Translate

Friday, March 15, 2019

Kannada News | Karnataka News | India News

Kannada News | Karnataka News | India News


ಎಸ್.ಎಂ. ಕೃಷ್ಣ, ಸುಮಲತಾಗೆ ಸಿಎಂ ಕುಮಾರಸ್ವಾಮಿ ಟಾಂಗ್

Posted: 15 Mar 2019 07:35 AM PDT

50 ವರ್ಷಗಳ ಕಾಲ ಅಧಿಕಾರದ ಬೆಣ್ಣೆಯನ್ನು ಸಾಕಷ್ಟು ಮೆದ್ದಿರಿ. ಈಗ ಕುಟುಂಬ ರಾಜಕಾರಣದ ಬಗ್ಗೆ ಪ್ರಶ್ನೆ ಮಾಡುತ್ತಿದ್ದೀರಿ. ನಾವು ಹಿಂಬಾಗಿಲ ಮೂಲಕ ರಾಜಕಾರಣಕ್ಕೆ ಪ್ರವೇಶಿಸಿಲ್ಲ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಿಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಮಾನ್ಯ ಕೃಷ್ಣ ಸಾಹೇಬರಿಗೆ ಗೌರವಯುತ ನಮಸ್ಕಾರಗಳು. ನೀವು ತುಂಬಾ ಮುಂದೆ ಹೆಜ್ಜೆ ಹಾಕಿ ಬಿಟ್ಟಿರುವುದರಿಂದ ನೀವು ನಡೆದು ಬಂದ ಹಾದಿ ಮರೆತು ಹೋಗಿದೆ ಎಂದು ಭಾವಿಸುತ್ತೇನೆ.

50 ವರ್ಷ ಕಾಲ ನೀವು ಅಧಿಕಾರದ ಬೆಣ್ಣೆಯನ್ನು ಸಾಕಷ್ಟು ಮೆದ್ದಿರಿ. 2 ಬಾರಿ ಕೇಂದ್ರ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಪಕ್ಕದ ರಾಜ್ಯದಲ್ಲಿ ರಾಜ್ಯಪಾಲರಾಗಿ ಅಧಿಕಾರ ಅನುಭವಿಸಿದ್ದೀರಿ. ಇಷ್ಟೆಲ್ಲಾ ಆದ ಮೇಲೆ ನೀವು ಬಿಜೆಪಿಗೆ ಕಾಲಿಟ್ಟಾಗಲೇ ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದೀರಾ ಎಂದು ಹೇಳಿದ್ದಾರೆ.

ಕುಟುಂಬ ರಾಜಕಾರಣವನ್ನು ಪ್ರಶ್ನೆ ಮಾಡಿದ್ದೀರಿ. ಬಹಳ ಸಂತೋಷ. ಆದರೆ, ನಮ್ಮ ಕುಟುಂಬದಲ್ಲಿ ಯಾರೂ ಹಿಂಬಾಗಿಲ ಪ್ರವೇಶ ಪಡೆದಿಲ್ಲ. ಜನ ಆರಿಸಿದಾಗ ಮಾತ್ರ ಅಧಿಕಾರ ಪಡೆದಿದ್ದಾರೆ. ಆದರೆ, ನೀವು ರಾಜ್ಯಸಭೆಗೆ ಹಿಂಬಾಗಿಲ ಮೂಲಕ ಪ್ರವೇಶ ಪಡೆಯಲು ದೇವೇಗೌಡರ ಸಹಾಯ ಪಡೆದಿದ್ದು ನೆನಪಿದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಗೌರವಾನ್ವಿತ ಸುಮಲತಾ ಅವರೇ, ನಿಮ್ಮ ರೈತರ ಪರ ಮಾತು ಓದಿ ಇನ್ನಿಲ್ಲದಷ್ಟು ಸಂತೋಷವಾಯಿತು. ನನಗಾಗಲಿ, ನನ್ನ ತಂದೆಯವರಿಗಾಗಲಿ ರೈತರ ಬಗ್ಗೆ ಏನೇನೂ ಗೊತ್ತಿಲ್ಲ. ಮಣ್ಣಿನ ಮಕ್ಕಳು ಎಂದು ಈ ದೇಶದ ಜನ ಪ್ರೀತಿಯಿಂದ ಕರೆದರು. ನಮ್ಮದು ರೈತರಿಗೆ ಮಿಡಿದ ಮನ. ಆದರೆ, ದಿಢೀರನೆ ಪ್ರತ್ಯಕ್ಷರಾಗಿ ಪ್ರತಿದಿನ ಹೊಲ ಗದ್ದೆಗಳಲ್ಲಿ ದುಡಿದು ಉತ್ತು ಬಿತ್ತಿದ ಅನುಭವ ಹಂಚಿಕೊಳ್ಳುತ್ತಿದ್ದೀರಿ. ರೈತರನ್ನು ಉದ್ಧಾರ ಮಾಡಲು ನಿಮ್ಮ ಸಲಹೆ ತುಂಬಾ ಮುಖ್ಯ. ಕೇಳಲು ನಾವು ಕಾತರರಾಗಿದ್ದೇವೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

 

ಎಲೆಕ್ಷನ್ ಖರ್ಚಿಗೆ ಭಾರೀ ಹಣ ಸಂಗ್ರಹ: ಬಿಜೆಪಿ ಹೇಳಿದ್ದೇನು ಗೊತ್ತಾ…?

Posted: 15 Mar 2019 07:14 AM PDT

ಬೆಂಗಳೂರು: ಲೋಕಸಭೆ ಚುನಾವಣೆ ಖರ್ಚಿಗಾಗಿ ಹಣ ಸಂಗ್ರಹಿಸಿದ್ದ ಗ್ರಾಮೀಣ ನೀರು ಸರಬರಾಜು ವಿಭಾಗದ ಇಂಜಿನಿಯರ್ ನಾರಾಯಣ ಗೌಡ ಪಾಟೀಲ್ ಪ್ರಕರಣದ ತನಿಖೆ ನಡೆಸಲಾಗಿದೆ.

ಧಾರವಾಡದಲ್ಲಿ ನಾರಾಯಣಗೌಡ ಪಾಟೀಲ್ ಮನೆ ಹೊಂದಿದ್ದಾರೆ. ಧಾರವಾಡದಿಂದ ಹಾವೇರಿಗೆ ದಿನ ಕೆಲಸಕ್ಕೆ ಹೋಗಿ ಬರುತ್ತಿದ್ದ ನಾರಾಯಣಗೌಡ ಅವರು ಬೆಂಗಳೂರಿನ ಹೋಟೆಲ್ ಒಂದರಲ್ಲಿ 2 ಕೋಟಿ ರೂ. ಇಟ್ಟುಕೊಂಡಿರುವುದನ್ನು ತಿಳಿದ ಐಟಿ ಅಧಿಕಾರಿಗಳು ದಾಳಿ ನಡೆಸಿ ಹಣ ಜಪ್ತಿ ಮಾಡಿದ್ದಾರೆ.

ಆದರೆ ಹೋಟೆಲ್ ನಲ್ಲಿ ಇದ್ದ ನಾರಾಯಣಗೌಡ ಪರಾರಿಯಾಗಿದ್ದು, ಅವರ ಕಾರು ಚಾಲಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ನಾರಾಯಣಗೌಡ ಚುನಾವಣೆ ಖರ್ಚಿಗಾಗಿ ಗುತ್ತಿಗೆದಾರರಿಂದ ಹಣ ಸಂಗ್ರಹಿಸಿದ್ದರು. ಅದನ್ನು ರಾಜಕಾರಣಿಗಳಿಗೆ ನೀಡಲು ತಂದಿದ್ದರು ಎನ್ನಲಾಗಿದ್ದು, ಮಾಹಿತಿ ಪಡೆದ ಅಧಿಕಾರಿಗಳು ಬೆಂಗಳೂರಿನ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಹಣ ಪತ್ತೆಯಾಗಿದೆ.

ಈ ದಾಳಿಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೃಷ್ಣಬೈರೇಗೌಡ, ತಮಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ, ಬಿಜೆಪಿ ಇದರಲ್ಲಿ ಸಚಿವರ ಪಾತ್ರವಿದೆ. ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದೆ.

ರಾಜಕಾರಣದಲ್ಲಿ ಒಂಟಿಯಾಗಿದ್ದ ಸುಮಲತಾಗೆ ಹಿರಿಯ ನಾಯಕರ ಬೆಂಬಲ…?

Posted: 15 Mar 2019 06:51 AM PDT

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಕಾದ ಸುಮಲತಾ ಅಂಬರೀಶ್ ಅವರಿಗೆ ನಿರಾಸೆಯಾಗಿದ್ದು, ಈ ಮೊದಲೇ ಹೇಳಿದಂತೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.

ಇದೇ ವೇಳೆ ಬಿಜೆಪಿಯ ಹಿರಿಯ ನಾಯಕರನ್ನು ಅವರು ಭೇಟಿಯಾಗಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸಿಎಂ ಪುತ್ರ ನಿಖಿಲ್ ಕುಮಾರ್ ಸ್ಪರ್ಧಿಸಿದ್ದಾರೆ. ಸುಮಲತಾ ಅಂಬರೀಶ್ ಪಕ್ಷೇತರವಾಗಿ ಕಣಕ್ಕೆ ಇಳಿಯುವ ಜೊತೆಗೆ ಬಿಜೆಪಿ ಬಾಹ್ಯ ಬೆಂಬಲ ಪಡೆಯಲು ತೀರ್ಮಾನಿಸಿದ್ದಾರೆ.

ಇದರ ಭಾಗವಾಗಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿರುವ ಮಾಜಿ ಡಿಸಿಎಂ ಆರ್. ಅಶೋಕ್ ಮಂಡ್ಯ ಕ್ಷೇತ್ರದಲ್ಲಿ ಸಿಎಂ ಪುತ್ರನನ್ನು ಸೋಲಿಸಲು ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಕರೆದುಕೊಂಡು ಹೋಗಲಿರುವ ಅಶೋಕ್, ಬಿಜೆಪಿ ಸೇರುವಂತೆ ಆಹ್ವಾನ ನೀಡಲಿದ್ದಾರೆ. ಇಲ್ಲದಿದ್ದರೆ ಬಿಜೆಪಿಯಿಂದ ಸುಮಲತಾ ಅವರಿಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಬಿಜೆಪಿ ಹಿರಿಯ ನಾಯಕರ ಸಭೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಇಲ್ಲವೇ, ಅವರಿಗೆ ಬಾಹ್ಯ ಬೆಂಬಲ ನೀಡುವ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಪ್ರೀತಿಗೆ ಅಡ್ಡಿಯಾದ ಅನೈತಿಕ ಸಂಬಂಧ: ರೌಡಿ ಲಕ್ಷ್ಮಣನ ಕೊಲೆಗೆ ಹಲವು ಕಾರಣ

Posted: 15 Mar 2019 06:39 AM PDT

ಬೆಂಗಳೂರು: ರೌಡಿ ಲಕ್ಷ್ಮಣನ ಕೊಲೆ ಹಿಂದಿನ ರಹಸ್ಯ ಕೊನೆಗೂ ಬಯಲಾಗಿದೆ. ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ವರ್ಷಿಣಿ ಮತ್ತು ರೂಪೇಶ್ ರೌಡಿ ಲಕ್ಷ್ಮಣನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಗುರುವಿನ ಕೊಲೆಗೆ ಸೇಡು ತೀರಿಸಿಕೊಳ್ಳಲು ಹೇಮಂತ್ ಕೈ ಜೋಡಿಸಿದ್ದ. ಇನ್ನು ಹೆಸರು ಮಾಡುವ ಉದ್ದೇಶದಿಂದ ಕ್ಯಾಟ್ ರಾಜ ಜೊತೆಯಾಗಿದ್ದ.

ಹೀಗೆ ಹಲವು ಕಾರಣಗಳಿಂದ ರೌಡಿ ಲಕ್ಷ್ಮಣ ಕೊಲೆಯಾಗಿ ಹೋಗಿದ್ದಾನೆ. ವರ್ಷಿಣಿ ಮತ್ತು ರೂಪೇಶ್ ಪ್ರೀತಿಸುತ್ತಿದ್ದು, ಅವರ ಪ್ರೀತಿಗೆ ಲಕ್ಷ್ಮಣ್ ಅಡ್ಡಿಯಾಗಿದ್ದ. ವರ್ಷಿಣಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಲಕ್ಷ್ಮಣ, ರೂಪೇಶನಿಗೆ ಹಲವು ಬಾರಿ ವಾರ್ನಿಂಗ್ ಮಾಡಿದ್ದ. ಇದರಿಂದ ಅಸಮಾಧಾನಗೊಂಡಿದ್ದ ವರ್ಷಿಣಿ ಮತ್ತು ರೂಪೇಶ್ ಲಕ್ಷ್ಮಣನ ಕೊಲೆಗೆ ಸಂಚು ರೂಪಿಸಸಿದ್ದರೆನ್ನಲಾಗಿದೆ.

ಇನ್ನು ಹೇಮಂತ ಅಲಿಯಾಸ್ ಹೇಮಿಯ ಗುರು ಟಿ.ಸಿ. ರಾಜನನ್ನು ಲಕ್ಷ್ಮಣ್ ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2015 ರಲ್ಲಿ ಕೊಲೆ ಮಾಡಿಸಿದ್ದ. ಈ ಕೊಲೆಗೆ ಸೇಡು ತೀರಿಸಿಕೊಳ್ಳಲು ಹೇಮಂತ್ ಹವಣಿಸುತ್ತಿದ್ದ. ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಆಗುವ ಹಂತದಲ್ಲಿ ಮತ್ತೊಂದು ಕೊಲೆ ಮಾಡಿ ಜೈಲು ಸೇರಲು ಹೇಮಂತ ನಿರ್ಧರಿಸಿದ್ದ ಎನ್ನಲಾಗಿದೆ.

ಸುಪಾರಿ ಕಿಲ್ಲರ್ ಕೆಲಸ ಮಾಡುತ್ತಿದ್ದ ಕ್ಯಾಟ್ ರಾಜ ಫೀಲ್ಡ್ ನಲ್ಲಿ ಹೆಸರು ಮಾಡಲು ಲಕ್ಷ್ಮಣನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಲಕ್ಷ್ಮಣನ ಕೊಲೆ ಮಾಡಿ ಎಲ್ಲರೂ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರೀತಿ, ಅನೈತಿಕ ಸಂಬಂಧ, ಸೇಡು, ರೌಡಿಸಂ ಕಾರಣದಿಂದ ಲಕ್ಷ್ಮಣ ಕೊಲೆಯಾಗಿದ್ದಾನೆ ಎಂದು ಹೇಳಲಾಗಿದೆ.

ಸಿದ್ರಾಮಯ್ಯ ಗೇಮ್ ಪ್ಲಾನ್! ಡಿಸಿಎಂ ಪರಮೇಶ್ವರ್ ಗೆ ‘ಬಿಗ್ ಶಾಕ್’!?

Posted: 15 Mar 2019 06:15 AM PDT

ಹಾಲಿ ಕಾಂಗ್ರೆಸ್ ಸಂಸದ ಪ್ರತಿನಿಧಿಸುತ್ತಿದ್ದ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿರುವುದು ಡಿಸಿಎಂ ಜಿ. ಪರಮೇಶ್ವರ್ ಅವರಿಗೆ ಆದ ಹಿನ್ನಡೆ ಎಂದೇ ಹೇಳಲಾಗುತ್ತಿದೆ.

ಮಾಜಿ ಸಿಎಂ ಸಿದ್ಧರಾಮಯ್ಯನವರ ಗೇಮ್ ಪ್ಲಾನ್ ನಿಂದಾಗಿ ಪರಮೇಶ್ವರ್ ಅವರಿಗೆ ಹಿನ್ನಡೆಯಾಗಿದ್ದು, ಕ್ಷೇತ್ರವನ್ನು ಕಾಂಗ್ರೆಸ್ ಗೆ ನೀಡುವಂತೆ ಪರಮೇಶ್ವರ್ ಮಾಡಿದ ಪ್ರಯತ್ನ ವಿಫಲವಾಗಿದೆ.

ರಾತ್ರಿ ಪರಮೇಶ್ವರ್ ಅವರು, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾದ ಸಂದರ್ಭದಲ್ಲಿ ತುಮಕೂರನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡಲು ಸಿಎಂ ನಿರಾಕರಿಸಿದ್ದು, ಪ್ರಚಾರಕ್ಕೆ ಜೆಡಿಎಸ್ ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದೇವೇಗೌಡರು ಮೈಸೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರಾದರೂ, ಸಿದ್ದರಾಮಯ್ಯನವರ ಬಿಗಿಪಟ್ಟಿನಿಂದಾಗಿ ಕಾಂಗ್ರೆಸ್ ಮೈಸೂರು ಉಳಿಸಿಕೊಂಡಿದೆ. ಹಾಲಿ ಕಾಂಗ್ರೆಸ್ ಸಂಸದರಿದ್ದ ತುಮಕೂರು ಕ್ಷೇತ್ರ ಜೆಡಿಎಸ್ ಗೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಪರಮೇಶ್ವರ್ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪ್ರತಿ ಬಾರಿಯೂ ನಾನೇ ಟಾರ್ಗೆಟ್ ಆಗುತ್ತಿದ್ದೇನೆ. ಉಪಮುಖ್ಯಮಂತ್ರಿಯಾಗಿ ಮಾಡಿದರು. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನವನ್ನು ಕಿತ್ತುಕೊಂಡರು. ಇದೆಲ್ಲ ಮಾಜಿ ಸಿಎಂ ಸಿದ್ದರಾಮಯ್ಯನವರ ಆಟ ಎಂದು ಪರಮೇಶ್ವರ್ ಆಪ್ತರ ಬಳಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

ನಾನು 5 ವರ್ಷ ಸಾಫ್ಟ್ ಆಗಿದ್ದೆ. ಹಿಂದಿನ ಸರ್ಕಾರ 5 ವರ್ಷ ನಡೀತಾ ಇರಲಿಲ್ಲ. ಪ್ರತಿ ಬಾರಿಯೂ ನಾವೇ ಯಾಕೆ ತ್ಯಾಗ ಮಾಡಬೇಕು ಎಂದು ಆಪ್ತರ ಬಳಿ ಹೇಳಿದ್ದಾರೆ ಎನ್ನಲಾಗಿದೆ.

ತುಮಕೂರು ಕ್ಷೇತ್ರವನ್ನು ಉಳಿಸಿಕೊಳ್ಳಲು ಪರಮೇಶ್ವರ್ ಇನ್ನಿಲ್ಲದ ಪ್ರಯತ್ನ ನಡೆಸಿದರಾದರೂ, ಈ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ವಾಪಸ್ ಕಾಂಗ್ರೆಸ್ ಗೆ ಈ ಕ್ಷೇತ್ರವನ್ನು ಬಿಟ್ಟು ಕೊಡುವ ಬಗ್ಗೆ ಮಾತುಕತೆಗ ಳು ನಡೆದಿದ್ದವಾದರೂ, ಸಿಎಂ ಪಕ್ಷದ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಹುತಾತ್ಮ ಯೋಧರ ಫೋಟೋ ಎದುರು ಪಾಕ್ ಪರ ಘೋಷಣೆ

Posted: 15 Mar 2019 05:50 AM PDT

 ಚಿಕ್ಕಮಗಳೂರು: ಹುತಾತ್ಮ ಯೋಧರ ಫೋಟೋ ಎದುರು ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ಯುವಕನಿಗೆ ಥಳಿಸಲಾಗಿದೆ.

ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್ ಬಳಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಗಳಿದ್ದ ಫ್ಲೆಕ್ಸ್ ಎದುರು ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ಯುವಕನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಚಿತ್ರದುರ್ಗದಿಂದ ಮುಳ್ಳಯ್ಯನಗಿರಿ ಪ್ರವಾಸಕ್ಕೆ ಬಂದಿದ್ದ ಯುವಕರ ತಂಡ ಕಾಫಿ ಕುಡಿಯಲು ಕೈಮರ ಹ್ಯಾಂಡ್ ಪೋಸ್ಟ್ ಬಳಿ ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಯುವಕನೊಬ್ಬ ಹುತಾತ್ಮರ ಭಾವಚಿತ್ರವಿರುವ ಫ್ಲೆಕ್ಸ್ ಕಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಸ್ಥಳೀಯರು ಆತನನ್ನು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಕ್ರೋಶಗೊಂಡ ಸ್ಥಳೀಯರು ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಂದಿರಾ, ಸೋನಿಯಾ ಬಳಿಕ ರಾಜ್ಯದಿಂದ ರಾಹುಲ್ ಸ್ಪರ್ಧೆ? ಕಾಂಗ್ರೆಸ್ ಅಧಿಕಾರಕ್ಕೆ?

Posted: 15 Mar 2019 05:37 AM PDT

ಪ್ರತಿ ಬಾರಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಪರ್ಧಿಸುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ 2 ಕ್ಷೇತ್ರಗಳಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅವರು ಕರ್ನಾಟಕದಿಂದಲೇ ಸ್ಪರ್ಧಿಸುವ ಚಿಂತನೆ ನಡೆಸಿದ್ದು, ರಾಜ್ಯ ನಾಯಕರು ಆಹ್ವಾನ ನೀಡಿದ್ದಾರೆ.

ಈ ಹಿಂದೆ ಇಂದಿರಾಗಾಂಧಿ ಚಿಕ್ಕಮಗಳೂರು ಕ್ಷೇತ್ರದಲ್ಲಿ, ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿ ಚುನಾಯಿತರಾಗಿದ್ದರು. ಆಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಈ ಬಾರಿ ರಾಹುಲ್ ಗಾಂಧಿ ಅವರಿಗೆ ಕರ್ನಾಟಕದಿಂದ ಸ್ಪರ್ಧಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಆಹ್ವಾನ ನೀಡಿದ್ದಾರೆ.

ರಾಜ್ಯದ ಜನ ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಬೆಂಬಲಿಸಿ, ಲೋಕಸಭೆಗೆ ಕಳುಹಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದು, ರಾಜ್ಯದಿಂದ ಸ್ಪರ್ಧಿಸುವಂತೆ ರಾಹುಲ್ ಅವರಿಗೆ ಆಹ್ವಾನಿಸಿದ್ದಾರೆ. ಅಮೇಥಿಯಲ್ಲಿ ಈ ಬಾರಿ ಗೆಲುವು ಕಷ್ಟಸಾಧ್ಯವಾಗಲಿರುವ ಹಿನ್ನೆಲೆಯಲ್ಲಿ ರಾಹುಲ್ 2 ಕ್ಷೇತ್ರಗಳಿಂದ ಕಣಕ್ಕಿಳಿಯಲು ಚಿಂತಿಸಿದ್ದಾರೆ ಎಂದು ಹೇಳಲಾಗಿದೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಲಕ್ಷ ರೂ. ಜಪ್ತಿ

Posted: 15 Mar 2019 05:24 AM PDT

 ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 50 ಲಕ್ಷ ರೂ. ಜಪ್ತಿ ಮಾಡಲಾಗಿದೆ.

ಹೊಸದುರ್ಗ ಪಟ್ಟಣದ ಗಡಿ ಅಹ್ಮದ್ ನಗರ ಚೆಕ್ ಪೋಸ್ಟ್ ನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಪೊಲೀಸರು ತಪಾಸಣೆ ನಡೆಸಿದ ಸಂದರ್ಭದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಕಂಡುಬಂದಿದ್ದು, ಜಪ್ತಿ ಮಾಡಲಾಗಿದೆ. ಈ ಹಣ ನಿವೃತ್ತ ಡೆಪ್ಯುಟಿ ರಿಜಿಸ್ಟ್ರಾರ್ ಕೃಷ್ಣಮೂರ್ತಿ ಎಂಬುವರಿಗೆ ಸೇರಿದ್ದಾಗಿದ್ದು, ವಿಚಾರಣೆ ನಡೆಸಲಾಗಿದೆ.

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ದಾಖಲೆ ಇಲ್ಲದ 50,000 ರೂ.ಗಿಂತ ಹೆಚ್ಚಿನ ಮೊತ್ತದ ಹಣ ಕೊಂಡೊಯ್ಯುವಂತಿಲ್ಲ.

ಶಿವಮೊಗ್ಗದಲ್ಲಿ ಮಧು ಬಂಗಾರಪ್ಪಗೆ ಆನೆಬಲ

Posted: 15 Mar 2019 05:09 AM PDT

ಶಿವಮೊಗ್ಗ ಲೋಕಸಭೆ ಚುನಾವಣೆ ಅಖಾಡ ರಂಗೇರುವ ಲಕ್ಷಣ ಕಂಡುಬರುತ್ತಿದೆ. ಮಾಜಿ ಮುಖ್ಯಮಂತ್ರಿಗಳ ಪುತ್ರರ ಸ್ಪರ್ಧೆಯಿಂದಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತೊಮ್ಮೆ ಗಮನಸೆಳೆದಿದೆ.

ಬಿ.ಎಸ್.ವೈ. ಪುತ್ರ ಸಂಸದ ಬಿ.ವೈ. ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣಕ್ಕಳಿಯಲಿದ್ದು, ಶಿವಮೊಗ್ಗ ಲೋಕಸಭೆ ಚುನಾವಣೆ ಉಸ್ತುವಾರಿಯನ್ನು ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ವಹಿಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್ ಉಸ್ತುವಾರಿ ವಹಿಸಿಕೊಂಡ ಕ್ಷೇತ್ರಗಳಲ್ಲಿ ಗೆಲುವು ಕಂಡಿರುವುದರಿಂದ ಶಿವಮೊಗ್ಗದಲ್ಲಿಯೂ  ಗೆಲುವು ಸುಲಭವಾಗಿದೆ ಎಂಬುದು ಮೈತ್ರಿಕೂಟದ ನಾಯಕರ ಲೆಕ್ಕಾಚಾರವಾಗಿದೆ. ಮಧು ಬಂಗಾರಪ್ಪ ಸಿಎಂ ಬಳಿ ಡಿ.ಕೆ. ಶಿವಕುಮಾರ್ ಅವರಿಗೆ ಉಸ್ತುವಾರಿ ವಹಿಸಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಸಿಎಂ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಚುನಾವಣೆ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆ ಇದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಅವರಿಗೆ ಪ್ರಬಲ ಪೈಪೋಟಿ ನೀಡಬಹುದು. ಇತ್ತೀಚೆಗಷ್ಟೇ ನಡೆದ ಉಪ ಚುನಾವಣೆಯಲ್ಲಿ ಸಮಯವಾವಕಾಶ ಕಡಿಮೆ ಇದ್ದ ಕಾರಣ ಮಧು ಬಂಗಾರಪ್ಪ ಅವರಿಗೆ ಹಿನ್ನಡೆ ಆಗಿತ್ತು.

ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭದ್ರಾವತಿ, ತೀರ್ಥಹಳ್ಳಿ ಸೇರಿದಂತೆ ವಿವಿಧೆಡೆ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಡಿಕೆಶಿ ಉಸ್ತುವಾರಿ ವಹಿಸಿಕೊಂಡರೆ ಅನುಕೂಲವಾಗಲಿದೆ. ಇನ್ನು ಸೊರಬ, ಸಾಗರ, ಹೊಸನಗರ, ಶಿವಮೊಗ್ಗ ವ್ಯಾಪ್ತಿಯಲ್ಲಿ ಈಡಿಗ ಸಮುದಾಯದ ಮತಗಳನ್ನು ಕ್ರೂಢೀಕರಿಸಿದಲ್ಲಿ ಗೆಲುವಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಮೈತ್ರಿಕೂಟದ ನಾಯಕರಲ್ಲಿದೆ. ಹಾಗಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಚುನಾವಣೆ ಉಸ್ತುವಾರಿ ವಹಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಪ್ರತಿ ದಿನ ಮಜ್ಜಿಗೆ ಕುಡಿಯುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ…

Posted: 15 Mar 2019 04:56 AM PDT

ಬಡವರ ಅಮೃತ ಎಂದೇ ಹೇಳಲಾಗುವ ಮಜ್ಜಿಗೆ ಬೇಸಿಗೆ ಕಾಲಕ್ಕೆ ಬೇಕೇ ಬೇಕು. ಇದೊಂದು ಎನರ್ಜಿ ಡ್ರಿಂಕ್ ಅಂತಲೇ ಹೇಳಬಹುದು. ಮಜ್ಜಿಗೆ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫ ಹಾಗೂ ವಾತ ದೋಷಗಳನ್ನು ಶಮನ ಮಾಡುತ್ತದೆ. ಹಾಗೇ ಮಜ್ಜಿಗೆ ಕುಡಿಯುವುದರಿಂದ ಇನ್ನೇನೆಲ್ಲಾ ಉಪಯೋಗಗಳಿವೆ ನೋಡಿ.

* ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಇರುವವರು ಪ್ರತಿದಿನ ಮಜ್ಜಿಗೆ ಕುಡಿಯುವುದು ಒಳ್ಳೆಯದು. ಇದು ಹೊಟ್ಟೆಯನ್ನು ತಂಪಾಗಿಸುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ಉಂಟು ಮಾಡುವುದಿಲ್ಲ.

* ಹೊಟ್ಟೆ ನೋವು ಅಜೀರ್ಣದ ತೊಂದರೆ ಇದ್ದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೂಡಲೇ ಕಮ್ಮಿ ಯಾಗುವುದು.

* ಅಸಿಡಿಟಿ, ಎದೆ ಉರಿ ಇರುವವರು ಮಜ್ಜಿಗೆ ಕುಡಿದರೆ ಅದು ಕೂಡ ಹತೋಟಿಗೆ ಬಂದು ರಿಲೀಫ್ ಸಿಗುವುದು.

* ಒಂದು ಚಮಚ ಸಕ್ಕರೆ, ರುಚಿಗೆ ಸ್ವಲ್ಪ ಉಪ್ಪು ಸೇರಿಸಿ ಪ್ರತಿ ದಿನ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಮಾಡಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.

* ಸಕ್ಕರೆ ಕಾಯಿಲೆ ಇರುವವರು ಮಜ್ಜಿಗೆ ಕುಡಿಯುತ್ತಿದ್ದರೆ ದೇಹದ ಸ್ಥಿತಿ ನಿಯಂತ್ರಣದಲ್ಲಿರುತ್ತದೆ.

* ಬೇಧಿ, ರಕ್ತ ಬೇಧಿ ಹಾಗೂ ಕರುಳಿನಲ್ಲಿ ಆಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಲು ಮಜ್ಜಿಗೆ ರಾಮಬಾಣ.

* ಲಿವರ್ ನಲ್ಲಿರುವ ವಿಷ ಗುಣಗಳನ್ನು ತೆಗೆದು ಹಾಕುವ ಶಕ್ತಿ ಮಜ್ಜಿಗೆಗಿದೆ.

* ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಮಜ್ಜಿಗೆ ಕುಡಿಯುತ್ತಿದ್ದರೆ ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕಬಹುದು.

* ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹಾಗೂ ಫಾಸ್ಪರಸ್ ಅಂಶವಿದ್ದು ಮೂಳೆಗಳಿಗೆ ಅಗತ್ಯ ಶಕ್ತಿ ನೀಡುವ ಕೆಲಸ ಮಾಡುತ್ತದೆ.

* ಮಜ್ಜಿಗೆ ಕುಡಿದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಹುದು.

ಬೇಸಿಗೆಯಲ್ಲೂ ಹೊಳೆಯುತ್ತಿರಲಿ ನಿಮ್ಮ ಮುಖ

Posted: 15 Mar 2019 04:25 AM PDT

ಬಿಸಿಲು, ಧಗೆ, ಸೆಕೆ. ಈಗ ಎಲ್ಲರ ಬಾಯಿಯಲ್ಲೂ ಇದೇ ಮಾತು. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದೇ ಕಷ್ಟ. ಬಿಸಿಲ ಧಗೆ ಚರ್ಮದ ಕಾಂತಿಯನ್ನು ಹಾಳು ಮಾಡುತ್ತದೆ. ಮುಖವನ್ನು ಎಷ್ಟು ಮುಚ್ಚಿಕೊಂಡು, ಛತ್ರಿ ಹಿಡಿದು ನಡೆದ್ರೂ ಮುಖದ ಮೇಲೆ ಟ್ಯಾನಿಂಗ್ ಕಾಣಿಸಿಕೊಳ್ಳುತ್ತದೆ. ಆಗಾಗ ಮುಖ ತೊಳೆಯುವ ಜನರು ಕೂಲ್ ಗಾಗಿ ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ.

ಈ ಬೇಸಿಗೆಯಲ್ಲೂ ಟ್ಯಾನಿಂಗ್ ನಿಂದ ತಪ್ಪಿಸಿಕೊಂಡು ಹೊಳೆಯುವ ಮುಖ ನಿಮ್ಮದಾಗಿಸಿಕೊಳ್ಳಲು ಬ್ಯೂಟಿ ಪಾರ್ಲರ್ ಗೆ ಹೋಗಬೇಕಾಗಿಲ್ಲ. ಯಾವುದೇ ಕ್ರೀಂ ಬಳಸುವ ಅವಶ್ಯಕತೆಯೂ ಇಲ್ಲ. ಅಡುಗೆ ಮನೆಯಲ್ಲಿರುವ ವಸ್ತುಗಳೇ ನಿಮ್ಮ ಸೌಂದರ್ಯ ರಕ್ಷಿಸುವ ಕೆಲಸ ಮಾಡುತ್ತವೆ.

ಸೌತೆಕಾಯಿ-ಮೊಸರು : ಸೌತೆಕಾಯಿ ಹಾಗೂ ಮೊಸರನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ, ಕೈನಲ್ಲಿ ಮೃದುವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತ್ರ ಮುಖ ತೊಳೆಯಿರಿ. ಒಣ ಚರ್ಮದವರಿಗೆ ಇದು ಬಹಳ ಪ್ರಯೋಜನಕಾರಿ.

ಸೌತೆಕಾಯಿ-ಅಲೋವೇರಾ : ಸೌತೆಕಾಯಿ ಹಾಗೂ ಅಲೋವೇರಾ ಎರಡೂ ಚರ್ಮಕ್ಕೆ ಬಹಳ ಒಳ್ಳೆಯದು. ಈ ಎರಡೂ ಪದಾರ್ಥ ಎಲ್ಲರ ಮನೆಯಲ್ಲಿಯೂ ಸಿಗುತ್ತದೆ. ಮೊದಲು ಸೌತೆಕಾಯಿ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ಒಂದು ಚಮಚ ಅಲೋವೇರಾ ಜೆಲ್ ಮಿಕ್ಸ್ ಮಾಡಿ. ನಂತ್ರ ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತ್ರ ಮುಖ ತೊಳೆಯಿರಿ.

ಸೌತೆಕಾಯಿ-ಓಟ್ಸ್ : ಬೇಸಿಗೆಯಲ್ಲಿ ಡೆಡ್ ಸ್ಕಿನ್ ಸಮಸ್ಯೆ ಕಾಡುತ್ತದೆ. ಈ ಡೆಡ್ ಸ್ಕಿನ್ ಹೋಗಲಾಡಿಸಲು ನೀವು ಸೌತೆಕಾಯಿ ಹಾಗೂ ಓಟ್ಸ್ ಪೇಸ್ಟ್ ಬಳಸಬಹುದು. ಓಟ್ಸ್, ಸೌತೆಕಾಯಿ ಹಾಗೂ ಅರಿಶಿನದ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.

ಸೌತೆಕಾಯಿ-ಕಿತ್ತಳೆ : ಸೌತೆಕಾಯಿ ಹಾಗೂ ಕಿತ್ತಳೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. ನಂತ್ರ ಮುಖಕ್ಕೆ ಹಚ್ಚಿ ಒಣಗಿದ ನಂತ್ರ ತೊಳೆಯಿರಿ.

27 ವರ್ಷ ಹಿಂದಿನ ಮೋದಿ ವಿಡಿಯೋ ಟ್ವೀಟ್ ಮಾಡಿದ ಬಿಜೆಪಿ

Posted: 15 Mar 2019 03:38 AM PDT

ಲೋಕಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ ಪ್ರಚಾರದ ಭರಾಟೆ ಚುರುಕು ಪಡೆಯಲಿದೆ. ಎಲ್ಲ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ತಿವೆ.

ಆಡಳಿತ ಪಕ್ಷ ಬಿಜೆಪಿ ಏರ್ ಸ್ಟ್ರೈಕ್ ದಾಳಿಯನ್ನು ಮುಂದಿಟ್ಟುಕೊಂಡು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ನಾವು ಸದಾ ಸಿದ್ಧ ಎಂಬುದನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಿದೆ. ಟ್ವೀಟರ್ ನಲ್ಲಿ ನರೇಂದ್ರ ಮೋದಿಯವರ 27 ವರ್ಷ ಹಿಂದಿನ ವಿಡಿಯೋ ಒಂದನ್ನು ಬಿಜೆಪಿ ಟ್ವೀಟ್ ಮಾಡಿದೆ.

ಜನವರಿ 24, 1992 ರಲ್ಲಿ ನರೇಂದ್ರ ಮೋದಿ ಮಾಡಿದ ಭಾಷಣದ ತುಣುಕು ಇದಾಗಿದೆ. ಲಾಲ್ ಚೌಕ್ ಗೆ ಹೋಗುವ ಮೊದಲು ಮೋದಿ ಮಾಡಿದ್ದ ಭಾಷಣ ಇದಾಗಿದೆ. ಭಾಷಣದಲ್ಲಿ ಮೋದಿ, ಜನವರಿ 26 ರಂದು ಲಾಲ್ ಚೌಕ್ ಗೆ ಅವಶ್ಯವಾಗಿ ಹೋಗ್ತೆನೆ. ಆಗ ಯಾರು ತಾಯಿ ಹಾಲು ಕುಡಿದವರು ಎಂಬುದು ಗೊತ್ತಾಗುತ್ತದೆ ಎಂದಿದ್ದರು. ಈ ಭಾಷಣದ ಜೊತೆ ಮಾರ್ಚ್ 4, 2019 ರಲ್ಲಿ ಏರ್ ಸ್ಟ್ರೈಕ್ ನಂತ್ರ ಮೋದಿ ಮಾಡಿದ ಭಾಷಣದ ತುಣುಕನ್ನು ಟ್ವೀಟ್ ಮಾಡಲಾಗಿದೆ.

ಸಿಂಹಗಳು ಬದಲಾಗುವುದಿಲ್ಲ ಎಂಬ ಶೀರ್ಷಿಕೆಯಡಿ ಈ ವಿಡಿಯೋ ಹಾಕಲಾಗಿದೆ. 1992ರಲ್ಲಿ ಜಮ್ಮು- ಕಾಶ್ಮೀರದ ಲಾಲ್ ಚೌಕ್ ನಲ್ಲಿ ನರೇಂದ್ರ ಮೋದಿ ತ್ರಿವರ್ಣ ಧ್ವಜ ಹಾರಿಸಿದ್ದರು. ಭಯೋತ್ಪಾದಕರ ಬೆದರಿಕೆ ಮಧ್ಯೆಯೂ ಮೋದಿ ಧ್ವಜ ಹಾರಿಸಿ ದೇಶಭಕ್ತಿ ಮೆರೆದಿದ್ದರು.

ಮೊದಲ ರಾತ್ರಿ ವಧು ಮೇಲೆ ನಡೀತು ಪತಿ, ಮೈದುನನಿಂದ ಅತ್ಯಾಚಾರ

Posted: 15 Mar 2019 02:57 AM PDT

ಮದುವೆ ಸಮಯದಲ್ಲಿ ಏಳು ಜನ್ಮಗಳ ಕಾಲ ನಿನ್ನ ಜೊತೆಗಿರ್ತೇನೆ ಎಂದಿದ್ದ ಪತಿ ಮೊದಲ ರಾತ್ರಿಯೇ ಮಾಡಬಾರದ ಕೆಲಸ ಮಾಡಿದ್ದಾನೆ. ಸುಂದರ ದಾಂಪತ್ಯದ ಕನಸು ಕಂಡಿದ್ದ ಯುವತಿ ಮೊದಲ ರಾತ್ರಿಯೇ ಅತ್ಯಾಚಾರಕ್ಕೊಳಗಾಗಿದ್ದಾಳೆ. ಪತಿ ಹಾಗೂ ಮೈದುನ ವಧುವಿನ ಮೇಲೆ ಅತ್ಯಾಚಾರವೆಸಗಿದ್ದಾರೆ.

ಆಘಾತಕಾರಿ ಘಟನೆ ಮುಜಾಫರ್ನಗರದಲ್ಲಿ ನಡೆದಿದೆ. 26 ವರ್ಷದ ಮಹಿಳೆ ಮೇಲೆ ಪತಿ ಹಾಗೂ ಮೈದುನ ಅತ್ಯಾಚಾರವೆಸಗಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಮಾರ್ಚ್ 4 ರಂದು ನಡೆದಿದ್ದು, ಮಾರ್ಚ್ 14 ರಂದು ಪ್ರಕರಣ ಬೆಳಕಿಗೆ ಬಂದಿದೆ.

ಹುಡುಗನ ಮನೆಯವರು ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರಂತೆ. ವಧುವಿನ ಕಡೆಯವರು ಆದಷ್ಟು ಹಣ ನೀಡಿದ್ದರಂತೆ. 7 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದರಂತೆ. ಆದ್ರೆ ಆಸೆ ತೀರದ ಹುಡುಗ ವಧುವಿನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಗುಡ್ ನ್ಯೂಸ್: ಎಸ್ ಬಿ ಐ ಶುರು ಮಾಡಿದೆ ‘ಎಟಿಎಂ ಕಾರ್ಡ್’ ಇಲ್ಲದೆ ಹಣ ಡ್ರಾ ಸೇವೆ

Posted: 15 Mar 2019 02:52 AM PDT

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್ ಬಿ ಐ  ಹೊಸ ಸೇವೆ ಶುರು ಮಾಡಿದೆ. ಎಸ್ ಬಿ ಐ ಇದಕ್ಕೆ ಯೋನೊ ಕ್ಯಾಶ್ ಎಂದು ಹೆಸರಿಟ್ಟಿದೆ.

ಎಸ್ ಬಿ ಐ ಬ್ಯಾಂಕ್ ನಿಂದ 1.65 ಲಕ್ಷ ರೂಪಾಯಿ ಡ್ರಾ ಮಾಡಲು ನಿಮಗೆ ಎಟಿಎಂ ಕಾರ್ಡ್ ಅವಶ್ಯಕತೆಯಿರುವುದಿಲ್ಲ. ಎಟಿಎಂ ಕಾರ್ಡ್ ಇಲ್ಲದೆ ಯೋನೊ ಆಪ್ ಮೂಲಕ ಹಣ ಡ್ರಾ ಮಾಡಬಹುದು. ಕಾರ್ಡ್ ಇಲ್ಲದೆ ಎಟಿಎಂ ಮೂಲಕ ಹಣ ಡ್ರಾ ಮಾಡುವ ಸೇವೆಯನ್ನು ಶುರು ಮಾಡಿರುವ ಮೊದಲ ಬ್ಯಾಂಕ್ ಎಸ್ ಬಿ ಐ ಆಗಿದೆ.

ಈ ಸೇವೆ ಮೂಲಕ ಎಟಿಎಂ ಕಾರ್ಡ್ ನಿಂದಾಗುವ ಮೋಸವನ್ನು ತಪ್ಪಿಸಬಹುದಾಗಿದೆ. ಈ ಸೇವೆಗೆ ಎಟಿಎಂನಲ್ಲಿ ಯೊನೋ ಕ್ಯಾಶ್ ಪಾಯಿಂಟ್ ಎಂದು ಹೆಸರಿಡಲಾಗಿದೆ. ಇದ್ರಲ್ಲಿ ಗ್ರಾಹಕರು ಹಣ ಡ್ರಾ ಮಾಡಬಹುದು. ಯೋನೊ ಆಪ್ ನಲ್ಲಿ ಹಣ ವರ್ಗಾವಣೆಗೆ 6 ಡಿಜಿಟಲ್ ಪಿನ್ ನೀಡಲಾಗುವುದು. ಮೊಬೈಲ್ ನಲ್ಲಿ ಎಸ್ ಎಂ ಎಸ್ ಮೂಲಕ 6 ಅಂಕಿಯ ರೆಫರೆನ್ಸ್ ನಂಬರ್ ಕೂಡ ಸಿಗಲಿದೆ.

ನಂತ್ರ ನಿಮ್ಮ ಹತ್ತಿರದ ಎಟಿಎಂಗೆ ಹೋಗಿ 30 ಸೆಕೆಂಡಿನಲ್ಲಿ ಹಣ ಡ್ರಾ ಮಾಡಬಹುದು. ಎಟಿಎಂನಲ್ಲಿ 6 ಡಿಜಿಟಲ್ ನಂಬರ್ ಹಾಗೂ 6 ರೆಫರೆನ್ಸ್ ನಂಬರ್ ಹಾಕಬೇಕು.

ಅತ್ತೆ ಸತ್ತ ಖುಷಿ ಆಚರಿಸುತ್ತಿದ್ದ ಸೊಸೆಗೆ ಬಂತು ಆಪತ್ತು

Posted: 15 Mar 2019 01:28 AM PDT

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅತ್ತೆ ಸತ್ತ ಬೇಸರದಲ್ಲಿ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿಯೊಂದು ಹಬ್ಬಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಸೊಸೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ.ಕೊಲೆ ಮಾಡಲಾಗಿದೆ ಎಂಬ ಸಂಗತಿ ಬಹಿರಂಗವಾಗಿದೆ.

ಸೊಸೆಯನ್ನು ಆಕೆ ಗಂಡನೇ ಹತ್ಯೆಗೈದಿದ್ದಾನೆ. ಅತ್ತೆ ಸತ್ತ ಖುಷಿಯಲ್ಲಿದ್ದಳಂತೆ ಸೊಸೆ. ಇದು ಪತಿ ಕೋಪಕ್ಕೆ ಕಾರಣವಾಗಿದೆ. ಮನೆ ಮಹಡಿ ಮೇಲೆ ಕರೆದೊಯ್ದು ಕೆಳಗೆ ನೂಕಿದ್ದಾನೆ. ಜನರು ಇದನ್ನು ಆತ್ಮಹತ್ಯೆ ಎಂದುಕೊಂಡಿದ್ದರು. ಆದ್ರೆ ವಿಚಾರಣೆ ವೇಳೆ ಆರೋಪಿ ಸಂದೀಪ್ ಒಪ್ಪಿಕೊಂಡಿದ್ದಾನೆ.

ಸೊಸೆ ಶುಭಾಂಗಿ, ಅತ್ತೆ ಮಾಲತಿ ಸಾವನ್ನಪ್ಪಿದ್ದಕ್ಕೆ ಖುಷಿಯಾಗಿದ್ದಳು ಎನ್ನಲಾಗಿದೆ. ಮಾಲತಿ ಸಾವು ಸಹಜ ಸಾವಾಗಿತ್ತು. ಆದ್ರೆ ಶುಭಾಂಗಿಯನ್ನು ಕೋಪಗೊಂಡ ಪತಿಯೇ ಹತ್ಯೆಗೈದಿದ್ದಾನೆ.

ಪ್ರೀತಿ ಪರೀಕ್ಷೆಗೆ ರಸ್ತೆಗಿಳಿದವನ ಕಥೆ ಹೀಗಾಯ್ತು

Posted: 15 Mar 2019 01:03 AM PDT

ಪ್ರೀತಿ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರುತ್ತದೆ. ಚೀನಾದಲ್ಲಿ ಪ್ರೀತಿ ಪರೀಕ್ಷೆಗಿಳಿದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ಝೆಜಿಯಾಂಗ್ ಪ್ರಾಂತ್ಯದ ಲಿಶುಯಿಯಲ್ಲಿ ಘಟನೆ ನಡೆದಿದೆ.

ವ್ಯಕ್ತಿಯ ಅಡ್ಡ ಹೆಸರು ಪ್ಯಾನ್ ಎಂಬುದು ಗೊತ್ತಾಗಿದೆ. ಆತ ಪತ್ನಿ ತನ್ನನ್ನು ಎಷ್ಟು ಪ್ರೀತಿ ಮಾಡ್ತಾಳೆ ಎಂಬುದನ್ನು ನೋಡಲು ಅಪಾಯಕಾರಿ ಮಾರ್ಗ ಅನುಸರಿಸಿದ್ದಾನೆ. ಪತಿ-ಪತ್ನಿ ಮಧ್ಯೆ ಗಲಾಟೆ ನಡೆದಿತ್ತಂತೆ. ಮದ್ಯಪಾನ ಮಾಡಲು ಹೋದ ವ್ಯಕ್ತಿ, ಅಲ್ಲಿಗೆ ಪತ್ನಿಯನ್ನು ಕರೆಸಿಕೊಂಡಿದ್ದನಂತೆ. ನಂತ್ರ ರಸ್ತೆ ಮಧ್ಯೆ ನಿಂತು ಪ್ರೀತಿ ಪರೀಕ್ಷೆಗಿಳಿದಿದ್ದನಂತೆ.

ಪತ್ನಿ ತನ್ನನ್ನು ಎಷ್ಟು ಪ್ರೀತಿ ಮಾಡ್ತಾಳೆ? ಆಕೆ ತನ್ನನ್ನು ರಕ್ಷಣೆ ಮಾಡ್ತಾಳಾ ಎಂಬುದನ್ನು ನೋಡಲು ಹೀಗೆ ಮಾಡಿದ್ದನಂತೆ. ಕತ್ತಲ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯನ್ನು ರಕ್ಷಿಸಲು ಅನೇಕ ವಾಹನಗಳು ತಮ್ಮ ದಾರಿ ಬದಲಿಸಿವೆ. ಆದ್ರೆ ವ್ಯಾನ್ ಒಂದು ಆತನಿಗೆ ಗುದ್ದಿದೆ. ಸ್ವಲ್ಪ ದೂರ ವ್ಯಕ್ತಿಯನ್ನು ವ್ಯಾನ್ ಎಳೆದೊಯ್ದಿದೆಯಂತೆ.

ತಕ್ಷಣ ಪತ್ನಿ ಆತನ ರಕ್ಷಣೆಗೆ ಹೋಗಿದ್ದಾಳೆ. ಪೊಲೀಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿ ಆರೋಗ್ಯವಾಗಿದ್ದಾನೆ. ಜೀವಕ್ಕೆ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. ಈಗ ಪ್ಯಾನ್ ಗೆ ತಪ್ಪಿನ ಅರಿವಾಗಿದೆ. ಅನೇಕ ಬಾರಿ ದಾರಿ ಮಧ್ಯೆ ಹೋದ ಪತ್ನಿ, ಪತಿಯನ್ನು ಎಳೆ ತರುವ ಯತ್ನ ನಡೆಸಿದ್ದಾಳೆ. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸೆಕ್ಸ್ ವೇಳೆ ಪಾರ್ಶ್ವವಾಯುವಿಗೊಳಗಾದ ಮಹಿಳೆ…!

Posted: 15 Mar 2019 01:00 AM PDT

ಸಂಭೋಗದ ವೇಳೆ ನಡೆಯುವ ಕೆಲವೊಂದು ಘಟನೆಗಳು ವ್ಯಕ್ತಿಯನ್ನು ಆಸ್ಪತ್ರೆಗೆ ಸೇರುವಂತೆ ಮಾಡುತ್ತದೆ. ಇಂಥಹದ್ದೇ ಆಶ್ಚರ್ಯಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 44 ವರ್ಷದ ಮಹಿಳೆಗೆ ಸೆಕ್ಸ್ ವೇಳೆ ಪಾರ್ಶ್ವವಾಯು ಕಾಣಿಸಿಕೊಂಡ ಕಾರಣ ಆಸ್ಪತ್ರೆ ಸೇರಬೇಕಾಯ್ತು.

ಓರಲ್ ಸೆಕ್ಸ್ ವೇಳೆ ಮಹಿಳೆಗೆ ಹಠಾತ್ ತಲೆನೋವು ಕಾಣಿಸಿಕೊಂಡಿದೆ. ಮೂರೇ ನಿಮಿಷದಲ್ಲಿ ಆಕೆ ಪ್ರಜ್ಞೆ ತಪ್ಪಿದ್ದಾಳೆ. ತಕ್ಷಣ ಸಂಗಾತಿ ಆಸ್ಪತ್ರೆಗೆ ಕರೆ ತಂದಿದ್ದಾನೆ. ಪರೀಕ್ಷೆ ನಡೆಸಿದ ವೈದ್ಯರು, ಮಹಿಳೆಗೆ ಪಾರ್ಶ್ವವಾಯುವಾಗಿದೆ. ಮೆದುಳಿನಲ್ಲಿಯೇ ರಕ್ತಸ್ರಾವವಾಗಿದೆ ಎಂದಿದ್ದರು. ರಕ್ತದೊತ್ತಡ ಹೆಚ್ಚಾದಾಗ ಹೀಗಾಗುತ್ತದೆ ಎಂದು ವೈದ್ಯರು ಹೇಳಿದ್ದರು.

ಸೆಕ್ಸ್ ವೇಳೆ ಹೃದಯ ಬಡಿತ ಹೆಚ್ಚಾಗುವುದು, ರಕ್ತದೊತ್ತಡ ಹೆಚ್ಚಾಗುವುದು ಸಾಮಾನ್ಯ. ಕೆಲವೊಮ್ಮೆ ಇದು ಹೆಚ್ಚಾದಾಗ ಹೃದಯಾಘಾತ, ಪಾರ್ಶ್ವವಾಯು ಕಾಣಿಸಿಕೊಳ್ಳುತ್ತದೆ. ಮಹಿಳೆ ಸುಮಾರು 2 ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದಳು.

ಕೆಲ ಕ್ಷಣದಲ್ಲಿ ಪ್ರೇಮಿಗಳನ್ನು ಒಂದು ಮಾಡುತ್ತೆ ಪಾನ್

Posted: 15 Mar 2019 12:56 AM PDT

ಪ್ರೇಮಿಗಳನ್ನು ಒಂದು ಮಾಡುವ ಪ್ರಸಿದ್ಧ ಭಗೋರಿಯಾ ಉತ್ಸವ ಮಾರ್ಚ್ 14 ರಿಂದ ಶುರುವಾಗಿದೆ. ಈ ಉತ್ಸವದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಉತ್ಸವಕ್ಕೆ ಬಂದ ಪ್ರೇಮಿಗಳು ಮೋಜು, ಮಸ್ತಿಗೆ ಸಿಕ್ಕ ಅವಕಾಶವನ್ನು ಬಿಡುವುದಿಲ್ಲ. ಮೇಳದಲ್ಲಿ ಐಸ್ ಕ್ರೀಂ, ಗೋಲ್ಗಪ್ಪಾ ಅಂಗಡಿಗಳು ಗಮನ ಸೆಳೆಯುತ್ತವೆ. ಈ ಮೇಳದ ವಿಶೇಷ ಪಾನ್.

ಯುವಕ, ಯುವತಿಗೆ ಪಾನ್ ನೀಡ್ತಾನೆ. ಯುವತಿ ಪಾನ್ ಸೇವನೆ ಮಾಡಿದ್ರೆ ಆಕೆ ಯುವಕನ ಪ್ರೇಮವನ್ನು ಒಪ್ಪಿಕೊಂಡಂತೆ. ಅವಕಾಶ ನೋಡಿ ಹುಡುಗ, ಹುಡುಗಿ ಅಲ್ಲಿಂದ ಓಡಿ ಹೋಗ್ತಾರೆ.

ಮದುವೆಯಾದ್ಮೇಲೆ ಮತ್ತೆ ಬರ್ತಾರೆ. ಇದೇ ಕಾರಣಕ್ಕೆ ಇದಕ್ಕೆ ಭಗೋರಿಯಾ ಎಂದು ಹೆಸರಿಸಲಾಗಿದೆ. ಕೆಲಸಕ್ಕಾಗಿ ಪರ ಊರಿಗೆ ಹೋದ ಕಾರ್ಮಿಕರು ಮೇಳಕ್ಕಾಗಿ ಊರಿಗೆ ಬರ್ತಾರೆ. ಹೋಳಿಯವರೆಗೆ ಇಲ್ಲಿಯೇ ಇದ್ದು, ನಂತ್ರ ಕೆಲಸಕ್ಕೆ ಮರಳುತ್ತಾರೆ.

ಈ ಮೇಳ ಈ ಬಾರಿ ರಾಜಕೀಯ ಪಕ್ಷಗಳ ಪ್ರಚಾರಕ್ಕೂ ಬಳಕೆಯಾಗ್ತಿದೆ. ಭಗೋರಿಯಾ ಉತ್ಸವ ಹೋಳಿ ಹಬ್ಬದ ಇನ್ನೊಂದು ರೂಪವೆಂದ ಕೆಲವರು ಹೇಳ್ತಾರೆ. ಒಂದು ವಾರಗಳಿಂದಲೇ ಈ ಮೇಳಕ್ಕೆ ತಯಾರಿ ಶುರುವಾಗಿದೆ. ಒಂದೊಂದು ದಿನ ಒಂದೊಂದು ಕಾರ್ಯಕ್ರಮಗಳು ನಡೆಯುತ್ತವೆ. ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಈ ಉತ್ಸವ ನಡೆಯುತ್ತದೆ.

ಈ ಬಾರಿ ಚುನಾವಣೆಗೆ ಸ್ಪರ್ಧಿಸ್ತಿಲ್ಲ 1000 ಕ್ಕೂ ಹೆಚ್ಚು ನಾಯಕರು

Posted: 15 Mar 2019 12:52 AM PDT

ನೀತಿ ಸಂಹಿತೆ ಜಾರಿ ಮೂಲಕ ಲೋಕಸಭೆ ಚುನಾವಣೆ 2019 ರ ಪ್ರಕ್ರಿಯೆ ಶುರುವಾಗಿದೆ. ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಹೆಸ್ರು ಘೋಷಣೆ ಶುರು ಮಾಡಿವೆ.

ಬಿಜೆಪಿ ಶೀಘ್ರವೇ ಅಭ್ಯರ್ಥಿಗಳ ಹೆಸ್ರು ಘೋಷಣೆ ಮಾಡಲಿದೆ. ಹಿಂದಿನ ಬಾರಿಗೆ ಹೋಲಿಕೆ ಮಾಡಿದ್ರೆ ಈ ಬಾರಿ 1000 ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳ ಮೈತ್ರಿ ಮಾಡಿಕೊಂಡಿದೆ. ಹಾಗಾಗಿ ಹಿಂದಿನ ಬಾರಿ ಸ್ಪರ್ಧಿಸಿದ್ದ  ಸುಮಾರು 100 ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿಯುತ್ತಿಲ್ಲ. ಬಿಹಾರದಲ್ಲಿ ಬಿಜೆಪಿ ಹಾಗೂ ಜನತಾದಳ ಯುನೈಡೆಟ್ ಒಪ್ಪಂದದಿಂದಾಗಿ 50 ಅಭ್ಯರ್ಥಿಗಳು ಚುನಾವಣಾ ಕಣದಿಂದ ಹೊರಗಿರಲಿದ್ದಾರೆ.

ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್, ಆರ್ ಎಲ್ ಎಸ್ ಸೇರಿದಂತೆ ಕೆಲ ಪಕ್ಷಗಳ ಮಧ್ಯೆ ಒಪ್ಪಂದ ನಡೆಯಲಿದ್ದು, 50 ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಯಿಂದ ಹೊರಗಿರಬೇಕಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಅಸ್ಸಾಂ ಮಹಾರಾಷ್ಟ್ರ ಸೇರಿದಂತೆ ಪ್ರತಿ ರಾಜ್ಯದಲ್ಲೂ ಪಕ್ಷಗಳ ಮಧ್ಯೆ ಮೈತ್ರಿಯಿಂದಾಗಿ ಹಿಂದಿನ ಬಾರಿಗಿಂತ ಈ ಬಾರಿ ಸುಮಾರು 1000 ಅಭ್ಯರ್ಥಿಗಳು ಚುನಾವಣಾ ಕಣದಿಂದ ಹೊರಗಿರಲಿದ್ದಾರೆ.

ರಾಹುಲ್ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬೆಡಗಿ

Posted: 15 Mar 2019 12:48 AM PDT

ಹರ್ಯಾಣ ಡಾನ್ಸರ್, ಬಿಗ್ ಬಾಸ್ ಸ್ಪರ್ಧಿ ಸಪ್ನಾ ಚೌಧರಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡ್ತಿದ್ದಾಳೆ.

ಬಿಗ್ ಬಾಸ್ ನಂತ್ರ ಹೆಚ್ಚು ಪ್ರಸಿದ್ಧಿಗೆ ಬಂದ ಸಪ್ನಾ, ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ. ಚಿತ್ರದ ಜೊತೆ ರಾಜಕೀಯ ವಿಚಾರಕ್ಕೆ ಈಗ ಸಪ್ನಾ ಟ್ರೋಲರ್ ಬಾಯಿಗೆ ಆಹಾರವಾಗಿದ್ದಾಳೆ.

ಟ್ವೀಟರ್ ನಲ್ಲಿ ಸಪ್ನಾ ಮಾಡಿದ ಟ್ವೀಟ್ ಒಂದು ಚರ್ಚೆಗೆ ಕಾರಣವಾಗಿದೆ. ಸಪ್ನಾ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿ ಟ್ವೀಟ್ ಮಾಡಿದ್ದಾಳೆ. ಮೋದಿಯವರು ಮತದಾನ ಮಾಡಲು ಪ್ರೇರೇಪಿಸುತ್ತಾರೆ. ರಾಹುಲ್ ಗಾಂಧಿ ಬಿಜೆಪಿಗೆ ಮತ ಚಲಾಯಿಸಲು ಒತ್ತಾಯಿಸುತ್ತಾರೆಂದು ಟ್ವೀಟ್ ಮಾಡಿದ್ದಳು. ಸಪ್ನಾ ಟ್ವೀಟ್ ಗೆ ಬಿಜೆಪಿ ಬೆಂಬಲಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಹುಲ್ ಬೆಂಬಲಿಗರು ಕಿಡಿಕಾರಿದ್ದರು.

ಬೆಳಿಗ್ಗೆ ಟ್ವಿಟ್ ಮಾಡಿದ್ದ ಸಪ್ನಾ, ಸಂಜೆ ಟ್ವೀಟ್ ಡಿಲೀಟ್ ಮಾಡಿದ್ದಾಳೆ. ಸಪ್ನಾ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಆಗಾಗ ಚರ್ಚೆಗೆ ಬರ್ತಾಳೆ.

ಕ್ರಾಪ್ ಟಾಪ್ ತೊಟ್ಟ ಯುವತಿಗೆ ಅವಮಾನ ಮಾಡಿದ ವಿಮಾನ ಸಿಬ್ಬಂದಿ

Posted: 15 Mar 2019 12:25 AM PDT

ಕ್ರಾಪ್ ಟಾಪ್ ತೊಟ್ಟು ಬಂದಿದ್ದ ಯುವತಿಗೆ ವಿಮಾನ ಸಿಬ್ಬಂದಿ ಅವಮಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಎಮಿಲಿ ಹೆಸರಿನ ಯುವತಿ ಕಪ್ಪು ಬಣ್ಣದ ಕ್ರಾಪ್ ಟಾಪ್ ಹಾಗೂ ಪ್ಯಾಂಟ್ ಧರಿಸಿ ಬಂದಿದ್ದಳು. ಚೆಕ್ಕಿಂಗ್ ವೇಳೆ ಯಾವುದೇ ಸಮಸ್ಯೆ ಆಗಲಿಲ್ಲ. ಆದ್ರೆ ಬೋರ್ಡಿಂಗ್ ವೇಳೆ ನಾಲ್ಕೈದು ಸಿಬ್ಬಂದಿ ಯುವತಿಯನ್ನು ತಡೆದು ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಎಮಿಲಿ ಡ್ರೆಸ್ ಅಶ್ಲೀಲವಾಗಿದೆ ಎಂದು ದೂರಿದ್ದರಂತೆ.

ಎಮಿಲಿ ಬರ್ಮಿಂಗ್ಹ್ಯಾಮ್ ನಿಂದ ಕ್ಯಾನರಿ ದ್ವೀಪಕ್ಕೆ ಹೊರಟಿದ್ದಳು. ಥಾಮಸ್ ಕುಕ್ ಏರ್ಲೈನ್ಸ್ ನಲ್ಲಿ ಅವಮಾನಕಾರಿ ಘಟನೆ ನಡೆದಿದೆ. ಇದನ್ನು ಎಮಿಲಿ ಟ್ವಿಟ್ ಮಾಡಿದ್ದಾಳೆ. ಎಮಿಲಿ ನೋಡಿದ ಸಿಬ್ಬಂದಿ, ಡ್ರೆಸ್ ಬದಲಿಸುವಂತೆ ಹೇಳಿದ್ದಾರೆ. ವಿಮಾನದಲ್ಲಿ ಕೂಡ ಪ್ರಯಾಣಿಕನೊಬ್ಬ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮೈಕ್ ನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ.

ತುಂಬಾ ಅವಮಾನ ಎದುರಿಸಿದ ಎಮಿಲಿಗೆ ಸಂಬಂಧಿಯೊಬ್ಬರು ಜಾಕೆಟ್ ನೀಡಿದ್ದಾರೆ. ಜಾಕೆಟ್ ಧರಿಸುವವರೆಗೂ ಸಿಬ್ಬಂದಿ ಅಲ್ಲಿಂದ ಕದಲಲಿಲ್ಲವಂತೆ. ಮುಂದೆ ಕುಳಿತಿದ್ದ ಹುಡುಗರ ಬಟ್ಟೆ ಕೂಡ ಕೆಟ್ಟದಾಗಿತ್ತು. ಆದ್ರೆ ಅವ್ರಿಗೆ ಏನೂ ಹೇಳಲಿಲ್ಲವೆಂದು ಎಮಿಲಿ ಹೇಳಿದ್ದಾಳೆ.

ಎಮಿಲಿ ಟ್ವಿಟ್ ಗೆ ಥಾಮಸ್ ಕುಕ್ ಏರ್ಲೈನ್ಸ್ ಪ್ರತಿಕ್ರಿಯೆ ನೀಡಿದೆ. ಕ್ಷಮೆ ಕೋರಿದ ಏರ್ಲೈನ್ಸ್, ವಿಮಾನದಲ್ಲಿ ಡ್ರೆಸ್ ಕೋಡ್ ಇದೆ. ಅದನ್ನು ಪಾಲಿಸಬೇಕಾಗುತ್ತದೆ. ಕೆಲವೊಮ್ಮೆ ನಿಯಮ ಪಾಲನೆಗೆ ಸಿಬ್ಬಂದಿ ತಮ್ಮ ಗಡಿದಾಟುತ್ತಾರೆ. ಕ್ಷಮೆಯಿರಲಿ ಎಂದಿದೆ.

 

ಶ್ರೀಶಾಂತ್ ಗೆ ನೆಮ್ಮದಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್

Posted: 14 Mar 2019 11:20 PM PDT

ಸುಪ್ರೀಂ ಕೋರ್ಟ್, ಕ್ರಿಕೆಟರ್ ಶ್ರೀಶಾಂತ್ ಗೆ ಬಿಗ್ ರಿಲೀಫ್ ನೀಡಿದೆ. ಐಪಿಎಲ್ ಮ್ಯಾಚ್ ಫಿಕ್ಸಿಂಗ್ ನಲ್ಲಿ ಜೀವಾವಧಿ ನಿಷೇಧಕ್ಕೊಳಗಾಗಿದ್ದ ಶ್ರೀಶಾಂತ್ ಗೆ ಸುಪ್ರೀಂ ಕೋರ್ಟ್ ನೆಮ್ಮದಿ ಸುದ್ದಿ ನೀಡಿದೆ. ಶ್ರೀಶಾಂತ್ ಜೀವಾವಧಿ ನಿಷೇಧ ಶಿಕ್ಷೆಯನ್ನು ರದ್ದುಗೊಳಿಸಿದೆ.

ಶ್ರೀಶಾಂತ್ ಪ್ರಕರಣದ ಬಗ್ಗೆ ಮರುಪರಿಶೀಲನೆ ಮಾಡುವಂತೆ ಬಿಸಿಸಿಐ ಸೂಚನೆ ನೀಡಿದೆ. ಮೂರು ತಿಂಗಳಲ್ಲಿ ಈ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಶ್ರೀಶಾಂತ್ ಮಾತುಗಳನ್ನೂ ಬಿಸಿಸಿಐ ಆಲಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಆದೇಶದಂತೆ ಬಿಸಿಸಿಐ ಮೂರು ತಿಂಗಳಲ್ಲಿ, ನಿಷೇಧದ ಬದಲು ಶ್ರೀಶಾಂತ್ ಗೆ ಯಾವ ಶಿಕ್ಷೆ ನೀಡಲಾಗುತ್ತದೆ ಎಂಬುದನ್ನು ಹೇಳಬೇಕು.

ಸಿಬಿಐ ತನಿಖೆಯಲ್ಲಿ ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂಬುದು ಬಹಿರಂಗವಾಗಿತ್ತು. ಆದ್ರೆ ಶ್ರೀಶಾಂತ್ ಇದನ್ನು ಒಪ್ಪಿಕೊಂಡಿರಲಿಲ್ಲ. ಬಿಸಿಸಿಐ ಶ್ರೀಶಾಂತ್ ಗೆ ಜೀವಾವಧಿ ನಿಷೇಧ ಶಿಕ್ಷೆ ವಿಧಿಸಿತ್ತು. ಇದು ಶ್ರೀಶಾಂತ್ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆಯಗಿತ್ತು. ಅನೇಕ ಬಾರಿ ಶ್ರೀಶಾಂತ್ ಈ ಬಗ್ಗೆ ನೋವು ತೋಡಿಕೊಂಡಿದ್ದರು. ಸುಪ್ರೀಂ ಕೋರ್ಟ್ ಆದೇಶದ ನಂತ್ರ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಶ್ರೀಶಾಂತ್,ಮತ್ತೆ ಮೈದಾನಕ್ಕಿಳಿಯಲು ನಾನು ಸಿದ್ಧ ಎಂದಿದ್ದಾರೆ.ಇಷ್ಟು ವರ್ಷ ಕಾದಿದ್ದೇನೆ. ಇನ್ನು ಮೂರು ತಿಂಗಳು ಕಾಯುವುದು ದೊಡ್ಡ ವಿಷ್ಯವಲ್ಲ. ಇನ್ನೂ ನನಗೆ 36 ವರ್ಷ. ನಾನು ಕ್ರಿಕೆಟ್ ಆಡಲು ಫಿಟ್ ಆಗಿದ್ದೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ.

ನಿಲುವು ಬದಲಿಸಿದ ‘ದೋಸ್ತಿ’: ತುಮಕೂರು ಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆ?

Posted: 14 Mar 2019 10:45 PM PDT

ಕಾಂಗ್ರೆಸ್ ಮತ್ತು ಜೆಡಿಎಸ್ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ 20 ಹಾಗೂ ಜೆಡಿಎಸ್ 8 ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಂಡಿವೆ.

ಕಾಂಗ್ರೆಸ್ ಸಂಸದ ಪ್ರತಿನಿಧಿಸುತ್ತಿರುವ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿದ್ದು, ಪಕ್ಷದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಜೆಡಿಎಸ್ ನಲ್ಲಿ ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಸ್ಪರ್ಧಿಸುವಂತೆ ಒತ್ತಡ ಹೇರಲಾಗಿದೆ. ಅವರು ಸ್ಪರ್ಧಿಸದಿದ್ದರೆ, ಮಾಜಿ ಶಾಸಕ ಸುರೇಶ್ ಬಾಬು, ಎಂ.ಟಿ. ಕೃಷ್ಣಪ್ಪ., ಹಾಗೂ ರಮೇಶ್ ಬಾಬು ಅವರು ರೇಸ್ ನಲ್ಲಿದ್ದಾರೆ.

ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ಹೆಚ್.ಡಿ. ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ತುಮಕೂರು ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕೆಂದು ಜೆಡಿಎಸ್ ನಲ್ಲಿ ಚರ್ಚೆ ನಡೆದಿರುವಾಗಲೇ ಮತ್ತೊಂದು ಬೆಳವಣಿಗೆ ನಡೆದಿದೆ.

ರಾತ್ರಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೇವೇಗೌಡರನ್ನು ಭೇಟಿ ಮಾಡಿದ್ದು, ತುಮಕೂರು ಕ್ಷೇತ್ರದ ವಿಚಾರದ ಕುರಿತಾಗಿ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಜೆಡಿಎಸ್ ಈ ಕ್ಷೇತ್ರವನ್ನು ವಾಪಸ್ ಕಾಂಗ್ರೆಸ್ ಗೆ ಬಿಟ್ಟು ಕೊಡುವ ಬಗ್ಗೆಯೂ ಚರ್ಚೆ ನಡೆದಿದೆ.

ಹಾಲಿ ಕಾಂಗ್ರೆಸ್ ಸಂಸದರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿರುವುದರಿಂದ ಕಾಂಗ್ರೆಸ್ ನಲ್ಲಿ ಅಸಮಾಧಾನ ಉಂಟಾಗಿದ್ದು, ಜೆಡಿಎಸ್ ನಲ್ಲಿಯೂ ಅಭ್ಯರ್ಥಿ ಬಗ್ಗೆ ಗೊಂದಲವಿದೆ. ಈ ಬೆಳವಣಿಗೆಗಳಿಂದ ಬಿಜೆಪಿ ಗೆ ಅನುಕೂಲವಾಗಬಹುದೆಂಬ ಕಾರಣದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ಲೈವ್ ಪ್ರಸಾರವಾಗಿತ್ತು ಗುಂಡಿನ ದಾಳಿ: ನ್ಯೂಜಿಲ್ಯಾಂಡ್, ಬಾಂಗ್ಲಾ ಟೆಸ್ಟ್ ರದ್ದು

Posted: 14 Mar 2019 10:42 PM PDT

ನ್ಯೂಜಿಲ್ಯಾಂಡ್ ನ ಎರಡು ಮಸೀದಿಗಳ ಮೇಲೆ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಗಳ ದಾಳಿಗೆ 27 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅನೇಕರು ಗಾಯಗೊಂಡಿದ್ದು, ಮಸೀದಿಯಲ್ಲಿ ನಮಾಜ್ ಮಾಡ್ತಿದ್ದ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ಸುರಕ್ಷಿತವಾಗಿದ್ದಾರೆ.

ಮಸೀದಿ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದ ವೇಳೆ ಆಟಗಾರರು ಮಸೀದಿಯೊಳಗೆ ನಮಾಜ್ ಮಾಡ್ತಿದ್ದರಂತೆ. ತಕ್ಷಣ ಅವ್ರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದೆ.

ಈ ಬಗ್ಗೆ ಆಟಗಾರರು ಹಾಗೂ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಟ್ವಿಟ್ ಮಾಡಿದೆ. ಎಲ್ಲ ಆಟಗಾರರು ಸುರಕ್ಷಿತವಾಗಿದ್ದಾರೆಂದು ಕ್ರಿಕೆಟ್ ಬೋರ್ಡ್ ತಿಳಿಸಿದೆ. ನಾವೆಲ್ಲ ಸುರಕ್ಷಿತವಾಗಿದ್ದೇವೆ. ಅಲ್ಲಾ ಕೃಪೆ ನಮ್ಮ ಮೇಲಿತ್ತು ಎಂದು ಆಟಗಾರರು ಹೇಳಿದ್ದಾರೆ. ಘಟನೆ ವೇಳೆ ಕೆಲ ಆಟಗಾರರು ಬಸ್ ನಲ್ಲಿ, ಕೆಲ ಆಟಗಾರರು ಮಸೀದಿಯಲ್ಲಿ ಇದ್ದರು ಎನ್ನಲಾಗಿದೆ.

ಶನಿವಾರ ನ್ಯೂಜಿಲ್ಯಾಂಡ್ ಹಾಗೂ ಬಾಂಗ್ಲಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಘಟನೆ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದು ಮಾಡಲಾಗಿದೆ. ಆಟಕ್ಕಿಂತ ಆಟಗಾರರ ಸುರಕ್ಷತೆ ಮುಖ್ಯ. ಘಟನೆಯಿಂದ ಚೇತರಿಸಿಕೊಳ್ಳಲು ಆಟಗಾರರಿಗೆ ಕೆಲ ಸಮಯ ಬೇಕು ಎಂದು ವಕ್ತಾರರು ಹೇಳಿದ್ದಾರೆ.

ದಾಳಿ ವೇಳೆ ದುಷ್ಕರ್ಮಿಗಳು ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದರು ಎನ್ನಲಾಗಿದೆ. ಸುಮಾರು 17 ನಿಮಿಷಗಳ ಕಾಲ ಫೈರಿಂಗ್ ನ ಲೈವ್ ವಿಡಿಯೋ ಫೇಸ್ಬುಕ್ ನಲ್ಲಿ ಅಪ್ಲೋಡ್ ಆಗಿದೆಯಂತೆ. ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ರೆಂಟ್ಟನ್ ಟೆರಂಟ್ ಎನ್ನಲಾಗಿದ್ದು, ಆಸ್ಟ್ರೇಲಿಯಾ ಮೂಲದವನಂತೆ. ಅಲ್ ನೂರಾನಿ ಮಸೀದಿ ಬಳಿ ಗಾಡಿ ಪಾರ್ಕ್ ಮಾಡಿದ ಬಂದೂಕು ದಾರಿಗಳು, ಮಸೀದಿ ಒಳ ನುಗ್ಗಿ ಫೈರಿಂಗ್ ಶುರು ಮಾಡಿದ್ದಾರೆ. ಕಪ್ಪು ಬಟ್ಟೆ ಧರಿಸಿದ್ದ ಬಂದೂಕುದಾರಿಗಳು ಮುಖಕ್ಕೆ ಹೆಲ್ಮೆಟ್ ಧರಿಸಿದ್ದರಂತೆ.

ಹೊಸ ತಿರುವು ಪಡೆದ ಸ್ಯಾಂಡಲ್ವುಡ್ ನಟನ ಹತ್ಯೆಗೆ ಸುಪಾರಿ ಪ್ರಕರಣ

Posted: 14 Mar 2019 10:39 PM PDT

ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ನಟರೊಬ್ಬರನ್ನು ಹತ್ಯೆ ಮಾಡಲು ರೌಡಿ ಶೀಟರ್ ಗೆ ಸುಪಾರಿ ನೀಡಲಾಗಿದೆ ಎಂಬುದು ಇತ್ತೀಚೆಗಷ್ಟೇ ಭಾರೀ ಸುದ್ದಿಯಾಗಿತ್ತು.

ಹಲವಾರು ಸ್ಟಾರ್ ನಟರ ಹೆಸರು ಕೇಳಿ ಬಂದಿದ್ದು, ನಟ ರಾಕಿಂಗ್ ಸ್ಟಾರ್ ಯಶ್ ಅವರು, ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದಾದ ಬಳಿಕ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ಅಂದ ಹಾಗೇ, ಸುಪಾರಿ ನೀಡಿರುವುದು ಸ್ಟಾರ್ ನಟರಿಗಲ್ಲ. ಬದಲಾಗಿ ಸಂಘಟನೆಯೊಂದರ ಮುಖ್ಯಸ್ಥ ಹಾಗೂ ಚಲನಚಿತ್ರವೊಂದರಲ್ಲಿ ಅಭಿನಯಿಸಿರುವ ಮೂರ್ತಿ ಎಂಬುವವರ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ರೌಡಿಶೀಟರ್ ಸ್ಲಂ ಭರತನನ್ನು ಬಂಧಿಸಿದ ಸಂದರ್ಭದಲ್ಲಿ ನಟನ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬುದು ಗೊತ್ತಾಗಿದೆ. ತನಿಖೆ ಮುಂದುವರೆಸಿದಾಗ ಮೂರ್ತಿ ಎಂಬ ನಟನ ಹತ್ಯೆಗೆ ಸುಪಾರಿ ನೀಡಲಾಗಿದೆ. ಮೂರ್ತಿ ರಾಮನಗರದ ಬಳಿ ಜಮೀನೊಂದಕ್ಕೆ ಅಕ್ರಮವಾಗಿ ಬೇಲಿ ಹಾಕಿದ್ದು, ಆ ಜಮೀನಿನ ಮಾಲೀಕ ಮೂರ್ತಿ ಹತ್ಯೆಗೆ ಸುಪಾರಿ ನೀಡಿದ್ದ ಎಂದು ಹೇಳಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಏ.1 ರಿಂದ ಬಂದ್ ಆಗಲ್ಲ ಈ ಎರಡು ಬ್ಯಾಂಕ್, ಆದ್ರೆ…….

Posted: 14 Mar 2019 10:07 PM PDT

ಏ.1 ರಿಂದ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗ್ತಿದೆ. ದೇಶದ ಮೂರು ದೊಡ್ಡ ಬ್ಯಾಂಕ್ ಗಳ ವಿಲೀನವಾಗ್ತಿದೆ. ಇದ್ರಿಂದ ಜನಸಾಮಾನ್ಯರ ಕೆಲಸ ಸ್ವಲ್ಪ ಹೆಚ್ಚಾಗಲಿದೆ. ಪಾಸ್ಬುಕ್, ಚೆಕ್ಬುಕ್, ಎಟಿಎಂನಲ್ಲಿ ಬದಲಾವಣೆಯಾಗಲಿದೆ. ಗ್ರಾಹಕರು ಭಯಪಡುವ ಅಗತ್ಯವಿಲ್ಲ. ಬ್ಯಾಂಕ್ ಬಂದ್ ಆಗ್ತಿಲ್ಲ. ವಿಲೀನವಾಗ್ತಿದೆ ಅಷ್ಟೆ.

ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ವಿಲೀನವಾಗಲಿದೆ. ಏಪ್ರಿಲ್ ಒಂದರ ನಂತ್ರ ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್, ಬ್ಯಾಂಕ್ ಆಫ ಬರೋಡಾ ಜೊತೆ ವಿಲೀನವಾಗಲಿದೆ. ಈ ಎರಡು ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಸ್ವಲ್ಪ ದಾಖಲಾತಿ ಕೆಲಸಗಳನ್ನು ಮಾಡಬೇಕಾಗುತ್ತದೆ.

ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಹೊಸ ಚೆಕ್ ಬುಕ್ ಹಾಗೂ ಪಾಸ್ ಬುಕ್ ಪಡೆಯಬೇಕಾಗುತ್ತದೆ. ಈ ಬಗ್ಗೆ ಬ್ಯಾಂಕ್ ಮಾಹಿತಿ ನೀಡಲಿದೆ. ಜೊತೆಗೆ ಗ್ರಾಹಕರಿಗೆ ಸಮಯ ನೀಡಲಿದೆ. ಗ್ರಾಹಕರಿಗೆ ಬ್ಯಾಂಕ್ ಸಂಪೂರ್ಣ ಸಹಕಾರ ನೀಡಲಿದೆ.

ಮೂರು ಬ್ಯಾಂಕ್ ಗಳ ವಿಲೀನದಿಂದ ಗ್ರಾಹಕರಿಗೆ ಒಳ್ಳೆ ಸೇವೆ ಸಿಗಲಿದೆ. ಬ್ಯಾಂಕಿಂಗ್ ನೆಟ್ವರ್ಕ್ ದೊಡ್ಡದಾಗಲಿದೆ ಎನ್ನುವ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಮದ್ಯ ಪ್ರಿಯರಿಗೆ ‘ಶಾಕಿಂಗ್ ನ್ಯೂಸ್’

Posted: 14 Mar 2019 09:57 PM PDT

ಯಾವುದೇ ಚುನಾವಣೆಗಳಲ್ಲಿ ಹಣ, ಹೆಂಡದ ಹೊಳೆ ಹರಿಯುತ್ತದೆ ಎಂಬುದು ಸಾಮಾನ್ಯ ಸಂಗತಿ. ಈ ಲೋಕಸಭೆ ಚುನಾವಣೆಯಲ್ಲಿಯೂ ಮದ್ಯದ ಹೊಳೆ ಹರಿಯುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಬಿಗಿ ಕ್ರಮ ಕೈಗೊಂಡಿದೆ.

ಬೇಕಾಬಿಟ್ಟಿ ಮದ್ಯದ ವ್ಯಾಪಾರಕ್ಕೆ ಬ್ರೇಕ್ ಹಾಕಿದ್ದು, ಮದ್ಯದ ವ್ಯಾಪಾರ ಸ್ಥಳಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ನಿಗದಿತ ಸಮಯದಲ್ಲಿ ಬಾರ್ ಅನ್ನು ತೆರೆಯಬೇಕು ಮತ್ತು ನಿಗದಿತ ಅವಧಿಯೊಳಗೆ ಮುಚ್ಚಬೇಕು ಇಲ್ಲದಿದ್ದರೆ ಕ್ರಮ ಗ್ಯಾರಂಟಿ ಎನ್ನಲಾಗಿದೆ. ಪ್ರತಿ ಬಾರ್ ಗಳ ಮೇಲೆ ಕಣ್ಣಿಡಲು ವಿಶೇಷ ತಂಡವನ್ನು ರಚಿಸಲಾಗಿದೆ. ಒಬ್ಬ ವ್ಯಕ್ತಿ ಹೆಚ್ಚು ಮದ್ಯ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ ಲೈಸೆನ್ಸ್ ರದ್ದು ಪಡಿಸುವ ಸಾಧ್ಯತೆ ಇದೆ.

ನಿತ್ಯವೂ ಬೆಳಗ್ಗೆ 8 ಗಂಟೆಗೆ ಮದ್ಯ ಮಾರಾಟದ ಸಂಪೂರ್ಣ ಮಾಹಿತಿಯನ್ನು ಅಬಕಾರಿ ಇಲಾಖೆಗೆ ನೀಡಬೇಕಿದೆ. ದಿನವಹಿ ವ್ಯಾಪಾರ ವಹಿವಾಟಿನ ವಿವರವನ್ನು ಅಬಕಾರಿ ಇಲಾಖೆಗೆ ಕಳುಹಿಸಬೇಕಿದೆ. ಕದ್ದು ಮುಚ್ಚಿ ವ್ಯಾಪಾರ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಕಿಸ್ಸಿಂಗ್ ದೃಶ್ಯಕ್ಕೆ ಅಭ್ಯಂತರವಿಲ್ಲ, ಆದ್ರೆ ಮೊದಲೇ ಹೇಳಬೇಕು ಅಂದ್ರು ಈ ನಟಿ

Posted: 14 Mar 2019 09:26 PM PDT

Image result for actress-shraddha-srinath-milan-talkies-bollywood

ಸ್ಯಾಂಡಲ್ ವುಡ್ ನಟಿ ಶ್ರದ್ದಾ ಶ್ರೀನಾಥ್ ತಮಿಳಿನಲ್ಲಿಯೂ ಜನಪ್ರಿಯ ನಟಿಯಾಗಿದ್ದಾರೆ. ಅವರೀಗ ಬಾಲಿವುಡ್ ನಲ್ಲಿಯೂ ಮಿಂಚಲಿದ್ದಾರೆ.

ಶ್ರದ್ಧಾ ಶ್ರೀನಾಥ್ ನಟಿಸಿರುವ 'ಮಿಲನ್ ಟಾಕೀಸ್' ಶುಕ್ರವಾರ ತೆರೆಕಂಡಿದೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಮತ್ತು ಹೊಸ ಭರವಸೆ ಮೂಡಿಸಿರುವ ಶ್ರದ್ಧಾ ಶ್ರೀನಾಥ್ ಹಿಂದಿ ಚಿತ್ರರಂಗ ಪ್ರವೇಶಿಸಿದ್ದಾರೆ.

ಆಕ್ಷನ್ ಸಿನಿಮಾ ಮಾಡುವಾಗ ಆಕ್ಷನ್ ಗೆ ಮಹತ್ವ ಇದ್ದೇ ಇರುತ್ತದೆ. ಅದೇ ರೀತಿ ಲವ್ ಸ್ಟೋರಿ ಸಿನಿಮಾ ಮಾಡಿದಾಗ ರೋಮ್ಯಾನ್ಸ್ ಇದ್ದೇ ಇರುತ್ತದೆ ಎನ್ನುವುದು ಶ್ರದ್ಧಾ ಶ್ರೀನಾಥ್ ಅಭಿಪ್ರಾಯವಾಗಿದೆ. ನಿಜ ಜೀವನದಲ್ಲಿ ಪ್ರೇಮಿಗಳು ಕಿಸ್ ಮಾಡುವುದಿಲ್ಲವೇ? ಅದನ್ನು ಮುಚ್ಚಿಟ್ಟು ಲವ್ ಸ್ಟೋರಿ ಹೇಳುವುದಾದರೆ ಅದು 60 ರ ದಶಕದ ರೀತಿಯ ಸಿನಿಮಾ ಆದಂತಾಗುತ್ತದೆ. ಅಗತ್ಯವಾದ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಳ್ಳಲು ನನಗೆ ಅಭ್ಯಂತರ ಇಲ್ಲ. ಆದರೆ, ಅದನ್ನು ಮೊದಲೇ ಹೇಳಬೇಕು. ಕೊನೆ ಕ್ಷಣದಲ್ಲಿ ಚುಂಬನ ದೃಶ್ಯವನ್ನು ಸೇರಿಸುತ್ತೇವೆ ಎಂದರೆ ನಾನು ಒಪ್ಪಲಾರೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

ಯುವತಿಯನ್ನು ಪಾರ್ಟಿಗೆ ಕರೆದೊಯ್ದು ಕಾರಿನಲ್ಲೇ ರೇಪ್

Posted: 14 Mar 2019 09:16 PM PDT

ಬೆಂಗಳೂರು: ಯುವತಿಯನ್ನು ಪಾರ್ಟಿಗೆ ಕರೆದುಕೊಂಡು ಹೋಗಿ ವಾಪಸ್ ಬರುವ ಸಂದರ್ಭದಲ್ಲಿ ಕಾರಿನಲ್ಲೇ ಅತ್ಯಾಚಾರ ಎಸಗಿದ ಮೇಜರ್ ವಿರುದ್ಧ ದೂರು ದಾಖಲಾಗಿದೆ.

ಘಟನೆ ಫೆಬ್ರವರಿ 4 ರಂದು ಬೆಂಗಳೂರಿನ ಹಳೆ ಏರ್ ಪೋರ್ಟ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಸ್ ಮನೆಗೆ ಪಾರ್ಟಿಗೆ ಯುವತಿಯನ್ನು ಕರೆದುಕೊಂಡು ಹೋಗಿದ್ದ ವ್ಯಕ್ತಿ, ಪಾರ್ಟಿ ಮುಗಿಸಿಕೊಂಡು ಬರುವ ಸಂದರ್ಭದಲ್ಲಿ ಕಾರಿನಲ್ಲೇ ಅತ್ಯಾಚಾರ ಎಸಗಿರುವುದಾಗಿ ನೊಂದ ಯುವತಿ ವಿವೇಕನಗರ ಠಾಣೆಗೆ ದೂರು ನೀಡಿದ್ದಾರೆ.

ಬಳಿಕ ಪ್ರಕರಣವನ್ನು ಹಲಸೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಪೊಲೀಸರು ತನಿಖೆ ನಡೆಸಿದ್ದು, ಆರೋಪಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಅಮೀರ್ ಹೊಸ ಚಿತ್ರದ ಕುರಿತ ಕುತೂಹಲಕ್ಕೆ ಬಿತ್ತು ತೆರೆ

Posted: 14 Mar 2019 09:13 PM PDT

ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಷನಿಸ್ಟ್  ಅಮೀರ್ ಖಾನ್ ತಮ್ಮ 54 ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅಮೀರ್ ಖಾನ್ ಗೆ ಅಭಿಮಾನಿಗಳು, ಹಿರಿಯರು, ಕಿರಿಯರು ಶುಭಾಶಯ ತಿಳಿಸಿದ್ದಾರೆ. ಇದೇ ವೇಳೆ ಅಮೀರ್ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಿದ್ದಾರೆ.

ಟಾಮ್ ಹ್ಯಾಂಕ್ ರವರ ಫಾರೆಸ್ಟ್ ಗಂಪ್ ಚಿತ್ರವನ್ನ ಹಿಂದಿಗೆ ತರಲಾಗುತ್ತಿದೆ. “ಲಾಲ್ ಸಿಂಗ್ ಛಡ್ಡ” ಎಂಬ ಹೆಸರಿನಡಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಅಮೀರ್ 20 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ.