Translate

Saturday, June 15, 2019

Kannada News | Karnataka News | India News

Kannada Dunia | Kannada News | Karnataka News | India News

Kannada News | Karnataka News | India News


ಪಾಕ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಹೇಳಿದ್ದೇನು…?

Posted: 15 Jun 2019 08:05 AM PDT

ಐಸಿಸಿ ವಿಶ್ವಕಪ್ ನಲ್ಲಿ ಭಾರತ ಭಾನುವಾರ ಪಾಕಿಸ್ತಾನವನ್ನು ಎದುರಿಸಲಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆಯುವ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ. ಪಂದ್ಯಕ್ಕಿಂತ ಮೊದಲು ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಾವು ಚೆನ್ನಾಗಿ ಆಟವಾಡಿದ್ರೆ ಯಾವ ತಂಡವನ್ನಾದ್ರೂ ಸೋಲಿಸಬಲ್ಲೆವು ಎಂದಿದ್ದಾರೆ.

ಶನಿವಾರ ಮಾತನಾಡಿದ ಕೊಹ್ಲಿ, ನಮಗೆ ಯಾವುದೇ ಒಂದು ಪಂದ್ಯ ವಿಶೇಷವಲ್ಲ. ನಾವು ಎಲ್ಲ ಪಂದ್ಯವನ್ನೂ ಒಂದೇ ರೀತಿ ನೋಡುತ್ತೇವೆ. ಎಲ್ಲ ತಂಡವನ್ನು ಒಂದೇ ರೀತಿ ನೋಡುವುದು ಆಟಗಾರರ ಜವಾಬ್ದಾರಿ. ನಾವು ಚೆನ್ನಾಗಿ ಆಟವಾಡ್ತಿದ್ದೇವೆ. ಅದಕ್ಕಾಗಿ ಪ್ರಪಂಚದಲ್ಲಿ ಭಿನ್ನವಾಗಿದ್ದೇವೆ. ನಮ್ಮ ಗಮನ ಬೇಸಿಕ್ಸ್ ಮೇಲಿರುತ್ತದೆ. 11 ಆಟಗಾರರು ಒಟ್ಟಾಗಿ ಆಡಿದ್ರೆ ಯಾವ ತಂಡವನ್ನು ಬೇಕಾದ್ರೂ ಸೋಲಿಸಬಹುದು ಎಂದು ಕೊಹ್ಲಿ ಹೇಳಿದ್ದಾರೆ.

ಆಟವನ್ನು ಆಟದ ರೀತಿ ಆಡುವುದಕ್ಕೆ ನಾವು ಮಹತ್ವ ನೀಡ್ತೇವೆ. ನಮ್ಮ ಮುಂದೆ ಯಾವುದೇ ಬೌಲರ್ ಇರಲಿ, ನನ್ನ ಕಣ್ಣಿಗೆ ಕೆಂಪು, ಬಿಳಿ ಬಣ್ಣದ ಚೆಂಡು ಕಾಣುತ್ತದೆ. ಉತ್ತಮ ಬೌಲರ್ ಗೆ ಗೌರವ ನೀಡುತ್ತೇವೆ. ಉತ್ತಮ ಬೌಲರ್ ಬಾಲಿಗೆ ಹೆಚ್ಚು ರನ್ ಗಳಿಸುತ್ತೇವೆಂಬ ನಂಬಿಕೆ ನಮಗೆ ಇರಬೇಕೆಂದು ಕೊಹ್ಲಿ ಹೇಳಿದ್ದಾರೆ.

ʼಸೆಕ್ಸ್ʼ ಪವರ್ ಹೆಚ್ಚಿಸುತ್ತೆ ಈ ಆಸನ

Posted: 15 Jun 2019 07:54 AM PDT

ಯೋಗ ದೇಹದ ಪ್ರತಿಯೊಂದು ಭಾಗ ಆರೋಗ್ಯವಾಗಿರಲು ನೆರವಾಗುತ್ತದೆ. ನಿಯಮಿತ ರೂಪದಲ್ಲಿ ಮಾಡುವ ಯೋಗದಿಂದ ಕಠಿಣ ಆರೋಗ್ಯ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಯೋಗದಿಂದ ಶರೀರದ ಜೊತೆ ಮನಸ್ಸು ಶಾಂತವಾಗಿ ಉಲ್ಲಾಸಿತವಾಗಿರುತ್ತದೆ. ಈ ಯೋಗ ಲೈಂಗಿಕ ಜೀವನವನ್ನು ಉತ್ತಮವಾಗಿಡಲು ನೆರವಾಗುತ್ತದೆ.

ಹಲಾಸನ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪುರುಷ ಹಾಗೂ ಮಹಿಳೆ ಇಬ್ಬರ ಲೈಂಗಿಕ ಗ್ರಂಥಿಗಳನ್ನು ಬಲಪಡಿಸಿ, ಸಕ್ರಿಯಗೊಳಿಸುತ್ತದೆ. ನೆಲದ ಮೇಲೆ ನೇರವಾಗಿ, ಅಂಗಾತವಾಗಿ ಮಲಗಬೇಕು. ಉಸಿರನ್ನು ಎಳೆದುಕೊಳ್ಳುತ್ತ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಎರಡು ಕೈಗಳನ್ನು ಬೆನ್ನಿಗೆ ಆಧಾರವಾಗಿರುವಂತೆ ನೋಡಿಕೊಂಡು ಕಾಲುಗಳನ್ನು ಭೂಮಿಗೆ ತಾಗಿಸಬೇಕು. ನಂತ್ರ ಕೈಗಳನ್ನು ಕಾಲಿನ ವಿರುದ್ಧ ದಿಕ್ಕಿಗೆ ಚಾಚಬೇಕು.

ಉಷ್ಠಾಸನ ಕೂಡ ಲೈಂಗಿಕ ಜೀವನ ಉತ್ತಮಗೊಳಿಸುತ್ತದೆ. ಜನನಾಂಗದ ರಕ್ತ ಪರಿಚಲನೆಯನ್ನು ಇದು ಉತ್ತಮಗೊಳಿಸುತ್ತದೆ. ಮೊದಲು ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು. ನಂತ್ರ ಶರೀರವನ್ನು ಮೇಲೆತ್ತಿ. ಕೈಗಳನ್ನು ಕಾಲಿಗೆ ತಾಗಿಸಿ, ಶರೀರವನ್ನು ನಿಧಾನವಾಗಿ ಹಿಂದಕ್ಕೆ ಚಾಚಲು ಪ್ರಯತ್ನಿಸಿ. ಸರಿಯಾದ ವಿಧಾನದಲ್ಲಿ ಈ ಯೋಗಾಭ್ಯಾಸವನ್ನು ಪ್ರತಿದಿನ ಮಾಡುತ್ತ ಬಂದಲ್ಲಿ ಲೈಂಗಿಕ ಸಮಸ್ಯೆಗಳು ದೂರವಾಗುತ್ತವೆ.

 

ವೈದ್ಯರ ಹೋರಾಟಕ್ಕೆ ಮಣಿದ ಸಿಎಂ: ಎಲ್ಲಾ ಬೇಡಿಕೆ ಈಡೇರಿಸುವ ಭರವಸೆ

Posted: 15 Jun 2019 07:14 AM PDT

ಕೋಲ್ಕತ್ತಾ: ವೈದ್ಯರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು. ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ವೈದ್ಯರು ನಿರಂತರವಾಗಿ ಮುಷ್ಕರ ಕೈಗೊಂಡಿದ್ದು, ಹೋರಾಟಕ್ಕೆ ಮಣಿದ ಮಮತಾ ಬ್ಯಾನರ್ಜಿ,  2009 ರಲ್ಲಿ ವೈದ್ಯರ ವಿರುದ್ಧ ಎಸ್ಮಾ ಜಾರಿ ಮಾಡಿದ್ದರೂ, ಮುಷ್ಕರ ಕೈಗೊಂಡಿರುವ ವೈದ್ಯರ ವಿರುದ್ಧ ನಾವು ಎಸ್ಮಾ ಜಾರಿ ಮಾಡಿಲ್ಲ. ಪೊಲೀಸರ ಮೂಲಕ ಬಲಪ್ರಯೋಗ ಸಹ ಮಾಡುವುದಿಲ್ಲ. ವೈದ್ಯರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ವೈದ್ಯರ ಮುಷ್ಕರ ಸಂಬಂಧ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಲಾಗುವುದು. ಪೊಲೀಸ್ ಆಯುಕ್ತರು 3 ಗಂಟೆ ಕಾಲ ಮನವೊಲಿಕೆಗೆ ಯತ್ನ ನಡೆಸಿದ್ದಾರೆ ಎಂದು ಕೊಲ್ಕತ್ತಾದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ವೈದ್ಯರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಅವರು ಮನವಿ ಮಾಡಿದ್ದಾರೆ.

‘ಕನಿಷ್ಠ ವಿಚಾರವೂ ಗೊತ್ತಿಲ್ಲದ ಎಂ.ಬಿ. ಪಾಟೀಲ್ ಶತಮೂರ್ಖ ಗೃಹ ಸಚಿವ’

Posted: 15 Jun 2019 06:45 AM PDT

ಬೆಂಗಳೂರು: ಕನಿಷ್ಠ ವಿಚಾರ ಗೊತ್ತಿಲ್ಲದ ಎಂ.ಬಿ. ಪಾಟೀಲ್ ಶತಮೂರ್ಖ ಗೃಹ ಸಚಿವ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಯಡಿಯೂರಪ್ಪ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಿಂದಾಲ್ ಗೆ ಭೂಮಿಯನ್ನು ಮಾರಾಟ ಮಾಡಿರಲಿಲ್ಲ. ಲೀಸ್ ಗೆ ನೀಡಲಾಗಿತ್ತು. ವಿಧಾನಸೌಧದಲ್ಲಿ ಫೈಲ್ ಇದೆ. ಅವರು ಗಮನಿಸಲಿ. ಕೈಗಾರಿಕೆಗಳಿಗೆ ಭೂಮಿ ಕೊಡುವಾಗ ಲೀಸ್ ಕಂ ಸೇಲ್ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇಂತಹ ಕನಿಷ್ಠ ವಿಚಾರವೂ ಗೊತ್ತಿಲ್ಲದ ಎಂ.ಬಿ. ಪಾಟೀಲ್ ಶತಮೂರ್ಖ ಗೃಹಸಚಿವ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಜಿಂದಾಲ್ ಗೆ ಭೂಮಿ ಹಂಚಿಕೆ ತೀರ್ಮಾನ ಯಡಿಯೂರಪ್ಪ ಅವರ ಅವಧಿಯಲ್ಲಿ ಆಗಿತ್ತು ಎಂದು ಎಂ.ಬಿ. ಪಾಟೀಲ್ ಹೇಳಿದ್ದಕ್ಕೆ ತಿರುಗೇಟು ನೀಡಿದ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಅವರ ಅವಧಿಯಲ್ಲಿ ಭೂಮಿಯನ್ನು ಮಾರಾಟ ಮಾಡಿರಲಿಲ್ಲ. ವಿಧಾನಸೌಧದಲ್ಲಿ ಫೈಲ್ ಇದ್ದು, ಅದನ್ನು ಎಂ.ಬಿ. ಪಾಟೀಲ್ ಅವರು ಗಮನಿಸಲಿ. ಇಂತಹ ಶತಮೂರ್ಖ ಗೃಹ ಸಚಿವ ರಾಜ್ಯದಲ್ಲಿರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ.

ಬೆರಗುಗೊಳಿಸುತ್ತೆ ಮಲೈಕಾ ಈ ಫೋಟೋ

Posted: 15 Jun 2019 06:32 AM PDT

ಬಾಲಿವುಡ್ ಫಿಟ್ನೆಸ್ ಕ್ವೀನ್ ಮಲೈಕಾ ಅರೋರಾ. ಗ್ಲಾಮರಸ್ ಲುಕ್ ಹಾಗೂ ಸ್ಟೈಲ್ ಜೊತೆ ಫಿಟ್ನೆಸ್ ಹಾಗೂ ಆರೋಗ್ಯಕರ ಜೀವನ ಶೈಲಿಗೆ ಮಲೈಕಾ ಸುದ್ದಿ ಮಾಡ್ತಿರುತ್ತಾರೆ. ಫಿಟ್ ಆಗಿರಲು ಮಲೈಕಾ ಹೆಲ್ತ್ ಡಯೆಟ್ ಜೊತೆ ಪ್ರತಿ ದಿನ ವ್ಯಾಯಾಮ ಹಾಗೂ ಯೋಗ ಮಾಡ್ತಾರೆ.

ಇತ್ತೀಚಿಗೆ ಬಾಲಿವುಡ್ ಖ್ಯಾತ ಫಿಟ್ನೆಸ್ ತರಬೇತುದಾರ ನಮ್ರತಾ ಪುರೋಹಿತ್ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ ಮಲೈಕಾ ಜೊತೆಗಿರುವ ಫೋಟೋ ಹಾಕಿದ್ದಾರೆ. ಫೋಟೋದಲ್ಲಿ ಮಲೈಕಾ, ಕಠಿಣ ಯೋಗಾಸನ ಮಾಡ್ತಿದ್ದಾರೆ .ನಮ್ರತಾ ಫೋಟೋ ಜೊತೆ ‘And we stretch! Fun Friday with @malaikaaroraofficial always trying something new, crazy and fun!’ ಎಂದು ಶೀರ್ಷಿಕೆ ಹಾಕಿದ್ದಾರೆ.

ಫೋಟೋದಲ್ಲಿ ನಮ್ರತಾ ಹಾಗೂ ಮಲೈಕಾ ಮಾಡ್ತಿರುವ ಸಾಹಸ ಬೆರಗುಗೊಳಿಸುವಂತಿದೆ. ಸ್ಟ್ರೆಚ್ಚಿಂಗ್ ಗಾಗಿ ಮಲೈಕಾ ಹಾಗೂ ನಮ್ರತಾ ವಿಶೇಷ ಟೆಕ್ನಿಕ್ ಬಳಸಿದ್ದಾರೆ.

ಮಂಗಳೂರು ಪೊಲೀಸರಿಂದ ಭರ್ಜರಿ ಬೇಟೆ: ಭೂಗತ ಪಾತಕಿ ಅರೆಸ್ಟ್

Posted: 15 Jun 2019 06:25 AM PDT

ಮಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ಮಂಗಳೂರು ಪೊಲೀಸರು ಭೂಗತ ಪಾತಕಿ ಅಸ್ಗರ್ ಅಲಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಮಂಗಳೂರಿನ ಕಂಕನಾಡಿ ಪೊಲೀಸರು ಕಾರ್ಯಾಚರಣೆ ನಡೆಸಿ, ಭೂಗತ ಪಾತಕಿ ರಶೀದ್ ಮಲಬಾರಿ ಜೊತೆಗಿದ್ದ ಅಸ್ಗರ್ ಅಲಿ ಹಾಗೂ ಮತ್ತಿಬ್ಬರನ್ನು ಬಂಧಿಸಿದ್ದಾರೆ. ದುಬೈನಿಂದ ಬಂದು ಕೇರಳದ ಉಪ್ಪಳದಲ್ಲಿ ಅಡಗಿಕೊಂಡಿದ್ದ ಅಸ್ಗರ್ ಅಲಿ 2 ಹತ್ಯೆ ಸೇರಿದಂತೆ 9 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.

ಕಂಕನಾಡಿ ಠಾಣೆಯ ಇನ್ಸ್ ಪೆಕ್ಟರ್ ಜಗದೀಶ್, ಪಿಎಸ್ಐ ಶ್ಯಾಮಸುಂದರ್ ಅವರ ತಂಡ ಕಾರ್ಯಾಚರಣೆ ನಡೆಸಿ ಅಸ್ಗಲ್ ಅಲಿಯನ್ನು ಬಂಧಿಸಿದೆ. ಆತನಿಗೆ ಪಾಸ್ಪೋರ್ಟ್ ಮಾಡಿಕೊಟ್ಟಿದ್ದ ನವಾಜ್, ರಶೀದ್ ಅವರನ್ನು ಬಂಧಿಸಲಾಗಿದೆ ಭೂಗತ ಪಾತಕಿ ರಶೀದ್ ಮಲಬಾರಿ ಜೊತೆಗಿದ್ದ ಅಸ್ಗರ್ ಅಲಿಯನ್ನು ವಿಚಾರಣೆಗೊಳಪಡಿಸಲಾಗಿದೆ ಎನ್ನಲಾಗಿದೆ.

ಮಹಿಳೆ ಜೀವಕ್ಕೆ ಎರವಾಯ್ತು ಐಎಂಎ ವಂಚನೆ ಪ್ರಕರಣ

Posted: 15 Jun 2019 06:09 AM PDT

ಬೆಂಗಳೂರು: ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದವರು ಕಂಗಾಲಾಗಿದ್ದಾರೆ. ಹಣ ಕಳೆದುಕೊಂಡ ಆತಂಕದಲ್ಲಿ ಹೂಡಿಕೆದಾರರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಮತ್ತೊಬ್ಬರು ಮೃತಪಟ್ಟಿದ್ದು, ಐಎಂಎ ವಂಚನೆ ಪ್ರಕರಣದಿಂದ ಸಾವನ್ನಪ್ಪಿದವರ ಸಂಖ್ಯೆ 2 ಕ್ಕೇರಿದೆ.

ಮೈಸೂರಿನಲ್ಲಿ ಮಹಿಳೆಯೊಬ್ಬರು ಆಘಾತದಿಂದ ಮೃತಪಟ್ಟಿದ್ದಾರೆ. ಮೈಸೂರು ಶಾಂತಿನಗರ ನಿವಾಸಿ ಸಫೂರಾಭಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಫೂರಾಭಿ ಅವರ ಪತಿ ರೆಹಮಾನ್ ಶರೀಫ್ 4.5 ಲಕ್ಷ ರೂ. ಹಣವನ್ನು ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು.

ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಐಎಂಎ ವಂಚನೆ ಬಗ್ಗೆ ವರದಿಯಾಗುತ್ತಿದ್ದುದನ್ನು ಸಫೂರಾಭಿ ಗಮನಿಸಿದ್ದರು. ಅಲ್ಲದೇ, ರೆಹಮಾನ್ ಶರೀಫ್ ಹೂಡಿಕೆ ಹಣದ ಬಗ್ಗೆ ಪುತ್ರನೊಂದಿಗೆ ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದರು. ಇದರಿಂದಾಗಿ ಆಘಾತಕ್ಕೆ ಒಳಗಾಗಿ ಮನೆಯಲ್ಲಿ ಕುಸಿದು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಗಮನಿಸಿ..! ಜೂನ್ 17 ರಂದು ದೇಶವ್ಯಾಪಿ ವೈದ್ಯರ ಮುಷ್ಕರ

Posted: 15 Jun 2019 05:41 AM PDT

ಬೆಂಗಳೂರು: ಕೋಲ್ಕೊತ್ತಾದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಜೂನ್ 17 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ಐಎಂಎ ಮುಷ್ಕರಕ್ಕೆ ಕರೆ ನೀಡಿರುವುದರಿಂದ ದೇಶಾದ್ಯಂತ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಅಂದು ತುರ್ತು ಸೇವೆ ಹೊರತುಪಡಿಸಿ ಉಳಿದ ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ.

ಖಾಸಗಿ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಹೊರರೋಗಿ ವಿಭಾಗ, ಒಳರೋಗಿ ವಿಭಾಗದಲ್ಲಿ ಎಂದಿನಂತೆ ಚಿಕಿತ್ಸೆ ಲಭ್ಯವಿರುತ್ತದೆ.

ಸರ್ಕಾರಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಅನಾನುಕೂಲವಾಗದಂತೆ ಕ್ರಮಕೈಗೊಳ್ಳಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಸರ್ಕಾರಿ ಖಾಸಗಿ ಆಸ್ಪತ್ರೆಗಳ ಸೇವೆಯಲ್ಲಿ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಬೆಂಗಳೂರಲ್ಲಿ ಮನೆಗೆ ನುಗ್ಗಿದ ಕಳ್ಳರು, ಅಮೆರಿಕದಿಂದಲೇ ಹಿಡಿದುಕೊಟ್ಟ ಮಾಲೀಕ

Posted: 15 Jun 2019 05:31 AM PDT

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿನಿಮಾ ಮಾದರಿಯ ಘಟನೆಯೊಂದು ನಡೆದಿದೆ. ಬೆಂಗಳೂರಿನಲ್ಲಿದ್ದ ಮನೆಗೆ ಕಳ್ಳರು ನುಗ್ಗಿದ್ದು, ಅಮೆರಿಕದಲ್ಲಿದ್ದ ಮನೆ ಮಾಲೀಕ ಇದನ್ನು ಗಮನಿಸಿ ಕಳ್ಳರನ್ನು ಹಿಡಿದು ಕೊಟ್ಟಿದ್ದಾರೆ.

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಮನೆ ಹೊಂದಿರುವ ಪಾರ್ಥಸಾರಥಿ ಅಮೆರಿಕದಲ್ಲಿದ್ದಾರೆ. ಶುಕ್ರವಾರ ಬೆಳಗಿನ ಜಾವ ಅವರ ಮನೆಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ. ಮನೆಗೆ ಕಳ್ಳರು ನುಗ್ಗಿದ್ದ ಕೆಲವೇ ಕ್ಷಣದಲ್ಲಿ  ಮನೆಯಲ್ಲಿ ಅಳವಡಿಸಿದ್ದ ಮೋಷನ್ ಸೆನ್ಸರ್ ಅಮೆರಿಕದಲ್ಲಿದ್ದ ಪಾರ್ಥಸಾರಥಿ ಅವರ ಸ್ಮಾರ್ಟ್ ಫೋನ್ ಗೆ ಸಂದೇಶ ರವಾನಿಸಿದೆ.

ಅಲ್ಲಿಂದಲೇ ಅವರು ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಯಾರೋ ಪ್ರವೇಶಿಸಿದ್ದಾರೆ ಎಂಬುದನ್ನು ಅರಿತು ತಮ್ಮ ಮನೆಯ ಸಿಸಿ ಕ್ಯಾಮರಾವನ್ನು ರಿಮೋಟ್ ಆಗಿ ಆಕ್ಸೆಸ್ ಮಾಡಿದ್ದಾರೆ. ಈ ವೇಳೆ ಇಬ್ಬರು ಕಳ್ಳರು ಮನೆಯಲ್ಲಿ ಇರುವುದು ಗೊತ್ತಾಗಿದೆ.

ಕೂಡಲೇ ಪಾರ್ಥಸಾರಥಿ ತಮ್ಮ ಮನೆಯ ಅಕ್ಕ ಪಕ್ಕದವರೊಂದಿಗೆ ರಚಿಸಿದ್ದ ವಾಟ್ಸಾಪ್ ಗ್ರೂಪ್ ಗೆ ಮಾಹಿತಿ ರವಾನಿಸಿದ್ದು, ನೆರವಿಗೆ ಯಾಚಿಸಿದ್ದಾರೆ. ವಾಟ್ಸಾಪ್ ಸಂದೇಶದಿಂದ ಎಚ್ಚರವಾದ ನಿವಾಸಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅವರ ಮನವಿ ಮೇರೆಗೆ ಸೈರನ್ ಬಳಸದೆ ಸೈಲೆಂಟಾಗಿ ಆಗಮಿಸಿದ ಹೊಯ್ಸಳ ತಂಡ ಮನೆಯಲ್ಲಿದ್ದ ಒಬ್ಬ ಕಳ್ಳನನ್ನು ಬಂಧಿಸಿದೆ. ಮತ್ತೊಬ್ಬ ಕಳ್ಳ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.

ಪತ್ನಿಯರ ವಿಚಾರಕ್ಕೆ ಮತ್ತೆ ವಿವಾದದಲ್ಲಿ ಪಾಕ್ ಆಟಗಾರರು

Posted: 15 Jun 2019 05:14 AM PDT

Image result for muhammad-yousuf-slams-pcb-for-allow-families-to-stay-with-players-ahead-of-india-clash

ಐಸಿಸಿ ವಿಶ್ವಕಪ್ ನ ಮಹತ್ವದ ಪಂದ್ಯ ಭಾನುವಾರ ನಡೆಯುತ್ತಿದೆ. ಎಲ್ಲರ ಕಣ್ಣು ಸದ್ಯ ವಿಶ್ವಕಪ್ ಮೇಲಿದೆ. ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಪಾಕಿಸ್ತಾನದ ಮಾಜಿ ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಆಟಗಾರರಿಗೆ ಪತ್ನಿ ಹಾಗೂ ಮಕ್ಕಳ ಜೊತೆಗಿರಲು ಅವಕಾಶ ನೀಡಿರುವ ಪಿಸಿಬಿ ವಿರುದ್ಧ ಮಾಜಿ ನಾಯಕ ಮೊಹಮ್ಮದ್ ಯುಸೂಫ್ ಕಿಡಿಕಾರಿದ್ದಾರೆ.

ಪಾಕಿಸ್ತಾನ ಆಟಗಾರರ ಪತ್ನಿಯರು ಹಾಗೂ ಮಕ್ಕಳು ಈಗಾಗಲೇ ಮ್ಯಾಂಚೆಸ್ಟರ್ ಗೆ ಬಂದಿದ್ದಾರೆ. 1999, 2003 ಹಾಗೂ 2007ರಲ್ಲಿ ನಾನು ವಿಶ್ವಕಪ್ ಆಡಿದ್ದೇನೆ. ಆದ್ರೆ ಆಗ ಬೋರ್ಡ್, ಆಟಗಾರರ ಪತ್ನಿಯರು ಹಾಗೂ ಮಕ್ಕಳ ಜೊತೆಗಿರಲು ಅನುಮತಿ ನೀಡಿರಲಿಲ್ಲ. 1999ರಲ್ಲಿ ನಮ್ಮ ತಂಡ ಹೆಚ್ಚು ಪ್ರಸಿದ್ಧಿಯಲ್ಲಿತ್ತು. ಸ್ವಲ್ಪ ಒತ್ತಡ ಹಾಕಿದ್ರೆ ಪತ್ನಿ, ಮಕ್ಕಳ ಜೊತೆಗಿರಲು ಅನುಮತಿ ಸಿಗುತ್ತಿತ್ತು. ಆದ್ರೆ ನಾವು ಹಾಗೆ ಮಾಡಲಿಲ್ಲ. ವಿಶ್ವಕಪ್ ಪಂದ್ಯಗಳು ಒತ್ತಡದಿಂದ ಕೂಡಿರುತ್ತವೆ. ಆಟಗಾರರು ಆಟದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ ಎಂದು ಯುಸೂಫ್ ಹೇಳಿದ್ದಾರೆ.

ಏಕದಿನ ಸರಣಿಯಲ್ಲಿ ಕೂಡ ಪತ್ನಿ, ಮಕ್ಕಳ ಜೊತೆಗಿರಲು ಬೋರ್ಡ್ ಅನುಮತಿ ನೀಡಿರಲಿಲ್ಲ. ವಿಶ್ವಕಪ್ ಆರಂಭದಲ್ಲಿಯೇ ಬೋರ್ಡ್, ಪತ್ನಿಯರ ಜೊತೆಗಿರಲು ಅನುಮತಿ ನೀಡಬೇಕಿತ್ತು. ಮಹತ್ವದ ಪಂದ್ಯಕ್ಕೇಕೆ ಅನುಮತಿ ನೀಡಿದೆ ಎಂದು ಯುಸೂಫ್ ಪ್ರಶ್ನೆ ಮಾಡಿದ್ದಾರೆ.

ಅಮ್ಮನ ಮಡಿಲಲ್ಲಿ ಮಲಗಿದ್ದವಳು ಬೆಳಿಗ್ಗೆ ಸಿಕ್ಕಿದ್ದು…!

Posted: 15 Jun 2019 04:39 AM PDT

सांकेतिक तस्वीर

ಅಜ್ಮೇರನಲ್ಲಿ ಪಾಪಿಗಳು ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ತಾಯಿ ಬಳಿ ಮಲಗಿದ್ದ ಬಾಲಕಿಯನ್ನು ಹೊತ್ತೊಯ್ದ ಪಾಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತ್ರ ಬಾಲಕಿಯನ್ನು ಕಾಡಿನಲ್ಲಿ ಎಸೆದು ಹೋಗಿದ್ದಾರೆ.

ಘಟನೆ ಗುರುವಾರ ರಾತ್ರಿ ನಡೆದಿದೆ. ದೇವಸ್ಥಾನವೊಂದರ ಪಕ್ಕ ವಾಸವಾಗಿರುವ ಬಾಲಕಿ, ತಾಯಿ ಜೊತೆ ಮಲಗಿದ್ದಳು. ರಾತ್ರಿ 11 ಗಂಟೆ ಸುಮಾರಿಗೆ ಅಲ್ಲಿಗೆ ಬಂದ ಕಾಮುಕರು, ಬಾಲಕಿ ಕಾಲು ಕೈ ಕಟ್ಟಿ ಜೀಪ್ ನಲ್ಲಿ ಕರೆದೊಯ್ದಿದ್ದಾರೆ. ಅತ್ಯಾಚಾರವೆಸಗಿ ಕಾಡಿನಲ್ಲಿ ಎಸೆದು ಹೋಗಿದ್ದಾರೆ.

ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಆರೋಗ್ಯವಾಗಿದ್ದಾಳೆಂದು ಪೊಲೀಸರು ಹೇಳಿದ್ದಾರೆ. ಬಾಲಕಿ ಈಗಾಗಲೇ ಇಬ್ಬರು ಆರೋಪಿಗಳನ್ನು ಗುರುತಿಸಿದ್ದು, ಅವ್ರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

 

ಮಣ್ಣಿನಿಂದ ಮಾಡಿದ ಈ ವಸ್ತುಗಳು ಮನೆಯ ಸುಖ-ಸೌಭಾಗ್ಯ ಪ್ರಾಪ್ತಿಗೆ ಸಹಕಾರಿ

Posted: 15 Jun 2019 04:30 AM PDT

ಪ್ರಕೃತಿಯ ಅಮೂಲ್ಯ ಕೊಡುಗೆ ಮಣ್ಣು ಮಾನವನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಇದ್ರ ಉಪಯೋಗದಿಂದ ಸುಖ-ಸೌಭಾಗ್ಯದ ಪ್ರಾಪ್ತಿಯಾಗುತ್ತದೆ. ಜ್ಯೋತಿಷ್ಯಶಾಸ್ತ್ರ ಹಾಗೂ ಗ್ರಂಥಗಳಲ್ಲಿಯೂ ಮಣ್ಣಿನ ಮಹತ್ವದ ಬಗ್ಗೆ ಹೇಳಲಾಗಿದೆ. ಮನೆಯಲ್ಲಿ ಮಣ್ಣಿನ ಪಾತ್ರೆಯಿದ್ದರೆ ಬುಧ ಹಾಗೂ ಚಂದ್ರನ ಆಶೀರ್ವಾದ ಸದಾ ಇರುತ್ತದೆ. ಮನೆಯಲ್ಲಿರುವ ಕೆಲವೊಂದು ಮಣ್ಣಿನ ವಸ್ತುಗಳು ಕುಟುಂಬದಲ್ಲಿ ಶಾಂತಿ, ಸಮೃದ್ಧಿ ನೆಲೆಸಲು ಸಹಕಾರಿ.

ಮಣ್ಣಿನ ಮಡಿಕೆಯಲ್ಲಿಟ್ಟ ನೀರನ್ನು ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಅಂಶ ನೆಲೆಸಿರುತ್ತದೆ.

ದೇವರ ಮನೆಯಲ್ಲಿ ಮಣ್ಣಿನಿಂದ ಮಾಡಿದ ಮೂರ್ತಿಯನ್ನಿಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಡುವುದಿಲ್ಲ.

ಮನೆಯ ವಾತಾವರಣವನ್ನು ಸಕಾರಾತ್ಮಕಗೊಳಿಸಲು ಮಣ್ಣಿನಿಂದ ಮಾಡಿದ ಪಕ್ಷಿಯ ಮೂರ್ತಿಯನ್ನು ಈಶಾನ್ಯ ದಿಕ್ಕಿನಲ್ಲಿಡಿ.

ಪ್ರತಿದಿನ ಶುದ್ಧ ಹಸುವಿನ ತುಪ್ಪ ಹಾಕಿ ಮಣ್ಣಿನಿಂದ ಮಾಡಿದ ಹಣತೆಯಲ್ಲಿ ದೀಪ ಹಚ್ಚಿ. ದೇವತೆಗಳ ಕೃಪೆ ಸದಾ ನೆಲೆಸಿರುತ್ತದೆ.

ಸಂಸಾರದಲ್ಲಿ ಸಮಸ್ಯೆ ಶುರುವಾಗಿದ್ದರೆ ತುಳಸಿ ಮುಂದೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ.

ಹಿಂದೂ ಧರ್ಮದ ಹಬ್ಬಗಳಲ್ಲಿ ಮನೆಯಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವುದು ಶ್ರೇಷ್ಠ.

ಮಣ್ಣಿನಿಂದ ಮಾಡಿದ ಲೋಟದಲ್ಲಿ ಟೀ, ಮಜ್ಜಿಗೆ, ಪಾನೀಯಗಳನ್ನು ಕುಡಿಯಿರಿ.

ಮುಟ್ಟಿನ ನೋವಿನ ಬಗ್ಗೆ ಮಾತನಾಡಿ ಹಿಗ್ಗಾಮುಗ್ಗಾ ಜಾಡಿಸಿಕೊಂಡ ಆಟಗಾರ

Posted: 15 Jun 2019 04:20 AM PDT

ಋತುಚಕ್ರಕ್ಕಿಂತಲೂ ನೋವು ಉಂಟು ಮಾಡುವುದು ಏನಾದ್ರೂ ಇದ್ಯಾ? ಒಬ್ಬ ಫುಟ್ಬಾಲ್ ಆಟಗಾರನೊಬ್ಬ ತನ್ನ ಮೊಣಕಾಲುಗಳಿಗೆ ಹೋಲಿಕೆ ಮಾಡಿ, ಋತುಚಕ್ರದ ಬಾಧೆಗಿಂತ ಇದು ತುಂಬಾ ನೋವು ಮಾಡುತ್ತದೆ ಎಂದು ಟ್ವೀಟ್ ಮಾಡಿದ್ದ.

ಅದೇ ರೀತಿ ಮೊನ್ನೆ ಮಾಚ್೯ ತಿಂಗಳಲ್ಲಿ ಎರಡು ಫೋಟೋಗಳನ್ನು ಟ್ವೀಟ್ ಮಾಡಿ, ಒಂದು ಕೆಳಕ್ಕೆ ಬಿದ್ದಿರುವ ಫುಟ್ಬಾಲರ್ ಮತ್ತೊಂದು ಮೊಣಕಾಲಿನ ಜೋಡಿಯ ಫೋಟೋ ಹಾಕಿ, ಇದು ಮಹಿಳೆ ಹೊರತಾಗಿ ಬೇರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದ.

ಈ ಹೇಳಿಕೆಗೆ ಇಂಟರ್ ನೆಟ್ ನಲ್ಲಿ ಕೆಂಡಾಮಂಡಲವಾಗಿರುವ ನೆಟ್ಟಿಗರು, ಅದರ ಮೇಲೆ ಸ್ಯಾನಿಟ್ರಿ ಪ್ಯಾಡ್ ಹಾಕು ಅಂಥ….. ಅಂತ ಮುಟ್ಟಿನ ಹೇಳಿಕೆ ನೀಡಿದ್ದವನ ಮೇಲೆ ಮುಗಿಬಿದ್ದಿದ್ದಾರೆ. ಮತ್ತೊಬ್ಬ, ಮಹಿಳೆಯೇನು ಆಟಗಳಲ್ಲಿ ಭಾಗವಹಿಸುವುದಿಲ್ಲ ಅಂತ ತಿಳಿದಿದ್ದಿಯಾ?
ಅಂಥೆಲ್ಲಾ ಜಾಡಿಸಿದ್ದಾನೆ.

ಮರಗಟ್ಟುವ ಚಳಿಯಲ್ಲಿ ಯೋಗ…!

Posted: 15 Jun 2019 04:10 AM PDT

ಯೋಗ ದಿನ ಹತ್ತಿರವಾಗುತ್ತಿದ್ದು, ದೇಶದ ತುಂಬೆಲ್ಲ ಇದರ ಸಿದ್ಧತೆ ಭರದಿಂದ ಸಾಗುತ್ತಿದೆ. ಇದೀಗ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ಲದಾಖ್‌ನಲ್ಲಿ ಯೋಗ ಮಾಡಿ ಸಾಹಸ ತೋರಿದ್ದಾರೆ.

ಸುಮಾರು 18,000 ಅಡಿ ಎತ್ತರದ ಲದಾಖ್‌ನಲ್ಲಿ ಹಿಮವೀರರು ಎಂದು ಕರೆಸಿಕೊಳ್ಳುವ ಐಟಿಬಿಪಿ ಯೋಧರು ಜೂನ್ 21ರಂದು ನಡೆಯುವ 5ನೇ ವಿಶ್ವ ಯೋಗ ದಿನದ ಪ್ರಯುಕ್ತ ಮರಗಟ್ಟುವ ಚಳಿಯಲ್ಲಿ ಯೋಗ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ಅದು ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಹಿಂದೆ ಇದೇ ಯೋಧರು ಹಿಮದಲ್ಲಿ ಅಂಗಿ ಬಿಚ್ಚಿ ಯೋಗ ಮಾಡಿ ಎಲ್ಲರನ್ನು ಆಶ್ಚರ್ಯಗೊಳ್ಳುವಂತೆ ಮಾಡಿದ್ದರು.

ಕೇಂದ್ರ ಮಂತ್ರಿ ಶ್ರೀಪಾದ್ ಎಸ್ಸೋ ನಾಯಕ್, ಈ ಬಾರಿಯ ಯೋಗ ದಿನ ‘ಹೃದಯಕ್ಕಾಗಿ ಯೋಗ’ ಎಂದು ಉದ್ದೇಶ ಇಡಲಾಗಿದೆ ಎಂದು ಹೇಳಿದ್ದಾರೆ.

ವಿಶ್ವಕಪ್ ಇತಿಹಾಸದಲ್ಲಿ 6 ಬಾರಿ ಮುಖಾಮುಖಿಯಾಗಿವೆ ಭಾರತ – ಪಾಕ್

Posted: 15 Jun 2019 04:06 AM PDT

Image result for india-and-pakistan-played-6-times-against-each-other-in-world-cup-history

ಭಾನುವಾರ ಮ್ಯಾಂಚೆಸ್ಟರ್ ನಲ್ಲಿ ಭಾರತ – ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ. ವಿಶ್ವಕಪ್ ಇತಿಹಾಸದಲ್ಲಿ 6 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಇದು ಏಳನೇ ಬಾರಿಯಾಗಿದ್ದು, ಯಾರಿಗೆ ಗೆಲುವು ಎಂಬ ಕುತೂಹಲ ಮನೆ ಮಾಡಿದೆ.

ವಿಶ್ವಕಪ್ ನಲ್ಲಿ ಕೊನೆ ಬಾರಿ 2015 ರಲ್ಲಿ ಭಾರತ – ಪಾಕಿಸ್ತಾನ ತಂಡ ಮುಖಾಮುಖಿಯಾಗಿತ್ತು. ಪಾಕಿಸ್ತಾನದ ವಿರುದ್ಧ ಭಾರತ 76 ರನ್ ಗಳ ಗೆಲುವು ಸಾಧಿಸಿತ್ತು. 1992 ರಲ್ಲಿ ಮೊದಲ ಬಾರಿ ಭಾರತ – ಪಾಕ್ ಮುಖಾಮುಖಿಯಾಗಿದ್ದವು. ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ 43 ರನ್ ಗಳ ಗೆಲುವು ಸಾಧಿಸಿತ್ತು.

1996ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 39 ರನ್ ಗಳಿಂದ ಸೋಲಿಸಿತ್ತು. ಇನ್ನು 1999 ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ 47 ರನ್ ಗಳ ಸೋಲುಂಡಿತ್ತು. 2003ರಲ್ಲಿ ಭಾರತ 6 ವಿಕೆಟ್ ಗಳ ಗೆಲುವು ಸಾಧಿಸಿತ್ತು. 2011ರಲ್ಲಿ ಚಂಡೀಗಢದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತೆ ಪಾಕಿಸ್ತಾನವನ್ನು ಸೋಲಿಸಿತ್ತು. ಪಾಕಿಸ್ತಾನ 29 ರನ್ ಗಳ ಸೋಲು ಕಂಡಿತ್ತು.

 

40 ಸಾವಿರ ವರ್ಷಗಳ ಹಿಂದಿನ ತೋಳದ ಅವಶೇಷ ಪತ್ತೆ

Posted: 15 Jun 2019 03:11 AM PDT

40,000 ವರ್ಷಗಳ ಹಿಂದೆ ಬದುಕಿದ್ದ ತೋಳದ ತಲೆಯೊಂದು ಸೈಬೀರಿಯಾದಲ್ಲಿ ಪತ್ತೆಯಾಗಿದೆ. ಇದು ಹಿಮಯುಗ ಕಾಲದ ತೋಳವೆಂದು ಅಂದಾಜಿಸಲಾಗಿದ್ದು, ಅದರ ಎಲ್ಲ ಭಾಗಗಳು ಹಾಗೇ ಇವೆ.

ವಿಜ್ಞಾನಿಗಳ ಪ್ರಕಾರ ತೋಳದ ತಲೆ ಹಿಮದಲ್ಲಿ ಹುದುಗಿ ಹೋಗಿದ್ದು, ಸ್ವಲ್ಪವೂ ಕೆಡದೆ ಹಾಗೆಯೇ ಇದೆ. ಇದು ಅರ್ಕಟಿಕ್ ವೃತ್ತದ ಸಮೀಪ ತಿರೇಖ್‌ತೆಯಾಖ್ ನದಿಯ ತಟದಲ್ಲಿ ಪವೇಲ್ ಎಫಿಮೊವ್ ಎನ್ನುವವರಿಗೆ ದೊರೆತಿದೆ.

ಇದರ ಕೂದಲು , ಮೆದುಳು, ಹಲ್ಲು ಹಾಗೂ ಮುಖದ ಅಂಗಾಂಶಗಳು ಹಾಗೇ ಇದ್ದು ವಿಜ್ಞಾನಿಗಳಿಗೆ ಬಹಳ ಉಪಯುಕ್ತವಾಗಲಿದೆಯಂತೆ. ಇದನ್ನು ಪ್ಲಾಸ್ಟಿಕರಣದ ಮೂಲಕ ಸಂರಕ್ಷಿಸಿ ಇಡಲಾಗುತ್ತದೆಯಂತೆ.

ಈಗಿನ ಸಾಮಾನ್ಯ ತೋಳಗಳಿಗಿಂತ ಈ ತೋಳ ದೊಡ್ಡ ಗಾತ್ರದಲ್ಲಿದ್ದು, ಆಗಿನ ಪಳೆಯುಳಿಕೆಗಳಿಗೆ ಪ್ರಮುಖ ಸಾಕ್ಷಿಯಾಗಿದೆ. ಇನ್ನೂ ಏನೇನು ಕಂಡು ಹಿಡಿಯುತ್ತಾರೋ ಕಾದು ನೋಡಬೇಕು.

ಮಾಲ್ ಗೆ ನೀರು ನುಗ್ಗಿದಾಗ ಮೊಳಗಿದ ಟೈಟಾನಿಕ್‌ ಗೀತೆ

Posted: 15 Jun 2019 03:10 AM PDT

ಟೈಟಾನಿಕ್ ಸಿನಿಮಾ ನೋಡಿದವರಿಗೆ ಕೊನೆಯ ದೃಶ್ಯಗಳಲ್ಲಿ ಹಡಗು ಮುಳುಗುತ್ತಿದ್ದರೂ ಸಂಗೀತಗಾರರು ತಮ್ಮ ಪಾಡಿಗೆ ತಾವೂ ಸಂಗೀತ ಬಾರಿಸುವುದು ನೆನಪಿರುತ್ತದೆ. ಇದೀಗ ಅದನ್ನು ನೆನಪಿಸುವಂತಹ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಮೆಕ್ಸಿಕೋದ ಝಪೋಪನ್ ನಗರದ ಮಾಲ್ ಒಂದರಲ್ಲಿ ಮಳೆಯಿಂದ ಸಣ್ಣ ಪ್ರವಾಹ ಬಂದು ಮಾಲ್ ಒಳಗೆ ನೀರು ನುಗ್ಗಿದೆ. ಆಗ ಅಲ್ಲಿ ಸಂಗೀತ ಬಾರಿಸುತ್ತಿದ್ದ ಬ್ಯಾಂಡ್ ಒಂದು ಕದಲದೇ ಟೈಟಾನಿಕ್‌ನ ಸುಪ್ರಸಿದ್ಧ ‘ಮೈ ಹಾರ್ಟ್ ವಿಲ್ ಗೋ ಆನ್’ ಸಂಗೀತವನ್ನು ಬಾರಿಸಲು ಶುರು ಮಾಡುತ್ತಾರೆ.

ಇದನ್ನು ಅಲ್ಲಿದ್ದವರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದು ವೈರಲ್ ಆಗಿದೆ. ಇದನ್ನು 17ಮಿಲಿಯನ್‌ಕಿಂತಲೂ ಹೆಚ್ಚು ಜನ ನೋಡಿದ್ದು 1 ಮಿಲಿಯನ್‌ಕಿಂತಲೂ ಹೆಚ್ಚು ಮೆಚ್ಚುಗೆಗಳು ಬಂದಿವೆ.

ಯೋಗ ಮಾಡುವ ಮೊದಲು ಇದು ತಿಳಿದಿರಲಿ

Posted: 15 Jun 2019 03:05 AM PDT

ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಗ್ತಿದೆ. ಯೋಗ ಮಾಡುವುದು ಅತ್ಯವಶ್ಯಕ. ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರುವ ಜನರು ಇತ್ತೀಚಿನ ದಿನಗಳಲ್ಲಿ ಯೋಗಕ್ಕೆ ಹೆಚ್ಚು ಒತ್ತು ನೀಡ್ತಿದ್ದಾರೆ. ಯೋಗ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಯೋಗ ಮಾಡುವ ಮೊದಲು ಕೆಲವೊಂದು ಸಂಗತಿಗಳನ್ನು ತಿಳಿದಿರಬೇಕಾಗುತ್ತದೆ.

ಯೋಗ ಮಾಡುವಾಗ ಬಲವಂತ ಬೇಡ. ಎಷ್ಟು ಸಾಧ್ಯವೋ ಅಷ್ಟೆ ಮಾಡಿ. ಬಲವಂತವಾಗಿ ಮೈ ಬಗ್ಗಿಸಿದ್ರೆ ಅಪಾಯ ನಿಶ್ಚಿತ. ನರ ಹಾಗೂ ಸ್ನಾಯುಗಳ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಇದು ಆಪತ್ತಿಗೆ ದಾರಿ ಮಾಡಿಕೊಡುತ್ತದೆ.

ಯೋಗ ಮಾಡುವ ಸಮಯ ಕೂಡ ಮಹತ್ವ ಪಡೆಯುತ್ತದೆ. ಒಂದು ದಿನ ಅರ್ಧ ಗಂಟೆ ಯೋಗ ಮಾಡಿದ್ರೆ ಮತ್ತೊಂದು ದಿನ ಮಾಡುವುದಿಲ್ಲ. ಇನ್ನೊಂದು ದಿನ ಒಂದು ಗಂಟೆ ಯೋಗ ಮಾಡ್ತಾರೆ. ಇದು ಒಳ್ಳೆಯದಲ್ಲ. ಸಕಾರಾತ್ಮಕ ಪ್ರಭಾವದ ಬದಲು ನಕಾರಾತ್ಮಕ ಪ್ರಭಾವ ಇದ್ರಿಂದಾಗುತ್ತದೆ.

ಯೋಗದ ಭಂಗಿ ತಿಳಿದಿದ್ರೆ ಸಾಲದು, ಭಂಗಿ ವೇಳೆ ಉಸಿರಾಟದ ವಿಧಾನ ತಿಳಿದಿರಬೇಕು. ಯಾವ ಸಮಯದಲ್ಲಿ ಉಸಿರೆಳೆದುಕೊಳ್ಳಬೇಕು, ಯಾವ ಸಮಯದಲ್ಲಿ ಉಸಿರು ಬಿಡಬೇಕು ಎಂಬುದನ್ನು ತಿಳಿದಿರಬೇಕು. 5 ರಿಂದ 10 ನಿಮಿಷ ಉಸಿರಿನ ಮೇಲೆ ಗಮನ ನೀಡಬೇಕಾಗುತ್ತದೆ.

ಊಟವಾದ ತಕ್ಷಣ ಯೋಗ ಮಾಡಬಾರದು. ಮೂರು ಗಂಟೆಗಳ ಅಂತರವಿರಬೇಕು. ಹಾಗೆ ಯೋಗ ಮಾಡುವ ಮಧ್ಯೆ ನೀರು ಸೇವನೆ ಮಾಡಬಾರದು. ಒಂದು ಗಂಟೆ ಮೊದಲು ಅಥವಾ ನಂತ್ರ ನೀರನ್ನು ಸೇವಿಸಬೇಕು.

ಗ್ರಾಮದ ಮುಖ್ಯಸ್ಥರಿಗೆ ಮೋದಿ ಬರೆದ ಪತ್ರದಲ್ಲೇನಿದೆ…?

Posted: 15 Jun 2019 02:22 AM PDT

ಪ್ರಧಾನ ಮಂತ್ರಿ ನರೇಂದ್ರ ಮೋದಿ ಗ್ರಾಮದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಮೋದಿ ಹಸ್ತಾಕ್ಷರವಿರುವ ಈ ಪತ್ರವನ್ನು ಜಿಲ್ಲಾಧಿಕಾರಿಗಳು ಗ್ರಾಮದ ಮುಖ್ಯಸ್ಥರಿಗೆ ನೀಡಿದ್ದಾರೆ. ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನರೇಂದ್ರ ಮೋದಿ, ಮಳೆಗಾಲದಲ್ಲಿ ನೀರು ಸಂಗ್ರಹಿಸುವಂತೆ ಗ್ರಾಮದ ಮುಖ್ಯಸ್ಥರಿಗೆ ಸಲಹೆ ನೀಡಿದ್ದಾರೆ.

ಉತ್ತರ ಪ್ರದೇಶದ ಸೋನ್‌ಭದ್ರದ 637 ಗ್ರಾಮದ ಮುಖ್ಯಸ್ಥರಿಗೆ ಮೋದಿ ಪತ್ರ ಬರೆದಿದ್ದಾರೆ. ಪ್ರಿಯ ಸರ್ಪಂಚ್ ಜೀ, ನಮಸ್ಕಾರ. ಪಂಚಾಯತಿಯ ಎಲ್ಲ ಸಹೋದರ, ಸಹೋದರಿಯರು ಆರೋಗ್ಯವಾಗಿದ್ದಾರೆಂದು ನಂಬಿದ್ದೇನೆ. ನಮಗೆ ಮಳೆರಾಯನ ಆಶೀರ್ವಾದ ಸಿಕ್ಕಿದ್ದು, ದೇವರಿಗೆ ಧನ್ಯವಾದ ಹೇಳಬೇಕು. ಈ ಆಶೀರ್ವಾದವನ್ನು ಸಂರಕ್ಷಿಸಲು ಪ್ರಯತ್ನಿಸಬೇಕೆಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.

ಒಂದು ಪುಟದ ಪತ್ರ ಹಿಂದಿಯಲ್ಲಿದ್ದು, ಗ್ರಾಮಸ್ಥರ ಸಭೆ ಕರೆದು ಇದನ್ನು ಅವ್ರ ಮುಂದೆ ಓದಿ ಎಂದು ಮೋದಿ ವಿನಂತಿ ಮಾಡಿಕೊಂಡಿದ್ದಾರೆ. ಮಳೆ ನೀರನ್ನು ಹೇಗೆ ಸಂಗ್ರಹಿಸಬೇಕೆನ್ನುವ ಬಗ್ಗೆ ಚರ್ಚೆಯಾಗಬೇಕು. ನೀವು ಮಳೆ ನೀರನ್ನು ಸಂಗ್ರಹಿಸುತ್ತೀರೆಂಬ ವಿಶ್ವಾಸ ನನಗಿದೆ ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.

ಫೋಟೋ ತೆಗೆಸಿಕೊಳ್ಳುವಾಗ ಮಂಗ ಮಾಡಿದ್ದೇನು…?

Posted: 15 Jun 2019 02:21 AM PDT

ಬಾಲಿಯ ಉಬುದ್ ಮಂಕಿ ಫಾರೆಸ್ಟ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದ್ದು ಅಲ್ಲಿ ಮಂಗಗಳ ಜೊತೆ ಆಟವಾಡಲು, ಫೋಟೋ ತೆಗೆದುಕೊಳ್ಳಲು ಬಿಡುತ್ತಾರೆ.

ಆದರೆ ಅಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಿಂದ ಬಂದ ಹಿಕ್ಸ್ ಪರಿವಾರ ಮಂಗಗಳ ಜೊತೆ ಫೋಟೋ ತೆಗೆಸಿಕೊಳ್ಳುವಾಗ ವಿಚಿತ್ರ ಘಟನೆ ನಡೆದಿದೆ. ಏನಾಯಿತೆಂದರೆ ಗೈಡ್ ಇವರ ಫೋಟೋ ತೆಗೆಯುವಾಗ ಮಂಗವೊಂದು ಬಂದು ಸೆಲ್ಫಿ ರೀತಿಯಲ್ಲಿ ಫೋಟೋ ತೆಗೆಸಿಕೊಂಡಿದೆ.

ಅದಕ್ಕೂ ವಿಚಿತ್ರವೆಂದರೆ ಮಂಗ ಫೋಟೋಗೆ ತನ್ನ ನಡುವಿನ ಬೆರಳನ್ನು ತೋರಿಸಿದ್ದು ಸೋಜಿಗವೆನಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಬೈಯುವಾಗ ನಡುವಿನ ಬೆರಳು ತೋರಿಸುತ್ತಾರೆ.

ಕಳೆದ ಡಿಸೆಂಬರ್‌ನಲ್ಲಿ ಈ ಘಟನೆ ನಡೆದಿದ್ದು, ಇತ್ತೀಚಿಗೆ ಅವರು ತಮ್ಮ ಪ್ರವಾಸದ ಫೋಟೋ ನೋಡುತ್ತಿರುವಾಗ ಇದು ಗಮನಕ್ಕೆ ಬಂದಿದೆಯಂತೆ. ಮಂಗ ಈ ರೀತಿ ಏಕೆ ಮಾಡಿತೆಂದು ಅದೇ ತಿಳಿಸಬೇಕು.

ಹೊಸ ಮಾವಿನ ತಳಿಗೆ ಅಮಿತ್ ಷಾ ಹೆಸರು

Posted: 15 Jun 2019 01:58 AM PDT

‌ʼಮ್ಯಾಂಗೋ ಮ್ಯಾನ್ʼ ಎಂದೇ ಖ್ಯಾತರಾಗಿರುವ ಉತ್ತರ ಪ್ರದೇಶದ ಹಾಜಿ ಕಲೀಮುಲ್ಲಾ ಹೊಸ ಹೊಸ ಮಾವಿನ ತಳಿಗಳನ್ನು ಕಂಡು ಹಿಡಿದು ಅವಕ್ಕೆ ಪ್ರಸಿದ್ಧ ವ್ಯಕ್ತಿಗಳ ಹೆಸರಿಡುತ್ತಾರೆ.

ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೆಸರನ್ನು ಕಲೀಮುಲ್ಲಾ ಹೊಸ ಮಾವಿನ ತಳಿಗೆ ಇಟ್ಟಿದ್ದಾರೆ. ಅಮಿತ್ ಷಾ ಅವರ ವ್ಯಕ್ತಿತ್ವ ಅವರಿಗೆ ಇಷ್ಟವಾಗಿದ್ದು ಈ ರೀತಿ ಹೆಸರಿಡಲು ಕಾರಣವಂತೆ.

ಹೊಸ ತಳಿಯ ಹಣ್ಣು ತೂಕಕರವಾಗಿದ್ದು, ಒಳ್ಳೆಯ ರುಚಿ ಕೂಡ ಇದೆಯಂತೆ. ಕಲೀಮುಲ್ಲಾ ಅವರು ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನೂ ಕೂಡ ಮಾವಿನ ತಳಿಯೊಂದಕ್ಕೆ ಇಟ್ಟಿದ್ದರಂತೆ.

ಷಾ ತಳಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದ್ದು ಮೋದಿ ತಳಿ ಹಣ್ಣನ್ನು ಸ್ವತಃ ತಾವೇ ಪ್ರಧಾನಿಯವರಿಗೆ ನೀಡಲು ಕಲೀಮುಲ್ಲಾ ಬಯಸಿದ್ದಾರಂತೆ.

ನೋಡನೋಡುತ್ತಿದ್ದಂತೆ ಮಣ್ಣಿನಡಿ ಹುದುಗಿ ಹೋದ್ವು ಕಾರುಗಳು

Posted: 15 Jun 2019 01:55 AM PDT

ಪೂರ್ವ ಚೀನಾದ ಫುಜಿಯಾನ್ ಪ್ರಾಂತ್ಯದಲ್ಲಿ ಬೃಹತ್ ಭೂ ಜರುಗಿನ ವಿಡಿಯೋ ಒಂದು ಸೆರೆಯಾಗಿದೆ.

ಶಿಯಾನ್ ಶೆಂಗ್ ರಸ್ತೆಯಲ್ಲಿ ಸಾಲಾಗಿ ನಿಲ್ಲಿಸಿದ್ದ ಕಾರುಗಳನ್ನು ಒಂದೊಂದಾಗಿ ತನ್ನೆಡೆಗೆ ಸೆಳೆಯುತ್ತಿರುವ ದೃಶ್ಯ ಕಂಡು ಬಂದಿದೆ.

ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯ ಇದೀಗ ಚೀನಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ.

4 ಬಾರಿ ಗರ್ಭ ಧರಿಸಿದ ಹುಡುಗಿ: ಮಕ್ಕಳನ್ನು ಭೇಟಿಯಾದ ಅತ್ಯಾಚಾರಿ

Posted: 15 Jun 2019 01:53 AM PDT

ಮಹಿಳೆಯೊಬ್ಬಳು ತನ್ನ ಜೀವನದಲ್ಲಾದ ನೋವಿನ ಸಂಗತಿಯನ್ನು ಎಲ್ಲರ ಮುಂದಿಟ್ಟಿದ್ದಾಳೆ. 12 ವರ್ಷದಲ್ಲಿದ್ದಾಗಲೇ ಚಿಕ್ಕಪ್ಪನೊಬ್ಬ ಆಕೆ ಮೇಲೆ ಅತ್ಯಾಚಾರವೆಸಗಿದ್ದನಂತೆ. 18ನೇ ವಯಸ್ಸು ತುಂಬುವ ವೇಳೆಗೆ ಮಹಿಳೆ ನಾಲ್ಕು ಬಾರಿ ಗರ್ಭ ಧರಿಸಿದ್ದಳಂತೆ.

ಅಲಬಾಮಾದಲ್ಲಿ ಗರ್ಭಪಾತ ನಿಷೇಧ ಕಾನೂನು ಜಾರಿಗೆ ಬರ್ತಿದೆ. ಇದನ್ನು ಸ್ಥಳೀಯರು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮಹಿಳೆಯೊಬ್ಬಳು ತನ್ನ ನೋವು ಹಂಚಿಕೊಂಡಿದ್ದಾಳೆ. ಗರ್ಭಪಾತ ವಿರೋಧಿ ಕಾನೂನು ಮಹಿಳೆಯರಿಗೆ ಸಂಕಷ್ಟ ತರಲಿದೆ ಎಂದು ಆಕೆ ಹೇಳಿದ್ದಾಳೆ.

ಅಲಬಾಮಾದಲ್ಲಿ ಅತ್ಯಾಚಾರವೆಸಗಿದ ವ್ಯಕ್ತಿಗೆ ಪೀಡಿತೆ ಮಕ್ಕಳನ್ನು ಭೇಟಿಯಾಗಲು ಅವಕಾಶವಿದೆ. 32 ವರ್ಷದ ಜೆಸ್ಸಿಕಾ ನಾಲ್ಕು ಬಾರಿ ಗರ್ಭ ಧರಿಸಿದ್ದಳಂತೆ. ಒಮ್ಮೆ ಗರ್ಭಪಾತವಾದ್ರೆ ಇನ್ನೊಂದು ಮಗು ಸತ್ತು ಹೋಗಿತ್ತಂತೆ. ಇಬ್ಬರು ಮಕ್ಕಳ ಜೊತೆ ಆಕೆ ವಾಸವಾಗಿದ್ದಾಳೆ. ಲೆನಿನ್ ಸಂಬಂಧಿ ಎಂಬ ಕಾರಣಕ್ಕೆ ಕುಟುಂಬಸ್ಥರು ದೂರು ನೀಡಿರಲಿಲ್ಲವಂತೆ. ಇಬ್ಬರ ಮದುವೆ ಮಾಡಿದ್ದರಂತೆ. ಆದ್ರೆ ಸಂಬಂಧಿಕರು ಎನ್ನುವ ಕಾರಣಕ್ಕೆ ಕೋರ್ಟ್ ಇವ್ರ ಮದುವೆಗೆ ಒಪ್ಪಿಗೆ ನೀಡಲಿಲ್ಲವಂತೆ. ಡಿಎನ್ಎ ಪರೀಕ್ಷೆಯಲ್ಲಿ ಕೂಡ ಮಕ್ಕಳು ಲೆನಿನ್ ನದ್ದು ಎಂಬುದು ಸಾಬೀತಾಗಿತ್ತು.

 

ಬಿರುಕು ಬಿಟ್ಟ ಗಾಜು ನೋಡಿ ಬೆಚ್ಚಿಬಿದ್ದ ಪ್ರವಾಸಿಗರು

Posted: 15 Jun 2019 01:08 AM PDT

ತಮ್ಮ ಎದುರಿರುವ ಗಾಜಿನ ಅಡಿಗಟ್ಟಿನ‌ ರಕ್ಷಣಾ ಪರದೆ ಬಿರುಕು ಬಿಟ್ಟ ಕಾರಣ ಶಿಕಾಗೋದ ಪ್ರಸಿದ್ಧ ವಿಲ್ಸ್ ಟವರ್ ನಲ್ಲಿನ 103 ನೇ ಮಹಡಿಯಲ್ಲಿದ್ದ ಪ್ರವಾಸಿಗರಲ್ಲಿ ಆತಂಕ ಮೂಡಿಸಿತ್ತು.

1353 ಅಡಿಗಳ ಎತ್ತರದಿಂದ ಇಡೀ ನಗರವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ವಿಲ್ಸ್ ಟವರ್ ಒದಗಿಸುತ್ತದೆ. ಸೋಮವಾರ ಇಲ್ಲಿಯ ಗಾಜಿನ ಅಡಿಗಟ್ಟಿನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೆ ಯಾರಿಗೂ ಪ್ರಾಣ ಅಪಾಯವಾಗುವಂತಹ ಪರಿಸ್ಥಿತಿ ಇರಲಿಲ್ಲ. ತಕ್ಷಣವೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿಲ್ಸ್ ಟವರ್ ನ ಆಡಳಿತ ಮಂಡಳಿ ತಿಳಿಸಿದೆ.

ಗಾಜಿನ ಅಡಿಗಟ್ಟಿನಲ್ಲಿ ಬಿರುಕು ಕಾಣಿಸಿಕೊಂಡ ತಕ್ಷಣ ದೊಡ್ಡ ಶಬ್ದ ಕೇಳಿ ಬಂತು ಎಂದು ಸ್ಥಳದಲ್ಲಿದ್ದ ಶಿಕಾಗೋ ನಿವಾಸಿ ಜೀಸಸ್ ಪಿಂಟಾಡೋ ತಿಳಿಸಿದ್ದಾರೆ. ಈ ಕುರಿತು ಪಿಂಟಾಡೋ ಅಪ್ಲೋಡ್ ಮಾಡಿರುವ ವಿಡಿಯೋ ಫೇಸ್ ಬುಕ್ ನಲ್ಲಿ ಏಳು ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದೆ.

#skydeckchicago just broke!https://youtu.be/n-W8LY2wHBU

Posted by Jesús Pc on Monday, June 10, 2019

ಕ್ರಿಕೆಟ್ ಪ್ರಿಯರಿಗೆ ‘ರಾಯಲ್’ ಎಂಟರ್ಟೈನ್ಮೆಂಟ್

Posted: 15 Jun 2019 01:04 AM PDT

ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಇದ್ದಕ್ಕಿದ್ದಂತೆ ‘ರಾಯಲ್’ ಎಂಟರ್ಟೈನ್ಮೆಂಟ್ ಸಿಕ್ಕಿದೆ. ಇದಕ್ಕೆ ಕಾರಣ ರಾಯಲ್ ಚಾಲೆಂಜರ್ಸ್ ಆಫ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಹಾಗೂ ಮಳೆ.

ಉಭಯ ತಂಡಗಳ ನಡುವಿನ ಪಂದ್ಯ ವೇಳೆ ಮಳೆ ಬಂದಿದ್ದರಿಂದ ಅಭಿಮಾನಿಗಳಿಗೆ ನಿರಾಶೆಯಾಗಿತ್ತು. ಆದರೆ ಈ ಎರಡೂ ತಂಡಗಳು ಟ್ವಿಟರ್‌ನಲ್ಲಿ ಟಿಕ್ ಟಾಕ್ ಟೊ ಆಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಗುರುವಾರ ಭಾರತ-ನ್ಯೂಜಿಲೆಂಡ್ ವಿಶ್ವಕಪ್ ಪಂದ್ಯ ಮಳೆ ಕಾರಣ ಸ್ಥಗಿತಗೊಂಡಿತ್ತು. ಆಗ ಭಾರತ ಟಾಸ್ ಗೆದ್ದು, ಈಜಲು ಆಯ್ಕೆ ಮಾಡಿಕೊಂಡಿದೆ ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ವಿಮಾನದಲ್ಲಿ ಸಿಗರೇಟು ಸೇದಲು ನಿಷೇಧವಿದ್ರೂ ಆಷ್‌ ಟ್ರೇ ಇರುವುದೇಕೆ…?

Posted: 15 Jun 2019 12:49 AM PDT

ಈಗಂತೂ ಪಾರ್ಕ್, ಬಸ್ ಸೇರಿದಂತೆ ಸಾಮಾನ್ಯ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ನಿಷೇಧಿಸಲ್ಪಟ್ಟಿದೆ. ಇನ್ನು ವಿಮಾನದಲ್ಲಿ ಸಿಗರೇಟ್ ಸೇದಲು ಅವಕಾಶ ನೀಡುವುದು ಕಲ್ಪಿಸಿಕೊಳ್ಳಲೂ ಆಗದು.

ಆದರೂ ಈಗಲೂ ಸಹಿತ ವಿಮಾನದ ಶೌಚಾಲಯದಲ್ಲಿ ಆಷ್ ಟ್ರೇ ಇರುತ್ತದೆ. ಇದಕ್ಕೆ ಏನು ಕಾರಣ? ಈ ಕುರಿತು ಚೆಡ್ಡಾರ್ ಎಂಬುವರು ಅಪ್ಲೋಡ್ ಮಾಡಿರುವ ವಿಡಿಯೊವೊಂದು ಚರ್ಚೆಗೆ ಕಾರಣವಾಗಿದೆ.

ವಿಮಾನದ ಶೌಚಾಲಯದಲ್ಲಿ ಕಡ್ಡಾಯವಾಗಿ ಆಷ್ ಟ್ರೇ ಇರಲೇಬೇಕು ಎಂಬುದು ಅಮೆರಿಕದ ಕಾನೂನಿನಲ್ಲಿ ಇದೆ. ಎಷ್ಟೇ ದಂಡವಾಗಲಿ, ಬಂಧನವೂ ಆಗಲಿ, ಸಿಗರೇಟ್ ಸೇದುವುದನ್ನು ಕೆಲವರು ಬಿಡುವುದೇ ಇಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ, ನಿಷೇಧದ ನಡುವೆಯೂ ಯಾರಾದರೂ ಸಿಗರೇಟ್ ಸೇದಿ ಅದನ್ನು ಬೇರೆಡೆ ಬಿಸಾಡಿದರೆ ಬೆಂಕಿ ಅವಘಡ ಆಗುವ ಕಾರಣಕ್ಕೆ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನಲಾಗಿದೆ.

ಅಮಿಷಾ ಪಟೇಲ್ ಹಾಟ್ ಫೋಟೋ ನೋಡಿ ನಿದ್ರೆ ಬಿಟ್ಟ ಅಭಿಮಾನಿಗಳು

Posted: 15 Jun 2019 12:47 AM PDT

अमीषा पटेल का ऐसा हॉट अवतार पहले देखा है कभी, देखें यहां

ಬಾಲಿವುಡ್ ನಟಿ ಅಮಿಷಾ ಪಟೇಲ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಆಗಾಗ ಅಮಿಷಾ ಪಟೇಲ್ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿರುತ್ತಾರೆ. ಅಮಿಷಾ ಪಟೇಲ್ ಹಾಟ್ ಫೋಟೋ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿರುತ್ತದೆ.

ಅಮಿಷಾ ಪಟೇಲ್ ಹಾಟ್ ಫೋಟೋ ನೋಡದೆ ಹೋದವ್ರು ಇನ್ಸ್ಟ್ರಾಗ್ರಾಮ್ ಅಕೌಂಟ್ ಗೆ ಹೋಗಿ ಕಣ್ತುಂಬಿಕೊಳ್ಳಿ. ಒಂದು ಫೋಟೋದಲ್ಲಿ ಬ್ಯಾಕ್ ಲೆಸ್ ಆದ್ರೆ ಇನ್ನೊಂದರಲ್ಲಿ ಡೀಪ್ ನೆಕ್ ಡ್ರೆಸ್ ಧರಿಸಿದ್ದಾರೆ. ಅಮಿಷಾ ಪಟೇಲ್ ಫೋಟೋಕ್ಕೆ ಅಭಿಮಾನಿಗಳು ಲೈಕ್ ಒತ್ತುತ್ತಿದ್ದಾರೆ.

ಅಮಿಷಾ ಪಟೇಲ್ ಗೆ 2.4 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇತ್ತೀಚಿಗೆ ಅಮಿಷಾ ಪಟೇಲ್ ಹಾಟ್ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಕ ಹೋ ನಾ ಪ್ಯಾರ್ ಹೇ ಚಿತ್ರದ ಮೂಲಕ ಬಾಲಿವುಡ್ ಗೆ ಬಂದಿರುವ ಅಮಿಷಾ ಪಟೇಲ್ ಸದ್ಯ ಬಾಲಿವುಡ್ ನಿಂದ ದೂರವಿದ್ದಾರೆ.

 

ಹಾಡಹಗಲೇ ನಡುರಸ್ತೆಯಲ್ಲಿ ಅಮಾನವೀಯ ಕೃತ್ಯ

Posted: 15 Jun 2019 12:44 AM PDT

ಹಣದ ವಿಚಾರದಲ್ಲಿ ಮಹಿಳೆಯೋರ್ವಳ ಮೇಲೆ ಪಾಲಿಕೆ ಸದಸ್ಯನ ಸಹೋದರ ಮತ್ತು ಆತನ ಸಹಚರರು ಹಲ್ಲೆ ನಡೆಸಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಮುಕ್ತಸರ್ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ರಾಕೇಶ್ ಚೌಧರಿಯ ಸಹೋದರ ಮತ್ತು ಆತನ ಸಹಚರರು ಮಹಿಳೆಯೋರ್ವಳು ಹಣ ವಾಪಾಸು ನೀಡದ ಕಾರಣಕ್ಕೆ ಆಕೆಯ ಮನೆಯ ಮುಂದೆ ಹೋಗಿ ಬಾಯಿಗೆ ಬಂದಂತೆ ಬೈದಿದ್ದಾರೆ. ನಂತರ ಆಕೆಯನ್ನ ಮನೆಯಿಂದ ಹೊರಗೆ ಎಳೆದು ತಂದು ಬೀದಿಯ ಮೇಲೆ ಕೆಡವಿ ಥಳಿಸಿದ್ದಾರೆ. ಸಹಾಯಕ್ಕೆ ಬಂದ ಮಹಿಳೆಯನ್ನೂ ಸಹ ಈ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಕರಣ ಮತ್ತಷ್ಟು ಕಾವು ಪಡೆದುಕೊಂಡಿದೆ. ಹೊಡೆತ ತಿಂದ ಮಹಿಳೆಯನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಆಕೆಯ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದು, ಪಕ್ಷಾತೀತವಾಗಿ ಪ್ರಕರಣವನ್ನ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಎಸ್ಪಿ ಮಂಜೀತ್ ದೇಸಿ ಈ ಪ್ರಕರಣ ನಡೆದಿರುವುದು ದುರಾದೃಷ್ಟಕರವಾಗಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಿಮಾನ ಪ್ರಯಾಣಿಕರಿಗೆ ಆಪದ್ಬಾಂಧವರಾದ ಸಿಎಂ

Posted: 15 Jun 2019 12:42 AM PDT

ವಿಮಾನ ಪ್ರಯಾಣಿಕರಿಗೆ ಮಧ್ಯರಾತ್ರಿಯಲ್ಲೂ ಊಟದ ವ್ಯವಸ್ಥೆ ಮಾಡುವ ಮೂಲಕ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆಪತ್ಬಾಂಧವ ಎನಿಸಿಕೊಂಡು ಗಮನ ಸೆಳೆದಿದ್ದಾರೆ.

ಮುಂಬೈನಿಂದ ಗುರುವಾರ ರಾತ್ರಿ 9.30ಕ್ಕೆ ಗೋವಾಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ರಾತ್ರಿ ಒಂದು ಗಂಟೆಯಾದರೂ ಹೊರಟಿರಲಿಲ್ಲ. ಹೀಗಾಗಿ ಅದರಲ್ಲಿದ್ದ ಹಲವಾರು ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲೇ ಮಧ್ಯರಾತ್ರಿ ಕಳೆಯುವಂತಾಯಿತು. ಬಿಜೆಪಿ ಮಿತ್ರಪಕ್ಷ ಗೋವಾ ಫಾರ್ವರ್ಡ್ ಪಾರ್ಟಿಯ ಕೇತನ್ ಭಾಟಿಕರ್ ಕೂಡ ಆ ಪ್ರಯಾಣಿಕರಲ್ಲೊಬ್ಬರಾಗಿದ್ದರು.

ಕೇತನ್ ರಾತ್ರಿ 1.13 ಕ್ಕೆ ಸಿಎಂ ಪ್ರಮೋದ್‌ಗೆ ಕರೆ ಮಾಡಿದ್ದರು. ಸಿಎಂ ಆಗ ನವದೆಹಲಿಯಲ್ಲಿದ್ದರೂ ಮುಂಬೈ ವಿಮಾನ ನಿಲ್ದಾಣದ ಹೋಟೆಲ್‌ನಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದಲ್ಲದೆ ಅರ್ಧ ಗಂಟೆಯಲ್ಲಿ ವಿಮಾನ ಹೊರಡಲೂ ವ್ಯವಸ್ಥೆ ಮಾಡಿದ್ದರು. ಬೆಳಗಿನ ಜಾವ 3.30ಕ್ಕೆ ನಾವೆಲ್ಲ ಗೋವಾ ತಲುಪಿದೆವು ಎಂದು ಸಿಎಂ ನೆರವನ್ನು ಕೇತನ್ ಶ್ಲಾಘಿಸಿದ್ದಾರೆ.

8 ವರ್ಷದ ಬಾಲಕಿ ಹತ್ಯೆ ಬಗ್ಗೆ ಆಘಾತಕಾರಿ ವಿಷ್ಯ ಬಹಿರಂಗ

Posted: 15 Jun 2019 12:40 AM PDT

ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ನಡೆದ ಅಪರಾಧ ಪ್ರಕರಣವೊಂದನ್ನು ಪತ್ತೆ ಹಚ್ಚಲು ಪೊಲೀಸರು ಯಶಸ್ವಿಯಾಗಿದ್ದಾರೆ. 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರಲಿಲ್ಲ. ಹತ್ಯೆ ಮಾಡಿದ್ದು ಮತ್ತ್ಯಾರೂ ಅಲ್ಲ ತಂದೆ ಎಂಬ ಆಘಾತಕಾರಿ ಸುದ್ದಿಯನ್ನು ಪೊಲೀಸರು ಹೇಳಿದ್ದಾರೆ.

ಆರು ದಿನಗಳ ಮೊದಲು 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು ಎಂಬ ಸುದ್ದಿ ಬಂದಿತ್ತು. ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಶೀಘ್ರವೇ ವಿಚಾರಣೆ ಕೈಗೆತ್ತಿಕೊಂಡಿದ್ದರು. ಆರಂಭದಲ್ಲಿಯೇ ಪೊಲೀಸರು ಬಾಲಕಿ ಹತ್ಯೆ ಹಿಂದೆ ಕುಟುಂಬಸ್ಥರ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು.

ವಿಚಾರಣೆ ನಂತ್ರ ಸತ್ಯ ಹೊರ ಬಿದ್ದಿದೆ. ಮಾತು ಕೇಳಲಿಲ್ಲ ಎನ್ನುವ ಕಾರಣಕ್ಕೆ ತಂದೆಯೇ ಮಗುವನ್ನು ಹತ್ಯೆಗೈದಿದ್ದಾನೆ. ನಂತ್ರ ಪ್ರಕರಣ ಮುಚ್ಚಿಹಾಕುವ ಯತ್ನ ನಡೆಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂದೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.