Translate

Tuesday, April 16, 2019

Kannada News | Karnataka News | India News

Kannada News | Karnataka News | India News


ವಯಾಗ್ರಕ್ಕಿಂತ ‘ದುಪ್ಪಟ್ಟು’ ಪ್ರಯೋಜನಕಾರಿ ಈ ಮದ್ದು

Posted: 16 Apr 2019 09:28 AM PDT

ಕಾಮೋತ್ತೇಜನಕ್ಕಾಗಿ ಅನೇಕರು ವಯಾಗ್ರ ಬಳಸ್ತಾರೆ. ಆದ್ರೆ ವಯಾಗ್ರಕ್ಕಿಂತ ಹೆಚ್ಚು ಪ್ರಬಲವಾದ ಮನೆ ಮದ್ದು ಮನೆಯಲ್ಲಿದೆ. ಅಡುಗೆ ಮನೆಯಲ್ಲಿರುವ ವಸ್ತು ವಯಾಗ್ರಕ್ಕಿಂತ ದುಪ್ಪಟ್ಟು ಪರಿಣಾಮಕಾರಿ ಎಂಬುದು ನಿಮಗೆ ಗೊತ್ತಾ?

ನಪುಂಸಕತೆ ಅಥವಾ ವೀರ್ಯದ ಕೊರತೆ ಕಾಡುವವರಿಗೆ ಹಿಂಗು ಉತ್ತಮ ಮದ್ದು. ಹಿಂಗು ಅಡುಗೆ ಸ್ವಾದ ಹೆಚ್ಚಿಸುವ ಜೊತೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹಿಂಗು ಪುರುಷರ ನಪುಂಸಕತೆ, ಮಕ್ಕಳ ಸಮಸ್ಯೆ, ಶೀಘ್ರಪತನ ಸೇರಿದಂತೆ ಅನೇಕ ಲೈಂಗಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ.

ನಿಯಮಿತವಾಗಿ ಹಿಂಗನ್ನು ನೀರಿಗೆ ಬೆರೆಸಿ ಕುಡಿಯುವುದ್ರಿಂದ ಕಾಮೋತ್ತೇಜನ ಹೆಚ್ಚಾಗುತ್ತದೆ.

ಮದ್ದು ಮಾಡುವ ವಿಧಾನ :

ಒಂದು ಚಮಚ ತುಪ್ಪದಲ್ಲಿ ಚಿಟಕಿ ಹಿಂಗನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ನಂತ್ರ ಹಾಲು, ಜೇನುತುಪ್ಪಕ್ಕೆ ಹುರಿದ ಹಿಂಗು ಹಾಕಿ. 30-40 ದಿನ ಪ್ರತಿ ದಿನ ಇದನ್ನು ಸೇವಿಸುತ್ತ ಬನ್ನಿ. ಔಷಧಿ ಕುಡಿಯುವ ಮೊದಲು ಒಮ್ಮೆ ವೈದ್ಯರನ್ನು ಅಗತ್ಯವಾಗಿ ಭೇಟಿ ಮಾಡಿ.

 

ಬಲವಂತವಾಗಿ ಮದ್ಯ ಕುಡಿಸಿ ಮಹಿಳೆ ಮೇಲೆರಗಿದ ರಾಕ್ಷಸರು

Posted: 16 Apr 2019 08:00 AM PDT

ಹೈದರಾಬಾದ್: ಮಹಿಳೆಯನ್ನು ಪಾರ್ಟಿಗೆ ಕರೆದು ಬಲವಂತವಾಗಿ ಮದ್ಯ ಕುಡಿಸಿ 7 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಹೈದರಾಬಾದಿನ ವನಸ್ಥಳಿಪುರಂನಲ್ಲಿ ನಡೆದಿದೆ.

ಒಂದು ಮಗುವಿನ ತಾಯಿಯಾಗಿರುವ 32 ವರ್ಷದ ಮಹಿಳೆಯನ್ನು ಸ್ನೇಹಿತನೊಬ್ಬ ಪಾರ್ಟಿಗೆ ಕರೆದಿದ್ದಾನೆ. ಪಾರ್ಟಿಯಲ್ಲಿ ಆಕೆಗೆ ಒತ್ತಾಯದಿಂದ ಮದ್ಯ ಕುಡಿಸಿದ್ದು, ಮತ್ತಿನಲ್ಲಿದ್ದ ಮಹಿಳೆ ಮೇಲೆ ಸ್ನೇಹಿತನ ಜೊತೆಗಿದ್ದವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಗೆ ಪ್ರಜ್ಞೆ ಬಂದಿದ್ದು, ಅಸ್ವಸ್ಥಗೊಂಡಿದ್ದ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

ಪತಿಯಿಂದ ದೂರವಾಗಿರುವ ಮಹಿಳೆ ಪೋಷಕರೊಂದಿಗೆ ಕೋಥಪೇಟ್ ನಲ್ಲಿ ವಾಸವಾಗಿದ್ದಾರೆ. 8 ತಿಂಗಳ ಹಿಂದೆ ಪರಿಚಿತನಾಗಿದ್ದ ಮನೋಜ್ ಕುಮಾರ್ ಎಂಬಾತ ವಿದೇಶಕ್ಕೆ ಹೋಗುತ್ತಿರುವ ಗೆಳೆಯ ಪಾರ್ಟಿ ಆಯೋಜಿಸಿದ್ದು, ನೀವು ಬನ್ನಿ ಎಂದು ಆಹ್ವಾನಿಸಿದ್ದ. ಮಹಿಳೆ ಪಾರ್ಟಿಗೆ ತೆರಳಿದ ಸಂದರ್ಭದಲ್ಲಿ ಸ್ನೇಹಿತ ಸೇರಿದಂತೆ 7 ಮಂದಿ ಬಲವಂತದಿಂದ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ. ಮಹಿಳೆ ವನಸ್ಥಳಿಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಪುತ್ರನ ‘ನಿಗೂಢ’ ಸಾವು

Posted: 16 Apr 2019 07:51 AM PDT

ತಾನು ಖ್ಯಾತ ರಾಜಕಾರಣಿಯ ಪುತ್ರನೆಂದು ನಿರೂಪಿಸಲು ದಶಕಗಳ ಕಾಲ ಹೋರಾಟ ನಡೆಸಿದ್ದ ವ್ಯಕ್ತಿ ಇದೀಗ ನಿಗೂಢವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಡಿ. ತಿವಾರಿ ಅವರ ಪುತ್ರನೆಂದು ನಿರೂಪಿಸಲು ನ್ಯಾಯಾಲಯದ ಮೆಟ್ಟಿಲೇರಿದ ಉಜ್ವಾಲ ಶರ್ಮಾ ಅವರ ಪುತ್ರ ರೋಹಿತ್ ಶೇಖರ್ ತಿವಾರಿ ಮಂಗಳವಾರದಂದು ಸಾವನ್ನಪ್ಪಿದ್ದಾರೆ.

ತಾವು ಎನ್.ಡಿ. ತಿವಾರಿ ಅವರ ಪುತ್ರನೆಂದು ಹೇಳಿಕೊಂಡಿದ್ದ ರೋಹಿತ್ ಶೇಖರ್ ತಿವಾರಿ ಇದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮೊದಲಿಗೆ ತಮ್ಮ ಸಂಬಂಧ ನಿರಾಕರಿಸಿದ್ದ ಎನ್.ಡಿ. ತಿವಾರಿ, ಬಳಿಕ ರೋಹಿತ್ ತಮ್ಮ ಪುತ್ರನೆಂದು ಒಪ್ಪಿಕೊಂಡಿದ್ದರು.

ಕೊನೆಗೂ ತನ್ನನ್ನು ಮಗನೆಂದು ಒಪ್ಪಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದ ರೋಹಿತ್, ಬಳಿಕ ಬಿಜೆಪಿ ಸೇರ್ಪಡೆಗೊಂಡಿದ್ದರು. ಇಂದು ಮಧ್ಯಾಹ್ನ ಅನಾರೋಗ್ಯಕ್ಕೆ ಒಳಗಾಗಿದ್ದ ರೋಹಿತ್ ಅವರನ್ನು ನವದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ಕರೆತರಲಾಗಿದ್ದು ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಪ್ರಚಾರದ ಕೊನೆ ದಿನ ಭಾವುಕರಾದ ಸುಮಲತಾ ಹೇಳಿದ್ದೇನು ಗೊತ್ತಾ….?

Posted: 16 Apr 2019 07:29 AM PDT

ಮಂಡ್ಯ ಲೋಕಸಭೆ ಕ್ಷೇತ್ರದ ಬಹಿರಂಗ ಪ್ರಚಾರದ ಕೊನೆಯ ದಿನ ನಡೆದ ಸ್ವಾಭಿಮಾನಿ ಸಮ್ಮಿಲನ ಸಮಾವೇಶದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಮಂಡ್ಯ ಬಸ್ ದುರಂತ ಕುರಿತು ಮಾತನಾಡುವ ಸಂದರ್ಭದಲ್ಲಿ ಅವರು ಕಣ್ಣೀರಿಟ್ಟಿದ್ದಾರೆ. ಅಂಬರೀಶ್ ಎಂದಿಗೂ ಸ್ವಾರ್ಥ ರಾಜಕಾರಣ ಮಾಡಲಿಲ್ಲ. ನಿಮ್ಮ ಜಿಲ್ಲೆಯ ಸ್ವಾಭಿಮಾನವನ್ನು ನನಗೆ ಭಿಕ್ಷೆ ಕೊಡಿ. ಅಂಬರೀಶ್ ಪತ್ನಿಯಾಗಿ ಏನು ಮಾಡಬೇಕೋ ನಾನು ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಮಂಡ್ಯದ ಜನ ಸ್ವಾಭಿಮಾನ ಬಿಡುವುದಿಲ್ಲ ಎಂದು ನನಗೆ ಗೊತ್ತು. ಹಣಕ್ಕೆ ಅವರು ಮರುಳಾಗುವವರಲ್ಲ. ಅಂಬರೀಶ್ ನನ್ನ ಪತಿ, ಕಲಾವಿದ ಮತ್ತು ರಾಜಕಾರಣಿಯಾಗಿದ್ದರು. ದರ್ಶನ್ ಮತ್ತು ಯಶ್ ನಮ್ಮ ಮನೆಯ ಮಕ್ಕಳು. ಅವರು ನನ್ನ ಪರವಾಗಿ ಪ್ರಚಾರಕ್ಕೆ ಬಂದಿದ್ದಾರೆ. ನಿಮ್ಮೊಂದಿಗೆ ತಾತ, ಅಪ್ಪ, ಅಮ್ಮ, ದೊಡ್ಡಪ್ಪ ಎಲ್ಲರೂ ಪ್ರಚಾರಕ್ಕೆ ಬರಬಹುದಾ? ನನ್ನ ನೋವು ಏನು ಎಂದು ನನಗೆ ಗೊತ್ತು. ಅದನ್ನು ನಾನು ಪ್ರದರ್ಶನ ಮಾಡುವುದಿಲ್ಲ. ನಾನು ನನ್ನ ಕಷ್ಟವನ್ನು ಹೇಳಿಕೊಳ್ಳಲು ಇಲ್ಲಿಗೆ ಬಂದಿಲ್ಲ. ಜನರ ಕಷ್ಟ ಕೇಳಲು ಬಂದಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ಬ್ರೇಕಿಂಗ್ ನ್ಯೂಸ್..! ಭಾರೀ ಅಕ್ರಮ, ಕೊನೆ ಕ್ಷಣದಲ್ಲಿ ರದ್ದಾಯ್ತು ಈ ಕ್ಷೇತ್ರದ ಚುನಾವಣೆ

Posted: 16 Apr 2019 07:27 AM PDT

ಚೆನ್ನೈ: ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ರದ್ದುಪಡಿಸಿದೆ. ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿರುವ ಹಿನ್ನಲೆಯಲ್ಲಿ ರಾಷ್ಟ್ರಪತಿಗೆ ಚುನಾವಣಾ ಆಯೋಗದಿಂದ ಪತ್ರ ಬರೆಯಲಾಗಿತ್ತು.

ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದ್ದು, ವೆಲ್ಲೂರು ಕ್ಷೇತ್ರದ ಚುನಾವಣೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ. 2 ವಾರದ ಹಿಂದೆ 10 ಕೋಟಿ ರೂ. ನಗದು ಮತ್ತು 2 ಕೋಟಿ ರೂ. ಮೌಲ್ಯದ ಮದ್ಯವನ್ನು ಐಟಿ ಅಧಿಕಾರಿಗಳು ಈ ಕ್ಷೇತ್ರದಲ್ಲಿ ವಶಕ್ಕೆ ಪಡೆದಿದ್ದರು.

ವೆಲ್ಲೂರು ಲೋಕಸಭೆ ಕ್ಷೇತ್ರದಲ್ಲಿ ಡಿಎಂಕೆ ಪಕ್ಷದ ಖಜಾಂಚಿ ದೊರೈ ಮುರುಗನ್ ಪುತ್ರ ಕಾತಿರ್ ಆನಂದ್ ಸ್ಪರ್ಧಿಸಿದ್ದಾರೆ. ವೆಲ್ಲೂರು ಲೋಕಸಭೆ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಮತ್ತು ಮದ್ಯ ಹಂಚಿಕೆ ಮಾಡಿ ಮತದಾರರ ಮೇಲೆ ಪ್ರಭಾವ ಬೀರಿರುವ ಹಿನ್ನಲೆಯಲ್ಲಿ ಚುನಾವಣೆ ರದ್ದುಪಡಿಸಲು ಚುನಾವಣಾ ಆಯೋಗ ರಾಷ್ಟ್ರಪತಿಗೆ ಪತ್ರ ಬರೆದಿದ್ದು, ಭಾರೀ ಅಕ್ರಮದ ಕಾರಣ ಚುನಾವಣೆ ರದ್ದುಪಡಿಸಲಾಗಿದೆ.

ಸುಮಲತಾ ಹೇಳಿಕೆಗೆ ಮಂಡ್ಯ ಜನರಿಂದಲೇ ಉತ್ತರ: ಸಿಎಂ

Posted: 16 Apr 2019 07:26 AM PDT

ಮಂಡ್ಯ: ನಮ್ಮ ಗೆಲುವು ಮಂಡ್ಯ ಜನತೆಯ ಗೆಲುವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರದ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಬಹಿರಂಗ ಪ್ರಚಾರದ ಕೊನೆಯ ದಿನ ಮಾತನಾಡಿದ ಸಿಎಂ, ಈ ಚುನಾವಣೆಯಲ್ಲಿ ಜಿಲ್ಲೆಯ ಜನ ಯಾವುದೇ ಪ್ರತಿರೋಧಕ್ಕೆ ಕುಗ್ಗಿಲ್ಲ. ಮೈತ್ರಿಕೂಟದ ಅಭ್ಯರ್ಥಿಯಾಗಿರುವ ನಿಖಿಲ್ ಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸ್ವಾಭಿಮಾನಿ ಸಮ್ಮಿಲನ ಸಮಾವೇಶದಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಟೀಕಿಸಿದ ಸಿಎಂ, ಕೀಳುಮಟ್ಟದ ಹೇಳಿಕೆಯಾಗಿದ್ದು, ಅದಕ್ಕೆ ಮಂಡ್ಯ ಜನರೇ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಬಿಗ್‌ ನ್ಯೂಸ್: ‘ಮೇ 23 ರಂದು ಮಧ್ಯರಾತ್ರಿ ದೋಸ್ತಿ ಸರ್ಕಾರ ಪತನ’

Posted: 16 Apr 2019 07:25 AM PDT

ದಾವಣಗೆರೆ: ಲೋಕಸಭೆ ಚುನಾವಣೆ ಫಲಿತಾಂಶ ಮೇ 23 ರಂದು ಪ್ರಕಟವಾಗಲಿದೆ. ಅಂದು ಮಧ್ಯರಾತ್ರಿ ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ.

ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಫಲಿತಾಂಶದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೊಡೆದಾಡಿಕೊಳ್ಳಲಿದ್ದಾರೆ. ಸಮ್ಮಿಶ್ರ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯಲು ಕೆಲವು ಕಾಂಗ್ರೆಸ್ ಮುಖಂಡರು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಯಾವುದೇ ಜ್ಯೋತಿಷ್ಯ, ನಿಂಬೆಹಣ್ಣು ಕೆಲಸ ಮಾಡಲ್ಲ. ಅಪ್ಪ-ಮಕ್ಕಳ ಸರ್ಕಾರ ಪತನವಾಗಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫಲಿತಾಂಶಕ್ಕೂ ಮೊದಲೇ ಈ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ

Posted: 16 Apr 2019 07:19 AM PDT

ಬೆಂಗಳೂರು: ರಾಜ್ಯದಲ್ಲಿ ಇದೇ ಏಪ್ರಿಲ್ 18 ಮತ್ತು 23 ರಂದು 2 ಹಂತದಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ. ಮೇ 19 ರಂದು ರಾಜ್ಯದ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗಿದ್ದು, ಮೇ 23 ರಂದು ಫಲಿತಾಂಶ ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 29 ಕೊನೆಯ ದಿನವಾಗಿದೆ. ಮೇ 2 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ.

ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಮೇ 19 ರಂದು ಮತದಾನ ನಡೆಯಲಿದೆ. ಉಮೇಶ್ ಜಾಧವ್ ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಅದೇ ರೀತಿ ಮೇ 19 ರಂದು ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಮೇ 19 ರಂದು ಮತದಾನ, ಮೇ 23 ರಂದು ಫಲಿತಾಂಶ ಪ್ರಕಟಿಸಲಾಗುವುದು. ಈ ಕ್ಷೇತ್ರದ ಶಾಸಕರಾಗಿದ್ದ ಸಚಿವ ಸಿ.ಎಸ್. ಶಿವಳ್ಳಿ ಅವರು ಹೃದಯಾಘಾತದಿಂದ ಇತ್ತೀಚೆಗೆ ನಿಧನರಾಗಿದ್ದರು. ಅವರ ನಿಧನದಿಂದ ತೆರವಾಗಿದ್ದ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.

ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭೆ ಕ್ಷೇತ್ರಗಳಿಗೆ ಮೇ 19 ರಂದು ಮತದಾನ ನಡೆಯಲಿದೆ. ಮೇ 23 ರ ಲೋಕಸಭೆ ಚುನಾವಣೆ ಫಲಿತಾಂಶದ ದಿನವೇ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಟೀಕಿಸಿದವರಿಗೆ ಪ್ರಚಾರದ ಕ್ಲೈಮ್ಯಾಕ್ಸ್ ನಲ್ಲಿ ದರ್ಶನ್ ಟಾಂಗ್

Posted: 16 Apr 2019 06:16 AM PDT

ಎಲ್ಲೆಡೆ ಚುನಾವಣೆ ನಡೆದರೂ ಎಲ್ಲರ ಗಮನವನ್ನು ಸೆಳೆದಿರುವ ಹೈವೋಲ್ಟೇಜ್ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

ಮಂಡ್ಯದಲ್ಲಿ ಇಂದು ನಡೆದ ಸ್ವಾಭಿಮಾನಿ ಸಮ್ಮಿಲನ ಸಮಾವೇಶದಲ್ಲಿ ನಟ ದರ್ಶನ್ ಗುಡುಗಿದ್ದಾರೆ. ರೈತರ ಕಷ್ಟ ಏನು ಗೊತ್ತು ಎಂದು ನಮಗೆ ಹೇಳುತ್ತಾರಲ್ಲ, ನನ್ನ ಹಾಗೆ ಹಾಲು ಕರೆಯಲಿ. ಇಲ್ಲ ಅಂದ್ರೆ ಹಸು ಕರು ಹಾಕುತ್ತಲ್ಲ, ಆಗ ಕರುವಿಗೆ ಏನು ಮೇವು ಹಾಕಬೇಕು ಎಂದು ಹೇಳಲಿ ಎಂದು ದರ್ಶನ್ ತಿಳಿಸಿದ್ದಾರೆ.

ಅಮ್ಮನಿಗಾಗಿ 2 ದಿನ ಕಾಯಿರಿ. ಸಾಯೋವರೆಗೂ ನಿಮಗೆ ಋಣಿಯಾಗಿರುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ. ಅಲ್ಲದೇ, ಪ್ರಚಾರದಲ್ಲಿ ಹೇಳುತ್ತಿದ್ದಂತೆ ಹಸು, ಎತ್ತು, ನಾಯಿಗಳಿಗೆ ಬೆಲೆ ಇದೆ. 500 ರೂ., 1000 ರೂ.ಗೆ ನಿಮ್ಮ ಮತ ಮಾರಿಕೊಳ್ಳಬೇಡಿ ಎಂದು ಹೇಳಿದ್ದಾರೆ.

ನಮ್ಮ ಮನೆ ಮೇಲೆ ದಾಳಿಯ ವೇಳೆ ಏನೂ ಸಿಕ್ಕಿಲ್ಲ. ಪ್ರಾಣಿಗಳಿಗೆ ತಂದ ಮೇವಿನ ಹಿಂಡಿಯ ಲೆಕ್ಕವಿದ್ದ ಡೈರಿ ಸಿಕ್ಕಿದೆ. ನೀವು ನೀಡಿದ ಬೆಂಬಲ ಹೀಗೇ ಇರಲಿ ಎಂದು ಹೇಳಿದ್ದಾರೆ.

ಬಹಿರಂಗ ಪ್ರಚಾರಕ್ಕೆ ತೆರೆ, ಹೊರನಡೆದ ಪ್ರಚಾರಕರು

Posted: 16 Apr 2019 05:59 AM PDT

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. 14 ಲೋಕಸಭೆ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತದಾರರಲ್ಲದವರು ಕ್ಷೇತ್ರಗಳನ್ನು ಬಿಟ್ಟು ತೆರಳಿದ್ದಾರೆ.

ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಮೈಸೂರು –ಕೊಡಗು, ತುಮಕೂರು, ಚಿತ್ರದುರ್ಗ, ಉಡುಪಿ –ಚಿಕ್ಕಮಗಳೂರು, ಹಾಸನ, ಮಂಡ್ಯ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಏಪ್ರಿಲ್ 18 ರಂದು ಮತದಾನ ನಡೆಯಲಿದೆ.

ಚುನಾವಣೆ ಘೋಷಣೆಗೂ ಮೊದಲೇ ಪ್ರಚಾರ ಆರಂಭವಾಗಿ, ನಂತರದಲ್ಲಿ ಪ್ರಚಾರದ ಭರಾಟೆ ಮುಗಿಲು ಮುಟ್ಟಿದ್ದು, ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಕೊನೆ ಕ್ಷಣದ ಆಟ ಶುರುವಾಗಲಿದೆ. ಮತದಾರರ ಓಲೈಸಲು ಅಭ್ಯರ್ಥಿಗಳು ಮತ್ತು ಬೆಂಬಲಿಗರು ಕೊನೆ ಕ್ಷಣದಲ್ಲಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ.

ಕೊನೆ ಕ್ಷಣದಲ್ಲಿ ಈ ಕ್ಷೇತ್ರದಲ್ಲಿ ಚುನಾವಣೆ ರದ್ದು…?

Posted: 16 Apr 2019 05:41 AM PDT

ಚೆನ್ನೈ: ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ರದ್ದುಪಡಿಸುವ ಸಾಧ್ಯತೆ ಇದೆ. ಈ ಬಗ್ಗೆ ರಾಷ್ಟ್ರಪತಿಗೆ ಚುನಾವಣಾ ಆಯೋಗದಿಂದ ಪತ್ರ ಬರೆಯಲಾಗಿದೆ.

2 ವಾರದ ಹಿಂದೆ 10 ಕೋಟಿ ರೂ. ನಗದು ಮತ್ತು 2 ಕೋಟಿ ರೂ. ಮೌಲ್ಯದ ಮದ್ಯವನ್ನು ಐಟಿ ಅಧಿಕಾರಿಗಳು ಈ ಕ್ಷೇತ್ರದಲ್ಲಿ ವಶಕ್ಕೆ ಪಡೆದಿದ್ದರು. ವೆಲ್ಲೂರು ಲೋಕಸಭೆ ಕ್ಷೇತ್ರದಲ್ಲಿ ಡಿಎಂಕೆ ಪಕ್ಷದ ಖಜಾಂಚಿ ದೊರೈ ಮುರುಗನ್ ಪುತ್ರ ಕಾತಿರ್ ಆನಂದ್ ಸ್ಪರ್ಧಿಸಿದ್ದಾರೆ.

ವೆಲ್ಲೂರು ಲೋಕಸಭೆ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಮತ್ತು ಮದ್ಯ ಹಂಚಿಕೆ ಮಾಡಿ ಮತದಾರರ ಮೇಲೆ ಪ್ರಭಾವ ಬೀರಿರುವ ಹಿನ್ನಲೆಯಲ್ಲಿ ಚುನಾವಣೆ ರದ್ದುಪಡಿಸಲು ಚುನಾವಣಾ ಆಯೋಗ ರಾಷ್ಟ್ರಪತಿಗೆ ಪತ್ರ ಬರೆದಿದೆ ಎನ್ನಲಾಗಿದೆ.

ರಕ್ತ ಕೇಳಲ್ವೇ, ಕೊನೆ ದಿನ ಗುಡುಗಿದ ಯಶ್

Posted: 16 Apr 2019 05:39 AM PDT

ಮಂಡ್ಯ: ನಾನು ಪಂಚಿಂಗ್ ಡೈಲಾಗ್ ಹೊಡೆಯುವುದಿಲ್ಲ ಎಂದು ಹೇಳಿದ್ದೇನೆ. ಪ್ರಚಾರಕ್ಕೆ ಬಂದಾಗ ಟೀಕೆ ವ್ಯಕ್ತವಾದಾಗಲು ಎಲ್ಲರೂ ತಾಳ್ಮೆಯಿಂದ ಇರುವಂತೆ ಹೇಳಿದ್ದರು. ಅದೇ ರೀತಿ ನಾನು ಪ್ರಚಾರ ಮಾಡಿದ್ದೇನೆ. ಆದರೆ, ನಮ್ಮ ರಕ್ತ ಕೇಳಲ್ವೇ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ಮಂಡ್ಯದಲ್ಲಿ ಇಂದು ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ರಕ್ತ ಕೇಳಲ್ವೇ. ಸ್ವಲ್ಪ ಕುದಿಯುತ್ತಿತ್ತು. ಎಲ್ಲರ ಮೇಲೆಯು ನಮಗೆ ಗೌರವ ಇದೆ. ಆದರೆ, ನಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದರೆ, ಯಾರು ಅಂತ ನೋಡಲ್ಲ, ಯಾವ ಸ್ಥಾನದಲ್ಲಿದ್ದರೂ ಎಷ್ಟು ಶಕ್ತಿಶಾಲಿಯಾಗಿದ್ದರೂ, ನೋಡಲ್ಲ. ಅದನ್ನು ನೋಡಿಕೊಂಡು ಸುಮ್ಮನಿದ್ದರೆ ನಾವು ಮನುಷ್ಯರಾಗಿರಲ್ಲ ಎಂದು ಗುಡುಗಿದ್ದಾರೆ.

ಇದು ಸ್ವಾಭಿಮಾನದ ಚುನಾವಣೆ ಎಂದು ಹೇಳುತ್ತಿದ್ದಾರೆ. ಕೆಲವರು ಸ್ವಾಭಿಮಾನವನ್ನು ವ್ಯಂಗ್ಯ ಮಾಡುತ್ತಿದ್ದಾರೆ. ಆದರೆ, ಸ್ವಾಭಿಮಾನ ಇರುವವರೇ ಇಲ್ಲಿಗೆ ಬಂದಿದ್ದಾರೆ. 500 ರೂ. ಮೊಬೈಲ್ ಆಫರ್ ಕೊಟ್ಟವರು ಇಲ್ಲಿಗೆ ಬಂದು ನಿಂತಿಲ್ಲ. ಜನ ಬೆವರು ಸುರಿಸಿ ದುಡಿದ ಹಣವನ್ನು ಅಕ್ಕನಿಗೆ ತಂದುಕೊಡುತ್ತಿದ್ದರು. ದುಡ್ಡು ಇರೋರಿಗೆ ಸ್ವಾಭಿಮಾನ ಎಂದರೆ ಏನು ಎಂಬುದನ್ನು ನೀವೇ ತೋರಿಸಿ. ಯಾರು ಏನೇ ಹೇಳಿದರೂ, ಅಭಿಮಾನ ಸುಳ್ಳು ಎನ್ನುವುದನ್ನು ನಾನು ಒಪ್ಪಲಾರೆ ಎಂದಿದ್ದಾರೆ.

ನಾನು ಎಂದಿಗೂ ಕಳ್ಳರ ಪಕ್ಷ ಎಂದು ಹೇಳಿಲ್ಲ. ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನು ಹಾಗೆ ಹೇಳಿದ್ದರೆ ಅವರು ಹೇಳಿದಂತೆ ಕೇಳುತ್ತೇನೆ. ಮಂಡ್ಯವಲ್ಲ, ಕರ್ನಾಟಕವನ್ನು ಬಿಟ್ಟು ಹೋಗುತ್ತೇನೆ. ನಾನು ಕಳ್ಳರ ಪಕ್ಷ ಎಂದು ಹೇಳಿರುವ ಒಂದು ಸಾಕ್ಷಿ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ಗೊಣ್ಣೆ ಸುರಿಸಿಕೊಂಡು ಓಡಾಡುತ್ತಿದ್ದ ರೇವಣ್ಣನನ್ನು ಅಧ್ಯಕ್ಷನನ್ನಾಗಿ ಮಾಡಿದ್ದೇ ನಾನು ಅಂದ್ರು ಎ. ಮಂಜು

Posted: 16 Apr 2019 04:07 AM PDT

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಏಪ್ರಿಲ್ 18 ರಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬಹಿರಂಗ ಪ್ರಚಾರದ ಅಂತಿಮ ದಿನವಾದ ಇಂದು ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿದ್ದು, ಏಕವಚನದಲ್ಲೇ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ಮಂಜು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ಗೊಣ್ಣೆ ಸುರಿಸಿಕೊಂಡು ಓಡಾಡುತ್ತಿದ್ದ ರೇವಣ್ಣನನ್ನು ಕೆಎಂಎಫ್ ಅಧ್ಯಕ್ಷನನ್ನಾಗಿ ಮಾಡಿದ್ದೇ ನಾನು ಎಂದು ಹೇಳಿದ್ದಾರೆ.

ಕೇವಲ ಏಳನೇ ಕ್ಲಾಸು ಓದಿರುವ ರೇವಣ್ಣ ನನಗೇನು ಹೇಳುವುದು ಬೇಡ ಎಂದ ಎ. ಮಂಜು, ನಾನು ನನ್ನ ಸಂಪೂರ್ಣ ಆಸ್ತಿಯನ್ನು ಘೋಷಿಸಿಕೊಂಡಿದ್ದೇನೆ. ಧೈರ್ಯವಿದ್ದರೆ ರೇವಣ್ಣ ಆತನಿಗಿರುವ ಆಸ್ತಿಯ ವಿವರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಅಂಬಿ ಸಾವನ್ನಪ್ಪಿದ ದಿನದ ಘಟನಾವಳಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪುತ್ರ ಅಭಿಶೇಕ್

Posted: 16 Apr 2019 03:50 AM PDT

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್‌ 18 ರಂದು ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಈ ಹಿನ್ನಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಮಂಡ್ಯದ ಸಿಲ್ವರ್‌ ಜ್ಯೂಬಿಲಿ ಕ್ರೀಡಾಂಗಣದಲ್ಲಿ ಸ್ವಾಭಿಮಾನ ಸಮಾವೇಶ ನಡೆಸುತ್ತಿದ್ದಾರೆ.

ಇದರಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿರುವ ಜನಸ್ತೋಮ ಸುಮಲತಾ ಅಂಬರೀಶ್‌ ಅವರ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಈ ಸಮಾವೇಶದಲ್ಲಿ ಮಾತನಾಡಿರುವ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರ ಪುತ್ರ ಅಭಿಶೇಕ್‌ ಮಹತ್ವದ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬ ಸದಸ್ಯರ ವಿರೋಧದ ಮಧ್ಯೆಯೂ ತಾವು ಮಂಡ್ಯಕ್ಕೆ ತರಲು ವ್ಯವಸ್ಥೆ ಮಾಡಿದ್ದಾಗಿ ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ವೇದಿಕೆಯಿಂದಲೇ ಪ್ರತ್ಯುತ್ತರಿಸಿದ ಅಭಿಶೇಕ್.‌ ಅಂದು ರಾತ್ರಿ ವಿಕ್ರಂ ಆಸ್ಪತ್ರೆಯಲ್ಲಿ ಮಂಡ್ಯಕ್ಕೆ ತಂದೆಯವರನ್ನು ಕರೆದುಕೊಂಡು ಹೋಗೋಣಾ ಎಂದು ಹೇಳಿದ್ದೇ ನಾನು. ಇದು ನಮ್ಮಪ್ಪಾನಾಣೆಗೂ ಸತ್ಯ ಎಂದು ಹೇಳಿದ್ದಾರೆ.

ನಾನು ಇದನ್ನು ಹೇಳಿದ ವೇಳೆ ಕುಮಾರಸ್ವಾಮಿಯವರು, ಇದು ಸಾಧ್ಯವಾಗದ ಕೆಲಸ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದ್ದರು. ಬೆಂಗಳೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಇರಿಸಿದ್ದ ಸಂದರ್ಭದಲ್ಲೂ ನನ್ನ ಬಳಿ ಬಂದ ಕುಮಾರಸ್ವಾಮಿಯವರು, ಮಂಡ್ಯಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗುವುದು ಸಾಧ್ಯವಿಲ್ಲ ಎಂದಿದ್ದರು. ಆದರೆ ಈ ಮಾತನ್ನು ಕೇಳಿಸಿಕೊಂಡ ಮಂಡ್ಯದ ಗಣ್ಯರೊಬ್ಬರು ಅಂಬರೀಶ್‌ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲೇಬೇಕು ಎಂದು ಪಟ್ಟು ಹಿಡಿದಿದ್ದರು ಎಂದಿದ್ದಾರೆ.

‘ಮೋದಿ’ ವಿರುದ್ಧ ಏಕವಚನದಲ್ಲೇ ಸಿದ್ದು ವಾಗ್ದಾಳಿ

Posted: 16 Apr 2019 03:34 AM PDT

ರಾಜ್ಯದಲ್ಲಿ ಏಪ್ರಿಲ್ 18 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಇಂದು ಪ್ರಚಾರದ ಭರಾಟೆ ತಾರಕಕ್ಕೇರಿದೆ. ಚಾಮರಾಜನಗರದಲ್ಲಿಂದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಒಬ್ಬ ಮೋಸ್ಟ್ ಡೇಂಜರ್ ಮನುಷ್ಯ. ಆತನ ಹೆಸರನ್ನು ಯಾರೂ ಹೇಳಬೇಡಿ ಎಂದ ಸಿದ್ದರಾಮಯ್ಯ, ಒಂದೊಮ್ಮೆ ಆತ ಈ ಚುನಾವಣೆಯಲ್ಲಿ ಗೆದ್ದರೆ ಐದು ವರ್ಷದ ಬಳಿಕ ಚುನಾವಣೆ ನಡೆಯುವುದೇ ಅನುಮಾನ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ. ಎಲ್ಲಿದೆ ಆ ಉದ್ಯೋಗ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಉದ್ಯೋಗದ ಬಗ್ಗೆ ಕೇಳಿದರೆ ಪಕೋಡ ಮಾರಿ ಎನ್ನುತ್ತಾನೆ. ಆತ ಈ ದೇಶದ ಸರ್ವಾಧಿಕಾರಿಯಾಗಲು ಹೊರಟಿದ್ದಾನೆಂದು ಹೇಳಿದರು.

ಬಿ.ಎಸ್.ಪಿ. ನಾಯಕಿ ಮಾಯಾವತಿಗೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ

Posted: 16 Apr 2019 02:16 AM PDT

ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ 48 ಗಂಟೆಗಳ ಕಾಲ ಪ್ರಚಾರ ಮಾಡದಂತೆ ನಿರ್ಬಂಧಕ್ಕೆ ಒಳಗಾಗಿರುವ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಮಾಯಾವತಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಕುರಿತಂತೆ ಕ್ರಮ ಕೈಗೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ತನಗಿರುವ ಅಧಿಕಾರವನ್ನು ಬಳಸಿಕೊಂಡು ಮೊದಲ ಬಾರಿಗೆ ಪ್ರಭಾವಿ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗವನ್ನು ಅಭಿನಂದಿಸುತ್ತೇವೆ ಎಂದು ತಿಳಿಸಿ ಮಾಯಾವತಿಯವರ ಅರ್ಜಿಯನ್ನು ತಳ್ಳಿ ಹಾಕಿದೆ.

ಬಿ.ಎಸ್.ಪಿ. ನಾಯಕಿ ಮಾಯಾವತಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಇದರ ಅನುಸಾರ ಕೇಂದ್ರ ಚುನಾವಣಾ ಆಯೋಗ ಮಾಯಾವತಿ ಅವರಿಗೆ 48 ಗಂಟೆಗಳ ಕಾಲ ಹಾಗೂ ಯೋಗಿ ಆದಿತ್ಯನಾಥ್ ಅವರಿಗೆ 72 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.

ಚುನಾವಣಾ ವೆಚ್ಚಕ್ಕಾಗಿ ‘ಕಿಡ್ನಿ’ ಮಾರಲು ಅನುಮತಿ ಕೋರಿದ ಅಭ್ಯರ್ಥಿ…!

Posted: 16 Apr 2019 02:08 AM PDT

ಮಧ್ಯಪ್ರದೇಶದ ಬಾಲಘಾಟ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವವರೊಬ್ಬರು ಕೇಂದ್ರ ಚುನಾವಣಾ ಆಯೋಗದ ಮುಂದೆ ವಿಚಿತ್ರ ಮನವಿಯೊಂದನ್ನು ಇಟ್ಟಿದ್ದಾರೆ. ಚುನಾವಣಾ ವೆಚ್ಚಕ್ಕಾಗಿ 75 ಲಕ್ಷ ರೂಪಾಯಿ ನೀಡಿ, ಇಲ್ಲದಿದ್ದರೆ ಕಿಡ್ನಿಯನ್ನಾದರೂ ಮಾರಲು ಅನುಮತಿ ನೀಡಿ ಎಂದು ಕೋರಿದ್ದಾರೆ.

ಪಕ್ಷೇತರ ಅಭ್ಯರ್ಥಿ ಕಿಶೋರ್ ಸಮ್ರಿತ್, ಜಿಲ್ಲಾ ಚುನಾವಣಾ ಅಧಿಕಾರಿ ದೀಪಕ್ ಆರ್ಯ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 75 ಲಕ್ಷ ರೂಪಾಯಿಗಳಿಗೆ ನಿಗದಿಗೊಳಿಸಿದೆ. ಅಷ್ಟು ಹಣ ತಮ್ಮ ಬಳಿ ಇಲ್ಲದ ಕಾರಣ ಚುನಾವಣಾ ಆಯೋಗವೇ ನೀಡಲಿ ಅಥವಾ ಬ್ಯಾಂಕ್ ನಿಂದ ಲೋನ್ ಕೊಡಿಸಲಿ. ಇವೆರಡು ಸಾಧ್ಯವಾಗದಿದ್ದಲ್ಲಿ ನನ್ನ ಕಿಡ್ನಿಯನ್ನು ಮಾರಲು ಅನುಮತಿ ನೀಡಲಿ ಎಂದು ಕೇಳಿದ್ದಾರೆ.

ತಮ್ಮ ಈ ವಿಚಿತ್ರ ಮನವಿಯ ಕುರಿತು ಸುದ್ದಿ ಸಂಸ್ಥೆ ಯೊಂದಿಗೆ ಮಾತನಾಡಿರುವ ಕಿಶೋರ್ ಸಮ್ರಿತ್, ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಕೇವಲ 15 ದಿನಗಳ ಅವಕಾಶವನ್ನು ನೀಡಲಾಗಿದೆ. ಇಷ್ಟು ಹಣವನ್ನು ಈ ಅವಧಿಯಲ್ಲಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ತಾವು ಸಮಾಜದಲ್ಲಿರುವ ಬಡವರನ್ನು ಉದ್ಧಾರ ಮಾಡಬೇಕಿರುವ ಕಾರಣ ಗೆಲವು ಸಾಧಿಸಬೇಕಿದೆ. ನನ್ನ ವಿರುದ್ಧ ಸ್ಪರ್ಧಿಸಿರುವವರು ಭ್ರಷ್ಟಾಚಾರಿಗಳಾಗಿದ್ದು, ಅದರಿಂದ ಬಂದ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಇದು ನನಗೆ ಸಾಧ್ಯವಾಗದ ಕಾರಣ ಚುನಾವಣಾ ಆಯೋಗ ನನ್ನ ಮನವಿಯನ್ನು ಪರಿಗಣಿಸಬೇಕೆಂದು ಕೋರಿದ್ದಾರೆ.

ಒಂದು ಚುನಾವಣೆ ಗೆಲ್ಲದಿದ್ದರೂ 11ನೇ ಬಾರಿಗೆ ‘ಅದೃಷ್ಟ’ ಪರೀಕ್ಷೆಗಿಳಿದಿದ್ದಾರೆ ಈ ಅಭ್ಯರ್ಥಿ

Posted: 16 Apr 2019 01:58 AM PDT

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಗೆಲುವಿಗಾಗಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಬಿರು ಬೇಸಿಗೆಯಲ್ಲಿ ಬೆವರು ಸುರಿಸುತ್ತಿರುವ ಮಧ್ಯೆ ಇಲ್ಲೊಬ್ಬ ಪಕ್ಷೇತರ ಅಭ್ಯರ್ಥಿ ಇದುವರೆಗೂ ಸ್ಪರ್ಧಿಸಿದ 10 ಚುನಾವಣೆಗಳಲ್ಲಿ ಪರಾಭವಗೊಂಡಿದ್ದರೂ ಹನ್ನೊಂದನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.

ಕೊಪ್ಪಳದ ಮಲ್ಲಿಕಾರ್ಜುನ ಹಡಪದ್ ಏಪ್ರಿಲ್ 23 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈವರೆಗೆ ಅವರು ಐದು ಬಾರಿ ವಿಧಾನಸಭೆ ಚುನಾವಣೆ ಸೇರಿದಂತೆ ಒಟ್ಟು 10 ಚುನಾವಣೆಗಳನ್ನು ಎದುರಿಸಿದ್ದಾರೆ. ಆದರೂ ಛಲಬಿಡದೆ ಹನ್ನೊಂದನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಕಾರಣಕ್ಕೆ ಮಲ್ಲಿಕಾರ್ಜುನ ತಮ್ಮ 10 ಎಕರೆ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದಾರೆನ್ನಲಾಗಿದೆ. ಇವರು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಚುನಾವಣಾ ವೆಚ್ಚದ ವಿವರವನ್ನು ಸಲ್ಲಿಸದ ಕಾರಣಕ್ಕೆ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ನಿಷೇಧಕ್ಕೆ ಒಳಗಾಗಿದ್ದ ಹಿನ್ನೆಲೆಯಲ್ಲಿ ತಮ್ಮ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದ್ದರೆಂದು ಹೇಳಲಾಗಿದೆ. ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿರುವ ಮಲ್ಲಿಕಾರ್ಜುನ ಅವರಿಗೆ ಈ ಬಾರಿಯಾದರೂ ಗೆಲುವು ದಕ್ಕಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮಂಡ್ಯದಲ್ಲಿ ಮೊಳಗಿದ ‘ಕಹಳೆ’: ಸ್ವಾಭಿಮಾನಿ ಸಮಾವೇಶಕ್ಕೆ ಹರಿದು ಬಂದ ಜನಸಾಗರ

Posted: 16 Apr 2019 01:48 AM PDT

ಏಪ್ರಿಲ್ 18 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸ್ವಾಭಿಮಾನಿ ಸಮಾವೇಶ ನಡೆಸುತ್ತಿದ್ದು, ಇದಕ್ಕೆ ಜನಸಾಗರವೇ ಹರಿದು ಬಂದಿದೆ.

ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿರುವ ಹಿನ್ನೆಲೆಯಲ್ಲಿ ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್ ನಲ್ಲಿ ಸ್ವಾಭಿಮಾನಿ ಸಮಾವೇಶ ನಡೆಯುತ್ತಿದ್ದು, ಕಾಳಿಕಾ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುಮಲತಾ ಅಂಬರೀಶ್ ರೋಡ್ ಶೋ ನಡೆಸುತ್ತಿದ್ದು, ಇವರಿಗೆ ಪುತ್ರ ಅಭಿಷೇಕ್, ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡಿದ್ದಾರೆ.

ಈ ಬೃಹತ್ ರೋಡ್ ಶೋ ನಲ್ಲಿ ಸಾಗರೋಪಾದಿಯಲ್ಲಿ ಪಾಲ್ಗೊಂಡಿರುವ ಜನಸ್ತೋಮ, ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಜೈಕಾರ ಹಾಕುತ್ತಾ ಸುಮಲತಾ ಅಂಬರೀಶ್ ಅವರಿಗೆ ನಿಮ್ಮ ಮತ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಮಂಡ್ಯದ ಎಲ್ಲೆಡೆ ಸ್ವಾಭಿಮಾನಿ ಸಮಾವೇಶದ ಕಹಳೆ ಜೋರಾಗಿದ್ದು, ಇದು ಎಷ್ಟರಮಟ್ಟಿಗೆ ಮತಗಳಾಗಿ ಪರಿವರ್ತಿತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಈತ ನಿದ್ರೆ ಮಾಡಿದ್ದೆಲ್ಲಿ ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

Posted: 16 Apr 2019 12:46 AM PDT

ನಮ್ಮ ದೇಶದಲ್ಲಿ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡದೇ ನಿದ್ದೆ ಹೋಗುವ ಎಷ್ಟೋ ಅಧಿಕಾರಿಗಳನ್ನು ನೋಡಿರುತ್ತೀವಿ. ಆದರೆ ಚೀನಾದಲ್ಲಿ ಕೆಲಸ ಮಾಡಿ ಸುಸ್ತಾದ ಕೆಲಸಗಾರನೊಬ್ಬ ಆಳೆತ್ತರದ ಕಟ್ಟಡದ ಕಂಬಿ ಮೇಲೆಯೇ ನಿದ್ದೆ ಹೋಗಿದ್ದಾನೆ.

ಸುಮಾರು 160 ಅಡಿ ಎತ್ತರದ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಎಲೆಕ್ಟ್ರಿಷಿಯನ್ ಒಬ್ಬ ನಿದ್ದೆ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ತೋರಿಸಿದಂತೆ ಅವನು ತುಂಬ ಸಣ್ಣದಿರುವ ಕಂಬಿಯ ಮೇಲೆ ಅಪಾಯಕಾರಿಯಾಗಿ ಮಲಗಿದ್ದಾನೆ. ಆದರೆ ಸ್ಟ್ರ್ಯಾಪ್ ಮೂಲಕ ಕಂಬಿಗಳಿಗೆ ಅವನನ್ನು ಕಟ್ಟಿಕೊಂಡಿದ್ದಾನೆ. ಇಷ್ಟಿದ್ದರೂ ಕೂಡ ಅದು ಅತ್ಯಂತ ಅಪಾಯಕಾರಿಯಾಗಿ ಕಾಣಿಸುತ್ತಿದೆ.

ವಿಡಿಯೋದಲ್ಲಿ ತೋರಿಸಿದಂತೆ ಈ ರೀತಿ ಎತ್ತರದ ಕಟ್ಟಡಗಳ ಮೇಲೆ ಕೆಲಸ ಮಾಡುವವರು ಕೇವಲ ಊಟಕ್ಕಾಗಿ ಕೆಳಗೆ ಬರುತ್ತಾರಂತೆ. ಕೆಲಸ ಮಾಡಿ ಸುಸ್ತಾದರೆ ಅಲ್ಲೇ ಕಟ್ಟಡದ ಮೇಲೆ ಮಲಗುತ್ತಾರಂತೆ. ಇವರ ಕಷ್ಟ ನೋಡಿ ನೆಟ್ಟಿಗರು ಮರುಗಿದ್ದು ಹುಷಾರಾಗಿರಲು ಕೇಳಿಕೊಂಡಿದ್ದಾರೆ.

ಶಾಕಿಂಗ್‌ ಸುದ್ದಿ: ಮಲ್ಯ-ನೀರವ್‌ ಮೋದಿ ಮಾತ್ರವಲ್ಲ ಇತರೆ 36 ಮಂದಿ ಉದ್ಯಮಿಗಳೂ ವಿದೇಶಕ್ಕೆ ಪರಾರಿ

Posted: 16 Apr 2019 12:44 AM PDT

ಆರ್ಥಿಕ ವಂಚನೆ ಮಾಡಿ ಭಾರತದಿಂದ ಪರಾರಿಯಾಗಿರುವವರು ಬರೀ ವಿಜಯ್ ಮಲ್ಯ, ನೀರವ್ ಮೋದಿಯಂಥ ಬೆರಳೆಣಿಕೆಯ ಮಂದಿ ಮಾತ್ರವಲ್ಲ, ಇನ್ನೂ 36 ಉದ್ಯಮಿಗಳು ದೇಶದಿಂದ ಪರಾರಿ ಆಗಿದ್ದಾರೆ.

ಹಾಗಂತ ಇದು ಅಂತೆ-ಕಂತೆಗಳ ವಿಷಯವಲ್ಲ. ಏಕೆಂದರೆ ಖುದ್ದು ಜಾರಿ ನಿರ್ದೇಶನಾಲಯವೇ ತನಿಖಾ ದಳದ ವಿಶೇಷ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಅವರಿಗೆ ಇಂಥದ್ದೊಂದು ವಿಷಯವನ್ನು ಗಮನಕ್ಕೆ ತಂದಿದ್ದಾರೆ.

ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಸ್ಕಿ ಮಾತ್ರವಲ್ಲದೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಇನ್ನೂ 36 ಉದ್ಯಮಿಗಳು ಆರ್ಥಿಕ ವಂಚನೆ ಹಾಗೂ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದು, ಅವರು ಭಾರತದಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಬಹಿರಂಗಪಡಿಸಿದೆ.

ರಾಹುಲ್ ಗಾಂಧಿಯನ್ನು ಪ್ರೀತಿಸುತ್ತಿರುವ ಹಿಂದಿನ ʼರಹಸ್ಯʼ ಬಿಚ್ಚಿಟ್ಟ ನಟಿ

Posted: 16 Apr 2019 12:31 AM PDT

ಮಾಡೆಲ್ ಮತ್ತು ಬಾಲಿವುಡ್ ನಟಿ ಮಹಿಕಾ ಶರ್ಮಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನ ಪ್ರೀತಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ರಾಹುಲ್ ಗಾಂಧಿ ಜೊತೆ ತಮ್ಮ ಪೋಟೊವನ್ನ ಪ್ರಕಟಿಸಿರುವ ಮಹಿಕಾ ಶರ್ಮಾ ತಾವು ರಾಹುಲ್ ನ್ನ ಪ್ರೀತಿಸುತ್ತಿರುವುದು ಯಾಕೆ ಎಂದು ವಿವರಣೆಯನ್ನ ಸಹ ನೀಡಿದ್ದಾರೆ. ರಾಹುಲ್ ಗಾಂಧಿ ತಮ್ಮ ವಿಚಿತ್ರವಾದ ಮಾತುಗಳಿಂದ ಜನರನ್ನ ನಗಿಸುವಂತೆ ಮಾಡುವ ಗುಣವಿದೆ. ಇದರಿಂದಾಗಿ ರಾಹುಲ್ ರನ್ನ ಹೆಚ್ಚು ಪ್ರೀತಿಸುತ್ತಿರುವುದಾಗಿ ಹೇಳಿದ್ದಾರೆ.

ರಾಜನಾದವನು ತನ್ನ ಪ್ರಜೆಗಳನ್ನ ಸದಾ ಸಂತೋಷದಿಂದ ಇರುವ ಹಾಗೆ ನೋಡಿಕೊಳ್ಳಬೇಕು. ಈ ಗುಣ ಅವರಲ್ಲಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆಬ್ಬಿಸಿದೆ. ಪರ ಹಾಗೂ ವಿರುದ್ದ ಕಾಮೆಂಟ್ಸ್ ಗೆ ಇದು ಎಡೆಮಾಡಿಕೊಟ್ಟಿದೆ.

ಮತ ಜಾಗೃತಿಗಾಗಿ ಎನ್‍.ಆರ್‌.ಐ.ಗಳ ಡಾನ್ಸ್

Posted: 16 Apr 2019 12:30 AM PDT

ದೇಶದಲ್ಲಿ ನಡೆಯಲಿರುವ ಚುನಾವಣೆಗಾಗಿ ದೇಶದೊಳಗಷ್ಟೇ ಅಲ್ಲ, ವಿದೇಶದಲ್ಲೂ ಮತಜಾಗೃತಿ ನಡೆಯುತ್ತಿದೆ. ಅಮೆರಿಕದ ಹೌಸ್ಟನ್‍ ನಲ್ಲಿರುವ ಅನಿವಾಸಿ ಭಾರತೀಯರು ಅಂಥದ್ದೊಂದು ಪ್ರಯತ್ನ ನಡೆಸಿದ್ದಾರೆ.

ಬಿಜೆಪಿಯನ್ನು ಬೆಂಬಲಿಸುತ್ತಿರುವ ಗುಂಪೊಂದು “ನಮೋ ಅಗೇನ್” ಎಂಬ ಬರಹ ಇರುವ ಟಿ-ಶರ್ಟ್ ಧರಿಸಿ, ತ್ರಿವರ್ಣ ಧ್ವಜ ಹಿಡಿದು, “ನಮೋ ನಮೋ” ಎಂಬ ಹಾಡಿಗೆ ಅಲ್ಲಲ್ಲಿ ಹೆಜ್ಜೆ ಹಾಕುತ್ತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿಸಲು ಬಿಜೆಪಿಗೇ ಮತ ಹಾಕುವಂತೆ ಹಾಗೂ ಎಲ್ಲರೂ ತಪ್ಪದೆ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ, ಚಾಯ್ ಪೆ ಚರ್ಚಾ ಎಂಬ ಹೆಸರಿನಲ್ಲಿ ಅಲ್ಲಲ್ಲಿ ಸಂವಾದ ನಡೆಸಿಯೂ ಪ್ರಚಾರ ನಡೆಸುತ್ತಿರುವುದರ ಜೊತೆಗೆ ಅಮೆರಿಕದಲ್ಲಿರುವ ಭಾರತೀಯ ಮಿತ್ರರಿಗೆ ನೇರವಾಗಿ ಕರೆ ಮಾಡಿಯೂ ಮತ ಚಲಾಯಿಸುವಂತೆ ಉತ್ತೇಜಿಸುತ್ತಿದ್ದಾರೆ.

ಪವಿತ್ರ ‘ಯಾತ್ರಾ’ ಸ್ಥಳ ಬೋಧಗಯಾ

Posted: 16 Apr 2019 12:07 AM PDT

ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ, ಗಯಾ, ಬೋಧಗಯಾ ಹಿಂದೂ ಮತ್ತು ಬೌದ್ಧರ ಯಾತ್ರಾ ಸ್ಥಳವಾಗಿವೆ.

ಫಲ್ಗು ನದಿಯ ದಡದಲ್ಲಿರುವ ಈ ಸ್ಥಳದ ಸುತ್ತಲೂ ಬೆಟ್ಟ ಗುಡ್ಡಗಳು ಆವೃತವಾಗಿವೆ. ಪ್ರಾಕೃತಿಕ ಸೌಂದರ್ಯ ಮತ್ತು ಶಿಲ್ಪಕಲೆಗೆ ಹೆಸರಾದ ಗಯಾ ನೋಡುಗರ ಮನದಲ್ಲಿ ಉಳಿಯುವಂತಹ ಸ್ಥಳವಾಗಿದೆ.

ದೇವಾಲಯ, ಪರ್ವತಗಳು, ಕೆರೆಗಳು, ಬೋಧಗಯಾ ಮೊದಲಾದವು ಈ ಸ್ಥಳಕ್ಕೆ ಮೆರುಗು ತಂದಿವೆ.

ರಾಣಿ ಅಹಲ್ಯಾಬಾಯಿ ಹೋಳ್ಕರ್ 1787 ರಲ್ಲಿ ಕಟ್ಟಿಸಿದ ವಿಷ್ಣು ದೇವಾಲಯ ಆಕರ್ಷಕವಾಗಿದೆ. ಸಮೀಪದಲ್ಲಿನ ಸೂರ್ಯ ಕುಂಡ್, ಸೀತಾ ಕುಂಡ್ ಸರೋವರಗಳು ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಪಡೆದುಕೊಂಡಿದೆ.

ನಗರದಿಂದ 1 ಕಿಲೋ ಮೀಟರ್ ದೂರದಲ್ಲಿರುವ ಬ್ರಹ್ಮ ಪರ್ವತದಲ್ಲಿ ಅಶೋಕ ಚಕ್ರವರ್ತಿ ಬೌದ್ಧ ಸ್ತೂಪ ನಿರ್ಮಿಸಿದ್ದ. ಇಲ್ಲಿನ ಬ್ರಹ್ಮಕುಂಡ್ ಸರೋವರದಲ್ಲಿ ಪಿತೃಗಳಿಗೆ ತರ್ಪಣ ಕೊಡಲಾಗುತ್ತದೆ.

ಬೋಧಗಯಾ ಗಯಾದಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿದ್ದು, ಈ ಸ್ಥಳದಲ್ಲಿ ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಜ್ಞಾನೋದಯವಾಗಿತ್ತು ಎನ್ನಲಾಗಿದೆ.

ಮಹಾಬೋಧಿ ಮಂದಿರ ಪ್ರಮುಖ ಸ್ಥಳವಾಗಿದೆ. ಕ್ರಿ.ಪೂ. 3 ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ದೇವಾಲಯದ ಶಿಲ್ಪಕಲೆ ಅದ್ಭುತವಾಗಿದ್ದು, ಇಲ್ಲಿರುವ ಬೃಹತ್ ಬುದ್ಧನ ಭವ್ಯ ಪ್ರತಿಮೆಯನ್ನು ಕಣ್ತುಂಬಿಕೊಳ್ಳಬಹುದು. ಸಮೀಪದಲ್ಲೇ ಬೋಧಿ ಸರೋವರ ಇದೆ.

ಗಯಾ ಮತ್ತು ಬೋಧಗಯಾದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೋಡಬಹುದಾದ ಅನೇಕ ಸ್ಥಳಗಳಿವೆ. ವಾಹನಗಳ ವ್ಯವಸ್ಥೆ ಇದೆ. ಧರ್ಮಶಾಲೆ, ಅತಿಥಿ ಗೃಹಗಳು ಕೂಡ ಇದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋಗಿ ಬನ್ನಿ.

ಫೇಸ್‌ ಬುಕ್‌ ನಲ್ಲಿ ಟಿಕೆಟ್‌ ಪೋಸ್ಟ್‌ ಮಾಡಿ ಪೇಚಿಗೆ ಸಿಲುಕಿದ ಪ್ರಯಾಣಿಕ

Posted: 15 Apr 2019 11:38 PM PDT

ಸಾಮಾಜಿಕ ಜಾಲತಾಣ ಪ್ರತಿಯೊಂದು ವಿಷಯಗಳನ್ನ ಹಂಚಿಕೊಳ್ಳುವ ವೇದಿಕೆ ಅಂದರೆ ತಪ್ಪಾಗಲಾರದು. ಈ ವೇದಿಕೆಯಲ್ಲಿ ಒಳ್ಳೆಯದನ್ನೂ ಹಂಚಿಕೊಳ್ಳಬಹುದು ಕೆಟ್ಟ ವಿಚಾರಗಳನ್ನ ಹಂಚಿಕೊಳ್ಳಬಹುದು. ಆದರೆ ಯಾವುದನ್ನ ಹಂಚಿಕೊಳ್ಳಬೇಕು ಅದು ಬಳಕೆದಾರರ ಗಮನದಲ್ಲಿರಬೇಕು.

ಭಾರತದಲ್ಲಿ ನಡೆಯುತ್ತಿರುವ ಚುನಾವಣೆಗೆ ಮತದಾನ ಮಾಡಲು ಒಮನ್ ನಲ್ಲಿದ್ದ ಎನ್.ಆರ್.ಐ. ಜಾಯ್ ಸ್ಟನ್ ಲೊಬೋ ಏ.1 ರಂದು ಏರ್ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಹೊರಟಿದ್ದರು. ಅದಕ್ಕಾಗಿ ಟಿಕೆಟ್ ಮಾಡಿಸಿದ್ದರು. ಆ ಟಿಕೆಟ್ ನ್ನ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ತನಗೆ ಇಷ್ಟವಾದ ಅಭ್ಯರ್ಥಿಗೆ ಓಟ್ ಹಾಕಲು ಭಾರತಕ್ಕೆ ಹೋಗುತ್ತಿರುವುದಾಗಿ ಪೋಸ್ಟ್ ಮಾಡಿದ್ದರು.

ಇದು ವೈರಲ್ ಆದ ಪರಿಣಾಮ ಅಪರಿಚಿತ ವ್ಯಕ್ತಿಯೊಬ್ಬ ಏ.1 ರಂದು ಭಾರತಕ್ಕೆ ಹಾರಬೇಕಿದ್ದ ಜಾಯ್ ಸ್ಟನ್ ಲೋಬೋರ ಟಿಕೇಟನ್ನ ರದ್ದುಪಡಿಸಿದ್ದಾನೆ. ಟಿಕೆಟ್ ನ್ನ ಸಾಮಾಜಿಕ ಜಾಲತಾಣ ಹಾಕಿದ ಪರಿಣಾಮ ಅದರ ಪಿ.ಎನ್.ಆರ್. ನಂಬರ್ ಪಡೆದು ಕ್ಯಾನ್ಸಲ್ ಮಾಡಿಸಿದ್ದಾನೆ.

ಪುತ್ತೂರಿನಲ್ಲಿ ನೆಲೆಸಿದ ಲೋಬೋ ಸ್ನೇಹಿತನೊಬ್ಬ ವಾಟ್ಸಾಪ್, ಫೇಸ್ ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಲೋಬೋ ಹರಿ ಬಿಟ್ಟ ವಿಡಿಯೋಗಳನ್ನ ವೀಕ್ಷಿಸಿದ್ದಾರೆ. ಈ ವಿಡಿಯೋ ಹರಿಬಿಟ್ಟ ಎರಡು ಗಂಟೆಯಲ್ಲಿ ಲೋಬೋರವರ ಗಮನಕ್ಕೆ ಬಾರದೆ ಟಿಕೆಟ್ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಏ.1 ರಂದು ಭಾರತಕ್ಕೆ ಬರಬೇಕಿದ್ದ ಲೋಬೋರವರ ಟಿಕೆಟನ್ನ ಒಮನ್ ದೇಶದ ಕಾಲಮಾನದ ಪ್ರಕಾರ ಮಾ.30 ರಂದು ಬೆಳಿಗ್ಗೆ 11-30 ಕ್ಕೆ ರದ್ದುಗೊಳಿಸಲಾಗಿದೆ. ಆದರೆ ಛಲ ಬಿಡದ ಲೊಬೋ ಏ.4 ರಂದು ಮತ್ತೆ ಅದೇ ವಿಮಾನದಲ್ಲಿ ಭಾರತಕ್ಕೆ ಹೋಗಲು ಟಿಕೇಟ್ ಮಾಡಿಸಿದ್ದಾರೆ. ಒಮನ್ ನಿಂದ ಭಾರತಕ್ಕೆ ಬರಲು 21,041 ರೂ. ಮುಖಬೆಲೆಯ ಟಿಕೆಟ್ ರದ್ದಾದ ಪರಿಣಾಮ ಲೊಬೋಗೆ ವಾಪಾಸಾದ ಹಣ ಕೇವಲ 9 ಸಾವಿರ ರೂ. ಮಾತ್ರ.

ಅದ್ಯಾವನೋ ಯೋಗಿ ಆದಿತ್ಯನಾಥ್ ಅಂತೆ-ಅವನೂ ಒಬ್ಬ ಸಿಎಂ: ಸಿದ್ದು ವಾಗ್ದಾಳಿ

Posted: 15 Apr 2019 11:29 PM PDT

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಕುರಿತು ಅದ್ಯಾವನೋ ಯೋಗಿ ಆದಿತ್ಯನಾಥ್ ಅಂತೆ. ಅವನೂ ಒಬ್ಬ ಸಿಎಂ. ಮೋದಿ ಸೈನ್ಯ ಅಂತ ಹೇಳ್ತಾನೆ. ಸೈನ್ಯ ಯಾರದ್ದೂ ಅಲ್ಲ, ಅದು ಇಂಡಿಯನ್ ಆರ್ಮಿ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ, ಸರ್ಜಿಕಲ್ ಸ್ಟ್ರೈಕ್ ಮಾಡೋಕೆ ಮೋದಿ ಏನು ಹೆಲಿಕ್ಯಾಪ್ಟರ್ ನಲ್ಲಿ ಬಾಂಬ್ ಹಾಕೋಕೆ ಹೋಗಿದ್ರಾ…? ಇಡೀ ದೇಶದಲ್ಲಿ ನಾನೊಬ್ಬನೇ ದೇಶಭಕ್ತ ಅನ್ನೋ ತರ ಪೋಸ್ ಕೊಡ್ತಾರೆ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿ ಈವರೆಗೆ ಒಟ್ಟಾರೆಯಾಗಿ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದು, ಈ ಅವಧಿಯಲ್ಲಿ ರಾಮಮಂದಿರ ಕಟ್ಟುವುದಾಗಿ ಕಬ್ಬಿಣ, ಸಿಮೆಂಟ್ ಸಂಗ್ರಹ ಮಾಡಿದ್ದಾರೆ ಹೊರತು ಇವರಿಗೆ ರಾಮ ಮಂದಿರ ಕಟ್ಟಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇಂಥವರನ್ನ ಜನ ನಂಬಬೇಕೆ ಎಂದು ಕೇಳಿದರು.

ಕಪ್ಪು ಹಣವನ್ನು ಹೊರ ತರುವುದಾಗಿ ನೋಟು ಅಮಾನ್ಯೀಕರಣ ಮಾಡಿದ್ದು ಈವರೆಗೆ ಎಷ್ಟು ಕಪ್ಪು ಹಣ ಪತ್ತೆಯಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಭಾಷಣದ ವೇಳೆ ಎಡವಟ್ಟು ಮಾಡಿಕೊಂಡ ಪ್ರಿಯಾಂಕಾ

Posted: 15 Apr 2019 11:08 PM PDT

ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದಂತೆ, ಆರೋಪ-ಪ್ರತ್ಯಾರೋಪವೂ ಮುಗಿಲು ಮುಟ್ಟಿದೆ. ಇದೀಗ ಪಶ್ಚಿಮ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ವಾದ್ರಾ ಇದೇ ಹುಮ್ಮಸ್ಸಿನಲ್ಲಿ ಮಾತನಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.

ಫತೇಪುರ್ ಸಿಕ್ರಿಯಲ್ಲಿ ನಡೆದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ, ತಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಮಾತನಾಡುವ ಹುಮ್ಮಸ್ಸಿನಲ್ಲಿ, ನಮ್ಮ ಸರಕಾರ ಬಂದರೆ ಉಚಿತ ಆರೋಗ್ಯ ಸೇವೆ ನೀಡುತ್ತೇವೆ ಎನ್ನುವ ಬದಲು “ಉಚಿತ ಆರೋಗ್ಯ”ವನ್ನು ನೀಡುವುದಾಗಿ ಹೇಳಿದ್ದಾರೆ. ತಾವು ಮಾಡಿದ ತಪ್ಪನ್ನು ಕೂಡಲೇ ಅರ್ಥ ಮಾಡಿಕೊಂಡ ಅವರು, ಬಳಿಕ ಉಚಿತ ಆರೋಗ್ಯ ಸೇವೆ ಎಂದು ಸರಿ ಮಾಡಿಕೊಂಡರು.

ಬಳಿಕ‌ ನರೇಂದ್ರ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಷ್ಟ್ರೀಯತೆ ಬಗ್ಗೆ ಮಾತನಾಡುವ ‌ಬಿಜೆಪಿಯವರು, ರಾಷ್ಟ್ರಕ್ಕೆ ಸಂವಿಧಾನ ನೀಡಿದವರ ಬಗ್ಗೆ ಏಕೆ ಮಾತನಾಡುವುದಿಲ್ಲ? ಪಾಕಿಸ್ತಾನದ ಬಗ್ಗೆ ಏಕೆ ಮಾತನಾಡುತ್ತಾರೆ? ಎಂದು ವಾಗ್ದಾಳಿ ನಡೆಸಿದರು.

ಇನ್ನು ಕಳೆದ ಐದು ವರ್ಷದಲ್ಲಿ ಮೋದಿ ಸರಕಾರ ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿದೆ. ರೈತರು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಟೀಕಿಸಿದರು.

ಬಾಲಕನ ಚಿಕಿತ್ಸೆಗೆ ಹರಿದು ಬಂದಿದೆ ನೆರವಿನ ಮಹಾಪೂರ

Posted: 15 Apr 2019 10:55 PM PDT

ಅಮೆರಿಕಾದ ಮಾಲ್ ಒಂದರಲ್ಲಿ ಆಗಂತುಕನೊಬ್ಬ ಐದು ವರ್ಷದ ಬಾಲಕನನ್ನು ಮೂರನೇ ಅಂತಸ್ತಿನಿಂದ ತಳ್ಳಿದ್ದರಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬಾಲಕನ ನೆರವಿಗೆ ನೆಟ್ಟಿಗರು ಭಾರಿ ಪ್ರಮಾಣದಲ್ಲಿ ಮುಂದೆ ಬಂದಿದ್ದಾರೆ.

ಹೌದು, ಲಾಡೆನ್ ಹೋಫ್‌ಮನ್ ಎನ್ನುವ ಬಾಲಕ ಮೂರನೇ ಅಂತಸ್ತಿನಿಂದ ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಆಕೆಯ ಸಂಬಂಧಿಯೊಬ್ಬಳು, ಗೋಫಂಡ್ ಎನ್ನುವ ವೆಬ್‌ ಸೈಟ್‌ ನಲ್ಲಿ ಚಿಕಿತ್ಸೆಗೆ ಸಹಕರಿಸುವಂತೆ ಪೋಸ್ಟ್ ಹಾಕಿದ್ದಳು. ಇದಕ್ಕೆ ಸ್ಪಂದಿಸಿರುವ ದಾನಿಗಳು ಸುಮಾರು ಐದು ಲಕ್ಷ ಡಾಲರ್ ಗೂ ಅಧಿಕ (3.4 ಕೋಟಿ ರು.) ದೇಣಿಗೆಯನ್ನು ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ‌.

ಐದು ವರ್ಷದ ಬಾಲಕನ ಫೋಟೋ ಹಾಕಿ, ಶುದ್ಧ ಮನಸಿನ ಮುದ್ದು ಹುಡುಗನಿಗೆ ತೊಂದರೆಯಾಗಿದೆ ಎಂದು ಬರೆದಿದ್ದಳು. ಸುಮಾರು ಐದು ಲಕ್ಷ ಡಾಲರ್ ನೆರವಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಮಗ್ದ ಮನಸಿನ ಬಾಲಕನಿಗೆ ಮನಸೋತಿರುವ ನೆಟ್ಟಿಗರು ನಿರೀಕ್ಷೆ ಮೀರಿ ಸ್ಪಂದಿಸಿದ್ದಾರೆ‌

ಇತ್ತ ಶುಕ್ರವಾರ ಮೂರನೇ ಮಹಡಿಯಿಂದ‌ ತಳ್ಳಿದ್ದ ಆಗಂತುಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಎಮುನ್ಯುಲ್ ದೆಶ್ವಾನ್ ಅರಾಂಡ ಎಂದು ಹೇಳಲಾಗಿದ್ದು, ಆತನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ʼಟಿವಿʼಯಲ್ಲಿ ಮಿದುಳು ಶಸ್ತ್ರಚಿಕಿತ್ಸೆಯ ನೇರ ಪ್ರಸಾರ

Posted: 15 Apr 2019 10:50 PM PDT

ಬ್ರಿಟನ್‌ನ ಚಾನೆಲ್ 5 ಟಿವಿ ವಾಹಿನಿಯಲ್ಲಿ ಮಿದುಳು ಶಸ್ತ್ರಚಿಕಿತ್ಸೆ ನೇರ ಪ್ರಸಾರವಾಗಿದ್ದು, ಎಲ್ಲೆಡೆ ಸುದ್ದಿ ಮಾಡುತ್ತಿದೆ. ಮೆದುಳು ತಜ್ಞ ಕ್ರಿಸ್ ವುಫ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ.

ಅನೆರಿಸಮ್ ಎನ್ನುವ ಕಾಯಿಲೆಯಿಂದ ರೋಗಿ ಬಳಲುತ್ತಿದ್ದ. ಇದರಲ್ಲಿ ಮಿದುಳಿನಲ್ಲಿ ರಕ್ತನಾಳ ಬಲಹೀನವಾಗಿ ರೋಗಿಯ ಜೀವಕ್ಕೆ ಅಪಾಯವಾಗುವಂತಹ ಪರಿಸ್ಥಿತಿಯನ್ನು ತಂದೊಡ್ಡುತ್ತದೆಯಂತೆ. ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಈಗ ಸರಿಪಡಿಸಿದ್ದಾರೆ.

ಕ್ರಿಸ್ ಅವರು ಮೆದುಳಿನ ಶಸ್ತ್ರಚಿಕಿತ್ಸೆ ಮಾಡುವಾಗ ಆಗುವ ಕಷ್ಟವನ್ನು ನೇರ ಪ್ರಸಾರದಲ್ಲಿ ಹೇಳಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಮಾಡುವಾಗ ಸ್ವಲ್ಪವೇ ತಪ್ಪಿದರೂ ರೋಗಿಗೆ ಬೇರೆಯದೇ ಆದ ತೊಂದರೆ ಆಗುವ ಸಾಧ್ಯತೆಯಿತ್ತಂತೆ.

ಚಾನೆಲ್ 5 ʼಆಪರೇಷನ್ ಲೈವ್ʼ ಎನ್ನುವ ಕಾರ್ಯಕ್ರಮದ ಮೂಲಕ ಶಸ್ತ್ರಚಿಕಿತ್ಸೆಗಳ ನೇರಪ್ರಸಾರ ಮಾಡುತ್ತಿದೆ. ಈ ರೀತಿ ಮೆದುಳಿನ ಶಸ್ತ್ರಚಿಕಿತ್ಸೆ ನೇರ ಪ್ರಸಾರ ಮಾಡಿದ್ದು ಮೊದಲನೇ ಸಾರಿ ಎನ್ನಲಾಗುತ್ತಿದೆ.

ಬೆಚ್ಚಿಬೀಳಿಸುತ್ತೆ ಪೊಲೀಸರು ಶೇರ್‌ ಮಾಡಿರೋ ಈ ವಿಡಿಯೋ

Posted: 15 Apr 2019 10:36 PM PDT

ಪೊಲೀಸರೆಂದರೆ ಕೇವಲ ಅಪರಾಧ ನಡೆದ ಸಂದರ್ಭದಲ್ಲಿ ಕೆಲಸ ಮಾಡುವವರೆಂದು ನಂಬಿದವರೇ ಹೆಚ್ಚು. ಆದರೆ ಉತ್ತರ ಪ್ರದೇಶದಲ್ಲಿ ದ್ವಿಚಕ್ರ ವಾಹನವೊಂದನ್ನು ಹಿಂಬಾಲಿಸಿ ತಡೆದು ಎರಡು ಪ್ರಾಣ ಉಳಿಸುವ ಮೂಲಕ, ತಾವು ಎಲ್ಲ ಸಂದರ್ಭದಲ್ಲೂ ರಕ್ಷಣೆ ಮಾಡುವವರೆಂದು ತೋರಿಸಿಕೊಟ್ಟಿದ್ದಾರೆ.

ಆಗ್ರಾ ಎಕ್ಸ್ ಪ್ರೆಸ್‌ ವೇನಲ್ಲಿ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಬೈಕ್ ಮೇಲೆ ಹೊಗುತ್ತಿದ್ದಾಗ ಅವರ ಬೈಕ್‌‌ ಗೆ ಬೆಂಕಿ ಹತ್ತಿಕೊಂಡಿದೆ. ಅದರ ಅರಿವೇ ಇಲ್ಲದೇ ಅವರು ಹೋಗುತ್ತಿದ್ದಾಗ ಅದನ್ನು ನೋಡಿದ ಪೊಲೀಸ್ ಇವರನ್ನು ಹಿಂಬಾಲಿಸಿ ನಿಲ್ಲಿಸಿದ್ದಾರೆ.

ನಂತರ ಪೊಲೀಸರೇ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆ ಪೊಲೀಸರ ಇಂಟರ್‌ ಸೆಪ್ಟರ್ ವಾಹನದಲ್ಲಿರುವ ಡ್ಯಾಷ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಯುಪಿ ಪೊಲೀಸ್ ಹಂಚಿಕೊಂಡಿದ್ದು ಅದು ವೈರಲ್ ಆಗಿದೆ. ಪೊಲೀಸರಿಗೆ ಎಲ್ಲ ಕಡೆಯಿಂದ ಮೆಚ್ಚುಗೆಯ ಮಾತುಗಳು ಬರುತ್ತಿವೆ.