Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Wednesday, July 3, 2019

Kannada News | Karnataka News | India News

Kannada News | Karnataka News | India News


ಪಪ್ಪಾಯ ಬೀಜದಲ್ಲಿದೆ ‘ಆರೋಗ್ಯ’ದ ಗುಟ್ಟು

Posted: 03 Jul 2019 09:05 AM PDT

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇತ್ತೀಚಿನ ನಗರ ಜೀವನ ಶೈಲಿಯಲ್ಲಿ ಬೆಳಗಿನ ಉಪಹಾರದ ಒಂದು ಭಾಗವಾಗಿದೆ ಈ ಪಪ್ಪಾಯ. ಆರೋಗ್ಯಕ್ಕೆ, ಡಯೆಟ್ ಗೆ ಇದು ಅತ್ಯವಶ್ಯಕವಾದ ಹಣ್ಣು. ಆದ್ರೆ ಈ ಹಣ್ಣು ಕತ್ತರಿಸಿ, ಅದರಲ್ಲಿನ ಕಪ್ಪು ಬೀಜವನ್ನು ಎಸೆದು ಬಿಡೋದು ನಮ್ಮ ಅಭ್ಯಾಸ. ನೀವೇನಾದ್ರೂ ಈ ಪಪ್ಪಾಯ ಬೀಜಗಳಿಂದಾಗುವ ಉಪಯೋಗ ಕೇಳಿದ್ರೆ ಖಂಡಿತಾ ಇನ್ಮುಂದೆ ಪಪ್ಪಾಯ ಬೀಜಗಳನ್ನು ಎಸೆಯುವುದಿಲ್ಲ.

ಈ ಪಪ್ಪಾಯ ಬೀಜಗಳ ಸೇವನೆಯಿಂದ ಹೊಟ್ಟೆಯ ಹುಳುಗಳು ನಾಶವಾಗುತ್ತವೆ. ಜೊತೆಗೆ ದೇಹಕ್ಕೆ ಸೋಂಕು ಹರಡುವುದನ್ನು ತಡೆಹಿಡಿಯುತ್ತೆ. ಹಾಗೆಯೇ ಮೊಣಕಾಲು ನೋವು, ಜಾಯಿಂಟ್ ಪೇನ್, ಕಾಲು ಊದಿಕೊಳ್ಳುವುದು ಇದಕ್ಕೆಲ್ಲಾ ಪಪ್ಪಾಯ ಬೀಜ ಪರಿಣಾಮಕಾರಿ ಔಷಧ.

ಆಲ್ಕೋಹಾಲ್ ಸೇವನೆ ಮಾಡಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಪಪ್ಪಾಯ ಬೀಜ ಸೇವನೆ ತುಂಬಾ ಪರಿಣಾಮಕಾರಿಯಾಗಲಿದೆ. ಐದಾರು ಪಪ್ಪಾಯ ಬೀಜಗಳನ್ನು ಪುಡಿ ಮಾಡಿ ಲಿಂಬೆ ರಸದೊಂದಿಗೆ ಒಂದು ತಿಂಗಳು ಸೇವಿಸಿ ನೋಡಿ ನಿಮ್ಮ ಲಿವರ್ ಸಮಸ್ಯೆ ಕಡಿಮೆಯಾಗಲಿದೆ. ಹಾಗೆಯೆ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಪಪ್ಪಾಯ ಬೀಜ ಸೇವನೆಯಿಂದ ಸಮಸ್ಯೆ ಬಗೆಹರಿಯಲಿದೆ.

ಮಹತ್ವದ ವಿಚಾರ ಅಂದ್ರೆ ಪಪ್ಪಾಯ ಬೀಜಕ್ಕೆ ಕ್ಯಾನ್ಸರ್, ಟ್ಯೂಮರ್ ವಿರುದ್ಧ ಹೋರಾಡುವ ಶಕ್ತಿಯಿದೆ. ಹೀಗಾಗಿ ಪಪ್ಪಾಯ ಬೀಜ ಸೇವನೆ ಒಳ್ಳೆಯದು.

ಪಪ್ಪಾಯ ಹಣ್ಣಿನ ಜೊತೆಗೆ ಬೀಜವನ್ನು ಸೇವಿಸಬಹುದು. ಇಲ್ಲಾ ಅಂದ್ರೆ ಪಪ್ಪಾಯ ಬೀಜಗಳನ್ನ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡ್ರೆ ನಿಮಗೆ ಬೇಕೆನಿಸಿದಾಗ ಬಳಸಬಹುದು.

ಆದ್ರೆ ಯಾವುದೇ ಕಾರಣಕ್ಕೂ ಗರ್ಭಿಣಿಯರಾಗಿದ್ದಾಗ ಅಥವಾ ಮಕ್ಕಳಿಗೆ ಹಾಲು ಕುಡಿಸುವಾಗ ಈ ಪಪ್ಪಾಯ ಬೀಜಗಳನ್ನು ಬಳಸಬಾರದು. ಮಕ್ಕಳಿಗೂ ಕೂಡಾ ಪಪ್ಪಾಯ ಬೀಜವನ್ನು ಕೊಡಬೇಡಿ.

ಸೆಕ್ಸ್ ಆನಂದ ಸವಿಯಲು ಇದು ʼಬೆಸ್ಟ್ ಟೈಂʼ

Posted: 03 Jul 2019 08:53 AM PDT

ವಯಸ್ಸು 30 ರ ಗಡಿ ದಾಟುತ್ತಿದ್ದಂತೆ ಮಹಿಳೆಯರು ಶಾರೀರಿಕ ಸಂಬಂಧದಲ್ಲಿ ಹೆಚ್ಚು ಆನಂದ ಪಡೆಯುತ್ತಾರೆಂದು ನಂಬಲಾಗಿತ್ತು. ಆದ್ರೆ ಈ ಹಿಂದೆ ಮಾಡಿದ ಕೆಲವೊಂದು ಸಂಶೋಧನೆಗಳು ಇದು ಸುಳ್ಳು ಎಂದಿದೆ. ಅದ್ರ ಪ್ರಕಾರ ಮಹಿಳೆಯರು ಕಡಿಮೆ ವಯಸ್ಸಿನಲ್ಲಿ ಹಾಗೂ ಪುರುಷರು ಹೆಚ್ಚಿನ ವಯಸ್ಸಿನಲ್ಲಿ ಹೆಚ್ಚೆಚ್ಚು ಆನಂದ ಪಡೆಯುತ್ತಾರಂತೆ.

18 ರಿಂದ 65 ವರ್ಷ ವಯೋಮಿತಿಯ ಸಾವಿರಕ್ಕೂ ಹೆಚ್ಚು ಜನರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರು ತಾವು ಯಾವ ವಯಸ್ಸಿನಲ್ಲಿ ಹೆಚ್ಚು ಆನಂದ ಪಡೆದಿದ್ದೇವೆ ಎಂಬುದನ್ನು ಹೇಳಿದ್ದಾರೆ. ಅದ್ರ ಪ್ರಕಾರ ಮಹಿಳೆಯರು 26 ವರ್ಷ ವಯಸ್ಸಿನಲ್ಲಿ ಹೆಚ್ಚು ಆನಂದ ಪಡೆಯುತ್ತಾರಂತೆ. ಪುರುಷರು ತಮ್ಮ 32 ನೇ ವರ್ಷ ವಯಸ್ಸಿನಲ್ಲಿ ಹೆಚ್ಚು ಖುಷಿ ಪಡೆಯುತ್ತಾರಂತೆ.

ಈವರೆಗೆ ಇದು ಉಲ್ಟಾ ಆಗಿತ್ತು. ಪುರುಷರು 18ನೇ ವಯಸ್ಸಿನಲ್ಲಿ ಹಾಗೂ ಮಹಿಳೆಯರು 35ನೇ ವಯಸ್ಸಿನಲ್ಲಿ ಹೆಚ್ಚು ಆನಂದ ಪಡೆಯುತ್ತಾರೆ ಎನ್ನಲಾಗಿತ್ತು.  ಎರಡು ವರ್ಷಗಳ ಹಿಂದೆ ನಡೆದ ಈ ಸಮೀಕ್ಷೆಯಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಯಾವ ವಯಸ್ಸಿನಲ್ಲಿ ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಿದ್ದಾರೆಂಬ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿತ್ತು. ಅಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಹಿಳೆಯರು 16ನೇ ವಯಸ್ಸಿನಲ್ಲಿ ಹಾಗೂ ಪುರುಷರು 17ನೇ ವಯಸ್ಸಿನಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ದಾಗಿ ತಿಳಿಸಿದ್ದರು.

ಭಾರತದ ರಾಷ್ಟ್ರಗೀತೆ ಹಾಡಿದ್ದ ಪಾಕ್‌ ಪ್ರಜೆ ಹೇಳಿದ್ದೇನು ಗೊತ್ತಾ…?

Posted: 03 Jul 2019 08:44 AM PDT

2018 ರ ಏಷ್ಯಾ ಕಪ್‌ನ ಭಾರತ – ಪಾಕಿಸ್ತಾನದ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರು ಭಾರತದ ರಾಷ್ಟ್ರಗೀತೆ ಹಾಡಿದ್ದ ವಿಡಿಯೋ ಈಗ ಮತ್ತೊಮ್ಮೆ ವೈರಲ್‌ ಆಗಿದೆ.

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಭಾರತ-ಇಂಗ್ಲೆಂಡ್‌ ವಿಶ್ವಕಪ್‌ ಪಂದ್ಯದ ಸಂದರ್ಭ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮತ್ತೊಮ್ಮೆ ವೈರಲ್‌ ಆಗಿತ್ತು.

ಪತ್ರಕರ್ತೆ ನಯಲಾ ಇನಾಯತ್‌ ಈ ವಿಡಿಯೋ ಶೇ‌ರ್‌ ಮಾಡಿದ್ದು, “ಎಲ್ಲ ಪಾಕಿಸ್ತಾನಿಯರೂ ಇಂದು ಭಾರತೀಯರಾಗಿದ್ದಾರೆ,” ಎಂದು ಹೇಳಿದ್ದರು.

ರಾಷ್ಟ್ರಗೀತೆ ಹಾಡಿದ್ದ ಅದಿಲ್‌ ತಾಜ್‌, ಭಾರತದ ರಾಷ್ಟ್ರಗೀತೆ ಹಾಡುತ್ತಾ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಮೊನ್ನೆ ಇದೇ ವಿಡಿಯೋ ಮತ್ತೊಮ್ಮೆ ಶೇರ್‌ ಆದ ವೇಳೆ, ಟ್ವೀಟ್‌ ಒಂದಕ್ಕೆ ಪ್ರತಿಕ್ರಿಯಿಸಿದ ತಾಜ್‌, “ಹೌದು, ಈಗಲೂ ಅದೇ ಪ್ರೀತಿ ಇದೆ. ದಾಳಿಕೋರರಿಗಿಂತ ಅಕ್ಕಪಕ್ಕದವರೇ ಯಾವಾಗಲೂ ಮೊದಲು” ಎಂದಿದ್ದಾರೆ.

— Naila Inayat नायला इनायत (@nailainayat) June 30, 2019

ಮಗುವಿನ ಸಮಸ್ಯೆ ಕಂಡು ಮರುಗುತ್ತಾ ಕೂರಲಿಲ್ಲ ತಂದೆ…!

Posted: 03 Jul 2019 08:28 AM PDT

ಎರಡು ವರ್ಷದಿಂದ ಮಲಗಿದ್ದಲ್ಲೇ ಆಟವಾಡುತ್ತಿದ್ದ ಮಗು ಇದೀಗ ತಂದೆ ಸಂಶೋಧಿಸಿದ ‘ಫ್ರಾಗ್’ ಉಪಕರಣದ ಸಹಾಯದಿಂದ ಮನೆ ಪೂರ್ತಿ ಸುತ್ತಾಡುತ್ತಾ ಆಟವಾಡುತ್ತಿದೆ.

ಫ್ರಾಗ್ ಉಪಕರಣದ ಮೂಲಕ ಕೈ ಸಹಾಯದಿಂದ ಮನೆಯಲ್ಲಿ ಸಂಚರಿಸಬಹುದು. ಬ್ರಾಡಿ ಮೋರ್ ಲ್ಯಾಂಡ್ ಗೆ  ಬೆನ್ನು ಮತ್ತು ಬೆನ್ನು ಹುರಿ ಸೂಕ್ತವಾಗಿ ಇರದಿದ್ದಾಗ ಹುಟ್ಟಿನಿಂದಲೇ ಕಾಣುವ  ಸ್ಪೈನ್ ಬೈಫೀಡ್ ಕ್ರಾಲ್ ಸಮಸ್ಯೆ ಇದೆ ಎಂದು ತಿಳಿದು ಬಂದಿತ್ತು. ತಾಯಿ 20 ನೇ ವಾರದ ಗರ್ಭಿಣಿಯಾಗಿದ್ದಾಗಲೇ ಈ ಸಮಸ್ಯೆ ತಿಳಿದು ಬಂದಿತ್ತು.

ಜನನದ ನಂತರ 16 ದಿನ ಮಗುವನ್ನು ಐಸಿಯುನಲ್ಲಿ ಇರಿಸಿ ಎರಡು ಸರ್ಜರಿ ನಡೆಸಲಾಗಿತ್ತು. ಈ ಸಮಯದಲ್ಲಿ ಎರಡನೇ ಸಮಸ್ಯೆ ಸ್ಪೈನಲ್ ಕಾರ್ಡ್ ಅಟ್ರೋಫಿ ಎಂಬ ಮೆದುಳಿನಿಂದ ಬೆನ್ನು ಹುರಿಗೆ ಸಂಪರ್ಕ ಕಲ್ಪಿಸಲು ಸಮಸ್ಯೆ ಉಂಟು ಮಾಡುವ ತೊಂದರೆಯೂ ತಿಳಿದು ಬಂದಿತ್ತು. ತಮ್ಮ ಮಗುವಿಗೆ ಹೀಗೇಕಾಯಿತು ಎಂದು ಪ್ರಾರಂಭದಲ್ಲಿ ಚಿಂತಿತರಾಗಿದ್ದ ತಂದೆ, ನಂತರದಲ್ಲಿ ಮಗುವಿಗೆ ಹೇಗೆ ಸಹಾಯ ಮಾಡಬಹುದು ಎಂದು ಯೋಚನೆ ಮಾಡಿದರು.

ಚಕ್ರವಿರುವ ಸ್ಕೂಟರ್ ಬೋರ್ಡ್ ಒಂದನ್ನು ತಂದು ಕೊಟ್ಟು ತೆವಳಲು‌ ಮಾಡುವಂತೆ ಪ್ರಯತ್ನಿಸಿದರಾದರೂ ಚಕ್ರದ ಕೆಳಗೆ ಕೈ ಸಿಕ್ಕಿಕೊಂಡು ತೊಂದರೆಯಾಗುತ್ತಿತ್ತು. ಇದನ್ನೇ ಉತ್ತಮಪಡಿಸಿ ಹೊಸ ಉಪಕರಣವೊಂದನ್ನು ತಯಾರಿಸಿದೆ ಎಂದು ಮಗುವಿನ ತಂದೆ ಟೇಲರ್ ಮೋರ್ಲಾಂಡ್ ತಿಳಿಸಿದ್ದಾರೆ.

Ally Moreland & I are pretty private people, so many of you may not know that our son Brody was born with spina bifida and spinal cord atrophy. We often forget that Brody has different abilities than other kids his age because to us Brody is our normal. With Brody's condition his body has very little function from the chest down, this means that Brody can't sit up on his own, crawl or walk. As Brody began to grow and develop his mobility became a top priority to us. Together through a lot of late nights and trial and error we have created a new mobility device we call the Frog. The Frog has been completely life changing for Brody and us. We have started a GoFundMe campaign so we can GIVE Frogs away to other kiddos like Brody who want to mobile and explore their world. Please take a few minutes to watch our story and share it along with our link so we can continue to give the gift of mobility.https://www.gofundme.com/help-brody-get-kids-moving

Posted by Taylor Moreland on Thursday, February 28, 2019

ಶೀಘ್ರದಲ್ಲೇ ಸಾಕಾರವಾಗಲಿದೆ ಅದ್ಬುತ ಕನಸು…!

Posted: 03 Jul 2019 08:04 AM PDT

ಸಮುದ್ರದ ಕೆಳಗೆ ಬಣ್ಣ ಬಣ್ಣದ ಹವಳದ ಬಂಡೆ, ವಿವಿಧ ಆಕಾರದ ಮೀನುಗಳು ಹಾಗೂ ಅನನ್ಯ ಸಮುದ್ರ ಜೀವಿಗಳ ನಡುವೆ ಮಲಗಿದರೆ ಹೇಗಿರುತ್ತದೆ ಊಹಿಸಿಕೊಳ್ಳಿ. ಶೀಘ್ರದಲ್ಲೇ ಈ ಕನಸು ನನಸಾಗಲಿದೆ.

ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್‌ನ ಮಸ್‌ಗ್ರೇವ್ ದ್ವೀಪದಲ್ಲಿ ಹೋಟೆಲ್ ಒಂದು ನಿರ್ಮಾಣವಾಗುತ್ತಿದ್ದು, ಅದು ನಿರ್ಮಾಣವಾದರೆ ಸಮುದ್ರದ ಒಡಲಲ್ಲಿ ಗಾಜಿನ ರೂಮಿನಲ್ಲಿ ಮೀನುಗಳನ್ನು ನೋಡುತ್ತಾ ಮಲಗಬಹುದು.

ಅಷ್ಟೇ ಅಲ್ಲದೆ, ಅಲ್ಲಿ ಹಲವು ನೀರಿನ ಆಟಗಳನ್ನು ಆಡಬಹುದು. ಈ ಹೋಟೆಲ್ ನಿರ್ಮಾಣಕ್ಕೆ ಕ್ವೀನ್ಸ್‌ಲ್ಯಾಂಡ್ ಸರ್ಕಾರ ಕೂಡ ಹಣವನ್ನು ಹೂಡಿದೆಯಂತೆ. ಈ ಹವಳ ದಿಬ್ಬಗಳಿಗೆ ಇನ್ನು ಹೆಚ್ಚು ಪ್ರವಾಸಿಗರು ಬರಲಿ ಎಂದು ಹೀಗೆ ಮಾಡಲಿದ್ದಾರಂತೆ.

ಈ ಹೋಟೆಲ್ ಏಪ್ರಿಲ್ 2020 ರಷ್ಟರಲ್ಲಿ ನಿರ್ಮಾಣವಾಗುವ ಸಂಭವವವಿದ್ದು, ಒಂದು ರಾತ್ರಿ ತಂಗಲು 550 ಡಾಲರ್ ಅಂದರೆ ಸುಮಾರು 38,000 ರೂ. ಆಗಬಹುದಂತೆ.

ಬಿಗ್ ನ್ಯೂಸ್: ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಸೇರಿದ ಸಕ್ಕರೆ ಕಾರ್ಖಾನೆ ಜಪ್ತಿ

Posted: 03 Jul 2019 07:49 AM PDT

ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ಕ್ಷೇತ್ರದ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಒಡೆತನದ ನಿರಾಣಿ ಶುಗರ್ಸ್ ಗೋದಾಮಿನಲ್ಲಿರುವ ಸಕ್ಕರೆ ದಾಸ್ತಾನು ಜಪ್ತಿ ಮಾಡಲಾಗಿದೆ.

ಮುಧೋಳ ತಹಶೀಲ್ದಾರ್ ಎಸ್.ಬಿ. ಇಂಗಳೆ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಸೇರಿದ ಮುಧೋಳದಲ್ಲಿರುವ ನಿರಾಣಿ ಶುಗರ್ಸ್ ವತಿಯಿಂದ 61 ಕೋಟಿ ರೂ. ಬಾಕಿ ನೀಡಬೇಕಿದೆ. ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ಗೋದಾಮು ಜಪ್ತಿ ಮಾಡಲಾಗಿದೆ.

ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸದ ಹಿನ್ನಲೆಯಲ್ಲಿ ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡಲು ಸರ್ಕಾರ, ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಈ ಹಿನ್ನಲೆಯಲ್ಲಿ ಜಪ್ತಿ ಮಾಡಲಾಗಿದೆ.

ಪೊರಕೆಯನ್ನೇ ಆಯುಧವನ್ನಾಗಿಸಿಕೊಂಡು ಕರಡಿಯನ್ನು ಹಿಮ್ಮೆಟ್ಟಿಸಿದ ಗಟ್ಟಿಗಿತ್ತಿ

Posted: 03 Jul 2019 07:48 AM PDT

ಒಂದೊಂದು ಬಾರಿ ಧೈರ್ಯ ಮಾತ್ರ ಕೆಲಸ ಮಾಡುತ್ತದೆ ಅನ್ನೋದಕ್ಕೆ ಇಲ್ಲೊಂದು ಸಿಸಿ ಟಿವಿ ಫುಟೇಜ್ ಇದೆ ನೋಡಿ. ಆ ಕ್ಷಣ ಎಂಥವರಿಗೂ ಹೃದಯ ಸ್ತಬ್ಧ ಮಾಡಿ ಬಿಡುತ್ತದೆ. ಏಕಾಏಕಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಹಿಮಕರಡಿ ಬಂದು ಬಿಟ್ರೇ….!

ಇಂಥಾ ಊಹೆಗೂ ಅವಕಾಶ ನೀಡದೆ ಕರಡಿ ನುಗ್ಗಿದ್ದು ರಷ್ಯದ ಮಾಸ್ಕೋದ ಮೃಗಾಲಯದಲ್ಲಿ. ಹಿಮಕರಡಿ ಕೇಜ್ ನ್ನು ಇಬ್ಬರು ಮಹಿಳಾ ಸ್ವಚ್ಛಗಾರ್ತಿಯರು ಸ್ವಚ್ಚ ಮಾಡುತ್ತಿದ್ದರು. ಏಕಾಏಕಿ ಹಿಮಕರಡಿ ಎಂಟ್ರಿ ಕೊಟ್ಟಿದ್ದು ದಂಗು ಬಡಿಸಿದಂತಾಗಿದೆ. ಇಡೀ ಘಟನೆಯನ್ನು ಸಿಸಿ ಟಿವಿ ತೆರೆದಿಟ್ಟಿದೆ. ಕೊನೆಗೆ ಆಕೆ ಬರೀ ಪೊರಕೆ ಮತ್ತು ಡಸ್ಟ್ ಬಿನ್ ನಿಂದ ಹಿಮಕರಡಿಯನ್ನು ಹಿಮ್ಮೆಟ್ಟಿಸಿದ್ದಾಳೆ.

ಇನ್ನು ಹಿಮಕರಡಿಯಿಂದ ಆ ಸ್ವಚ್ಚಗಾರ್ತಿ ತಪ್ಪಿಸಿಕೊಂಡಿದ್ದು, ನಿರ್ಭಯವಾಗಿ ಆ ಕೆಲಸ ಮಾಡಿದ್ದು, ರಷ್ಯಾದ ಮಾಧ್ಯಮಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಘಟನೆಯ ಬಗ್ಗೆ ಮೃಗಾಲಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಬ್ಬರು ಸ್ವಚ್ಚಗಾರರ ಗುರುತು ಕೂಡ ಪತ್ತೆಯಾಗಿಲ್ಲ ಎನ್ನಲಾಗಿದೆ.

— RT (@RT_com) July 1, 2019

ಗೆಳತಿಯೊಂದಿಗೆ ಈ ರೆಸ್ಟೋರೆಂಟ್‌ ಗೆ ಹೋದ್ರೆ ಗೂಸಾ ಗ್ಯಾರಂಟಿ….!

Posted: 03 Jul 2019 07:41 AM PDT

ಬಹುಶಃ ಈ ಮಾತು ಗರ್ಲ್ ಫ್ರೆಂಡ್ ಕೇಳಿಸಿಕೊಂಡ್ರೆ ಸಾಕು ಬಾಯ್ ಫ್ರೆಂಡ್ ಗೆ ಮಾರಿ ಹಬ್ಬನೇ…..ಆದ್ರೆ ಇಂಥದೊಂದು ಬೋಡ್೯ ಇದೆ. ಅದು ರೆಸ್ಟೋರೆಂಟ್ ನಲ್ಲಿದೆ ಅಂದ್ರೆ ನಂಬ್ತಿರಾ? ಇನ್ನೊಂದು ಇಂಟ್ರಸ್ಟಿಂಗ್ ವಿಷ್ಯ ಅಂದ್ರೆ ಈ ಫುಡ್ ಆರ್ಡರ್ ಮಾಡಿದ್ರೆ ಬೆಲೆ ಸಿಕ್ಕಾಪಟ್ಟೆ ಚೀಪ್.

ಹೀಗಂದ ಕೂಡ್ಲೆ ಯಾವುದು ರೆಸ್ಟೋರೆಂಟ್? ಎಲ್ಲಿದೆ ಹೇಳಿ? ಗರ್ಲ್ ಫ್ರೆಂಡ್ ಸಮೇತ ಹೋಗ್ತಿನಿ ಅನ್ನಬೇಡಿ‌……ಯಾಕಪ್ಪ ಅಂದ್ರೆ ಈ ರೆಸ್ಟೋರೆಂಟ್ ಇರೋದು ದೂರದ ಅಮೆರಿಕಾದ ಫಿಲಡೆಲ್ಫಿಯಾದಲ್ಲಿ.

ಈ ರೆಸ್ಟೋರೆಂಟ್ ತನ್ನ ಮೆನುವಿನಲ್ಲಿ ಹೊಸ ಐಟಂ ಸೇರಿಸುವ ಮೂಲಕ ಆಧುನಿಕ ಸಮಸ್ಯೆಗೆ ಹೊಸ ಪರಿಹಾರವನ್ನು ಕಂಡುಹಿಡಿದಿದೆ. ಆ ಐಟಂ ಹೆಸರೇ ‘ನನ್ನ ಗೆಳತಿಗೆ ಹಸಿವಿಲ್ಲ’ ಎಂದು.

ನೀವು ಇದನ್ನು ಅರ್ಡರ್ ಮಾಡಿದ್ರೆ ಫ್ರೆಂಚ್ ಫ್ರೈಸ್, ಫ್ರೈಡ್ ಚಿಕನ್ ಅಥವಾ ಫ್ರೈಡ್ ಚೀಸ್ ಸ್ಟಿಕ್‌ ನೀಡಲಾಗುತ್ತದೆ. ಇದರ ಬೆಲೆ ಕೇವಲ 25 ಡಾಲರ್. ಮೊದಲಿಗೆ ನನಗೆ ಹಸಿವಿಲ್ಲ ಅನ್ನೋ ಗರ್ಲ್ ಫ್ರೆಂಡ್ ಆ ಬಳಿಕ ನಮ್ಮ ತಟ್ಟೆಯಲ್ಲಿ ಕದಿಯುತ್ತಾರೆ ಅಂಥ ಹುಡುಗರು ಹೇಳಿದ ಪರಿಣಾಮ ರೆಸ್ಟೋರೆಂಟ್ ನಲ್ಲಿ ಈ ಐಟಂ ಪರಿಚಯಿಸಿದ್ದಾರಂತೆ.

ಟ್ವಿಟರ್ ಬಳಕೆದಾರರು ಮೆನುವಿನ ಚಿತ್ರವನ್ನು ಹಂಚಿಕೊಂಡಿದ್ದು, ಈ ರೆಸ್ಟೋರೆಂಟ್ ಮಾಲೀಕರು 3019 ರಲ್ಲಿದ್ದಾರೆ ಅಂಥ ಬರೆದಿದ್ದಾರೆ. ರೆಸ್ಟೋರೆಂಟ್‌ ಹೊಸ ಐಟಂ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ಟ್ವೀಟ್ 3 ಲಕ್ಷಕ್ಕೂ ಹೆಚ್ಚು ಲೈಕ್, 92,000 ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ.

ಆಷಾಡ ಮಾಸದ ದ್ವಾದಶ ರಾಶಿಗಳ ಫಲಾಫಲ

Posted: 03 Jul 2019 07:37 AM PDT

ಮೇಷ ರಾಶಿ

ವ್ಯಾಪಾರ-ವ್ಯವಹಾರಗಳಲ್ಲಿ ಮಧ್ಯಮ ಫಲಗಳನ್ನು ಕಾಣಬಹುದು. ಹಿಂದೆ ಮಾಡಿರುವಂತಹ ಸಾಲಗಳು ನಿಮಗೆ ಹೆಚ್ಚಾಗಿ ಬಾಧೆ ನೀಡಲಿದೆ. ನಿಮ್ಮ ಶ್ರಮದಾಯಕ ಕಾರ್ಯಗಳಿಂದ ಯಾವುದೇ ಅಡೆತಡೆ ಇಲ್ಲದೆ ಕೆಲಸವನ್ನು ಪೂರ್ಣ ಮಾಡುವಿರಿ.

ಸಮಯದ ಹೊಂದಾಣಿಕೆ ಅತಿ ಅಗತ್ಯವಾಗಿ ಕಾಣುತ್ತದೆ. ದಿಢೀರನೇ ಎದುರಾಗುವ ಕೆಲವು ಕಷ್ಟಗಳಿಂದ ನಿಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಎದುರಿಸಲು ಸನ್ನದ್ಧರಾಗಿ.

ಶುಭ ಸಂಖ್ಯೆ : 9

ವೃಷಭ ರಾಶಿ

ನಿಮ್ಮ ಆರೋಗ್ಯದಲ್ಲಿ ಉತ್ತಮವಾದ ಬದಲಾವಣೆ ಕಾಣಲಿದ್ದೀರಿ. ನಿಮ್ಮ ಕಾರ್ಯಶೈಲಿಗಳನ್ನು ಉತ್ತಮವಾಗಿ ರೂಪಿಸುವ ಸಾಧ್ಯತೆ ಕಾಣಬಹುದು. ನಿರೀಕ್ಷಿತ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ವಿಷಯವಾಗಿ ಅಂದುಕೊಂಡ ಯೋಜನೆಗಳು ನಿಮ್ಮಂತೆ ಆಗಲಿದೆ. ಲಾಭದಾಯಕ ವ್ಯವಹಾರವನ್ನು ಮಾಡುವಿರಿ.

ಶುಭ ಸಂಖ್ಯೆ : 3

ಮಿಥುನ ರಾಶಿ

ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಿ. ಹೂಡಿಕೆಗಳಲ್ಲಿ ಯಶಸ್ಸು ದೊರೆಯಲಿದೆ. ಸಾಲ ಪಡೆಯುವಾಗ ಅದನ್ನು ತೀರಿಸುವ ಲೆಕ್ಕಚಾರವನ್ನು ಮೊದಲೇ ಮಾಡಿ. ಕುಟುಂಬದಲ್ಲಿ ಶುಭ ಸುದ್ದಿ ಬರಲಿದೆ. ಉತ್ಪನ್ನ ವಲಯದಲ್ಲಿ ಲಾಭಾಂಶ ಹೆಚ್ಚಾಗಲಿದೆ.

ಶುಭ ಸಂಖ್ಯೆ : 6

ಕರ್ಕಾಟಕ ರಾಶಿ

ಆಧ್ಯಾತ್ಮಿಕ ವಿಷಯದಲ್ಲಿ ನಿಮ್ಮ ಮನಸ್ಸು ಹೆಚ್ಚಾಗಿ ವಾಲಲಿದೆ. ನಿರೀಕ್ಷಿತ ಯೋಜನೆಗಳಲ್ಲಿ ಸಫಲತೆ ಕಂಡುಬರಲಿದೆ. ಆರ್ಥಿಕವಾಗಿ ಮಂದಗತಿಯ ಬೆಳವಣಿಗೆ ಕಾಣಬಹುದು. ಕುಟುಂಬದ ಆರೋಗ್ಯಕ್ಕಾಗಿ ಉತ್ತಮ ವಾತಾವರಣ ಕಲ್ಪಿಸುವುದು ಅವಶ್ಯಕ.

ಶುಭ ಸಂಖ್ಯೆ : 2

ಸಿಂಹ ರಾಶಿ

ಆರ್ಥಿಕ ವಿಷಯದಲ್ಲಿ ವೈರಾಗ್ಯ ಮನಸ್ಥಾಪ ಸೃಷ್ಟಿಯಾಗಬಹುದು ಎಚ್ಚರವಿರಲಿ. ಬಾಕಿ ಹಣ ವಸೂಲಿಗಾಗಿ ಕಷ್ಟ ಪಡಬೇಕಾದ ಸಂದರ್ಭ ಬರಲಿದೆ. ಕೆಲಸದಲ್ಲಿ ನಿರಾಸಕ್ತಿ ಹೆಚ್ಚಾಗುತ್ತದೆ. ವ್ಯಾವಹಾರಿಕ ಕಾರ್ಯಕ್ಷಮತೆಯನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಿ.

ಶುಭ ಸಂಖ್ಯೆ : 5

ಕನ್ಯಾ ರಾಶಿ

ಮನೋ ನಿಗ್ರಹಕ್ಕೆ ಆದ್ಯತೆ ನೀಡಿ. ಪ್ರೇಮದಲ್ಲಿ ಜಯ ಸಂಪಾದನೆ ಆಗಲಿದೆ. ಭರಪೂರ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ. ಖರೀದಿ ಪ್ರಕ್ರಿಯೆಗಳಲ್ಲಿ ಉತ್ತಮ ವಹಿವಾಟು ನಡೆಯುವ ಸಾಧ್ಯತೆ ಇದೆ.

ಶುಭ ಸಂಖ್ಯೆ : 3

ತುಲಾ ರಾಶಿ

ಹೊಸ ಆವಿಷ್ಕಾರಗಳಿಗೆ ಹೆಚ್ಚಿನ ಅನುಕೂಲಕರ ವಾತಾವರಣ ಇರಲಿದೆ. ಹೆಚ್ಚಿನ ತಿರುಗಾಟ ಕಾಣಬಹುದು. ಪ್ರೇಕ್ಷಣೀಯ ಸ್ಥಳಗಳು, ದೇವಸ್ಥಾನ ಇತ್ಯಾದಿ ಸ್ಥಳಗಳ ಭೇಟಿ ನೀಡುವ ಸಾಧ್ಯತೆ ಕಂಡು ಬರಲಿದೆ. ಆತ್ಮೀಯರೊಡನೆ ಉತ್ತಮ ಭಾಂಧವ್ಯ ವೃದ್ಧಿಸಿಕೊಳ್ಳಿ.

ಶುಭ ಸಂಖ್ಯೆ : 7

ವೃಶ್ಚಿಕ ರಾಶಿ

ಆತ್ಮಸ್ಥೈರ್ಯ ನಿಮ್ಮ ಯೋಜನೆಗಳನ್ನು ಮುನ್ನಡೆಸುತ್ತದೆ. ಅಧಿಕಾರ ಪ್ರಾಪ್ತಿಯಾಗುವ ಸೂಚನೆಗಳು ಕಂಡು ಬರುತ್ತದೆ. ಗೃಹ ನಿರ್ಮಾಣ ಕಾಮಗಾರಿಗಳಲ್ಲಿ ವಿಳಂಬ ಆವರಿಸಬಹುದು. ಯೋಜನೆಗಳಲ್ಲಿ ಸಮಯಾವಕಾಶದ ಕೊರತೆ ಕಾಣಬಹುದು.

ಶುಭ ಸಂಖ್ಯೆ: 1

ಧನಸ್ಸು ರಾಶಿ

ಸ್ವಲ್ಪಮಟ್ಟಿನ ಆಲಸ್ಯತನ ನಿಮಗೆ ಕಾಡಬಹುದು. ಆರ್ಥಿಕ ವ್ಯವಹಾರಗಳಲ್ಲಿ ಉತ್ತಮ ವಹಿವಾಟು ಮಾಡಲಿದ್ದೀರಿ. ಆಹಾರದ ಸೇವನೆಯಲ್ಲಿ ಅಗತ್ಯವಾದ ಜಾಗ್ರತೆ ವಹಿಸಿ.

ಶುಭ ಸಂಖ್ಯೆ : 9

ಮಕರ ರಾಶಿ

ಜನಗಳೊಂದಿಗೆ ಬೆರೆಯುವುದನ್ನು ಕಡಿಮೆ ಮಾಡುವ ಸಾಧ್ಯತೆ ಕಾಣಬಹುದು. ಶಕ್ತಿ ದೇವಸ್ಥಾನಗಳಿಗೆ ಭೇಟಿ ನೀಡುವಿರಿ. ದೈಹಿಕ ಕಸರತ್ತುಗಳಲ್ಲಿ ಉತ್ತಮವಾದ ಪಾಲ್ಗೊಳ್ಳುವಿಕೆ ಕಾಣಬಹುದು. ನಿಮ್ಮ ಹಳೆಯ ದುಶ್ಚಟಗಳಿಂದ ಹೊರಬರಲು ಪ್ರಯತ್ನಿಸುವಿರಿ.

ಶುಭ ಸಂಖ್ಯೆ : 4

ಕುಂಭ ರಾಶಿ

ವಾಹನ ಸವಾರಿಯಲ್ಲಿ ಎಚ್ಚರಿಕೆ ವಹಿಸಿ. ಅತಿಯಾದ ಆಲಸ್ಯತನ ಒಳ್ಳೆಯದಲ್ಲ. ಆರ್ಥಿಕವಾಗಿ ಪ್ರಗತಿ ಕಂಡುಬರುತ್ತದೆ. ಹಳೆಯ ಸಾಲಗಳನ್ನು ತೀರಿಸುವ ಕೆಲಸದಲ್ಲಿ ಯಶಸ್ವಿಯಾಗುವಿರಿ. ಆರೋಗ್ಯ ಕಡೆಗೆ ಸೂಕ್ತ ಗಮನ ನೀಡಿ.

ಶುಭ ಸಂಖ್ಯೆ : 6

ಮೀನ ರಾಶಿ

ಹೆಚ್ಚಿನ ಮಾತುಗಳಿಂದ ಕಾಲಹರಣ ಮಾಡದೆ ಕೃತಿಯಲ್ಲಿ ಪಾಲ್ಗೊಳ್ಳಿ. ಸಹೋದರ ವರ್ಗದಿಂದ ಸಮಸ್ಯೆಗಳು ಬರಬಹುದು. ಸಂಗಾತಿಯಲ್ಲಿ ಬೇಸರ ಬರದ ಹಾಗೆ ನೋಡಿಕೊಳ್ಳಿ. ಹಣಕಾಸಿನಲ್ಲಿ ಸಾಧಾರಣ ಸ್ಥಿತಿ ಇರಲಿದೆ.

ಶುಭ ಸಂಖ್ಯೆ : 5

ಜೋತಿಷ್ಯರು : ವಿಶ್ವನಾಥ ಶಾಸ್ತ್ರಿ, 9380281393

ರಾಜ್ಯದ ಜನತೆಗೆ ಸಿಹಿ ಸುದ್ದಿ: ಸುಪ್ರೀಂ ಕೋರ್ಟ್ ನಲ್ಲಿ ‘ಕನ್ನಡ’ ಡಿಂಡಿಮ

Posted: 03 Jul 2019 07:33 AM PDT

ನವದೆಹಲಿ: ರಾಜ್ಯದ ಜನತೆಗೆ ಸಿಹಿ ಸುದ್ದಿ ಇಲ್ಲಿದೆ. ಕನ್ನಡ ಸೇರಿದಂತೆ 6 ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರಬೀಳಲಿದೆ.

ಕನ್ನಡ, ತೆಲುಗು, ಹಿಂದಿ, ಅಸ್ಸಾಮಿ, ಒಡಿಯಾ ಸೇರಿ 6 ಭಾಷೆಗಳಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಗಳು ಲಭ್ಯವಾಗಲಿವೆ.

ಈ ತಿಂಗಳ ಅಂತ್ಯದಿಂದ ನಿರ್ಧಾರ ಅನುಷ್ಠಾನವಾಗುವ ಸಾಧ್ಯತೆ ಇದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಆಶಯದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಜನಸಾಮಾನ್ಯರಿಗೆ ಸುಪ್ರೀಂಕೋರ್ಟ್ ತೀರ್ಪು ಅರ್ಥೈಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಕನ್ನಡ ಸೇರಿದಂತೆ 6 ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಲಭ್ಯವಾಗಲಿವೆ ಎಂದು ಹೇಳಲಾಗಿದೆ.

ಗೆಳತಿ ಮನೆಗೆ ಬಂದ ಸ್ನೇಹಿತ ಮಾಡಿದ್ದೇನು ಗೊತ್ತಾ…?

Posted: 03 Jul 2019 07:25 AM PDT

ಬೆಂಗಳೂರು: ಗೆಳತಿ ಮನೆಗೆ ಬಂದ ಸ್ನೇಹಿತ ಆಕೆಯ ಮಕ್ಕಳ ಮೇಲೆ ಬೆಲ್ಟ್ ನಿಂದ ಹಲ್ಲೆ ಮಾಡಿ, ಪತಿಯನ್ನು ಹೊರಹಾಕಿದ ಘಟನೆ ನಡೆದಿದೆ.

ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಕ್ಟೋರಿಯಾ ಲೇಔಟ್ ನಲ್ಲಿ ಗೆಳತಿ ಮನೆಗೆ ಬಂದಿದ್ದ ಈಗನ್ ವಿಕ್ಟರ್ ಎಂಬಾತ ಆಕೆಯ ಮಕ್ಕಳ ಮೇಲೆ ಬೆಲ್ಟ್ ನಿಂದ ಹಲ್ಲೆ ಮಾಡಿ ಅನಾಗರಿಕವಾಗಿ ವರ್ತಿಸಿದ್ದಾನೆ. ಅಲ್ಲದೆ, ಸ್ನೇಹಿತೆಯ ಪತಿಯನ್ನು ಹೆದರಿಸಿ ಮನೆಯಿಂದ ಹೊರ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

2 ದಿನಗಳಿಂದ ಮನೆಯಿಂದ ಹೊರಗಿರುವ ಪತಿ, ಕಂಗಾಲಾಗಿದ್ದು, ಪತ್ನಿ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

‘ಮೈನೇ ಪ್ಯಾರ್ ಕಿಯಾ’ ಚಿತ್ರದ ನಾಯಕಿ ಭಾಗ್ಯಶ್ರೀ ಪತಿ ಅರೆಸ್ಟ್

Posted: 03 Jul 2019 07:12 AM PDT

ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ರನ್ನು ಚಿತ್ರರಂಗ ಗುರುತಿಸುವಂತಾಗಿದ್ದು ‘ಮೈನೇ ಪ್ಯಾರ್ ಕಿಯಾ’ ಚಿತ್ರದ ಮೂಲಕ. ಹಾಗೆಯೇ ಈ ಚಿತ್ರದ ಮೂಲಕ ಪರಿಚಿತರಾಗಿದ್ದ ಭಾಗ್ಯಶ್ರೀ ಕೂಡಾ ರಾತ್ರೋರಾತ್ರಿ ಫೇಮಸ್ ಆಗಿದ್ದರು.

ಈ ಚಿತ್ರದ ಬಳಿಕ ಸಲ್ಮಾನ್ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರೆ, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಈ ಚಿತ್ರದ ನಾಯಕ ನಟಿ ಭಾಗ್ಯಶ್ರೀ ಹಿಮಾಲಯ ದಾಸನಿ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಬಳಿಕ ಚಿತ್ರರಂಗ ತೊರೆದಿದ್ದರು.

ಇದೀಗ ಬಂದಿರುವ ಸುದ್ದಿಗಳ ಪ್ರಕಾರ ಭಾಗ್ಯಶ್ರೀ ಅವರ ಪತಿ ಹಿಮಾಲಯ ದಾಸನಿ ಇತ್ತೀಚೆಗೆ ಜೂಜು ಅಡ್ಡೆಯೊಂದರಲ್ಲಿ 15 ಮಂದಿಯೊಂದಿಗೆ ಬಂಧಿತರಾಗಿದ್ದಾರೆ. ಹಿಮಾಲಯ ದಾಸನಿ ಅವರನ್ನು ಬಂಧನಕ್ಕೊಳಪಡಿಸಿದ್ದ ಅಂಬೋಲಿ ಠಾಣೆ ಪೊಲೀಸರು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಶಾಲೆಯಿಂದ ಮನೆಗೆ ಬಂದ ಮಕ್ಕಳಿಗೆ ಕಂಡಿದ್ದು ಭೀಕರ ದೃಶ್ಯ

Posted: 03 Jul 2019 06:50 AM PDT

ಬೆಂಗಳೂರು: ಮಹಿಳೆ ಹತ್ಯೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ ಘಟನೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ.

29 ವರ್ಷದ ಲಕ್ಷ್ಮಿ ಹತ್ಯೆಯಾದವರೆಂದು ಹೇಳಲಾಗಿದೆ. ಮಾರಕಾಸ್ತ್ರಗಳಿಂದ ಥಳಿಸಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು, ಒಂಟಿಯಾಗಿದ್ದ ಲಕ್ಷ್ಮಿಯವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಶಾಲೆಯಿಂದ ಮಕ್ಕಳು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೋಡುಗರ ಎದೆ ಝಲ್ಲೆನ್ನಿಸುವಂತಿದೆ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯ

Posted: 03 Jul 2019 06:46 AM PDT

ಡ್ರಾಪ್ ನೀಡಿದ ಬೈಕ್ ಸವಾರನನ್ನು ಭೀಕರವಾಗಿ ಹತ್ಯೆ ಮಾಡಿ ಬೈಕ್ ಹಾಗೂ ಆತನ ಬಳಿಯಿದ್ದ ಹಣ, ಫೋನ್ ಎಗರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸವಾರನೊಬ್ಬ ನ ಬಳಿ ಡ್ರಾಪ್ ಪಡೆಯುವ ಇಬ್ಬರು ಜನರಿಲ್ಲದ ಸ್ಥಳದಲ್ಲಿ ಬೈಕ್ ನಿಲ್ಲಿಸುತ್ತಿದ್ದಂತೆ ದಾಳಿ ನಡೆಸುತ್ತಾರೆ. ಒಬ್ಬ ಕುತ್ತಿಗೆ ಹಿಡಿದು ಸವಾರನನ್ನು ಕೆಳಗೆ ಬೀಳಿಸುತ್ತಾನೆ. ಮತ್ತೊಬ್ಬ ರಸ್ತೆಲ್ಲಿ ಬಿದ್ದಿದ್ದ ಕಲ್ಲು ಎತ್ತಿಕೊಂಡು ಸವಾರನ ತಲೆಗೆ ಹೊಡೆದಿದ್ದಾನೆ.

ಇದರಿಂದ ಬೈಕ್ ಸವಾರ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಬಳಿಕ ಡ್ರಾಪ್ ತೆಗೆದುಕೊಂಡಿದ್ದ ಆಗಂತುಕರಿಬ್ಬರು ಬೈಕ್ ಹಾಗೂ ಸವಾರನ ಪರ್ಸ್, ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಘಟನೆಯ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ವಿಧವೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದವನಿಗೆ ಗಲ್ಲುಶಿಕ್ಷೆ

Posted: 03 Jul 2019 06:15 AM PDT

ಬೆಳಗಾವಿ: ವಿಧವೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಬೆಳಗಾವಿ 8ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ನೀಡಲಾಗಿದೆ.

ರಮೇಶ್ ಲಕ್ಷ್ಮಣ ಜಾಧವ್(31) ಗಲ್ಲುಶಿಕ್ಷೆಗೆ ಗುರಿಯಾದವ ಎಂದು ಹೇಳಲಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಖಡಕಲಾಟದಲ್ಲಿ 2006ರಲ್ಲಿ ಘಟನೆ ನಡೆದಿತ್ತು.

ವಿಧವೆಗೆ ಜನತಾ ಮನೆ ಕೊಡಿಸುವುದಾಗಿ ನಂಬಿಸಿದ ರಮೇಶ್ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಗಲ್ಲು ಶಿಕ್ಷೆ ನೀಡಿದೆ ಎಂದು ಹೇಳಲಾಗಿದೆ.

ಯಾತ್ರೆ ಮುಗಿಸಿ ಬಂದವರ ಬಳಿ ಇತ್ತು ಕೆಜಿಗಟ್ಟಲೆ ಚಿನ್ನ

Posted: 03 Jul 2019 05:47 AM PDT

ಹೈದರಾಬಾದ್: ಹೈದರಾಬಾದ್ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 2.17 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.

ಶಂಶಾಬಾದ್ ಏರ್ ಪೋರ್ಟ್ ನಲ್ಲಿ ಗುಪ್ತಚರ ಮಾಹಿತಿ ಆಧರಿಸಿ ಕಂದಾಯ ಗುಪ್ತಚರ ಅಧಿಕಾರಿಗಳು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, 6.46 ಕೆಜಿ ಚಿನ್ನ ಜಪ್ತಿ ಮಾಡಿದ್ದಾರೆ. ಉಮ್ರಾ ಯಾತ್ರೆ ಮುಗಿಸಿ ಸೌದಿ ಅರೇಬಿಯಾದಿಂದ ಬಂದಿದ್ದ 14 ಜನರ ಬಳಿ ಇಷ್ಟೊಂದು ಚಿನ್ನ ಪತ್ತೆಯಾಗಿದೆ.

ಉಮ್ರಾ ಯಾತ್ರೆ ಮುಗಿಸಿ ಬಂದವರು ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಗೊತ್ತಾಗಿದ್ದು, ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಚಿನ್ನವನ್ನು ಜಪ್ತಿ ಮಾಡಿದ್ದಾರೆ.

ರಾಹುಲ್ ಗಾಂಧಿ ರಾಜೀನಾಮೆ ಬಗ್ಗೆ ದೇವೇಗೌಡರು ಹೇಳಿದ್ದೇನು ಗೊತ್ತಾ…?

Posted: 03 Jul 2019 05:33 AM PDT

ಬೆಂಗಳೂರು: ರಾಹುಲ್ ಗಾಂಧಿಯವರ ಮನಸ್ಸಿಗೆ ನೋವಾಗಿರಬಹುದು ಎಂದು ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿಯವರದು ಹೋರಾಟದ ಮನೋಭಾವ. ಎಐಸಿಸಿ ಅಧ್ಯಕ್ಷರಾದ ಮೇಲೆ ಹಲವು ವಿಷಯಗಳನ್ನು ಇಟ್ಟುಕೊಂಡು ಅವರು ಹೋರಾಟ ನಡೆಸಿದ್ದರು. ಪ್ರಧಾನಿ ಮೋದಿ ಅವರಿಗಿಂತ ಹೆಚ್ಚು ಪ್ರಚಾರ ಮಾಡಿದ್ದರು. ಆದರೆ, ದೇಶದ ಜನ ಮೋದಿಯವರಿಗೆ ಆಶೀರ್ವಾದ ಮಾಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣವಲ್ಲ ಎಂದು ದೇವೇಗೌಡರು ಹೇಳಿದ್ದಾರೆ.

ಹೆಚ್. ವಿಶ್ವನಾಥ್ ಪಕ್ಷದಿಂದ ಹೊರಗೆ ಹೋಗುವುದಿಲ್ಲ ಎಂದು ಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 80 ಕೋಟಿ ಕೊಟ್ಟರೆ ನಿಮ್ಮ ಜೊತೆ ಇರುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾಗಿ ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ. ಮಹದೇವ್ ನೀಡಿದ ಹೇಳಿಕೆ ಪ್ರತಿಕ್ರಿಯೆ ನೀಡಿದ ಗೌಡರು, ನನ್ನನ್ನು ಏನು ಕೇಳಬೇಡಿ. ಇಂತಹ ವಿಚಾರಗಳ ಬಗ್ಗೆ ನನ್ನನ್ನು ಕೇಳಬೇಡಿ. ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಹರಿಬಿಟ್ಟ ವಿದ್ಯಾರ್ಥಿಗಳು ಅರೆಸ್ಟ್

Posted: 03 Jul 2019 05:21 AM PDT

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಹರಿಬಿಟ್ಟ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುತ್ತೂರಿನ ಪ್ರತಿಷ್ಠಿತ ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಪ್ರಜ್ವಲ್, ಕಿಶನ್ ಆಚಾರ್ಯ, ಗುರುನಂದನ್, ಸುನಿಲ್ ಪ್ರಖ್ಯಾತ್ ಬಂಧಿತ ಆರೋಪಿಗಳೆಂದು ಹೇಳಲಾಗಿದೆ.

ಪೊಲೀಸರ ವಿಶೇಷ ತನಿಖಾ ತಂಡದಿಂದ ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಈ ವಿದ್ಯಾರ್ಥಿಗಳು 3 ತಿಂಗಳ ಹಿಂದೆ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ವಿದ್ಯಾರ್ಥಿಯೊಬ್ಬ ಔಟಿಂಗ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿದ್ದು, ನಂತರದಲ್ಲಿ ಐವರು ಸಾಮೂಹಿಕ ಅತ್ಯಾಚಾರ ಎಸಗಿ ವೀಡಿಯೊ ಮಾಡಿಕೊಂಡಿದ್ದರು. ಅಲ್ಲದೇ, ವಿಡಿಯೋ ವೈರಲ್ ಮಾಡಿದ್ದರು.

ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಸಂತ್ರಸ್ಥೆ ದೂರು ನೀಡಿದ್ದು, ದೂರು ದಾಖಲಾದ ಬಳಿಕ ಐವರು ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಆಡಳಿತ ಮಂಡಳಿ ಅಮಾನತು ಮಾಡಿದೆ. ಆಡಳಿತ ಮಂಡಳಿ ಸಭೆ ನಡೆಸಿ ಆರೋಪಿತ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ಜಾಲತಾಣಗಳಲ್ಲಿ ವೈರಲ್‌ ಆಗಿದೆ ಹೊಸ ‌ʼಚಾಲೆಂಜ್ʼ

Posted: 03 Jul 2019 04:50 AM PDT

ಐಸ್ ಬಕೆಟ್ ಚಾಲೆಂಜ್ ನೋಡಿದ್ರಿ, ಕಿಕಿ ಡ್ಯಾನ್ಸ್ ಚಾಲೆಂಜ್ ನೋಡಿದ್ರಿ ಈಗ ಬಾಟಲ್ ಕ್ಯಾಪ್ ಚಾಲೆಂಜ್ ವೊಂದು ನಿಮ್ಮ ಮುಂದೆ ಬಂದಿದೆ ನೋಡಿ.

ಕಳೆದ ಕೆಲವು ವರ್ಷಗಳಿಂದ ಸವಾಲು ಹಾಕೋಕೆ ಸೋಷಿಯಲ್ ಮಿಡಿಯಾ ಒಂದೊಳ್ಳೆ ವೇದಿಕೆಯಾಗಿದೆ. ಕ್ಷಣಾರ್ಧದಲ್ಲಿ ಸವಾಲುಗಳು ಸೋಷಿಯಲ್ ಮಿಡಿಯಾ ದಲ್ಲಿ ವೈರಲ್ ಆಗಿ ಬಿಡ್ತಾವೆ.

ಕಳೆದ ವರ್ಷ ಬಂದ ಕಿಕಿ ಚಾಲೆಂಜ್ ಲಕ್ಷಾಂತರ ನೆಟ್ಟಿಗರನ್ನು ಆಕರ್ಷಿಸಿತ್ತು. ಆ ಬಳಿಕ ಸೆಲೆಬ್ರಿಟಿಗಳು ಕೂಡ ಅದನ್ನು ಸ್ವೀಕರಿಸಿದ್ರು. ಇನ್ನು ಟಿನೇಜರ್ಸ್ ಗುರಿಯಾಗಿರಿಸಿಕೊಂಡು ಬಂದ ಮೊಮೊ ಚಾಲೆಂಜ್ ಹಲವರ ಪ್ರಾಣಕ್ಕೆ ಕುತ್ತು ತಂದಿದ್ದು ಸುಳ್ಳಲ್ಲ.

ಇದೀಗ ಬಂದಿರೋ ಮತ್ತೊಂದು ಸವಾಲು ಅಥವಾ ಚಾಲೆಂಜ್ ಅಂದ್ರೆ, ಬಾಟಲ್ ಕ್ಯಾಪ್ ಚಾಲೆಂಜ್. ಅಂದ್ರೆ ಬಾಟಲ್ ಕ್ಯಾಪ್ ನ್ನು ಕಾಲಿಂದ ಒದ್ದು ಹೊರ ತೆಗೆಯುವುದು ಅಥವಾ ಆ ಕ್ಯಾಪ್ ಇದ್ದ ಸ್ಥಳದಲ್ಲೇ ಗಿರಿಗಿಟ್ಲೆ ಹೊಡೆಯುವುದು. ಈ ಸವಾಲಿಗೆ ಚಾಲನೆ ದೊರೆತಿದ್ದು ಯುಎಫ್ಸಿ ಫೆದರ್ ವೇಯ್ಟ್ ಚಾಂಪಿಯನ್ ಮ್ಯಾಕ್ಸ್ ಹಾಲೆವ್ ನಿಂದ. ಹೆರಾಲ್ ಸನ್ ಹಗ್ ನಿಂದ ಹಾಲೆವ್ ಸವಾಲು ಸ್ವೀಕರಿಸಿದ್ರು. ಬಾಟಲ್ ಕ್ಯಾಪ್ ಚಾಲೆಂಜ್ ಇದೀಗ ಫೇಸ್ ಬುಕ್, ಟ್ವೀಟರ್ ನಲ್ಲಿ ವೈರಲ್ ಆಗ್ತಾ ಇದೆ. ವಯಸ್ಸಿನ ಬೇಧ ಮರೆತು ಸವಾಲು ಸ್ವೀಕರಿಸುತ್ತಿದ್ದಾರೆ.

— Max Holloway (@BlessedMMA) June 28, 2019

ಮಂಗಳಮುಖಿ ಪ್ರೀತಿಗೆ ಬಿದ್ದಿದ್ದ ಪತಿ, ಪತ್ನಿಗೆ ಸಿಕ್ಕಿದ್ದಿಲ್ಲಿ…!

Posted: 03 Jul 2019 04:44 AM PDT

ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಈ ಟಿಕ್ ಟಾಕ್ ಮಹಿಳೆಯೊಬ್ಬಳಿಗೆ ಪತಿ ಪತ್ತೆ ಹೆಚ್ಚಲು ನೆರವಾಗಿದೆ. ಮೂರು ವರ್ಷಗಳಿಂದ ನಾಪತ್ತೆಯಾಗಿದ್ದ ಪತಿ, ಮಂಗಳಮುಖಿ ಜೊತೆ ಟಿಕ್ ಟಾಕ್ ನಲ್ಲಿ ಸಿಕ್ಕಿಬಿದ್ದಿದ್ದಾನೆ.

ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ. 2016 ರಲ್ಲಿ ಸುರೇಶ್ ಎಂಬಾತ ನಾಪತ್ತೆಯಾಗಿದ್ದ. ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ ಸುರೇಶ್ ಸಿಕ್ಕಿರಲಿಲ್ಲ. ಕೆಲ ದಿನಗಳ ಹಿಂದೆ ಸಂಬಂಧಿಯೊಬ್ಬರು ಟಿಕ್ ಟಾಕ್ ವಿಡಿಯೋದಲ್ಲಿ ಸುರೇಶ್ ನನ್ನು ನೋಡಿದ್ದಾರೆ. ಈ ವಿಷ್ಯವನ್ನು ಅವ್ರು ಪತ್ನಿಗೆ ಹೇಳಿದ್ದಾರೆ.

ಪತ್ನಿ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾಳೆ. ಸುರೇಶ್ ಟಿಕ್ ಟಾಕ್ ಅಕೌಂಟ್ ಮೇಲೆ ನಿಗಾಯಿಟ್ಟ ಪೊಲೀಸರು ಹೊಸೂರಿನಲ್ಲಿ ಸುರೇಶ್ ನನ್ನು ಬಂಧಿಸಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ಸುರೇಶ್ ಮನೆ ಬಿಟ್ಟಿದ್ದನಂತೆ. ಹೊಸೂರಿನಲ್ಲಿ ಮೆಕ್ಯಾನಿಕ್ ಕೆಲಸ ಮಾಡ್ತಿದ್ದ ಸುರೇಶ್, ಟಿಕ್ ಟಾಕ್ ನಲ್ಲಿ ಅಕೌಂಟ್ ಹೊಂದಿದ್ದ ಮಂಗಳಮುಖಿ ಜೊತೆ ಸಂಬಂಧ ಬೆಳೆಸಿದ್ದನಂತೆ. ಆತನಿಗೆ ಕೌನ್ಸೆಲಿಂಗ್ ಮಾಡಿ ಮನೆಗೆ ಕಳುಹಿಸಲಾಗಿದೆ.

ಬೆಳಗಿನ ಉಪಹಾರ ಎಷ್ಟು ಮುಖ್ಯ ಗೊತ್ತಾ….?

Posted: 03 Jul 2019 04:28 AM PDT

ನಾವು ತೆಗೆದುಕೊಳ್ಳುವ ಆಹಾರದಲ್ಲಿ ಮುಂಜಾನೆ ತೆಗೆದುಕೊಳ್ಳುವ ಆಹಾರದ ಪಾತ್ರ ದೊಡ್ಡದು. ಆದ್ದರಿಂದ ಎಂದೂ ಅದನ್ನು ನಿರ್ಲಕ್ಷ್ಯ ಮಾಡಬಾರದು. ಬೆಳಗ್ಗೆ ಬ್ರೇಕ್ ಫಾಸ್ಟ್ ತಿನ್ನುವುದರಿಂದ ಹಲವು ಲಾಭಗಳು ಇವೆ.

* ಬಹಳ ಜನ ಉದ್ಯೋಗ ಮಾಡುವ ಮಹಿಳೆಯರು ಬೆಳಗ್ಗೆಯ ಆಹಾರದ ಬಗ್ಗೆ ಅಶ್ರದ್ಧೆ ತೋರುತ್ತಾರೆ. ಇದಕ್ಕೆ ಅವರು ಹೇಳುವ ಕಾರಣ ಸಮಯವಿಲ್ಲದಿರುವುದು. ಆದರೆ ಮುಂಜಾನೆಯ ತಿಂಡಿ ಅಗತ್ಯದ ಶಕ್ತಿ ನೀಡುತ್ತದೆ. ದಿನವಿಡೀ ಚುರುಕಾಗಿರುವುದಕ್ಕೆ ಅಡಿಪಾಯ ಹಾಕುತ್ತದೆ.

* ಕೆಲವು ಮಹಿಳೆಯರು ಬೆಳಗ್ಗೆಯ ತಿಂಡಿ ತಿನ್ನದಿದ್ದರೆ ದೇಹ ತೂಕ ಕಡಿಮೆಯಾಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಇದು ನಿಜವಲ್ಲ. ಮಧ್ಯಾಹ್ನ ಹೆಚ್ಚು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆ. ಆದ್ದರಿಂದ ಬೆಳಗ್ಗೆ ಒಂದು ಸ್ಯಾಂಡ್ವಿಚ್ ಆದರೂ ತಿನ್ನಲೇಬೇಕು.

* ರಾತ್ರಿ ಊಟದ ಬಳಿಕ ಬೆಳಗ್ಗೆಯವರೆಗೆ ನಮ್ಮ ಹೊಟ್ಟೆ ಖಾಲಿ ಇರುತ್ತದೆ. ಆದ್ದರಿಂದ ಬೆಳಗ್ಗೆ ಎದ್ದು ಎರಡು ಗಂಟೆಯೊಳಗೆ ಏನಾದರೂ ತಿನ್ನುವುದು ಒಳ್ಳೆಯದು.

* ಮುಂಜಾನೆಯ ಆಹಾರ ಯಾರು ಸೇವಿಸುವುದಿಲ್ಲವೋ ಅವರು ದಿನವಿಡಿ ಆಲಸ್ಯದಿಂದ ಇರುತ್ತಾರೆ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಕೂಡ ತಗ್ಗುತ್ತದೆ.

* ಶರೀರಕ್ಕೆ ಅಗತ್ಯದ ಶಕ್ತಿ ಸಿಗದ ಹೊರತು ಮೆದುಳು ಕೂಡ ಮಾತು ಕೇಳುವುದಿಲ್ಲ. ಹೀಗಾಗಿ ಯಾವುದೇ ಕೆಲಸದ ಬಗ್ಗೆ ಆಸಕ್ತಿ ಮೂಡುವುದಿಲ್ಲ. ಆದ್ದರಿಂದ ಏನೇ ಕೆಲಸವಿರಲಿ. ಬೆಳಗ್ಗೆ ಏನಾದರೂ ತಿನ್ನುವುದನ್ನು ರೂಢಿ ಮಾಡಿಕೊಳ್ಳಲೇಬೇಕು.

ಗುಪ್ತ ನವರಾತ್ರಿಯಲ್ಲಿ ಮಾಡಬೇಡಿ ಈ ಕೆಲಸ

Posted: 03 Jul 2019 04:27 AM PDT

ಹಿಂದೂ ಧರ್ಮದಲ್ಲಿ ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಗುಪ್ತ ನವರಾತ್ರಿ ಬರುತ್ತದೆ. ಜುಲೈ 3 ರಿಂದ ಗುಪ್ತನವರಾತ್ರಿ ಶುರುವಾಗಿದೆ. ಗುಪ್ತ ನವರಾತ್ರಿಯಲ್ಲಿ 9 ದಿನ ದುರ್ಗೆ ಆರಾಧನೆ ನಡೆಯುತ್ತದೆ. ದುರ್ಗಾ ನವರಾತ್ರಿ ಪೂಜೆ ತಡರಾತ್ರಿ ನಡೆಯುತ್ತದೆ. ದುರ್ಗೆಯ ಸ್ಥಾಪನೆ ನಂತ್ರ ಕೆಂಪು ಸಿಂಧೂರ ಹಾಗೂ ಕೆಂಪು ಚುನರಿಯನ್ನು ಹಾಕಿ ಪೂಜೆ ಮಾಡಲಾಗುತ್ತದೆ.

ಗುಪ್ತ ನವರಾತ್ರಿ ಮಾಡುವವರು ದುರ್ಗೆಯನ್ನು ಒಲಿಸಿಕೊಳ್ಳಲು ಕಠಿಣ ವೃತವನ್ನು ಮಾಡ್ತಾರೆ. ಪೂಜೆ ವೇಳೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದ್ರೆ ಯಶಸ್ಸು ಲಭಿಸುತ್ತದೆ. ಅನೇಕ ಸಮಸ್ಯೆಗಳಿಗೆ ಮುಕ್ತಿ ದೊರಕುತ್ತದೆ. ಗುಪ್ತ ನವರಾತ್ರಿಯಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅಪ್ಪಿತಪ್ಪಿಯೂ ಆ ಕೆಲಸಗಳನ್ನು ಮಾಡಬಾರದು.

ಗುಪ್ತ ನವರಾತ್ರಿಯ 9 ದಿನ ಉಗುರನ್ನು ಕತ್ತರಿಸಬಾರದು.

ಗುಪ್ತ ನವರಾತ್ರಿ ವೃತ ಮಾಡುವವರು ಕಪ್ಪು ಬಟ್ಟೆಯನ್ನು ಧರಿಸಬಾರದು.

ಮಕ್ಕಳ ಕೂದಲನ್ನು ಕತ್ತರಿಸಬಾರದು. ಚರ್ಮದ ವಸ್ತು, ಚಪ್ಪಲಿ, ಬೆಲ್ಟ್ ಬಳಸಬಾರದು.

ಗುಪ್ತ ನವರಾತ್ರಿಯ 9 ದಿನ ಪೂಜೆ ಮಾಡುವವರು ಕೂದಲು, ಗಡ್ಡ, ಮೀಸೆ ಕತ್ತರಿಸಬಾರದು.

ಗುಪ್ತ ನವರಾತ್ರಿಯಲ್ಲಿ ಅಡುಗೆಗೆ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಹಾಕಬೇಡಿ.

76 ದಿನದಲ್ಲಿ 3,500 ಕಿಲೋಮೀಟರ್ ಕ್ರಮಿಸಿದ ತೋಳ…!

Posted: 03 Jul 2019 04:16 AM PDT

ತೋಳವೊಂದು ನಾರ್ವೆಯಿಂದ ಕೆನಡಾವರೆಗೆ 3,500 ಕಿಲೋಮೀಟರ್ ದೂರವನ್ನು 76 ದಿನದಲ್ಲಿ ಕ್ರಮಿಸಿದೆ. ನಾರ್ವೆ ಪೋಲಾರ್ ಇಸ್ಟಿಟ್ಯೂಟ್ ವಿಜ್ಞಾನಿಗಳು 2017ರಲ್ಲಿ ತೋಳಕ್ಕೆ ಟ್ರೆಕ್ಕಿಂಗ್ ಉಪಕರಣವನ್ನು ಅಳವಡಿಸಿದ್ದರು.

ಕೋಸ್ಟಲ್ ಅಥವಾ ಬ್ಲೂ ಫಾಕ್ಸ್ ಎಂದು ಕರೆಯಲ್ಪಡುವ ಪ್ರಾಣಿಯು 2017 ರ ಮಾರ್ಚ್ 26 ಕ್ಕೆ ನಾರ್ವೆಯ ಸ್ವಾಲ್ಬಾರ್ಡ್ ಪ್ರದೇಶದಿಂದ ಹೊರಟು 21 ದಿನದಲ್ಲಿ ಗ್ರೀನ್ ಲ್ಯಾಂಡ್ ತಲುಪಿತ್ತು.

2018 ರ ಜುಲೈ 1ಕ್ಕೆ ಕೆನಡಾದ ಎಲ್ಮೆರ್ ದ್ವೀಪವನ್ನು ತಲುಪಿದೆ. ಇಷ್ಟು ದೂರ ಕ್ರಮಿಸಿದ್ದನ್ನು ಪ್ರಾರಂಭದಲ್ಲಿ ನಾವು ನಂಬಿರಲಿಲ್ಲ ಎಂದು ಸಂಶೋಧಕಿ ಈವಾ ಫಂಗ್ವಿ ತಿಳಿಸಿದ್ದಾರೆ.

 

 

— Norsk Polarinstitutt (@NorskPolar) June 26, 2019

ಹಲಾಲಾ ಹೆಸರಿನಲ್ಲಿ ಸೊಸೆ ಜೊತೆ ಸಂಬಂಧ ಬೆಳೆಸಿದ ಮಾವ ಹೇಳಿದ್ದೇನು..!?

Posted: 03 Jul 2019 04:15 AM PDT

ಯಮುನಾನಗರದಲ್ಲಿ ಮಹಿಳೆಯೊಬ್ಬಳು ತನ್ನ ಮಾವನ ವಿರುದ್ಧ ದೂರು ನೀಡಿದ್ದಾಳೆ. ಹಲಾಲಾ ಹೆಸರಿನಲ್ಲಿ ಮಾವ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಆಕೆ ದೂರು ನೀಡಿದ್ದಾಳೆ.

ಮುಸ್ಲಿಂ ಮಹಿಳೆಗೆ ಆಕೆ ಪತಿ ಕೆಲ ತಿಂಗಳ ಹಿಂದೆ ತಲಾಕ್ ನೀಡಿದ್ದನಂತೆ. ಮಹಿಳೆ ತವರು ಸೇರಿದ್ದಳಂತೆ. ಆದ್ರೆ ಅಲ್ಲಿಗೆ ಬಂದ ಪತಿ ತಂದೆ, ಮದುವೆ ಮುರಿಯುವುದು ಬೇಡ. ಮನೆಯಲ್ಲಿಯೇ ಹಲಾಲಾ ನಡೆಯಲಿ ಎಂದು ಸೊಸೆಯನ್ನು ಮನೆಗೆ ಕರೆದೊಯ್ದಿದ್ದನಂತೆ. ಕೆಲ ದಿನಗಳ ನಂತ್ರ ಸೊಸೆ ಜೊತೆ ಸಂಬಂಧ ಬೆಳೆಸಲು ಮುಂದಾಗಿದ್ದಾನೆ. ಸೊಸೆ ಇದಕ್ಕೆ ವಿರೋಧ  ವ್ಯಕ್ತಪಡಿಸಿದ್ದಾಳೆ.

ಬಲವಂತವಾಗಿ ಸಂಬಂಧ ಬೆಳೆಸಿದ ಮಾವ, ಸುಮ್ಮನಿರುವಂತೆ ಸೂಚಿಸಿದ್ದಾನೆ. ನಿನ್ನ ಹೆಸರಿಗೆ ಜಮೀನು ಬರೆಯುತ್ತೇನೆ, ಸಹಕರಿಸು ಎಂದಿದ್ದಾನೆ. ಇದನ್ನು ವಿರೋಧಿಸಿದ ಸೊಸೆ ಪತಿಗೆ ವಿಷ್ಯ ತಿಳಿಸಿದ್ದಾಳೆ. ಆದ್ರೆ ಪತಿ, ಪತ್ನಿಗೆ ಹೊಡೆದು ತಲಾಕ್ ನೀಡಿದ್ದಾನಂತೆ. ಪೊಲೀಸ್ ಠಾಣೆಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಪತ್ನಿ ಆರೋಪವನ್ನು ಪತಿ ತಳ್ಳಿಹಾಕಿದ್ದಾನೆ. ತನಿಖೆ ನಂತ್ರ ಸತ್ಯ ಹೊರ ಬರಬೇಕಿದೆ.

ಈ ಪಂದ್ಯದ ನಂತ್ರ ಧೋನಿ ನಿವೃತ್ತಿ…!

Posted: 03 Jul 2019 03:57 AM PDT

ವಿಶ್ವಕಪ್ 2019ರಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಗೇರಿದೆ. ವಿಶ್ವಕಪ್ 2019ರಲ್ಲಿ ಟೀಂ ಇಂಡಿಯಾ ದಾರಿ ಎಲ್ಲಿ ಮುಕ್ತಾಯಗೊಳ್ಳಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಸ್ವಲ್ಪ ದಿನ ಕಾಯಬೇಕು. ವಿಶ್ವಕಪ್ ನಲ್ಲಿ ಭಾರತ ಫೈನಲ್ ಗೇರಲಿದೆಯಾ ಇಲ್ಲ ಸೆಮಿಫೈನಲ್ ನಲ್ಲಿಯೇ ಆಟ ಮುಗಿಸಲಿದೆಯಾ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಶ್ವಕಪ್ 2019ರಲ್ಲಿ ಟೀಂ ಇಂಡಿಯಾದ ಕೊನೆ ಪಂದ್ಯ ಮಾಜಿ ನಾಯಕ ಎಂ.ಎಸ್. ಧೋನಿಗೂ ಕೊನೆ ಪಂದ್ಯವಾಗಲಿದೆ. ನೀಲಿ ಜರ್ಸಿಯಲ್ಲಿ ಧೋನಿಯನ್ನು ಅಭಿಮಾನಿಗಳು ಆ ನಂತ್ರ ನೋಡುವುದಿಲ್ಲ. ಕೊನೆ ಪಂದ್ಯದಲ್ಲಿ ಧೋನಿ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎನ್ನಲಾಗ್ತಿದೆ. ಬಿಸಿಸಿಐ ಅಧಿಕಾರಿಯೊಬ್ಬರು ಈ ವಿಷ್ಯ ತಿಳಿಸಿದ್ದಾರೆ.

ಟೀಂ ಇಂಡಿಯಾ ಫೈನಲ್ ಗೇರಿದ್ರೆ ಧೋನಿ ಕೊನೆ ಪಂದ್ಯವನ್ನು ಜುಲೈ 14 ರಂದು ಆಡಲಿದ್ದಾರೆ ಎನ್ನಲಾಗ್ತಿದೆ. ಮಹಾನ್ ಆಟಗಾರನಿಗೆ ಇದಕ್ಕಿಂತ ದೊಡ್ಡ ಬೀಳ್ಕೊಡುಗೆ ಸಿಗಲು ಸಾಧ್ಯವಿಲ್ಲ. ಆದ್ರೆ ಧೋನಿ ಯಾವ ನಿರ್ಧಾರ ತೆಗೆದುಕೊಳ್ತಾರೆಂಬುದು ಇನ್ನೂ ಹೊರಬಿದ್ದಿಲ್ಲ. ನಾಯಕತ್ವವನ್ನು ಧೋನಿ ಸುಳಿವಿಲ್ಲದೆ ಬಿಟ್ಟಿದ್ದರು. ವಿಶ್ವಕಪ್ ಪಂದ್ಯದ ನಂತ್ರವೂ ಧೋನಿ ಆಟ ಮುಂದುವರೆಸುತ್ತಾರೆಂಬುದು ಅನುಮಾನ. ಹಾಗಂತ ಅವ್ರ ಬಗ್ಗೆ ನಿಶ್ಚಿತವಾಗಿ ಏನೂ ಹೇಳಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ ಆಯ್ಕೆ ಸಮಿತಿ ಅವಧಿ ಅಕ್ಟೋಬರ್ ನಲ್ಲಿ ಮುಕ್ತಾಯವಾಗಲಿದೆ. ಹೊಸ ಆಯ್ಕೆ ಸಮಿತಿ ಮುಂದೆ ಟಿ-20 ವಿಶ್ವಕಪ್ ತಂಡದ ಆಯ್ಕೆ ಹೊಣೆಯಿರುತ್ತದೆ. ತಕ್ಷಣ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ. ಹಾಗೆ ಮುಂದಿನ ದಿನಗಳು ಈಗಿನಂತಿರಲು ಸಾಧ್ಯವಿಲ್ಲ. ಈಗಾಗಲೇ ಕೆಲ ನಾಯಕರು ಧೋನಿ ನಿವೃತ್ತಿ ಬಗ್ಗೆ ಧ್ವನಿ ಎತ್ತಿದ್ದಾರೆ.

 

ಭಕ್ತರಿಗೆ ನಶೆ ಪದಾರ್ಥ ನೀಡಿ ಮಹಿಳೆ ಮಾಡ್ತಿದ್ಲು ಇಂಥ ಕೆಲಸ..!

Posted: 03 Jul 2019 03:35 AM PDT

ಶಿರಡಿಯಲ್ಲಿ ಭಕ್ತರಿಗೆ ವಂಚನೆ ಮಾಡ್ತಿದ್ದ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ. ಮಹಿಳೆ, ಆಹಾರದಲ್ಲಿ ನಶೆ ಪದಾರ್ಥ ನೀಡಿ ಭಕ್ತರನ್ನು ಲೂಟಿ ಮಾಡ್ತಿದ್ದಳಂತೆ. ಪೊಲೀಸರು ವೃದ್ಧೆಯೊಬ್ಬಳ ದೂರಿನ ಆಧಾರದ ಮೇಲೆ ಮಹಿಳೆಯನ್ನು ಬಂಧಿಸಿದ್ದಾರೆ.

ಶಿರಡಿ ಸಾಯಿಬಾಬಾ ಮಂದಿರದ ಬಳಿ ಭಕ್ತರಿಗೆ ಆಹಾರ ನೀಡ್ತಿದ್ದ ಮಹಿಳೆ ಅದ್ರಲ್ಲಿ ನಶೆ ಪದಾರ್ಥ ಹಾಕ್ತಿದ್ದಳಂತೆ. ಭಕ್ತರು ಪ್ರಜ್ಞೆ ತಪ್ಪುತ್ತಿದ್ದಂತೆ ಅವ್ರ ಬಳಿಯಿರುವ ಆಭರಣ, ಹಣ ಲೂಟಿ ಮಾಡ್ತಿದ್ದಳಂತೆ. ಜೂನ್ 19ರಂದು ವೃದ್ಧೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಳು. ಮಹಿಳೆ 3.5 ಗ್ರಾಂ ಚಿನ್ನ ಹಾಗೂ 10,000 ರೂಪಾಯಿ ದೋಚಿದ್ದಾಳೆಂದು ದೂರಿದ್ದಳು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವಸ್ಥಾನದ ಆಸುಪಾಸಿರುವ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಮೂಲತಃ ಚಂಡೀಗಢದ ಆರೋಪಿ ಪಿಂಕಿ, ಘಟನೆ ನಡೆದ ಮೇಲೆ ಊರು ಬಿಟ್ಟಿದ್ದಳು. ಕೆಲ ದಿನಗಳ ಹಿಂದೆ ಶಿರಡಿಗೆ ವಾಪಸ್ ಆಗಿದ್ದಾಳೆ. ಆಗ ಪೊಲೀಸರು ಬಂಧಿಸಿದ್ದಾರೆ.

ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಮಾಂಟ್ರಿಯಲ್

Posted: 03 Jul 2019 03:33 AM PDT

ಒಂದೆಡೆ ಪ್ರಕೃತಿಯ ಸುಂದರ ವಾತಾವರಣ. ಇನ್ನೊಂದೆಡೆ ಕಲೆ, ಸಂಸ್ಕೃತಿಗಳಿಂದ ಸಮೃದ್ಧವಾದ ಮಾಂಟ್ರಿಯಲ್ ಗೆ ಪ್ರವಾಸಿಗರನ್ನು ಮೋಡಿ ಮಾಡುವ ಮಾಂತ್ರಿಕ ಶಕ್ತಿ ಇದೆ. ಕೆನಡಾದ ಮಾಂಟ್ರಿಯಲ್ ಪ್ರಾಕೃತಿಕ ತಾಣಗಳಿಂದ ಕೂಡಿದ್ದು, ಚಾರಣಿಗರನ್ನು ಯಥೇಚ್ಛವಾಗಿ ಸೆಳೆಯುತ್ತಿದೆ.

ಕೆನಡಾದ ಹಳೆಯ ವಸಾಹತುಗಳಲ್ಲಿ ಒಂದಾದ ದ್ವೀಪನಗರಿ ಮಾಂಟ್ರಿಯಲ್ ಹಲವು ವೈಶಿಷ್ಟ್ಯತೆಗಳೊಂದಿಗೆ ಪ್ರವಾಸಿಗರನ್ನು ವ್ಯಾಪಕವಾಗಿ ಸೆಳೆಯುತ್ತಿದೆ. ಇದು ಐತಿಹಾಸಿಕ ತಾಣವಾಗಿಯೂ ಖ್ಯಾತಿ ಹೊಂದಿದೆ. ಮೌಂಟ್ ರಿಯಲ್ ಎಂಬ ಬೆಟ್ಟದ ಸುತ್ತ ಹರಡಿರುವುದರಿಂದ ಈ ನಗರಕ್ಕೆ ಮಾಂಟ್ರಿಯಲ್ ಎಂಬ ಹೆಸರು ಬಂದಿದೆ.

ಯುರೋಪಿಯನ್ನರು ಬರುವ ಮುಂಚೆ ರೆಡ್ ಇಂಡಿಯನ್ ಜನಾಂಗ ಇಲ್ಲಿ ವಾಸವಿತ್ತು. 17ನೇ ಶತಮಾನದಲ್ಲಿ ಫ್ರೆಂಚರು ಈ ಸ್ಥಳವನ್ನು ಆಕ್ರಮಿಸಿದರು. ನಂತರ ಬ್ರಿಟಿಷರು ವಶಪಡಿಸಿಕೊಂಡರು. ಈಗ ಇದು ಕೆನಡಾದ ಪ್ರಮುಖ ನಗರಗಳಲ್ಲಿ ಒಂದು.

ಮಾಂಟ್ರಿಯಲ್ ನಗರ ಹಳೆಯ ಹಾಗೂ ಹೊಸ ನಗರಗಳ ಸಮ್ಮಿಶ್ರಣ. ನಗರದ ಹಳೆಯ ಭಾಗದಲ್ಲಿ 17ನೇ ಶತಮಾನದ ಮನೆಗಳು, ಭವನಗಳವೆ. ಅಲ್ಲಿನ ರಸ್ತೆಗಳಲ್ಲಿ ಹಳೆಯ ಕಾಲದ ವಿಕ್ಟೋರಿಯಾ ಕುದುರೆ ಗಾಡಿಗಳನ್ನು ಕಾಣಬಹುದು. ಹಾಗೇ ಹಳೆಯ ಕಾಲದ ಜಾನಪದ ಕಲಾ ವಸ್ತುಗಳು, ಪೇಂಟಿಂಗ್ ಗಳು ಲಭ್ಯ.
ಇಲ್ಲಿ ನೋಡಲೇಬೇಕಾದ ಪ್ರೇಕ್ಷಣೀಯ ಸ್ಥಳಗಳೆಂದರೆ ಗೋಥೀಕ್ ಶೈಲಿಯಲ್ಲಿ ಕಟ್ಟಿರುವ ನೋಟ್ರೆ ಡೇಮ್ ಬೆಸಿಲಿಕಾ, ಮಾಂಟ್ರಿಯಲ್ ಟವರ್ ಅಬ್ಸರ್ ವೇಟರಿ, ಬಯೋಡೋಮ್ ಎಂಬ ಜಲಚರಗಳು ಮತ್ತು ಪಕ್ಷಿಗಳ ಪ್ರಕೃತಿ ಸಹಜ ತಂಗುದಾಣ, ಹಳೆಯ ಬಂದರು, ಚೈನೀಸ್ ಬೊಟಾನಿಕಲ್ ಉದ್ಯಾನ ಮುಂತಾದವುಗಳು.
ಮಾಂಟ್ರಿಯಲ್ ಗಿರಿ ಅತ್ಯಂತ ಸುಂದರ. ಬೆಟ್ಟವನ್ನೇರುವಾಗ ಕಾಣುವ ಸುಂದರ ಮನೆಗಳು, ಚಾರಣ ದಾರಿಗಳು, ಸ್ಕೀಯಿಂಗ್ ಹಾಗೂ ಸ್ಕೇಟಿಂಗ್ ತಾಣಗಳು ವೀಕ್ಷಣೀಯ. ಬೆಟ್ಟದ ಮೇಲಿರುವ ವೀಕ್ಷಣಾ ತಾಣದಿಂದ ಕಾಣುವ ನಗರದ ವಿಹಂಗಮ ನೋಟ ಅತ್ಯಂತ ಸುಂದರ.

ಶಿಲ್ಪಕಲೆಗಳಿಂದ ಕೂಡಿದ ನಗರದ ಮ್ಯೂಸಿಯಂಗಳು, ಕಲಾ ಕೇಂದ್ರಗಳು, ಅನೇಕ ಭಾರತೀಯ ಉಪಹಾರ ಮಂದಿರಗಳಿವೆ. ಇಲ್ಲಿನ ವಸ್ತ್ರ ಮಳಿಗೆಗಳಲ್ಲಿ ಕೈಗೆಟಕುವ ಬೆಲೆಗಳಲ್ಲಿ ಸುಂದರ ಉಡುಪುಗಳು ದೊರೆಯುತ್ತವೆ.

ಬಜೆಟ್ ಗೂ ಮುನ್ನವೇ ರೈತರಿಗೆ ಬಂಪರ್:‌ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

Posted: 03 Jul 2019 03:29 AM PDT

ಬಜೆಟ್ ಗೂ ಮುನ್ನ ಕೇಂದ್ರ ಸರ್ಕಾರ ರೈತರಿಗೆ ಖುಷಿ ಸುದ್ದಿ ನೀಡಿದೆ. ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ, ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಖಾರಿಫ್ ಬೆಳೆಗಳ ಮೇಲೆ ಎಂಎಸ್ಪಿ ಹೆಚ್ಚಳ ಮಾಡಿದೆ.

ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ, ಖಾರೀಫ್ ಬೆಳೆಗಳ ಎಂಎಸ್‌ಪಿ ಹೆಚ್ಚಿಸಲು ಅನುಮೋದನೆ ಸಿಕ್ಕಿದೆ. ಕೇಂದ್ರ ಸರ್ಕಾರ ಸೋಯಾಬಿನ್ ಮೇಲೆ ಎಂಎಸ್ಪಿಯನ್ನು 3399 ರೂಪಾಯಿಯಿಂದ 3710ಕ್ಕೆ ಏರಿಕೆ ಮಾಡಿದೆ. ಉದ್ದಿನ ಎಂಎಸ್ಪಿ ದರವನ್ನು 100 ರೂಪಾಯಿ ಏರಿಕೆ ಮಾಡಿ 5600 ರೂಪಾಯಿ ಬದಲು 5700 ರೂಪಾಯಿ ಮಾಡಿದೆ.

ತೊಗರಿ ಬೇಳೆ ಕನಿಷ್ಠ ಬೆಂಬಲ ಬೆಲೆಯನ್ನು 5675 ಯಿಂದ 5800 ರೂಪಾಯಿಗೆ ಏರಿಕೆ ಮಾಡಿದೆ. ಸೂರ್ಯಕಾಂತಿ ಎಂಎಸ್ಪಿ ದರ 5388 ಬದಲು 5653 ರೂಪಾಯಿಯಾಗಿದೆ. ಕೇಂದ್ರದ ಈ ನಿರ್ಧಾರ ರೈತರ ಮೊಗದಲ್ಲಿ ನಗು ಮೂಡಿಸಿದೆ.

ಮಳೆಗಾಲಕ್ಕೆ ʼಬೆಸ್ಟ್ʼ ವಾಟರ್‌ ಫ್ರೂಪ್ ಮೇಕಪ್‌

Posted: 03 Jul 2019 03:14 AM PDT

ಮಳೆಗಾಲದಲ್ಲಿ ಪ್ರತೀದಿನ ಮೇಕಪ್‌ ಮಾಡದಿರುವುದೇ ತ್ವಚೆಗೆ ಒಳ್ಳೆಯದು. ಆದರೆ ಮದುವೆ, ಸಮಾರಂಭಗಳಿಗೆ ಹೋಗುವಾಗ ಸ್ವಲ್ಪ ಮೇಕಪ್‌ ಇದ್ದರನೇ ಮುಖಕ್ಕೊಂದು ಕಳೆ ಬರುತ್ತದೆ.

ಮಳೆಗಾಲದಲ್ಲಿ ಮೇಕಪ್‌ ಮಾಡುವಾಗ ವಾಟರ್‌ ಫ್ರೂಪ್‌ ಮೇಕಪ್ ಬಳಸುವುದು ಬೆಸ್ಟ್‌. ಅದರಲ್ಲೂ ಈ ಟಿಪ್ಸ್‌ ಬಳಸಿ ಮೇಕಪ್‌ ಮಾಡಿದರೆ ಮತ್ತಷ್ಟು ಆಕರ್ಷಕವಾಗಿ ಕಾಣಬಹುದು.

* ಮೇಕಪ್‌ಗೆ ಮುನ್ನ ಪ್ರೀಮಿಯರ್ ಹಾಕಿ. ಇದು ಮೇಕಪ್‌ ತುಂಬಾ ಹೊತ್ತು ಮುಖದಲ್ಲಿ ಉಳಿದುಕೊಳ್ಳುವಂತೆ ಮಾಡುತ್ತದೆ.

* ನಂತರ ಬೇಬಿ ಕ್ರೀಮ್ ನಂಥ ಆಯಿಲ್‌ ಫ್ರೀ ಮಾಯಿಶ್ಚರೈಸರ್‌ ಹಚ್ಚಿ. ಲಿಕ್ವಿಡ್‌ ಕ್ರೀಮ್ ಫೌಂಡೇಷನ್‌ ಹಚ್ಚುವ ಬದಲು ಪೌಡರ್‌ ಫೌಂಡೇಷನ್ ಸೂಕ್ತ.

* ನಂತರ ಆಯಿಲ್‌ ಫ್ರೀ ಕ್ಲೆನ್ಸರ್‌ ಹಚ್ಚಿ.

* ಮತ್ತೊಮ್ಮೆ ಲೈಟ್ ಮಾಯಿಶ್ಚರೈಸರ್‌ ಹಚ್ಚಿ, ನಂತರ ಸ್ವಲ್ಪ ಪೌಡರ್‌ ಹಚ್ಚಿ.

* ಈಗ ಮುಖಕ್ಕೆ ಹೊಂದುವ ಫೌಂಡೇಷನ್‌ ಪೌಡರ್‌ ಹಚ್ಚಿ.

* ನಂತರ ಕಣ್ಣಿಗೆ ವಾಟರ್‌ ಫ್ರೂಫ್ ಮಸ್ಕರಾ ಹಚ್ಚಿ.

* ಕೊನೆಗೆ ತುಟಿಗೆ ಲಿಪ್‌ಬಾಮ್ ಹಚ್ಚಿ, ಲಿಪ್‌ ಸ್ಟಿಕ್‌ ಹಚ್ಚಿ.

* ಇನ್ನು ಮುಖಕ್ಕೆ ಹೊಂದುವಂತೆ ಹೇರ್‌ಸ್ಟೈಲ್ ಮಾಡಿದರೆ ನಿಮ್ಮ ಲುಕ್‌ ಆಕರ್ಷಕವಾಗಿರುತ್ತದೆ.

ಲಂಚ್‌ ಬಾಕ್ಸ್‌ ಸ್ವಚ್ಚತೆಗೆ ಸಿಂಪಲ್‌ ಟಿಪ್ಸ್

Posted: 03 Jul 2019 03:12 AM PDT

ಪ್ರತಿ ನಿತ್ಯ ಶಾಲೆಗೆ ಹಾಗೂ ಕಚೇರಿಗೆ ತೆಗೆದುಕೊಂಡು ಹೋಗುವ ಲಂಚ್‌ ಬಾಕ್ಸ್‌ಗಳನ್ನು ಸ್ವಚ್ಚಗೊಳಿಸುವುದು ಬಹಳ ಮುಖ್ಯ. ಆಹಾರ ಬಹಳಷ್ಟು ಸಮಯ ಊಟದ ಡಬ್ಬಿಯಲ್ಲಿರುವುದರಿಂದ ಆಹಾರದ ಬಣ್ಣ, ಆಹಾರದಲ್ಲಿ ಬಳಸಿರುವ ಎಣ್ಣೆ ಡಬ್ಬದಲ್ಲಿ ಹಾಗೇ ಉಳಿದಿರುತ್ತವೆ ಇದರಿಂದ ಟಪ್ಪರ್‌ ವೇರ್‌ ಅಥವಾ ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಬಹು ಬೇಗ ಕಲೆಗಳಾಗುತ್ತವೆ ಹಾಗೂ ವಾಸನೆಯಿಂದ ಕೂಡಿರುತ್ತದೆ.

ಕೆಲ ವಿಧಾನ ಅನುಸರಿಸುವ ಮೂಲಕ ಡಬ್ಬಗಳನ್ನು ವಾಸನೆ ಹಾಗೂ ಕಲೆಗಳಿಂದ ದೂರವಾಗಿಸಬಹುದು.

* ಲಂಚ್‌ ಬಾಕ್ಸ್‌ಗಳನ್ನು 15 ರಿಂದ 20 ನಿಮಿಷ ಬಿಸಿ ನೀರಿನಲ್ಲಿ ನೆನೆಸಿ. ನಂತರ ಪಾತ್ರೆ ತೊಳೆಯುವ ಸ್ಕ್ರಬ್‌ಗೆ ಲಿಕ್ವಿಡ್‌ ಹಾಕಿ ಡಬ್ಬಗಳನ್ನು ಚೆನ್ನಾಗಿ ಉಜ್ಜಿ. ಡಬ್ಬದ ಮುಚ್ಚಳ ಮುಚ್ಚುವ ಭಾಗಗಳಲ್ಲಿ ಹೆಚ್ಚು ಕಲೆಗಳು ಹಾಗೂ ಜಿಡ್ಡು ಇರುತ್ತದೆ. ಇದನ್ನು ಟೂತ್‌ಬ್ರಷ್‌ ಸಹಾಯದಿಂದ ಉಜ್ಜಿ. ನಂತರ ಶುಭ್ರವಾದ ನೀರಿನಿಂದ ಡಬ್ಬಗಳನ್ನು ತೊಳೆಯಿರಿ.

* ಡಬ್ಬಗಳನ್ನು ತೊಳೆದ ನಂತರವೂ ವಾಸನೆ ಇದ್ದರೆ ಅರ್ಧ ಹೋಳು ನಿಂಬೆ ಹಣ್ಣನ್ನು ತೆಗೆದುಕೊಂಡು ಡಬ್ಬ ಹಾಗೂ ಮುಚ್ಚಳದ ಮೇಲೆ ಚೆನ್ನಾಗಿ ಉಜ್ಜಿ ನಂತರ ತೊಳೆಯಿರಿ.

* ನಿಂಬೆ ಹಣ್ಣು ಬಳಸಲು ಇಚ್ಛಿಸದವರು ಬೇಕಿಂಗ್‌ ಸೋಡಾ ಬಳಸಬಹುದು. ಬೇಕಿಂಗ್‌ ಸೋಡಾವನ್ನು ಡಬ್ಬ ಹಾಗೂ ಮುಚ್ಚಳದ ಮೇಲೆ ಚೆನ್ನಾಗಿ ಹರಡಿ ನಂತರ ಸ್ಕ್ರಬ್‌ನಿಂದ ಉಜ್ಜಿ ತೊಳೆದರೆ ಹಳದಿ ಕಲೆಗಳು ಹಾಗೂ ವಾಸನೆ ಹೋಗುತ್ತದೆ.

* ತೊಳೆದ ಡಬ್ಬಗಳನ್ನು ಒಣಗಿದ ಶುಭ್ರ ಬಟ್ಟೆಯಿಂದ ಒರೆಸಿ ಇಡುವುದರಿಂದ ಬಾಕ್ಸ್‌ಗಳು ಬೇಗ ಹಾಳಾಗುವುದಿಲ್ಲ.