Translate

Thursday, July 4, 2019

Kannada News | Karnataka News | India News

Kannada News | Karnataka News | India News


ರಾತ್ರಿ ಕಣ್ತುಂಬಾ ನಿದ್ದೆ ಮಾಡೋದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

Posted: 04 Jul 2019 09:30 AM PDT

ಬ್ಯೂಟಿ ಸ್ಲೀಪ್ ಬಗ್ಗೆ ನೀವೂ ಕೇಳಿರಬಹುದು. ನಿದ್ದೆಯಲ್ಲಿ ನಿಮ್ಮ ಸೌಂದರ್ಯ ಅಡಗಿದೆ ಅನ್ನೋದು ಸುಳ್ಳಲ್ಲ, ಸತ್ಯ. ಯಾರು ರಾತ್ರಿ ಸರಿಯಾಗಿ ನಿದ್ದೆ ಮಾಡುವುದಿಲ್ವೋ ಅವರು ಹೆಚ್ಚು ಚಟುವಟಿಕೆಯಿಂದಿರುವುದಿಲ್ಲ. ಸಂಶೋಧಕರ ಪ್ರಕಾರ ಎರಡು ರಾತ್ರಿ ನಿಮಗೆ ಸರಿಯಾಗಿ ನಿದ್ದೆ ಬಂದಿಲ್ಲ ಅಂದ್ರೆ ನಿಮ್ಮ ಪರ್ಸನಾಲಿಟಿಯೇ ಬದಲಾಗುತ್ತದೆ.

25 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಒಂದು ಗ್ರೂಪ್ ನವರಿಗೆ ರಾತ್ರಿ ಚೆನ್ನಾಗಿ ನಿದ್ದೆ ಮಾಡುವಂತೆ ಸೂಚಿಸಲಾಯ್ತು, ಇನ್ನೊಂದು ಗುಂಪಿನವರಿಗೆ ಕೇವಲ 4 ಗಂಟೆ ಮಾತ್ರ ನಿದ್ದೆ ಮಾಡಲು ಅವಕಾಶ ನೀಡಲಾಯ್ತು. ಎರಡೂ ಗ್ರೂಪ್ ನ ಸದಸ್ಯರಿಗೆ ಮೇಕಪ್ ಮಾಡದೆ ಫೋಟೋ ತೆಗೆಯಲಾಯ್ತು.

ಎರಡೂ ಫೋಟೋಗಳಲ್ಲಿ ಯಾರು ಹೆಚ್ಚು ಆ್ಯಕ್ಟಿವ್, ಹೆಲ್ದಿ, ಎನರ್ಜೆಟಿಕ್ ಹಾಗೂ ಆತ್ಮವಿಶ್ವಾಸಿಗಳಾಗಿ ಕಾಣಿಸ್ತಾರೆ ಅಂತಾ 122 ಜನರ ಬಳಿ ಕೇಳಲಾಯ್ತು. ಕೇವಲ ನಾಲ್ಕು ಗಂಟೆ ನಿದ್ದೆ ಮಾಡಿದವರ ಬಗ್ಗೆ ಎಲ್ಲರೂ ನೆಗೆಟಿವ್ ಕಮೆಂಟ್ಸ್ ನೀಡಿದ್ದರು. ಯಾರೂ ಕಣ್ತುಂಬಾ ನಿದ್ರೆ ಮಾಡಿದ್ದಾರೋ ಅವರು ಹೆಚ್ಚು ಚಟುವಟಿಕೆಯಿಂದ, ಆರೋಗ್ಯಕರವಾಗಿ, ಆತ್ಮವಿಶ್ವಾಸದಿಂದ ಇದ್ದಾರೆ ಅಂತಾ ಎಲ್ಲರೂ ಅಭಿಪ್ರಾಯಪಟ್ರು.

ಚೆನ್ನಾಗಿ ನಿದ್ರೆ ಮಾಡಿದ್ರೆ ನೀವು ಹೆಲ್ದಿ ಮಾತ್ರವಲ್ಲ ಆಕರ್ಷಕವಾಗಿಯೂ ಕಾಣಿಸುತ್ತೀರಾ. ಜನರು ನಿಮ್ಮನ್ನು ಇಷ್ಟಪಡ್ತಾರೆ. ನಿಮ್ಮ ಇಡೀ ವ್ಯಕ್ತಿತ್ವ ಅದ್ಭುತವಾಗಿ ಕಾಣಿಸಬೇಕೆಂದ್ರೆ ಕಡಿಮೆ ಅಂದ್ರೂ ದಿನಕ್ಕೆ 8 ಗಂಟೆ ನಿದ್ದೆ ಮಾಡಿ.

ಸಂಭೋಗದ ವೇಳೆ ಮಹಿಳೆ ಕಣ್ಣು ಮುಚ್ಚಿಕೊಳ್ಳುವುದೇಕೆ…?

Posted: 04 Jul 2019 08:31 AM PDT

ಸೆಕ್ಸ್ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಬಹಿರಂಗವಾಗಿ ಅದ್ರ ಬಗ್ಗೆ ಮಾತನಾಡುವುದಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಸೆಕ್ಸ್ ಬಗ್ಗೆ ತಮಗಿರುವ ಅನುಮಾನವನ್ನು ಇತರರ ಜೊತೆ ಚರ್ಚಿಸುತ್ತಾರೆ. ಸಾಮಾನ್ಯವಾಗಿ ಸೆಕ್ಸ್ ವೇಳೆ ಮಹಿಳೆಯರು ಕಣ್ಣು ಮುಚ್ಚಿಕೊಳ್ತಾರೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ.

ಈ ಬಗ್ಗೆ ಸಂಶೋಧನೆ ಕೂಡ ನಡೆದಿದೆ. ತಜ್ಞರ ಪ್ರಕಾರ, ಸೀನುವಾಗ ಹೇಗೆ ಕಣ್ಣು ತೆರೆದಿರಲು ಸಾಧ್ಯವಿಲ್ಲವೋ ಅದೇ ರೀತಿ ಸೆಕ್ಸ್ ವೇಳೆ ಮಹಿಳೆಯರಿಗೆ ಕಣ್ಣು ತೆರೆದಿರಲು ಸಾಧ್ಯವಾಗುವುದಿಲ್ಲವಂತೆ. ಆಗ ಬಿಡುಗಡೆಯಾಗುವ ಹಾರ್ಮೋನ್ ಕಣ್ಣು ಮುಚ್ಚಿಕೊಳ್ಳಲು ಪ್ರೇರೇಪಿಸುತ್ತದೆಯಂತೆ.

ಸೆಕ್ಸ್ ವೇಳೆ ಕಣ್ಣು ಮುಚ್ಚಿಕೊಳ್ಳುವ ಮಹಿಳೆ ಸಂಭೋಗದ ಸಂಪೂರ್ಣ ಸುಖ ಪಡೆಯುತ್ತಾಳಂತೆ. ಸೆಕ್ಸ್ ವೇಳೆ ಕಣ್ಣು ಬಿಟ್ಟುಕೊಂಡಿರುವ ಮಹಿಳೆ ಗಮನ ಸಂಗಾತಿ ಮೇಲೆ ಹೋಗುತ್ತದೆಯಂತೆ. ಆಗ ಆಕೆ ಕ್ಲೈಮ್ಯಾಕ್ಸ್ ತಲುಪಲು ಸಾಧ್ಯವಿಲ್ಲವಂತೆ.

ಮಕ್ಕಳ ಕೆಮ್ಮು ನಿವಾರಣೆಗೆ ಇಲ್ಲಿದೆ ʼಮನೆ ಮದ್ದುʼ

Posted: 04 Jul 2019 08:01 AM PDT

ಈಗ ತಂಪಾದ ವಾತಾವರಣ ಇರುವುದರಿಂದ ಮಕ್ಕಳು ಬಹು ಬೇಗನೇ ಹುಷಾರು ತಪ್ಪುತ್ತಾರೆ. ಶೀತ, ಕೆಮ್ಮು, ನೆಗಡಿ ಈ ಸಮಯದಲ್ಲಿ ಮಾಮೂಲಿ. ಚಿಕ್ಕ ಮಕ್ಕಳು ಕೆಮ್ಮಿನ ಸಮಸ್ಯೆಯಿಂದ ಹೊರ ಬರಬೇಕಾದರೆ ಈ ಮನೆ ಮದ್ದನ್ನು ಬಳಸಿದರೆ ಒಳ್ಳೆಯದು.

ಆವಿ ಕೊಡುವುದು

ಕುದಿಸಿದ ನೀರಿನಿಂದ ಬರುವ ಆವಿಗೆ ಟವಲ್ ಹಿಡಿದು ಅದರಿಂದ ಮಗುವಿನ ಮೈಯನ್ನು ಮೆಲ್ಲನೆ ಒತ್ತಬೇಕು. ಅಥವಾ ನೀರಿಗೆ ಅಮೃತಾಂಜನ ಹಾಕಿ ಕುದಿಸಿದಾಗ ಬರುವ ಆವಿಗೆ ಬಟ್ಟೆಯನ್ನು ಹಿಡಿದು ಮಗುವಿನ ಮೈಗೆ, ಎದೆ, ಬೆನ್ನಿನ ಭಾಗಕ್ಕೆ ಮೆಲ್ಲನೆ ಒತ್ತಬೇಕು. ಆಗ ಮೂಗು ಕಟ್ಟಿದ್ದರೆ ಮಗುವಿಗೆ ಸ್ವಲ್ಪ ಸಮಾಧಾನ ಸಿಗುತ್ತದೆ.

ಜೇನು, ಕರಿಮೆಣಸಿನ ಪುಡಿ ಮತ್ತು ತುಳಸಿ

ಅರ್ಧ ಚಮಚ ಜೇನಿಗೆ 1-2 ಕರಿ ಮೆಣಸಿನ ಪುಡಿ (6 ತಿಂಗಳ ಮೇಲಿನ ಮಕ್ಕಳಿಗಾದರೆ 3-4 ಕರಿಮೆಣಸಿನ ಪುಡಿ ಹಾಕಬಹುದು) ಮತ್ತು ತುಳಸಿ ರಸ ಇವುಗಳನ್ನು ಮಿಶ್ರ ಮಾಡಿ ಕುಡಿಸಿದರೆ ಕೆಮ್ಮು ಕಮ್ಮಿಯಾಗುವುದು.

ಅರಿಶಿಣ

ಅರಿಶಿಣ ಪುಡಿಯನ್ನು ಬಿಸಿ ಮಾಡಿ ಅದನ್ನು ಎದೆಗೆ ಉಜ್ಜಿ ಹಾಲು ಕುಡಿಸಬೇಕು ಅಥವಾ ಹಾಲಿನ ಬಾಟಲಿಯ ನಿಪ್ಪಲ್‌ಗೆ ಉಜ್ಜಿ ಹಾಲು ಕುಡಿಸಬೇಕು. ಈ ರೀತಿ ದಿನಕ್ಕೆ 2 ಬಾರಿ ಮಾಡಿದರೆ ಕೆಮ್ಮು ಕಡಿಮೆಯಾಗುತ್ತದೆ.

ಎಣ್ಣೆ ಮಸಾಜ್

ನೀಲ್‌ಗಿರಿ, ರೋಸ್‌ಮೆರಿ ಎಣ್ಣೆ, ಪುದೀನಾ ಎಣ್ಣೆ, ಪೆಪ್ಪರ್ ಮಿಂಟ್ ಆಯಿಲ್ ಇವುಗಳಿಂದ ಮಸಾಜ್ ಮಾಡಿದರೆ ಶೀತ ಮತ್ತು ಕೆಮ್ಮಿನಿಂದ ಮೂಗು ಕಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ. ನಂತರ ಮಗುವಿಗೆ ಉಣ್ಣೆಯ ಬಟ್ಟೆ ಧರಿಸಬೇಕು. ಈ ರೀತಿ ಮಾಡಿದರೆ ಕೆಮ್ಮು ಕಮ್ಮಿಯಾಗುವುದು.

ಮಹಿಳಾ ಸಹೋದ್ಯೋಗಿಯನ್ನು ಥಳಿಸಿದ್ದಕ್ಕೆ ವಿಭಿನ್ನವಾಗಿ ಪ್ರತಿಭಟನೆ

Posted: 04 Jul 2019 07:58 AM PDT

ತೆಲಂಗಾಣದಲ್ಲಿ ಬರೋಬ್ಬರಿ ನಾನೂರಕ್ಕೂ ಅಧಿಕ ಅರಣ್ಯ ಇಲಾಖೆ ಅಧಿಕಾರಿಗಳು ಒಟ್ಟಾಗಿ ಸೇರಿ ಸಸಿಗಳನ್ನು ನೆಟ್ಟು ಅಚ್ಚರಿ ಮೂಡಿಸಿದರು.

ಈ ರೀತಿ ಅಧಿಕಾರಿಗಳೆಲ್ಲ ಒಟ್ಟಾಗಿ ಒಂದೇ ಸ್ಥಳದಲ್ಲಿ ವನಮಹೋತ್ಸವ ಆಚರಿಸಿದ್ದರ ಹಿಂದೆ ದೊಡ್ಡ ಘಟನೆಯೇ ಇದೇ.

ಜೂನ್ 30ರಂದು ಅರಣ್ಯ ಇಲಾಖೆಯ ಅನಿತಾ ಅವರು ಸಸಿಗಳನ್ನು ನೆಡಲು ಹೊರಟಾಗ, ಟಿಆರ್ಎಸ್ ಸದಸ್ಯರು ಹಲ್ಲೆ ಮಾಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಘಟನೆಗೆ ಪ್ರತಿರೋಧ ಎಂಬಂತೆ ಜುಲೈ ಒಂದರಂದು ಸರಿಸುಮಾರು ನಲವತ್ತು ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಒಟ್ಟಾಗಿ ಹಲ್ಲೆ ನಡೆಸಿದ ಸ್ಥಳದಲ್ಲಿಯೇ ಸಸಿಗಳನ್ನು ನೆಟ್ಟು ಅನಿತಾ ಪರ ನಾವಿದ್ದೇವೆ ಎಂಬ ಸಂದೇಶ ಕೊಟ್ಟರು.

ನಾನೂರಕ್ಕೂ ಹೆಚ್ಚು ಮಂದಿ ಒಟ್ಟಾಗಿ ಸಸಿಗಳನ್ನು ನೆಟ್ಟ ಫೋಟೋವನ್ನು ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಪ್ರವೀಣ್ ಕಸ್ವಾನ್ ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.

— Parveen Kaswan, IFS (@ParveenKaswan) July 1, 2019

15 ಕೋಟಿ ರೂ. ತೆರಿಗೆ ವಂಚಿಸಿದ್ದವನ ಖಾತೆಯಲ್ಲಿ ಇದ್ದದ್ದು ಬರೀ 2 ಸಾವಿರ ರೂಪಾಯಿ

Posted: 04 Jul 2019 07:55 AM PDT

ಅಚ್ಚರಿಯ ಘಟನೆಯೊಂದರಲ್ಲಿ ಗುಜರಾತ್ ತೆರಿಗೆ ಅಧಿಕಾರಿಗಳು ಚಾಲಕನೊಬ್ಬನನ್ನು ಇನ್ನೂರು ಕೋಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ.

ಮಾಸಿಕ ಎಂಟು ಸಾವಿರ ರೂಪಾಯಿ ಗಳಿಸುವ ಭರೂಚ್ ಪ್ರದೇಶದ ಟ್ಯಾಕ್ಸಿ ಚಾಲಕ ಸುರೇಶ್ ಗೋಹಿಲ್ ಎಂಬಾತನನ್ನು ವಿಚಾರಣೆಗೊಳಪಡಿಸಿದ್ದ ಅಧಿಕಾರಿಗಳು ಆತನ ಒಂಟಿ ಕೋಣೆಯ ಮನೆಯಲ್ಲಿ ಶೋಧ ಸಹ ನಡೆಸಿದ್ದಾರೆ. ಅವರ ಪಾಸ್ ಬುಕ್ ಅನ್ನು ವಶಪಡಿಸಿಕೊಂಡಿದ್ದರು.

ಗೋಹಿಲ್ ಅವರ ಹೆಸರಿನಲ್ಲಿ ಜಿ.ಎಸ್.ಟಿ. ಗುರುತಿನ ಸಂಖ್ಯೆಯಿಂದ ವ್ಯವಹಾರ ನಡೆದಿರುವುದನ್ನು ಹಾಗೂ ಹದಿನೈದು ಕೋಟಿ ರೂ. ತೆರಿಗೆ ವಂಚನೆಯನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಇವರ ಹೆಸರಿನಲ್ಲಿ ದಾಖಲೆ ಬಳಸಿಕೊಂಡು ತೆರಿಗೆಯನ್ನು ವಂಚಿಸುವುದಕ್ಕಾಗಿ ವ್ಯವಹಾರ ನಡೆಸಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಆದರೆ ಆತನ ಖಾತೆಯಲ್ಲಿ ಮಾತ್ರ ಎರಡು ಸಾವಿರ ರೂಪಾಯಿ ಬ್ಯಾಲೆನ್ಸ್ ಇರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಎಲ್ಲರ ಮನ ಕಲಕುತ್ತೆ ಈ ಹೃದಯ ವಿದ್ರಾವಕ ದೃಶ್ಯ

Posted: 04 Jul 2019 07:51 AM PDT

ಮಾನವನ ಅಟ್ಟಹಾಸಕ್ಕೆ ಕೈಗನ್ನಡಿ ಹಿಡಿಯುವ ನಿದರ್ಶನವೊಂದರಲ್ಲಿ, ಕೋಡುಗಳ್ಳರಿಂದ ಬಲಿಯಾದ ತನ್ನ ತಾಯಿಯ ಸಾವಿಗೆ ಆಕ್ರಂದನದ ಮಡುವಿನಲ್ಲಿ ಬಿದ್ದಿರುವ ಘೇಂಡಾಮೃಗದ ಮರಿಯೊಂದರ ಮನಕಲಕುವ ದೃಶ್ಯ ಎಲ್ಲೆಡೆ ವೈರಲ್‌ ಆಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಈ ಘಟನೆ ನಡೆದಿದ್ದು, ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್‌ ಕಸ್ವಾನ್‌ ಶೇರ್‌ ಮಾಡಿ, ಚರ್ಮ ಹಾಗೂ ಮರಿಗಾಗಿ ತಾಯಿ ಘೇಂಡಾಮೃಗವನ್ನು ಕೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ತಾಯಿಯನ್ನು ಎಚ್ಚರಿಸುವ ವಿಫಲ ಯತ್ನ ಮಾಡುತ್ತಿರುವ ಮರಿಯ ರೋಧನ ಬಹಳ ನೋವುಂಟು ಮಾಡುತ್ತಿದ್ದು, 55,000ಕ್ಕಿಂತ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಒಂದು ಪುಟಾಣಿ ಮರಿಗೆ ದಿಕ್ಕಿಲ್ಲದಂತೆ ಮಾಡಿದ ಈ ಕ್ರೂರಿ ಬೇಟೆಗಾರರಿಗೆ ದೊಡ್ಡ ಮಟ್ಟದಲ್ಲಿ ಶಿಕ್ಷೆ ನೀಡಿ, ಅವರನ್ನೂ ಬೇಟೆಯಾಡಿಯೇ ಕೊಲ್ಲಬೇಕು ಎನ್ನುವ ಮಟ್ಟಿಗೆ ಆಕ್ರೋಶದ ಕಮೆಂಟ್‌ಗಳೂ ಬಂದಿವೆ.

— Parveen Kaswan, IFS (@ParveenKaswan) July 2, 2019

ಬಾಯ್‌ ಫ್ರೆಂಡ್‌ ಜೊತೆಗಿನ ಸ್ವಿಮ್ಮಿಂಗ್‌ ಪೂಲ್‌ ವಿಡಿಯೋ ಪೋಸ್ಟ್‌ ಮಾಡಿದ ನಟಿ

Posted: 04 Jul 2019 07:48 AM PDT

Image result for Sushmita Sen, Rohman Shawl Make A Splash In The Pool, Daughter Alisah Joins Themವಯಸ್ಸಾದರೂ ಇನ್ನೂ ಹದಿಹರೆಯ ಹುಡುಗಿಯರನ್ನು ನಾಚಿಸುವಂತೆ ಕಾಣುವ ಸುಶ್ಮಿತಾ ಸೇನ್ ತಮ್ಮ ಬೋಲ್ಡ್ ಜೀವನ ಶೈಲಿಯಿಂದ ಹೆಸರುವಾಸಿಯಾಗಿದ್ದಾರೆ.

ಸುಶ್ಮಿತಾ ಸೇನ್ ಅವರು ರೋಹ್ಮನ್ ಶಾಲ್ ಎನ್ನುವವರ ಜೊತೆ ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಕೆಲವು ಸುದ್ದಿ ವಾಹಿನಿಗಳು ಅವರು ಬ್ರೇಕ್‌ಅಪ್ ಆಗುವ ಸುದ್ದಿ ಹರಡಿಸಿದ್ದರು.

ಇದನ್ನು ಅಲ್ಲಗಳೆಯುವಂತೆ ಸೇನ್ ಅವರು ರೋಹ್ಮನ್ ಹಾಗೂ ತಮ್ಮ ಮಗಳ ಜೊತೆ ದುಬೈನಲ್ಲಿ ಸಂತೋಷದಿಂದಿರುವ ಫೋಟೋ ಹಾಕಿದ್ದಾರೆ. ಜೊತೆಗೆ ರೋಹ್ಮನ್ ಅವರನ್ನು ಲವ್ ಯು ಅಂತ ಕೂಡ ಹೇಳಿದ್ದಾರೆ. ಈ ಪೋಸ್ಟ್‌ಗಳ ಮುಖಾಂತರ ತಮ್ಮ ಬ್ರೇಕ್ ಅಪ್ ಸುದ್ದಿಗೆ ತೆರೆ ಎಳೆದಿದ್ದಾರೆ.

View this post on Instagram

"Can you swim like a Mermaid Maa? If you show me how Alisah, i could definitely try!!!" 🙈😄❤️ #waterbabies #mermaidswim #ustime #fun #love #family #home #dubai 😍💃🏻beautifully shot Renee shona & well carried my jaan @rohmanshawl 😉😅💋 #sharing #peace #memories #cherished I love you guys!!!

A post shared by Sushmita Sen (@sushmitasen47) on

ಟೀಮ್‌ ಇಂಡಿಯಾ ಅಭಿಮಾನಿಗೆ ಉದ್ಯಮಿಯ ಬಂಪರ್‌ ಕೊಡುಗೆ

Posted: 04 Jul 2019 07:29 AM PDT

ಬಾಂಗ್ಲಾ ದೇಶ ವಿರುದ್ದ ನಡೆದ ಪಂದ್ಯದಲ್ಲಿ ಕ್ರಿಕೆಟಿಗರಿಗಿಂತ ಜಾಸ್ತಿ ಮಿಂಚಿದ್ದು 87 ವರ್ಷದ ಚಾರುಲತಾ ಪಟೇಲ್. ಇದೀಗ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಕ್ರಿಕೆಟ್ ಅಭಿಮಾನಿಯಾಗಿದ್ದಾರೆ.

ಅವರು ನಮ್ಮ ದೇಶದ ತ್ರಿವರ್ಣ ಧ್ವಜದ ಶಾಲು ಹೊದ್ದುಕೊಂಡು ಬಣ್ಣದ ಪೀಪಿ ಊದುತ್ತ ಭಾರತ ತಂಡಕ್ಕೆ ಹುರಿದುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು ಎಲ್ಲರ ಮನ ಗೆದ್ದಿತ್ತು. ಸಾಮಾನ್ಯ ಜನರಷ್ಟಲ್ಲದೇ ಆನಂದ್ ಮಹೀಂದ್ರಾರಂತಹ ಖ್ಯಾತ ಉದ್ಯಮಿಗಳೂ ಕೂಡ ಅವರ ಜೀವನ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ.

ಇದೀಗ ಮಹೀಂದ್ರಾ ಅವರು ಚಾರುಲತಾ ಪಟೇಲ್ ಅವರ ಮುಂದಿನ ಕ್ರಿಕೆಟ್ ಪಂದ್ಯಗಳ ಟಿಕೆಟ್ ಹಣವನ್ನು ನೀಡಲು ಮುಂದಾಗಿದ್ದಾರೆ. ಪಟೇಲ್ ಅವರು ಹಲವು ದಶಕಗಳಿಂದ ಕ್ರಿಕೆಟ್ ಪಂದ್ಯಗಳನ್ನು ಮೈದಾನಕ್ಕೆ ಬಂದು ನೋಡುತ್ತಿದ್ದಾರಂತೆ. 1983 ರಲ್ಲಿ ಭಾರತ ವಿಶ್ವ ಕಪ್ ಗೆದ್ದಾಗ ಅವರು ಮೈದಾನದಲ್ಲಿ ಪಂದ್ಯ ವೀಕ್ಷಿಸಿದ್ದರಂತೆ.

ಇತ್ತೀಚೆಗೆ ನಡೆದ ಬಾಂಗ್ಲಾ ವಿರುದ್ದದ ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದಾರೆ.

— anand mahindra (@anandmahindra) July 2, 2019

ಮಗುವಿನ ಹೆಸರಿನಲ್ಲಿ ಪ್ರಯಾಣಿಕರ ಹೃದಯ ಗೆದ್ದ ತಾಯಿ

Posted: 04 Jul 2019 07:25 AM PDT

ವಿಮಾನದಲ್ಲಿ ಚಿಕ್ಕ ಮಕ್ಕಳೊಂದಿಗೆ ದೂರ ಪ್ರಯಾಣ ಅನ್ನೋದು ದೊಡ್ಡ ಸವಾಲು. ಮಕ್ಕಳು ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತವೆ. 4 ತಿಂಗಳ ಮಗುವಿನೊಂದಿಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ ಬೆಳೆಸಿದ ಓರ್ವ ತಾಯಿ, ಮಗುವಿನ ಕಿರಿಕಿರಿಯನ್ನು ಊಹಿಸಿ 200 ಸಿಹಿಯ ಪೊಟ್ಟಣಗಳು ಮತ್ತು ಇಯರ್ ಪ್ಲೆಗ್ ಗಳನ್ನು ಸಹ ಪ್ರಯಾಣಿಕರಿಗೆ ಹಂಚಿ ಎಲ್ಲರ ಹೃದಯ ಗೆದ್ದಿದ್ದಾಳೆ.

ಸಹ ಪ್ರಯಾಣಿಕರೊಬ್ಬರು ಮಗು, ತಾಯಿ ಹಾಗು ಸಿಹಿ ಹಂಚುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಮಗುವಿನ ತಾಯಿ ಸಿಹಿ ಪೊಟ್ಟಣದ ಮೇಲೆ ಪುಟ್ಟ ಬರಹ ಬರೆದಿದ್ದಳು. ಆ ಮೂಲಕ ಸಹ ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದ್ದಳು.

“ಹಲೋ…..ನಾನು ಜುನ್ವೊ. ನನಗೆ ನಾಲ್ಕು ತಿಂಗಳು ವಯಸ್ಸು. ಇಂದು ನಾನು ನನ್ನ ಚಿಕ್ಕಮ್ಮಳನ್ನು ನೋಡಲು ನನ್ನ ತಾಯಿ ಮತ್ತು ಅಜ್ಜಿಯೊಂದಿಗೆ ಯುಎಸ್ ಗೆ ತೆರಳುತ್ತಿದ್ದೇನೆ. ನಾನು ಸ್ವಲ್ಪ ಹೆದರುತ್ತೇನೆ. ಯಾಕೆಂದ್ರೆ ಇದು ನನ್ನ ಜೀವನದ ಮೊದಲ ವಿಮಾನ ಪ್ರಯಾಣ. ಅಂದ್ರೆ ನಾನು ಅಳಬಹುದು ಅಥವಾ ಗಲಾಟೆ ಮಾಡಬಹುದು. ನಾನು ಯಾವುದೇ ಭರವಸೆ ನೀಡುವುದಿಲ್ಲ. ಸಾಧ್ಯವಾದಷ್ಟು ನಾನು ಸದ್ದಿಲ್ಲದೆ ಹೋಗಲು ಪ್ರಯತ್ನಿಸುತ್ತೇನೆ. ದಯವಿಟ್ಟು ಕ್ಷಮಿಸಿ. ಆದ್ದರಿಂದ ನನ್ನ ತಾಯಿ ಗುಡಿ ಚೀಲ ಸಿದ್ದಪಡಿಸಿದ್ದು, ಅದರಲ್ಲಿ ಮಿಠಾಯಿ ಮತ್ತು ಇಯರ್ ಪ್ಲೆಗ್ ಗಳಿವೆ. ನನ್ನಿಂದ ಗದ್ದಲ ಆದ ಸಂದರ್ಭದಲ್ಲಿ ದಯವಿಟ್ಟು ಆ ವಸ್ತುಗಳನ್ನು ಬಳಸಿ, ನಿಮ್ಮ ಪ್ರವಾಸ ಆನಂದಿಸಿ. ಧನ್ಯವಾದಗಳು.” ಈ ಭಾವನಾತ್ಮಕ ಮನವಿ ಎಲ್ಲರ ಹೃದಯ ಗೆಲ್ತು.

On a Ten hour flight from Seoul Korea to San Francisco, a mother handed out more than 200 goodie bags filled with candy…

Posted by Dave Corona on Tuesday, February 12, 2019

ತಂಗಳನ್ನ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ….?

Posted: 04 Jul 2019 07:21 AM PDT

ಬೆಳಗ್ಗೆ ಎದ್ದು ಮುಖ ತೊಳೆದು, ಮುಂಜಾನೆಯ ನಿತ್ಯಕರ್ಮ ಮುಗಿಸಿದ ಮೇಲೆ ಹಳ್ಳಿಗಾಡಿನ ಅದರಲ್ಲೂ ರೈತಾಪಿ ಜನರು ತಂಗಳನ್ನು ಉಣ್ಣುತ್ತಾರೆ.

ರಾತ್ರಿ ಉಳಿದ ಅನ್ನಕ್ಕೆ ಉಪ್ಪಿನಕಾಯಿ ಇಲ್ಲವೇ ಚಟ್ನಿಪುಡಿ ಅಥವಾ ರಾತ್ರಿಯ ಸಾಂಬಾರಿನಲ್ಲಿ ಒಂದೆರಡು ಮುದ್ದೆ ತಿನ್ನುತ್ತಾರೆ. ಉಳಿದ ಅನ್ನಕ್ಕೆ ಮೊಸರು ಇಲ್ಲವೇ ಮಜ್ಜಿಗೆ ಹಾಕಿಕೊಂಡು ಹಸಿಮೆಣಸು ಕಿವುಚಿ ಊಟ ಮಾಡುತ್ತಾರೆ.

ಹೀಗೆ ತಿನ್ನುವವರು ಇಡೀ ದಿನ ಉತ್ಸಾಹದಿಂದ, ಶಕ್ತಿವಂತರಾಗಿ ಇರುತ್ತಾರಂತೆ. ಯಾಕೆಂದರೆ……

ತಂಗಳನ್ನದಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಐರನ್, ವಿಟಮಿನ್ ಗಳು 15 ಪಟ್ಟು ಹೆಚ್ಚು ಇರುತ್ತದಂತೆ. ಈರುಳ್ಳಿ, ಹಸಿಮೆಣಸು ಕಿವುಚಿ ಮೊಸರಿನೊಡನೆ ತಿಂದರೆ ಶರೀರದ ಉಷ್ಣ, ನೋವುಗಳೆಲ್ಲಾ ಶಮನವಾಗುತ್ತವೆ.

ಶರೀರಕ್ಕೆ ಅಗತ್ಯದ ಶಕ್ತಿಯನ್ನು ನೀಡುತ್ತದೆ. ದೇಹವು ಒತ್ತಡಕ್ಕೆ ಸಿಲುಕದಂತೆ ಕಾಪಾಡುತ್ತದೆ.

ಅಷ್ಟೇ ಅಲ್ಲ, ರಾತ್ರಿ ಉಳಿದ ಅನ್ನಕ್ಕೆ ಸ್ವಲ್ಪ ಹಾಲು, ಸ್ವಲ್ಪ ಈರುಳ್ಳಿ ಚೂರುಗಳು, ಶುಂಠಿ ಚೂರು, ಕರಿಬೇವು, ಜೀರಿಗೆ ಹಾಕಿ, ಅದಕ್ಕೆ ತುಸು ಮೊಸರು ಬೆರೆಸಿ ಕಲಸಿ ತಿಂದರೆ ಹೊಟ್ಟೆಯ ಎಲ್ಲಾ ಅನಾರೋಗ್ಯಗಳು ಇಲ್ಲವಾಗುತ್ತವೆ.

ಇದರಿಂದ ಎಲುಬುಗಳು ಬಲಗೊಳ್ಳುತ್ತವೆ. ತಂಗಳನ್ನ ಒಳ್ಳೆಯದು ಎಂದು ತಿಳಿದೂ, ಹಾಗೆಯೇ ಇಟ್ಟುಬಿಟ್ಟರೆ ಹಾಳಾಗಿ ಹೋಗುತ್ತದೆ. ಹಾಗಾಗಿ ಬೆಳಗ್ಗೆ ಬೇಗನೆ ತಿಂದು ಮುಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಮಗು ಯಾರ ಹಾಗಿದ್ದರೆ ಆರೋಗ್ಯವಾಗಿರುತ್ತೆ…?

Posted: 04 Jul 2019 06:50 AM PDT

ಮಗು ಹುಟ್ಟಿದೊಡನೆ ಯಾರ ಹಾಗಿದೆ ಅನ್ನೋದು ದೊಡ್ಡ ಕುತೂಹಲ. ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೀಗೆ ಕುಟುಂಬದವರೆಲ್ಲ ತನ್ನ ಹಾಗಿದೆಯಾ ಅಂತಾ ಹೋಲಿಕೆ ಮಾಡಿಕೊಳ್ಳುತ್ತಾರೆ.

ಆದ್ರೆ ಇಲ್ಲೊಂದು ಇಂಟೆರೆಸ್ಟಿಂಗ್ ವಿಷಯವಿದೆ. ಮಗು ಅಪ್ಪನಂತಿದ್ದರೆ ಅದು ಇನ್ನಷ್ಟು ಆರೋಗ್ಯವಂತವಾಗಿರುತ್ತೆ ಅನ್ನೋದು ಸಂಶೋಧನೆಯಿಂದ ಬಹಿರಂಗಪಟ್ಟಿದೆ.

ಹೌದು….ಹುಟ್ಟಿದ ಮಗು ನೋಡೋದಿಕ್ಕೆ ಅಪ್ಪನ ಹಾಗಿದ್ದರೆ ಆ ತಂದೆಗೂ ಖುಷಿ. ಅಲ್ಲದೇ ಅಂಥ ಮಗು ಒಂದು ವರ್ಷದವರೆಗೆ ತಂದೆಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತದೆ. ಅಲ್ಲದೇ ತಂದೆಯೂ ಸಹ ತನ್ನ ಹೋಲಿಕೆ ಇರುವ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ.

ಇದರಿಂದ ಮಗು ಹೆಚ್ಚು ಆರೋಗ್ಯವಂತವಾಗಿರುತ್ತದೆ ಎನ್ನುತ್ತೆ ಹೊಸ ಸಂಶೋಧನೆ. ಹೆಲ್ತ್ ಎಕಾನಾಮಿಕ್ಸ್ ಜರ್ನಲ್  ಇದನ್ನು ಪ್ರಕಟಿಸಿದ್ದು, ಈ ಸಂಶೋಧನೆಯಲ್ಲಿ ಸುಮಾರು 715 ಕುಟುಂಬಗಳನ್ನು ಅಧ್ಯಯನ ನಡೆಸಲಾಗಿದೆ.

ಖಾಸಗಿ ಅಂಗದ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ʼಟಿಪ್ಸ್ʼ

Posted: 04 Jul 2019 06:37 AM PDT

ಸೌಂದರ್ಯ ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರೂ ಆಸಕ್ತಿ ಹೊಂದಿರುತ್ತಾರೆ. ಮುಖ, ಕೈ, ಕಾಲಿನ ಅಂದ ಹೆಚ್ಚಿಸಿಕೊಳ್ಳಲು ಬ್ಯೂಟಿಪಾರ್ಲರ್ ಮೊರೆ ಹೋಗ್ತೇವೆ. ಆದ್ರೆ ಖಾಸಗಿ ಅಂಗದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಸುಲಭವಲ್ಲ.

ಸಾಮಾನ್ಯವಾಗಿ ಖಾಸಗಿ ಅಂಗಗಳನ್ನು ಸ್ವಚ್ಛಗೊಳಿಸಿಕೊಳ್ತೇವೆ ನಿಜ. ಆದ್ರೆ ಖಾಸಗಿ ಅಂಗ ಅನೇಕ ಕಾರಣಕ್ಕೆ ಕಪ್ಪಾಗಿರುತ್ತದೆ. ಹೇರ್ ರಿಮೂವ್ ಕ್ರೀಮ್,‌ ಬಿಗಿ ಬಟ್ಟೆ, ಚರ್ಮದ ಸೋಂಕು ಹಾಗೂ ವಯಸ್ಸಾದಂತೆ ಹೆಚ್ಚಾಗುವ ತೂಕ ಇವೆಲ್ಲವೂ ಕಾರಣವಾಗುತ್ತದೆ. ಕೆಲವೊಮ್ಮೆ ಖಾಸಗಿ ಅಂಗದ ಕಪ್ಪು ಕಲೆ ಸಂಭೋಗದ ವೇಳೆ ಮುಜುಗರವನ್ನುಂಟು ಮಾಡುತ್ತದೆ.

ಖಾಸಗಿ ಅಂಗದ ಕಪ್ಪನ್ನು ಹೋಗಲಾಡಿಸಲು ಮನೆ ಮದ್ದನ್ನು ಬಳಸಬಹುದು. ಜೇನುತುಪ್ಪ ಹಾಗೂ ತೆಂಗಿನ ಎಣ್ಣೆ ನಿಮಗೆ ನೆರವಾಗುತ್ತದೆ. ಒಂದು ಚಮಚ ತೆಂಗಿನ ಎಣ್ಣೆ ಹಾಗೂ 1 ಚಮಚ ಜೇನು ತುಪ್ಪವನ್ನು ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ. ಅದನ್ನು ಖಾಸಗಿ ಅಂಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಸ್ವಚ್ಚಗೊಳಿಸಿ. ಆ ನಂತ್ರ ರೋಸ್ ವಾಟರ್ ಹಚ್ಚಿ.

ಸೌತೆಕಾಯಿ ರಸ ತೆಗೆದು ಅದನ್ನು ಅಲೋವೇರಾ ರಸಕ್ಕೆ ಮಿಕ್ಸ್ ಮಾಡಿ ಹಚ್ಚಿಕೊಳ್ಳುತ್ತ ಬನ್ನಿ. ಇದು ಕೂಡ ಖಾಸಗಿ ಅಂಗವನ್ನು ಬೆಳ್ಳಗೆ ಮಾಡುತ್ತದೆ.

ಆಲೂಗಡ್ಡೆ ಕತ್ತರಿಸಿ ಅದನ್ನು ವೃತ್ತಾಕಾರದಲ್ಲಿ ಖಾಸಗಿ ಅಂಗಕ್ಕೆ ಮಸಾಜ್ ಮಾಡಿ. ಇದು ಕೂಡ ಬ್ಲೀಚ್ ನಂತೆ ಕೆಲಸ ಮಾಡುತ್ತದೆ.

ಒತ್ತಡದ ಕೆಲಸಗಳ ಮಧ್ಯ ‘ಸಂತಸ’ದಿಂದಿರಲು ಇಲ್ಲಿವೆ ಸರಳ ಸೂತ್ರ

Posted: 04 Jul 2019 06:13 AM PDT

ಒತ್ತಡದ ಕೆಲಸ, ಜೀವನ ಶೈಲಿ ಮೊದಲಾದವು ಉತ್ಸಾಹವನ್ನೇ ಕುಗ್ಗಿಸುತ್ತವೆ. ಜೊತೆಗೆ ಏಕತಾನತೆಯ ಜೀವನವೂ ಬೋರ್ ಎನಿಸುತ್ತದೆ. ಒತ್ತಡದ ಬದುಕಿನಿಂದ ಹೊರ ಬರುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಸೂತ್ರ ಅನುಸರಿಸಿದಲ್ಲಿ ನೀವು ಆನಂದದಿಂದ ಇರಬಹುದು.

ಮರೆವಿನಿಂದಾಗಿಯೇ ಅನೇಕರು ಬೇಸರಪಟ್ಟುಕೊಳ್ತಾರೆ. ಮರೆತು ಮಾಡಬಾರದ್ದನ್ನು ಮಾಡುತ್ತಾರೆ. ನೀವು ಮಾಡಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿಕೊಂಡು ಅವುಗಳನ್ನು ನೋಡಿದಾಗ ನಿಮಗೆ ನಿಮ್ಮ ಜವಾಬ್ದಾರಿ ಏನೆಂಬುದು ತಿಳಿಯುತ್ತದೆ. ಇದರೊಂದಿಗೆ ನೀವು ಯಾವ ಕೆಲಸ ಮಾಡಬಾರದು ಎಂಬುದರ ಬಗ್ಗೆಯೂ ಗಮನಹರಿಸಿ. ಅದರಿಂದ ತಪ್ಪು ಮಾಡುವುದು ತಪ್ಪುತ್ತದೆ.

ನಿಮ್ಮ ದುಡಿಮೆಯಲ್ಲಿ ಸ್ವಲ್ಪವನ್ನಾದರೂ ಉಳಿತಾಯ ಮಾಡಿ. ಇದರಿಂದ ಕಷ್ಟಕಾಲದಲ್ಲಿ ಅನುಕೂಲವಾಗುತ್ತದೆ. ಇನ್ನೊಬ್ಬರ ಮುಂದೆ ಕೈ ಚಾಚುವುದು ತಪ್ಪುತ್ತದೆ. ಸ್ವಚ್ಛತೆಗೆ ಒತ್ತು ಕೊಡಿ. ನಿಮ್ಮ ಸುತ್ತಲಿನ ಪರಿಸರ ಅಂದವಾಗಿದ್ದರೆ, ಮನಸ್ಸು ಖುಷಿಯಾಗುತ್ತದೆ. ಯಾರಾದರೂ ತಪ್ಪು ಮಾಡಿದಾಗ ಕ್ಷಮಿಸುವ, ತಿಳಿ ಹೇಳುವ ಗುಣ ನಿಮ್ಮಲ್ಲಿರಲಿ, ಸುಮ್ಮನೆ ರೇಗಬೇಡಿ. ಸಮಯ ವ್ಯರ್ಥ ಮಾಡದೇ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಮುಂದಾಗಿ.

ಇದರೊಂದಿಗೆ ಬಿಡುವಿನ ವೇಳೆಯಲ್ಲಿ ಗೆಳೆಯರೊಂದಿಗೆ ಕಳೆಯಿರಿ. ಪ್ರವಾಸಕ್ಕೆ ಹೋಗಿ ಬನ್ನಿ. ಮನೆ ಮಂದಿಯ ಜೊತೆಗೆ ಬೆರೆಯಿರಿ. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ. ಇನ್ನೊಬ್ಬರ ಕಷ್ಟಕ್ಕೆ ನೆರವಾಗುವುದರಿಂದ ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಎನಿಸುತ್ತದೆ. ಯಾವಾಗಲೂ ಪಾಸಿಟಿವ್ ಆಗಿರಿ. ಗುರಿ ಯಶಸ್ಸಿನತ್ತ ಇರಲಿ. ಖುಷಿ ನಿಮ್ಮದಾಗುತ್ತದೆ.

ಯಶಸ್ಸು ಬಯಸುವವರು ಹೀಗೆ ಮಾಡಿ

Posted: 04 Jul 2019 05:24 AM PDT

ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಒಂದೇ ಸಮನೆ ಕೆಲಸ ಮಾಡಿದ್ರೆ ಸಾಲದು, ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಭಕ್ತರ ಬಾಯಲ್ಲಿ ತನ್ನ ಹೆಸರು ಬಂದ್ರೆ ಪುನೀತನಾಗ್ತಾನೆ ಈಶ್ವರ. ಹಾಗಾಗಿ ಬೋಲೇನಾಥನ ನಾಮ ಸ್ಮರಣೆ ಮಾಡುವುದು ಬಹಳ ಒಳ್ಳೆಯದು. ಯಾವದೇ ಕಷ್ಟ ಬಂದಾಗ ಈಶ್ವರನನ್ನು ಸ್ಮರಿಸಿ. ಬೆಳಿಗ್ಗೆ ಎದ್ದ ತಕ್ಷಣ ಈಶ್ವರನ ದರ್ಶನ ಮಾಡಿ ಇಲ್ಲವೆ ನಾಮ ಸ್ಮರಣೆ ಮಾಡಿ.

ಹೊಸ ಕಾರ್ಯ ಮಾಡಲು ಏಕಾದಶಿ ಒಳ್ಳೆಯ ದಿನ. ಸಾಧ್ಯವಾದ್ರೆ ಏಕಾದಶಿಯ ವೃತ ಮಾಡಿ. ಹಸಿದ ವ್ಯಕ್ತಿಗೆ ಏಕಾದಶಿಯ ದಿನ ಭೋಜನ ನೀಡಿ.

ತುಳಸಿ ವಿಷ್ಣುವಿನ ಸ್ವರೂಪವೆಂದು ಪರಿಗಣಿಸಲಾಗಿದೆ. ಯಾವ ವ್ಯಕ್ತಿ ತುಳಸಿಯ ಪೂಜೆಯನ್ನು ಭಯಭಕ್ತಿಯಿಂದ ಮಾಡ್ತಾನೋ ಆತನಿಗೆ ಯಶಸ್ಸು ಲಭಿಸುತ್ತದೆ. ಪ್ರತಿದಿನ ತುಳಸಿಗೆ ನೀರು ಹಾಕಿ ಪೂಜೆ ಮಾಡಬೇಕು.

ಹಿಂದು ಧರ್ಮದಲ್ಲಿ ಆಕಳನ್ನು ದೇವರೆಂದು ಪರಿಗಣಿಸಲಾಗಿದೆ. ಪ್ರತಿದಿನ ಮೊದಲ ರೊಟ್ಟಿಯನ್ನು ಆಕಳಿಗೆ ನೀಡಿ ನಂತರ ತಾನು ಆಹಾರ ಸೇವನೆ ಮಾಡುವ ವ್ಯಕ್ತಿಗೆ ಯಶಸ್ಸು ಹುಡುಕಿಕೊಂಡು ಬರುತ್ತದೆ.

ಮನೆಯಿಂದ ಹೊರ ಹೋಗುವಾಗ ಹಿರಿಯರ ಆಶೀರ್ವಾದ ಪಡೆದು ಹೊರಗೆ ಹೋಗುವುದು ಮಂಗಳಕರ.

6 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಮೊಬೈಲ್

Posted: 04 Jul 2019 04:20 AM PDT

ಶಿಯೋಮಿ ಭಾರತದಲ್ಲಿ ಮತ್ತೊಂದು ಅಗ್ಗದ ಮೊಬೈಲ್ ಬಿಡುಗಡೆ ಮಾಡಿದೆ. ಶಿಯೋಮಿಯ ರೆಡ್ ಮಿ 7ಎ ಮೊಬೈಲ್ ಎರಡು ರೂಪಾಂತರದಲ್ಲಿ ಲಭ್ಯವಿದೆ. 2ಜಿಬಿ ರ್ಯಾಮ್ ಹಾಗೂ 16 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 5,999 ರೂಪಾಯಿಗೆ ಲಭ್ಯವಿದೆ. ಇನ್ನು 2ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 6,199 ರೂಪಾಯಿಗೆ ಸಿಗಲಿದೆ.

ಗ್ರಾಹಕರು ರೆಡ್ ಮಿ 7ಎ ಸ್ಮಾರ್ಟ್ಫೋನನ್ನು ಜುಲೈ 11ರ ನಂತ್ರ ಫ್ಲಿಪ್ಕಾರ್ಟ್, ಮಿ ಡಾಟ್ ಕಾಂ ಹಾಗೂ ಮಿ ಹೋಮ್ ನಲ್ಲಿ ಖರೀದಿ ಮಾಡಬಹುದಾಗಿದೆ. ಕಂಪನಿ ಭಾರತದಲ್ಲಿ ಐದನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಈ ಶುಭ ಸಂದರ್ಭದಲ್ಲಿ ರೆಡ್ ಮಿ 7ಎ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.

ಇದೇ ವೇಳೆ ಗ್ರಾಹಕರಿಗೆ ಆಫರ್ ಕೂಡ ನೀಡ್ತಿದೆ. ಜುಲೈನಲ್ಲಿ ರೆಡ್ ಮಿ 7ಎ ಸ್ಮಾರ್ಟ್ಫೋನ್ ಖರೀದಿ ಮಾಡುವ ಗ್ರಾಹಕರಿಗೆ 200 ರೂಪಾಯಿ ರಿಯಾಯಿತಿ ಸಿಗಲಿದೆ. ಅಂದ್ರೆ 2ಜಿಬಿ ರ್ಯಾಮ್ ಹಾಗೂ 16 ಜಿಬಿ ಸ್ಟೋರೇಜ್ ಮೊಬೈಲ್ 5799 ರೂಪಾಯಿಗೆ ಹಾಗೂ 2ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಮೊಬೈಲ್ 5,999 ರೂಪಾಯಿಗೆ ಸಿಗಲಿದೆ.

ರೆಡ್ ಮಿ 7ಎ ಸ್ಮಾರ್ಟ್ಫೋನ್ ಗೆ 5.45 ಇಂಚಿನ ಡಿಸ್ಪ್ಲೇ ನೀಡಲಾಗಿದೆ. 10 ಡಬ್ಲ್ಯೂ ಚಾರ್ಜಿಂಗ್ ಜೊತೆ 4,000 mAh ಬ್ಯಾಟರಿ ನೀಡಲಾಗಿದೆ. ಬ್ಯಾಟರಿಯ ಸ್ಟ್ಯಾಂಡ್‌ಬೈ ಸಮಯ 17 ದಿನವೆಂದು ಕಂಪನಿ ಹೇಳಿದೆ. 12 ಮೆಗಾಪಿಕ್ಸಲ್ ಕ್ಯಾಮರಾ ಹಾಗೂ ಎಲ್ಫಿಗಾಗಿ 5 ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ.

OMG: ಈ ದೇಶದ ಜೈಲಿನಲ್ಲಿ ಕೈದಿಗಳೇ ಇಲ್ಲ…!

Posted: 04 Jul 2019 04:18 AM PDT

ವಿಶ್ವದಾದ್ಯಂತ ಅಪರಾಧ ಪ್ರಕರಣಗಳು ದಿನದಿನಕ್ಕೂ ಹೆಚ್ಚಾಗ್ತಿವೆ. ಕೆಲ ದೇಶಗಳಲ್ಲಿರುವ ಜೈಲಿನಲ್ಲಿ ಕೈದಿಗಳು ತುಂಬಿ ತುಳುಕುತ್ತಿದ್ದಾರೆ. ಕೈದಿಗಳಿಗೆ ಜೈಲಿನಲ್ಲಿ ಜಾಗ ಸಾಲ್ತಿಲ್ಲ. ಆದ್ರೆ ಜೈಲಿನಲ್ಲಿ ಕೈದಿಗಳೇ ಇಲ್ಲದೆ ಖಾಲಿಯಿರುವ ದೇಶವೂ ವಿಶ್ವದಲ್ಲಿದೆ ಅಂದ್ರೆ ನೀವು ನಂಬಲೇಬೇಕು.

ಆಶ್ಚರ್ಯವಾದ್ರೂ ಇದು ಸತ್ಯ. ನೆದರ್ಲ್ಯಾಂಡ್ ಜೈಲಿನಲ್ಲಿ ಕೈದಿಗಳೇ ಇಲ್ಲ. ಜೈಲು ಖಾಲಿ ಹೊಡೆಯುತ್ತಿದೆ. ಅಲ್ಲಿನ ಜನಸಂಖ್ಯೆ 1 ಕೋಟಿ 71 ಲಕ್ಷ 32 ಸಾವಿರಕ್ಕೂ ಹೆಚ್ಚು. ಆಶ್ಚರ್ಯಕರ ಸಂಗತಿಯೆಂದರೆ, ನೆದರ್ಲ್ಯಾಂಡ್ ನ ಜೈಲಿನಲ್ಲಿ ಕಂಬಿಗಳ ಹಿಂದೆ ಅಪರಾಧಿಗಳೇ ಇಲ್ಲ. 2013ರಲ್ಲಿ 19 ಕೈದಿಗಳಿದ್ದರು. 2018ರಲ್ಲಿ ಜೈಲಿನಲ್ಲಿ ಒಬ್ಬ ಕೈದಿಯೂ ಇಲ್ಲ.

ಪ್ರತಿ ವರ್ಷ ದೇಶದಲ್ಲಿ ಶೇಕಡಾ 0.9 ರಷ್ಟು ಅಪರಾಧ ಪ್ರಮಾಣ ಇಳಿಕೆಯಾಗಲಿದೆ ಎಂದು ಸಚಿವಾಲಯ 2016 ರಲ್ಲಿ ವರದಿ ನೀಡಿತ್ತು. ದೇಶದ ಜೈಲುಗಳನ್ನು ಮುಚ್ಚಲು ನಿರ್ಧಾರ ತೆಗೆದುಕೊಳ್ಳಲಾಗ್ತಿದೆ. ಅತ್ಯಂತ ಸುರಕ್ಷಿತ ದೇಶ ಇದು ಎಂಬುದು ಇದ್ರಿಂದ ಸಾಬೀತಾಗ್ತಿದೆ. ಆದ್ರೆ ಜೈಲಿನ ಬಾಗಿಲು ಮುಚ್ಚಿದ್ರೆ ನಿರುದ್ಯೋಗ ಸಮಸ್ಯೆ ಕಾಡಲಿದೆ. ಕೆಲಸ ಮಾಡ್ತಿರುವ 2 ಸಾವಿರ ಮಂದಿಯನ್ನು ಬೇರೆ ಕಡೆ ಶಿಫ್ಟ್ ಮಾಡುವ ಪ್ಲಾನ್ ಇದೆ.

ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಅಭ್ಯರ್ಥಿಗಳ ಹುಡುಕಾಟ

Posted: 04 Jul 2019 03:46 AM PDT

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಅದರ ಪತ್ರವನ್ನು ಸಾರ್ವಜನಿಕರಿಗೆ ಬಿಡುಗಡೆಗೊಳಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇತರೆ ಅಭ್ಯರ್ಥಿಗಳ ಹುಡುಕಾಟ ನಡೆದಿದೆ.

ಮೂಲಗಳ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಹಾರಾಷ್ಟ್ರದ ಸುಶೀಲ್‌ಕುಮಾರ್ ಶಿಂಧೆ ಇಲ್ಲವೇ ಮಲ್ಲಿಕಾರ್ಜುನ ಖರ್ಗೆ ಇವರಿಬ್ಬರಲ್ಲಿ ಯಾರಾದರೊಬ್ಬರು ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಇದಕ್ಕಾಗಿ ಸಮಿತಿ ರಚಿಸಲಾಗಿದ್ದು ಅದರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಇರಲಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಗಾಂಧಿ ಪರಿವಾರ ಬಿಟ್ಟು ಬೇರೆಯವರು ಈ ಸ್ಥಾನಕ್ಕೆ ಆಯ್ಕೆಯಾದರೆ ನೆಹರು-ಗಾಂಧಿ ಪರಿವಾರದವರು ಬಿಟ್ಟು ಈ ಸ್ಥಾನಕ್ಕೆ ಆಯ್ಕೆಯಾದ ಮೂರನೇ ವ್ಯಕ್ತಿಯಾಗುತ್ತಾರೆ. ಈ ಹಿಂದೆ ಪಿ.ವಿ. ನರಸಿಂಹರಾವ್ ಹಾಗೂ ಸೀತಾರಾಮ್ ಕೇಸರಿ ಈ ಸ್ಥಾನ ಅಲಂಕರಿಸಿದ್ದಾರೆ.

ವಾದ್ಯದ ಮೂಲಕ ಕಂದಾಯ ಕಟ್ಟದವರ ಮಾನ ʼಹರಾಜುʼ

Posted: 04 Jul 2019 03:45 AM PDT

ಗೃಹ ಕಂದಾಯ ಪಾವತಿ ಮಾಡದೇ ಇರುವವರಿಗೆ ವಿಶಿಷ್ಟ ರೀತಿಯಲ್ಲಿ ಜಾಗೃತಿ ಮೂಡಿಸಲು ಮುಂದಾದ ಲಖನೌ ನಗರ ಸಭೆ(LMC), ಕಂದಾಯ ಪಾವತಿ ಮಾಡಬೇಕಾದವರ ಮನೆಗಳ ಮುಂದೆ ಡೋಲು ವಾದ್ಯ ಮೊಳಗಿಸಿ, ವಂಚಕರಿಗೆ ವಿಭಿನ್ನ ರೀತಿಯಲ್ಲಿ ಶೇಮ್‌ ಮಾಡಲೆಂದು ವಾದ್ಯಗೋಷ್ಠಿಯ ತಂಡವೊಂದನ್ನು ನೇಮಕ ಮಾಡಿಕೊಂಡಿದೆ.

ಈ ಅಭಿಯಾನಕ್ಕೆಇಲ್ಲಿನ ಇಂಡಿಯಾ ಹೊಟೆಲ್‌ ಮುಂದೆ ಬುಧವಾರ ಬೆಳಿಗ್ಗೆ ಚಾಲನೆ ನೀಡಿದೆ. ವಾದ್ಯಗೋಷ್ಠಿಯೊಂದಿಗೆ ಭದ್ರತಾ ಸಿಬ್ಬಂದಿಯೂ ಇದ್ದರು. ಇವರ ಪೈಕಿ ಒಬ್ಬರು ಕಂದಾಯ ಪಾವತಿ ಮಾಡದೇ ಇದ್ದಲ್ಲಿ ಎದುರಿಸಬೇಕಾದ ಪರಿಣಾಮಗಳ ಕುರಿತು ಎಚ್ಚರಿಕೆ ನೀಡುವ ಬ್ಯಾನರ್‌ ಹಿಡಿದಿದ್ದರು.

ಕಂದಾಯ ಪಾವತಿ ಮಾಡದೇ ಇದ್ದಲ್ಲಿ ವಾದ್ಯಗೋಷ್ಠಿ ಮುಂದುವರೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ನಡೆಯಿಂದ ಅಪಮಾನಕ್ಕೀಡಾದ ಇಂಡಿಯಾ ಹೊಟೇಲ್‌ ಮಾಲೀಕ, ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ 19 ಲಕ್ಷ ರೂ.ಗಳನ್ನು ಪಾವತಿ ಮಾಡಿದ್ದಾರೆ. ಬಾಕಿ ಇರುವ ದೊಡ್ಡ ಮಟ್ಟದ ಕಂದಾಯವನ್ನು ಪೀಕಿಸುವ ಉದ್ದೇಶದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

— ANI UP (@ANINewsUP) July 3, 2019

ಮಾವಿನ ಹಣ್ಣಿನಿಂದಾಗುವ ‘ಉಷ್ಣ’ ತಡೆಯಲು ಹೀಗೆ ಮಾಡಿ

Posted: 04 Jul 2019 03:40 AM PDT

ಕೆಲವರಿಗೆ ಮಾವಿನ ಹಣ್ಣು ಹೆಚ್ಚು ತಿಂದರೆ ದೇಹದ ಉಷ್ಣತೆ ಹೆಚ್ಚಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಕೆಲವರು ಮಾವಿನಹಣ್ಣನ್ನು ಸ್ವಲ್ಪ ಮಿತಿಯಾಗಿ ಸೇವಿಸುತ್ತಾರೆ. ಮಾವಿನ ಹಣ್ಣಿನ ಸೇವನೆಯಿಂದ ಉಷ್ಣತೆ ಬಾರದಿರಲು ಈ ಕ್ರಮವನ್ನು ಅನುಸರಿಸಿ.

* ಮಾವಿನ ಹಣ್ಣಿನ ಸೀಸನ್ ನಲ್ಲಿ ಬೇಯಿಸಿದ ಬಾರ್ಲಿ ಗಂಜಿಗೆ ಸಕ್ಕರೆ, ಹಾಲು ಅಥವಾ ಮಜ್ಜಿಗೆ ಸೇರಿಸಿ ಕುಡಿಯಿರಿ. ಪ್ರತಿದಿನ ಬೆಳಗ್ಗೆ ರಾಗಿ ಗಂಜಿ ಸೇವಿಸಿದರೂ ದೇಹ ತಂಪಾಗಿರುತ್ತದೆ.

* ಪ್ರತಿಸಲ ಮಾವಿನ ಹಣ್ಣನ್ನು ತಿಂದ ಮೇಲೆ ಅರ್ಧ ಕಪ್ ತಣ್ಣನೆಯ ಹಾಲು ಕುಡಿಯಿರಿ. ಸಾಧ್ಯವಾದಷ್ಟು ಊಟ ಮಾಡಿದ ನಂತರ ಮಾವಿನ ಹಣ್ಣು ತಿನ್ನಿ.

* ಮಾವಿನಹಣ್ಣಿಗೆ ಬಾಳೆಹಣ್ಣು ಮತ್ತು ಜೇನುತುಪ್ಪ ಸೇರಿಸಿ ರಸಾಯನ ಮಾಡಿ ಸೇವಿಸಿದರೆ ದೇಹ ತಂಪಾಗುತ್ತದೆ.

* ರತ್ನಗಿರಿ ಅಪೂಸ್ ಮಾವಿನ ಹಣ್ಣಿನ ರಸಕ್ಕೆ ಹಾಲು, ಸಕ್ಕರೆ ಅಥವಾ ಪುಡಿ ಬೆಲ್ಲ, ಏಲಕ್ಕಿ ಪುಡಿ ಸೇರಿಸಿ ತುಪ್ಪ ಮತ್ತು ಚಪಾತಿ ಜೊತೆ ತಿಂದರೆ ಉಷ್ಣತೆ ಬಾಧಿಸದು.

* ಬೇಯಿಸಿ ತಣ್ಣಗೆ ಮಾಡಿದ ಬಾರ್ಲಿ ನೀರಿಗೆ ಮಾವಿನ ಹಣ್ಣಿನ ರಸ, ಸಕ್ಕರೆ ಅಥವಾ ಬೆಲ್ಲದ ಪುಡಿ ಸೇರಿಸಿ ಸವಿದರೆ ಉಷ್ಣತೆಯಾಗದು.

* ದಿನಕ್ಕೊಮ್ಮೆ ಒಂದು ಲೋಟ ನೀರು ಮಜ್ಜಿಗೆಗೆ ಒಂದು ಚಿಟಿಕೆ ಉಪ್ಪು ಹಾಕಿ ಕುಡಿದರೆ ಮಾವಿನಹಣ್ಣಿನ ಉಷ್ಣತೆ ಸಂಬಂಧಿ ತೊಂದರೆ ಕಾಣಿಸಿಕೊಳ್ಳುವುದಿಲ್ಲ.

* ದಿನಕ್ಕೊಂದು ಪಚ್ಚ ಬಾಳೆಹಣ್ಣು ತಿಂದರೆ ದೇಹದ ಉಷ್ಣತೆ ಸಮವಾಗಿರುತ್ತದೆ. ಸೌತೆಕಾಯಿ, ಹೆಸರುಬೇಳೆ, ಹೆಸರುಕಾಳುಗಳನ್ನು ಹೆಚ್ಚು ಉಪಯೋಗಿಸಿದರೂ ಮಾವು ತಿನ್ನಲು ಅಡ್ಡಿಯಿಲ್ಲ.

* ಬೇಯಿಸಿದ ಮಾವಿನಕಾಯಿಯ ತಿರುಳಿಗೆ ಬೆಲ್ಲ ಅಥವಾ ಸಕ್ಕರೆ, ಸ್ವಲ್ಪ ಉಪ್ಪು, ಜೀರಿಗೆ ಪುಡಿ ಸೇರಿಸಿ ಮಾಡಿದ ಪಾನಕ ದೇಹಕ್ಕೆ ತಂಪು ನೀಡುತ್ತದೆ.

* ನೇರಳೆ ಹಣ್ಣು ಅಥವಾ ನೇರಳೆ ಹಣ್ಣಿನ ಶರಬತ್ ಮಾಡಿ ಕುಡಿದರೂ ಮಾವಿನ ಹಣ್ಣು ತಿಂದಾಗ ಬರುವ ಹೊಟ್ಟೆಯ ತೊಂದರೆಗಳು ನಿವಾರಣೆಯಾಗುತ್ತವೆ.

ಧೋನಿ ಬಗ್ಗೆ ಮಹತ್ವದ ವಿಚಾರ ಬಿಚ್ಚಿಟ್ಟ ಟೀಂ ಇಂಡಿಯಾ ಆಟಗಾರ

Posted: 04 Jul 2019 03:36 AM PDT

ವಿಶ್ವಕಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರದರ್ಶನದ ಬಗ್ಗೆ ಅನೇಕರು ಪ್ರಶ್ನೆ ಎತ್ತುತ್ತಿದ್ದಾರೆ. ಧೋನಿ ಮೊದಲಿನಂತೆ ಮ್ಯಾಶ್ ಫಿನಿಶರ್ ಅಲ್ಲ ಎನ್ನಲಾಗ್ತಿದೆ. ಆದ್ರೆ ತಂಡದಲ್ಲಿರುವ ಆಟಗಾರರು ಮಾತ್ರ ಧೋನಿ ಬಿಟ್ಟುಕೊಡಲು ಸಿದ್ಧವಿಲ್ಲ. ನಾಯಕ ಕೊಹ್ಲಿ, ಉಪನಾಯಕ ಶರ್ಮಾ ಮಾತ್ರ ಅಲ್ಲ ಇನ್ನೂ ಅನೇಕ ಆಟಗಾರರು ಧೋನಿ ಆಟವನ್ನು ಹೊಗಳಿದ್ದಾರೆ.

ಐ ಎ ಎನ್ ಎಸ್ ಜೊತೆ ಮಾತನಾಡಿದ ಟೀಂ ಇಂಡಿಯಾ ಆಟಗಾರರೊಬ್ಬರು, ವಿಶ್ವಕಪ್ ನಲ್ಲಿ ಭಾರತ ಗೆಲುವು ಸಾಧಿಸಲು ಧೋನಿ ಅವಶ್ಯಕತೆಯಿದೆ ಎಂದಿದ್ದಾರೆ. ಧೋನಿ ಅಣ್ಣನ ಬಳಿ ಪ್ರತಿಯೊಂದು ಪ್ರಶ್ನೆಗೆ ಉತ್ತರವಿದೆ. ಧೋನಿ ನಿಧಾನಗತಿ ಆಟವಾಡ್ತಾರೆಂದು ಜನರು ಹೇಳ್ತಿದ್ದಾರೆ. ಆದ್ರೆ ಇದಕ್ಕೂ ಒಂದು ಕಾರಣವಿದೆ.

ಧೋನಿ ಮೈದಾನಕ್ಕೆ ಬಂದಾಗ ಕೆಳ ಕ್ರಮಾಂಕದ ಬ್ಯಾಟ್ಸ್ ಮೆನ್ ಅವ್ರ ಜೊತೆಗಿರ್ತಾರೆ. ನಾವು ಇಂಗ್ಲೆಂಡ್ ತಂಡವಲ್ಲ. ನಮ್ಮ ತಂಡದಲ್ಲಿ ಎಲ್ಲರೂ ಬ್ಯಾಟ್ಸ್ ಮೆನ್ ಗಳಲ್ಲ. ಧೋನಿ ಮೈದಾನಕ್ಕೆ ಬಂದಾಗ ಇನ್ನೊಬ್ಬ ಬ್ಯಾಟ್ಸ್ ಮೆನ್ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಮುಕ್ತವಾಗಿ ಆಡುವ ಸ್ವಾತಂತ್ರ ಅವರಿಗಿರುವುದಿಲ್ಲ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಧೋನಿ ಔಟ್ ಆಗ್ತಿದ್ದಂತೆ ಕೊನೆ ಓವರ್ ನಲ್ಲಿ ಎರಡು ವಿಕೆಟ್ ಬಿತ್ತು. ಇದು ಉತ್ತಮ ಸಾಕ್ಷಿ ಎಂದು ಆಟಗಾರ ಹೇಳಿದ್ದಾರೆ.

ಆಟಗಾರನ ಪ್ರಕಾರ, ಧೋನಿ ಬಳಿ ಪ್ರತಿಯೊಂದು ಪ್ರಶ್ನೆಗೂ ಉತ್ತರವಿದೆಯಂತೆ. ಪ್ಲಾನ್ ಎ ಕೆಲಸ ಮಾಡದೆ ಹೋದ್ರೆ ಪ್ಲಾನ್ ಬಿ, ಸಿ, ಡಿ ಹೀಗೆ ಅನೇಕ ಪ್ಲಾನ್ ಗಳಿರುತ್ತವೆಯಂತೆ. ಹೆಸರು ಮುಚ್ಚಿಡುವ ಷರತ್ತಿನ ಮೇಲೆ ಮಾತನಾಡಿದ ಆಟಗಾರ ಧೋನಿ, ಫಿಲ್ಡಿಂಗ್ ವಿಚಾರದಲ್ಲಿ ಉಪನಾಯಕ ಎಂದಿದ್ದಾರೆ. ಆಟಗಾರರಿಗೆ ಕ್ಷಣ ಕ್ಷಣಕ್ಕೂ ಮಾಹಿತಿ, ಸಲಹೆ ನೀಡುವ ಧೋನಿ ಹೇಳಿಕೆ ಮೇರೆಗೆ ಕೊಹ್ಲಿ ಬೌಂಡರಿ ಲೈನ್ ನಲ್ಲಿ ಫೀಲ್ಡಿಂಗ್ ಮಾಡ್ತಾರೆ ಎಂದಿದ್ದಾರೆ.

ಜೈಲಿನಲ್ಲಿದ್ದ ಆರೋಪಿಯ ಪತ್ನಿ ಜೊತೆ ಪ್ರೇಮ ಸಂಬಂಧ ದುಬಾರಿಯಾಯ್ತು

Posted: 04 Jul 2019 03:12 AM PDT

ಉತ್ತರ ಪ್ರದೇಶದ ನೋಯ್ಡಾದಲ್ಲಿ ಜೈಲಿನಲ್ಲಿದ್ದ ಆರೋಪಿಯೊಬ್ಬನ ಪತ್ನಿ ಜೊತೆ ಸಂಬಂಧ ಬೆಳೆಸಿದ್ದು ವ್ಯಕ್ತಿಗೆ ದುಬಾರಿಯಾಗಿದೆ. ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಮೃತ ಹಿಮಾಂಶು ಸಹೋದರ, ಅಣ್ಣ ಎರಡು ದಿನಗಳಿಂದ ನಾಪತ್ತೆಯಾಗಿದ್ದಾನೆಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದಾಗ ಹಿಮಾಂಶು ಕಾರ್ ಪತ್ತೆಯಾಗಿತ್ತು. ತನಿಖೆ ಚುರುಕುಗೊಳಿಸುತ್ತಿದ್ದಂತೆ ಜೈಲಿನಲ್ಲಿರುವ ಸುರೇಶ್ ಎಂಬಾತನ ಪತ್ನಿ ಜೊತೆ ಹಿಮಾಂಶು ಸಂಬಂಧ ಹೊಂದಿದ್ದ ಎಂಬುದು ಗೊತ್ತಾಗಿದೆ.

ಸುರೇಶ್ ಜೈಲಿನಿಂದ ಬಿಡುಗಡೆ ಹೊಂದಿದ್ದನಂತೆ. ಪತ್ನಿ ಬೇರೆಯವನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆಂಬುದು ಗೊತ್ತಾಗ್ತಿದ್ದಂತೆ ಪ್ರೇಮಿ ಹತ್ಯೆಗೆ ಸ್ಕೆಚ್ ಹಾಕಿದ್ದಾನೆ. ಸಹೋದರನ ಪತ್ನಿಯಿಂದ ಹಿಮಾಂಶುಗೆ ಕರೆ ಮಾಡಿ, ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹತ್ಯೆ ಮಾಡಿದ್ದಾನೆ.

ಮೋದಿಗೆ ಶುಭ ಕೋರಲು 1100 ಕಿಮೀ ಸೈಕಲ್‌ ಪ್ರಯಾಣ

Posted: 04 Jul 2019 02:41 AM PDT

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಭೂತಪೂರ್ವ ಜಯದೊಂದಿಗೆ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿರುವುದರಿಂದ ಬಿಜೆಪಿ‌ ಕಾರ್ಯಕರ್ತನೊಬ್ಬ ಬರೋಬ್ಬರಿ 1100 ಕಿಮೀ ಸೈಕಲ್ ಪ್ರಯಾಣ ಮಾಾಡಿ ಮೋದಿ ಹಾಗೂ ಶಾಗೆ ಶುಭಾಶಯ ತಿಳಿಸಿದ್ದಾನೆ.

ಗುಜರಾತ್‌ನ ಅಮ್ರೇಲಿಯಿಂದ ದೆಹಲಿಗೆ ಸೈಕಲ್‌ನಲ್ಲಿ ಪ್ರಯಾಣ ಮಾಡಿರುವ ವ್ಯಕ್ತಿಯ ಹೆಸರು ಕಿಮ್‌ಚಾಂದ್ ಚಂದ್ರಾಣಿ. ಲೋಕಸಭಾ ಚುನಾವಣೆಯಲ್ಲಿ 300ಕ್ಕಿಂತ ಹೆಚ್ಚು ಸೀಟು ಬಂದರೆ ಸೈಕಲ್ ನಲ್ಲಿ ಬಂದು ಶುಭಾಶಯ ಕೋರುವುದಾಗಿ ಶಪಥ ಮಾಡಿದ್ದರು. ಇದೀಗ ಈ ಮೈಲಿಗಲ್ಲು ಸಾಧಿಸಿರುವುದರಿಂದ ಈ ಸವಾರಿ ಮಾಡಿದ್ದಾರೆ.

ಅಮ್ರೇಲಿಯಿಂದ ದೆಹಲಿಗೆ ತಲುಪಲು‌ ಬರೋಬ್ಬರಿ 17 ದಿನ ತೆಗೆದುಕೊಂಡಿದ್ದಾರೆ. 17ನೇ ದಿನದ ಪ್ರಯಾಣದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಶುಭ ಕೋರಿದ್ದಾರೆ‌.

ಬಿಜೆಪಿ ಕಾರ್ಯಕರ್ತನ ಈ ಸಾಹಸವನ್ನು ಮೋದಿ ಶ್ಲಾಘಿಸಿದ್ದು, ಭೇಟಿಯಾಗಿರುವ ಫೋಟೋವನ್ನು ಟ್ವಿಟರ್ ನಲ್ಲಿ ಹಾಕಿದ್ದಾರೆ. ಈ‌ ರೀತಿಯ ನಿಷ್ಠಾವಂತ ಕಾರ್ಯಕರ್ತರೇ ಪಕ್ಷದ‌ ಬೆನ್ನೆಲುಬು ಎಂದಿದ್ದಾರೆ‌. ಇದೀಗ ಈ ಫೋಟೋಗಳು ವೈರಲ್ ಆಗಿದೆ.

— Narendra Modi (@narendramodi) July 3, 2019

ಇಂಗ್ಲೆಂಡ್ ನಲ್ಲಿ ಕೊಹ್ಲಿ – ಅನುಷ್ಕಾ ಮೋಜು, ಮಸ್ತಿ

Posted: 04 Jul 2019 02:38 AM PDT

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಖುಷಿ ವ್ಯಕ್ತಿ ಎಂದ್ರೆ ತಪ್ಪಾಗಲಾರದು. ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಟೀಂ ಸೆಮಿಫೈನಲ್ ಗೇರಿದೆ. ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೊಹ್ಲಿ ರನ್ ಮಳೆಗರೆಯುತ್ತಿದ್ದಾರೆ. ಇತ್ತ ವೈಯಕ್ತಿಕ ಜೀವನದಲ್ಲೂ ಬೊಗಸೆ ತುಂಬ ಪ್ರೀತಿ ಸಿಗ್ತಿದೆ.

ನಟಿ ಅನುಷ್ಕಾ ಶರ್ಮಾ ಕೈಹಿಡಿದಿರುವ ಕೊಹ್ಲಿ ದಾಂಪತ್ಯದಲ್ಲೂ ಖುಷಿಯಾಗಿದ್ದಾರೆ. ಬುಧವಾರ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಇಬ್ಬರು ಮೋಜು, ಮಸ್ತಿಯಲ್ಲಿರುವುದು ಸ್ಪಷ್ಟವಾಗಿ ಕಾಣ್ತಿದೆ.

ಅನುಷ್ಕಾ ಜೊತೆ ನಿಂತಿರುವ ಕೊಹ್ಲಿ ಮೂತಿಯನ್ನು ಸೊಟ್ಟದಾಗಿ ಮಾಡಿದ್ದಾರೆ. ಕೊಹ್ಲಿ ಮುಖ ನೋಡಿ ಅನುಷ್ಕಾ ನಗ್ತಿದ್ದಾರೆ. ಈ ಫೋಟೋಕ್ಕೆ 16 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಬಂದಿದೆ. ಕೊಹ್ಲಿ ಅನುಷ್ಕಾ ಜೊತೆಗಿರುವ ಇನ್ನೊಂದು ಫೋಟೋ ಹಾಕಿದ್ದಾರೆ. ಟೇಬಲ್ ಅಕ್ಕಪಕ್ಕ ಇಬ್ಬರು ನಿಂತಿದ್ದಾರೆ. ಈ ಫೋಟೋದಲ್ಲಿ ಕೊಹ್ಲಿ ಹಾಗೂ ಅನುಷ್ಕಾ ತುಂಬಾ ಖುಷಿಯಲ್ಲಿದ್ದಾರೆ. ಈ ಫೋಟೋಕ್ಕೆ ಈಗಾಗಲೇ 35 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಬಂದಿದೆ.

ವಿಶ್ವಕಪ್ ಹಿನ್ನೆಲೆಯಲ್ಲಿ ಕೊಹ್ಲಿ ಇಂಗ್ಲೆಂಡ್ ನಲ್ಲಿದ್ದರೆ ಕೆಲಸಕ್ಕೆ ಬ್ರೇಕ್ ನೀಡಿ ಅನುಷ್ಕಾ ಕೂಡ ಇಂಗ್ಲೆಂಡ್ ಗೆ ಹೋಗಿದ್ದಾರೆ. ಸಮಯ ಸಿಕ್ಕಾಗೆಲ್ಲ ಇಬ್ಬರು ಇಂಗ್ಲೆಂಡ್ ಸುತ್ತುತ್ತಿದ್ದಾರೆ.

 

ಕೇವಲ ಗಾಳಿಯನ್ನೇ ಸೇವಿಸಿ ಬದುಕ್ತಾಳಂತೆ ಈ ಯುವತಿ

Posted: 04 Jul 2019 02:35 AM PDT

ಪ್ರಾಣಿಕ್‌ ಶೈಲಿಯ ಜೀವನ ನಡೆಸುತ್ತಿರುವುದಾಗಿ ಹೇಳಿಕೊಂಡಿರುವ ಅಮೆರಿಕದ ಮಿನಸೋಟಾದ, ಮಿನ್ನಿಪೊಲೀಸ್‌ನ ಯುವತಿಯೊಬ್ಬರು ಏಕಕಾಲದಲ್ಲಿ 97 ದಿನಗಳ ಮಟ್ಟಿಗೆ ಕೇವಲ ಗಾಳಿಯನ್ನೇ ಸೇವನೆ ಮಾಡಿ ಬದುಕಿದ್ದಾಗಿ ಹೇಳಿದ್ದಾರೆ.

ಘನ ಆಹಾರದ ಬದಲಿಗೆ ಕೇವಲ ಗಾಳಿಯನ್ನೇ ಸೇವನೆ ಮಾಡಿ ಬದುಕುವುದಾಗಿ ಹೇಳಿಕೊಂಡಿರುವ 25ರ ಹರೆಯದ ಆಡ್ರಾ ಬೇರ್‌, ಅತ್ಯುತ್ತಮ ಆರೋಗ್ಯದ ಮಟ್ಟ ಸಾಧಿಸಲು ಅನೇಕ ರೀತಿಯ ಪಥ್ಯಗಳನ್ನು ಕಳೆದ ಕೆಲ ವರ್ಷಗಳಿಂದ ಪಾಲಿಸಿದ್ದಾರೆ. ಬಾಲ್ಯದಿಂದಲೇ ಆರೋಗ್ಯಕರ ಜೀವನ ಶೈಲಿಯ ಮೇಲೆ ಅಗಾಧ ಆಸಕ್ತಿ ಇಟ್ಟುಕೊಂಡಿರುವ ಆಡ್ರಾ, ಕಳೆದ ನಾಲ್ಕು ವರ್ಷಗಳಿಂದ ಶಾಖಾಹಾರಿಯಾಗಿದ್ದಾರೆ.

ಉಸಿರಾಟದ ವಿವಿಧ ಮಜಲುಗಳನ್ನು ಪ್ರತಿನಿತ್ಯ ಅಭ್ಯಸಿಸುವ ಆಡ್ರಾ, ಮಣ್ಣಿನ ಮೂಲದ ಯಾವುದೇ ಆಹಾರವನ್ನು ಅತ್ಯಲ್ಪ ಸೇವನೆ ಮಾಡಿ, ಅನೇಕ ದಿನಗಳ ಕಾಲ ಟೀ, ಹಣ್ಣಿನ ರಸ, ಹಸಿರು ರಸ ಹಾಗೂ ಎಳನೀರನ್ನೇ ಅವಲಂಬಿಸಿ ಬದುಕಿದ್ದಾಗಿಯೂ ಹೇಳಿಕೊಂಡಿದ್ದು, ಸಾಕಷ್ಟು ದಣಿದ ದಿನಗಳಲ್ಲೂ ಉತ್ಸಾಹದ ಚಿಲುಮೆಯಾಗಿರಲು ತಮ್ಮ ಈ ಜೀವನ ಶೈಲಿ ನೆರವಾಗಿದೆ ಎಂದಿದ್ದಾರೆ.

‘ಬಿಗ್ ಬಾಸ್’ ಮನೆಗೆ ನುಗ್ಗಿದ ರಿಯಲ್ ಪೊಲೀಸ್…!

Posted: 04 Jul 2019 02:32 AM PDT

Image result for Bigg Boss 3 Tamil Contestants Vanitha Vijayakumar, Meera Mithun Questioned By Copsತಮಿಳು ಅವತರಣಿಕೆಯ ಬಿಗ್ ಬಾಸ್ ಸೀಸನ್-3 ಸ್ಪರ್ಧಾಳುಗಳನ್ನು ವಿಚಾರಣೆ ಮಾಡಲು ಬಿಗ್ ಬಾಸ್ ಸೆಟ್ ಗೆ ನುಗ್ಗಿದ ಪೊಲೀಸರು, ನಟಿ ವನಿತಾ ವಿಜಯ್ ಕುಮಾರ್ ಮತ್ತು ಮೀರಾ ಮಿಥುನ್ ವಿಚಾರಣೆ ಮಾಡಿದ್ದಾರೆ.

ಬುಧವಾರದ ಟ್ರೆಂಡ್ಸ್ ಪ್ರಕಾರ ವನಿತಾ ಮತ್ತು ಮಿಥುನ್ ಅಗ್ರಸ್ಥಾನದಲ್ಲಿದ್ರು. ಹಲವು ಮಾಹಿತಿಗಳನ್ನು ಸಂಗ್ರಹಿಸುವ ಸಲುವಾಗಿ ಪೊಲೀಸರು ಬಿಗ್ ಬಾಸ್ ಮನೆಯ ಕದ ಬಡಿದಿದ್ದಾರೆ.

ಇಂಗ್ಲಿಷ್ ಪತ್ರಿಕೆಯ ವರದಿ ಪ್ರಕಾರ, ವನಿತಾ ವಿಜಯ್ ಕುಮಾರ್ ಮತ್ತು ಆನಂದ್ ರಾಜ್ ನಡುವೆ ವಿಚ್ಛೇದನ ಪ್ರಕರಣ ಅರ್ಜಿ ವಿಲೇವಾರಿಯಾಗಬೇಕಿತ್ತು. ಇದೇ ವೇಳೆ ತನ್ನ ಮಗುವನ್ನು ಮಾಜಿ ಪತಿ ಆನಂದ್ ರಾಜ್ ಮತ್ತು ಸಂಗಡಿಗರು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಿದ್ರು. ಪೊಲೀಸರ ಭೇಟಿಯ ಬಳಿಕ ವನಿತಾ ವಿಜಯ್ ಕುಮಾರ್ ನನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕಾ ಅಥವಾ ಬ್ಯಾಡ್ವ ಅನ್ನೋದರ ಬಗ್ಗೆ ಚರ್ಚೆ ನಡೆಸುತ್ತಿದೆ.

ಮತ್ತೊಂದು ಪ್ರಕರಣದಲ್ಲಿ ಆರೋಪ ಹೊತ್ತಿದ್ದ ಮೀರಾ ಮಿಥುನ್ ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ಮೀರಾ ಮಿಥುನ್, 50 ಸಾವಿರ ರೂಪಾಯಿ ವಂಚನೆ ಪ್ರಕರಣದ ಬಗ್ಗೆ ಮಾಹಿತಿ ಪಡೆದ್ರು. ಆಕೆ ಮಿಸ್ ತಮಿಳುನಾಡು ಕಾರ್ಯಕ್ರಮದಲ್ಲಿ ಅನಧಿಕೃತವಾಗಿ ಲೋಗೋ ಮತ್ತು ಶೀರ್ಷಿಕೆ ಬಳಸಿರುವ ಆರೋಪ ಇದೆ.

ಬಹಿರಂಗ ಸಭೆಯಲ್ಲೇ ಸಿಇಒ‌ ಮೇಲೆ ನೀರು ಸುರಿದ ವ್ಯಕ್ತಿ…!

Posted: 04 Jul 2019 02:17 AM PDT

ಚೀನಾದ ಸರ್ಚ್ ಇಂಜಿನ್ ದೈತ್ಯ ಬೈಡುು ವಾರ್ಷಿಕ ಸಮ್ಮೇಳನದ ವೇಳೆ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ರಾಬಿನ್ ತಲೆ ಮೇಲೆ ನೀರು ಸುರಿದ ಘಟನೆ ನಡೆದಿದೆ.

ಹೌದು, ಬುಧವಾರ ಈ ಘಟನೆ ನಡೆದಿದೆ. ವಾರ್ಷಿಕ ಕಾರ್ಯಕ್ರಮದಲ್ಲಿ ಕೃತಕ. ಬುದ್ಧಿಮತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ರಾಬಿನ್ ಅವರು ಮಾತನಾಡುತ್ತಿರುವ ವೇಳೆ ಈ ರೀತಿಯಾಗಿದ್ದು, ಅಪರಿಚಿತ ವ್ಯಕ್ತಿಯೊಬ್ಬ ವೇದಿಕೆ ಏರಿ ಕೈಯಲ್ಲಿದ್ದ ನೀರಿನ ಬಾಟಲಿಯನ್ನು ಆತನ ತಲೆ ಮೇಲೆ ಸುರಿದು, ಸುಮ್ಮನೆ ಹೊರನಡೆದಿದ್ದಾನೆ.

ಈ ಘಟನೆಯಿಂದ ರಾಬಿನ್ ಕೊಂಚ‌‌ ವಿಚಲಿತರಾದಂತೆ ಕಂಡರು. ಈ ರೀತಿ ಏಕೆ ಮಾಡಿದೆ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಆದರೆ ‌ಕೂಡಲೇ, ಸಾಧನೆಯ ಹಾದಿಯಲ್ಲಿ ಈ ರೀತಿಯ ಸಮಸ್ಯೆ ಸಹಜ ಎಂದಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದೆ.

— Thomas Skelton (@TDSkelt) July 3, 2019

ಬಾಯ್ ಫ್ರೆಂಡ್ ಸಾವಿನ ನೋವನ್ನು ಹಂಚಿಕೊಂಡ ಸಂಜಯ್ ದತ್ ಪುತ್ರಿ

Posted: 04 Jul 2019 02:15 AM PDT

ಬಾಲಿವುಡ್ ನಟ ಸಂಜಯ್ ದತ್ ಪುತ್ರಿ ತ್ರಿಶಾಲಾ ದತ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಈ ಫೋಸ್ಟ್ ನಲ್ಲಿ ಅವ್ರ ಬಾಯ್ ಫ್ರೆಂಡ್ ಸಾವನ್ನಪ್ಪಿರುವ ವಿಷ್ಯವನ್ನು ತಿಳಿಸಿದ್ದಾರೆ.

ತ್ರಿಶಾಲಾ, ಬಾಯ್ ಫ್ರೆಂಡ್ ಜೊತೆಗಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ನನ್ನ ಹೃದಯ ಒಡೆದು ಹೋಗಿದೆ. ನನಗೆ ಪ್ರೀತಿ ನೀಡಿದ್ದಕ್ಕೆ, ನನ್ನನ್ನು ರಕ್ಷಣೆ ಮಾಡಿದ್ದಕ್ಕೆ, ನನ್ನ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಧನ್ಯವಾದ. ನಾನು ಅದೃಷ್ಟ ಮಾಡಿದ್ದೆ. ನಿನ್ನನ್ನು ಭೇಟಿಯಾಗಲು. ನೀನು ನನ್ನ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತೀಯಾ ಎಂದು ತ್ರಿಶಾಲಾ ಪೋಸ್ಟ್ ಹಾಕಿದ್ದಾರೆ.

ನಾನು ನಿನ್ನನ್ನು ಸದಾ ಪ್ರೀತಿ ಮಾಡುತ್ತಿರುತ್ತೇನೆ. ಸದಾ ನಿನ್ನನ್ನು ನೆನಪಿಸಿಕೊಳ್ತೇನೆ ಎಂದು ಪೋಸ್ಟ್ ಹಾಕಿದ್ದಾಳೆ. ಆಕೆ ಬಾಯ್ ಫ್ರೆಂಡ್ ಜೂನ್ 2ರಂದು ಸಾವನ್ನಪ್ಪಿದ್ದಾನಂತೆ. ಆತನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಕೆಲ ತಿಂಗಳ ಹಿಂದೆ ಇನ್ಸ್ಟ್ರಾಗ್ರಾಮ್ ನಲ್ಲಿ ತ್ರಿಶಾಲಾ ಫೋಟೋಗಳನ್ನು ಹಂಚಿಕೊಂಡಿದ್ದಳು. ಆಗ ತ್ರಿಶಾಲಾ ಡೇಟಿಂಗ್ ವಿಷ್ಯ ಸುದ್ದಿಯಾಗಿತ್ತು. ಇಟಲಿ ಮೂಲದ ವ್ಯಕ್ತಿಯನ್ನು ತ್ರಿಶಾಲಾ ಪ್ರೀತಿ ಮಾಡ್ತಿದ್ದಾಳೆನ್ನಲಾಗಿತ್ತು.

 

ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ಶ್ವಾನದ ಸಾಹಸ ಪ್ರದರ್ಶನ

Posted: 04 Jul 2019 01:58 AM PDT

ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ಎರಡು ರೋಪ್‌ಗಳ ಮೇಲೆ ನಡೆದು ತೋರಿಸುವ ಮೂಲಕ ನಾಯಿಯೊಂದು ಹಲವರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದೆ.

ಮಾಲ್ಡೋವಾದ ಗಡಿ ಭದ್ರತಾ ಪಡೆಯ ಲಿಚಿ ಎಂಬ ಹೆಸರಿನ‌ ಶ್ವಾನ ಅಲ್ಲಿನ ಚಿಸಿನಾವು ಎಂಬಲ್ಲಿ ಈ ಸಾಹಸವನ್ನು ಪ್ರದರ್ಶಿಸಿದೆ.

ಕಣ್ಣಿಗೆ ಬಟ್ಟೆ ಕಟ್ಟಲ್ಪಟ್ಟಿರುವ ಲಿಚಿ ಎರಡು ರೋಪ್‌ಗಳ ಮೇಲೆ ಹೆಜ್ಜೆ ಇಟ್ಟಾಗ ಅವು ವಾಲಾಡಿದರೂ ಬೀಳದೆ ನಡೆದು ಸೈ ಎನಿಸಿಕೊಂಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿ ವೈರಲ್ ಆಗಿದೆ.

ಜಗನ್ನಾಥನ ರಥಯಾತ್ರೆಯಲ್ಲಿ ಗಮನ ಸೆಳೆದ ಮುಸ್ಲಿಂ ಸಂಸದೆ

Posted: 04 Jul 2019 01:57 AM PDT

ನಟಿಯಿಂದ ಸಂಸದೆಯಾದ ನುಸ್ರತ್ ಕೊಲ್ಕತ್ತಾದಲ್ಲಿ ನಡೆದ ಭಗವಂತ ಜಗನ್ನಾಥನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನುಸ್ರತ್ ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಜಗನ್ನಾಥನಿಗೆ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದ್ರು ನುಸ್ರತ್.

ರಥಯಾತ್ರೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು. ಮಮತಾ ಬ್ಯಾನರ್ಜಿ ಜೊತೆ ರಥವನ್ನು ಎಳೆದ ನುಸ್ರತ್ ಎಲ್ಲರ ಗಮನ ಸೆಳೆದ್ರು. ಈ ವೇಳೆ ನುಸ್ರತ್ ಪತಿ ನಿಖಿಲ್ ಜೈನ್ ಹಾಜರಿದ್ದರು. ಸೀರೆಯುಟ್ಟಿದ್ದ ನುಸ್ರತ್ ಸೆರಗನ್ನು ತಲೆ ಮೇಲೆ ಹಾಕಿಕೊಂಡಿದ್ದರು. ಹಣೆಯಲ್ಲಿ ಸಿಂಧೂರ ಹಾಗೂ ಕೈ ಬಳೆ, ಮಂಗಳಸೂತ್ರ ನುಸ್ರತ್ ಸೌಂದರ್ಯವನ್ನು ಹೆಚ್ಚಿಸಿತ್ತು.

ಮಾಧ್ಯಮಗಳ ಜೊತೆ ಮಾತನಾಡಿದ ನುಸ್ರತ್, ನಾನು ಎಲ್ಲ ಧರ್ಮವನ್ನು ಗೌರವಿಸುತ್ತೇನೆ. ನಾನು ಹುಟ್ಟಿದ್ದು ಇಸ್ಲಾಂ ಧರ್ಮದಲ್ಲಿ. ಅದನ್ನು ನಂಬುತ್ತೇನೆ. ನನ್ನ ಬಗ್ಗೆ ವಿನಾಕಾರಣ ಟೀಕೆ ಮಾಡಲಾಗ್ತಿದೆ ಎಂದು ಹೇಳಿದ್ದಾರೆ. ಸಂಸತ್ ನಲ್ಲಿ ಪ್ರಮಾಣ ವಚನದ ವೇಳೆ ಸಿಂಧೂರವಿಟ್ಟಿದ್ದ ನುಸ್ರತ್ ಗೆ ಫತ್ವಾ ಹೊರಡಿಸಲಾಗಿತ್ತು. ಅದಕ್ಕೆ ಸಂಸದೆ ಉತ್ತರ ನೀಡಿದ್ದರು.

 

ಮಂಜ್ರೇಕರ್ ಗೆ ರವೀಂದ್ರ ಜಡೇಜಾ ಸಖತ್ ಟಾಂಗ್

Posted: 04 Jul 2019 01:53 AM PDT

ಸಂಜಯ್‌ ಮಂಜ್ರೇಕರ್ ಅವರ ಕಾಮೆಂಟರಿ ಬಾಯಿಭೇದಿ ಎಂದು ಕ್ರಿಕೆಟಿಗ ರವೀಂದ್ರ ಜಡೇಜಾ ಕಟುವಾಗಿ ಟೀಕಿಸಿದ್ದಾರೆ.

ಚೂರುಪಾರು ಕ್ರಿಕೆಟಿಗ ಜಡೇಜಾ ಈ ಬಾರಿಯ ವಿಶ್ವಕಪ್‌ನ ಭಾರತ ತಂಡದಲ್ಲಿ ಇರಬಾರದಿತ್ತು ಎಂದು ಮಂಜ್ರೇಕರ್ ಹೇಳಿದ್ದಾರೆನ್ನಲಾದ ಮಾತಿಗೆ ಪ್ರತಿಕ್ರಿಯೆಯಾಗಿ ಜಡೇಜಾ ಬುಧವಾರ ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಇದುವರೆಗೆ ನಾನು ನಿಮಗಿಂತ ದುಪ್ಪಟ್ಟು ಆಡಿದ್ದೇನೆ ಹಾಗೂ ಇನ್ನೂ ಆಡುತ್ತಿದ್ದೇನೆ, ಸಾಧಿಸಿದವರನ್ನು ಗೌರವಿಸುವುದನ್ನು ಕಲಿಯಿರಿ. ನಿಮ್ಮ ಬಾಯಿಭೇದಿ ಸಾಕಷ್ಟು ಕೇಳಿದ್ದೇನೆ, ಸಾಕು ಮಾಡಿ…..’ ಎಂದು ಜಡೇಜಾ ಖಾರವಾಗಿ ಟ್ವೀಟ್ ಮಾಡಿದ್ದರು.