Translate

Saturday, March 16, 2019

Kannada News | Karnataka News | India News

Kannada News | Karnataka News | India News


ಕೂಲಿಗೆ ಬಂದಾಗಲೇ ನಡೀತು ನಡೆಯಬಾರದ ಘಟನೆ

Posted: 16 Mar 2019 07:56 AM PDT

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿಯಲ್ಲಿ ಕಾಡಾನೆ ತುಳಿತಕ್ಕೆ ಕೂಲಿಕಾರ್ಮಿಕ ಬಲಿಯಾಗಿದ್ದಾರೆ.

ಪ್ರೇಮನಾಥ(50) ಮೃತಪಟ್ಟವರೆಂದು ಗುರುತಿಸಲಾಗಿದೆ. ಮೂಡಿಗೆರೆ ತಾಲ್ಲೂಕು ಭಾರತಿಬೈಲು ಗ್ರಾಮದ ನಿವಾಸಿಯಾಗಿರುವ ಪ್ರೇಮನಾಥ ಕಾಫಿ ತೋಟದ ಕೆಲಸಕ್ಕೆಂದು ಬಂದಿದ್ದು, ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.

ಒಂದೇ ತಿಂಗಳಲ್ಲಿ ಒಂಟಿ ಸಲಗದ ದಾಳಿಗೆ ಇಬ್ಬರು ಬಲಿಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಯಿ ಮೇಲೆಯೇ ರಾಕ್ಷಸೀಯ ಕೃತ್ಯವೆಸಗಿದ ಪುತ್ರ

Posted: 16 Mar 2019 07:54 AM PDT

ಹಾವೇರಿ: ಪುತ್ರನೇ ಮಾರಕಾಸ್ತ್ರಗಳಿಂದ ಥಳಿಸಿ ತಾಯಿಯನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ಹಾವೇರಿ ತಾಲ್ಲೂಕಿನ ನೆಗಳೂರು ಗ್ರಾಮದಲ್ಲಿ ನಡೆದಿದೆ.

60 ವರ್ಷದ ಕರಿಯಮ್ಮ ಹತ್ಯೆಯಾದವರೆಂದು ಗುರುತಿಸಲಾಗಿದೆ. ಅವರ ಪುತ್ರ ಕುಮಾರ್(30) ಮಾರಕಾಸ್ತ್ರಗಳಿಂದ ತಾಯಿಯನ್ನು ಥಳಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮಾಹಿತಿ ಪಡೆದ ಗುತ್ತಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗೆಳತಿಯ ಗಂಡನೊಂದಿಗೆ ಸರಸ, ಮನೆಗೆ ಬಂದ ಪತಿಗೆ ಕಂಡಿದ್ದೇನು ಗೊತ್ತಾ?

Posted: 16 Mar 2019 07:26 AM PDT

ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ ಪತಿಗೆ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಣನಕುಂಟೆಯ ಗಣಪತಿಪುರ ನಿವಾಸಿಯಾಗಿರುವ 33 ವರ್ಷದ ವ್ಯಕ್ತಿಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಾರ್ಚ್ 10 ರಂದು ರಾತ್ರಿ ಪತಿ ಮನೆಯಿಂದ ಹೊರಗೆ ಹೋಗಿದ್ದು, ಪರ್ಸ್ ಮತ್ತು ಫೋನ್ ಬಿಟ್ಟು ಬಂದ ಕಾರಣ ಮನೆಗೆ ವಾಪಸ್ ಹೋಗಿದ್ದಾರೆ.

ಆದರೆ, ಅರ್ಧ ಗಂಟೆಯಾದರೂ ಬಾಗಿಲು ತೆಗೆದಿಲ್ಲ. ನಂತರದಲ್ಲಿ ಪತ್ನಿ ಬಾಗಿಲು ತೆಗೆದಿದ್ದು, ಒಳ ಹೋಗಿ ನೋಡಿದಾಗ ಸ್ನೇಹಿತ ಅರೆನಗ್ನ ಸ್ಥಿತಿಯಲ್ಲಿ ಕಂಡಿದ್ದಾನೆ. ಪತ್ನಿ ಮತ್ತು ಸ್ನೇಹಿತ ಅನೈತಿಕ ಸಂಬಂಧ ಹೊಂದಿರುವುದು ಪತಿಗೆ ಗೊತ್ತಾಗಿ ಗಲಾಟೆಯಾಗಿದೆ. ಈ ವಿಷಯವನ್ನು ಬಹಿರಂಗಪಡಿಸಿದರೆ ಮಕ್ಕಳನ್ನು ಕೊಲ್ಲುವುದಾಗಿ ಪತ್ನಿ ಮತ್ತು ಪ್ರಿಯಕರ ಬೆದರಿಸಿದ್ದಾರೆ. ಅಲ್ಲದೇ, ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ಅಂದ ಹಾಗೆ ಪತ್ನಿ ಮತ್ತು ಆಕೆಯ ಪ್ರಿಯಕರನ ಪತ್ನಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಗೆಳತಿಯರಾಗಿದ್ದರು. ಬಳಿಕ ಎರಡೂ ಕುಟುಂಬದ ನಡುವೆ ಸ್ನೇಹ ಬೆಳೆದಿದೆ. ಗೆಳತಿಯ ಪತಿಯೊಂದಿಗೇ ಮಹಿಳೆ ಅನೈತಿಕ ಸಂಬಂಧ ಬೆಳೆಸಿದ್ದಾಳೆ. ಈಗ ಪ್ರಿಯಕರನೊಂದಿಗೆ ಸೇರಿ ಪತಿಯ ಮೇಲೆ ಹಲ್ಲೆ ನಡೆಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಹೋಳಿಗೆ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ ರಾಖಿ ಸಾವಂತ್

Posted: 16 Mar 2019 06:55 AM PDT

ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಈಗ್ಲೇ ಹೋಳಿಗೆ ಶುಭಕೋರಿದ್ದಾಳೆ. ರಾಖಿ ಸಾವಂತ್, ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾಳೆ. ಮುಖಕ್ಕೆ, ದೇಹಕ್ಕೆ ಕೆಂಪು ಮತ್ತು ಹಸಿರು ಬಣ್ಣ ಬಳಿದುಕೊಂಡಿರುವ ರಾಖಿ, ಅಶ್ಲೀಲ ಫೋಸ್ ನೀಡಿದ್ದಾಳೆ.

ರಾಖಿ ಸಾವಂತ್ ವಿಡಿಯೋಕ್ಕೆ ಸಿಕ್ಕಾಪಟ್ಟೆ ಕಮೆಂಟ್ ಬರ್ತಿದೆ. ಟ್ರೋಲರ್ ರಾಖಿ ಕಾಲೆಳೆಯುತ್ತಿದ್ದಾರೆ. ನೀನು ಭಾರತಕ್ಕಿಂತ ಪಾಕಿಸ್ತಾನದಲ್ಲಿರುವುದು ಬೆಸ್ಟ್ ಎಂದು ಕೆಲವರು ಹೇಳಿದ್ದಾರೆ. ಪೂನಂ ಪಾಂಡೆ ಆಗಲು ಹೋಗಬೇಡ ಎಂದು ಮತ್ತೆ ಕೆಲವರು ಹೇಳಿದ್ದಾರೆ.

ಇನ್ನೊಬ್ಬ, ನಾನೂ ಬಣ್ಣ ಹಚ್ಚಿಕೊಳ್ಳಬೇಕು. ಎಲ್ಲಿ ಸಿಗುತ್ತೆ ಎಂದು ಪ್ರಶ್ನೆ ಮಾಡಿದ್ದಾನೆ. ಕೆಲ ದಿನಗಳ ಹಿಂದೆ ಶೋ ಒಂದರಲ್ಲಿ ಕಿರುಕುಳ ನಡೆದಿದೆ ಎಂದು ರಾಖಿ ಆರೋಪ ಮಾಡಿದ್ಲು. ಅದಕ್ಕೂ ಮೊದಲು ಮದುವೆ ವಿಚಾರಕ್ಕೆ ರಾಖಿ ಸುದ್ದಿಯಾಗಿದ್ದಳು.

 

ಸಸ್ಪೆಂಡ್ ಮಾಡಿದ್ರೂ, ಸುಮಲತಾ ಪರ ಪ್ರಚಾರ ಎಂದ್ರು ಕಾಂಗ್ರೆಸ್ ಮುಖಂಡ

Posted: 16 Mar 2019 06:51 AM PDT

 ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದೆ.

ಸಿಎಂ ಪುತ್ರ ನಿಖಿಲ್ ಕುಮಾರ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದು, ಈಗಾಗಲೇ ಪ್ರಚಾರ ಕೈಗೊಂಡಿದ್ದಾರೆ. ಆದರೆ, ಮೈತ್ರಿಕೂಟದ ಅಭ್ಯರ್ಥಿಯನ್ನು ಕೆಲವು ಕಾಂಗ್ರೆಸ್ ಮುಖಂಡರು ಬೆಂಬಲಿಸದೇ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್ ಅವರಿಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದಾರೆ.

ಕೆ.ಆರ್. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಬಹಿರಂಗವಾಗಿಯೇ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ನನ್ನನ್ನು ಪಕ್ಷದಿಂದ ಸಸ್ಪೆಂಡ್ ಮಾಡಿದರೂ ಪರವಾಗಿಲ್ಲ. ನಾನು ಸುಮಲತಾ ಅವರ ಪರವಾಗಿಯೇ ಪ್ರಚಾರ ನಡೆಸುತ್ತೇನೆ ಎಂದು ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಸುಮಲತಾ ಅಂಬರೀಶ್ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಒಳ್ಳೆಯ ಅಭ್ಯರ್ಥಿಯೊಂದಿಗೆ ನಾವು ಕೆಲಸ ಮಾಡುತ್ತೇವೆ. ನಮಗೆ ಯಾವುದೇ ಭಯ ಇಲ್ಲ. ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಿದ್ದರೆ ಅವರ ಪರವಾಗಿ ಕೆಲಸ ಮಾಡುತ್ತಿದ್ದೆವು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಇಲ್ಲ. ನಾವು ಸುಮಲತಾ ಅವರಿಗೆ ಬೆಂಬಲ ನೀಡಿ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಸರಿಯಾಗಿ ಕೆಲಸ ಮಾಡದಿದ್ದರೆ ಮೈಸೂರಿನಲ್ಲಿ ನಾವೂ ಅದೇ ರೀತಿ ಮಾಡುತ್ತೇವೆ ಎಂದು ಸಚಿವ ಸಾರಾ ಮಹೇಶ್ ಹೇಳಿಕೆ ನೀಡಿದ ಬಳಿಕ, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.

‘ನಾನು ಮೋದಿ ಇದ್ದಂತೆ! ಆದ್ರೆ ಅವರಿಗೆ ಪತ್ನಿ ಇಲ್ಲ, ನನಗೆ ಇದ್ದಾಳೆ’ ಎಂದ್ರು ಬಿಜೆಪಿ ಮುಖಂಡ

Posted: 16 Mar 2019 06:34 AM PDT

 ಯಾದಗಿರಿ: ಬಿಜೆಪಿ ಮುಖಂಡ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಯಾದಗಿರಿಯಲ್ಲಿ ಪ್ರಧಾನಿ ಮೋದಿ ಕುರಿತು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಾಬುರಾವ್ ಚಿಂಚನಸೂರ, ನಾನು ಒಂದು ರೀತಿ ಪ್ರಧಾನಿ ಮೋದಿ ಇದ್ದಂತೆ. ಆದರೆ, ಪ್ರಧಾನಿಯವರಿಗೆ ಪತ್ನಿ ಇಲ್ಲ, ನನಗೆ ಪತ್ನಿ ಇದ್ದಾಳೆ. ಅಷ್ಟೇ ವ್ಯತ್ಯಾಸ ಎಂದು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಡಾ. ಉಮೇಶ್ ಜಾಧವ್ ಅವರನ್ನು ಚುನಾಯಿಸಬೇಕು. ಉಮೇಶ್ ಜಾಧವ್ ಗೆದ್ದಲ್ಲಿ ಕೇಂದ್ರದಲ್ಲಿ ಖರ್ಗೆ ಅವರಿಗಿಂತ ಒಳ್ಳೆಯ ಮಂತ್ರಿ ಆಗಲಿದ್ದಾರೆ ಎಂದು ಹೇಳಿದ್ದಾರೆ.

‘ಉತ್ತರಾಧಿಕಾರಿ’ಯಾಗಲು ಹೊರಟ ಗೌಡರಿಗೆ ಸಿದ್ದರಾಮಯ್ಯ ಶಿಷ್ಯರಿಂದ ‘ಬಿಗ್ ಶಾಕ್’

Posted: 16 Mar 2019 06:12 AM PDT

ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿರುವ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ.

ಈ ಕ್ಷೇತ್ರವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಪ್ರತಿನಿಧಿಸುತ್ತಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಐವರು ಕಾಂಗ್ರೆಸ್ ಶಾಸಕರು ಹಾಗೂ ಇಬ್ಬರು ಜೆಡಿಎಸ್ ಶಾಸಕರು ಇದ್ದಾರೆ. ಈ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಿಷ್ಯರಾಗಿರುವ ಎಸ್.ಟಿ. ಸೋಮಶೇಖರ್ ಮತ್ತು ಬೈರತಿ ಬಸವರಾಜ್ ಸೇರಿದಂತೆ ಕಾಂಗ್ರೆಸ್ ಶಾಸಕರು ಜೆಡಿಎಸ್ ಅಭ್ಯರ್ಥಿಗೆ ಷರತ್ತು ಹಾಕಿದ್ದಾರೆ.

ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದಲ್ಲಿ ಮಾತ್ರ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ದೇವೇಗೌಡರ ಸ್ಪರ್ಧೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರ ಶಿಷ್ಯಂದಿರು ಈ ಬೇಡಿಕೆ ಮುಂದಿಟ್ಟಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರ ಕ್ಷೇತ್ರಗಳಿಗೆ ತಾರತಮ್ಯ ಮಾಡದೆ ಅನುದಾನ ಬಿಡುಗಡೆ ಮಾಡಬೇಕು. ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದಲ್ಲಿ ಚುನಾವಣೆಯಲ್ಲಿ ಕೆಲಸ ಮಾಡುವುದಾಗಿ ಸಿದ್ದರಾಮಯ್ಯ ಅವರಿಗೆ ಶಾಸಕರು ಹೇಳಿದ್ದಾರೆ. ಅಲ್ಲದೆ ಪಕ್ಷದ ಅಭ್ಯರ್ಥಿಯಾದ ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಸಭೆ ಏರ್ಪಾಡು ಮಾಡಬೇಕೆಂದು ಕೇಳಿಕೊಂಡಿದ್ದು, ಇದಕ್ಕೆ ಸಿದ್ದರಾಮಯ್ಯ ಒಪ್ಪಿದ್ದಾರೆ.

2 ದಿನದಲ್ಲಿ ಸಭೆ ಕರೆಯಲಾಗುವುದು. ಎಲ್ಲರೊಂದಿಗೂ ಚರ್ಚೆ ನಡೆಸಲಾಗುವುದು. ಮೈತ್ರಿಕೂಟದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಎಲ್ಲರ ಗಮನಸೆಳೆದಿದೆ ಅಭಿಶೇಕ್ ಅಂಬರೀಶ್ ನೀಡಿದ ಈ ಹೇಳಿಕೆ

Posted: 16 Mar 2019 05:57 AM PDT

ಮಂಡ್ಯ:  ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರ್ ಮತ್ತು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿರುವ ಸುಮಲತಾ ಅಂಬರೀಶ್ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಸುಮಲತಾ ಅವರ ಪರವಾಗಿ ಪುತ್ರ ಅಭಿಶೇಕ್ ಕೂಡ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ನಿಖಿಲ್ ಆತ್ಮೀಯ ಸ್ನೇಹಿತರು. ನಾವಿಬ್ಬರು ಈಗಲೂ ಗುಡ್ ಫ್ರೆಂಡ್ಸ್ ಆಗಿದ್ದೇವೆ ಎಂದು ಹೇಳಿದ್ದಾರೆ.

ಮಂಡ್ಯದ ಕೆ.ಆರ್. ನಗರದಲ್ಲಿ ಮಾತನಾಡಿದ ಅಭಿಶೇಕ್, ನಿಖಿಲ್ ಅವರೊಂದಿಗೆ ನನ್ನ ಸ್ನೇಹ ಚೆನ್ನಾಗಿದೆ. ಆದರೆ, ರಾಜಕೀಯದಲ್ಲಿ ಮಾತ್ರ ನಾವು ಬೇರೆ ಬೇರೆ ಆಗಿದ್ದೇವೆ. ನಾನು ಮತ್ತು ನಿಖಿಲ್ ಗುಡ್ ಫ್ರೆಂಡ್ಸ್ ಆಗಿದ್ದೇವೆ. ಮುಂದೆಯೂ ನಮ್ಮ ಫ್ರೆಂಡ್ ಶಿಪ್ ಹಾಗೆಯೇ ಇರುತ್ತದೆ. ಚುನಾವಣೆ, ರಾಜಕೀಯ ಬೇರೆ ಬೇರೆ ಎಂದು ಅಭಿಶೇಕ್ ಹೇಳಿದ್ದಾರೆ.

ಮಾಯವಾಯ್ತು ಸ್ಟಾರ್ ಸಿಂಗರ್ ಹನುಮಂತನ ಮೊಬೈಲ್

Posted: 16 Mar 2019 05:25 AM PDT

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಸರಿಗಮಪ' ಶೋನಲ್ಲಿ ರನ್ನರ್ ಅಪ್ ಆಗಿರುವ ಕುರಿಗಾಯಿ ಹನುಮಂತ ಸ್ಟಾರ್ ಸಿಂಗರ್ ಆಗಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗಿದೆ.

ಹನುಮಂತ ಅವರನ್ನು ವಿವಿಧೆಡೆ ಆಹ್ವಾನಿಸಿ ಗೌರವಿಸಲಾಗುತ್ತಿದೆ. ಹಾವೇರಿ ಜಿಲ್ಲೆಯ ಶಿಶುನಾಳ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹನುಮಂತ ಅಲ್ಲಿಗೆ ತೆರಳಿದ್ದಾರೆ.

ಇದೇ ವೇಳೆ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಕಳ್ಳರು ಕೈಚಳಕ ತೋರಿ ಹನುಮಂತ ಅವರ ಮೊಬೈಲ್ ಅನ್ನು ಕಳವು ಮಾಡಿದ್ದಾರೆ. 'ಸರಿಗಮಪ' ಶೋನಲ್ಲಿ ಸ್ಪರ್ಧಿಯಾಗಿದ್ದ ಡಾ. ಅಭಿಷೇಕ್ ಅವರು ಹನುಮಂತ ಅವರಿಗೆ ಸ್ಮಾರ್ಟ್ ಫೋನ್ ಕೊಟ್ಟಿದ್ದರು. ಆ ಮೊಬೈಲನ್ನು ಕಳ್ಳರು ಎಗರಿಸಿದ್ದಾರೆ. ಇದರಿಂದ ಹನುಮಂತ ಬೇಸರಗೊಂಡಿದ್ದಾರೆ.

ಅದನ್ನು ತೋರಗೊಡದೆ ಹನುಮಂತ ಕಾರ್ಯಕ್ರಮದಲ್ಲಿ ಹಾಡು ಹಾಡಿ ರಂಜಿಸಿದ್ದಾರೆ. ಬಳಿಕ ಫಸ್ಟ್ ಟೈಮ್ ಮೊಬೈಲ್ ಕಳೆದುಕೊಂಡಿದ್ದೇನೆ. ಅದರಲ್ಲಿ ಬಹಳ ನಂಬರ್ ಗಳಿವೆ. ಮೊಬೈಲ್ ನೀವೇ ಇಟ್ಟುಕೊಳ್ಳಿ. ಸಿಮ್ ಆದರೂ ಕೊಡಿ ಎಂದು ಗೋಗರೆದಿದ್ದಾರೆ.

ಅಂದ ಹಾಗೆ ಹನುಮಂತ ಯಾವುದೇ ಸಂಗೀತ ಕ್ಲಾಸ್ ಗೆ ಹೋಗಿ ಹಾಡು ಹಾಡುವುದನ್ನು ಕಲಿತಿಲ್ಲ. ಕುರಿ ಕಾಯುತ್ತಲೇ ಮೊಬೈಲ್ ಗಳಲ್ಲಿ ಹಾಡು ಕೇಳುತ್ತಾ ಅವರು ಹಾಡುವುದನ್ನು ರೂಢಿಸಿಕೊಂಡಿದ್ದಾರೆ. ತಮ್ಮ ಪ್ರೀತಿಯ ಮೊಬೈಲ್ ಕಳೆದು ಕೊಂಡಿರುವುದಕ್ಕೆ ಅವರು ಬೇಸರವಾಗಿದ್ದಾರೆ.

ಶಾಸಕ ಹರತಾಳು ಹಾಲಪ್ಪ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Posted: 16 Mar 2019 05:10 AM PDT

ಶಿವಮೊಗ್ಗ: ಸಾಗರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಶಾಸಕ ಹಾಲಪ್ಪ ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಸ್ಪಾಡಿ ಬಳಿ ಟ್ರ್ಯಾಕ್ಟರ್ ಎದುರಿಗೆ ಬಂದಿದ್ದು, ಡಿಕ್ಕಿ ತಪ್ಪಿಸಲು ಚಾಲಕ ಮುಂದಾಗುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ ಇಳಿದಿದೆ.

ನಂತರದಲ್ಲಿ ಶಾಸಕರು ಬೇರೆ ಕಾರಿನಲ್ಲಿ ಪ್ರಯಾಣ ಮುಂದುವರೆಸಿದ್ದಾರೆ ಎನ್ನಲಾಗಿದೆ.

ಒಂದೇ ಬಾರಿ 6 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

Posted: 16 Mar 2019 04:22 AM PDT

ಟೆಕ್ಸಾಸ್ ನ ಹೂಸ್ಟನ್ ನಲ್ಲಿ ಮಹಿಳೆಯೊಬ್ಬಳು 6 ಮಕ್ಕಳಿಗೆ ಜನ್ಮ ನೀಡಿದ್ದಾಳೆ.ಚಇಡೀ ವಿಶ್ವದಲ್ಲಿರುವ 4.7 ಶತಕೋಟಿ ಜನರಲ್ಲಿ ಒಬ್ಬ ಮಹಿಳೆ ಮಾತ್ರ 6 ಮಕ್ಕಳಿಗೆ ಒಂದೇ ಬಾರಿ ಜನ್ಮ ನೀಡುತ್ತಾಳೆ. ಟೆಕ್ಸಾಸ್ ನ ಮಹಿಳಾ ಆಸ್ಪತ್ರೆಯಲ್ಲಿ ಮಹಿಳೆ 6 ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಆಸ್ಪತ್ರೆ ಮೂಲಗಳ ಪ್ರಕಾರ, ಮಹಿಳೆ ಮಾರ್ಚ್ 15ರಂದು ಬೆಳಿಗ್ಗೆ 4.50ರಿಂದ 4.59ರ ಮಧ್ಯೆ 6 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ನಾಲ್ಕು ಗಂಡು ಮಕ್ಕಳು ಹಾಗೂ 2 ಹೆಣ್ಣು ಮಕ್ಕಳಿಗೆ ಮಹಿಳೆ ಜನ್ಮ ನೀಡಿದ್ದಾಳೆ. ಮಕ್ಕಳ ತೂಕ 1 ಪೌಂಡು 12 ಔನ್ಸ್ ನಿಂದ ಹಿಡಿದು 2 ಪೌಂಡ್ 14 ಔನ್ಸ್ ವರೆಗಿದೆಯಂತೆ.

ಆರೂ ಮಕ್ಕಳು ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಮಹಿಳೆ ಕೂಡ ಆರೋಗ್ಯವಾಗಿದ್ದಾಳಂತೆ. ಮಕ್ಕಳನ್ನು ಐಸಿಯುವಿನಲ್ಲಿಟ್ಟಿದ್ದು, ಹೆಣ್ಣು ಮಕ್ಕಳಿಗೆ ಮಹಿಳೆ ಈಗಾಗಲೇ ಹೆಸರಿಟ್ಟಿದ್ದಾಳೆ.

 

ಬಿಡುಗಡೆಗೆ ಸಿದ್ಧವಾಯ್ತು ‘ಪಿಎಂ ನರೇಂದ್ರ ಮೋದಿ’ ಚಿತ್ರ

Posted: 16 Mar 2019 03:36 AM PDT

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮೋದಿಯವರ ಜೀವನಾಧಾರಿತ 'ಪಿಎಂ ನರೇಂದ್ರ ಮೋದಿ’ ಚಿತ್ರ ಬರುವ ಏಪ್ರಿಲ್‍ 12 ರಂದು ತೆರೆಗೆ ಬರಲಿದೆ.

ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ರೆ, ಮೇರಿಕೋಮ್‍, ಸರಬ್ಜಿತ್ ಚಿತ್ರಗಳ ನಿರ್ದೇಶಕ ಉಮಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನರೇಂದ್ರ ಮೋದಿ ಗುಜರಾತ್‍ ಮುಖ್ಯಮಂತ್ರಿಯಾದಾಗಿನಿಂದ ಹಿಡಿದು, ನಂತರ ಪ್ರಧಾನಿಯಾಗುವವರೆಗಿನ ರಾಜಕೀಯ ಜೀವನದ ಕತೆ ಈ ಚಿತ್ರದ ಕಥಾಹಂದರವಾಗಿದೆ.

ಗುಜರಾತ್‍, ಉತ್ತರಾಖಂಡ್‍, ಮಹಾರಾಷ್ಟ್ರಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು ಇದೀಗ ತೆರೆಗೆ ಬರಲು ಸಿದ್ಧವಾಗಿದೆ. ಮೋದಿ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಕುತೂಹಲದಿಂದ ಕಾಯ್ತಿದ್ದಾರೆ.

ಪೇಟಿಎಂ ಶುರು ಮಾಡಿದೆ ಪೇಮೆಂಟ್ ಬ್ಯಾಂಕ್ ಆಪ್

Posted: 16 Mar 2019 03:35 AM PDT

ಪೇಟಿಎಂ, ಪೇಮೆಂಟ್ ಬ್ಯಾಂಕಿಂಗ್ ಆಪ್ ಶುರು ಮಾಡಿದೆ. ಮೊಬೈಲ್ ಬ್ಯಾಂಕಿಂಗ್ ಸೇವೆಗಾಗಿ ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು, ಡೆಬಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು, ಡಿಜಿಟಲ್ ಡೆಬಿಟ್ ಕಾರ್ಡ್ ಬಳಕೆಗೆ ಇದು ಸಹಾಯವಾಗಲಿದೆ.

ಗ್ರಾಹಕರು ಈ ಮೊಬೈಲ್ ಬ್ಯಾಂಕಿಂಗ್ ಆಪ್ ಜೊತೆ 24 ಗಂಟೆ ಸಹಾಯ ಹಾಗೂ ಬೆಂಬಲ ಪಡೆಯಲಿದ್ದಾರೆ. ಆಂಡ್ರಾಯ್ಡ್ ಬಳಕೆದಾರರು Google Play ನಲ್ಲಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಸದ್ಯ iOS ಬಳಕೆದಾರರಿಗೆ ಇದು ಲಭ್ಯವಿಲ್ಲ. ಶೀಘ್ರವೇ ಇದು iOS ಬಳಕೆದಾರರಿಗೆ ಸಿಗಲಿದೆ.

ಪೇಟಿಎಂ ಎರಡು ಆಪ್ ನಲ್ಲಿಯೂ ಸೇವೆ ಮುಂದುವರೆಸಲಿದೆ. ಗ್ರಾಹಕರು ತಮಗೆ ಬೇಕಾದ ಆಪ್ ಬಳಕೆ ಮಾಡಬಹುದು ಎಂದು ಪೇಟಿಎಂ ಹೇಳಿದೆ. ಆರ್ಬಿಐ 2017ರಲ್ಲಿ ಕಂಪನಿಗಳಿಗೆ ತನ್ನದೇ ಬ್ಯಾಂಕ್ ಓಪನ್ ಮಾಡಲು ಅನುಮತಿ ನೀಡಿದ ಕಾರಣ ಪೇಟಿಎಂ ಬ್ಯಾಂಕ್ ಶುರುವಾಗಿತ್ತು. ಸದ್ಯ ಇದ್ರಲ್ಲಿ 43 ಮಿಲಿಯನ್ ಗ್ರಾಹಕರಿದ್ದಾರೆ.

 

ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಪತಿ ವಿರುದ್ಧ ಪತ್ನಿ ದೂರು

Posted: 16 Mar 2019 01:52 AM PDT

ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.

ಸುರೇಶ್ ಎಂಬಾತ ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಚ್ಛೇದಿತ ಮಹಿಳೆಯನ್ನು ಪ್ರೀತಿಸುತ್ತಿದ್ದ. ಆದ್ರೆ ವಿಚ್ಛೇದಿತ ಮಹಿಳೆಯನ್ನು ಮದುವೆಯಾಗಲು ಪಾಲಕರು ಒಪ್ಪುವುದಿಲ್ಲ ಎಂದು ಕಾರಣ ನೀಡಿದ ಸುರೇಶ್, ಅವರನ್ನು ಒಪ್ಪಿಸಲು 20 ಲಕ್ಷ ಬೇಕು ಎಂದು ಮಹಿಳೆಯಿಂದ ಪಡೆದುಕೊಂಡಿದ್ದ.

ನಂತರ ಇಬ್ಬರು ಮದುವೆಯಾಗಿದ್ರು. ಆದ್ರೆ ಮದುವೆ ಬಳಿಕ ತನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ. ಬ್ಲೂಫಿಲ್ಮ್ ನಲ್ಲಿರುವಂತೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಡಿಮ್ಯಾಂಡ್ ಮಾಡ್ತಿದ್ದ. ಒಪ್ಪದೇ ಇದ್ದಾಗ ತನ್ನ ಮೇಲೆ ಹಲ್ಲೆ ಮಾಡ್ತಿದ್ದಾ ಎಂದು ಮಹಿಳೆ ದೂರು ನೀಡಿದ್ದಾಳೆ.

ಈಗಾಗಲೇ ಮೊದಲ ಪತಿಯಿಂದ ಮಹಿಳೆಗೆ ಒಬ್ಬಳು ಮಗಳಿದ್ದಳು. ಸುರೇಶ್‍ನನ್ನು ಮದುವೆಯಾದ ಬಳಿಕ ಗರ್ಭಿಣಿಯಾದಾಗ ತನಗೆ ಗರ್ಭಪಾತ ಮಾಡಿಸಿದ್ರು. ಅಲ್ಲದೆ ಮನೆಯಲ್ಲಿ ಕೂತರೆ ಕೆಲಸಕ್ಕೆ ಹೋಗುವಂತೆ ಗಂಡ ಕಿರುಕುಳ ನೀಡ್ತಿದ್ದ, ಬಂದ ಸಂಬಳವನ್ನೆಲ್ಲಾ ಕಿತ್ತುಕೊಳ್ತಿದ್ದ. ಇದಕ್ಕೆ ಆತನ ತಂದೆ-ತಾಯಿ ಕೂಡಾ ಸಾಥ್ ನೀಡ್ತಿದ್ರು ಎಂದು ಮಹಿಳೆ ಆರೋಪಿಸಿದ್ದಾಳೆ.

ಬೇಸಿಗೆಗೆ ಬೇಕೇ ಬೇಕು ಈ ಪಾನೀಯ

Posted: 16 Mar 2019 01:50 AM PDT

ಬೇಸಿಗೆಯಲ್ಲಿ ಎಳನೀರು ಕುಡಿಯುವವರ ಸಂಖ್ಯೆ ಹೆಚ್ಚು. ದೇಹಕ್ಕೆ ಆರೋಗ್ಯಕರ ಹಾಗೂ ಚೈತನ್ಯವನ್ನು ತುಂಬುವ ಶಕ್ತಿ ಈ ಪಾನೀಯಕ್ಕಿದೆ. ಮಿನರಲ್, ವಿಟಮಿನ್, ಕಾರ್ಬೋಹೈಡ್ರೇಟ್ ಇನ್ನು ಮುಂತಾದ ಅಂಶಗಳು ಎಳನೀರಿನಲ್ಲಿ ಇರುವುದರಿಂದ ಬೇಸಿಗೆಯಲ್ಲಿ ಈ ಡ್ರಿಂಕ್ ಉತ್ತಮ ಎಂದು ಹೇಳಬಹುದು.

* ಎಳನೀರಿನ ಸೇವನೆಯಿಂದ ದೇಹದಲ್ಲಿ ಉಂಟಾಗುವ ಅತಿಯಾದ ಉಷ್ಣತೆಯನ್ನು ತಡೆಯಬಹುದು.

* ಬೇಸಿಗೆಯಲ್ಲಿ ಉಂಟಾಗುವ ಡಿಹೈಡ್ರೇಷನ್ ನಿಂದ ಮುಕ್ತಿ ಪಡೆಯಲು ಎಳನೀರನ್ನು ಸೇವಿಸಬೇಕು.

* ಜೀರ್ಣಶಕ್ತಿಯನ್ನು ಹೆಚ್ಚಿಸುವ ಶಕ್ತಿ ಎಳನೀರಿಗಿದೆ.

* ಎಳನೀರು ಕೊಲೆಸ್ಟ್ರಾಲ್ ಹಾಗೂ ಫ್ಯಾಟ್ ಫ್ರೀ ಆಗಿರುವುದರಿಂದ ಇದರ ಸೇವನೆ ಹೃದಯಕ್ಕೆ ಅತ್ಯುತ್ತಮ.

* ಎಳೆನೀರಿನಲ್ಲಿ ಎಲೆಕ್ಟ್ರೋಲೈಟ್ ಮತ್ತು ಪೊಟ್ಯಾಷಿಯಂ ಅಂಶವಿರುವ ಹಿನ್ನೆಲೆಯಲ್ಲಿ ದೇಹವು ಸದಾ ಚೈತನ್ಯದಿಂದ ಕೂಡಿರುತ್ತದೆ.

* ಎಳೆನೀರಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಶಕ್ತಿ ಇರುವುದರಿಂದ ದೇಹದಲ್ಲಿ ಆಗುವ ಸಣ್ಣಪುಟ್ಟ ಇನ್ಫೆಕ್ಷನ್ ಗಳನ್ನು ಹೊಡೆದೋಡಿಸುತ್ತದೆ.

* ಎಳನೀರಿನಲ್ಲಿ ಕ್ಯಾಲ್ಸಿಯಂ ಹಾಗೂ ವಿಟಮಿನ್ ಗಳು ಜಾಸ್ತಿ ಇರುವುದರಿಂದ ಇದನ್ನು ಸೇವಿಸಿದರೆ ಮೂಳೆಗಳಿಗೆ ಉತ್ತಮ.

* ಎಳನೀರು ಪ್ರತಿದಿನ ಕುಡಿಯುವ ಅಭ್ಯಾಸದಿಂದ ಮೂತ್ರಪಿಂಡದಲ್ಲಿ ಕಂಡುಬರುವ ಕಲ್ಲುಗಳು ನಿಯಂತ್ರಣವಾಗುತ್ತದೆ.

* ಎಳನೀರಿಗೆ ಕರುಳಿನ ಕಾರ್ಯವನ್ನು ಸರಾಗವಾಗಿ ನಿರ್ವಹಿಸುವ ಶಕ್ತಿ ಇದೆ.

* ವಾರಕ್ಕೊಂದು ದಿನ ಬರಿ ಎಳನೀರನ್ನು ಸೇವಿಸಿ ಉಪವಾಸ ಮಾಡಿದರೆ ದೇಹದಲ್ಲಿರುವ ಕೊಬ್ಬು ಕರಗುತ್ತದೆ.

* ಮುಂಜಾನೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವ ಅಭ್ಯಾಸ ಒಳ್ಳೆಯದು.

ಸುಮಲತಾ ಬೆನ್ನಿಗೆ ನಿಂತಿದ್ದಾರಾ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ..?

Posted: 16 Mar 2019 12:38 AM PDT

ಮಂಡ್ಯ ರಾಜಕೀಯ ಕಣ ದಿನದಿಂದ ದಿನಕ್ಕೆ ರಂಗೇರ್ತಿದೆ. ಸುಮಲತಾ ಅಂಬರೀಷ್‍ ಗೆಲುವಿಗಾಗಿ ತೆರೆಮರೆಯಲ್ಲಿದ್ದುಕೊಂಡೇ ಕೆಲ ರಾಜಕಾರಣಿಗಳು ಬೆಂಬಲ ಕೊಡ್ತಿದ್ದಾರೆ ಅಂತಾ ಹೇಳಲಾಗ್ತಿದೆ.

ಇದ್ರಲ್ಲಿ ಮಾಜಿ ಸಚಿವ, ಕಾಂಗ್ರೆಸ್‍ ಮುಖಂಡ ಚೆಲುವರಾಯಸ್ವಾಮಿ ಕೂಡಾ ಒಬ್ಬರು. ಈ ಅನುಮಾನಕ್ಕೆ ಕಾರಣ ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ಹಾಕಿದ್ದಾರೆನ್ನಲಾದ ಪೋಸ್ಟ್..!

ಹೌದು, ನನ್ನ ಬೆನ್ನ ಹಿಂದೆ ನಿಂತು ನನ್ನ ಗೆಲುವಿಗೆ ಶ್ರಮಿಸುತ್ತಿರುವ ಚೆಲುವರಾಯಸ್ವಾಮಿಯವರಿಗೆ ನನ್ನ ವಂದನೆಗಳು ಎಂದು ಸುಮಲತಾ ಬರೆದಿದ್ದಾರೆ ಅಂತಾ ಹೇಳಲಾಗ್ತಿರುವ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ. ಆದ್ರೆ ಇದನ್ನು ಸುಮಲತಾ ಅವರೇ ಹಾಕಿದ್ದಾರಾ ಅಥವಾ ಬೇರೆಯವರು ಬರೆದು ಹಾಕಿದ್ದಾರಾ ಎಂಬುದು ಈಗ ಪ್ರಶ್ನೆಯಾಗಿದೆ. ಈ ಮಧ್ಯೆ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್‍ ಕುಮಾರಸ್ವಾಮಿ ಮತ್ತು ಸುಮಲತಾ ಅವರ ಮತಬೇಟೆ ಜೋರಾಗಿದೆ.

ಟೆಕ್ಕಿಗಳ ಜೊತೆ ರಾಹುಲ್‍ ಸಂವಾದಕ್ಕೆ ಎದುರಾಯ್ತು ವಿಘ್ನ

Posted: 16 Mar 2019 12:36 AM PDT

ಬೆಂಗಳೂರಿನ ಟೆಕ್ಕಿಗಳೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಆದ್ರೆ ಇದಕ್ಕೆ ಆರಂಭದಲ್ಲೇ ಅಡ್ಡಿಯುಂಟಾಗಿದೆ.

ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಬರ್ಡ್ಸ್ ಪಾರ್ಕ್ ನಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದ್ರೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಟೆಕ್‍ ಪಾರ್ಕ್ ನಂತಹ ಸೂಕ್ಷ್ಮ ಪರಿಸರ ವಯಲದಲ್ಲಿ ರಾಜಕೀಯ ಸಮಾವೇಶಗಳು ಬೇಡ ಎಂದು ಸ್ಥಳೀಯರು ಚುನಾವಣಾಧಿಕಾರಿಗೆ ದೂರು ನೀಡಿದ್ರು. ಸ್ಥಳೀಯರ ವಿರೋಧದಿಂದಾಗಿ ರಾಹುಲ್ ಗಾಂಧಿ ಸಂವಾದದ ಸ್ಥಳವನ್ನು ಬದಲಾಯಿಸಲಾಗಿದ್ದು, ಮಾನ್ಯತಾ ಟೆಕ್‍ ಪಾರ್ಕ್ ಬಳಿ ಇರುವ ಬಯಲು ರಂಗ ಮಂದಿರದಲ್ಲಿ ಸಂವಾದ ನಡೆಸಲಾಗ್ತಿದೆ.

ಕಾಂಗ್ರೆಸ್, ಮತಬೇಟೆಗೆ ಟೆಕ್ಕಿಗಳನ್ನು ಟಾರ್ಗೆಟ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮಾನ್ಯತಾ ಟೆಕ್‍ ಪಾರ್ಕ್ ಬರ್ಡ್ಸ್ ಪಾರ್ಕ್ ಜಾಗವನ್ನು ಆಯ್ಕೆ ಮಾಡಿತ್ತು.

 

ಅಡುಗೆಗೆ ‘ಉಪ್ಪು’ ಹೆಚ್ಚಾಗಿ ಹಾಕಿದ್ದೀರಾ……

Posted: 16 Mar 2019 12:35 AM PDT

ಉಪ್ಪಿಲ್ಲ ಅಂದ್ರೆ ಅಡುಗೆ ರುಚಿಸಲಾರದು. ಹಾಗಂತ ಜಾಸ್ತಿ ಉಪ್ಪಿದ್ದರೂ ತಿನ್ನಲು ಸಾಧ್ಯವಿಲ್ಲ. ಒಮ್ಮೊಮ್ಮೆ ಗ್ರೇವಿ ಮಾಡುವ ಸಮಯದಲ್ಲಿ ಉಪ್ಪು ಹೆಚ್ಚಾಗಿ ಬಿಡುತ್ತದೆ. ಹಾಗೆಂದು ಮಾಡಿದ ಅಡುಗೆ ಬಿಸಾಡಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ಏನು ಮಾಡಬೇಕೆಂದರೆ……

ಗ್ರೇವಿ ಪದಾರ್ಥಗಳಲ್ಲಿ ಉಪ್ಪು ಹೆಚ್ಚಾದರೆ ಗೋಧಿ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಹಾಕಬೇಕು. ಈ ಹಿಟ್ಟಿನಲ್ಲಿ ಶೀಘ್ರವಾಗಿ ಉಪ್ಪು ಹೀರುವ ಗುಣವಿದೆ. ಉಪ್ಪಿನ ಪ್ರಮಾಣ ಹೆಚ್ಚಾಗಿದ್ದಲ್ಲಿ ಮತ್ತೂ 5 ಉಂಡೆಗಳನ್ನು ಸೇರಿಸಿದರೆ ಆಯ್ತು. ಹತ್ತು ನಿಮಿಷಗಳಾದ ಬಳಿಕ ರುಚಿಗೆ ಏನು ಕೊರತೆ ಇರದು.

ಸಮಯಕ್ಕೆ ಸರಿಯಾಗಿ ಮನೆಯಲ್ಲಿ ಗೋಧಿ ಹಿಟ್ಟು ಇಲ್ಲದೆ ಹೋದಲ್ಲಿ, ಚಿಕ್ಕ ಚಿಕ್ಕ ಆಲೂಗಡ್ಡೆ ಬೇಯಿಸಿ ಅದನ್ನು ಅಡುಗೆಯಲ್ಲಿ ಹಾಕಿದರೆ ಸಾಕು. ಆಲೂಗಡ್ಡೆ ಸಹ ಉಪ್ಪನ್ನು ಹೀರುತ್ತದೆ. ಕಾಲು ಗಂಟೆ ಬಳಿಕ ತೆಗೆದರೆ ಸಾಕು.

ಗ್ರೇವಿ ಅಂಟು ಅಂಟಾಗಿದ್ದಲ್ಲಿ ಅದಕ್ಕೆ ಸ್ವಲ್ಪ ಬಿಸಿ ನೀರು ಹಾಕಿದರೂ ಇಲ್ಲವೇ ಹಾಲು ಬೆರೆಸಿದರೂ ಪ್ರಯೋಜನವಿದೆ. ಹಾಲು ಉಪ್ಪು ಹೀರಿಕೊಳ್ಳದೇ ಇದ್ದರೂ ಪದಾರ್ಥಕ್ಕೆ ತುಂಬಾ ರುಚಿ ಕೊಡುತ್ತದೆ. ಹಾಲು ಬೇಡವೆನಿಸಿದರೆ ಕೆನೆ ಅಥವಾ ಚೀಸ್ ಸಹ ಸೇರಿಸಬಹುದು. ಇದು ಆಹಾರಕ್ಕೆ ರುಚಿ ನೀಡುವುದಲ್ಲದೆ ಉಪ್ಪಿನ ಪ್ರಮಾಣ ನಿಯಂತ್ರಿಸುತ್ತದೆ.

ಒಣಗಿದಂತಹ, ಪಲ್ಯದಂತಹ ಆಹಾರದಲ್ಲಿ ಉಪ್ಪು ಹೆಚ್ಚಾದಲ್ಲಿ ಸ್ವಲ್ಪ ಮೊಸರು ಮಿಶ್ರ ಮಾಡಿ. ಮೊಸರನ್ನು ಹಾಕಿದ ಬಳಿಕ ಸ್ವಲ್ಪ ಸಮಯ ಒಲೆ ಮೇಲೆ ಇಡಬೇಕು. ಆಗ ರುಚಿ ಕೆಡುವುದಿಲ್ಲ. ಆದರೆ ಮೊಸರು ಹೆಚ್ಚು ಸೇರಿಸಿದರೆ ರುಚಿ ದೂರವಾಗುತ್ತದೆ.

ಸಮ್ಮರ್ ಹಾಲಿಡೇಸ್ ‘ಎಂಜಾಯ್’ ಮಾಡಲು ಈ ತಾಣಗಳಿಗೆ ಹೋಗಿ ಬನ್ನಿ

Posted: 16 Mar 2019 12:32 AM PDT

ಬೇಸಗೆಯ ಸಂದರ್ಭದಲ್ಲಿ ಕುಟುಂಬದೊಂದಿಗೆ ಅಮೂಲ್ಯವಾದ ಸಮಯವನ್ನು ಕಳೆಯಬೇಕೇ. ಮಕ್ಕಳಿಗೆ ಸಿಗುವ ಸಮ್ಮರ್ ಹಾಲಿಡೇಸ್ ಎಂಜಾಯ್ ಮಾಡಬೇಕೆ. ಹಾಗಿದ್ದರೆ ಈ ವಿದೇಶಿ ಪ್ರವಾಸಿ ತಾಣಗಳು ಬೆಸ್ಟ್. ಜೂನ್‌ ಮುಗಿಯೋದರೊಳಗೆ ಈ ತಾಣಗಳಿಗೆ ಹೋಗಿ ಬರಬಹುದು…

ನಮಿಬಿಯ ಇಲ್ಲಿನ ಅಮೋಘವಾದ ಮರುಭೂಮಿಯ ಗಾಳಿ ತಂಪಾಗಿರುತ್ತದೆ. ನೀರಿನ ಸೆಲೆಯಿಲ್ಲದ ಈ ಪರಿಸರದಲ್ಲಿ ರಮಣೀಯವಾದ ಪ್ರಾಣಿ ಪ್ರಪಂಚ, ನಿರೀಕ್ಷಿಸದೇ ಇರುವ ಪರಿಸರವನ್ನು ವೀಕ್ಷಿಸಿ ಕಣ್ತುಂಬಿಕೊಳ್ಳಿ.

ಮಲೇಶಿಯಾದ ಬೊರೆನೊ, ಸರವಕ್ ಭತ್ತವನ್ನು ಬೆಳೆಸುವ ಈ ತಾಣಕ್ಕೆ ಬಂದು ಮೋಜನ್ನು ಅನುಭವಿಸಬಹುದು. ಸಾಂಪ್ರದಾಯಿಕ ಉಡುಗೆಗಳಲ್ಲಿ ಬರಬಹುದು ಅಥವಾ ಸ್ಥಳೀಯರೊಂದಿಗೆ ರೈಸ್ ವೈನ್ ಟೋಸ್ಟ್‌‌‌ನಲ್ಲಿ ಪಾಲ್ಗೊಳ್ಳಬಹುದು. ಸರವಕ್‌ನ ಸುಂದರ ಹಸಿರು ಪರಿಸರಗಳಲ್ಲಿ, ಅದರಲ್ಲೂ ಸೆಮೆನ್ಗೋಹ್ ಪ್ರಾಣಿಜೀವಿ ಕೇಂದ್ರ ಮತ್ತು ಬಕೊ ರಾಷ್ಟ್ರೀಯ ಉದ್ಯಾನವನದಲ್ಲಿ ಆನಂದದಿಂದ ಕಾಲ ಕಳೆಯಬಹುದು.

ಟರ್ಕಿಯ ಲೀಸಿಯನ್ ವೇ ಬಿಸಿಲಿನ ಧಗೆಯನ್ನು ತಪ್ಪಿಸಿಕೊಳ್ಳಲು 500 ಮೀಟರ್ ಗಳಷ್ಟು ಕೆಳಕ್ಕೆ ಲೀಸಿಯನ್ ವೇಯಲ್ಲಿ ಹಳೆಯ ಪಳೆಯುಳಿಕೆಗಳು ಮತ್ತು ಪೈನ್ ಕಾಡುಗಳ ಮೂಲಕ ಮರಳಿನಿಂದ ಆವೃತವಾದ ಬೀಚುಗಳಿಗೆ ಭೇಟಿ ನೀಡಬಹುದು. ಹೈ-ಎಂಡ್ ಹೋಟೆಲ್ ನಿಂದ ಆರಂಭಿಸಿ ಸಣ್ಣ ಫಲಯಾದ ಮೂಲಕ ಸುಂದರವಾದ ಬಟರ್ ಫ್ಲೈ ವ್ಯಾಲಿಯಲ್ಲಿ ಸಮಯ ಕಳೆಯಬಹುದು.

ಮಕೌ ಇದರ ಆಕಾರ ತಾವರೆಯ೦ತಿದ್ದು, ಈ ಸ್ಥಳ ಖಂಡಿತವಾಗಿಯೂ ಮೂಡನ್ನು ಉತ್ತಮವಾಗಿಡುತ್ತದೆ. ವಸಾಹತುಶಾಹಿ ಇತಿಹಾಸವನ್ನು ಹೊಂದಿರುವ ಈ ಸ್ಥಳ, ಇಲ್ಲಿನ ಡ್ರಾಗನ್ ಬೋಟ್ ಹಬ್ಬ, ನಮ್ ವಾನ್ ಸರೋವರದಲ್ಲಿ ಅಲಂಕೃತ ಡ್ರಾಗನ್ ಆಕಾರದ ಬೋಟ್ ನ ರೋವಿಂಗ್ ಗುಂಪು ರೇಸ್ ಸ್ಪರ್ದೆಯಲ್ಲಿ ಜನ ಪಾಲ್ಗೊಳ್ಳುವುದನ್ನು ಕಾಣಬಹುದು. ಇವನ್ನು ಹೊರತುಪಡಿಸಿ, ಸುಂದರವಾದ ಬೀದಿಗಳು ಹಾಗೂ ದೇವಸ್ಥಾನಗಳು ಬಣ್ಣಬಣ್ಣಗಳ ತಾವರೆಗಳಿಂದ ತಾವರೆ ಹೂವಿನ ಹಬ್ಬದಂದು ಅಲಂಕೃತಗೊಳ್ಳುವುದನ್ನು ಕಾಣಬಹುದು.

ಬ್ರೆಜಿಲ್ ನ ಸಲ್ವಡೊರ್ ಡೆ ಬಹಿಯ ಇಲ್ಲಿನ ವಸಾಹತುಶಾಹಿ ಕಟ್ಟಡದ ಸೌಂದರ್ಯದೊಂದಿಗೆ ಇಲ್ಲಿನ ಪರಿಸರ ಎಲ್ಲರನ್ನೂ ಆಕರ್ಷಕಗೊಳಿಸುತ್ತದೆ. ಬೆಳಗುವ ಚರ್ಚುಗಳನ್ನು ಹಾಗೂ ಸುಂದರವಾದ ಬೀದಿಗಳನ್ನೂ ಕಾಣಬಹುದು. ಅಮೋಘವಾದ ನೋಟಗಳಾದ ಟೆರೈರೊ ಡೆ ಜೀಸಸ್, ಸವೊ ಫ್ರಾನ್ಸಿಸ್ಕೊ ಚರ್ಚ್ ಮತ್ತು ಕಾನ್ವೆಂಟ್ ಹಾಗೆಯೇ ಪೆಲೌರಿನೊದ ಐತಿಹಾಸಿಕ ಕೇಂದ್ರ, ಇದು ಯುನೆಸ್ಕೂ ದ ವರ್ಲ್ಡ್ ಹೆರಿಟೇಜ್ ಸೈಟ್ ಆಗಿದೆ.

ಟ್ವೀಟರ್ ನಲ್ಲಿ ಚೌಕಿದಾರರ ಬಗ್ಗೆ ಮೋದಿ ಹೇಳಿದ್ರು ಈ ಮಾತು

Posted: 16 Mar 2019 12:29 AM PDT

Image result for lok-sabha-elections-2019-narendra-modi-tweets-video-launching-mai-bhi-chowkidar-campaign

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಚೌಕಿದಾರ್ ಇಮೇಜ್ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ಶನಿವಾರ ಅಧಿಕೃತ ಟ್ವೀಟರ್ ನಲ್ಲಿ ವಿಡಿಯೋ ಹಾಕಿರುವ ಮೋದಿ, ಚೌಕಿದಾರರನ್ನು ಹೊಗಳಿದ್ದಾರೆ. ವಿಡಿಯೋದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ದೇಶದ ಚೌಕಿದಾರರು ದೃಢವಾಗಿ ನಿಂತಿದ್ದಾರೆ. ದೇಶದ ಸೇವೆ ಮಾಡ್ತಿದ್ದಾರೆ ಎಂದಿದ್ದಾರೆ.

#MainBhiChowkidar ವಿಡಿಯೋ ಟ್ವಿಟ್ ಮಾಡಿರುವ ಮೋದಿ,ನಾನು ಒಂಟಿಯಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ, ಕೊಳಕು, ಸಮಾಜಕ್ಕೆ ಅಡ್ಡಿ ಮಾಡುವ ವಿಷ್ಯಗಳ ವಿರುದ್ಧ ಹೋರಾಡುತ್ತಿರುವ ಎಲ್ಲರೂ ಚೌಕಿದಾರರೇ. ದೇಶದ ಪ್ರಗತಿಗೆ ಕೆಲಸ ಮಾಡ್ತಿರುವ ಪ್ರತಿಯೊಬ್ಬ ವ್ಯಕ್ತಿ ಚೌಕಿದಾರ. ಈಗ ಪ್ರತಿಯೊಬ್ಬ ಭಾರತೀಯ ನಾನು ಚೌಕಿದಾರ ಎನ್ನುತ್ತಿದ್ದಾನೆಂದು ಮೋದಿ ಟ್ವಿಟ್ ಮಾಡಿದ್ದಾರೆ.

ಮೋದಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬೇರೆ ಬೇರೆ ರಾಜ್ಯದ ವ್ಯಕ್ತಿಗಳನ್ನು ಹಾಗೂ ಸರ್ಕಾರದ ಯೋಜನೆ, ಸಾಧನೆಗಳನ್ನು ತೋರಿಸಲಾಗಿದೆ. ಕೆಲ ತಿಂಗಳ ಹಿಂದೆ ಭಾಷಣ ಮಾಡ್ತಿದ್ದ ಮೋದಿ, ತಾವು ಚೌಕಿದಾರ ಎಂದಿದ್ದರು. ಇದಾದ ನಂತ್ರ ಕಾಂಗ್ರೆಸ್ ಕಾಲೆಳೆಯುವ ಕೆಲಸ ಶುರು ಮಾಡುತ್ತು. ಕೆಲ ದಿನಗಳ ಹಿಂದೆ ರಾಹುಲ್, ಚೌಕಿದಾರ್ ಚೋರ್ ಹೇ ಎಂದಿದ್ದರು.

ಕೊಹ್ಲಿ ಆಘಾತಕ್ಕೆ ಕಾರಣವಾಗಿದೆ ಮಸೀದಿ ಮೇಲೆ ನಡೆದ ದಾಳಿ

Posted: 16 Mar 2019 12:19 AM PDT

ನ್ಯೂಜಿಲ್ಯಾಂಡ್ ನಲ್ಲಿ ಶುಕ್ರವಾರ ಎರಡು ಮಸೀದಿಗಳ ಮೇಲೆ ನಡೆದ ಭಯೋತ್ಪಾದನೆ ದಾಳಿಗೆ ಕ್ರಿಕೆಟ್ ಜಗತ್ತು ದಂಗಾಗಿದೆ. ಕ್ರಿಕೆಟ್ ದಿಗ್ಗಜರಿಂದ ಟೀಕೆ ವ್ಯಕ್ತವಾಗ್ತಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಸೀದಿ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ.

ಕೊಹ್ಲಿ, ನ್ಯೂಜಿಲ್ಯಾಂಡ್ ನ ಮಸೀದಿಯಲ್ಲಿ ನಡೆದ ಗುಂಡಿನ ದಾಳಿ ಆಘಾತಕಾರಿ ಹಾಗೂ ನೋವಿನ ಸಂಗತಿ ಎಂದಿದ್ದಾರೆ. ಬಾಂಗ್ಲಾ ಕ್ರಿಕೆಟ್ ತಂಡ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೊಹ್ಲಿ ಟ್ವಿಟ್ ಮಾಡಿದ್ದಾರೆ. ನ್ಯೂಜಿಲ್ಯಾಂಡ್ ಆಟಗಾರ ಜಿಮ್ಮಿ ನೀಶಮ್  ಕೂಡ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ದಿನ ಇಂಥ ಘಟನೆಗಳನ್ನು ನಾವು ದೂರದಿಂದ ನೋಡುತ್ತಿದ್ದೆವು. ನಾವು ಸುರಕ್ಷಿತವಾಗಿದ್ದೇವೆ ಎಂದು ಭಾವಿಸಿದ್ದೆ. ಆದ್ರೆ ಈ ಘಟನೆ ಆಘಾತವನ್ನುಂಟು ಮಾಡಿದೆ. ಈ ದಿನ ಭಯಂಕರವಾಗಿತ್ತು ಎಂದಿದ್ದಾರೆ.

ಇಂಡಿಯಾದ ಸ್ಪಿನ್ನರ್ ಆರ್. ಅಶ್ವಿನ್, ಜಗತ್ತಿನಲ್ಲಿ ಯಾವುದೇ ಸ್ಥಳ, ಮಾನವ ಕುಲಕ್ಕೆ ಸುರಕ್ಷಿತವಲ್ಲ. ಮನುಷ್ಯನೇ ಭೂಮಿಯಲ್ಲಿ ಅತ್ಯಂತ ಅಪಾಯಕಾರಿ ಎಂದು ಟ್ವಿಟ್ ಮಾಡಿದ್ದಾರೆ. ಹರ್ಭಜನ್ ಸಿಂಗ್, ಮೈಕಲ್ ಕ್ಲಾರ್ಕ್ ಸೇರಿದಂತೆ ಇನ್ನೂ ಅನೇಕ ಕ್ರಿಕೆಟ್ ಆಟಗಾರರು ಆಘಾತ ವ್ಯಕ್ತಪಡಿಸಿದ್ದಾರೆ.

 

ತಂದೆಯಾದ ಬಿಗ್‍ ಬಾಸ್ ಸ್ಪರ್ಧಿ ರಿಯಾಜ್‍

Posted: 15 Mar 2019 11:45 PM PDT

ಬಿಗ್ ಬಾಸ್ ಸೀಸನ್‍ 5 ರ ಸ್ಪರ್ಧಿ ರಿಯಾಜ್‍ ತಂದೆಯಾದ ಖುಷಿಯಲ್ಲಿದ್ದಾರೆ. ರಿಯಾಜ್ ಪತ್ನಿ ಆಯೇಶಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಬಗ್ಗೆ ರಿಯಾಜ್‍ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದು, ಆಸ್ಪತ್ರೆಯಲ್ಲಿ ತಾವು ಮಗುವಿನ ಪಕ್ಕವಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸಿಹಿ ಸುದ್ದಿ  ಈ ಮೂಲಕ ನಾನು ತಂದೆ, ಆಯೇಶಾ ತಾಯಿಯಾದೆವು. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದಿದ್ದಾರೆ.

ರಿಯಾಜ್ ರೇಡಿಯೋ ಜಾಕಿಯಾಗಿದ್ದು, ಕೆಲ ಕಾರ್ಯಕ್ರಮಗಳಿಗೆ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಬಿಗ್ ಬಾಸ್‍ ಮೂಲಕ ರಾಜ್ಯದ ಜನತೆಗೆ ಪರಿಚಿತರಾಗಿದ್ದಾರೆ.

 

ಮೇ 20 ರಿಂದ ದ್ವಿತೀಯ ಪಿಯು ತರಗತಿ ಆರಂಭಕ್ಕೆ ಸಿಎಂ ಒಪ್ಪಿಗೆ

Posted: 15 Mar 2019 11:45 PM PDT

ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಉಪನ್ಯಾಸಕರ ಹಗ್ಗ ಜಗ್ಗಾಟಕ್ಕೆ ತೆರೆ ಎಳೆಯಲು ಸಿಎಂ ನಿರ್ಧರಿಸಿದ್ದಾರೆ.

ರಜೆ ಕಡಿತ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇದೇ 21 ರಂದು ಪಿಯು ಉಪನ್ಯಾಸಕರು ಮೌಲ್ಯ ಮಾಪನ ಬಹಿಷ್ಕರಿಸಿ, ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ರು.

ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಪರಿಷತ್ ಸದಸ್ಯ ಶ್ರೀಕಂಠೇಗೌಡ, ಬಸವರಾಜ್ ಹೊರಟ್ಟಿ, ಬೋಜೆಗೌಡ ಸೇರಿದಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ರು.

ಮಾತುಕತೆ ನಂತರ ದ್ವಿತೀಯ ಪಿಯುಸಿ ತರಗತಿಗಳನ್ನು ಮೇ ಮೊದಲ ವಾರದ ಬದಲು ಮೇ 20 ರಿಂದ ಆರಂಭಿಸಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಉಪನ್ಯಾಸಕರು ಧರಣಿ ಮತ್ತು ಮೌಲ್ಯಮಾಪನ ಬಹಿಷ್ಕಾರ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಇನ್ನು ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಲಿಖಿತ ಆದೇಶ ಹೊರ ಬಿದ್ದ ಬಳಿಕವೇ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರಿ ಪದವಿ ಪೂರ್ವ ಉಪನ್ಯಾಸಕ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.

ತಂದೆಯಂತೆ ಚುನಾವಣಾ ಕಣಕ್ಕಿಳಿಯಲಿದ್ದಾರಾ ಈ ಬಾಲಿವುಡ್ ಸ್ಟಾರ್?

Posted: 15 Mar 2019 11:29 PM PDT

ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ತಯಾರಿ ಶುರುವಾಗಿದೆ. ಪ್ರತಿ ಪಕ್ಷ ಪ್ರಬಲ ವ್ಯಕ್ತಿಗಳನ್ನು ಚುನಾವಣಾ ಕಣಕ್ಕಿಳಿಸುತ್ತಿದೆ. ಬಾಲಿವುಡ್ ಸೇರಿದಂತೆ ಚಿತ್ರಜಗತ್ತಿನ ಕಲಾವಿದರು ಚುನಾವಣಾ ಕಣಕ್ಕಿಳಿಯಲು ಮುಂದಾಗಿದ್ದಾರೆ. ಬಾಲಿವುಡ್ ಬಾಬಾ ಅಲಿಯಾಸ್ ಸಂಜಯ್ ದತ್ ಕೂಡ ಘಾಜಿಯಾಬಾದ್ ನಿಂದ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸಂಜಯ್ ದತ್, ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಗೆ ಟಕ್ಕರ್ ನೀಡುವ ಸಾಧ್ಯತೆ ಹೆಚ್ಚಿದೆ. ಸಂಜಯ್ ದತ್ ಚುನಾವಣೆಗೆ ಧುಮುಕಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. 2009ರಲ್ಲಿಯೂ ಸಮಾಜವಾದಿ ಪಕ್ಷದಿಂದ ಚುನಾವಣಾ ಕಣಕ್ಕಿಳಿಯುವ ಪ್ರಯತ್ನ ನಡೆಸಿದ್ದರು. ಆದ್ರೆ ಕೋರ್ಟ್ ಅವ್ರಿಗೆ ಅಡ್ಡಿಯುಂಟು ಮಾಡಿತ್ತು.

ಕುಮಾರ್ ವಿಶ್ವಾಸ್, ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಕಣಕ್ಕಿಳಿದ್ರೆ, ಎಸ್ಪಿ-ಬಿಎಸ್ಪಿ ಮೈತ್ರಿ, ಸಂಜಯ್ ದತ್ ಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಸಂಜಯ್ ದತ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರೆದಿದ್ದೇನು ಗೊತ್ತಾ?

Posted: 15 Mar 2019 11:28 PM PDT

ಉತ್ತರ ಪ್ರದೇಶದ 10ನೇ ಮತ್ತು 12ನೇ ತರಗತಿ ಪರೀಕ್ಷೆ ಮುಕ್ತಾಯಗೊಂಡಿದೆ. ಉತ್ತರ ಪತ್ರಿಕೆ ಪರಿಶೀಲನೆ ಶುರುವಾಗಿದೆ. ಈ ಮಧ್ಯೆ ವಿದ್ಯಾರ್ಥಿಗಳು ಬರೆದ ಕೆಲವೊಂದು ದಂಗಾಗಿಸುವ ಉತ್ತರಗಳು ಮಾಧ್ಯಮಗಳ ಗಮನ ಸೆಳೆಯುತ್ತಿವೆ.

ವಿದ್ಯಾರ್ಥಿಯೊಬ್ಬ ಬರೆದ ಉತ್ತರ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಸರ್, ನನ್ನ ಮಾವ ಸೇನೆಯಲ್ಲಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಪಾಕಿಸ್ತಾನದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. ನನ್ನನ್ನು ಪಾಸ್ ಮಾಡಿ ಎಂದು ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ ವಿದ್ಯಾರ್ಥಿ.

ಇನ್ನೊಬ್ಬ, ಗುರೂಜೀ, ಪಾಸ್ ಮಾಡಿ. ಇಲ್ಲ ಅಂದ್ರೆ ಭಗವಂತ ನಿಮ್ಮನ್ನು ಕ್ಷಮಿಸುವುದಿಲ್ಲವೆಂದು ಬರೆದಿದ್ದಾನೆ. ಉತ್ತರ ಪ್ರದೇಶದಲ್ಲಿ ಈ ಬಾರಿ ನಕಲಿಗೆ ಕಡಿವಾಣ ಹಾಕಲಾಗಿತ್ತು. ಹಾಗಾಗಿ ಅನೇಕ ವಿದ್ಯಾರ್ಥಿಗಳು ಸರಿಯಾದ ಉತ್ತರ ನೀಡಲು ವಿಫಲವಾಗಿದ್ದಾರೆ. ಉತ್ತರ ಸಿಗದ ಕಾರಣ ಪ್ರಶ್ನೆಯನ್ನೇ ಬರೆದ ವಿದ್ಯಾರ್ಥಿಗಳಿದ್ದಾರೆ.

 

ಮಲಗುವ ಮೊದಲು ಲವಂಗದ ಎಲೆ ಉರಿಸಿ ಚಮತ್ಕಾರ ನೋಡಿ

Posted: 15 Mar 2019 11:01 PM PDT

ಎಲ್ಲರ ಅಡುಗೆ ಮನೆಯಲ್ಲಿ ಲವಂಗದ ಎಲೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಲವಂಗದ ಎಲೆಯನ್ನು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಲವಂಗದ ಎಲೆಯನ್ನು ಆಯುರ್ವೇದ ಔಷಧಿಗೂ ಬಳಸಲಾಗುತ್ತದೆ. ಲವಂಗದ ಎಲೆಗಳು ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ.

ಲವಂಗದ ಎಲೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರಾಚೀನ ಕಾಲದಿಂದಲೂ ಅದ್ರ ಬಳಕೆ ಮಾಡಲಾಗ್ತಿದೆ. ಕರುಳು ಹಾಗೂ ಮೂತ್ರಪಿಂಡದ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತಿತ್ತು. ಜೇನುಹುಳ ಕಚ್ಚಿದ್ರೆ ಅದ್ರ ಚಿಕಿತ್ಸೆಗೂ ಲವಂಗದ ಎಲೆಯನ್ನು ಬಳಸಲಾಗ್ತಾಯಿತ್ತು.

ಲವಂಗದ ಎಲೆಯಿಂದ ಇನ್ನಷ್ಟು ಪ್ರಯೋಜನಗಳಿವೆ. ಲವಂಗದ ಎಲೆ ಒತ್ತಡ ಕಡಿಮೆ ಮಾಡಲು ಸಹಕಾರಿಯಂತೆ. ರಷ್ಯಾದಲ್ಲಿ ನಡೆದ ಸಂಶೋಧನೆಯೊಂದು ಇದನ್ನು ಸ್ಪಷ್ಟಪಡಿಸಿದೆ. ಲವಂಗದಿಂದ ಬರುವ ಸುವಾಸನೆ ಮನಸ್ಸಿಗೆ ಮುದ ನೀಡಿ ಒತ್ತಡವನ್ನು ಕಡಿಮೆ ಮಾಡುತ್ತದೆಯಂತೆ.

ಒಂದು ಪಾತ್ರೆಗೆ ಲವಂಗದ ಎಲೆಗಳನ್ನು ಹಾಕಿ ಸುಡಬೇಕು. ಅದನ್ನು ಕೋಣೆಯಲ್ಲಿಟ್ಟು ಕೋಣೆ ಬಾಗಿಲು ಹಾಕಿ. 15 ನಿಮಿಷಗಳ ನಂತ್ರ ಕೋಣೆ ಬಾಗಿಲು ತೆಗೆದ್ರೆ ಮನಸ್ಸಿಗೆ ಹಿತವೆನಿಸುವ ವಾಸನೆ ಕೋಣೆಯನ್ನು ತುಂಬಿಕೊಂಡಿರುತ್ತದೆ. ಲವಂಗದ ವಾಸನೆ ಮಿದುಳಿನ ವೇಗವನ್ನು ಹೆಚ್ಚಿಸುತ್ತದೆ.

 

ಸೀರೆಯುಟ್ಟ ನಾರಿ ಸೌಂದರ್ಯ ಡಬಲ್ ಆಗೋದೇಕೆ?

Posted: 15 Mar 2019 10:42 PM PDT

ಸೀರೆ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ. ವಿಶ್ವದಾದ್ಯಂತ ಸೀರೆ ಪ್ರಸಿದ್ಧಿ ಪಡೆದಿದೆ. ಆದ್ರೆ ಭಾರತೀಯ ನಾರಿಯರೇ ಹೆಚ್ಚಿನ ಪ್ರಮಾಣದಲ್ಲಿ ಸೀರೆ ಉಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೀರೆ ಉಡುವವರ ಸಂಖ್ಯೆ ಕಡಿಮೆಯಾಗಿದೆ.

ಸೀರೆ, ನೋಡಲು ಸುಂದರವಾಗಿರದ ಮಹಿಳೆಯ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅಷ್ಟು ಸುಂದರವಾಗಿರದ ಮಹಿಳೆಗೆ ಸೀರೆಯುಡಿಸಿ ನೋಡಿ. ನಿಮಗೆ ಅದ್ರ ಫಲಿತಾಂಶ ಗೊತ್ತಾಗುತ್ತದೆ.

ಮದುವೆಯಾದ್ಮೇಲೆ ಹುಡುಗಿ ಮತ್ತಷ್ಟು ಸುಂದರವಾಗಿ ಕಾಣ್ತಿದ್ದಾಳೆ ಎಂಬ ಮಾತನ್ನು ನಾವು ಕೇಳಿರ್ತೇವೆ. ಇದಕ್ಕೆ ಒಂದರ್ಥದಲ್ಲಿ ಸೀರೆ ಕೂಡ ಕಾರಣ. ಮದುವೆ ನಂತ್ರ ಹುಡುಗಿಯರು ಸೀರೆಯುಡುವ ಪ್ರಮಾಣ ಹೆಚ್ಚಾಗುತ್ತದೆ. ಸೀರೆಯುಟ್ಟರೆ ಹುಡುಗಿ ಸೌಂದರ್ಯ ದುಪ್ಪಟ್ಟಾಗುತ್ತದೆ ಎಂಬುದು ಗೊತ್ತಾಯ್ತು. ಯಾಕೆ ದುಪ್ಪಟ್ಟಾಗುತ್ತದೆ ಎಂಬ ಪ್ರಶ್ನೆಗೂ ಇಲ್ಲಿ ಉತ್ತರವಿದೆ.

ಸಾಮಾನ್ಯವಾಗಿ ಸೀರೆಯುಟ್ಟಾಗ ಹುಡುಗಿ ಫಿಗರ್ ಸ್ಪಷ್ಟವಾಗಿ ಕಾಣುತ್ತದೆ. ದೇಹದ ಆಕರ್ಷಣೆ ಸೀರೆಯಿಂದ ಹೆಚ್ಚಾಗುತ್ತದೆ. ಸರಿಯಾಗಿ ಸೀರೆಯುಟ್ಟಾಗ ದೇಹದ ಉಬ್ಬುತಗ್ಗುಗಳು ಸ್ಪಷ್ಟವಾಗಿ ಘೋಚರಿಸುತ್ತವೆ. ಹಾಗೆ ಸೀರೆಯುಟ್ಟಾಗ ಹುಡುಗಿ ಸಭ್ಯವಾಗಿ ಕಾಣ್ತಾಳೆ. ಆಕೆ ಘನತೆ ಹೆಚ್ಚಾಗುತ್ತದೆ. ಸ್ವಲ್ಪ ಉದ್ದವಾಗಿ ಕೂಡ ಕಾಣ್ತಾಳೆ. ಸೀರೆಯುಟ್ಟಾಗ ಹುಡುಗಿ ಹೆಚ್ಚು ರೆಡಿಯಾಗ್ತಾಳೆ. ಕೈಗೆ ಬಳೆ, ಕುತ್ತಿಗೆಗೆ ಸರ, ಹಣೆಗೆ ಬಿಂದಿ ಹೀಗೆ ಅಲಂಕಾರಿಕ ವಸ್ತುಗಳನ್ನು ಹಾಕಿಕೊಳ್ತಾಳೆ. ಇದು ಆಕೆ ಸೌಂದರ್ಯ ದುಪ್ಪಟ್ಟಾಗಲು ಕಾರಣವಾಗುತ್ತದೆ.

“ಥ್ಯಾಂಕ್ಸ್ ಟು ಸಿಗ್ನಲ್” ಯಾಕೆ ಗೊತ್ತಾ?

Posted: 15 Mar 2019 10:23 PM PDT

ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ನಿಲ್ದಾಣದ ಬಳಿಯಿರುವ ಪಾದಚಾರಿಗಳ ಬ್ರಿಡ್ಜ್ ಕುಸಿದು ಬಿದ್ದು ಹಲವು ಸಾವು ನೋವಿಗೆ ಕಾರಣವಾಗಿತ್ತು.

ಇದು ದೊಡ್ಡ ದುರಂತವೇ ಸರಿ. ಆದರೆ ಬ್ರಿಡ್ಜ್ ಪಕ್ಕದಲ್ಲಿದ್ದ ಸಿಗ್ನಲ್ ಬಹಳಷ್ಟು ಮಂದಿಯ ಜೀವ ಉಳಿಸಿದೆ.

ಒಂದು ಸಿಗ್ನಲ್ ಬಿಟ್ಟ ತಕ್ಷಣ ಪ್ರವಾಹದ ರೂಪದಲ್ಲಿ ವಾಹನಗಳು ಚಲಿಸಿವೆ. ಬ್ರಿಡ್ಸ್ ಬಳಿ ಬರುತ್ತಿದ್ದ ಹಾಗೆ ಬ್ರಿಡ್ಜ್ ಕುಸಿಯಿತು. ಹಾಗಾಗಿ ಅವರೆಲ್ಲಾ ಬ್ರಿಡ್ಜ್ ಅಡಿ ಸಿಲುಕಿಕೊಂಡಿದ್ದಾರೆ. ಆದರೆ ಅಷ್ಟರಲ್ಲಿ ಮತ್ತೆ ರೆಡ್ ಸಿಗ್ನಲ್ ಬಿದ್ದಿದೆ.

ಆ ಕ್ಷಣಕ್ಕೆ ಸಿಗ್ನಲ್ ನಲ್ಲಿ ಸಿಲುಕಿಕೊಂಡವರೆಲ್ಲಾ ಬೈದುಕೊಂಡಿದ್ದು ಉಂಟು. ನಂತರ ಅವಘಡ ಸಂಭವಿಸಿದಾಗ ಸಿಗ್ನಲ್ ನಲ್ಲಿ ಸಿಲುಕಿಕೊಂಡ ವಾಹನ ಚಾಲಕರು ಈ ರೆಡ್ ಸಿಗ್ನಲ್ ಗೆ ಥ್ಯಾಂಕ್ಸ್ ಹೇಳಿದ್ದಾರೆ. ಇವರುಗಳನ್ನು ಅವಘಡದಿಂದ ಬಜಾವ್ ಮಾಡಿದ್ದು ಈ ರೆಡ್ ಸಿಗ್ನಲ್ ಎಂಬುದರಲ್ಲಿ ಎರಡು ಮಾತಿಲ್ಲವೆನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಡಿಕೆಶಿಗೆ ಫುಲ್ ಡಿಮ್ಯಾಂಡ್! ದುಂಬಾಲು ಬಿದ್ದ ಜೆಡಿಎಸ್ ನಾಯಕರು, ಕಾರಣ ಗೊತ್ತಾ?

Posted: 15 Mar 2019 09:43 PM PDT

ಸಚಿವ ಡಿ.ಕೆ. ಶಿವಕುಮಾರ್ ಜವಾಬ್ದಾರಿ ವಹಿಸಿಕೊಂಡರೇ ಮುಗಿಯಿತು ಗೆಲುವು ಶತಸಿದ್ಧ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತದೆ.

ಡಿ.ಕೆ. ಶಿವಕುಮಾರ್ ಚುನಾವಣೆ ಉಸ್ತುವಾರಿ ವಹಿಸಿಕೊಂಡ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಕಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ಡಿ.ಕೆ. ಶಿವಕುಮಾರ್ ಅವರಿಗೆ ದುಂಬಾಲು ಬಿದ್ದಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆ ಉಸ್ತುವಾರಿಯನ್ನು ಡಿ.ಕೆ. ಶಿವಕುಮಾರ್ ಗೆ ವಹಿಸಬೇಕೆಂದು ಸಿಎಂ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಅಸ್ತು ಎಂದಿದ್ದಾರೆ ಎನ್ನಲಾಗಿದೆ.

ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಪುತ್ರನ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿರುವ ಸಿಎಂ, ಡಿ.ಕೆ. ಶಿವಕುಮಾರ್ ಅವರನ್ನು ಖಾಸಗಿ ಹೋಟೆಲ್ ಗೆ ಕರೆಸಿಕೊಂಡು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.

ಮಧು ಬಂಗಾರಪ್ಪ ಅವರ ಗೆಲುವಿನ ಜವಾಬ್ದಾರಿಯನ್ನು ಕಾಂಗ್ರೆಸ್ ಪರವಾಗಿ ನೀವೇ ವಹಿಸಿಕೊಳ್ಳಬೇಕು. ಜೊತೆಗೆ ಮಂಡ್ಯದಲ್ಲಿ ನಿಖಿಲ್ ಗೆಲುವಿಗೆ ಸಹಕಾರ ನೀಡಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿರುವ ಸಹೋದರ ಡಿ.ಕೆ. ಸುರೇಶ್ ಮತ್ತು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಉಗ್ರಪ್ಪ ಅವರನ್ನು ಗೆಲ್ಲಿಸುವ ಜವಾಬ್ದಾರಿ ಇದೆ. ಅಲ್ಲದೇ, ವಿವಿಧ ಕ್ಷೇತ್ರಗಳ ನಾಯಕರು ಕೂಡ ಜವಾಬ್ದಾರಿ ವಹಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

ಮನೆ ಮುಂದೆ ವಾಹನ ನಿಲ್ಲಿಸಿದ್ರೆ ದಂಡ ಗ್ಯಾರಂಟಿ

Posted: 15 Mar 2019 09:24 PM PDT

 ಬೆಂಗಳೂರು: ಬೆಂಗಳೂರಿನಲ್ಲಿ ವಾಹನ ನಿಲುಗಡೆ ವ್ಯವಸ್ಥಾಪನೆ ಹಾಗೂ ನಿರ್ವಹಣೆ ನಿಯಮಾವಳಿಯನ್ನು ಸಾರಿಗೆ ಇಲಾಖೆ ರೂಪಿಸಿದ್ದು, ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಶೀಘ್ರವೇ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮ ಜಾರಿಗೆ ಬರಲಿದ್ದು, ಇನ್ನು ಮುಂದೆ ಮನೆ ಮುಂದೆ ಕಾರು, ಬೈಕ್ ನಿಲ್ಲಿಸಿದಲ್ಲಿ ಶುಲ್ಕ ಕಟ್ಟಬೇಕಿದೆ ಹೇಳಲಾಗಿದೆ. ವಸತಿ ಪ್ರದೇಶದ ಜೊತೆಗೆ ವಾಣಿಜ್ಯ ಪ್ರದೇಶ, ಮುಖ್ಯ ರಸ್ತೆ ಮೊದಲಾದ ಕಡೆಗಳಲ್ಲಿ ಏರಿಯಾವಾರು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು.

ಬಿಬಿಎಂಪಿ ವಲಯ ಜಂಟಿ ಆಯುಕ್ತರು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಸಂಚಾರ ಠಾಣೆ ಪೊಲೀಸರು, ಸಾರಿಗೆ ಅಧಿಕಾರಿಗಳು ಸೇರಿಕೊಂಡು ಯೋಜನೆ ಸಿದ್ಧಪಡಿಸಿದ್ದಾರೆ. ನಂತರದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕಿದೆ.

ವಾಹನಗಳ ಮಾಲೀಕರು ತಮ್ಮ ಕಟ್ಟಡದಲ್ಲಿನ ಪಾರ್ಕಿಂಗ್ ಸ್ಥಳದಲ್ಲಿಯೇ ವಾಹನ ನಿಲ್ಲಿಸಬೇಕಿದೆ. ಮನೆ ಮುಂದೆ, ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಶುಲ್ಕ ಪಾವತಿಸಬೇಕಿದೆ. ಕಾರು, ಬೈಕ್, ಆಟೋ ಹೀಗೆ ವಿವಿಧ ವಾಹನಗಳನ್ನು ಆಧರಿಸಿ, 200 ರೂ. ನಿಂದ 2000 ರೂ. ವರೆಗೆ ದಂಡ ಶುಲ್ಕ ನಿಗದಿಪಡಿಸಲಾಗಿದೆ.

ತಮ್ಮ ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಬೇಕೆಂದು ಸೂಚನೆ ನೀಡಲಾಗುವುದು. ಬೆಂಗಳೂರಿನಲ್ಲಿ ಶೀಘ್ರವೇ ಈ ನಿಯಮ ಜಾರಿಗೆ ಬರಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.