Translate

Thursday, April 11, 2019

Kannada News | Karnataka News | India News

Kannada News | Karnataka News | India News


ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ದೂರು

Posted: 11 Apr 2019 08:06 AM PDT

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ವಕೀಲರಾದ ಬಿ. ಸಂಜಯ್ ಯಾದವ್, ಮೊಹಮ್ಮದ್ ಅಯೂಬ್ ಅಲಿ ಅವರು ದೂರು ನೀಡಿದ್ದಾರೆ. ತೇಜಸ್ವಿ ಸೂರ್ಯ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾಲಾಕೋಟ್ ಏರ್ ಸ್ಟ್ರೈಕ್ ಅನ್ನು ಬಿಜೆಪಿ ಸಾಧನೆ ಎನ್ನುವಂತೆ ಬಿಂಬಿಸಿ ತೇಜಸ್ವಿ ಸೂರ್ಯ ಚುನಾವಣೆ ಪ್ರಚಾರ ನಡೆಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ವಕೀಲರು ದೂರು ನೀಡಿದ್ದಾರೆ.

ಸಂಭೋಗದ ನಂತ್ರ ‘ಮಹಿಳೆ’ಯಲ್ಲಾಗುತ್ತೆ ಈ ಬದಲಾವಣೆ

Posted: 11 Apr 2019 07:31 AM PDT

ಸೆಕ್ಸ್ ಸಂಬಂಧದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಬೆಳೆದಾಗ ಅದ್ರಲ್ಲಿ ಭಾವನೆಗಳಿರುತ್ತವೆ. ಸಂಭೋಗ ಬೆಳೆಸಿದ ನಂತ್ರ ಮಹಿಳೆಯಲ್ಲಿ ಅನೇಕ ಬದಲಾವಣೆಗಳನ್ನು ನೋಡಬಹುದು.

ಸಂಭೋಗದ ನಂತ್ರ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಹಾರ್ಮೋನ್ ಬದಲಾವಣೆಯಾಗುತ್ತದೆ. ಆಕ್ಸಿಟೋಸಿನ್ ಮತ್ತು ಡೋಪಮೈನ್ ಹಾರ್ಮೋನ್ ಬಿಡುಗಡೆ ಹೆಚ್ಚಾಗುತ್ತದೆ. ಇದು ಅವ್ರ ಭಾವನೆ ಜೊತೆ ವರ್ತನೆ ಮೇಲೂ ಪ್ರಭಾವ ಬೀರುತ್ತದೆ. ಕೆಲ ಸಮಯಕ್ಕೆ ಇದು ಸೀಮಿತವಾಗಿರುವುದಿಲ್ಲ. ನಿಧಾನವಾಗಿ ಇಡೀ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.

ಸಂಭೋಗದ ನಂತ್ರ ಮಹಿಳೆಯರಲ್ಲಿ ಅವ್ರ ದೇಹದ ಬಗ್ಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪುರುಷ ಸಂಗಾತಿ, ಮಹಿಳಾ ಸಂಗಾತಿಯ ಪ್ರತಿಯೊಂದನ್ನೂ ಪ್ರೀತಿಸಲು ಶುರು ಮಾಡಿದ್ರೆ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ.

ಸಂಭೋಗದ ನಂತ್ರ ಮಹಿಳೆಯರ ಸ್ತನದ ಗಾತ್ರ ಹೆಚ್ಚಾಗುತ್ತದೆ. ಹಾರ್ಮೋನ್ ಬದಲಾವಣೆಯಿಂದ ಹೀಗಾಗುತ್ತದೆ. ಆದ್ರೆ ಎಲ್ಲರಲ್ಲೂ ಈ ಬದಲಾವಣೆಯಾಗಬೇಕೆಂದೇನಿಲ್ಲ.

ಲೈಂಗಿಕ ಸಂಬಂಧ ಶುರುವಾದ್ಮೇಲೆ ಚಂದ್ರನಾಡಿ ಹಾಗೂ ಮೂತ್ರನಾಳದಲ್ಲೂ ಕೆಲವೊಂದು ಬದಲಾವಣೆಯಾಗುತ್ತದೆ.

ಮಂಡ್ಯ ಎಲೆಕ್ಷನ್: ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ರೆಬಲ್ ನಾಯಕರು

Posted: 11 Apr 2019 07:14 AM PDT

ಬೆಂಗಳೂರು: ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಸ್ಪರ್ಧಿಸಿದ್ದು, ದೋಸ್ತಿ ಪಕ್ಷ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಆದರೆ, ಕೆಲವು ನಾಯಕರು ಪ್ರಚಾರದಿಂದ ದೂರವೇ ಉಳಿದಿದ್ದಾರೆ.

ಈ ಬಗ್ಗೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಕೂಡ ಹಲವು ಬಾರಿ ಟೀಕಿಸಿದ್ದರು. ಜೆಡಿಎಸ್ ನಾಯಕರ ಈ ಟೀಕೆಯಿಂದ ಅಸಮಾಧಾನಗೊಂಡಿರುವ ಮಂಡ್ಯದ ಕಾಂಗ್ರೆಸ್ ನಾಯಕರು ಪ್ರಚಾರದಿಂದ ದೂರ ಉಳಿದಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಹಲವು ಸಭೆಗಳನ್ನು ನಡೆಸಿದ್ದರೂ ಭಿನ್ನಮತ ತಣ್ಣಗಾಗಲಿಲ್ಲ.

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿಖಿಲ್ ಕುಮಾರ್ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರಕ್ಕೆ ಆಗಮಿಸಲಿದ್ದಾರೆ.  ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಂಡ್ಯ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು, ನಿಖಿಲ್ ಕುಮಾರ್ ಪರವಾಗಿ ಪ್ರಚಾರ ನಡೆಸುವಂತೆ ತಿಳಿಸಿದ್ದಾರೆ.

ಈ ಸಭೆಯಲ್ಲಿ ಜೆಡಿಎಸ್ ನಾಯಕರು ಮಾಡಿರುವ ಆರೋಪಗಳ ಬಗ್ಗೆ ಚರ್ಚೆ ನಡೆದಿದ್ದು, ರೆಬಲ್ ನಾಯಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕೊನೆಗೆ ಒಲ್ಲದ ಮನಸ್ಸಿನಿಂದಲೇ ಪ್ರಚಾರಕ್ಕೆ ಹೋಗಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿದಂತೆ ಮಂಡ್ಯ ಜಿಲ್ಲೆಯ ಹಲವು ಪ್ರಮುಖ ಮುಖಂಡರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಜಮೀರ್ ಅಹಮದ್ ಮೊದಲಾದವರು ಚರ್ಚೆ ನಡೆಸಿದ್ದು, ಪ್ರಚಾರಕ್ಕೆ ಬರಲು ತಿಳಿಸಿದ್ದಾರೆ. ಸುದೀರ್ಘ ಚರ್ಚೆಯ ಬಳಿಕ ಮಂಡ್ಯ ನಾಯಕರು ಪ್ರಚಾರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ರೈತರ ಬಳಿ ಲಂಚ ಕೇಳಿದರೆ ಸಸ್ಪೆಂಡ್: ಸಿಎಂ ಹೆಚ್.ಡಿ.ಕೆ.

Posted: 11 Apr 2019 07:00 AM PDT

ಮಂಡ್ಯ: ರೈತರ ಬಳಿ ಲಂಚ ಕೇಳಿದವರನ್ನು ಸಸ್ಪೆಂಡ್ ಮಾಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆಸ್ತೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ ರೈತರು, ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಸಿಎಂ, ಲಂಚ ಕೇಳುವ ಅಧಿಕಾರಿಗಳ ಬಗ್ಗೆ ಮಾಹಿತಿ ಕೊಡಿ ಅವರನ್ನು ಸಸ್ಪೆಂಡ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮದ್ದೂರಿನಲ್ಲಿ ರೋಡ್ ಶೋ ನಡೆಸಿದ ಸಿಎಂ, ನನ್ನನ್ನು ಮಂಡ್ಯ ಸಿಎಂ ಎಂದು ಪಕ್ಷೇತರ ಅಭ್ಯರ್ಥಿ ಟೀಕಿಸುತ್ತಾರೆ. ಅಂಥವರಿಂದ ಮಂಡ್ಯ ಜಿಲ್ಲೆಯ ಅಭಿವೃದ್ದಿ ಸಾಧ್ಯವೇ ಯೋಚಿಸಿ ಎಂದು ಹೇಳಿದ್ದಾರೆ.

ಒಂದು ಕಡೆ ಪಕ್ಷೇತರ ಅಭ್ಯರ್ಥಿ ಎಂದು ಹೇಳಿಕೊಳ್ತಾರೆ. ಮತ್ತೊಂದು ಕಡೆ ಬಿಜೆಪಿಯವರು ನಮ್ಮ ಅಭ್ಯರ್ಥಿ ಎಂದು ಹೇಳಿಕೊಳ್ತಾರೆ. ಮುಸಲ್ಮಾನ್ ಬಾಂಧವರು ಈ ಬಗ್ಗೆ ಯೋಚಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಪಾಪ ಒಂದೆರಡು ಓಟು ಹಾಕಿ ಎಂದ್ರು ಸುಮಲತಾ

Posted: 11 Apr 2019 06:35 AM PDT

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ಇಂದು ಕೆ ಆರ್ ಪೇಟೆಯ ಗೊರವಿ ಗ್ರಾಮದಲ್ಲಿ ಪ್ರಚಾರ ನಡೆಸಿದ್ದಾರೆ.

ಅಂದ ಹಾಗೇ ಗೊರವಿಯ ಸುಮಲತಾ ಅವರೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಗ್ರಾಮಕ್ಕೆ ಪ್ರಚಾರಕ್ಕೆ ಬಂದ ಸುಮಲತಾ ಅಂಬರೀಶ್ ಅವರಿಗೆ ಗ್ರಾಮಸ್ಥರು, ಪಕ್ಷೇತರ ಅಭ್ಯರ್ಥಿ ಸುಮಲತಾ ಇದೇ ಗ್ರಾಮದವರು ಎಂದು ಹೇಳಿದ್ದಾರೆ.

ಗೊರವಿ ಸುಮಲತಾ ಈ ಊರಿನ ಕ್ಯಾಂಡಿಡೇಟ್, ಅವರ ಗಂಡನೇ ಅವರಿಗೆ ಮತ ಹಾಕಲ್ಲ ಬಿಡಿ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗ್ರಾಮಸ್ಥರ ಮಾತು ಕೇಳಿ ನಕ್ಕ ಸುಮಲತಾ ಅಂಬರೀಶ್, ಪಾಪ ಅವರೂ ಹೆಣ್ಣು ಮಗಳು ಒಂದೆರಡು ಓಟು ಹಾಕಿ ಎಂದು ಹೇಳಿದ್ದಾರೆ. ನಿಮ್ಮೂರಿಗೆ ಬಂದಾಗ ಜೋರು ಮಳೆ ಬಂದಿದೆ. 18 ನೇ ತಾರೀಖು ಮತದ ಮಳೆ ಸುರಿಯಬೇಕು ಎಂದು ಹೇಳಿದ್ದಾರೆ.

ಬಟ್ಟೆ ತೊಳೆಯಲು ಹೋದಾಗಲೇ ದುರಂತ

Posted: 11 Apr 2019 06:05 AM PDT

ಚಿತ್ರದುರ್ಗ: ಬಟ್ಟೆ ತೊಳೆಯಲು ಕೆರೆಗೆ ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಗುಂಡಿಮಡು ಗ್ರಾಮದಲ್ಲಿ ನಡೆದಿದೆ.

ರಕ್ಷಿತಾ(13), ಮಲ್ಲಿಕಾರ್ಜುನ್(15) ನೀರು ಪಾಲಾದವರೆಂದು ಹೇಳಲಾಗಿದೆ. ಮಧ್ಯಾಹ್ನ ಕೆರೆಯಲ್ಲಿ ಬಟ್ಟೆ ತೊಳೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಹೊಳಲ್ಕೆರೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ʼಆರ್ಥಿಕ ವೃದ್ಧಿʼಗಾಗಿ ಮನೆಯಲ್ಲಿಡಿ ಇದೊಂದು ಫೋಟೋ

Posted: 11 Apr 2019 05:52 AM PDT

ಜೀವನದ ಸುಖ-ಶಾಂತಿಗಾಗಿ ವಾಸ್ತುಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತುಶಾಸ್ತ್ರದ ಪ್ರಕಾರ ನಡೆದುಕೊಂಡ್ರೆ ಆರ್ಥಿಕ ಸ್ಥಿತಿ ವೃದ್ಧಿಯಾಗುವ ಜೊತೆಗೆ ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ.

ವಾಸ್ತುಶಾಸ್ತ್ರದಲ್ಲಿ ಪಿರಾಮಿಡ್ ಗೆ ಬಹಳ ಮಹತ್ವ ನೀಡಲಾಗಿದೆ. ಮನೆಯ ಯಾವ ಜಾಗದಲ್ಲಿ ವಾಸ್ತು ದೋಷವಿದೆಯೋ ಆ ಜಾಗದಲ್ಲಿ ಪಿರಾಮಿಡ್ ಇಟ್ಟರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಆರ್ಥಿಕ ಸಮಸ್ಯೆ ಹೋಗಲಾಡಿಸಲು ಹಿತ್ತಾಳೆ, ತಾಮ್ರ, ಬೆಳ್ಳಿಯ ಪಿರಾಮಿಡ್ ಮನೆಯಲ್ಲಿಡಿ.

ಧನ-ಸಂಪತ್ತು, ಸುಖ-ಶಾಂತಿಗಾಗಿ ಪಂಚಮುಖಿ ಹನುಮಂತನ ಮೂರ್ತಿಯನ್ನು ಮನೆಯ ನೈಋತ್ಯ ಭಾಗದಲ್ಲಿಟ್ಟು ಪೂಜೆ ಮಾಡಿ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಆಮೆಯನ್ನಿಡಿ. ಲೋಹದ ಆಮೆಯನ್ನಿಡುವುದರಿಂದ ಮನೆಯಲ್ಲಿ ಕಾಡುವ ಆರ್ಥಿಕ ಸಮಸ್ಯೆ ನಿಧಾನವಾಗಿ ಕಡಿಮೆಯಾಗುತ್ತದೆ.

ಮನೆಯ ಎಲ್ಲ ವಾಸ್ತು ದೋಷ ನಿವಾರಣೆಗೆ ವಾಸ್ತು ದೇವತೆಗಳ ಮೂರ್ತಿ ಅಥವಾ ಫೋಟೋವನ್ನು ಮನೆಯಲ್ಲಿಡುವುದರಿಂದ ಹಣದ ಕೊರತೆ ನಿವಾರಣೆಯಾಗುತ್ತದೆ.

ರಕ್ತ ಚರಿತ್ರೆಯಾಗಿ ಬದಲಾಯ್ತು ಆಂಧ್ರ ಎಲೆಕ್ಷನ್

Posted: 11 Apr 2019 05:46 AM PDT

ಆಂಧ್ರ ಪ್ರದೇಶದಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ರಕ್ತ ಚರಿತ್ರೆ ದಾಖಲಾಗಿದೆ.

ಇವಿಎಂ ಯಂತ್ರ, ಪೀಠೋಪಕರಣ ಧ್ವಂಸ, ಘರ್ಷಣೆ, ಸೇರಿದಂತೆ ಹತ್ತು ಹಲವು ಅಹಿತಕರ ಘಟನೆಗಳು ನಡೆದಿವೆ. ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಹಿಂಸಾಚಾರ ನಡೆದಿದ್ದು, ಮೂವರು ಕೊಲೆಯಾಗಿದ್ದಾರೆ.

ಹಲವೆಡೆ ಇವಿಎಂ, ವಿವಿ ಪ್ಯಾಟ್, ಪೀಠೋಪಕರಣಗಳನ್ನು ಧ್ವಂಸಗೊಳಿಸಲಾಗಿದೆ. ಮತಗಟ್ಟೆಗಳಲ್ಲಿಯೇ ಕಾರ್ಯಕರ್ತರು ಕಲ್ಲು ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದಾರೆ. ವಿಶಾಖಪಟ್ಟಣಂ, ಅನಂತಪುರ, ಗುಂಟೂರು, ಚಿತ್ತೂರು ಪಶ್ಚಿಮ ಗೋದಾವರಿ ಮೊದಲಾದ ಕಡೆಗಳಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ, ಹಿಂಸಾಚಾರ ನಡೆದಿದೆ.

ರಾಜಕೀಯ ಘರ್ಷಣೆಯಲ್ಲಿ ಮೂವರು ಬಲಿಯಾಗಿದ್ದಾರೆ. ಕ್ಷೇತ್ರವೊಂದರಲ್ಲಿ ಅಭ್ಯರ್ಥಿಯೊಬ್ಬ ಮತಗಟ್ಟೆಯ ಬಾಗಿಲು ಹಾಕಿ ಮತಗಟ್ಟೆ ಸಿಬ್ಬಂದಿಯನ್ನು ಬೆದರಿಸಿ ತಾನೆ ಮತ ಹಾಕಿಕೊಂಡಿದ್ದಾನೆ. ಮತ್ತೊಬ್ಬ ಅಭ್ಯರ್ಥಿ ಮತ ಯಂತ್ರವನ್ನೇ ನೆಲಕ್ಕೆ ಎಸೆದಿದ್ದಾನೆ. ಹೀಗೆ ಹಲವು ಅಹಿತಕರ ಘಟನೆಗಳೊಂದಿಗೆ ಆಂಧ್ರಪ್ರದೇಶ ಚುನಾವಣೆ ರಕ್ತ ಚರಿತ್ರೆಯಾಗಿ ದಾಖಲಾಗಿದೆ.

ಅಭಿಮಾನಿ ಮನೆಯಲ್ಲಿ ಈ ಕೆಲಸ ಮಾಡುವ ಮೂಲಕ ಸಿಎಂಗೆ ದರ್ಶನ್ ʼಟಾಂಗ್ʼ

Posted: 11 Apr 2019 05:32 AM PDT

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ನಟ ದರ್ಶನ್ ಬಿರುಸಿನ ಪ್ರಚಾರ ನಡೆಸಿದ್ದಾರೆ. ಪ್ರಚಾರದ ವೇಳೆಯಲ್ಲಿ ಅವರು ಹಾಲು ಕರೆದು ಗಮನ ಸೆಳೆದಿದ್ದಾರೆ.

ಛತ್ರಿ ಕೆಳಗೆ ಶೂಟಿಂಗ್ ಮಾಡೋರಿಗೆ ರೈತರ ಕಷ್ಟ ಏನು ಗೊತ್ತು? ಬಿಸಿಲಿನ ಅನುಭವವಾಗಲಿ ಬಿಡಿ ಎಂದು ಸಿಎಂ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಸೋಮನಹಳ್ಳಿಯಲ್ಲಿ ದರ್ಶನ್ ಹಸುವಿನ ಹಾಲು ಕರೆದಿದ್ದಾರೆ.

ಪ್ರಚಾರಕ್ಕೆ ಆಗಮಿಸಿದ್ದ ದರ್ಶನ್ ಅಭಿಮಾನಿಯಾಗಿರುವ ಚಂದ್ರು ಮನೆಗೆ ಆಗಮಿಸಿದ್ದು, ಈ ವೇಳೆ ಹಸುವಿನ ಹಾಲು ಕರೆದು ನನಗೆ ಹಾಲು ಕರೆಯುವುದೂ ಗೊತ್ತು ಎಂಬುದನ್ನು ತೋರಿಸಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ದೃಶ್ಯವನ್ನು ಸೆರೆ ಹಿಡಿದು ʼಡಿ ಬಾಸ್ʼ ಎಂದು ಮುಗಿಲುಮುಟ್ಟುವಂತೆ ಘೋಷಣೆ ಕೂಗಿದ್ದಾರೆ.

ಚುನಾವಣೆ ತರಬೇತಿ ವೇಳೆಯೇ ಶಿಕ್ಷಕ ಸಾವು

Posted: 11 Apr 2019 05:18 AM PDT

ಬಳ್ಳಾರಿ: ಚುನಾವಣಾ ತರಬೇತಿ ವೇಳೆಯಲ್ಲೇ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ನಡೆದಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ರಮೇಶ್(43) ಮೃತಪಟ್ಟವರೆಂದು ಹೇಳಲಾಗಿದೆ.

ಚುನಾವಣಾ ತರಬೇತಿ ನಡೆಯುವ ಸಂದರ್ಭದಲ್ಲಿ ಹೃದಯಾಘಾತದಿಂದ ರಮೇಶ್ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

‘ವಿಕಿಲೀಕ್ಸ್’ ಸಹ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅರೆಸ್ಟ್

Posted: 11 Apr 2019 04:50 AM PDT

ಹಲವು ಪ್ರಮುಖ ಮಾಹಿತಿಗಳನ್ನು ಬಹಿರಂಗಗೊಳಿಸುವ ಮೂಲಕ ಕೆಲ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿ ಬಂಧನ ಭೀತಿ ಎದುರಿಸುತ್ತಿದ್ದ ವಿಕಿಲೀಕ್ಸ್ ಸಹ ಸಂಸ್ಥಾಪಕ ಜೂಲಿಯನ್ ಅಸಾಂಜೆಯನ್ನು ಕೊನೆಗೂ ಬ್ರಿಟನ್ ಪೊಲೀಸರು ಬಂಧಿಸಿದ್ದಾರೆ.

2012ರಲ್ಲಿ ಜೂಲಿಯನ್ ಅಸಾಂಜೆ ವಿರುದ್ಧ ಸ್ವೀಡನ್ ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಹೀಗಾಗಿ ಆತ ಬ್ರಿಟನ್ ನಲ್ಲಿನ ಈಕ್ವೆಡಾರ್ ಪ್ರವಾಸದಲ್ಲಿ ಅಂದಿನಿಂದಲೂ ಆಶ್ರಯ ಪಡೆದಿದ್ದ. ವಿಕಿಲೀಕ್ಸ್ ನಲ್ಲಿ ಮಾಹಿತಿ ಬಹಿರಂಗಪಡಿಸಿದ ಕಾರಣಕ್ಕೆ ತನ್ನನ್ನು ಅಮೆರಿಕಾಕ್ಕೆ ಹಸ್ತಾಂತರಿಸಬಹುದೆಂದು ಭೀತಿ ಆತನನ್ನು ಕಾಡುತ್ತಿತ್ತು.

ಇದೀಗ ವಿಕಿಲೀಕ್ಸ್ ನಲ್ಲಿ ಈಕ್ವೆಡಾರ್ ಅಧ್ಯಕ್ಷರ ವೈಯಕ್ತಿಕ ಜೀವನದ ಕೆಲವು ಗುಪ್ತ ಮಾಹಿತಿಗಳನ್ನು ಬಹಿರಂಗಪಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜೂಲಿಯನ್ ಅಸಾಂಜೆ ಆಶ್ರಯದ ಕೆಲವು ಒಪ್ಪಂದಗಳನ್ನು ಉಲ್ಲಂಘಿಸಿರುವುದಾಗಿ ಈಕ್ವೆಡಾರ್ ಅಧ್ಯಕ್ಷ ಲೆನಿನ್ ಮಾರೆನೋಸ್ ಹೇಳಿದ್ದರು. ಇದೀಗ ಬ್ರಿಟನ್ ಪೊಲೀಸರನ್ನು ಈಕ್ವೆಡಾರ್ ದೂತವಾಸಕ್ಕೆ ಕರಿಸಿಕೊಂಡು ಜೂಲಿಯನ್ ಅಸಾಂಜೆಯನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ.

ಚುನಾವಣಾ ಖರ್ಚಿಗೆ ಮುಖ್ಯಮಂತ್ರಿಗೆ ‘ಹಣ’ ಕೊಟ್ಟ ಕಾರ್ಯಕರ್ತ

Posted: 11 Apr 2019 04:43 AM PDT

ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಅಭ್ಯರ್ಥಿಗಳ ನಡುವಿನ ಆರೋಪ-ಪ್ರತ್ಯಾರೋಪಗಳ ಕಾರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದರ ಮಧ್ಯೆ ಇಂದು ಸ್ವಾರಸ್ಯಕರ ಘಟನೆಯೊಂದು ನಡೆದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಪುತ್ರ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರ ಪರವಾಗಿ ಇಂದು ಮಂಡ್ಯ ಜಿಲ್ಲೆಯಲ್ಲಿ ಪ್ರಚಾರ ಕೈಗೊಂಡಿದ್ದು, ಹಲವು ಭಾಗಗಳಲ್ಲಿ ಬಿರುಸಿನ ಸಂಚಾರ ಕೈಗೊಂಡಿದ್ದಾರೆ.

ಇದರ ಮಧ್ಯೆ ಪ್ರಚಾರ ಸಭೆಯೊಂದರಲ್ಲಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರೊಬ್ಬರು ಎರಡು ಸಾವಿರ ರೂಪಾಯಿಯ ನೋಟನ್ನು ನೀಡಿ ಚುನಾವಣಾ ಖರ್ಚಿಗೆ ಬೇಕಾಗುತ್ತದೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಭಾಷಣದುದ್ದಕ್ಕೂ ಈ ನೋಟನ್ನು ಕೈಯಲ್ಲಿಡಿದುಕೊಂಡೇ ಮಾತನಾಡಿದ್ದಾರೆ.

OMG: ಇಡೀ ಊರಲ್ಲಿರುವುದು ಇವನೊಬ್ಬನೇ..!

Posted: 11 Apr 2019 04:29 AM PDT

ರಾಜಸ್ತಾನದ ಈ ಹಳ್ಳಿ ಸರ್ಕಾರದ ದಾಖಲಾತಿಯಲ್ಲಿದೆ. ವರ್ಷದ ಜನಗಣತಿಯ ಸಂದರ್ಭದಲ್ಲಿ ಇಡೀ ಊರಿಗೆ ಒಬ್ಬನೇ ವ್ಯಕ್ತಿ ಇರುವನೆಂದು ನಮೂದಿಸಲಾಗುತ್ತದೆ. ಊರೆಂದರೆ ಹಲವಾರು ಮನೆಗಳು, ಅನೇಕ ಜನರು ಎಂಬ ಭಾವನೆ ಇದ್ದರೆ ಈ ಊರು ಅದನ್ನು ಸುಳ್ಳಾಗಿಸಿದೆ.

ಪಾಮ್ ಪಾಂಡಿಯಾದಲ್ಲಿ ಒಂದು ದೇವಸ್ಥಾನವಿದೆ. ಈ ದೇವಸ್ಥಾನವನ್ನು ನೋಡಿಕೊಳ್ಳಲು ಜ್ಞಾನದಾಸ ಎಂಬ ಒಬ್ಬ ಅರ್ಚಕನಿದ್ದಾನೆ. ಈ ಅರ್ಚಕನ ಹೊರತಾಗಿ ಇನ್ಯಾರೂ ಅಲ್ಲಿ ಕಾಣಸಿಗುವುದಿಲ್ಲ. ಈ ಮಂದಿರದ ಹೊರತಾಗಿ ಅಲ್ಲಿ ಇನ್ಯಾವ ವಾಸಸ್ಥಳವೂ ಇಲ್ಲ.

ಜ್ಞಾನದಾಸ ದೂರದ ಹಳ್ಳಿಯಿಂದ ದವಸ, ಧಾನ್ಯಗಳನ್ನು ತಂದುಕೊಳ್ಳುತ್ತಾನೆ. ಇವನ ಹೆಸರಿನಲ್ಲಿ ರೇಶನ್ ಕಾರ್ಡ್ ಮತ್ತು ಮತದಾನ ಪತ್ರ ಕೂಡ ಇದೆ. ಈ ಹಳ್ಳಿಯಲ್ಲಿರುವ ದೇವಸ್ಥಾನ ಸುತ್ತ ಎಲ್ಲ ಊರಿನಲ್ಲೂ ಪ್ರಸಿದ್ಧಿ ಪಡೆದಿದೆ. ಪ್ರತೀ ವರ್ಷ ಭಾದ್ರಪದ ಮಾಸದ ಅಮಾವಾಸ್ಯೆಯಂದು ಇಲ್ಲಿ ಉತ್ಸವ ಕೂಡ ನಡೆಯುತ್ತದೆ.

ಕಣ್ಣಂಚನ್ನು ತೇವಗೊಳಿಸುತ್ತೆ ನಟಿ ಸಹೋದರಿಯ ನೋವಿನ ಕಥೆ

Posted: 11 Apr 2019 04:23 AM PDT

ಗ್ಲಾಮರ್ ಹಾಗೂ ಫ್ಯಾಷನ್ ಜಗತ್ತಿನಲ್ಲಿ ಬಾಲಿವುಡ್ ಬೆಡಗಿ ಕಂಗನಾ ಸಾಕಷ್ಟು ಹೆಸರು ಮಾಡಿದ್ದಾಳೆ. ಫೆಮಿನಾ ಮ್ಯಾಗಜೀನ್ ನಲ್ಲಿ ಕಂಗನಾ ತನ್ನ ಸಹೋದರಿ ರಂಗೋಲಿ ಜೊತೆ ಈ ಹಿಂದೆ ಕಾಣಿಸಿಕೊಂಡಿದ್ದಾಳೆ. ಕಂಗನಾ ಸಹೋದರಿ ರಂಗೋಲಿ ಕಥೆ ಕೇಳಿದ್ರೆ ಕಣ್ಣಲ್ಲಿ ನೀರು ಬರೋದು ನಿಶ್ಚಿತ.

ರಂಗೋಲಿ ತಮ್ಮ ಜೀವನದ ಸತ್ಯವನ್ನು ಹೇಳಿಕೊಂಡಿದ್ದಾರೆ. ರಂಗೋಲಿ ಆಸಿಡ್ ದಾಳಿಗೆ ಒಳಗಾದ ಮಹಿಳೆ. ಹದಿಹರೆಯದಲ್ಲಿ ತುಂಬ ಸುಂದರವಾಗಿದ್ದಳಂತೆ ರಂಗೋಲಿ. ಹಿಂದಿ ಚಿತ್ರ ‘ತಾಲ್’ ಬಿಡುಗಡೆಯಾದ ಸಮಯದಲ್ಲಿ ಈ ದುರ್ಘಟನೆ ನಡೆದಿತ್ತು. ಆಕೆಯನ್ನು ನೋಡಿ ಜನ ಐಶ್ವರ್ಯ ಎನ್ನುತ್ತಿದ್ದರಂತೆ. ರಂಗೋಲಿ ಸೌಂದರ್ಯವನ್ನು ಸುತ್ತಮುತ್ತಲಿನವರು ಹಾಡಿ ಹೊಗಳುತ್ತಿದ್ದರಂತೆ. ಆದ್ರೆ ಆಕೆ ಹಿಂದೆ ಬಿದ್ದಿದ್ದ ಹುಚ್ಚು ಪ್ರೇಮಿಯೊಬ್ಬ ರಂಗೋಲಿ ಬದುಕನ್ನು ಹಾಳು ಮಾಡಿದ್ದಾನೆ.

ಆಸಿಡ್ ದಾಳಿಯಾದ ತಕ್ಷಣ ರಂಗೋಲಿಗೆ ಚಿಕಿತ್ಸೆ ಸಿಕ್ಕಿದೆಯಂತೆ. ಹಾಗಾಗಿ ಹೀಗಿದ್ದೇನೆ ಎನ್ನುತ್ತಾಳೆ ರಂಗೋಲಿ. 57 ಬಾರಿ ಮುಖದ ಶಸ್ತ್ರಚಿಕಿತ್ಸೆ ಮಾಡಲಾಗಿದೆಯಂತೆ. 23 ವರ್ಷದಲ್ಲಿರುವಾಗ ಮಾನಸಿಕ ಹಿಂಸೆ ಅನುಭವಿಸಿದ ರಂಗೋಲಿಗೆ ಸಾಥ್ ನೀಡಿದವರು ತಂದೆ, ತಾಯಿ ಹಾಗೂ ಸಹೋದರಿ ಕಂಗನಾ.

ಆಸಿಡ್ ದಾಳಿಯಿಂದಾಗಿ ಉಸಿರಾಟದ ಸಮಸ್ಯೆ ಜೊತೆಗೆ ರಂಗೋಲಿಯ ಒಂದು ಕಣ್ಣು ಶೇಕಡಾ 90 ರಷ್ಟು ಕಾಣಿಸುವುದಿಲ್ಲವಂತೆ. ಒಂದು ಸ್ತನ ಸರಿಯಿಲ್ಲವಂತೆ. ಆದ್ರೂ ಆಕೆ ಖುಷಿಯಾಗಿದ್ದಾಳೆನ್ನುತ್ತಾಳೆ ಕಂಗನಾ.

ಕುತೂಹಲಕ್ಕೆ ಕಾರಣವಾಯ್ತು ಆಗಸದಲ್ಲಿನ ನೀಲಿ ಮೋಡ

Posted: 11 Apr 2019 03:54 AM PDT

ನಾರ್ವೆ ಮತ್ತು ಸ್ವೀಡನ್ ದೇಶದಲ್ಲಿ ಕಾಣಿಸಿಕೊಂಡ ನೀಲಿ ಬಣ್ಣದ ಮೋಡಗಳು ನೆಟ್ಟಿಗರನ್ನ ಕೆಲಕಾಲ ದಂಗುಬಡಿಸಿತ್ತು. ಕೆಲ ಟ್ವಿಟಿಗರು ಇದೇನಪ್ಪ ಭೂಮಿ ಕಡೆ ಮತ್ತೆ ಏಲಿಯನ್ಸ್ ಅಥವಾ ಯುಎಫ್ಒಗಳು ಬಂದವಾ ಎಂಬ ಸಂಶಯವನ್ನ ಹೊರಹಾಕಿದ್ದರು.

ಭಾನುವಾರ ಬೆಳಗಿನ ಜಾವ 12.24 ನಿಂದ 1.30 ರ ವರೆಗೆ ಆಕಾಶದಲ್ಲಿ ಕಾಣಿಸಿಕೊಂಡ ನೀಲಿ ಬಣ್ಣದ ಮೋಡಗಳನ್ನ ನದರ್ನ್ ಲೈಟ್ಸ್ ಫೋಟೊಗ್ರಾಫಿ ಎಕ್ಸಪರ್ಟ್ ಚಡ್ ಬ್ಲೆಕ್ಲೇ ಫೋಟೊ ತೆಗೆದು ತನ್ನ ಫೇಸ್ ಬುಕ್ ನಲ್ಲಿ ಹಾಲಿಡೇ ಟೂರ್ ಕಂಪನಿ ಎಂಬ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಕತ್ತ್ ವೈರಲ್ ಆಗಿದೆ.

ಅರೋರ ವೆಬ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನ ಸೆರೆ ಹಿಡಿದ ಬ್ಲೆಕ್ಲೆ ಇದು ನಮ್ಮ ಪ್ರಪಂಚದಿಂದ ಹೊರಗೆ ಇದ್ದರೂ ಈ ಬಣ್ಣ ಕುತೂಹಲ ಕೆರಳಿಸಿದೆ ಎಂದು ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.

ಇದು ನಿಜವಾಗಿಯೂ ಏಲಿಯನ್ ಕೃತ್ಯವಾ ಎಂದು ಕೇಳಿದರೆ ನಾಸಾ ಅಲ್ಲವೆಂದು ಉತ್ತರಿಸುತ್ತದೆ. ಏಕೆಂದರೆ ನಾಸಾ ಬಾಹ್ಯಾಕಾಶದಲ್ಲಿ ನಡೆಸುತ್ತಿರುವ ಸಂಶೋಧನೆಯ ಫಲವಾಗಿ ಈ ಬಣ್ಣ ಮೂಡಿದೆ. ನಾರ್ವೆಯ ಅಂಡೋಯಾ ಬಾಹ್ಯಾಕಾಶ ಕೇಂದ್ರದಲ್ಲಿ ಎರಡು ರಾಕೆಟ್ ಗಳ ಉಡಾವಣೆ ಮಾಡುವಾಗ ಬಿಡುಗಡೆಗೊಂಡ ಮೆಟಾಲಿಕ್ ಪೌಡರ್ ನಿಂದಾಗಿ ನೀಲಿ ಬಣ್ಣ ಮೂಡಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಭಾರತ – ಪಾಕ್ ಸೌಹಾರ್ದತೆಗೆ ಕಲಾವಿದರ ರ್ಯಾಪ್

Posted: 11 Apr 2019 03:50 AM PDT

ಭಾರತ ಮತ್ತು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಇನ್ನೂ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ. ಯುದ್ದದ ಛಾಯೆ ಹರಡಿದೆ. ಇಂತಹ ಸ್ಥಿತಿಯಲ್ಲಿ ಪಾಕಿಸ್ತಾನಿ ಕಲಾವಿದರು ರ್ಯಾಪ್ ಹಾಡಿನ ಮೂಲಕ ಈ ಉದ್ವಿಗ್ನತೆಯನ್ನ ಕಡಿಮೆಗೊಳಿಸುವ ಪ್ರಯತ್ನ ಮಾಡಿದ್ದಾರೆ.

“ಹಮ್ ಸೇ ಮಾ ಜಾಯೇ” ಎಂಬ ಹಾಡಿನ ಮೂಲಕ ಕಲಾವಿದರು ಎರಡೂ ದೇಶದ ಜನರ ನಡುವೆ ಪರಸ್ಪರ ಪ್ರೀತಿ ಇದೆ ಆದರೆ ಅದು ದ್ವೇಷದಿಂದಾಗಿ ಇಬ್ಬರನ್ನೂ ಪ್ರತ್ಯೇಕ ಮಾಡಲಾಗಿರುವ ಸಂದೇಶವನ್ನ ಈ ಹಾಡಿನ ಮೂಲಕ ಸಾರಿದ್ದಾರೆ.

ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಎರಡೂ ದೇಶದ ಜನರ ನಡುವೆ ಗೋಡೆಯನ್ನ ನಿರ್ಮಿಸಿದ್ದಾರೆ. ಕೇವಲ ಗೋಡೆ ಆಗಿದ್ದರೆ ಅದನ್ನ ಕೆಡವಿ ಬಿಡಬಹುದಿತ್ತು. ಆದರೆ ಇಬ್ಬರ ನಡುವೆ ದ್ವೇಷದ ಬೀಜ ಬಿತ್ತಲಾಗಿದೆ. ಹಾಗಾಗಿ ಅವರು ಒಂದಾಗಲು ಸಾದ್ಯವಾಗುತ್ತಿಲ್ಲವೆಂಬ ಸಂದೇಶವುಳ್ಳ ಹಾಡನ್ನ ರ್ಯಾಪ್ ಮೂಲಕ ಹಾಡಲಾಗಿದೆ.

ಈ ಹಾಡನ್ನ ಪಾಕಿಸ್ತಾನಿಯ ಬುಶ್ರಾ ಅನ್ಸಾರಿ, ಸಹೋದರಿಯರಾದ ಅಸ್ಮಾ ಅಬ್ಬಾಸ್, ನೀಲಂ ಅಹಮದ್ ಬಶೀರ್ ತಂಡ ರಚಿಸಿ, ಅಭಿನಯಿಸಿದೆ. ಭಾರತೀಯ ಶೈಲಿ ಹಾಗೂ ಪಾಕಿಸ್ತಾನಿ ಶೈಲಿಯಲ್ಲಿ ಹಾಡನ್ನ ಹಾಡಲಾಗಿದೆ. ಬುಶ್ರಾರವರ ಯೂ ಟ್ಯೂಬ್ ಅಕೌಂಟ್ ನಲ್ಲಿ ಈವಿಡಿಯೋವನ್ನ ಹರಿಬಿಡಲಾಗಿದೆ‌. ಬುಶ್ರಾ ಮತ್ತು ಅಸ್ಮಾ ಇಬ್ಬರು ಹಾಡಿನಲ್ಲಿ ನಟಿಸಿದರೆ ನೀಲಂ ಗೀತ ರಚನೆ ಮಾಡಿದ್ದಾರೆ.

ಈ ಹಾಡಿಗೆ ಯೂ ಟ್ಯೂಬ್ ನಲ್ಲಿ ಸಕ್ಕತ್ ರೆಸ್ಪಾನ್ಸ್ ಲಭ್ಯವಾಗಿದೆ. ಇತ್ತೀಚೆಗೆ ಬಿಬಿಸಿಗೆ ಇಂಟರ್ವ್ಯೂ ನೀಡಿದ ಬುಶ್ರಾ ಅವರು ನನ್ನ ಮೇಲ್ ಬಾಕ್ಸ್ ವೀವರ್ಸ್ ನ ಫೀಡ್ ಬ್ಯಾಕ್ ನಿಂದ ತುಂಬಿ ಹೋಗಿದೆ. ಕೆಲವರಂತು ನಮ್ಮ ಮನಸ್ಸಿನೊಳಗಿನ ಮಾತನ್ನ ನೀವು ಹಾಡಿನ ಮೂಲಕ ಹಾಡಿದ್ದೀರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.

ಸ್ಫಟಿಕದಿಂದ ಕವರ್ ಆಯ್ತು ಐಷಾರಾಮಿ ಕಾರು…!

Posted: 11 Apr 2019 03:42 AM PDT

ಲುಂಬರ್ಗಿನಿ ಎವೆನ್ಡೇಟರ್ ಸಾಮಾನ್ಯವಾಗಿ ಹಳದಿ, ಕೆಂಪು, ಕಪ್ಪು, ಹಳದಿ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೆ ಸ್ಫಟಿಕದ ಹರಳಿನಲ್ಲಿ ಇಡೀ ಲುಂಬರ್ಗಿನಿ ಎವೆನ್ಡೇಟರ್ ಕಾರಿನ ಮೇಲ್ಮೈ ಯನ್ನ ಕವರ್ ಮಾಡಿರುವ ಐಷಾರಾಮಿ ಕಾರನ್ನ ಎಲ್ಲಿಯಾದರೂ ನೋಡಿದ್ದೀರಾ?ಆಶ್ಚರ್ಯವಾಗುತ್ತಿದೆಯಾ?

ಹೌದು! ಕಾರಿನ ಮೇಲ್ಮೈಯನ್ನು ಸ್ಫಟಿಕದಲ್ಲಿ ಕವರ್ ಮಾಡಲಾಗಿದೆ ಎಂದರೆ ನೀವು ನಂಬಲೇ ಬೇಕು. ರಷ್ಯಾದ ಇನ್ಸ್ಟಾ ಗ್ರಾಮ್ ಮಾಡೆಲ್ ಡೆರಿಯಾ ರೆಡಿಯೋನೋವಾ ಎಂಬವರು ಇಡೀ ಲುಂಬರ್ಗಿನಿ ಕಾರನ್ನ ಸ್ಫಟಿಕದಿಂದ ಕವರ್ ಮಾಡಿದ್ದಾರೆ.

2 ಮಿಲಿಯನ್ ಸ್ವರೋಸ್ಕಿ ಸ್ಫಟಿಕದ ಹರಳಿನಿಂದ ಕಾರಿನ ಮೇಲ್ಮೈ ಹೊದಿಸಲಾಗಿದೆ. ಸ್ವರೋಸ್ಕಿ ಸ್ಫಟಿಕ ಕೂರಿಸಲು ಬರೋಬ್ಬರಿ ಎರಡು ತಿಂಗಳು ತೆಗೆದುಕೊಳ್ಳಲಾಗಿದೆ.

ಈ ಕಾರನ್ನ ಭಾನುವಾರ ಮಾಡಲ್ ಡರಿಯಾ ಲಂಡನ್ ನ ನೈಟ್ ಬ್ರಿಡ್ಜ್ ನಲ್ಲಿ ಶೋ ಆಫ್ ಮಾಡಿದ್ದಾರೆ. ಎರಡು ಕೋಟಿ ಲುಂಬರ್ಗಿನಿ ಲಂಡನ್ ಸಿಟಿಯಲ್ಲಿ ಸಕ್ಕತ್ತಾಗಿಯೇ ಮಿಂಚಿದೆ. ಹೊಳಪಿನ ಕಾರನ್ನ ಜನ ಮುಗಿಬಿದ್ದು ವಿಡಿಯೋ ಮತ್ತು ಫೋಟೊ ತೆಗೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕಾರನ್ನ ವೈರಲ್ ಮಾಡಿದ್ದಾರೆ.

ಕಾರಿನ ಎಂಜಿನ್ ಗೆ ಗಾಳಿ ಓಡಾಡುವ ಜಾಗ ಮತ್ತು ಹಿಂಬದಿಯ ದೊಡ್ಡ ರೆಕ್ಕೆಗಳನ್ನೂ ಸಹ ಸ್ಫಟಿಕದ ಹರಳಿನಿಂದ ಮುಚ್ಚಲಾಗಿದೆ. ಡರಿಯಾ ರೆಡಿನೋವಾ ಇದೇ ಮೊದಲ ಬಾರಿಗೆ ತಮ್ಮ ಅತಿ ದೊಡ್ಡ ಬೆಲೆಯ ಐಷಾರಾಮಿ ಕಾರಿಗೆ ಸ್ಫಟಿಕದ ಹರಳಿನಿಂದ ಕವರ್ ಮಾಡುತ್ತಿಲ್ಲ. ಈ ಹಿಂದೆ ಮರ್ಸಡಿಸ್ ಕಾರಿಗೂ ಹಾಗೂ ಲುಂಬರ್ಗಿನಿ ಹುರಾಕಾನ್ ಕಾರಿಗೂ ಸ್ವರೋಸ್ಕಿ ಕ್ರಿಸ್ಟಲ್ ನಿಂದ ಕವರ್ ಮಾಡಿಸಿದ್ದರು.

‘ಸುಖ ನಿದ್ರೆ’ ಬಯಸುವವರು ಹೀಗೆ ಮಾಡಿ…..

Posted: 11 Apr 2019 03:07 AM PDT

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆಯಿದು. ಹಾಸಿಗೆ ಮೇಲೆ ಎಷ್ಟು ಹೊರಳಾಡಿದ್ರೂ ನಿದ್ರೆ ಮಾತ್ರ ಹತ್ತಿರ ಸುಳಿಯೋದಿಲ್ಲ. ನೀವೂ ಇಂಥ ಸಮಸ್ಯೆಯಿಂದ ಬಳಲುತ್ತಿದ್ದರೆ ಕೆಲವೊಂದು ನಿಯಮಗಳನ್ನು ನಿಯಮಿತವಾಗಿ ಪಾಲಿಸಿ. ಸುಲಭವಾಗಿ ನಿದ್ರೆ ನಿಮ್ಮನ್ನು ಆವರಿಸುತ್ತೆ.

ಯೋಗ ಮಾಡುವುದ್ರಿಂದ ಆರಾಮದ ಅನುಭವವಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಸುಖ ನಿದ್ರೆ ಬರುತ್ತದೆ. ಹಾಗಾಗಿ ಪ್ರತಿದಿನ ಯೋಗವನ್ನು ತಪ್ಪದೆ ಮಾಡಿ.

ರಾತ್ರಿ ಮಲಗುವ ಮೊದಲು ಕಾಫಿ ಅಥವಾ ಟೀಯನ್ನು ಕುಡಿಯಬೇಡಿ. ಇದು ರಾತ್ರಿ ನಿದ್ರೆಗೆ ಅಡ್ಡಿಯುಂಟು ಮಾಡುತ್ತದೆ.

ಪ್ರತಿದಿನ ಒಂದೇ ಸಮಯಕ್ಕೆ ನಿದ್ರೆ ಮಾಡಿ. ಏಳುವ ಸಮಯ ಕೂಡ ಒಂದೇ ಆಗಿರಲಿ. ಸಮಯದ ಬದಲಾವಣೆಯಿಂದ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ತಡ ರಾತ್ರಿಯವರೆಗೆ ಮೊಬೈಲ್ ಹಿಡಿದು ಕುಳಿತುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ತಡ ರಾತ್ರಿಯವರೆಗೆ ಎಚ್ಚರವಿರುವುದ್ರಿಂದ ಸಮಯ ತಪ್ಪಿ ಸರಿಯಾಗಿ ನಿದ್ರೆ ಬರುವುದಿಲ್ಲ.

ಪ್ರತಿನಿತ್ಯ ಮೊಸರು ಸೇವಿಸಿದ್ರೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

Posted: 11 Apr 2019 01:58 AM PDT

ಊಟದ ಕೊನೆಯಲ್ಲಿ ಸ್ವಲ್ಪ ಗಟ್ಟಿ ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಏನು ಆ ಲಾಭಗಳು ತಿಳಿಯೋಣ.

ಜೀರ್ಣಕ್ರಿಯೆ

ಮೊಸರಿನಲ್ಲಿ ಪ್ರೊಬಯೊಟಿಕ್ ಬ್ಯಾಕ್ಟೀರಿಯಾಗಳಿದ್ದು, ಇವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಹೀಗಾಗಿ ಅಸಿಡಿಟಿ, ಗ್ಯಾಸ್ಟಿಕ್ ಸಮಸ್ಯೆ ಇರುವವರು ಮೊಸರು ಸೇವಿಸಿದರೆ ಒಳ್ಳೆಯದು.

ರೋಗ ನಿರೋಧಕ

ಮೊಸರಿನಲ್ಲಿರುವ ಅಂಶಗಳು ನಮ್ಮ ದೇಹಕ್ಕೆ ಬೇಡದ ರೋಗಾಣುಗಳು ಬಾರದಂತೆ ತಡೆದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸೌಂದರ್ಯ

ಮೊಸರಿನಲ್ಲಿ ತೇವಾಂಶ ಗುಣವಿದ್ದು, ಇದನ್ನು ಸೇವಿಸುವುದರಿಂದ ಚರ್ಮದ ತೇವಾಂಶ ಹೆಚ್ಚಿ ಸೌಂದರ್ಯ ವರ್ಧಿಸುತ್ತದೆ. ಹಲವು ಫೇಸ್ ಪ್ಯಾಕ್ ಗಳಲ್ಲಿ ಮೊಸರನ್ನು ಬಳಸಲಾಗುತ್ತದೆ.

ರಕ್ತದೊತ್ತಡ

ಕಡಿಮೆ ಕೊಬ್ಬಿನಂಶವಿರುವ ಮೊಸರು ಸೇವನೆಯಿಂದ ಶೇ.31 ರಷ್ಟು ರಕ್ತದೊತ್ತಡ ಸಮಸ್ಯೆ ಕಡಿಮೆಯಿರುತ್ತದೆ ಎಂದು ಹಲವು ಅಧ್ಯಯನ ವರದಿಗಳು ಹೇಳಿವೆ.

ಮೂತ್ರ ಸಮಸ್ಯೆ

ಮೂತ್ರ ಸಂಬಂಧಿ ಸೋಂಕು ಇತ್ಯಾದಿ ಸಮಸ್ಯೆಗಳಿಗೆ ಮೊಸರು ಪರಿಹಾರ ನೀಡುತ್ತದೆ.

ಕೈ ತುಂಬ ಸಂಬಳ ಬರುವ ಕೆಲಸ ಬಿಟ್ಟು ಈ ಕಾರ್ಯಕ್ಕೆ ಮುಂದಾದ ಐಐಟಿ ಪದವೀಧರ

Posted: 11 Apr 2019 01:56 AM PDT

ಐಐಟಿ ಪದವಿ ಜೊತೆಗೆ ಕೈತುಂಬಾ ಸಂಬಳ ಬರುವ ಕೆಲಸ ಇದ್ದರೂ ಅದನ್ನು ಬಿಟ್ಟು ಪ್ರವಾಹ ಪೀಡಿತ ಪ್ರದೇಶದಲ್ಲಿ ಶಾಲೆ ನಿರ್ಮಿಸಿ ಅಲ್ಲಿನ ಅವಕಾಶವಂಚಿತ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಇಲ್ಲೊಬ್ಬರು ಮಾದರಿ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಸತಾರಾ ಎಂಬಲ್ಲಿನ ಇಂಜಿನಿಯರ್ ಬಿಪಿನ್ ಧಾನೆ ಎಂಬ 29 ವರ್ಷದ ವ್ಯಕ್ತಿ ಇಂಥದ್ದೊಂದು ಸಾಧನೆ ಮಾಡಿದ್ದಾರೆ. ತಂದೆ-ತಾಯಿಯ ಕನಸಿನಂತೆ 2013ರಲ್ಲಿ ಐಐಟಿ ಖರಗ್‍ಪುರದಲ್ಲಿ ಪದವಿ ಪಡೆದ ಇವರು ಬಳಿಕ ಸಿಂಗಾಪುರದಲ್ಲಿನ ಕಂಪನಿಯಲ್ಲಿ ಒಳ್ಳೆಯ ಉದ್ಯೋಗವನ್ನೂ ಪಡೆದಿದ್ದರು. ಆದರೆ ಆ ಕೆಲಸದಲ್ಲಿ ನೆಮ್ಮದಿ ಇಲ್ಲ ಎನಿಸಿದ ಬಿಪಿನ್, ಎರಡೇ ವರ್ಷದಲ್ಲಿ ಅದನ್ನು ಬಿಟ್ಟರು.

ಬಳಿಕ ಅಸ್ಸಾಮ್‍ ನಲ್ಲಿನ ಪ್ರವಾಹಪೀಡಿತ ದ್ವೀಪ ಜಿಲ್ಲೆ ಮಜೂಲಿಯಲ್ಲಿ ಅಲ್ಲಿನ ಮಕ್ಕಳಿಗೆಂದೇ 2017ರಲ್ಲಿ ದ ಹಮ್ಮಿಂಗ್‍ಬರ್ಡ್ ಸ್ಕೂಲ್ ಆರಂಭಿಸಿದರು. ತಮ್ಮ ಉಳಿತಾಯದ ಹಣವನ್ನು ವಿನಿಯೋಗಿಸಿ ಆರಂಭಿಸಿದ ಇವರ ಪ್ರಯತ್ನಕ್ಕೆ ಅಲ್ಲಿನ ಜನ ಜಾಗ, ಬಿದಿರು, ಮರ ಇತ್ಯಾದಿ ಎಲ್ಲ ಅಗತ್ಯ ವಸ್ತುಗಳನ್ನು ನೀಡಿ ಸಹಕರಿಸಿದರು. ನಂತರ ಅನೇಕ ಎನ್‍ಜಿಒಗಳು ನೆರವಾಗಿದ್ದು, ಅಲ್ಲೀಗ 20 ಬೋಧಕರು, 10 ಬೋಧಕೇತರ ಸಿಬ್ಬಂದಿ ಇದ್ದು, 240 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ವಿಶ್ವದ ಅತಿ ದೊಡ್ಡ ಈಜುಕೊಳದ ವೈಶಿಷ್ಟ್ಯವೇನು ಗೊತ್ತಾ?

Posted: 11 Apr 2019 01:53 AM PDT

ಪ್ರಪಂಚದ ಆಳವಾದ ಈಜುಕೊಳವೊಂದು ಪೋಲ್ಯಾಂಡ್ ನ ರಾಜಧಾನಿ ವಾರ್ಸಾ ಹತ್ತಿರವಿರುವ ಮೆಸಾಕ್ಸೋನೌ ಎಂಬಲ್ಲಿ ನಿರ್ಮಾಣವಾಗುತ್ತಿದೆ.

ಈಜುಕೊಳಗಳು ಸಾಮಾನ್ಯವಾಗಿ 25 ಮೀಟರ್ ನಷ್ಟು ಇರುತ್ತದೆ. ಆದರೆ ಈ ಈಜುಕೊಳ 45 ಮೀಟರ್ ನಷ್ಟು ದೊಡ್ಡದಿದೆ. ಇದರ ನೀರಿನ ಸಾಮರ್ಥ್ಯ ಸಹ ಹೆಚ್ಚಿಗೆ ಇದೆ. 8000 ಕ್ಯೂಬಿಕ್ ಮೀಟರ್ ನಷ್ಟು ನೀರಿನ ಸಾಮರ್ಥ್ಯ ಹಿಡಿದಿಟ್ಟಿಕೊಳ್ಳಬಹುದಾದ ಈಜುಕೊಳವಿದು.

ಅಂದರೆ 25 ಮೀಟರ್ ನ ಈಜುಕೊಳದಲ್ಲಿ ಹಿಡಿದಿಟ್ಟುಕೊಳ್ಳಬಹುದಾದ ನೀರನ ಸಾಮರ್ಥ್ಯಕ್ಕಿಂತ 27 ಪಟ್ಟು ಹೆಚ್ಚು ಅಧಿಕ ನೀರನ್ನ ಸಂಗ್ರಹಿಸಿಡಬಹುದು.

15 ಬಹುಮಹಡಿ ಕಟ್ಟಡ ಎಷ್ಟು ಆಳವಾಗಿರುತ್ತದೆಯೋ ಅಷ್ಟು ಅಡಿಯಷ್ಟು ಆಳವನ್ನ ಈ ಈಜುಕೊಳದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿರುವ ನೀರು ಮಾಮೂಲಿ ಈಜುಕೊಳದಲ್ಲಿರುವ ನೀರಿಗಿಂತ ಬೆಚ್ಚನೆಯದಾಗಿರುತ್ತದೆ. ಇದರಿಂದ ಈಜು ಹೊಡೆಯುವವರಿಗೆ ಹೆಚ್ಚಿನ ಆರಾಮದಾಯಕವಾದ ಅನುಭವ ನೀಡುತ್ತದೆಯಂತೆ.

ನೋಡುಗರಿಗೆ ಮತ್ತು ಈಜು ಹೊಡೆಯಲು ಬರುವವರಿಗೆ ಸ್ವಚ್ಛ ಹಾಗೂ ಪಾರದರ್ಶಕವಾಗಿ ಕಾಣಿಸಲು ದಿನ ಈ ಕೊಳದ ನೀರನ್ನ 15 ಬಾರಿ ಸಂಸ್ಕರಿಸಲಾಗುವುದು.

ಈಜು ತರಬೇತಿ ಕೇಂದ್ರದಲ್ಲಿ ಕಲಿಯಲು ಬರುವವರಿಗೆ ಈಜು ನೋಡುವವರಿಗೆ ಹಾಗೂ ನುರಿತ ಅನುಭವವಿರುವವರಿಗೆ ಸಾಕಷ್ಟು ಅವಕಾಶಗಳನ್ನ ಕಲ್ಪಿಸಲಾಗಿದೆ. ಇಲ್ಲಿ ಪಾರದರ್ಶಕ ನೀರಿನ ಸುರಂಗದ ವ್ಯವಸ್ಥೆ ಮಾಡಲಾಗಿದೆ ಇದರಿಂದ ಈಜುಕೊಳದಲ್ಲಿ ಇಳಿಯುವವರನ್ನ ನೋಡಲು ಬಯಸುವವರಿಗೆ ಈಜುವ ವ್ಯಕ್ತಿ ಎಲ್ಲಿದ್ದಾನೆ ಎಂದು ಸರಾಗವಾಗಿ ಗುರುತಿಸಲು ಈ ಸುರಂಗ ಮಾರ್ಗ ಅನುಕೂಲ ಮಾಡಿಕೊಡುತ್ತದೆ. ಇದರ ಜೊತೆಗೆ, ರೆಸ್ಟೋರೆಂಟ್, ಲಾಡ್ಜಿಂಗ್ ವ್ಯವಸ್ಥೆ ಸಹ ಈ ದೊಡ್ಡ ಈಜುಕೊಳದಲ್ಲಿ ಕಲ್ಪಿಸಲಾಗಿದೆ.

ಇಟಲಿಯ ವಿನೈಸ್ ನಗರದ ರೆಸಾರ್ಟ್ ಏರಿಯಾದಲ್ಲಿನ ಮಾಂಟೆಗ್ರೆಟೋದಲ್ಲಿ Y- 40 ಡೀಪ್ ಜಾಯ್ ಎಂಬ ಈಜುಕೊಳ ಸದ್ಯಕ್ಕೆ ವಿಶ್ವದ ಅತಿದೊಡ್ಡ ಈಜುಕೊಳವಾಗಿದೆ. ಪೋಲಾಂಡ್ ನಲ್ಲಿ ಈ ಈಜುಕೊಳ ನಿರ್ಮಾಣವಾದರೆ ಇದೇ ವಿಶ್ವದ ಅತಿದೊಡ್ಡ ಈಜುಕೊಳವಾಗಲಿದೆ.

ನಿಮ್ಮ ಸ್ಮಾರ್ಟ್ ಫೋನ್ ನಲ್ಲೂ ಇದೆಯಾ ಈ ಫೀಚರ್…?‌ ಹಾಗಿದ್ರೆ ತಪ್ಪದೇ ಓದಿ

Posted: 11 Apr 2019 01:45 AM PDT

ನಿಮ್ಮ ಮೊಬೈಲ್ ಫೋನ್ ನಲ್ಲಿ ಲಾಕ್ ಹಾಗೂ ಅನ್ ಲಾಕ್ ಸಿಸ್ಟಮ್ ಗಾಗಿ ಯಾವ ತಂತ್ರಜ್ಞಾನ ಬಳಸಲಾಗಿದೆ? ಮುಖ ಚಹರೆ ಗುರುತಿಸುವಿಕೆಯ ವೈಶಿಷ್ಟ್ಯವನ್ನ ನಿಮ್ಮ ಮೊಬೈಲ್ ಗೆ ಅಳವಡಿಸಿಕೊಂಡು ಲಾಕ್ ಹಾಗೂ ಅನ್ ಲಾಕ್ ಸಿಸ್ಟಮ್ ಬಳಸಲಾಗುತ್ತಿದೆಯಾ? ಹಾಗಾದರೆ ನೀವು ಹುಷಾರಾಗಿರಿ!

ಚೀನಾದಲ್ಲಿ ಇಂತಹದ್ದೊಂದು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡ ಪ್ರಕರಣ ಬಯಲಿಗೆ ಬಂದಿದೆ. ನಿಂಗ್ಬೋ ನಗರದಲ್ಲಿ ಯಾನ್ ಎಂಬಾತ ಡಾರ್ಮೆಂಟರಿಯಲ್ಲಿ ಕೆಲಸ ಮಾಡಿ ಮಲಗಿರುವಾಗ ಆತನ ರೂಂ ಮೇಟ್ ಗಳಾದ ಲಿಯೂ ಮತ್ತು ಯಾಂಗ್ ಎಂಬುವವರು ಫೋನ್ ಕದ್ದಿದ್ದಾರೆ. ಕದ್ದನಂತರ ಆತನ ಅಕೌಂಟ್ ನಲ್ಲಿದ್ದ 1000 ಯೆನ್ ನ್ನ (1.03 ಲಕ್ಷ ರೂ.ಗಳು) ತಮ್ಮ ಅಕೌಂಟ್ ಗೆ ವರ್ಗಾಯಿಸಿಕೊಂಡಿದ್ದಾರೆ.

ಈ ಇಬ್ಬರು ಖದೀಮರು ಯಾನ್ ನ ಮೊಬೈಲ್ ಕದ್ದಿರುವುದು ಸಹ ಸ್ವಾರಸ್ಯಕರವಾಗಿದೆ. ಏಕೆಂದರೆ ಯಾನ್ ತನ್ನ ಮೊಬೈಲ್ ನ ಲಾಕ್ ಹಾಗೂ ಅನ್ ಲಾಕ್ ಸಿಸ್ಟಮ್ ಗೆ ಮುಖಚರ್ಯೆ ಬಳಸಿಕೊಂಡಿದ್ದ. ಹೀಗಾಗಿ ಲೀಯೂ ಮತ್ತು ಯಾಂಗ್ ಆತ ಮಲಗಿದ್ದಾಗ ಅವನ ಮುಖಚಹರೆಯ ಬಳಿ ಕದ್ದ ಮೊಬೈಲ್ ತಂದು ಲಾಕ್ ಓಪನ್ ಮಾಡಿದ್ದಾರೆ.

ಆದರೆ ಇಲ್ಲಿ ಒಂದು ಆಶ್ಚರ್ಯಕರ ಸಂಗತಿ ಇದೆ. ಮೊಬೈಲ್ ನಲ್ಲಿ ವ್ಯಕ್ತಿಯ ಮುಖಚಹರೆ ಬಳಸಿ ಲಾಕ್ ಮತ್ತು ಅನ್ ಲಾಕ್ ನ ತಂತ್ರಜ್ಞಾನ ಉಪಯೋಗಿಸುವಾಗ ತೆರೆದ ಕಣ್ಣು ಸ್ಕ್ಯಾನ್ ಆಗುವುದರಿಂದ ಕಣ್ಣು ಮುಚ್ಚಿದ ಸ್ಥಿತಿಯಲ್ಲಿದ್ದರೆ ಮೊಬೈಲ್ ಲಾಕ್ ತೆರೆಯುವುದಿಲ್ಲ. ಆದರೆ ಚೀನಾ ಸ್ಮಾರ್ಟ್ ಫೋನ್ ಗಳು ವ್ಯಕ್ತಿಯ ಕಣ್ಣು ಮುಚ್ಚಿದ ಸ್ಥಿತಿಯಲ್ಲಿದ್ದರೂ ಲಾಕ್ ಓಪನ್ ಆಗುತ್ತದೆ ಎಂದು ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಮೂಲಕ ಬಹಿರಂಗಗೊಳಿಸಿದ್ದಾರೆ.

3 ವರ್ಷದ ಮಗ ಮಾಡಿದ ಕೆಲಸ ಕಂಡು ಅಪ್ಪ ಕಂಗಾಲು

Posted: 11 Apr 2019 01:41 AM PDT

ನಮ್ಮ ಮೊಬೈಲ್, ಟ್ಯಾ‌ಬ್ ಹಾಗೂ ಐಪ್ಯಾಡ್ ಗಳಲ್ಲಿ ತಪ್ಪು ಪಾಸ್ ವರ್ಡ್ ಎಂಟ್ರಿ ಮಾಡಿದರೆ ಏನಾಗಬಹುದು? ಅದಕ್ಕೆ ಫರ್ಗೆಟನ್ ಬಟನ್ ಒತ್ತಿ ಎಂದು ಬದಲೀ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಇದನ್ನ ಬಳಸಿ ತಮ್ಮ ಡಿವೈಸ್ ಗಳನ್ನ ಪುನರ್ ಬಳಕೆ ಮಾಡಿಕೊಳ್ಳಬಹುದು. ಆದರೆ ಮೂರು ವರ್ಷದ ಮಗು ತನ್ನ ತಂದೆಯ ಐ ಪ್ಯಾಡ್ ನ ಲಾಕ್ ಸಿಸ್ಟಮ್ ಓಪನ್ ಮಾಡಲು ಹೋಗಿ ತಪ್ಪು ಪಾಸ್ ವರ್ಡ್ ಗಳನ್ನ ಸತತವಾಗಿ ಎಂಟ್ರಿ ಮಾಡಿದ ಪರಿಣಾಮ ಐಪ್ಯಾಡ್ ಲಾಕ್ ಆಗಿದೆ.

ಐ ಪ್ಯಾಡ್ ಡಿಸೆಬಲ್ ಆಗಿದ್ದು, 25,536,442 ನಿಮಿಷದ ಬಳಿಕ ಬಳಸಲು ಪ್ರಯತ್ನಿಸಿ ಎಂಬ ಸಂದೇಶ ಐಪ್ಯಾಡ್ ನಲ್ಲಿ ಪ್ರಕಟವಾಗಿದೆ.

ಅಂದರೆ ಈ ನಿಮಿಷಗಳನ್ನು ವರ್ಷಕ್ಕೆ ಬದಲಿಸಿಕೊಂಡರೆ 48 ವರ್ಷಗಳಾಗುತ್ತವೆ‌. 48 ವರ್ಷಗಳ ಬಳಿಕ ಮತ್ತೆ ಐ ಪ್ಯಾಡ್ ಬಳಕೆ ಮಾಡುವಂತೆ ತಿಳಿಸಿದೆ. 25,536,442 ನಿಮಿಷಗಳ ಬಳಿಕ ಬಳಕೆ ಮಾಡಿ ಎಂಬ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗುವಿನ ತಂದೆ ಅಮೆರಿಕಾದ ವಾಷಿಂಗ್ ಟನ್-ಡಿಸಿಯಲ್ಲಿ ಪತ್ರಕರ್ತ ವೃತ್ತಿ ಮಾಡುತ್ತಿರುವ ಇವಾನ್ ಓಸನಸ್ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಚಿತ್ರಕ್ಕೆ ಅನೇಕ ಸ್ವಾರಸ್ಯಕರ ಪ್ರತಿಕ್ರಿಯೆಗಳು ದೊರೆತಿದೆ.

ನಿಮ್ಮ ಮಗನಿಗೆ ತಕ್ಷವೇ ಟೈಂ ಕ್ಯಾಪ್ಸೂಲ್ ನೀಡಿ 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲು ತಿಳಿಸಿ. ಆಗ ನಿಮ್ಮ ಐಪ್ಯಾಡ್ ಬಳಸಲು ಅವಕಾಶ ಸಿಗುತ್ತದೆ ಎಂದು ಓರ್ವ ಟ್ವೀಟ್ ಮಾಡಿದರೆ, ಇದೇ ರೀತಿ ಇತರೆ ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ.

ಬ್ರೆಡ್ ಫ್ರೆಶ್ ಆಗಿ ಇಡಲು ಈ ‘ಉಪಾಯ’ ಮಾಡಿ ನೋಡಿ

Posted: 11 Apr 2019 01:18 AM PDT

ಪ್ರಿಸರ್ವೇಟಿವ್ ಬಳಸದೇ ಮಾಡುವ ಬ್ರೆಡ್ ಗಳನ್ನು ತುಂಬಾ ಸಮಯ ಹಾಳಾಗದಂತೆ ಇಡಲು ಇಲ್ಲಿದೆ ಉಪಾಯ.

ನೀರು ಚಿಮುಕಿಸಿ

ಬ್ರೆಡ್ ತಂದು ಎರಡು ದಿನವಾಯಿತು ಇನ್ನೇನು ಹಾಳಾಗುತ್ತದೆ ಎಂದಾದರೆ ಸ್ವಲ್ಪ ನೀರು ಚಿಮುಕಿಸಿ ಮೈಕ್ರೋ ಓವನ್ ನಲ್ಲಿಟ್ಟು ಬಿಸಿ ಮಾಡಿ.

ಫ್ರೀಜ್ ಮಾಡಿ

ಒಂದು ಗಾಳಿಯಾಡದ ಕವರ್ ನಲ್ಲಿ ಸುತ್ತಿ ಬ್ರೆಡ್ ಅನ್ನು ಫ್ರೀಜ್ ಮಾಡಿ. ಇದರಿಂದ ಫಂಗಸ್ ಬೆಳೆಯುವುದು ಇಲ್ಲವಾಗುತ್ತದೆ.

ಅಲ್ಯುಮಿನಿಯಂ ಕವರ್

ಬ್ರೆಡ್ ನ್ನು ಅಲ್ಯುಮಿನಿಯಂ ಕವರ್ ನಲ್ಲಿ ಗಾಳಿಯಾಡದಂತೆ ಸುತ್ತಿಟ್ಟರೆ ಹೆಚ್ಚು ಸಮಯ ಬಾಳ್ವಿಕೆ ಬರುವುದು.

ಕೋಣೆಯ ಉಷ್ಣತೆಯಲ್ಲಿರಲಿ

ಬ್ರೆಡ್ ನ್ನು ಫ್ರಿಡ್ಜ್ ನಲ್ಲಿಡಬೇಡಿ. ಇದು ಸಾಮಾನ್ಯ ರೂಂ ಟೆಂಪರೇಚರ್ ನಲ್ಲಿಟ್ಟರೆ ಹೆಚ್ಚು ಕಾಲ ಉಳಿಯುವುದು.

ಮೋದಿ ವಿರುದ್ದ ಟೀಕೆಗೆ ಕಾರಣವಾಯ್ತು ಇಮ್ರಾನ್‌ ಹೇಳಿಕೆ

Posted: 11 Apr 2019 01:15 AM PDT

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಆಧರಿಸಿ ವಿರೋಧ ಪಕ್ಷದವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಮುಂದಿನ ಚುನಾವಣೆ ಬಳಿಕ ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದರೆ ಜಮ್ಮು-ಕಾಶ್ಮೀರದ ವಿಷಯದಲ್ಲಿ ಭಾರತದೊಂದಿಗೆ ಶಾಂತಿ ಮಾತುಕತೆ ಸುಲಭ ಎಂದು ಇಮ್ರಾನ್ ಖಾನ್ ಹೇಳಿದ್ದರೆಂಬುದಾಗಿ ವರದಿಯಾಗಿತ್ತು.

ಇದರ ಮೇರೆಗೆ ಮೋದಿ ವಿರುದ್ಧ ಟೀಕೆಗಿಳಿದ ಪ್ರತಿಪಕ್ಷದವರು, “ಮೋದಿಗೆ ಮತ ಹಾಕಿದರೆ ಪಾಕ್‌ಗೆ ಮತ ಹಾಕಿದಂತೆ…..”, “ಮೋದಿಜೀ.. ಮೊದಲು ನವಾಜ್ ಷರೀಫ್, ಈಗ ಇಮ್ರಾನ್……ನಿಮ್ಮ ಬಣ್ಣ ಬಯಲಾಯಿತು…..” ಎಂದೆಲ್ಲ ವಾಗ್ದಾಳಿ ಹರಿಸಿದ್ದಾರೆ.

ಕಳೆದು ಹೋದವನ ಮನೆ ಪತ್ತೆಗೆ ನೆರವಾಯ್ತು ʼಆಧಾರ್ʼ

Posted: 11 Apr 2019 01:00 AM PDT

ಎಷ್ಟೋ ಸಲ ಕಳೆದು ಹೋದವರು ಪತ್ತೆಯಾದಾಗ ಪೊಲೀಸರಿಗೆ ಎದುರಾಗುವ ಮತ್ತೊಂದು ಸವಾಲೆಂದರೆ ಅವರ ಮನೆಯವರನ್ನು ಪತ್ತೆ ಮಾಡುವುದು. ಇಲ್ಲೊಂದು ಅಂಥದ್ದೇ ಪ್ರಕರಣ ಎದುರಾಗಿದ್ದರೂ ಪೊಲೀಸರು ಸುಲಭದಲ್ಲಿ ಆತನ ಮನೆಯವರನ್ನು ಪತ್ತೆ ಮಾಡಿದ್ದಾರೆ.

ಕುಸ್ತಿಪಟು ಆಗಬೇಕು ಎಂದು ಬಯಸಿದ್ದ ಯುವಕನೊಬ್ಬ ಮೂರು ವರ್ಷದ ಹಿಂದೆ ಮನೆಬಿಟ್ಟು ಬಂದಿದ್ದ. ದೆಹಲಿ ಪೊಲೀಸರು ಇತ್ತೀಚೆಗೆ ಈತನನ್ನು ಜೈಪುರದಲ್ಲಿ ಪತ್ತೆ ಮಾಡಿದ್ದರು. ಆದರೆ ಆತನ ಮನೆಯನ್ನು ಪತ್ತೆ ಮಾಡುವುದು ಸವಾಲಾಗಿತ್ತು. ಆಗ ಪೊಲೀಸರ ನೆರವಿಗೆ ಬಂದಿದ್ದು ಆಧಾರ್.

ಪತ್ತೆಯಾದವನ ಆಧಾರ್ ಗುರುತು ಪತ್ತೆ ಮಾಡಿದಾಗ ಮೂರು ದಿನಗಳ ಹಿಂದೆ ಅದಕ್ಕೆ ಮೊಬೈಲ್‍ ಫೋನ್ ನಂಬರ್ ಒಂದು ಲಿಂಕ್ ಆಗಿರುವುದು ಕಂಡುಬಂದಿತ್ತು. ಆ ನಂಬರ್ ಮೂಲಕ ಪೊಲೀಸರು ನಾಪತ್ತೆಯಾಗಿ ಸಿಕ್ಕವನ ಮನೆಯವರನ್ನು ಸಂಪರ್ಕಿಸಿ ವಿಳಾಸ ಪತ್ತೆ ಮಾಡಿದ್ದಾರೆ.

ದೀಪಿಕಾರ ‌ʼಛಪಾಕ್‌ʼ ಸಿನಿಮಾದ ಸೀನ್ ಲೀಕ್

Posted: 11 Apr 2019 12:43 AM PDT

ಯಾವುದೇ ಸಿನಿಮಾ ಹೆಚ್ಚಿನ ನಿರೀಕ್ಷೆ ಮೂಡಿಸಿದಾಗ ಆದರ ಬಗ್ಗೆ ಕುತೂಹಲ ಹೆಚ್ಚಾಗುವುದು ಕೂಡ ಸಹಜ. ಇದೀಗ ಇನ್ನಷ್ಟೇ ಬಿಡುಗಡೆ ಆಗಬೇಕಿರುವ ಹಿಂದಿ ಸಿನಿಮಾ “ಛಪಾಕ್” ವಿಷಯದಲ್ಲೂ ಹೀಗೇ ಆಗಿದೆ. ಏಕೆಂದರೆ ಆ ಸಿನಿಮಾದ ದೃಶ್ಯದ ತುಣುಕೊಂದು ಲೀಕ್ ಆಗಿದೆ.

“ಛಪಾಕ್”ನಲ್ಲಿ ಪ್ರಮುಖ ಪಾತ್ರ ಮಾಡಿರುವ ನಟಿ ದೀಪಿಕಾ ಪಡುಕೋಣೆ ವಿಶಿಷ್ಟ ಮೇಕಪ್‍ನೊಂದಿಗೆ ಹಳದಿ ಉಡುಪಿನಲ್ಲಿ ಕಾಣಿಸಿಕೊಂಡರೆ, ನಟ ವಿಕ್ರಾಂತ್ ಮಸ್ಸಿ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯ ಇದೀಗ ಚಿತ್ರದ ಕುರಿತ ಕುತೂಹಲ ಹೆಚ್ಚಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದು ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್‍ವಾಲ್ ಕುರಿತ ಸಿನಿಮಾ ಆಗಿದ್ದು, ದೀಪಿಕಾ ಇದರಲ್ಲಿ ಲಕ್ಷ್ಮೀ ಅಗರ್‍ವಾಲ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಲಕ್ಷ್ಮಿಯವರ ಗೆಳೆಯ ಹಾಗೂ ಸಾಮಾಜಿಕ ಕಾರ್ಯಕರ್ತ ಅಲೋಕ್ ದೀಕ್ಷಿತ್ ಪಾತ್ರವನ್ನು ವಿಕ್ರಾಂತ್ ಮಾಡಿದ್ದಾರೆ.

‘ನೋಡ್ರಿ…..ಡೈರಿಲೀ ಬರೆದಿಟ್ಟುಕೊಳ್ಳಿ…….ಮೋದಿ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿ’

Posted: 11 Apr 2019 12:17 AM PDT

ಮೈತ್ರಿ ಸರ್ಕಾರ ಕೈಗೊಳ್ಳುವ ಕೆಲವು ನಿರ್ಧಾರಗಳ ಸಂದರ್ಭದಲ್ಲಿ ಅವುಗಳಿಗೆ ಶುಭ ಗಳಿಗೆ ನೀಡುವ ಹಾಗೂ ಆಗಾಗ ಭವಿಷ್ಯ ನುಡಿಯುವ ಸಚಿವ ಹೆಚ್.ಡಿ. ರೇವಣ್ಣ ಈಗ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯದ ಕುರಿತು ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೋದಿ ರಾಜ್ಯ ಹಾಗೂ ರಾಷ್ಟ್ರದ ಜನತೆಗೆ ಟೋಪಿ ಹಾಕಿದ್ದಾಗಿದೆ. ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಈ ಬಾರಿ ಏನಾದರೂ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಅಲ್ಲದೆ, ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ರೇವಣ್ಣ, ನಾವು ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುತ್ತೇವೆ. 22 ಹಾಗೂ 9 ನಮಗೆ ಲಕ್ಕಿ ನಂಬರ್ ಆಗಿದ್ದು, 18 ರಂದು ಚುನಾವಣೆ ನಡೆಯುವ ಕಾರಣ 1+8=9 ಆಗುತ್ತದೆ. ಹೀಗಾಗಿ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸುಮಲತಾ ಅಂಬರೀಶ್ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ‘ಆರೋಪ’

Posted: 11 Apr 2019 12:00 AM PDT

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆಯುತ್ತಿದೆ.

ಉಭಯ ಪಕ್ಷಗಳ ಅಭ್ಯರ್ಥಿಗಳು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಈ ಮೊದಲು ಸುಮಲತಾ ಅಂಬರೀಶ್, ಜೆಡಿಎಸ್ ನಾಯಕರು ಫೋಟೋ ಹಾಗೂ ವಿಡಿಯೋ ಮಾರ್ಫ್ ಮಾಡುವ ಮೂಲಕ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೀಳುಮಟ್ಟದ ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದರು.

ಇದೀಗ ಪುತ್ರನ ಪರ ಮಂಡ್ಯದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸುಮಲತಾ ಅಂಬರೀಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ, ಏಪ್ರಿಲ್ 16ರಂದು ತಮ್ಮ ಕಡೆಯವರಿಂದಲೇ ಕಲ್ಲು ಹೊಡೆಸಿಕೊಂಡು ಆಸ್ಪತ್ರೆಗೆ ದಾಖಲಾಗುವ ಮೂಲಕ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳಲು ಹೊಂಚು ಹಾಕುತ್ತಿದ್ದಾರೆ. ನಾವ್ಯಾರು ಇಂತಹ ಕುತಂತ್ರದ ರಾಜಕಾರಣ ಮಾಡುತ್ತಿಲ್ಲವೆಂದು ಹೇಳಿದ್ದಾರೆ.

ಪುತ್ರ – ಪುತ್ರಿಯ ಜೊತೆ ಪ್ರಿಯಾಂಕಾ ಗಾಂಧಿ ಸೆಲ್ಫಿ

Posted: 10 Apr 2019 11:50 PM PDT

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರದಂದು ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಲುವಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದು ಈ ವೇಳೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ, ಅವರ ಪತಿ ರಾಬರ್ಟ್ ವಾದ್ರಾ ಹಾಗೂ ಪ್ರಿಯಾಂಕಾರ ಇಬ್ಬರು ಮಕ್ಕಳು ಹಾಜರಿದ್ದರು.

ಸಹೋದರನ ನಾಮಪತ್ರ ಸಲ್ಲಿಕೆ ಬಳಿಕ ಪ್ರಿಯಾಂಕ ಗಾಂಧಿ ತಮ್ಮ ಮಕ್ಕಳಾದ ಮಿರಯಾ ವಾದ್ರಾ ಹಾಗೂ ರೆಹಾನ್ ವಾದ್ರಾ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಇದನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿವೆ.

ರಾಹುಲ್ ಗಾಂಧಿ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದಲೂ ಕಣಕ್ಕಿಳಿಯುತ್ತಿದ್ದು, ಅವರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಪ್ರಿಯಾಂಕಾ ಪತ್ರಕರ್ತರೊಬ್ಬರು ಗಾಯಗೊಂಡು ಕೆಳಗೆ ಬಿದ್ದಿದ್ದ ವೇಳೆ ಅವರ ಶೂಗಳನ್ನು ಕೈಯಲ್ಲಿ ಹಿಡಿದುಕೊಂಡು ತಂದುಕೊಟ್ಟಿದ್ದರು. ಆ ಸಂದರ್ಭದಲ್ಲಿ ತೆಗೆದ ಫೋಟೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.