Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Saturday, August 24, 2019

Kannada News | Karnataka News | India News

Kannada News | Karnataka News | India News


ಒತ್ತಡ ಕಡಿಮೆ ಮಾಡುತ್ತೆ ‘ಒಳ್ಳೆ ಉಪಹಾರ’

Posted: 24 Aug 2019 08:55 AM PDT

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ ಕೂಡ ಜಾಸ್ತಿಯಾಗ್ತಾ ಇದೆ. ಒತ್ತಡ ಕಡಿಮೆ ಮಾಡುವಲ್ಲಿ ನಮ್ಮ ಆಹಾರ ಒಳ್ಳೆಯ ಔಷಧ ಎಂದ್ರೆ ತಪ್ಪಾಗಲಾರದು.

ಬೆಳಗಿನ ಉಪಹಾರ ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಬೆಳಿಗ್ಗೆ ಉತ್ತಮ ಉಪಹಾರ ಮಾಡುವವರು, ಇತರರಿಗಿಂತ ಕಡಿಮೆ ಒತ್ತಡದಲ್ಲಿ ಇರುತ್ತಾರಂತೆ. ಅಧ್ಯಯನದ ಪ್ರಕಾರ ಉತ್ತಮ ಉಪಹಾರ ಸೇವಿಸುವವರು ಉದ್ವಿಗ್ನ ಪರಿಸ್ಥಿತಿಯಲ್ಲಿ ಶೇಕಡಾ 80 ರಷ್ಟು ಒತ್ತಡ ರಹಿತರಾಗಿರ್ತಾರಂತೆ. ಲಘು ಉಪಹಾರ ಮಾಡುವವರು ಗೊಂದಲ ಪರಿಸ್ಥಿತಿಯಲ್ಲಿ ಶೇಕಡಾ 7 ರಷ್ಟು ಬೇಗ ನಿರ್ಧಾರ ತೆಗೆದುಕೊಳ್ತಾರಂತೆ.

ಸತತ ಎರಡು ದಿನಗಳ ಕಾಲ ಕೆಲವರ ಮೇಲೆ ಸಂಶೋಧನೆ ನಡೆಸಲಾಯ್ತು. ಒಂದು ದಿನ ಉಪಹಾರ ನೀಡಿದ್ರೆ ಮತ್ತೊಂದು ದಿನ ಉಪಹಾರ ನೀಡದೆ ಅಧ್ಯಯನ ನಡೆಸಲಾಯ್ತು. ಇದ್ರಲ್ಲಿ ಉಪಹಾರ ಮಾಡಿದ ದಿನ ಪರೀಕ್ಷೆಯಲ್ಲಿ ಶೇಕಡಾ 61ರಷ್ಟು ಫಲಿತಾಂಶ ಬಂತು.

ಉಪಹಾರ ಮಾಡದ ಮಂದಿ ಪರೀಕ್ಷೆಯನ್ನು ಸರಿಯಾಗಿ ಎದುರಿಸಲಾಗಲಿಲ್ಲ ಎಂಬುದನ್ನು ಒಪ್ಪಿಗೊಂಡಿದ್ದಾರೆ. ಬ್ರಿಟನ್ ನಲ್ಲಿ 2 ಸಾವಿರ ಮಂದಿ ಮಾತನಾಡಿಸಿದಾಗ ಅದ್ರಲ್ಲಿ ಶೇಕಡಾ 48ರಷ್ಟು ಮಂದಿ ಉಪಹಾರ ಸೇವಿಸುವುದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಉಪಹಾರ ಸೇವಿಸದ ಮಂದಿ ಸದಾ ಒತ್ತಡದಲ್ಲಿರ್ತಾರೆ. ಕೆಲಸದ ಮೇಲೆ ಗಮನ ನೀಡುವುದಿಲ್ಲ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಅದ್ರಲ್ಲೂ 25 ರಿಂದ 34 ವರ್ಷ ವಯಸ್ಸಿನವರ ಮೇಲೆ ಇದ್ರ ಪರಿಣಾಮ ಜಾಸ್ತಿ ಇರುತ್ತದೆ ಎಂದು ಅಧ್ಯಯನ ಹೇಳಿದೆ.

ಕ್ಯಾಮೆರಾ ಮುಂದೆ ಸೆಕ್ಸ್‌ ನಡೆಸುವುದು ನನಗಿಷ್ಟವೆಲ್ಲವೆಂದ ನಟಿ

Posted: 24 Aug 2019 08:42 AM PDT

ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಅವರ ಇನ್ ಸ್ಟಾಗ್ರಾಂನಲ್ಲಿ ಒಮ್ಮೆ ಕಣ್ಣಾಡಿಸಿ ಆಕೆಯ ಫೋಟೋಗಳನ್ನು ನೋಡಿದರೆ ಬೋಲ್ಡ್ ಮತ್ತು ಮಾದಕವಾಗಿ ಕಾಣಿಸುತ್ತಾಳೆ ಮತ್ತು ವಯಸ್ಕರ ಚಿತ್ರಗಳಲ್ಲಿ ನಟಿಸದೇ ಇರಲಾರಳು ಎಂಬ ಭಾವನೆ ಬರುತ್ತದೆ.

ಈ ಮಾದಕ ಚೆಲುವೆ ವಯಸ್ಕರ ಮ್ಯಾಗಝಿನ್ ಪ್ಲೇಬಾಯ್ ಗೆ ಬೆತ್ತಲೆಯಾಗಿ ಪೋಸ್ ನೀಡಿದ್ದ ಮೊದಲ ಭಾರತೀಯ ನಟಿ ಎಂಬ ಹೆಸರನ್ನೂ ಪಡೆದಿದ್ದಾಳೆ. ಆದರೆ, ವಯಸ್ಕರ ಚಿತ್ರದಲ್ಲಿ ನಟಿಸುವ ಬಗ್ಗೆ ಮಾತ್ರ ಶೆರ್ಲಿನ್ ಮೂಗು ಮುರಿಯುತ್ತಾಳೆ.

ಬೇಕಾದರೆ ಬೆತ್ತಲೆಯಾಗಿ ಹಿಂಬದಿಯ ಭಾಗವನ್ನು ತೋರಿಸುತ್ತಾ ಪೋಸ್ ನೀಡಲು ಸಿದ್ಧನಿದ್ದೇನೆ. ಆದರೆ, ಕ್ಯಾಮೆರಾ ಮುಂದೆ ಲೈಂಗಿಕ ಕ್ರಿಯೆ ನಡೆಸುವುದು ನನಗೆ ಸರಿ ಕಾಣಿಸುವುದಿಲ್ಲ. ಇದು ನನಗೆ ಕಂಫರ್ಟ್ ಎನಿಸುವುದಿಲ್ಲ ಎಂದಿದ್ದಾಳೆ.

ಇತ್ತೀಚೆಗೆ ತಮಗೆ ವಯಸ್ಕರ ಚಿತ್ರದಲ್ಲಿ ನಟಿಸುವಂತೆ ಬಂದ ಆಫರ್ ಬಗ್ಗೆ ಮಾತನಾಡಿರುವ ಶೆರ್ಲಿನ್, ನನಗೆ ಕ್ಯಾಮೆರಾ ಮುಂದೆ ಲೈಂಗಿಕ ಕ್ರಿಯೆ ನಡೆಸುವುದು ಆರಾಮ ಎನಿಸುವುದಿಲ್ಲ ಎಂದಿದ್ದಾಳೆ.

ಈ ಹಿಂದೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವಯಸ್ಕರ ಚಿತ್ರದಲ್ಲಿ ಕೇವಲ ಸೆಕ್ಸ್ ಸೀನ್ ಗಳಲ್ಲಿ ನಟಿಸುವಂತೆ ನೀಡಿದ್ದ ಆಫರ್ ಅನ್ನು ತಿರಸ್ಕರಿಸಿದ್ದೆ ಎಂದಿರುವ ಶೆರ್ಲಿನ್, ಈ ಬಗ್ಗೆ ಪುನರ್ ಪರಿಶೀಲಿಸಿ ತಿಳಿಸುವಂತೆ ಹೇಳಿದ್ದೆ ಎಂದು ಹೇಳಿದ್ದಾಳೆ.

View this post on Instagram

Video by @malaysompura ❤️

A post shared by Sherlyn Chopra (@sherlynchopra) on

View this post on Instagram

#newyearseve #happy2019 ✨

A post shared by Sherlyn Chopra (@sherlynchopra) on

ಸುರಕ್ಷಿತ ಸೆಕ್ಸ್ ಗೆ ಒಂದಿಷ್ಟು ಟಿಪ್ಸ್

Posted: 24 Aug 2019 08:04 AM PDT

ಲೈಂಗಿಕ ಆನಂದ ಪಡೆಯುವುದು ಪ್ರತಿಯೊಬ್ಬರಿಗೂ ಮುಖ್ಯ. ಆದ್ರೆ ಸುರಕ್ಷಿತ ಹಾಗೂ ಆರೋಗ್ಯಕರ ಸಂಭೋಗಕ್ಕೆ ಮಹತ್ವ ನೀಡಬೇಕಾಗುತ್ತದೆ. ಅನೇಕ ಬಾರಿ ನಾವು ಮಾಡುವ ನಿರ್ಲಕ್ಷ್ಯಗಳು ಲೈಂಗಿಕ ರೋಗಕ್ಕೆ ಕಾರಣವಾಗುತ್ತದೆ. ಸುರಕ್ಷಿತ ಸಂಭೋಗಕ್ಕೆ ಪ್ರತಿಯೊಬ್ಬರೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ಸುರಕ್ಷಿತ ಸಂಭೋಗಕ್ಕೆ ಕಾಂಡೋಮ್ ಬಹಳ ಮುಖ್ಯ. ಆದ್ರೆ ಕಾಂಡೋಮ್ ಬಗ್ಗೆ ಜ್ಞಾನವಿರಬೇಕು. ಒಂದೇ ಕಾಂಡೋಮ್ ಪದೇ ಪದೇ ಬಳಕೆ ಸಾಧ್ಯವಿಲ್ಲ. ದಿನಾಂಕ ಮುಗಿದ ಕಾಂಡೋಮ್ ಬಳಕೆ ಬೇಡ. ಹೊಸ ಕಾಂಡೋಮ್ ಬಳಕೆ ಮಾಡಬೇಕು.

ಮಾದಕ ವಸ್ತುಗಳನ್ನು ಸೇವಿಸಿದಾಗ, ಮದ್ಯ ಸೇವನೆ ಮಾಡಿದಾಗ ಸಂಭೋಗಕ್ಕೆ ಮುಂದಾಗಬೇಡಿ. ಮದ್ಯದ ನಶೆಯಲ್ಲಿ ಸುರಕ್ಷತೆ ಮರೆಯುತ್ತೀರಿ. ಒಮ್ಮೆ ಮಾಡಿದ ತಪ್ಪು ಜೀವನಪೂರ್ತಿ ನರಳುವಂತೆ ಮಾಡುವ ಸಾಧ್ಯತೆಗಳಿರುತ್ತವೆ.

ಸಂಭೋಗದಲ್ಲಿ ಪ್ರಯೋಗಗಳು ಆಗಬೇಕು. ಆದ್ರೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಆತುರದಲ್ಲಿ ತಪ್ಪುಗಳನ್ನು ಮಾಡಬೇಡಿ. ಇದು ಅಪಾಯಕ್ಕೆ ಆಹ್ವಾನ ನೀಡಬಹುದು.

ಯಾವುದಾದ್ರೂ ಲೈಂಗಿಕ ಸಮಸ್ಯೆ ನಿಮಗೆ ಶುರುವಾಗಿದ್ದರೆ ನಾಚಿಕೊಳ್ಳುವ ಅಗತ್ಯವಿಲ್ಲ. ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ನಿರ್ಲಕ್ಷ್ಯ ಆಪತ್ತಿಗೆ ಆಹ್ವಾನ ನೀಡಬಹುದು.

ನೀವು 26 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಎಚ್‌ಪಿವಿ ಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ವ್ಯಾಕ್ಸಿನೇಷನ್ ಉತ್ತಮವಾಗಿದೆ.

ಸಂಭೋಗದ ನಂತ್ರ ಶೌಚಾಲಯಕ್ಕೆ ಅವಶ್ಯವಾಗಿ ಹೋಗಿ. ಖಾಸಗಿ ಅಂಗವನ್ನು ಸಂಭೋಗದ ನಂತ್ರ ಸ್ವಚ್ಛಗೊಳಿಸಿಕೊಂಡರೆ ಲೈಂಗಿಕ ಸಮಸ್ಯೆಗಳು ಕಾಡುವುದಿಲ್ಲ. ಸೋಂಕು ಹರಡುವ ಅಪಾಯ ಕಡಿಮೆಯಿರುತ್ತದೆ.

ಸಚಿವ ಸ್ಥಾನ ಲಭಿಸುವ ಕುರಿತು ಮಹತ್ವದ ಹೇಳಿಕೆ ನೀಡಿದ ಉಮೇಶ್‌ ಕತ್ತಿ

Posted: 24 Aug 2019 08:01 AM PDT

ಮುಂದಿನ ವಾರದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಆಗ ಬಾಲಚಂದ್ರ ಜಾರಕಿಹೊಳಿ, ನನಗೆ ಸಚಿವ ಸ್ಥಾನ ಸಿಗಲಿದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

ಸ್ವಲ್ಪ ಕಾಯಿರಿ ಎಂದು ವರಿಷ್ಠರು ಹೇಳಿದ್ದು, ಕಾಯುತ್ತೇವೆ. ನಮಗೆ ಯಾವುದೇ ಅಸಮಾಧಾನವಿಲ್ಲ. ಎಂಟೂವರೆ ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಚಿವನಾಗಲೇಬೇಕೆಂದು ನನಗೆ ಯಾವುದೇ ಹಂಬಲವಿಲ್ಲ. ಸಚಿವ ಸ್ಥಾನ ನೀಡಿದರೆ ಜವಾಬ್ದಾರಿಯಿಂದ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಸಚಿವ ಸ್ಥಾನ ಸಿಗದಿದ್ದರೆ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಮಂತ್ರಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ನಮಗೆ ತೋಟಗಳಿವೆ. ಅದನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಸಚಿವ ಲಕ್ಷ್ಮಣ ಸವದಿ ಪ್ರತಿದಿನ 3 ಸಲ ಕರೆ ಮಾಡುತ್ತಾರೆ. ನಾನು ದಿನಕ್ಕೆ 4 ಬಾರಿ ಕರೆ ಮಾಡುತ್ತೇನೆ. ಇಂದು ಅವರನ್ನು ಭೇಟಿಯಾಗಿಲ್ಲ. ನಮಗೆ ಯಾರೊಂದಿಗೂ ದ್ವೇಷ ಇಲ್ಲ ಎಂದು ತಿಳಿಸಿದ್ದಾರೆ.

ಮೈತ್ರಿ ಸರ್ಕಾರ ಸಮಾಧಿ ಮಾಡಿದ ಸಿದ್ಧರಾಮಯ್ಯ, ಕುಮಾರಸ್ವಾಮಿ

Posted: 24 Aug 2019 07:29 AM PDT

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಗಿದು ಹೋದ ಅಧ್ಯಾಯವಾಗಿದೆ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಹೇಳಿದ್ದಾರೆ.

ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರು ಸೇರಿ ಮೈತ್ರಿ ಸರ್ಕಾರ ಕೊಂದು ಸಮಾಧಿ ಮಾಡಿದ್ದಾರೆ. ಇದೀಗ ನೀನು ಕೊಂದೆ ನೀನು ಕೊಂದೆ ಎಂದು ಆರೋಪ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಮೈತ್ರಿ ವಿಚಾರದಲ್ಲಿ ದೇವೇಗೌಡರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಮಾಜಿ ಪ್ರಧಾನಿಯಾಗಿದ್ದು ಅವರ ಬಗ್ಗೆ ಅಪಾರ ಗೌರವ ಇದೆ. ಇದರಲ್ಲಿ ದೇವೇಗೌಡರ ಹೆಸರು ತರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ, ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಸಮಾಧಿ ಮಾಡಿದ್ದಾರೆ. ಇಬ್ಬರು ಸೇರಿ ಮೈತ್ರಿ ಸರ್ಕಾರವನ್ನು ಕೊಂದು ಸಮಾಧಿ ಮಾಡಿ ಈಗ ಆರೋಪ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಇಷ್ಟವಿಲ್ಲದಿದ್ದರೂ ‘ಮುಖ್ಯಮಂತ್ರಿ’ಯನ್ನಾಗಿ ಮಾಡಿ ಯಡಿಯೂರಪ್ಪರನ್ನು ಆಟವಾಡಿಸುತ್ತಿದೆಯಾ ಬಿಜೆಪಿ ಹೈಕಮಾಂಡ್…?

Posted: 24 Aug 2019 07:13 AM PDT

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಅತ್ಯಧಿಕ ಸ್ಥಾನ ಗಳಿಸಿದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡ ಕಾರಣ ಬಿಜೆಪಿ ಅಧಿಕಾರದಿಂದ ವಂಚಿತವಾಗಬೇಕಾಯಿತು. ಈ ಕಾರಣಕ್ಕೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸಿದರೂ ಬೆಂಬಲವಿಲ್ಲದ ಕಾರಣ ಬಹುಮತ ಸಾಬೀತಿಗೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆದರೆ 17 ಮಂದಿ ಶಾಸಕರು ರಾಜೀನಾಮೆ ನೀಡಿದ ಕಾರಣಕ್ಕೆ ಮೈತ್ರಿ ಸರ್ಕಾರ ಪತನಗೊಂಡಿದ್ದು, ಹೀಗಾಗಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಯಡಿಯೂರಪ್ಪನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದು, ಆದರೆ ಅವರ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡಲು ಬಿಜೆಪಿ ಹೈಕಮಾಂಡ್ ಬರೋಬ್ಬರಿ 25 ದಿನಗಳ ಕಾಲ ತೆಗೆದುಕೊಂಡಿತ್ತು.

ಯಡಿಯೂರಪ್ಪನವರ ಭೇಟಿಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೂರ್ನಾಲ್ಕು ದಿನಗಳ ಕಾಲ ಕಾಯಿಸಿದ್ದರು. ಇದೀಗ ಯಡಿಯೂರಪ್ಪನವರ ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ ಯಾರಿಗೆ ಯಾವ ಖಾತೆ ನೀಡಬೇಕೆಂಬ ತೀರ್ಮಾನವನ್ನು ಪಕ್ಷದ ವರಿಷ್ಠರೇ ಕೈಗೊಳ್ಳಬೇಕಾಗಿದೆ ಎಂದು ಹೇಳಲಾಗಿದೆ. ಇದು ಯಡಿಯೂರಪ್ಪನವರಿಗೆ ಇರಿಸುಮುರಿಸು ತಂದಿದ್ದು, ಆದರೆ ಪಕ್ಷದ ನಾಯಕರ ನಿರ್ಧಾರದ ಮುಂದೆ ಯಾವುದೇ ಪ್ರತಿಕ್ರಿಯೆ ನೀಡದೆ ಅಸಹಾಯಕರಾಗಿದ್ದಾರೆನ್ನಲಾಗಿದೆ.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರು ಪ್ರಭಾವಿ ನಾಯಕರಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಪ್ರಭಾವದ ಜೊತೆಗೆ ಯಡಿಯೂರಪ್ಪನವರ ವರ್ಚಸ್ಸೂ ಕೆಲಸ ಮಾಡಿದ ಕಾರಣ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿದೆ. ಆದರೆ ಇದನ್ನು ಮರೆತಂತಿರುವ ಬಿಜೆಪಿ ರಾಷ್ಟ್ರ ನಾಯಕರು, ವಿಧಾನಸಭೆಗೆ ಚುನಾವಣೆ ನಡೆದರೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಗಳಿಸಲಿದೆ ಎಂಬ ಲೆಕ್ಕಾಚಾರದಲ್ಲಿ ವಿಧಾನಸಭೆ ವಿಸರ್ಜನೆಗೆ ಮುಂದಾಗಿದ್ದರೂ ಯಡಿಯೂರಪ್ಪನವರ ಕಾರಣಕ್ಕೆ ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಿದ್ದರೆಂದು ಹೇಳಲಾಗುತ್ತಿದೆ.

ವಿಧಾನಸಭೆ ಚುನಾವಣೆಗೆ ಹೋಗುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿ ಕೇಂದ್ರ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಖಾತೆ ಹಂಚಿಕೆ ಕುರಿತು ಯಾವುದೇ ತೀರ್ಮಾನ ಕೈಗೊಳ್ಳಲು ಅನುಮತಿ ನೀಡದೆ ಕಾಲಹರಣ ಮಾಡುತ್ತಿದ್ದು, ಈ ಕಾರಣಕ್ಕೆ ಅತೃಪ್ತಿ ಭುಗಿಲೆದ್ದಿದ್ದು ಸರ್ಕಾರ ಪತನಗೊಂಡರೆ ಒಳ್ಳೆಯದೇ ಎಂಬ ತೀರ್ಮಾನಕ್ಕೆ ಬಂದಿದ್ದಾರೆಂದು ಹೇಳಲಾಗುತ್ತಿದೆ. ಒಂದೊಮ್ಮೆ ಸರ್ಕಾರ ಪತನಗೊಂಡರೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಜೊತೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ನಡೆಸುವ ಲೆಕ್ಕಾಚಾರದಲ್ಲಿ ಬಿಜೆಪಿ ಕೇಂದ್ರ ನಾಯಕರಿದ್ದು, ಹೀಗಾಗಿಯೇ ಆಡಳಿತ ನಡೆಸಲು ಯಡಿಯೂರಪ್ಪನವರಿಗೆ ಪದೇ ಪದೇ ಅಡ್ಡಿ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಬಿಗ್ ನ್ಯೂಸ್: ಮುಖ್ಯಮಂತ್ರಿ ಬಿ.ಎಸ್.ವೈ.ಗೆ ಮೂಗುದಾರ ಹಾಕಲು 3 ಡಿಸಿಎಂ ಹುದ್ದೆ ಸೃಷ್ಟಿ

Posted: 24 Aug 2019 07:06 AM PDT

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಸರ್ಕಾರ ನಡೆಸಲು ಮೂವರು ಡಿಸಿಎಂಗಳನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನಲಾಗಿದೆ.

4ನೇ ಬಾರಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಕರ್ನಾಟಕ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದಾರೆ. ತಮ್ಮ ನಾಯಕತ್ವಕ್ಕೆ ಯಾವುದೇ ಕಡಿವಾಣ ಬೀಳಬಾರದೆಂದು ಅವರು ಬಯಸಿದ್ದಾರೆ. ಆದರೆ, ಸರ್ಕಾರ ನಡೆಸಲು ಬರೋಬ್ಬರಿ ಮೂವರು ಡಿಸಿಎಂಗಳನ್ನು ನೇಮಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ.

ಆದರೆ, 3 ಉಪಮುಖ್ಯಮಂತ್ರಿಗಳಿಂದ ಬಿಜೆಪಿ ಬಲಗೊಳ್ಳುತ್ತದೆಯೇ ಎಂಬುದು ಪ್ರಶ್ನಾರ್ಹವಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೂಚನೆ ಮೇರೆಗೆ ಮೂವರು ಉಪಮುಖ್ಯಮಂತ್ರಿಗಳನ್ನು ರಾಜ್ಯದಲ್ಲಿ ನೇಮಿಸಲಾಗುವುದು ಎಂದು ಹೇಳಲಾಗಿದೆ.

ಬಿಜೆಪಿ ಭವಿಷ್ಯದ ದೃಷ್ಟಿಯಿಂದ ಸಂತೋಷ್ ಅವರ ಸಲಹೆ ಮೇರೆಗೆ ಈ ನೇಮಕ ಮಾಡಲಾಗುತ್ತಿದೆ. ಯಡಿಯೂರಪ್ಪನವರಿಗೆ 76 ವರ್ಷದ ಗಡಿ ದಾಟಿದೆ. ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಆಡಳಿತಾತ್ಮಕ ಹುದ್ದೆ ನೀಡುತ್ತಿಲ್ಲ. ಬಿ.ಎಸ್.ವೈ.ಗೆ ಮಾತ್ರ 75 ವರ್ಷದ ನಿಯಮದಿಂದ ವಿನಾಯಿತಿ ನೀಡಲಾಗಿದೆ.

ಪಕ್ಷ ಸಂಘಟನೆ ದೃಷ್ಟಿಯಿಂದ ಮುಂದೆ ನಾಯಕತ್ವ ಬೆಳೆಸಲು ಅನುಕೂಲವಾಗಬೇಕು. ಇದಕ್ಕಾಗಿ ಹೊಸ ನಾಯಕತ್ವವನ್ನು ಹಿಂದೆಂದಿಗಿಂತ ಈಗ ಹುಟ್ಟುಹಾಕುವುದು ಹೆಚ್ಚು ಅನಿವಾರ್ಯವಾಗಿದೆ. ಆದರೂ ಇದರ ಹಿಂದೆ ಬೇರೆಯದೇ ಆದ ಯೋಚನೆ ಇದೆ ಎನ್ನಲಾಗಿದ್ದು, ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕಲು ಪ್ರತ್ಯೇಕ ಪವರ್ ಸೆಂಟರ್ ಸೃಷ್ಟಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕರಿಗೆ ಸಿರಿಗೆರೆ ಶ್ರೀಗಳು ಹೇಳಿದ್ದೇನು ಗೊತ್ತಾ…?

Posted: 24 Aug 2019 06:58 AM PDT

ಮಂತ್ರಿ ಮಾಡಲಿಲ್ಲ ಎಂದು ಅತೃಪ್ತರಾಗುವುದು ಸರಿಯಲ್ಲ, ತಮ್ಮ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಮೊದಲ ಆದ್ಯತೆ ನೀಡಬೇಕು ಎಂದು ಬಿಜೆಪಿ ಶಾಸಕರಿಗೆ ಸಿರಿಗೆರೆ ತರಳಬಾಳು ಶ್ರೀಗಳು ಸಲಹೆ ನೀಡಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯ ತರಳಬಾಳು ಮಠದಲ್ಲಿ ಮಾತನಾಡಿದ ಸ್ವಾಮೀಜಿ, ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಅವರಿಗೆ ಸಲಹೆ ನೀಡಿದ್ದಾರೆ.

ಅತೃಪ್ತರಾಗುವುದು ಪ್ರಜಾಪ್ರಭುತ್ವದ ಪಾಲನೆ ಅಲ್ಲ. ಶಾಸಕರಾಗಿ ಸಮಾರಂಭಗಳಿಗೆ ಗೈರಾಗುವುದು ಸರಿಯಲ್ಲ ಎಂದು ಬಿಜೆಪಿ ಶಾಸಕರಿಗೆ ತರಳಬಾಳು ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.

ನೆರೆ ಹಾನಿ ಅಧ್ಯಯನ ತಂಡಕ್ಕೆ ನಷ್ಟದ ಮಾಹಿತಿ, ನಾಳೆಯಿಂದ ಪ್ರವಾಸ

Posted: 24 Aug 2019 06:56 AM PDT

ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಅಪಾರ ನಷ್ಟವಾಗಿದ್ದು, ಕೇಂದ್ರದ ಅಧ್ಯಯನ ತಂಡ ಪರಿಶೀಲನೆಗೆ ಆಗಮಿಸಿದೆ.

ಈ ತಂಡಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಅಧಿಕಾರಿಗಳು ರಾಜ್ಯದಲ್ಲಿ ಮಳೆ, ಪ್ರವಾಹದಿಂದ ಅಪಾರ ಹಾನಿಯಾದ ಬಗ್ಗೆ ವಿವರಣೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಾಗಿದ್ದು, ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಕೇಂದ್ರ ತಂಡಕ್ಕೆ ಸಿಎಂ ಮತ್ತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇಂದ್ರ ಅಧ್ಯಯನ ತಂಡದ ಜೊತೆಗಿನ ಸಭೆಯ ಬಳಿಕ ಬಿ.ಎಸ್.ವೈ. ಮಾತನಾಡಿ, ಬೆಳಗಾವಿ, ಬಾಗಲಕೋಟೆ, ಗದಗ, ಕೊಡಗು ಜಿಲ್ಲೆಯಲ್ಲಿ ಕೇಂದ್ರ ಅಧ್ಯಯನ ತಂಡ ಪ್ರವಾಸ ನಡೆಸಲಿದೆ ಎಂದು ತಿಳಿಸಿದ್ದಾರೆ.

ಆಗಸ್ಟ್ 28 ರ ವರೆಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಅಧ್ಯಯನ ತಂಡ ಪ್ರವಾಸ ಕೈಗೊಂಡಿದ್ದು ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಅಧ್ಯಯನ ತಂಡ ನೀಡುವ ವರದಿ ಆಧರಿಸಿ ಕೇಂದ್ರದಿಂದ ಪರಿಹಾರ ನೀಡಲಾಗುವುದು. ಅಧಿಕಾರಿಗಳಿಗೆ ಹಾನಿಯ ಬಗ್ಗೆ ಮನವರಿಕೆ ಮಾಡುವ ಎಲ್ಲಾ ಪ್ರಯತ್ನ ಆಗಿದೆ ಎಂದು ಸಿಎಂ ತಿಳಿಸಿದ್ದಾರೆ.

ತ್ರಿವಳಿ ತಲಾಖ್: ರಾಜ್ಯದ ಮೊದಲ ಕೇಸ್ ದಾಖಲಾಗಿದ್ದೆಲ್ಲಿ ಗೊತ್ತಾ…?

Posted: 24 Aug 2019 06:29 AM PDT

ಬೆಳಗಾವಿ: ಮುಸ್ಲಿಂ ಮಹಿಳೆ ವಿವಾಹ ಹಕ್ಕು ರಕ್ಷಣಾ ಕಾಯ್ದೆ(ತ್ರಿವಳಿ ತಲಾಖ್ ಕಾಯ್ದೆ) ಜಾರಿಯಾದ ಬಳಿಕ ರಾಜ್ಯದಲ್ಲಿ ಮೊದಲ ಎಫ್ಐಆರ್ ದಾಖಲಾಗಿದೆ.

ಬೆಳಗಾವಿ ಜಿಲ್ಲೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ತ್ರಿವಳಿ ತಲಾಖ್ ಪ್ರಕರಣ ದಾಖಲಾಗಿದೆ. ಸವದತ್ತಿ ತಾಲೂಕಿನ ಎಕ್ಕುಂಡಿ ಗ್ರಾಮದ ಬೀಬಿ ಆಯೇಶಾ ತನ್ನ ಪತಿ  ಗೋವಾ ಮೂಲದ ಇಸ್ಮಾಯಿಲ್ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ.

ಅಂಚೆ ಮೂಲಕ ಇಸ್ಮಾಯಿಲ್ ಖಾನ್ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದ ಎನ್ನಲಾಗಿದ್ದು, ಬೀಬಿ ಆಯಿಷಾ ದೂರು ದಾಖಲಿಸಿದ್ದು, ಈಗ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದು ತ್ರಿವಳಿ ತಲಾಖ್ ಕಾಯ್ದೆ ಜಾರಿಯಾದ ಬಳಿಕ ರಾಜ್ಯದಲ್ಲಿ ದಾಖಲಾದ ಮೊದಲ ಎಫ್ಐಆರ್ ಎಂದು ಹೇಳಲಾಗಿದೆ.

ನಿಮ್ಮ ಮಕ್ಕಳೂ ‘ಮೊಬೈಲ್’ ಬಳಸ್ತಿದ್ದಾರಾ…? ಹಾಗಿದ್ರೆ ಈಗಲೇ ಎಚ್ಚೆತ್ತುಕೊಳ್ಳಿ

Posted: 24 Aug 2019 06:15 AM PDT

ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಮುಂದಿದ್ದಾರೆ. ದೊಡ್ಡವರಿಗಿಂತ ಚಿಕ್ಕವರೆ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ನಂತಹ ವಸ್ತುಗಳನ್ನು ಹೆಚ್ಚಾಗಿ ಬಳಸ್ತಿದ್ದಾರೆ. ಗಂಟೆಗಟ್ಟಲೆ ಲ್ಯಾಪ್ ಟಾಪ್ ಮುಂದೆ ಕುಳಿತು ಆಟದ ಜೊತೆಗೆ ಪಾಠವನ್ನು ಕೂಡ ಕಲಿಯುತ್ತಿದ್ದಾರೆ. ಈ ಟೆಕ್ನಾಲಜಿಯಿಂದ ಎಷ್ಟು ಉಪಯೋಗವಿದೆಯೋ ಅದ್ರ ದುಪ್ಪಟ್ಟು ನಷ್ಟವಿದೆ. ಮಕ್ಕಳ ಆರೋಗ್ಯದ ಮೇಲೆ ಈ ಟೆಕ್ನಾಲಜಿ ಸಾಕಷ್ಟು ಪರಿಣಾಮ ಬೀರುತ್ತಿದೆ.

ಅಧ್ಯಯನದ ಪ್ರಕಾರ ವಾರದಲ್ಲಿ 32 ಗಂಟೆಗಿಂತ ಹೆಚ್ಚು ಸಮಯ ಸ್ಕ್ರೀನ್ ನೋಡುವ ಮಕ್ಕಳು ಅನಾರೋಗ್ಯಕ್ಕೊಳಗಾಗ್ತಾರೆ. ಜೊತೆಗೆ ಕುಟುಂಬದ ಸಂಪ್ರದಾಯಗಳಿಂದ ದೂರ ಉಳಿಯುತ್ತಾರೆ.

ಲ್ಯಾಪ್ ಟಾಪ್ ಅಥವಾ ಟಿವಿಯನ್ನು ಗಂಟೆಗಟ್ಟಲೆ ನೋಡುವ ಮಕ್ಕಳ ಕಣ್ಣುಗಳು ಕಾಂತಿಯನ್ನು ಕಳೆದುಕೊಳ್ಳುತ್ತವೆ. ದೃಷ್ಠಿ ದೋಷದ ಸಮಸ್ಯೆಯಿಂದ ಬಳಲುತ್ತಾರೆ.

ಇನ್ನೊಂದು ಅಧ್ಯಯನದ ಪ್ರಕಾರ, ಮೂರರಿಂದ ನಾಲ್ಕನೇ ತರಗತಿ ಓದುವ ಮಕ್ಕಳಿಗಿಂತ ಚಿಕ್ಕ ವಯಸ್ಸಿನ ಮಕ್ಕಳು ಒಂದು ಗಂಟೆ ಲ್ಯಾಪ್ ಟಾಪ್, ಮೊಬೈಲ್, ಟಿವಿ ನೋಡುವುದರಿಂದ ಅವರ ಏಕಾಗ್ರತೆ ಮೇಲೆ ಪರಿಣಾಮವುಂಟಾಗುತ್ತದೆ.

ಸ್ಮಾರ್ಟ್ ಫೋನ್ ಬಳಕೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಿನ ದಿನಕ್ಕೂ ಅವರ ಆರೋಗ್ಯ ಕ್ಷೀಣಿಸುತ್ತದೆ.

ನಿರಂತರವಾಗಿ ಸ್ಕ್ರೀನ್ ನೋಡುವುದರಿಂದ ಮಕ್ಕಳ ಮನಸ್ಸು ಹಾಗೂ ಶರೀರದ ಮೇಲೆ ಋಣಾತ್ಮಕ ಪರಿಣಾಮವುಂಟಾಗುತ್ತದೆ.

ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಮಕ್ಕಳು ಕುಳಿತುಕೊಳ್ಳುವುದರಿಂದ ದೇಹಕ್ಕೆ ವ್ಯಾಯಾಮ ಸಿಗುವುದಿಲ್ಲ. ಇದರಿಂದಾಗಿ ಬೊಜ್ಜು ಬರುತ್ತದೆ.

ಅತಿರಥರ ಅಕಾಲಿಕ ನಿಧನ: 10 ತಿಂಗಳ ಅಂತರದಲ್ಲಿ ಬಿಜೆಪಿಗೆ 4 ಅತಿದೊಡ್ಡ ಆಘಾತ

Posted: 24 Aug 2019 06:02 AM PDT

ಕಳೆದ 10 ತಿಂಗಳ ಅವಧಿಯಲ್ಲಿ ಬಿಜೆಪಿಗೆ 4 ಅತಿದೊಡ್ಡ ಆಘಾತವಾಗಿದೆ. ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಅವಧಿಯಲ್ಲಿ ರಾಜಕೀಯ ಚತುರರಾಗಿದ್ದ ಅತಿರಥ ಮಹಾರಥ ನಾಯಕರನ್ನು ಕಳೆದ 10 ತಿಂಗಳ ಅವಧಿಯಲ್ಲಿ ಬಿಜೆಪಿ ಕಳೆದುಕೊಂಡಿದೆ.

2 ನೇ ತಲೆಮಾರಿನ 4 ಅತಿರಥ ನಾಯಕರಾದ ಅನಂತ್ ಕುಮಾರ್, ಮನೋಹರ್ ಪರಿಕ್ಕರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರ ನಿಧನದಿಂದಾಗಿ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ, ಸಂಸದೀಯ ವ್ಯವಹಾರ ಖಾತೆ, ವಿಮಾನಯಾನ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅನಂತಕುಮಾರ್ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಉಸ್ತುವಾರಿಯಾಗಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರನ್ನು ಮೋದಿ ಪ್ರಧಾನಿಯಾಗುತ್ತಲೇ ಕೇಂದ್ರ ಸೇವೆಗೆ ಕರೆಸಿಕೊಂಡಿದ್ದರು. ಮಹತ್ವದ ರಕ್ಷಣಾ ಖಾತೆಯ ಸಚಿವರಾಗಿ ಮನೋಹರ್ ಪರಿಕ್ಕರ್ ಕಾರ್ಯನಿರ್ವಹಿಸಿದ್ದರು. ಅನಾರೋಗ್ಯದ ನಡುವೆಯೂ ಮತ್ತೆ ಗೋವಾ ಮುಖ್ಯಮಂತ್ರಿಯಾಗಿದ್ದರು.

ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ್ದ ಸುಷ್ಮಾ ಸ್ವರಾಜ್ ಆಡಳಿತಾತ್ಮಕವಾಗಿ ಮಾತ್ರವಲ್ಲದೇ, ಜನ ಮೆಚ್ಚಿನ ನಾಯಕಿಯಾಗಿದ್ದರು. ಹಣಕಾಸು, ರಕ್ಷಣೆ ಸೇರಿದಂತೆ ವಿವಿಧ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ ಅರುಣ್ ಜೇಟ್ಲಿ ಜೆ.ಎಸ್.ಟಿ. ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅನಾರೋಗ್ಯದ ಕಾರಣ ಈ ನಾಲ್ವರು ನಾಯಕರು ಅಕಾಲಿಕವಾಗಿ ನಿಧನರಾಗಿದ್ದಾರೆ.

ಅಟಲ್ ಮತ್ತು ಅಡ್ವಾಣಿ ಯುಗದ ರಾಜಕೀಯ ಚತುರರಾಗಿದ್ದ ಈ ನಾಲ್ವರು ಬಿಜೆಪಿ ಸಂಘಟನೆಯಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಿದ್ದಾರೆ. ಕಳೆದ ಅವಧಿಯಲ್ಲಿ ಮೋದಿ ಮೊದಲ ಸಂಪುಟದಲ್ಲಿ ಸಚಿವರಾಗಿ ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ಕಳೆದ 10 ತಿಂಗಳ ಅವಧಿಯಲ್ಲಿ ಈ ನಾಲ್ವರು ಅತಿರಥ ನಾಯಕರನ್ನು ಬಿಜೆಪಿ ಕಳೆದುಕೊಂಡಿದೆ. ಈ ಅವಧಿಯಲ್ಲಿ 4 ಅತಿ ದೊಡ್ಡ ಆಘಾತ ಬಿಜೆಪಿಗೆ ಎದುರಾಗಿದೆ. ಎರಡನೇ ತಲೆಮಾರಿನ 4 ಅತಿರಥ ನಾಯಕರ ಅಕಾಲಿಕ ನಿಧನದಿಂದ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಬಹುದು.

ಬಿಗ್ ನ್ಯೂಸ್: ಕೆಪಿಸಿಸಿ ಅಧ್ಯಕ್ಷರಾಗಲು ಡಿಕೆಶಿ ಲಾಬಿ – ಕೃಷ್ಣ ಭೈರೇಗೌಡ ಪರ ಸಿದ್ಧರಾಮಯ್ಯ ಬ್ಯಾಟಿಂಗ್…?

Posted: 24 Aug 2019 05:29 AM PDT

ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಲಾಬಿ ನಡೆಸಿದ್ದಾರೆ. 3 ದಿನದಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿ.ಕೆ. ಶಿವಕುಮಾರ್ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಮಾಡಿ ಸಮಾಲೋಚನೆ ನಡೆಸಿದ್ದಾರೆ.

ದೆಹಲಿಯ 10 ಜನಪಥ್ ನಲ್ಲಿರುವ ಸೋನಿಯಾ ಗಾಂಧಿಯವರ ನಿವಾಸದಲ್ಲಿ ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ

ಲೋಕಸಭೆ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷರನ್ನು ಹೊರತುಪಡಿಸಿ ಪದಾಧಿಕಾರಿಗಳ ಸಮಿತಿ ವಿಸರ್ಜಿಸಲಾಗಿದೆ. ಇನ್ನು ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ವಿಧಾನ ಸಭೆ ವಿರೋಧ ಪಕ್ಷದ ನಾಯಕರಾಗಲು ಕಾಂಗ್ರೆಸ್ ನಲ್ಲಿ ಪೈಪೋಟಿ ಶುರುವಾಗಿದೆ. ಸಿದ್ಧರಾಮಯ್ಯ, ಪರಮೇಶ್ವರ್, ಡಿ.ಕೆ. ಶಿವಕುಮಾರ್ ವಿರೋಧ ಪಕ್ಷದ ನಾಯಕರಾಗಲು ಪೈಪೋಟಿಯಲ್ಲಿದ್ದಾರೆ. ಆದರೆ, ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾಗಲು ಉತ್ಸುಕರಾಗಿದ್ದು, ತಮ್ಮನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಿದ್ಧರಾಮಯ್ಯ ಬಣದಿಂದ ಕೃಷ್ಣ ಭೈರೇಗೌಡರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸಲು ಪ್ರಯತ್ನ ನಡೆಸಲಾಗಿದೆ. ಪರಮೇಶ್ವರ್ ವಿಧಾನಸಭೆ ವಿರೋಧಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಹುಲಿವೇಷದವರೊಂದಿಗೆ ರಕ್ಷಿತ್‌ ಶೆಟ್ಟಿ ಭರ್ಜರಿ ಸ್ಟೆಪ್

Posted: 24 Aug 2019 05:19 AM PDT

ನಟ ರಕ್ಷಿತ್ ಶೆಟ್ಟಿ ಯಾವ ವರ್ಷವೂ ಶ್ರೀಕೃಷ್ಣ ಜನ್ಮಾಷ್ಠಮಿಯ ಆಚರಣೆಯಲ್ಲಿ ಪಾಲ್ಗೊಳ್ಳುವುದನ್ನು ಮಿಸ್ ಮಾಡಿಕೊಳ್ಳುವುದಿಲ್ಲ.

ಎಲ್ಲೇ ಇರಲಿ ಜನ್ಮಾಷ್ಠಮಿ ದಿನದಂದು ಶ್ರೀಕೃಷ್ಣನ ಸನ್ನಿಧಿ ಉಡುಪಿಯಲ್ಲಿ ಅವರ ಹಾಜರಿ ಕಡ್ಡಾಯವಾಗಿರುತ್ತದೆ. ಅಲ್ಲಿ ಹುಲಿವೇಷದವರೊಂದಿಗೆ ಸ್ಟೆಪ್ ಹಾಕುವುದೆಂದರೆ ರಕ್ಷಿತ್ ಶೆಟ್ಟಿಯವರಿಗೆ ಎಲ್ಲಿಲ್ಲದ ಮಹದಾನಂದ. ತಾನೊಬ್ಬ ಸೆಲೆಬ್ರಿಟಿ ಎಂಬ ಹಮ್ಮುಬಿಮ್ಮು ಇಲ್ಲದೇ, ಖ್ಯಾತ ನಟನೆಂಬುದನ್ನು ಲೆಕ್ಕಿಸದೇ ಹುಲಿವೇಷದ ಕಲಾವಿದನ ರೀತಿಯಲ್ಲಿ ಸಖತ್ ಸ್ಟೆಪ್ ಹಾಕುತ್ತಾ ಮೈಮರೆಯುತ್ತಾರೆ.

ಜನ್ಮಾಷ್ಠಮಿ ಅಂಗವಾಗಿ ಹುಲಿವೇಷದವರೊಂದಿಗೆ ಸ್ಟೆಪ್ ಹಾಕಿದ್ದ ವಿಡಿಯೋವನ್ನು ರಕ್ಷಿತ್‌ ಶೆಟ್ಟಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋಗೆ ಸಾವಿರಾರು ಅಭಿಮಾನಿಗಳು ಲೈಕ್ ಮಾಡಿದ್ದಾರೆ ಮತ್ತು ಆ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಈ ಬಗ್ಗೆ ರಕ್ಷಿತ್ ಶೆಟ್ಟಿ, ನಮ್ಮ ಜೀವನದಲ್ಲಿ ಕೆಲವು ವಿಚಾರಗಳನ್ನು ನಾವು ಎಂದಿಗೂ ಪ್ಲಾನ್ ಮಾಡಿರುವುದಿಲ್ಲ. ಇಂತಹ ಪ್ಲಾನ್ ಮಾಡದ ವಿಚಾರಗಳಲ್ಲಿ ಕೃಷ್ಣ ಜನ್ಮಾಷ್ಠಮಿಯೂ ಒಂದು. ಯಾವುದೇ ಯೋಜನೆ ರೂಪಿಸಿಕೊಳ್ಳದೇ ನಾನು ಉಡುಪಿಗೆ ಜನ್ಮಾಷ್ಠಮಿಯಂದು ಹೋಗುತ್ತೇನೆ. ಅಲ್ಲಿ ಕಿವಿಗಡಚಿಕ್ಕುವ ಹುಲಿವೇಷಧಾರಿಗಳ ಬಡಿತ ಮತ್ತು ಡಾನ್ಸ್ ನ ಸದ್ದು ನನ್ನ ಕಿವಿಗೆ ಬೀಳುತ್ತಿದ್ದಂತೆಯೇ ಸಮ್ಮೋಹಿತಗೊಳ್ಳುತ್ತೇನೆ. ಇದ್ದಕ್ಕಿದ್ದಂತೆಯೇ ಹುಲಿವೇಷಧಾರಿಗಳ ಜತೆ ಸೇರುತ್ತೇನೆ. ನನಗರಿವಿಲ್ಲದಂತೆಯೇ ಆ ಡಾನ್ಸ್ ಗೆ ಸ್ಟೆಪ್ ಹಾಕುತ್ತಾ ಮೈಮರೆಯುತ್ತೇನೆ ಎಂದು ಬರೆದುಕೊಂಡಿದ್ದಾರೆ. ಹಲವಾರು ವರ್ಷಗಳಿಂದಲೂ ನಾನು ಈ ರೀತಿ ಹುಲಿವೇಷದ ಡ್ಯಾನ್ಸ್ ಗೆ ಸ್ಟೆಪ್ ಹಾಕುತ್ತಲೇ ಬಂದಿದ್ದೇನೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

Krishna Janmasthami

Some things in life aren't really planned, they just find a way to fall into place. Krishna Janmasthami is one of those things in my life. Every year I end up in Udupi for Krishna Janmashtami without even planning for it. Dancing to these beats has always been a bliss since my childhood. I've been doing it since years now and I haven't gotten over it at all. Here's wishing all of you a Happy Krishna Janmasthami.#TigerDance #KrishnaJanmasthami

Posted by Rakshit Shetty on Friday, August 23, 2019

ಮಂಗಳೂರು ಪೊಲೀಸರಿಂದ ಭರ್ಜರಿ ಬೇಟೆ

Posted: 24 Aug 2019 05:18 AM PDT

ಮಹತ್ವದ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡಸಿದ್ದಾರೆ. ಜಮ್ಮು-ಕಾಶ್ಮೀರದ ಶೌಕತ್ ಮೊಹಮ್ಮದ್ ಲೋನೆ, ಪಂಜಾಬ್ ನ ಚಂಡೀಗಡದ ಬಲ್ಜಿಂದರ್ ಸಿಂಗ್ ಬಂಧಿತ ವ್ಯಕ್ತಿಗಳಾಗಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ.ಹೆಚ್.ಓ.) ನಿರ್ದೇಶಕರು ಎಂದು ಕಾರಿನಲ್ಲಿ ಫಲಕ ಹಾಕಿಕೊಂಡಿದ್ದ ಇವರು ಮಂಗಳೂರಿನ ಲಾಡ್ಜ್ ನಲ್ಲಿ ತಂಗಿದ್ದರು. ಮ್ಯಾಟ್ರಿಮೊನಿ ಸೈಟ್ ಮೂಲಕ ಯುವತಿಯರನ್ನು ಸೆಳೆದು ಉಗ್ರ ಚಟುವಟಿಕೆಗೆ ಕಳಿಸುತ್ತಿದ್ದರು ಎನ್ನಲಾಗಿದೆ.

ತನಿಖೆ ಸಂದರ್ಭದಲ್ಲಿ ಇವರು ದೇಶದ ಹಲವೆಡೆ ಓಡಾಡಿದ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆಗಸ್ಟ್ 17 ರಂದು ಇವರನ್ನು ಬಂಧಿಸಲಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದಲೂ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಸಹಸ್ರಾರು ನೆಟ್ಟಿಗರ ಮನಗೆದ್ದ ಬೆಕ್ಕಿನ ಮರಿ ಮೆಲ್ವಿನ್‌

Posted: 24 Aug 2019 04:48 AM PDT

ಇನ್ನೂ ಮಿಯಾಂವ್‌ ಅನ್ನಲೂ ಕಲಿತಿಲ್ಲದ ಬೆಕ್ಕಿನ ಮರಿಯೊಂದು ಬಾತುಕೋಳಿ ಮರಿಯಂತೆ ಕ್ವಾಕ್‌ ಅನ್ನುತ್ತಿದ್ದು, ಇದರ ವಿಡಿಯೋವೊಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಟೆಕ್ಸಾಸ್‌ನ ಪಾಮ್‌ವ್ಯಾಲಿ ಪ್ರಾಣಿ ಕೇಂದ್ರದಲ್ಲಿರುವ ಮೆಲ್ವಿನ್ ಎಂಬ ಈ ಬೆಕ್ಕಿನ ಮರಿ ಬಹಳ ಹ್ಯಾಂಡ್ಸಮ್‌ ಆಗಿದ್ದು, ಆತನನ್ನು ದಂಪತಿಯೊಂದು ದತ್ತು ಪಡೆದಿದೆ. ಮೆಲ್ವಿನ್‌ ಹೊಸ ಮನೆಯಲ್ಲಿ ಆಟವಾಡಲೆಂದು ಆತನಿಗೆ ಮತ್ತಿಬ್ಬರು ಅಣ್ಣಂದಿರು ಇದ್ದಾರಂತೆ.

ವಿಡಿಯೋವನ್ನು ನೋಡಿ ಸಹಸ್ರಾರು ನೆಟಿಝನ್‌ಗಳು ಮೆಚ್ಚಿಕೊಂಡಿದ್ದು, ಬೆಕ್ಕಿನ ಮರಿಯನ್ನು ಕಮೆಂಟ್‌ನಲ್ಲಿ ಮಾತುಗಳಲ್ಲೇ ಮುದ್ದುಗರೆದಿದ್ದಾರೆ.

 

Meet Melvin, a new little kitten who we met today at Palm Valley Animal Center in Edinburg, TX.Listen. To. That. Voice. ❤️[Edit] He's ALREADY been adopted!! 😍 Congratulations lil dude ❤️

Posted by Sarah Thornton on Sunday, August 18, 2019

ಕೆಟ್ಟ ಸ್ವಪ್ನ ಬಿದ್ರೆ ಏನು ಮಾಡಬೇಕು ಗೊತ್ತಾ…?

Posted: 24 Aug 2019 04:37 AM PDT

ರಾತ್ರಿ ಒಂದಲ್ಲ ಒಂದು ಸ್ವಪ್ನ ಬೀಳೋದು ಸಾಮಾನ್ಯ ಸಂಗತಿ. ಇದ್ರಲ್ಲಿ ಕೆಲವೊಂದು ಸ್ವಪ್ನಗಳು ಭಯ ಹುಟ್ಟಿಸುತ್ತವೆ. ಇದು ನಿಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ಕೆಲವರು ಇದ್ರಿಂದ ಭಯಗೊಂಡು ರಾತ್ರಿಪೂರ್ತಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಬೆಳಿಗ್ಗೆ ಎದ್ದ ಮೇಲೂ ಇದೇ ಸ್ವಪ್ನ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಿರುತ್ತದೆ.

ಎಂದೂ ಇಂಥ ಸ್ವಪ್ನ ಕಾಣಬಾರದೆಂದಾದಲ್ಲಿ ನೀವು ಕೆಲವೊಂದು ಉಪಾಯಗಳನ್ನು ಮಾಡಬೇಕು. ಕೆಟ್ಟ ಸ್ವಪ್ನ ಬಿದ್ದ ಮರುದಿನ ದೇವಸ್ಥಾನಕ್ಕೆ ಹೋಗಿ ಅಕ್ಕಿ, ಸಕ್ಕರೆ, ಬಿಳಿ ಹೂ ಹಾಗೂ ಕೊಬ್ಬರಿಯನ್ನು ದಾನ ಮಾಡಿ ಬನ್ನಿ.

ಪ್ರತಿದಿನ ಕೆಟ್ಟ ಸ್ವಪ್ನ ಕಾಣುತ್ತಿದ್ದರೆ ಏಳು ದಿನ ಕ್ರಮವಾಗಿ ಕಪ್ಪು ಬಣ್ಣದ ನಾಯಿಗೆ ಕಾಕಂಬಿ ಹಾಗೂ ರೊಟ್ಟಿಯನ್ನು ನೀಡಿ. ನೆನಪಿರಲಿ ಮಧ್ಯ ಒಂದು ದಿನವೂ ಈ ಪ್ರಕ್ರಿಯೆಯನ್ನು ಬಿಡಬೇಡಿ.

ಕೆಟ್ಟ ಸ್ವಪ್ನದಿಂದ ತಪ್ಪಿಸಿಕೊಳ್ಳಲು ನೀವು ಹನುಮಾನ್ ಚಾಲೀಸ್ ಓದಲು ಶುರುಮಾಡಿ. ಹನುಮಂತನ ಧ್ಯಾನ ಮಾಡುವುದರಿಂದ ಎಲ್ಲ ಕಷ್ಟವೂ ದೂರವಾಗುತ್ತದೆ.

ಇದ್ರ ಜೊತೆಗೆ ಪ್ರತಿ ಶನಿವಾರ ಶನಿ ದೇವಸ್ಥಾನಕ್ಕೆ ಹೋಗಿ ಕಪ್ಪು ಎಳ್ಳನ್ನು ಅರ್ಪಿಸಿ. ಕಪ್ಪು ಹಾಗೂ ಬಿಳಿ ಕಂಬಳಿಯನ್ನು ಬಡವರಿಗೆ ದಾನ ಮಾಡಿ. ಹೀಗೆ ಮಾಡುವುದರಿಂದ ಕೆಟ್ಟ ಸ್ವಪ್ನ ಬೀಳುವುದಿಲ್ಲ.

ಬಿಎಸ್‌ಎನ್‌ಎಲ್ ಗ್ರಾಹಕರಿಗೆ ʼಬಂಪರ್‌ʼ ಕೊಡುಗೆ

Posted: 24 Aug 2019 03:55 AM PDT

ಬಿಎಸ್ಎನ್ಎಲ್ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಅಮೆಜಾನ್ ಪ್ರೈಂ ಸದಸ್ಯತ್ವವನ್ನು ಬಿಎಸ್ಎನ್ಎಲ್ ಘೋಷಣೆ ಮಾಡಿದೆ. ಬಿಎಸ್ಎನ್ಎಲ್ ನ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಕೇವಲ 399 ರೂಪಾಯಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಸಿಗಲಿದೆ.

ಹೊಸ ಗ್ರಾಹಕರಿಗೆ ಹಾಗೂ ಈಗಾಗಲೇ ಬ್ರಾಡ್ ಬ್ಯಾಂಡ್ ಸೇವೆ ಪಡೆದಿರುವ ಗ್ರಾಹಕರಿಗೆ ಬಿಎಸ್ಎನ್ಎಲ್ ಅಮೆಜಾನ್ ಪ್ರೈಂ ಸದಸ್ಯತ್ವ ನೀಡಲಿದೆ.ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಸೇವೆಯ ಆರಂಭಿಕ ಬೆಲೆ 399 ರೂಪಾಯಿ. ಹಾಗಾಗಿ ಎಲ್ಲ ಬ್ರಾಂಡ್ ಬ್ಯಾಂಡ್ ಗ್ರಾಹಕರಿಗೆ ಈ ಸೇವೆ ಸಿಗಲಿದೆ.

ಬ್ರಾಡ್ ಬ್ಯಾಂಡ್ ಬಳಕೆದಾರರು ಅಮೆಜಾನ್ ಪ್ರೈಂ ಮೂಲಕ ಟಿವಿ ಕಾರ್ಯಕ್ರಮ,‌ ಹಾಲಿವುಡ್, ಬಾಲಿವುಡ್ ಸಿನಿಮಾ, ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ಇದು ಒಂದು ವರ್ಷ ಸಿಂಧುತ್ವ ಹೊಂದಿರಲಿದೆ. ಗ್ರಾಹಕರು 499 ಬ್ರಾಡ್ ಬ್ಯಾಂಡ್ ಸೇವೆ ಹೊಂದಿದ್ದರೆ ಅಮೆಜಾನ್ ಪ್ರೈಂ ಸದಸ್ಯತ್ವದ ಜೊತೆ ಶೇಕಡಾ 15ರಷ್ಟು ಕ್ಯಾಶ್‌ ಬ್ಯಾಕ್ ಪಡೆಯಲಿದ್ದಾರೆ. 499ರಿಂದ 999 ರೂಪಾಯಿ ಯೋಜನೆಯಲ್ಲಿ ಶೇಕಡಾ 20‌ ರಷ್ಟು ಕ್ಯಾಶ್‌ ಬ್ಯಾಕ್ ಹಾಗೂ ಅದಕ್ಕಿಂತ ಮೇಲ್ಪಟ್ಟ ಪ್ಲಾನ್ ನಲ್ಲಿ ಶೇಕಡಾ 25ರಷ್ಟು ಕ್ಯಾಶ್‌ ಬ್ಯಾಕ್ ಸಿಗಲಿದೆ.

 

ಪತ್ನಿ ಅನುಷ್ಕಾರನ್ನು ಮನಸಾರೆ ಕೊಂಡಾಡಿದ ಕೊಹ್ಲಿ

Posted: 24 Aug 2019 03:46 AM PDT

ಕ್ರಿಕೆಟ್ ಹೊರತಾಗಿ ಅನುಷ್ಕಾ ಶರ್ಮಾ ನನ್ನ ಜೀವನದಲ್ಲಿ ಒಂದು ಬಹುದೊಡ್ಡ ವರವಾಗಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿಯನ್ನು ಕೊಂಡಾಡಿದ್ದಾರೆ.

ವೆಸ್ಟ್ ಇಂಡೀಸ್ ನ ಕ್ರಿಕೆಟ್ ಮಾಂತ್ರಿಕ ವಿವ್ ರಿಚರ್ಡ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಕೊಹ್ಲಿ ಕ್ರಿಕೆಟ್ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಈ ಸಂದರ್ಶನದ ಸುಮಾರು ನಾಲ್ಕು ನಿಮಿಷದ ವಿಡಿಯೋವನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ನನ್ನ ಪ್ರತಿಯೊಂದು ಹೆಜ್ಜೆಯನ್ನು ಸರಿಯಾದ ಮಾರ್ಗದಲ್ಲಿಡುವಂತೆ ಅನುಷ್ಕಾ ಮಾರ್ಗದರ್ಶನ ಮಾಡುತ್ತಿದ್ದಾರೆ. ನನ್ನ ಜೀವನದಲ್ಲಿ ಆಕೆ ಒಂದು ಬಹುದೊಡ್ಡ ವರವಿದ್ದಂತೆ. ನನ್ನ ಆಶೋತ್ತರಗಳನ್ನು ಆಕೆ ಅರ್ಥ ಮಾಡಿಕೊಳ್ಳುತ್ತಾಳೆ. ಏಕೆಂದರೆ, ಆಕೆ ಸ್ವತಃ ವೃತ್ತಿಪರಳು. ಹೀಗಾಗಿ ಪ್ರತಿಯೊಂದು ಹಂತದಲ್ಲಿಯೂ ನನಗೆ ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾಳೆ ಎಂದು ಕೊಹ್ಲಿ ಶ್ಲಾಘಿಸಿದ್ದಾರೆ.

ನಾವಿಬ್ಬರೂ ಒಟ್ಟಿಗೆ ಇರುವುದರಿಂದ ಕಲಿತ ಜೀವನದ ಪಾಠವೆಂದರೆ, ನಿಮ್ಮ ಜೀವನದಲ್ಲಿ ಏನಾದರೂ ಸರಿಯಾದ ಮತ್ತು ಕಷ್ಟಕರವಾದ ಕೆಲಸವನ್ನು ಮಾಡಬೇಕೆಂದು ನಿರ್ಧರಿಸಿದ್ದರೆ ಅದನ್ನು ಮಾಡಲೇಬೇಕೆಂಬುದನ್ನು ಅರಿತಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.

ಹಾಡು ಕೇಳ್ತಿದ್ದಂತೆ ನಿದ್ದೆಯಿಂದ ಎದ್ದು ಕುಣಿದ ʼಮಗುʼ

Posted: 24 Aug 2019 03:38 AM PDT

ಕೆಲವೊಂದು ಹಾಡಿಗೆ ತನ್ನದೇಯಾದ ಶಕ್ತಿ ಇರುತ್ತದೆ. ಅದೇ ರೀತಿ ಬೇಬಿ ಶಾರ್ಕ್ ಹಾಡು ಕೇಳುತ್ತಿದ್ದಂತೆ ಮಲಗಿದ್ದ ಮಗು ಏಳುವುದರೊಂದಿಗೆ ಡ್ಯಾನ್ಸ್ ಮಾಡಲು ಶುರು ಮಾಡಿರುವ ವಿಡಿಯೊ ವೈರಲ್ ಆಗಿದೆ.

ಹೌದು, ಕಾರಿನಲ್ಲಿ ಹೋಗುತ್ತಿರುವಾಗ ಹಿಂಬದಿಯ ಸೀಟಿನಲ್ಲಿ‌ ಮಗುವೊಂದು‌ ಮಲಗಿದೆ. ಈ ವೇಳೆ ಪೋಷಕರು ‌ಬೇಬಿ‌ ಶಾರ್ಕ್ ಹಾಡನ್ನು ಹಾಕಿದ್ದಾರೆ.‌ ಈ‌ ಹಾಡು‌ ಕೇಳುತ್ತಿದ್ದಂತೆ ಗಾಢ ನಿದ್ರೆಯಿಂದ ಎಚ್ಚರಗೊಳ್ಳುವುದರೊಂದಿಗೆ ಹಾಡಿಗೆ ಬೇಬಿ ಸೀಟರ್‌ನಲ್ಲಿಯೇ‌ ಸ್ಟೆಪ್‌ ಹಾಕಿದ್ದಾನೆ.

ಈ ವಿಡಿಯೊವನ್ನು ‌ಮಗುವಿನ ಪೋಷಕರು ಟ್ವೀಟರ್‌ನಲ್ಲಿ‌‌ ಹಾಕಿದ್ದು, ಇದೀಗ ವೈರಲ್‌ ಆಗಿದೆ. 23 ಸೆಕೆಂಡ್ ವಿಡಿಯೊ 7.7 ಮಿಲಿಯನ್ ಮಂದಿ ನೋಡಿದ್ದು, ನಾಲ್ಕು ಲಕ್ಷ ಲೈಕ್ ಬಂದಿವೆ. ಅನೇಕರು ತಮ್ಮ ಮಕ್ಕಳು‌ ಇದೇ ರೀತಿ ಡಾನ್ಸ್ ಮಾಡುತ್ತಾರೆ‌ ಎಂದಿದ್ದಾರೆ. ಇನ್ನು ಒಬ್ಬ ಮಹಿಳೆ, ತನ್ನ ಮಗು ಹಠ ಮಾಡುವಾಗ ಈ ಹಾಡು ಹಾಕಿದರೆ ಒಂದೇ ಕ್ಷಣಕ್ಕೆ ಸುಮ್ಮನಾಗುತ್ತದೆ ಎಂದಿದ್ದಾಳೆ.

ಭರ್ಜರಿ ಸ್ಟೆಪ್‌ ಹಾಕಿ ಸಂಕಷ್ಟಕ್ಕೆ ಸಿಲುಕಿದ ವೈದ್ಯ

Posted: 24 Aug 2019 03:35 AM PDT

ಸ್ವಾತಂತ್ರ್ಯ ದಿನಾಚರಣೆ ಎಂದರೆ ಕೇಳಬೇಕೆ ಒಂದಷ್ಟು ಗೌರವಪೂರ್ವಕವಾಗಿ ನಡೆದುಕೊಳ್ಳುವ ದಿನ. ಆದರೆ ವಿಶಾಖಪಟ್ಟಣದಲ್ಲಿ ಹಿರಿಯ ವೈದ್ಯರೊಬ್ಬರು ಭರ್ಜರಿ ಸ್ಟೆಪ್ ಹಾಕಿ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ಮದ್ಯಪಾನ ಕುರಿತಂತೆ ಸಾಲುಗಳಿರುವ ತೆಲುಗು ಚಿತ್ರವೊಂದರ ಹಳೆಯ ಹಾಡಿಗೆ ಕಿಂಗ್ ಜಾರ್ಜ್ ಆಸ್ಪತ್ರೆಯ ಚರ್ಮರೋಗ ತಜ್ಞ ಗಿರಿ ಸೂರ್ಯನಾರಾಯಣ ಹೆಜ್ಜೆ ಹಾಕಿದ್ದರು.

ಅಕ್ಕಿನೇನಿ ನಾಗೇಶ್ವರ ರಾವ್ ಅವರು ಚಲನಚಿತ್ರದಲ್ಲಿ ಹಾಕಿದ ಸ್ಟೆಪ್ ರೀತಿಯೇ ಈ ವೈದ್ಯರು ಸಹ ಹೆಜ್ಜೆ ಹಾಕಿ ಅಲ್ಲಿದ್ದವರನ್ನು ಖುಷಿಪಡಿಸಿದರು. ಆದರೆ ಆ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ. ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಭೂತ ಬಿಡಿಸುವ ನೆಪದಲ್ಲಿ ಊರಿಗೆ ಕರೆದೊಯ್ದಿದ್ದ ತಾಂತ್ರಿಕ

Posted: 24 Aug 2019 03:33 AM PDT

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯ ತಾಂತ್ರಿಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಸೆಪ್ಟೆಂಬರ್ 8, 2018 ರಂದು ತಾಂತ್ರಿಕ ಮನ್ಪುರ್ ರಜಪೂತ್ ಗೆ ಬಂದಿದ್ದನಂತೆ. ವರದಿ ಪ್ರಕಾರ, ಅಪ್ರಾಪ್ತೆ ತಂದೆ, ಮಗಳ ಮೇಲೆ ತಾಂತ್ರಿಕ ವಿದ್ಯೆ ಪ್ರಯೋಗ ಮಾಡುವಂತೆ ಹೇಳಿದ್ದಾನೆ.

ಇದನ್ನು ಬಂಡವಾಳ ಮಾಡಿಕೊಂಡ ತಾಂತ್ರಿಕ ಅಪ್ರಾಪ್ತೆಯನ್ನು ತನ್ನ ಗ್ರಾಮಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ. ನಂತ್ರ ದೆಹಲಿಗೆ ಕರೆದೊಯ್ದು ಅಲ್ಲೂ ಅತ್ಯಾಚಾರವೆಸಗಿದ್ದಾನೆ. ಭಿಂದ್ ಗೆ ಹುಡುಗಿ ಜೊತೆ ಬಂದ ತಾಂತ್ರಿಕನಿಗೆ ಲೆಕ್ಕಾಚಾರ ತಪ್ಪಿದೆ.

ಅವಕಾಶ ನೋಡಿ ಅಲ್ಲಿಂದ ತಪ್ಪಿಸಿಕೊಂಡ ಅಪ್ರಾಪ್ತೆ ಪೊಲೀಸರ ಬಳಿ ಸಹಾಯ ಕೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಬಿಳಿ ಕೂದಲು ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ಉಪಾಯ

Posted: 24 Aug 2019 03:31 AM PDT

ವಯಸ್ಸಾಗ್ತಿದ್ದಂತೆ ಕೂದಲು ಬಿಳಿಯಾಗುತ್ತಿದ್ದ ಕಾಲವೊಂದಿತ್ತು. ಈಗ ಹಾಗಲ್ಲ, ಬದಲಾದ ಜೀವನಶೈಲಿ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಪ್ಪು ಕೂದಲು ಬೆಳ್ಳಗಾಗಲು ಶುರುವಾಗುತ್ತದೆ. ಕೂದಲು ಬಿಳಿಯಾಗಲು ಅನೇಕ ಕಾರಣಗಳಿವೆ. ಅದ್ರಲ್ಲಿ ನಮ್ಮ ಜೀವನ ಶೈಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ನಮ್ಮ ದಿನನಿತ್ಯದ ಕೆಲಸಗಳಲ್ಲಿ ಹಾಗೂ ಆಹಾರದಲ್ಲಿ ಬದಲಾವಣೆ ಮಾಡಿದ್ರೆ ಬಿಳಿ ಕೂದಲು ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಬಿಳಿ ಕೂದಲು ಕಾಣಿಸಿಕೊಳ್ಳಲು ಒತ್ತಡವೂ ಒಂದು ಕಾರಣ. ಒತ್ತಡದಿಂದ ಕೂದಲು ಬಿಳಿಯಾಗುವ ಜೊತೆಗೆ ಕೂದಲು ಉದುರಲು ಶುರುವಾಗುತ್ತದೆ. ಹಾಗಾಗಿ ಅನಾವಶ್ಯಕ ಒತ್ತಡ ಬಿಟ್ಟುಬಿಡಿ. ಒತ್ತಡದಿಂದ ಮುಕ್ತಿ ಪಡೆಯಲು ಧ್ಯಾನ, ವ್ಯಾಯಾಮದ ಮೊರೆ ಹೋಗಿ.

ಆಹಾರದಲ್ಲಾದ ಬದಲಾವಣೆ ಕೂಡ ನಿಮ್ಮ ಕೂದಲಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಪೌಷ್ಠಿಕ ಆಹಾರ ಸೇವನೆ ಶುರು ಮಾಡಿ. ಫಾಸ್ಟ್ ಫುಡ್ ಗಳಿಂದ, ಕರಿದ ಆಹಾರಗಳಿಂದ ದೂರವಿರಿ.

ಅಕಾಲಿಕ ಬಿಳಿ ಕೂದಲಿಗೆ ಧೂಮಪಾನ ಕೂಡ ಮುಖ್ಯ ಕಾರಣ. ಧೂಮಪಾನ ತ್ಯಜಿಸಿದ್ರೆ ಬಿಳಿ ಕೂದಲಿನ ಸಂಖ್ಯೆ ಕಡಿಮೆಯಾಗುತ್ತದೆ.

ಒಳ್ಳೆಯ ನಿದ್ರೆ ಆರೋಗ್ಯಕ್ಕೆ ಹಾಗೂ ಕಪ್ಪು ಕೂದಲಿಗೆ ಬಹಳ ಮುಖ್ಯ. ಉತ್ತಮ ನಿದ್ರೆ ಒತ್ತಡ ಕಡಿಮೆ ಮಾಡುತ್ತದೆ. ಆರೋಗ್ಯದಲ್ಲಿ ಸುಧಾರಣೆ ತರುತ್ತದೆ.

ಬಹುತೇಕರು ಕೂದಲು ಜಿಡ್ಡಾಗುತ್ತದೆ ಎನ್ನುವ ಕಾರಣಕ್ಕೆ ಕೂದಲಿಗೆ ಎಣ್ಣೆ ಹಾಕುವುದಿಲ್ಲ. ಆದ್ರೆ ಇದು ತಪ್ಪು. ನಿಯಮಿತವಾಗಿ ಎಣ್ಣೆಯನ್ನು ಕೂದಲಿಗೆ ಹಾಕಿ ಮಸಾಜ್ ಮಾಡುವುದ್ರಿಂದ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು.

ಸಾವರ್ಕರ್ ಮೇಲೆ ನಂಬಿಕೆ ಇಲ್ಲದವರನ್ನು ಸಾರ್ವಜನಿಕವಾಗಿ ಹೊಡೆಯಬೇಕೆಂದ ಉದ್ಧವ್ ಠಾಕ್ರೆ

Posted: 24 Aug 2019 03:11 AM PDT

ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಬಗ್ಗೆ ನಂಬಿಕೆ ಇಲ್ಲದವರನ್ನು ಸಾರ್ವಜನಿಕವಾಗಿ ನಿಲ್ಲಿಸಿ ಹೊಡೆಯಬೇಕು ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರಚೋದಿಸುವ ರೀತಿಯಲ್ಲಿ ಕರೆ ನೀಡಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ನಲ್ಲಿ ವೀರ್ ಸಾವರ್ಕರ್, ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಪುತ್ಥಳಿಗಳನ್ನು ಅನಾವರಣ ಮಾಡಲಾಗಿದ್ದು, ಗುರುವಾರ ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್ಎಸ್ ಯುಐ) ಕಾರ್ಯಕರ್ತರು ಸಾವರ್ಕರ್ ಪುತ್ಥಳಿಗೆ ಇಂಕ್ ಎರಚಿ, ಶೂಗಳ ಹಾರವನ್ನು ಹಾಕಿದ್ದರು. ಅಲ್ಲದೇ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವರ್ಕರ್ ಪಾತ್ರ ಏನೂ ಇರಲಿಲ್ಲ ಎಂದು ಘೋಷಣೆ ಕೂಗಿದ್ದರು.

ಈ ಪ್ರತಿಭಟನೆ ನಡೆದ ಬೆನ್ನಲ್ಲೇ ಠಾಕ್ರೆ ಪ್ರಚೋದಾತ್ಮಕ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಪಾತ್ರ ಏನಿತ್ತು ಎಂಬುದನ್ನು ತಿಳಿಯದೇ ಕೆಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೂ ಸಹ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಅನುಮತಿ ಪಡೆಯದೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಈ ಪುತ್ಥಳಿಗಳನ್ನು ಸ್ಥಾಪಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಶಾಕಿಂಗ್‌ ಸುದ್ದಿ: 30 ವರ್ಷಗಳ ಕಾಲ ಒಬ್ಬನೇ ವ್ಯಕ್ತಿಯಿಂದ ಮೂರು ಸರ್ಕಾರಿ ಹುದ್ದೆ ನಿಭಾವಣೆ

Posted: 24 Aug 2019 03:07 AM PDT

ವ್ಯಕ್ತಿ ಒಬ್ಬನೇ, ಆದರೆ ಮೂರು ಸರ್ಕಾರಿ ಹುದ್ದೆ ನಿಭಾವಣೆ, ಮೂರು ಕಡೆಯಿಂದಲೂ ಸಂಬಳ…!

ಬಿಹಾರದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಅಕ್ರಮವಾಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿಯ ಮೇಲೆ ಈಗ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಸುರೇಶ್ ರಾಮ್ ಎಂಬಾತ 1988 ರಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೃಷ್ಣಗಂಜ್ ಎಂಬಲ್ಲಿ ಕಟ್ಟಡ ನಿರ್ಮಾಣ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಬಳಿಕ ಪಾಟ್ನಾ ಕಟ್ಟಡ ನಿರ್ಮಾಣ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಕೆಲಸ ಗಿಟ್ಟಿಸಿದರು. ಬಳಿಕ 1989 ರಲ್ಲಿ ಅವರಿಗೆ ಜಲಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಸಿಕ್ಕಿತು.

ಈ ವ್ಯಕ್ತಿ ಅದು ಹೇಗೆ ಮೂರು ಕಡೆಯೂ ಕೆಲಸ ಮಾಡಿದರೊ ಗೊತ್ತಿಲ್ಲ. ಆದರೆ ಅವರ ಸೇರಬೇಕಾದ ವೇತನ ಭತ್ಯೆಗಳು ಮಾತ್ರ ಕಾಲಕಾಲಕ್ಕೆ ಸಂದಾಯವಾಗಿದೆ. ಕಳೆದ ವರ್ಷ ಬಿಹಾರ ಸರ್ಕಾರ ಸಮಗ್ರ ಹಣಕಾಸು ವ್ಯವಸ್ಥೆಯನ್ನು ಜಾರಿಗೆ ತಂದಿತು. ಇದರಲ್ಲಿ ಆಧಾರ್, ಪಾನ್ ಕಾರ್ಡ್, ಹುಟ್ಟಿದ ದಿನಾಂಕ ಸೇರಿದಂತೆ ವಿವಿಧ ಮಾಹಿತಿಗಳನ್ನು ದಾಖಲಿಸಿತು. ಈ ಸಂದರ್ಭದಲ್ಲಿ ಈ ವ್ಯಕ್ತಿಯ ಬಣ್ಣ ಬಯಲಾಗಿದೆ ಇದೀಗ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸ್ಮೃತಿ ಇರಾನಿಯವರ ಖಲಾಸ್‌ ಮೀಲ್‌, ಜಕಾಸ್‌ ಕಾಫಿ

Posted: 24 Aug 2019 03:03 AM PDT

ತಮ್ಮ ಚುರುಕು ಮಾತುಗಾರಿಕೆಗೆ ಖ್ಯಾತರಾಗಿರುವ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಮುಂಬೈನ ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಭಾಗಿಯಾದ ಬಳಿಕ ಅಲ್ಲಿನ ಕೆಫೆ ಮದ್ರಾಸ್‌ನಲ್ಲಿ ತಾವು ಸವಿದ ಅನೇಕ ಖಾದ್ಯಗಳ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.

ಉಪ್ಮಾ ಪೋಡಿ, ರವಾ ಅಡಾಯಿ, ತುಪ್ಪ ದೋಸೆ, ಸೆಟ್‌ ದೋಸೆ ಹಾಗೂ ಫಿಲ್ಟರ್‌ ಕಾಫಿಯ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಶೇರ್‌ ಮಾಡಿರುವ ಇರಾನಿ, ಎಂಟು ದಶಕಗಳಷ್ಟು ಹಳೆಯದಾದ ಕೆಫೆ ಮದ್ರಾಸ್‌ನ ಮಾಲೀಕ ಹಾಗು ಆತನ ಪುತ್ರನ ಜೊತೆಗಿನ ತಮ್ಮ ಚಿತ್ರವನ್ನೂ ಶೇರ್‌ ಮಾಡಿದ್ದಾರೆ.

ಇವೆಲ್ಲಕ್ಕಿಂತ ಹೆಚ್ಚು ಹೈಲೈಟ್ ಆದ ಸ್ಟೇಟಸ್‌ ಎಂದರೆ, ಕೊನೆಯಲ್ಲಿ ಡಿಸ್‌ಕ್ಲೇಮರ್‌ ಒಂದನ್ನು ಹಾಕಿದ ಸ್ಮೃತಿ, “ಈ ಎಲ್ಲವನ್ನೂ ನಾನು ತಿಂದೆ ಎಂದುಕೊಂಡವರು, ಮತ್ತೊಮ್ಮೆ ಯೋಚಿಸಿ,” ಎನ್ನುವ ಮೂಲಕ ನೆಟ್ಟಿಗರ ತಲೆಗೆ ಹುಳು ಬಿಟ್ಟಿದ್ದಾರೆ.

ಮ್ಯಾಕ್ರಾನ್ ಜೊತೆ ಮಾತಾಡುವಾಗ ಟೇಬಲ್ ಮೇಲೆ ಕಾಲಿಟ್ಟ ಪಿಎಂ

Posted: 24 Aug 2019 02:59 AM PDT

ಬ್ರಿಟನ್ ಪ್ರಧಾನಿಯಾಗಿ ತಿಂಗಳ ನಂತರ ವಿದೇಶ ಪ್ರವಾಸ ಕೈಗೊಂಡಿರುವ ಬೋರಿಸ್ ಜಾನ್ಸನ್, ಫ್ರಾನ್ಸ್ ಪ್ರಧಾನಿ ಇಮ್ಯಾನುಯಲ್ ಮ್ಯಾಕ್ರಾನ್ ಜೊತೆಗಿನ ಮಾತುಕತೆ ವೇಳೆ ತಮಾಷೆಗೆ ಟೇಬಲ್ ಮೇಲ್ ಕಾಲಿಟ್ಟು ಸುದ್ದಿಯಾಗಿದ್ದಾರೆ.

ಮ್ಯಾಕ್ರಾನ್ ರ ಐಷಾರಾಮಿ ನಿವಾಸದಲ್ಲಿ ಒಂದು ಕ್ಷಣದಲ್ಲಿ ನಡೆದ ಈ ಘಟನೆ ಇಂಟರ್ನೆಟ್ ನಲ್ಲಿ ಭಾರೀ ಚರ್ಚೆ ಆಗುತ್ತಿದೆ.

ಒಂದು ಘನತೆಯಿರುವ ಮಾತುಕತೆ ವೇಳೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿತಿಲ್ಲವೇ ಎಂದು ಒಬ್ಬರು ಪ್ರಶ್ನಿಸಿದರೆ, ಬಕ್ಕಿಂಗ್ ಗ್ಯಾಮ್ ಅರಮನೆಯಲ್ಲಿ ಈ ರೀತಿ ಮಾಡಿದ್ದರೆ ಬ್ರಿಟನ್ ನ ಟ್ಯಾಬ್ಲಾಯ್ಡ್ ಗಳು ಏನು ಬರೆಯುತ್ತಿದ್ದವೊ ಎಂದು ಮತ್ತೊಬ್ಬರು ಹೇಳಿದ್ದಾರೆ.

ಅಭಿಮಾನಿ ಮನೆ ಬಾಗಿಲಿಗೇ ಹೋಗಿ ಅಚ್ಚರಿ ಮೂಡಿಸಿದ ನಟ

Posted: 24 Aug 2019 02:57 AM PDT

ಪದ್ಮಾವತ್, ಬಾಜಿರಾವ್ ಮಸ್ತಾನಿ, ಗಲ್ಲಿ ಬಾಯ್ ನಂತಹ ಚಿತ್ರಗಳ ನಟನೆಯಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ರಣವೀರ್ ಸಿಂಗ್, ಲಂಡನ್ ನ ತನ್ನ ಅಭಿಮಾನಿಯೊಬ್ಬರಿಗೆ ಅಚ್ಚರಿ ನೀಡಿದ್ದಾರೆ.

ಲಂಡನ್ ಪ್ರವಾಸದಲ್ಲಿರುವ ರಣವೀರ್, ಇದೇ ನಗರದಲ್ಲಿ ತಮ್ಮ ನೆಚ್ಚಿನ ಅಭಿಮಾನಿ ಕಿರಣ್ ಎಂಬುವರು ವಾಸವಾಗಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದರು. ಅಲ್ಲದೇ, ಆಕೆ ಮಗುವಿಗೆ ಜನ್ಮ ನೀಡುವ ದಿನಗಳು ಹತ್ತಿರ ಬಂದಿವೆ ಎಂಬ ಮಾಹಿತಿಯೂ ಅವರ ಕಿವಿಗೆ ಬಿತ್ತು. ಇಂತಹ ಸಂದರ್ಭದಲ್ಲಿ ಆಕೆಯೊಂದಿಗೆ ಒಂದು ಅವಿಸ್ಮರಣೀಯವಾದ ಕ್ಷಣವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ.

ತಡ ಮಾಡದೇ ರಣವೀರ್ ತಮ್ಮ ತಂಡದೊಂದಿಗೆ ನೇರವಾಗಿ ಕಿರಣ್ ಮನೆಗೆ ಹೋಗಿ ಬೆಲ್ ಒತ್ತಿದ್ದಾರೆ. ಬಾಗಿಲು ತೆರೆದು ನೋಡಿದ ಕಿರಣ್ ಗೆ ಅತ್ಯಾಶ್ಚರ್ಯ ಮತ್ತು ಆನಂದಕ್ಕೆ ಪಾರವೇ ಇರಲಿಲ್ಲ. ತನ್ನ ನೆಚ್ಚಿನ ಹೀರೋ ಅಚ್ಚರಿ ರೀತಿಯಲ್ಲಿ ಮನೆಗೆ ಬಂದಿರುವುದನ್ನು ಕಂಡ ಆಕೆಯ ಕಣ್ಣಾಲಿಗಳಲ್ಲಿ ಆನಂದಬಾಷ್ಪಗಳು ತೊಟ್ಟಿಕ್ಕಿದವು. ಸುಮಾರು ಒಂದೂವರೆ ಗಂಟೆ ಕಾಲದವರೆಗೆ ಕಿರಣ್ ಕುಟುಂಬದೊಂದಿಗೆ ಹರಟಿದ ರಣವೀರ್ ತಮ್ಮ ನೆಚ್ಚಿನ ಅಭಿಮಾನಿಗೆ ಶುಭಾಶಯ ಕೋರಿದರು.

ಅಂದಹಾಗೆ ಕಿರಣ್ ಲಂಡನ್ ನ ಸರ್ರೆಯಲ್ಲಿ ರಣವೀರ್ ಸಿಂಗ್ ಅಭಿಮಾನಿಗಳ ಕ್ಲಬ್ ಆಗಿರುವ ರಣವೀರಿಯನ್ಸ್ ಎಫ್ ಸಿ ಯನ್ನು ಮುನ್ನಡೆಸುತ್ತಿದ್ದಾರೆ. ರಣವೀರ್ ಲಂಡನ್ ಗೆ ಹೋದಾಗಲೆಲ್ಲಾ ಕಿರಣ್ ಭೇಟಿಯಾಗುತ್ತಿದ್ದರು.

ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ

Posted: 24 Aug 2019 02:41 AM PDT

ಸ್ವೀಡನ್‌ ನ ಸ್ಟೋಕ್‌ಹೋಲ್ಮ್‌ನ ಅಕ್ವೇರಿಯಂ ಹಾಲ್‌ನಲ್ಲಿ ನಡೆಯುತ್ತಿದ್ದ ಖಾಸಗಿ ಪಾರ್ಟಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮೊಸಳೆ ದಾಳಿ ನಡೆಸಿದೆ.

ಈ ಘಟನೆ ಗುರುವಾರ ನಡೆದಿದ್ದು, 70 ವರ್ಷದ ವ್ಯಕ್ತಿ ಪಾರ್ಟಿ ವೇಳೆ ಮಾತನಾಡುತ್ತಿದ್ದಾಗ ಅಕ್ವೇರಿಯಂನಲ್ಲಿದ್ದ ಮೊಸಳೆಯೊಂದು ವ್ಯಕ್ತಿಯ ಕೈಗೆ ಬಾಯಿ ಹಾಕಿದೆ. ಇದರಿಂದ ಕೈ ಕತ್ತರಿಸಿದ್ದು, ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ

ಪೊಲೀಸ್‌ ಹಾಗೂ ಅಕ್ವೇರಿಯಂ ಸಿಬ್ಬಂದಿಗಳ ಪ್ರಕಾರ, ನಿಗದಿಪಡಿಸಿದ್ದ ಸುರಕ್ಷಿತ ಗ್ಲಾಸ್‌ ನೊಳಗೆ ವ್ಯಕ್ತಿ ಕೈ ಹಾಕಿ ಮಾತನಾಡುತ್ತಿದ್ದರು. ಆದ್ದರಿಂದ ಮೊಸಳೆ ದಾಳಿ ನಡೆಸಿದೆ ಎಂದಿದ್ದಾರೆ.

ಜೆರುಸಲೆಂ ಯಾತ್ರಾ ಜಾಹೀರಾತಿದ್ದ ತಿರುಪತಿ ಬಸ್ ಟಿಕೆಟ್ ವಾಪಸ್

Posted: 24 Aug 2019 02:38 AM PDT

ನೆರೆಯ ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಬಂದ ನಂತರ ರಾಜಕೀಯ ವಾಕ್ಸಮರಗಳು ಜೋರಾಗಿಯೇ ಸಾಗಿವೆ.

ತಿರುಪತಿಯಿಂದ ತಿರುಮಲಕ್ಕೆ ಹೋಗಿ ಬರುವ ರಾಜ್ಯ ಸರ್ಕಾರಿ ಸ್ವಾಮ್ಯದ ಬಸ್ ಟಿಕೆಟ್ ಗಳ ಹಿಂಬದಿಯಲ್ಲಿ ಜೆರುಸಲೆಂ ಮತ್ತು ಹಜ್ ಯಾತ್ರೆಯ ಜಾಹೀರಾತುಗಳು ಪ್ರಕಟವಾಗುತ್ತಿದ್ದವು. ಈ ವಿಚಾರ ತೆಲುಗುದೇಶಂ, ಬಿಜೆಪಿ ಮತ್ತು ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರ, ಜಾಹೀರಾತು ಪ್ರಕಟಣೆಯ ಕುರಿತು ತನಿಖೆ ನಡೆಸಿದ್ದು, ಹಿಂದಿನ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಟಿಕೆಟ್ ಗಳಲ್ಲಿ ಜಾಹೀರಾತು ಪ್ರಕಟಿಸಲು ಅನುಮತಿ ನೀಡಿತ್ತು ಎಂಬುದು ಪ್ರಾಥಮಿಕವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಹಿಂದಿನ ಸರ್ಕಾರ ನೀಡಿದ್ದ ಅನುಮತಿಯನ್ನು ರದ್ದು ಮಾಡಿದ್ದು, ಜಾಹೀರಾತು ಇದ್ದ ಟಿಕೆಟ್ ಗಳನ್ನು ವಾಪಸ್ ಪಡೆಯಲು ಸೂಚಿಸಿದ್ದಾರೆ.

ಈ ವಿಚಾರವನ್ನು ಸ್ಪಷ್ಟಪಡಿಸಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವೆಲ್ಲಂಪಲ್ಲಿ ಶ್ರೀನಿವಾಸ್, ಟಿಡಿಪಿ ಮತ್ತು ಬಿಜೆಪಿ ನಾಯಕರು ವಿನಾ ಕಾರಣ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಕ್ಷುಲ್ಲಕ ಆರೋಪ ಮಾಡಿ ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.