Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Wednesday, April 3, 2019

Kannada News | Karnataka News | India News

Kannada News | Karnataka News | India News


ಸೆಕ್ಸ್ ನಂತ್ರ ಅತ್ಯಗತ್ಯ ಈ ಕೆಲಸ

Posted: 03 Apr 2019 09:11 AM PDT

ದಾಂಪತ್ಯದಲ್ಲಿ ಸಂಭೋಗ ಅತ್ಯಗತ್ಯ. ಇದು ಆರೋಗ್ಯಕ್ಕೂ ಒಳ್ಳೆಯದೆಂದು ಅನೇಕ ತಜ್ಞರು ಹೇಳಿದ್ದಾರೆ. ಸೆಕ್ಸ್ ಸುಖ ದ್ವಿಗುಣವಾಗಲಿ ಎಂದು ಎಲ್ರೂ ಬಯಸ್ತಾರೆ. ಇದು ಸೆಕ್ಸ್ ನಿಂದ ಮಾತ್ರ ಸಾಧ್ಯವಿಲ್ಲ. ಸಂಭೋಗದ ನಂತ್ರ ಮಾಡುವ ಕೆಲಸ ಕೂಡ ಮಹತ್ವದ ಪಾತ್ರ ವಹಿಸುತ್ತದೆ.

ಪರಾಕಾಷ್ಠೆ ತಲುಪಿದ ನಂತ್ರ ಕೆಲಸ ಮುಗೀತು ಅಂತಾ ಅನೇಕರು ಭಾವಿಸ್ತಾರೆ. ಆದ್ರೆ ಅದೇ ಸ್ಥಿತಿಯಲ್ಲಿ ಸ್ವಲ್ಪ ಸಮಯವಿದ್ದು, ಪ್ರೀತಿಯನ್ನು ತೋರಿಸಿದ್ರೆ ಆಗ ಆ್ಯಕ್ಟ್ ಸಂಪೂರ್ಣವಾಗುತ್ತದೆ.

ಸೆಕ್ಸ್ ವೇಳೆ ಶಕ್ತಿ ವ್ಯಯವಾಗೋದು ಸಾಮಾನ್ಯ. ಕ್ರಿಯೆ ನಂತ್ರ ಸ್ಪೈಸಿ ಆಹಾರ ಸಿಕ್ರೆ ಅದ್ರ ಮಜಾನೆ ಬೇರೆ. ಅದ್ರಲ್ಲೂ ಪಿಜ್ಜಾ ಬೆಸ್ಟ್. ಹಾಗಾಗಿ ಶಾರೀರಿಕ ಸಂಬಂಧ ಬೆಳೆಸುವ ಮೊದಲೇ ಪಿಜ್ಜಾ ಆರ್ಡರ್ ಮಾಡಿ. ಸಂಭೋಗದ ನಂತ್ರ ಒಟ್ಟಿಗೆ ಕುಳಿತು ಪಿಜ್ಜಾ ಸವಿಯಿರಿ.

ಸೆಕ್ಸ್ ನಂತ್ರ ಒಟ್ಟಿಗೆ ಶವರ್ ಬೆಸ್ಟ್. ಇದು ಪ್ರೀತಿ ಹೆಚ್ಚಿಸುವ ಜೊತೆಗೆ ದೇಹ ಸಡಿಲಗೊಂಡು ಹಿತ ನೀಡುತ್ತದೆ.

ಸೆಕ್ಸ್ ನಂತ್ರ ಸಂಗಾತಿ ಜೊತೆಗಿರಲಿ ಎಂದು ಮನಸ್ಸು ಬಯಸುತ್ತದೆ. ಇಂಥ ಸಂದರ್ಭದಲ್ಲಿ ಇಬ್ಬರೂ ಸೇರಿ ಅಂತರ್ಜಾಲದಲ್ಲಿ ಪೋರ್ನ್ ಚಿತ್ರಗಳನ್ನು ವೀಕ್ಷಿಸಬಹುದು.

ಸೆಕ್ಸ್ ನಂತ್ರ ರಿಲ್ಯಾಕ್ಸ್ ಆಗಲು ಇಬ್ಬರು ಸೆಲ್ಫಿ ತೆಗೆದುಕೊಳ್ಳಬಹುದು. ಪರಸ್ಪರ ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಒಳ್ಳೆ ಮಾರ್ಗ. ಹಾಗಾಗಿ ಸಂಭೋಗದ ನಂತ್ರ ಅಗತ್ಯವಾಗಿ ಸಂಗಾತಿಗೆ ಮುತ್ತಿಡಿ.

ಒಮ್ಮೆ ಸಂಭೋಗದ ನಂತ್ರ ಎರಡು ಗಂಟೆ ಕಾಯಬೇಕಾಗಿಲ್ಲ. ಕೆಲ ಸಮಯದ ನಂತ್ರ ಮತ್ತೊಮ್ಮೆ ಒಂದಾಗಬಹುದು. ಸ್ವಲ್ಪ ಎಂಜಾಯ್ ಮಾಡಿ, ರಿಲ್ಯಾಕ್ಸ್ ಆಗಿ ಮತ್ತೆ ಸಂಬಂಧ ಬೆಳೆಸಬಹುದು.

ಹೆರಿಗೆ ನಂತ್ರ ಮಹಿಳೆಯರನ್ನು ಕಾಡುವ ಸಮಸ್ಯೆಗಳು

Posted: 03 Apr 2019 09:05 AM PDT

ಗರ್ಭಿಣಿಯಾದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡ್ತಾರೆ. ಆದ್ರೂ ಹೆರಿಗೆಯಾಗ್ತಿದ್ದಂತೆ ಅನೇಕ ಸಮಸ್ಯೆಗಳು ಶುರುವಾಗುತ್ತದೆ. ಹಾರ್ಮೋನಿನಲ್ಲಿ ಬದಲಾವಣೆಯಾಗುವುದ್ರಿಂದ ಮಹಿಳೆಯರಲ್ಲಿ ಮಾನಸಿಕ ಹಾಗೂ ಶಾರೀರಿಕ ಬದಲಾವಣೆಯಾಗುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆರಿಗೆ ನಂತ್ರವೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಸರಿಯಾದ ಡಯೆಟ್ ಕ್ರಮ ಅನುಸರಿಸುವ ಜೊತೆಗೆ ಸಣ್ಣ ಸಮಸ್ಯೆಯನ್ನೂ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹೆರಿಗೆ ನಂತ್ರ ಅನೇಕ ಮಹಿಳೆಯರಿಗೆ ಮೂತ್ರದಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ.

ಕೆಲ ಮಹಿಳೆಯರಿಗೆ ಹೆರಿಗೆ ನಂತ್ರ ಮುಟ್ಟಿನ ಸಮಸ್ಯೆ ಕಾಡಲು ಶುರುವಾಗುತ್ತದೆ. ಮುಟ್ಟಿನ ಅವಧಿ ವಿಳಂಬವಾಗುತ್ತದೆ. ಕೆಲ ಮಹಿಳೆಯರಿಗೆ ವರ್ಷವಾದ್ರೂ ಮುಟ್ಟು ಶುರುವಾಗುವುದಿಲ್ಲ. ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಮುಟ್ಟಾಗುವುದಿಲ್ಲ.

ಹೆರಿಗೆ ನಂತ್ರ ಸ್ತನದ ಸಮಸ್ಯೆ ಕೂಡ ಕಾಡುತ್ತದೆ. ಕೆಲ ಮಹಿಳೆಯರ ಸ್ತನದ ಗಾತ್ರ ದೊಡ್ಡದಾಗುತ್ತದೆ. ಮತ್ತೆ ಕೆಲವರ ಸ್ತನದಲ್ಲಿ ನೋವು, ಊತ ಕಾಣಿಸಿಕೊಳ್ಳುತ್ತದೆ.

ಹೆರಿಗೆಯಾದ ಕೆಲ ತಿಂಗಳುಗಳ ಕಾಲ ಕೂದಲು ಉದುರುವ ಸಮಸ್ಯೆ ಹೆಚ್ಚಿಸುತ್ತದೆ. ನಂತ್ರದ ದಿನಗಳಲ್ಲಿ ಸಮಸ್ಯೆ ಸರಿಯಾಗುತ್ತದೆ.

ಹೆರಿಗೆ ನಂತ್ರ ಚರ್ಮದ ಸಮಸ್ಯೆ ಕಾಡುತ್ತದೆ. ಕೆಲವರ ಚರ್ಮ ಒಣಗಿದ್ರೆ ಮತ್ತೆ ಕೆಲವರ ಚರ್ಮದ ಬಣ್ಣ ಬದಲಾಗುತ್ತದೆ.

ಆಟವಾಡುವಾಗಲೇ ದುರಂತ: ನೀರಿನ ಟ್ಯಾಂಕ್ ಗೆ ಬಿದ್ದು 3 ಮಕ್ಕಳು ಸಾವು

Posted: 03 Apr 2019 08:10 AM PDT

ಮಂಗಳೂರು: ನೀರಿನ ಟ್ಯಾಂಕ್ ಗೆ ಬಿದ್ದು ಮೂವರು ಮಕ್ಕಳು ದಾರುಣವಾಗಿ ಸಾವು ಕಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಡ್ಡಂಗಳದಲ್ಲಿ ನಡೆದಿದೆ.

ಜಿತೇಶ್(13), ವಿಸ್ಮಿತಾ(13), ಚೈತ್ರಾ(10) ಮೃತಪಟ್ಟವರೆಂದು ಗುರುತಿಸಲಾಗಿದೆ. ಪಂಚಾಯಿತಿಗೆ ಸೇರಿದ ಟ್ಯಾಂಕ್ ಬಳಿ ಆಡವಾಡಲು ಹೋಗಿದ್ದ ಸಂದರ್ಭದಲ್ಲಿ ಟ್ಯಾಂಕ್ ಮೇಲೆ ಹತ್ತಿದ್ದು, ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಪುತ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫಾರಿನ್ ವರನ ಕನಸು ಕಾಣುವವರು ಓದಲೇಬೇಕಾದ ಸುದ್ದಿ

Posted: 03 Apr 2019 07:47 AM PDT

ಹೆಣ್ಣು ಮಕ್ಕಳಿಗೆ ವರನನ್ನು ಹುಡುಕುವುದು ಪಾಲಕರ ಜವಾಬ್ದಾರಿ ಕೆಲಸಗಳಲ್ಲೊಂದು. ಗುಣವಂತ, ವಿದ್ಯಾವಂತ ಹಾಗೂ ಶ್ರೀಮಂತ ವರ ಬೇಕೆಂಬುದು ಎಲ್ಲರ ಬೇಡಿಕೆ. ಎನ್.ಆರ್.ಐ. ವರ ಬೇಕು ಎನ್ನುವ ಬೇಡಿಕೆ ಕೂಡ ಹೆಚ್ಚಾಗ್ತಾ ಇದೆ. ಎನ್.ಆರ್.ಐ. ವರನಿಗಾಗಿ ಮ್ಯಾಟ್ರಿಮೋನಿಯಾ ಮೊರೆ ಹೋಗ್ತಾರೆ.

ಅವರ ಆಸೆಯಂತೆ ಉತ್ತಮ ಉದ್ಯೋಗದಲ್ಲಿರುವ ವರ ಕೂಡ ಸಿಗ್ತಾನೆ. ಆತನ ಪೂರ್ವಾಪರ ವಿಚಾರಿಸಿ, ಅದ್ಧೂರಿಯಾಗಿ ಮಗಳ ಮದುವೆ ಮಾಡಿ ಕೊಡ್ತಾರೆ ಪಾಲಕರು. ಮಗಳು ವಿದೇಶಕ್ಕೆ ಹೋಗ್ತಿದ್ದಾಳೆಂಬ ನೋವಿನ ನಡುವೆಯೂ, ಸುಖವಾಗಿ ಬದುಕಲಿ ಎಂಬ ಹಾರೈಕೆ ಅವರದ್ದು. ವಿದೇಶದಲ್ಲಿರುವ ವರನನ್ನು ಪಡೆಯುವುದು ಹುಡುಗಿಯರ ಕನಸು ಕೂಡ. ಅದೊಂದು ಪ್ರೆಸ್ಟೀಜ್ ವಿಚಾರ. ಹಾಗಾಗಿಯೇ ಅನೇಕ ಹುಡುಗಿಯರು ಎನ್.ಆರ್.ಐ. ವರ ಎಂದ್ರೆ ತಕ್ಷಣ ಒಪ್ಪಿಕೊಳ್ತಾರೆ.

ಮಗಳ ಮದುವೆಗಾಗಿ ಸಾಕಷ್ಟು ಹಣ ಖರ್ಚು ಮಾಡುವ ಪಾಲಕರು ಮದುವೆಯಾದ ಕೆಲವೇ ತಿಂಗಳ ನಂತ್ರ ಪಶ್ಚಾತಾಪ ಪಡ್ತಾರೆ. ಮೋಸಗಾರನ ಜೊತೆ ಮಗಳ ಮದುವೆ ಮಾಡಿದ್ದೇವೆಂಬ ಸತ್ಯ ಗೊತ್ತಾಗುತ್ತದೆ. ಎನ್.ಆರ್.ಐ. ಜೊತೆ ಮದುವೆ, ನಂತ್ರ ಮೋಸ ಇದು ಮೊದಲು ಪಂಜಾಬ್ ಗೆ ಮಾತ್ರ ಮೀಸಲಾಗಿತ್ತು. ಈಗ ಎಲ್ಲೆಡೆ ಇಂತ ಸುದ್ದಿಗಳು ಕೇಳಿ ಬರ್ತಾ ಇವೆ.

ಮದುವೆಯಾಗಿ ಗಂಡನ ಜೊತೆ ವಿದೇಶಕ್ಕೆ ತೆರಳುವ ಹಲವು ಹುಡುಗಿಯರು ಕೆಲವೇ ತಿಂಗಳಲ್ಲಿ ಪ್ರಾಣ ಉಳಿಸಿಕೊಂಡು ಭಾರತಕ್ಕೆ ವಾಪಸ್ ಬರ್ತಿದ್ದಾರೆ. ಮೋಸ ಮಾಡಿ ಮದುವೆಯಾಗುವ ಕೆಲ ಎನ್.ಆರ್.ಐ. ಹುಡುಗ್ರು ಅಲ್ಲಿ ಮೊದಲೇ ಒಂದು ಮದುವೆಯಾಗಿರ್ತಾರೆ. ಹಣದಾಸೆಗೆ ಭಾರತದ ಹುಡುಗಿಯನ್ನೂ ಮದುವೆಯಾಗ್ತಾರೆ. ನಂತ್ರ ಭಾರತೀಯ ಮಹಿಳೆಗೆ ಚಿತ್ರ ಹಿಂಸೆ ನೀಡ್ತಾರೆ.

ದಿನದಿಂದ ದಿನಕ್ಕೆ ಮೋಸ ಹೋಗುವ ಭಾರತೀಯ ಮಹಿಳೆಯರ ಸಂಖ್ಯೆ ಹೆಚ್ಚಾಗ್ತಾ ಇದೆ. ಈ ಹಿನ್ನಲೆಯಲ್ಲಿ ವಿದೇಶಾಂಗ ಸಚಿವಾಲಯ ಕೂಡ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸ್ತಾ ಇದೆ. ಎನ್.ಆರ್.ಐ. ಅಥವಾ ಬೇರೆ ಯಾವುದೇ ವರನನ್ನು ಮದುವೆಯಾಗಿ ವಿದೇಶಕ್ಕೆ ಹೋಗುವ ಭಾರತೀಯ ಮಹಿಳೆಯರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಿದೆ.

ಶೂ ಧರಿಸ್ತೀರಾ…? ಹಾಗಿದ್ರೆ ತಪ್ಪದೆ ಓದಿ ಈ ಸುದ್ದಿ

Posted: 03 Apr 2019 07:34 AM PDT

Image result for this-is-so-shocking-snake-in-shoe-heres-why-you-must-check-your-footwear-in-rainy-seasonಶೂ ಧರಿಸುವವರು ಬೆಚ್ಚಿ ಬೀಳುವಂತಹ ಸುದ್ಧಿಯೊಂದು ಇಲ್ಲಿದೆ. ಸಾಮಾನ್ಯವಾಗಿ ಶೂ ಧರಿಸುವವರು ಗಡಿಬಿಡಿಯಲ್ಲಿ ಶೂ ಧರಿಸಿಕೊಂಡು ಹೋಗಲು ಮುಂದಾಗುತ್ತಾರೆ.

ಅದರಲ್ಲೂ ಶಾಲೆಗೆ ಹೋಗುವ ಮಕ್ಕಳು, ಕಡ್ಡಾಯವಾಗಿ ಶೂ ಧರಿಸಬೇಕಾಗಿರುವ ಕಾರಣ ಶಾಲೆಗೆ ತಡವಾಗುತ್ತದೆಂದು ಪೋಷಕರು ಮೇಲೆ ಮಾತ್ರ ಒರೆಸಿ ಮಕ್ಕಳಿಗೆ ಶೂ ಹಾಕಿ ಕಳುಹಿಸುತ್ತಾರೆ.

ಆದರೆ ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋ ಒಂದು, ಇಂತಹ ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಶೂ ಒಳಗೆ ಒಮ್ಮೊಮ್ಮೆ ಹುಳ- ಹುಪ್ಪಟೆ ಸೇರಿಕೊಂಡು ಮಕ್ಕಳಿಗೆ ಅಪಾಯ ಉಂಟಾಗುತ್ತದೆ.

ಈ ಕುರಿತು ಬಹಿರಂಗವಾಗಿರುವ ವಿಡಿಯೋ ಒಂದರಲ್ಲಿ ನಾಗರ ಹಾವು ಶೂ ಒಳಗೆ ಅಡಗಿ ಕುಳಿತಿದ್ದು, ಅದೃಷ್ಟವಶಾತ್ ಇದನ್ನು ಗಮನಿಸಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಹಾಗಾಗಿ ಇನ್ನು ಮುಂದೆ ಶೂ ಧರಿಸುವ ಮುನ್ನ ಅದನ್ನು ಚೆನ್ನಾಗಿ ಪರೀಕ್ಷಿಸಿ ಧರಿಸುವುದು ಒಳ್ಳೆಯದು.

ಕಾಂಗ್ರೆಸ್ ನಾಯಕನ ಮೊಮ್ಮಗನ ಜೊತೆ ಸಾರಾ ಅಲಿ ಖಾನ್ ಡೇಟ್

Posted: 03 Apr 2019 07:17 AM PDT

ಬಾಲಿವುಡ್ ನಟಿ ಸಾರಾ ಅಲಿ ಖಾನ್ ನಟನೆ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದಾಳೆ. ಸಾರಾಗೆ ಒಂದಾದ ಮೇಲೆ ಒಂದು ಸಿನಿಮಾ ಆಫರ್ ಬರ್ತಿದೆ. ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದು, ಆಕೆ ಫೋಟೋ, ವಿಡಿಯೋಗಳು ಅಭಿಮಾನಿಗಳಿಗೆ ಇಷ್ಟವಾಗುತ್ತವೆ.

ಇತ್ತೀಚಿಗೆ ಸಾರಾ, ವೋಗ್ ನಿಯತಕಾಲಿಕೆಯ ಸಂದರ್ಶನದಲ್ಲಿ ಪಾಲ್ಗೊಂಡಿದ್ದಳು. ಸಂದರ್ಶನದ ವೇಳೆ ಮನಸ್ಸು ಬಿಚ್ಚಿ ಸಾರಾ ಮಾತನಾಡಿದ್ದಾಳೆ. ಯಾವುದೇ ಭಯವಿಲ್ಲದೆ, ನಗ್ತಾ ನಗ್ತಾ ಎಲ್ಲ ಪ್ರಶ್ನೆಗಳಿಗೆ ಸಾರಾ ಉತ್ತರ ನೀಡಿದ್ದಾಳೆ. ಕೊನೆಯದಾಗಿ ಗೂಗಲ್ ನಲ್ಲಿ ಏನು ಹುಡುಕಿದ್ರಿ ಎಂಬ ಪ್ರಶ್ನೆಗೆ, ಬೆಳಗಿನ ಜಾವ 3 ಗಂಟೆಗೆ ಮುಂಬೈನ ಮನೋರಿಗೆ ಹೋಗುವುದು ಹೇಗೆ ಎಂಬುದನ್ನು ಸರ್ಚ್ ಮಾಡಿದ್ದೆ. ನಾನಿದ್ದ ಪ್ರದೇಶದಿಂದ ಅದು 1.5 ಕಿಲೋಮೀಟರ್ ದೂರದಲ್ಲಿತ್ತು ಎಂದಿದ್ದಾಳೆ ಸಾರಾ.

ಡೇಟಿಂಗ್ ಬಗ್ಗೆ ಕೇಳಿದ ಪ್ರಶ್ನೆಗೂ ಸಾರಾ ಉತ್ತರ ನೀಡಿದ್ದಾಳೆ. ಕಾಂಗ್ರೆಸ್ ನಾಯಕರ ಮೊಮ್ಮಗನ ಜೊತೆ ಡೇಟಿಂಗ್ ಮಾಡಿದ್ದೇನೆಂದು ಸಾರಾ ಹೇಳಿದ್ದಾಳೆ. ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗ ವೀರ್ ಪಹಾರಿಯಾ ಜೊತೆ ಡೇಟಿಂಗ್ ಮಾಡಿರೋದನ್ನು ಸಾರಾ ಒಪ್ಪಿಕೊಂಡಿದ್ದಾಳೆ.

 

ಬೆಂಕಿ ರಾಜ ಎಸ್ಕೇಪ್ ಪ್ರಕರಣ: ಇಬ್ಬರು ಸಸ್ಪೆಂಡ್

Posted: 03 Apr 2019 07:14 AM PDT

ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿ ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಕೊಲೆ ಆರೋಪಿ ರಾಜೇಂದ್ರ ಅಲಿಯಾಸ್ ಬೆಂಕಿ ರಾಜ ಬೆಳಿಗ್ಗೆ ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿತ್ತು. ಆತನನ್ನು ನೋಡಿಕೊಳ್ಳಲು ನೇಮಕ ಮಾಡಲಾಗಿದ್ದ ಪೊಲೀಸರು ಕರ್ತವ್ಯ ಲೋಪವೆಸಗಿದ ಕಾರಣಕ್ಕೆ ಅಮಾನತು ಮಾಡಿ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಆದೇಶ ಹೊರಡಿಸಿದ್ದಾರೆ.

ಮಾರ್ಚ್ 23 ರಂದು ಕುಮಾರಸ್ವಾಮಿ ಲೇ ಔಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಕಿ ರಾಜನನ್ನು ಕೋಣನಕುಂಟೆ ಬಳಿ ಫೈರಿಂಗ್ ಮಾಡಿ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು.

ಬಾತ್ ಟಬ್ ‘ಸೆಕ್ಸ್’ ಮುನ್ನ ಇದು ತಿಳಿದಿರಲಿ

Posted: 03 Apr 2019 06:57 AM PDT

ಸಂಭೋಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ದಂಪತಿ ಬಯಸ್ತಾರೆ. ಹೊಸ ಹೊಸ ಜಾಗಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೊಸ ಅನುಭವ ಸಿಗುತ್ತದೆ. ಬೆಡ್ ಸೆಕ್ಸ್ ಬೇಸರವೆನ್ನಿಸಿದವರಿಗೆ ಬದಲಾವಣೆ ಸಿಗುತ್ತದೆ. ಮನಸ್ಸು ಉತ್ಸಾಹಗೊಳ್ಳುತ್ತದೆ.

ಹಾಗಾಗಿ ಬೇರೆ ಬೇರೆ ಜಾಗಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಬೇಕೆಂದು ತಜ್ಞರು ಸಲಹೆ ನೀಡ್ತಾರೆ. ಅನೇಕರು ಬಾತ್ ಟಬ್ ಸೆಕ್ಸ್ ಇಷ್ಟಪಡ್ತಾರೆ. ಆದ್ರೆ ಬಾತ್ ಟಬ್ ಸೆಕ್ಸ್ ಎಷ್ಟು ಸುರಕ್ಷಿತ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ.

ಬಾತ್ ಟಬ್ ಸೆಕ್ಸ್ ನಲ್ಲಿ ಯುಟಿಐ ಅಪಾಯ ಹೆಚ್ಚಿರುತ್ತದೆ. ಮೂತ್ರದಲ್ಲಿರುವ ಬ್ಯಾಕ್ಟೀರಿಯಾಗಳು ಬಾತ್ ಟಬ್ ನಲ್ಲಿ ಜಮೆಯಾಗಿರುತ್ತವೆ. ಸೆಕ್ಸ್ ವೇಳೆ ಅವು ನಮ್ಮ ದೇಹ ಪ್ರವೇಶ ಮಾಡುವುದ್ರಿಂದ ಮೂತ್ರದ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ನೀರು ತೇವವಾಗಿರುತ್ತದೆ ನಿಜ. ಆದ್ರೆ ಅದು ಲೂಬ್ರಿಕಂಟ್ ಅಲ್ಲ. ನಿಮ್ಮ ದೇಹದಿಂದ ಬಿಡುಗಡೆಯಾಗುವ ಲೂಬ್ರಿಕಂಟನ್ನು ಕೂಡ ಅದು ಎಳೆದುಕೊಂಡು ಶುಷ್ಕಗೊಳಿಸುತ್ತದೆ. ಯೋನಿ ಶುಷ್ಕವಾದ್ರೆ ಸೆಕ್ಸ್ ಕಷ್ಟವಾಗುತ್ತದೆ. ನೋವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ನೀರಿನಲ್ಲಿರುವ ಗುಣ ಹಾಗೂ ಬಿಸಿ ನೀರು ಅಥವಾ ತಣ್ಣನೆಯ ನೀರು ಕಾಂಡೋಮ್ ನಲ್ಲಿ ರಂಧ್ರ ಉಂಟುಮಾಡುವ ಸಾಧ್ಯತೆಯಿರುತ್ತದೆ. ಕಾಂಡೋಮ್ ಇಲ್ಲದೆ ಸಂಭೋಗ ಬೆಳೆಸಬೇಕಾಗುತ್ತದೆ. ಇದು ಸುರಕ್ಷಿತ ಸೆಕ್ಸ್ ಅಲ್ಲ. ಗರ್ಭಧಾರಣೆ ಸಾಧ್ಯತೆ ಈ ವೇಳೆ ಹೆಚ್ಚಿರುತ್ತದೆ.

ವರಿಷ್ಠರಿಗೆ ಸವಾಲ್: ಬಹಿರಂಗವಾಗೇ ಸುಮಲತಾ ಬೆಂಬಲಿಸಲು ಕಾಂಗ್ರೆಸ್ ನಿರ್ಧಾರ…?

Posted: 03 Apr 2019 06:56 AM PDT

ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬಹಿರಂಗವಾಗಿಯೇ ಬೆಂಬಲಿಸಲು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎನ್ನಲಾಗಿದೆ.

ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಪರ ಪ್ರಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಬ್ಲಾಕ್ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸುಮಲತಾ ಪರವಾಗಿ ಬಹಿರಂಗವಾಗಿ ಪ್ರಚಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಮಾಜಿ ಸಚಿವ ಚೆಲುವರಾಯಸ್ವಾಮಿ ಮತ್ತು ಟೀಮ್ ಗೆ ಸಿದ್ದರಾಮಯ್ಯ ಸೂಚನೆ ನೀಡಿ, ನಿಖಿಲ್ ಪರವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸುಮಲತಾ ಅವರನ್ನು ಬೆಂಬಲಿಸಲು ಕಾಂಗ್ರೆಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ದಿನದಿಂದ ದಿನಕ್ಕೆ ನಮಗೆ ಕಿರುಕುಳ, ತೊಂದರೆ ಹೆಚ್ಚುತ್ತಿದೆ. ನಮ್ಮ ನಾಯಕತ್ವ ಉಳಿಯಬೇಕಾದರೆ ಸುಮಲತಾ ಅವರನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ. ಕಾರ್ಯಕರ್ತರ ಮಾತನ್ನು ನಾವು ಕೇಳಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಮುಖಂಡರು ಅಭಿಪ್ರಾಯ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಪರೋಕ್ಷವಲ್ಲ, ಬಹಿರಂಗವಾಗಿಯೇ ಸುಮಲತಾ ಪರ ಪ್ರಚಾರ ನಡೆಸಲಾಗುವುದು. ನಾಳೆ ದರ್ಶನ್ ಪ್ರಚಾರದಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಪ್ರಚಾರ ನಡೆಸಲಾಗುವುದು ಎಂದು ಹೇಳಲಾಗಿದೆ. ಮಂಡ್ಯ ಕಾಂಗ್ರೆಸ್ ನ ಅನೇಕ ಮುಖಂಡರು ಸುಮಲತಾ ಅವರಿಗೆ ಬೆಂಬಲ ನೀಡಿ ಪ್ರಚಾರದಲ್ಲಿ ತೊಡಗಿದ್ದು, ಕೆಲವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಕೆಲವು ಮುಖಂಡರು ಪರೋಕ್ಷವಾಗಿ ಸುಮಲತಾ ಪರವಾಗಿ ಕೆಲಸ ಮಾಡುತ್ತಿದ್ದು, ಇದಕ್ಕೆ ದೋಸ್ತಿ ಪಕ್ಷದ ನಾಯಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದಾದ ಬಳಿಕ ಕಾಂಗ್ರೆಸ್ ನಾಯಕರು ಮಂಡ್ಯ ಜಿಲ್ಲೆಯ ಮುಖಂಡರೊಂದಿಗೆ ಸಭೆ ನಡೆಸಿ ನಿಖಿಲ್ ಪರವಾಗಿ ಪ್ರಚಾರ ನಡೆಸಲು ಸೂಚನೆ ನೀಡಿದ್ದಾರೆ. ಹೀಗಿದ್ದರೂ, ವರಿಷ್ಠರಿಗೆ ಸವಾಲ್ ಹಾಕಿರುವ ಮಂಡ್ಯ ಕಾಂಗ್ರೆಸ್ ನ ಕೆಲ ಮುಖಂಡರು ಸುಮಲತಾ ಪರವಾಗಿ ಬಹಿರಂಗ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಕುತೂಹಲಕ್ಕೆ ಕಾರಣವಾಗಿದೆ ರಮೇಶ್ ಕತ್ತಿ ಗೈರು ಹಾಜರಿ

Posted: 03 Apr 2019 06:40 AM PDT

ಎರಡನೇ ಹಂತದ ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆ ದಿನ. ಹೀಗಾಗಿ ಇವತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ್‍ ಜೊಲ್ಲೆ ನಾಮಪತ್ರ ಸಲ್ಲಿಸಿದ್ರು.

ಅಣ್ಣಾ ಸಾಹೇಬ್‍ ಜೊಲ್ಲೆ ನಾಮಪತ್ರ ಸಲ್ಲಿಕೆ ವೇಳೆ ಶಾಸಕರಾದ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆದ್ರೆ ಚಿಕ್ಕೋಡಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ರಮೇಶ್‍ ಕತ್ತಿ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ರಮೇಶ್ ಕತ್ತಿಯವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡು, ನಾಮಪತ್ರ ಸಲ್ಲಿಕೆ ವೇಳೆ ಬಂದಿರಲಿಲ್ಲ ಅಂತಾ ಹೇಳಲಾಗ್ತಿದೆ. ಆದ್ರೆ ಅವರ ಸಹೋದರ ಉಮೇಶ್ ಕತ್ತಿ, ಜೊಲ್ಲೆ ನಾಮಪತ್ರ ಸಲ್ಲಿಕೆ ವೇಳೆ ತಡವಾಗಿ ಬಂದ್ರು.

‘ಈಶ್ವರಪ್ಪನ ನಾಲಿಗೆಗೂ, ಬ್ರೇನ್ ಗೂ ಲಿಂಕ್ ತಪ್ಪಿದೆ’

Posted: 03 Apr 2019 06:35 AM PDT

ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಅವರ ನಾಲಿಗೆಗೂ ಬ್ರೇನ್ ಗೂ ಲಿಂಕ್ ತಪ್ಪಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ಸಿಎಂ ಕುಮಾರಸ್ವಾಮಿ ನೆಗೆದು ಬಿದ್ದು ಹೋಗ್ತಾರೆ ಎಂದು ಈಶ್ವರಪ್ಪ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಅದು ಈಶ್ವರಪ್ಪನವರ ಸಂಸ್ಕೃತಿಯಾಗಿದೆ. ಅವರ ನಾಲಿಗೆಗೂ ಬ್ರೇನ್ ಗೂ ಲಿಂಕ್ ತಪ್ಪಿದೆ ಎಂದು ಹೇಳಿದ್ದಾರೆ.

ಮೈಸೂರು, ಮಂಡ್ಯದಲ್ಲಿ ಮೈತ್ರಿ ಪಕ್ಷಗಳ ನಡುವೆ ಸಮನ್ವಯತೆ ಇದೆ. ನಾನು ಮತ್ತು ದೇವೇಗೌಡರು ಒಟ್ಟಿಗೆ ಪ್ರಚಾರ ನಡೆಸುತ್ತೇವೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

ಚುನಾವಣೆ ಬಳಿಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಹೇಳಿಕೆ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಬರೀ ಕನಸು ಕಾಣುತ್ತಾರೆ. ಯಡಿಯೂರಪ್ಪನವರ ಕನಸುಗಳು ನನಸಾಗುವುದಿಲ್ಲ. ಅವರಿಗೆ ವಿಧಾನಸೌಧದ 3ನೇ ಮಹಡಿ ಕಾಣಿಸುತ್ತಿದೆ. ಸಿಎಂ ಕುರ್ಚಿ ಮಾತ್ರ ಕಾಣಿಸುತ್ತಿದ್ದು, ಬೇರೆ ಏನೂ ಕಾಣಿಸುತ್ತಿಲ್ಲ. ಅವರಿಗೆ ಅಧಿಕಾರ ದಾಹ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

20 ಕೆ.ಜಿ. ತೂಕ ಇಳಿಸಿಕೊಂಡು ಫೋಟೋ ಹಾಕಿದ ನಟಿ…!

Posted: 03 Apr 2019 06:33 AM PDT

ಹೀರೋಯಿನ್ ಗಳು ಅಂದ್ರೆ ಜನಸಾಮಾನ್ಯರ ದೃ಼ಷ್ಟಿಯಲ್ಲಿ ಬಳ್ಳಿಯಂತೆ ಬಳಕಬೇಕು. ಆದ್ರೆ ಸ್ವಲ್ಪ ದಪ್ಪ ಆದ್ರೂ, ಅವರನ್ನ ಅಪಹಾಸ್ಯ ಮಾಡೋಕೆ ಶುರು ಮಾಡ್ತಾರೆ. ಹೀಗಾಗಿ ನಟಿಮಣಿಯರಿಗೆ ಡಯಟ್ ಮಾಡ್ತಾ ತೂಕ ಇಳಿಸಿಕೊಳ್ಳದೇ ಮುಖ್ಯ ಧ್ಯೇಯವಾಗಿರತ್ತೆ.

ಇದೀಗ ಬಾಲಿವುಡ್‍ ನಟಿ ನರ್ಗಿಸ್‍ ಫಕ್ರಿ ಕೂಡಾ ತೂಕ ಇಳಿಸಿಕೊಂಡಿದ್ದಾರಂತೆ. ಆಶ್ಚರ್ಯ ಆಯ್ತಾ, ಹೌದು…..ಬರೋಬ್ಬರಿ 80 ಕೆ.ಜಿ. ಇದ್ದ ನರ್ಗಿಸ್‍ ವೇಯ್ಟ್ ಲಾಸ್ ಆದ್ಮೇಲೆ 60 ಕೆ.ಜಿ. ಆಗಿದ್ದಾರಂತೆ.

ರಾಕ್‍ ಸ್ಟಾರ್ ಚಿತ್ರದಲ್ಲಿ ಫಿಟ್‍ ಅಂಡ್ ಫೈನಾಗಿದ್ದ 39 ರ ಹರೆಯದ ನಟಿ ನರ್ಗಿಸ್‍, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಾವು ದಪ್ಪಗಾಗಿದ್ದ ಫೋಟೋವೊಂದನ್ನ ಹಾಕಿದ್ರು. ಇದಕ್ಕೆ ಅವರ ಅಭಿಮಾನಿಗಳು ಸಖತ್ ಟ್ರೋಲ್ ಮಾಡಿದ್ರು. ಅದರಲ್ಲಿ ಕೆಲವರು, ವರ್ಕೌಟ್ ಮತ್ತು ಯೋಗ ಮಾಡುವಂತೆ ಸಲಹೆ ಕೂಡಾ ನೀಡಿದ್ರು.

ಆಗ ಏನೂ ಕಮೆಂಟ್ ಮಾಡದೇ ಸುಮ್ಮನಿದ್ದ ನರ್ಗಿಸ್, ಈಗ 20 ಕೆ.ಜಿ. ತೂಕ ಇಳಿಸಿಕೊಂಡ ಫೋಟೋ ಹಾಕಿ ಉತ್ತರ ನೀಡಿದ್ದಾರೆ. ಅಲ್ಲದೆ ತಾವು ತೂಕ ಕಳೆದುಕೊಳ್ಳಲು ಅನುಸರಿಸಿದ ಕ್ರಮಗಳನ್ನು ಹಂಚಿಕೊಂಡಿದ್ದಾರೆ. ಆಹಾರ, ಯೋಗ, ಜಿಮ್‍ ಗಳಿಂದ ತಾವು ತೂಕ ಇಳಿಸಿಕೊಂಡಿದ್ದಾಗಿ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

‘ಪ್ರಧಾನಿ ಮೋದಿಗೆ ಶುರುವಾಗಿದೆ ಭಯ’

Posted: 03 Apr 2019 06:03 AM PDT

ಹಾಸನ: ಹಾಸನ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬಿರುಸಿನ ಪ್ರಚಾರ ನಡೆಸಿದ್ದಾರೆ.

ವಿವಿಧ ಕಡೆಗಳಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೇ 23 ರಂದು ಫಲಿತಾಂಶವನ್ನು ಇಡೀ ಜಗತ್ತೇ ಗಮನಿಸುತ್ತದೆ ಎಂದು ಸಕಲೇಶಪುರ ತಾಲ್ಲೂಕಿನ ಕ್ಯಾನಹಳ್ಳಿಯಲ್ಲಿ ಹೇಳಿದ್ದಾರೆ.

282 ಸ್ಥಾನ ಪಡೆದ ನರೇಂದ್ರ ಮೋದಿ ನಡೆದುಕೊಂಡ ರೀತಿ ಸೇರಿದಂತೆ ಎಲ್ಲ ಗಮನಿಸಿ ಜನರು ಬದಲಾವಣೆ ಮಾಡುವ ತೀರ್ಮಾನ ಕೈಗೊಂಡಿದ್ದಾರೆ. ಕರ್ನಾಟಕದಲ್ಲಿಯೂ ಜನ ತೀರ್ಮಾನ ಕೈಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನಂತರ ಯಾರೂ ಜನಿಸಿಲ್ಲವೆ? ಮೋದಿ ಅವರ ಬಳಿಕ ಮಾಯಾವತಿ ಪ್ರಧಾನಿ ಆಗಬಹುದು, ಮಮತಾ ಬ್ಯಾನರ್ಜಿ ಕೂಡ ಪ್ರಧಾನಮಂತ್ರಿ ಆಗಬಹುದು. ಮೈತ್ರಿ ಇರುವುದರಿಂದ ನಾವು ರಾಹುಲ್ ಹೆಸರನ್ನು ಹೇಳುತ್ತೇವೆ ಎಂದು ತಿಳಿಸಿದ್ದಾರೆ.

ಮೇ 23 ರ ನಂತರ ಎಲ್ಲರೂ ಒಟ್ಟಿಗೆ ಕುಳಿತು ಚರ್ಚೆ ಮಾಡಿ ಒಟ್ಟಿಗೆ ಸರ್ಕಾರ ರಚಿಸುವ ಸಂದರ್ಭ ಬರಲಿದೆ ಎಂದು ಹೆತ್ತೂರಿನಲ್ಲಿ ಹೇಳಿದ್ದಾರೆ. ಎಲ್ಲಾ ಕಡೆ ಮೈತ್ರಿ ಮಾಡಿಕೊಂಡು ಹೋರಾಟ ನಡೆಯುತ್ತಿದೆ. ನರೇಂದ್ರ ಮೋದಿಯವರಿಗೂ ಭಯ ಶುರುವಾಗಿದೆ ಎಂದು ಹೇಳಿದ್ದಾರೆ.

ದೇವೇಗೌಡರ ಮೊಮ್ಮಗನನ್ನು ಹಾಸನದಲ್ಲಿ ಏಕೆ ನಿಲ್ಲಿಸಿದರು ಅನ್ನಬಹುದು. ಎಲ್ಲರ ಜೊತೆ ಕುಳಿತು ಚರ್ಚಿಸಿ ಈ ಅಭಿಪ್ರಾಯಕ್ಕೆ ಬಂದೆ. ನಾಯಕರ ಅಭಿಪ್ರಾಯ ಪಡೆದು ಪ್ರಜ್ವಲ್ ಹೆಸರು ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ದಂಗಾಗಿಸುತ್ತೆ ಸಿಸಿ ಟಿವಿಯಲ್ಲಿ ಸೆರೆಯಾದ ಶಿಕ್ಷಕಿ ಕೆಲಸ

Posted: 03 Apr 2019 05:59 AM PDT

ಶಿಕ್ಷಕರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಆದ್ರೆ ದೆಹಲಿ ಶಿಕ್ಷಕಿಯೊಬ್ಬಳ  ಕೆಲಸ ದಂಗಾಗಿಸುವಂತಿದೆ. ಆಕೆ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಕ್ಕಳ ಬ್ಯಾಗ್ ನಲ್ಲಿರುವ ಹಣ ಹಾಗೂ ವಸ್ತುಗಳನ್ನು ಕಳ್ಳತನ ಮಾಡ್ತಿದ್ದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಕರಾವಲ್ ಖಾಸಗಿ ಶಾಲೆಯೊಂದರಲ್ಲಿ ಘಟನೆ ನಡೆದಿದೆ. ಮಕ್ಕಳ ಬ್ಯಾಗ್ ನಲ್ಲಿದ್ದ ಪುಸ್ತಕಗಳು ಕಳ್ಳತನವಾಗ್ತಿದ್ದ ಅನೇಕ ದೂರುಗಳು ಕೇಳಿ ಬಂದಿದ್ದವು. ಶಾಲೆ ಆಡಳಿತ ಮಂಡಳಿ ಕ್ಲಾಸ್ ರೂಮಿನಲ್ಲಿ ಸಿಸಿ ಟಿವಿ ಅಳವಡಿಸಿತ್ತು. ಆದ್ರೂ ಕಳ್ಳತನ ಕಡಿಮೆಯಾಗಿರಲಿಲ್ಲ. ದೂರು ಹೆಚ್ಚಾಗ್ತಿದ್ದಂತೆ ಪ್ರಾಂಶುಪಾಲರು ಸಿಸಿ  ಟಿವಿ ಚೆಕ್ ಮಾಡಿದ್ದಾರೆ. ಅಲ್ಲಿ ಕಂಡ ದೃಶ್ಯ ಅವ್ರನ್ನು ದಂಗಾಗಿಸಿತ್ತು.

ಶಿಕ್ಷಕಿ, ಕಪಾಟು ಪರಿಶೀಲನೆ ನಡೆಸಿದಾಗ ಮಕ್ಕಳ ಪುಸ್ತಕಗಳು ಸಿಕ್ಕಿವೆ. ತಕ್ಷಣ ಶಿಕ್ಷಕಿಯನ್ನು ಅಮಾನತು ಮಾಡಿ ದೂರು ನೀಡಲಾಗಿತ್ತು. ಮಕ್ಕಳು ಬ್ರೇಕ್ ವೇಳೆ ಕ್ಲಾಸ್ ರೂಮಿನಿಂದ ಹೊರ ಹೋದಾಗ ಶಿಕ್ಷಕಿ ಕಳ್ಳತನ ಮಾಡ್ತಿದ್ದಳು. ಶಾಲೆಯಲ್ಲಿ ಕಡಿಮೆ ಸಂಬಳ ಸಿಗ್ತಿತ್ತು. ಇದು ಸಾಲುತ್ತಿರಲಿಲ್ಲ. ಹಾಗಾಗಿ ಕಳ್ಳತನ ಮಾಡ್ತಿದ್ದೆ ಎಂದಿದ್ದಾಳೆ.

ನಿಖಿಲ್ ನಾಮಪತ್ರ ವಿಚಾರ, ಬಿಜೆಪಿ ದೂರು

Posted: 03 Apr 2019 05:41 AM PDT

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ನಿಖಿಲ್ ಕುಮಾರ್ ನಾಮಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿಯಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ.

ನಿಖಿಲ್ ಅವರ ನಾಮಪತ್ರ 2 ಬಾರಿ ತಿದ್ದುಪಡಿ ಮಾಡಲಾಗಿದೆ. 2 ಸಲ ತಿದ್ದುಪಡಿ ಮಾಡಿಕೊಂಡು ಬರಲು ಕಾನೂನುಬಾಹಿರವಾಗಿ ಅವಕಾಶ ಕೊಡಲಾಗಿದೆ ಎಂದು ದೂರಲಾಗಿದೆ.

ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ, ವೀಕ್ಷಕ ರಂಜಿತ್ ಅವರನ್ನು ವರ್ಗಾವಣೆ ಮಾಡಬೇಕೆಂದು ಬಿಜೆಪಿ ವಕ್ತಾರ ಗೋ. ಮಧುಸೂದನ್ ನೇತೃತ್ವದಲ್ಲಿ ದೂರು ನೀಡಲಾಗಿದೆ.

ಅಭಿಮಾನಿ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ ದರ್ಶನ್

Posted: 03 Apr 2019 05:26 AM PDT

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರ ಪರವಾಗಿ ಕಳೆದ 3 ದಿನಗಳಿಂದ ನಟ ದರ್ಶನ್ ಪ್ರಚಾರ ಕೈಗೊಂಡಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದ ಅವರು, ಇಂದು ಕೆ ಆರ್ ಪೇಟೆ ತಾಲೂಕಿನ ಅಗಲೆ ಗ್ರಾಮದಲ್ಲಿ ಅಭಿಮಾನಿ ಮನೆಗೆ ತೆರಳಿದ್ದಾರೆ. ನಾಟಿ ಕೋಳಿ ಸಾರು, ಮುದ್ದೆ ಸವಿದಿದ್ದಾರೆ.

ಪ್ರಚಾರಕ್ಕಾಗಿ ಗ್ರಾಮಕ್ಕೆ ಆಗಮಿಸಿದ ದರ್ಶನ್ ಅಭಿಮಾನಿ ಮನೆಯಲ್ಲಿ ಊಟ ಮಾಡಿ, ಕೆಲ ಸಮಯದ ಬಳಿಕ ಪ್ರಚಾರ ಮುಂದುವರೆಸಿದ್ದಾರೆ. ಬಿರು ಬಿಸಿಲನ್ನೂ ಲೆಕ್ಕಿಸದೆ ದರ್ಶನ್ ಬಿರುಸಿನ ಪ್ರಚಾರ ನಡೆಸಿದ್ದು, ಸುಮಲತಾ ಅಂಬರೀಶ್ ಪರವಾಗಿ ಮತ ಯಾಚಿಸಿದ್ದಾರೆ.

ಪ್ರಚಾರದ ವೇಳೆ ಯಶ್ ವಾಹನ ತಡೆದು ಪ್ರತಿಭಟನೆ

Posted: 03 Apr 2019 05:19 AM PDT

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಕೈಗೊಂಡಿರುವ ನಟ ಯಶ್ ಅವರ ವಾಹನ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಶ್ರೀರಂಗಪಟ್ಟಣ ಸಮೀಪದ ಚಿನ್ನೇನಹಳ್ಳಿ ಗ್ರಾಮಸ್ಥರು ನಮ್ಮ ಊರಿಗೆ ಪ್ರಚಾರಕ್ಕೆ ಬನ್ನಿ ಎಂದು ಸಬ್ಬನಕುಪ್ಪೆ ಕ್ರಾಸ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ನಿಗದಿಯಾಗಿರುವಂತೆ ಯಶ್ ಇಂದು ಚಿನ್ನೇನಹಳ್ಳಿ ಗ್ರಾಮಕ್ಕೆ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ, ಸಮಯದ ಅಭಾವದ ಕಾರಣ, ಅವರು ಮುಂದೆ ಸಾಗಿದ್ದು, ನಮ್ಮ ಊರಿಗೆ ಪ್ರಚಾರಕ್ಕೆ ಬನ್ನಿ ಎಂದು ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಅಂಬರೀಶ್ ಅವರು ನಮ್ಮ ಊರಿಗೆ ಪ್ರಚಾರಕ್ಕೆ ಬಂದಿದ್ದರು. ನೀವು ಪ್ರಚಾರಕ್ಕೆ ಬನ್ನಿ ಎಂದು ಹೇಳಿದ್ದಾರೆ. ಪ್ರತಿಭಟನೆ ನಡೆಸಿದವರನ್ನು ಸಮಾಧಾನಪಡಿಸಿದ ಯಶ್ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ. ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸಿದ್ದಾರೆ.

ಸಿಎಂ ಕೊಲೆಗೆ ರೂಪಿಸಲಾಗಿದೆಯಾ ಸಂಚು: ಡಿಕೆಶಿ ಪ್ರಶ್ನೆ

Posted: 03 Apr 2019 04:48 AM PDT

ಶಿವಮೊಗ್ಗ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಕೊಲೆಗೆ ಸಂಚು ರೂಪಿಸಲಾಗಿದೆಯೇ ಎಂದು ಸಚಿವ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಮಧು ಬಂಗಾರಪ್ಪನವರ ನಾಮಪತ್ರ ಸಲ್ಲಿಕೆಗಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಲೆಕ್ಷನ್ ಬಳಿಕ ಸಿಎಂ ಕುಮಾರಸ್ವಾಮಿಯವರು ನೆಗೆದು ಬೀಳುತ್ತಾರೆ ಎಂದು ಹೇಳಿದ್ದಾರೆ. ಈ ಹೇಳಿಕೆಯ ಹಿಂದಿನ ಅರ್ಥವೇನು..? ಅದರ ಮರ್ಮವೇನು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಕೆ.ಎಸ್. ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಏಕೆ ಕಡಿವಾಣ ಹಾಕಿಲ್ಲ. ಇದೇನಾ ಬಿಜೆಪಿ ಮತ್ತು ಆರ್.ಎಸ್.ಎಸ್. ಸಂಸ್ಕೃತಿ ಎಂದು ಡಿ.ಕೆ. ಶಿವಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.

ಕೆ.ಎಸ್. ಈಶ್ವರಪ್ಪ ಕೊಲೆಗೆ ಸಂಚು ರೂಪಿಸಿದಂತಿದೆ. ಇಂತಹ ಹೇಳಿಕೆ ನೀಡಿದರೂ ಬಿ.ಎಸ್. ಯಡಿಯೂರಪ್ಪ ಏಕೆ ಮೌನ ವಹಿಸಿದ್ದಾರೆ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇ ಬೇಕು ಇಂತಹ ಹೇಳಿಕೆ ನೀಡಿರುವುದರ ಹಿಂದಿನ ಮರ್ಮವೇನು ಎಂದು ಕೇಳಿದ್ದಾರೆ.

‘ನಮೋ ಟಿವಿ’ಗೆ ಪ್ರತಿಪಕ್ಷಗಳ ತಕರಾರು….!

Posted: 03 Apr 2019 04:36 AM PDT

ಚುನಾವಣೆಗೆ ಇನ್ನು ಕೆಲವೇ ಕೆಲವು ದಿನ ಬಾಕಿ ಇದ್ದು, ಈಗಾಗಲೇ ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಿರುವಾಗ ಬಿಜೆಪಿ ಪ್ರಚಾರಕ್ಕಾಗಿ 'ನಮೋ ಟಿವಿ' ಎಂಬ ವಾಹಿನಿ ಆರಂಭಿಸಿದೆ. ಆದ್ರೆ ಈ ನಮೋ ಟಿವಿ ವಿರುದ್ಧ ಪ್ರತಿಪಕ್ಷಗಳು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿವೆ.

ಈ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ಸ್ಪಷ್ಟನೆ ಕೇಳಿದೆ.

ಬಿಜೆಪಿ ಮಾರ್ಚ್ 31 ರಂದು ನಮೋ ಟಿವಿಗೆ ಚಾಲನೆ ನೀಡಿತ್ತು. ಅದ್ರಲ್ಲಿ ಮೋದಿಯ ಭಾಷಣಗಳು, ಸಭೆಗಳು ದಿನದ 24 ಗಂಟೆಯೂ ಪ್ರಸಾರವಾಗ್ತಿತ್ತು.
ಇದನ್ನು ಪ್ರಶ್ನಿಸಿ ಕಾಂಗ್ರೆಸ್‍ ಮತ್ತು ಆಮ್ ಆದ್ಮಿ ಪಕ್ಷ, ರಾಜಕೀಯ ವಿಷಯವನ್ನು ಭಿತ್ತರಿಸುವ ವಾಹಿನಿಗೆ ಹೇಗೆ ಅನುಮತಿ ನೀಡಲಾಗಿದೆ ಅಂತಾ ಆಯೋಗಕ್ಕೆ ದೂರು ನೀಡಿದ್ದವು.

ಶಾಕಿಂಗ್: ಆರು ವರ್ಷದ ಮಗಳ ಮೇಲೆರಗಿದ ಕಾನ್ಸ್ಟೇಬಲ್ ತಂದೆ

Posted: 03 Apr 2019 04:08 AM PDT

ಛತ್ತೀಸ್ಗಢದ ರಾಯ್ಗಡ್ ಜಿಲ್ಲೆಯಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ಆರು ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ತಂದೆಯನ್ನು ಬಂಧಿಸಲಾಗಿದೆ. ಆರೋಪಿ ಪೊಲೀಸ್ ಕಾನ್ಸ್ಟೇಬಲ್. ಮಾರ್ಚ್ 29ರಂದು ಘಟನೆ ನಡೆದಿದ್ದು, ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.

ಆರೋಪಿಯ ಪತ್ನಿ, ಪತಿ ವಿರುದ್ಧ ದೂರು ನೀಡಿದ್ದಾಳೆ. ಮಾರ್ಚ್ 29ರಂದು ಕಾನ್ಸ್ಟೇಬಲ್, 6 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದನಂತೆ. ವಿಷ್ಯವನ್ನು ಯಾರಿಗೂ ಹೇಳಬೇಡವೆಂದು ಹೇಳಿದ್ದನಂತೆ. ಸೋಮವಾರ ರಾತ್ರಿ   ಮಗಳು ತಾಯಿಗೆ ವಿಷ್ಯ ತಿಳಿಸಿದ್ದಾಳೆ. ಮಂಗಳವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಕೇರಳದಲ್ಲಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಸುದ್ದಿಯಾಗಿತ್ತು. ತಾಯಿಯ ಸ್ನೇಹಿತನೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ.

 

ಕಾಂಗ್ರೆಸ್ ಪ್ರಚಾರಕ್ಕೆ ನವಜೋತ್‍ ಸಿಂಗ್ ಸಿಧು ಗೈರಾಗ್ತಿರೋದೇಕೆ ಗೊತ್ತಾ..?

Posted: 03 Apr 2019 04:06 AM PDT

ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಪರ ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನಲಾಗ್ತಿದೆ. ಕಾರಣ, ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯ ನಂತರವೂ, ಪಾಕ್‍ ಪ್ರಧಾನಿ ಇಮ್ರಾನ್ ಖಾನ್ ಪರ ಸಚಿವ ನವಜೋತ್ ಸಿಂಗ್ ಸಿಧು ಮೃಧು ಧೋರಣೆ ತೋರಿಸಿದ್ರು. ಹೀಗಾಗಿ ಸಿಧು ವಿರುದ್ಧ ಸ್ವಪಕ್ಷಿಯರು ಸೇರಿದಂತೆ, ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದವು.

ಹೀಗಾಗಿ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಸಿಧು, ಈಗ ಪ್ರಚಾರದಿಂದಲೂ ದೂರ ಸರಿದಿದ್ದಾರೆ. ಈ ಮಧ್ಯೆ ಅವರ ಪತ್ನಿ ನವಜೋತ್ ಕೌರ್ ಗೆ ಚಂಡಿಗಢದಿಂದ ಟಿಕೆಟ್ ಸಿಗದಿರುವುದು ಕೂಡಾ ಸಿಧು ಮುನಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ ಅಂತಾ ಹೇಳಲಾಗ್ತಿದೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಿಧು ದೇಶಾದ್ಯಂತ ಪ್ರಚಾರ ಮಾಡಬೇಕು ಅಂತಾ ಅಂದುಕೊಂಡಿದ್ರಂತೆ. ಆದ್ರೆ ಪಕ್ಷ ಅವರನ್ನು ಕಡೆಗಣಿಸುತ್ತಿರುವುದರಿಂದ ಅವರು ಪ್ರಚಾರ ಸಭೆಗಳಿಗೆ ಹೋಗಿಲ್ಲ ಅಂತಾ ಹೇಳಲಾಗ್ತಿದೆ.

ದರ್ಶನ್‍ ಅಂತೋರು ಎಷ್ಟೇ ಜನ ಬಂದ್ರೂ ಜನರ ಮನಸ್ಸಿನಿಂದ ಆ ನಾಲ್ಕು ಹೆಸರು ಅಳಿಸಲಾಗುವುದಿಲ್ಲ ಅಂದ್ರು ಡಿ ಬಾಸ್‍..!

Posted: 03 Apr 2019 04:06 AM PDT

ಇವತ್ತೂ ಕೂಡಾ ಮಂಡ್ಯದಲ್ಲಿ ದರ್ಶನ್ ಪ್ರಚಾರದ ಅಬ್ಬರ ಜೋರಾಗಿದೆ. ಪ್ರಚಾರದ ವೇಳೆ ಮಾತನಾಡಿದ ಡಿ ಬಾಸ್‍, ದರ್ಶನ್‍ ಅಂತವರು ಯಾರೇ ಬಂದ್ರೂ, ಇನ್ನೂ ನೂರು ವರ್ಷ ನಾಲ್ಕು ಹೆಸರುಗಳನ್ನು ಅಳಿಸಲಾಗುವುದಿಲ್ಲ ಅಂತಾ ಹೇಳಿದ್ದಾರೆ.

ನಟಸಾರ್ವಭೌಮ ರಾಜ್‍ ಕುಮಾರ್, ಶಂಕರ್ ನಾಗ್‍, ಅಂಬರೀಷ್‍, ವಿಷ್ಣುವರ್ಧನ್‍ ಅವರ ಹೆಸರುಗಳನ್ನು ಅಭಿಮಾನಿಗಳ ಮನಸ್ಸಿನಿಂದ ಅಳಿಸಲು ಸಾಧ್ಯವಿಲ್ಲ ಎಂದ್ರು. ಈ ಹಿಂದೆ ಮಂಡ್ಯದಲ್ಲಿ ಅಪ್ಪಾಜಿಗೆ ಅವಕಾಶ ಕೊಟ್ಟಿದ್ದೀರಿ, ಇನ್ಮುಂದೆ ಅಮ್ಮನಿಗೂ ಅವಕಾಶ ಕೊಡಿ ಅಂತಾ ಮತ ಯಾಚಿಸಿದ್ದಾರೆ.

ಇದೇ ವೇಳೆ ಸುಮಲತಾ ಕ್ರಮ ಸಂಖ್ಯೆ 20. ದಯವಿಟ್ಟು ಅವರಿಗೆ ಮತ ನೀಡಿ ಅಂತಾ ಕೇಳಿಕೊಂಡ್ರು. ಸುಮಲತಾ ಅವರ ಕ್ರಮ ಸಂಖ್ಯೆ 20 ಆಗಿರೋದ್ರಿಂದ ವಯಸ್ಸಾದವರಿಗೆ ಗೊಂದಲವುಂಟಾಗಬಹುದು. ಹೀಗಾಗಿ ಯುವಕರು, ವಯಸ್ಸಾದವರನ್ನು ಕರೆದುಕೊಂಡು ಹೋಗಿ ಮತ ಹಾಕಿಸಿ ಅಂತಾ ಹೇಳಿದ್ರು. ಇವತ್ತು ದರ್ಶನ್‍ ಮಂಡ್ಯದ ಕೆ.ಆರ್. ಪೇಟೆ ಸೇರಿದಂತೆ ಸಂತೆ ಬಾಚನಹಳ್ಳಿ, ಕಿಕ್ಕೇರಿ, ಶೀಳನಕೆರೆ, ಅಕ್ಕಿಹೆಬ್ಬಾಳದಲ್ಲಿ ರೋಡ್‍ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿದ್ರು.

ಅತ್ಯಾಚಾರವಾಗಿದೆ ಎಂದಿದ್ದ ಸಮಯದಲ್ಲಿ ಪೀಡಿತೆ ಎಲ್ಲಿದ್ಲು ಗೊತ್ತಾ…?

Posted: 03 Apr 2019 03:45 AM PDT

ವಿಶ್ವದಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಿವೆ. ಅದ್ರ ಜೊತೆಗೆ ಕೆಲವೊಂದು ಸುಳ್ಳು ಪ್ರಕರಣಗಳು ದಾಖಲಾಗ್ತಿವೆ. ಈ ಸುಳ್ಳು ಪ್ರಕರಣಗಳು ಪೊಲೀಸರ ಸಮಯವನ್ನು ಹಾಳು ಮಾಡ್ತಿವೆ. ಸ್ಕಾಟ್ಲೆಂಡ್ ಅಬೆರ್ಡಿನ್ಷೈರ್ ನಲ್ಲಿಯೂ ಇಂಥಹ ಘಟನೆ ಬೆಳಕಿಗೆ ಬಂದಿದೆ.

ಎಬ್ಬಿ ವಿಲ್ ಹೆಸರಿನ ಮಹಿಳೆಯೊಬ್ಬಳು 2016 ರಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಶಾಲೆಯೊಂದರ ಬದಿಯಲ್ಲಿ ಘಟನೆ ನಡೆದಿದೆ. ತಲೆಗೆ ಹೊಡೆದು ನಂತ್ರ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿದ್ದಳು. ಮಹಿಳೆ ಪರೀಕ್ಷೆಗೆ ಬಟ್ಟೆ ನೀಡಲು ನಿರಾಕರಿಸಿದ್ದಳು.

ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ ಪೊಲೀಸರಿಗೆ ಮಹಿಳೆ ನಕಲಿ ದೂರು ನೀಡಿದ್ದಾಳೆ ಎಂಬುದು ಗೊತ್ತಾಗಿದೆ. ಕೊನೆಯಲ್ಲಿ ಮಹಿಳೆ ಕೋರ್ಟ್ ಮುಂದೆ ಇದನ್ನು ಒಪ್ಪಿಕೊಂಡಿದ್ದಾಳೆ. ಮಹಿಳೆ ಹೇಳಿದ ಸ್ಥಳದ ಆಸುಪಾಸಿರುವ ಸಿಸಿ ಟಿವಿಯಲ್ಲಿ ಮಹಿಳೆ ರಸ್ತೆಯಲ್ಲಿ ಹೋಗುವ ದೃಶ್ಯ ಸೆರೆಯಾಗಿತ್ತು. ಆದ್ರೆ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದ ಸ್ಥಳದಲ್ಲಿ ಸಿಸಿ ಟಿವಿಯಿರಲಿಲ್ಲ. ಮಹಿಳೆ ಅತ್ಯಾಚಾರ ನಡೆದಿದೆ ಎಂದಿದ್ದ ಸಮಯದಲ್ಲಿ ಆಕೆ ಸೂಪರ್ ಮಾರ್ಕೆಟ್ ನಲ್ಲಿದ್ದಳು. ಸಿಸಿ ಟಿವಿಯಲ್ಲಿ ಮಹಿಳೆ ಶಾಪಿಂಗ್ ಮಾಡ್ತಿರುವ ದೃಶ್ಯ ಸೆರೆಯಾಗಿತ್ತು.

 

ರಾಹುಲ್‍ ಗಾಂಧಿಗೆ ಪಪ್ಪು ಎಂದ ಬಿಜೆಪಿ ಮುಖಂಡನಿಗೆ ಮಹಿಳೆಯಿಂದ ತರಾಟೆ

Posted: 03 Apr 2019 03:43 AM PDT

ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ ಗಾಂಧಿಯವರನ್ನು ವಿರೋಧಿಗಳು ಪಪ್ಪು ಅಂತಾ ಕರೆದು ಕಾಲೆಳೆಯೋದು ಕಾಮನ್ ಆಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಅವರನ್ನ ಪಪ್ಪು ಅಂತಾ ಹೇಳಿ ಟ್ರೋಲ್ ಮಾಡಲಾಗ್ತಿದೆ. ಜೊತೆಗೆ ಬಿಜೆಪಿ ಸಭೆಗಳಲ್ಲೂ ರಾಹುಲ್‍ ಗಾಂಧಿಗೆ ಪಪ್ಪು ಅಂತಾ ಕರೆದ್ರೆ ಭಾರಿ ಚಪ್ಪಾಳೆ-ಶಿಳ್ಳೆ ಬರುತ್ತವೆ.

ಆದ್ರೆ ಇತ್ತೀಚೆಗೆ ನಡೆದ ಬಿಜೆಪಿ ಸಭೆಯೊಂದರಲ್ಲಿ ರಾಹುಲ್‍ ಗೆ ಪಪ್ಪು ಎಂದ ಬಿಜೆಪಿ ನಾಯಕರಿಗೆ ಮಹಿಳೆಯೊಬ್ಬರು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಮಥುರಾದ ಗ್ರಾಮವೊಂದರಲ್ಲಿ ಬಿಜೆಪಿ ಚುನಾವಣಾ ಸಭೆ ನಡೆಸುತ್ತಿದ್ದಾಗ, ಬಿಜೆಪಿ ಮುಖಂಡರೊಬ್ಬರು ರಾಹುಲ್‍ ಗಾಂಧಿಗೆ ಪಪ್ಪು ಎಂದು ಕರೆದಿದ್ದಾರೆ. ತಕ್ಷಣವೇ ಅಲ್ಲೇ ಇದ್ದ ಮಹಿಳೆಯೊಬ್ಬರು, ನೀವೇಕೆ ರಾಹುಲ್‍ ಗಾಂಧಿಗೆ ಪಪ್ಪು ಎನ್ನುವ ಶಬ್ದ ಬಳಕೆ ಮಾಡಿದ್ರಿ ಅಂತಾ ತರಾಟೆ ತೆಗೆದುಕೊಂಡಿದ್ದಾಳೆ.

ಬಿಜೆಪಿ ಮುಖಂಡ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಹೋದ್ರೂ, ಬಿಡದ ಮಹಿಳೆ ರಾಹುಲ್ ಪ್ರಧಾನಿ ಅಭ್ಯರ್ಥಿ. ಹೀಗಾಗಿ ಪಪ್ಪು ಎಂಬ ಪದ ಬಳಕೆ ಮಾಡಿದ್ದು ತಪ್ಪು ಅಂತಾ ವಾದಿಸಿದ್ದಾಳೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿದೆ.

 

ಶಾಕಿಂಗ್: ಆರೋಪಿಯ ಖಾಸಗಿ ಅಂಗಕ್ಕೆ ಪೆಟ್ರೋಲ್ ಸುರಿದ ಪೊಲೀಸರು

Posted: 03 Apr 2019 03:39 AM PDT

ಕೊಲೆ ಆರೋಪಿಗೆ ವಿಚಾರಣೆ ವೇಳೆ ಪೊಲೀಸರು ನೀಡಿದ ಟಾರ್ಚರ್ ದಂಗಾಗಿಸುವಂತಿದೆ. ಆರೋಪಿ ಬಟ್ಟೆ ಬಿಚ್ಚಿದ ಪೊಲೀಸರು ಖಾಸಗಿ ಅಂಗಕ್ಕೆ ಪೆಟ್ರೋಲ್ ಹಾಕಿದ್ದಾರೆ. ನಂತ್ರ ಕರೆಂಟ್ ಶಾಕ್ ನೀಡಿದ್ದಾರೆ. ನೋವಿನಿಂದ ಬಳಲುತ್ತಿದ್ದ ಆರೋಪಿಯನ್ನು ನಂತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಉತ್ತರ ಪ್ರದೇಶದ ಕಾನ್ಪುರ್ ಜಿಲ್ಲೆಯ ಬಿಟೂರ್ ಠಾಣೆಯಲ್ಲಿ ನಡೆದಿದೆ. ಕೊಲೆ ಆರೋಪಿಗೆ ಪೊಲೀಸರು ಆರಂಭದಲ್ಲಿ ಹೊಡೆದಿದ್ದಾರೆ. ನಂತ್ರ ಖಾಸಗಿ ಅಂಗಕ್ಕೆ ಪೆಟ್ರೋಲ್ ಹಾಕಿದ್ದಾರೆ. ಕರೆಂಟ್ ಶಾಕ್ ನೀಡಿದ್ದರಿಂದ ಬೆಂಕಿ ಹತ್ತಿಕೊಂಡಿದೆ. ಸ್ಥಳದಲ್ಲಿ ಆತಂಕ ಮನೆ ಮಾಡಿತ್ತು. ತಕ್ಷಣ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದರು. ಸಂಜೆ ಎಸ್ ಎಸ್ಪಿ, ಎಸ್ ಒ ರನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಗ್ರಾಮದ ನಿರ್ಮಲ್ ಎಂಬಾತನನ್ನು ಹತ್ಯೆಗೈದು ರೈಲ್ವೆ ಹಳಿಗೆ ಎಸೆಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೋನು ಮತ್ತು ಸೋನು ಎಂಬವರನ್ನು ಬಂಧಿಸಿದ್ದರು. ಮೋನುಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ.

 

ಚುನಾವಣಾಧಿಕಾರಿಗಳಿಂದ ಡಿಕೆಶಿ ಹೆಲಿಕಾಪ್ಟರ್ ತಪಾಸಣೆ

Posted: 03 Apr 2019 03:33 AM PDT

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಇಂದು ಮಧು ಬಂಗಾರಪ್ಪ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಉಭಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಲು ಸಚಿವ ಡಿ.ಕೆ. ಶಿವಕುಮಾರ್ ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದರು. ನಗರದ ಸರ್ಕಿಟ್ ಹೌಸ್ ಹೆಲಿಪ್ಯಾಡ್ ನಲ್ಲಿ ಡಿಕೆಶಿ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು, ಚುನಾವಣಾಧಿಕಾರಿಗಳು ಡಿಕೆಶಿ ಆಗಮಿಸಿದ ಹೆಲಿಕಾಪ್ಟರ್ ಪರಿಶೀಲನೆ ನಡೆಸಿದ್ದಾರೆ.

ರೈತರ ಸಾಲ ಮನ್ನಾ ಮಾಡಿದ್ದಕ್ಕೆ ನಾನು ನೆಗೆದುಬಿದ್ದು ಹೋಗಬೇಕಾ ಎಂದು ಪ್ರಶ್ನಿಸಿದ ಸಿಎಂ

Posted: 03 Apr 2019 03:25 AM PDT

ಶಿವಮೊಗ್ಗ: ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿಯವರು ನೆಗೆದುಬೀಳ್ತಾರೆ ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪನವರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಚುನಾವಣೆ ಬಳಿಕ ನಾನು ನೆಗೆದು ಬೀಳುತ್ತೇನೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡುತ್ತಾರೆ. ಯಾವ ಕಾರಣಕ್ಕೆ ನಾನು ನೆಗೆದುಹೋಗಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು. ರೈತರ ಸಾಲ ಮನ್ನಾ ಮಾಡಿದ್ದಕ್ಕೆ ನಾನು ನೆಗೆದುಬಿದ್ದು ಹೋಗಬೇಕಾ…? ರಾಜ್ಯದ ಅಭಿವೃದ್ದಿ ಮಾಡಿದ್ದಕ್ಕೆ ನೆಗೆದುಬಿದ್ದು ಹೋಗಬೇಕಾ..? ಜನತೆಯೇ ಸರಿಯಾದ ತೀರ್ಮಾನ ಕೈಗೊಳ್ಳಬೇಕು ಎಂದಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಅವರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಗೋಪಿ ವೃತ್ತದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಕಾರ್ಯ ನಡೆದಿವೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳಿಗೂ ಇದೀಗ ಚಾಲನೆ ನೀಡಲಾಗಿದೆ. ಆದರೆ ನೀರಾವರಿ ಯೋಜನೆಗಳು ತಮ್ಮಿಂದ ಆಗುತ್ತಿದೆ ಎಂದು ಬಿಜೆಪಿ ಮತದಾರರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು.

ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ನೀರಾವರಿ ಯೋಜನೆ ಸಂಬಂಧ ಮನವಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಯೋಜನೆ ಪ್ರಾರಂಭವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆಗೇಕೆ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿರಲಿಲ್ಲ ಎಂದು ಪ್ರಶ್ನಿಸಿದರು.

ಸೊರಬ ತಾಲ್ಲೂಕಿನ ಮೂಡಿ ನೀರಾವರಿ ಯೋಜನೆ ಬಂಗಾರಪ್ಪ ಅವರ ಕನಸಾಗಿತ್ತು. ಆದರೆ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಮಧು ಬಂಗಾರಪ್ಪರ ನೇತೃತ್ವದಲ್ಲಿ ಯೋಜನೆ ಕುರಿತು ನನ್ನ ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ್ ಗಮನಕ್ಕೆ ತರಲಾಯಿತು. ಜಿಲ್ಲೆಯ ಜನತೆಯ ಋಣ ತೀರಿಸಬೇಕೆಂಬ ಉದ್ಧೇಶದಿಂದ ಹಾಗೂ ಬಂಗಾರಪ್ಪರವರ ನೆನಪಿಗೋಸ್ಕರ 195 ಕೋಟಿ ರೂ.ವೆಚ್ಚದ ಯೋಜನೆಗೆ ಚಾಲನೆ ನೀಡುವ ತೀರ್ಮಾನ ಕೈಗೊಳ್ಳಲಾಯಿತೇ ಹೊರತು ಬಿಜೆಪಿಯವರು ಹೇಳಿದ್ದಕ್ಕಲ್ಲ ಎಂದು ತಿರುಗೇಟು ನೀಡಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮುಖ್ಯವಾಗಿ ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಲಾಗಿದೆ. ಇದರಿಂದಾಗಿ ರಾಜ್ಯದ 44 ಲಕ್ಷಕ್ಕೂ ಹೆಚ್ಚಿನ ರೈತ ಕುಟುಂಬಗಳಿಗೆ ಅನುಕೂಲವಾಗಿದೆ. ಜಿಲ್ಲೆಯಲ್ಲಿಯೇ ಸುಮಾರು 400 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಗೆಲುವಿನ ಸಮೀಪ ಬಂದಿದ್ದರು. ಈ ಬಾರಿ ಶಿವಮೊಗ್ಗ ರಾಜಕಾರಣದಲ್ಲಿ ಹೊಸ ರಾಜಕೀಯ ಇತಿಹಾಸ ಸೃಷ್ಟಿಯಾಗಬೇಕು. ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಒಂದು ಕುಟುಂಬವಾಗಿ ಮಧುಬಂಗಾರಪ್ಪರ ಪರ ಪ್ರಚಾರ ನಡೆಸಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು.

ಶಿವಮೊಗ್ಗದಲ್ಲಿ ‘ದೋಸ್ತಿ’ಗಳ ಶಕ್ತಿ ಪ್ರದರ್ಶನ

Posted: 03 Apr 2019 03:18 AM PDT

ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಇಂದು ನಾಮಪತ್ರ ಸಲ್ಲಿಕೆಗೂ ಮುನ್ನ ನಡೆಸಿದ ಮೆರವಣಿಗೆಯಲ್ಲಿ ಜನಸಾಗರವೇ ಹರಿದುಬಂದಿತ್ತು.

ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಸೊರಬ ತಾಲ್ಲೂಕಿನ ಕುಬಟೂರಿನಲ್ಲಿರುವ ದ್ಯಾವಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ತಂದೆ, ತಾಯಿಯವರ ಸಮಾಧಿ ಸ್ಥಳ ಬಂಗಾರಧಾಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಶಿವಮೊಗ್ಗಕ್ಕೆ ಆಗಮಿಸಿ ಧಾರ್ಮಿಕ ಮಂದಿರಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾಮಣ್ಣಶ್ರೇಷ್ಟಿ ಪಾರ್ಕ್ ನಿಂದ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು ಜೆಡಿಎಸ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಒಡಗೂಡಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯ ವಾಹನಗಳಲ್ಲಿ ಕಾರ್ಯಕರ್ತರು, ಬೆಂಬಲಿಗರು ಆಗಮಿಸಿದ್ದರು. ಅಪಾರ ಸಂಖ್ಯೆಯ ಜನ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ಕಾರಣ ಶಿವಮೊಗ್ಗ ತುಂಬಿ ತುಳುಕುತ್ತಿತ್ತು. ಜನ, ವಾಹನ ದಟ್ಟಣೆಯಿಂದಾಗಿ ಕೆಲವೆಡೆ ಸಂಚಾರಕ್ಕೆ ತೊಂದರೆಯಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಪೊಲೀಸ್ ಇಲಾಖೆಯಿಂದ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

ನಶೆ ಪದಾರ್ಥ ಸೇವಿಸಿದಾಗ ಹೆಚ್ಚು ಸಂಭೋಗ ನಡೆಸ್ತಾರೆ ಇವ್ರು

Posted: 03 Apr 2019 03:09 AM PDT

ಇತ್ತೀಚಿಗೆ ನಡೆದ ಸಂಶೋಧನೆಯೊಂದು ಸಂಭೋಗಕ್ಕೆ ಸಂಬಂಧಿಸಿದಂತೆ ಮಹತ್ವದ ಸಂಗತಿಯನ್ನು ಬಹಿರಂಗಪಡಿಸಿದೆ. ಸಂಶೋಧಕರ ಪ್ರಕಾರ, ಬ್ರಿಟನ್ ಜನರು ಮದ್ಯಪಾನ ಅಥವಾ ಡ್ರಗ್ಸ್ ಸೇವನೆ ನಂತ್ರ ಶಾರೀರಿಕ ಸಂಬಂಧ ಬೆಳೆಸೋದು ಹೆಚ್ಚಂತೆ. ಉಳಿದ ದೇಶಗಳಲ್ಲಿ ಇದು ಕಡಿಮೆ ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ.

ವಿಶ್ವಾದ್ಯಂತ 22 ಸಾವಿರ ಜನರ ಮೇಲೆ ಗ್ಲೋಬಲ್ ಡ್ರಗ್ ಸಮೀಕ್ಷೆಯಡಿಯಲ್ಲಿ ಈ ಸಂಶೋಧನೆ ನಡೆಯಿತು. ಬ್ರಿಟನ್, ಅಮೆರಿಕಾ, ಕೆನಡಾ ಹಾಗೂ ಯುರೋಪ್ ರಾಷ್ಟ್ರಗಳ ಜನರನ್ನು ಸಂಶೋಧನೆಗೆ ಬಳಸಿಕೊಳ್ಳಲಾಗಿತ್ತು. ಶೇಕಡಾ 64ರಷ್ಟು ಬ್ರಿಟನ್ ಜನರು ಮದ್ಯಪಾನ ಮಾಡಿದಾಗ ಸಂಬಂಧ ಬೆಳೆಸ್ತಾರಂತೆ. ಯುರೋಪ್ ದೇಶಗಳಲ್ಲಿ ಇದ್ರ ಸಂಖ್ಯೆ ಶೇಕಡಾ 60 ರಷ್ಟಿದ್ದರೆ ಅಮೆರಿಕಾದಲ್ಲಿ ಇದ್ರ ಸಂಖ್ಯೆ ಶೇಕಡಾ 55 ರಷ್ಟಿದೆ.

ಕೊಕೇನ್ ಹಾಗೂ ಸೆಕ್ಸ್ ಕಾಂಬಿನೇಷನ್ ಚೆನ್ನಾಗಿರುತ್ತದೆ ಎಂದು ಬ್ರಿಟನ್ ನ ಶೇಕಡಾ 13ರಷ್ಟು ಜನರು ಹೇಳ್ತಾರೆ. ಯುರೋಪ್ ದೇಶಗಳಲ್ಲಿ ಹೀಗೆ ಹೇಳುವವರ ಸಂಖ್ಯೆ ಶೇಕಡಾ 8 ರಷ್ಟಿದ್ದರೆ ಅಮೆರಿಕಾದಲ್ಲಿ ಶೇಕಡಾ 7ರಷ್ಟು ಮಂದಿ ಇದನ್ನು ಒಪ್ಪಿಕೊಳ್ತಾರೆ. ಡ್ರಗ್ಸ್ ಲೈಂಗಿಕ ಸುಖವನ್ನು ಹೆಚ್ಚು ಮಾಡುತ್ತದೆ ಎನ್ನುತ್ತಾರೆ ಇವರು. ಡ್ರಗ್ಸ್ ನಂತ್ರ ಜನರು ಅಸುರಕ್ಷಿತ ಸೆಕ್ಸ್ ಗೆ ಮುಂದಾಗ್ತಾರೆ. ಇದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಮಹಿಳಾ ಎಸ್ಐ ಮೇಲೆ ಹಲ್ಲೆ ನಡೆಸಿದ್ದ ಯುವಕರು ಅಂದರ್

Posted: 03 Apr 2019 02:38 AM PDT

ಇತ್ತೀಚಿನ ದಿನಗಳಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚಾಗಿವೆ. ಅದ್ರಲ್ಲೂ ಮಹಿಳಾ ಸಬ್‍ ಇನ್ಸ್ ಪಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಕಳೆದ ಮಾರ್ಚ್ 31 ರ ರಾತ್ರಿ ಎಸ್‍ಐ ಸವಿನಯ ಹಾಗೂ ಪೇದೆ ರಾಹುಲ್ ಪತ್ತಾರ್ ಗುಸ್ತು ತಿರುಗುತ್ತಿದ್ದರು. ಈ ವೇಳೆ ಜಯನಗರದ 9 ನೇ ಬ್ಲಾಕ್‍ ನಲ್ಲಿ ಮಳಿಗೆಯೊಂದರ ಮುಂದೆ ಯುವಕರು ಸಿಗರೇಟ್‍ ಸೇದುತ್ತಾ ಗಲಾಟೆ ಮಾಡಿಕೊಳ್ತಿದ್ರು. ಸ್ಥಳಕ್ಕೆ ಬಂದ ಎಸ್‍ಐ, ಯುವಕರಿಗೆ ಯಾಕೆ ಗಲಾಟೆ ಮಾಡ್ತಿದ್ದೀರಾ, ಮನೆಗೆ ಹೊರಡಿ ಅಂತಾ ಹೇಳಿದ್ದಾರೆ. ಆಗ ಯುವಕರು ಎಸ್ಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಆಗ ಎಸ್‍ಐ ಯುವಕರ ಹೆಸರು ಕೇಳಿದ್ರೆ, ಹೇಳದೆ ಅನುಮಾನ ಬರುವಂತೆ ನಡೆದುಕೊಂಡಿದ್ದಾರೆ. ಹೀಗಾಗಿ ಅವರನ್ನು ಪೇದೆ ಪೊಲೀಸ್ ಠಾಣೆಗೆ ಕರೆದೊಯ್ಯಲು ಮುಂದಾದಾಗ ಅವರ ಸಮವಸ್ತ್ರ ಹಿಡಿದು ಜಗ್ಗಿದ್ದಾರೆ, ಅಲ್ಲದೆ ಪೇದೆ ನೆರವಿಗೆ ಬಂದ ಎಸ್‍ಐ ಮೇಲೂ ಹಲ್ಲೆ ಮಾಡಿ ಎಳೆದಾಡಿದ್ದಾರೆ. ತಕ್ಷಣವೇ ಎಸ್‍ಐ ಹೊಯ್ಸಳ ವಾಹನವನ್ನು ಕರೆಸಿಕೊಂಡು ನಾಗಭೂಷಣ್ ಮತ್ತು ಅನೂಪ್‍ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

Gameforumer QR Scan

Gameforumer QR Scan
Gameforumer QR Scan