Translate

Thursday, May 23, 2019

Kannada News | Karnataka News | India News

Kannada News | Karnataka News | India News


ʼಸೆಕ್ಸ್ ಲೈಫ್ʼ ನಿಂದ ದೂರವಾಗಲು ಇದೂ ಕಾರಣ

Posted: 23 May 2019 08:56 AM PDT

ಸಂಗಾತಿ ಮೊದಲಿನಂತಿಲ್ಲ. ಇಬ್ಬರ ನಡುವಿನ ಅಂತರ ಜಾಸ್ತಿಯಾಗ್ತಿದೆ. ಶಾರೀರಿಕ ಸಂಬಂಧ, ರೋಮ್ಯಾನ್ಸ್ ದೂರವಾಗ್ತಿದೆ ಎಂದು ಕೊರಗುವವರಿದ್ದಾರೆ. ಅವರ ತಲೆಯಲ್ಲಿ ಮೊದಲು ಓಡುವ ಪ್ರಶ್ನೆ ಸಂಗಾತಿಯ ಇನ್ನೊಂದು ಸಂಬಂಧ. ತನ್ನನ್ನು ಬಿಟ್ಟು ಸಂಗಾತಿ ಬೇರೆ ಸಂಬಂಧ ನೋಡಿಕೊಂಡ್ರಾ ಎಂಬ ಸಂಶಯ ಮನಸ್ಸಿನಲ್ಲಿ ಮನೆ ಮಾಡುತ್ತದೆ. ಈ ಸಂಶಯ ಬರುವ ಮೊದಲು ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸೂಕ್ತ.

ಕೇವಲ ಇನ್ನೊಂದು ಸಂಬಂಧ ಮಾತ್ರ ಸಂಗಾತಿ ನಿಮ್ಮಿಂದ ದೂರವಾಗಲು ಕಾರಣವಾಗುವುದಿಲ್ಲ. ಕಾಲದ ಜೊತೆ ಓಡುವ ಈ ಜೀವನಶೈಲಿ ಕೂಡ ಬಹುಮುಖ್ಯ ಕಾರಣವಾಗುತ್ತದೆ.

ಸಂಗಾತಿ ನಿಮ್ಮ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಮೊದಲಿನಂತೆ ಆಸಕ್ತಿ ತೋರಿಸುತ್ತಿಲ್ಲವಾದಲ್ಲಿ ಕಾರಣ ತಿಳಿದುಕೊಳ್ಳಿ. ಒತ್ತಡ ಕೂಡ ಶಾರೀರಿಕ ಸಂಬಂಧದಿಂದ ದೂರವಾಗಲು ಕಾರಣವಾಗುತ್ತದೆ. ಮೊದಲು ಸಂಗಾತಿ ಜೊತೆ ಕುಳಿತು ಮಾತನಾಡಿ. ಅವರ ಒತ್ತಡಕ್ಕೆ ಕಾರಣ ತಿಳಿದುಕೊಂಡು ಪರಿಹಾರಕ್ಕೆ ಪ್ರಯತ್ನಿಸಿ.

ಆರೋಗ್ಯವಂತ ವ್ಯಕ್ತಿಗೆ 8 ತಾಸಿನ ನಿದ್ರೆಯ ಅಗತ್ಯವಿದೆ. ಸರಿಯಾಗಿ ನಿದ್ರೆ ಬರದಿದ್ದಲ್ಲಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗೆ ಕಿರಿಕಿರಿಯುಂಟು ಮಾಡುತ್ತಿರುತ್ತದೆ. ಶಾರೀರಿಕ ಸಂಬಂಧ ಬೆಳೆಸಲು ಅಗತ್ಯವಿರುವ ಮೂಡ್ ಹಾಳುಮಾಡುವ ಜೊತೆಗೆ ನಿಶ್ಯಕ್ತಿಯುಂಟು ಮಾಡುತ್ತದೆ.

ವಾದ-ವಿವಾದ, ಜಗಳ-ಗಲಾಟೆ ಕೂಡ ಶಾರೀರಿಕ ಸಂಬಂಧದ ಮೇಲೆ ಪ್ರಭಾವ ಬೀರುತ್ತದೆ.

ಬೇರೆ ಕಾರಣಗಳಿಗೆ ನೀವು ತೆಗೆದುಕೊಳ್ಳುವ ಮಾತ್ರೆ-ಔಷಧಿ ಕೂಡ ನಿಮ್ಮ ಸೆಕ್ಸ್ ಲೈಫ್ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಂದು ಮಾತ್ರೆಗಳು ಸೆಕ್ಸ್ ಮೇಲಿನ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಾತ್ರೆ ಸೇವನೆಗೆ ಮೊದಲು ಅದ್ರ ಅಡ್ಡ ಪರಿಣಾಮಗಳನ್ನು ತಿಳಿದುಕೊಳ್ಳಿ.

ತಿನ್ನುವ ಆಹಾರ ಹಾಗೂ ಸೇವಿಸುವ ಸಮಯದಲ್ಲಿನ ವ್ಯತ್ಯಾಸವೂ ಶಾರೀರಿಕ ಸಂಬಂಧದಲ್ಲಿ ಆಸಕ್ತಿ ಕಡಿಮೆ ಮಾಡುತ್ತದೆ. ಕೆಲವೊಂದು ಆಹಾರ ಸೆಕ್ಸ್ ಲೈಫ್ ಸುಖಕರವಾಗಿರಲು ನೆರವಾದ್ರೆ ಮತ್ತೆ ಕೆಲವು ಲೈಂಗಿಕ ಜೀವನಕ್ಕೆ ಅಡ್ಡಗಾಲುಂಟು ಮಾಡುತ್ತವೆ.

ಅತಿ ಹೆಚ್ಚು ಆಹಾರ ಸೇವನೆ, ಸದಾ ಮೊಬೈಲ್, ಲ್ಯಾಪ್ ಟಾಪ್, ಟಿವಿ ಬಳಕೆಯೂ ಇಬ್ಬರ ನಡುವೆ ಅಂತರ ಜಾಸ್ತಿ ಮಾಡುತ್ತದೆ.

ಬಿಸ್ಕೇಟ್ ಮೇಲ್ಪದರ ಪ್ರತ್ಯೇಕಿಸಿದ ಸಾಧಕ…!

Posted: 23 May 2019 08:44 AM PDT

ಸಾಧನೆ ಅನ್ನೋದು ಹೇಗಿರುತ್ತೆ? ಎಲ್ಲಿ ಇರುತ್ತೇ ಅನ್ನೋದು ಗೊತ್ತಾಗೋದು ಕಷ್ಟದ ವಿಷ್ಯ. ಬಿಸ್ಕೇಟ್ ನಡುವಿನ ಪದರವನ್ನು ಪ್ರತ್ಯೇಕಿಸಿ ಒಬ್ಬ ಸಾಧನೆ ಮೆರೆದಿದ್ದಾನೆ.

ಬೋರ್ಬನ್ ಬಿಸ್ಕೇಟ್ ನಡುವೆ ಇರುವ ಕ್ರೀಮ್ ಮತ್ತು ಚಾಕೋಲೇಟ್ ಅಂಶಗಳು ಕೆಡದಂತೆ ಪದರವನ್ನು ಬೇರ್ಪಡಿಸಿದ್ದಾನೆ. ಈ ಸಾಧನೆ ಮಾಡಲು ಬಹಳಷ್ಟು ಸಮಯ ಹಿಡಿದಿದೆ. ಆತನ ಸಾಧನೆಗೆ ನೆಟ್ಟಿಗರು ಮತ್ತು ಸ್ನೇಹಿತರು ಪ್ರಶಂಸೆ ವ್ಯಕ್ತಪಡಿಸುದ್ದಾರೆ.

ರೆಡ್ ಇಟ್ ನಲ್ಲಿ ಈ ಸುದ್ದಿ ಭಿತ್ತರವಾಗುತ್ತಿದ್ದಂತೆ ಉಳಿದ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡ್ತು. ಅದ್ರೆ ಬಿಸ್ಕೇಟ್ ಪ್ರತ್ಯೇಕಿಸಿದ ಕುರಿತು ಹಲವು ಟೀಕೆಗಳು ವ್ಯಕ್ತವಾಗಿವೆ. ಅಲ್ಲದೇ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಆದ್ರೆ ಆತ ಇದು ನನ್ನ ಜೀವಮಾನದ ಸಾಧನೆ ಎಂದಿದ್ದಾನೆ.

 

 

ಅಬ್ಬಬ್ಬಾ: ಅಚ್ಚರಿಗೆ ಕಾರಣವಾಗುತ್ತೆ ಈ ಶ್ವಾನದ ಪ್ರದರ್ಶನ

Posted: 23 May 2019 08:41 AM PDT

ಬ್ರೆಜಿಲ್‌ ನ ಪೋರ್ಟಲೇಜಾದಲ್ಲಿ ಜೀವಂತ ಮೂರ್ತಿ ಪ್ರದರ್ಶಕನೊಬ್ಬ ನಾಯಿಯ ಜೊತೆ ಪ್ರದರ್ಶನ ನೀಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿ ಹರಿದಾಡುತ್ತಿದೆ.

ವೆನೆಜುವೆಲಾದಿಂದ ಬಂದಿರುವ ಯೋರ್ಗೆ ಲೂಯಿ ಋಯಿಜ್ ದಿನನಿತ್ಯ ಮೀನು ಹಿಡಿಯುವವನ ವೇಷದಲ್ಲಿ ಬಂದು ನಿಲ್ಲುತ್ತಾನೆ. ಆದರೆ ಎಲ್ಲರ ಗಮನ ಸೆಳೆಯುತ್ತಿರುವುದು ಅವನ ನಾಯಿ ಜಾಪ್ಸೆ.

ಈ ನಾಯಿ ಋಯಿಜ್ ಜೊತೆ ಸೇರಿ ತಾನು ಮೂರ್ತಿಯಂತೆ ಕುಳಿತುಕೊಳ್ಳುತ್ತದೆ. ಋಯಿಜ್ ಅಲ್ಲಾಡುವವರೆಗೂ ಅದು ಒಂದು ಇಂಚು ಅಲ್ಲಾಡುವುದಿಲ್ಲವಂತೆ.

ಇದೀಗ ಇದರ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ 27 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಹಲವರು ನಾಯಿಯ ಚಾತುರ್ಯಕ್ಕೆ ಅಚ್ಚರಿ ವ್ಯಕ್ತಪಡಿಸಿದರೆ ಕೆಲವರು ಅವನು ನಾಯಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪ ಮಾಡಿದ್ದಾರೆ.

ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ರೂ ಮಾತನಾಡಲಿಲ್ಲ ಹಾಲಿ ಮತ್ತು ಮಾಜಿ ಸಿಎಂ

Posted: 23 May 2019 07:55 AM PDT

ಇಂದು ಮತ ಎಣಿಕೆ ಕಾರ್ಯ ನಡೆದಿದ್ದು, ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಮತ ಎಣಿಕೆಗೂ ಮುನ್ನ ರಾಜಸ್ಥಾನದ ಸಿಎಂ ಅಶೋಕ್‍ ಗೆಲ್ಹೋಟ್ ಮತ್ತು ಮಾಜಿ ಸಿಎಂ ವಸುಂಧರಾ ರಾಜೇ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದು, ಭಾರಿ ಸುದ್ದಿಯಾಗಿದೆ.

ನಿನ್ನೆ ಜೈಪುರದಿಂದ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳು ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿದ್ರೂ, ಒಬ್ಬರಿಗೊಬ್ಬರು ಮಾತನಾಡಿಕೊಂಡಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ಥಾನ ಸಿಎಂ ಅಶೋಕ್‍ ಗೆಹ್ಲೋಟ್‍ ತಾವಿಬ್ಬರೂ ಒಂದೇ ವಿಮಾನದಲ್ಲಿದ್ದರೂ, ನಾನು ಎಕನಾಮಿ ಕ್ಲಾಸ್ ನಲ್ಲಿದ್ದೆ. ವಸುಂಧರಾ ರಾಜೆ ಬ್ಯುಸಿನೆಸ್‍ ಕ್ಲಾಸ್‍ ನಲ್ಲಿ ಇದ್ರು. ಆದ್ರೆ ಅವರ ಪ್ರಯಾಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

ಪಾಕ್‍ ಮಾಧ್ಯಮಗಳಲ್ಲೂ ಲೋಕಸಭೆ ಫಲಿತಾಂಶದ ಲೈವ್ ಕವರೇಜ್‍

Posted: 23 May 2019 07:51 AM PDT

ಲೋಕಸಭಾ ಚುನಾವಣೆ ಫಲಿತಾಂಶ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕುತೂಹಲ ಕೆರಳಿಸಿದ್ದು, ಮಾಧ್ಯಮಗಳ ಮುಂದೆ ಜನರು ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಾ ಕೂತಿದ್ದರು. ಪಾಕಿಸ್ತಾನದಲ್ಲೂ ಇದೇ ವಾತಾವರಣ ಸೃಷ್ಟಿಯಾಗಿದ್ದು, ಭಾರತದಲ್ಲಿ ಮತ್ತೆ ಮೋದಿ ಪ್ರಧಾನಿಯಾದ್ರೆ ಅನ್ನೋ ಭಯ ಪಾಕಿಗಳನ್ನು ಕಾಡ್ತಿದೆ.

ಹೀಗಾಗಿ ಪಾಕಿಸ್ತಾನದ ಮಾಧ್ಯಮಗಳಲ್ಲೂ ಕೂಡಾ ಲೋಕಸಭಾ ಚುನಾವಣೆಯ ಫಲಿತಾಂಶ ನಿರಂತರವಾಗಿ ಬಿತ್ತರವಾಗಿದೆ. ಫಲಿತಾಂಶದ ಬಗ್ಗೆ ಡಾನ್, ಜಿಯೋ ಸೇರಿದಂತೆ ಹಲವು ಮಾಧ್ಯಮಗಳು ಲೈವ್ ಕವರೇಜ್‍ ಮಾಡಿವೆ.

ಇದಕ್ಕೂ ಮೊದಲು ಮೊನ್ನೆ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಾಗ, ಪಾಕಿಸ್ತಾನಿಯರು, ಅದರಲ್ಲೂ ಬಲೂಚಿಸ್ತಾನ್‍ ಪ್ರದೇಶದ ಮಂದಿ ಗೂಗಲ್‍ ನಲ್ಲಿ ಮೋದಿಯನ್ನು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ ಅಂತಾ ಗೂಗಲ್ ಟ್ರೆಂಡ್ ತಿಳಿಸಿದೆ.

ಮೇ 25 ರಂದು ಸಿಇಟಿ ಫಲಿತಾಂಶ, ಇಲ್ಲಿದೆ ವೆಬ್ಸೈಟ್ ಮಾಹಿತಿ

Posted: 23 May 2019 07:35 AM PDT

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಫಲಿತಾಂಶ ಮೇ 25 ರಂದು ಪ್ರಕಟವಾಗಲಿದೆ.

ಮೇ 25 ರಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸುದ್ದಿಗೋಷ್ಠಿ ನಡೆಸಲಾಗುವುದು. ನಂತರದಲ್ಲಿ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎನ್ನಲಾಗಿದೆ.

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಬರೆದ ವಿದ್ಯಾರ್ಥಿಗಳು http://kar.results.nic.in, http://cet.kar.nic.in, http://kea.kar.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಸರ್ವನಾಶವಾಗುತ್ತೆ ಅಂತ ಯಡಿಯೂರಪ್ಪ ಹೇಳಿದ್ದ ವಿಡಿಯೋ ವೈರಲ್

Posted: 23 May 2019 07:33 AM PDT

ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರತಿಪಕ್ಷಗಳಿಗೆ ದೊಡ್ಡ ಆಘಾತ ನೀಡಿದೆ. ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿಕೂಟ ಸಂಪೂರ್ಣವಾಗಿ ನೆಲ ಕಚ್ಚಿದ್ದು, ಜೆಡಿಎಸ್‌ ಜೊತೆಗೆ ಕಾಂಗ್ರೆಸ್‌ “ಕೈ” ಜೋಡಿಸಿದ್ದೇ ಇಂತಹ ಹೀನಾಯ ಫಲಿತಾಂಶಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದಕ್ಕೆ ಪೂರಕವಾಗಿ ವಿಧಾನಸಭಾ ಕಲಾಪದಲ್ಲಿ ಈ ಮೈತ್ರಿ ಕುರಿತು ಯಡಿಯೂರಪ್ಪನವರು ಆಡಿದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಲಾಪದಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನು ಉದ್ದೇಶಿಸಿ ಮಾತನಾಡುವ ವೇಳೆ ಯಡಿಯೂರಪ್ಪ, ಈ ಮೈತ್ರಿ ಕಾಂಗ್ರೆಸ್‌ ಗೆ ಬಲು ದುಬಾರಿಯಾಗಿ ಪರಿಣಮಿಸಲಿದೆ ಎಂದಿದ್ದರು.

ಅಂತೆಯೇ ಕಾಂಗ್ರೆಸ್‌ ಈ ಬಾರಿಯ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರಗಳಲ್ಲಷ್ಟೇ ಜಯ ಗಳಿಸಲು ಸಾಧ್ಯವಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಉದ್ದೇಶದಿಂದ ಜೆಡಿಎಸ್‌ ಜೊತೆ ಕೈ ಜೋಡಿಸಿದ್ದ ಕಾಂಗ್ರೆಸ್‌, ಅದಕ್ಕೆ ತಕ್ಕ ಬೆಲೆಯನ್ನೇ ತೆತ್ತಿದೆ ಎಂಬ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದೆ. ಯಡಿಯೂರಪ್ಪನವರಾಡಿದ ಮಾತುಗಳ ವಿಡಿಯೋವನ್ನು ರಾಜ್ಯ ಬಿಜೆಪಿ ಶೇರ್‌ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬ್ರೇಕಿಂಗ್ ನ್ಯೂಸ್…! ಹೀನಾಯ ಸೋಲು, ರಾಜೀನಾಮೆ ಸಲ್ಲಿಸಿದ ಆಂಧ್ರ ಸಿಎಂ

Posted: 23 May 2019 07:01 AM PDT

ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ತೆಲುಗುದೇಶಂ ಪಾರ್ಟಿ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜೀನಾಮೆ ನೀಡಿದ್ದಾರೆ.

ರಾಜ್ಯಪಾಲರನ್ನು ಭೇಟಿ ಮಾಡಿದ ನಾಯ್ಡು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆಂಧ್ರಪ್ರದೇಶದಲ್ಲಿ 175 ವಿಧಾನಸಭೆ ಕ್ಷೇತ್ರಗಳಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ 153 ಕ್ಷೇತ್ರಗಳಲ್ಲಿ ಪ್ರಚಂಡ ಜಯ ಗಳಿಸಿದೆ.

ಆಡಳಿತರೂಢ ತೆಲುಗು ದೇಶಂ ಪಾರ್ಟಿ 22 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಅಲ್ಲದೇ, ಆಂಧ್ರದ ಎಲ್ಲಾ 25 ಕ್ಷೇತ್ರಗಳಲ್ಲಿ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಚಂದ್ರಬಾಬು ನಾಯ್ಡು ರಾಜೀನಾಮೆ ನೀಡಿದ್ದಾರೆ. ದೇಶದಲ್ಲಿ ಮೋದಿ ನೇತೃತ್ವದ ಬರಬಾರದೆಂದು ಚಂದ್ರಬಾಬು ನಾಯ್ಡು ಭಾರೀ ಪ್ರಯತ್ನ ನಡೆಸಿದ್ದರು. ಅವರ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ. ತವರಿನಲ್ಲೇ ನಾಯ್ಡುಗೆ ಮುಖಭಂಗವಾಗಿದೆ. ಜಗನ್ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಚೌಕಿದಾರ್ ಹ್ಯಾಶ್ಟ್ಯಾಗ್ ತೆಗೆದು ಹೀಗೆ ಹೇಳಿದ ಮೋದಿ

Posted: 23 May 2019 06:52 AM PDT

ಲೋಕಸಭೆ  ಚುನಾವಣೆ ಫಲಿತಾಂಶ ಹೊರಗೆ ಬರ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಟ್ವೀಟರ್ ನಲ್ಲಿರುವ ಚೌಕಿದಾರ್ ಹ್ಯಾಶ್ಟ್ಯಾಗ್ ತೆಗೆದಿದ್ದಾರೆ.

ಚೌಕಿದಾರ್ ಪದ ತೆಗೆದ ಮೋದಿ, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಎಲ್ಲ ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಚೌಕಿದಾರ್ ಪದ ತೆಗೆಯುವಂತೆ ಮನವಿ ಮಾಡಿದ ಮೋದಿ, ಭಾರತದ ಜನರು ಚೌಕಿದಾರರಾಗಿದ್ದಾರೆ. ರಾಷ್ಟ್ರಕ್ಕಾಗಿ ದೊಡ್ಡ ಸೇವೆ ಮಾಡಿದ್ದಾರೆ. ಚೌಕಿದಾರ ಜಾತಿವಾದ, ಭ್ರಷ್ಟಾಚಾರ, ಸಂಪ್ರದಾಯವಾದಿಗಳ ವಿರುದ್ಧ ಭಾರತವನ್ನು ರಕ್ಷಿಸಲು ಭದ್ರ ಕಾವಲುಗಾರನಾಗಿದ್ದಾನೆಂದು ಮೋದಿ ಟ್ವೀಟ್ ಮಾಡಿದ್ದಾರೆ.

ಈಗ ಮುಂದಿನ ಹೆಜ್ಜೆಯಿಡುವ ಸಮಯ. ಭಾವನೆಯನ್ನು ಸದಾ ಜೀವಂತವಾಗಿಡಿ. ಭಾರತದ ಪ್ರಗತಿಗಾಗಿ ಕೆಲಸ ಮಾಡಿ. ಚೌಕಿದಾರ್ ನನ್ನ ಟ್ವೀಟರ್ ಹೆಸರಿನಿಂದ ತೆಗೆಯುತ್ತಿದ್ದೇನೆ. ಆದ್ರೆ ಅದು ನನ್ನ ಅವಿಭಾಜ್ಯ ಅಂಗ. ಪ್ರತಿಯೊಬ್ಬರೂ ಹೀಗೆ ಮಾಡಿ ಎಂಬುದು ನಮ್ಮ ಒತ್ತಾಯವೆಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮೋದಿ ಟ್ವೀಟ್ ನಂತ್ರ ಎಲ್ಲ ಬಿಜೆಪಿ ನಾಯಕರು ಚೌಕಿದಾರ್ ಹ್ಯಾಶ್ಟ್ಯಾಗ್ ತೆಗೆದಿದ್ದಾರೆ.

 

ಮೋದಿ ಹೊಸ ಸರ್ಕಾರದಲ್ಲಿ ಅಮಿತ್ ಶಾಗೆ ಗೃಹ ಖಾತೆ

Posted: 23 May 2019 06:38 AM PDT

ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ ಉಸ್ತುವಾರಿ ವಹಿಸಿಕೊಂಡು ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲು ಕಾರಣವಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈ ಬಾರಿ ಬಿಜೆಪಿ ದೇಶದೆಲ್ಲೆಡೆ ಪ್ರಚಂಡ ಜಯಭೇರಿ ಬಾರಿಸಲು ಶ್ರಮಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರಿಗೆ ಮೋದಿಯ ಹೊಸ ಸರ್ಕಾರದಲ್ಲಿ ಗೃಹ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಜೆಪಿ ವಾರ್ ರೂಮ್ ನಲ್ಲಿ ಹಗಲಿರುಳು ಶ್ರಮಿಸಿದ ಅಮಿತ್ ಶಾ ಅವರಿಗೆ ಮುಂದಿನ ಸರಕಾರದಲ್ಲಿ ಪ್ರಮುಖ ಹುದ್ದೆ ನೀಡುವ ಸಾಧ್ಯತೆ ಇದೆ.

ಕಳೆದ 2 ತಿಂಗಳ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಿಲೋಮೀಟರ್ ಸುತ್ತಿದ್ದ ಅಮಿತ್ ಶಾ ದೇಶದ ಮೂಲೆಮೂಲೆಗಳಲ್ಲಿಯೂ ಪ್ರಚಾರ ನಡೆಸಿದ್ದರು. ಅವರು ಅಧ್ಯಕ್ಷರಾದ ನಂತರದಲ್ಲಿ ಬಿಜೆಪಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಲೋಕಸಭೆ ಚುನಾವಣೆಯಲ್ಲಿಯೂ ಪ್ರಚಂಡ ಜಯಭೇರಿ ಬಾರಿಸಿದೆ. ಹಾಗಾಗಿ ಮೋದಿ ನೂತನ ಸರ್ಕಾರದಲ್ಲಿ ಅವರಿಗೆ ಗೃಹ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಗೆ ಮತ್ತೊಂದು ಹಿನ್ನಡೆ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ರಾಹುಲ್?

Posted: 23 May 2019 06:25 AM PDT

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಸಾಧಿಸಿದೆ. ಕಾಂಗ್ರೆಸ್ ಭಾರೀ ಹಿನ್ನಡೆ ಸಾಧಿಸಿದೆ, ಯುಪಿಎ 87 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿದೆ. ಅದ್ರಲ್ಲಿ ಕಾಂಗ್ರೆಸ್ ಗೆಲುವು 50ರ ಗಡಿ ದಾಟುವ ಸಾಧ್ಯತೆಯಿಲ್ಲ. ಹಾಗಾಗಿ ಕಾಂಗ್ರೆಸ್ ಗೆ ವಿರೋಧ ಪಕ್ಷದ ಸ್ಥಾನ ಕಳೆದುಕೊಳ್ಳಲಿದೆ.

ಸತತ ಸೋಲು ಹಾಗೂ ವಿರೋಧ ಪಕ್ಷದ ಸ್ಥಾನ ಕಳೆದುಕೊಳ್ತಿರುವ ಕಾಂಗ್ರೆಸ್ ಹಣೆ ಬರಹಕ್ಕೆ ನಾನು ಹೊಣೆ ಎಂದು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಶೇಕಡಾ 100ರಷ್ಟು ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ ಎಂದಿದ್ದಾರೆ.

ಈ ಮಧ್ಯೆ ರಾಹುಲ್ ಗಾಂಧಿ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಾರೆ ಎನ್ನಲಾಗ್ತಿದೆ. ರಾಹುಲ್ ಗಾಂಧಿ ಈಗಾಗಲೇ ಸೋನಿಯಾ ಗಾಂಧಿ ಜೊತೆ ಮಾತನಾಡಿದ್ದಾರಂತೆ. ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರಂತೆ.ಆದ್ರೆ ಸ್ವಲ್ಪ ಸಮಯ ಕಾಯುವಂತೆ ಸೋನಿಯಾ ಹೇಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ನಾಯಕರ ಸಭೆ ನಂತ್ರ ರಾಹುಲ್ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.

ಎಲೆಕ್ಷನ್ ಎಫೆಕ್ಟ್: ಜೆಡಿಎಸ್ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ನಲ್ಲಿ ಅಸಮಾಧಾನ

Posted: 23 May 2019 06:16 AM PDT

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಮಾಡಿಕೊಂಡಿದ್ದಕ್ಕೆ ಸಚಿವ, ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಮಾಡಿಕೊಳ್ಳಬಾರದಿತ್ತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಮೈತ್ರಿ ಮಾಡಿಕೊಳ್ಳದಿದ್ದರೆ, ಕಾಂಗ್ರೆಸ್ ಪಕ್ಷ 10 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಅವಕಾಶವಿತ್ತು ಎಂದು ತಿಳಿಸಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದರೆ ಕಾಂಗ್ರೆಸ್ ಗೆಲ್ಲುತ್ತಿತ್ತು. ಅದೇ ರೀತಿ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಅವಕಾಶವಿತ್ತು. ಕನಿಷ್ಠ 10 ಸ್ಥಾನಗಳನ್ನು ಗೆಲ್ಲಬಹುದಾಗಿತ್ತು. ಆದರೆ, ಮೈತ್ರಿ ಬಗ್ಗೆ ವರಿಷ್ಠರ ತೀರ್ಮಾನವೇ ಅಂತಿಮ. ಮೈತ್ರಿ ಬೇಡವಾಗಿತ್ತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ ಎಂದು ಜಮೀರ್ ಅಹ್ಮದ್ ತಿಳಿಸಿದ್ದಾರೆ.

ಮೋದಿ ಸರ್ಕಾರದಲ್ಲಿ ಮಂತ್ರಿಯಾಗಲಿದ್ದಾರಾ ಉಮೇಶ್ ಜಾಧವ್…?

Posted: 23 May 2019 06:10 AM PDT

ಏಳು ಹಂತಗಳಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಬಹುತೇಕ ಹೊರಬಿದ್ದಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ನಿಚ್ಚಳ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆಗೇರುವುದು ಖಚಿತವಾಗಿದೆ.

ಕರ್ನಾಟಕದಲ್ಲೂ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು, 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ತಲಾ ಒಂದೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿಜಯ ಸಾಧಿಸಿದ್ದು, ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿದಿದ್ದ ಉಮೇಶ್ ಜಾದವ್ ಜಯ ಸಾಧಿಸಿದ್ದಾರೆ. ನರೇಂದ್ರ ಮೋದಿ ಅವರ ನೂತನ ಸರ್ಕಾರದಲ್ಲಿ ಉಮೇಶ್ ಜಾದವ್ ಮಂತ್ರಿಯಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂದರ್ಭದಲ್ಲೇ ಬಿಜೆಪಿ ನಾಯಕರು ಈ ಭರವಸೆ ನೀಡಿದ್ದರೆಂದು ಹೇಳಲಾಗುತ್ತಿದ್ದು, ಹೊಸ ಸರ್ಕಾರದಲ್ಲಿ ಉಮೇಶ್ ಜಾಧವ್ ಸಚಿವ ಸಂಪುಟ ಸೇರ್ಪಡೆಗೊಳ್ಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಈ ನಟಿ ಪ್ರಚಾರ ಮಾಡಿದ ಅಭ್ಯರ್ಥಿಗಳಿಗೆ ಸೋಲು

Posted: 23 May 2019 06:07 AM PDT

ಬಾಲಿವುಡ್ ನಟಿ ಸ್ವರಾ ಭಾಸ್ಕರ್ 2019ರ ಲೋಕಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ರ್ಯಾಲಿ ಹಾಗೂ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದ ಸ್ವರಾ ಭಾಸ್ಕರ್, ಜನಸಂಖ್ಯೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಳು. ಆದ್ರೆ ಗೆಲುವು ತಂದುಕೊಡಲು ವಿಫಲವಾಗಿದ್ದಾಳೆ.

ಸ್ವರಾ ಭಾಸ್ಕರ್ ಯಾರ ಪರ ಪ್ರಚಾರ ಮಾಡಿದ್ದಾಳೆ ಅವ್ರೆಲ್ಲ ಸೋಲಿನ ಕಹಿಯುಂಡಿದ್ದಾರೆ. ಸ್ವರಾ, ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್, ಸಿಪಿಐನ ಕನ್ಹಯ್ಯ ಕುಮಾರ್, ಆಮ್ ಆದ್ಮಿಯ ಆತಿಶಿ ಹಾಗೂ ರಾಘವ್ ಚಡ್ಡಾ ಪರ ಪ್ರಚಾರ ಮಾಡಿದ್ದಳು. ಆದ್ರೆ ಈ ಯಾವ ಅಭ್ಯರ್ಥಿಗಳೂ ಚುನಾವಣೆಯಲ್ಲಿ ಗೆಲುವು ಸಾಧಿಸಲಿಲ್ಲ.

ಸ್ವರಾ ಭಾಸ್ಕರ್, ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಬಗ್ಗೆ ಸಾಕಷ್ಟು ಕಮೆಂಟ್ ಮಾಡಿದ್ದಳು. ಸ್ವರಾ ಭಾಸ್ಕರ್ ಗ್ಲಾಮರಸ್ ಇಲ್ಲಿ ಕೆಲಸ ಮಾಡಲಿಲ್ಲ. ಮತದಾರರನ್ನು ಸೆಳೆಯಲು ಸ್ವರಾ ವಿಫಲವಾಗಿದ್ದಾಳೆ.

ಬಿಗ್ ನ್ಯೂಸ್: ಮೈತ್ರಿ ಮುರಿಯಲು ಕಾಂಗ್ರೆಸ್ ನಿಂದಲೇ ಮುಹೂರ್ತ ಫಿಕ್ಸ್…?

Posted: 23 May 2019 06:00 AM PDT

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವೆನ್ನುವಂತೆ ತೆರೆಮರೆಯಲ್ಲಿ ಅನೇಕ ಬೆಳವಣಿಗೆ ನಡೆದಿವೆ ಎನ್ನಲಾಗಿದೆ.

ರಾಜ್ಯದಲ್ಲಿ ಊಹೆಗೂ ಮೀರಿ ಬರೋಬ್ಬರಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದೆ. ಕಾಂಗ್ರೆಸ್-ಜೆಡಿಎಸ್ ಒಂದು ಹಾಗೂ ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ. ಕಾಂಗ್ರೆಸ್ ಕಳೆದ ಬಾರಿ 9 ಸ್ಥಾನ ಗಳಿಸಿದ್ದು, ಜೆಡಿಎಸ್ 2 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದ್ದರೂ ಕೂಡ ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿಲ್ಲ. ತಲಾ ಒಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

ಮೈತ್ರಿಗೆ ಬದಲು ತ್ರಿಕೋನ ಸ್ಪರ್ಧೆ ನಡೆದಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾನ ಗಳಿಕೆ ಹೆಚ್ಚಾಗಬಹುದು ಎಂಬ ಲೆಕ್ಕಾಚಾರವೂ ನಡೆದಿದೆ. ಆದರೆ, ಸದ್ಯಕ್ಕೆ ಲೆಕ್ಕಾಚಾರಕ್ಕಿಂತ ಬದಲಾಗಿ ಮೈತ್ರಿ ಬಗ್ಗೆಯೇ ಕಾಂಗ್ರೆಸ್ ಪಕ್ಷದ ಅನೇಕ ನಾಯಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೂ ಮೈತ್ರಿ ಮುಂದುವರೆಸದಂತೆ ರಾಜ್ಯ ಕಾಂಗ್ರೆಸ್ ನಾಯಕರು ಮನವರಿಕೆ ಮಾಡಿಕೊಟ್ಟಿದ್ದರು. ಅವರು ಫಲಿತಾಂಶದ ನಂತರವೂ ಮೈತ್ರಿ ಸರ್ಕಾರ ಮುಂದುವರೆಯಬೇಕು ಎಂದು ಸೂಚನೆ ನೀಡಿದ್ದಾರೆ. ಆದರೆ, ಫಲಿತಾಂಶ ವ್ಯತಿರಿಕ್ತವಾಗಿರುವ ಕಾರಣ, ಅನೇಕ ಕಾಂಗ್ರೆಸ್ ಶಾಸಕರು ಮೈತ್ರಿ ಮುಂದುವರೆದರೆ ಪಕ್ಷಕ್ಕೆ ಬಾರಿ ಹಿನ್ನಡೆಯಾಗುತ್ತದೆ ಎಂದು ನಾಯಕರ ಬಳಿ ಹೇಳಿಕೊಂಡಿದ್ದಾರೆ. ಮೈತ್ರಿ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸುವ ಸಾಧ್ಯತೆ ಇತ್ತು ಎಂದು ಹೇಳಿದ್ದು, ಮೈತ್ರಿಯನ್ನು ಮುಂದುವರೆಸದಂತೆ ಒತ್ತಾಯಿಸಿದ್ದಾರೆ. ಮೈತ್ರಿ ಮುಂದುವರೆದಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಲಿರುವ ಕಾರಣ, ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಕಾಂಗ್ರೆಸ್ ಶಾಸಕರು ಪಕ್ಷದ ನಾಯಕರಿಗೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

ವಿಶ್ವನಾಥನ ದರ್ಶನಕ್ಕಾಗಿ ವಾರಣಾಸಿಗೆ ಮೋದಿ

Posted: 23 May 2019 05:43 AM PDT

ವಾರಣಾಸಿ ಲೋಕಸಭೆ ಕ್ಷೇತ್ರದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಗೆದ್ದು ಬಂದಿದ್ದಾರೆ. ಎರಡನೇ ಬಾರಿ ವಾರಣಾಸಿ ಕ್ಷೇತ್ರದಿಂದ ಗೆಲುವು ಸಾಧಿಸಲು ಮೋದಿ ಯಶಸ್ವಿಯಾಗಿದ್ದಾರೆ. ನರೇಂದ್ರ ಮೋದಿ, ಮೇ.29 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಮಾಡಲಿದ್ದಾರೆ ಎನ್ನಲಾಗ್ತಿದೆ. ಇದಕ್ಕೂ ಮುನ್ನ ನರೇಂದ್ರ ಮೋದಿ ವಾರಣಾಸಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮೇ. 28ರಂದು ನರೇಂದ್ರ ಮೋದಿ ವಾರಣಾಸಿಗೆ ಪ್ರಯಾಣ ಬೆಳೆಸಲಿದ್ದಾರೆ. ಪ್ರಸಿದ್ಧ ವಿಶ್ವನಾಥನ ದರ್ಶನವನ್ನು ನರೇಂದ್ರ ಮೋದಿ ಮಾಡಲಿದ್ದಾರೆ. ವಾರಣಾಸಿಯಲ್ಲಿ ನರೇಂದ್ರ ಮೋದಿಗೆ 5,83,014 ಮತ ಬಿದ್ದಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಶಾಲಿನಿ ಯಾದವ್ ಗೆ 1,73,303 ಮತ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಅಜಯ್ ಗೆ 1,25,349 ಮತ ಸಿಕ್ಕಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಅಭಿಮಾನಿಗಳು, ಕಾರ್ಯಕರ್ತರು, ನಾಯಕರು ಸಂಭ್ರಮಿಸುತ್ತಿದ್ದಾರೆ.

ಮೋದಿಗೆ ಅಭಿನಂದನೆ: ಅಮೇಥಿ ಸೋಲಿಗೆ ರಾಹುಲ್ ಪ್ರತಿಕ್ರಿಯೆ

Posted: 23 May 2019 05:31 AM PDT

ದೆಹಲಿಯ ಎಐಸಿಸಿ ಕಚೇರಿಯಲ್ಲಿ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಜನರ ತೀರ್ಪಿಗೆ ನಾವು ಬದ್ಧವೆಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಚುನಾವಣೆ ಪ್ರಚಾರದ ವೇಳೆಯೂ ನಾನು ಹೇಳಿದ್ದೆ. ಜನರು ಮಾಲೀಕರು. ಅವ್ರು ತಮ್ಮ ತೀರ್ಪು ನೀಡಿದ್ದಾರೆ. ಬಿಜೆಪಿ ಹಾಗೂ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೂ, ನಾಯಕರಿಗೂ ಧನ್ಯವಾದ ಎಂದು ರಾಹುಲ್ ಹೇಳಿದ್ದಾರೆ.

ಎರಡೂ ಪಕ್ಷಗಳ ಆಲೋಚನೆ ಬೇರೆ ಬೇರೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾಗಿದೆ. ನಾವದನ್ನು ಸ್ವಾಗತಿಸುತ್ತೇವೆ. ಸೋತ ಹಾಗೂ ಗೆದ್ದ ಕಾಂಗ್ರೆಸ್ ನಾಯಕರು ಆತಂಕ ಪಡುವ ಅವಶ್ಯಕತೆಯಿಲ್ಲ. ಎಲ್ಲರೂ ಒಂದಾಗಿ ಮತ್ತೆ ಗೆಲುವು ಸಾಧಿಸೋಣ ಎಂದ ರಾಹುಲ್ ಹೇಳಿದ್ದಾರೆ.

ಅಮೇಥಿ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಅಲ್ಲಿ ಸ್ಮೃತಿ ಇರಾನಿ ಗೆಲುವು ಸಾಧಿಸಿದ್ದಾರೆ. ಅವ್ರಿಗೆ ಧನ್ಯವಾದ ಹೇಳುತ್ತೇನೆ. ಅಮೇಥಿ ಜನರನ್ನು ಸ್ಮೃತಿ ಪ್ರೀತಿಯಿಂದ ನೋಡಲಿ ಎಂದು ಸಲಹೆ ನೀಡಿದ್ರು. ನಾನು ಎಂದೂ ಬೇರೆಯವರನ್ನು ಅವಹೇಳನ ಮಾಡುವುದಿಲ್ಲ. ಪ್ರೀತಿಯಿಂದ ಎಲ್ಲವನ್ನೂ ನೋಡುತ್ತೇನೆಂದು ರಾಹುಲ್ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಬಿಜೆಪಿಯ ಶ್ರೀನಿವಾಸ ಪ್ರಸಾದ್ ಗೆ ರೋಚಕ ಗೆಲುವು

Posted: 23 May 2019 05:26 AM PDT

ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ 6ನೇ ಬಾರಿಗೆ ವಿ. ಶ್ರೀನಿವಾಸ ಪ್ರಸಾದ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಅವರ ವಿರುದ್ಧ 838 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಈ ಹಿಂದೆ ಚಾಮರಾಜನಗರ ಕ್ಷೇತ್ರದಿಂದ 5 ಬಾರಿ ಚುನಾಯಿತರಾಗಿದ್ದ ಶ್ರೀನಿವಾಸಪ್ರಸಾದ್, ಬಳಿಕ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. ಕಳೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಸಕ್ರಿಯ ರಾಜಕಾರಣದಿಂದ ಅವರು ದೂರ ಸರಿಯುವುದಾಗಿ ಹೇಳಿದ್ದರು.

ಆದರೆ, ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪಕ್ಷದಿಂದ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶ್ರೀನಿವಾಸಪ್ರಸಾದ್ 838 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಮತ ಎಣಿಕೆ ಆರಂಭವಾದಾಗಿನಿಂದಲೂ ಕಡಿಮೆ ಅಂತರದಲ್ಲಿ ಶ್ರೀನಿವಾಸ ಪ್ರಸಾದ್ ಮತ್ತು ಧ್ರುವನಾರಾಯಣ್ ಮುನ್ನಡೆ ಕಾಯ್ದುಕೊಳ್ಳುತ್ತಿದ್ದರು. ಒಮ್ಮೆ ಅವರು ಮತ್ತೊಮ್ಮೆ ಇವರು ಮುನ್ನಡೆ ಕಾಯ್ದುಕೊಳ್ಳುತ್ತಿದ್ದ ಕಾರಣ ಫಲಿತಾಂಶದ ಕುರಿತಾಗಿ ಭಾರೀ ಕುತೂಹಲ ಮೂಡಿತ್ತು. ಅಂತಿಮವಾಗಿ 838 ಮತಗಳ ಅಂತರದಿಂದ ಶ್ರೀನಿವಾಸಪ್ರಸಾದ್ ಜಯ ಗಳಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎನ್ನಲಾಗಿದೆ.

ಗೌಡರ ಕುಟುಂಬದಲ್ಲಿ ‘ಪ್ರಜ್ವಲಿ’ಸಿದ ಹೊಸ ನಾಯಕ

Posted: 23 May 2019 05:06 AM PDT

ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದ್ದ ಹೆಚ್.ಎಂ.ಟಿ. ಕ್ಷೇತ್ರಗಳಲ್ಲಿ ಪ್ರಜ್ವಲ್ ರೇವಣ್ಣ ಜಯಗಳಿಸಿದ್ದಾರೆ.

ತುಮಕೂರಿನಲ್ಲಿ ದೇವೇಗೌಡರು ಮತ್ತು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರಾಭವಗೊಂಡಿದ್ದಾರೆ. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪೂರ್ವ ತಯಾರಿ ಮಾಡಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

ಆದರೆ, ಪ್ರಜ್ವಲ್ ರೇವಣ್ಣ ನೀಡಿದ್ದ ಹೇಳಿಕೆಗಳು ಮಾತ್ರ ಪ್ರಜ್ವಲಿಸುವಂತೆ ಆಗಿದ್ದವು. ಪಕ್ಷದಲ್ಲಿ ಬ್ರೀಫ್ ಕೇಸ್ ತಂದವರಿಗೆ ಮುಂದೆ ಕೂರಿಸಲಾಗುತ್ತದೆ ಎಂದು ಅವರು ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ನಂತರ ನಡೆದ ರಾಜಕೀಯ ಬೆಳವಣಿಗೆಗಳ ಬಳಿಕ ಪ್ರಜ್ವಲ್ ರೇವಣ್ಣ ಪಕ್ಷದಲ್ಲಿ ಹುದ್ದೆ ವಹಿಸಿಕೊಂಡು, ಹಾಸನ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ದೇವೇಗೌಡರು ಸ್ಪರ್ಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರ ಪ್ರಜ್ವಲ್ ರೇವಣ್ಣ ಅವರ ಪಾಲಿಗೆ ಬಂದಿತ್ತು. ಈ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಭರ್ಜರಿ ಜಯ ಗಳಿಸುವುದರೊಂದಿಗೆ ದೇವೇಗೌಡರ ಕುಟುಂಬದಲ್ಲಿ ಹೊಸ ನಾಯಕನಾಗಿ ಹೊರಹೊಮ್ಮಿದ್ದಾರೆ.

ದೇವೇಗೌಡರ ಕುಟುಂಬದಲ್ಲಿ ಪುತ್ರರಾದ ಸಿಎಂ ಕುಮಾರಸ್ವಾಮಿ, ಸಚಿವ ಹೆಚ್.ಡಿ. ರೇವಣ್ಣ ಸೊಸೆಯಂದಿರಾದ ಶಾಸಕಿ ಅನಿತಾ ಕುಮಾರಸ್ವಾಮಿ, ಜಿಪಂ ಸದಸ್ಯೆ ಭವಾನಿ ರೇವಣ್ಣ ಅವರ ಬಳಿಕ ಮೊಮ್ಮಗ ಪ್ರಜ್ವಲ್ ರೇವಣ್ಣ ಕೂಡ ಚುನಾವಣಾ ರಾಜಕೀಯ ಪ್ರವೇಶಿಸಿದ್ದಾರೆ. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಜಯ ಗಳಿಸಿದ್ದಾರೆ.

ಅಡ್ವಾಣಿ ದಾಖಲೆ ಮುರಿದ ಅಮಿತ್ ಷಾ: ಅಮೇಥಿಯಲ್ಲಿ ಮುಂದುವರೆದ ಹಣಾಹಣಿ

Posted: 23 May 2019 04:35 AM PDT

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಬ್ಬರ ಮುಂದುವರೆದಿದೆ. ಗಾಂಧಿನಗರದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ದಾಖಲೆ ಮಟ್ಟದ ಗೆಲುವು ಸಾಧಿಸಿದ್ದಾರೆ. ಅಮಿತ್ ಶಾ 5,54,568 ಮತಗಳ ಅಂತರದಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಈ ಗೆಲುವಿನೊಂದಿಗೆ ಅಮಿತ್ ಶಾ, ಲಾಲ್ ಕೃಷ್ಣ ಅಡ್ವಾಣಿ ದಾಖಲೆಯನ್ನು ಮುರಿದಿದ್ದಾರೆ.

ಈ ಮಧ್ಯೆ ಬಿಜೆಪಿ ಗೆಲುವಿಗೆ ಅಡ್ವಾಣಿ ಶುಭ ಕೋರಿದ್ದಾರೆ. ನರೇಂದ್ರ ಮೋದಿ ಹಾಗೂ ಅಮಿತ್ ಷಾಗೆ ಅಡ್ವಾಣಿ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ವಾರಣಾಸಿಯಲ್ಲಿ ಸ್ಪರ್ಧೆ ನಡೆಸಿರುವ ನರೇಂದ್ರ ಮೋದಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 4 ಲಕ್ಷಕ್ಕಿಂತಲೂ ಹೆಚ್ಚು ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದು, ಅವ್ರ ಗೆಲುವಿನ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಇತ್ತ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡ್ ನಲ್ಲಿ ದಾಖಲೆ ಮಟ್ಟದ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ರಾಹುಲ್ 8,38,371 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

 

ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಯಾರ್ಯಾರ ಗೆಲುವು…?

Posted: 23 May 2019 04:09 AM PDT

ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬೀಳ್ತಿದೆ. ಕರ್ನಾಟಕದಲ್ಲಿ 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳ ಫಲಿತಾಂಶ ಹೊರಗೆ ಬಂದಿದೆ. 24 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ರೆ ಜೆಡಿಎಸ್ 1 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆಯುತ್ತಿದೆ.

ಕಲಬುರ್ಗಿ: ಉಮೇಶ್ ಜಾಧವ್‌ (ಬಿಜೆಪಿ)

ಉತ್ತರ ಕನ್ನಡ: ಅನಂತ್ ಕುಮಾರ್ ಹೆಗಡೆ (ಬಿಜೆಪಿ)

ಉಡುಪಿ – ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ (ಬಿಜೆಪಿ)

ಬಳ್ಳಾರಿ : ದೇವೇಂದ್ರಪ್ಪ (ಬಿಜೆಪಿ)

ಹಾವೇರಿ : ಶಿವಕುಮಾರ್ ಉದಾಸಿ (ಬಿಜೆಪಿ)

ಚಿಕ್ಕೋಡಿ : ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ)

ಕೊಪ್ಪಳ : ಸಂಗಣ್ಣ ಕರಡಿ (ಬಿಜೆಪಿ)

ವಿಜಯಪುರ : ರಮೇಶ್ ಜಿಗಜಿಣಗಿ (ಬಿಜೆಪಿ)

ಹಾಸನ : ಪ್ರಜ್ವಲ್ ರೇವಣ್ಣ (ಜೆಡಿಎಸ್)

ತುಮಕೂರು: ಜಿ.ಎಸ್.ಬಸವರಾಜು (ಬಿಜೆಪಿ)

ಬೆಂಗಳೂರು ಗ್ರಾಮಾಂತರ : ಡಿ.ಕೆ. ಸುರೇಶ್ (ಕಾಂಗ್ರೆಸ್)

ದಕ್ಷಿಣ ಕನ್ನಡ : ನಳೀನ್ ಕುಮಾರ್ ಕಟೀಲ್‌ (ಬಿಜೆಪಿ)

ಕೋಲಾರ:‌ ಮುನಿಸ್ವಾಮಿ (ಬಿಜೆಪಿ)

ದಾವಣಗೆರೆ: ಸಿದ್ದೇಶ್ವರ್ (ಬಿಜೆಪಿ)

ಧಾರವಾಡ: ಪ್ರಹ್ಲಾದ್ ಜೋಶಿ (ಬಿಜೆಪಿ)

ಚಿತ್ರದುರ್ಗ : ನಾರಾಯಣಸ್ವಾಮಿ (ಬಿಜೆಪಿ)

ಮಂಡ್ಯ : ಸುಮಲತಾ ಅಂಬರೀಶ್ (ಪಕ್ಷೇತರ)

ಶಿವಮೊಗ್ಗ‌ : ಬಿ.ವೈ. ರಾಘವೇಂದ್ರ (ಬಿಜೆಪಿ)

ಬೆಂಗಳೂರು ಉತ್ತರ : ಸದಾನಂದ ಗೌಡ (ಬಿಜೆಪಿ)

ಮೈಸೂರು : ಪ್ರತಾಪ್ ಸಿಂಹ (ಬಿಜೆಪಿ)

ಬೆಂಗಳೂರು ದಕ್ಷಿಣ : ತೇಜಸ್ವಿ ಸೂರ್ಯ (ಬಿಜೆಪಿ)

ಬೀದರ್- ಭಗವಂತ ಖೂಬಾ (ಬಿಜೆಪಿ)

ಬಾಗಲಕೋಟೆ : ಪಿ.ಸಿ. ಗದ್ದಿಗೌಡರ್ (ಬಿಜೆಪಿ)

ರಾಯಚೂರು : ಅಮರೇಶ್ ನಾಯ್ಕ್ (ಬಿಜೆಪಿ)

ಬೆಳಗಾವಿ : ಸುರೇಶ್ ಅಂಗಡಿ (ಬಿಜೆಪಿ)

ಚಿಕ್ಕಬಳ್ಳಾಪುರ : ಬಚ್ಚೇಗೌಡ (ಬಿಜೆಪಿ)

ಬೆಂಗಳೂರು ಕೇಂದ್ರ : ಪಿ.ಸಿ ಮೋಹನ್‌ (ಬಿಜೆಪಿ) ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುವುದಷ್ಟೇ ಬಾಕಿ ಇದೆ.

 

ಸೇತುವೆಯನ್ನು ಮದುವೆಯಾದ ಮಹಿಳೆ….!

Posted: 23 May 2019 03:57 AM PDT

ಜಗತ್ತಿನಲ್ಲಿ ಎಂತೆಂತಹ ವಿಚಿತ್ರ ಘಟನೆಗಳು ನಡೆಯುತ್ತವೆಯೆಂದರೆ ಅವುಗಳನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಆಗುತ್ತದೆ. ಅಂತಹ ಒಂದು ವಿಚಿತ್ರ ಘಟನೆ ಫ್ರಾನ್ಸ್‌ ನಲ್ಲಿ ನಡೆದಿದೆ.

ಸಿಡ್ನಿಯ ರೋಸ್ ಸೆರೆಟ್ ನಗರದ ಲೆ ಪೊಂತ್, ಸೇತುವೆಯನ್ನು 2013ರಲ್ಲಿ ಮದುವೆಯಾಗಿದ್ದರು. ಫ್ರಾನ್ಸ್‌ಗೆ ಪ್ರವಾಸಕ್ಕೆ ಹೋದಾಗ 14ನೇ ಶತಮಾನದ ಈ ಸೇತುವೆಗೆ ಮನಸೋತಿದ್ದರಂತೆ.

ಅವರು ಈ ಸೇತುವೆಯ ಜೊತೆ ಮದುವೆಯಾಗಲು ಕಾರಣವೆಂದರೆ ಸೇತುವೆ ಗಟ್ಟಿ, ಸ್ಥಿರ ಹಾಗೂ ನಿಶಬ್ದವಾಗಿ ಇರುತ್ತದಂತೆ.

ಆದರೆ ಫ್ರಾನ್ಸ್‌ನಲ್ಲಿ ಈ ಮದುವೆಗೆ ಮಾನ್ಯತೆ ಇಲ್ಲವಂತೆ. ಆದರೂ ತಮ್ಮ ಸಂಬಂಧ ತುಂಬಾ ಗಟ್ಟಿ ಎಂದು ರೋಸ್ ಹೇಳಿದ್ದಾರೆ.

ವಿವೇಕ್‍ ಒಬೆರಾಯ್‍ ಟ್ವೀಟ್‍ ಬಗ್ಗೆ ಸಲ್ಲು ಭಾಯ್‍ ಏನ್‍ ಹೇಳಿದ್ರು ಗೊತ್ತಾ..?

Posted: 23 May 2019 03:53 AM PDT

ನಟ ವಿವೇಕ್ ಒಬೆರಾಯ್‍ ಎಕ್ಸಿಟ್‍ ಪೋಲ್‍ ಕುರಿತು ವಿವಾದಾತ್ಮಕ ಮೀಮ್‍ ಹಾಕಿ ಟ್ವೀಟ್ ಮಾಡಿದ ಬಗ್ಗೆ ಕೊನೆಗೂ ನಟ ಸಲ್ಮಾನ್‍ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

'ಭಾರತ್‍' ಸಿನಿಮಾ ಪ್ರಚಾರ ಸಂದರ್ಭದಲ್ಲಿ ವಿವೇಕ್‍ ಅವರ ವಿವಾದಾತ್ಮಕ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋಶಿಯಲ್ ಮೀಡಿಯಾ ಬಗ್ಗೆ ನಾನು ಹೆಚ್ಚು ಗಮನ ಕೊಡಲ್ಲ. ಕಾಲಾಹರಣಕ್ಕಾಗಿ ಅನಾವಶ್ಯಕವಾಗಿ ಟ್ವೀಟ್‍ ಮಾಡಲ್ಲ. ನನಗೆ ನನ್ನದೇ ಕೆಲಸಗಳಿದ್ದು, ಈ ಬಗ್ಗೆ ಗಮನ ನೀಡದೇ ಯಾರೋ ಮಾಡಿದ ಟ್ವೀಟ್‍ ಮತ್ತು ಮೀಮ್ಸ್ ಬಗ್ಗೆ ಸಮಯ ವ್ಯರ್ಥ ಮಾಡೋಕಾಗಲ್ಲ ಅಂತಾ ಖಡಕ್ಕಾಗಿ ಉತ್ತರಿಸಿದ್ದಾರೆ.

ಮತದಾನೋತ್ತರ ಸಮೀಕ್ಷೆ ಹೊರಬಿದ್ದ ನಂತರ ನಟ ವಿವೇಕ್ ಒಬೆರಾಯ್‍, ನಟಿ ಐಶ್ವರ್ಯ ರೈ ಅವರ ವಿವಾಹ ಪೂರ್ವ ಖಾಸಗಿ ಜೀವನವನ್ನು ಬಿಂಬಿಸುವ ಮೀಮ್ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ರು. ನಂತರ ಈ ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾದ ನಂತರ, ಅದನ್ನು ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದರು.

ಒಂದು ಕಾಲದಲ್ಲಿ 2 ಸೀಟಿಗೆ ಸೀಮಿತವಾಗಿದ್ದ ಬಿಜೆಪಿ ಮಡಿಲಿಗೀಗ 300 ಸೀಟ್

Posted: 23 May 2019 03:35 AM PDT

ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಗೆಲುವಿನ ನಗೆ ಬೀರ್ತಿದೆ. ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ ಬರ್ತಿದೆ. ಎನ್ಡಿಎ ಈ ಬಾರಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸುವ ಸಾಧ್ಯತೆಯಿದೆ. ಆದರೆ ಒಂದು ಕಾಲದಲ್ಲಿ ಬಿಜೆಪಿಗೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಿಕ್ಕಿತ್ತು. 400ಕ್ಕೂ ಹೆಚ್ಚು ಸೀಟುಗಳು ಕಾಂಗ್ರೆಸ್ ತೆಕ್ಕೆ ಸೇರಿದ್ದವು.

ಅದು ಇಂಧಿರಾ ಗಾಂಧಿ ಹತ್ಯೆ ನಂತ್ರದ ದಿನ. 1984ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಇಂದಿರಾ ಗಾಂಧಿ ಹತ್ಯೆಯ ಸಹಾನುಭೂತಿ ಕಾಂಗ್ರೆಸ್ ಮೇಲಿತ್ತು. ಹಾಗಾಗಿ 514 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 404 ಸೀಟುಗಳು ಕಾಂಗ್ರೆಸ್ ಪಾಲಾಗಿದ್ದವು. ಟಿಡಿಪಿ 30 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಸ್ಥಳೀಯ ಪಕ್ಷವೊಂದು ಅದೇ ಮೊದಲ ಬಾರಿ ಅಷ್ಟೊಂದು ಕ್ಷೇತ್ರದಲ್ಲಿ ಜಯಗಳಿಸಿ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಚುನಾವಣೆ ನಂತ್ರ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು. ಒಟ್ಟು ಮತದಾನದ ಶೇಕಡಾ 49.10 ರಷ್ಟು ಮತ ಕಾಂಗ್ರೆಸ್ ಗೆ ಬಿದ್ದಿತ್ತು. ಬಿಜೆಪಿ ಈ ವೇಳೆ ಗಳಿಸಿದ್ದು 2 ಸೀಟು ಮಾತ್ರ. ಒಟ್ಟು ಮತದಾನದಲ್ಲಿ ಶೇಕಡಾ 7.74 ರಷ್ಟು ಮತ ಮಾತ್ರ ಬಿಜೆಪಿಗೆ ಬಿದ್ದಿತ್ತು. ಆದ್ರೆ ವರ್ಷಗಳು ಕಳೆದಂತೆ ಬಿಜೆಪಿ ಶೇಕಡಾವಾರು ಮತ ಏರಿಕೆಯಾಯ್ತಾ ಹೋಯ್ತು.

ಬ್ರೇಕಿಂಗ್‌ ನ್ಯೂಸ್: ಮಂಡ್ಯದಲ್ಲಿ ಸುಮಲತಾಗೆ ಭರ್ಜರಿ ಗೆಲುವು

Posted: 23 May 2019 03:12 AM PDT

ಕುತೂಹಲ ಮೂಡಿಸಿದ್ದ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವಿನ ನಗೆ ಬೀರಿದ್ದಾರೆ. ಜೆಡಿಎಸ್ ನೆಲಕಚ್ಚಿದೆ. ನಿಖಿಲ್ ಕುಮಾರಸ್ವಾಮಿ ಸೋಲಿನ ಕಹಿಯುಂಡಿದ್ದಾರೆ.  90 ಸಾವಿರ ಮತಗಳ ಅಂತರದಲ್ಲಿ ಸುಮಲತಾ ಗೆಲುವು ಸಾಧಿಸಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಹಾಗೂ ನಿಖಿಲ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ನಿಖಿಲ್ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರು. ಆದ್ರೆ ಸುಮಲತಾಗೆ ಮಂಡ್ಯ ಜನರು ವಿಜಯದ ಮಾಲೆ ಹಾಕಿದ್ದಾರೆ. ಯಶ್ ಹಾಗೂ ದರ್ಶನ್ ಪ್ರಚಾರ ಫಲ ನೀಡಿದೆ. ಮಂಡ್ಯದ ಅಂಬರೀಶ್ ಅಭಿಮಾನಿಗಳು ಸುಮಲತಾಗೆ ಅಂಬರೀಶ್ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಬೆಂಬಲಿಗರ ಸಂಭ್ರಮ ಮನೆ ಮಾಡಿದೆ. ಪಟಾಕಿ ಸಿಡಿಸಿ,‌ ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಒಂದೇ ದಿನ ಗೆದ್ದು ಬೀಗಿದ ತಂದೆ, ಮಗ

Posted: 23 May 2019 03:07 AM PDT

ಕಲಬುರ್ಗಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಭರ್ಜರಿ ಜಯಗಳಿಸಿದ್ದಾರೆ. ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಭರ್ಜರಿ ಗೆಲುವು ಕಂಡಿದ್ದಾರೆ.

ಭಾರಿ ಕುತೂಹಲ ಮೂಡಿಸಿದ್ದ ಕಲಬುರ್ಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪರಾಭವಗೊಂಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉಮೇಶ್ ಜಾಧವ್ ಗೆಲುವು ಕಂಡಿದ್ದಾರೆ. ಅಂತೆಯೇ ಅವರ ಪುತ್ರ ಅವಿನಾಶ್ ಜಾಧವ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಸೋಲಿನ ಹೊಣೆ ಹೊತ್ತು ರಾಜೀನಾಮೆಗೆ ಮುಂದಾದ‌ ಜೆಡಿಎಸ್‌ ಅಧ್ಯಕ್ಷ ವಿಶ್ವನಾಥ್

Posted: 23 May 2019 03:06 AM PDT

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿಕೂಟ ಹೀನಾಯವಾಗಿ ಸೋಲನ್ನಪ್ಪಿದೆ. ಅದರಲ್ಲೂ ಜೆಡಿಎಸ್‌ ವರಿಷ್ಟ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿರುವುದು ಪಕ್ಷದ ನಾಯಕರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಕೂಡಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ವಿರುದ್ದ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶ ಮಾತ್ರ ಜೆಡಿಎಸ್‌ ನಾಯಕರಿಗೆ ಕೊಂಚ ನೆಮ್ಮದಿ ತಂದಿದ್ದು, ಇಲ್ಲಿಂದ ಕಣಕ್ಕಿಳಿದಿದ್ದ ಸಚಿವ ಹೆಚ್.ಡಿ. ರೇವಣ್ಣನವರ ಪುತ್ರ ಪ್ರಜ್ವಲ್‌ ರೇವಣ್ಣ, ಬಿಜೆಪಿ ಅಭ್ಯರ್ಥಿ ಎ. ಮಂಜು ವಿರುದ್ದ ಜಯ ಸಾಧಿಸಿದ್ದಾರೆ.

ಫಲಿತಾಂಶದ ಹಿನ್ನಲೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.‌ ವಿಶ್ವನಾಥ್‌ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು, ಅದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೋಲಿನ ಹೊಣೆಯನ್ನು ಯಾರಾದರೂ ಹೊರಬೇಕಾಗುತ್ತದೆ. ಇದನ್ನು ನಾನೇ ಹೊರುತ್ತೇನೆ ಎಂದು ಹೇಳುವ ಮೂಲಕ ತಮ್ಮ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ದೇವೇಗೌಡರೊಂದಿಗೆ ಚರ್ಚೆ ನಡೆಸಿದ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ವಿಶ್ವನಾಥ್‌ ಹೇಳಿದ್ದಾರೆ.

ಲೈಂಗಿಕ ಕಿರುಕುಳ ಕುರಿತು ಎಚ್ಚರಿಸಲು ಬಂದಿದೆ ಆಪ್

Posted: 23 May 2019 02:57 AM PDT

ಜಪಾನ್‌ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ನೀಡುವವರ ಸಂಖ್ಯೆ ಜಾಸ್ತಿ ಆಗುತ್ತಿದೆಯಂತೆ. ಹಲವು ಪ್ರಕರಣಗಳು ಪೊಲೀಸ್ ಠಾಣೆಗೆ ಬಂದರೆ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ.

ಹಲವು ಯುವತಿಯರು ನಾಚಿಕೆ ಇಲ್ಲ, ಕೀಳರಿಮೆ ಸ್ವಭಾವದವರಾಗಿದ್ದು, ಕಿರುಕುಳ ನೀಡಿದವರ ವಿರುಧ್ಧ ದನಿ ಎತ್ತಲು ಭಯ ಪಡುತ್ತಾರೆ ಎಂದು ಅಲ್ಲಿನ ಪೊಲೀಸರಿಗೆ ಮನವರಿಕೆಯಾಗಿದೆ. ಅದಕ್ಕಾಗಿಯೇ ಅವರೊಂದು ಮೊಬೈಲ್ ಆಪ್ ಒಂದನ್ನು ಹೊರತಂದಿದ್ದಾರೆ.

ಡಿಜಿ(digi) ಪೊಲೀಸ್ ಆಪ್ ಎನ್ನುವ ಈ ಆಪ್ಲಿಕೇಶನ್‌ನಲ್ಲಿ ಕಿರುಕುಳಕ್ಕೊಳಪಟ್ಟ ಮಹಿಳೆ ಬಟನ್ ಒತ್ತಿದ ತಕ್ಷಣ ಅದು ನಿಲ್ಲಿಸು ಎಂದು ಜೋರಾಗಿ ಕೂಗಿಕೊಳ್ಳುತ್ತದಂತೆ. ಹಾಗೂ ಇಲ್ಲೊಬ್ಬ ಕಿರುಕುಳ ನೀಡುತ್ತಿದ್ದಾನೆ ಸಹಾಯ ಮಾಡಿ ಎಂದು ಸ್ಕ್ರೀನ್ ತುಂಬ ತುರ್ತು ಸಂದೇಶ ಬರುತ್ತದಂತೆ. ಅದನ್ನು ಪಕ್ಕದಲ್ಲಿರುವವರಿಗೆ ತೋರಿಸಿ ಸಹಾಯ ಪಡೆಯಬಹುದು.

ಈ ಆಪ್ ಜಪಾನ್ ತುಂಬ ಜನಪ್ರಿಯವಾಗುತ್ತಿದೆ. ಈಗಾಗಲೇ 2 ಲಕ್ಷಕ್ಕಿಂತ ಹೆಚ್ಚು ಜನ ಈ ಆಪ್ ಅನ್ನು ಬಳಸುತ್ತಿದ್ದಾರಂತೆ. ಅತಿ ಹೆಚ್ಚು ಬಳಕೆಯಾಗುತ್ತಿರುವ ಸರ್ಕಾರಿ ಆಪ್ ಇದಾಗಿದೆಯಂತೆ.

ಚುನಾವಣಾ ಆಯೋಗಕ್ಕೆ ಊರ್ಮಿಳಾ ಮಾತೊಂಡ್ಕರ್ ದೂರು

Posted: 23 May 2019 02:55 AM PDT

ಲೋಕಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಇಂತಹ ಸಂದರ್ಭದಲ್ಲೇ ಬಾಲಿವುಡ್‍ ನಟಿ, ಕಾಂಗ್ರೆಸ್‍ ಅಭ್ಯರ್ಥಿ ಊರ್ಮಿಳಾ ಮಾತೊಂಡ್ಕರ್ ತಾವು ಸ್ಪರ್ಧಿಸಿದ್ದ ಕ್ಷೇತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಊರ್ಮಿಳಾ ಟ್ವೀಟ್‍‌ ನಲ್ಲಿ "ಮಗಥಾಣೆ ಮತಗಟ್ಟೆಯಲ್ಲಿ ಮತದಾರರ ಸಹಿ ಮತ್ತು ಮಶಿನ್ ನಂಬರ್ ಭಿನ್ನವಾಗಿದೆ. ಇವೆರಡೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ” ಅಂತಾ ಟ್ವೀಟ್ ಮಾಡಿದ್ದಾರೆ.

ಆದ್ರೆ ಚುನಾವಣಾ ಆಯೋಗ ಈ ಬಗ್ಗೆ ಯಾವ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಬೆಂಗಳೂರು ಸೆಂಟ್ರಲ್ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್‍ ಎಷ್ಟು ಮತ ಪಡೆದಿದ್ದಾರೆ ಗೊತ್ತಾ…?

Posted: 23 May 2019 02:52 AM PDT

ಲೋಕಸಭೆ ಚುನಾವಣೆಯ ಮುಕ್ಕಾಲು ಭಾಗ ಫಲಿತಾಂಶ ಈಗಾಗಲೇ ಬಹಿರಂಗವಾಗಿದೆ. ರಾಜ್ಯದ ಸುಮಾರು 24 ಕ್ಷೇತ್ರಗಳಲ್ಲಿ ಕಮಲ ಅರಳುತ್ತಿದೆ. ಇನ್ನು ಬೆಂಗಳೂರಿನಲ್ಲೂ ಬಿಜೆಪಿ ಗೆಲುವಿನ ನಗೆ ಬೀರುತ್ತಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಕಾಶ್‍ ರಾಜ್ ಭಾರಿ ಹಿನ್ನಡೆ ಅನುಭವಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‍ ಈ ಕ್ಷೇತ್ರದಲ್ಲಿ ತಮ್ಮ ಎದುರಾಳಿ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರನ್ನು ಪರಾಭವಗೊಳಿಸಿದ್ದಾರೆ. ಆದ್ರೆ ಪ್ರಕಾಶ್‍ ರಾಜ್‍ ಅತಿ ಕಡಿಮೆ ಮತ ಪಡೆದುಕೊಂಡಿದ್ದಾರೆ.

ಈ ಮೂಲಕ ನಟ ಪ್ರಕಾಶ್‍ ರಾಜ್‍ ಸೋಲು ಅನುಭವಿಸಿದ್ದಾರೆ. ಪ್ರಕಾಶ್‌ ರಾಜ್‌ ಠೇವಣಿಯನ್ನು ಕಳೆದುಕೊಂಡಿದ್ದಾರೆ.