Translate

Post Your Self

Hello Dearest Gameforumer.com readers

Its your chance to get your news, articles, reviews on board, just use the link: PYS

Thanks and Regards

Tuesday, March 19, 2019

Kannada News | Karnataka News | India News

Kannada News | Karnataka News | India News


‘ಹೋಳಿ ಹಬ್ಬ’ದಂದು ಈ ಕೆಲಸ ಮಾಡಿದರೆ ಬೀಳುತ್ತೆ ಕೇಸ್

Posted: 19 Mar 2019 08:59 AM PDT

ಶಿವಮೊಗ್ಗ ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಣೆ ವೇಳೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ಬಣ್ಣದ ಜೊತೆ ಆಯಿಲ್ ಪೇಂಟ್, ಮೊಟ್ಟೆ, ಟೊಮೇಟೊ ಉಪಯೋಗಿಸಬಾರದು. ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಮಾಡಿಕೊಂಡು ಜೋರಾಗಿ ಕೂಗಾಡುವುದನ್ನು ಮಾಡಿದರೆ ಕಾನೂನಿನಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಅಲ್ಲದೆ ಸರ್ಕಾರಿ-ಖಾಸಗಿ ಕೆಲಸಗಳಿಗೆ ಹೋಗುವ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಲವಂತವಾಗಿ ಬಣ್ಣ ಎರಚಬಾರದು ಎಂದು ಸೂಚಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ವಿಮಾನ ಪ್ರಯಾಣಿಕನ ಗುದದ್ವಾರದಲ್ಲಿತ್ತು ಅರ್ಧ ಕೆಜಿಗೂ ಅಧಿಕ ‘ಚಿನ್ನ’

Posted: 19 Mar 2019 08:49 AM PDT

ಚಿನ್ನ ಕಳ್ಳಸಾಗಣೆದಾರರು ಸುಂಕದವರ ಕಣ್ಣು ತಪ್ಪಿಸಿ ವಿದೇಶದಿಂದ ದೇಶದೊಳಗೆ ಚಿನ್ನ ತರಲು ತರಹೇವಾರಿ ಮಾರ್ಗಗಳನ್ನು ಅನುಸರಿಸುತ್ತಾರೆ. ಕೆಲವೊಮ್ಮೆ ಇದಕ್ಕಾಗಿ ಅಪಾಯಕಾರಿ ಮಾರ್ಗಗಳ ಮೊರೆ ಹೋಗುತ್ತಾರೆ. ಅಂತಹ ಒಂದು ವರದಿ ಇಲ್ಲಿದೆ.

ದುಬೈನಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನೊಬ್ಬ ಕಸ್ಟಮ್ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾನೆ. ಅಂದ ಹಾಗೆ ಈತ, ತನ್ನ ಗುದದ್ವಾರದಲ್ಲಿ ಅರ್ಧ ಕೆಜಿಗೂ ಅಧಿಕ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದ.

ಪೇಸ್ಟ್ ರೂಪದಲ್ಲಿ 632 ಗ್ರಾಂ ಶುದ್ಧ ಚಿನ್ನವನ್ನು ಈತ ತನ್ನ ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡಿದ್ದು, ಇದರ ಮೌಲ್ಯ 19.49 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

‘ಸೆಕ್ಸ್’ ವೇಳೆ ಪುರುಷನ ಆತ್ಮವಿಶ್ವಾಸ ಹೆಚ್ಚಿಸುತ್ತೆ ಈ ಮಾತು

Posted: 19 Mar 2019 07:56 AM PDT

ಸಂಭೋಗದ ವೇಳೆ ಕೆಲವೊಂದು ಮಾತುಗಳು ಮನಸ್ಸಿಗೆ ಮುದ ನೀಡುತ್ತವೆ.ಈ ಮಾತುಗಳು ಸೆಕ್ಸ್ ಜೀವನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಸಂಭೋಗದ ವೇಳೆ ಸಂಗಾತಿ ಹೇಳುವ ಕೆಲ ಮಾತುಗಳು ಪುರುಷ ಸಂಗಾತಿ ಮನಸ್ಸು ಕದಿಯಲು ನೆರವಾಗುತ್ತದೆ.

ನೀನು ತುಂಬಾ ಸೆಕ್ಸಿ. ಈ ಮಾತನ್ನು ಸಾಮಾನ್ಯವಾಗಿ ಮಹಿಳೆಯರಿಗೆ ಹೇಳಲಾಗುತ್ತದೆ. ಆದ್ರೆ ಈ ಮಾತನ್ನು ಮಹಿಳಾ ಸಂಗಾತಿ, ಪುರುಷ ಸಂಗಾತಿಗೆ ಹೇಳಿದ್ರೆ ಆತನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಾಸಿಗೆಯಲ್ಲಿ ಉತ್ಸಾಹದಿಂದಿರಲು ನೆರವಾಗುತ್ತದೆ.

ನಾನು ನಿನಗಾಗಿಯೇ. ಈ ಒಂದು ಮಾತು ಪುರುಷ ಸಂಗಾತಿಗೆ ಅತ್ಯಂತ ಖುಷಿ ನೀಡುತ್ತದೆ. ಬೆಡ್ ನಲ್ಲಿ ನಿನಗೆ ಸಂಪೂರ್ಣ ಅಧಿಕಾರವಿದೆ. ಏನು ಬೇಕಾದ್ರೂ ಮಾಡಬಹುದು ಎಂದು ಸಂಗಾತಿ ಹೇಳಿದ್ರೆ ಪುರುಷರ ಆತ್ಮವಿಶ್ವಾಸ ಹೆಚ್ಚಾಗಿ, ಸಂಪೂರ್ಣ ಸುಖ ನೀಡಲು ಸಿದ್ಧರಾಗ್ತಾರೆ.

ಅಂತ್ಯದವರೆಗೆ ನೀನು ನನ್ನನ್ನು ಕೊಂಡೊಯ್ಯಬಲ್ಲೆ. ಈ ಮಾತು ಕೂಡ ಪುರುಷನಿಗೆ ಹೆಚ್ಚು ಸಂತೋಷ ನೀಡುವಂತಹದ್ದು. ಈ ಮಾತು ಕೇಳಿದ ಪುರುಷ ಸಂಗಾತಿ, ಪರಾಕಾಷ್ಠೆಯವರೆಗೆ ಕೊಂಡೊಯ್ಯಲು ಏನು ಮಾಡಲೂ ಸಿದ್ಧನಾಗ್ತಾನೆ.

‘ಮಜ್ಜಿಗೆ’ ಕುಡಿದು ಆರೋಗ್ಯ ಕಾಪಾಡಿಕೊಳ್ಳಿ

Posted: 19 Mar 2019 07:54 AM PDT

ಮಜ್ಜಿಗೆ ಕೇವಲ ಬೇಸಿಗೆಯಲ್ಲಿ ಅಷ್ಟೇ ಅಲ್ಲ. ಯಾವ ಕಾಲದಲ್ಲೂ ಕುಡಿದರೂ ದೇಹಕ್ಕೆ ಒಳ್ಳೆಯದು. ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂದು ತಿಳಿಯಿರಿ.

* ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ನೋವು ಇದ್ದರೆ ಹುಳಿ ಮಜ್ಜಿಗೆಗೆ ಸೈಂಧವ ಉಪ್ಪು ಬೆರೆಸಿ ಕುಡಿದರೆ ಗ್ಯಾಸ್‌ ಕಡಿಮೆಯಾಗಿ ನೋವು ಮತ್ತು ಉಬ್ಬರ ನಿವಾರಣೆಯಾಗುತ್ತವೆ.

* ಬೆಣ್ಣೆ ತೆಗೆದ ಮಜ್ಜಿಗೆಗೆ ಶುಂಠಿ, ಜೀರಿಗೆ, ಕಾಳುಮೆಣಸು ಮತ್ತು ಹಿಪ್ಪಲಿ ಪುಡಿಗಳನ್ನು ಕಲಸಿ ಸೇವಿಸಿದರೆ ಹೊಟ್ಟೆ ಹಗುರವಾಗಿ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.

* ಮುಖದ ಕಾಂತಿ ಹೆಚ್ಚಿಸಲು ಅರಿಶಿನ, ಕಡಲೆ ಹಿಟ್ಟು ಮತ್ತು ಮಜ್ಜಿಗೆ ಕಲಸಿ ಮುಖಕ್ಕೆ ಲೇಪಿಸಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.

* ಮೂತ್ರ ಮಾಡುವಾಗ ಕಷ್ಟವಾಗುತ್ತಿದ್ದರೆ ಮಜ್ಜಿಗೆಗೆ ಬೆಲ್ಲ ಸೇರಿಸಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

* ಮಜ್ಜಿಗೆಗೆ ಸೈಂಧವ ಉಪ್ಪು, ಇಂಗು ಮತ್ತು ಜೀರಿಗೆ ಪುಡಿ ಬೆರೆಸಿ ಕುಡಿದರೆ ಅನಿಮೀಯ ದೂರವಾಗುತ್ತದೆ.

* ಶೀತ, ನೆಗಡಿಯಿಂದ ಮೂಗು ಸೋರುತ್ತಿದ್ದರೆ ಮಜ್ಜಿಗೆಗೆ ಸಾಸಿವೆ, ಜೀರಿಗೆ, ಹಿಪ್ಪಲಿ, ಕರಿಮೆಣಸು ಸೇರಿಸಿ ಕುಡಿದರೆ ಶೀತ ಕಡಿಮೆಯಾಗುತ್ತದೆ.

* ಮಜ್ಜಿಗೆಗೆ ಕಲ್ಲು ಸಕ್ಕರೆ ಅಥವಾ ಸಕ್ಕರೆ ಬೆರೆಸಿ ಕುಡಿದರೆ ಪಿತ್ತದಿಂದ ಕಾಡುವ ಎದೆ ಉರಿ, ಹುಳಿ ತೇಗು ಶಮನವಾಗುತ್ತದೆ.

* ಮಜ್ಜಿಗೆ ಮತ್ತು ಟೊಮೆಟೊಗಳನ್ನು ಪೇಸ್ಟ್‌ ಮಾಡಿ ಸನ್‌ ಟ್ಯಾನ್‌ ಆದ ಚರ್ಮಕ್ಕೆ ಹಚ್ಚಿದರೆ ಟ್ಯಾನ್‌ ನಿವಾರಣೆಯಾಗುತ್ತದೆ.

* ಬೇಧಿ ಹೆಚ್ಚಾಗಿದ್ದರೆ ಮಜ್ಜಿಗೆಗೆ ಒಣ ಶುಂಠಿ ಪುಡಿ ಬೆರೆಸಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

* ಬೆಣ್ಣೆ ತೆಗೆದ ಮಜ್ಜಿಗೆ ಸೇವಿಸಿದರೆ ದೇಹದ ತೂಕ ಕಡಿಮೆಯಾಗುತ್ತದೆ.

ಮನೆಗೆ ಬಂದ ‘ಪ್ರೇಮಿ’ಗಳು ದುಡುಕಿದ್ರು

Posted: 19 Mar 2019 07:41 AM PDT

ಶಿವಮೊಗ್ಗ: ಪ್ರೇಮಿಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶಿವಮೊಗ್ಗದ ನ್ಯೂ ಮಂಡ್ಲಿಯಲ್ಲಿ ನಡೆದಿದೆ.

ಮಂಡ್ಲಿಯ ಪಂಪ್ ಹೌಸ್ ಸಮೀಪದ ಮನೆಯೊಂದರಲ್ಲಿ ಯುವಕ ಮತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಕಾಲೇಜೊಂದರ ವಿದ್ಯಾರ್ಥಿಗಳಾಗಿರುವ ನ್ಯೂ ಮಂಡಲಿಯ 19 ವರ್ಷದ ಯುವಕ ಹಾಗೂ ಸಾಗರ ತಾಲೂಕು ಹುಲಿದೇವರಬನದ 18 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡವರು.

ಇವರು ಪ್ರೀತಿಸಿದ್ದು, ಅನ್ಯಕೋಮಿಗೆ ಸೇರಿದ ಕಾರಣ ಮನೆಯಲ್ಲಿ ಪೋಷಕರು ಮದುವೆಗೆ ಒಪ್ಪುವುದಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾಳೆ ನಾಮಪತ್ರ ಸಲ್ಲಿಸಲಿರುವ ಸುಮಲತಾ ಹೇಳಿದ್ದೇನು ಗೊತ್ತಾ?

Posted: 19 Mar 2019 07:37 AM PDT

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.

ಮಾರ್ಚ್ 20 ರಂದು ಬೆಳಗ್ಗೆ 11 ಗಂಟೆಗೆ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆಯಲ್ಲಿ ತೆರಳಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಬಳಿಕ ಸಿಲ್ವರ್ ಜುಬಿಲಿ ಪಾರ್ಕ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ.

ಎಲ್ಲರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹೇಳಿರುವ ಸುಮಲತಾ, ಕೆಲವರು ಒಳ್ಳೆಯ ಮನಸ್ಸಿನಿಂದ ಮಾಡುವ ಟೀಕೆಗಳನ್ನು ಸಲಹೆಯಂತೆ ಭಾವಿಸುತ್ತೇನೆ. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಮಾಡುವ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ಗಮನವನ್ನು ಕೊಡದೆ ಪ್ರೀತಿಸುವ ಜನರೊಂದಿಗೆ ಮುಂದೆ ಸಾಗುತ್ತೇನೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿಗೆ ‘ಟಾಂಗ್’ ಕೊಟ್ಟ ಹಾರ್ದಿಕ್ ಪಟೇಲ್

Posted: 19 Mar 2019 07:30 AM PDT

ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ದೇಶದ ಚೌಕೀದಾರ್ ( ಕಾವಲುಗಾರ) ಎಂದು ಕರೆದುಕೊಳ್ಳುತ್ತಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ‘ಚೌಕೀದಾರ್ ಚೋರ್ ಹೈ’ ಎಂದು ಹೇಳುತ್ತಿದ್ದರು. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಹೆಸರಿನ ಮುಂದೆ ಚೌಕೀದಾರ್ ಎಂದು ಹಾಕಿಕೊಂಡಿದ್ದು, ಇದನ್ನು ಬಹುತೇಕ ಮಂದಿ ಅನುಸರಿಸಿದ್ದಾರೆ.

ಆದರೆ ಕಾಂಗ್ರೆಸ್ ನಾಯಕರು ಇದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ವ್ಯಂಗ್ಯ ಮಾಡಲು ಬಳಸಿಕೊಂಡಿದ್ದು, ನೀವು ಚೌಕೀದಾರರಾಗಿದ್ದರೆ ಭಾರತೀಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮೊದಲಾದವರು ವಿದೇಶಕ್ಕೆ ಪರಾರಿಯಾಗಿರುವಾಗ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.

ಇದರ ಮಧ್ಯೆ ಗುಜರಾತಿನ ಪಾಟಿದಾರ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಮತ್ತೊಂದು ರೀತಿಯಲ್ಲಿ ವ್ಯಂಗ್ಯಕ್ಕೆ ಬಳಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಈ ಯುವ ನಾಯಕ, ಜಾಮ್ನಗರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಸಾಮಾಜಿಕ ಜಾಲತಾಣದ ತಮ್ಮ ಟ್ವಿಟ್ಟರ್ ಖಾತೆಯ ಹೆಸರಿನ ಮುಂದೆ ‘ಬೇರೋಜ್ಗಾರ್ (ನಿರುದ್ಯೋಗಿ) ಎಂದು ಹಾಕಿಕೊಳ್ಳುವ ಮೂಲಕ ಅಧಿಕಾರಕ್ಕೆ ಬರುವ ಮುನ್ನ ಯುವಕರಿಗೆ ಮೋದಿ ನೀಡಿದ್ದ ಭರವಸೆಯನ್ನು ಈಡೇರಿಸದಿರುವ ಕುರಿತು ವ್ಯಂಗ್ಯವಾಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಿಚ್ಚ ಸುದೀಪ್ ಬೆಂಬಲ ಯಾರಿಗೆಂಬುದು ಕೊನೆಗೂ ‘ಬಹಿರಂಗ’

Posted: 19 Mar 2019 07:09 AM PDT

ರಾಜ್ಯ ರಾಜಕಾರಣದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಸದ್ಯಕ್ಕೆ ಎಲ್ಲರ ಚಿತ್ತ ಸೆಳೆದಿದೆ. ಸುಮಲತಾ ಅಂಬರೀಶ್ ಪಕ್ಷೇತರರಾಗಿ ಕಣಕ್ಕಿಳಿಯುತ್ತಿದ್ದರೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಈ ಇಬ್ಬರು ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದು, ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಸುಮಲತಾ ಅಂಬರೀಶ್, ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಕಾರಣಕ್ಕೆ ಟಿಕೆಟ್ ಲಭಿಸುವುದಿಲ್ಲವೆಂಬುದು ಖಚಿತವಾಗುತ್ತಿದ್ದಂತೆಯೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಸುಮಲತಾ ಅಂಬರೀಶ್ ಅವರು ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಪಾಲ್ಗೊಂಡಿದ್ದರಲ್ಲದೇ ಬಹಿರಂಗವಾಗಿಯೇ ಸುಮಲತಾ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.

ಕನ್ನಡ ಚಿತ್ರರಂಗದ ಬಹುತೇಕ ಮಂದಿ ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ನಿಂತಿದ್ದು, ಖ್ಯಾತ ನಟ ಕಿಚ್ಚ ಸುದೀಪ್ ಯಾವ ನಿಲುವು ತಳೆಯಲಿದ್ದಾರೆಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಸುಮಲತಾ ಅವರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸುದೀಪ್ ಸಹ ಸುಮಲತಾ ಅವರನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದ್ದರು.

ಇದಕ್ಕೆ ಪೂರಕವೆಂಬಂತೆ ಇದೀಗ ಕಿಚ್ಚ ಸುದೀಪ್ ಅವರು, ಸುಮಲತಾ ಅಂಬರೀಶ್ ಅವರಿಗೆ ಶುಭಕೋರಿ ಟ್ವೀಟ್ ಮಾಡಿದ್ದು, ಇದಕ್ಕೆ ಸುಮಲತಾ ಅಂಬರೀಶ್ ಕೂಡ ಧನ್ಯವಾದ ಹೇಳಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಖ್ಯಾತನಾಮರೆಲ್ಲಾ ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ನಿಂತಿರುವುದು ಖಚಿತವಾಗಿದೆ. ಈ ಕಾರಣಕ್ಕಾಗಿ ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ‘ಮೈತ್ರಿ’ಯ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ

Posted: 19 Mar 2019 06:47 AM PDT

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ‘ದೋಸ್ತಿ’ ಸರ್ಕಾರ, ರಾಜ್ಯದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 20 ಹಾಗೂ ಜೆಡಿಎಸ್ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ನಾಮಪತ್ರ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದರೂ ಉಭಯ ಪಕ್ಷಗಳು ಇನ್ನೂ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ.

ಮೈತ್ರಿಯ ಕುರಿತು ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ದೋಸ್ತಿಗಳಲ್ಲಿ ಭಿನ್ನಮತ ತಲೆದೋರಿರುವ ಕಾರಣ ಇಂದು, ಉಭಯ ಪಕ್ಷಗಳ ನಾಯಕರು ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಲ ದಿನಗಳ ಹಿಂದೆ ನಡೆದ ಲೋಕಸಭಾ ಹಾಗೂ ವಿಧಾನಸಭಾ ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಭರ್ಜರಿ ಯಶಸ್ಸು ಸಾಧಿಸಿದೆ. ಲೋಕಸಭಾ ಚುನಾವಣೆಯಲ್ಲೂ ಈ ಮೈತ್ರಿ ಮುಂದುವರೆದಿದ್ದು, ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಬಿಜೆಪಿಯನ್ನು ಹತ್ತಿಕ್ಕಲು ಈ ಮೈತ್ರಿ ಮುಂದುವರೆದಿದೆ ಎಂದು ಹೇಳಿದ್ದಾರೆ.

ನಮ್ಮ ‘ಹೋಟೆಲ್’ ನಲ್ಲಿ ರಾಜಕೀಯ ವಿಷಯ ಮಾತನಾಡಲೇಬೇಡಿ ಎಂದು ಹೇಳಿದ ಮಾಲೀಕ

Posted: 19 Mar 2019 06:36 AM PDT

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಧಿಕಾರದ ಗದ್ದುಗೆಗೇರಲು ರಾಜಕೀಯ ಪಕ್ಷಗಳು ಮತದಾರರಿಗೆ ವಿವಿಧ ಭರವಸೆಗಳನ್ನು ನೀಡುತ್ತಿರುವ ಮಧ್ಯೆ, ಇಲ್ಲೊಬ್ಬ ಹೋಟೆಲ್ ಮಾಲೀಕರು ರಾಜಕೀಯ ಜಂಜಾಟವೇ ಬೇಡವೆನ್ನುತ್ತಿದ್ದಾರೆ.

ಹೌದು, ರಾಜ್ಯ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲಿಯೂ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇಂತಹುದೊಂದು ಬೆಳವಣಿಗೆ ನಡೆದಿದ್ದು, ಮಂಡ್ಯದ ವಾದಿರಾಜ್ ಕಾಫಿ ಶಾಪ್ ಮಾಲೀಕರು, ‘ದಯವಿಟ್ಟು ರಾಜಕೀಯ ವಿಷಯ ಮಾತನಾಡಬಾರದು. ಕಾಫಿ, ಟೀ ಕುಡಿದು ಆರಾಮವಾಗಿ ಹೋಗಿ ಬನ್ನಿ’ ಎಂಬ ಒಕ್ಕಣೆಯುಳ್ಳ ಬೋರ್ಡ್ ಹಾಕಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಲಿದ್ದಾರೆ.

ಈ ಕಾರಣಕ್ಕಾಗಿ ಮಂಡ್ಯ ಲೋಕಸಭಾ ಕ್ಷೇತ್ರ ಎಲ್ಲರ ಗಮನ ಸೆಳೆಯುತ್ತಿದ್ದು, ಇದರ ಮಧ್ಯೆ ತಮ್ಮ ಹೋಟೆಲ್ ನಲ್ಲಿ ನಡೆಯುತ್ತಿದ್ದ ರಾಜಕೀಯ ವಿಷಯಗಳ ಚರ್ಚೆಯಿಂದ ಬೇಸತ್ತಿದ್ದ ಮಾಲೀಕರು ಇಂತಹುದೊಂದು ಪ್ರಕಟಣೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಸಾವನ್ನೇ ಗೆದ್ದು ಬಂದ ಪೇಂಟರ್, ರಕ್ಷಣೆಗೆ ಕೈಜೋಡಿಸಿದ ಯೋಧರು

Posted: 19 Mar 2019 06:32 AM PDT

ಧಾರವಾಡದ ಕುಮಾರೇಶ್ವರ ನಗರದಲ್ಲಿ ಕಟ್ಟಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಪೇಂಟರ್ ಶಿವಾನಂದ ಪಾರಾಗಿ ಬಂದಿದ್ದಾರೆ.

ಕಟ್ಟಡ ಕುಸಿತದ ಸಂದರ್ಭದಲ್ಲಿ ಅವರು 3ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕಟ್ಟಡ ಕುಸಿದ ಕೂಡಲೇ ಅವಶೇಷಗಳಡಿ ಸಿಲುಕಿದ್ದ ಅವರು ತಮ್ಮೊಂದಿಗೆ ಇದ್ದ ಮೂವರನ್ನು ಹೊರಕ್ಕೆ ಎಳೆದು ಕೊಂಡು ಬಂದಿದ್ದಾರೆ ಎನ್ನಲಾಗಿದೆ. ಶಿವಾನಂದ ಅವರಿಗೆ ಪೆಟ್ಟಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಥಳೀಯರು ಹಾಗೂ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ, 18 ಮಂದಿಯನ್ನು ರಕ್ಷಿಸಿದ್ದಾರೆ. 16 ಮಂದಿಯನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ, ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಟ್ಟಡ ಕುಸಿತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬೆಂಗಳೂರಿನಿಂದಲೂ ರಕ್ಷಣಾ ದಳದ ಸಿಬ್ಬಂದಿಯನ್ನು ಕಳುಹಿಸಲಾಗಿದೆ.

ಸ್ಥಳದಲ್ಲೇ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಭಾರೀ ಸಂಖ್ಯೆಯ ಜನ ಸ್ಥಳದಲ್ಲಿ ಸೇರಿದ ಕಾರಣ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನೆರೆದಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಚುನಾವಣಾ ಕಾರ್ಯಕ್ಕೆಂದು ಬಂದಿದ್ದ ಸಿ.ಆರ್.ಪಿ.ಎಫ್. ಯೋಧರು ಕೂಡ ಕಟ್ಟಡ ಕುಸಿತ ಪ್ರಕರಣದಲ್ಲಿ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಅವಶೇಷಗಳಡಿ ಸಿಲುಕಿದವರಿಗಾಗಿ ಹುಡುಕಾಟ ನಡೆಸಲಾಗಿದೆ.

ನಾಮಪತ್ರದೊಂದಿಗೆ ಭಾವುಕರಾಗಿ ಕಣ್ಣೀರಿಟ್ಟ ಸುಮಲತಾ

Posted: 19 Mar 2019 06:09 AM PDT

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ಸುಮಲತಾ ಅವರು ಇಂದು ಅಂಬರೀಶ್ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಕಂಠೀರವ ಸ್ಟುಡಿಯೋಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರೊಂದಿಗೆ ಆಗಮಿಸಿದ ಸುಮಲತಾ, ಹಾರ ಹಾಕಿ ಪೂಜೆ ಸಲ್ಲಿಸಿದ್ದಾರೆ. ನಾಮಪತ್ರವನ್ನು ಇಟ್ಟು ಆಶೀರ್ವಾದ ಪಡೆದುಕೊಂಡಿದ್ದಾರೆ.

ನಾಳೆ ಮಂಡ್ಯದಲ್ಲಿ ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೆ ಮುನ್ನ ಪತಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದಕ್ಕೆ ಮೊದಲು ಅಂಬಿ ಸಮಾಧಿಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದುಕೊಂಡ ಸುಮಲತಾ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಅವರು ತಿರುಪತಿ ತಿಮ್ಮಪ್ಪನ ದರ್ಶನವನ್ನೂ ಪಡೆದುಕೊಂಡಿದ್ದಾರೆ. ನಾಳೆ ಬೆಳಿಗ್ಗೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೆರವಣಿಗೆಯಲ್ಲಿ ತೆರಳಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ.

ಕಟ್ಟಡ ಕುಸಿತ: ತ್ವರಿತ ರಕ್ಷಣಾ ಕಾರ್ಯಕ್ಕೆ ಸಿಎಂ ಸೂಚನೆ

Posted: 19 Mar 2019 05:50 AM PDT

ಬೆಂಗಳೂರು: ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಒಬ್ಬರು ಮೃತಪಟ್ಟಿದ್ದಾರೆ.

ಸುಮಾರು 40 ಮಂದಿ ಗಾಯಗೊಂಡಿದ್ದು, ಅವರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡಗಳ ಅವಶೇಷಗಳಡಿ ಇನ್ನೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಸಿಲುಕಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿ, ಅಪಾಯಕ್ಕೆ ಸಿಲುಕಿದವರ ರಕ್ಷಣೆಗೆ ಕ್ರಮಕೈಗೊಳ್ಳಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಿಂದ ತಜ್ಞರ ತಂಡವನ್ನು ವಿಶೇಷ ವಿಮಾನದಲ್ಲಿ ಕಳುಹಿಸಲು ಸೂಚನೆ ನೀಡಿದ್ದಾರೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಕ್ರೇನ್ ಗಳನ್ನು ಬಳಸಿಕೊಂಡು ತ್ವರಿತಗತಿಯಲ್ಲಿ ಅಪಾಯದಲ್ಲಿ ಸಿಲುಕಿದವರ ರಕ್ಷಣೆ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಮೋದಿ ಅವಹೇಳನ, ಕಾಂಗ್ರೆಸ್ ಶಾಸಕನ ವಿರುದ್ಧ ದೂರು

Posted: 19 Mar 2019 05:28 AM PDT

ಕಲಬುರಗಿ: ಪ್ರಧಾನಿ ಮೋದಿಯವರಿಗೆ ಮದುವೆಯಾದರೂ ಮಕ್ಕಳಾಗಲ್ಲ ಎಂದು ಅವಹೇಳನಕಾರಿಯಾಗಿ ಟೀಕಿಸಿದ್ದ ಕಾಂಗ್ರೆಸ್ ಶಾಸಕನ ವಿರುದ್ಧ ಬಿಜೆಪಿ ದೂರು ನೀಡಲು ಮುಂದಾಗಿದೆ.

ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಸವಕಲ್ಯಾಣ ಶಾಸಕ ನಾರಾಯಣರಾವ್ ಅವರು, ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಚುನಾವಣೆ ಆಯೋಗಕ್ಕೆ ಬಿಜೆಪಿಯಿಂದ ದೂರು ನೀಡಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ.

ಶಾಸಕರು ಪ್ರಧಾನಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಜಿಲ್ಲಾ ಚುನಾವಣಾ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ದೂರು ದಾಖಲಿಸಲಿದೆ ಎಂದು ರವಿಕುಮಾರ್ ತಿಳಿಸಿದ್ದಾರೆ.

ಸುಮಲತಾ ಬೆಂಬಲಿಸಿದ ದರ್ಶನ್-ಯಶ್ ವಿರುದ್ಧ ದೂರು

Posted: 19 Mar 2019 05:15 AM PDT

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿರುವ ನಟರಾದ ದರ್ಶನ್ ಮತ್ತು ಯಶ್ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎನ್ನಲಾಗಿದೆ.

ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಟರಿಬ್ಬರ ವಿರುದ್ಧ ದೂರು ನೀಡಲಾಗಿದೆ. ಸುಮಲತಾ ಅಂಬರೀಶ್ ಅವರ ಪರವಾಗಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುವುದಾಗಿ ದರ್ಶನ್ ಮತ್ತು ಯಶ್ ಘೋಷಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಯಶ್ ಮತ್ತು ದರ್ಶನ್ ಅವರ ಚಲನಚಿತ್ರ, ಟಿವಿ ಕಾರ್ಯಕ್ರಮ, ಜಾಹೀರಾತು ಪ್ರಸಾರ ಮಾಡಬಾರದು ಎಂದು ಮನವಿ ಮಾಡಲಾಗಿದೆ.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಮುಗಿಯುವವರೆಗೂ ಈ ನಟರ ಎಲ್ಲಾ ಮನರಂಜನಾ ಕಾರ್ಯಕ್ರಮಗಳಿಗೆ ತಡೆ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಜಯರಾಜ್ ನಾಯ್ಡು ತಿಳಿಸಿದ್ದಾರೆ.

ಹೋಳಿ ಸಂದರ್ಭದಲ್ಲಿ ಮಾರಾಟವಾಗ್ತಿದೆ ‘ಮೋದಿ’ ಭಾವಚಿತ್ರದ ಶೌರ್ಯ ಗುಲಾಲ್

Posted: 19 Mar 2019 04:55 AM PDT

ಲೋಕಸಭೆ ಚುನಾವಣೆ ಮಧ್ಯೆಯೇ ಬಿಜೆಪಿ ಹೊಸ ಗುಲಾಲ್ ತಂದಿದೆ. ಇದಕ್ಕೆ ಬಿಜೆಪಿ ಶೌರ್ಯ ಗುಲಾಲ್ ಎಂದು ಹೆಸರಿಟ್ಟಿದೆ. ಜೈಪುರದ ಬಿಜೆಪಿ ಕಚೇರಿಯ ಅಟಲ್ ಸಾಹಿತ್ಯ ಸೆಂಟರ್ ನಲ್ಲಿ ಇದನ್ನು ಇಡಲಾಗಿದೆ. ಶೌರ್ಯ ಗುಲಾಲ್ ನ ಸಾವಿರಾರು ಪ್ಯಾಕೆಟ್  ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೋಟೋ ಇದೆ.

ಈ ಪ್ಯಾಕೆಟ್ ಮೇಲೆ ಇನ್ನೊಮ್ಮೆ ಮೋದಿ ಸರ್ಕಾರ ಎಂದು ಬರೆಯಲಾಗಿದೆ. ಕೆಂಪು ಹಾಗೂ ಹಸಿರು ಬಣ್ಣದ ಪ್ಯಾಕೆಟ್ ಮೂಲಕ ಬಿಜೆಪಿ, ಮೋದಿ ಕಾರಣದಿಂದಲೇ ಸೇನೆ ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಏರ್ ಸ್ಟ್ರೈಕ್ ಮಾಡಿದೆ ಎಂಬುದನ್ನು ಸಾರಲು ಹೊರಟಿದೆ.

ನರೇಂದ್ರ ಮೋದಿ ಸರ್ಕಾರ, ಅನೇಕ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದು ಶೌರ್ಯದ ಸಂಕೇತ. ಹಾಗಾಗಿ ಈ ಬಾರಿ ಹೋಳಿಯನ್ನು ಶೌರ್ಯ ರಂಗೋತ್ಸವ ಹೆಸರಿನಲ್ಲಿ ಆಚರಣೆ ಮಾಡ್ತಿದ್ದೇವೆ ಎಂದು ಬಿಜೆಪಿ ಪ್ರಚಾರ ಇಲಾಖೆಯ ಆಶಿಶ್ ಜೈನ್ ಹೇಳಿದ್ದಾರೆ. ಶೌರ್ಯ ಗುಲಾಲ್ ಪ್ಯಾಕೆಟ್ ಬೆಲೆ 35 ರೂಪಾಯಿ. ಬಿಜೆಪಿ ಮುಖ್ಯ ಕಚೇರಿಯಿಂದ ಬಿಜೆಪಿ ಕಾರ್ಯಕರ್ತರು ಇದನ್ನು ಖರೀದಿ ಮಾಡ್ತಿದ್ದಾರೆ. ಈ ಬಾರಿ ಅಲ್ಲಿನ ಎಲ್ಲ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಶೌರ್ಯ ಗುಲಾಲ್ ನಲ್ಲಿಯೇ ಹೋಳಿ ಆಚರಣೆ ಮಾಡಲಿದ್ದಾರೆ. ಮತದಾರರಿಗೂ ಈ ಪ್ಯಾಕೆಟ್ ವಿತರಣೆ ಮಾಡಲಾಗುವುದು.

ಭಿಕ್ಷುಕನ ವೇಷದಲ್ಲಿ ಬಂದು ‘ಡೈಮಂಡ್’ ಕದ್ದೊಯ್ದ ಕಳ್ಳ

Posted: 19 Mar 2019 04:54 AM PDT

ಇತ್ತೀಚೆಗೆ ಭಿಕ್ಷುಕರ ಸೋಗಿನಲ್ಲಿ ಬಂದು ದರೋಡೆ ಮಾಡುವ ಪ್ರಕರಣಗಳು ಹೆಚ್ಚಾಗ್ತಿವೆ. ಇದಕ್ಕೆ ಸೂರತ್‍ನಲ್ಲಿ ನಡೆದ ಘಟನೆ ಈಗ ತಾಜಾ ಉದಾಹರಣೆ.

ವಜ್ರದ ವ್ಯಾಪಾರ ಮಳಿಗೆಯೊಂದರಲ್ಲಿ ಕಿವುಡ, ಮೂಗನಂತೆ ಬಂದ ಭಿಕ್ಷುಕನೊಬ್ಬ 40 ಲಕ್ಷ ರೂ. ಬೆಲೆಬಾಳುವ ವಜ್ರದ ಪ್ಯಾಕೆಟ್ ಲಪಟಾಯಿಸಿಕೊಂಡು ಪರಾರಿಯಾದ ಘಟನೆ ಅಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮಹಾಧೀಪುರದ ಜಡ್ಡಾಖಾಡಿಯಲ್ಲಿರುವ ಡೈಮಂಡ್ ವಿಲೇಜ್‍ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಅಂಗಡಿಗೆ ಬಂದ ಕಿವುಡ, ಮೂಗನಂತೆ ವರ್ತಿಸುತ್ತಿದ್ದ ವ್ಯಕ್ತಿ ಕೆಲವು ಕಾಗದ ಪತ್ರಗಳನ್ನು ತೋರಿಸುತ್ತಿರುವುದು ಸಿಸಿ ಟಿವಿಯಲ್ಲಿ ಕಾಣಿಸುತ್ತಿದೆ.

ಈ ವೇಳೆ ಅಂಗಡಿಯಾತ ತನ್ನ ಜೇಬಿನಿಂದ ಹಣ ಕೊಡಲು ಮುಂದಾಗುತ್ತಿದ್ದಂತೆ ಈತ ವಜ್ರದ ತುಣುಕುಗಳನ್ನು ಮೆತ್ತಗೆ ಎತ್ತಿಕೊಂಡಿದ್ದಾನೆ. ಭಿಕ್ಷುಕ ಹೊರಗೆ ಹೋದ ಸ್ವಲ್ಪ ಸಮಯದ ಬಳಿಕ ವಜ್ರದ ತುಂಡುಗಳು ಕಾಣೆಯಾಗಿರುವುದು ಅಂಗಡಿಯವನ ಗಮನಕ್ಕೆ ಬಂದಿದೆ. ಮಹಾದೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿ ಟಿವಿ ದೃಶ್ಯವನ್ನಾಧರಿಸಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಅನುಮತಿಯಿಲ್ಲದೆ ಫೋಟೋ ಕ್ಲಿಕ್ಕಿಸಿದವನ ವಿರುದ್ದ ಕಿಡಿ ಕಾರಿದ ನಟಿ

Posted: 19 Mar 2019 04:20 AM PDT

ನಟಿ ಜಯಾ ಬಚ್ಚನ್ ತಮ್ಮ ಅಭಿಮಾನಿಯೊಬ್ಬನ ವಿರುದ್ದ ಗರಂ ಆಗಿದ್ದಾರೆ. ಅಭಿಮಾನಿ ವಿರುದ್ದ ಕಿಡಿ ಕಾರಿರುವ ಜಯಾ ಬಚ್ಚನ್ ರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.

ಧರ್ಮ ಕ್ರಿಯೇಷನ್ ಮಾಲೀಕ ಕರಣ್ ಜೋಹರ್ ತಾಯಿ ಹೀರಾ ಜೋಹರ್ ಅವರ ಹುಟ್ಟು ಹಬ್ಬದ ಪಾರ್ಟಿಗಾಗಿ ಬಂದಿದ್ದ ಜಯಾ ಬಚ್ಚನ್ ಖುಷಿ ಖುಷಿಯಾಗಿ ಪಾರ್ಟಿ ಮುಗಿಸಿಕೊಂಡು ವಾಪಾಸ್ಸಾಗುವಾಗ ಈ ಅಭಿಮಾನಿ ಜಯಾ ಬಚ್ಚನ್ ರ ಪೋಟೊ ಕ್ಲಿಕ್ಕಿಸಿದ್ದಾನೆ.

ಅನುಮತಿ ಇಲ್ಲದೆ ಫೋಟೋ ಕ್ಲಿಕ್ಕಿಸಿದ ಕಾರಣಕ್ಕೆ ಗರಂ ಆದ ಜಯಾ ಬಚ್ಚನ್ ಆತನ‌ ಮೇಲೆ ಕೂಗಾಡಿದ್ದಾರೆ. ಅಭಿಮಾನಿಯ ಮೇಲೆ ಕೂಗಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಶಾಂಪೂ ತರಲು ಹಣ ಕೇಳಿದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ….?

Posted: 19 Mar 2019 04:12 AM PDT

ಶಾಂಪೂ ತರಲು ಪತ್ನಿ ಹಣ ಕೇಳಿದ್ದಕ್ಕೆ ಪತಿ ಮನಬಂದಂತೆ ಥಳಿಸಿದ ಘಟನೆ ಗುಜರಾತ್‍ ಬಾವ್ಲಾ ಗ್ರಾಮದಲ್ಲಿ ನಡೆದಿದೆ. ಶಾಂಪೂ ತರಲು ಹಣ ಕೊಡು ಅಂತಾ ಕೇಳಿದ್ದಕ್ಕೆ ಕೋಪಗೊಂಡ ಪತಿ ತನ್ನನ್ನು ಥಳಿಸಿದ, ನಂತರ ಕೂದಲು ಹಿಡಿದು ತಲೆಯನ್ನು ಗೋಡೆಗೆ ಜಜ್ಜಿದ ಎಂದು ಸಂತ್ರಸ್ಥೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ತನ್ನ ಮೇಲೆ ಪತಿ ಹಲ್ಲೆ ನಡೆಸುತ್ತಿದ್ದ ವೇಳೆ ಮಹಿಳೆ ಸಹಾಯಕ್ಕಾಗಿ ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಈ ವೇಳೆ ಮನೆಗೆ ಬಂದ ಸಹಾಯವಾಣಿ ಕೌನ್ಸೆಲರ್ ಆತನೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದಾರೆ.

ಆದ್ರೆ ಯಾರ ಮಾತು ಕೇಳೋ ಸ್ಥಿತಿಯಲ್ಲಿರದ ಪತಿ ತನ್ನ ಪತ್ನಿಯನ್ನು ಮನೆ ಬಿಟ್ಟು ಹೋಗುವಂತೆ ಹೇಳಿದ್ದಾನೆ. ಇದರಿಂದ ನೊಂದ ಮಹಿಳೆ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.

ತಮ್ಮ ವಿವಾಹವಾಗಿ 15 ವರ್ಷವಾಗಿದೆ. ರೈಲ್ವೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡ್ತಿರೋ ತನ್ನ ಪತಿ ಅಂದಿನಿಂದ ಇಂದಿನವರೆಗೂ ಕ್ಷುಲ್ಲಕ ಕಾರಣಗಳಿಗೆ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಪತಿ ಜೊತೆ ಅವರ ಕುಟುಂಬಸ್ಥರು ಸೇರಿಕೊಂಡಿದ್ದಾರೆ. ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಇದುವರೆಗೂ ಎಲ್ಲವನ್ನೂ ಸಹಿಸಿಕೊಂಡೆ ಅಂತಾ ದೂರು ನೀಡಿದ್ದಾಳೆ.

ಪುತ್ರನನ್ನು ಬೆಂಬಲಿಸುವಂತೆ ಕಾಂಗ್ರೆಸ್ ಮುಖಂಡರಿಗೆ ರೇವಣ್ಣ ಮನವಿ

Posted: 19 Mar 2019 04:09 AM PDT

ಹಾಸನದಲ್ಲಿ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಜ್ವಲ್‍ಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ಮುಖಂಡ ಬಿ. ಶಿವರಾಮ್ ರನ್ನು ಭೇಟಿ ಮಾಡಿ ರೇವಣ್ಣ ಮನವಿ ಮಾಡಿಕೊಂಡಿದ್ದಾರೆ.

ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಮ್ ಮನೆಗೆ ಭೇಟಿ ನೀಡಿದ ರೇವಣ್ಣ, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ರು. ಈ ವೇಳೆ ಮಾತನಾಡಿದ ಶಿವರಾಮ್‍, ಹೈಕಮಾಂಡ್‍ ತೀರ್ಮಾನಕ್ಕೆ ಬದ್ಧನಾಗಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಸಿ ಮೈತ್ರಿ ಧರ್ಮ ಪಾಲಿಸುವುದಾಗಿ ತಿಳಿಸಿದ್ರು.

ಈ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎ. ಮಂಜು ವಿರುದ್ಧ ಶಿವರಾಮ್‍ ಅಸಮಾಧಾನ ಹೊರ ಹಾಕಿದ್ದಾರೆ.

ಪ್ರೇಮಿ ಫೋನ್ ಗೆ ಸಿಗ್ಲಿಲ್ಲ, ಹುಡುಗಿ ಹಾಕಿದ್ಲು ‘ರೇಪ್’ ಕೇಸ್

Posted: 19 Mar 2019 04:06 AM PDT

ದೆಹಲಿಯ ಮುಖರ್ಜಿ ನಗರದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ನೆಟ್ವರ್ಕ್ ಸಮಸ್ಯೆಯಿಂದಾಗಿ ಪ್ರೇಮಿಗೆ ಫೋನ್ ಹೋಗಲಿಲ್ಲ. ಇದ್ರಿಂದ ಕೋಪಗೊಂಡ ಪ್ರಿಯತಮೆ ಅತ್ಯಾಚಾರದ ದೂರು ದಾಖಲಿಸಿದ್ಲು. ಆದ್ರೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದಾಗ ಸತ್ಯ ಹೊರಬಿತ್ತು.

ಹುಡುಗಿ ಮುಖರ್ಜಿ ನಗರದಲ್ಲಿ ವಾಸವಾಗಿದ್ದು, ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳಂತೆ. ಆಕೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳಂತೆ. ಮದುವೆ ಮಾತುಕತೆ ನಡೆಯುತ್ತಿತ್ತು ಎನ್ನಲಾಗಿದೆ.

ಹುಡುಗಿ ದೂರಿನ ಪ್ರಕಾರ, ಜುಲೈ 2,2017 ರಂದು ಹುಡುಗ, ಹುಡುಗಿ ಹಣೆಗೆ ಸಿಂಧೂರ ಇಟ್ಟಿದ್ದನಂತೆ. ನಂತ್ರ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರಂತೆ. ಅನೇಕ ಬಾರಿ ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಬೆಳೆದಿತ್ತು ಎಂದಿದ್ದಾಳೆ ಹುಡುಗಿ.

ಕೆಲ ದಿನಗಳ ನಂತ್ರ ಹುಡುಗ ಮನೆಗೆ ಹೋಗಿದ್ದನಂತೆ. ಆತನಿಗೆ ಹುಡುಗಿ ಅನೇಕ ಬಾರಿ ಕರೆ ಮಾಡಿದ್ದಾಳೆ. ಹುಡುಗ ಸಂಪರ್ಕಕ್ಕೆ ಸಿಕ್ಕಿಲ್ಲ. ನನಗೆ ಮೋಸವಾಗಿದೆ ಎಂದುಕೊಂಡ ಹುಡುಗಿ ಅತ್ಯಾಚಾರ ದೂರು ದಾಖಲಿಸಿದ್ದಾಳೆ.

ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ವಿಚಾರಣೆ ವೇಳೆ ಹುಡುಗಿ ಮಾತು ಬದಲಿಸಿದ್ದಾಳೆ. ಇಬ್ಬರ ಮಧ್ಯೆ ಒಪ್ಪಂದದ ಸೆಕ್ಸ್ ನಡೆದಿದೆ. ನಾವಿಬ್ಬರು ಪತಿ-ಪತ್ನಿ ಎಂದಿದ್ದಾಳೆ. ವಿಚಾರಣೆಗೆ ಬಂದ ಆರೋಪಿ ಕೂಡ ಇದನ್ನು ಒಪ್ಪಿಕೊಂಡಿದ್ದಾನೆ. ನೆಟ್ವರ್ಕ್ ಸಮಸ್ಯೆಯಿಂದ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದಿದ್ದಾನೆ.

‘ಕೈ’ ಬಿಟ್ಟು ‘ಕಮಲ’ ಹಿಡಿದ ಶಾಸಕ ನಾಗೇಂದ್ರ ಸಹೋದರ

Posted: 19 Mar 2019 04:00 AM PDT

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಸಹೋದರ ಬಿ. ವೆಂಕಟೇಶ್‍ ಪ್ರಸಾದ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದ್ರೆ ವೆಂಕಟೇಶ್‍ ಪಕ್ಷ ಸೇರ್ಪಡೆ ವೇಳೆ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀರಾಮುಲು, ನಗರ ಶಾಸಕ ಸೋಮಶೇಖರ್ ರೆಡ್ಡಿ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಚನ್ನಬಸವನಗೌಡ ಪ್ರಸಾದ್ ಸೇರ್ಪಡೆ ಬಗ್ಗೆ ಯಾರಿಗೂ ಅಸಮಾಧಾನವಿಲ್ಲ ಅಂತಾ ಹೇಳಿದ್ರು.

ಇದೇ ವೇಳೆ ಮಾತನಾಡಿದ ಪ್ರಸಾದ್, ಮೋದಿ ಅವರ ಆಡಳಿತದಿಂದ ಖುಷಿಯಾಗಿ, ಬಿಜೆಪಿ ಸೇರಿದ್ದು, ಹೈಕಮಾಂಡ್ ಒಪ್ಪಿದ್ರೆ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸುವುದಾಗಿ ತಿಳಿಸಿದ್ರು. ಹಾಗೆಯೇ ಸೋದರ ನಾಗೇಂದ್ರ ಕಾಂಗ್ರೆಸ್‍ನಲ್ಲಿರುವುದಕ್ಕೂ, ನಾನು ಬಿಜೆಪಿ ಸೇರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದ್ರು.

ಹೃದಯ ಬಡಿತ ಹೆಚ್ಚಿಸಿದೆ ನಟಿಯ ಟಾಪ್ ಲೆಸ್ ಫೋಟೋ

Posted: 19 Mar 2019 03:56 AM PDT

ಬೆಡಗಿ ಮಂದನಾ ಕರೀಮಿ ಪಡ್ಡೆ ಹುಡುಗರ ನಿದ್ರೆ ಕದ್ದಿದ್ದಾಳೆ. ಆಕೆ ಇನ್ಸ್ಟಾಗ್ರಾಂ ನಲ್ಲಿ ಹಾಕಿರುವ ಫೋಟೋ ಹುಡುಗರ ಹೃದಯ ಬಡಿತ ಹೆಚ್ಚಿಸಿದೆ. ಮಂದನಾ ಕರೀಮಿ, ಟಾಪ್ ಲೆಸ್ ಆಗಿ ಸೆಕ್ಸಿ ಫೋಟೋಕ್ಕೆ ಫೋಸ್ ನೀಡಿದ್ದು, ಫೋಟೋ ಕ್ಷಣ ಮಾತ್ರದಲ್ಲಿ ವೈರಲ್ ಆಗಿದೆ.

ಮಂದನಾ ಕರೀಮಿ, 2015ರಲ್ಲಿ ಬಾಗ್ ಜಾನಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿದ್ದಳು. ನಂತ್ರ ಪ್ರೀತಿ, ತಲಾಕ್, ಹಾಟ್ ಫೋಟೋ ಸೇರಿದಂತೆ ಅನೇಕ ಕಾರಣಕ್ಕೆ ಸುದ್ದಿಯಾಗ್ತಾನೆ ಇದ್ದಾಳೆ. ಮಂದನಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿರುತ್ತಾಳೆ. ಆದ್ರೆ ಈ ಬಾರಿ ಹಾಕಿರುವ ಫೋಟೋ ಹೆಚ್ಚು ಸುದ್ದಿ ಮಾಡುವಂತಿದೆ.

ಕೆಲ ದಿನಗಳ ಹಿಂದಷ್ಟೆ ಮಂದನಾ ಧರ್ಮದ ವಿಚಾರಕ್ಕೆ ಸುದ್ದಿ ಮಾಡಿದ್ದಳು. ನಾನು ಮುಸ್ಲಿಂ ಹುಡುಗಿ. ಬಿಕಿನಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ತೇನೆ ಏನಿವಾಗ ಎಂದು ಪ್ರಶ್ನೆ ಮಾಡಿದ್ದಳು.

 

ಬಿಗ್ ಬ್ರೇಕಿಂಗ್ ನ್ಯೂಸ್: ನೋಡ ನೋಡುತ್ತಿದ್ದಂತೆಯೇ ಕುಸಿದುಬಿತ್ತು ನಿರ್ಮಾಣ ಹಂತದ ಕಾಂಪ್ಲೆಕ್ಸ್

Posted: 19 Mar 2019 03:45 AM PDT

ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಕಾಂಪ್ಲೆಕ್ಸ್ ಕಟ್ಟಡ ಕುಸಿದು ಬಿದ್ದಿರುವ ಘಟನೆ ಧಾರವಾಡದಲ್ಲಿ ನಡೆದಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದಾರೆ.

ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಸಂಬಂಧಿಕರಿಗೆ ಸೇರಿದ ಕಟ್ಟಡ ಇದೆಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಕುಸಿತವಾಗಿರುವ ಕಟ್ಟಡದಡಿ ಇಪ್ಪತ್ತಕ್ಕೂ ಅಧಿಕ ಮಂದಿ ಸಿಲುಕಿಕೊಂಡಿದ್ದಾರೆಂದು ಹೇಳಲಾಗುತ್ತಿದ್ದು, ಇನ್ನು ಕೆಲ ಹೊತ್ತಿನಲ್ಲಿ ಸ್ಪಷ್ಟ ಚಿತ್ರಣ ತಿಳಿದು ಬರಲಿದೆ.

ಕಟ್ಟಡ ಕುಸಿತಕ್ಕೆ ಕಳಪೆ ಕಾಮಗಾರಿಯೇ ಕಾರಣವೆಂಬ ಮಾತುಗಳು ಕೇಳಿ ಬರುತ್ತಿದ್ದು, ಅವಶೇಷಗಳಡಿ ಸಿಲುಕಿಬಿದ್ದ ಕೆಲ ಗಾಯಾಳುಗಳನ್ನು ರಕ್ಷಿಸಿ ಈಗ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ.

ಸತ್ತ ತಿಮಿಂಗಿಲದ ಹೊಟ್ಟೆಯಲ್ಲಿದ್ದದ್ದೇನು ಗೊತ್ತಾ…?

Posted: 19 Mar 2019 03:27 AM PDT

ಪರಿಸರ ಮಾಲಿನ್ಯ ಯಾವ ಹಂತಕ್ಕೆ ಬಂದು ನಿಂತಿದೆ ಎಂಬುದಕ್ಕೆ ಈ ಪ್ರಕರಣಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ. ಪಿಲಿಪೈನ್ಸ್ ಸಮುದ್ರ ತೀರದಲ್ಲಿ ಜೀವ ಕಳೆದುಕೊಂಡ ತಿಮಿಂಗಿಲದ ಹೊಟ್ಟೆಯಲ್ಲಿ ಬರೋಬ್ಬರಿ 40 ಕೆಜಿ ಪ್ಲಾಸ್ಟಿಕ್ ಪತ್ತೆಯಾಗಿದೆ.

14.5 ಅಡಿ ಗಾತ್ರದ ತಿಮಿಂಗಿಲ ಮಾಬಿನಿ ಪಟ್ಟಣದ ಸಮುದ್ರ ತೀರಕ್ಕೆ ಬಂದು ಸಿಕ್ಕಿಹಾಕಿಕೊಂಡಿತ್ತು. ಪುನಃ ತಿಮಿಂಗಿಲವನ್ನು ಸಮುದ್ರಕ್ಕೆ ಸೇರಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಈಜಲು ಸಾಧ್ಯವಾಗದೆ ಮೂಕ ಪ್ರಾಣಿ ಕೊನೆಯುಸಿರೆಳೆಯಿತು.

ಹೊಟ್ಟೆಯಲ್ಲಿ 40 ಕೆಜಿ ಪ್ಲಾಸ್ಟಿಕ್ ತುಂಬಿದ್ದರಿಂದ ಆಹಾರ ಸೇವಿಸಲಾಗದೆ ನಿತ್ರಾಣಗೊಂಡಿದ್ದ ಜಲಚರ ಸಾವನ್ನಪ್ಪಿತು. ಪ್ಲಾಸ್ಟಿಕ್ ಬ್ಯಾಗ್ ಗಳು, ತಿಂದೆಸೆದ ಆಹಾರದ ಪೊಟ್ಟಣಗಳು ಸಾವಿಗೆ ಕಾರಣ ಎಂಬ ಆಘಾತಕಾರಿ ಅಂಶ ಎಲ್ಲರಿಗೂ ಒಂದು ಎಚ್ಚರಿಕೆ ಘಂಟೆಯಾಗಿದೆ.

 

ಪ್ರಾಮಾಣಿಕತೆ ಮೆರೆದ ವ್ಯಕ್ತಿಗೆ ಸಿಕ್ತು ಭಾರೀ ಉಡುಗೊರೆ

Posted: 19 Mar 2019 03:19 AM PDT

ರಸ್ತೆಯಲ್ಲಿ ಹೋಗುವಾಗ ದುಡ್ಡಿರುವ ಪರ್ಸ್ ಅಥವಾ ಬೆಲೆ ಬಾಳುವ ವಸ್ತುಗಳು ಸಿಕ್ಕರೆ ಅದನ್ನ ಹಿಂದಿರುಗಿಸೋರ ಸಂಖ್ಯೆ ತುಂಬಾ ವಿರಳ. ಆದ್ರೆ ಗುಜರಾತ್‍ ನಲ್ಲಿ ವ್ಯಕ್ತಿಯೊಬ್ಬ ತನಗೆ ಸಿಕ್ಕ ಬ್ಯಾಗನ್ನು ಮಾಲೀಕನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮರೆದಿದ್ದಾನೆ. ಈತನ ಪ್ರಾಮಾಣಿಕತೆಗೆ ಪ್ರತಿಯಾಗಿ ಎರಡು ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾನೆ.

ಗಾರ್ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ದಿಲೀಪ್‍ ಪೊಡ್ಡ ಎಂಬ ಸೇಲ್ಸ್ ಮೆನ್‍, ಕೆಲಸ ಮುಗಿಸಿ ಬರುವಾಗ ಬ್ಯಾಗ್ ಒಂದು ರಸ್ತೆಯಲ್ಲಿ ಬಿದ್ದಿತ್ತು. ಹಲವಾರು ಮಂದಿ ಆ ಬ್ಯಾಗನ್ನು ನೋಡುತ್ತಿದ್ದರೇ ವಿನಃ ಅದನ್ನು ಎತ್ತಿಕೊಳ್ಳುತ್ತಿರಲಿಲ್ಲ. ಆದ್ರೆ ದಿಲೀಪ್ ಆ ಬ್ಯಾಗನ್ನು ಎತ್ತಿಕೊಂಡು ನೋಡಿದಾಗ ಅದ್ರಲ್ಲಿ ನೋಟಿನ ಕಂತೆ ಕಂತೆಗಳೇ ಇದ್ದವು. ಅದನ್ನು ಮನೆಗೆ ತಂದ ದಿಲೀಪ್ ಹಣ ಎಣಿಸಿದಾಗ ಅದ್ರಲ್ಲಿ 10 ಲಕ್ಷ ರೂಪಾಯಿ ಇತ್ತು.

ತಕ್ಷಣವೇ ಈ ವಿಚಾರವನ್ನು ದಿಲೀಪ್‍ ತನ್ನ ಗಾರ್ಮೆಂಟ್ ಮಾಲೀಕನಿಗೆ ತಿಳಿಸಿದ್ದಾನೆ. ನಂತರ ಸಿಸಿ ಟಿವಿ ದೃಶ್ಯ ನೋಡಿ ಬ್ಯಾಗ್ ಮಾಲೀಕನನ್ನು ಪತ್ತೆ ಹಚ್ಚಿ, ಪೊಲೀಸರು ಹಣ ಹಿಂದಿರುಗಿಸಿದ್ದಾರೆ. ಬ್ಯಾಗ್ ಮಾಲೀಕ ವಜ್ರದ ವ್ಯಾಪಾರಿಯಾಗಿದ್ದು, ಆತ ದಿಲೀಪ್‍ನ ಪ್ರಾಮಾಣಿಕತೆ ಮೆಚ್ಚಿ 2 ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ.

ಕೇರಳದಲ್ಲಿ ಅಪರೂಪದ ಕಾಯಿಲೆಗೆ ಬಾಲಕ ಬಲಿ

Posted: 19 Mar 2019 03:16 AM PDT

ಕೆಲ ತಿಂಗಳ ಹಿಂದಷ್ಟೇ ಕೇರಳದಲ್ಲಿ ನಿಫಾ ಎಂಬ ಬಾವಲಿ ಜ್ವರದ ಸೋಂಕಿಗೆ ಕೆಲವರು ಪ್ರಾಣಬಿಟ್ಟಿದ್ದರು. ಇದಾದ ಬೆನ್ನಲೇ ವೆಸ್ಟ್ ಲೈನ್‍ ವೈರಸ್‍ ಎಂಬ ಅಪರೂಪದ ಸೋಂಕಿನಿಂದ ಬಳಲುತ್ತಿದ್ದ ಬಾಲಕನೊಬ್ಬ ಮೃತಪಟ್ಟ ಘಟನೆ ಕೊಯಿಕ್ಕೋಡ್‍ನಲ್ಲಿ ನಡೆದಿದೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಕಳೆದ ವಾರ ಕೊಯಿಕ್ಕೋಡು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ ಹಲವು ಬಗೆಯ ರಕ್ಷ ಪರೀಕ್ಷೆ ನಡೆಸಿದಾಗ ದೇಹದಲ್ಲಿ ವೆಸ್ಟ್ ಲೈನ್ ವೈರಸ್ ಇರುವುದು ಪತ್ತೆಯಾಗಿದೆ. ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಅಂತಾ ಕೇರಳ ಆರೋಗ್ಯ ಸಚಿವೆ ತಿಳಿಸಿದ್ದಾರೆ.

ವೆಸ್ಟ್ ಲೈನ್‍ ಸೊಳ್ಳೆಯಿಂದ ಹರಡುವ ವೈರಸ್‍ ಆಗಿದ್ದು, ಇದು ಹೆಚ್ಚಾಗಿ ಉತ್ತರ ಅಮೆರಿಕಾದಲ್ಲಿ ಕಂಡುಬರ್ತಿದೆ. ಜ್ವರ, ತಲೆನೋವು, ಸುಸ್ತು, ವಾಂತಿ, ಚರ್ಮದ ತುರಿಕೆ ಈ ರೋಗದ ಲಕ್ಷಣಗಳಾಗಿವೆ. ಇನ್ನು ಈ ವೈರಸ್‍ ತಡೆಗೆ ಕೇರಳ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಕೇಂದ್ರ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಸದ್ಯ ಕೇರಳ ಬಿಟ್ಟರೆ ದೇಶದ ಯಾವುದೇ ಭಾಗದಲ್ಲಿ ಈ ವೈರಸ್ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗ್ತಿದೆ.

ಮತ್ತೆ ಸಂಸತ್ ಪ್ರವೇಶಕ್ಕೆ ಸಿದ್ದವಾದ ದೇಶದ ಅತಿ ‘ಶ್ರೀಮಂತ’ ಸಂಸದ

Posted: 19 Mar 2019 03:12 AM PDT

ದೇಶದೆಲ್ಲೆಡೆ ಲೋಕಸಭಾ ಚುನಾವಣೆ ಕಾವು ಏರುತ್ತಿದೆ. ದೇಶದ ಅತಿ ಶ್ರೀಮಂತ ಸಂಸದ ಮತ್ತೆ ಸಂಸತ್ತು ಪ್ರವೇಶಿಸಲು ಸ್ಪರ್ಧೆಗೆ ಅಣಿಯಾಗಿದ್ದಾರೆ.

ತೆಲುಗು ದೇಶಂ ಪಾರ್ಟಿಯ (ಟಿಡಿಪಿ)ಯ ಗಲ್ಲಾ ಜಯದೇವ್ ಘೋಷಿತ ಆಸ್ತಿ 2014ರ ಚುನಾವಣೆ ವೇಳೆಗೆ ಬರೋಬ್ಬರಿ 620 ಕೋಟಿ ರೂಪಾಯಿ. ಗುಂಟೂರಿನಿಂದ ಆಯ್ಕೆಯಾಗಿದ್ದ ಜಯದೇವ್ ಈ ಬಾರಿ ಸಹ ಟಿಕೆಟ್ ಪಡೆದುಕೊಂಡಿದ್ದಾರೆ.

ಟಿಡಿಪಿ 25 ಜನ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಿದ್ದು ಉದ್ಯಮಿಯೂ ಆಗಿರುವ ಜಯದೇವ್ ಗುಂಟೂರಿನಿಂದ ಸ್ಪರ್ಧೆ ಮಾಡಲಿದ್ದಾರೆ. 2014ರ ವೇಳೆ ಎನ್.ಡಿ.ಎ. ಜತೆ ಇದ್ದ ಟಿಡಿಪಿ ಈ ಸಾರಿ ಮಹಾಘಟಬಂಧನ್ ಜತೆ ಇದೆ. ಅಮರ ರಾಜ ಗ್ರೂಪ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಜಯದೇವ್, ಕಳೆದ ಚುನಾವಣೆಯಲ್ಲಿ ವೈ.ಎಸ್.ಆರ್. ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿದ್ದರು.

 

ಶಾಕಿಂಗ್: ನಂದಿನಿ ತುಪ್ಪದ ಹೆಸರಲ್ಲಿ ಗ್ರಾಹಕರಿಗೆ ಧೋಖಾ

Posted: 19 Mar 2019 02:59 AM PDT

ಇತ್ತೀಚಿನ ದಿನಗಳಲ್ಲಿ ಕಲಬೆರಕೆಯಾಗದ ವಸ್ತುಗಳೇ ಇಲ್ಲ ಎಂಬಂತಾಗಿದೆ. ಎಣ್ಣೆ, ಹಾಲು, ಬೆಣ್ಣೆ, ಮೊಸರು ಎಲ್ಲದರಲ್ಲೂ ಕಲಬೆರಕೆಯಾಗ್ತಿದೆ. ಇದೀಗ ಅತ್ಯಂತ ಸುಪ್ರಸಿದ್ಧಿಯಾದ ಕೆಎಂಎಫ್‍ನ ನಂದಿನಿ ತುಪ್ಪದ ಹೆಸರಿನಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡ್ತಿದ್ದ ಜಾಲ ಪತ್ತೆಯಾಗಿದೆ.

ಬೆಂಗಳೂರಿನ ಬನಶಂಕರಿಯ ಸೋನಿಕಾ ಜೈನ್‍ ಎಂಬುವವರು ಬಾಲಾಜಿ ಟ್ರೇಡರ್ಸ್‍ ನಲ್ಲಿ ನಂದಿನಿ ತುಪ್ಪ ಖರೀದಿಸಿದ್ದರು. ತುಪ್ಪ ಸೇವನೆ ವೇಳೆ ಬೇರೆಯದೆ ವಾಸನೆ ಬಂದಿದ್ದರಿಂದಾಗಿ ಅನುಮಾನ ಬಂದು, ಬೆಂಗಳೂರು ಹಾಲು ಒಕ್ಕೂಟಕ್ಕೆ ದೂರು ಕೊಟ್ಟಿದ್ರು. ಈ ಸಂಬಂಧ ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ. ನಾಗರಾಜಯ್ಯ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು.

ನಂತರ ವಿಚಕ್ಷಣಾ ದಳದ ಅಧಿಕಾರಿಗಳು ಸೋನಿಯಾ ಬಳಿಯಿದ್ದ ತುಪ್ಪ ಮತ್ತು ಬಾಲಾಜಿ ಟ್ರೇಡರ್ಸ್‍ನಿಂದ 1 ಕೆ.ಜಿ. ತುಪ್ಪ ಖರೀದಿಸಿ ಕೆಎಂಎಫ್ ಗುಣ ನಿಯಂತ್ರಣಾ ವಿಭಾಗದಲ್ಲಿ ಪರೀಕ್ಷೆ ನಡೆಸುವಂತೆ ಮನವಿ ಮಾಡಿದ್ರು. ಆಗ ಎರಡೂ ಪ್ಯಾಕ್‍ನ ತುಪ್ಪ ಕಲಬೆರಕೆಯಾಗಿದೆ ಎಂದು ದೃಢಪಟ್ಟಿದೆ. ಇದಾದ ನಂತರ ಬಾಲಾಜಿ ಟ್ರೇಡರ್ಸ್ ಮತ್ತು ಅವರಿಗೆ ಸರಬರಾಜು ಮಾಡುವವರು ಹಾಗೂ ತುಪ್ಪ ತಯಾರಿಸುವವರ ದೊಡ್ಡ ಜಾಲವೇ ಇದ್ದು, ಎಲ್ಲಾ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಬಮೂಲ್ ಎಂ.ಡಿ.ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಬಾಲಾಜಿ ಟ್ರೇಡರ್ಸ್ ಮೇಲೆ ದಾಳಿ ನಡೆಸಿದಾಗ, ಸೆಲ್ವಂ ಎಂಬ ವ್ಯಕ್ತಿ ನಕಲಿ ತುಪ್ಪ ತಯಾರಿಸುತ್ತಿದ್ದದ್ದು ತಿಳಿದು ಬಂದಿದೆ. ನಂತರ ಆರೋಪಿ ಸೆಲ್ವಂ ಮನೆ ಮೇಲೆ ದಾಳಿ ನಡೆಸಿದಾಗ ಆತ ಪರಾರಿಯಾಗಿದ್ದಾನೆ. ವಿ.ವಿ. ಪುರಂ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ವಾವ್ಹ್…! 5 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗ್ತಿದೆ ಈ ಫೋನ್

Posted: 19 Mar 2019 02:55 AM PDT

ಚೀನಾ ಸ್ಮಾರ್ಟ್ಫೋನ್ ಕಂಪನಿ ಶಿಯೋಮಿ ಮಾರ್ಚ್ 19ರಂದು ಭಾರತದಲ್ಲಿ ರೆಡ್ ಮಿ ಗೋ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪನಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದು ಕಂಪನಿಯ ಪ್ರವೇಶ ಮಟ್ಟದ ಸ್ಮಾರ್ಟ್ಫೋನ್ ಆಗಿದೆ.

Android Go ನಲ್ಲಿ ರನ್ ಆಗುವ ಕಂಪನಿಯ ಮೊದಲ ಮೊಬೈಲ್ ಇದಾಗಿದೆ. ಬೆಲೆ ಬಗ್ಗೆ ಹೇಳೋದಾದ್ರೆ ಗ್ರಾಹಕರಿಗೆ ಈ ಮೊಬೈಲ್ 4,499 ರೂಪಾಯಿಗೆ ಲಭ್ಯವಿದೆ. ಈ ಮೊಬೈಲ್ ಮಾರ್ಚ್ 22ರ ಮಧ್ಯಾಹ್ನ 12 ಗಂಟೆಯಿಂದ ನಿಮಗೆ ಲಭ್ಯವಾಗಲಿದೆ. ಈ ಫೋನ್ ಗೆ 5 ಇಂಚಿನ ಹೆಚ್ ಡಿ ಡಿಸ್ಪ್ಲೇ ನೀಡಲಾಗಿದೆ.

ರೆಡ್ ಮಿ ಗೋ ಫೋನ್ ಗೆ 1ಜಿಬಿ ರ್ಯಾಮ್ ಹಾಗೂ 8 ಜಿಬಿ ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಕಾರ್ಡ್ ಮೂಲಕ ಅದನ್ನು 128 ಜಿಬಿಯವರೆಗೆ ವಿಸ್ತರಿಸಬಹುದಾಗಿದೆ. ವಿಶೇಷವೆಂದ್ರೆ ಫೋನ್ ಗೆ ಗೂಗಲ್ ಗೋ ಆಪ್ ನೀಡಲಾಗಿದೆ. ಇದ್ರಲ್ಲಿರುವ ಗೂಗಲ್ ಅಸಿಸ್ಟೆಂಟ್ ಹಿಂದಿಗೆ ಸಪೋರ್ಟ್ ಮಾಡಲಿದೆ.

ಫೋನ್ ಗೆ ಒಂದು ರಿಯರ್ ಕ್ಯಾಮರಾ ನೀಡಲಾಗಿದೆ. ಕ್ಯಾಮರಾ 8 ಮೆಗಾಪಿಕ್ಸಲ್ ಹೊಂದಿದ್ದು, ಸೆಲ್ಫಿಗಾಗಿ ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ. ಡ್ಯುಯಲ್ ಸಿಮ್ ಲಭ್ಯವಿದೆ. ಫೋನ್ ಗೆ 3,000 mAh ಬ್ಯಾಟರಿ ನೀಡಲಾಗಿದೆ.