿಮಗೆಲ್ಲರಿಗೂ ಗೊತ್ತಿದೆಯಲ್ಲವೇ ಎಂದು ಗುಡುಗಿದ್ದಾರೆ.

ಎರಡೂವರೆ ಮೂರು ತಿಂಗಳು ಅನರ್ಹ ಶಾಸಕರು ಕ್ಷೇತ್ರಗಳಿಗೆ ಹೋಗಿಲ್ಲ. ಹೆಂಡತಿ-ಮಕ್ಕಳ ಮುಖವನ್ನು ನೋಡಿಲ್ಲ. ಉಪಚುನಾವಣೆ ಏನಾಗುತ್ತೋ ಏನೋ ಗೊತ್ತಿಲ್ಲ. ವಿರೋಧ ಪಕ್ಷದಲ್ಲಿ ಇರಬೇಕಾದ ನಾವು ಆಡಳಿತ ಪಕ್ಷದಲ್ಲಿದ್ದರೆ ಅನರ್ಹ ಶಾಸಕರು ಕಾರಣ. ಅವರ ಬಗ್ಗೆ ಗಟ್ಟಿಯಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವನ ಬಳಿಯಿತ್ತು ಸೇನೆಯ ನಕಲಿ ಗುರುತಿನ ಪತ್ರ

Posted: 01 Nov 2019 05:31 AM PDT

ಎರಡು ದಿನಗಳ ಹಿಂದೆ ಇಂದೋರ್ ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ 26 ವರ್ಷ ವಯಸ್ಸಿನ ಯುವಕನ ಬಳಿ ಭಾರತೀಯ ಸೇನೆಯ ನಕಲಿ ಗುರುತಿನ ಚೀಟಿ ಪತ್ತೆಯಾಗಿದೆ.

ಬಿಹಾರ ಮೂಲದ ಜಯಪ್ರಕಾಶ್ ಝಾ ಎಂಬ ವ್ಯಕ್ತಿಯ ಬಳಿ ದಾಖಲೆಗಳು ಪತ್ತೆಯಾಗಿದ್ದು, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಗುರುತಿನ ಚೀಟಿ ಮತ್ತು ವೈಯರ್‍ಲೆಸ್ ಉಪಕರಣ ಸಿಕ್ಕಿದ್ದರೆ, ಇಂದೋರ್ ಬಳಿಯ ಮೋವ್‍ದಲ್ಲಿರುವ ಆತನ ಮನೆಯಿಂದ ಶಂಕಾಸ್ಪದ ದಾಖಲೆಗಳು ಮತ್ತು ಸೇನಾ ಸಮವಸ್ತ್ರ ವಶಪಡಿಸಿಕೊಳ್ಳಲಾಗಿದೆ.

ಸೇನಾ ಗುಪ್ತಚರ ಘಟಕದೊಂದಿಗೆ ಜಂಟಿಯಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆತನ ಲ್ಯಾಪ್‍ಟಾಪ್ ಮತ್ತು ಮೊಬೈಲ್ ಫೋನ್ ಪರಿಶೀಲಿಸಲಾಗುತ್ತಿದೆ. ಆತ ಸೇನೆಯಲ್ಲಿ ಕೆಲಸ ಕೊಡುವ ಜಾಲದೊಂದಿಗೆ ಇರಬಹುದು ಅಥವಾ ಶತ್ರುಗಳಿಗೆ ಮಾಹಿತಿಗಳನ್ನು ಕೊಡುವ ಕೆಲಸ ಮಾಡುತ್ತಿರಬಹುದು ಎಂದು ಸೇನಾಧಿಕಾರಿಗಳು ಶಂಕಿಸಿದ್ದಾರೆ.

ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ

Posted: 01 Nov 2019 04:38 AM PDT

ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಪತ್ರಿಕಾಗೋಷ್ಠಿ ನಡೆಸಿದ ಚುನಾವಣಾ ಆಯೋಗ,ದಿನಾಂಕ ನಿಗದಿ ಮಾಡಿದೆ. ಜಾರ್ಖಂಡ್ ವಿಧಾನಸಭೆಯ ಅವಧಿ ಜನವರಿ 5 ಕ್ಕೆ ಕೊನೆಗೊಳ್ಳಲಿದೆ.ಇಂದಿನಿಂದಲೇ ಜಾರ್ಖಂಡ್ ನಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿದೆ.

ಜಾರ್ಖಂಡ್ ನಲ್ಲಿ ಐದು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತವಾಗಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ ಡಿಸೆಂಬರ್ 7 ಮತ್ತು ಮೂರನೇ ಹಂತದ ಮತದಾನ  ಡಿಸೆಂಬರ್ 12ರಮದು ನಡೆಯಲಿದೆ. ನಾಲ್ಕನೇ ಹಂತದ ಮತದಾನ  ಡಿಸೆಂಬರ್ 16 ಮತ್ತು ಕೊನೆ ಹಂತದ ಮತದಾನ ಡಿಸೆಂಬರ್ 20ರಂದು ನಡೆಯಲಿದೆ.

ಮತ ಎಣಿಕೆ ಕಾರ್ಯ  ಡಿಸೆಂಬರ್ 23 ರಂದು ನಡೆಯಲಿದೆ.ಜಾರ್ಖಂಡದ ಒಟ್ಟೂ 81 ಸ್ಥಾನಗಳಿಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ 2.65 ಕೋಟಿ ಮತದಾರರಿದ್ದಾರೆ.ಜಾರ್ಖಂಡ್ ನ 19 ಜಿಲ್ಲೆಗಳು ನಕ್ಸಲ್ ಪ್ರಭಾವದಲ್ಲಿದ್ದು, 67 ಸ್ಥಾನಗಳು ನಕ್ಸಲರಿಂದ ಪ್ರಭಾವಿತವಾಗಿವೆ.

 

ಸರ್ಕಾರಕ್ಕೆ ಶಾಕ್: ಮತ್ತೆ GST ಸಂಗ್ರಹ ಇಳಿಕೆ

Posted: 01 Nov 2019 04:36 AM PDT

ಸರಕು ಮತ್ತು ಸೇವಾ ತೆರಿಗೆ ಮೂಲಕ ಆದಾಯ ಸಂಗ್ರಹ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಅಕ್ಟೋಬರ್ ನಲ್ಲಿ GST ಸಂಗ್ರಹ ಶೇ.5.3ರಷ್ಟು ಇಳಿಕೆಯಾಗಿದ್ದು, 95,380 ಕೋಟಿ ರೂಪಾಯಿ ಆದಾಯ ಬಂದಿದೆ. ಆದ್ರೆ ತಿಂಗಳ ಆಧಾರದಲ್ಲಿ ನೋಡಿದ್ರೆ ಜಿಎಸ್ಟಿ ಸಂಗ್ರಹ ಶೇ.3.76ರಷ್ಟು ಹೆಚ್ಚಳವಾಗಿದೆ.

ಸಪ್ಟೆಂಬರ್ ನಲ್ಲಿ ಜಿಎಸ್ಟಿಯಿಂದ 91,916 ಕೋಟಿ ರೂಪಾಯಿ ಆದಾಯ ಬಂದಿತ್ತು. ಸೆಂಟ್ರಲ್ ಜಿಎಸ್ಟಿ ಸಂಗ್ರಹ 17,582 ಕೋಟಿ ರೂಪಾಯಿಯಾದ್ರೆ, ಸ್ಟೇಟ್ GST 23,674 ಕೋಟಿ ರೂಪಾಯಿ ಹಾಗೂ ಇಂಟಿಗ್ರೇಟೆಡ್ ಜಿಎಸ್ಟಿ ಮೂಲಕ 46,517 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಈ ಸಂಬಂಧ ಹಣಕಾಸು ಸಚಿವಾಲಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. 2018ಕ್ಕೆ ಹೋಲಿಸಿದ್ರೆ ಆಮದು ಮೇಲಿನ ಜಿಎಸ್ಟಿ ನಕಾರಾತ್ಮಕ ಬೆಳವಣಿಗೆ ಕಂಡಿದೆ. ದೇಶೀಯ ಘಟಕ ಶೇ.6.74ರಷ್ಟು ಏರಿಕೆಯಾಗಿದೆ. ಒಟ್ಟಾರೆ ಸಂಗ್ರಹ ಶೇ3.38ರಷ್ಟು ಹೆಚ್ಚಳವಾಗಿದೆ ಅಂತಾ ಸಚಿವಾಲಯ ತಿಳಿಸಿದೆ.

 

ಚಿಕಾಗೋದ ರಾಜ್ಯ ವಕೀಲರ ಕಚೇರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದೆ ನಾಯಿ

Posted: 01 Nov 2019 04:31 AM PDT

ಅಮೆರಿಕದ ಚಿಕಾಗೋ ರಾಜ್ಯ ವಕೀಲರ ಕಚೇರಿಯಲ್ಲಿ 2 ವರ್ಷದ ನಾಯಿಯೊಂದು ಪ್ರಮಾಣ ವಚನ ಸ್ವೀಕರಿಸಿದೆ. 2 ವರ್ಷ ಪ್ರಾಯದ ಈ ಲ್ಯಾಬ್ರೆಡಾರ್ ನಾಯಿಯ ಹೆಸರು ಹ್ಯಾಟಿ. 'ಸೆಕ್ಷುವಲ್ ಅಸಾಲ್ಟ್ ಹಾಗೂ ಡೊಮೆಸ್ಟಿಕ್ ವಯೊಲೆನ್ಸ್ ಘಟಕ'ದಲ್ಲಿ ಈ ಶ್ವಾನ ಕರ್ತವ್ಯ ನಿರ್ವಹಿಸಲಿದೆ. ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಳಸಿಕೊಳ್ಳುವ ಸಂತ್ರಸ್ಥರಿಗೆ ವಿಶ್ರಾಂತಿ ಪಡೆಯಲು ಹ್ಯಾಟಿ ಸಹಕರಿಸಲಿದೆ.

ಈ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸ್ತಾ ಇರೋ ಇತರ ಮನುಷ್ಯ ಸಿಬ್ಬಂದಿಗಳಂತೆ ನಾಯಿ ಕೂಡ ಬೆಳಗೆ 9 ಗಂಟೆಯಿಂದ ಸಂಜೆ 5ರವರೆಗೆ ಕೆಲಸ ಮಾಡಲಿದೆ. ಚಿಕ್ಕ ಮಕ್ಕಳು ಮತ್ತು ಹಲ್ಲೆಗೊಳಗಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಒತ್ತಡ ಕಡಿಮೆ ಮಾಡಲು ಈ ನಾಯಿಯನ್ನು ನೇಮಕ ಮಾಡಲಾಗಿದೆ.

ಈ ನಾಯಿಯ ಪ್ರಮಾಣ ವಚನಕ್ಕೆ ಕುಕ್ ಕೌಂಟಿ ಸ್ಟೇಟ್ ನ ಅಟಾರ್ನಿ ಕಿಮ್ ಫಾಕ್ಸ್ ಆಗಮಿಸಿದ್ದರು. ಕಾನೂನು ಪುಸ್ತಕದ ಮೇಲೆ ಕಾಲುಗಳನ್ನಿಟ್ಟು ಶ್ವಾನ ಪ್ರತಿಜ್ಞಾ ವಿಧಿ ಸ್ವೀಕರಿಸಿದೆ.ಇದು ವರ್ಷಕ್ಕೆ 100-200 ಕೇಸುಗಳನ್ನು ಬಗೆಹರಿಸುವ ನಿರೀಕ್ಷೆ ಇದೆ.

 

46ರ ವಯಸ್ಸಿನಲ್ಲೂ ಗ್ಲಾಮರ್ ಲುಕ್ ಕಾಪಾಡಿಕೊಂಡ ಐಶ್ವರ್ಯ ಬ್ಯೂಟಿ ಸೀಕ್ರೆಟ್

Posted: 01 Nov 2019 04:24 AM PDT

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಇಂದು 46ನೇ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಐಶ್ವರ್ಯ ರೈಗೆ 9 ವರ್ಷದ ಮಗಳಿದ್ದಾಳೆ. ಆದ್ರೆ ಈಗ್ಲೂ ಐಶ್ ಗ್ಲಾಮರ್ ಕಡಿಮೆಯಾಗಿಲ್ಲ. ಮಗಳ ಭವಿಷ್ಯಕ್ಕೆ ಹೆಚ್ಚು ಮಹತ್ವ ನೀಡ್ತಿರುವ ಐಶ್ವರ್ಯ ಸಿನಿಮಾದಿಂದ ಸ್ವಲ್ಪ ದೂರವಿದ್ದಾರೆ. ಆದ್ರೆ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ಮಾತ್ರ ನಿರ್ಲಕ್ಷ್ಯ ತೋರಿಲ್ಲ.

ಆರಾದ್ಯ ಹುಟ್ಟಿದ ಸಮಯದಲ್ಲಿ ಐಶ್ ತೂಕ ಹೆಚ್ಚಾಗಿತ್ತು. ಇದು ಕೆಲ ಅಭಿಮಾನಿಗಳ ಬಾಯಿಗೆ ಆಹಾರವಾಗಿತ್ತು. ಆದ್ರೆ ಕೆಲವೇ ವರ್ಷಗಳಲ್ಲಿ ಐಶ್ ಮತ್ತೆ ಹಳೆ ಲುಕ್ ಪಡೆಯಲು ಯಶಸ್ವಿಯಾಗಿದ್ದರು. ಐಶ್ವರ್ಯ ಬ್ಯೂಟಿ ಸೀಕ್ರೆಟ್ ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಐಶ್ವರ್ಯಾ ರೈ ಬಚ್ಚನ್ ಸಂದರ್ಶನವೊಂದರಲ್ಲಿ ತಮ್ಮ ಫಿಟ್ನೆಸ್ ರಹಸ್ಯದ ಬಗ್ಗೆ ಹೇಳಿದ್ದರು. ಮಗಳು ಆರಾಧ್ಯ ಹುಟ್ಟಿದ ನಂತರ ತೂಕ ಇಳಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತಂತೆ. ಜಿಮ್‌ನಲ್ಲಿ ಹೆಚ್ಚು ಕಾಲ ಕಳೆಯುವುದು ಐಶ್ ಗೆ ಇಷ್ಟವಿಲ್ಲವಂತೆ. ಯೋಗಕ್ಕೆ ಹೆಚ್ಚು ಆದ್ಯತೆ ನೀಡುವ ಐಶ್,ತಪ್ಪದೆ ಯೋಗ ಮಾಡ್ತಾರಂತೆ.

ಯೋಗ ಜೊತೆ ಪ್ರತಿ ದಿನ ಬೆಳಿಗ್ಗೆ ವಾಕಿಂಗ್ ಮಾಡ್ತಾರಂತೆ. ನಂತ್ರ 45 ನಿಮಿಷಗಳ ಕಾಲ ಫವರ್ ಯೋಗಾ ಮಾಡ್ತಾರಂತೆ.ವಾರದಲ್ಲಿ ಎರಡು ದಿನ ಮಾತ್ರ ಜಿಮ್ ಗೆ ಹೋಗ್ತಾರಂತೆ ಐಶ್.

ಐಶ್ವರ್ಯ ಆಯುವೇರ್ದ ಸೌಂದರ್ಯ ವರ್ದಕಗಳನ್ನು ಹೆಚ್ಚಾಗಿ ಬಳಸ್ತಾರಂತೆ.ಐಶ್ವರ್ಯ ಎಂದೂ ಬ್ರೇಕ್ ಫಾಸ್ಟ್ ಮಿಸ್ ಮಾಡಲ್ವಂತೆ. ಬೆಳಿಗ್ಗೆ ಉಪಾಹಾರದಲ್ಲಿ ಫೈಬರ್ ಮತ್ತು ಪ್ರೋಟೀನ್ ಆಹಾರ ತಿನ್ನುತ್ತಾರಂತೆ. ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುತ್ತಾರಂತೆ.

ಐಶ್ವರ್ಯ ಸೌಂದರ್ಯದ ಇನ್ನೊಂದು ಗುಟ್ಟು ಬೇಯಿಸಿದ ತರಕಾರಿ. ರೊಟ್ಟಿ ಜೊತೆ ಬೇಯಿಸಿದ ತರಕಾರಿ ಸೇವನೆ ಮಾಡ್ತಾರಂತೆ ಐಶ್.ಜಂಕ್ ಫುಂಡ್ ನಿಂದ ದೂರವಿರುವ ನಟಿ ಹಣ್ಣು ಹಾಗೂ ಜ್ಯೂಸ್ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಾರಂತೆ.ಎಲ್ಲದರ ಜೊತೆ ಹೆಚ್ಚು ನೀರು ಸೇವನೆ ಅವ್ರ ಸೌಂದರ್ಯದ ಗುಟ್ಟು.

 

ದೀಪಾವಳಿ ದಿನ ಮನೆಯಲ್ಲಿ ನಡೀತು ವಿಶೇಷ ಲಕ್ಷ್ಮಿ ಪೂಜೆ

Posted: 01 Nov 2019 04:20 AM PDT

ಸಾಮಾಜಿಕ ಜಾಲತಾಣದಲ್ಲಿ ಲಕ್ಷ್ಮಿ ಪೂಜೆಯ ವಿಡಿಯೋ ಒಂದು ವೈರಲ್ ಆಗಿದೆ. ದೀಪಾವಳಿಯಲ್ಲಿ ಎಲ್ಲರ ಮನೆಯಲ್ಲಿ ಲಕ್ಷ್ಮಿ ಪೂಜೆ ನಡೆಯುತ್ತದೆ. ಈ ಮನೆಯಲ್ಲೂ ಲಕ್ಷ್ಮಿ ಪೂಜೆ ನಡೆದಿದೆ. ಆದ್ರೆ ಮನೆಯವರು ಭಿನ್ನವಾಗಿ ಲಕ್ಷ್ಮಿ ಪೂಜೆ ಆಚರಿಸಿದ್ದು,ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ದೀಪಾವಳಿ ದಿನದ್ದು ಎಂಬುದು ಸ್ಪಷ್ಟವಾಗುತ್ತದೆ. ಮೂವರು ಮಹಿಳೆಯರು ಸೋಫಾ ಮೇಲೆ ಕುಳಿತಿದ್ದಾರೆ. ಕೆಳಗೆ ಮೂವರು ಪುರುಷರು ಕುಳಿತಿದ್ದಾರೆ. ಮಹಿಳೆಯರಿಗೆ ತಿಲಕವಿಟ್ಟು, ಪೂಜೆ ಮಾಡಿ ಅವ್ರ ಕಾಲಿಗೆ ನಮಸ್ಕರಿಸಿ ಪುರುಷರು ಆಶೀರ್ವಾದ ಪಡೆಯುವ ವಿಡಿಯೋ ಇದಾಗಿದೆ.

ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡಿದ್ರೆ ತಾಯಿ ಖುಷಿಯಾಗ್ತಾಳೆ. ಮನೆಯಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸಿರುತ್ತದೆ ಎಂಬ ನಂಬಿಕೆಯಿದೆ. ಈ ಪುರುಷರು ಮನೆ ಮಹಿಳೆಯರು ಖುಷಿಯಾಗಿದ್ರೆ ಮನೆ ಸಂತೋಷವಾಗಿರುತ್ತೆ ಎಂಬ ಸತ್ಯ ಅರಿತಿದ್ದಾರೆ. ಇದೇ ಕಾರಣಕ್ಕೆ ಮಹಿಳೆಯರ ಪೂಜೆ ಮಾಡಿದ್ದಾರೆ.

 

ಇದ್ದಕ್ಕಿದ್ದಂತೆ ನೇರಳೆ ಬಣ್ಣದ ಮೂತ್ರ ಮಾಡ್ತಿದ್ದಾಳೆ ಮಹಿಳೆ, ಕಾರಣ ಗೊತ್ತಾ?

Posted: 01 Nov 2019 04:17 AM PDT

ಪಾರ್ಶ್ವವಾಯುವಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬಳು ನೇರಳೆ ಬಣ್ಣದ ಮೂತ್ರ ಮಾಡಲಾರಂಭಿಸಿದ್ದಾಳೆ. ಆಕೆಯ ದೇಹದಲ್ಲಾದ ಅಪರೂಪದ ರಾಸಾಯನಿಕ ಕ್ರಿಯೆಯಿಂದಾಗಿ ಈ ರೀತಿ ನೇರಳೆ ಮೂತ್ರ ಬರುತ್ತಿದೆ. ಪಾರ್ಶ್ವವಾಯುವಿನಿಂದಾಗಿ 70 ವರ್ಷದ ಮಹಿಳೆಗೆ ಮಾತು ಬರುತ್ತಿಲ್ಲ. ದೇಹದ ಒಂದು ಬದಿ ಸಂಪೂರ್ಣ ನಿಷ್ಕ್ರಿಯವಾಗಿದೆ.

ಆಕೆಗೆ ಮೂತ್ರ ವಿಸರ್ಜಿಸಲು ಸುಲಭವಾಗಲಿ ಅನ್ನೋ ಕಾರಣಕ್ಕೆ ನಾಳವೊಂದನ್ನು ಅಳವಡಿಸಲಾಗಿತ್ತು. 10 ದಿನಗಳ ಬಳಿಕ ಮೂತ್ರ ತುಂಬಿದ ಬ್ಯಾಗ್ ನೇರಳೆ ಬಣ್ಣಕ್ಕೆ ತಿರುಗಿದೆ. ಕೂಡಲೇ ಪ್ಯಾರಿಸ್ ನ ವೈದ್ಯರು ವೃದ್ಧೆಯನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಆಕೆ 'ಪರ್ಪಲ್ ಯೂರಿನರಿ ಬ್ಯಾಗ್ ಸಿಂಡ್ರೋಮ್' ಎಂಬ ಖಾಯಿಲೆಯಿಂದ ಬಳಲುತ್ತಿದ್ದಾಳೆ ಅಂತಾ ತಿಳಿಸಿದ್ದಾರೆ.

ಪರಿಸರದಲ್ಲಿರೋ ಕೆಲವೊಂದು ಬ್ಯಾಕ್ಟೀರಿಯಾಗಳು ದೇಹ ಸೇರಿ ಅಲ್ಲಿ ನಡೆದ ರಾಸಾಯನಿಕ ಕ್ರಿಯೆಯಿಂದಾಗಿ ಈ ರೀತಿ ಮೂತ್ರ ನೇರಳೆ ಬಣ್ಣಕ್ಕೆ ತಿರುಗಿದೆ ಅಂತಾ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 1978ರಲ್ಲಿ ಮೊದಲ ಬಾರಿಗೆ ಈ ಖಾಯಿಲೆ ಪತ್ತೆಯಾಗಿತ್ತು. ದೀರ್ಘಕಾಲದ ವರೆಗೆ ಮೂತ್ರ ಮಾಡಲು ನಳಿಕೆ ಅಳವಡಿಕೆ ಹಾಗೂ ಯೂರಿನರಿ ಟ್ರಾಕ್ಟ್ ಇನ್ಫೆಕ್ಷನ್ ಇದಕ್ಕೆ ಕಾರಣ ಎನ್ನಲಾಗ್ತಿದೆ.

 

ಚಿದಂಬರಂಗೆ ಮತ್ತೆ ಹಿನ್ನಡೆ : ಜಾಮೀನು ಅರ್ಜಿ ವಜಾ

Posted: 01 Nov 2019 04:16 AM PDT

ಐಎನ್ ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಮಾಜಿ ಗೃಹ ಸಚಿವ ಪಿ.ಚಿದಂಬರಂಗೆ ನಿರಾಸೆಯಾಗಿದೆ. ಅನಾರೋಗ್ಯದ ಕಾರಣಕ್ಕೆ ಜಾಮೀನು ನೀಡುವಂತೆ ಪಿ.ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಜಾರಿ ನಿರ್ದೇಶನಾಲಯದ ಬಂಧನವನ್ನು ಪ್ರಶ್ನಿಸಿ ಚಿದಂಬರಂ ಅವರು ದೆಹಲಿ ಹೈಕೋರ್ಟ್‌ಗೆ ಮಧ್ಯಂತರ ಜಾಮೀನು ಸಲ್ಲಿಸಿದ್ದರು.

ಪಿ ಚಿದಂಬರಂ ಅವರು ಅನಾರೋಗ್ಯದ ಆಧಾರದ ಮೇಲೆ ಜಾಮೀನು ಕೋರಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಗುರುವಾರ ವೈದ್ಯಕೀಯ ಮಂಡಳಿಯನ್ನು ರಚಿಸಿತ್ತು. ಇಂದು ವೈದ್ಯಕೀಯ ಮಂಡಳಿ ತನ್ನ ವರದಿಯನ್ನು ಹೈಕೋರ್ಟ್ ಗೆ ನೀಡಿದೆ. ವರದಿಯ ಪ್ರಕಾರ, ಚಿದಂಬರಂ ಆಸ್ಪತ್ರೆ  ಸೇರಿಸುವ ಅಗತ್ಯವಿಲ್ಲವಂತೆ.ಜೈಲಿನಲ್ಲಿಯೇ ನಿಯಮಿತವಾಗಿ ತಪಾಸಣೆ ನೀಡಬಹುದು ಎಂದಿದೆ.

ಮಿನರಲ್ ವಾಟರ್ ನೀಡಬೇಕು. ಸೊಳ್ಳೆ ರಕ್ಷಣೆಗೆ ಕ್ರೀಂ ನೀಡಬೇಕೆಂದು ವೈದ್ಯಕೀಯ ವರದಿಯಲ್ಲಿ ಹೇಳಲಾಗಿದೆ.ಚಿದಂಬರಂಗೆ ಶುದ್ಧ ಗಾಳಿಯ ಅವಶ್ಯಕತೆಯಿದೆ.ಮನೆಯ ಆಹಾರ ಈಗಾಗಲೇ ಬರ್ತಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ ಎಂದಿದೆ.

 

ನ.5ರವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಣೆ

Posted: 01 Nov 2019 03:43 AM PDT

ದೆಹಲಿಯಲ್ಲಿ ಮಾಲಿನ್ಯ ಜಾಸ್ತಿಯಾಗಿದೆ. ಗಾಳಿ ವಿಷವಾಗಿದೆ. ಎಕ್ಯೂಐ 500 ರಿಂದ 700 ರವರೆಗೆ ತಲುಪಿದೆ, ಇದರಿಂದಾಗಿ ಉಸಿರಾಟ ಕಷ್ಟವಾಗ್ತಿದೆ. ಏತನ್ಮಧ್ಯೆ ದೆಹಲಿ ಸರ್ಕಾರವು ನವೆಂಬರ್ 5 ರವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.

ದೆಹಲಿಯಲ್ಲಿ ಹೆಚ್ಚುತ್ತಿರುವ ವಿಷಕಾರಿ ಹೊಗೆಯಿಂದಾಗಿ ಮಾಲಿನ್ಯದ ಮಟ್ಟವು ಸಾಕಷ್ಟು ಹೆಚ್ಚಾಗಿದೆ. ಹಾಗಾಗಿ ದೆಹಲಿಯ ಎಲ್ಲಾ ಶಾಲೆಗಳಿಗೆ ನವೆಂಬರ್ 5 ರವರೆಗೆ ರಜೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.ಮಾಲಿನ್ಯದ ಹಿನ್ನೆಲೆಯಲ್ಲಿ ಇಪಿಸಿಎ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಿದೆ.

ನಿರ್ಮಾಣ ಕಾರ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಪಿಸಿಎ ಸುಪ್ರೀಂ ಕೋರ್ಟ್‌ನ ಸಮಿತಿಯಾಗಿದೆ. ನಿರ್ಮಾಣ ಕಾರ್ಯಗಳ ನಿಷೇಧ ನವೆಂಬರ್ 5 ರವರೆಗೆ ಮುಂದುವರಿಯಲಿದೆ.ರಜೆ ಘೋಷಣೆಗೂ ಮುನ್ನವೇ ಬಿಜೆಪಿ ಸಂಸದ ಮನೋಜ್ ತಿವಾರಿ ಈ ಬಗ್ಗೆ ಹೇಳಿಕೆ ನೀಡಿದ್ದರು.ಮಕ್ಕಳ ಜೀವನದ ಜೊತೆ ಆಟವಾಡಬೇಡಿ. ಮಕ್ಕಳಿಗೆ ರಜೆ ನೀಡಿ ಎಂದಿದ್ದರು.

 

5 ವರ್ಷಗಳಿಂದ ಬರೀ ಅನ್ನ, ಮೆಣಸು ತಿನ್ನುತ್ತಿದ್ದ ಮಹಿಳೆಗೆ ಸಿಕ್ತು ಲಕ್ಷ ಲಕ್ಷ ಸಹಾಯ ಧನ

Posted: 01 Nov 2019 03:21 AM PDT

ಅಪೌಷ್ಠಿಕತೆಯಿಂದ ಬಳಲುತ್ತಿರುವ ಚೀನಾದ ಮಹಿಳೆಯೊಬ್ಬಳು ಕೇವಲ ಅನ್ನ ಹಾಗೂ ಮೆಣಸಿನಕಾಯಿ ತಿಂದ್ಕೊಂಡೇ ಬದುಕುತ್ತಿದ್ದಾಳೆ. ಈಕೆಯ ನೋವಿನ ಕಥೆ ವೈರಲ್ ಆಗ್ತಿದ್ದಂತೆ ಜಗತ್ತಿನ ಮೂಲೆ ಮೂಲೆಯಿಂದ್ಲು ಸಹಾಯಧನ ಹರಿದು ಬಂದಿದ್ದು, ಸುಮಾರು 81 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಈ ಮಹಿಳೆಯ ಹೆಸರು ವು ಹುಯಾನ್, ಇವಳಿಗೆ 24 ವರ್ಷ. ಈಕೆ ಅನಾಥೆ, ತಮ್ಮನನ್ನು ಬಿಟ್ಟರೆ ಮತ್ಯಾರೂ ಇಲ್ಲ. ಆತ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಅವನ ಚಿಕಿತ್ಸೆಗಾಗಿ ಮಹಿಳೆ ಹಣ ಕೂಡಿಡುತ್ತಿದ್ದಾಳೆ. ಕಳೆದ 5 ವರ್ಷಗಳಿಂದ ಪ್ರತಿನಿತ್ಯ ಅನ್ನ ಹಾಗೂ ಮೆಣಸಿನಕಾಯಿ ತಿನ್ನುತ್ತಿದ್ದಾಳೆ.

ದಿನವೊಂದಕ್ಕೆ ಈಕೆ ಮಾಡ್ತಿರೋ ಖರ್ಚು ಕೇವಲ 21 ರೂಪಾಯಿ. ಸ್ಕೂಲ್ ನಲ್ಲಿದ್ದಾಗ್ಲೇ ಹುಯಾನ್ ತಂದೆ ತಾಯಿ ಮೃತಪಟ್ಟಿದ್ದರು. ಇವರಿಬ್ಬರನ್ನು ಅಜ್ಜಿ ಹಾಗೂ ಚಿಕ್ಕಪ್ಪ-ಚಿಕ್ಕಮ್ಮ ಸಲಹಿದ್ದಾರೆ. ಅವರು ಪ್ರತಿ ತಿಂಗಳು 2900 ರೂಪಾಯಿ ಕೊಡ್ತಾರೆ, ಅದರಲ್ಲೇ ಇಬ್ಬರ ಜೀವನ ಸಾಗಬೇಕು.

ಹುಯಾನ್ ಳ ಕಾಲೇಜು ಶುಲ್ಕ, ತಮ್ಮನ ಮೆಡಿಕಲ್ ಬಿಲ್ ಎಲ್ಲದಕ್ಕೂ ಖರ್ಚಾಗಿ ಉಳಿಯೋದು ಕೇವಲ 0.30 ಡಾಲರ್ . ಇತ್ತೀಚೆಗಷ್ಟೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹುಯಾನ್ ವೈದ್ಯರ ಬಳಿ ಹೋಗಿದ್ಲು. ಆಕೆ ಈಗ ಕೇವಲ 20 ಕೆಜಿ ತೂಕವಿದ್ದಾಳೆ. ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಸರಿಯಾದ ಆಹಾರ ತೆಗೆದುಕೊಳ್ಳದೇ ಇರುವುದರಿಂದ ಅವಳ ಹೃದಯ ಹಾಗೂ ಕಿಡ್ನಿ ತೊಂದರೆಗೀಡಾಗಿದೆ.

ಇವಳ ನೋವಿನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ನೋಡಿ ಚೀನಾ ಸರ್ಕಾರ ಕೂಡ ನೆರವಿಗೆ ಬಂದಿದೆ. ಪ್ರತಿ ತಿಂಗಳು 7000 ರೂಪಾಯಿ ಹಣ ಕೊಡ್ತಿದೆ. ದಾನಿಗಳು ಸುಮಾರು 81 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.

ಕೋಟಿ ಗೆಲ್ಲಲು KBCಗೆ ಬಂದ ಸ್ಪರ್ಧಿ ನೋಡಿ ದಂಗಾದ ಅಮಿತಾಭ್

Posted: 01 Nov 2019 03:14 AM PDT

ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಈ ಶೋನಲ್ಲಿ ಹಲವು ಸೆಲೆಬ್ರಿಟಿಗಳು ಸಹ ಪಾಲ್ಗೊಂಡಿದ್ದಾರೆ. ಆದ್ರೆ ಈಗ ಬಂದಿರೋ ಸ್ಪರ್ಧಿ ಅವರೆಲ್ಲರಿಗಿಂತ ಸ್ಪೆಷಲ್. ಇದೊಂದು ಮುದ್ದಾದ ಬೆಕ್ಕು.

ಕೆಬಿಸಿ ಎಪಿಸೋಡ್ ಶೂಟಿಂಗ್ ನಡೆಯುತ್ತಿರುವ ಸಂದರ್ಭದಲ್ಲಿ ಬೆಕ್ಕೊಂದು ಸ್ಟುಡಿಯೋ ಒಳಕ್ಕೆ ಬಂದಿದೆ. ನೇರವಾಗಿ ಸ್ಪರ್ಧಿಗಳು ಕೂರುವ ಹಾಟ್ ಸೀಟ್ ಬಳಿಯೇ ಬಂದ ಬೆಕ್ಕು, ಅಲ್ಲೇ ಸ್ವಲ್ಪ ಹೊತ್ತು ಆಟವಾಡಿದೆ. ಬಳಿಕ ತನ್ನ ಪಾಡಿಗೆ ತಾನು ಅಲ್ಲಿಂದ ಹೊರಟು ಹೋಗಿದೆ.

ನಟ ಅಮಿತಾಭ್ ಬಚ್ಚನ್ ಈ ಬೆಕ್ಕನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಟ್ವಿಟ್ಟರ್ ನಲ್ಲಿ ಅಪ್ಲೋಡ್ ಸಹ ಮಾಡಿದ್ದಾರೆ. ಬೆಕ್ಕಿನ ಕ್ಯೂಟ್ ಇಮೇಜ್ ಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಕ್ಕೆ ಹಲವರು ಬಿಗ್ ಬಿಗೆ ಧನ್ಯವಾದ ಅರ್ಪಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಎರಡುವರೆ ವರ್ಷದ ಮಗವನ್ನು ಹೊಡೆದು ಸಾಯಿಸಿದ ಪಾಪಿ

Posted: 01 Nov 2019 03:13 AM PDT

ಚೆನ್ನೈನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಂದೆಯೊಬ್ಬ ಮಗಳನ್ನು ಹೊಡೆದು ಸಾಯಿಸಿದ್ದಾನೆ. ಎಂಜಿಆರ್ ನಗರ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ತಂದೆ ಈ ಕ್ರೌರ್ಯಕ್ಕೆ ಕುಡಿತ ಕಾರಣ ಎನ್ನಲಾಗಿದೆ.

ಗುರುವಾರ ರಾತ್ರಿ 27 ವರ್ಷದ ಯೆಲಾಪನ್ ಕುಡಿದು ಮನೆಗೆ ಬಂದಿದ್ದ ಎನ್ನಲಾಗಿದೆ.ಯಾವುದೋ ವಿಚಾರಕ್ಕೆ ಪತಿ-ಪತ್ನಿ ಮಧ್ಯೆ ಗಲಾಟೆ ನಡೆಯುತ್ತಿತ್ತು. ಜಗಳದ ಮಧ್ಯೆ ಯೆಲಾಪನ್ ತನ್ನ ಎರಡೂವರೆ ವರ್ಷದ ಮಗಳಿಗೆ ಹೊಡೆದಿದ್ದಾನೆ. ತಂದೆಯಿಂದ ಹೊಡೆತ ತಿಂದ ಮಗುವಿಗೆ ತೀವ್ರವಾಗಿ ಗಾಯವಾಗಿತ್ತು.

ಪತ್ನಿ, ಪತಿಯಿಂದ ತಪ್ಪಿಸಿಕೊಂಡು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದ್ರೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ.ಪತ್ನಿ,ಪತಿ ಯೆಲಾಪನ್ ವಿರುದ್ಧ ದೂರು ದಾಖಲಿಸಿದ್ದಳು ಎನ್ನಲಾಗಿದೆ. ಪೊಲೀಸರು ಯೆಲಾಪನ್ ಅವರನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

 

Sbi ಗ್ರಾಹಕರಿಗೆ ಶಾಕಿಂಗ್..! ಇಳಿಕೆಯಾಗಿದೆ ಬಡ್ಡಿದರ

Posted: 01 Nov 2019 03:09 AM PDT

ಇಂದಿನಿಂದ ದೇಶದ ಅನೇಕ ನಿಯಮಗಳಲ್ಲಿ ಬದಲಾವಣೆಯಾಗಿದೆ. ಹೊಸ ನಿಯಮ ಜನಸಾಮಾನ್ಯರ ಮೇಲೆ ಪರಿಣಾಮ ಬೀರ್ತಿದೆ. ಬ್ಯಾಂಕಿಂಗ್ ಕ್ಷೇತ್ರದ ಬದಲಾವಣೆ ಎಸ್‌ಬಿಐ ಗ್ರಾಹಕರ ಜೇಬಿಗೆ ಹೆಚ್ಚು ಪರಿಣಾಮ ಬೀರಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಶಾಕಿಂಗ್ ಕಾದಿದೆ. ಠೇವಣಿಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಕಡಿತಗೊಳಿಸಿದೆ.ಅಕ್ಟೋಬರ್ 9ರಂದೆ ಎಸ್ಬಿಐ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿತ್ತು. ಠೇವಣಿ ಮೇಲಿನ ಬಡ್ಡಿ ಕಡಿತ ಇಂದಿನಿಂದ ಜಾರಿಗೆ ಬಂದಿದೆ.

ಈಗ ಎಸ್‌ಬಿಐನಲ್ಲಿ 1 ಲಕ್ಷ ರೂಪಾಯಿಗಳ ಠೇವಣಿ ಮೇಲಿನ ಬಡ್ಡಿದರವನ್ನು ಶೇಕಡಾ 0.25ಕ್ಕೆ ಇಳಿಸಲಾಗಿದೆ. ಅಂದ್ರೆ 1 ಲಕ್ಷ ರೂಪಾಯಿ ಠೇವಣಿ ಮೇಲೆ ಇನ್ಮುಂದೆ ಶೇಕಡಾ 3.25ರಷ್ಟು ಬಡ್ಡಿ ಸಿಗಲಿದೆ. ಉಳಿತಾಯ ಖಾತೆಯಲ್ಲಿ 1 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಠೇವಣಿಯಿದ್ರೆ ಅದರ ಮೇಲಿನ ಬಡ್ಡಿ ದರ ರೆಪೊ ದರಕ್ಕೆ ಅನುಗುಣವಾಗಿ ಲಭ್ಯವಾಗಲಿದೆ.

 

ಟ್ವಿಟ್ಟರ್ ಮೂಲಕ ತಾಯಿಗೆ ವರನನ್ನು ಹುಡುಕ್ತಿದ್ದಾಳೆ ಈ ಯುವತಿ

Posted: 01 Nov 2019 03:05 AM PDT

ಆಸ್ಥಾ ವರ್ಮಾ ಕಾನೂನು ವಿದ್ಯಾರ್ಥಿನಿ. ತನ್ನ ತಾಯಿಗೆ ವರನ ಹುಡುಕಾಟದಲ್ಲಿದ್ದಾಳೆ. ಅಮ್ಮನ ಜೊತೆ ಇರೋ ಸೆಲ್ಫಿ ಒಂದನ್ನು ಪೋಸ್ಟ್ ಮಾಡಿರೋ ಆಸ್ಥಾ, ತನ್ನ ತಾಯಿಗೆ 50 ವರ್ಷ ವಯಸ್ಸಿನ ಸ್ಪುರದ್ರೂಪಿ ವರ ಬೇಕು ಅಂತಾ ಟ್ವೀಟ್ ಮಾಡಿದ್ದಾಳೆ.

ಆತ ಶುದ್ಧ ಸಸ್ಯಾಹಾರಿಯಾಗಿರಬೇಕು ಜೊತೆಗೆ ಮದ್ಯಪಾನ ಮಾಡಬಾರದು ಅನ್ನೋದು ಆಸ್ಥಾಳ ಕಂಡೀಷನ್. ತಾಯಿಗೆ ಮಗಳೇ ವರನನ್ನು ಹುಡುಕ್ತಾ ಇರೋದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲ ಅಮ್ಮನ ಬಗ್ಗೆ ಆಸ್ಥಾಳಿಗೆ ಇರುವ ಕಾಳಜಿ ಎಲ್ಲರಿಗೂ ಇಷ್ಟವಾಗಿದೆ. ಅವಳ ಟ್ವೀಟ್ ಈಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

ಆಸ್ಥಾ ಮಾಡಿರೋ ಟ್ವೀಟ್ ಗೆ ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಅವಳ ತಾಯಿಗೆ ವರನನ್ನು ಹುಡುಕಲು ಸಹಾಯ ಮಾಡೋದಾಗಿ ಮುಂದೆ ಬಂದಿದ್ದಾರೆ. ಮ್ಯಾಟ್ರಿಮೊನಿಯಲ್ ಸೈಟ್ ಗಳಲ್ಲಿ, ಟಿಂಡರ್ ನಲ್ಲೂ ಆಸ್ಥಾ ತಾಯಿಗೆ ಸಂಗಾತಿಯನ್ನು ಹುಡುಕಲು ಸಾಕಷ್ಟು ಪ್ರಯತ್ನ ಮಾಡಿ ಸೋತಿದ್ದಾಳಂತೆ. ಟ್ವಿಟ್ಟರ್ ಮೂಲಕವಾದ್ರೂ ಅಮ್ಮನಿಗೆ ಬಾಳಸಂಗಾತಿ ಸಿಗಲಿ ಅನ್ನೋದು ಅವಳ ಆಸೆ.

14 ವರ್ಷದ ಬಾಲಕನ ಪ್ರೀತಿಗೆ ಬಿದ್ದು ಸಂಬಂಧ ಬೆಳೆಸಿದ್ಲು 35 ವರ್ಷದ ವಿವಾಹಿತೆ

Posted: 01 Nov 2019 03:02 AM PDT

ಪ್ರೀತಿ ಕುರುಡು ಎನ್ನುತ್ತಾರೆ. ಆದ್ರೆ ಇದು ಅತಿರೇಕಕ್ಕೆ ಹೋದ್ರೆ ಸಂಕಷ್ಟ ಎದುರಿಸಬೇಕಾಗುತ್ತದೆ. ಮಿರ್ಜಾಪುರದ ಅಹ್ರಾರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆ ನಡೆದಿದೆ. 35 ವರ್ಷದ ಮಹಿಳೆ 14 ವರ್ಷದ ಬಾಲಕನ ಪ್ರೀತಿಗೆ ಬಿದ್ದಿದ್ದಾಳೆ.ಆಗಾಗ ಭೇಟಿಯಾಗ್ತಿದ್ದ ಇಬ್ಬರು ದೈಹಿಕ ಸಂಬಂಧ ಕೂಡ ಬೆಳೆಸಿದ್ದಾರೆ ಎನ್ನಲಾಗಿದೆ.

ಇವರಿಬ್ಬರು ಒಂದಾಗ್ತಿದ್ದ ವಿಷ್ಯ ಸ್ಥಳೀಯರಿಗೆ ಗೊತ್ತಾಗಿದೆ. ಮಹಿಳೆ ಪತಿ ಕಿವಿಗೂ ಇದು ಬಿದ್ದಿದೆ. ಪತಿ,ಪತ್ನಿಯ ಮನಸ್ಸು ಬದಲಿಸುವ ಯತ್ನ ನಡೆಸಿದ್ದಾನೆ.ಆದ್ರೆ 14 ವರ್ಷದ ಬಾಲಕನ ಪ್ರೀತಿಗೆ ಬಿದ್ದಿದ್ದ ಮಹಿಳೆ ಯಾರ ಮಾತೂ ಕೇಳಲಿಲ್ಲ. ಇದಾದ ನಂತ್ರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಇಬ್ಬರನ್ನು ಕರೆದು ವಿಚಾರಣೆ ನಡೆಸಿದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇಬ್ಬರೂ ಶಾರೀರಿಕ ಸಂಬಂಧ ಬೆಳೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಇಬ್ಬರ ಮನವೊಲಿಸಲು ಪೊಲೀಸರು ಯಶಸ್ವಿಯಾಗಿದ್ದು,ಇಬ್ಬರನ್ನು ಮನೆಗೆ ಕಳುಹಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಈ ಸುದ್ದಿ ಎಲ್ಲರ ಬಾಯಲ್ಲಿ ಹರಿದಾಡ್ತಿದೆ.

 

ಮದುವೆ ಉಳಿಸಿಕೊಳ್ಳಲು ಈಗ್ಲೇ ಕೆಲ ನಿಯಮ ಪಾಲಿಸ್ತಿದ್ದಾರೆ ಪಿಗ್ಗಿ

Posted: 01 Nov 2019 02:58 AM PDT

ಬಾಲಿವುಡ್  ಹಾಗೂ ಹಾಲಿವುಡ್ ಎರಡರಲ್ಲೂ ಸದ್ಯ ಬ್ಯುಸಿಯಿರುವ ನಟಿ ಪ್ರಿಯಾಂಕಾ ಚೋಪ್ರಾ. ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಕೂಡ ಪಿಗ್ಗಿ ಬ್ಯುಸಿಯಾಗಿದ್ದಾಳೆ.ಪತಿ ನಿಕ್ ಕೂಡ ತಮ್ಮ ಕೆಲಸದಲ್ಲಿ ಬ್ಯುಸಿಯಿದ್ದಾರೆ. ನಿಕ್-ಪಿಗ್ಗಿ ಮದುವೆಯಾಗಿ ಒಂದು ವರ್ಷವಾಗಿದೆಯಷ್ಟೆ. ಆದ್ರೆ ಈಗ್ಲೇ ಪ್ರಿಯಾಂಕಾ ಮದುವೆ ಉಳಿಸಿಕೊಳ್ಳಲು ಕೆಲ ನಿಯಮಗಳನ್ನು ಪಾಲಿಸ್ತಿದ್ದಾರೆ. ಇದಕ್ಕೆ ನಿಕ್ ಕೂಡ ಒಪ್ಪಿಗೆ ನೀಡಿದ್ದಾರೆ.

ಪ್ರಿಯಾಂಕಾ ಹಾಗೂ ನಿಕ್ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿರಲಿ 2-3 ವಾರಗಳ ಕಾಲ ದೂರವಿರುವುದಿಲ್ಲವಂತೆ. ದೇಶದ ಯಾವುದೇ ಮೂಲೆಯಲ್ಲಿರಲಿ ಇಬ್ಬರು ವಿಡಿಯೋ ಕಾಲ್ ಮಾಡಿ ಮಾತನಾಡ್ತಾರಂತೆ.ಮಹತ್ವಾಕಾಂಕ್ಷೆಗಳನ್ನು ಅರ್ಥ ಮಾಡಿಕೊಳ್ಳುವ ಪತಿ ಸಿಗೋದು ಕಷ್ಟ. ವೃತ್ತಿ ಜೀವನವನ್ನು ಉಡುಗೊರೆಯಾಗಿ ಪಡೆದಿಲ್ಲ.ಈ ಹುದ್ದೆಗೆ ಬರಲು ಸಾಕಷ್ಟು ಕಷ್ಟಪಟ್ಟಿದ್ದೇನೆ.ಇದು ಇಬ್ಬರಿಗೂ ಗೊತ್ತು. ಹಾಗಾಗಿ ಪರಸ್ಪರ ಬೆಂಬಲಿಸುತ್ತೇವೆಂದು ಪ್ರಿಯಾಂಕಾ ಹೇಳಿದ್ದಾರೆ.

2017ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದ ನಿಕ್ ಹಾಗೂ ಪಿಗ್ಗಿ 2018ರಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತ್ರ ಪ್ರಿಯಾಂಕಾ ವೃತ್ತಿ ಜೀವನದ ಜೊತೆ ದಾಂಪತ್ಯವನ್ನು ನಿಭಾಯಿಸಿಕೊಂಡು ಹೋಗ್ತಿದ್ದಾರೆ.

 

ಹುಟ್ಟುಹಬ್ಬದ ನೆಪ ಹೇಳಿ ಮೂರು ಮಕ್ಕಳನ್ನು ಮನೆಗೆ ಕರೆದ ವೃದ್ಧ…!

Posted: 01 Nov 2019 02:54 AM PDT

ಪಂಜಾಬ್ ನ ಮೊಹಾಲಿಯಲ್ಲಿ 50 ವರ್ಷದ ವೃದ್ಧನೊಬ್ಬ ನಾಚಿಕೆ ಕೆಲಸ ಮಾಡಿದ್ದಾನೆ. ಮೂವರು ಮಕ್ಕಳನ್ನು ಹುಟ್ಟುಹಬ್ಬದ ನೆಪ ಹೇಳಿ ಮನೆಗೆ ಕರೆದಿದ್ದ ವೃದ್ಧ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದಾನೆ.ಉಳಿದ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ವೃತ್ತಿಯಲ್ಲಿ ಪೇಂಟರ್ ಆಗಿರುವ ರಮೇಶ್ ಚೌಹಾಣ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮಕ್ಕಳು ಮನೆ ಮುಂದೆ ಆಡ್ತಿದ್ದರಂತೆ. ಈ ವೇಳೆ ಅಲ್ಲಿಗೆ ಬಂದ ರಮೇಶ್,ಹುಟ್ಟುಹಬ್ಬದ ನೆಪ ಹೇಳಿ ಮಕ್ಕಳನ್ನು ಮನೆಗೆ ಕರೆದಿದ್ದಾನೆ.ರಮೇಶ್ ಬಾಲಕಿಯರಿಗೆ ಡ್ರಗ್ಸ್ ನೀಡಿ ಪ್ರಜ್ಞೆ ತಪ್ಪಿದ ನಂತ್ರ ಆಸೆ ತೀರಿಸಿಕೊಂಡಿದ್ದಾನೆ.

ಮೂರು ಗಂಟೆಗಳ ಕಾಲ ಮಕ್ಕಳನ್ನು ಆರೋಪಿ ಮನೆಯಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದೆ.ಏಳು ವರ್ಷದ ಬಾಲಕಿ ಮನೆಗೆ ಬಂದು ತಾಯಿಗೆ ವಿಷ್ಯ ಹೇಳಿದ್ದಾಳೆ.ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಬಹಿರಂಗವಾಗಿದೆ.

 

ಜಿಯೋಗೆ ಟಕ್ಕರ್: ಕರೆ ಮಾಡಿದ್ರೆ ಈ ಕಂಪನಿ ನೀಡುತ್ತೆ ಕ್ಯಾಶ್ ಬ್ಯಾಕ್

Posted: 01 Nov 2019 12:09 AM PDT

ರಿಲಯನ್ಸ್ ಜಿಯೋ ಇತ್ತೀಚೆಗೆ ಐಯುಸಿ ಹೆಸರಿನಲ್ಲಿ ಬೇರೆ ನೆಟ್ವರ್ಕ್ ಕರೆಗೆ ಹಣ ವಿಧಿಸುವುದಾಗಿ ಘೋಷಣೆ ಮಾಡಿದೆ. ಆದರೆ ಭಾರತದ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್  ಇದಕ್ಕೆ ವಿರುದ್ಧ ಘೋಷಣೆ ಮಾಡಿದೆ. ಕಂಪನಿಯು ಕರೆ ಮಾಡುವ ಗ್ರಾಹಕರಿಗೆ ಹಣ ನೀಡುವುದಾಗಿ ಘೋಷಣೆ ಮಾಡಿದೆ.

ಬಿಎಸ್‌ಎನ್‌ಎಲ್‌ನ ಈ ಹೊಸ ಪ್ಲಾನ್ ಅಡಿ 5 ನಿಮಿಷ ಅಥವಾ ಹೆಚ್ಚಿನ ಸಮಯ ಕರೆ ಮಾಡಿದ್ರೆ ಬಳಕೆದಾರರ ಖಾತೆಗೆ 6 ಪೈಸೆ ಸೇರಲಿದೆ. ಬಿಎಸ್ಎನ್ಎಲ್ ಪ್ರಸ್ತುತ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ನೌಕರರಿಗೆ ಸಂಬಳ ನೀಡಲು ಹಣವಿಲ್ಲ ಎಂಬ ಸುದ್ದಿಯಿದೆ. ಬಿಎಸ್ಎನ್ಎಲ್ ಮುಚ್ಚಲಿದೆ ಎಂಬ ಸುದ್ದಿಯೂ ಇತ್ತು. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಈ 6 ಪೈಸೆ ಕ್ಯಾಶ್‌ಬ್ಯಾಕ್ ಕೊಡುಗೆ ದೇಶದ ಎಲ್ಲಾ ಬಿಎಎಸ್‌ಎನ್‌ಎಲ್ ವೈರ್‌ಲೈನ್, ಎಫ್‌ಟಿಟಿಎಚ್ ಮತ್ತು ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಲಭ್ಯವಾಗಲಿದೆ. ಬಿಎಸ್ಎನ್ಎಲ್, ಗ್ರಾಹಕರನ್ನು ಸೆಳೆಯಲು ಈ ಯೋಜನೆ ಶುರು ಮಾಡಿದ್ರೆ ಯೋಜನೆ ಕಂಪನಿ ಬೊಕ್ಕಸ ತುಂಬಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

 

ಕಾರಿನ ಹಿಂಬದಿ ಸೀಟಿನಲ್ಲಿ ಕಾಮತೃಷೆ ತೀರಿಸಿಕೊಂಡ ದಂಪತಿ ವಿಡಿಯೋ ವೈರಲ್

Posted: 31 Oct 2019 11:34 PM PDT

ಹೆದ್ದಾರಿಯಲ್ಲಿ ಚಲಿಸ್ತಿದ್ದ ಎಸ್ಯುವಿ ಕಾರಿನ ಹಿಂದಿನ ಸೀಟಿನಲ್ಲಿ ಕಾಮತೃಷೆ ತೀರಿಸಿಕೊಳ್ತಿದ್ದ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅಕ್ಟೋಬರ್ 27 ರಂದು ಘಟನೆ ನಡೆದಿದ್ದು, ಈ ವಿಡಿಯೋ ವೈರಲ್ ಆದಾಗ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಎಸ್ಯುವಿ ಕಾರಿನ ಪಕ್ಕ ಹಾದು ಹೋದ ಇನ್ನೊಂದು ಕಾರಿನಲ್ಲಿದ್ದ ಪ್ರಯಾಣಿಕರು ಇದ್ರ ವಿಡಿಯೋ ಮಾಡಿದ್ದಾರೆ. ವಿಡಿಯೋವನ್ನು ಪ್ರಯಾಣಿಕರು ಟ್ವೀಟರ್ ಗೆ ಹಾಕಿದ್ದರು. ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ದಂಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದಾರೆ.

ಟ್ವೀಟರ್ ನಲ್ಲಿ ಮಾತ್ರವಲ್ಲ ವಾಟ್ಸ್ ಅಪ್, ಫೇಸ್ಬುಕ್ ನಲ್ಲಿಯೂ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿದ ಜನರು ನಾವು ಪಾಕಿಸ್ತಾನದಲ್ಲಿ ವಾಸವಾಗಿದ್ದೇವೆ. ಕ್ಲಬ್ ನಲ್ಲಿ ಅಲ್ಲ ಎಂದು ಕಮೆಂಟ್ ಮಾಡಿದ್ದಾರೆ.